Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • ಮನಸ್ಸುಗಳ ಅಂತರಂಗ
    ಬುದ್ಧಿವಂತಿಕೆ, ಅರಿವು, ತಿಳಿವಳಿಕೆ, ಜ್ಞಾನ ಎಲ್ಲವೂ ಕಡಿಮೆಯಾಗುತ್ತಾ ಸಾಗುವ ಅಥವಾ ಮುಗಿದು ಹೋಗುವ ಆಂತರಿಕ ಮಾನಸಿಕ ಸಂಪನ್ಮೂಲಗಳು ಎಂಬ ಬಗ್ಗೆ ಸದಾ ಎಚ್ಚರವಿರಲಿ.....
    ನನಗೆ ಎಲ್ಲಾ ಗೊತ್ತಿದೆ, ಎಲ್ಲಾ ಓದಿದ್ದೇನೆ, ಅರ್ಥ ಮಾಡಿಕೊಂಡಿದ್ದೇನೆ, ನನ್ನ ಜ್ಞಾನ ಭಂಡಾರ ತುಂಬಿದೆ, ಇನ್ನೇನು ಉಳಿದಿಲ್ಲ ಎಂಬ ನಿರ್ಧಾರಕ್ಕೆ ಬಂದರೆ ಆಗ ನಮ್ಮ ಅಜ್ಞಾನ‌ ಸಹ ನಮ್ಮ ಅರಿವಿಗೇ ಬರುವುದಿಲ್ಲ. ನಮ್ಮ ವ್ಯಕ್ತಿತ್ವ ಕುಬ್ಜವಾಗುತ್ತಾ ಹೋಗುತ್ತದೆ.
    ನಾವು ಸಂಪಾದಿಸಿರುವ ಜ್ಞಾನವೆಂಬ ಇಂಧನವನ್ನು ಉಪಯೋಗಿಸುವ ಜೊತೆಗೆ ‌ಕಾಲ ಕಾಲಕ್ಕೆ ಮತ್ತೆ ಮತ್ತೆ ಮರು ಭರ್ತಿ ಮಾಡಿಕೊಳ್ಳುತ್ತಿರಬೇಕು. ಅರಿವಿನ ಬ್ಯಾಟರಿಯನ್ನು ಮತ್ತೆ ಮತ್ತೆ ಚಾರ್ಜ್ ಮಾಡಿಕೊಳ್ಳುತ್ತಿರಬೇಕು.....
    ಅದು ಓದಿನ ಮುಖಾಂತರ ಇರಬಹುದು, ಚರ್ಚೆಗಳ ಮೂಲಕ ಇರಬಹುದು, ಬದುಕಿನ ಅನುಭವಗಳ ಮೂಲಕ ಇರಬಹುದು, ಪ್ರವಾಸದ ಮುಖಾಂತರ ಇರಬಹುದು, ಕಾಯಕದ ಮುಖಾಂತರ ಇರಬಹುದು, ಮಾಧ್ಯಮಗಳ ಮೂಲಕ ಇರಬಹುದು, ಬರವಣಿಗೆಯ ಮುಖಾಂತರ ಇರಬಹುದು, ಅಭ್ಯಾಸದ ಮೂಲಕ ಇರಬಹುದು, ಯೋಗ ಧ್ಯಾನ ಏಕಾಂತ ಗುರು ಹಿರಿಯರ ಮೂಲಕ ಇರಬಹುದು ಒಟ್ಟಿನಲ್ಲಿ ನಮಗೆ ಸಿಗುವ ಮತ್ತು ಆಸಕ್ತಿ ಇರುವ ಮಾರ್ಗಗಳ ಮೂಲಕ ಅದನ್ನು ತುಂಬಿಸಿಕೊಳ್ಳಲು ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇರಬೇಕು. ಇಲ್ಲದಿದ್ದರೆ ನಿಧಾನವಾಗಿ ಖಾಲಿಯಾಗುತ್ತಿರುತ್ತದೆ. ದುರಂರವೆಂದರೆ ಬಹಳಷ್ಟು ಬಾರಿ ಅದು ನಮ್ಮ ಅರಿವಿಗೆ ಬರುವುದೇ ಇಲ್ಲ.
    ಆ ಜ್ಞಾನವೆಂಬ ಇಂಧನ ಖಾಲಿಯಾಗುತ್ತಿದ್ದಂತೆ ಆ ಜಾಗದಲ್ಲಿ ದುರಹಂಕಾರ, ದುರಾಸೆ, ಆಲಸ್ಯ, ಬೇಜವಾಬ್ದಾರಿ, ಸಣ್ಣತನ, ಸ್ವಾರ್ಥ, ಮೂರ್ಖತನವೆಂಬ ಇಂಧನಗಳು ಆಕ್ರಮಿಸಿಕೊಳ್ಳತೊಡಗುತ್ತವೆ.
    ಈ ಗುಣಗಳು ಹೆಚ್ಚಾಗುತ್ತಿದ್ದಂತೆ ನೋವು ನಿರಾಸೆ ಕೋಪ ಅಸಹನೆ ಅನಾರೋಗ್ಯ ಸಿಡುಕು ಅತೃಪ್ತಿಗಳು ಬೆಳೆಯುತ್ತಾ ಹೋಗುತ್ತದೆ. ಅಲ್ಲಿಗೆ ನಮ್ಮ ನೆಮ್ಮದಿಯ ಮಟ್ಟ ಕುಸಿಯುತ್ತಾ ಹೋಗುತ್ತದೆ. ದುಃಖದ ಭಾವ ಹೆಚ್ಚಾಗುತ್ತಾ ಹೋಗುತ್ತದೆ.
    ಸರ್ಕಾರದಲ್ಲಿ ಕೆಲಸ ಮಾಡುವ ಬಹಳಷ್ಟು ಐಎಎಸ್‌, ಐಪಿಎಸ್, ಕೆಎಎಸ್ ಮುಂತಾದವರು ಸೇರಿ ಎಲ್ಲಾ ಹಂತದ ಅಧಿಕಾರಿಗಳು, ಸರ್ಕಾರಿ ಡಾಕ್ಟರ್, ಇಂಜಿನಿಯರ್, ಲಾಯರ್ ಗಳು, ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಹವಾಮಾನ ಮುಂತಾದ ಇಲಾಖೆಗಳಲ್ಲಿ ಕೆಲಸ ಮಾಡುವವರು ಕೆಲಸಕ್ಕೆ ಸೇರುವಾಗ ತುಂಬಾ ಕಷ್ಟಪಟ್ಟು ಓದಿ ಎಲ್ಲಾ ಮೂಲಗಳಿಂದ ವಿಷಯ ಗ್ರಹಿಸಿ ಹೆಚ್ಚು ಅಂಕ ಪಡೆದು, ಸಂದರ್ಶನಗಳಲ್ಲಿ ಜಾಣ್ಮೆಯಿಂದ ಉತ್ತರಿಸಿ ಉದ್ಯೋಗ ಪಡೆದಿರುತ್ತಾರೆ. ತುಂಬಾ ಎಚ್ಚರಿಕೆಯಿಂದ ಮುಂದಿನ ನಡೆ ಇಡುತ್ತಾರೆ.
    ಒಮ್ಮೆ ಅಧಿಕೃತವಾಗಿ ಕೆಲಸ ಖಾಯಂ ಆದ ನಂತರ ಅವರ ಆದ್ಯತೆಗಳು ಬದಲಾಗುತ್ತಾ ಹೋಗುತ್ತವೆ. ಮನೆ, ಸಂಸಾರ, ಹಣ, ಅಧಿಕಾರದ ದರ್ಪ, ಗೆಳೆಯರು, ಸಂಜೆಯ ಪಾರ್ಟಿಗಳು ಎಲ್ಲವೂ ತನ್ನಿಂದ ತಾನೇ ಸಹವಾಸ ದೋಷದಿಂದ ಒಲಿದು ಬರುತ್ತದೆ. ಜ್ಞಾನ ಸಂಪಾದನೆಗೆ ಪ್ರಯತ್ನಿಸುವುದೇ ಇಲ್ಲ. ಟಿವಿ ಪತ್ರಿಕೆಗಳಲ್ಲಿ ಬರುವ ಸುದ್ದಿಗಳೇ ಅವರ ಜ್ಞಾನದ ಮೂಲಗಳು ಮತ್ತು ಸರ್ಕಾರಿ ಆದೇಶಗಳೇ ಅವರ ತಿಳಿವಳಿಕೆಯ ಸಾಧನಗಳು. ಅಲ್ಲಿಂದ ಮುಂದೆ ಸಾಗುವವರು ತೀರಾ ಅಪರೂಪ.
