Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • ನಿಶ್ಚಿತಾರ್ಥ ಉಂಗುರ ಹುಡುಗಿಯ ಎಡಗೈಗೆ ಹಾಕುವುದೇಕೆ?
    ಮದುವೆ ನಿಶ್ಚಿತಾರ್ಥ ಮಾಡುವಾಗ ಉಂಗುರ ಬದಲಾಯಿಸುವ ಸಂಪ್ರದಾಯ ಬಹುತೇಕ ಎಲ್ಲಾ ಧರ್ಮದಲ್ಲಿ ಇದೆ. ನಿಶ್ಚಿತಾರ್ಥ ಉಂಗುರವನ್ನು ಹಾಕುವಾಗ ಹುಡುಗ ಹುಡುಗಿಯ ಎಡಗೈಯ ಉಂಗುರ ಬೆರಳಿಗೆ ಉಂಗುರ ತೊಡಿಸಿದರೆ, ಹುಡುಗಿ ಹುಡುಗನ ಬಲಗೈಗೆ ಉಂಗುರ ತೊಡಿಸುತ್ತಾಳೆ.
    ನಿಶ್ಚಿತಾರ್ಥದ ಶಾಸ್ತ್ರ ನೋಡುವಾಗ ಕೈಯಲ್ಲಿ ಐದು ಬೆರಳುಗಳಿದ್ದರೂ ಏಕೆ ಕಿರು ಬೆರಳಿನ ಪಕ್ಕದ ಬೆರಳಿಗೆ ಉಂಗುರ ತೊಡಿಸುತ್ತಾರೆ ಎಂಬ ಆಲೋಚನೆ ಎಲ್ಲರ ತಲೆಯಲ್ಲಿ ಒಮ್ಮೆಯಾದರೂ ಬಂದಿರುತ್ತದೆ. ಆದರೆ ನಾವುದನ್ನು ಏಕೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡದೆ ಅಲ್ಲಿಗೆ ಬಿಟ್ಟು ಬಿಡುತ್ತೇವೆ.
    ಅದರಲ್ಲೂ ನಿಶ್ಚಿತಾರ್ಥ ಉಂಗುರವನ್ನು ಧರಿಸುವಾಗ ಪುರುಷನಿಗೆ ಬಲಗೈಯ ಉಗುರ ಬೆರಳಿಗೆ ಹುಡುಗಿ ಹಾಕಿದರೆ, ಹುಡುಗಿಗೆ ಎಡಗೈಯ ಉಂಗುರ ಬೆರಳಿಗೆ ಹಾಕುತ್ತಾರೆ. ಏಕೆ ಹುಡುಗಿಯರ ಎಡಗೈಗೆ ಉಂಗುರ ಬೆರಳಿಗೆ ಉಂಗುರು ಹಾಕುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲವೇ? ಹಾಗಾದರೆ ಈ ಲೇಖನ ನಿಮಗಾಗಿ:
    ಎಡಗೈ ಬೆರಳಿನಲ್ಲಿ ಅಡಗಿರುವ ಪ್ರೀತಿಯ ಗುಟ್ಟು :
    ಮಹಿಳೆಯರ ಎಡಗೈಯ ಬೆರಳಿನ ನರ ಹೃದಯದೊಂದಿಗೆ ಸಂಪರ್ಕ ಹೊಂದಿರುತ್ತದೆ. ಆ ಉಗುರಿಗೆ ವೃತ್ತಾಕಾರದ ಉಂಗುರ ಧರಿಸುವುದರಿಂದ ಹೃದಯದಲ್ಲಿ ಆ ವ್ಯಕ್ತಿಯೆಡೆಗಿನ ಪ್ರೀತಿ ಹೆಚ್ಚಾಗುವುದು ಎಂಬ ನಂಬಿಕೆ ಇದೆ. ಲ್ಯಾಟಿನ್ ಭಾಷೆಯಲ್ಲಿ ಉಂಗುರ ಬೆರಳಿಗೆ ವೆನಾ ಆಮೊರಿಸ್ ಎಂದು ಕರೆಯಲಾಗುವುದು, ಅಂದರೆ ಪ್ರೀತಿಯ ನರ ಎಂದರ್ಥ. ಈ ನರ ನಮ್ಮ ಹೃದಯಕ್ಕೆ ಪ್ರೀತಿಯ ಸಂದೇಶ ಕಳಹಿಸುವುದರಿಂದ ಜೀವನ ಸಂಗಾತಿ ಮೇಲೆ ಪ್ರೀತಿ ಹೆಚ್ಚುವುದು.
    ಹೃದಯಕ್ಕೆ ಸಮೀಪವಾದ ವ್ಯಕ್ತಿ :
    ಹೆಣ್ಮಕ್ಕಳು ಎಡಗೈಗೆ ನಿಶ್ಚಿತಾರ್ಥ ಉಂಗುರ ಧರಿಸುವುದರಿಂದ ಬಾಳ ಸಂಗಾತಿಯೆಡೆಗಿನ ಆಕರ್ಷಣೆ ಹಾಗೂ ಪ್ರೀತಿ ಹೆಚ್ಚುವುದು. ಎಡಗೈಗೆ ಉಂಗುರ ಧರಿಸುವುದರಿಂದ ಆ ಬೆರಳಿನ ನರ ಹೃದಯಕ್ಕೆ ಸಂಪರ್ಕ ಹೊಂದಿರುವುದರಿಂದ ಹೃದಯಕ್ಕೆ ಸಮೀಪವಾದ ವ್ಯಕ್ತಿ ಎಂಬುವುದನ್ನು ಆ ಉಂಗುರ ಸೂಚಿಸುತ್ತದೆ.
