Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • ಪುರುಲಿಯಾದ ಸೈನಿಕ್ ಸ್ಕೂಲ್ ಕ್ಯಾಡೆಟ್ ಅಮಿತ್ ರಾಜ್
    ಕರೀನಾ ಕಪೂರ್ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆಂದು ನಮಗೆಲ್ಲರಿಗೂ ತಿಳಿದಿದೆ.
    ಅನುಷ್ಕಾ ಶರ್ಮಾ ತನ್ನ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದು ನಮಗೆ ತಿಳಿದಿದೆ ಮತ್ತು ಅವರ ಪತಿ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಿಂದ ತನ್ನೊಂದಿಗೆ ಇರಲು ಮರಳಿದ್ದಾರೆ.
    ಯಾವ ನಟ ಯಾವ ಡಿಸೈನರ್ ಬಟ್ಟೆಗಳನ್ನು ಧರಿಸುತ್ತಾನೆ ಎಂಬುದು ನಮಗೆ ತಿಳಿದಿದೆ.
    ಆದರೆ ಕ್ಯಾಡೆಟ್ ಅಮಿತ್ ರಾಜ್ ಯಾರು ಎಂದು ತಿಳಿಯಲು ನಾವು ಕಾಳಜಿ ವಹಿಸುತ್ತೇವೆಯೇ?
    ನಾವು ಇಲ್ಲ
    ಇದಕ್ಕಾಗಿ ನಾನು ಯಾರನ್ನೂ ಸಂಪೂರ್ಣವಾಗಿ ದೂಷಿಸುವುದಿಲ್ಲ.
    ನಾವೆಲ್ಲರೂ ನಮ್ಮ ಸುದ್ದಿಯ ಹಸಿವನ್ನು ಜಂಕ್ ನ್ಯೂಸ್ಗಾಗಿ ವ್ಯರ್ಥ ಮಾಡುತ್ತೇವೆ ಅದು ನಮ್ಮ ಸಮಾಜಕ್ಕೆ ಎಂದಿಗೂ ಮೌಲ್ಯವನ್ನು ಸೇರಿಸುವುದಿಲ್ಲ.
    ಡಿಸೆಂಬರ್ 3 ರಂದು, ಪುರುಲಿಯಾದ ಸೈನಿಕ್ ಸ್ಕೂಲ್ ಕ್ಯಾಡೆಟ್ ಅಮಿತ್ ರಾಜ್, ಬಿಹಾರದ ತನ್ನ ಹುಟ್ಟುರಾದ ನಳಂದದಲ್ಲಿದ್ದಾಗ, ಬೆಳಿಗ್ಗೆ 6 ಗಂಟೆ ಸುಮಾರಿಗೆ ಜಾಗಿಂಗ್ ಮಾಡುವಾಗ ನೆರೆಹೊರೆಯ ಜನರು ಕೂಗುತ್ತಿರುವುದು ಕೇಳಿಸಿತು. ಪಕ್ಕದ ಮನೆಯೊಂದಕ್ಕೆ ಬೆಂಕಿ ಕಾಣಿಸಿಕೊಂಡಿರುವುದನ್ನು ನೋಡಲು ಅವನು ಹೊರನಡೆದನು. ಮರು ಯೋಚಿಸದೆ ಒಳಗೆ ಸಿಕ್ಕಿಹಾಕಿಕೊಂಡಿದ್ದ 3 ಮಕ್ಕಳನ್ನು ಉಳಿಸಲು ಅವನು ಮನೆಯೊಳಗೆ ಪ್ರವೇಶಿಸಿದನು. ಅವನು ಮೊದಲ ಎರಡು ಮಕ್ಕಳನ್ನು ಉಳಿಸುವ ಹೊತ್ತಿಗೆ 85% ಸುಟ್ಟಗಾಯಗಳನ್ನು ಅನುಭವಿಸಿದ, ಆದರೆ ಮೂರನೆಯ ಮಗುವನ್ನು ಉಳಿಸಲು ನಿರ್ಧರಿಸಿದ. ಮೂರನೆಯ ಮಗುವನ್ನು ಉಳಿಸಲು ಅವನು ಉಳಿಯುವ ಯಾವುದೇ ಸ್ಥಿತಿಯಲ್ಲಿರಲಿಲ್ಲ, ಆದರೆ 95% ಸುಟ್ಟಗಾಯಗಳನ್ನು ಪಡೆದರು ಮೂರನೆಯ ಮಗುವನ್ನು ಉಳಿಸಲು ಮನೆಯೊಳಗೆ ಪ್ರವೇಶಿಸಿದನು. ಅವನು ವೀರತ್ವದಿಂದ, ಮೂವರೂ ಮಕ್ಕಳನ್ನು ಉಳಿಸಿದ. ನಂತರ ಅವನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಅವರನ್ನು ದೆಹಲಿಯ ಸಫಾದರ್ಜಾಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. 13 ಡಿಸೆಂಬರ್ 2020 ರಂದು ಧೈರ್ಯಶಾಲಿ ಹೃದಯ ಜೀವ ಕಳೆದುಕೊಂಡಿತು.
    ಒಂದು ಮೀಡಿಯಾ ಹೌಸ್ ಕೂಡ ಈ ಕಥೆಯನ್ನು ತೋರಿಸಲಿಲ್ಲ.
    ಸೋಷಿಯಲ್ ಮೀಡಿಯಾದ ಶಕ್ತಿಯನ್ನು ಬಳಸಿಕೊಂಡು ಈ ಧೈರ್ಯಶಾಲಿ ಆತ್ಮವನ್ನು ನಾವು ವೈಯಕ್ತಿಕವಾಗಿ ಗೌರವಿಸೋಣ. ಏಕೆಂದರೆ ಇದು #ಹೊಸ_ಇಂಡಿಯಾವನ್ನು ನಿರ್ಮಿಸಬಲ್ಲ ತ್ಯಾಗದ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.
    .
    .
    -ರಾಜೀವ್ ವರ್ಷನಿ ಮೂಲಕ
    4 min
  • ಜೊತೆಯಲಿರುವವರನ್ನು *ನೋಯಿಸದ* *ಮುದ ನೀಡುವ* ಮನಸಿರಲಿ..!
    ಓದಿ ನೋಡಿ,, ಎಷ್ಟು ನಿಜ ಅನ್ಸುತ್ತೆ, ಹಾಗೇ ಒಂಥರಾ ಖುಷಿ, ನೋವು ಎರಡೂ ಆಗುತ್ತೆ*
    👇👇😊😊😌😌
    *.ಗೊತ್ತಾಗಲೇ ಇಲ್ಲ*..
    -. -. -. *. -. -. -. *.
    ದಿನಗಳು ಕಳೆದವು...
    *ಹೇಗೆ ಕಳೆದವು*.?
    ಗೊತ್ತಾಗಲೇ ಇಲ್ಲ...
    ಬದುಕಿನ ಓಟದಲ್ಲಿ *ಉರುಳಿದವುವರ್ಷಗಳು* ಗೊತ್ತಾಗಲೇ ಇಲ್ಲ...
    ಹೆಗಲೇರಿ ಆಡುತ್ತಿದ್ದಮಕ್ಕಳು
    *ಹೆಗಲವರೆಗೆ ಬೆಳೆದದ್ದು*
    ಗೊತ್ತಾಗಲೇ ಇಲ್ಲ...
    ಬಾಡಿಗೆಯ ಪುಟ್ಟ ಮನೆಯಿಂದ
    *ಸ್ವಂತ ಗೂಡಿನೊಳ ಹೊಕ್ಕದ್ದು*
    ಗೊತ್ತಾಗಲೇ ಇಲ್ಲ...
    ಸೈಕಲ್ನಲ್ಲಿ ' ಏರಿ' ಏರಿ
    ಏದುಸಿರು ಬಿಡುತ್ತಿದ್ದ ನಾವು ಯಾವಾಗ *ಕಾರಿನಲ್ಲಿ ನುಸುಳಿದೆವೋ* ಗೊತ್ತಾಗಲೇ ಇಲ್ಲ...
    ಅಮ್ಮ- ಅಪ್ಪನ ಹೊರೆಯಾಗಿದ್ದ ನಾವು *ಮಕ್ಕಳ ಹೊರೆ ಯಾವಾಗ ಹೊತ್ತೆವೋ*
    ಗೊತ್ತಾಗಲೇ ಇಲ್ಲ...
    . ಗಂಟೆಗಟ್ಟಲೇ ಮಲಗಿ ಗೊರಕೆ....ಹೊಡೆಯುತ್ತಿದ್ದ ನಮ್ಮ *ನಿದ್ರೆ ಯಾವಾಗ ಹಾರಿತೋ* ಗೊತ್ತಾಗಲೇ ಇಲ್ಲ.
    ದಟ್ಟ ಕರಿ ಕೂದಲಿನಲ್ಲಿ ಬೆರಳಾಡಿಸಿ...ಸುಖಿಸಿದ ಕ್ಷಣಗಳು ಮನದಲ್ಲಿ
    ಹಸಿರಾಗಿರುವ ಮೊದಲೇ.,
    ನಮ್ಮ *ಕೂದಲು ಬಿಳಿಯಾಗತೊಡಗಿದ್ದು*
    ಗೊತ್ತಾಗಲೇ ಇಲ್ಲ...