    ಬಹಳಷ್ಟು ಜನರಿಗೆ ತಮ್ಮ ಬಾಲ್ಯದಿಂದಲೂ ಬೆಳೆದು ಬಂದ ಅನೇಕ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತುಂಬಾ ಆಸಕ್ತಿ ಇರುತ್ತದೆ. ಆದರೆ ತಿಂಗಳ ಸಂಬಳ ಅವರ ಜೀವನವನ್ನು ಭದ್ರಪಡಿಸುವುದರಿಂದ ಕ್ರಮೇಣ ಎಲ್ಲದರ ಬಗ್ಗೆ ನಿರಾಸಕ್ತಿ ಮೂಡುತ್ತದೆ. ಸ್ವಂತ ಮನೆ, ಸ್ವಂತ ವಾಹನ, ಮಕ್ಕಳು, ಅವರ ಶಿಕ್ಷಣ, ಮದುವೆ ಎಂಬಲ್ಲಿಗೆ ನಿವೃತ್ತಿಯ ಅಂಚಿಗೆ ಬಂದಿರುತ್ತಾರೆ.
    ಹಾಗೆಯೇ ಕಲೆ, ಅಧ್ಯಾತ್ಮ, ವ್ಯಾಪಾರ ವಹಿವಾಟು ಮುಂತಾದ ಕ್ಷೇತ್ರಗಳಲ್ಲಿ ನಿರತರಾದರು ಸಹ ಕಾಲ ಕಾಲಕ್ಕೆ Update ಆಗುತ್ತಲೇ ಇರಬೇಕು. ಇಲ್ಲದಿದ್ದರೆ ಸ್ಪರ್ಧೆಯಲ್ಲಿ ಹಿಂದುಳಿಯುವುದು ಮಾತ್ರವಲ್ಲದೆ, ಮಾನಸಿಕ ವ್ಯಕ್ತಿತ್ವವೂ ಅಸಹನೀಯವಾಗುತ್ತದೆ. ಕೀಳರಿಮೆ ಬೆಳೆಯುತ್ತದೆ.
    ಈ ಜ್ಞಾನದ ಮರು ಪೂರಣ ಕ್ರಿಯೆ ಆಗಿಂದಾಗ್ಗೆ ಮಾಡುತ್ತಲೇ ಇರಬೇಕು. ಖಾಲಿ ಅಥವಾ ಕಡಿಮೆಯಾಗಲು ಬಿಡಬಾರದು. ಇದಕ್ಕೆ ವಯಸ್ಸಿನ ಮಿತಿ ಇಲ್ಲ. ಆರಂಭ ಅಂತ್ಯಗಳಿಲ್ಲ. ಕನಿಷ್ಠ ನಿಮ್ಮ ಯೋಚನಾ ಶಕ್ತಿಯನ್ನು ವಿಶಾಲಗೊಳಿಸಿಕೊಳ್ಳುವ ಮೂಲಕವಾದರೂ ಪ್ರಯತ್ನಿಸಬೇಕು. ಯೋಚಿಸಿ ಯೋಚಿಸಿ ಯೋಚಿಸಿ 360 ಡಿಗ್ರಿ ಕೋನದಲ್ಲಿ ಯೋಚಿಸಿ. ಇಡೀ ಭೂಮಂಡಲದ ಆಗುಹೋಗುಗಳನ್ನು ಗಮನಿಸಿ, ಭೂತ ವರ್ತಮಾನ ಭವಿಷ್ಯದ ಬಗ್ಗೆ ಯೋಚಿಸಿ, ನಿಮ್ಮ ಸುತ್ತ ಮುತ್ತಲಿನ ಎಲ್ಲವುಗಳ ಬಗ್ಗೆಯೂ ಯೋಚಿಸಿ. ನಿಮಗಿಂತ ಕೆಳಗಿರುವವರು, ನಿಮ್ಮ ಜೊತೆ ಇರುವವರು, ನಿಮಗಿಂತ ಮೇಲಿರುವವರು ಎಲ್ಲರ ಬಗ್ಗೆಯೂ ಯೋಚಿಸಿ. ಯೋಚನೆಗೆ ಯಾವುದೇ ಮಿತಿ ಹಾಕಿಕೊಳ್ಳಬೇಡಿ. ಸತ್ಯದ ಹುಡುಕಾಟಕ್ಕೆ ಇದು ಅತ್ಯವಶ್ಯಕ.
    ಕಲಿಕೆಯೆಂಬುದು ನಿರಂತರ ಪ್ರಕ್ರಿಯೆ. ಕಲಿಕೆಯ ಮಾರ್ಗಗಳು ಸಹ ಅಗಣಿತ.
    ಹೇಗೋ, ಎಲ್ಲಿಂದಲೋ ನಮಗೆ ಗೋಚರಿಸುತ್ತಲೇ ಇರುತ್ತದೆ. ಅದನ್ನು ಗ್ರಹಿಸುವುದಷ್ಟೇ ನಮ್ಮ ಕೆಲಸ. ಈ ಪ್ರಕ್ರಿಯೆ ನಮಗೆ ಹಣವನ್ನು, ಅಧಿಕಾರವನ್ನು, ಜನಪ್ರಿಯತೆಯನ್ನು, ಸಂಬಂಧಗಳನ್ನು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆ, ವಿನಯ ಸ್ಥಿತ ಪ್ರಜ್ಞೆತೆ ಕಲಿಸಿ, ಈ ಸೃಷ್ಟಿಯಲ್ಲಿ ನಮ್ಮ ಸ್ಥಾನ ಮತ್ತು ಕರ್ತವ್ಯ ನಮಗೆ ಅರ್ಥ ಮಾಡಿಸಿ ನಮ್ಮ ನೆಮ್ಮದಿಯ ಮಟ್ಟವನ್ನು ಹೆಚ್ಚಿಸುತ್ತದೆ.
    ಆದ್ದರಿಂದ ದಯವಿಟ್ಟು ಕಲಿಕೆಯ ಮುಖಾಂತರ ನಮ್ಮ ಜ್ಞಾನದ ಸಂಪನ್ಮೂಲಗಳನ್ನು ತುಂಬಿಸಿಕೊಳ್ಳುವ ಪ್ರಕ್ರಿಯೆ ನಮ್ಮ ಜೀವಿತದುದ್ದಕೂ ಜಾರಿಯಲ್ಲಿರಲಿ. ಅದೇ ನಾವು ಬಯಸುವ ಬದುಕನ್ನು ರೂಪಿಸುತ್ತದೆ.
    ಎಂದೂ ನಮ್ಮನ್ನು ನಿರಾಸೆಯ ಅಹಂಕಾರದ ಕೂಪಕ್ಕೆ ತಳ್ಳುವುದಿಲ್ಲ ಅಥವಾ ಅದಕ್ಕೆ ಬಿದ್ದರೂ ಮತ್ತೆ ಪುಟಿದೇಳುವಂತೆ ಮಾಡುತ್ತದೆ.
    ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
    ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
    ಮನಸ್ಸುಗಳ ಅಂತರಂಗದ ಚಳವಳಿ.
    ವಿವೇಕಾನಂದ. ಹೆಚ್.ಕೆ.
    7 min
  • MANIPAL ಪೊಲೀಸ್ ಠಾಣಾ ಪ್ರಕಟಣೆ*
    * ಲಾಕ್ ಡೌನ್ ಮತ್ತು ಮಳೆಗಾಲ ಹಿನ್ನೆಲೆಯಲ್ಲಿ... ಕ್ರೈಮ್ ಹೆಚ್ಚುವ ಸಾಧ್ಯತೆ ಇದ್ದು ಸಾರ್ವಜನಿಕರು ತಮ್ಮ
    ಎಚ್ಚರಿಕೆಯಲ್ಲಿರಬೇಕಾಗಿ ವಿನಂತಿ ...
