Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • ಲಕ್ಷ್ಮೀಪೂಜೆ (ಆಶ್ವಯುಜ ಅಮಾವಾಸ್ಯೆ)
    ಲಕ್ಷ್ಮೀಪೂಜೆ
    ಸಾಮಾನ್ಯವಾಗಿ ಅಮಾವಾಸ್ಯೆಯನ್ನು ಅಶುಭದಿನವೆಂದು ಪರಿಗಣಿಸಲಾಗುತ್ತದೆ; ಆದರೆ ಈ ಅಮಾವಾಸ್ಯೆಯು ಅದಕ್ಕೆ ಅಪವಾದವಾಗಿದೆ. ಈ ದಿನವು ಶುಭದಿನವೆಂದು ಮನ್ನಣೆ ಪಡೆದಿದೆ; ಆದರೆ ಅದು ಎಲ್ಲ ಕಾರ್ಯಗಳಿಗಲ್ಲ. ಆದುದರಿಂದ ಈ ದಿನವನ್ನು ಶುಭದಿನ ಎನ್ನುವುದಕ್ಕಿಂತ ಆನಂದದ ದಿನ ಎನ್ನುವುದೇ ಯೋಗ್ಯವಾಗಿದೆ.
    ೧ ಅ. ಇತಿಹಾಸ
    ಈ ದಿನ ಶ್ರೀವಿಷ್ಣುವು ಲಕ್ಷ್ಮೀಸಹಿತ ಎಲ್ಲ ದೇವತೆಗಳನ್ನು ಬಲಿಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದನು. ಅನಂತರ ಆ ಎಲ್ಲ ದೇವತೆಗಳು ಕ್ಷೀರಸಾಗರದಲ್ಲಿ ಹೋಗಿ ಮಲಗಿದರು ಎನ್ನುವ ಕಥೆ ಇದೆ.
    ಆ.ಹಬ್ಬವನ್ನು ಆಚರಿಸುವ ಪದ್ಧತಿ
    ಈ ದಿನ ‘ಪ್ರಾತಃಕಾಲದಲ್ಲಿ ಮಂಗಲಸ್ನಾನ ಮಾಡಿ ದೇವರ ಪೂಜೆ, ಮಧ್ಯಾಹ್ನ ಪಾರ್ವಣಶ್ರಾದ್ಧ ಹಾಗೂ ಬ್ರಾಹ್ಮಣಭೋಜನ ಮತ್ತು ಪ್ರದೋಷಕಾಲದಲ್ಲಿ ಎಲೆ-ಬಳ್ಳಿಗಳಿಂದ ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮೀ, ಶ್ರೀವಿಷ್ಣು ಮುಂತಾದ ದೇವತೆಗಳು ಮತ್ತು ಕುಬೇರನ ಪೂಜೆಯನ್ನು ಮಾಡುತ್ತಾರೆ. ಇವು ಈ ದಿನದ ವಿಧಿಗಳಾಗಿವೆ.
    ಲಕ್ಷ್ಮೀಯ ಪೂಜೆಯನ್ನು ಮಾಡುವಾಗ ಒಂದು ಚೌರಂಗದ ಮೇಲೆ ಅಕ್ಷತೆಗಳಿಂದ ಅಷ್ಟದಳ ಕಮಲ ಅಥವಾ ಸ್ವಸ್ತಿಕವನ್ನು ಬಿಡಿಸಿ ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಸ್ಥಾಪಿಸುತ್ತಾರೆ. ಕೆಲವು ಕಡೆಗಳಲ್ಲಿ ಕಲಶದ ಮೇಲೆ ತಾಮ್ರದ ತಟ್ಟೆಯನ್ನಿಟ್ಟು ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಇಡುತ್ತಾರೆ. ಕಲಶದ ಮೇಲೆ ಲಕ್ಷ್ಮೀಯ ಸಮೀಪದಲ್ಲಿಯೇ ಕುಬೇರನ ಪ್ರತಿಮೆಯನ್ನು ಇಡುತ್ತಾರೆ. ಅನಂತರ ಲಕ್ಷ್ಮೀ ಮತ್ತು ಇತರ ದೇವತೆಗಳಿಗೆ ಲವಂಗ, ಏಲಕ್ಕಿ ಮತ್ತು ಸಕ್ಕರೆಯನ್ನು ಹಾಕಿ ತಯಾರಿಸಿದ ಹಸುವಿನ ಹಾಲಿನ ಖವೆಯ ನೈವೇದ್ಯವನ್ನು ಅರ್ಪಿಸುತ್ತಾರೆ. ಕೊತ್ತಂಬರಿ, ಬೆಲ್ಲ, ಭತ್ತದ ಅರಳು, ಬತ್ತಾಸು ಇತ್ಯಾದಿ ಪದಾರ್ಥಗಳನ್ನು ಲಕ್ಷ್ಮೀಗೆ ಅರ್ಪಿಸಿ ನಂತರ ಅವುಗಳನ್ನು ಆಪ್ತೇಷ್ಟರಿಗೆ ಹಂಚುತ್ತಾರೆ. ನಂತರ ಕೈಯಲ್ಲಿನ ದೀವಟಿಗೆಯಿಂದ ಪಿತೃಗಳಿಗೆ ಮಾರ್ಗದರ್ಶನ ಮಾಡುತ್ತಾರೆ. (ಕೈಯಲ್ಲಿನ ದೀವಟಿಗೆಯನ್ನು ದಕ್ಷಿಣ ದಿಕ್ಕಿಗೆ ತೋರಿಸಿ ಪಿತೃಗಳಿಗೆ ಮಾರ್ಗದರ್ಶನ ಮಾಡುತ್ತಾರೆ.) ಬ್ರಾಹ್ಮಣರಿಗೆ ಮತ್ತು ಇತರ ಹಸಿದ ವರಿಗೆ ಊಟವನ್ನು ಕೊಡುತ್ತಾರೆ. ರಾತ್ರಿ ಜಾಗರಣೆ ಮಾಡುತ್ತಾರೆ. ಆಶ್ವಯುಜ ಅಮಾವಾಸ್ಯೆಯ ರಾತ್ರಿ ಲಕ್ಷಿ ಯು ಎಲ್ಲೆಡೆಗೆ ಸಂಚರಿಸಿ ತನ್ನ ನಿವಾಸಕ್ಕಾಗಿ ಯೋಗ್ಯ ಸ್ಥಾನವನ್ನು ಹುಡುಕುತ್ತಾಳೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಎಲ್ಲಿ ಸ್ವಚ್ಛತೆ, ಶೋಭೆ ಇರುತ್ತದೆಯೋ ಅಲ್ಲಿ ಅವಳು ಆಕರ್ಷಿತಳಾಗುತ್ತಾಳೆ. ಅಲ್ಲದೆ ಯಾವ ಮನೆಯಲ್ಲಿ ಚಾರಿತ್ರ್ಯವುಳ್ಳ, ಕರ್ತವ್ಯದಕ್ಷ, ಸಂಯಮವುಳ್ಳ, ಧರ್ಮನಿಷ್ಠ ದೇವಭಕ್ತರು ಮತ್ತು ಕ್ಷಮಾಶೀಲ ಪುರುಷರು ಹಾಗೂ ಗುಣವತಿ ಮತ್ತು ಪತಿವ್ರತಾ ಸ್ತ್ರೀಯರು ಇರುತ್ತಾರೆಯೋ ಅಲ್ಲಿ ವಾಸಿಸಲು ಲಕ್ಷ್ಮೀಯು ಇಷ್ಟಪಡುತ್ತಾಳೆ.’
