Kelirondu Katheya  ಕೇಳಿರೊಂದು ಕಥೆಯ

Kelirondu Katheya ಕೇಳಿರೊಂದು ಕಥೆಯ

By Kelirondu Katheya TeamKids & FamilyStories for Kids
Download on the App Store

Kelirondu Katheya ಕೇಳಿರೊಂದು ಕಥೆಯ episodes

  • Ep77 - ಪರಶುರಾಮ ಅವತಾರ

    " ದಶಾವತಾರ " ಸರಣಿಯಲ್ಲಿ  ಆರನೆಯ  ಅವತಾರ ಪರಶುರಾಮನ ಅವತಾರ .  ಪರಶುರಾಮ ಅತಿ  ಪರಾಕ್ರಮಿ . ಬ್ರಾಹ್ಮಣನಾಗಿದ್ದೂ , ಕ್ಷತ್ರಿಯರಿಗೆ ಸಿಂಹ ಸ್ವಪ್ನನಾಗಿದ್ದ.

    ಪರಶುರಾಮನ ಬಗ್ಗೆ  ಸಾಮಾನ್ಯವಾಗಿ ಸಿಗುವ ಕತೆಗಳು ಮಕ್ಕಳಿಗೆ  ಸ್ವಲ್ಪ ಹೆಚ್ಚೇ  ಹಿಂಸೆ ಅನ್ನಿಸಬಹುದು  ಎಂದು , ಪರಶುರಾಮ ಮತ್ತು  ಗಣೇಶನನ್ನು  ಒಳಗೊಂಡ ಅಪರೂಪದ ಒಂದೆರಡು ಕಥೆಗಳನ್ನು  ಸೇರಿಸಿದ್ದೇವೆ .

    ಕಥೆ  ಕೇಳಿ , ನಿಮ್ಮ  ಅಭಿಪ್ರಾಯ , ಅನಿಸಿಕೆಗಳನ್ನು [email protected] ಗೆ  ಕಳಿಸಿ . 

     

    10 min
  • Ep76-ವಾಮನವತಾರ

    "ದಶಾವತಾರ " ಸರಣಿಯಲ್ಲಿ ೫ನೇ  ಅವತಾರ  ವಿಷ್ಣು ಕುಳ್ಳ ಬ್ರಾಹ್ಮಣನ  ಅವತಾರದಲ್ಲಿ  ಬಂದು  ಮಹಾ  ದಾನವಂತ  ಅನ್ನೋ  ಅಹಂಕಾರ ದಿಂದ  ಬೀಗುತ್ತಿದ್ದ  ರಾಕ್ಷಸ  ರಾಜ ಬಲಿ ಚಕ್ರವರ್ತಿಯ ಅಹಂಕಾರ  ಮುರಿಯುತ್ತಾನೆ .  ತಪ್ಪಿನ  ಅರಿವಾದ  ಬಲಿ ವಿಷ್ಣುವಿನ  ಕ್ಷಮೆ  ಕೇಳುತ್ತಾನೆ . 

    ಅಹಂಕಾರ  ಸಲ್ಲದು ಹಾಗೂ ನಾವು  ಎಷ್ಟೇ  ದೊಡ್ಡವರಿದ್ದರೂ ತಪ್ಪಾದ  ಕೂಡಲೇ ಒಪ್ಪಿಕೊಳ್ಳುವ  ದೊಡ್ಡ  ಗುಣ  ಇರಬೇಕು  ಅನ್ನುವ  ನೀತಿ  ಸಾರುವ  ಈ  ಕತೆ ದಶಾವತಾರದ  ಕತೆಗಳಲ್ಲಿ  ವಿಶಿಷ್ಟವಾದದ್ದು .

     

     

     

    11 min
  • Ep75 - ನರಸಿಂಹಾವತಾರ

    " ದಶಾವತಾರ " ಸರಣಿಯಲ್ಲಿನಾಲ್ಕನೇ  ಅವತಾರ  ನರಸಿಂಹಾವತಾರ

    ಹಿರಣ್ಯಕಶಿಪುವಿನ  ಮಗ  ಪ್ರಹ್ಲಾದ , ವಿಷ್ಣುವಿನ  ಮಹಾ  ಭಕ್ತ .