    ***********************
    ತಮ್ಮ ಮತ್ತು ತಮ್ಮವರ ರಕ್ಷಣೆ ತಾವೇ ಮಾಡಿಕೊಳ್ಳಬೇಕಾಗಿದೆ ಸಾಕಷ್ಟು ಮಂದಿಗೆ ಕೆಲಸವಿಲ್ಲದೇ ಆದಾಯವೇ ಇಲ್ಲದಂತಾಗಿದೆ. ಪರಿಣಾಮ ಯಾವ ಕೃತ್ಯಕ್ಕಾದ್ರೂ ಪ್ರಚೋದನೆ ಸಂಭವಿಸುವ ಸಾಧ್ಯತೆ ಇದೆ ಎಂದು ಮಾಹಿತಿ ಇರುತ್ತದೆ...ಹೀಗಾಗಿ ಕೆಲವೊಂದು ಅಂಶಗಳನ್ನು ಮನದಲ್ಲಿಟ್ಟುಕೊಂಡಿರಲು ಸಾರ್ವಜನಿಕರಲ್ಲಿ ಮನವಿ....
    1. ಜನರು ತುಂಬಾ ಜಾಗರೂಕರಾಗಿರಬೇಕು ಮತ್ತು ಮನೆಯಲ್ಲಿರುವವರು, ಸ್ಕೂಲ್​ಗೆ ಹೋಗುವ ಮಕ್ಕಳು, ಕಾಲೇಜಿಗೆ ಹೋಗುವ ಹುಡುಗ ಅಥವಾ ಹುಡುಗಿಯರು, ಕೆಲಸಕ್ಕೆ ಹೋಗುವ ಹೆಂಗಸರು ಅಥವಾ ಗಂಡಸರು ಜಾಗ್ರತೆಯಿಂದಿರಬೇಕು.
    2. ಯಾರೂ ಸಹ ದುಬಾರಿ ವಾಚ್ ಧರಿಸಬೇಡಿ.
    3. ದುಬಾರಿ ಬೆಲೆಯ ಸರಗಳು, ಬಳೆಗಳು, ಕಿವಿಯೋಲೆ ಧರಿಸಬೇಡಿ ಮತ್ತು ನಿಮ್ಮ ಕೈಚೀಲದ ಬಗ್ಗೆ ಜೋಪಾನವಿರಲಿ.
    4. ಗಂಡಸರೇ ಅದಷ್ಟೂ ದುಬಾರಿ, ವಾಚ್, ಬ್ರಾಸ್ಲೈಟ್ ಮತ್ತು ಚೈನ್ಧರಿಸುವುದರಿಂದ ದೂರವಿರಿ.
    5. ಸಾರ್ವಜನಿಕವಾಗಿ ಹೆಚ್ಚು ಮೊಬೈಲ್ ಪೋನ್ ಬಳಕೆ ಮಾಡಬೇಡಿ. ಅದಷ್ಟೂ ಕಡಿಮೆ ಬಳಸಿ.
    6. ಯಾವುದೇ ಅಪರಿಚಿತರಿಗೆ ತಮ್ಮ ವಾಹನದಲ್ಲಿ ಡ್ರಾಪ್ ನೀಡಬೇಡಿ.
    7. ಅಗತ್ಯಕ್ಕಿಂತ ಹೆಚ್ಚು ಹಣವನ್ನು ಜೊತೆಯಲ್ಲಿಟ್ಟುಕೊಂಡು ಓಡಾಡಬೇಡಿ.
    8. ಚಾಲನೆಯ ವೇಳೆ ನಿಮ್ಮ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಗ್ಗೆ ಎಚ್ಚರವಹಿಸಿ.
    9. ಆಗಾಗ ಮನೆಗೆ ಕರೆ ಮಾಡಿ ನಿಮ್ಮ ಕುಟುಂಬದವರ ಜೊತೆ ಮಾತನಾಡಿ, ಹಿರಿಯರು, ಮಕ್ಕಳ ಬಗ್ಗೆ ತಿಳಿದುಕೊಳ್ಳಿ.
    10. ನಿಮ್ಮ ಮನೆಯವರಿಗೆ ತಿಳಿಸಿ, ಹಿರಿಯರು ಮಹಿಳೆಯರು ಬಾಗಿಲು ತೆಗೆಯುವ ವೇಳೆ ಸುರಕ್ಷತೆ ವಹಿಸಲು ತಿಳಿಸಿ, ಗೇಟ್ ಅಥವಾ ಗ್ರಿಲ್ ಲಾಕ್ ಮಾಡಿರಿ. ಯಾವುದೇ ಪಾರ್ಸಲ್ ತೆಗೆದುಕೊಳ್ಳುವ ವೇಳೆ ಗೇಟ್ ಅಥವಾ ಗ್ರಿಲ್ ಬಳಿ ತುಂಬಾ ಹತ್ತಿರ ಹೋಗಬೇಡಿ.
    11. ಮನೆಯಾಚೆ ಹೋಗುವ ಮಕ್ಕಳಿಗೆ ಅದಷ್ಟೂ ಬೇಗ ಮನೆಗೆ ವಾಪಸ್ ಆಗಲು ತಿಳಿಸಿ.
    12. ಮನೆಗೆ ಹೋಗುವಾಗ ಯಾವುದೇ ಶಾರ್ಟ್​ಕಟ್ ರಸ್ತೆಗಳನ್ನ ಬಳಸಬೇಡಿ, ಅದಷ್ಟೂ ಪ್ರಮುಖ ರಸ್ತೆಗಳನ್ನೇ ಬಳಸಿ.
    13. ಯುವಕರು ಮನೆಯಾಚೆ ಇರುವ ವೇಳೆ ಆದಷ್ಟೂ ನಿಮ್ಮ ಸುತ್ತಮುತ್ತಲಿನ ಘಟನೆಗಳ ಬಗ್ಗೆ ಗಮನವಿಡಿ.
    14. ಆದಷ್ಟೂ ಮೊಬೈಲ್​ನಲ್ಲಿ ಎಮರ್ಜೆನ್ಸಿ ನಂಬರ್ ಇಟ್ಟುಕೊಂಡಿರಿ.
    15. ಆದಷ್ಟೂ ಜನರ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ. ಅಲ್ಲದೇ ಸಾರ್ವಜನಿಕರು ಆದಷ್ಟೂ ಮಾಸ್ಕ್ ಧರಿಸಿರಬೇಕು.
    16. ಕ್ಯಾಬ್ ಸರ್ವೀಸ್ ಪಡೆಯುವವರು ಆದಷ್ಟೂ ನಿಮ್ಮ ಟ್ರಾವೆಲ್ ಡಿಟೇಲ್ಸ್ ಅನ್ನು ನಿಮ್ಮ ಪೋಷಕರಿಗೆ, ಸಂಬಂಧಿಕರಿಗೆ, ಒಡಹುಟ್ಟಿದವರಿಗೆ, ಸ್ನೇಹಿತರಿಗೆ, ಕೇರ್ ಟೇಕರ್ಸ್ ಜೊತೆ ಹಂಚಿಕೊಂಡು ಓಡಾಡಿ.
    17. ಸರ್ಕಾರಿ ವಾಹನದ ಸರ್ವೀಸ್ ಹೆಚ್ಚು ಬಳಸಲು ಯತ್ನಿಸಿ. ಅದರಲ್ಲೂ ಹೆಚ್ಚು ರಷ್ ಇರುವ ಬಸ್​ಗಳನ್ನು ಸಹ ಅವೈಡ್ ಮಾಡಿ.
    18. ಆದಷ್ಟೂ ಬೆಳಗ್ಗೆ 6 ಗಂಟೆಯ ನಂತರ ವಾಕ್​ಗೆ ಹೋಗಿ, ಸಂಜೆ 8ರ ಒಳಗೆ ವಾಕ್ ಮುಗಿಸಿ ಮನೆ ಸೇರಿಕೊಳ್ಳಿ, ಅದಷ್ಟೂ ಮುಖ್ಯ ರಸ್ತೆಯ ಅಕ್ಕ-ಪಕ್ಕದಲ್ಲೇ ವಾಕ್ ಮಾಡಿ.
    20. ಮಾಲ್, ಬೀಚ್, ಪಾರ್ಕ್​ಗಳಲ್ಲಿ ಹೆಚ್ಚು ಸಮಯ ಕಳೆಯಬೇಡಿ.
    21. ಚಿಕ್ಕ ಮಕ್ಕಳನ್ನು ಟ್ಯೂಷನ್​ಗೆ ದೊಡ್ಡವರೇ ಕರೆದುಕೊಂಡು ಹೋಗಿ ಕರೆದುಕೊಂಡು ಬನ್ನಿ.
    22. ಬೆಲೆಬಾಳುವ ವಸ್ತುಗಳನ್ನ ವಾಹನದಲ್ಲಿ ಇಡಬೇಡಿ.