    ನಂಬಿಕೆಯ ಹಿಂದಿದೆ ಮಧುರ ಭಾವನೆ :
    ವೈಜ್ಞಾನಿಕ ದೃಷ್ಟಿಯಲ್ಲಿ ಈ ನಂಬಿಕೆಯನ್ನು ಒಪ್ಪದೇ ಇರಬಹುದು, ಏಕೆಂದರೆ ಬೆರಳಿನ ಪ್ರತಿಯೊಂದು ನರವೂ ಹೃದಯದೊಂದಿಗೆ ಸಂಪರ್ಕ ಹೊಂದಿರುತ್ತದೆ. ಆದರೆ ಕೆಲವೊಂದು ವಿಷಯಗಳನ್ನು, ಭಾವನೆಗಳನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡು ಸಾಧ್ಯವಾಗುವುದಿಲ್ಲ ಹಾಗೂ ಹಾಗೇ ನೋಡಿದರೆ ಅದರಲ್ಲಿ ಸ್ವಾರಸ್ಯವೇ ಉಳಿಯುವುದಿಲ್ಲ. ಶತಮಾನದಿಂದಲೂ ಹೆಣ್ಮಕ್ಕಳಿಗೆ ನಿಶ್ಚಿತಾರ್ಥದ ಉಂಗುರವನ್ನು ಎಡಗೈನ ಉಂಗುರ ಬೆರಳಿಗೆ ಹಾಕುತ್ತಾರೆ, ಈಗಲೂ ಅದೇ ಸಂಪ್ರದಾಯ ಮುಂದುವರೆದಿದೆ. ನಿಶ್ಚಿತಾರ್ಥ ಉಂಗುರು ಎಡಗೈಯಲ್ಲಾದರೂ ಇರಲಿ, ಬಲಗೈಯಲ್ಲಾದರೂ ಇರಲಿ ಒಟ್ಟಿನಲ್ಲಿ ಉಂಗುರ ಹಾಕಿದವನ ಮೇಲೆ ಪ್ರೀತಿ ಮೂಡಬೇಕು ಎನ್ನುವುದೇ ನಿಶ್ಚಿತಾರ್ಥ ಉಂಗುರದ ಮುಖ್ಯ ಉದ್ದೇಶ ಅಲ್ಲವೇ
    7 min
  • ಬುದ್ಧಿಜೀವಿಗಳು.
    https://nilume.net/2016/06/01/%e0%b2%87%e0%b2%82%e0%b2%a6%e0%b2%bf%e0%b2%a8%e0%b2%b5%e0%b2%b0%e0%b3%86%e0%b2%97%e0%b3%82-%e0%b2%ac%e0%b3%81%e0%b2%a6%e0%b3%8d%e0%b2%a6%e0%b2%bf%e0%b2%9c%e0%b3%80%e0%b2%b5%e0%b2%bf%e0%b2%97%e0%b2%b3/
    3 min
  • ನಮ್ಮ ವಾರ ಸೋಮವಾರದಿಂದಲೇ ಏಕೆ ಪ್ರಾರಂಭವಾಗುತ್ತದೆ ?*
    *ಹಿಂದೂ ಪಂಚಾಂಗದಲ್ಲಿ ೫ ಅಂಗಗಳಿವೆ. ಅವುಗಳೆಂದರೆ ವಾರ, ತಿಥಿ, ನಕ್ಷತ್ರ, ಯೋಗ ಮತ್ತು ಕರಣ. ಇದರಲ್ಲಿ ವಾರ ಎಂಬ ಶಬ್ದವು ‘ಹೋರಾ’ ಎಂಬ ಶಬ್ದದಿಂದ ಉತ್ಪನ್ನವಾಗಿದೆ. ಹಗಲು ಮತ್ತು ರಾತ್ರಿ ಸೇರಿ ಒಂದು ‘ಅಹೋರಾತ್ರ’ ಆಗುತ್ತದೆ. ಒಂದು ಅಹೋರಾತ್ರದಲ್ಲಿ, ಅಂದರೆ ಒಂದು ಸೂರ್ಯೋದಯದಿಂದ ಮುಂದಿನ ದಿನದ ಸೂರ್ಯೋದಯದ ವರೆಗೆ, ೨೪ ಗಂಟೆಗಳು ಅಥವಾ ೨೪ ಹೋರಾ ಇರುತ್ತವೆ. ಒಂದೊಂದು ಹೋರಾ, ಒಂದೊಂದು ಗ್ರಹಕ್ಕೆ ಸಂಬಂಧಪಟ್ಟಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯೋದಯದ ಸಮಯದಲ್ಲಿ ಯಾವ ಗ್ರಹದ ಹೋರಾ ಇರುತ್ತದೆಯೋ, ಅದೇ ಗ್ರಹದ ಹೆಸರನ್ನು ಆ ದಿನಕ್ಕೆ ನೀಡಲಾಗಿದೆ.*
    6 min
  • ವೇದ, ಪುರಾಣ, ಗ್ರಂಥ, ಉಪನಿಷತ್ತು,- ನೋಡುವ ದೃಷ್ಟಿಕೋನ ಸರಿಯಾಗಿರಬೇಕು
    Suprabat...Jai shri krishna
    🙏🙏
    ಒಂದು ಅದ್ಬುತ ವೈಜ್ಞಾನಿಕ ಕತೆ ನಿಮ್ಮ ಮುಂದೆ.
    ಒಬ್ಬ ತಾಯಿ ತನ್ನ ಪೂಜೆ ಕೆಲಸವನ್ನು ಮುಗಿಸಿ ಪುರುಸೊ ತ್ತು ಮಾಡಿಕೊಂಡು ವಿದೇಶದಲ್ಲಿ ನೆಲೆಸಿರುವ ತನ್ನ ಮಗನೊಂದಿಗೆ ವೀಡಿಯೋ ಚಾಟ್ ಮಾಡುತ್ತ ಕೇಳಿಯೇ ಬಿಟ್ಟಳು. ಮಗಾ ಪೂಜೆ ಉಪಾಸನೆ ಏನಾದರೂ ಮಾಡತ್ತಿದ್ದಿಯೋ ಇಲ್ಲವೋ?
    ಮಗ :ಅಮ್ಮಾ, ನಾನೊಬ್ಬ ವೈಜ್ಞಾನಿಕ ಜೀವಿ. ನಾನು ಅಮೆರಿಕದಲ್ಲಿ ಮಾನವನ ವಿಕಾಸದ ಮೇಲೆ ಕೆಲಸ ಮಾಡುತ್ತಿದ್ದೇನೆ. ವಿಕಾಸದ ಸಿದ್ಧಾಂತ ಚಾರ್ಲ್ಸ್ ಡಾರ್ವಿನ್..
    ಅಮ್ಮಾ ನೀನೇನಾದರು ಅವನ ಬಗ್ಗೆ ಕೇಳಿದ್ದಿಯಾ?