    ಹಿರಣ್ಯಕಶಿಪು ಎಲ್ಲ  ಕಡೆ  ತನ್ನನ್ನೇ  ಪೂಜೆ  ಮಾಡಬೇಕು ಅಂತ  ದೇವತೆಗಳನ್ನು , ದೇವರ  ಭಕ್ತರನ್ನು  ಶಿಕ್ಷೆಗೆ ಗುರಿ  ಮಾಡಿದಾಗ ವಿಷ್ಣು ಅರ್ಧ ಸಿಂಹ , ಅರ್ಧ  ಮನುಷ್ಯನ  ಅವತಾರದಲ್ಲಿ  ಬಂದು ರಾಕ್ಷಸನಾದ  ಹಿರಣ್ಯಕಶಿಪುವನ್ನ  ಸಂಹಾರ  ಮಾಡುತ್ತಾನೆ .  

     

    10 min
  • Ep74 - ವರಾಹಾವತಾರ

    " ದಶಾವತಾರ " ಸರಣಿಯಲ್ಲಿ ಮೂರನೇ ಅವತಾರ  ವರಾಹಾವತಾರ . 

    ವರಾಹ  ಅಂದರೆ   ಕಾಡು ಹಂದಿ  ಎಂದರ್ಥ . ಇಂಗ್ಲಿಷ್ನಲ್ಲಿ  wild boar ಅಂತಲೂ  ಕರೆಯುತ್ತಾರೆ .  ವೈಕುಂಠದ  ದ್ವಾರ  ಪಾಲಕರಾದ ಜಯ  - ವಿಜಯರು  ಭೂಮಿಯ  ಮೇಲೆ  ಹಿರಣ್ಯಾಕ್ಷ  ಹಾಗೂ  ಹಿರಣ್ಯಕಶಿಪು   ಎಂಬ  ರಾಕ್ಷಸರಾಗಿ ಹುಟ್ಟುತ್ತಾರೆ .

    " ಯಾವುದೇ  ಮನುಷ್ಯ , ಪ್ರಾಣಿ , ದೇವತೆ , ರಾಕ್ಷಸನಿಂದ  ಸಾವು  ಬಾರದಿರಲಿ " ಬ್ರಹ್ಮನ ವಿಚಿತ್ರ  ವರದಿಂದ ಹಿರಣ್ಯಾಕ್ಷ  ಅಹಂಕಾರದಿಂದ  ಸಿಕ್ಕಿದ್ದನ್ನು   ದ್ವಂಸ  ಮಾಡಿ  ಭೂಮಿ  ದೇವತೆಯನ್ನು  ಪಾತಾಳಕ್ಕೆ ಕರೆದು  ಹೋಗಿಬಿಡುತ್ತಾನೆ . 

     ವಿಷ್ಣು ವರಾಹ  ಅವತಾರ  ಧರಿಸಿ  ಭೂಮಿ  ದೇವತೆಯನ್ನ  ಬಿಡಿಸುತ್ತಾನೆ . 

     

    11 min
  • Ep73 - ಕೂರ್ಮಾವತಾರ

    " ದಶಾವತಾರ " ಸರಣಿಯಲ್ಲಿ ಎರಡನೇ  ಅವತಾರ  ಕೂರ್ಮಾವತಾರ . 

    ಕೂರ್ಮ ಅಥವಾ  ಆಮೆ ಭೂಮಿಯನ್ನು ಬೀಳದಂತೆ ಹಿಡಿದಿದೆ ಎಂಬ  ನಂಬಿಕೆ ಹಿಂದೂ , ಬೌದ್ಧ , ಚೀನೀ , ಅಮೆರಿಕಾದ ಇಂಡಿಯನ್ ಸಂಸ್ಕೃತಿಗಳಲ್ಲಿ ಪ್ರಚಲಿತ .   

    ದೇವತೆಗಳಿಗೆ  ಸಾವಿಲ್ಲದಂತೆ ಮಾಡುವ  "ಅಮೃತ " ಪಡೆಯೋಕೆ   ರಾಕ್ಷಸರು , ದೇವತೆಗಳಿಬ್ಬರೂ  ಸಮುದ್ರ  ಮಂಥನಕ್ಕೆ ನಿಂತಾಗ , ವಿಷ್ಣು  ಕೂರ್ಮ ಅಥವಾ  ಆಮೆಯ  ರೂಪದಲ್ಲಿ ಬಂದು  ದೇವತೆಗಳಿಗೆ  ಅಮೃತ ಸಿಗುವ  ಹಾಗೆ  ಮಾಡುತ್ತಾನೆ .  