    ಈ ಪೂಜೆಯಲ್ಲಿ ಕೊತ್ತಂಬರಿ ಮತ್ತು ಭತ್ತದ ಅರಳನ್ನು ಅರ್ಪಿಸುತ್ತಾರೆ. ಇದಕ್ಕೆ ಕಾರಣವೇನೆಂದರೆ ಕೊತ್ತಂಬರಿಯು (ಧನಿಯಾ) ಧನವಾಚಕ ಶಬ್ದವಾಗಿದೆ ಮತ್ತು ಅರಳು ಸಮೃದ್ಧಿಯ ಪ್ರತೀಕವಾಗಿವೆ. ಸ್ವಲ್ಪ ಭತ್ತಗಳನ್ನು ಹುರಿದರೂ ಕೈತುಂಬಾ ಅರಳುಗಳಾಗುತ್ತವೆ. ಲಕ್ಷ್ಮೀಯ ಸಮೃದ್ಧಿಯಿರಬೇಕೆಂದು ಸಮೃದ್ಧಿಯ ಪ್ರತೀಕವಾಗಿರುವ ಅರಳನ್ನು ಅರ್ಪಿಸುತ್ತಾರೆ.
    ಶ್ರೀ ಸರಸ್ವತಿದೇವಿಯ ಪೂಜೆ
    ಆನಂತರ ಕಲಾಪ್ರೇಮಿ ಜನರಿಗೆ ಪ್ರಿಯವಾಗಿರುವ ಹಂಸವಾಹಿನಿ, ಜ್ಞಾನಸ್ವರೂಪಿಣಿ, ಜ್ಞಾನಿಯರಿಗೆ ವಿದ್ಯಾದಾನವನ್ನು ಮಾಡುವ ಮತ್ತು ಬಂದಿರುವ ಲಕ್ಷ್ಮೀಯನ್ನು ಯೋಗ್ಯರೀತಿಯಲ್ಲಿ ಉಪಯೋಗಿಸಲು ವಿವೇಕವನ್ನು ಜಾಗೃತಗೊಳಿಸುವ ಶ್ರೀಸರಸ್ವತಿ ದೇವಿಯ ಪೂಜೆಯನ್ನು ಮಾಡಬೇಕು. – ಪ.ಪೂ.ಪರಶರಾಮ ಮಾಧವ ಪಾಂಡೇ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.
    ೨. ಅಲಕ್ಷ್ಮೀಯ ನಿರ್ಮೂಲನ
    ಅ.ಮಹತ್ವ : ಗುಣಗಳನ್ನು ನಿರ್ಮಾಣ ಮಾಡಿದರೂ ದೋಷಗಳು ನಾಶವಾಗ ಬೇಕು; ಆಗಲೇ ಗುಣಗಳಿಗೆ ಮಹತ್ವವು ಬರುತ್ತದೆ. ಇಲ್ಲಿ ಲಕ್ಷ್ಮೀಪ್ರಾಪ್ತಿಯ ಉಪಾಯವಾಯಿತು, ಹಾಗೆಯೇ ಅಲಕ್ಷಿ ಯ ನಾಶವೂ ಆಗಬೇಕು. ಇದಕ್ಕಾಗಿ ಈ ದಿನದಂದು ಹೊಸ ಪೊರಕೆಯನ್ನು ಖರೀದಿಸುತ್ತಾರೆ. ಅದಕ್ಕೆ ‘ಲಕ್ಷ್ಮೀ’ ಎನ್ನುತ್ತಾರೆ.
    ೨ ಆ. ಕೃತಿ : ‘ನಡುರಾತ್ರಿಯಲ್ಲಿ ಹೊಸ ಪೊರಕೆಯಿಂದ ಕಸಗುಡಿಸಿ ಅದನ್ನು ಮೊರದಲ್ಲಿ ತುಂಬಿ ಹೊರಗೆ ಹಾಕಬೇಕು’ ಎಂದು ಹೇಳಲಾಗಿದೆ. ಇದಕ್ಕೆ ‘ಅಲಕ್ಷ್ಮೀ (ಕಸ, ದಾರಿದ್ರ್ಯ) ನಿರ್ಮೂಲನ’ ಎನ್ನುತ್ತಾರೆ. ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಕಸವನ್ನು ಗುಡಿಸುವುದಿಲ್ಲ ಅಥವಾ ಹೊರಗೆ ಹಾಕುವುದಿಲ್ಲ. ಕೇವಲ ಈ ರಾತ್ರಿ ಮಾತ್ರ ಹಾಗೆ ಮಾಡುವುದಿರುತ್ತದೆ. ಕಸ ಗುಡಿಸುವಾಗ ಮೊರ ಮತ್ತು ದಿಮಡಿಯನ್ನು (ಚರ್ಮದ ವಾದ್ಯವನ್ನು) ಬಾರಿಸಿ ಅಲಕ್ಷಿ ಯನ್ನು ಓಡಿಸುತ್ತಾರೆ.
    7 min
  • 💐💐ದೀಪಾವಳಿ ಹಬ್ಬದ ಶುಭಾಶಯಗಳು🌹🎉🎉
    ಕತ್ತಲೆಯಿಂದ ಬೆಳಕಿನೆಡೆಗೆ,
    ಸಾಗುವ ನಾವು ಬಾಳ ಪಯಣದಿ..
    ಜ್ಞಾನದ ದೀವಿಗೆಯ ಹಚ್ಚಿ
    ಅಜ್ಞಾನದ ಅಂಧಕಾರವ ಹೊರಗಟ್ಟಿ
    ಎಲ್ಲೆಲ್ಲೂ ಸಂಸ್ಕೃತಿಯ ಅನಾವರಣದೊಂದಿಗೆ
    ಪ್ರೀತಿ, ಮಮತೆ ತುಂಬಿ ನಲಿಯಲಿ
    ಬದುಕಾಗಲಿ ನಂದನಾವನ...
