Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • ದೇವಸ್ಥಾನದ ಮಹತ್ವ
    ಭಕ್ತಿಯೋಗಾನುಸಾರ ಮಹತ್ವ
    ೧. ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಹೋಗುವುದರಿಂದ ನಮಗೆ ಅಲ್ಲಿನ ಸಾತ್ತ್ವಿಕತೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ ಮತ್ತು ದೇವಸ್ಥಾನದಲ್ಲಿರುವ ಸಾತ್ತ್ವಿಕ ವಾತಾವರಣದಿಂದಾಗಿ ದೇವತೆಯ ಬಗ್ಗೆ ನಮ್ಮ ಭಕ್ತಿಭಾವವು ಹೆಚ್ಚಾಗಲು ಸಹಾಯವಾಗುತ್ತದೆ.
    ೨. ದೇವಸ್ಥಾನದಲ್ಲಿ ಪೂಜೆ, ಅಭಿಷೇಕ ಮುಂತಾದ ಧಾರ್ಮಿಕ ವಿಧಿಗಳ ಸಮಯದಲ್ಲಿ ಹಾಗೂ ಆರತಿಯ ಸಮಯದಲ್ಲಿ ದೇವತೆಯ ಪವಿತ್ರಕಗಳು (ದೇವತೆಯ ಸೂಕ್ಷ್ಮಾತಿಸೂಕ್ಷ್ಮ ಚೈತನ್ಯ ಕಣಗಳು) ದೇವತೆಯ ಮೂರ್ತಿಯ ಕಡೆಗೆ ಬಹಳಷ್ಟು ಪ್ರಮಾಣದಲ್ಲಿ ಆಕರ್ಷಿಸುತ್ತವೆ. ಇಂತಹ ಸಮಯದಲ್ಲಿ ನಾವು ದೇವಸ್ಥಾನದಲ್ಲಿ ಉಪಸ್ಥಿತರಿದ್ದರೆ ನಮಗೆ ಆ ಪವಿತ್ರಕಗಳ ಲಾಭವಾಗುತ್ತದೆ.
    ೩. ಸ್ವಯಂಭೂ ಅಥವಾ ಜಾಗೃತ ದೇವಸ್ಥಾನಗಳಲ್ಲಿ (ಉದಾ.೧೨ ಜ್ಯೋತಿರ್ಲಿಂಗಗಳು) ಹಾಗೆಯೇ ಸಂತರು ಕಟ್ಟಿಸಿರುವ ದೇವಸ್ಥಾನಗಳಲ್ಲಿ ಶಕ್ತಿ ಮತ್ತು ಚೈತನ್ಯದ ಪ್ರಮಾಣವು ಹೆಚ್ಚಿಗಿರುವು ದರಿಂದ ಇಂತಹ ದೇವಸ್ಥಾನಗಳ ದರ್ಶನಕ್ಕೆ ಹೋದರೆ ಭಕ್ತರಿಗೆ ಹೆಚ್ಚು ಲಾಭವಾಗುತ್ತದೆ.
    ೧ಆ. ಜ್ಞಾನಯೋಗಕ್ಕನುಸಾರ ಮಹತ್ವ: ‘ದ್ರಷ್ಟಾ ದೃಶ್ಯವಶಾದ್ಬದ್ಧಃ ದೃಶ್ಯಾಭಾವೇ ವಿಮುಚ್ಯತೆ|’ ಅಂದರೆ ದ್ರಷ್ಟಾ (ಜೀವವು) ದೃಶ್ಯದಿಂದಾಗಿ ಬದ್ಧನಾಗುತ್ತಾನೆ ಮತ್ತು ಯಾವಾಗ ದೃಶ್ಯದ ಅಭಾವವಾಗುತ್ತದೆಯೋ ಆಗ ಅವನು ಮುಕ್ತನಾಗುತ್ತಾನೆ. ಉದಾ. ಇಷ್ಟವಾದ ಪದಾರ್ಥ ನಮ್ಮೆದುರಿಗಿದ್ದರೆ ನಮಗೆ ಅದನ್ನು ತಿನ್ನಬೇಕೆಂದು ಅನಿಸುತ್ತದೆ, ಇತರ ಸಮಯದಲ್ಲಿ ಹಾಗೆನಿಸುವುದಿಲ್ಲ; ಆದರೆ ದೃಶ್ಯಗಳಂತೂ ಒಂದರ ಹಿಂದೆ ಒಂದರಂತೆ ಬರುತ್ತಲೇ ಇರುತ್ತವೆ. ಹಾಗಾದರೆ ಯಾವಾಗ ದೃಶ್ಯದ ಅಭಾವವಾಗುವುದು? ಹೀಗಿದ್ದಾಗ ದ್ರಷ್ಟಾನಿಗೆ ಮುಕ್ತವಾಗಲು ಇರುವ ಏಕೈಕ ಮಾರ್ಗವೆಂದರೆ, ಅವನು ಯಾವ ದೃಶ್ಯಗಳಲ್ಲಿ ಬದ್ಧನಾಗುವುದರಿಂದ ಅವನಿಗೆ ಮುಕ್ತವಾಗಲು ಸಹಾಯವಾಗುತ್ತದೆಯೋ ಅಂತಹ ದೃಶ್ಯಗಳನ್ನಿಡುವುದು, ಅಂದರೆ ಅವುಗಳನ್ನು ನೋಡಿ ಅವನ ವೃತ್ತಿಯು ತಮೋಗುಣದಿಂದ ರಜೋಗುಣದ ಕಡೆಗೆ ಮತ್ತು ರಜೋಗುಣದಿಂದ ಸತ್ತ್ವದ ಕಡೆಗೆ ಹೋಗುವುದು. ಬದ್ಧನಾದ ದ್ರಷ್ಟಾ ಯಾವ ದೃಶ್ಯಗಳಿಂದ ಮುಕ್ತನಾಗಬಹುದೋ, ಅಂತಹ ದೃಶ್ಯಗಳಲ್ಲಿನ ಒಂದು ದೃಶ್ಯವೆಂದರೆ ದೇವಸ್ಥಾನ. ದೇವಸ್ಥಾನದಲ್ಲಿ ಅಧ್ಯಾತ್ಮಕ್ಕೆ ಪೂರಕವಾಗಿರುವ ಈಶ್ವರನ ಅವತಾರಗಳ ಜನ್ಮಕರ್ಮಗಳ ಮತ್ತು ಲೀಲೆಗಳ ಹಾಗೆಯೇ ಅವನ ಭಕ್ತರ ಗುಣಗಾನ ಮಾಡುವ ಪ್ರವಚನಗಳು, ಹರಿಕಥೆಗಳು ನಡೆಯುತ್ತಿರುತ್ತವೆ. ಅವುಗಳನ್ನು ಕೇಳುವುದ ರಿಂದ ಈ ವಿಷಯಗಳ ಬಗ್ಗೆ ಮನನವಾಗಿ ಅದರ ಪರಿಣಾಮವು ನಿದಿಧ್ಯಾಸದಲ್ಲಿ ಆಗುತ್ತದೆ ಮತ್ತು ಅದರಿಂದ ಆತ್ಮಸಾಕ್ಷಾತ್ಕಾರವಾಗಲು ಸಹಾಯವಾಗುತ್ತದೆ.’.
    6 min
  • *ಅಮ್ಮಾ ನೀ ಆಕಾಶ…* ಗಿರೀಶ್‌ ಪಿಎಂ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು
    kannada press kannada news portal
    Home ಮ್ಯಾಗಜಿನ್ ಕ್ಯಾಂಪಸ್ ಪ್ರೆಸ್
    ಕ್ಯಾಂಪಸ್ ಪ್ರೆಸ್
    ಅಮ್ಮಾ ನೀ ಆಕಾಶ…ಮಾತೆಗೆ ಮಿಕ್ಕ ದೇವರಿಲ್ಲ ಎಂಬುದು ಅದೆಷ್ಟು ಸತ್ಯವಲ್ಲವೇ…
    By ಕನ್ನಡಪ್ರೆಸ್.ಕಾಮ್ ವರದಿ- March 17, 2021042
    ಗಿರೀಶ್‌ ಪಿಎಂ
    ಆಶಕ್ತಿಗೆ ಅಮ್ಮ, ತಾಯಿ, ಮಾತೆ, ಜನನಿ ಹೀಗೆ ಹಲವು ನಾಮಗಳು. ಆದರೆ ಆಕೆಯನ್ನು ಬಣ್ಣಿಸಹೊರಟರೆ ಶಬ್ದಗಳು ಸೋಲುತ್ತವೆ. ಅದೊಂದು ಸಂಬಂಧಕ್ಕೆ ಮೀರಿದ ಅನುಬಂಧ. ʼಹೆತ್ತ ಕರುಳುʼ ಎಂಬ ಶಬ್ದ ಅಮ್ಮನನ್ನು ಬಣ್ಣಿಸಲು ಸೂಕ್ತವೇನೋ. ನೋವ ಅನುಭವಿಸಿದರೂ, ಜೀವ ಬೇರೆಯಾದರೂ ಅಮ್ಮನ ಪ್ರೀತಿಯಲ್ಲಿ ಕೊಂಚವೂ ಕೊರತೆಯಾಗದು. ತುತ್ತು ಅನ್ನವಾದರೂ ತನ್ನ ಕರುಳ ಬಳ್ಳಿಗೆ ತಿನ್ನಿಸದೆ ತಾನು ತಿನ್ನಲಾರಳು. ನನಗೂ ಮೊದಲ ಗುರುವಾಗಿ ಗುರಿ ತಲುಪಲು ದಾರಿ ತೋರಿದವರು ಅಮ್ಮನೇ.