    ಕೈಯಲ್ಲಿ ಅರ್ಜಿ ಹಿಡಿದು ಕಚೇರಿ, ಕಚೇರಿ ಅಲೆದ ನಮಗೆ *ನಿವೃತ್ತಿಯ* ಗಳಿಗೆ ಬಂದುದು
    ಗೊತ್ತಾಗಲೇ ಇಲ್ಲ...
    ಮಕ್ಕಳು, ಮಕ್ಕಳೆಂದು ಹಲುಬುತ್ತ, ಗಳಿಸಿ ಉಳಿಸುವಲ್ಲಿ ಆ *ಮಕ್ಕಳೇ ದೂರವಾದದ್ದು*
    ಗೊತ್ತಾಗಲೇ ಇಲ್ಲ...
    ನಾವು, ನಮ್ಮವರೆಂದು ಎದೆಯುಬ್ಬಿಸಿ ರೆದ ನಮಗೆ ಅವರೆಲ್ಲ ದೂರಾಗಿ, *ಒಂಟಿಯಾದುದು*
    ಗೊತ್ತಾಗಲೇ ಇಲ್ಲ...
    ನಮಗಾಗಿ ಏನಾದರೂ ಮಾಡಬೇಕೆಂದಾಗ
    *ದೇಹ ಸಹಕರಿಸುವದನ್ನು ನಿಲ್ಲಿಸಿದ್ದು*
    ಗೊತ್ತಾಗಲೇ ಇಲ್ಲ...
    ಹೀಗೆ ಗೊತ್ತಾಗುವ ಮುನ್ನವೇ *ಗತಿಸುವ ಬದುಕಿನ* ಬಗೆಗೆ ಒಂದು ಬೆರಗಿನ ನೋಟವಿರಲಿ*.!
    5 min
  • ನಮ್ಮ ಜೀವನ ಶೈಲಿ ಬದಲಾಗಲಿ..*
    *2020 ಕಲಿಸಿದ 20 ಪಾಠಗಳು...*
    ➖➖➖
    *1) ಕಣ್ಣಿಗೆ ಕಾಣದ ಒಂದು ವೈರಾಣು ಇಡಿ* *ಜಗತ್ತನ್ನೆ*
    *ಅಲ್ಲೋಲ ಮಾಡಬಹುದು*
    *2) ಎಷ್ಟೆ ಹಣ ಸಂಪತ್ತು ಇದ್ದರೂ ಆರೋಗ್ಯ* *ಮುಖ್ಯ*
    *ಪ್ರಾಣ ಮುಖ್ಯ.*
    *3) ಮಸೀದಿ ಮಂದಿರ ಚರ್ಚಗಳಲ್ಲಿ ಅಷ್ಟೆ* *ದೇವರಿಲ್ಲ , ಅವನು ನಿರಾಕಾರ ಎಲ್ಲಾ ಕಡೆ* *ಇದ್ದಾನೆ ,.*
    *ಒಂದು ವೇಳೆ ತಿಂಗಳು ಗಟ್ಟಲೆ ಮಸೀದಿ ,* *ಮಂದಿರ , ಚರ್ಚಗಳನ್ನು ಮುಚ್ಚಿದರೂ* *ದೇವರು ಬೇಜಾರು ಮಾಡಿಕೊಳ್ಳಲ್ಲ. ದೇವರು* *ಸಕಲ ಜೀವಿಗಳಲ್ಲಿದ್ದಾನೆಂದು* *ತೋರಿಸಿಕೊಟ್ಟ ವರ್ಷ.*
    *5) ಭವಿಷ್ಯಗಾರರ ಭವಿಷ್ಯ ಸುಳ್ಳು...* *ನಾಳೆಯ ಭವಿಷ್ಯ ಯಾರಿಂದಲೂ ಹೇಳಲು* *ಸಾಧ್ಯವಿಲ್ಲ*
    *6) ಕುಡಿಯದೆ ,ಬಾರ್ ಗೆ ಹೋಗದೆ ಗಂಡಸರು* *ತಿಂಗಳಗಟ್ಟಲೇ ಇರಬಹುದು*
    *7) ಮದುವೆ ಇತರೆ ಕಾರ್ಯಗಳನ್ನು* *ಸರಳವಾಗಿ ಮಾಡಬಹುದು*
    *8) ಸತ್ತರೆ ನಮ್ಮ ಹಿಂದೆ ಯಾರೂ ಇರಲ್ಲ ,* *ಯಾರು ಬರಲ್ಲ*
    *9) ಒತ್ತಡದಲ್ಲಿ ಓದಿ ಮಾರ್ಕ್ಸ ಪಡೆಯುವುದು* *ಅಷ್ಟೆ ಜೀವನವಲ್ಲ..ಜೀವನಾನುಭವ* *ನಿಜವಾದ ಪಾಠ ಶಾಲೆ*
    *10) ಹೇಗೆ ,ಎಲ್ಲೆ ಬದುಕುತ್ತಿದ್ದರೂ ,ಸಂಕಷ್ಟ* *ಬಂದಾಗ ಸ್ವಂತ ಊರು ,ಮೂಲ* *ಉದ್ದೋಗಕ್ಕೆ ಬರಲೇಬೇಕು.*
    *ಬಸ್ ,ರೈಲ್ವೆ ,ವಿಮಾನ ಇಲ್ಲದಿದ್ದರೂ ಜೀವನ* *ನಿಲ್ಲಲ್ಲವೆಂದು ತೋರಿಸಿದ ವರ್ಷ.*
    *11) ಆಸ್ಪತ್ರೆಗಳೆ ನಿಜವಾದ ಆಲಯಗಳು .*
    *ಜೀವ ಪಣಕ್ಕಿಟ್ಟು ಹೋರಾಡುವವರೆಲ್ಲ*
    *ಯುದ್ಧ ಯೋಧರು.. ವಾರಿಯರ್ಸ್‌*
    *12) ಎಷ್ಟೆ ಮುಂದುವರಿದ ದೇಶ ವಾದರೂ* *ಕಾಲದ ಹೊಡೆತಕ್ಕೆ ಸೋಲಬೇಕು.ಯುದ್ಧ* *ವಿಮಾನಗಳು ,*
    *ಟ್ಯಾಂಕರ್ ಗಳು, ಅಣುಬಾಂಬು ಇದ್ದರೂ*
    *ಸಾಂಕ್ರಾಮಿಕ ಅಣು ರೋಗಕ್ಕೆ* *ಶರಣಾಗಲೇಬೇಕು*
    *13) ಸಿನೆಮಾ ,ಪ್ಲಬ್ ,ಕ್ಲಬ್ ಅಷ್ಟೇ* *ಮನರಂಜನೆ ಅಲ್ಲ*
    *ಮನೆಯಲ್ಲಿ ಮಕ್ಕಳ ಜೊತೆಗೆ, ಹೆತ್ತವರ* *ಜೊತೆಗೆ ಕಾಲ ಕಳೆಯುವುದು* *ನಿಜವಾದ ಆತ್ಮಾನಂದ ಅಂತ ತೋರಿಸಿದ್ದು.*
    *ತಮ್ಮ ತಮ್ಮ ಕೆಲಸಗಳನ್ನು ತಾವೆ* *ಮಾಡಿಕೊಳ್ಳಬೇಕೆಂದು ತೋರಿಸಿಕೊಟ್ಟ* *ವರ್ಷ.*
    *14)ಅತಿ ಆಸೆಗೆ ಪರಿಸರ ನಾಶ ಮಾಡಿದರೆ* *ಮುಖಕ್ಕೆ ಮಾಸ್ಕ ಹಾಕಿಕೊಂಡು* *ಇರಬೇಕಾಗುತ್ತದೆ.*
    *ವಾತಾವರಣದಲ್ಲಿ ಆಮ್ಲಜನಕ ಕಲುಷಿತ* *ಗೊಳಿಸಿದರೆ ಬದುಕಲು* *Oxygen ಖರೀದಿಸಬೇಕುತ್ತದೆ ಎಂದು* *ತಿಳಿಸಿಕೊಟ್ಟವರ್ಷ.*
    *15) ತಂತ್ರಜ್ಞಾನ ಎಷ್ಟೇ ಮುಂದುವರಿದರೂ* *ಕಣ್ಣಿಗೆ ಕಾಣದ ಮನಸ್ಸು ,ವೈರಸ್‌ ಎರಡನ್ನು* *Control ಮಾಡುವುದು ಕಷ್ಟ.*
    *16) ಶ್ರೀಮಂತರು ರೋಗ ತಂದು ಹರಡಿ* *ಬಡವರಿಗೆ ತೊಂದರೆ ಆದರೂ ಬಹಳಷ್ಟು* *ಜನರು ಜೀವ ಕಳೆದುಕೊಂಡಿದ್ದು* *ಶ್ರೀಮಂತರೆ ,*
    *ಬಡವರು ಕೂಲಿ ಕಾರ್ಮಿಕರು ,ಪೌರ* *ಕಾರ್ಮಿಕರಲ್ಲಿ ಸಾವುಗಳು ಕಡಿಮೆ.*
    *ಬಡವರ ಬೆವರಿನಲ್ಲಿ ದೇವರು* *ಇರುತ್ತಾನೆಂದು ತೋರಿಸಿಕೊಟ್ಟ ವರ್ಷ.*
    *17) ಎಲ್ಲಾ ಧರ್ಮಗಳು ಪಳ್ಳು,ಮನುಷ್ಯತ್ವ* *ಮಾನವೀಯತೆಯೇ ನಿಜವಾದ ಧರ್ಮ* *ಎಂದು ಮತ್ತೊಮ್ಮೆ ತೋರಿಸಿಕೊಟ್ಟ ವರ್ಷ.*
    *18) ಅತಿವೃಷ್ಠಿಯಾಗಿ ಕರ್ನಾಟಕದ ಎಲ್ಲಾ* *ನದಿಗಳಿಂದ*
    *600 ರಿಂದ 700 TMC ನೀರು*
    *ಸಮುದ್ರ ಸೇರಿತು..*
    *ನೀರು ಸಂಗ್ರಹಣೆಯಲ್ಲಿ ರಾಜ್ಯ ಹಿಂದಿದೆ* *ಎಂದು ತಿಳಿಸಿದ ವರ್ಷ.*