    *🌳
    *🌹*
    5 min
  • ಪ್ರತಿಭೆಯನ್ನು ಸರಿಯಾಗಿ ಗೌರವಿಸಿದರೆ ಆ ಸಂತೃಪ್ತ ಭಾವ ಅವರಲ್ಲಿ ಯಾವತ್ತೂ ಹಚ್ಚಹಸುರನಾಗಿ ಇರುತ್ತದೆ.
    *ಹರಿದುಹೋದ ಧೋತಿ ಮತ್ತು ಹರಿದ ಅಂಗಿಯನ್ನು ಧರಿಸಿದ ವ್ಯಕ್ತಿ* ತನ್ನ 15-16 ವರ್ಷದ ಮಗಳ ಜೊತೆ
    ದೊಡ್ಡ ಹೋಟೆಲ್ ಗೆ ಹೋದರು. ಇಬ್ಬರೂ ಕುರ್ಚಿಯ ಮೇಲೆ ಕುಳಿತಿದ್ದನ್ನು ನೋಡಿ , ವೇಟರ್ ಬಂದು ಎರಡು ನೀರಿನ ಲೋಟ ಇಟ್ಟು ಕೇಳಿದ. ತಮಗೇನು ಬೇಕು? ಆಗ ಆ ವ್ಯಕ್ತಿ
    " ನನ್ನ ಮಗಳಿಗೆ ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಬಂದರೆ ನಗರದ ಅತಿದೊಡ್ಡ ಹೋಟೆಲ್ ನಲ್ಲಿ ದೋಸೆ ತಿನ್ನಿಸುತ್ತೇನೆ ಎಂದು ಭರವಸೆ ನೀಡಿದ್ದೆ.
    ಇದು ಆ ಭರವಸೆಯನ್ನು ನನ್ನ ಮಗಳು ಈಡೇರಿಸಿದ್ದಾಳೆ. ದಯವಿಟ್ಟು ಮಗಳಿಗಾಗಿ ಒಂದು ದೋಸೆ ತನ್ನಿ. ? ವೇಟರ್ ಕೇಳಿದ " ಆಯಿತು ತಮಗೇನು ತರಬೇಕು?" ನನ್ನ ಬಳಿ ಕೇವಲ ಒಂದು ದೊಸೆ ಸಾಕಾಗುವಷ್ಟು ಮಾತ್ರ ಹಣವಿದೆ ಅವಳಿಗಷ್ಟೆ ಕೊಟ್ಟರೆ ಸಾಕು.ಎಂದ.ಈ ಮಾತು ಕೇಳಿ ವೇಟರ್ ನ ಮನಸು ಕರಗಿತು. ಮಾಲೀಕನ ಬಳಿ ಹೋಗಿ ಅವನು ವ್ಯಕ್ತಿ ಮತ್ತು ಮಗಳ ಕಥೆ ಹೇಳಿದ.ಮುಂದುವರಿದು ಇವರಿಬ್ಬರಿಗೂ ನನ್ನ ಪರವಾಗಿ ತಿಂಡಿ ನೀಡಬೇಕೆಂದು ನಿರ್ಧರಿಸಿದ್ದೇನೆ. ನೀವು ಅವರ ಬಿಲ್ ಹಣವನ್ನು ನನ್ನ ಸಂಬಳದಿಂದ ಕಡಿತಗೊಳಿಸಬಹುದು. ಈ ಮಾತನ್ನು ಕೇಳಿದ ಹೊಟೆಲ್ ಮಾಲಿಕನಿಗೂ ಅವರಿಬ್ಬರ ಮೇಲೆ ಮರುಕವಾಯಿತು ಹಾಗೂ ವೆಯ್ಟರ್ ನ ಅಭಿಮಾನ ಕಂಡು ಸಂತುಷ್ಟನಾಗಿ "ಅವರಿಬ್ಬರಿಗೆ ಹೋಟೆಲ್ ಪರವಾಗಿ ಇಂದು ನಾವು ಅಭಿನಂದನಾ ಪಾರ್ಟಿ ಕೊಡೋಣ ಎಂದು ಮಾಲೀಕರು ಹೇಳಿದರು".
    ಹೋಟೆಲ್ ಮಾಲೀಕರು ಎಲ್ಲ ಸಿಬ್ಬಂದಿಯವರನ್ನು ಸೇರಿಸಿ ಟೇಬಲ್ ನ್ನು ಚೆನ್ನಾಗಿ ಅಲಂಕರಿಸಲು ಹೇಳಿದರು.ಹಾಗೂ ಬಡ ಹುಡುಗಿಯ ಯಶಸ್ಸನ್ನು ಗ್ರಾಹಕರೊಂದಿಗೆ ಸಂಭ್ರಮಿಸಿ ಅವರಿಬ್ಬರಿಗೆ ಹೊಟ್ಟೆ ತುಂಬುವಷ್ಟು ತಿಂಡಿ ಹಾಗೂ ಸಿಹಿ ಹಂಚಿ ಆಚರಿಸಿದರು.ಜೊತೆಗೆ ಮಾಲೀಕರು ದೊಡ್ಡ ಚೀಲದಲ್ಲಿ ಸಿಹಿ ತಿಂಡಿ ಪ್ಯಾಕ್ ನೀಡಿ ತಮ್ಮ ನೆರೆಹೊರೆಯಲ್ಲಿ ಹಂಚಲು ಕೊಟ್ಟರು. ಇಷ್ಟೆಲ್ಲಾ ಗೌರವ ಪಡೆದ ಅವರಿಗೆ ಹೊಟೆಲ ನವರ ಬಗ್ಗೆ ಧನ್ಯತಾಭಾವದಿಂದ ಕಣ್ಣಲ್ಲಿ ನೀರು ಜಿನುಗತೊಡಗಿತ್ತು. .
    ಸಮಯ ಕಳೆಯಿತು. ಒಂದು ದಿನ ಅದೇ ಹುಡುಗಿ I.A.S. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅದೇ ಊರಿಗೆ ಬಂದಳು. ಮೊದಲು ಆಪ್ತ ಸಹಾಯಕನನ್ನು ಅದೇ ಹೋಟೆಲ್ ಗೆ ಕಳುಹಿಸಿ, "ಕಲೆಕ್ಟರ್ ಸಾಹಿಬಾ" ತಿಂಡಿ ತಿನ್ನಲು ಬರುತ್ತಾರೆ ಎಂದು ಹೊಟೆಲ್ ಮಾಲಿಕರಿಗೆ ತಿಳಿಸುವಂತೆ ಹೇಳಿದರು. ಹೋಟೆಲ್ ಮಾಲೀಕರು ತಕ್ಷಣ ಹೊಟೆಲ್ ಹಾಗೂ ಟೇಬಲ್ ಗಳನ್ನು ತಮ್ಮ ಸಹಾಯಕರ ಸಹಾಯದಿಂದ ಸುಂದರವಾಗಿ ಅಲಂಕರಿಸಿದರು. ಈ ಸುದ್ದಿ ಕೇಳಿ ಇಡೀ ಹೋಟೆಲ್ ಗ್ರಾಹಕರಿಂದ ತುಂಬಿ ತುಳುಕಿತು.