    ನಮ್ಮದು ಸಣ್ಣ ಮಧ್ಯಮ ಕುಟುಂಬ. ಅಪ್ಪನಿಗೆ ಕೂಲಿ ಕೆಲಸ. ಅಮ್ಮನಿಗೆ ಬೀಡಿ ಕಟ್ಟುವ ಕಾಯಕ. ಅಮ್ಮ ಬೀಡಿ ಕಟ್ಟುವ ಕಲೆಯನ್ನು ಚಿಕ್ಕಂದಿನಲ್ಲೇ ಕಲಿತಿದ್ದರಂತೆ. ಚಿಕ್ಕವಯಸ್ಸಿನಲ್ಲಿ ಮನೆಯಲ್ಲಿ ಹಾಸುಹೊದ್ದು ಮಲಗಿದ್ದ ಬಡತನ. ಜೀವನದ ಬಂಡಿ ಸಾಗಲು, ಮಕ್ಕಳನ್ನು ಓದಿಸಲು ಬೀಡಿ ಕಟ್ಟುತ್ತಾರೆ. ಈಗಲೂ ಕಟ್ಟುತ್ತಲೇ ಇದ್ದಾರೆ. ಅದರಿಂದ ಬಂದ ಹಣದಲ್ಲಿ ಬಿಡಿಗಾಸೂ ಇಟ್ಟುಕೊಳ್ಳದೆ ಎಲ್ಲವನ್ನೂ ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಾರೆ. ಕಷ್ಟಪಟ್ಟು ದುಡಿದು ಮಗನ ಭವಿಷ್ಯ ಉಜ್ವಲವಾಗಲಿ ಎಂಬ ಕನಸು ಕಾಣುತ್ತಾರೆ.
    ತನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸದೆ ಮಕ್ಕಳಿಗೆ ಏನು ಆಗಬಾರದೆಂದು ಪ್ರತಿಕ್ಷಣ ನೆನೆಯುವ ಜೀವ ಅದು. ಕರೆಂಟ್ ಹೋದರೆ ಸೊಳ್ಳೆಕಾಟ ತುಸು ಜಾಸ್ತಿಯೇ ನಮ್ಮಲ್ಲಿ. ಮಕ್ಕಳು ಬೇಗನೆ ಏಳಬೇಕು, ಚೆನ್ನಾಗಿ ನಿದ್ದೆ ಮಾಡಲಿ ಎಂದು ತಾನು ನಿದ್ದೆ ಬಿಟ್ಟು ಬೀಸಣಿಗೆಯಿಂದ ಗಾಳಿ ಹಾಕುವುದು ಆಕೆಗೇನೂ ಹೊಸತಲ್ಲ. ಹೊಟ್ಟೆ ತುಂಬುವಷ್ಟು ಕೈ ತುತ್ತು, ಸಿಹಿ ಮುತ್ತನ್ನು ಕೊಟ್ಟು ಖುಷಿಪಡಿಸುವುದರಲ್ಲಿ ಆಕೆ ಯಾವತ್ತೂ ಶ್ರೀಮಂತೆ. ಒಂಬತ್ತು ತಿಂಗಳು ಹೊತ್ತು, ಹೆತ್ತು ಸಾಕಿ ಸಲಹುತ್ತಿರುವೆ. ನಿನಗೆ ನಾನೇನು ಕೊಡಲಿ ಅಮ್ಮಾ…
    ಮಹಿಳಾ ದಿನಾಚರಣೆಯೇನೋ ಕಳೆಯಿತು. ಆದರೆ ನನ್ನ ಅಮ್ಮನ ತ್ಯಾಗವನ್ನು ಒಂದು ದಿನ ನೆನೆದರೆ ಸಾಕೇ? ಆಕೆಯ ನೋವು, ತ್ಯಾಗ ಒಂದೆರಡೇ? ಬಾಲ್ಯದಲ್ಲಿ ತನ್ನ ಮನೆಯಲ್ಲಿ ಕಂಡ ಬಡತನ, ತಿಂದ ಏಟು, ಪತಿಯ ಮನೆಯಲ್ಲಿ ಸಂಸಾರ ಸಾಗರವೆಂಬ ಮಹತ್ವದ ಜವಾಬ್ದಾರಿ ಹೊತ್ತು ಮುನ್ನಡೆಸುವುದು…ಇದೆಲ್ಲಾ ನಿನಗೆ ಹೇಗೆ ಸಾದ್ಯವಾಯಿತಮ್ಮಾ…?
    ಎದುರಾಗುವ ಪ್ರತಿಯೊಂದು ನೋವಿಗೂ ಕುಗ್ಗದೆ ಮುಂದೆ ನಡೆಯುವರು ನೀವು. ಅತ್ತೆ, ಮಾವ, ಬಂಧುಗಳ ಸ್ನೇಹ ಸಂಪಾದಿಸಿ ಕುಟುಂಬಕ್ಕೆ ಒಳ್ಳೆಯ ಸೊಸೆ ಎಂದು ಕರೆಸಿಕೊಂಡವರು. ಬೆಟ್ಟದಷ್ಟು ನೋವು ಮನದೊಳಗಿದ್ದರೂ ಒಂದಿಂಚೂ ಮುಖದಲ್ಲಿ ಕಾಣಿಸದು. ಸದಾ ಮಂದಹಾಸದ ನಗು ಹೊಳೆಯೋ ಚಂದಿರನಂತೆ. ಅಮ್ಮನ ಗುಣಶೀಲತೆಯ ಹೊಗಳಲು ನಾ ಏಳು ಜನುಮ ಎತ್ತಿ ಬಂದರೂ ಸಾಲದು.
