Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • *ಸರ್ವೆಜನಃ ಸುಖಿನೋಭವಂತು
    ಅನ್ನದ ಮೇಲೆ ಸೊಕ್ಕು ತೋರಿದವ ರೋಗಿಯಾಗುತ್ತಾನೆ.*
    *ಹೆಣ್ಣಿನ ಮೇಲೆ ಸೊಕ್ಕು ತೋರಿದವ ಬ್ರಹ್ಮಚಾರಿ ಯಾಗುತ್ತಾನೆ.*
    *ವಿದ್ಯೆಯ ಮೇಲೆ ಸೊಕ್ಕು ತೋರಿದವ ಅವಿವೇಕಿ ಯಾಗುತ್ತಾನೆ.*
    8 min
  • *ಸ್ಪೂರ್ತಿ ಕಿರಣ*
    ಜೀವನದಲ್ಲಿ ಪಾಲಿಗೆ ಬಂದದ್ದು ಪಂಚಾಮೃತ ಅಂದುಕೊಂಡು, ಇದ್ದುದರಲ್ಲೇ ತೃಪ್ತಿಪಟ್ಟುಕೊಂಡು, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಹೋದರೆ ದುಃಖ ಪಡುವ ಅಗತ್ಯವಿರುವುದಿಲ್ಲ.*
    *ಹೊಂದಾಣಿಕೆಯೇ ಜೀವನ...*
    🌸🌹🏵💐🌼🥀🌷
    ----------------~-------------- -
    *ಧರ್ಮೋ ರಕ್ಷತಿ ರಕ್ಷಿತಃ*
    8 min
  • ಶ್ರೀ ಗೀತಾ ಜಯಂತಿ*ಮಾರ್ಗಶಿರ ಮಾಸದ ಶುಕ್ಲ ಮತ್ತು ಏಕಾದಶಿ ಸೇರಿದ ದಿನ, ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬ
    ಅಂದು, ಪಾಂಡವರಿಗೂ ಕೌರವರಿಗೂ ಕುರುಕ್ಷೇತ್ರದಲ್ಲಿ ನಡೆದ ಮಹಾಭಾರತ ಯುದ್ಧದ ಆರಂಭದ ದಿನ.
    ಭಗವದ್ಗೀತೆಯು ನಮ್ಮ ಪಂಚಾಂಗಗಳ ಪ್ರಕಾರ ಕಲಿಯುಗಾದಿ ಲೆಕ್ಕದಲ್ಲಿ ೫೧೦೦ ವರ್ಷಗಳ ಹಿಂದೆ ನಡೆದ ಉಪದೇಶ. ಇತಿಹಾಸ ಸಂಶೋಧಕರು ಇದನ್ನು ೩೫೦೦ ವರ್ಷಗಳಷ್ಟು ಹಿಂದೆ ನಡೆದದ್ದೆಂದು ಸಾಧಿಸುತ್ತಾರೆ. ಭಗವದ್ಗೀತೆಯ ಬೋಧನೆಯ ಸನ್ನಿವೇಶವು ಬಹಳ ವಿಚಿತ್ರವಾಗಿದೆ. ಒಂದು ಕಡೆ ಪಾಂಡವರ ಏಳು ಅಕ್ಷೋಹಿಣಿ ಸೇನೆ; ಎದುರಿಗೆ ಕೌರವರ ಹನ್ನೊಂದು ಅಕ್ಷೋಹಿಣಿ ಸೇನೆ. ಇವೆರಡರ ಮಧ್ಯೆ ಅರ್ಜುನನ ರಥ; ಶ್ರೀಕೃಷ್ಣ ಸಾರಥಿ. ಈ ಘಟ್ಟದಲ್ಲಿ ಅರ್ಜುನನಿಗೆ ಬಂಧುಗಳನ್ನು ಕೊಲ್ಲಬೇಕಾದ ದುಗುಡ. ಈ ಬಂಧು ಬಾಂಧವರನ್ನು ಕೊಂದು ಪಡೆವ ರಾಜ್ಯವೇ ಬೇಡ; ಭಿಕ್ಷೆ ಬೇಡಿ ಜೀವಿಸುವುದೇ ಲೇಸು ಎಂಬ ಭಾವನೆ. ಸಂದಿಗ್ಧ ಸ್ಥಿತಿಯಲ್ಲಿದ್ದ ಅರ್ಜನ ಶ್ರೀ ಕೃಷ್ಣನನ್ನು ಕುರಿತು, ನಾನು ನಿನ್ನ ಶಿಷ್ಯ, ಯುದ್ಧ ಮಾಡುವುದೋ ಬಿಡುವುದೋ, ಧರ್ಮಸಂಕಟದಲ್ಲಿದ್ದೇನೆ, ಯಾವುದು ಶ್ರೇಯಸ್ಸು? ನಿಶ್ಚಿತವಾಗಿ ಹೇಳು, ಎಂದ. ಅದರಿಂದಲೇ ಶ್ರೀಕೃಷ್ಣನು ಅರ್ಜುನನಿಗೆ ಉಪದೇಶ ಮಾಡಿದ ಗೀತಾ ರೂಪದಲ್ಲಿರುವ ಸಂಭಾಷಣೆಗಳು ಭಗವದ್ಗೀತೆ ಎಂದು ಹೆಸರಾಗಿದೆ.
    ಭಗವದ್ಗೀತೆಯು ಹದಿನೆಂಟು ಅಧ್ಯಾಯಗಳಿಂದ ಕೂಡಿದ್ದರೂ, ಶ್ರೀಕೃಷ್ಣನ ಉಪದೇಶ, ಎರಡನೆಯ ಅಧ್ಯಾಯದ ಹನ್ನೊಂದನೇ ಶ್ಲೋಕದಿಂದ ಆರಂಭವಾಗಿದೆ. ಮುಂದೆ ಅದೇ ಅಧ್ಯಾಯದ ಐವತ್ಮೂರನೇ ಶ್ಲೋಕದವರೆಗೆ, ಎಂದರೆ ನಲವತ್ಮೂರು ಶ್ಲೋಕಗಳಲ್ಲಿ ಅರ್ಜುನನಿಗೆ ಹೇಳಬೇಕಾದುದನ್ನೆಲ್ಲಾ ಹೇಳಿಯಾಯಿತು. ಆದರೆ ಸಂದೇಹ ನಿವಾರಣೆಗಾಗಿ, ಅವನ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಉಳಿದ ಆರುನೂರು ಶ್ಲೋಕಗಳು ಬಂದಿವೆ. ಅರ್ಜುನನ ವಿಷಾದದ ಸಂದರ್ಭದ ಶ್ಲೋಕಗಳೂ ಸೇರಿ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಒಟ್ಟು ಏಳು ನೂರು ಶ್ಲೋಕಗಳಾಗುತ್ತವೆ.