    *ಗಿಡ ಮರ ಉಳಿಸಿ ಅಂತರ್ಜಲ* *ಕಾಪಾಡದಿದ್ದರೆ ಪ್ರಳಯ ಮತ್ತೆ* *ಬರುತ್ತವೆಂದು ತಿಳಿಸಿದ ವರ್ಷ.*
    *19) ಆದಾಯ ಇಲ್ಲದೆ ವಿದಾಯ ಹೇಳುತ್ತಿರುವ* *ಈ ವರ್ಷವಾದರೂ...ಬಂಗಾರ ,*
    *ಬೆಳ್ಳಿ , ಆಸ್ತಿ*
    *ಬರಿ ನಿರ್ಜೀವ ಗಳಿಕೆ ಜೀವನವಲ್ಲ...*
    *ಮನಸ್ಸಿನ ನೆಮ್ಮದಿಯೇ ನಿಜವಾದ ಆಸ್ತಿ* *ಎಂದು ತೋರಿಸಿಕೊಟ್ಟ ವರ್ಷ 2020..*
    *ಆ ಪಾಠ ಅರಿತು*
    *ನಡೆಯುವುದು*
    *ಮನುಷ್ಯನಿಗೆ ಬಿಟ್ಟ ವಿಚಾರ.*
    *ಕೆಲವರ ಜೀವನದಲ್ಲಿ ಬಾರಿ ಪೆಟ್ಟು ಬಿದ್ದಿದೆ* *ಅವರು ಆತ್ಮ ವಿಶ್ವಾಸ ಕಳೆದುಕೊಳ್ಳುದೆ*
    *ಮುಂದೆ ಹೋಗಲೇ ಬೇಕು*
    *ಇದೆ ಜೀವನ.*
    *ಒಮ್ಮೆಮ್ಮೆ ಅಮಾಯಕರೂ* *ಬಲಿಯಾಗುತ್ತಾರೆಂದು ತೋರಿಸಿಕೊಟ್ಟ* *ವರ್ಷ.*
    *ಒಟ್ಟಿನಲ್ಲಿ ಒಳಗಿನ ಮನಸ್ಸನ್ನು ,*
    *ಹೊರಗಿನ ಪರಿಸರವನ್ನು ಸ್ವಚ್ಛ ಮಾಡಿದ* *ವರ್ಷ 2020.*
    *ಸುಳ್ಳು ಹೇಳದಿದ್ದರೆ ಮಾಸ್ಕ* *ಹಾಕಿಕೊಳ್ಳುವುದು ಬೇಕಿದ್ದಿಲ್ಲ...*
    *ಸತ್ಯದ ದಾರಿಯಲ್ಲಿ ನಡೆದುಕೊಂಡರೆ ದೂರ* *ನಿಲ್ಲುವುದು ಬೇಕಿದ್ದಿಲ್ಲ..*
    *ಅಕ್ರಮ , ಅನ್ಯಾಯದ ,ಭ್ರಷ್ಟ ಹಣ* *ಮುಟ್ಟದಿದ್ದರೆ ಪ್ರತಿ ಸಾರಿ ಕೈ* *ತೊಳೆಯುವುದು ಬೇಕಿದ್ದಿಲ್ಲ.*
    *ಇನ್ನೂ ಮುಂದಾದರೂ 2020 ಕಲಿಸಿದ* *ಪಾಠದಿಂದ*
    *ನಮ್ಮ ಜೀವನ ಶೈಲಿ ಬದಲಾಗಲಿ..*,
    *➖➖➖*
    10 min
  • *ಪ್ರೀತಿ ಅಷ್ಟೇ ಸಾಕು.......*
    ಒಂದು ಸಣ್ಣ ಕಥೆ : ( ಓದಿ ಚೆನ್ನಾಗಿದೆ )
    ಒಬ್ಬ ರಾಜ.. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು..
    ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಪ್ರತಿ ಯುದ್ಧವೇ ಆಗಲಿ ಮತ್ತೇನೇ ಆಗಲಿ ತಾಳ್ಮೆಯಿಂದ ಶ್ರದ್ಧೆಯಿಂದ ತನ್ನ ಕೆಲಸ ಮಾಡಿಕೊಂಡು ಬರುತ್ತಾ ಇತ್ತು..
    ಹೀಗೆ ಇರುವಾಗ ಆನೆಗೆ ಕೂಡ ವಯಸ್ಸಾಗ್ತಾ ಬಂತು.. ಕೆಲ್ಸ ಮಾಡೋ ಕ್ಷಮತೆ ಕುಂದಿದಂತೆ ಕಾಣ ತೊಡಗಿತು.
    ರಾಜ ಇನ್ನು ಈ ಆನೆಗೆ ತೊಂದರೆ ಕೊಡುವುದು ಬೇಡ ಎಂದು ಅದನ್ನ ಕೆಲಸಕ್ಕೆ ಹಚ್ಚುವುದ ನಿಲ್ಲಿಸಲು ಹೇಳಿದ. ಆನೆ ಮಂಕಾಗತೊಡಗಿತು..
    ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು.. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ ಘಿಳಿಡಲು ತೊಡಗಿತು.. ರಾಜ ಸೈನಿಕರ ಜೊತೆ ಬಂದು ಎಷ್ಟೇ ಪ್ರಯತ್ನ ಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು .. ರಾಜ ನೊಂದುಕೊಂಡ .. ಮಂತ್ರಿಗಳ ಮುಖ ನೋಡಿದ .. ಒಬ್ಬ ಮಂತ್ರಿ ಸೈನಿಕರ ಕರೆದು ಯುದ್ಧ ಕಹಳೆಯ ದನಿ ಹೊರಡಿಸಲು ಹೇಳಿದ .. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನಿಮಿಸಿರಿ ಕಣ್ಣರಳಿಸಿ ನೋಡಿ ತನ್ನೆಲ್ಲ ಶಕ್ತಿಯನ್ನು ಹಾಕಿ ಹೊರ ಬಂತು ..ಎಲ್ಲರೂ ಹರ್ಷೋದ್ಘಾರ ಮಾಡಿದರು ...
    ಮಂತ್ರಿ ಹೇಳಿದ *‘ಶರೀರ ಬಲವೊಂದೇ ಬದುಕಲ್ಲ ಪ್ರಭು, ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು.. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು...ಆ ಸ್ಪೂರ್ತಿ ಬದುಕಲು ಪ್ರೇರೇಪಿಸಿದಾಗ ಮಾತ್ರ ಬದುಕಲು ಛಲ ಬರುತ್ತದೆ . ಆ ಸ್ಫೂರ್ತಿ ನಮ್ಮ ಮೇಲೆ ನಮ್ಮವರು ಇಟ್ಟಿರುವ ಭರವಸೆ, ಪ್ರೀತಿಗಳಿಂದ ಸಿಗುತ್ತದೆ ..... ‘*
    *ಒಂದು ಸಣ್ಣ ಒಳ್ಳೆಯ ಮಾತು,ಸ್ಪರ್ಶ, ನಗು ಬದುಕಿನ ಹಾದಿಯ ಬದಲಿಸಬಲ್ಲುದು...*
    7 min
  • ಎಂಜಲನ್ನವನ್ನು ಏಕೆ ತಿನ್ನಬಾರದು? ಎಂಜಲನ್ನವನ್ನು ಸೇವಿಸುವುದರಿಂದಾಗುವ ಹಾನಿಗಳು
    ಎಂಜಲನ್ನವನ್ನು ಸೇವಿಸುವುದರಿಂದಾಗುವ ಹಾನಿಗಳು
    ೧. ಒಬ್ಬ ವ್ಯಕ್ತಿ ಎಂಜಲು ಮಾಡಿದ ಅನ್ನದಲ್ಲಿ ಆ ವ್ಯಕ್ತಿಯ ವಾಸನೆ ಮತ್ತು ಬೆರಳುಗಳ ಸ್ಪರ್ಶದಿಂದ ರಜ-ತಮ ಕಣಗಳ ಪ್ರಕ್ಷೇಪಣೆಯಾಗಿರುತ್ತದೆ.
    ೨. ಅನ್ನವನ್ನು ಸೇವಿಸುವಾಗ ಅನ್ನವನ್ನು ಸೇವಿಸುವ ವ್ಯಕ್ತಿಯ ವಾಸನೆಯು ಅನ್ನದ ಮೇಲೆ ಮೂಡಿರುತ್ತದೆ. ಆದುದರಿಂದ ಎಂಜಲನ್ನದ ಮೇಲೆ ಕೆಟ್ಟ ಶಕ್ತಿಗಳು ಹಲ್ಲೆ ಮಾಡುವ ಪ್ರಮಾಣವೂ ಹೆಚ್ಚಿರುತ್ತದೆ, ಹಾಗೆಯೇ ಕೆಲವು ಕೆಟ್ಟ ಶಕ್ತಿಗಳು ಎಂಜಲನ್ನವನ್ನು ಸೂಕ್ಷ್ಮದಲ್ಲಿ ಗ್ರಹಿಸುತ್ತವೆ.
    – ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೫.೧೧.೨೦೦೭, ರಾತ್ರಿ ೮.೨೫)
    ಎಂಜಲನ್ನವನ್ನು ಏಕೆ ತಿನ್ನಬಾರದು, ಇದರ ಹಿಂದಿನ ಶಾಸ್ತ್ರ
    ೧. ಯಾರ ಎಂಜಲನ್ನವನ್ನು ತಿನ್ನುತ್ತಾರೆಯೋ, ಆ ವ್ಯಕ್ತಿಯ ಆಧ್ಯಾತ್ಮಿಕ ತೊಂದರೆಗಳು ಎಂಜಲನ್ನವನ್ನು ತಿಂದವರ ದೇಹದಲ್ಲಿ ಸಂಕ್ರಮಿತವಾಗುವ ಸಾಧ್ಯತೆಯಿರುವುದು : ಇತರ ವ್ಯಕ್ತಿಗಳ ಎಂಜಲನ್ನವನ್ನು ತಿಂದರೆ ಅವರ ದೇಹದಲ್ಲಿನ ರಜ-ತಮಾತ್ಮಕ ಸ್ಪಂದನಗಳು, ಎಂಜಲನ್ನವನ್ನು ತಿನ್ನುವವರ ಬಾಯಿಯಲ್ಲಿನ ಜೊಲ್ಲಿನ ಮಾಧ್ಯಮದಿಂದ ಅನ್ನದಲ್ಲಿ ಪ್ರವಹಿಸಿ ಕಾರ್ಯನಿರತ ವಾಗುತ್ತವೆ. ಇಂತಹ ಅನ್ನವನ್ನು ತಿಂದರೆ ದೇಹದಲ್ಲಿ ಈ ರಜ-ತಮಾತ್ಮಕ ಲಹರಿಗಳು ಪ್ರವಾಹಿ ಪದ್ಧತಿಯಿಂದ ವೇಗವಾಗಿ ಕಾರ್ಯವನ್ನು ಮಾಡಲು ಆರಂಭಿಸುತ್ತವೆ. ಇದರಿಂದ ಯಾರ ಎಂಜಲನ್ನವನ್ನು ತಿನ್ನುತ್ತಾರೆಯೋ ಆ ವ್ಯಕ್ತಿಯ ಆಧ್ಯಾತ್ಮಿಕ ತೊಂದರೆಗಳೂ, ಇತರರ ದೇಹದಲ್ಲಿ ಸಂಕ್ರಮಿತವಾಗಿ ಅನ್ನದ ಮೂಲಕ ಶರೀರದ ಟೊಳ್ಳುಗಳಲ್ಲಿ ನೇರವಾಗಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಕಲಿಯುಗದಲ್ಲಿ ಸಾತ್ತ್ವಿಕ ಜೀವಗಳು ಸಿಗುವುದು ಅತ್ಯಂತ ಕಠಿಣವಾಗಿರುವುದರಿಂದ, ಸಾಧ್ಯವಿದ್ದಷ್ಟು ಒಬ್ಬರ ಎಂಜಲನ್ನವನ್ನು ಇನ್ನೊಬ್ಬರು ತಿನ್ನಬಾರದು. ಆದರೆ ಸಂತರ ಚೈತನ್ಯಮಯ ಉಚ್ಛಿಷ್ಟವನ್ನು ಪ್ರಸಾದವೆಂದು ಅವಶ್ಯ ಸ್ವೀಕರಿಸಬೇಕು. ಏಕೆಂದರೆ ಈ ಚೈತನ್ಯಮಯ ಉಚ್ಛಿಷ್ಟದಿಂದ ದೇಹದಲ್ಲಿನ ಟೊಳ್ಳುಗಳ ಆಂತರಿಕ ಶುದ್ಧಿಯಾಗುತ್ತದೆ.
    – ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೪.೩.೨೦೦೮ ಸಾಯಂಕಾಲ ೭.೧೫)
    ೨. ಎಂಜಲು ಅನ್ನವನ್ನು ತಿನ್ನುವವನಿಗೆ, ಯಾರ ಎಂಜಲನ್ನವನ್ನು ತಿನ್ನುತ್ತಾನೆಯೋ, ಆ ಜೀವದ ಪ್ರಕೃತಿ ವೈಶಿಷ್ಟ್ಯ ಮತ್ತು ತ್ರಿಗುಣಗಳ ಪ್ರಮಾಣದಿಂದ ತೊಂದರೆಯಾಗುವ ಸಾಧ್ಯತೆಯಿರುತ್ತದೆ : ಪರಸ್ಪರರ ಎಂಜಲನ್ನವನ್ನು ತಿಂದರೆ ಎಂಜಲನ್ನವನ್ನು ತಿಂದವನು ಆ ಅನ್ನದ ಮೂಲಕ ಇನ್ನೊಂದು ಜೀವದ ಪ್ರಕೃತಿ ವೈಶಿಷ್ಟ್ಯಗಳಿಂದ ತುಂಬಿದ ಗುಣಗಳ ನೇರ ಸಂಪರ್ಕಕ್ಕೆ ಬರುತ್ತಾನೆ. ಇದರಿಂದ ಆ ಪ್ರಕೃತಿಗೆ ಸಂಬಂಧಿಸಿದ ತತ್ತ್ವ ಮತ್ತು ವೈಶಿಷ್ಟ್ಯಗಳು ಅನ್ನವನ್ನು ತಿಂದ ಜೀವದ ಕಡೆಗೆ ಬರುತ್ತವೆ. ಪ್ರತಿಯೊಂದು ಜೀವದ ಪ್ರಕೃತಿಯು ವಿಭಿನ್ನವಾಗಿರುವುದರಿಂದ, ಇನ್ನೊಂದು ಜೀವದ ಅನ್ನವನ್ನು ತಿನ್ನುವ ಜೀವಕ್ಕೆ ಆ ಜೀವದ ಪ್ರಕೃತಿ-ವೈಶಿಷ್ಟ್ಯಗಳು ಮತ್ತು ತ್ರಿಗುಣಗಳ ಪ್ರಮಾಣದಿಂದಾಗಿ ತೊಂದರೆಯಾಗಬಹುದು. ಹಾಗೆಯೇ ಆಹಾರಪದಾರ್ಥಗಳು ಆ ಜೀವದ ದೇಹದಲ್ಲಿನ ಘಟಕಗಳಿಂದ ಕೂಡಿರುವುದರಿಂದ, ಇನ್ನೊಂದು ಜೀವವು ಅವುಗಳನ್ನು ತಿಂದಾಗ ಅದರ ದೇಹದಲ್ಲಿನ ಸೂಕ್ಷ್ಮ-ವಾಯುವಿನ ಸಂಚಾರಕ್ಕೆ ಅಡಚಣೆಯುಂಟಾಗಿ ಜೀವಕ್ಕೆ ವಿವಿಧ ರೀತಿಯ ರೋಗಗಳಾಗುವ ಸಾಧ್ಯತೆಯಿರುತ್ತದೆ. ಹಾಗೆಯೇ ಓರ್ವ ಉಚ್ಚ ಮಟ್ಟದ ವ್ಯಕ್ತಿಯ ಅಥವಾ ಕೆಟ್ಟ ಶಕ್ತಿಗಳ ತೊಂದರೆಯಿರುವ ಜೀವದ ಎಂಜಲನ್ನವನ್ನು ತಿಂದಾಗ, ಸಾಮಾನ್ಯ ಜೀವಕ್ಕೆ ಅದರಲ್ಲಿನ ಚೈತನ್ಯ ಅಥವಾ ಕಪ್ಪು ಶಕ್ತಿಯಿಂದ ತೊಂದರೆಯಾಗಬಹುದು. ಆದುದರಿಂದ ಹಿಂದೂ ಸಂಸ್ಕೃತಿಯಲ್ಲಿ ‘ಒಬ್ಬರ ಎಂಜಲನ್ನವನ್ನು ಇನ್ನೊಬ್ಬರು ತಿನ್ನಬಾರದು’ ಎಂದು ಹೇಳಲಾಗಿದೆ.
    – ಓರ್ವ ಜ್ಞಾನಿ (ಶ್ರೀ.ನಿಷಾದ ದೇಶಮುಖರವರ ಮಾಧ್ಯಮದಿಂದ, ೨೦.೬.೨೦೦೭, ಸಾಯಂ.೭.೪೩)
    (ಉನ್ನತರ ಅಥವಾ ಸಂತರ ಉಚ್ಛಿಷ್ಟವನ್ನು ಪ್ರಸಾದವೆಂದು ತಿಂದರೆ ತೊಂದರೆಯಾಗುವುದಿಲ್ಲ, ಅದರಿಂದ ಚೈತನ್ಯವೇ ಸಿಗುತ್ತದೆ. – ಸ
    7 min
  • ಬದುಕಲು, ಬದುಕಿಸಲು, ಬದುಕನ್ನ ಬದುಕಿಸಲು.*
    ಒಂದು ಸಣ್ಣ ಕಥೆ : ( ಓದಿ ಚೆನ್ನಾಗಿದೆ )
    ಒಬ್ಬ ರಾಜ.. ಅವನ ಸೇನೆಯಲ್ಲಿ ನೂರಾರು ಕುದುರೆ, ಒಂಟೆ, ಆನೆ, ಕಾಲಾಳುಗಳು..