    ಅಮ್ಮಾ ನೀ ಆಕಾಶ…
    5 min
  • ಉಷ್ಣತೆಯ ರೋಗಗಳ ಕೆಲವು ಲಕ್ಷಣಗಳು - ಉಷ್ಣತೆಯ ರೋಗಗಳಿಗೆ ಮನೆಔಷಧಿ
    ಉಷ್ಣತೆಯ ರೋಗಗಳ ಕೆಲವು ಲಕ್ಷಣಗಳು
    ಗಂಟಲಿನಲ್ಲಿ, ಎದೆಯಲ್ಲಿ ಅಥವಾ ಹೊಟ್ಟೆಯಲ್ಲಿ ಉರಿಯಾಗುವುದು; ಮೂತ್ರವಿಸರ್ಜನೆಯ ಸಮಯದಲ್ಲಿ ಉರಿಯುವುದು; ಮೈಮೇಲೆ ಗುಳ್ಳೆಗಳಾಗುವುದು; ಕಣ್ಣು, ಕೈ ಅಥವಾ ಕಾಲುಗಳು ಬಿಸಿಯಾಗುವುದು; ಮಾಸಿಕ ಸರದಿಯ ಸಮಯದಲ್ಲಿ ಅಧಿಕ ರಕ್ತಸ್ತ್ರಾವವಾಗುವುದು; ಶೌಚದ ಮೂಲಕ ರಕ್ತ ಬೀಳುವುದು.
    ಮನೆಯ ಔಷಧಿಗಳು
    ಅ. ಚಹಾದ ೧ ಚಮಚದಷ್ಟು ಕಾಮಕಸ್ತೂರಿಯ ಬೀಜಗಳು (ಅಥವಾ ತುಳಸಿ) ಬೀಜಗಳು ಕಾಲು ಬಟ್ಟಲು ನೀರಿನಲ್ಲಿ ೮ ಗಂಟೆ ನೆನೆಸಿಡಬೇಕು. ಅನಂತರ ಅದನ್ನು ಒಂದು ಕಪ್ ಹಾಲಿನಲ್ಲಿ (ಟಿಪ್ಪಣಿ ೧) ಹಾಕಿ ಸಾಯಂಕಾಲ ಕುಡಿಯಬೇಕು.
    ಟಿಪ್ಪಣಿ ೧. ಹಾಲು ಕುಡಿಯುವ ವಿಷಯದಲ್ಲಿ ಕೆಲವು ನಿಯಮಗಳು : ಔಷಧಿ ಹಾಕಿರುವ ಅಥವಾ ಹಾಕದಿರುವ ಹಾಲು ಕುಡಿಯುವ ಮೊದಲು ೩ ಗಂಟೆ ಮತ್ತು ಹಾಲು ಕುಡಿದ ಮೇಲೆ ಕನಿಷ್ಟಪಕ್ಷ ಒಂದೂವರೆ ಗಂಟೆವರೆ ಏನೂ ತಿನ್ನಬಾರದು.
    ಆ. ಮಾರುಕಟ್ಟೆಯಲ್ಲಿ ಸಕ್ಕರೆಯ ಪಾಕದಲ್ಲಿ ತಯಾರಿಸಿರುವ ಗುಲಾಬಿ ಹೂವಿನ ಗಟ್ಟಿಯಾಗಿರುವ ಶರಬತ (ಸಿರಪ) ಸಿಗುತ್ತದೆ. ಅದನ್ನು ೧ ಚಮಚ ಗಟ್ಟಿ ಶರಬತ ೧ ಕಪ್ ಹಾಲಿನಲ್ಲಿ ಹಾಕಿ ಸಾಯಂಕಾಲ ಕುಡಿಯಬೇಕು. ಇದರಲ್ಲಿ ಮೇಲಿನ ಪ್ರಮಾಣದಂತೆ ೧ ಚಮಚದಷ್ಟು ನೆನೆಸಿರುವ ಕಾಮಕಸ್ತೂರಿ ಬೀಜಗಳು (ಅಥವಾ ತುಳಸಿ ಬೀಜಗಳು) ಹಾಕಬಹುದು.