    ಕಲೆಕ್ಟರ್ ತನ್ನ ಪೋಷಕರೊಂದಿಗೆ ಹೋಟೆಲ್ ತಲುಪಿದರು. ಎಲ್ಲರೂ ಅವರ ಗೌರವಕ್ಕೆ ನಿಂತರು. ಹೋಟೆಲ್ ಮಾಲೀಕರು ಅವರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಅವಳು ನೇರವಾಗಿ ಹೋಟೆಲ್ ಮಾಲೀಕ ಮತ್ತು ವೆಟರ್ ನ ಕಾಲಿಗೆ ನಮಸ್ಕರಿಸಿ ಹೇಳಿದಳು - ' ಬಹುಶಃ ನೀವಿಬ್ಬರೂ ನನ್ನನ್ನು ಗುರುತಿಸಲಿಲ್ಲ. ದೋಸೆ ಕೊಡೋಕೆ ಅಪ್ಪನ ಬಳಿ ದುಡ್ಡಿಲ್ಲದ ಹುಡುಗಿ ನಾನು. ಆ ದಿನ ನೀವಿಬ್ಬರೂ ಮಾನವೀಯತೆಯು ಇನ್ನೂ ಇದೆ ಎನ್ನುವದಕ್ಕೆ ನೈಜ ಉದಾಹರಣೆ ಕೊಟ್ಟಿದ್ದಿರಿ. ನನ್ನ ನೆರೆಹೊರೆಗೆ ಹಂಚಲು ಸಿಹಿತಿಂಡಿಯ ಪ್ಯಾಕ್ ನೀಡಿ ಗೌರವಿಸಿದ್ದಿರಿ.
    ನಿಮ್ಮಿಬ್ಬರಿಂದಲೇ ಇಂದು ನಾನು ಈ ಹಂತಕ್ಕೆ ಬರಲು ಪ್ರಯತ್ನ ಪಟ್ಟೆ . ನಾನು ನಿಮ್ಮಿಬ್ಬರನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಇವತ್ತು ಈ ಪಾರ್ಟಿ ನನ್ನಿಂದ. ಎಲ್ಲಾ ಗ್ರಾಹಕರು ಮತ್ತು ಹೋಟೆಲ್ ಸಿಬ್ಬಂದಿಗಳ ಬಿಲ್ ನಾನು ಕಟ್ಟುತ್ತೇನೆ. ಇವತ್ತಿನಿಂದ ನಿಮ್ಮಿಬ್ಬರ ಸುಖ ದುಃಖಗಳಿಗೆ ನಾನೂ ಭಾಗಿ.ಎಂದು ಹೇಳಿದಳು.ಇವತ್ತು ಹೊಟೆಲ್ ಮಾಲಿಕ ಹಾಗೂ ವೆಯ್ಟರನ ಕಣ್ಣುಗಳು ತೆವ ವಾಗಿದ್ದವು*
    💫💫💫💫💫💫💫 -- *ಯಾವುದೇ ಬಡವರ ಬಡತನವನ್ನು ನೋಡಿ ಅಪಹಾಸ್ಯ ಮಾಡುವ ಬದಲು, ಅವರ ಪ್ರತಿಭೆಯನ್ನು ಸರಿಯಾಗಿ ಗೌರವಿಸಿದರೆ ಆ ಸಂತೃಪ್ತ ಭಾವ ಅವರಲ್ಲಿ ಯಾವತ್ತೂ ಹಚ್ಚಹಸುರನಾಗಿ ಇರುತ್ತದೆ.* 📝 ಕೃಪೆ. ಟೈಮ್ಸ್ ಆಫ್ ಇಂಡಿಯಾ
    13 min
  • ಪೋಸ್ಟ್ ಮಾರ್ಟಂ. 👹 Postmortem
    "ಮಾನ್ಯ ಜಿಲ್ಲಾಧಿಕಾರಿಗಳ ನ್ಯಾಯಾಲಯ " ಅದು .
    ಆವತ್ತು , ತಾಲೂಕಿನ "ಮುಖ್ಯ ವೈದ್ಯಾಧಿಕಾರಿ , ಪೊಲೀಸ್ ಇನ್ಸ್ಪೆಕ್ಟರ್ " ಮತ್ತು .....ಸರ್ಕಾರಿ ಆಸ್ಪತ್ರೆಯ ಜವಾನ "ಶಿವಪ್ಪ "ಹೊರಗಡೆ ಕುಳಿತಿದ್ದರು .
    ಆವತ್ತಿನ ವಿಚಾರಣೆಯಲ್ಲಿ "ಶಿವಪ್ಪ "ಎಂಬ ಸರಕಾರಿ ಜವಾನನ "ಭವಿಷ್ಯ" ನಿರ್ಧಾರ ಮಾಡಲಿದ್ದು , ಪಕ್ಕ ಕುಳಿತ ಇನ್ಸಪೆಕ್ಟರ್ ....ಹಾಗೂ ಮುಖ್ಯ ಆರೋಗ್ಯ ಅಧಿಕಾರಿಯ ಮುಖದಲ್ಲಿ , "ಅವಹೇಳನೆಯ "ನಗು ಕಂಡುಬರುತ್ತಿತ್ತು.
    ಜಿಲ್ಲಾಧಿಕಾರಿಗಳು ಬಂದ ನಂತರ , ಅಲ್ಲಿನ ಜವಾನ ಕೂಗಿ ಹೇಳಿದ್ದ .
    "ಎಲ್ಲರೂ ಒಳಗೆ ಬರಬೇಕೆಂದು ".
    ಎಲ್ಲರೂ ಒಳಗೆ ನಡೆದಿದ್ದರು , ಕೊನೆಯಲ್ಲಿ ಶಿವಪ್ಪ ಮಾತ್ರ ,ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಹೋಗಿ ನಿಂತಿದ್ದ .
    ಅಷ್ಟರಲ್ಲೇ ಒಳಗೆ ನಮಸ್ಕರಿಸಿ , ನುಗ್ಗಿ ಬಂದಿದ್ದ ಸರ್ಕಾರಿ ವಕೀಲ ,ರಾಜೀವ ನಾಯ್ಕ .