    ಗೀತೆ ಚಿಕ್ಕದಾದರೂ ಹಿಂದೂ ಧರ್ಮದ ಮಹಾ ಗ್ರಂಥವೆಂದು ಹೆಸರು ಪಡೆದಿದೆ. ಅದನ್ನು ಉಪನಿಷತ್ತುಗಳ ಸಾರವೆಂದು ಹೇಳುತ್ತಾರೆ. ಅದರಲ್ಲಿ ಅನೇಕ ಬಗೆಯ ಯೋಗಗಳನ್ನು ಹೇಳಿದ್ದರೂ, ಅದರಲ್ಲಿ ಹೇಳಿದ ಕರ್ಮಯೋಗ, ಜ್ಞಾನಯೋಗಗಳೇ ಬಹಳ ಪ್ರಸಿದ್ಧವಾಗಿವೆ. ಅದನ್ನು ಅರ್ಥ ಮಾಡಿಕೊಳ್ಳುವುದು ಸಮುದ್ರದಿಂದ ಬೊಗಸೆ ನೀರನ್ನು ತಂದಂತೆ. ಅದನ್ನು ಓದಿದವರು, ಅನುಷ್ಠಾನ ಮಾಡುವವರು ಗೀತೆಯನ್ನು ಪೂರ್ಣ ಅರಿತಿದ್ದೇವೆಂದು ಹೇಳುವಂತಿಲ್ಲ. ಇದನ್ನು ಕೇಳಿದ ಮಾತ್ರದಿಂದ ಅರಿಯಲಾರರು, ಎಂಬುದು ಅದರಲ್ಲಿರುವ ಎಚ್ಚರಿಕೆ. ಅದರಲ್ಲಿರುವ ಎಲ್ಲಾ ಉಪದೇಶಗಳೂ ಎಲ್ಲರಿಗೂ ಅನ್ವಯಿಸಲಾರದೆಂದು ನನ್ನ ಭಾವನೆ. ಅವರವರ ಗುಣ ಸ್ವಭಾವ, ನಂಬುಗೆಗಳಿಗೆ ತಕ್ಕಂತೆ ಬೇಕಾದ ಯೋಗವನ್ನು ಆರಿಸಿಕೊಳ್ಳಬಹುದು. ಸದ್ಧರ್ಮದ ದುಡಿಮೆಯುಳ್ಳ ಸಜ್ಜನಿಕೆಯ ಪರೋಪಕಾರಿ ಗೃಹಸ್ಥ ಜೀವನ, ಕರ್ಮಯೋಗದ ಆದರ್ಶ ಜೇವನವಾಗಬಹುದೆಂದು ನನ್ನ ಭಾವನೆ. ಈ ಮಹಾನ್ ಗ್ರಂಥವನ್ನು ಪ್ರತಿಯೊಬ್ಬರೂ ಒಮ್ಮೆಯಾದರೂ ಓದಬೇಕು. ಕಾಲ ಧರ್ಮಕ್ಕನುಸರಿಸಿ ತಮಗೆ ಬೇಕಾದದ್ದನ್ನು ಆಯ್ದುಕೊಳ್ಳಬಹುದು. ಅದರಲ್ಲಿರುವ ಸರ್ವಕಾಲಿಕ ಸತ್ಯಗಳು ಮಾನವರೆಲ್ಲರಿಗೂ ಅನ್ವಯವಾಗುವಂತಿವೆ. ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ *‌*ಭಗವದ್ಗೀತೆಯ ಕಿರು ಪರಿಚಯ..*
    ಪ್ರಶ್ನೋತ್ತರಮಾಲಿಕೆ..
    * ಭಗವದ್ಗೀತೆಯನ್ನು ಯಾರು ಯಾರಿಗೆ ಬೋಧಿಸಿದರು..?
    ಉತ್ತರ : ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ.
    * ಯಾವಾಗ ಬೋಧಿಸಿದ..?
    ಉತ್ತರ : ಇಂದಿನಿಂದ ಸುಮಾರು ೫ ಸಾವಿರ ವರ್ಷಗಳ
    ಹಿಂದೆ.
    * ಯಾವ ದಿನ ಬೋಧಿಸಿದ..?
    ಉತ್ತರ : ರವಿವಾರ.
    * ಯಾವ ತಿಥಿಯಲ್ಲಿ..?
    ಉತ್ತರ : ಏಕಾದಶಿಯಂದು.
    * ಎಲ್ಲಿ ಬೋಧಿಸಿದ..?
    ಉತ್ತರ : ಕುರುಕ್ಷೇತ್ರದ ರಣಭೂಮಿಯಲ್ಲಿ.
    * ಎಷ್ಟು ಸಮಯ ಬೋಧಿಸಿದ..?
    ಉತ್ತರ : ೪೫ ನಿಮಿಷ.
    * ಅರ್ಜುನನಿಗೇಕೆ ಗೀತೆಯನ್ನು ಬೋಧಿಸಿದ..?
    ಉತ್ತರ : ಕ್ಷತ್ರಿಯನಿಗೆ
    ಕರ್ತವ್ಯವಾದದ್ದು ಯುದ್ಧ..
    ತನ್ನ ಕರ್ತವ್ಯದಿಂದ ಅರ್ಜುನ
    ವಿಮುಖನಾಗಲು ಬಯಸುತ್ತಾನೆ..
    ಯುದ್ಧಮಾಡದಿರಲು ನಿಶ್ಚಯಿಸುತ್ತಾನೆ..
    ಆತನಿಗೆ ತನ್ನ ಕರ್ತವ್ಯಗಳನ್ನು ಮನದಟ್ಟು
    ಮಾಡಲು ಹಾಗೂ ಭವಿಷ್ಯದ
    ಮಾನವಸಂತತಿಗೆ ಧರ್ಮಜ್ಞಾನವನ್ನು
    ನೀಡಲು ಕೃಷ್ಣ ಗೀತೆಯನ್ನು ಬೋಧಿಸಿದ.
    * ಭಗವದ್ಗೀತೆಯಲ್ಲಿ ಎಷ್ಟು ಅಧ್ಯಾಯಗಳಿವೆ..?
    ಉತ್ತರ : ಹದಿನೆಂಟು.
    * ಎಷ್ಟು ಶ್ಲೋಕಗಳಿವೆ..?
    ಉತ್ತರ : ೭೦೦ ಶ್ಲೋಕಗಳು.
    * ಗೀತೆಯಲ್ಲಿರುವ ವಿಷಯಗಳಾವವು..?
    ಉತ್ತರ : ಜ್ಞಾನ - ಭಕ್ತಿ - ಕರ್ಮ - ಯೋಗ
    ಮಾರ್ಗಗಳ ವಿಸ್ತೃತವಾದ ವ್ಯಾಖ್ಯಾನ..ಈ
    ಮಾರ್ಗಗಳಲ್ಲಿ
    ನಡೆಯುವವರು ಖಂಡಿತವಾಗಲೂ ಪರಮಸ್ಥಾನವನ್ನು ಪಡೆಯುತ್ತಾರೆಂದು
    ಹೇಳಲಾಗಿದೆ..
    * ಅರ್ಜುನನನ್ನು ಬಿಟ್ಟರೆ
    ಗೀತೆಯನ್ನು ಮತ್ತ್ಯಾರು ಕೇಳಿದ್ದಾರೆ..?
    ಉತ್ತರ : ಧೃತರಾಷ್ಟ್ರ ಹಾಗೂ ಸಂಜಯ.
    * ಅರ್ಜುನನಿಗಿಂತಲೂ ಮೊದಲು ಗೀತೆಯ ಪವಿತ್ರ
    ಜ್ಞಾನ ಯಾರಿಗೆ ತಿಳಿದಿತ್ತು...?
    ಉತ್ತರ : ಭಗವಾನ್ ಸೂರ್ಯದೇವನಿಗೆ.
    * ಭಗವದ್ಗೀತೆಯನ್ನು ಯಾವ ಧರ್ಮಗ್ರಂಥದಲ್ಲಿ
    ಸೇರಿಸಲಾಗಿದೆ..?
    ಉತ್ತರ : ಉಪನಿಷತ್ತಿನಲ್ಲಿ.
    * ಗೀತೆ ಯಾವ ಗ್ರಂಥದ ಭಾಗವಾಗಿದೆ..?
    ಉತ್ತರ : ಮಹಾಭಾರತದ ಭೀಷ್ಮಪರ್ವದ
    ಒಂದು ಭಾಗವಾಗಿದೆ.
    * ಭಗವದ್ಗೀತೆಯ ಇನ್ನೊಂದು ಹೆಸರು..?
    ಉತ್ತರ : ಗೀತೋಪನಿಷತ್.
    * ಗೀತೆಯ ಸಾರವೇನು..?
    ಉತ್ತರ : ಕರ್ಮಫಲಗಳನ್ನು ಬಿಟ್ಟು , ಭಗವಂತನಲ್ಲಿ
    ಶರಣಾಗತಿಯನ್ನು ಹೊಂದುವುದು..