    23.ನಿಮ್ಮ ಬೆಲೆಬಾಳುವ(ಚಿನ್ನ, ಬೆಳ್ಳಿ,ವಜ್ರ, ಹಣ....) ಸೊತ್ತುಗಳನ್ನು ಬ್ಯಾಂಕ್ ಲಾಕರ್ ನಲ್ಲಿಇಡಿ.
    24. ದೇವಸ್ಥಾನದಲ್ಲಿ ರಾತ್ರಿ ಹೊತ್ತಿನಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟವರು ಮಲಗುವ ವ್ಯವಸ್ಥೆಯನ್ನು ಮಾಡಿಕೊಳ್ಳತಕ್ಕದ್ದು ಅಥವಾ ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಕ ಮಾಡಿಕೊಳ್ಳುವುದು.
    25. ನಿಮ್ಮ ಸಾಕುಪ್ರಾಣಿಗಳನ್ನು ರಸ್ತೆಗೆ ಬಿಡದೆ ಅವುಗಳಿಗೆ ತಂಗಲು ಮನೆಯ ಬಳಿ ಸೂಕ್ತ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಮತ್ತು ರಾತ್ರಿ ಹೊತ್ತಿನಲ್ಲಿ ಅವುಗಳ ಬಗ್ಗೆ ಗಮನಹರಿಸುವುದು.
    *ಈ ಮಾಹಿತಿಯನ್ನು ಎಲ್ಲಾ ನಿಮ್ಮ ಸಂಬಂಧಿಕರು ಸ್ನೇಹಿತರು ಹಾಗೂ ಸಾರ್ವಜನಿಕರೊಂದಿಗೆ ಹಂಚಿಕೊಳ್ಳಿ*
    5 min
  • ನಿನ್ನ ಮೆಚ್ಚಲೆಬೇಕು ಕೊರೋನಾ
    *ನಿನ್ನ ಮೆಚ್ಚಲೆಬೇಕು ಕರೋನಾ..*👌👌
    ಕಣ್ಣಿಗೆ ಕಾಣದೆ
    ಮಳೆ,ಗಾಳಿ ,ಬಿಸಿಲಿನ್ನು ಲೆಕ್ಕಿಸದೆ ನಿಶ್ಯಬ್ದವಾಗಿ
    ಜಗತ್ತಿನಾದ್ಯಂತ ಹಬ್ಬಿದ
    ನಿನ್ನ ಛಲ ಮೆಚ್ಚಲೇಬೇಕು
    ಕರೋನಾ..
    ಮಸೀದಿ,ಮಂದಿರ, ಚರ್ಚಗಳ ತಂಟೆಗೆ ಹೋದರೆ ಸರಕಾರವೇ ಬೀಳುತ್ತಿತ್ತು,
    ರಕ್ತದ ಕೋಡಿ ಹರಿಯುತ್ತಿತ್ತು,
    ಒಂದು ಮಾತನಾಡದೆ
    ಅವುಗಳನ್ನು ಮುಚ್ಚಿಸಿ
    ದೇವರು ಎಲ್ಲಾ ಕಡೆ ಇದ್ದಾನೆಂದು ತೋರಿಸಿದ ನಿನ್ನ
    ರೀತಿಗೆ ಎಲ್ಲರೂ
    ಮೆಚ್ಚಲೆಬೇಕು ಕರೋನಾ..
    ಎಲ್ಲಾ ಟಿವಿಗಳಲ್ಲಿ ಭಯ
    ಹುಟ್ಟಿಸುವ ಭವಿಷ್ಯಕಾರರನ್ನು
    ಮೂಲೆ ಗುಂಪು ಮಾಡಿದ
    ನಿನ್ನ ಚಾಣಾಕ್ಷತನಕ್ಕೆ ಮೆಚ್ಚಲೇಬೇಕು ಕರೋನ..
    ಒಂದು ತಿಂಗಳು ಮದ್ಯಪಾನ ಇಲ್ಲದೆ ಇರಬಹುದೆಂದು ತೋರಿಸಿಕೊಟ್ಟು ,
    ನಂತರ
    ಮುಜರಾಯಿ ತೀರ್ಥಕ್ಕಿಂತ
    ಅಬಕಾರಿ ತೀರ್ಥವೇ ಮೇಲೆಂದು ತಿಳಿಸಿದ
    ನಿನ್ನನ್ನು ಮೆಚ್ಚಲೇಬೇಕು ಕರೋನ..
    ಅದ್ದೂರಿತನಕ್ಕೆ ಕಡಿವಾಣ ಹಾಕಿ,
    ಮದುವೆಗಳನ್ನು 50 ಜನರನ್ನ ಮಾತ್ರ ಸೇರಿಸಿ
    ಸರಳವಾಗಿ, ಅರ್ಥಪೂರ್ಣವಾಗಿ
    ಮಾಡಬಹುದು ಎಂದು ತೋರಿಸಿಕೊಟ್ಟ ನಿನ್ನ ಪರಿಯನ್ನ ಎಲ್ಲರೂ
    ಮೆಚ್ಚಲೇಬೇಕು ಕರೋನ..
    ಸತ್ತರೆ ಯಾರು ಹಿಂದೆ ಬರಲ್ಲ
    ಅಂತ ತಿಳಿಸಿ
    ಅಂತ್ಯ ಸಂಸ್ಕಾರಕ್ಕೆ
    ನಿಜವಾದ
    ದುಃಖತಪ್ತರು 20 ಜನರು ಸಾಕು
    ಎಂದು ಅರ್ಥೈಸಿದ ನಿನ್ನ ರೀತಿಯನ್ನ
    ಮೆಚ್ಚಲೇಬೇಕು ಕರೋನ..
    ಮಾಲ್,ಮಲ್ಟಿಪ್ಲೆಕ್ಸ್,ಪಬ್
    ಕ್ಲಬ್ ಮುಚ್ಚಿ
    ಬಸ್ ,ರೈಲು, ವಿಮಾನಗಳಿಲ್ಲದೆ
    ಸಿನೆಮಾ ನಾಟಕ ಬಿಟ್ಟು
    ಮನೆಯವರ ಜೊತೆಗೆ ಸುಖವಾಗಿ ಇರಬಹುದೆಂದು ತೋರಿಸಿ ಕೊಟ್ಟ ನಿನ್ನ ಪ್ರೀತಿ ಮೆಚ್ವಲೆಬೇಕು
    ಕರೋನಾ..
    ಮಾರ್ಕ್ಸ್ ಪಡೆಯುವುದೆ
    ಜೀವನವಲ್ಲ..
    ನಿಜವಾದ ಪಾಠಶಾಲೆ ಜೀವನಾನುಭವ ,
    ನಮ್ಮ ಅಂತರಾತ್ಮವೇ ನಿಜವಾದ
    ಪರೀಕ್ಷೆಯ ಕೊಠಡಿ ಎಂದು ತೋರಿಸಿದ ಚಾಣಕ್ಯನ ನೀತಿ
    ಮೆಚ್ಚಲೇಬೇಕು ಕರೋನ..
    ಊರು ಬಿಟ್ಟುಎಲ್ಲೇಲ್ಲೋ ಹೋದವರನ್ನು ಮತ್ತೆ ಕರೆಯಿಸಿ
    ಹುಟ್ಟಿದ ಊರು , ಒಕ್ಕಲುತನ
    ಹೊಟ್ಟೆಗೆ ಅನ್ನ ಹಾಕುತ್ತವೆಂದು
    ತಿಳಿಸಿದ ನಿನ್ನ ಮಹಿಮೆ
    ಮೆಚ್ಚಲೇಬೇಕು
    ಕರೋನ..
    ಎಷ್ಟು ಆಸ್ತಿ ,ಬಂಗಾರ ಇದ್ದರೂ
    ಆರೋಗ್ಯ ಮುಖ್ಯ ,
    ಬಡವ ,ಶ್ರೀಮಂತ ಯಾರಾದರೂ ಪ್ರಾಣ ಮುಖ್ಯ
    ಎಂದು ಮತ್ತೊಮ್ಮೆ ತಿಳಿಸಿದ ನಿನಗೆ ಮೆಚ್ಚಲೇಬೇಕು ಕರೋನ..
