Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • ನಿಷ್ಕಲ್ಮಶ ಮನದಿಂದ ಪ್ರಾರ್ಥನೆ ಸಲ್ಲಿಸಿದಾಗ ಅಸಾಧ್ಯವೂ ಸಾಧ್ಯವಾಗುತ್ತದೆ.*
    *ದೇವರಿಗೆ ಪೂಜೆ ಪ್ರಾರ್ಥನೆ ಯಾಕೆ ಮಾಡಬೇಕು* ?
    ಪೂಜೆ ಯಾಕೆ ಮಾಡಬೇಕು ? ಪ್ರಾರ್ಥನೆ ಯಾಕೆ ಮಾಡಬೇಕು ? ಬಹಳ ಜನರನ್ನು ಕಾಡುವ ಪ್ರಶ್ನೆಯಿದು. ಕಾಣದ ದೇವರಿಗೆ ಪೂಜೆ ಯಾಕೆ ಮಾಡಬೇಕು ? ದೇವರ ಪೂಜೆಯಿಂದ ನಿಜವಾಗಿಯೂ ಲಾಭವಿದೆಯೇ?
    ನಾವು ದೇವರ ಪೂಜೆ ಮಾಡದಿದ್ದರೆ,
    ಏನಾಗುತ್ತದೆ ? ಪೂಜೆ ಎನ್ನುವುದು ಒಂದು ಯೋಗ ಶಾಸ್ತ್ರದ ಪದ್ಧತಿ. ಸಾಧನೆಗೆ ಅನು ಸಂಧಾನವಾದ ಪ್ರಕ್ರಿಯೆ ಎಂಬ ಪರಮಾರ್ಥ ಸೃಷ್ಟಿ ಸ್ಥಿತಿ ಲಯಗಳೆಂಬ ಜೀವನ ವ್ಯವಸ್ಥೆಗೆ ಕಾರಣವಾದ ದೇವಾನು ದೇವನಿಗೆ ಸರ್ವೋತ್ತಮನಿಗೆ ಕೃತಜ್ಞತೆ ಸಲ್ಲಿಸುವ ಧಾರ್ಮಿಕ ವಿಧಾನವೇ ಪೂಜೆ.
    ಪೂಜೆ ಮಾಡದೇ ಇದ್ದರೇ ಏನಾಗುತ್ತದೆಯೋ ಗೊತಿಲ್ಲ. ಅದಕ್ಕೆ ಪೂಜೆ ಮಾಡಿದರೆ, ಮಾತ್ರ ನಮ್ಮ ಜೀವನಕ್ಕೇನು ಬೇಕೋ ಎಲ್ಲವೂ ಸಿಗುತ್ತವೆ ಶಾಂತಿ, ನೆಮ್ಮದಿ, ನಂಬಿಕೆ, ಸಂತೋಷ.
    "ಸಹೃದಯತೆ, ಯೋಜನಾ ಮುನ್ನಡೆ, ಧೈರ್ಯ, ಕಾರ್ಯದಕ್ಷತೆ, ದೀಕ್ಷೆ, ಆಶಾವಾದ, ಶ್ರದ್ಧೆ, ಗಹಿತ್ಯ ಕಲಿಯುವಿಕೆ, ಆರಾಧನೆ, ಐಕ್ಕತೆ, ಮುಂತಾದ ಶಕ್ತಿ ಕ್ರಿಯೆಗಳು ಲಭಿಸುತ್ತವೆ. ಪೂಜೆಯಿಂದ ಮನೋಶಕ್ತಿ ವೃದ್ಧಿಯಾಗುತ್ತದೆ.
    "ಅವಶ್ಯ ಮನುಭೋಕ್ತವ್ಯಂ ಗತಂ ಜನ್ಮಶುಭಾಶುಭಂ”
    ಗತ ಜನ್ಮದಲ್ಲಿ ಮಾಡಿರುವ ಪಾಪ ಪುಣ್ಯಗಳನ್ನೇ ನಾವು
    ಈ ಜನ್ಮದಲ್ಲಿ ಅನುಭವಿಸುತ್ತಿದ್ದೇವೆ. ಅಂದಮೇಲೆ ಗತ ಜನ್ಮದ ಕಾರಣದಿಂದ ಬಂದ ಕಷ್ಟಗಳನ್ನು ಈಗ ಅನುಭವಿಸಬೇಕಾಗಿ ಬಂದಿದೆ.