    * ಭಗವದ್ಗೀತೆಯಲ್ಲಿ
    ಯಾರು ಎಷ್ಟು ಶ್ಲೋಕಗಳನ್ನು ಹೇಳಿದ್ದಾರೆ..?
    ಉತ್ತರ : ಶ್ರೀಕೃಷ್ಣ - ೫೭೪.
    ಅರ್ಜುನ - ೮೫
    ಧೃತರಾಷ್ಟ್ರ - ೦೧
    ಸಂಜಯ - ೪೦
    ಶ್ರೀಕೃಷ್ಣಾರ್ಪಣಮಸ್ತು
    8 min
  • ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು  ಕುಂಕುಮವನ್ನು ಹಚ್ಚಿಕೊಳ್ಳುವುದರ ಮಹತ್ವ
    ೧. ಕುಂಕುಮವನ್ನು ಹಚ್ಚಿಕೊಳ್ಳುವಾಗ ಭ್ರೂಮಧ್ಯ ಮತ್ತು ಆಜ್ಞಾಚಕ್ರದ ಮೇಲೆ ಒತ್ತಡವನ್ನು ಹಾಕಲಾಗುತ್ತದೆ, ಇದರಿಂದ ಅಲ್ಲಿನ ಬಿಂದುಗಳ ಮೇಲೆ ಒತ್ತಡವು ಬಂದು (ಬಿಂದು ಒತ್ತಡ ಪದ್ಧತಿಯಿಂದ) ಮುಖದ ಮೇಲಿನ ಸ್ನಾಯುಗಳಿಗೆ ರಕ್ತದ ಪೂರೈಕೆಯು ಒಳ್ಳೆಯ ರೀತಿಯಿಂದ ಆಗುತ್ತದೆ.
    ೨. ಹಣೆಯ ಮೇಲಿನ ಸ್ನಾಯುಗಳ ಒತ್ತಡವು ಕಡಿಮೆಯಾಗಿ ಮುಖವು ಪ್ರಕಾಶಮಾನವಾಗಿ ಕಾಣಿಸುತ್ತದೆ.
    ೩. ಕೆಟ್ಟ ಶಕ್ತಿಗಳಿಗೆ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳಲು ಕುಂಕುಮದಿಂದ ಅಡಚಣೆಯುಂಟಾಗುತ್ತದೆ.
    – ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೬.೧೧.೨೦೦೭, ಮಧ್ಯಾಹ್ನ ೨.೩೦)
    ೪. ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾಗಿ ಅವರಲ್ಲಿ ಶಕ್ತಿತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ: ‘ಕುಂಕುಮದಲ್ಲಿ ತಾರಕ ಮತ್ತು ಮಾರಕ ಶಕ್ತಿಯನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯಿದೆ. ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾದರೆ ಆ ಶಕ್ತಿಯಲ್ಲಿ ಕಾರ್ಯಕ್ಕನುಸಾರ ದೇವಿಯ ತಾರಕ ಅಥವಾ ಮಾರಕ ತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ. ದೇವಿಯ ಕೃಪಾಶೀರ್ವಾದವು ಸಿಗಬೇಕೆಂದು ಸ್ತ್ರೀಯರು ಭ್ರೂಮಧ್ಯದಲ್ಲಿ ಕುಂಕುಮವನ್ನು ಹಚ್ಚಿಕೊಂಡಾಗ ಅಥವಾ ಇತರ ಸ್ತ್ರೀಯರು ಹಚ್ಚಿದಾಗ ಅವರಲ್ಲಿನ ತಾರಕ ಶಕ್ತಿತತ್ತ್ವದ ಸ್ಪಂದನಗಳು ಜಾಗೃತವಾಗುತ್ತವೆ ಮತ್ತು ವಾತಾವರಣದಲ್ಲಿನ ಶಕ್ತಿತತ್ತ್ವದ ಪವಿತ್ರಕಗಳು ಆ ಸ್ತ್ರೀಯರತ್ತ ಆಕರ್ಷಿತವಾಗುತ್ತವೆ.’
    6 min
  • ತಂಗಳನ್ನ, ಜಗತ್ತಿನ ಉತ್ಕೃಷ್ಟ ಉಪಹಾರ ಅಂದ್ರೆ ನಂಬ್ತಿರಾ?* 🍲🍲🍲🍲🍲🍲🍲🍲🍲🍲🍲
    ಕನ್ನಡದಲ್ಲಿ ತಂಗಳನ್ನ, ಇಂಗ್ಲೀಷಿನಲ್ಲಿ ಸೋಕ್ಡ್ ರೈಸ್ ಅಂತ ಕರೆದರೆ, ತುಳುವಿನಲ್ಲಿ ತ೦ಞನವೆಂದೂ, ಮಲಯಾಳದಲ್ಲಿ ಪಝಕಂಜಿ , ತಮಿಳಿನಲ್ಲಿ ಪಝಯ ಸಾಧಮ್, ತೆಲುಗಿನಲ್ಲಿ ಸದ್ಧಿ ಅನ್ನಮು ಎಂದೂ ಕರೆಯುತ್ತಾರೆ. ಇದು ಕಡುಬಡವರ ಆಹಾರ. ಪಾಪರುಗಳ ಊಟ. ಈ ದಿನದ ಬಿಸಿ ಬಿಸಿಯಾದ ಹೈ ಕ್ಯಾಲೋರಿಯ ಬ್ಯಾಲೆನ್ಸ್ಡ್ಆಹಾರವೆಲ್ಲಿ ? ಈ ತಂಗಳನ್ನವೆಲ್ಲಿ?
    *ಆದರೆ ಕಾಲಚಕ್ರ ತಿರುಗಿದೆ. ಅಮೇರಿಕನ್ ನ್ಯೂಟ್ರಿಷನ್ ಅಸೋಸಿಯೇಷನ್ ಜಗತ್ತಿನ ವಿವಿಧ ಪ್ರದೇಶಗಳ, ವಿವಿಧ ದೇಶಗಳ, ವಿವಿಧ ಜನಾಂಗಗಳ ಆಹಾರ ಪದ್ಧತಿಯನ್ನು ಅಧ್ಯಯನ ಮಾಡಿ ನಮ್ಮತ೦ಗಳನ್ನವನ್ನು ಅತ್ಯಂತ ‘ಬೆಸ್ಟ್ ಬ್ರೇಕ್ ಫಾಸ್ಟ್ ‘ ಎಂದು ಸರ್ಟಿಫೈ ಮಾಡಿದೆ !ಹಿಂದೆಲ್ಲಾ ಹಳ್ಳಿಯ ಜನರು ತಾವು ಕೆಲಸಕ್ಕೆ ಹೋಗುವ ಮೊದಲು ರಾತ್ರಿ ಬಾಕಿ ಉಳಿದ ನೀರಿನಲ್ಲಿ ನೆನೆಸಿಟ್ಟ ಅನ್ನವನ್ನು 4 ಕಲ್ಲು ಉಪ್ಪು, ಒಂದು ಹಸಿಮೆಣಸು ಅದಕ್ಕೆ ನುಗ್ಗಿಸಿ, ಇರಿದು ಒಂದು ಕಪ್ಪು ಕೆನೆಮೊಸರು ಹಾಕಿ ಕಲಸಿಕೊಂಡು ತಿಂದು ಕೆಲಸಕ್ಕೆ ಹೋಗುತ್ತಿದ್ದರು.*
    ಹಾಗೆ ತಂಗಳನ್ನ ಜೊತೆ ಹಾಕಿ ತಿನ್ನಲು ಉಪ್ಪು-ಹಸಿಮೆಣಸುವೇ ಆಗಬೇಕಾಗಿಲ್ಲ. ಒಂದು ತುಂಡು ಉಪ್ಪಿನಕಾಯಿ, ಒಂದು ತುಂಡು ಸುಟ್ಟ ಕುರ್ಚಿ ಮೀನು, ಕೆಂಡದಲ್ಲಿ ಬಿಸುಟು ಸುಟ್ಟ ಒಣಮೆಣಸು, ತೆಂಗಿನಕಾಯಿ ಚಟ್ನಿ- ಯಾವುದಾದರೂ ಸರಿ ಹೊಂದಿಕೊಳ್ಳುತ್ತದೆ. ಹಾಗೆ ತಿಂದು ಗದ್ದೆಯ ಕೆಲಸಕ್ಕೆ ಹೊರಳಿದರೆ ಮಧ್ಯಾಹ್ನ 2 ಗಂಟೆಯವರೆಗೂ unshakable !