    ತಂತ್ರಜ್ಞಾನದಿಂದ
    ಎಲ್ಲಾ ಗ್ರಹಗಳನ್ನು ಸುತ್ತಿದರೂ,
    ಮನುಷ್ಯ ವಿಜ್ಞಾನದಲ್ಲಿ ಎಷ್ಟೆ ಮುಂದುವರೆದರೂ
    ಕಾಲಕ್ಕೆ ಶರಣಾಗಬೇಕೆಂದು
    ತಿಳಿಸಿದ ಪರಿ
    ಮೆಚ್ಚಲೇಬೇಕು ಕರೋನ..
    ಅಣು ಬಾಂಬ್ ,ಯುದ್ಧ ವಿಮಾನ ,ಟ್ಯಾಂಕರ್ ಗಳು
    ಸಾವಿರ ಇದ್ದು ,ಮುಂದುವರಿದ ದೇಶವೆಂದು ಮೆರೆಯುತ್ತಿದ್ದರೂ
    ಸಾಂಕ್ರಾಮಿಕ ರೋಗಕ್ಕೆ ಶರಣಾಗಬೇಕೆಂದು
    ತಿಳಿಸಿದ್ದು
    ಮೆಚ್ಚಲೇಬೇಕು ಕರೋನ..
    ಸಸ್ಯಹಾರ ಶ್ರೇಷ್ಠ ಎಂದು ಹೇಳುತಾ
    ಪ್ರಕೃತಿಯನ್ನು ಕಾಪಾಡಿದರೆ
    ನಾವು ಉಳಿಯುತ್ತೆವೆ
    ಎಲ್ಲಾ ಧರ್ಮಗಳು ಪೊಳ್ಳು
    ನಿಜವಾದ ಧರ್ಮ ಮನುಜ
    ಧರ್ಮವೆಂದು ಹೇಳಿದ್ದು
    ಮೆಚ್ಚಲೇಬೇಕು ಕರೋನ..
    ಜಗತ್ತಿನ ಕಹಿ ಸತ್ಯಗಳನ್ನು
    ಬಿಡಿ ,ಬಿಡಿಯಾಗಿ
    ತೋರಿಸಿ ಕೊಟ್ಟು
    ಸನ್ಮಾರ್ಗದಿ
    ನಡೆಯಿರೆಂದು ಹೇಳಿದ
    ನಿನ್ನ ಶಕ್ತಿ ,ಯುಕ್ತಿಯ ಕರೋನಾಗೀತ
    ಎಲ್ಲರೂ ಮೆಚ್ಚಲೇಬೇಕು ಕರೋನ.... 🙏🙏🙏🙏🙏🙏🙏🙏🙏🙏🙏 ಸಾಕಿನ್ನು ಮನುಷ್ಯ ಸುಸ್ತಾಗಿದ್ದಾನೆ. ಬಿಟ್ಟು ಬಿಡು ಬದುಕಲಿ..... ಇನ್ನಾದರೂ ಪಶ್ಚಾತ್ತಾಪದೊಂದಿಗೆ..... ಇಷ್ಟಕ್ಕೂ ಬುದ್ದಿ ಬರಲಿಲ್ಲವೆಂದರೆ.........? ಭಗವಂತನ ಆಟ ಬಲ್ಲವರಾರು????? ✍️✍️✍️
    5 min
  • ಭಾವಪೂರ್ಣ ಶ್ರದ್ಧಾಂಜಲಿ - ಧರ್ಮ-ಪಂಥದಂತೆ ಶ್ರದ್ಧಾಂಜಲಿ ಸಲ್ಲಿಸಿ !
    *Rest in peace (RIP) ಇದರ ನಿಜವಾದ ಅರ್ಥ ಏನ್ ಗೊತ್ತಾ?*
    ೧. ಹುಟ್ಟಿನಿಂದಲೇ ಆಂಗ್ಲರ ಗುಲಾಮರಾಗಿರುವ ಭಾರತೀಯರು !
    `ಇತ್ತೀಚೆಗೆ ಯಾರಾದರೂ ಮೃತಪಟ್ಟರೆ ನಮ್ಮಲ್ಲಿ RIP ಎಂದು ಬರೆದು ಶ್ರದ್ಧಾಂಜಲಿಯನ್ನು ಸಲ್ಲಿಸುವ ಪದ್ಧತಿ ಪ್ರಾರಂಭವಾಗಿದೆ. ಅಂದರೆ ವಿದ್ವಾಂಸರು-ಸಾಹಿತಿಗಳು ಕೂಡ ಈ `ಫ್ಯಾಶನ್‍ಗೆ ಬಲಿ’ಯಾಗಿದ್ದಾರೆ. ನಾವೆಷ್ಟು `ಭಯಾನಕ’ವಾಗಿ ಬರೆಯುತ್ತಿದ್ದೇವೆ, ಎಷ್ಟು `ವಿನಾಶಕಾರಿ’ ಮಾತನಾಡುತ್ತಿದ್ದೇವೆ, ಎಂಬ ಬಗ್ಗೆ ಯಾರಿಗೂ ಏಕೆ ಏನೂ ಅನಿಸುವುದಿಲ್ಲ ? ಜನ್ಮದಿಂದ ಆಂಗ್ಲರ ಗುಲಾಮರಾಗಿರುವವರೇ, ನಿಮ್ಮ ಮೃತ್ಯುವೂ ಆಂಗ್ಲರ ಗುಲಾಮವಾಗಿದೆಯೇ ? ನಿಮ್ಮನ್ನು ಹೂಳುತ್ತಾರೋ ? ಸುಡುತ್ತಾರೋ ?
    *೨. ಪ್ರತಿಯೊಬ್ಬರಿಗೂ ಅವರ ಧರ್ಮ-ಪಂಥದಂತೆ ಶ್ರದ್ಧಾಂಜಲಿ ಸಲ್ಲಿಸಿ !*
    ದಯವಿಟ್ಟು ಹಿಂದೂ ವ್ಯಕ್ತಿಗೆ ಅವನ ಮೃತ್ಯುವಿನ ಬಳಿಕ RIP ಎಂದು ಬರೆದು ಶ್ರದ್ಧಾಂಜಲಿ ಸಲ್ಲಿಸಬೇಡಿರಿ ! ಮೃತಪಟ್ಟ ಬಳಿಕ ಯಾರನ್ನು ಭೂಮಿಯಲ್ಲಿ ಹೂಳುತ್ತಾರೆಯೋ, ಆ ಮುಸಲ್ಮಾನ ಮತ್ತು ಕ್ರಿಶ್ಚಿಯನ್ ಪಂಥದ ಬಾಂಧವರಲ್ಲಿ RIP ಎಂದು ಹೇಳುವ ಪದ್ಧತಿಯಿದೆ. RIP ಎಂದರೆ Rest in peace ! ದಯವಿಟ್ಟು ಹಿಂದೂ ವ್ಯಕ್ತಿಗಳು ಮೃತಪಟ್ಟ ಬಳಿಕ ಹೀಗೆ ಬರೆಯಬೇಡಿರಿ ! `ಜಗತ್ತಿನಲ್ಲಿ ಯಾರೇ ಇರಲಿ, ಒಮ್ಮೆ ಅವನು ಮೃತಪಟ್ಟರೆ, ಅವನ ಧರ್ಮದಂತೆ ಅವನ ಮೇಲೆ ಕೊನೆಯ ಕರ್ಮಗಳನ್ನು ನೆರವೇರಿಸುವುದು, `ಮೃತಪಟ್ಟವರ’ ಅಧಿಕಾರವಾಗಿದೆ ! ಹೀಗೆ ಯಾರ ಉದ್ಗಾರವಾಗಿದೆಯೆಂದು ತಿಳಿದಿದೆಯೇ ? ಛತ್ರಪತಿ ಶಿವಾಜಿ ಮಹಾರಾಜರು ಅಫ್ಝಲ್‍ಖಾನನ ಹೊಟ್ಟೆಯನ್ನು ಬಗೆದಾಗ, ಸತ್ತ ಅಫ್ಝಲ್‍ನ ದೇಹವನ್ನು ಸೈನಿಕರು ಸುಡಲು ಹೊರಟಿದ್ದರು. ಆಗ ಶಿವಾಜಿ ಮಹಾರಾಜರು ವಿರೋಧಿಸಿ, `ಅಫ್ಝಲ ಖಾನನ ಮೃತಪಟ್ಟ ನಂತರ ಅವನೊಂದಿಗಿರುವ ಶತ್ರುತ್ವ ಮುಗಿಯಿತು. ಈಗ ಈ ದೇಹ ಒಬ್ಬ ಮುಸಲ್ಮಾನನ ವ್ಯಕ್ತಿಯದ್ದಾಗಿದೆ. ಅವನ ಮೃತ ಶರೀರವನ್ನು ಸುಟ್ಟು ಅದರ ವಿಡಂಬನೆ ಮಾಡಬಾರದು’, ಎಂದು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟರು. ಮುಸಲ್ಮಾನ ಧರ್ಮಶಾಸ್ತ್ರದಂತೆ ಛತ್ರಪತಿಯು ಅಫ್ಝಲ್‍ಖಾನನನ್ನು ಭೂಮಿಯಲ್ಲಿ ಹೂಳಿ ಅದರ ಮೇಲೆ ಮುಸಲ್ಮಾನ ಪರಂಪರೆಯಂತೆ ಗೋರಿಯನ್ನು ಕಟ್ಟಿದರು. ಛತ್ರಪತಿ ಶಿವಾಜಿ ಮಹಾರಾಜರು `ಪ್ರತಿಯೊಂದು ಮೃತ ಶರೀರಕ್ಕೆ ಅವರವರ ಧರ್ಮರೀತ್ಯಾ ಅಂತಿಮಸಂಸ್ಕಾರಗಳನ್ನು ನಡೆಸಬೇಕು, ಇದು ಪ್ರತಿಯೊಬ್ಬ ಮೃತಪಟ್ಟವರ ಅಧಿಕಾರವಾಗಿದೆ’, ಎಂದು ಹೇಳುತ್ತಿದ್ದರು. ಆದರೆ ನಾವು ಮಾತ್ರ ಇದೇನು ಮಾಡುತ್ತಿದ್ದೇವೆ ?