     

     

    12 min
  • Ep72 - ಮತ್ಸ್ಯಾವತಾರ

    ಭಾರತೀಯ ಸಂಸ್ಕೃತಿಯ  ಮಹಾನ್ ಅಸ್ತಿ ನಮ್ಮ ವೇದ-ಪುರಾಣಗಳು .  ಅದರಲ್ಲೂ ವಿಷ್ಣುವಿನ ದಶಾವತಾರಗಳು ಕೆಟ್ಟದ್ದನ್ನು ಕೆಡವಿ  ಒಳ್ಳೆಯದು ಒಂದಲ್ಲ ಒಂದು ರೂಪದಲ್ಲಿ ಬಂದೆ ಬರುತ್ತದೆ ಎನ್ನುವ  ನಂಬಿಕೆಗೆ ಇಂಬು ಕೊಡುತ್ತವೆ .  

    ಮುಂದಿನ  ಕೆಲವು ವಾರದಲ್ಲಿ , ಈ ದಶಾವತಾರದ  ಕತೆಗಳನ್ನು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ  ರೀತಿಯಲ್ಲಿ ತರುವ ಪ್ರಯತ್ನ ನಮ್ಮ ತಂಡ ಮಾಡುತ್ತಿದೆ . 

    ದಶಾವತಾರದ  ಮೊದಲನೇ ಅವತಾರವೇ  ಮತ್ಸ್ಯಾವತಾರ . ಮನುಷ್ಯ  ಪೀಳಿಗೆಯ ಜ್ಞಾನವೆಲ್ಲವೂ ಅಡಗಿದ್ದ  ವೇದಗಳನ್ನೇ ಕದಿಯಲು ಹೊರಟಿದ್ದ ಹಯಗ್ರೀವನೆಂಬ  ರಾಕ್ಷಸನಿಗೆ ಬುದ್ದಿ ಕಲಿಸಲು ವಿಷ್ಣು ಮೀನಿನ ವೇಷದಲ್ಲಿ ಬಂದ ಎಂದು  ಮತ್ಸ್ಯಪುರಾಣ ಹೇಳುತ್ತದೆ . 

     

     

    ಮೂಲ:  ಅಮರ ಚಿತ್ರಕಥಾ ಪುಸ್ತಕಗಳು 

     

    ಉಚಿತವಾಗಿ  ಕಥೆಗಳನ್ನು ಕೇಳಲು ಮಿಂದಾಣ - http://kelirondukatheya.org 

    Subscribe : https://podcasts.google.com/?feed=aHR0cDovL2tlbGlyb25kdWthdGhleWEub3JnL3Jzcw

    ಹೊಸ  ಕಥೆಗಳಿಗೆ Whatsapp ಗುಂಪಿಗೂ  ಸೇರಬಹುದು: https://chat.whatsapp.com/GsWybXllVFC6INaXFcNSnQ 

    Background : 

    Mesmerize by Kevin MacLeod is licensed under a Creative Commons Attribution license (https://creativecommons.org/licenses/by/4.0/)

    Source: http://incompetech.com/music/royalty-free/index.html?isrc=USUAN1500005

    Artist: http://incompetech.com/

     