    ಎದುರಿಗಿನ ಜಿಲ್ಲಾಧಿಕಾರಿಗಳಾದ ಚಕ್ರವರ್ತಿ ಅವರಿಗೆ , ಎಲ್ಲವೂ ನಿಚ್ಚಳ ಆಗಿತ್ತು .
    ಶಿವಪ್ಪ ಕುಡಿದು ಬಂದು , ಉದ್ಯೋಗ ಮಾಡಿದ ಎಂದು .
    ಅದಕ್ಕಾಗಿ ಆತ , ಸತ್ತವರ ಬಳಿ "ನೂರು ರೂಪಾಯಿ ಲಂಚ ಪಡೆದಿದ್ದಾನೆ " ಎಂಬುದು ಕೂಡ .
    ವಿಚಾರಣೆ ಎಂಬುದು ಕೇವಲ ಒಂದು ಭಾಗ ಅಷ್ಟೇ , ಅವನನ್ನು ಕೆಲಸದಿಂದ "ವಜಾ "ಮಾಡಲು ...
    ಎಂಬುದು ಕೂಡ ಅರಿತಿದ್ದರು ಅವರು.
    ಶಿವಪ್ಪ ಒಳಗೆ ಇದ್ದ "ಕಟಕಟೆಯಲ್ಲಿ "ನಿಂತಿದ್ದ .
    ಆತನ ಮುಖದಲ್ಲಿ ಮಾತ್ರ ಆವತ್ತು , ಹಿಂದೆಂದೂ ಕಾಣದ ದುಃಖ ಇತ್ತು.
    ಚಕ್ರವರ್ತಿ ಸಾಹೇಬರು ಕೂಡ , ಆತನ ಕಡೆ ನೋಡಿದರು ಕನಿಕರದಿಂದ .
    ಅಷ್ಟರಲ್ಲಿ ಶುರು ಮಾಡಿದ್ದ , ತನ್ನ ವಾದವನ್ನು ಸರಕಾರಿ ವಕೀಲ ಪಂಡಿತ್ .
    ಸ್ವಾಮಿ , ಇಲ್ಲಿ ನಿಂತವನು "ಶಿವಪ್ಪ "ಎಂದು .
    ಸರಕಾರಿ ಆಸ್ಪತ್ರೆಯಲ್ಲಿ , ಮೂವತ್ತು ವರ್ಷದಿಂದ ಕೆಲಸ ಮಾಡುತ್ತಿದ್ದಾನೆ .
    "ಡೀ ದರ್ಜೆಯ ನೌಕರನಾಗಿ ".
    "ಅವನ ಮೇಲಿನ ಮೊದಲ ಆರೋಪ ....ಕುಡಿದು ಕೆಲಸ ಮಾಡಿದ ಎಂದು .
    ಹಾಗೂ ಎರಡನೇ ಆರೋಪ ..... ಸುಟ್ಟ ಗಾಯದಿಂದ ಮೃತಪಟ್ಟ "ಹೆಂಗಸಿನ "ಶರೀರ ಪೋಸ್ಟ್ ಮಾರ್ಟಂ ಮಾಡಲು .....ಅವರ ತಂದೆಯಿಂದಲೇ ನೂರು ರೂಪಾಯಿ "ಲಂಚ " ತೆಗೆದುಕೊಂಡಿದ್ದ ಎಂಬುದು".
    ಸರಕಾರಿ ವಕೀಲ ಇಷ್ಟು ಹೇಳಿ , ತನ್ನ ವಾದ ಹೇಗೆ ಇದೆ ಎಂದು? ....ಒಳಗೆ ಕುಳಿತ , ಪೋಲಿಸ್ ಇನ್ಸ್ಪೆಕ್ಟರ್ ಕಡೆ ನೋಡಿದ ಆತ .
    ಅವರ ಕಣ್ಣಲ್ಲಿ ಕೂಡ ಮೆಚ್ಚುಗೆ .
    ಒಂದು ಉತ್ತಮ ಕೆಲಸದಲ್ಲಿ ಇದ್ದವರು , ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದವರು ....ಒಬ್ಬ ಸಣ್ಣ ನೌಕರನ ವಿರುದ್ಧ ನಿಂತು ಬಿಟ್ಟಿದ್ದರು ಆವತ್ತು .
    ತಾವು ಎಷ್ಟು "ಪ್ರಾಮಾಣಿಕರು "ಎಂದು ತೋರಿಸಿಕೊಳ್ಳಲು.
    ಕೇಳುತ್ತಾ ಇದ್ದ ಶಿವಪ್ಪ , ತನ್ನ ಮೇಲಿನ ಆರೋಪವನ್ನು .
    ಯಾವುದೂ "ಸುಳ್ಳು "ಇರಲಿಲ್ಲ .
    ಮುಂದೆ ವಕೀಲ ನುಡಿದಿದ್ದ.
    "ಸ್ವಾಮಿ ಅದಕ್ಕೆ ಸಂಬಂಧಪಟ್ಟಂತೆ ಇರುವ ಎಲ್ಲಾ "ದಾಖಲೆಗಳನ್ನು ", ನಿಮ್ಮಮುಂದೆ ಈಗಾಗಲೇ ಹಾಜರು ಮಾಡಿದ್ದೇನೆ .
    ಅದನ್ನು ಪರಿಗಣಿಸಿ ತಾವು , ಅಲ್ಲಿ ನಿಂತಿರುವ "ಆರೋಪಿಯನ್ನು "ತಕ್ಷಣಕ್ಕೆ ಜಾರಿಗೆ ಬರುವಂತೆ ...ಕೆಲಸದಿಂದ ವಜಾ ಮಾಡಬೇಕೆಂದು
    ಕೋರಿಕೆ " ಎಂದು , ಕೈ ಮುಗಿದು ಕುಳಿತಿದ್ದ .
    ಎಲ್ಲರಿಗೂ ಅರಿವು ಇತ್ತು , ಶಿವಪ್ಪ ಕೆಲಸದಿಂದ ವಜಾ ಆಗುತ್ತಾನೆ ಎಂದು .
    "ನಿನ್ನ ಕಡೆ ವಾದ ಮಾಡಲು ಯಾರು ಇಲ್ಲವೇ " ಎಂದು ಕೇಳಿದ್ದರು , ಜಿಲ್ಲಾಧಿಕಾರಿ ಚಕ್ರವರ್ತಿಯವರು .
    ಅದೊಂದು "ಪ್ರಕ್ರಿಯೆ "ಮಾತ್ರ ಉಳಿದಿತ್ತು ಅಷ್ಟೇ.
    ಕೈ ಮುಗಿದು ಹೇಳಿದ್ದ ಶಿವಪ್ಪ .
    "ಯಾರನ್ನೂ ಕೂಡ ವಾದ ಮಾಡಲು , ನಾ ನೇಮಕ ಮಾಡಿಲ್ಲ ಸ್ವಾಮಿ "ಎಂದು .