    *೩. REST IN PEACE ಅರ್ಥ!*
    REST IN PEACE ಎಂದರೆ `ಶಾಂತವಾಗಿ ಮಲಗಿರು !’ ಎಂದಾಗಿದೆ. `ಹೇ ಮೃತಾತ್ಮವೇ, ನಿನ್ನ ಶರೀರವನ್ನು ನಾವು ಭೂಮಿಯಲ್ಲಿ `ಹೂಳಿದ್ದೇವೆ’ ಮತ್ತು `ಕಯಾಮತ್’ನ ದಿನದಂದು ಮೇಲಿರುವವನು ನಿನಗೆ ನ್ಯಾಯವನ್ನು ನೀಡುವನು. ಈಗ ನೀನು ಭೂಮಿಯಲ್ಲಿ ಶಾಂತವಾಗಿ ಮಲಗಿ. ಕಯಾಮತ್ ದಿನದ ದಾರಿಯನ್ನು ಕಾಯುತ್ತಿರು ! ಹೀಗೇಕೆ ಹೇಳುತ್ತಾರೆಂದರೆ `ಹೂಳುವವರು’ ಮತ್ತು `ಯಾರನ್ನು ಹೂಳಿದ್ದಾರೆಯೋ, ಅವನು ಜೀವಂತವಾಗಿದ್ದಾಗ’, ಅವರು ಯಾರೂ ಪುನರ್ಜನ್ಮವನ್ನು ನಂಬುವುದಿಲ್ಲ. ಕಯಾಮತ್ ವರೆಗೆ ಮೃತಪಟ್ಟವನಿಗೆ ಹೂಳಿರುವ ಜಾಗದಿಂದ ಬಿಡುಗಡೆಯಿಲ್ಲವೆಂದು ಅವರ ಧರ್ಮ ತಿಳಿಸುತ್ತದೆ.
    *೪. ಹಿಂದೂ ಧರ್ಮ ಮತ್ತು ಇತರ ಪಂಥದಲ್ಲಿರುವ ವ್ಯತ್ಯಾಸ !*
    ವ್ಯತ್ಯಾಸವನ್ನು ಸರಿಯಾಗಿ ತಿಳಿದುಕೊಳ್ಳಿರಿ ! ಹಿಂದೂ ಧರ್ಮದಲ್ಲಿ ಮೃತ ವ್ಯಕ್ತಿಯನ್ನು ಹೂಳುವುದಿಲ್ಲ, ಸುಡುತ್ತಾರೆ. ಈ ಜನ್ಮದಿಂದ ಸುಟ್ಟು ಪುನರ್ಜನ್ಮಕ್ಕಾಗಿ ಆತ್ಮವನ್ನು ಮುಕ್ತಗೊಳಿಸುತ್ತಾರೆ ! ಹಿಂದೂಗಳು ಅವನನ್ನು RIP ಎಂದು ಹೇಗೆ ಹೇಳಬಹುದು ? ಏಕೆಂದರೆ ಆತ್ಮವು ಸದ್ಗತಿಗೆ ಹೋಗಿದೆಯೆಂದು ನಮ್ಮ ಧರ್ಮದಲ್ಲಿ ಹೇಳುತ್ತಾರೆ. ಆತ್ಮ ಮುಕ್ತವಾಯಿತು, ಅದರ ಮುಂದಿನ ಜನ್ಮದ ಪ್ರವಾಸ ಚೆನ್ನಾಗಿ ಆಗಲಿ ಎಂದು ಹೇಳಬೇಕು. ಹಿಂದೂಗಳು ಆತ್ಮವನ್ನು ಬಂಧಿಸಿ ಹೂಳುವುದಿಲ್ಲ, ಮೃತಪಟ್ಟ ವ್ಯಕ್ತಿಯು ಮುಂದಿನ ಜನ್ಮವನ್ನು ಪಡೆಯಬೇಕೆಂದು ಮುಕ್ತಗೊಳಿಸುತ್ತಾರೆ; ಆದರೆ ಇತರ ಧರ್ಮದಲ್ಲಿ ಯಾರನ್ನು `ಹೂಳುತ್ತಾರೋ’ ಆ ಮೃತಾತ್ಮಕ್ಕೆ `ಭೂಮಿಯಲ್ಲಿ ಶಾಂತವಾಗಿ ಮಲಗಿರು’ ಎಂದು ಹೇಳಿ, `ಕಯಾಮತ್ ವರೆಗೆ ನಿನಗೆ ಬಿಡುಗಡೆಯಿಲ್ಲ !’ ಎಂದು ಹೇಳುತ್ತಾರೆ. ಹಿಂದೂಗಳು ಇದಕ್ಕಾಗಿ ಗರುಡ ಪುರಾಣವನ್ನು ಓದಬೇಕು. ಅದು `ಮೃತ್ಯು’ವಿನ ವಿಷಯದಲ್ಲಿದೆ. ಅದನ್ನು ಓದಿದರೆ, ಯಾರೂ RIP ಎಂದು ಹೇಳುವ ಧೈರ್ಯವನ್ನು ಮಾಡಲಾರರು !
    *೫. ಹಿಂದೂ ಮೃತಾತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸಿ !*
    ಹಿಂದೂಗಳು `ಭಾವಪೂರ್ಣ ಶ್ರದ್ಧಾಂಜಲಿ’ ಎನ್ನಬೇಕು. `ದೇವರು ಮೃತಾತ್ಮಕ್ಕೆ ಸದ್ಗತಿ ನೀಡಲಿ’, ಎಂದು ಹೇಳಬೇಕು. ಅಂದರೆ ಯಾವ ವ್ಯಕ್ತಿ ಮೃತಪಟ್ಟಿದ್ದಾನೆಯೋ ಆ ವ್ಯಕ್ತಿಯು ಪುಣ್ಯಗತಿಯನ್ನು ಹೊಂದಬೇಕು. ಅವನ ಮುಂದಿನ ಜನ್ಮವನ್ನು ಪಡೆಯುವ ಪ್ರಯಾಣ ನಿರ್ವಿಘ್ನವಾಗಿ ನಡೆಯಲಿ! ಇಷ್ಟೇ ಏಕೆ? ಯಾವುದೇ ಸಜ್ಜನ, ಪುಣ್ಯವಂತ ಹಿಂದೂ ವ್ಯಕ್ತಿ ಮೃತಪಟ್ಟರೆ, ಆಗ ಅವರಿಗೆ ದೇವರು ಮೇಲಿಂದ ಮೇಲೆ ಜನ್ಮ-ಮರಣದ ಅಂದರೆ ಪುನರ್ಜನ್ಮದ ಚಕ್ರವನ್ನು ನೀಡದೇ `ಮುಕ್ತ’ಗೊಳಿಸಬೇಕು, ಎಂದೂ ಪ್ರಾರ್ಥಿಸಬಹುದಾಗಿದೆ.