    ಅಮ್ಮ :(ನಗುತ್ತ) ಹೌದು, ಡಾರ್ವಿನ್ ಬಗ್ಗೆ ನನಗೆ ಗೊತ್ತಿದೆ. ಅವನು ಯಾವುದೆಲ್ಲ ಶೋಧನೆ ಮಾಡಿದ್ದಾನೆ ಅದು ವಾಸ್ತವದಲ್ಲಿ ಸನಾತನ ಧರ್ಮಕ್ಕೆ ಬಹಳ ಹಳೆಯ ವಿಷಯ. ಒಂದು ವೇಳೆ ನೀನೇನಾದರು ಬುದ್ಧಿವಂತನಾಗಿದ್ದರೆ ಅದನ್ನು ಕೇಳು. (ತಾಯಿ ಪ್ರತಿಸ್ಪರ್ಧಿಯಾಗಿಯೇ ಉತ್ತರ ಕೊಟ್ಟಳು)
    ನೀನೇನಾದರು ದಶಾವತಾರದ ಬಗ್ಗೆ ಕೇಳಿದ್ದಿಯಾ?
    ಮಗ :ವಿಷ್ಣುವಿನ ಹತ್ತು ಅವತಾರ ಅಲ್ಲವೇನಮ್ಮಾ?ಆದರೆ ನನ್ನ ಸಂಶೋಧನೆಗೂ ದಶಾವತಾರಕ್ಕೂ ಎಲ್ಲಿಯ
    ಸಂಭಂಧ?
    ಅಮ್ಮ :ಸಂಬಂಧ ಇದೆ. ನೀನು ಮತ್ತು ಡಾರ್ವಿನ್ ಏನು ತಿಳಿದುಕೊಂಡಿಲ್ಲ ಅದನ್ನು ನಾನು ನಿನಗೆ ತಿಳಿಸುತ್ತೇನೆ.
    ಮೊದಲ ಅವತಾರ ಆಗಿತ್ತು 'ಮತ್ಸ್ಯ' ಅಂದರೆ ಮೀನು. ಹೀಗೆ ಯಾಕೆಂದರೆ ಮಾನವನ ಜೀವನ ನೀರಿನಿಂದಲೇ ಆರಂಭವಾಗಿದೆ. ಇದು ಸತ್ಯ ಹೌದೋ ಅಲ್ಲವೋ?
    (ಮಗ ಈಗ ಲಕ್ಷ್ಯಕ್ಕೊಟ್ಟು ಕೇಳಲಾರಂಭಿಸಿದ)
    ಅದರ ನಂತರ ಬಂತು ಎರಡನೇ ಅವತಾರ 'ಕೂರ್ಮ' ಅರ್ಥಾತ್ ಆಮೆ. ಅದು ಸಮುದ್ರದಿಂದ ಜಮೀನಿನಕಡೆ ವಿಕಾಸ ತೋರಿಸಿತು. ಮೂರನೇ ಅವತಾರ 'ವರಾಹ' ಅಂದರೆ ಹಂದಿ. ಅದರ ಅರ್ಥ ಕಾಡುಪ್ರಾಣಿ. ಅದರಲ್ಲಿ ಅಧಿಕ ಬುದ್ಧಿ ಇರುವುದಿಲ್ಲ. ನೀನು ಅದಕ್ಕೆ ಡಾಯನಾಸೋರ ಎನ್ನುತ್ತೀಯಾ. (ಮಗ ಕಣ್ಣು ಹೊರಳಿಸಿ ಒಪ್ಪಿಗೆ ಸೂಚಿಸಿದ) ನಾಲ್ಕನೇ ಅವತಾರ 'ನರಸಿಂಹ' ಅರ್ಧ ಮಾನವ ಅರ್ಧ ಪಶು ಅದು ತೋರಿಸಿತು ಕಾಡು ಪ್ರಾಣಿಯಿಂದ ಬುದ್ಧಿವಂತ ಜೀವಿಯ ವಿಕಾಸ.
    ಐದನೇ ಅವತಾರ 'ವಾಮನ' ಕುಳ್ಳ. ವಾಸ್ತವವಾಗಿ ಎತ್ತರಕ್ಕೆ ವೃದ್ಧಿ ಯಾಗಲು ಶಕ್ಯನಾಗುತ್ತಿದ್ದ ಅದು ಯಾಕೆಂದು ನೀನೇನಾದರು ಗೊತ್ತಾ? ಯಾಕೆಂದರೆ ಮನಷ್ಯರಲ್ಲಿ ಎರಡು ಪ್ರಕಾರ 1. ಹೋಮೋಇರೆಕ್ಟಸ(ನರವಾನರ) 2.ಹೋಮೋಸೆಪಿಅಂಸ(ಮಾನವ)ಮತ್ತು ಹೋಮೋಸೆಪಿಅಂಸ ಹೋರಾಟವನ್ನು ಗೆದ್ದುಬಿಟ್ಟ. (ಮಗ ದಶಾವತಾರದ ಪ್ರಸಂಗವನ್ನು ಕೇಳಿ ಸ್ತಬ್ಧನಾಗಿ ಹೋದನು.
    ಅಮ್ಮ ಹೇಳುವುದನ್ನು ಮುಂದುವರಿಸಿದಳು)
    ಆರನೇ ಅವತಾರ 'ಪರಶುರಾಮ' ಅವನ ಕೈಯಲ್ಲಿ ಶಸ್ತ್ರ (ಕೊಡಲಿ) ದ ತಾಕತ್ತು ಇದೆ. ಅದು ನಮಗೆ ತೋರಿಸುತ್ತದೆ ಏನೆಂದರೆ ಆ ಮಾನವನಿಗೆ ಗುಹೆ ಅಥವಾ ಕಾಡಿನಲ್ಲಿರುವುದು ಅಸಮಂಜಸ ಮತ್ತು ಅಸಾಮಾಜಿಕ
    ಏಳನೇ ಅವತಾರ 'ಶ್ರೀ ರಾಮ' ಮರ್ಯಾದಾಪುರುಷೋತ್ತಮ. ವಿಚಾರಯುಕ್ತ ಪ್ರಥಮ ಸಾಮಾಜಿಕ ವ್ಯಕ್ತಿ. ಅವನು ಸಮಾಜದ ನಿಯಮ ಮತ್ತು ಸಮಸ್ತ ಸಂಬಂಧಗಳ ಮರ್ಯಾದೆ ತಯಾರಿಸಿದನು.