    "ಎಲ್ಲವೂ ಸತ್ಯವೇ ಅವರು ಹೇಳಿದ್ದು .
    ಆದರೆ ತಾವು ದಯವಿಟ್ಟು , ನನ್ನ ಐದು ನಿಮಿಷದ ಮಾತು ಕೇಳಿ" ಎಂದು ವಿನಂತಿ ಮಾಡಿದ್ದ .
    "ಕುಡಿದಿದ್ದು ಹೌದು ಮಹಾ ಸ್ವಾಮಿ , ಯಾಕೆ
    ಅಂದರೆ ".....
    ಆತನ ಕಣ್ಣಲ್ಲಿ ನೀರಿತ್ತು .
    "ಆದರೆ ನಾನು "ಕುಡುಕನಲ್ಲ "ಮಹಾಸ್ವಾಮಿ .
    ಆದರೆ ಈ "ಪೋಸ್ಟ್ ಮಾರ್ಟಂ "ಮಾಡಲು ಹೋಗುವಾಗ , ಅದು ನನಗೆ ಅದು ಬೇಕೆ ಬೇಕು .
    ಈ ಮೂವತ್ತು ವರ್ಷದಿಂದ , ನಾನು ಇದನ್ನೇ ಮಾಡಿದ್ದೇನೆ ಕೂಡ" .
    ಚಕ್ರವರ್ತಿ ಅವರಲ್ಲಿ ಕುತೂಹಲ .
    ಈತನಲ್ಲಿ ಮಾತನಾಡಲು , ಏನು ವಿಷಯ ಇರುತ್ತೆ ಎಂದು.
    "ಅಲ್ಲಿ ಸತ್ತವರ ದೇಹವನ್ನು ಕೊಯ್ದು , ಅದರಲ್ಲಿ ವೈದ್ಯರು ಹೇಳಿದ ಅಂಗವನ್ನು ತೆಗೆದು ...ಮತ್ತೆ ಶರೀರವನ್ನು "ಹೊಲಿಯುವ "ಕೆಲಸ ನನ್ನದು .
    ಮಾಮೂಲಿ ಮನಸು ಅದಕ್ಕೆ ಒಗ್ಗುವುದಿಲ್ಲ .
    ಯಾಕೆ ಅಂದರೆ , ಸತ್ತ ಸಣ್ಣ ಮಕ್ಕಳ "ತಲೆ "ಒಡೆದು ,ಅವರ ಮೆದುಳಿನ ಭಾಗ ತೆಗೆಯಬೇಕು .
    ಅದು ಕೂಡ , ಅವರ ತಲೆಗೆ "ಸುತ್ತಿಗೆ "ಪೆಟ್ಟು ಹಾಕಿ".
    ಶಿವಪ್ಪ ಭಾವುಕನಾಗಿ ಹೋಗಿದ್ದ .
    ಅಲ್ಲಿನ ಪ್ರತಿ ಚಿತ್ರ , ಅವನ ಕಣ್ಣ ಮುಂದೆ ಬರುತ್ತಿತ್ತು.
    "ದೇಹ ಸತ್ತಿರಬಹುದು ಸ್ವಾಮಿ , ಆದರೆ ಅದನ್ನು ಮತ್ತಷ್ಟು ಹಿಂಸಿಸಿ ...ಅದರ ಎದೆಯ ಭಾಗವನ್ನು , ಹೊಟ್ಟೆಯನ್ನು ಕೊಯ್ದು ...ಅದರ "ತುಣುಕು "ಇಡುವ ಕೆಲಸ ನನ್ನದು , ವೈದ್ಯರು ಹೇಳಿದ ಹಾಗೆ .
    ಕಡೆಗೆ ಕೂಡ ...ಅದನ್ನು ಸೇರಿಸಿ ಹೊಲೆಯಬೇಕು ನಾನು , ಪೇಟೆಯಲ್ಲಿ ಸಿಗುವ ಹಗ್ಗದಿಂದ .
    ಬಿಗಿದು ಹೋದ ಮಾಂಸದಲ್ಲಿ , "ಸೂಜಿ " ಬರೋಲ್ಲ ಸ್ವಾಮಿ , ಅದಕ್ಕೆ ದೊಡ್ಡ "ದಬ್ಬಣ "ಬೇಕು .
    ಎಂತಹ ಹಣೆಬರಹ ನೋಡಿ ನನ್ನದು " .
    ಎಂದು ಅಲ್ಲೇ ಕುಸಿದು ಕುಳಿತಿದ್ದ ಆತ .
    ಕಣ್ಣಲ್ಲಿ "ಧಾರಾಕಾರವಾಗಿ " ನೀರು ಹರಿದು ಹೋಗುತ್ತಿತ್ತು .
    ಚಕ್ರವರ್ತಿ ಸಾಹೇಬರಿಗೆ ಕೂಡ , ಎಲ್ಲೋ ಮನಸಿಗೆ ತಾಗಿದ ಹಾಗಿತ್ತು ಮಾತು .
    " ನೀರು ಏನಾದರೂ ಬೇಕ ಶಿವಪ್ಪ "ಎಂದು ಕೇಳಿದ್ದರು .
    "ಗಂಡನಿಂದ "ಸುಟ್ಟು "ಕರಕಲು ಆದ ಹೆಂಗಸು , ಬೈಕ್ ಮೇಲಿಂದ ಬಿದ್ದ ಮಕ್ಕಳು...
    ಸಾಲ ತೀರಿಸಲು ಆಗದ "ರೈತನ "ಶರೀರ .
    ಈಜಲು ಹೋದ
    14 min
  • ಮಕ್ಕಳನ್ನು ಮುದ್ದಿಸುವುದು ಮಾತ್ರವಲ್ಲ; ದ೦ಡಿಸುವುದೂ ಪ್ರೀತಿಯೇ !
    ೦೧ . ಮಕ್ಕಳು ಕೇಳಿದ್ದೆಲ್ಲವನ್ನೂ ಕೊಡಿಸುವುದಷ್ಟೇ ಪ್ರೀತಿಯಲ್ಲ, ಕೊಡಿಸದೇ ಇದ್ದು ನಿರಾಕರಣೆಯ ನೋವ ಸಹಿಸೋದನ್ನು ಕಲಿಸೋದು ಕೂಡ ಪ್ರೀತಿಯೇ...
    ೦೨ . ಕೇಳಿದಲ್ಲಿಗೆ ಕರೆದೊಯ್ಯುವುದು/ಕಳಿಸುವುದಷ್ಟೇ ಅಲ್ಲ, ಕರೆದೊಯ್ಯದೇ/ಕಳಿಸದೇ ಮನೆಯಲ್ಲಿ ಇರುವಂತೆ ಮಾಡಿ ನಿರಾಸೆಯನ್ನು ಅರಗಿಸಿಕೊಳ್ಳೋದನ್ನು ತಿಳಿಸೋದೂ ಪ್ರೀತಿಯೇ...