    ಇ. ದಿನಕ್ಕೆ ೧-೨ ಸಾರಿ ಆವಶ್ಯಕತೆಗನುಸಾರ ಗುಲಾಬಿಯ ಶರಬತ ಕುಡಿಯಬೇಕು ಅಥವಾ ೧-೨ ಚಮಚ ಗುಲಕಂದ ತಿನ್ನಬೇಕು.’ – ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ. ರಾಮನಾಥಿ, ಗೋವಾ. (೧೮.೨.೨೦೧೮)
    ಹೃದಯ, ಹಾಗೆಯೇ ಎಲ್ಲ ಶರೀರಗಳ ರೋಗಗಳಿಗೆ ಆಯುರ್ವೇದ ಔಷಧಿ ತೆಗೆದುಕೊಳ್ಳುವ ಸಮಯ
    ಮಧ್ಯಾಹ್ನ ಊಟದ ನಂತರ ತಕ್ಷಣ ಅಥವಾ ಮಧ್ಯಾಹ್ನ ಊಟವಾದ ಮೇಲೆ ಒಂದೂವರೆ ಗಂಟೆಯ ನಂತರ ತೆಗೆದುಕೊಂಡರೆ ಹೃದಯದ ಮೇಲೆ ಹಾಗೆಯೇ ಎಲ್ಲ ಶರೀರಕ್ಕೆ ಆ ಔಷಧಿಯ ಪರಿಣಾಮವಾಗುತ್ತದೆ; ಏಕೆಂದರೆ ಇದು ವ್ಯಾನ ವಾಯುವಿನ ಕಾಲವಾಗಿದೆ. ವ್ಯಾನ ವಾಯು ಇದು ಹೃದಯದ ಆಶ್ರಯದಲ್ಲಿದ್ದು ಇಡೀ ಶರೀರದಲ್ಲಿ ತಿರುಗುವ ವಾಯುವಾಗಿದೆ.
    – ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೮.೨.೨೦೧೮)
    4 min
  • Rudra Mantra or Tryambakam Mantra, Mahamrityunjaya Mantra
    The Mahamrityunjaya Mantra reads:
    ॐ त्र्य॑म्बकं यजामहे सु॒गन्धिं॑ पुष्टि॒वर्ध॑नम् ।
    उ॒र्वा॒रु॒कमि॑व॒ बन्ध॑नान् मृ॒त्योर्मु॑क्षीय॒ माऽमृता॑॑त् ।।[1]oṃ tryámbakaṃ yajāmahe sughandhíṃ puṣṭivardhánam
    urvārukam iva bandhánān mṛtyor mukṣīya māmṛtāt[2]
    Word-by-word meaning of the Mahamrityunjaya Mantra is as follows:
    ॐ aum = the sound Aum
    त्र्यम्बकम् try-ambakam = "the three-eyed one" (compound word, accusative case); lit. "him who has three (tri) eyes (ambaka)"
    यजामहे yajāmahe = "we worship, we sacrifice" (first person plural present indicative ātmanepada of the verbal root *yaj-, "to worship, to sacrifice")
    सुगन्धिम् sugandhim = "the fragrant one" (accusative case); lit. "him who has a nice (su-) smell (gandha)"
    पुष्टिवर्धनम् puṣṭi + vardhanam = "the bestower of nourishment/wealth/perfection" (compound word, accusative case), literally "him who possesses the increase/growth (vardhana) of nourishment (puṣṭi)"
    उर्वारुकम् urvārukam = "(a kind of) cucumber" (nominative case)
    इव iva = "like, as if"
    बन्धनात् bandhanāt = "from bondage, from the stalk/stem" (ablative case of bandhana, "bonding, stem"), becoming bandhanān due to sandhi
    Note: bandhanāt here means "from the stem". Thus, read with urvārukam iva, "as a fruit from the stem"; the etymologically prior meaning of "from bondage" resonates here as the fruit is a simile for the worshipper being released from the bondage of death, see below.
    मृत्योः mṛtyoḥ = "from death" (ablative case of mṛtyuḥ, "death"), becoming mṛtyor due to sandhi
    मुक्षीय mukṣīya = "may I be freed/released" (1st person singular present optative ātmanepada of the verbal root *muc-, "to free, to release")
    मा ऽमृतात् mā 'mṛtāt = "not (mā) from the immortal (amṛtāt, ablative case of amṛtam): negative particle mā is also constructed together with mukṣīya
    5 min
  • ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪದ್ಧತಿ
    ತ್ರಿದಲಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಯಾಯುಧಮ್|
    ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್|| – ಬಿಲ್ವಾಷ್ಟಕ, ಶ್ಲೋಕ ೧
    ಅರ್ಥ: ಮೂರು ಎಲೆಗಳಿರುವ, ತ್ರಿಗುಣಗಳಂತಿರುವ, ಮೂರು ಕಣ್ಣುಗಳಂತಿರುವ, ಮೂರು ಆಯುಧಗಳಂತಿರುವ ಮತ್ತು ಮೂರು ಜನ್ಮಗಳ ಪಾಪಗಳನ್ನು ನಾಶ ಮಾಡುವ ಈ ಬಿಲ್ವಪತ್ರೆ ಯನ್ನು ನಾನು ಶಿವನಿಗೆ ಅರ್ಪಿಸುತ್ತೇನೆ.