    ಇವತ್ತು ಭಾರತವೂ ಸೇರಿ ದಕ್ಷಿಣ-ಪೂರ್ವ ಏಷ್ಯಾದ ಹಳ್ಳಿ ಜನರ ಒಂದು ಆಹಾರ ಪ್ರಕಾರ ಇದಾಗಿದೆ. ಭಾರತದಲ್ಲಿ ದಕ್ಷಿಣ ಭಾರತೀಯರಾದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರದಲ್ಲಿ ಬಳಕೆಯಲ್ಲಿರುವ ಆಹಾರ ಪದಾರ್ಥದ ಮಹತ್ವ ಒಂದೆರಡಲ್ಲ. ನೀರಿನಲ್ಲಿ ನೆನೆಸಿ ಇಡುವುದರಿಂದ ಅನ್ನದಲ್ಲಿರುವ ಲ್ಯಾಕ್ಟಿಕ್ ಆಸಿಡ್, ನ್ಯೂಟ್ರಿಷನ್ ಆಗಿ ದೇಹಕ್ಕೆಸಿಗಲಾರದ ಸ್ಥಿತಿಯಿಂದ, ಮನುಷ್ಯ ದೇಹ ಹೀರಿಕೊಳ್ಳಬಹುದಾದ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳನ್ನು ಅಂಶಗಳನ್ನಾಗಿ ಬದಲಾಯಿಸುತ್ತದೆ. ಹನ್ನೆರಡು ಗಂಟೆ ನೆನೆಸಿಟ್ಟ 100 ಗ್ರಾಂ ಕುಚ್ಚುಲಕ್ಕಿಯಲ್ಲಿ 3.4 ಮಿಲಿ ಗ್ರಾಂ ಇದ್ದ ಕಬ್ಬಿಣದ ಅಂಶವು 73.91 ಮಿಲಿ ಗ್ರಾಂ ವರೆಗೆ, ಅಂದರೆ, ಕಬ್ಬಿಣದ ಅಂಶವು ಅಂದರೆ 2073 % ನಷ್ಟು ವೃದ್ಧಿಗೊಳ್ಳುತ್ತದೆ !
    *ಹೀಗೆ ತಂಗಳನ್ನ ತಿನ್ನುವುದರಿಂದ ಹೊಟ್ಟೆಯಲ್ಲಿನ ಅತಿಯಾದ ಉಷ್ಣದ ಅಂಶ ಕಡಿಮೆಯಾಗಿ ದೇಹವನ್ನು ತಂಪಾಗಿಸುತ್ತದೆ. ಹೊಟ್ಟೆಯಲ್ಲಿರುವ ಬೇಡದ ಬ್ಯಾಕ್ಟೀರಿಯಾಗಳನ್ನು ತೊಲಗಿಸಿ ದೇಹಕ್ಕೆ ಅಗತ್ಯವಿರುವ ಒಳ್ಳೆಯ ಬ್ಯಾಕ್ಟೀರಿಯಾವನ್ನು ಟ್ರಿಲಿಯನ್ ಗಟ್ಟಲೆ ಉತ್ಪತ್ತಿಮಾಡುತ್ತದೆ.*
    ಈ ಬ್ಯಾಕ್ಟೀರಿಯಾಗಳು ನಮ್ಮ ದೈನಂದಿನ ಜೀರ್ಣಕ್ರಿಯೆಯನ್ನು ಚುರುಕುಗೊಳಿಸಲು ಸಹಾಯ ಮಾಡುತ್ತವೆ ಮತ್ತು ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.ಅಲ್ಲದೆ ತಂಗಳನ್ನದ ಬಳಕೆಯಿಂದ ದೇಹದ ಆಂತರಿಕ ಅಂಗಗಳ ಸಮರ್ಪಕ ಕಾರ್ಯ ನಿರ್ವಹಣೆಗೆ ಪ್ರೋತ್ಸಾಹಿಸಿ ಆ ಅಂಗಗಳನ್ನು ಕಾಪಾಡುತ್ತದೆ.ತಂಗಳನ್ನವು ದೇಹವನ್ನು ತಂಪಾಗಿಡುತ್ತದೆ.
    ದೇಹ ಹಗುರವಾಗಿ ಫೀಲ್ ಆಗುತ್ತದೆ ಮತ್ತು ಮನಸ್ಸು ಹಗುರವಾಗುತ್ತದೆ. ಹೊಟ್ಟೆಯ ಸಮಸ್ಯೆಗಳು ಕರಗಿಹೋಗುತ್ತವೆ. ಮಲಬದ್ಧತೆ ನಿವಾರಣೆಯಾಗುತ್ತದೆ. ನಮ್ಮನ್ನು ದಿನವಿಡೀ ಉಲ್ಲಾಸಮಯವಾಗಿಡುತ್ತದೆ. ತಂಗಳನ್ನ ಉಂಡ ಮೇಲೆ ಟೀ-ಕಾಫಿ ಮುಂತಾದ ಪಾನೀಯಗಳಿಗೆ ದೇಹದಿಂದ ಹೆಚ್ಚಿನ ಬೇಡಿಕೆ ಮೂಡುವುದಿಲ್ಲ. ಆಶ್ಚರ್ಯದ ಸಂಗತಿಯೆಂದರೆ ಬಿ 6 ಮತ್ತು ಬಿ 12- ಈ ಎರಡು ವಿಟಮಿನ್ ಗಳು ಹೇರಳವಾಗಿ ತಂಗಳನ್ನದಲ್ಲಿ ಸಿಗುತ್ತದೆ.
    ಸಾಧಾರಣವಾಗಿ ಇವು ಶಾಖಾಹಾರಿ ಆಹಾರದಲ್ಲಿ ಸಿಗುವುದಿಲ್ಲ.ಇವೆಲ್ಲ ಅಲ್ಲದೆ, ಇದರಲ್ಲಿರುವ ಮೆಗ್ನೀಷಿಯಂ ಖನಿಜ ಪದಾರ್ಥಗಳು ದೇಹದ ಎಲುಬುಗಳನ್ನು ಗಟ್ಟಿಗೊಳಿಸಿ ದೇಹ ಸವಕಳಿಯ ರೋಗಗಳಾದ ಅರ್ಥರೈಟಿಸ್ ಮತ್ತು ಕ್ಯಾನ್ಸೆರ್ ಅನ್ನು ತಡೆಯುವಲ್ಲಿ ಸಹಕಾರಿ ಯಾಗುತ್ತದೆ. ದೇಹದಲ್ಲಿನ ಆಂತರಿಕ ಬೆಳವಣಿಗೆಗೆ ಮಾತ್ರವಲ್ಲ, ಇದು ಬಾಹ್ಯಸೌಂದರ್ಯವನ್ನು ಕೂಡ ವೃದ್ಧಿಸಬಲ್ಲದು. ಚರ್ಮವು ಕಾಂತಿಯುಕ್ತವಾಗುತ್ತದೆ ಮತ್ತು ದೇಹಕ್ಕೆ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ.