    ಈಗ ಮಾಡುವ ಪೂಜೆಗೂ ಕಷ್ಟಗಳಿಗೂ ಸಂಬಂಧವಿಲ್ಲ. ನಾವೀಗ ಮಾಡುವ ಪೂಜಾಫಲದಿಂದ ಕಷ್ಟ ನಿವಾರಣೆ ಯಾಗದಿದ್ದರೂ. ಉಪಶಮನ ಸಿಗುತ್ತದೆ. ಸಹನಶಕ್ತಿ ಸಿಗುತ್ತದೆ. *ಗತ ಜನ್ಮದ ರೋಗಕ್ಕೆ ಈ ಜನ್ಮದ ಔಷಧಿಯೇ ಪೂಜೆ.*
    ಪ್ರಾರ್ಥನೆ ಪೂಜೆ ನಂಬಿದವರಿಗೆ ದೇವರಿದ್ದಾನೆ, ಪಾಲಿಸುತ್ತಾನೆ, ರಕ್ಷಿಸುತ್ತಾನೆ, ಸಹಕರಿಸುತ್ತಾನೆ. ಎಂಬುದಕ್ಕೆ ಸಾಕ್ಷಿಯಾಗುವ ಸ್ವಾರಸ್ಯಕರ
    ಪ್ರಸಂಗವೊಂದು ಇಲ್ಲಿದೆ. ನಗರದಲ್ಲಿ ಔಷಧ ಅಂಗಡಿ ಹೊಂದಿದ್ದ ವ್ಯಕ್ತಿಯೊಬ್ಬ ದೇವರನ್ನು ನಂಬದ ಪರಮ ನಾಸ್ತಿಕನಾಗಿದ್ದ.
    ಆದರೆ ಜನಸೇವೆಯೆಂಬ ಕಾಯಕದಿಂದ ಆಸುಪಾಸಿನವರಿಗೆಲ್ಲ ಅಚ್ಚುಮೆಚ್ಚಿನವನಾಗಿದ್ದ. ಆತನ ಮನೆಯವರೆಲ್ಲ ಆಸ್ತಿಕರಾಗಿದ್ದರು.
    ದೇವಸ್ಥಾನ, ದೇವರು, ಪ್ರಾರ್ಥನೆ ಇಂತಹ ವಿಚಾರದಲ್ಲಿ ನಂಬಿಕೆ ಇದ್ದ ಮನೆಮಂದಿಯೆಲ್ಲ ಈತನನ್ನು ಪ್ರಾರ್ಥಿಸುವಂತೆ ಒತ್ತಾಯಿಸುತ್ತಿದ್ದರೂ ನಾಸ್ತಿಕನಾಗಿಯೇ ಉಳಿದಿದ್ದ.
    ಒಂದು ದಿನ ರಾತ್ರಿ ಜೋರಾಗಿ ಮಳೆಸುರಿಯಲಾರಂಭಿಸಿದಾಗ ವಿದ್ಯುತ್ ಕಡಿತವಾಯಿತು.
    ಆ ವೇಳೆಯಲ್ಲಿ ಮಳೆಯಲ್ಲಿ ತೋಯ್ದು ಹೋಗಿದ್ದ ಬಾಲಕನೊಬ್ಬ ಓಡೋಡಿ ಬಂದು ಅನಾರೋಗ್ಯ ಪೀಡಿತಳಾಗಿರುವ ತನ್ನ ತಾಯಿಗೆ ತುರ್ತಾಗಿ ಔಷಧ ಕೊಡುವಂತೆ ಕೋರಿ ಔಷಧ ಚೀಟಿಯನ್ನು ಕೊಟ್ಟ. ಅಂಗಡಿ ಮಾಲೀಕ ಒಲ್ಲದ ಮನಸ್ಸಿನಿಂದಲೇ ಟಾರ್ಚ್ ಬೆಳಕಿನಲ್ಲಿ ತಡಕಾಡಿ ಔಷಧ ಕೊಟ್ಟು ಕಳಿಸಿದ.