    ಎಂಟನೇ ಅವತಾರ 'ಶ್ರೀ ಕೃಷ್ಣ' ರಾಜನೇತಾ, ರಾಜನೀತಿಜ್ಞ,ಅದು ಏನು ಕಲಿಸಿತೆಂದರೆ, ಸಮಾಜದ ನಿಯಮಗಳ ಆನಂದ ತೆಗೆದುಕೊಳ್ಳುತ್ತಾ ಸಾಮಾಜಿಕ ಚೌಕಟ್ಟಿನಲ್ಲಿ ಇದ್ದುಕೊಂಡೇ ಯಾವ ರೀತಿ ಇರಲು ಶಕ್ಯ ಎಂಬುದನ್ನು. (ಮಗ ಆಶ್ಚರ್ಯಚಕಿತನಾಗಿ ಕೇಳುತ್ತಲೇ ಇದ್ದ. ಅಮ್ಮ ಜ್ಞಾನದ ಗಂಗೆಯನ್ನು ಹರಿಸುತ್ತಿದ್ದಳು.)
    ಒಂಬತ್ತನೇ ಅವತಾರ 'ಮಹಾತ್ಮ ಬುದ್ಧ' ಇದು ಏನು ತಿಳಿಸುತ್ತದೆಯೆಂದರೆ ವ್ಯಕ್ತಿ ನರಸಿಂಹದಿಂದ ಎದ್ದು ಮಾನವನ ನಿಜವಾದ ಸ್ವಭಾವವನ್ನು ಶೋಧಿಸಿದನು. ಅವನು ಜ್ಞಾನದ ಅಂತಿಮ ಶೋಧನೆಯ ಪರಿಚಯ ಮಾಡಿಕೊಟ್ಟನು.
    ಕೊನೆಯಲ್ಲಿ ಹತ್ತನೆಯ ಅವತಾರ 'ಕಲ್ಕಿ'. ಆ ಮಾನವ ಯಾವುದೆಂದರೆ, ಅದರ ಮೇಲೆ ನೀನು ಶೋಧ ಮಾಡುತ್ತಿದ್ದಿಯಾ. ಆ ಮಾನವ ಅನುವಂಶಿಕ ರೂಪದಿಂದ ಶ್ರೇಷ್ಠನಾಗುವನು. (ಮಗ ಅಮ್ಮನನ್ನು ದಂಗಾಗಿ ನೋಡುತ್ತಲೇ ಇದ್ದ. ಕೊನೆಗೆ ಹೇಳಿದ)
    ಮಗ:ಅಮ್ಮ! ಇದು ಅದ್ಭುತವಾಗಿದೆ. ಹಿಂದು ದರ್ಶನ ವಾಸ್ತವದಲ್ಲಿ ಅರ್ಥಪೂರ್ಣವಾಗಿದೆ.
    ವೇದ, ಪುರಾಣ, ಗ್ರಂಥ, ಉಪನಿಷತ್ತು, ಇತ್ಯಾದಿಗಳೆಲ್ಲವೂ ಅರ್ಥಪೂರ್ಣವಾಗಿದೆ. ಕೇವಲ ಅವುಗಳನ್ನು ನೋಡುವ ದೃಷ್ಟಿಕೋನ ಸರಿಯಾಗಿರಬೇಕು. ಅದು ಧಾರ್ಮಿಕವಾಗಿರಲೀ ಅಥವಾ ವೈಜ್ಞಾನಿಕವಾಗಿರಲಿ.
    7 min
  • ಹೀಗೆ *ನಮ್ಮದೂ ಒಂದು ಕಾಲ ಇತ್ತು..*
    🙏 *ಮಿತ್ರರೇ ನಮ್ಮದೂ ಒಂದು ಕಾಲವಿತ್ತು* 🙏
    ೫ನೆಯ ಕ್ಲಾಸ್ ತನಕ
    ಪಾಟಿ ಪೆನ್ಸಿಲ್( ಕಡ್ಡಿ / ಬಳಪ) ನಿಂದಲೇ ಅಭ್ಯಾಸ,
    ನಾಲಿಗೆಯಿಂದ ಕಡ್ಡಿ ಚೀಪುವುದು,
    ಇದು common ಆಗಿತ್ತು ಅದಕ್ಕೆ ಏನೋ ,ನಮಗ್ಯಾರಿಗೂ ಕ್ಯಾಲ್ಸಿಯಂ
    ಗುಳಿಗೆ ಬೇಕಾಗಲಿಲ್ಲ,
    ನಾವು ಎoಜಲು ಕಡ್ಡಿಯಿಂದಾ
    ಬರೆದರೂ ,ಸರಸ್ವತಿ ದೇವಿಯ
    ಕೃಪೆ ಇತ್ತು ನಮ್ಮ ಮೇಲೆ,
    ಅವಳು ಎಂದೂ ನಾರಾಜ ಆಗಲಿಲ್ಲ ನಮ್ಮ ಮೇಲೆ..
    ಪುಸ್ತಕಗಳಲ್ಲಿ ,page ಗಳ
    ನಡುವೆ,
    ನವಿಲಿನ ಪುಚ್ಚ,(ಗರಿ),
    ಕೆಲವು ಗಿಡಗಳ ಎಲೆ ಮುಚ್ಚಿ
    ಇಡುವ ಚಟ ಇತ್ತು...
    ಇದರಿಂದ ಸರಸ್ವತಿ ದೇವಿಯ ಕೃಪೆ
    ಹೆಚ್ಚಾಗುವದೆಂದು ಹುಚ್ಚು ಭಾವನೆ...
    ಹಳೆಯ ಪ್ಯಾಂಟಿನ
    ಬ್ಯಾಗ್ ನಮ್ಮದು,
    ಅಥವಾ ಅಕ್ಕನ ಹರಿದ
    ಪರಕಾರದಿಂದಾ ತಯ್ಯಾರಾದ
    ಶಾಲಾ ಬ್ಯಾಗ್ ನಮ್ಮದು.
    ಎಲ್ಲ ಪುಸ್ತಕ ಮತ್ತು
    ನೋಟ್ ಬುಕ್ ಗೆ ಕವರ್
    ಹಾಕುವದೇ ಒಂದು ಉತ್ಸವ ನಮಗೆ.
    ಹಳೆಯ ಕ್ಯಾಲೆಂಡರಿನ
    ಹಾಳೆಗಳೇ ಕವರ್ಗೆ ಸಿಗುವ ಪೇಪರ್ಗಳು.....