    8 min
  • ಎಂಬುದನ್ನು ಕಲಿಸಿ ಅವನಿಂದ ವ್ಯಷ್ಟಿ ಹಾಗೂ ಸಮಷ್ಟಿ ಸಾಧನೆ ಮಾಡಿಸಿಕೊಳ್ಳುವ ಗುರುಗಳು !*
    ಧರ್ಮದ ವ್ಯಾಖ್ಯೆ ನೀಡುವಾಗ ಆದಿ ಶಂಕರಾಚಾರ್ಯರು ನುಡಿಯುತ್ತಾರೆ ಜಗತಃ ಸ್ಥಿತಿಕಾರಣಂ ಪ್ರಾಣೀನಾಂ ಸಾಕ್ಷಾತ್ ಅಭ್ಯುದಯಾನಿಃ ಶ್ರೇಯಸಹೇತುರ್ಯಃ ಸ ಧರ್ಮ | ಅಂದರೆ ಸಮಾಜ ವ್ಯವಸ್ಥೆಯನ್ನು ಉತ್ತಮವಾಗಿರಿಸುವುದು, ಪ್ರತ್ಯೇಕ ಪ್ರಾಣಿಮಾತ್ರರ ಐಹಿಕ ಉನ್ನತಿ ಅಂದರೆ ಅಭ್ಯುದಯ ಮಾಡುವುದು ಹಾಗೂ ಪಾರಮಾರ್ಥಿಕ ಉನ್ನತಿಯನ್ನು ಸಾಧಿಸುವುದು, ಇದೆಲ್ಲವೂ ಯಾವುದರಿಂದ ಸಾಧ್ಯವಾಗುವುದೋ, ಅದುವೇ ಧರ್ಮ
    5 min
  • *ಮಂಗಳವಾರ ಚತುರ್ಥಿ ಬಂದರೆ ಅದಕ್ಕೆ ಅಂಗಾರಕ ಎನ್ನುತ್ತಾರೆ*
    ಗಣಪತಿಯ ಸ್ಪಂದನಗಳು ಮತ್ತು ಪೃಥ್ವಿಯ ಚತುರ್ಥಿ ತಿಥಿಯ ಸ್ಪಂದನಗಳು ಒಂದೇ ರೀತಿಯದ್ದಾಗಿರುತ್ತವೆ, ಆದುದರಿಂದ ಅವುಗಳು ಒಂದಕ್ಕೊಂದು ಅನುಕೂಲವಾಗಿರುತ್ತವೆ; ಅಂದರೆ ಆ ದಿನ ಗಣಪತಿಯ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರಬಹುದು. ಪ್ರತಿ ತಿಂಗಳ ಚತುರ್ಥಿಯ ದಿನ ಗಣಪತಿಯ ತತ್ತ್ವವು ಇತರ ದಿನಗಳ ತುಲನೆಯಲ್ಲಿ ಪೃಥ್ವಿಯ ಮೇಲೆ ೧೦೦೦ ಪಟ್ಟು ಹೆಚ್ಚಿಗೆ ಕಾರ್ಯನಿರತವಾಗಿರುತ್ತದೆ. ಈ ತಿಥಿಗೆ ಶ್ರೀ ಗಣೇಶನ ಉಪಾಸನೆಯನ್ನು ಮಾಡಿದರೆ ಗಣೇಶತತ್ತ್ವದ ಲಾಭವು ಹೆಚ್ಚಿಗೆ ಆಗುತ್ತದೆ.
    ವಿಧಗಳು
    ಶುಕ್ಲ ಪಕ್ಷದಲ್ಲಿನ ಚತುರ್ಥಿಗೆ ವಿನಾಯಕೀ ಮತ್ತು ಕೃಷ್ಣ ಪಕ್ಷದಲ್ಲಿನ ಚತುರ್ಥಿಗೆ ಸಂಕಷ್ಟಿ ಎನ್ನುತ್ತಾರೆ.
    ಅ. ವಿನಾಯಕೀ : ಈ ದಿನದ ಪೂಜಾವಿಧಿಯಲ್ಲಿ ಸಂಕಷ್ಟಿಯಂತೆ ಚಂದ್ರದರ್ಶನ ಮತ್ತು ಚಂದ್ರಪೂಜೆ ಇರುವುದಿಲ್ಲ. ದಿನವಿಡೀ ಉಪವಾಸ ಮಾಡಿ ಮರುದಿನ ಪಾರಣೆ (ಊಟ) ಮಾಡುತ್ತಾರೆ. ಈ ವ್ರತದ ದೇವತೆ ‘ಶ್ರೀ ಸಿದ್ಧಿವಿನಾಯಕ’ನಾಗಿದ್ದು, ಎಲ್ಲವೂ ಒಳ್ಳೆಯದಾಗಬೇಕೆಂದು ವಿನಾಯಕೀಯನ್ನು ಮಾಡುತ್ತಾರೆ.
    ಆ. ಸಂಕಷ್ಟಿ : ಸಂಕಷ್ಟವೆಂದರೆ ಸಂಕಟ. ನಾವು ಪೃಥ್ವಿಯಿಂದ ಬರುವ ೩೬೦ ಲಹರಿಗಳಿಂದ ಆವರಿಸಲ್ಪಟ್ಟಿರುತ್ತೇವೆ, ಇದರಿಂದ ಶರೀರದಲ್ಲಿನ ಪ್ರವಾಹಗಳು ಬಂಧಿತವಾಗುತ್ತವೆ. ಇದನ್ನೇ ಸಂಕಟ ಎನ್ನುತ್ತಾರೆ. ಕೃಷ್ಣ ಪಕ್ಷದಲ್ಲಿ ಈ ೩೬೦ ಲಹರಿಗಳು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಇದರಿಂದ ಶರೀರದಲ್ಲಿನ ಎಲ್ಲ ನಾಡಿಗಳಲ್ಲಿನ ಪ್ರವಾಹವು ಬಂಧಿತವಾಗುತ್ತವೆ. ಈ ಸಂಕಟದ ನಿವಾರಣೆಗಾಗಿ ಸಂಕಷ್ಟಿಯನ್ನು ಮಾಡುತ್ತಾರೆ. ೩೬೦ ಲಹರಿಗಳ ಮೇಲೆ ಗಣಪತಿಯ ಅಧಿಪತ್ಯವಿದೆ; ಅವನ ಉಪಾಸನೆಯಿಂದ ೩೬೦ ಲಹರಿಗಳ ಸಂಕಟದಿಂದ ಮುಕ್ತಿ ಸಿಗುತ್ತದೆ.