    11 min
  • Ep 71 - [ವಿಶೇಷ ಕಾರ್ಯಕ್ರಮ ] - ಮಕ್ಕಳ ಕಲ್ಪನಾಶಕ್ತಿ

    ಮಕ್ಕಳ ಕಲ್ಪನಾಶಕ್ತಿ ಯನ್ನು ಕೆರಳಿಸಲು 20 ಮೋಜಿನ ಪ್ರಶ್ನೆಗಳು

    ಮಕ್ಕಳನ್ನು  ಮಾತಾಡಿಸುವಾಗ , ಯಾವ  ಶಾಲೆಗೇ ಹೋಗುತ್ತೀ , ಎಷ್ಟು  ಮಾರ್ಕ್ಸ್ ತಗೊಂಡಿದ್ದೀ ಅಂತಹ ಪ್ರಶ್ನೆಗಳು  ಸರ್ವೇ ಸಾಮಾನ್ಯ . ಮುಂದಿನ ಸಲ ಮಕ್ಕಳ ಜತೆ  ಮಾತಾಡೋ ಅವಕಾಶ ಸಿಕ್ಕಾಗ ಈ ಕೆಳಗಿನ ಪ್ರಶ್ನೆಗಳನ್ನು ಕೇಳೋಕೆ  ಪ್ರಯತ್ನ ಮಾಡಿ . ಅವರ ಉತ್ತರಗಳು ಅವರ ಯೋಚನಾ ಲಹರಿ , ವ್ಯಕ್ತಿತ್ವ್ , , ಕುತೂಹಲ, ಆಸಕ್ತಿಗಳನ್ನೂ ಕೂಡ ಬಿಚ್ಚಿಡುತ್ತವೆ. ಎಲ್ಲಕ್ಕಿಂತ  ಹೆಚ್ಚಾಗಿ , ಪ್ರತಿಯೊಂದು ಮಗುವಿನೊಳಗಿರುವ ವಿಶೇಷತೆಯನ್ನ ಹೊರಗೆ ತರುತ್ತವೆ . 

    ನಿಮ್ಮ  ಅನುಭವವನ್ನು   ನಮ್ಮೊಡನೆ ಹಂಚಿಕೊಳ್ಳೋಕೆ  ಮರೆಯಬೇಡಿ ! 

    ಇನ್ನೂ  ಕೆಲವು  ಪ್ರಶ್ನೆಗಳು  !

    ೧. ನಿನಗೆ  ಕನಸು ಕಾಣೋದು  ಅಂದ್ರೆ ಇಷ್ಟಾನ ?  ನಿನ್ನ ಅಚ್ಚುಮೆಚ್ಚಿನ ಕನಸು ಯಾವುದು ?

    ೨. ನಿನಗೆ ಯಾವ ಕೆಲಸಗಳು ಮಾಡಿದ್ರೆ ಖುಷಿ ಆಗುತ್ತೆ ? 

    ೩. ನಿನ್ನ ಗೆಳೆಯರು ಹೇಗಿದ್ದಾರೆ ?  ಅವರಿಗೆ ಏನು ಮಾಡೋಕೆ ಇಷ್ಟ ?

    ೪. ಈ ಸದ್ಯ ನಿನಗೆ ಏನು ಬೇಕಾದ್ರೂ ಸಿಗೋದಾದ್ರೆ, ಏನು ಪಡೆಯಲಿ  ಇಷ್ಟ ? ಅದರಿಂದ  ಏನ್ಮಾಡ್ತಿಯಾ  ?

    ೫. ನಿನ್ನ ಅಚ್ಚು ಮೆಚ್ಚಿನ ಕಾರ್ಟೂನ್ ಯಾವುದು ? ಅದರಲ್ಲಿ  ಯಾವ ಪಾತ್ರ  ನಿನಗೆ  ತುಂಬಾ  ಇಷ್ಟ  ? ಯಾಕೆ  ಇಷ್ಟ  ? 

    ೬. ನೀನು ಹೊಸ ಉದ್ಯಮ / ಅಂಗಡಿ ಶುರು ಮಾಡೋದಾದ್ರ್ ಯಾವ ಥರ ಉದ್ಯಮ / ಅಂಗಡಿ ಶುರು ಮಾಡ್ತೀಯ ? 

    ೭. ನಿನಗೆ ಸೂಪರ್ ಮ್ಯಾನ್, ಸ್ಪೈಡೆರ್ ಮ್ಯಾನ್ ಥರ ಸೂಪರ್ ಹೀರೊ ನಿಮಗೆ ಇಷ್ಟಾನ ? ಹಾಗಾದರೇ,  ನೀನು ಸೂಪರ್ ಹೀರೊ ಆಗಿದ್ರೆ, ನೀನು ಯಾವ ಹೆಸರಿಟ್ಟು ಕೊಳ್ತಿದ್ದೆ ? ನಿನಗೆ ಯಾವೆಲ್ಲ  ವಿಶೇಷ ಶಕ್ತಿಗಳು ಬೇಕು?

    ೮. ನೀನು ಸಮುದ್ರಕ್ಕೆ ಹೋದೆ ಅಂತ ತಿಳಿದುಕೋ . ಎಲ್ಲದ್ದಕ್ಕಿಂತ ಮೊದಲು ಯಾವ ಆಟ ಆಡೋಕೆ ನಿನಗಿಷ್ಟ ?