    ಒಟ್ಟಾರೆಯಾಗಿ ಚಾಲ್ತಿಯಲ್ಲಿರುವ ಎಲ್ಲ ಹೈಕ್ಯಾಲೊರಿ ಆಹಾರದ ಎದುರು ನಮ್ಮ ಹಿರಿಯರು ಸಾವಿರಾರು ವರ್ಷಗಳಿಂದ ಮಾಡಿಕೊಂಡು ಬಂದ ತಂಗಳನ್ನವು ಎಲ್ಲ ರೀತಿಯಿಂದಲೂ ಒಂದು ಸರಳ ಮತ್ತು ಪರ್ಫೆಕ್ಟ್ ಮುಂಜಾನೆಯ ಆಹಾರವಾಗಿದೆ.ಪೌಷ್ಟಿಕತೆ ಆಹಾರದ ಒಂದು ಗುಣ. ಪೌಷ್ಟಿಕತೆ ಮಾತ್ರ ಮುಖ್ಯವಲ್ಲ. ಪೌಷ್ಟಿಕತನವಲ್ಲದೆ, ಆಯುರ್ವೇದದಲ್ಲಿ ಹೇಳಿದ ಮೂರು ತರಹದ ದೋಷಗಳಾದ ವಾತ, ಪಿತ್ತ ಮತ್ತು ಕಫ ನಿವಾರಕವಾಗಿಯೂ ಆಹಾರವಿರಬೇಕು. ಆ ಎಲ್ಲ ಅರ್ಹತೆ ನಮ್ಮ ತಂಗಳನ್ನಕ್ಕೆ ಇದೆ.📰hosakannada
    (ಮಾಹಿತಿ ಸಂಗ್ರಹ)
    7 min
  • ಒಳ್ಳೆಯ ದಿನಗಳಲ್ಲಿ ದುರಹಂಕಾರ ಮಾಡಬೇಡಿ ಮತ್ತು ಕೆಟ್ಟ ಸಮಯಗಳಲ್ಲಿ ತಾಳ್ಮೆಯಿಂದಿರಿ
    *ಕೃಷ್ಣ ಮತ್ತು ಸುದಾಮ ಒಂದು ದಿನ ವನ ಸಂಚಾರಕ್ಕೆ ಹೋಗಿ ದಾರಿ ತಪ್ಪಿಸಿಕೊಂಡರು. *
    ಹಸಿವು-ಬಾಯಾರಿಕೆಯಿಂದ ಒಂದು ಮರದ ಕೆಳಗೆ ಬಂದು ನಿಂತರು. ಆ ಹಣ್ಣಿನ ಮರದಲ್ಲಿ ಒಂದು ಹಣ್ಣು ನೇತಾಡುತ್ತಿತ್ತು.
    *ಕೃಷ್ಣ ಗಿಡ ಹತ್ತಿ ಕೈಯಿಂದ ಹಣ್ಣುನ್ನು ಹರಿದನು. ಕೃಷ್ಣನು ಆ ಹಣ್ಣನ್ನು ಆರು ತುಂಡುಗಳನ್ನು ಮಾಡಿದನು ಮತ್ತು ಅವನ ಅಭ್ಯಾಸದ ಪ್ರಕಾರ ಮೊದಲ ತುಂಡನ್ನು ಸುದಾಮನಿಗೆ ಕೊಟ್ಟನು. ಸುದಾಮ ಹಣ್ಣು ತಿಂದು, *ತುಂಬಾ ಸ್ವಾದಿಷ್ಟಕರ! ಇಂತಹ ಹಣ್ಣನ್ನು ಎಂದಿಗೂ ಸೇವಿಸಿಲ್ಲ. ದಯವಿಟ್ಟು ಇನ್ನೂ ಒಂದು ತುಣುಕು ನೀಡು ಎಂದನು. *
    ಎರಡನೇ ತುಣುಕು ಕೂಡ ಸುದಾಮನಿಗೆ ಸಿಕ್ಕಿತು. ಹೀಗೆ ಸುದಾಮ ಕೃಷ್ಣನನ್ನು ಕೇಳುತ್ತ ಹೋದ, ಕೃಷ್ಣ ಕೊಡುತ್ತ ಹೋದ.
    ಅದೇ ರೀತಿ, ಸುದಾಮ ಐದು ತುಣುಕುಗಳನ್ನು ಕೇಳುವ ಮೂಲಕ ತಿಂದನು. ಸುದಾಮ ಕೊನೆಯ ತುಣುಕು ಕೇಳಿದಾಗ, ಕೃಷ್ಣ *ಇದು ಮಿತಿ ಮೀರಿದೆ. ನಿನ್ನ ಹಾಗೆ ನಾನು ಕೂಡ ಹಸಿದಿದ್ದೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ, ಆದರೆ ನೀನು ನನ್ನನ್ನು ಪ್ರೀತಿಸುವುದಿಲ್ಲ* ಎಂದು ಕೋಪದಿಂದ ಕೃಷ್ಣನು ಹಣ್ಣಿನ ತುಂಡನ್ನು ಬಾಯಿಗೆ ಹಾಕಿದನು. ಹಣ್ಣು ಅತೀ ಕಹಿಯಾದ ಕಾರಣ ಕೃಷ್ಣನು ಬಾಯಿಯಲ್ಲಿದ್ದ ಹಣ್ಣನ್ನು ತಕ್ಷಣ ಉಗುಳಿದನು.
    ಕೃಷ್ಣ, *ನಿನಗೆ ಹುಚ್ಚು ಇಲ್ಲ, ಇಂತಹ ಕಹಿ ಹಣ್ಣುಗಳನ್ನು ನೀನು ಹೇಗೆ ತಿಂದೀ?* ಅದಕ್ಕೆ ಸುದಾಮನ ಉತ್ತರ
    *ಕೃಷ್ಣಾ, ನಿನ್ನ ಅಮೃತ ಹಸ್ತದಿಂದ ಸಾವಿರ ಸಲ ತುಂಬಾ ಸಿಹಿ ಹಣ್ಣುಗಳನ್ನು ನಾನು ತಿಂದಿದ್ದೇನೆ. ಈಗ ಒಂದು ಸಲ ಕಹಿ ಹಣ್ಣನ್ನು ನೀಡಿದಾಕ್ಷಣ ನಾನು ನಿನ್ನನ್ನು ದೂರುವುದು ನ್ಯಾಯವಾ? ಅದಕ್ಕೆ ನಿನಗೆ ಕಹಿ ಅನುಭವ ಆಗಬಾರದೆಂದು ಎಲ್ಲಾ ತುಣುಕುಗಳನ್ನು ನಾನೇ ತಿನ್ನಲು ಬಯಸಿದೆ.*
    ಸ್ನೇಹಿತರೇ,
    *ಎಲ್ಲಿ ಸ್ನೇಹವಿದೆ ಅಲ್ಲಿ ಯಾವುದೇ ಸಂದೇಹವಿಲ್ಲ, ಒಂದು ಅಂತಹ ಸಂಬಂಧವನ್ನು ಗಟ್ಟಿಗೊಳಿಸಿ. ಜೀವನದ ಯಾವುದೇ ಹಂತದಲ್ಲಿ ಮಿತ್ರನಿಂದ ಕಹಿ ಅನುಭವ ಆದರೆ ಆ ಕ್ಷಣವನ್ನು ಮರೆತು ಮುಂದೆ ಸಾಗಿ..🙏*
    5 min
  • ರಾಧಾ-ಕೃಷ್ಣ : ವಾಸ್ತವಿಕತೆ ಏನು
    
     Menu
    
    Home > ಧರ್ಮಶಾಸ್ತ್ರ > ದೇವತೆಗಳು > ಶ್ರೀಕೃಷ್ಣ > ರಾಧಾ-ಕೃಷ್ಣ : ವಾಸ್ತವಿಕತೆ ಏನು?
    ರಾಧಾ-ಕೃಷ್ಣ : ವಾಸ್ತವಿಕತೆ ಏನು?