    ರಾಜನಿಗೆ ಒಂದು ಆನೆಯ ಮೇಲೆ ಬಲು ಪ್ರೀತಿ. ಪ್ರತಿ ಯುದ್ಧವೇ ಆಗಲಿ ಮತ್ತೇನೇ ಆಗಲಿ ತಾಳ್ಮೆಯಿಂದ ಶ್ರದ್ಧೆಯಿಂದ ತನ್ನ ಕೆಲಸ ಮಾಡಿಕೊಂಡು ಬರುತ್ತಾ ಇತ್ತು..
    ಹೀಗೆ ಇರುವಾಗ ಆನೆಗೆ ಕೂಡ ವಯಸ್ಸಾಗ್ತಾ ಬಂತು.. ಕೆಲ್ಸ ಮಾಡೋ ಕ್ಷಮತೆ ಕುಂದಿದಂತೆ ಕಾಣ ತೊಡಗಿತು.
    ರಾಜ ಇನ್ನು ಈ ಆನೆಗೆ ತೊಂದರೆ ಕೊಡುವುದು ಬೇಡ ಎಂದು ಅದನ್ನ ಕೆಲಸಕ್ಕೆ ಹಚ್ಚುವುದ ನಿಲ್ಲಿಸಲು ಹೇಳಿದ. ಆನೆ ಮಂಕಾಗತೊಡಗಿತು..
    ಒಮ್ಮೆ ನೀರು ಕುಡಿಯಲು ಹೋದ ಆನೆ ಕೆಸರಿನಲ್ಲಿ ಸಿಕ್ಕಿಕೊಂಡು ಬಿಟ್ಟಿತು.. ಎಷ್ಟೇ ಪ್ರಯತ್ನ ಪಟ್ಟರೂ ಹೊರ ಬರಲು ಸಾಧ್ಯವಾಗದೆ ಘಿಳಿಡಲು ತೊಡಗಿತು.. ರಾಜ ಸೈನಿಕರ ಜೊತೆ ಬಂದು ಎಷ್ಟೇ ಪ್ರಯತ್ನ ಪಟ್ಟರೂ ಆನೆ ಕೆಸರಲ್ಲಿ ಹೂತುಕೊಳ್ಳುತ್ತಲೇ ಹೋಯ್ತು .. ರಾಜ ನೊಂದುಕೊಂಡ .. ಮಂತ್ರಿಗಳ ಮುಖ ನೋಡಿದ .. ಒಬ್ಬ ಮಂತ್ರಿ ಸೈನಿಕರ ಕರೆದು ಯುದ್ಧ ಕಹಳೆಯ ದನಿ ಹೊರಡಿಸಲು ಹೇಳಿದ .. ಕಹಳೆಯ ದನಿ ಮೊಳಗಿದಂತೆಲ್ಲಾ ಆನೆ ಕಿವಿ ನಿಮಿಸಿರಿ ಕಣ್ಣರಳಿಸಿ ನೋಡಿ ತನ್ನೆಲ್ಲ ಶಕ್ತಿಯನ್ನು ಹಾಕಿ ಹೊರ ಬಂತು ..ಎಲ್ಲರೂ ಹರ್ಷೋದ್ಘಾರ ಮಾಡಿದರು ...
    ಮಂತ್ರಿ ಹೇಳಿದ *‘ಶರೀರ ಬಲವೊಂದೇ ಬದುಕಲ್ಲ ಪ್ರಭು, ಬದುಕಲು ಒಳಗಿನಿಂದ ಒಂದು ಸ್ಪೂರ್ತಿ ಬೇಕು.. ನನ್ನ ಅವಶ್ಯಕತೆ ಈ ಜಗತ್ತಿಗಿದೆ ಎಂಬ ಭಾವದ ಪ್ರೇರಣೆ ಬೇಕು...ಆ ಸ್ಪೂರ್ತಿ ಬದುಕಲು ಪ್ರೇರೇಪಿಸಿದಾಗ ಮಾತ್ರ ಬದುಕಲು ಛಲ ಬರುತ್ತದೆ . ಆ ಸ್ಫೂರ್ತಿ ನಮ್ಮ ಮೇಲೆ ನಮ್ಮವರು ಇಟ್ಟಿರುವ ಭರವಸೆ, ಪ್ರೀತಿಗಳಿಂದ ಸಿಗುತ್ತದೆ ..... ‘*
    *ಒಂದು ಸಣ್ಣ ಒಳ್ಳೆಯ ಮಾತು,ಸ್ಪರ್ಶ, ನಗು ಬದುಕಿನ ಹಾದಿಯ ಬದಲಿಸಬಲ್ಲುದು...*
    5 min
  • ಜಪಮಾಲೆಯಲ್ಲಿ 108 ಮಣಿಗಳು ಯಾಕೆ ಇರುತ್ತವೆ ಗೊತ್ತಾ?*🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌ ‌ ‌
    ‌‌ ‌ ‌ ‌ ‌ ‌ ‌ ‌ ‌ ‌ ‌
    ದೇವರ ಆರಾಧನೆ ಹಾಗೂ ಧ್ಯಾನ ಮಾಡುವಾಗ ವಿಶೇಷ ಮಂತ್ರಗಳನ್ನು ಹೇಳುವುದು ಮತ್ತು ಜಪ ಮಾಡುವುದು ಒಂದು ಧಾರ್ಮಿಕ ಪದ್ಧತಿ. ಈ ಪವಿತ್ರ ಆಚರಣೆಯಲ್ಲಿ ಸಾಮಾನ್ಯವಾಗಿ ದೇವರ ನಾಮವನ್ನು 108 ಬಾರಿ ಹೇಳುತ್ತೇವೆ. ಇಲ್ಲವೇ ದೇವರಿಗೆ ಇರುವ 108 ಹೆಸರುಗಳನ್ನು (ಅಷ್ಟೋತ್ತರ ಶತನಾಮ) ಹೇಳುವುದು ಸಹಜ. ದೇವರ ನಾಮ ಸ್ಮರಣೆಯಲ್ಲಿ ವ್ಯತ್ಯಾಸ ಅಥವಾ ತಪ್ಪು ಸಂಖ್ಯೆಗಳ ಬಳಕೆ ಆಗಬಾರದು ಎನ್ನುವ ಉದ್ದೇಶದಿಂದ ಜಪ ಮಾಲೆಯನ್ನು ಬಳಸಲಾಗುವುದು. ಜಪ ಮಾಲೆಯಲ್ಲಿ 108 ಮಣಿಗಳು ಇರುವುದರಿಂದ ಧ್ಯಾನ ಅಥವಾ ಜಪದ ರೀತಿಯು ಸರಿಯಾಗಿ ನಡೆಯುವುದು. ಎಲ್ಲಾ ಜಪ ಮಾಲೆಯಲ್ಲಿ 108 ಮಣಿಗಳೇ ಏಕೆ ಇರಬೇಕು? ದೇವರ ನಾಮವನ್ನು 108 ಬಾರಿಯೇ ಏಕೆ ಜಪಿಸಬೇಕು? 108 ಎನ್ನುವುದು ಏಕೆ ಶ್ರೇಷ್ಠ? ಎನ್ನುವ ಗೊಂದಲ ಕಾಡುವುದು ಸಹಜ. ಅಂತಹ ಒಂದು ಗೊಂದಲಗಳಿಗೆ ಇಲ್ಲಿದೆ ಮಾಹಿತಿ.
    ‌ ‌ *ಜಪಮಾಲೆ ಪವಿತ್ರ ಧಾರ್ಮಿಕ ವಸ್ತುಗಳಲ್ಲಿ ಒಂದಾಗಿದೆ*
    ಪವಿತ್ರ ಧಾರ್ಮಿಕ ವಸ್ತುಗಳಲ್ಲಿ ಒಂದಾದ ಜಪ ಮಾಲೆಯು 108 ಮಣಿಗಳನ್ನು ಹೊಂದಲು ಸಾಕಷ್ಟು ಕಾರಣಗಳಿವೆ. 108 ಬಾರಿ ಜಪ ಮಾಡುವುದು ಅಥವಾ ಅದಕ್ಕಿಂತಲೂ ಹೆಚ್ಚು ಬಾರಿ ಪಠಿಸುವುದರಿಂದ ಯಾವ ತೊಂದರೆಯೂ ಉಂಟಾಗದು. ಪ್ರಾಮಾಣಿಕತೆ, ಭಕ್ತಿ ಭಾವದಿಂದ ಮಾಡುವ ಎಲ್ಲಾ ಸಂಗತಿಯೂ ದೇವರಿಗೆ ಪ್ರಿಯವಾದದ್ದೇ. ಅದರಿಂದ ಸಾಕಷ್ಟು ಪುಣ್ಯ ಪ್ರಾಪ್ತಿಯಾಗುವುದನ್ನು ಎನ್ನಲಾಗುತ್ತದೆ.