    ಕೊಂಚ ಹೊತ್ತಲ್ಲಿ ಮಳೆ ನಿಂತು, ವಿದ್ಯುತ್ ದೀಪಗಳು ಬೆಳಗಿದವು. ಅಷ್ಟರಲ್ಲಿ ಅಂಗಡಿ ಮಾಲೀಕ, ತಾನು ಕತ್ತಲಲ್ಲಿ ಬಾಲಕನಿಗೆ ಕೊಟ್ಟ ಔಷಧಗಳತ್ತ ಗಮನ ಹರಿಸಿ ಹೌಹಾರಿದ.
    ಅದು ಮನುಷ್ಯರು ಸೇವಿಸುವ ಔಷಧವಾಗಿರದೆ ಕ್ರಿಮಿನಾಶಕದ ಬಾಟಲಿಯಾಗಿತ್ತು. ತನ್ನಿಂದ ಅಮಾಯಕ ಜೀವವೊಂದು ಬಲಿಯಾಗುತ್ತದಲ್ಲ ಎಂಬ ಪಾಪಪ್ರಜ್ಞೆಯ ಜೊತೆಗೆ ಆ ಬಾಲಕ ಅನಾಥನಾಗುತ್ತಾನಲ್ಲ,
    ಎಂಬ ಅಪರಾಧ ಪ್ರಜ್ಞೆಯೂ ಕಾಡಿತು. ಏನು ಮಾಡಬೇಕೆಂಬುದನರಿಯದೆ ಈ ದುರಂತವನ್ನು ಹೇಗೆ ತಪ್ಪಿಸಲಿ ಎಂದು ಯೋಚಿಸುತ್ತಾನೆ.
    ಆಗ ಆತನಿಗೆ ಗೋಡೆಯಲ್ಲಿ ತೂಗುಹಾಕಿದ್ದ ದೇವರ ಚಿತ್ರಪಟವೊಂದು ಕಣ್ಣಿಗೆ ಬಿತ್ತು. ಬೇಡವೆಂದರೂ ಒತ್ತಾಯದಿಂದ ಆತನ ತಂದೆ ಅದನ್ನಲ್ಲಿ ತೂಗು ಹಾಕಿದ್ದರು.
    ‘ಯಾವುದೇ ಸಂದರ್ಭದಲ್ಲಿ ಪರಿಸ್ಥಿತಿ ನಿನ್ನ ಕೈಮೀರಿ ಹೋದಾಗ, ಅಸಹಾಯ ಸ್ಥಿತಿಯಲ್ಲಿದ್ದಾಗಲಾದರೂ ಈ ಚಿತ್ರ ಪಟಕ್ಕೆ ಕೈಮುಗಿದು ಮನಃಪೂರ್ವಕವಾಗಿ ಪ್ರಾರ್ಥಿಸು,
    ದಾರಿಯೊಂದು ಗೋಚರವಾಗುತ್ತದೆ’ ಎಂದು ಅಪ್ಪ ಹೇಳಿದ್ದ ಮಾತು ಆ ಕ್ಷಣಕ್ಕೆ ನೆನಪಿಗೆ ಬಂತು. ಎಂದೂ ದೇವರಿಗೆ ಕೈಮುಗಿಯದಿದ್ದ ಆತ ಮೊದಲ ಬಾರಿಗೆ ಕೈಮುಗಿದು ಪ್ರಾರ್ಥನೆ ಸಲ್ಲಿಸಿದ.
    ಕೆಲವೇ ಕ್ಷಣಗಳಲ್ಲಿ ಪವಾಡವೋ ಎಂಬಂತೆ ಔಷಧ ತೆಗೆದುಕೊಂಡು ಹೋಗಿದ್ದ ಬಾಲಕ ಏದುಸಿರು ಬಿಡುತ್ತ ಓಡೋಡಿ ಅಂಗಡಿಗೆ ಬಂದು ‘ಅಂಕಲ್ ಜೋರುಮಳೆಯಲ್ಲಿ ನಾನು ಓಡೋಡಿ ಹೋಗುತ್ತಿದ್ದಾಗ ನೀವು ಕೊಟ್ಟಿದ್ದ ಔಷಧ ಬಾಟಲಿ ಕೈಜಾರಿ ಕೆಳಗೆ ಬಿದ್ದು ಒಡೆದು ಹೋಯಿತು,
    ನನಗೆ ಇನ್ನೊಂದು ಔಷಧ ಬಾಟಲಿ ಕೊಡಿ, ಆದರೆ ನನ್ನಲ್ಲೀಗ ಕೊಡಲು ಹಣವಿಲ್ಲ’ ಎಂದು ಗಾಬರಿಯಿಂದ ಒಂದೇ ಉಸಿರಿಗೆ ಹೇಳಿ ಕಣ್ಣೀರು ಹಾಕಿದ.