    September 9, 2019
    Share this on :
    TwitterFacebookWhatsapp
    ಶ್ರೀ. ಅನಂತ ಆಠವಲೆ
    ಉತ್ತರ ಭಾರತದಲ್ಲಿನ ಅನೇಕ ಸಂತರು-ಕವಿಗಳು ಭಗವಾನ ಶ್ರೀಕೃಷ್ಣ ಮತ್ತು ರಾಧೆ ಇವರ ಬಗ್ಗೆ ಶೃಂಗಾರರಸಪೂರ್ಣ ಕಾವ್ಯರಚನೆ ಮಾಡಿದ್ದಾರೆ. ಅನಂತರ ಹಿಂದಿ ಮತ್ತು ಇತರ ಭಾಷೆಯಲ್ಲಿನ ಕವಿಗಳೂ ಇದೇ ರೀತಿ ಅನೇಕ ಗೀತೆಗಳನ್ನು ರಚಿಸಿದ್ದಾರೆ. ಅವರ ಲಾವಣ್ಯ, ಅವರ ಶೃಂಗಾರ, ಅವರೊಳಗಿನ ಸಂವಾದ, ಅವರ ಭಾವನೆ ಈ ಎಲ್ಲವನ್ನು ರಸಭರಿತವಾಗಿ ವರ್ಣಿಸುವ ಅನೇಕ ಕಾವ್ಯಗಳಿವೆ. ಇತ್ತೀಚಿನ ಕೆಲವು ಕಥಾವಾಚಕರು, ಮಠಾಧೀಶರು, ಸಂತರು, ಪೀಠಾಧೀಶರು ಮುಂತಾದವರು ಶ್ರೀಕೃಷ್ಣ ಮತ್ತು ರಾಧೆ ಇವರ ಕಥೆಯನ್ನು ಬಣ್ಣಿಸಿ ಹೇಳುತ್ತಾರೆ. ಈ ರೀತಿಯ ಕಾವ್ಯರಚನೆ, ಲೇಖನ, ಚಲನಚಿತ್ರದ ದೃಶ್ಯಗಳು, ದೂರದರ್ಶನದ ಧಾರಾವಾಹಿಯಲ್ಲಿನ ದೃಶ್ಯಗಳು ಇಷ್ಟೊಂದು ಪ್ರಮಾಣದಲ್ಲಿ ಬೆಳೆದಿವೆಯೆಂದರೆ, ಕೆಲವು ಜನರ ಮನಸ್ಸಿನಲ್ಲಿ ಶ್ರೀಕೃಷ್ಣನ ಪ್ರತಿಮೆಯು ಒಂದು ಪ್ರೇಮವೀರನಂತೆ ಆಗಿದೆ.
    ಈ ಸಂತಕವಿಗಳು, ಮಹಾತ್ಮರು ಮತ್ತು ಜನ ಸಾಮಾನ್ಯರು ಶ್ರೀಕೃಷ್ಣನ ಚರಿತ್ರೆಯಿಂದ ಏನು ಕಲಿಯಬೇಕು ಎಂಬುದು ಅವರ ಇಷ್ಟದಂತೆ ಅದನ್ನು ಆಯ್ಕೆ ಮಾಡಲಾಗಿದೆ. ಶ್ರೀಕೃಷ್ಣನ ವ್ಯಕ್ತಿತ್ವ ಕೇವಲ ಅಷ್ಟಾಂಗಗಳಲ್ಲದೇ, ಅದಕ್ಕೆ ಅನಂತ ಅಂಗಗಳಿವೆ. ವೈಭವ, ಶಕ್ತಿ, ಯಶಸ್ಸು, ಸಂಪತ್ತು, ಜ್ಞಾನ, ವೈರಾಗ್ಯ, ಹೃದಯಂಗಮ ಕೊಳಲುವಾದನ, ಲಾವಣ್ಯ, ಚಾತುರ್ಯ, ಭಗಿನಿ ಪ್ರೇಮ, ಭ್ರಾತೃ ಪ್ರೇಮ, ಮಿತ್ರ ಪ್ರೇಮ, ಯುದ್ಧ ಕೌಶಲ್ಯ, ಸರ್ವಸಿದ್ಧಿ ಸಂಪನ್ನತೆ – ಅವನಲ್ಲಿ ಏನು ಇಲ್ಲ ? ಎಲ್ಲವೂ ಇದೆ! ಎಲ್ಲದರ ಪರಾಕಾಷ್ಠೆಯೇ ಆಗಿದೆ; ಆದರೆ ಅವನು ಹೀಗಿದ್ದರೂ ಎಲ್ಲರಿಂದ ಸಂಪೂರ್ಣವಾಗಿ ಅಲಿಪ್ತನಿದ್ದನು. ಭಗವಾನ ಶ್ರೀಕೃಷ್ಣನ ಮಾಯಾತೀತ, ನಿರ್ಲಿಪ್ತ ಸ್ವರೂಪದ ಜ್ಞಾನವು ಜನಸಾಮಾನ್ಯರಿಗೆ ಇಲ್ಲದಿರುವುದರಿಂದ ಅವರು ಇಂತಹ ಭೌತಿಕ, ಸ್ತ್ರೀ-ಪುರುಷರ ವ್ಯತ್ಯಾಸದ ಆಧಾರದಿಂದ ಶೃಂಗಾರರಸಪೂರ್ಣ ಕಥೆಗಳಲ್ಲಿಯೇ ಮೈಮರೆಯುತ್ತಾರೆ. ಶ್ರೀಕೃಷ್ಣನ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ.
    10 min
  • ಇಹಲೋಕ ತ್ಯಜಿಸಿದ ಅಪೂರ್ವ ವ್ಯಕ್ತಿತ್ವದ ಆರ್.ಎನ್.ಶೆಟ್ಟಿ*
    " Legacy is not leaving something for people. It’s leaving something in people." —Peter Strople
    Renowned philanthropist, entrepreneur, Contractor, Hotelier, educationist
    RN Shetty passed away during the early hours today. He was 92 year old. The Bunt community and the world have lost a gem of a person whose legacy is irreplaceable. We wish his family and loved ones the strength to get through this tough time. Om shanthi🙏🏻🙏🏻🙏🏻.
    7 min
  • ಬದುಕಿನಲ್ಲಿ ಎಲ್ಲವೂ ಹಿತ-ಮಿತವಾಗಿರಲಿ...!!! 💐
    💐ಮಾನವರಾಗಿ ಜನಿಸಿದ ನಾವು ಈ ಲೌಕಿಕ ಜಗತ್ತಿನೊಂದಿಗೆ, ಸೂಕ್ಷ್ಮವಾದ , ಕನಿಷ್ಠ ಮೋಹದ ಬದುಕನ್ನು
    ಆಯ್ಕೆಮಾಡಿಕೊಳ್ಳಬೇಕು...!!!
    ಅತಿಯಾದ ಗಟ್ಟಿ ಬಂದನಗಳಿಗೆ ಅಂಟಿಕೊಂಡಾಗ ಅನುಭವಿಸುವ ನೋವೇ ಹೆಚ್ಚು....!!!
    💐
    8 min
  • ಇದು ಕಥೆಯಲ್ಲ.. ನಮ್ಮ ಮುಂದಿರುವ ಹಿರಿಯ ಜೀವಗಳ ವ್ಯಥೆ... ಅಮ್ಮ..ಹೆಂಡತಿ..ಮಕ್ಕಳು
    ಅಮ್ಮ ಹೆಂಡತಿ ಮಕ್ಕಳು
    "ನಿವೃತ್ತಿಯಾದ ಮೊದಲ ದಿನ ನಾನು ಮೊದಲು ಮಾಡುವ ಕೆಲಸವೆಂದರೆ ನನ್ನ ಅಮ್ಮನನ್ನು
    ವೃದ್ಧಾಶ್ರಮಕ್ಕೆ ಸೇರಿಸುವುದು..."
    ನನ್ನ ಮನೆಯಲ್ಲಿ ನಾನು ಈ ಮಾತುಗಳನ್ನು ಹೇಳುತ್ತ ಹೇಳುತ್ತ ಒಂದು ವರುಷವಾಯಿತು.....
    ಇನ್ನು ಈ ಕೆಲಸವನ್ನು ಮುಂದು ಹಾಕುವಂತಿಲ್ಲ...