    ತಂದೆ ತಾಯಿಗೆ
    ಶಿಕ್ಷಣದ ಕುರಿತಂತೆ
    ಹೆಚ್ಚಿನ ಚಿಂತೆ ಇರಲಿಲ್ಲ.
    ಯಾರೂ ತಮ್ಮ ಮಕ್ಕಳು
    ಡಾಕ್ಟರ್, ಇಂಜಿನಿಯರ್
    ಆಗುವ ಕನಸೂ ಕಂಡಿರಲಿಲ್ಲ,
    ವರ್ಷಗಟ್ಟಲೆ , ಯಾವ parents
    School ದಾರಿಗೂ ಹೋಗಿರಲಿಲ್ಲ.
    ಸೈಕಲ್ ಸವಾರಿ, ಡಬ್ಬಲ್ ರೈಡ್,
    ಒಮ್ಮೊಮ್ಮೆ ತ್ರಿಬಲ್ ರೈಡ್ ಕೂಡ
    ಮಾಡುತ್ತಿದ್ದೆವು.
    ಎ ರ ಡೂ ಕೈ ಬಿಟ್ಟು ನಡೆಸಿ,
    ಹೀರೋ ಅನ್ನಿಸಿ ಕೊಳ್ಳುವ
    ಛಲ,....
    ಅದೆಷ್ಟು ಸಲ ಮಾಸ್ಟರ್ ಕೈ ಏಟು
    ತಿಂದೆವೋ ನೆನಪಿಲ್ಲ,
    ಆದರೆ ,ಒಂದು ಸಲವೂ ಇದರ
    ಸುಳಿವು parents ಗೆ ಗೊತ್ತಾಗದ ಹಾಗೆ ಕಾದುಕೊಂಡೆವು.
    ನಾವು ಎಂದೂ parents ಗೆ
    I love you mom,
    I love you dad..
    ಅಂತ ಅನ್ನಲೇ ಇಲ್ಲ,...
    (ಈಗ ಹೇಳುವಾ ಅನಿಸಿದರೂ ಕೇಳಲು ತಂದೆ ತಾಯಿ ಯಾರೂ ಉಳಿದಿಲ್ಲ... 😩)
    ತಂದೆ ತಾಯಿಯರ ಮೇಲಿದ್ದ
    ನಮ್ಮ ಪ್ರೀತಿಯನ್ನಾ ನಾವೆಂದೂ
    ವ್ಯಕ್ತ ಪಡಿಸಲೇ ಇಲ್ಲ.
    (ಆಗ ಅದರ ಅರಿವೂ ನಮಗಿರಲಿಲ್ಲ..)
    ಇಂದು ನಾವು ಬಹಳ ಮುಂದು ವರಿದಂತೆ ನಟನೆ ಮಾಡುತ್ತೇವೆ,
    ಯಾರಿಗೆ ಏನು ಬೇಕೋ
    ಅದನ್ನು ಗಳಿಸಿದ್ದೇವೆ,
    ಆದರೂ ಏನೋ.... ಏನೋ ಕೊರತೆ ಮನವನ್ನು ಕೊರೆಯುತಿದೆ...
    ನಾವು ಈ ಜೀವನದ race ನಲ್ಲಿ
    ಎಲ್ಲೋ ಕಳೆದು ಹೋಗಿದ್ದೇವೆ ಅನಿಸುತ್ತಿದೆ.
    ಆದರೆ ಒಂದು ಮಾತು ಮಾತ್ರ ನಿಜಾ,...
    ನಾವು ಬೆಳೆದಿದ್ದು,
    ವಾಸ್ತವಿಕ ದುನಿಯಾ( ಜಗತ್ತಿನಲ್ಲಿ)
    ಬಟ್ಟೆ ಗಳ ಇಸ್ತ್ರಿ ಬಗ್ಗೆ, ಕಾಲಿನ ಶೂ ಅಥವಾ ಚಪ್ಪಲಿಬಗ್ಗಾಗಲೀ
    ಒಣ ಪ್ರತಿಷ್ಠೆ ತೋರಿಸುವುದು ನಮಗೆ (ಇಂದಿನವರಂತೆ)
    ಎಂದೂ ಬರಲೇ ಇಲ್ಲ..
    ಈ ವಿಷಯದಲ್ಲಿ ನಾವು ಮೂರ್ಖರಾಗಿಯೇ ಉಳಿದೆವು.
    ನಮ್ಮ ನಸೀಬ ಕಬೂಲ ಮಾಡಿ(ಒಪ್ಪಿಕೊಂಡು)
    ಇವಿತ್ತಿಗೂ ನಾವು ಕನಸು ಕಾಣುತ್ತೇವೆ.
    ಬಹುಶಃ ಈ ಕನಸುಗಳೇ
    ನಮಗೆ ಜೀವಿಸುವ ಸ್ಪೂರ್ಥಿ.
    ಈ ಆಸೆಯ ಕನಸುಗಳು ಇಲ್ಲದಿದ್ದರೆ,
    ಇದುವರೆಗೆ ನಾವು ಹೇಗೆ
    ಜೀವಿಸುತ್ತಿದ್ದೆವು?
    ಇದರ ಕಲ್ಪನೆ
    ಮಾಡುವದೂ ಕಷ್ಟ.
    ಮುಂದಿನ ಪೀಳಿಗೆಗೆ ಈ ವಿಷಯ ತಿಳಿ ಹೇಳುವದು
    ಅಸಾಧ್ಯದ ಮಾತು..
    ನಾವು ಒಳ್ಳೆಯವರೋ,
    ಅಥವಾ ಕೆಟ್ಟವರೋ ಗೊತ್ತಿಲ್ಲ....
    ಇಷ್ಟಂತೂ ನಿಜ...
    ನಾವೂ ಬದುಕಿ ಜೀವಿಸಿದೆವು, ಹೊಸ ಪೀಳಿಗೆಗೆ ಜನ್ಮ ಕೊಟ್ಟು ಬೆಳೆಸಿದೆವು...