    ೦೩ . ಕೇಳಿದ್ದೆಲ್ಲವನ್ನೂ ಅವರ ಬಾಯಿಂದುದುರಿದ ತಕ್ಷಣ ಹಾಜರುಪಡಿಸೋದಷ್ಟೇ ಅಲ್ಲ, ತಮ್ಮ ಅಗತ್ಯಗಳಿಗಾಗಿ ಕಾಯುವ ತಾಳ್ಮೆ ಕಲಿಸೋದೂ ಪ್ರೀತಿಯೇ...
    ೦೪ . ಅವರು ಹೋದ ದಾರಿಯಲ್ಲಿಯೇ ಅವರನ್ನು ಅವರ ಪಾಡಿಗೆ ಬಿಡುವುದಷ್ಟೇ ಅಲ್ಲ, ಸರಿಯಾದ ದಾರಿಯನ್ನು ತೋರಿಸುವುದೂ ಕೂಡ ಪ್ರೀತಿಯೇ...
    ೦೫ . ಅವರಿಗೆ ಅನಿಸಿದ್ದೆಲ್ಲವನ್ನೂ ಹೇಳುವಷ್ಟು ಸ್ವಾತಂತ್ರ್ಯ ಕೊಡುವುದಷ್ಟೇ ಅಲ್ಲ, ಯಾವ ಸಮಯದಲ್ಲಿ ಏನು ಮತ್ತು ಎಷ್ಟು ಮಾತನಾಡಬೇಕೆಂಬುದರ ಅರಿವು ಮೂಡಿಸೋದೂ ಪ್ರೀತಿಯೇ...
    ೦೬ . ಆಸೆ ಪಟ್ಟದ್ದೆಲ್ಲವನ್ನೂ ಕೊಂಡು ಯಾ ತಯಾರಿಸಿ ತಿನ್ನಿಸುವುದಷ್ಟೇ ಅಲ್ಲ, ತಮ್ಮ ದೇಹ ಮತ್ತು ಆರೋಗ್ಯದ ಬಗ್ಗೆ ನಿಗಾ ವಹಿಸೋದನ್ನು ರೂಢಿಸೋದೂ ಪ್ರೀತಿಯೇ...
    ೦೭ . ಅವರಿಗೆ ಬೇಕಾದ್ದನ್ನೆಲ್ಲಾ ಮಾಡೋದಕ್ಕೆ ಅನುವು ಮಾಡಿಕೊಡೋದಷ್ಟೇ ಅಲ್ಲ, ಮಾಡಲೇಬಾರದಂಥವುಗಳ ಬಗ್ಗೆ ತಿಳಿಹೇಳಿ ತಿದ್ದೋದೂ ಕೂಡ ಪ್ರೀತಿಯೇ...
    ೦೮ . ಅವರಿಗೆ ಬೇಕಾದಷ್ಟು ಖರ್ಚಿಗೆ ಹಣ ನೀಡೋದಷ್ಟೇ ಅಲ್ಲ, ಅದರ ದುಡಿಮೆಗೆ ಪಟ್ಟ ಶ್ರಮ ಮತ್ತದರ ಬೆಲೆ ತಿಳಿಸೋದೂ ಪ್ರೀತಿಯೇ...
    ೦೯ . ಸಾಯುವವರೆಗೆ ದುಡಿಯುವುದನ್ನಷ್ಟೇ ಕಲಿಸೋದಲ್ಲ, ದುಡಿತವನ್ನು ಉಳಿಸಿ ಭವಿಷ್ಯಕ್ಕೆ ಕೂಡಿಡೋದನ್ನು ಕಲಿಸೋದೂ ಪ್ರೀತಿಯೇ...
    ೧೦ . ತನ್ನಿಂದಾಗದ ಕೆಲಸವೇ ಇಲ್ಲ ಎಂಬಷ್ಟು ಹುರುಪು ತುಂಬೋದಷ್ಟೇ ಅಲ್ಲ, ನನ್ನಂತೆಯೇ ಇತರರೂ ಎಲ್ಲರೂ ಕೂಡಿ ನೆಮ್ಮದಿಯಿಂದಿರಬೇಕೆಂಬುದನ್ನು ತಿಳಿಸೋದೂ ಪ್ರೀತಿಯೇ...
    ೧೧ . ಬರಿಯ ಸುಖ, ಗೆಲುವು, ಸಂತೋಷಗಳನ್ನಷ್ಟೇ ಒಪ್ಪೋದಲ್ಲ, ಕಷ್ಟ, ನೋವು, ಸೋಲುಗಳನ್ನೂ ಅಷ್ಟೇ ಸಮನಾಗಿ ಸ್ವೀಕರಿಸೋದನ್ನ ಕಲಿಸೋದೂ ಪ್ರೀತಿಯೇ..‌.
    ೧೨ . ದುಡಿಮೆಯ ಜಾಲದಲ್ಲಿ ಸಿಕ್ಕು ಯಾಂತ್ರಿಕವಾಗೋದಷ್ಟೇ ಅಲ್ಲ, ಮಾನವೀಯ ಮೌಲ್ಯಗಳ ರೂಢಿಸಿಕೊಳ್ಳೋದನ್ನ ಕಲಿಸೋದೂ ಪ್ರೀತಿಯೇ...
    ಕೃಷ್ಣಾರ್ಪಣಮಸ್ತು
    (ಸತ್ಸಂಗ ಸಂಗ್ರಹ)
    9 min
  • ಕೋವಿಡ್- 19 : ಸುರಕ್ಷತೆಗಾಗಿ ಡಿಜಿಟಲ್ ಕರೆನ್ಸಿ
    ಭಾರತವು ಸೇರಿದಂತೆ ಜಗತ್ತಿನಾದ್ಯಂತ, ಕೋವಿಡ್-19 ಸಾಂಕ್ರಮಿಕ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ದಿನಕ್ಕೆ ಭಯಾನಕವಾಗಿ ಏರುತ್ತಿದೆ. ಕಣ್ಣಿಗೆ ಕಾಣಿಸದ ನೋವೆಲ್ ಕೊರೊನಾ ವೈರಸ್ ನಿಶಬ್ದವಾಗಿ ಹೇಗೆಲ್ಲಾ ಹಬ್ಬುತ್ತಿದೆ ಎಂಬ ಚರ್ಚೆಯ ನಡುವೆ,ಕಲುಷಿತ ಕರೆನ್ಸಿ ನೋಟುಗಳ ಮೂಲಕವೂ ಹರಡುವ ಸಾಧ್ಯತೆ ಇದೆಯೆ ಎಂಬುದು ಮತ್ತೊಮ್ಮೆ ಚರ್ಚೆಗೆ ಬಂದಿದೆ. ಕರೆನ್ಸಿ ನೋಟುಗಳನ್ನು ಬಳಸದಂತೆ ತಡೆಯುವುದು ಆಗದ ಕೆಲಸ. ಹಾಗಾದರೆ ಸುರಕ್ಷಿತವಾಗಿ ಹೇಗೆ ಬಳಸಬಹುದು ಅದಕ್ಕೆ ಇರುವ ಪರಿಹಾರವಾಗಿ ಇರುವ ಮಾರ್ಗಗಳ ಕುರಿತು ಒಂದು ಅವಲೋಕನ.