    ಆಗ ಅಂಗಡಿಯವನು ಆ ಬಾಲಕನನ್ನು ತಬ್ಬಿಕೊಂಡು, ಆತನಿಗೆ ಬೇಕಾದ ಔಷಧದ ಜೊತೆಗೆ ಕೊಂಚ ಹಣವನ್ನೂ ಕೊಟ್ಟು ಕಳಿಸಿದ. ನಾಸ್ತಿಕನಾಗಿದ್ದರೂ ಪರಿಶುದ್ಧ ಮನಸ್ಸಿನಿಂದ ಆತ ಮೊದಲ ಬಾರಿಗೆ ದೇವರಲ್ಲಿ ಮೊರೆಇಟ್ಟು ಮಾಡಿದ ಪ್ರಾರ್ಥನೆ ಕೈಗೂಡಿತ್ತು.
    *ಮನುಜ ಶುದ್ಧಭಕ್ತಿಯ ಮೂಲಕ ಮೋಕ್ಷವನ್ನು ಪಡೆಯಬಹುದು. ಸರ್ವಶಕ್ತನಾದ ಭಗವಂತನಲ್ಲಿ ಅನುದಿನ-ಅನುಕ್ಷಣ ಪ್ರಾರ್ಥನೆ ಸಲ್ಲಿಸುತ್ತಿರಬೇಕು. ನಿಷ್ಕಲ್ಮಶ ಮನದಿಂದ ಪ್ರಾರ್ಥನೆ ಸಲ್ಲಿಸಿದಾಗ ಅಸಾಧ್ಯವೂ ಸಾಧ್ಯವಾಗುತ್ತದೆ.*
    9 min
  • Stop spreading negativity, even if it’s true.
    🙏🙏🙏🙏
    Let's be part of the Solution and not the problem.
    *Sudha Nair*
    Had the misfortune of visiting the crematorium earlier today to pay my respects to a very dear elderly Uncle of mine. He was a Covid case.
    As i moved from the Hospital to the Crematorium i observed that this time, its the common man that's making the difference, a real difference.
    The nurse who cleans, maintains and takes care of hundreds of patients. She puts her life to risk everytime she steps in a Covid zone. She does it for a living, she gives life.
    She is making a difference.
    The Ward boy who cleans the body, packs it, seals it and moves it up and down the corridors. That Xth Standard failed, that good for nothing boy has stepped up to give mankind some respectability.
    He is making a difference.
    The Ambulance driver, who waits patiently for hours at the Hospital or at the Crematorium. That College drop out, has not gone home from over a week. Day and night, he eats, sleeps, drives the ambulance to take patients and dead bodies alike.
    He is making a difference.
    That security guard at the Hospital who manages the arrival of all vehicles and guides then to their spot fearlessly. He is a retired Military jawan gives priority to the patients and their worried families.
    He is making a difference.
    The Manager of the Crematorium, looks exhausted, over a cup of coffee he tells me, i come in here yesterday at 7am and after 36hrs am still here. He sees hundred of dead bodies and their families crying for their loss. Quietly he did his job for a living.
    He is making a difference.
    The body handler at the crematorium treats every body in the same way. He is exhausted, over worked and underpaid. Often we see him as good for nothing drunkard. This time, he is helping, bury & burn 30/50/70 dead every day & night.
    He is making a difference.
    The Constable on the road guiding the traffic for a smoother is now ensuring that we all wear masks to stop the Pandemic killing more of us. He is risking his life for us everyday. He can barely speak english or use a computer like me.
    He is making a difference.
    The delivery boys. Youngsters who didn't do welll in the Corporate world. They ferry around town in the hot sun or rain from one place to another delivering 20+ packages everyday for you and me. We don't smile or acknowledge his presence when collecting our Parcel.
    He is making a difference.
    My local vegetable vendor. He buys fresh vegetables and fruits everyday and brings them to my doorstep. All of us want the freshest, sweetest and nicest stuff from him. We bargain to no real gain with this village bum who everyday wakes up real early and gives my family stay healthy on his veggies.
