Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • *ಹೆಣ್ಣೆಂದರೆ ಆದಿ, ಹೆಣ್ಣೆಂದರೆ ಅಂತ್ಯ, ಈ ಸತ್ಯ ಅರಿವಾದರಷ್ಟೇ ಸಾಕು!* ಪೌರಾಣಿಕ ಕಾಲದಿಂದಲೂ ಹೆಣ್ಣೆಂದರೆ ಸಮಾಜಕ್ಕೆ
    *ಹೆಣ್ಣೆಂದರೆ ಆದಿ, ಹೆಣ್ಣೆಂದರೆ ಅಂತ್ಯ, ಈ ಸತ್ಯ ಅರಿವಾದರಷ್ಟೇ ಸಾಕು!*
    ಪೌರಾಣಿಕ ಕಾಲದಿಂದಲೂ ಹೆಣ್ಣೆಂದರೆ ಸಮಾಜಕ್ಕೆ ತಾತ್ಸಾರ, ಶೋಕದ ಪ್ರತೀಕ, ಗಂಡಿನ ಗುಲಾಮಳು ಎಂಬ ಅಹಂಕಾರ. ಮಹಾಮಾತೆಯರಾದ ಸೀತೆ, ಅಹಲ್ಯೆ ಕೂಡ ತಾತ್ಸಾರಕ್ಕೆ ಗುರಿಯಾಗಿದ್ದಾರೆ. ಇದು ಇಂದು ಕೂಡ ನಡೆಯುತ್ತಿದೆ. ಈ ಮನೋಭಾವ ಬದಲಾಗಲು ಸಾಧ್ಯವಿಲ್ಲವೆ?
    "ಹೆಣ್ಣು ಎಂದರೆ ಶಕ್ತಿ. ಜಗತ್ತಿನ ಎಲ್ಲಾ ಶಕ್ತಿಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಸದಾ ಕಾಲ ಎಲ್ಲರನ್ನೂ ಪ್ರೀತಿಯಲ್ಲಿ ಪೊರೆಯುವವಳು ಈ ಹೆಣ್ಣು. ಆಕೆ ಮಮತಾಮಯಿ, ಕರುಣಾಮಯಿ, ಕ್ಷಮಯಾಧರಿತ್ರಿ. ಅದಕ್ಕೆ ಹೆಣ್ಣು ಅಂದ್ರೆ ವರ್ಣಿಸಲಾಗದ ಶಕ್ತಿಯಾಗಿ ಕಾಣುವುದು. ಹೆಣ್ಣು ಪ್ರೀತಿ ವಿಶ್ವಾಸದ ಪ್ರತೀಕ, ಮನೆಯನ್ನು ಬೆಳಗುವ ಬೆಳಕು. ಹೆಣ್ಣೆಂದರೆ ಪ್ರಕೃತಿ... ಹೀಗೆ ನಾನಾ ರೂಪದಲ್ಲಿ ಅವತರಿಸುವವಳೆ ಸ್ತ್ರೀ ಶಕ್ತಿ.