    ಯಾಕೆಂದರೆ ನಿನ್ನೆ ನನಗೆ ನಿವೃತ್ತಿ ಯಾಯಿತು...
    ನನ್ನ ಹೆಂಡತಿ ಮಕ್ಕಳೆಲ್ಲ ಈ ದಿನಕ್ಕಾಗಿಯೇ ಕಾದು ಕುಳಿತವರಂತೆ ಇದ್ದಾರೆ..
    ನನ್ನ ಅಮ್ಮ ಆರೋಗ್ಯವಾಗಿಯೇ ಇದ್ದವಳು,ಸುಮಾರು ಎರಡೂವರೆ ವರುಷಗಳಿಂದ ಅನಾರೋಗ್ಯಕ್ಕೆ ಬಿದ್ದಳು...
    ಇತ್ತೀಚೆಗೆ ಒಂದು ವರುಷದಿಂದ
    ಮಲ ಮೂತ್ರ ವಿಸರ್ಜನೆಯ ಮೇಲೆ ಕೂಡಾ ಅವಳಿಗೆ ನಿಯಂತ್ರಣವಿಲ್ಲ...
    ಬೆಳಗ್ಗೆ ರಾತ್ರಿ ಅವಳನ್ನು ನಾನು ನೋಡಿ ಕೊಳ್ಳಬಲ್ಲೆ...
    ಆದರೆ ನಾನು ಕೆಲಸಕ್ಕೆ ಹೋದಾಗ ಅವಳನ್ನು ನೋಡಿ ಕೊಳ್ಳಬೇಕಾದವಳು ಇವಳೇ ... ಅಂದರೆ ನನ್ನ ಹೆಂಡತಿಯೇ...
    ನನಗಾದರೂ ಅವಳು
    ತಾಯಿ..ನನ್ನವಳಿಗೆ ಅವಳು ತಾಯಿಯಾ..?
    ನನ್ನ ಸಿಡುಕಿನ ನೋಟಕ್ಕೆ ಬೆದರಿ ಇವಳು ಅತ್ತೆಯ ಚಾಕರಿ ಮಾಡುತ್ತಿದ್ದಾಳೆ.
    ಆದರೆ ಇವಳ ಮುಖದಲ್ಲೊಂದು ತಿರಸ್ಕಾರದ ನೋಟ ಚಿರ ಸ್ಥಾಯಿಯಾಗಿ ನಿಂತ ಹಾಗೆ ನನಗೆ ಕಾಣಿಸುತ್ತಿದೆ..
    ಇವಳಿಗಾದರೂ ಈ ಭಾವ ಸಹಜವೇ...ಹೊರಗಿನಿಂದ ಬಂದವಳು....
    ಆದರೆ ನನ್ನ
    ಮಕ್ಕಳಿಗೂ ಅನಾರೋಗ್ಯದ ಅಜ್ಜಿ ಬೇಡವೆನ್ನಿಸುವುದು ನನಗೆ ದಿಗಿಲು ಹುಟ್ಟಿಸುವುದು.....
    ಅಭಿಲಾಷ್ ಆದರೂ ಹುಡುಗ...ಮುಲಾಜಿಲ್ಲದೆ ಹೇಳಿದ್ದ"ಅಮ್ಮಾ ನನ್ನ ಫ್ರೆಂಡ್ಸ್ ಇರುವಾಗ ಅಜ್ಜಿಯನ್ನು ಹೊರಗೆ ಬಿಡಬೇಡ"
    ಆದರೆ ನನ್ನ ಮಗಳು ಶಿಶಿರ "ಅಬ್ಬಾ ,ಅಜ್ಜಿ ಗಬ್ಬು ನಾತ...ವ್ಯಾಕ್" ಅಂದಾಗ ಸಿಟ್ಟು ನೆತ್ತಿಗೇರಿತ್ತು...
    "ಮಕ್ಕಳೇ..ಸ್ವಲ್ಪ ಕಾಲ ಸಹಿಸಿ..ನನ್ನ ಅಮ್ಮನನ್ನು ವೃದ್ಧಾಶ್ರಮಕ್ಕೆ ಸೇರಿಸುವ " ಅಂದಿದ್ದೆ...
    ಹೆಂಡತಿ ಮಕ್ಕಳೇನೋ ಸುಮ್ಮನಾದರು...
    ಆದರೆ ಅಮ್ಮ ಅಂದಿನಿಂದ ಮತ್ತಷ್ಟು ಮೌನಿಯಾದಳು...
    ಇಂದು ನನ್ನ ನಿವೃತ್ತಿಯ ಮೊದಲ ದಿನ.
    ಅಮ್ಮನ ಪ್ರಾತಃ ವಿಧಿಗಳನ್ನೆಲ್ಲ
    ಮುಗಿಸಿ ನಾವು ಹೊರಟು ನಿಂತೆವು...
    ಯಾಕೋ ಹೆಂಡತಿ ಮಕ್ಕಳೂ ಹೊರಟು ನಿಂತರು...
    ಅಮ್ಮನ ಮುಖದಲ್ಲಿ ಕಳೆ ಇಲ್ಲ...
    "ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ " ಎಂದ ಮಗನ ಮಾತು ಇವಳ ಕಿವಿಗೂ ಬಿದ್ದಿರಬೇಕು.
    ಬಲಿ ಪೀಠಕ್ಕೆ ಕರೆದೊಯ್ಯುವ ಮೇಕೆಯಂತೆ ಉಸಿರೆತ್ತದೆ ಮಗ ಕರೆದಲ್ಲಿ ಬರುತ್ತಾಳೆ.
    ನಾವೆಲ್ಲರೂ ಕಾರಿನಲ್ಲಿ ಕುಳಿತೆವು.
    ಮಗರಾಯ ಕಾರನ್ನು ಚಲಾಯಿಸುತ್ತೇನೆ ಅಂದ.
    ಅವನಿಗೆ ಕೊಡದೆ ನಾನೇ ಕಾರನ್ನು ಚಲಾಯಿಸಿಕೊಂಡು ಬಂದೆ..
    ಒಂದು ಹಂಚಿನ ಮನೆಯ ಬಳಿ ಕಾರು ನಿಲ್ಲಿಸಿದೆ..
    ಹಾರನ್ ಮಾಡಿದೆ..
    ಮನೆಯೊಳಗಿನಿಂದ ನನ್ನ ಗೆಳೆಯ ಓಡೋಡಿ ಬಂದ..
    ನಾನು ಕಾರಿನ ಬಾಗಿಲು ತೆಗೆದು ಅಮ್ಮನನ್ನು ಕೆಳಗಿಳಿಸಿದೆ..
    "ವೃದ್ಧಾಶ್ರಮ ಅಲ್ವಾ..?" ಹೆಂಡತಿ
    ಬಾಯಿ ತೆಗೆದಳು...
    ನಾನು ಮಾತನಾಡದೆ ಅಮ್ಮನನ್ನು ಕರೆದು ಕೊಂಡು ಮನೆಯ ಒಳಗೆ ಕರೆದು ಕೊಂಡು ಬಂದೆ...
    ಒಂದು ಬೆಡ್ ರೂಂ...ಒಂದು ಹಾಲ್ ಒಂದು ಕಿಚನ್....ನನ್ನ ಗೆಳೆಯ ಸರಿಯಾದ ಚಿಕ್ಕ ಮನೆಯನ್ನೇ ಆಯ್ದು ಕೊಂಡಿದ್ದ.
    ಬಾಡಿಗೆಯ ಮನೆ...ಗೆಳೆಯ ಮನೆಯ ಕೀಲಿ ಕೈ ಕೊಟ್ಟು ಹೊರಟ..
    "ಏನಿದು ಆವಾಂತರ... ಅತ್ತೆಯನ್ನು ಇಲ್ಲಿ ನೋಡಿ ಕೊಳ್ಳುವವರು ಯಾರು?"