    He is making a difference.
    This time, its the common man that's making the difference, a real difference. He was always there, but we never noticed.
    Let's be part of the Solution and not the problem.
    *Stay in*.
    *Mask up*.
    *Eat healthy*.
    *Keep distance*.
    It’s v easy to sit in ur Drawing room watching the idiot box and keep criticising.
    Sometimes Govt.. sometimes opposition, sometimes doctors.
    Remember you have no control on others but u certainly have control on urself. Behave responsibly, do ur bit. It’s an uninvited natural calamity. Together it can b dealt with. 🙏
    let's salute these warriors who are fighting our battle and motivate others.
    🙏🏼
    6 min
  • ನಮಗಾಗಿಯೇ ಬದುಕೋಣ ....
    ಕೊರೋನಾ -- ಏನು ಮಾಡೋಣ ?
    ಇಂದು ಎಲ್ಲೆಡೆ ಕೊರೋನಾದ ಎರಡನೇಯ ಅಲೆಯ ಆರ್ಭಟ ಬಹಳ ಜೋರಾಗಿದೆ ಚಂಡಮಾರುತದ ವೇಗದಂತೆ ಹಬ್ಬುತ್ತಿರುವ ಈ ಕೊರೋನಾವನ್ನು ನಿಯಂತ್ರಿಸುವುದು ಬಹಳ ಕಷ್ಟದ ಕೆಲಸವೇ ಸರಿ ಕಳೆದ ವರ್ಷದಿಂದ ಕೆಲಸ ಕಳೆದುಕೊಂಡು ಬದುಕಿಗೆ ಕಷ್ಟ ಪಡುತ್ತಿರುವುದನ್ನು ನಾವು ಎಲ್ಲೆಂದರಲ್ಲಿ ನೋಡುತ್ತೇವೆ. ಕೊರೋನಾದ ಹೆಸರಿನಲ್ಲಿ ಅನೇಕ ಕಂಪೆನಿಗಳು ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುತ್ತಿರುವುದನ್ನು ನಾವು ನೋಡಿದ್ದೇವೆ . ಕೆಲಸವಿಲ್ಲದೆ ಅಲೆದಾಡುತ್ತಿರುವವರನ್ನು ನೋಡುತ್ತೇವೆ. ಅಲ್ಲಿ ಇಲ್ಲಿ ಸಾಲ ಮಾಡಿ ಹಣ ಹಿಂದಿರುಗಿಸಲು ಸಾಧ್ಯವಾಗದೆ ತಲೆ ತಗ್ಗಿಸಿ ನಡೆಯುವವರನ್ನು ನೋಡುತ್ತೇವೆ.ಇಷ್ಟೆಲ್ಲ ಆಗುವುದಕ್ಕೆ ಬಹಳ ಪ್ರಮುಖ ಕಾರಣ ಕೊರೋನಾ
    ಹಾಗೆಂದು ಕೇವಲ ಕೊರೋನಾವನ್ನೇ ದೂರುತ್ತಾ ಕುಳಿತರೆ ಅದು ತಪ್ಪೆಂದು ನನಗೆ ತೋರುತ್ತದೆ. ಅನೇಕ ಸಮಸ್ಯೆಗಳಿಗೆ ನಾವೇ ಸ್ವತಃ ಕಾರಣರೂ ಹೌದು ಈ ಕೆಳಗಿನ ಕಲವು ಅಂಶಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡರೆ ಕಷ್ಟಗಳ ಸಂದರ್ಭದಲ್ಲಿಯೂ ತುಸು ನೆಮ್ಮದಿಯಿಂದ ಬದುಕಬಹುದು.