    ೯. ನಿನಗೆ ಮನೆಯಲ್ಲಿ ಯಾವ ಗಿಡ ಬೆಳೆಸಲಿಕ್ಕೆ ಇಷ್ಟ ?

    ೧೦. .ನಿನ್ಹತ್ತಿರ ಆಟ ಸಾಮಾನುಗಳಿದ್ಯಲ್ಲ , ಅವು ಮಾತಾಡುವಂತಿದ್ದರೆ ಹೇಗಿರ್ತಿತ್ತು ? ಅವು  ಏನು  ಮಾತಾಡ್ತಿದ್ದವು ?

    ೧೧. ನಿನ್ಹತ್ತ್ರ ಬೇರೆಯವರಿಗೆ ಸಹಾಯ ಮಾಡೋಕೆ 1000 ರೂಪಾಯಿ ,ಇದ್ರೆ, ಯಾರಿಗೆ / ಏನು / ಯಾವ  ಸಹಾಯ ಮಾಡ್ತೀ ?

    ೧೨. ನೀನೆ  ಒಂದು ಪುಸ್ತಕ  ಬರೆದೆ ಅಂತ ಇಟ್ಕೋ .  ಯಾವುದರ ಬಗ್ಗೆ ಪುಸ್ತಕ  ಬರೀತಿಯ ?

    ೧೩. ನಿನಗೆ  ಯಾವ ಥರದ  ತಿಂಡಿ ಇಷ್ಟ  ? ನೀನು ನಿನ್ನದೇ  ಹೋಟೆಲ್ ಒಂದು ತೆಗೆದಿದ್ದರೆ , ಏನೇನೊ  ತಿಂಡಿ ಮಾಡ್ತಿಯಾ  ನಿನ್ನ ಹೋಟೆಲ್ ನಲ್ಲಿ . ?

    ೧೪. ನಿನ್ಹತ್ರ  ಒಂದು ಇಡೀ ದಿವಸ  ತುಂಬಾ ಚೆನ್ನಾಗಿರೋ  ಕ್ಯಾಮೆರಾ ಇದ್ರೆ , ಯಾವ / ಯಾರ  ಫೋಟೋ ತೆಗೆಯುತ್ತಿ

    ೧೫. ನೀನು  ವಿಜ್ಞಾನಿ  ಆಗಿ ಏನಾದ್ರೂ  ಕಂಡು ಹಿಡಿಯಬೇಕು  ಅಂತ ಯೋಚಿಸಿದ್ಯಾ ? ಹಾಗಿದ್ದರೆ , ಏನು  ಕಂಡು ಹಿಡಿಯೋದಕ್ಕೆ ಇಷ್ಟ  ? 

    ೧೬. ನಿನಗೆ  ಶಾಲೆ ಗೆ  ಹೋಗಬೇಕಾದ್ದೇ  ಇಲ್ಲ ಅಂತ ಅಂದು  ಕೊಳ್ಳೋಣ . ಆಗ ನೀನು  ಏನು ಮಾಡುತ್ತೀ ?

    ೧೭. ನೀನು , ಶಿಕ್ಷಕ , ಅಥವಾ  ಟೀಚರ್ ಆಗಿದ್ದೆ ಅಂದುಕೊಳ್ಳೋಣ . ಆಗ  ಮಕ್ಕಳಿಗೆ , ಏನು ಕಲಿಸಲಿಕ್ಕೆ ಇಷ್ಟ ನಿನಗೆ  ?

    ೧೮. ನಿನಗೆ  ಯಾವ ಕಥೆ  ಪುಸ್ತಕ ಇಷ್ಟ  ? ಯಾವ ಪಾತ್ರ ಇಷ್ಟ ?

    ೧೯. ನಿನ್ನ ಬಗ್ಗೆ ಯಾರಿಗೂ ಗೊತ್ತಿಲ್ದೆ ಇರೋ ವಿಷ್ಯ ಏನಾದ್ರೂ ನನಗೆ ಹೇಳ್ತಿಯ ?

    22 min
  • Ep70 - ಎಮ್ಮೆಯೋ ಮೇಕೆಯೋ ?