    30 min
  • ...ಸಾಗಿದೆ ಒಂಟಿ ಪಯಣ ಮಸಣದ ಕಡೆಗೆ... ಮೆರವಣಿಗೆ ಇಲ್ಲ.. ಬ್ಯಾಂಡ್ ಇಲ್ಲ...ತಮಟೆ ಇಲ್ಲ.. ಹೂವಿಲ್ಲ... ಹಾರವಿಲ್ಲ...
    ಡಾ. ಅ. ಕಲಾಂ ಅವರು ಗೌರವಾನ್ವಿತರಾಗಿದ್ದರು ಮತ್ತು ಅವರ ಜೀವನದ ಸ್ಪೂರ್ತಿದಾಯಕ ತತ್ವಶಾಸ್ತ್ರಕ್ಕೆ ಹೆಸರುವಾಸಿಯಾಗಿದ್ದರು. ಅವರ ಕೆಲವು ಸ್ಪೂರ್ತಿದಾಯಕ ಉಲ್ಲೇಖಗಳು ಇಲ್ಲಿವೆ: 
    "ನಿಮ್ಮ ಮೊದಲ ವಿಜಯದ ನಂತರ ವಿಶ್ರಾಂತಿ ತೆಗೆದುಕೊಳ್ಳಬೇಡಿ ಏಕೆಂದರೆ ನೀವು ಎರಡನೆಯದಾಗಿ ವಿಫಲವಾದರೆ, ನಿಮ್ಮ ಮೊದಲ ಗೆಲುವು ಕೇವಲ ಅದೃಷ್ಟ ಎಂದು ಹೇಳಲು ಹೆಚ್ಚಿನ ತುಟಿಗಳು ಕಾಯುತ್ತಿವೆ"
    "ನಿಮ್ಮ ಧ್ಯೇಯದಲ್ಲಿ ಯಶಸ್ವಿಯಾಗಲು, ನಿಮ್ಮ ಗುರಿಯ ಬಗ್ಗೆ ನೀವು ಏಕ-ಮನಸ್ಸಿನ ಭಕ್ತಿ ಹೊಂದಿರಬೇಕು"
    "ನೀವು ವಿಫಲವಾದರೆ, ಎಂದಿಗೂ ಬಿಟ್ಟುಕೊಡಬೇಡಿ ಏಕೆಂದರೆ FAIL ಎಂದರೆ" ಕಲಿಕೆಯಲ್ಲಿ ಮೊದಲ ಪ್ರಯತ್ನ "
    "ನಮ್ಮೆಲ್ಲರಿಗೂ ಸಮಾನ ಪ್ರತಿಭೆ ಇಲ್ಲ. ಆದರೆ, ನಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಲು ನಮಗೆಲ್ಲರಿಗೂ ಸಮಾನ ಅವಕಾಶವಿದೆ"
    ಒಂದು ದೇಶವು ಭ್ರಷ್ಟಾಚಾರ ಮುಕ್ತವಾಗಿ ಮತ್ತು ಸುಂದರ ಮನಸ್ಸಿನ ರಾಷ್ಟ್ರವಾಗಬೇಕಾದರೆ, ಮೂರು ಪ್ರಮುಖ ಸಾಮಾಜಿಕ ಸದಸ್ಯರು ವ್ಯತ್ಯಾಸವನ್ನು ಹೊಂದಬಹುದು ಎಂದು ನಾನು ಬಲವಾಗಿ ಭಾವಿಸುತ್ತೇನೆ. ಅವರು ತಂದೆ, ತಾಯಿ ಮತ್ತು ಶಿಕ್ಷಕರು "
    "ಹೆಚ್ಚಿನ ಜನರು, ಅವರು ಕುಟುಂಬವನ್ನು ಬೆಳೆಸುತ್ತಾರೆ, ಜೀವನವನ್ನು ಸಂಪಾದಿಸುತ್ತಾರೆ, ಮತ್ತು ನಂತರ ಅವರು ಸಾಯುತ್ತಾರೆ. ಅವರನ್ನು ಎಂದಿಗೂ ಅನುಸರಿಸಬೇಡಿ.
    "ಕನಸು ಕಾಣುವುದು ಗುರಿಯನ್ನು ಸಾಧಿಸುವ ಮೊದಲ ಹೆಜ್ಜೆ"
    "ತೊಂದರೆಗಳು ಜೀವನದ ಒಂದು ಭಾಗವಾಗಿದೆ. ಅವರು ನಿಮ್ಮನ್ನು ತಯಾರಿಸಲು, ನಿಮ್ಮನ್ನು ಹೆಚ್ಚಿಸಲು ಮತ್ತು ನಿಮ್ಮನ್ನು ಅಭಿವೃದ್ಧಿಪಡಿಸಲು ಇದ್ದಾರೆ"
    "ನಿಮ್ಮನ್ನು ತಡೆಯುವ ಏಕೈಕ ವಿಷಯವೆಂದರೆ ನೀವು. ರೆಸ್ಟ್‌ಗಳು ಕೇವಲ ಮನ್ನಿಸುವಿಕೆ"
    "ನಾವು ಜಾಗತಿಕವಾಗಿ ನಮ್ಮ ಹೃದಯವನ್ನು ಬೆಚ್ಚಗಾಗಿಸಬೇಕು ಮತ್ತು ನಮ್ಮ ಆತ್ಮಗಳ ಹವಾಮಾನವನ್ನು ಬದಲಾಯಿಸಬೇಕು ಮತ್ತು ನಾವು ಪ್ರಕೃತಿಯಿಂದ ದೂರವಿರುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು"
    "ಸೌಂದರ್ಯವು ನಮ್ಮ ಬಾಹ್ಯ ನೋಟವನ್ನು ಅವಲಂಬಿಸಿಲ್ಲ. ಅದು ಒಳಗಿನಿಂದ ಹೊರಹೊಮ್ಮುತ್ತದೆ
    1 hr 4 min

About Dr Balakrishna Maddodi

From the publisher's feed

Hi