    1. ಜೀವನದುದ್ದಕ್ಕೂ ಪ್ರಾಮಾಣಿಕರಾಗಿರುವುದು
    2 ಬಹಳ ಹಿಂದಿನಿಂದಲೇ ಭಾರತದಲ್ಲಿ ರೂಢಿಯಲ್ಲಿರುವ ಸರಳ ಬದುಕನ್ನು ರೂಢಿಸಿಕೊಳ್ಳಬೇಕು
    3 ಅನಗತ್ಯ ಖರ್ಚು ಮಾಡಬಾರದು
    4. ನಾವೇ ಮಾಡುವುದಕ್ಕೆ ಸಾಧ್ಯವಾಗುವ ಕೆಲಸವನ್ನು ನಾವೇ ಮಾಡಬೇಕು ಇತರರ ಅವಲಂಬನೆ ಆದಷ್ಟು ಕಡಿಮೆ ಮಾಡಬೇಕು
    5 ಪ್ರತಿದಿನ ದುಡಿಯಬೇಕು ದುಡಿದು ಗಳಿಸಬೇಕು ಗಳಿಸಿದ್ದರಲ್ಲಿ ಸ್ವಲ್ಪ ಹಣ ಉಳಿತಾಯ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
    6 ಮಾನವನ ಆಸೆಗಳಿಗೆ ಮಿತಿಯಲ್ಲ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಈ ಆಸೆಗಳಲ್ಲಿ ಅಗತ್ಯಕ್ಕೆ ಪ್ರಾಧಾನ್ಯತೆಯಿರಲಿ ಹೊರತು ಅನಗತ್ಯ ಆಸೆಗಳಿಗಲ್ಲ.
    7 ಜೀವನದಲ್ಲಿ ಸದಾ ತಾಳ್ಮೆಯಿರಲಿ
    8 ಅಲ್ಲಿ ಇಲ್ಲಿ ಸುತ್ತುವುದು ಹರಟೆ ಹೊಡೆಯುವುದು , ಜೀವನದ ಅಮೂಲ್ಯ ಸಮಯವನ್ನು ಕೊಂದಂತೆ ಎಂದು ತಿಳಿದುಕೊಳ್ಳಬೇಕು.
    9 ಮಾನಸಿಕ ಸ್ಥೈರ್ಯ, ಆತ್ಮವಿಶ್ವಾಸ ನಮ್ಮ ಜೊತೆಗಿರಬೇಕು
    10 ಮನೋದೈಹಿಕ ವಿಕಾಸಕ್ಕೆ ಯೋಗ ಪ್ರಾಣಾಯಾಮಗಳನ್ನು ಸತತ ಅಭ್ಯಾಸ ಮಾಡಬೇಕು ಹಾಗೂ ಪ್ರತಿದಿನದ ಜೀವನದ ಅವಿಭಾಜ್ಯ ಅಂಗವಾಗಬೇಕು
    11 ಪರಿಸರ ಪ್ರೇಮಿಗಳಾಗಿ ಪರಿಸರ ರಕ್ಷಿಸುವವರಾಗಬೇಕು.
    12 .ಸರಕಾರದ ಸೌಲಭ್ಯ ಗಳ ಬಗ್ಗೆ ಜಾಗೃತಿಯಿರಬೇಕು.
    13 ದೃಢ ಚಿತ್ತದಿಂದ ಹಿಡಿದ ಕೆಲಸ ಮಾಡುವ ಛಲ ಬೆಳೆಸಿಕೊಳ್ಳಬೇಕು
    14 ಯಾವುದೇ ಕಷ್ಟದ ಸಂದರ್ಭದಲ್ಲೂ ಉತ್ತಮವಾಗಿ ಬದುಕಲು ಪೂರಕವಾಗುವಂತೆ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು.
    15 ಉನ್ನತ ಶಿಕ್ಷಣ, ಉದ್ಯೋಗದ ಆಯ್ಕೆಯ ಸಂದರ್ಭದಲ್ಲಿ ಜಾಣರಾಗಿರಬೇಕು.
    16 ತಮಗೆ ಒಪ್ಪಿಗೆಯಲ್ಲದ ವಿಷಯಗಳಿಗೆ ಜಾಣಕಿವುಡರಾಗಬೇಕು.