    ‌ *ಧಾರ್ಮಿಕ ಮಹತ್ವ*
    9 ಮತ್ತು 12 ಎನ್ನುವ ಈ ಎರಡು ಸಂಖ್ಯೆಗಳು ಅನೇಕ ಸಾಂಪ್ರದಾಯಿಕ ಆಧ್ಯಾತ್ಮಿಕ ಮಹತ್ವವನ್ನು ಪಡೆದುಕೊಂಡಿದೆ. 12ರ ಸಂಖ್ಯೆಯನ್ನು 9 ಬಾರಿ ಹಾಕಿದರೆ 108 ಎನ್ನುವ ಫಲಿತಾಂಶದ ಸಂಖ್ಯೆ ದೊರೆಯುವುದು. ಅಂತೆಯೇ 108ರಲ್ಲಿ 1 ಮತ್ತು 8 ನ್ನು ಸೇರಿಸಿದರೆ 9 ಎನ್ನುವ ಉತ್ತರ ದೊರೆಯುವುದು. ಹಾಗಾಗಿ 9 ಮತ್ತು 12, 108ಕ್ಕೆ ಸಮಾನವಾಗಿರುತ್ತವೆ. ಅಂತೆಯೇ ಗಣಿತದಲ್ಲಿ 1, 2 ಮತ್ತು 3 ಅಧಿಕ ಶಕ್ತಿಯನ್ನು ಪಡೆದುಕೊಂಡಿವೆ. 1ರ ಶಕ್ತಿಯು 1x 1= 1ಕ್ಕೆ ಸಮನಾಗಿರುತ್ತದೆ. 2ರ ಶಕ್ತಿಯು 2x2=4 ಆಗಿರುತ್ತದೆ. 3ರ ಶಕ್ತಿಯು 3x3x3= 27ಆಗಿರುತ್ತದೆ. ಅಂದರೆ 1x 4x 27= 108 ಬರುವುದು. ಹಾಗಾಗಿ 108ನ್ನು ಹರ್ಷದ ಸಂಖ್ಯೆ ಎಂದು ಪರಿಗಣಿಸಲಾಗುವುದು. ಹರ್ಷ ಎಂದರೆ ದೊಡ್ಡ ಪ್ರಮಾಣದ ಸಂತೋಷ ಎನ್ನುವ ಅರ್ಥವನ್ನು ನೀಡುವುದು.
    *108 ಪವಿತ್ರ ಮೊತ್ತ*
    108-
    ಕೆಲವು ಪುರಾಣ ಹೇಳಿಕೆಗಳು ಹಾಗೂ ಲೆಕ್ಕಾಚಾರದ ಪ್ರಕಾರ ಮನುಷ್ಯನು 108 ಬಗೆಯ ಆಸೆಗಳನ್ನು ಹೊಂದಿರುತ್ತಾನೆ. ಅಂತೆಯೇ 108 ಬಗೆಯ ಸುಳ್ಳುಗಳನ್ನು ಹೇಳುತ್ತಾನೆ. 108 ಬಗೆಯ ಭ್ರಮೆಯನ್ನು ಅಥವಾ ಅಜ್ಞಾನ ರೂಪವನ್ನು ಹೊಂದಿರುತ್ತಾನೆ. ಸಂಸ್ಕೃತವರ್ಣ ಮಾಲೆಯಲ್ಲಿ 54 ಅಕ್ಷರಗಳಿವೆ. ಅವುಗಳಲ್ಲಿ ಪ್ರತಿಯೊಂದು ಪುಲ್ಲಿಂಗ ಮತ್ತು ಸ್ತ್ರೀ ಲಿಂಗ ಹಾಗೂ ಶಿವ ಮತ್ತು ಶಕ್ತಿ ಎನ್ನುವ ಅರ್ಥ ನೀಡುತ್ತವೆ. ಈ 54 ವರ್ಣಮಾಲೆಯನ್ನು ಎರಡು ಬಾರಿ ಹಾಕಿದರೆ ಆಗ ಅದು 108ರ ಸಂಖ್ಯೆಯನ್ನು ನೀಡುವುದು. ಈ ರೀತಿಯಲ್ಲಿಯೇ ಕೆಲವು ಸಂಗತಿಗಳು 108 ಎನ್ನುವ ಪವಿತ್ರ ಮೊತ್ತವನ್ನು ನೀಡುವುದು.
    *ಹೃದಯದ ಚಕ್ರಗಳು*
    ಹೃದಯದ ಚಕ್ರಗಳು ಶಕ್ತಿ ರೇಖೆಗಳ ಛೇದಕವಾಗಿವೆ. ಒಟ್ಟು 108 ಶಕ್ತಿ ರೇಖೆಗಳು ಒಮ್ಮುಖವಾಗಿ ಹೃದಯ ಚಕ್ರವನ್ನು ರೂಪಿಸುತ್ತವೆ ಎಂದು ಹೇಳಲಾಗುವುದು. ಅವುಗಳಲ್ಲಿ ಒಂದು ಸುಷುಮ್ನಾ ಕಿರೀಟ ಚಕ್ರಕ್ಕೆ ಕಾರಣವಾಗುವುದು. ಅದು ಸ್ವಯಂ ಸಾಕ್ಷಾತ್ಕಾರದ ಹಾದಿ ಎಂದು ಹೇಳಲಾಗುವುದು. ಪ್ರಾಣಯಾಮದ ಮೂಲಕ 108 ಬಾರಿ ಉಸಿರಾಟವನ್ನು ಹೊಂದುವಂತೆ ಶಾಂತವಾಗಿರಲು ಸಾಧ್ಯವಾದರೆ ಜ್ಞಾನೋದಯ ಆಗುವುದು ಎಂದು ಸಹ ಹೇಳಲಾಗುವುದು.
    *ಉಪನಿಷತ್ತುಗಳ ಹೇಳಿಕೆ*
    ಉಪನಿಷತ್ತುಗಳಲ್ಲಿ ಹೇಳಿರುವ ಪ್ರಕಾರ ಋಷಿಮುನಿಗಳಿಗೆ ಸಂಬಂಧಿಸಿದಂತೆ ಬುದ್ಧಿವಂತಿಕೆಯ ಗ್ರಂಥಗಳು 108 ಇವೆ. ಭಾವನೆಗಳಲ್ಲಿ 108 ಬಗೆಗಳಿವೆ. ಅದರಲ್ಲಿ 36 ಭೂತಕಾಲಕ್ಕೆ ಸಂಬಂಧಿಸಿರುತ್ತವೆ. 36 ವರ್ತಮಾನಗಳಿಗೆ ಸಂಬಂಧಿಸಿರುತ್ತವೆ ಮತ್ತು 36 ಭವಿಷ್ಯಕ್ಕೆ ಸಂಬಂಧಿಸುತ್ತದೆ ಎಂದು ಹೇಳಲಾಗುವುದು.
    *ಜ್ಯೋತಿಷ್ಯ ಶಾಸ್ತ್ರಗಳಲ್ಲಿ*
    ಜ್ಯೋತಿಷ್ಯ ಶಾಸ್ತ್ರಕ್ಕೆ ಸಂಬಂಧಿಸಿದಂತೆ 12 ನಕ್ಷತ್ರ ಪುಂಜಗಳಿವೆ. ಅವುಗಳು 9 ವಿಭಾಗಗಳನ್ನು ಒಳಗೊಂಡಿವೆ. ಅವುಗಳನ್ನು ಚಂದ್ರಕಲಗಳು ಎಂದು ಕರೆಯಲಾಗುವುದು. 12 ನಕ್ಷತ್ರ ಪುಂಜಗಳನ್ನು 9 ಬಾರಿ ಲೆಕ್ಕಿಸಿದರೆ 108ಕ್ಕೆ ಸಮಾನವಾಗಿರುತ್ತದೆ. ಕುಂಡಲಿಯಲ್ಲಿ ಹನ್ನೆರಡು ಮನೆಗಳು ಮತ್ತು 9 ಗ್ರಹಗಳು ಆಳುತ್ತವೆ. ಒಂಬತ್ತು ಗ್ರಹಗಳು 12 ಬಾರಿ ಲೆಕ್ಕಿಸಿದರೆ 108ಕ್ಕೆ ಸಮಾನವಾಗಿರುತ್ತದೆ ಎಂದು ಹೇಳಲಾಗುವುದು.
    *ದೇವತೆಗಳ ಹೆಸರು*
    ಹಿಂದೂ ದೇವತೆಗಳಿಗೆ ಸಂಬಂಧಿಸಿದಂತೆ 108 ದೇವತೆಗಳಿವೆ. ಪ್ರತಿಯೊಂದು ದೇವತೆಗಳು ಸಹ 108 ನಾಮಗಳನ್ನು ಹೊಂದಿವೆ. ಭಗವಾನ್ ಶ್ರೀ ಕೃಷ್ಣನು 108 ಗೋಪಿಕೆಯರನ್ನು ಹೊಂದಿದ್ದನು. ಅಂತೆಯೇ 108 ಸೇವಕ ಮತ್ತು ಸೇವಕಿಗಳು ಇದ್ದರು ಎನ್ನಲಾಗುವುದು. 108 ಎನ್ನುವ ಅಂಕೆಯಲ್ಲಿ ಬರುವ 1ರ ಸಂಖ್ಯೆಯು ಉನ್ನತ ಮತ್ತು ಸತ್ಯವನ್ನು ಸೂಚಿಸುತ್ತದೆ. 0 ಎನ್ನುವುದು ಆಧ್ಯಾತ್ಮಿಕ ಆಚರಣೆ, ಶೂನ್ಯತೆ ಮತ್ತು ಸಂಪೂರ್ಣತೆಯನ್ನು ಸೂಚಿಸುತ್ತದೆ. 8 ಎನ್ನುವುದು ಅನಂತ ಅಥವಾ ಶಾಶ್ವತ ಎನ್ನುವ ಅರ್ಥವನ್ನು ನೀಡುವುದು.