    ಹೆಣ್ಣು ಮಗುವೊಂದು ಹುಟ್ಟಿದಾಗ ಲಕ್ಷ್ಮೀ ಹುಟ್ಟಿದಳು ಅಂತ ಕುಣಿದಾಡುವ ಪೋಷಕರು ಇದ್ದಾರೆ. ಹಾಗೇ ಈ ದರಿದ್ರ ಲಕ್ಷ್ಮಿ ಯಾಕಾದರೂ ನಮ್ಮ ಮನೆಯಲ್ಲಿ ಹುಟ್ಟಿದಳೋ ಅಂತ ಜರಿಯುವ ಪೋಷಕರು ಇದ್ದಾರೆ. ಯಾಕೆ ಈ ತಾರತಮ್ಯ? ಬಹುಶಃ ಇವತ್ತಿಗೂ ಇದಕ್ಕೆ ಸರಿಯಾದ ಉತ್ತರವನ್ನು ಯಾರಿಗೂ ಕಂಡು ಹಿಡಿಯಲಾಗಲಿಲ್ಲ. ಎಲ್ಲರೂ ಅವರವರದೇ ಆದ ಕಾರಣಗಳನ್ನು ಕೊಟ್ಟು ಸುಮ್ಮನಿರುತ್ತಾರೆ. ಈ ಸಮಾಜದಲ್ಲಿ ಹೆಣ್ಣು ಬಲಶಾಲಿಯಾಗಿ ಬೆಳೆಯುವುದು ಯಾರಿಗೂ ಬೇಕಾಗಿಲ್ಲ ಅನಿಸುತ್ತದೆ. ಇದು ಗಂಡು ಸಮಾಜ ಎಂದು ಕರೆಯಲ್ಪಟ್ಟ ಈ ಜಗತ್ತಿನೆದುರು ಸದಾ ಕಾಲ ತನ್ನ ದರ್ಪ ಅಹಂ
    10 min
  • ಪ್ರೀತಿ ಬಗ್ಗೆ ಒಂದಿಷ್ಟು…♥️
    **
    ಪ್ರೀತಿ ಎಂದರೇನು ಅನ್ನುವುದು ತುಂಬಾ ಕ್ಲೀಷೆ ಪ್ರಶ್ನೆ.
    ಹಲವಾರು ಬರಹಗಾರರು ತಮ್ಮ ತಮ್ಮ ಅನುಭವಕ್ಕನುಗುಣವಾಗಿ ಪ್ರೀತಿಯ ವ್ಯಾಖ್ಯೆಯನ್ನು ನೀಡಿದ್ದಾರೆ. ಎರಡು ಹೃದಯಗಳ ಮಿಲನ, ಎರಡು ಜೀವ ಒಂದೇ ಮನಸ್ಸು ಎಂಬುದೆಲ್ಲಾ ಪುಸ್ತಕದ ಬದನೆಕಾಯಾಯಿತು. ಸ್ಟೀಫನ್ ಕೋವೆಯಂಥ ಲೇಖಕ ಪ್ರೀತಿ ಅಂದರೆ ಕೊಡುವುದು ಅಂತ ಅಂದಿದ್ದಾನೆ. ಅವನ ಪ್ರಕಾರ ಪ್ರೀತಿ ಅನ್ನುವುದು ವರ್ಬ್. ಅಂದರೆ ಅದೊಂದು ಭಾವ ಅಲ್ಲ, ನಿರಪೇಕ್ಷೆಯಿಂದ ನೀಡುವುದು.
    ತಾಯಿಯೊಬ್ಬಳು – ಪ್ರೀತಿಗೆ ಜೀವಂತ ಭಾಷ್ಯ ಬರೆಯುತ್ತಾಳೆ. ಅನ್ ಕಂಡೀಷನ್ಡ್ ಪ್ರೀತಿ ನೀಡಿ, ನಾನು ನಿನ್ನ ಪ್ರೀತಿಸುತ್ತೀನಿ ಅಂತ ಒಂದು ಮಾತೂ ಆಡದೇ ಪ್ರೀತಿಯನ್ನು ಬದುಕಿ ತೋರಿಸುತ್ತಾಳೆ. ಕೊನೆವರೆಗೂ ಕಾಳಜಿ ವಹಿಸುತ್ತಾಳೆ. ತನಗೆ ಕೂಡದ ವಯಸ್ಸಿನಲ್ಲೂ ಮಕ್ಕಳ ಕುರಿತ ಕಳಕಳಿ ಪ್ರತಿದಿನ ಇಟ್ಟುಕೊಂಡಿರುತ್ತಾಳೆ.
    ಇಷ್ಟಕ್ಕೂ ನಿಜವಾಗಿ – ನಿಜವಾದ ಪ್ರೀತಿ ಅಂದರೇನು?