    ಹೀಗೆ
    *ನಮ್ಮದೂ ಒಂದು ಕಾಲ ಇತ್ತು..*
    7 min
  • ಮಳೆ ಬಂದಂಗೆ ಛತ್ರಿಹಿಡಿ ಸಮಯಕ್ಕೆ ತಕ್ಕ ದಾರಿಹಿಡಿ* *🎉 ಇದು ಸತ್ಯ 🎉*
    1998 ರಲ್ಲಿ, ಕೊಡಾಕ್‌ನಲ್ಲಿ 1,70,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು ಮತ್ತು ಅವರು ವಿಶ್ವದ 85% ಫೋಟೋ ಫಿಲಂಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವೇ ವರ್ಷಗಳಲ್ಲಿ, ಡಿಜಿಟಲ್ ಫೋಟೋಗ್ರಫಿ ಅವರನ್ನು ಮಾರುಕಟ್ಟೆಯಿಂದ ಹೊರಹಾಕಿತು.ಕೊಡಾಕ್ ದಿವಾಳಿಯಾಯಿತು ಮತ್ತು ಅದರ ಎಲ್ಲಾ ಉದ್ಯೋಗಿಗಳು ರಸ್ತೆಗೆ ಬಂದರು.
    HMT (ವಾಚ್)
    ಬಜಾಜ್ (ಸ್ಕೂಟರ್)
    ಡೈನೋರಾ (ಟಿವಿ)
    ಮರ್ಫಿ (ರೇಡಿಯೋ)
    ನೋಕಿಯಾ (ಮೊಬೈಲ್)
    ರಾಜ್‌ದೂತ್ (ಬೈಕ್)
    ಅಂಬಾಸಿಡರ್ (ಕಾರು)
    ದಿನೇಶ್ (ಬಟ್ಟೆ)
    ಸ್ನೇಹಿತರೇ,
    ಈ ಎಲ್ಲದರ ಗುಣಮಟ್ಟದಲ್ಲಿ ಯಾವುದೇ ಕೊರತೆ ಇರಲಿಲ್ಲ, ಆದರೂ ಅವು ಮಾರುಕಟ್ಟೆಯಿಂದ ಹೊರಬಿದ್ದವು !!
    ಕಾರಣ ???
    ಕಾಲಕ್ಕೆ ತಕ್ಕಂತೆ ಅವು ಬದಲಾಗಲಿಲ್ಲ.!!
    ಮುಂಬರುವ 10 ವರ್ಷಗಳಲ್ಲಿ ಪ್ರಪಂಚವು ಸಂಪೂರ್ಣವಾಗಿ ಬದಲಾಗುತ್ತದೆ ಮತ್ತು ಇಂದು ನಡೆಯುತ್ತಿರುವ 70% ರಿಂದ 90% ಕೈಗಾರಿಕೆಗಳು ಸ್ಥಗಿತಗೊಳ್ಳುತ್ತವೆ.
    ಉಬರ್ ಕೇವಲ ಸಾಫ್ಟ್‌ವೇರ್ ಆಗಿದೆ. ತನ್ನದೇ ಆದ ಒಂದು ಕಾರು ಹೊಂದಿಲ್ಲದಿದ್ದರೂ, ಅವರು ವಿಶ್ವದ ಅತಿದೊಡ್ಡ ಟ್ಯಾಕ್ಸಿ ಕಂಪನಿ.
    ಏರ್ಬನ್ಬಿ ತಮ್ಮದೇ ಆದ ಹೋಟೆಲ್ ಹೊಂದಿಲ್ಲದಿದ್ದರೂ ವಿಶ್ವದ ಅತಿದೊಡ್ಡ ಹೋಟೆಲ್ ಕಂಪನಿಯಾಗಿದೆ.
    Paytm, ola cabs, oyo ಕೊಠಡಿಗಳಂತಹ ಅನೇಕ ಉದಾಹರಣೆಗಳಿವೆ.
    ಯುಎಸ್ ನಲ್ಲಿ ವಕೀಲರಿಗೆ ಈಗ ಯಾವುದೇ ಕೆಲಸ ಉಳಿದಿಲ್ಲ, ಏಕೆಂದರೆ ಐಬಿಎಂ ವ್ಯಾಟ್ಸನ್ ಸಾಫ್ಟ್‌ವೇರ್ ಒಂದು ಕ್ಷಣದಲ್ಲಿ ಉತ್ತಮ ಕಾನೂನು ಸಲಹೆಯನ್ನು ನೀಡುತ್ತದೆ. ಮುಂದಿನ 10 ವರ್ಷಗಳಲ್ಲಿ, 90% ಯುಎಸ್ ವಕೀಲರು ನಿರುದ್ಯೋಗಿಗಳಾಗುತ್ತಾರೆ ..10% ಉಳಿದಿರುವವರು ... ಸೂಪರ್ ಸ್ಪೆಷಲಿಸ್ಟ್ ಆಗುತ್ತಾರೆ.
    ವ್ಯಾಟ್ಸನ್ ಹೆಸರಿನ ಸಾಫ್ಟ್‌ವೇರ್ ಮಾನವರಿಗಿಂತ 4 ಪಟ್ಟು ಹೆಚ್ಚು ನಿಖರವಾಗಿ ಕ್ಯಾನ್ಸರ್ ರೋಗನಿರ್ಣಯವನ್ನು ಮಾಡುತ್ತದೆ. 2030 ರ ವೇಳೆಗೆ ಕಂಪ್ಯೂಟರ್‌ಗಳು ಮನುಷ್ಯರಿಗಿಂತ ಹೆಚ್ಚು ಬುದ್ಧಿವಂತವಾಗಿರುತ್ತವೆ.
    ಮುಂದಿನ 10 ವರ್ಷಗಳಲ್ಲಿ, 90% ಕಾರುಗಳು ಪ್ರಪಂಚದಾದ್ಯಂತದ ರಸ್ತೆಗಳಿಂದ ಕಣ್ಮರೆಯಾಗುತ್ತವೆ… ಉಳಿದಿರುವುವು ಎಲೆಕ್ಟ್ರಿಕ್ ಕಾರುಗಳು ಅಥವಾ ಹೈಬ್ರಿಡ್ ಆಗಿರುತ್ತವೆ… ರಸ್ತೆಗಳು ಖಾಲಿಯಾಗುತ್ತವೆ, ಪೆಟ್ರೋಲ್ ಬಳಕೆ 90% ರಷ್ಟು ಕಡಿಮೆಯಾಗುತ್ತದೆ, ಎಲ್ಲಾ ಅರಬ್ ರಾಷ್ಟ್ರಗಳು ದಿವಾಳಿಯಾಗುತ್ತವೆ.