    ಈ ದಿನ ದಿನವಿಡೀ ಉಪವಾಸ ಮಾಡಬೇಕು. ಸಂಪೂರ್ಣ ನಿರಾಹಾರಿಯಾಗಿರಬೇಕು. ಸಂಜೆಯ ಸಮಯದಲ್ಲಿ ಸ್ನಾನ ಮಾಡಿ ಗಣಪತಿಯ ಪೂಜೆಯ ಸಿದ್ಧತೆಯನ್ನು ಮಾಡಬೇಕು. ರಾತ್ರಿ ಚಂದ್ರದರ್ಶನದ ನಂತರ, ಮನೆಯಲ್ಲಿ ಶ್ರೀ ಗಣೇಶನ ವಿಗ್ರಹವಿದ್ದರೆ ಅದಕ್ಕೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ವಿಗ್ರಹವಿಲ್ಲದಿದ್ದರೆ ಅಕ್ಷತೆಯ ಮೇಲೆ ಬಟ್ಟಲಡಿಕೆಯನ್ನಿಟ್ಟು ಅದೇ ರೀತಿ ಪೂಜೆಯನ್ನು ಮಾಡಬೇಕು. ಅಥರ್ವಶೀರ್ಷದ ಇಪ್ಪತ್ತೊಂದು ಆವರ್ತನಗಳನ್ನು ಹೇಳಬೇಕು. ಚಂದ್ರನಿಗೆ ಅರ್ಘ್ಯವನ್ನು ಕೊಡಬೇಕು ಮತ್ತು ಅವನ ದಿಕ್ಕಿಗೆ ಗಂಧ, ಹೂವು ಮತ್ತು ಅಕ್ಷತೆಯನ್ನು ಹಾರಿಸಿ ನಮಸ್ಕಾರ ಮಾಡಬೇಕು. ಚತುರ್ಥಿಯ ತಿಥಿಗೆ ಹರಿವಾಣದಲ್ಲಿ ಅರ್ಘ್ಯವನ್ನು ಕೊಡಬೇಕು. ಕೊನೆಗೆ ಮಹಾನೈವೇದ್ಯವನ್ನು ಅರ್ಪಿಸಿ ಭೋಜನ ಮಾಡಬೇಕು. ‘ಶ್ರೀ ವಿಘ್ನವಿನಾಯಕ’ನು ಈ ವ್ರತದ ದೇವನಾಗಿದ್ದಾನೆ.
    ಇ. ಅಂಗಾರಕ : ಮಂಗಳವಾರ ಚತುರ್ಥಿ ಬಂದರೆ ಅದಕ್ಕೆ ಅಂಗಾರಕ ಎನ್ನುತ್ತಾರೆ. ಅಂಗಾರ ಎಂದರೆ ಮಂಗಳಗ್ರಹ ಅಥವಾ ಭೂಮಿ. ಗಣಪತಿಯ ಅಧಿಪತ್ಯವು ಪೃಥ್ವಿಯ ಮೇಲೆ ಇರುವಂತೆ ಮಂಗಳ ಗ್ರಹದ ಮೇಲೂ ಇದೆ. ಗಣಪತಿ ಮತ್ತು ಮಂಗಳ ಗ್ರಹದ ಬಣ್ಣವೂ ಒಂದೇ ಆಗಿದೆ. ಅಂಗಾರಕದ ದಿನ ಪೃಥ್ವಿಯ ಮೇಲೆ ಗಣೇಶನ ಸ್ಪಂದನಗಳು ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಹಾಗೆಯೇ ಮಂಗಳ ಗ್ರಹದಿಂದಲೂ ಗಣೇಶನ ಸ್ಪಂದನಗಳು ಪೃಥ್ವಿಯ ಮೇಲೆ ಬರುತ್ತವೆ. ಇದರಿಂದಾಗಿ ಚಂದ್ರನಿಂದ ಬರುವ ಲಹರಿಗಳು ಹೆಚ್ಚು ಪ್ರಮಾಣದಲ್ಲಿ ನಾಶವಾಗುತ್ತವೆ; ಆದುದರಿಂದಲೇ ‘ಅಂಗಾರಕ ವಿನಾಯಕೀ’ ಮತ್ತು ‘ಅಂಗಾರಕ ಸಂಕಷ್ಟಿ’ಯ ಫಲವು ವರ್ಷಪೂರ್ತಿ ಮಾಡಿದ ಕ್ರಮವಾಗಿ ವಿನಾಯಕಿ ಮತ್ತು ಸಂಕಷ್ಟಿಗಳಷ್ಟೇ ಇರುತ್ತದೆ.