    ನನ್ನ ಪ್ರಕಾರ – ಪ್ರೀತಿ ಅಂದರೆ ಒಂದು ಉತ್ಕಟವಾದ ಭಾವ. ಅದಕ್ಕೆ ಸಾಲಿನ, ಮಾತಿನ ಮಹಿಮೆ ಬೇಕಿಲ್ಲ. ಒಬ್ಬರನ್ನು ಪ್ರೀತಿಸುತ್ತೇನೆ ಅಂದರೆ ಅವರು ಸದಾ ಖುಷಿಯಾಗಿರಲಿ ಅಂತ ಬಯಸುತ್ತೇನೆ ಮತ್ತು ಆ ನಿಟ್ಟಿನಲ್ಲಿ ನನ್ನ ಸಾಮರ್ಥ್ಯ ಮೀರಿ ನಿಲ್ಲುತ್ತೇನೆ ಅಂತರ್ಥ. ಮತ್ತು ಅವರ ಖುಷಿಗೆ ತಾನು ಏನನ್ನಾದರೂ ಮಾಡಲು ಸಿದ್ಧ ಅನ್ನುವ ಭಾವ. ಕಷ್ಟ ಬಂದಾಗ ಹೆಗಲಾಗಿ ನಿಲ್ಲುವ ಆಶಯ. ಹಾಗಂಥ ಕಟ್ಟಿಹಾಕುವಂಥ ಬಂಧವೇನಲ್ಲ. ನೀನು ನಾನಿಲ್ಲದೆಯೂ ಖುಷಿಯಾಗಿರಬಲ್ಲೆ ಅಂತಾದರೆ- ಅದಾದರೂ ಸೈ.
    ಒಟ್ಟಿನಲ್ಲಿ ನಿನ್ನ ಸಂತಸವೇ ನನ್ನ ಆಶಯ.
    ನಾನು ನಿನ್ನ ಪ್ರೀತಿಸ್ತೀನಿ, ಹೇಳು ನೀ ನನಗಾಗಿ ಏನು ಮಾಡುವಿ? ನೀನೆಷ್ಟು ನನ್ನ ಪ್ರೀತಿಸ್ತೀ? ಅಂತ ಕೇಳುವುದು ಪ್ರೀತಿಯಾಗದು. ನಾನು ನಿನ್ನ ಪ್ರೀತಿಸ್ತೀನಾದ್ದರಿಂದ ನೀನೂ ನನ್ನ ಪ್ರೀತಿಸಬೇಕು ಅನ್ನುವುದು ವ್ಯವಹಾರವಾದೀತು. ಇನ್ನೊಬ್ಬ ವ್ಯಕ್ತಿಯ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿರದ ಭಾವ. ಹಾಗಾಗಿ ಒಂದು ಸಂಬಂಧದಲ್ಲಿ ನೀನೆಷ್ಟು ನೀಡಿದೆ ಅನ್ನುವುದರ ಮೇಲೆ ನಿನ್ನ ಪ್ರೀತಿ ನಿರ್ಧಾರಿತವಾಗಿರಬೇಕೇ ವಿನಾ ಸಂಬಂಧದಲ್ಲಿ ನೀನೆಷ್ಟು ಪಡಕೊಂಡೆ, ಬಂದ ಲಾಭಕ್ಕನುಗುಣವಾದ ಲೆಕ್ಕ ಅಲ್ಲ ಅದು.
    ಹೀಗೆ ವಾಪಸ್ಸು ಏನನ್ನೂ ಬಯಸದೇ, ನಿನ್ನ ದುಃಖದಲ್ಲಿ ಜತೆಯಾಗಿ, ನಿನ್ನ ಸುಖದಲ್ಲಿ ಹಿತವಾಗಿ ಮರೆಯಾಗಿ ಇರುವುದು ಉನ್ನತ ಪ್ರೇಮ.