    *೬. ಯಾವುದೇ ವ್ಯಕ್ತಿಯ ಮರಣದ ಬಳಿಕ RIP ಎಂದು ಬರೆದು, ನುಡಿದು ಅವನನ್ನು `ಕುಲಗೆಡಿಸ’ಬಾರದು !*
    RIP ಎಂದು ಬರೆಯುವುದು, ನಮ್ಮ ಸ್ವಧರ್ಮಿಯ ಮೃತರ`ವಿಡಂಬನೆ’ಯಾಗಿದೆ ಎನ್ನುವುದನ್ನು ಗಮನದಲ್ಲಿಡಬೇಕು ! ಎಚ್ಚರದಿಂದಿರಿ ! ಎಚ್ಚರಿಸಿ ಮತ್ತು ಹಿಂದೂ ವ್ಯಕ್ತಿ ಮೃತಪಟ್ಟ ಬಳಿಕ RIP ಎಂದು ಬರೆಯುವುದನ್ನು ವಿರೋಧಿಸಿರಿ ! ದಯವಿಟ್ಟು ಮೃತಪಟ್ಟ ಹಿಂದೂ ವ್ಯಕ್ತಿಗೆ ಅವನ ಮರಣದ ಬಳಿಕ RIP ಎಂದು ಬರೆದು, ಮಾತನಾಡಿ `ಕುಲಗೆಡಿಸ’ಬೇಡಿ ! ಎಂದು ಕೈಮುಗಿದು ತಮ್ಮಲ್ಲಿ ಕಳಕಳಿಯ ವಿನಂತಿ !...
    8 min
  • ಸುಪ್ರಭಾತದೊಂದಿಗೆ ಸುವಿಚಾರ.
    ಪರೋಪಕಾರಾಯ ಫಲಂತಿ ವೃಕ್ಷಾಃ,
    ಪರೋಪಕಾರಾಯ ವಹಂತಿ ನದ್ಯಃ |
    ಪರೋಪಕಾರಾಯ ದುಹಂತಿ ಗಾವಃ,
    ಪರೋಪಕಾರಾರ್ಥಮಿದಂ ಶರೀರಮ್ ||
    ಮರಗಳು ಹಣ್ಣನ್ನು ಕೊಡುವುದು, ನದಿಗಳು ಎಲ್ಲ ಕಡೆ ಹರಿಯುವುದು, ಹಸುಗಳು ಹಾಲನ್ನು ಕೊಡುವುದು ಇವೆಲ್ಲ ಪರೋಪಕಾರಕ್ಕಾಗಿ.
    ಮನುಷ್ಯ ನ ಪೊಳ್ಳು ಜೀವನಕ್ಕೆ, ಪ್ರಕೃತಿಯು ಮೇಲಿನ ಮೂರು ನಿದರ್ಶನದ ಜೊತೆಗೆ ಪಾಠ ಕಲಿಸುತ್ತಿದೆ. ನಮ್ಮ ಬದುಕು ಪರರಿಗೆ ತ್ರಾಸದಾಯಕ ಆಗಬಾರದು. ಬದಲಾಗಿ ಇತರರ ಬದುಕಿನ ಕಷ್ಟಗಳನ್ನು ಪರಿಹರಿಸುವಲ್ಲಿ ನಾವು ಕಾರಣರಾಗಬೇಕು.
    ನಾವು ಪರೋಪಕಾರ ಮಾಡಬೇಕು. ಆವಾಗ ನಮ್ಮ ಕಷ್ಟಗಳಿಗೂ ಇತರರು ಸ್ಪಂದಿಸುತ್ತಾರೆ.ಹೀಗೆ ಒಬ್ಬರಿಗೊಬ್ಬರು ಹೆಗಲಾಗಿ ಸಹಕರಿಸುತ್ತಾ ಬದುಕಿದರೇ, ಸಂತಸಪೂರ್ಣ ವಾದ ಜೀವನ ನಮ್ಮದಾಗುತ್ತದೆ. ಸ್ವಾಮಿ ವಿವೇಕಾನಂದರು “ಶುದ್ಧರಾಗಿರುವುದು, ಪರರಿಗೆ ಹಿತವನ್ನು ಮಾಡುವುದು ,ಇದೇ ಎಲ್ಲಾ ಪೂಜೆಯ ಸಾರ. ದರಿದ್ರರಲ್ಲಿ, ದೀನರಲ್ಲಿ, ದುರ್ಬಲರಲ್ಲಿ ಯಾರು ಶಿವನನ್ನು ನೋಡುವರೋ ಅವರೇ ನಿಜವಾಗಿ ಶಿವನನ್ನು ಆರಾಧಿಸುವರು. ಕೇವಲ ವಿಗ್ರಹದಲ್ಲಿ ಮಾತ್ರ ಶಿವನನ್ನು ನೋಡುವುದು, ಭಗವದಾರಾಧನೆಗೆ ಪೀಠಿಕೆ ಮಾತ್ರ. ಯಾರು ಜಾತಿ, ಕುಲ, ಗೋತ್ರ, ಜನಾಂಗವನ್ನು ಗಮನಿಸದೆ ಒಬ್ಬ ದೀನನಿಗೆ ಸಹಾಯ ಮಾಡುವನೋ, ದೀನನನ್ನು ಸೇವಿಸುವನೋ ಅವನನ್ನು ಶಿವನು, ತನ್ನನ್ನು ದೇಗುಲದಲ್ಲಿ ಮಾತ್ರ ನೋಡುವ ಭಕ್ತರಿಗಿಂತ ಹೆಚ್ಚು ಮೆಚ್ಚುವನು” ಎಂದು ಹೇಳಿದ್ದಾರೆ. "ಗರ್ವ ಪಡದ ಉಪಕಾರಿ ದರ್ಪ ಬಿಟ್ಟ ಅಧಿಕಾರಿ ನಿರ್ವಿಕಾರದ ನಯನದಿಂ ನೊಳ್ಪ ಉದಾರಿ " ಅಂತ ಡಿವಿಜಿಯವರು ಯವರು ತಮ್ಮ ಮಂಕು ತಿಮ್ಮನ ಕಗ್ಗದಲ್ಲಿ ಸೊಗಸಾಗಿ ವಿವರಿಸಿದ್ದಾರೆ. ಉಪಕಾರ ಮಾಡಿದರೂ ತಾನು ಮಾಡಿದೇ ಅನ್ನುವ ಅಹಂ ನ್ನು ಇಟ್ಟುಕೊಳ್ಳಬಾರದು. ನೀಡೋದಕ್ಕಿಂತ ನೀಡೋ ಹಿಂದಿನ ಮನೋಭಾವ ದೊಡ್ಡದು. ನಮಗೆ ಹೆಚ್ಚಾಗಿ ಕೊಟ್ಟದ್ದು ಮಹಾದಾನ ವಲ್ಲ..ನಮ್ಮ ಅವಶ್ಯಕತೆಗಳಿಗೆ ಅಂತ ಇಟ್ಕೊಂಡಿದ್ರಲ್ಲಿ ಕೊಟ್ಟಿದ್ದು ಮಹಾದಾನ. ಕೆಲವರು ಇಷ್ಟು ಸ್ವಲ್ಪ ಕೊಟ್ಟರೂ ಹೇಳ್ಕೊಳ್ತಾರೆ. ಕೊಡುವಿಕೆ ತೋರುವಿಕೆ ಆಗಬಾರದು. ಅದು ನೈಜ ಮನಸ್ಸಿನ ಭಾವನೆ ಆದ್ರೆ ಜೀವನಕ್ಕೆ ಒಂದು ಒಳ್ಳೆಯ ಸುಗಂಧ ತರ್ತದೆ. ಬಲಗೈಗೆ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಅಂತ ಹಿರಿಯರು ಹೇಳುತ್ತಾರೆ. ಆದರೆ ಇತ್ತೀಚಿಗೆ ಆ ಪ್ರವೃತ್ತಿ ಮಾಯವಾಗ್ತಾ ಇದೆ. ಸಹಾಯ ಮಾಡುವ ಮನೋಭಾವಕ್ಕಿಂತಲು ಪ್ರಚಾರ ತಂತ್ರಗಳಿಂದ ತೋರ್ಪಡಿಸಿ ತನ್ನ ಅಹಂನ್ನು ಪೋಷಿಸುವ ಕೆಲಸ ಎಲ್ಲೆಡೆ ನಡೆಯುತ್ತಿದೆ.