    17 ವದಂತಿಗಳಿಗೆ ಕಿವಿಗೊಡದೆ ಬದುಕುವುದನ್ನು ಕಲಿಯಬೇಕು
    18 ಒಳಿತು ಎಲ್ಲಿದ್ದರೂ ಸ್ವೀಕರಿಸೋಣ ಕೆಡುಕನ್ನು ನಯವಾಗಿ ತಿರಸ್ಕರಿಸೋಣ
    19 ಕೋಪ ಮುಕ್ತರಾಗಿ ಬದುಕಲು ಪ್ರಯತ್ನಿಸೋಣ
    20 ಕೊನೆಯದಾಗಿ ನಾವು ನಮಗಾಗಿಯೇ ಬದುಕೋಣ ಇತರರಿಗಾಗಿ ಅಲ್ಲ ಎಂದು ತಿಳಿದು ಬದುಕೋಣ
    6 min
  • ಅಹಂನಿಂದಾಗುವ ನಷ್ಟಗಳು
    
     Menu
    
    Home > ಗುರುಕೃಪಾಯೋಗ > ಅಹಂ ನಿರ್ಮೂಲನೆ > ಅಹಂನಿಂದಾಗುವ ನಷ್ಟಗಳು
    ಅಹಂನಿಂದಾಗುವ ನಷ್ಟಗಳು
    July 26, 2019
    Share this on :
    TwitterFacebookWhatsapp
    ೧. ಅಹಂಭಾವದಿಂದ ದುಃಖವಾಗುವುದು
    ನಾನು ಮಾಡುತ್ತೇನೆ ಎಂದಾಗ ದುಃಖಿತನಾಗುವೆ ನೀನು |
    ರಾಮನು ಮಾಡುತ್ತಾನೆ ಎಂದಾಗ ಹೊಂದುವೆ | ಯಶಸ್ಸು ಕೀರ್ತಿ ಪ್ರತಾಪವನ್ನು |
    – ದಾಸಬೋಧೆ, ದಶಕ ೬, ಸಮಾಸ ೭, ದ್ವಿಪದಿ ೩೬
    ಅಹಂ ಎಷ್ಟು ಹೆಚ್ಚಿರುತ್ತದೆಯೋ, ವ್ಯಕ್ತಿ ಅಷ್ಟೇ ಹೆಚ್ಚು ದುಃಖಿತನಾಗಿರುತ್ತಾನೆ. ಮನೋ ರೋಗಿಗಳಲ್ಲಿ ಸಾಮಾನ್ಯ ವ್ಯಕ್ತಿಗಿಂತ ಅಹಂಭಾವ ಹೆಚ್ಚಿರುತ್ತದೆ. ಆದುದರಿಂದ ಅವರು ಹೆಚ್ಚು ದುಃಖಿತರಾಗಿರುತ್ತಾರೆ. ನನ್ನ ಸಂಪತ್ತು, ನನ್ನ ಶರೀರ ಈ ವಿಧದ ವಿಚಾರಗಳಿದ್ದಲ್ಲಿ ಸಂಪತ್ತು ಕಡಿಮೆಯಾದಾಗ ಅಥವಾ ಶರೀರಕ್ಕೆ ಕಾಯಿಲೆ ಬಂದಾಗ ಆ ವ್ಯಕ್ತಿಯು ದುಃಖಿತನಾಗುತ್ತಾನೆ; ಆದರೆ ಇನ್ನೊಬ್ಬನ ಬಗ್ಗೆ ಹೀಗಾದರೆ ವ್ಯಕ್ತಿಯು ದುಃಖಿತನಾಗುವುದಿಲ್ಲ. ಅಹಂಭಾವದಿಂದ ಮನಸ್ಸಿಗೆ ಆಗುವ ದುಃಖವು ಶಾರೀರಿಕ ವೇದನೆಗಿಂತಲೂ ಹೆಚ್ಚು ಕಷ್ಟಕರವಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ ಸಂತರು ಎಲ್ಲವೂ ಪರಮೇಶ್ವರನದ್ದೇ ಆಗಿದೆ, ತನ್ನದೇನೂ ಇಲ್ಲ ಎಂದು ತಿಳಿಯುತ್ತಾರೆ; ಆದ್ದರಿಂದ ಅವರು ಎಂದಿಗೂ ದುಃಖಿತರಾಗುವುದಿಲ್ಲ, ಯಾವಾಗಲೂ ಆನಂದದಲ್ಲಿಯೇ ಇರುತ್ತಾರೆ.
    7 min
  • ರಾಜನೊಬ್ಬನ ದರ್ಬಾರು ನಡೆದಿತ್ತು.*
    *
    ಅಲ್ಲಿಗೆ ಒಬ್ಬ ವ್ಯಕ್ತಿ ಬಂದು 'ಪ್ರಭು ನನಗೆ ನೌಕರಿಯ ಅವಶ್ಯಕತೆ ಇದೆ.ತಾವು ದಯವಿಟ್ಟು ನನಗೊಂದು ನೌಕರಿ ನೀಡಬೇಕು ಪ್ರಭು.' ಅಂತ ರಾಜನಲ್ಲಿ ಬೇಡಿಕೊಂಡ.