    ಈ ಕತೆ ಇಂಡೋನೇಷ್ಯಾ ದೇಶದ ಜಾನಪದ ಕತೆಗಳಿಂದ ಆಯ್ದುಕೊಂಡಿದ್ದು .  ಕಳೆದ ಸಲದ “ಸೋಮಾರಿ ಸಿದ್ದ “ ನ ಹಾಗೆ , ಇನ್ನೂಬ್ಬ ಮುಗ್ದ ಮನುಷ್ಯನೊಬ್ಬನ  ಕತೆ . ಮನೆಯಲ್ಲಿ ಕಷ್ಟ ಅಂತ ಇದ್ದೊಂದು ಎಮ್ಮೆಯನ್ನ ಮಾರಿ ಬನ್ನಿ ಅಂತ ಅವನ  ಹೆಂಡತಿ ಕಳಿಸಿದರೆ , ಎಷ್ಟೆಲ್ಲಾ ಅವಾಂತರ ಮಾಡಿಕೊಂಡು ಬಂದ , ಮತ್ತು ಕೊನೆಯಲ್ಲಿ ಆಗಿದ್ದ  ಮೋಸದಿಂದ ಹೇಗೆ ತಪ್ಪಿಸಿಕೊಂಡ ಅನ್ನೋ ಮೋಜಿನ ಕತೆ ಕೇಳೋಣ .

     

    13 min
  • Ep69 - ಸೋಮಾರಿ ಸಿದ್ದ

    ದಿನವಿಡೀ ನಿದ್ದೆ ಮಾಡುತ್ತಾ ಕಾಲ  ಕಳೆಯುತ್ತಿದ್ದ ಸಿದ್ದ ರಾತ್ರೋ ರಾತ್ರಿ ಪ್ರಖ್ಯಾತ ಮಂತ್ರವಾದಿ ಅನ್ನಿಸಿಕೊಂಡು ಬಿಟ್ಟ .  !

    ತಿಳಿ ಹಾಸ್ಯದಿಂದ ಕೂಡಿದ ಈ ಕತೆ ನಿಮ್ಮನ್ನು ಹಾಗೂ ಮಕ್ಕಳನ್ನು ನಕ್ಕು ನಗಿಸುವುದು ಖಂಡಿತ . 

    ಹಾಗೆ , ಕಥೆಯ ಕೊನೆಯಲ್ಲಿ  ಕೇಳಿದ "ಜ್ಞಾನ - ವಿಜ್ಞಾನ - ವಿಸ್ಮಯ " ಅಂಕಣದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿದು ಕಳಿಸೋದನ್ನ  ಮರೆಯಬೇಡಿ !

    12 min
  • Ep68 - ಮೊಸಳೆ ಮತ್ತು ಮಂಗ್ಯಾನ ಕತಿ

    ಕನ್ನಡದಾಗ ಭಾಳ  ಉಪ  ಭಾಷಾ  ಇದ್ರೂ  ನಮ್ಮ  ಉತ್ತರ  ಕರ್ನಾಟಕ  ಭಾಷಾದಾಗ ಕಥೆ  ಕೇಳೋ  ಮಜಾನ ಬ್ಯಾರೆ  .  ಅದಕ್ಕಾ ಈ ಸಲದ  ಕತಿ  ಉತ್ತರ ಕರ್ನಾಟಕ ಭಾಷಾದಾಗ  ಹೇಳಿ  ಬಿಟ್ಟೇವಿ . ಕತಿ  ಕೇಳ್ರಿ ,  ಮತ್ತ ನಿಮ್ಮ  ಗೆಳೆಯಂದ್ರಿರಿಗೂ  ಹೇಳ್ರಿ .  ಹಂಗ  ನಿಮಗ ಇನ್ನಷ್ಟು ಉತ್ತರ  ಕರ್ನಾಟಕದ ಕತಿಗಳು  ಕೇಳ್ಬೇಕು  ಅನಸಿದ್ರ , ಯಾವ್ ಕತಿ ಬೇಕು  ಅಂತ  ಬರೆದು ಕಳಿಸ್ರಿ .

     ಇದು ನಮ್ಮ  ಹೊಸ ಪ್ರಯತ್ನ ,ನಿಮ್ಮ ಅನಿಸಿಕೆಗಳಿಂದ ನಮಗೆ  ಈ ತರಹದ ಹೊಸ ಪ್ರಯತ್ನ ಗಳನ್ನ ಮಾಡಲು ಸ್ಪೂರ್ತಿ ಸಿಗುತ್ತದೆ .

     

    9 min

About Kelirondu Katheya ಕೇಳಿರೊಂದು ಕಥೆಯ

From the publisher's feed

Kannada Stories for children.