    ನನ್ನವಳ ಪ್ರಶ್ನೆ..
    "ಅವಳ ಮಗ ನಾನು ಜೀವದಲ್ಲಿ ಇದ್ದೇನೆ" ನನ್ನ ಉತ್ತರ.
    "ಅಂದರೆ ನೀವು ಇಲ್ಲಿ ನಿಂತು ಅಮ್ಮನನ್ನು ನೋಡಿ ಕೊಳ್ಳುತ್ತೀರಾ?"
    "ಹಾಗೆಂದು ಕೊಳ್ಳಬಹುದು" ಎಂದೆ...
    "ನಮ್ಮ ಗತಿ..?" ಹೆಂಡತಿಯ ಪ್ರಶ್ನೆ...
    "ಮನೆಯ ಖರ್ಚು ನನ್ನದೇ" ನನ್ನ ಉತ್ತರ.
    "ಮನೆಯಲ್ಲಿ ನೀವಿಲ್ಲದೆ ಇದ್ದರೆ ಭಯ ಅಗುತ್ತೆ".
    "ಮಗ ನನಗಿಂತ ಎತ್ತರಕ್ಕೆ ಬೆಳೆದು ನಿಂತಿದ್ದಾನೆ.ಏನು ಭಯವೇ" ಅಂದೆ.
    "ಅಯ್ಯೋ ನೀವಿಲ್ಲದ ಮನೆಯೆ".
    ಇವಳ ಕಣ್ಣಲ್ಲಿ ಗಂಗಾ ಪ್ರವಾಹ..
    ಅಮ್ಮನ ಕಣ್ಣಲ್ಲಿ ಅಶ್ರುಧಾರೆ..
    ಅವಳನ್ನು ವೃದ್ದಾಶ್ರಮಕ್ಕೆ ಸೇರಿಸುತ್ತೇನೆ ಅಂದು ಕೊಂಡಿರಬೇಕು..
    ಈಗ ಅವಳ ಕಣ್ಣಲ್ಲಿ ಸಂತೋಷ ಉಕ್ಕಿ ಹರಿಯುತ್ತಿದೆ.
    ಅವಳನ್ನು ಮಂಚದ ಮೇಲೆ ಮಲಗಿಸಿದೆ...
    ಮಗ, ಮಗಳು, ಇವಳು ಎಲ್ಲರು
    ಸ್ತಬ್ಧ ಚಿತ್ರದ ಹಾಗೆ ಮೂಗರಾಗಿದ್ದಾರೆ..
    ಮಗ ಬಾಯಿ ತೆಗೆದ"ಅಪ್ಪಾ ಇದೆಲ್ಲ ಏನು nonsence...?
    ನಾನೆಂದೆ"ಮಗಾ ನಿನಗೆ ನಿನ್ನ ಫ್ರೆಂಡ್ಸ್ ಮನೆಗೆ ಬರುವಾಗ ನನ್ನ ಅಮ್ಮ ಮನೆಯಲ್ಲಿದ್ದರೆ..ಅದು shame....ಅನ್ನಿಸುತ್ತಿತ್ತಲ್ಲ...ಅದು nonsense...
    "ನಾನೂ ಅಮ್ಮ ಇಲ್ಲಿರುತ್ತೇವೆ..ನೀವು ಮನೆಗೆ ಹೋಗಿ ಮಗೂ..ಚೆನ್ನಾಗಿರಿ".
    "ಅಪ್ಪಾ "
    ಮಗಳು ಮಾತಿಲ್ಲದೆ ನಿಂತ ಅಣ್ಣನ ಸಹಾಯಕ್ಕೆ ಬರುತ್ತಾಳೆ, "ಅಜ್ಜಿಗೆ ನೀನೊಬ್ಬನೇ ಮಗನಾ. ಮೂರು ಮಂದಿ ಮಕ್ಕಳಲ್ವಾ...ನೀನೆ ಯಾಕೆ ಅಜ್ಜಿಯನ್ನು ನೋಡಿಕೊಳ್ಳ ಬೇಕು...?"
    ಇದು ಇವಳ ಮಾತಲ್ಲ...ಯಾವತ್ತೋ ಇವಳ ಅಮ್ಮನಾಡಿದ ಮಾತು..ಅದನ್ನೇ
    ಉರು ಹೊಡೆದು ಹೇಳುತ್ತಿದ್ದಾಳೆ...ನನ್ನವಳು ಏನೂ ತಿಳಿಯದ ಹಾಗೆ ಕುಳಿತಿದ್ದಾಳೆ.
    "ಮಗಳೇ... ನನಗಾಗ ಆರೇಳು ವರ್ಷ ಇರಬಹುದು.ಅಪ್ಪ ತೀರಿ ಹೋಗಿ ಎರಡೋ ಮೂರೋ ವರ್ಷಗಳಾಗಿತ್ತು. ... ನನಗೆ ವಾಂತಿ ಭೇದಿ ಆರಂಭವಾಯಿತು...ನಮ್ಮದು ಹಳ್ಳಿ... ವಾಹನದ ಸೌಕರ್ಯ ಇರಲಿಲ್ಲ ಮಗಾ...ಹಳ್ಳಿಯ ನಾಟಿ ಮದ್ದು ನಾಟಲಿಲ್ಲ.
    ಮಗೂ... ನಾನು ಬದುಕುವ ಆಸೆ ಯಾರಿಗೂ ಇರಲಿಲ್ಲವಂತೆ.
    ಅರೆ ನಿರ್ಜೀವ ಸ್ಥಿತಿಯಲ್ಲಿದ್ದ ನನ್ನನ್ನು ಇದೇ ನನ್ನ ಅಮ್ಮ ಆ ಹೆಗಲ ಮೇಲೆ ಹಾಕಿ ಆರು ಮೈಲು ನಡೆದು ವೈದ್ಯರ ಹತ್ತಿರ ಕೊಂಡು ಹೋಗಿ ಇಂಜೆಕ್ಷನ್ ಚುಚ್ಚಿಸಿ ಮತ್ತೆ ಆರು ಮೈಲು ಹೊತ್ತು ನಡೆದು.ಬದುಕಿಸಿದಳು.
    ದೇವಾ...ಇಂತಹ ಅಮ್ಮನಿಗೆ ಈಗ ಮಲಮೂತ್ರದ ಮೇಲೆ ನಿಯಂತ್ರಣ ಇಲ್ಲ ಮಗೂ.
    ಹೆಣ್ಣಾದ ನಿನಗೂ ನಿನ್ನಮ್ಮನಿಗೂ ಇದು ಅಸಹ್ಯ ಅಂತ ಆದರೆ ,ನನ್ನ ಅಣ್ಣಂದಿರ ಹೆಂಡಂದಿರಿಗೂ ನನ್ನ ಅಮ್ಮ ಈ ವೃದ್ಧಾಪ್ಯದಲ್ಲಿ ಅಸಹ್ಯವೇ ಆಗುವಳು ಮಗೂ....
    ಈ ಪ್ರಾಯದಲ್ಲಿ ಅವಳು ಯಾರಿಗಾದರೂ ಅಸಹ್ಯ ಅನ್ನಿಸಿದರೆ ಅವಳ ಮಗನಾದ ನನಗೆ ಹೇಗಾಗಬೇಡ...?
    ಬೇಡ ಮಗೂ ,ನನ್ನ ಅಮ್ಮ ನನಗೆ ಅಸಹ್ಯವಲ್ಲ...ಸಾಯುವವರೆಗೆ ನಾನು ಅವಳಿಗೆ ಮಗನಂತೆ ಅಲ್ಲ... ಮಗಳಂತೆ ಅವಳ ಸೇವೆ ಮಾಡುತ್ತೇನೆ.. ನೀವು ಹೋಗಿ...ನಾನು ವಾರಕ್ಕೊಮ್ಮೆ ಮನೆಗೆ ಬಂದು
    10 min

About Dr Balakrishna Maddodi

From the publisher's feed

Hi