    *ಸೂರ್ಯ ಮತ್ತು ಭೂಮಿ*
    ಸೂರ್ಯನ ವ್ಯಾಸವು ಭೂಮಿಯ ವ್ಯಾಸಕ್ಕಿಂತ 108 ಪಟ್ಟು ಹೆಚ್ಚಿವೆ. ಅಂತೆಯೇ ಭೂಮಿಯಿಂದ ಸೂರ್ಯನ ಅಂತರವು ಸೂರ್ಯನ ವ್ಯಾಸಕ್ಕಿಂತ 108 ಪಟ್ಟು ಹೆಚ್ಚಾಗಿರುತ್ತದೆ. ಅಂತೆಯೇ ಭೂಮಿಯಿಂದ ಚಂದ್ರನ ಅಂತರವು ಚಂದ್ರನ ವ್ಯಾಸಕ್ಕಿಂತ 108 ಪಟ್ಟು ಹೆಚ್ಚಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬೆಳ್ಳಿಯು ಚಂದ್ರನನ್ನು ಪ್ರತಿನಿಧಿಸುತ್ತದೆ. ಬೆಳ್ಳಿಯ ಪರಮಾಣು ತೂಕವು 108ನ್ನು ಹೊಂದಿರುತ್ತದೆ.
    *ಧಾರ್ಮಿಕ ಸಂಗತಿಯಲ್ಲಿ*
    ಧ್ಯಾನದ ಶೈಲಿಯು 108 ಪ್ರಕಾರಗಳನ್ನು ಒಳಗೊಂಡಿದೆ.
    14 min
  • ಕೆಟ್ಟದರೊಳಗೆ ಒಳ್ಳೆಯದು ಹೆಕ್ಕುತ್ತಾ... ದುಃಖದಲ್ಲಿ ಸುಖವು ಕಾಣುತ್ತಾ...
    ಕೆಟ್ಟದರೊಳಗೆ ಒಳ್ಳೆಯದು ಹೆಕ್ಕುತ್ತಾ...
    ದುಃಖದಲ್ಲಿ ಸುಖವು ಕಾಣುತ್ತಾ...
    ಶತ್ರುವಿನಲ್ಲೂ ಸದ್ಗುಣ ಹುಡುಕುತ್ತಾ....
    ಹೋಗಬೇಕು ಎನ್ನುವುದು ಒಂದು ಕಾಲಾಂತರ ಮತ್ತೊಂದು ಕಾಲಾಂತರಕ್ಕೆ ಕೊಡುವ ಸಂದೇಶ....
    ಕೈಯಲ್ಲಿ ದುಡ್ಡು ಇಲ್ಲದ ಒಬ್ಬ ಅಸಹಾಯಕ ಯಾವುದಾದರೂ ಹೋಟೆಲಿಗೆ ಹೋಗಿ,
    " ದುಡ್ಡಿಲ್ಲ" ಎಂದಾಗ,
    ಖಾಲಿ ಗ್ಲಾಸು- ಖಾಲಿ ತಟ್ಟೆ ಇಟ್ಟು
    "ತಿನ್ನು " ಎಂದರೆ......
    ಹಸಿವು ಇದ್ದರೂ,
    ತಿಂದಂತೆ ವಿಶ್ವಾಸದ ಮುಖ
    ಮಾಡಿ/ತೋರಿ ಹೊರಬರಲು ನೋಡಬೇಕು.
    ಅದೂ ಒಂದು ಸಾಧನೆಯೇ ಹೌದು.
    ಈ 2020ಎಂಬ ವರ್ಷಮಾಪನ,
    ಕೊರೋನಾ ಎಂಬ ಕಣ್ಣಿಗೆ ಕಾಣದ ರೋಗ ತಂದು ಇಟ್ಟಾಗ....
    ನಾವೂ ಔಷಧಿ ಇಲ್ಲದ ಅಸಾಯಕರಾದರೂ, ಜೀವನದಲ್ಲಿ ಎಲ್ಲರೂ ಸಾಧನೆ ಮಾಡಲು ಸಾಧ್ಯ ಎಂದು ತೋರಿಸಿಕೊಟ್ಟ ವರುಷ.
    2020ಎಂಬ ಕಾಲದ ಕೊಠಡಿಯ ಕೆಲವು ಕಿಟಕಿ ಬಾಗಿಲುಗಳನ್ನು ನೆನೆದುಕೊಂಡಾಗ.....
    ಈ ರೋಗದ ಹೆಸರಲ್ಲಿ ಮನುಷ್ಯ ದೇಹವನ್ನು ಆಟಾಟಿಕೆಯ ವಸ್ತುವಿನಂತೆ *ಕೈ*-ಗಾರಿಕೆ ಮಾಡಿದವರನ್ನು ಒಂದು ಕಿಟಕಿಯಿಂದ ಕಂಡೆವು.
    ಮನುಷ್ಯ ದೇಹವನ್ನು ಸುಶ್ರೂಷೆ ಮಾಡಬೇಕಾದ ಆಸ್ಪತ್ರೆ , ರೋಗಿಯ ದೇಹ ಮರಳಿ ಸಿಗಲು Pvt finance companyಯಂತೆ, ಅಡವಿಟ್ಟ ದೇಹ ಮರಳಿ ಪಡೆಯುವ ರೀತಿ ನಿಯಮಗಳನ್ನು ತೋರಿ ಅಮಾನವೀಯತೆಯ ಪುಳಕತೆ ಪಸರಿಸಿದ್ದು
    ತೋರಿತು ಮತ್ತೊಂದು ಕಿಟಕಿ....
    ಈ ರೋಗದ ಹೆಸರಲ್ಲಿ ಒಬ್ಬರಿಗೊಂದು ನ್ಯಾಯ ಇನ್ನೊಬ್ಬರಿಗೊಂದು ನ್ಯಾಯ(ಮಾಸ್ಕ್ ಸಾರ್ವಜನಿಕ ಹಾಕದಿದ್ದರೆ /ಜನಪ್ರತಿನಿಧಿ ಹಾಕದಿದ್ದರೆ)ಎಂಬುವ ಚಿಕ್ಕ ಸತ್ಯ ಅರ್ಥಮಾಡಿಕೊಂಡರೆ, ಅವನು ಒಬ್ಬ ಪ್ರಭುದ್ದ ಸತ್ಪ್ರಜೆ ಎನ್ನಬಹುದು - ಎಂದು ದೃಶ್ಯವಲ್ಕರಣೆ ತೋರಿದ ಇನ್ನೊಂದು ಕಿಟಕಿ.....
    ನಮ್ಮ- ನಿಮ್ಮ ಊರುಗಳಿಗೆ, ನೆರೆಕರೆಗಳಿಗೆ ಓಡಾಡುವ ಸ್ವಾತಂತ್ರ್ಯದ ಬೆಲೆ - ಬಲೆಯಲ್ಲಿ ಸಿಲುಕಿ ಉಸಿರುಗಟ್ಟಿದ್ದು ತೋರಿದ ಮಗದೊಂದು ಕಿಟಕಿ.....
    ಹಳೆಯ ಪೂರ್ವಜರು ಅನುಸರಿಸುತ್ತಿದ್ದ ಶುದ್ಧತೆಯ ಮಹತ್ವ - ಮತ್ತೊಮ್ಮೆ ಅನುಸರಿಸಲು ಪ್ರೇರಣೆ ಇತ್ತ ಕಿಟಕಿ......
    ಮಕ್ಕಳಿಗೆ ಎಂದೂ ಶಾಲಾ ಕೊಠಡಿಯೊಳಗೆ- ಅಧ್ಯಾಪಕರ ಸಾನ್ನಿಧ್ಯದಲ್ಲಿ
    ಸಿಗುವ ವಿದ್ಯಾಭ್ಯಾಸದ ಮುಂದೆ,
    ತಂತ್ರಜ್ಞಾನ ಭರಿತ ಅಂತರ್ಜಾಲ ಪಾಠ ಬದಲಿಯಾಗುವುದಿಲ್ಲ ಎಂಬ
    ಪ್ರಾಯೋಗಿಕ ಸತ್ಯ ಹೇಳಿಕೊಟ್ಟ ಕಿಟಕಿ......
    ಮನುಷ್ಯ ---
    ಉಳಿದ ಪ್ರಾಣಿ ಪಕ್ಷಿ-ಗಿಡ-ಮರ.......
    ..... ಭೂಮಿಯನ್ನೇ
    ನಿರ್ಲಕ್ಷ್ಯ ಮಾಡಿದಾಗ,
    ಪ್ರಕೃತಿ *ಮನುಷ್ಯನನ್ನೇ*
    *ಮನುಷ್ಯನನ್ನು* ಮಾತ್ರ
    ಲಕ್ಷ್ಯವಾಗಿ ಒಂದು ರೋಗವನ್ನು/ ಸಂದಿಗ್ದತೆಯನ್ನು/ಅಸಹಾಯಕತೆಯನ್ನು ತಂದಿಡಬಹುದು.
    ಪ್ರಕೃತಿಯ ಸಕಲಚರಾಚರಗಳ ಸ್ವಾತಂತ್ರ್ಯ
    ನಾವು ಮನುಜರು ಕುಂಠಿತಗೊಳಿಸಿದರೆ....
    ಪ್ರಕೃತಿ ನಮ್ಮನ್ನು ಪ್ರಕೃತಿಯಲ್ಲೇ ಏಕಾಂಗಿ
    ಮಾಡುತ್ತದೆ ಎಂದು ಎಚ್ಚರಿಸಿದೆ ಕಿಟಕಿ....