    ನೀವು ಉಬರ್‌ನಂತಹ ಸಾಫ್ಟ್‌ವೇರ್‌ನಿಂದ ಕಾರನ್ನು ಪಡೆಯುತ್ತೀರಿ ಮತ್ತು ಕೆಲವೇ ಕ್ಷಣಗಳಲ್ಲಿ ಚಾಲಕರಹಿತ ಕಾರು ನಿಮ್ಮ ಬಾಗಿಲಲ್ಲಿ ನಿಲ್ಲುತ್ತದೆ ... ನೀವು ಅದನ್ನು ಯಾರೊಂದಿಗಾದರೂ ಹಂಚಿಕೊಂಡರೆ, ಆ ಸವಾರಿ ನಿಮ್ಮ ಬೈಕ್‌ಗಿಂತ ಅಗ್ಗವಾಗಿರುತ್ತದೆ.
    ಕಾರುಗಳು ಚಾಲಕರಹಿತವಾಗಿರುವುದರಿಂದ 99% ಅಪಘಾತಗಳು ನಿಂತುಹೋಗುತ್ತವೆ.. ಇದು ಕಾರ್ ವಿಮೆ ಎಂಬ ವ್ಯವಹಾರವನ್ನು ನಿಲ್ಲಿಸುತ್ತದೆ.
    ಚಾಲಕನಿಗೆ ಯಾವುದೇ ಉದ್ಯೋಗ ಇರುವುದಿಲ್ಲ. ನಗರಗಳು ಮತ್ತು ರಸ್ತೆಗಳಿಂದ 90% ಕಾರುಗಳು ಕಣ್ಮರೆಯಾದಾಗ, ಟ್ರಾಫಿಕ್ ಮತ್ತು ಪಾರ್ಕಿಂಗ್‌ನಂತಹ ಸಮಸ್ಯೆಗಳು ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತವೆ ... ಏಕೆಂದರೆ ಒಂದು ಕಾರು ಇಂದು 20 ಕಾರುಗಳಿಗೆ ಸಮಾನವಾಗಿರುತ್ತದೆ.
    5 ಅಥವಾ 10 ವರ್ಷಗಳ ಹಿಂದೆ, ಪಿಸಿಒ ಇಲ್ಲದಂತಹ ಸ್ಥಳ ಇರಲಿಲ್ಲ. ನಂತರ ಎಲ್ಲರ ಜೇಬಿನಲ್ಲಿ ಮೊಬೈಲ್ ಫೋನ್ ಬಂದಾಗ, ನಂತರ ಪಿಸಿಒ ಸ್ಥಗಿತಗೊಳ್ಳಲು ಪ್ರಾರಂಭಿಸಿತು .. ನಂತರ ಆ ಎಲ್ಲಾ ಪಿಸಿಒ ಜನರು ಫೋನ್ ರೀಚಾರ್ಜ್ ಮಾರಾಟ ಮಾಡಲು ಪ್ರಾರಂಭಿಸಿದರು. ಈಗ ಆನ್‌ಲೈನ್‌ನಲ್ಲಿ ರೀಚಾರ್ಜ್ ಕೂಡ ಪ್ರಾರಂಭಿಸಲಾಗಿದೆ.
    ನೀವು ಎಂದಾದರೂ ಗಮನಿಸಿದ್ದೀರಾ ..?
    ಇತ್ತೀಚಿನ ದಿನಗಳಲ್ಲಿ, ಮಾರುಕಟ್ಟೆಯಲ್ಲಿನ ಪ್ರತಿ ಮೂರು ಅಂಗಡಿಗಳಲ್ಲಿ ಒಂದು ಅಂಗಡಿಯಲ್ಲಿ ಮೊಬೈಲ್ ಫೋನ್‌
    ಮಾರಾಟ, ಸೇವೆ, ರೀಚಾರ್ಜ್, ಪರಿಕರಗಳು, ದುರಸ್ತಿ, ನಿರ್ವಹಣೆ ಮಾಡಲಾಗುತ್ತಿದೆ.
    ಈಗ ಎಲ್ಲವನ್ನೂ ಪೇಟಿಎಂ ಮೂಲಕ ಮಾಡಲಾಗುತ್ತದೆ .. ಈಗ ಜನರು ತಮ್ಮ ಫೋನ್‌ಗಳಿಂದಲೂ ರೈಲ್ವೆ ಟಿಕೆಟ್‌ಗಳನ್ನು ಕಾಯ್ದಿರಿಸುತ್ತಿದ್ದಾರೆ .. ಈಗ ಹಣದ ವಹಿವಾಟುಗಳು ಸಹ ಬದಲಾಗುತ್ತಿವೆ .. ಕರೆನ್ಸಿ ನೋಟ್ ಅನ್ನು ಮೊದಲು ಪ್ಲಾಸ್ಟಿಕ್ ಮನಿ ಮೂಲಕ ಬದಲಾಯಿಸಲಾಗಿತ್ತು.ಈಗ ಅದು ಡಿಜಿಟಲ್ ಆಗಿ ಮಾರ್ಪಟ್ಟಿದೆ.
    ಜಗತ್ತು ಬಹಳ ವೇಗವಾಗಿ ಬದಲಾಗುತ್ತಿದೆ .. ಕಣ್ಣು ಮತ್ತು ಕಿವಿಗಳನ್ನು ತೆರೆದಿಡಿ, ಇಲ್ಲದಿದ್ದರೆ ನೀವು ಹಿಂದೆ ಉಳಿಯುತ್ತೀರಿ….
    ಆದ್ದರಿಂದ ...
    ಒಬ್ಬ ವ್ಯಕ್ತಿಯು ಸಮಯಕ್ಕೆ ತಕ್ಕಂತೆ ತನ್ನ ವ್ಯವಹಾರ ಮತ್ತು ಸ್ವಭಾವವನ್ನು ಬದಲಾಯಿಸುತ್ತಲೇ ಇರಬೇಕು.
    ಸಮಯದೊಂದಿಗೆ ಸಾಗಿ ಮತ್ತು ಯಶಸ್ಸನ್ನು ಸಾಧಿಸಿ.