    ಪರೋಪಕಾರಾರ್ಥಂ ಇದಂ ಶರೀರಂ ಎಂಬ ಉಪನಿಷತ್ತಿನ ವಾಕ್ಯದಂತೆ ಮಾನವ ತನಗೆ ಲಭಿಸಿದ ಈ ಜೀವನದ ಸಾರ್ಥಕತೆಯನ್ನು ಪರರಿಗೆ ಉಪಕಾರಿಯಾಗಿ ಬದುಕಬೇಕು ದಿನಕರ ದೇಸಾಯಿಯವರ ಕವನದಲಿ ಬರೆದಿರುವ ಹಾಗೆ 'ನಮ್ಮ ದೇಹದ ಬೂದಿ ಗಾಳಿಯಲ್ಲಿ ತೇಲಿ ಬಿಡಿ ಹೋಗಿ ಬೀಳಲಿ ಬತ್ತ ಬೆಳೆಯುವ ಬೂದಿ ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ ಧನ್ಯ ವಾಯಿತ್ತು ಹುಟ್ಟು ಸಾವಿನಲಿ.'
    ಮನುಷ್ಯನ ಮೇಲೆ ಒಂದಿಲ್ಲೊಂದು ರೀತಿಯ ಸಮಸ್ಯೆಗಳು ಬಲೆ ಬೀಸಲು ಸದಾಹೊಂಚು ಹಾಕುತ್ತಿರುತ್ತವೆ, ಹಾಗೆ ಬೀಸಿಬರುವ ಬಲೆಯಿಂದ ಬಿಡಿಸಿಕೊಳ್ಳುವ ಚಾಕಚಕ್ಯತೆ ನಮ್ಮದಾಗಿ ರಬೇಕು. ಜೀವನ ಕೇವಲ ತನಗಾಗಿ ಮಾತ್ರವಲ್ಲ, ತನ್ಮವರಿಗಾಗಿ ತನ್ನ ಸುತ್ತಲಿನವರಿಗಾಗಿ ಪರರಿಗಾಗಿ ಎಂಬುದನ್ನು ಮನಗಾಣಬೇಕು.ಬೆಳಕು ನೀಡುವ ಬತ್ತಿ ತನ್ನನ್ನು ತಾನು ದಹಿಸಿಕೊಂಡು ಸುತ್ತಲಿನವರಿಗೆ ಬೆಳಕು ನೀಡುವುದು, ಆ ರೀತಿಯ ಬತ್ತಿಯ ಬದುಕು ತಮ್ಮದಾ ಗಬೇಕು, ಮಣ್ಣಿನ ಆಶ್ರಯದಲ್ಲಿ ಬೆಳೆದು ಪುಣ್ಯವಂತರಿಗೆ ನೆರಳು ನೀಡುವ ಮರವಾಗಬೇಕು,ನೆರಳಾಗಬೇಕು. ಕೇವಲ ನಮ್ಮ ಸುಖಕ್ಕಾಗಿ ಹಂಬಲಿಸದೇ ,ಪರರ ಒಳಿತಿಗಾಗಿಯೂ ಬದುಕುವುದರಲ್ಲಿ ಸಮಾಧಾನ ಸಂತೃಪ್ತಿಗಳನ್ನು ಕಾಣಬಹುದು.
    ಪಡೆಯುವುದಕ್ಕಿಂತ ಕೊಡುವುದರಲ್ಲಿ ಹೆಚ್ಚು ಆನಂದವಿದೆ. ಕೊಡುವ ಗುಣ ನಮ್ಮಲ್ಲಿದ್ದರೆ ಅದನ್ನು ನಾವು ಸತ್ಪಾತ್ರರಿಗೆ ನೀಡಬೇಕು. ಎಷ್ಟೋ ಜನ ಅಂದುಕೊಳ್ಳುತ್ತಾರೆ ನಮ್ಮತ್ರ ಏನಿದೆ ಕೊಡಲು ನಾವೇ ಕಷ್ಟದಲ್ಲಿದ್ದೇವೆ ಎಂದು. ಕೇವಲ ಹಣದಲ್ಲಿ ಮಾಡುವ ಉಪಕಾರ ಸಹಾಯವಲ್ಲ . ಕೆಲವೊಮ್ಮೆ ಹಣದಲ್ಲಿ ನೀಡಲಾಗದೇ ಇದ್ದುದನ್ನು ನಮ್ಮ ಜ್ಞಾನ, ಸಮಯ, ಅನುಕಂಪ ನೀಡುವುದರ ಮೂಲಕವೂ ನೀಡಬಹುದು. ಎಲ್ಲರಿಗೂ ಸಮಯವಂತೂ ಇದ್ದೇ ಇರುತ್ತದೆ. ಕಷ್ಟದಲ್ಲಿರುವವರು ನಮ್ಮ ಆತ್ಮೀಯರು ಯಾರಾದರೂ ದುಃಖವನ್ನು ಹೇಳಿಕೊಳ್ಳುತ್ತಿರುತ್ತಾರೆ ಎಂದಾದರೆ ಅವರಿಗೆ ಒಂದಷ್ಟುಹೊತ್ತು ಸಮಯ ಮೀಸಲಿಟ್ಟು ಪ್ರೀತಿಯಿಂದ ಒಳ್ಳೆಯ ಮಾತುಗಳಿಂದ ಅವರ ದುಗುಡಗಳನ್ನು ಕಮ್ಮಿ ಮಾಡುವುದು , ಅವರ ಕಷ್ಟಗಳಿಗೆ ಸ್ಪಂದಿಸುವುದು ಕೂಡಾ ಒಂದು ರೀತಿಯಲ್ಲಿ ಸಹಾಯ ಮಾಡಿದಂತೆ. ಕೃಷ್ಣನು ಒಲಿದದ್ದು ಬಡ ಕುಚೇಲನ ಒಂದು ಹಿಡಿ ಅವಲಕ್ಕಿಗೆ. ಅದರ ಹಿಂದಿನ ನಿಸ್ವಾರ್ಥ ಪ್ರೀತಿಗೆ. ಭಗವಾನ್ ಬುದ್ಧ ಒಮ್ಮೆ ಬಿಕ್ಷುಕಿಯೊಬ್ಬಳು ನೀಡಲು ಬಂದ ಮಾವಿನ ಹಣ್ಣಿನ ತುಂಡನ್ನು ಸ್ವೀಕರಿಸಲು ಎದ್ದುಬಂದು ಅವಳ ಬಳಿ ಸಾರಿ ಕೈಚಾಚಿ ಕುಳಿತನಂತೆ. ಶಿಷ್ಯರು ಆಶ್ಚರ್ಯದಿಂದ ಕೇಳಲಾಗಿ ನಿಷ್ಕಳಂಕ ಪ್ರೀತಿಯಿಂದ ಮಾಡಿದ ಈ ದಾನವೇ ಇದೇ ಮಹಾದಾನ ಎಂದನಂತೆ. ಅದು ನಿಜವಾದ ಮಾನವ ಧರ್ಮ. ಚೈನೀಸ್ ನಾಣ್ಣುಡಿಯೊಂದಿದೆ. 'ನಿಮಗೆ ಒಂದು ಗಂಟೆಯ ಖುಷಿ ಬೇಕಿದ್ದರೆ ಚಿಕ್ಕ ನಿದ್ರೆ ಮಾಡಿ, ಒಂದು ದಿನದ ಖುಷಿ ಬೇಕಿದ್ದರೆ ಫಿಶಿಂಗ್ ಕೈಗೊಳ್ಳಿ,ಹಾಗೆಯೇ ಜೀವನಪೂರ್ತಿ ಖುಷಿ ಬೇಕಿದ್ದರೆ ಇತರರಿಗೆ ಸಹಾಯಮಾಡಿ' ಎಂದು.
    ಕೊನೆಯದಾಗಿ ನಾವು ಏನೇ ಮಾಡುವುದಿದ್ದರೂ ಅದರಿಂದ ಫಲಾಪೇಕ್ಷೆ ಇರಬಾರದು. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮಹೇಳಿರುವಂತೆ 'ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಶುಕದಾಚನ'ಎನ್ನುವಂತೆ ಯಾವುದೇ ಫಲಾಪೇಕ್ಷೆಯಿಲ್ಲದೇ ಇತರರಿಗೆ ಸಹಾಯ ಮಾಡಬೇಕು.
    9 min

About Dr Balakrishna Maddodi

From the publisher's feed

Hi