    ನೀನು ಖುಷಿಯಾಗಿರಬೇಕು ಅದಕ್ಕೆ ನಾನು ನಿನ್ನ ಜತೆಯಲ್ಲಿರಲೇಬೇಕು (ಒಟ್ಟಿನಲ್ಲಿ ನೀನೇ ಬೇಕು)- ಅನ್ನುವುದು ಮಧ್ಯಮ.
    ಅಂದರೆ ನಿಜವಾದ ಪ್ರೀತಿಯಲ್ಲಿ ಜೆಲಸಿ ಬರಬಾರದು. ತಾನು ಪ್ರೀತಿಸುವ ವ್ಯಕ್ತಿ ಆನಂದದಿದ್ದರೆ ಸಾಕು ಅನ್ನುವಂಥ, ಬೇರೆಯವರ ಜೊತೆಯಾದರೂ- ಬೇರೆಲ್ಲೋ ದೂರದಲ್ಲಿ ಇದ್ದಾದರೂ- ಒಟ್ಟಿನಲ್ಲಿ ಸಂತಸವಾಗಿದ್ದರೆ ಸಾಕು ಅನ್ನುವಂಥ ಮನಸ್ಥಿತಿ ಇರಬೇಕು.
    ಆದರೆ ಇದು ಕೇಳುವಷ್ಟು / ಹೇಳುವಷ್ಟು ಸುಲಭವಲ್ಲ.
    ಅಂಥ ಪ್ರೀತಿ ನಿಮಗೂ ದೊರಕಿದೆಯಾದರೆ ನಿಮಗಿದೋ ಶುಭಾಶಯ. ಪ್ರಪಂಚದಲ್ಲಿ ಬಾಳುತ್ತಿರುವ ಕೋಟಿ ಕೋಟಿ ಮನುಷ್ಯರಲ್ಲಿ ನೀವೇ ಅದೃಷ್ಟವಂತರು...🙏🏻🚩
    4 min
  • Green 🏡house ಹಸಿರುಮನೆ ಪರಿಣಾಮ*
    *
    ಭೂಮಿಯ ವಾತಾವರಣ, ಭೂಮಿಯ ಮೇಲ್ಮೈ ಮತ್ತು ಬಾಹ್ಯಾಕಾಶಗಳ ನಡುವೆ ನಡೆಯುವ ಶಕ್ತಿ ವಿನಿಮಯಗಳ ಯೋಜಿತ ನಿರೂಪಣೆ.ಭೂ ಮೇಲ್ಮೈ ಹೊರಸೂಸಿದ ಶಕ್ತಿಯನ್ನು ಹಿಡಿದಿಡುವ ಮತ್ತು ಮರುಬಳಸುವ ವಾತಾವರಣದ ಸಾಮರ್ಥ್ಯವು ಹಸಿರುಮನೆ ಪರಿಣಾಮದ ಗುಣಲಕ್ಷಣಗಳನ್ನು ವಿವರಿಸುತ್ತದೆ.