    6 min
  • *ಮಗ ಆಥವ ಮಗಳಲ್ಲಿ ಯಾರು ಶ್ರೇಷ್ಠ..??!!**ಹಿರಿಯರ ಅನುಭವದ ಮಾತು..!*
    *ಮಗ ಆಥವ ಮಗಳಲ್ಲಿ ಯಾರು ಶ್ರೇಷ್ಠ..??!!*
    ಮಗ.....ರಾಗ
    ಮಗಳು.....ಅನುರಾಗ
    ಮಗ.....ಬುದ್ದಿ
    ಮಗಳು....ಸಮೃಧ್ಧಿ
    ಮಗ....ಸಾಹಿತ್ಶ
    ಮಗಳು...ಸಂಗೀತ
    ಮಗ.....ಪ್ರೀತಿ
    ಮಗಳು...ವಾತ್ಯಲ್ಶ
    ಮಗ.....ಧಣಿ
    ಮಗಳು...ಧ್ವನಿ
    ಮಗ...ಮನೆತನ
    ಮಗಳು....ಮರ್ಯಾದೆ
    ಮಗ.....ಚೇತನ
    ಮಗಳು.....ಸಾಂತ್ವನ
    ಮಗˌ.....ಗಣ್ಶ
    ಮಗಳು....ಧನ್ಶ
    ಮಗ...ಧೈರ್ಯ
    ಮಗಳು...ಐಶ್ವರ್ಯ
    ಮಗ....ಸಿಹಿ
    ಮಗಳು...ಮಧುರ
    ಮಗ....ಝೇಂಕಾರ
    ಮಗಳು...ಮಮಕಾರ
    ಮಗ......ಇಂಪು
    ಮಗಳು....ತಂಪು
    ಮಗ....ಸೊಬಗು
    ಮಗಳು...ಸೌಂದರ್ಯ
    ಮಗ....ದೃಷ್ಟಿ
    ಮಗಳು....ಸೃಷ್ಟಿ
    ಮಗ....ಕಿಮ್ಮತ್ತು
    ಮಗಳು...ಕಿಸ್ಮತ್ತು
    ಮಗ...ಹೃದಯ
    ಮಗಳು...ಮಿಡಿತ
    ಮಗ....ಕಣ್ಣು
    ಮಗಳು...ಬೆಳಕು
    ಮಗ.....ಮೃದಂಗ
    ಮಗಳು....ಅಂತರಂಗ
    ಮಗ....ಆತ್ಮ
    ಮಗಳು....ಆತ್ಮಸಾಕ್ಷಿ
    ಮಗ...ಸ್ವರ್ಗ
    ಮಗಳು...ಮೋಕ್ಷ
    ಮಗ....ಕೃಷ್ಣ
    ಮಗಳು.....ಯಶೋಧೆ
    ಮಗ....ವಾರಸ್ದಾರ
    ಮಗಳು....ಹರ್ಷಧಾರ
    ಮಗ.....ಸಂಸ್ಕಾರ
    ಮಗಳು....ಸಂಸ್ಕೃತಿ
    ಮಗ.....ಜೀವಜಲ
    ಮಗಳು...ಜೀವನದಿ
    ಮಗ............ಮಗಮಗ
    ಮಗಳು........ತಾಯಿ
    ಮಗ..ಮದುವೆಯವರೆಗೆ
    ಮಗಳು 💇🏻‍♀️ಕೊನೆಯವರೆಗೆ
    *ಹಿರಿಯರ ಅನುಭವದ ಮಾತು..!*
    14 min
  • The True Karma Yogi-Mother... 🙏😊💐
    *Know Your Parents: (KYP)*
    Brilliant Msg!!
    One who loves till her eyes close, is a *Mother*.
    One who loves without an expression in the eyes, is a *Father*.
    ____________________________
    *Mother* - Introduces you to the world.
    *Father* - Introduces the world to you.
    ___________________________
    *Mother* : Gives you life
    *Father* : Gives you living
    __________________________
    *Mother* : Makes sure you are not starving.
    *Father* : Makes sure you know the value of starving
    __________________________
    *Mother* : Personifies Care
    *Father*: Personifies Responsibility
    __________________________
    *Mother* : Protects you from a fall
    *Father* : Teaches you to get up from a fall.
    __________________________
    *Mother* : Teaches you walking.
    *Father* : Teaches you walk of life
    __________________________
    *Mother* : Teaches from her own experiences.
    *Father* : Teaches you to learn from your own experiences.
    __________________________
    *Mother* : Reflects Ideology
    *Father* : Reflects Reality
    ___________________________
    *Mother's* love is known to you since birth.
    *Father's* love is known when you become a Father.
    _________________________
    *Mother* loves from *Heart*.
    *Father* loves from *Brain*.
    Dedicated to all parents.
    3 min

About Dr Balakrishna Maddodi

From the publisher's feed

Hi