    ಹಲವಾರು ಗಾದೆಗಳನ್ನು...
    ಆರೋಗ್ಯವೇ ಭಾಗ್ಯ
    ಹನಿ ಹನಿ ಕೂಡಿಟ್ಟ ಹಣ ಸಂಕಷ್ಟದೊಳಗಿನ ಸುಖ
    ಹಾಸಿಗೆ ಇದ್ದಷ್ಟು ಕಾಲು ಚಾಚು
    .......
    ಈ ಗಾದೆಗಳ ಅರ್ಥಗರ್ಭ ತೋರಿದ ಕಿಟಕಿ.
    ಯಾರೂ ಶಾಶ್ವತವಲ್ಲ
    ದಿನಾ ದುಡಿಯುವವನಿಗೊಂದು ಕುಟುಂಬವಿದೆ.
    ಯಾರೂ ಈ ಭುವಿಯಲ್ಲಿ ಶಾಶ್ವತವಲ್ಲ
    ಏಕಾಂಗಿತನದ ಆಂತರಿಕ ಶಕ್ತಿಗಳ ಅರಿವು.
    ಪರಸ್ಪರ ಸಹಾಯದಲ್ಲಿರುವ ಸ್ವರ್ಗ,
    ಸಮಯ-ವರುಮಾನಗಳ ಬೆಲೆ,
    ...........ಮುಂತಾದ
    ಮೌಲ್ಯಗಳನ್ನು ತೋರಿದ ಕಿಟಕಿಗಳು
    ಆ ಕಿಟಕಿಯಲ್ಲಿ ಕಂಡಿದ್ದು ನಮಗೆ ಅನ್ವಯಿಸುವುದಿಲ್ಲ,
    ಆ ಕಿಟಕಿಯಲ್ಲಿ ಕಂಡಿದ್ದಕ್ಕೂ ನಮಗೂ ಸಂಬಂಧವಿಲ್ಲ, ಎಂದು ಕಿಟಕಿಯನ್ನು ಮುಚ್ಚಿ
    ಮರೆವಿನ ಮೊಳೆ ಹೊಡೆದು
    ಮೆರೆಯುವ ಮನಗಳನ್ನು
    ಅವರರಿಯದ ಕಿಟಕಿಯಿಂದ
    ನಾವು ನೋಡುವಂತೆ ಮಾಡಿತು ಪಕ್ಕದ ಕಿಟಕಿ!!!
    ಹೀಗೆ ಜನರನ್ನು ಪ್ರಭುದ್ದರನ್ನಾಗಿ ಚಿಂತಿಸುವ,
    ಮನುಷ್ಯ ತಾನು ಏನೆಂದು ಅರಿಯುವ ಒಂದು ಅವಕಾಶ ಈ 2020....
    ತನ್ನೊಳಗಿನ ಕಿಟಕಿ ತೆರೆಯಲು ನಮಗೊಂದು ಸಂದರ್ಭ ಕೊಟ್ಟಿತು.
    ಇನ್ನು ಮುಂದಿನ ದಿನಗಳಲ್ಲಿ ಜನರು ಕಾಲವೆಂಬ ಗುರು ಹೇಳುತ್ತಿರುವುದನ್ನು ಕಿಂಚಿತ್ ಅರ್ಥಮಾಡಿಕೊಳ್ಳಲಿ....
    ಎಂಬ ಆಶಯಗಳೊಂದಿಗೆ,
    ನಿಮ್ಮವ ನಲ್ಲ
    *ರೂಪು*
    7 min
  • *ಮತ್ತೆಂದೂ ಕಾಣದಿರು ನೀ 2020!* ತುಂಬಿದ ಕಂಗಳ ವಿದಾಯ ನಿನಗೆ, ಮತ್ತೆ ಕಾಣದಿರು ಓ 2020! ದುಡಿವ ಕೈಗಳ ಕನಸಿನ ಕೆಲಸ
    *ಮತ್ತೆಂದೂ ಕಾಣದಿರು ನೀ 2020!*
    ತುಂಬಿದ ಕಂಗಳ ವಿದಾಯ ನಿನಗೆ,
    ಮತ್ತೆ ಕಾಣದಿರು ಓ 2020!
    ದುಡಿವ ಕೈಗಳ ಕನಸಿನ ಕೆಲಸ ಕಸಿದೆ,
    ದಿನದುಡುಮೆಯವರ ಹೊಟ್ಟೆಗೆ ಹೊಡೆದೆ,
    ಬದುಕನು ಭರಿಸಲಾಗದ ಬವಣೆಯಾಗಿಸಿದೆ,
    ನಗುವ ಕಂಗಳಲಿ ಕಂಬನಿಯ ತುಂಬಿದೆ,
    ನೀನಾರಿಗಾದೆಯೇ ಓ 2020!
    ಹಿರಿಯ ಜೀವಗಳು ಬೆಂದು ಬವಳಿದವು,
    ಕಾಲು ಮುರಿದ ಕಪ್ಪೆಗಳಂತಾದರು,
    ಮಿಡಿವ ಮನದಲಿ ಕಂಬನಿ ಮಡುಗಟ್ಟಿತು,
    ನೋಡು ನೋಡುತಲೇ ಅಂತರ್ಧಾನರಾದರು,
    ನೀನಾರಿಗಾದೆಯೇ ಓ 2020!
    ನೆನ್ನೆ ಮೊನ್ನೆ ಕಂಡ ಗೆಳೆಯರು,
    ಮನಬಿಚ್ಚಿ ಬೆರೆತು ನಕ್ಕವರು,
    ತಿರುಗಿ ನೋಡುವಷ್ಟರಲಿ ಮರೆಯಾದರು,
    ನಿನ್ನ ಕ್ರೂರನೋಟಕೆ ಬಲಿಯಾದರು,
    ನೀನಾರಿಗಾದೆಯೇ ಓ 2020!
    ಕಂದಮ್ಮಗಳ ಕಲಿವ ಶಾಲೆ ಮುಚ್ಚಿಸಿದೆ,
    ಹೊರಗೆ ಕಾಲಿಡುವ ಧೈರ್ಯ ಕಸಿದೆ,
    ಗೆಳೆಯರೊಡನೆ ಬೆರೆಯದಂತೆ ಬಂಧಿಯಾಗಿಸಿದೆ,
    ಮೃದುಮನಗಳಿಗೆ ಮಾಯದ ಬರೆಯೆಳೆದೆ,
    ನೀನಾರಿಗಾದೆಯೇ ಓ 2020!
    ವ್ಯಾಪಾರಗಳ ದೀವಾಳಿ ತೆಗೆದೆ,
    ವ್ಯಾಪಾರಿಗಳ ಬೆನ್ನಿಗೆ ಚೂರಿ ಇಟ್ಟೆ,
    ಹೊಟ್ಟೆಗೆ ಉರಿವ ಕಿಚ್ಚನ್ನಿಟ್ಟೆ,
    ಉಳಿದದ್ದು ಕೇವಲ ತಣ್ಣೀರ ಬಟ್ಟೆ,
    ನೀನಾರಿಗಾದೆಯೇ ಓ 2020!
    ಹುಚ್ಚಾದೆವು, ಪೆಚ್ಚಾದೆವು, ಬೆಚ್ಚಿದೆವು,
    ಎಲ್ಲ ಮು‌ಚ್ಚುವ ಮುಂಗೋಟಿಯ ಮರೆಯಲ್ಲಿ,
    ನೋವು, ನಿರಾಸೆಗಳ ಅಡಗಿಸಿಕೊಂಡೆವು,
    ತಲೆತಗ್ಗಿಸಿ ಅಸಹಾಯಕರಾಗಿ ನಿಂತೆವು,
    ನೀನಾರಿಗಾದೆಯೇ ಓ 2020!
    ಈಗ ಹೇಳುತಿರುವೆವು ನಿನಗೆ ವಿದಾಯ,
    ನೀ ಮರೆಯಾಗುತಿರುವುದು ಅಭಯಪ್ರದಾಯ,
    ಶೋಕದ ಕಣ್ಣೀರು ಆವಿಯಾಗುತಿದೆ,
    ಆನಂದಭಾಷ್ಪ ಮೂಡುತಿದೆ ನಿನ್ನ ಬೆನ್ನ ಕಂಡು,
    ಹೋಗು, ಇನ್ನು ನೀ ಬರಬೇಡ 2020!🙏
    ಆದರೆ ನನ್ನ ಸಮಾನ ಯಾರಿಲ್ಲ
    ಎಂಬ ಗರ್ವದ ಅಹಂಕಾರದ ಮನಕೆ
    ತಲೆ ಬಾಗುವುದಾ ಕಲಿಸಿದೆ
    ನನ್ನೊಂದಿಗೆ ನಾ ಬೆರೆಯುವುದಾ ಕಲಿಸಿದ ಮಹಾ ಗುರುವಾದೆ ನೀ
    ಹೋಗು...ಇನ್ನೂ ಕಾಡದೇ...
    ಮತ್ತೊಮ್ಮೆ, ಮಗದೊಮ್ಮೆ ಬಾರದಿರು...
    ಹೊರಡು ನೀ ಬಾರದಾ ಲೋಕಕೆ
    ಒನ್ಸ್ ಫಾರ್ ಆಲ್ ಗುಡ್ ಬೈ 2020!🙋‍♀️🙋‍♀️
    6 min

About Dr Balakrishna Maddodi

From the publisher's feed

Hi