    ಅವಗೆಂಪು ವಿಕಿರಣಗಳನ್ನು ಹೀರಿಕೊಳ್ಳುವ ಮತ್ತು ಅದನ್ನು ಹೊರಹಾಕುವ ವಿವಿಧ ಅನಿಲಗಳು ವಾತಾವರಣವೊಂದರಲ್ಲಿ ಸಂಗ್ರಹವಾಗುವ ಕಾರಣದಿಂದ ಗ್ರಹ ಅಥವಾ ಉಪಗ್ರಹವೊಂದರ ಮೇಲ್ಮೈ ಬಿಸಿಯಾಗುವುದನ್ನು ಹಸಿರುಮನೆ ಪರಿಣಾಮ ಎಂದು ಕರೆಯುತ್ತಾರೆ.ಈ ರೀತಿಯಾಗಿ ಹಸಿರುಮನೆ ಅನಿಲಗಳು ಬಿಸಿಯನ್ನು ಮೇಲ್ಮೈ,-ವಾಯುಮಂಡಲ ವ್ಯವಸ್ಥೆಯೊಳಗಡೆ ಬಂಧಿಸಿಡುತ್ತವೆ.ಈ ಕಾರ್ಯವಿಧಾನವು ವಾಸ್ತವಿಕ ಹಸಿರುಮನೆಯೊಂದರದ್ದಕ್ಕಿಂತ ಮೂಲಭೂತವಾಗಿ ಭಿನ್ನವಾಗಿದ್ದು, ಅದು ಬಿಸಿ ಗಾಳಿಯನ್ನು ವ್ಯವಸ್ಥೆಯನ್ನು ಒಳಗೇ ಪ್ರತ್ಯೇಕಿಸುವ ಮೂಲಕ ಕಾರ್ಯನಿರ್ವಹಿಸುವುದರಿಂದ, ಲಂಬಗಮನದಿಂದ ತಾಪವು ನಷ್ಟವಾಗುವುದಿಲ್ಲ. ಹಸಿರುಮನೆ ಪರಿಣಾಮದ ಪರಿಕಲ್ಪನೆಯನ್ನು ಮೊದಲು 1824ರಲ್ಲಿ ಜೋಸೆಫ್ ಫೂರಿಯರ್ ಆವಿಷ್ಕರಿಸಿರು; ಜಾನ್‌ ಟಿಂಡಾಲ್‌ 1858ರಲ್ಲಿ ಇದರ ಕುರಿತು ಮತ್ತಷ್ಟು ಖಾತರಿಯಾದ ಪ್ರಯೋಗವನ್ನು ನಡೆಸಿದರು; ನಂತರ ಸ್ವಾಂಟೆ ಅರ್ರೇನಿಯಸ್ ಎಂಬ ವಿಜ್ಞಾನಿ 1896ರಲ್ಲಿ ಇದರ ಕುರಿತು ಪರಿಮಾಣಾತ್ಮಕವಾಗಿ ವರದಿ ಮಾಡಿದರು.ಭೂಮಿಯ ಮೇಲ್ಮೈಯಲ್ಲಿ ಹಸಿರುಮನೆ ಪರಿಣಾಮ ಮತ್ತು ವಾತಾವರಣ ಇಲ್ಲವಾದರೆ, 14 °C (57 °F) ಇರುವ ಭೂಮಿಯ ಸರಾಸರಿ ಮೇಲ್ಮೈ ತಾಪಮಾನವು ಭೂಮಿಯ ಕೃಷ್ಣಕಾಯ ತಾಪಮಾನ ಎಂದು ಹೇಳಲಾಗುವ -18 °C (−0.4 °F)ನಷ್ಟು ಅತಿ ಕಡಿಮೆ ಮಟ್ಟದವರೆಗೂ ಇಳಿಯಬಹುದು. ಭೂಮಿಯ ಮೇಲ್ಮೈ ಮತ್ತು ಕೆಳ ವಾತಾವರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಉಂಟಾಗುತ್ತಿರುವ ಕಾವೇರುವಿಕೆಯಾದ ಮಾನವಜನ್ಯ ಜಾಗತಿಕ ತಾಪಮಾನ ಏರಿಕೆಯು (AGW), "ಹೆಚ್ಚಳಗೊಂಡಿರುವ ಹಸಿರುಮನೆ ಪರಿಣಾಮ"ದಿಂದ ಉಂಟಾಗಿದೆ ಎಂದು ನಂಬಲಾಗಿದ್ದು, ಇದಕ್ಕೆ ವಾತಾವರಣದ ಹಸಿರುಮನೆ ಅನಿಲಗಳಲ್ಲಿನ ಮಾನವನಿರ್ಮಿತ ಏರಿಕೆಯೇ ಪ್ರಮುಖ ಕಾರಣವಾಗಿದೆ.
    4 min

About Dr Balakrishna Maddodi

From the publisher's feed

Hi