    👆🏻
    *ಇದು ಸುತ್ತಾಡುತ್ತಿರುವ ಒಂದು ಒಳ್ಳೆಯ ಸಂದೇಶ.*
    *ಮತ್ತೆ ಉದ್ಯೋಗಕ್ಕೆ ಜನ ಏನು ಮಾಡುತ್ತಾರೆ ?*
    *ಅವರೆಲ್ಲರೂ ಭೂಮಿ ತಾಯಿಯ ಬಳಿ ಬರುತ್ತಾರೆ. ಏಕೆಂದರೆ ಎಲ್ಲರನ್ನೂ ಎಲ್ಲವನ್ನೂ ಸ್ವಿಕರಿಸುವವಳು ಅವಳೊಬ್ಬಳೇ.* 🙏
    11 min
  • ಸುರಿನೇಮ್‌ ಗಣರಾಜ್ಯದ ಅಧ್ಯಕ್ಷ ಚಂದ್ರಿಕಾಪ್ರಸಾದ್‌ ಸಂತೋಖಿ
    ಭಾರತದ ಗಣರಾಜ್ಯೋತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವ ಸುರಿನೇಮ್‌ ಗಣರಾಜ್ಯದ ಅಧ್ಯಕ್ಷ ಚಂದ್ರಿಕಾಪ್ರಸಾದ್‌ ಸಂತೋಖಿ ಅವರಿಗೆ ಈ ಭಾಗ್ಯ ಒಲಿದುಬಂದಿದೆ ಎಂದು ಮೂಲಗಳು ಹೇಳಿವೆ.
    ಸಂತೋಖಿ ಅವರು ಕಳೆದ ವಾರ ಪ್ರವಾಸಿ ಭಾರತೀಯ ದಿವಸದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಇದರ ಬೆನ್ನಲ್ಲೇ ಅವರಿಗೆ ಗಣರಾಜ್ಯ ದಿನದ ಅತಿಥಿಯಾಗಿ ಪಾಲ್ಗೊಳ್ಳುವ ಆಹ್ವಾನವೂ ಹೋಗಿದೆ ಎಂದು ತಿಳಿದುಬಂದಿದೆ.
    ಸುರಿನೇಮ್‌ ಈ ಮುನ್ನ ಡಚ್‌ ವಸಾಹತು ಆಗಿತ್ತು. ಇಲ್ಲಿ ಭಾರತೀಯ ಮೂಲದವರ ಸಂಖ್ಯೆಯೇ ಶೇ.27.4ರಷ್ಟಿದೆ. ಸಂತೋಖಿ ಅವರು ಕಳೆದ ಜುಲೈನಲ್ಲಿ ಡೇಸಿ ಬೌಟೆರ್ಸೆ ಎಂಬ ಸರ್ವಾಧಿಕಾರಿಯ ಆಳ್ವಿಕೆಗೆ ಅಂತ್ಯ ಹಾಡಿ ಅಧಿಕಾರಕ್ಕೆ ಬಂದಿದ್ದರು
    7 min
  • *ಜೀವನದ ಸತ್ಯದರ್ಶನ*
    ಹುಟ್ಟು: ನಾವು ಕೇಳದೇ ಸಿಗುವ ವರ !
    ಸಾವು: ನಾವು ಹೇಳದೇ ಹೋಗುವ ಜಾಗ !
    ಬಾಲ್ಯ: ಮೈಮರೆತು ಆಡುವ ಸ್ವರ್ಗ.
    ಯೌವನ: ಅರಿವಿದ್ದರೂ ಅರಿಯದ ಮಾಯೆ!
    ಮುಪ್ಪು: ಕಡೆಯ ಆಟ. !
    ಸ್ನೇಹ: ಶಾಶ್ವತವಾಗಿ ಉಳಿಯೋ ಬಂಧ.!
    ಪ್ರೀತಿ: ಪ್ರಾಣಕ್ಕೆ ಹಿತವಾದ ಅನುಬಂಧ.
    ಪ್ರೇಮ: ತ್ಯಾಗಕ್ಕೆಸ್ಪೂರ್ತಿ.
    ಕರುಣೆ: ಕಾಣುವ ದೇವರು.
    ಮಮತೆ: ಕರುಳಿನ ಬಳ್ಳಿ.
    ದ್ವೇಷ: ಉರಿಯುವ ಕೊಳ್ಳಿ.
    ತ್ಯಾಗ: ದೀಪ.
    ಉಸಿರು: ಮೌನದಲೆ ಜೊತೆಗಿರುವ ಗೆಳೆಯ.
    ಹ್ರದಯ: ಎಚ್ಚರಿಕೆ ಗಂಟೆ.
    ಕಣ್ಣು: ಸೃಷ್ಟಿಯ ಕನ್ನಡಿ.
    ಮಾತು: ಬೇಸರ ನೀಗುವ ವಿದ್ಯೆ.
    ಮೌನ: ಭಾಷೆಗೂ ನಿಲುಕದ ಭಾವ.
    ಕಣ್ಣೀರು: ಅಸ್ತ್ರ.
    ನೋವು: ಅಸಹಾಯಕತೆ!
    ನಗು: ಔಷಧಿ.
    ಹಣ: ಅವಶ್ಯಕತೆ.!
    ಗುಣ: ಆಸ್ತಿ.
    ಕಲೆ: ಜ್ಞಾನ.
    ಧರ್ಮ: ಬುನಾದಿ.
    ಕರ್ಮ: ಕಾಣದಾ ಕೈ ಆಟ.
    ಕಾಯಕ: ದೇಹ, ಮನಸಿಗೆ ಮಿತ್ರ.
    ಸಂಸ್ಕೃತಿ: ನೆಲೆ
    ಸಾಧನೆ: ಜೀವಕ್ಕೆ ಜೀವನಕ್ಕೆ ಬೆಲೆ....
    ತಾರುಣ್ಯ, ಮುಪ್ಪು; ತಾನಾಗಿ ಬರುವುದು
    ಪಾಪ,ಪುಣ್ಯ; ಜೊತೆಯಲ್ಲೇ ಬರುವುದು.
    ಆಸೆ ,ದುಃಖ ತಡೆಯಿಲ್ಲದೇ ಬರುವುದು.
    ಹಸಿವು,ದಾಹ ಅನಿವಾರ್ಯವಾಗಿ ಬರುವುದು.
    ದ್ವೇಷ, ಸಿಟ್ಟು ನಾಶಕ್ಕಾಗಿ ಬರುವುದು..
    🙏🏻🙏🏻🙏🏻 ಹರಿ ಓಂ🙏🙏🚩🚩
    4 min

About Dr Balakrishna Maddodi

From the publisher's feed

Hi