    ಅದಕ್ಕೆ ರಾಜ 'ನಿನ್ನಲ್ಲಿರುವ ವಿಶೇಷತೆ ಏನೆಂಬುದ ಹೇಳು.ನಂತರ ನಿನಗೆ ನೌಕರಿ ಕೊಡುತ್ತೇನೆ'ಎಂದ.
    ಆ ವ್ಯಕ್ತಿ 'ಪ್ರಭು ನಾನು ಮನುಷ್ಯನದಾಗಲೀ,ಪ್ರಾಣಿಗಳದಾಗಲಿ ಅವುಗಳ ಮುಖವನ್ನು ನೋಡಿ ಅವುಗಳ ಪೂರ್ವಾಪರ ಹೇಳುತ್ತೇನೆ.'
    ರಾಜ:ಓ ಹಾಗೋ.ಆಯ್ತು ಹಾಗಿದ್ದಲ್ಲಿ ಇಂದಿನಿಂದ ನಿನಗೆ ನನ್ನ ಖಾಸಾ ಮತ್ತು ಅತಿ ಬೆಲೆಯುಳ್ಳ ಅಶ್ವಗಳನ್ನು ನೋಡಿಕೊಳ್ಳುವ ಮೇಲ್ವಿಚಾರಕ ಕೆಲಸಕ್ಕೆ ನೇಮಿಸಿದ್ದೇನೆ'.
    ವ್ಯಕ್ತಿ: ಧನ್ಯವಾದಗಳು ಪ್ರಭು.
    ಕೆಲ ದಿನಗಳ ನಂತರದಲ್ಲಿ ರಾಜನು ತನ್ನ ಅಶ್ವ ಶಾಲೆಗೆ ಬಂದು ಆ ವ್ಯಕ್ತಿಯ ಬಳಿ ತನ್ನ ಅತ್ಯಂತ ಪ್ರಿಯಪಾತ್ರವಾದ ಹಾಗೂ ಅತ್ಯಂತ ಹೆಚ್ಚಿನ ಬೆಲೆಯ ಅಶ್ವದ ಬಗ್ಗೆ ನಿನ್ನ ಅಭಿಪ್ರಾಯವೇನು ಅಂತ ಕೇಳಿದಾಗ ಆ ವ್ಯಕ್ತಿ ಹೇಳಿದ.
    ' ಇದು ಒಳ್ಳೆಯ ಜಾತಿ ಕುದುರೆಯಲ್ಲ ಪ್ರಭು.' ಎಂದ.
    ರಾಜನಿಗೆ ಆಘಾತವಾಯಿತು.ತತ್ಕ್ಷಣವೇ ತನಗೆ ಜಾತಿಯ ಕುದುರೆಗಳನ್ನ ಪೂರೈಸುತ್ತಿದ್ದ ಕಾಡಿನಲ್ಲಿರುವ ವ್ಯಕ್ತಿಯನ್ನು ಕರೆದು ಇದರ ಬಗ್ಗೆ ವಿಚಾರಿಸಿದಾಗ,
    ಆ ವ್ಯಕ್ತಿ 'ಪ್ರಭು ಕುದುರೆ ಏನೊ ಒಳ್ಳೆಯ ಜಾತಿ ಕುದುರೆಯೇ ಹೌದು.ಆದರೆ ಇದು ಹುಟ್ಟಿದ ತಕ್ಷಣವೇ ಇದರ ತಾಯಿ ಸತ್ತುಹೋಯಿತು.ಹಾಗಾಗಿ ಇದು ಒಂದು ಆಕಳ ಹಾಲು ಕುಡಿದು ಆ ಆಕಳು ಜೊತೆಯೇ ಬೆಳೆದಿತ್ತು..ಎಂದು ಹೇಳಿದ.
    ರಾಜನು ಮತ್ತೆ ಮೊದಲಿನ ವ್ಯಕ್ತಿಯನ್ನ'ನಿನಗೆ ಇದು ಜಾತಿಯ ಕುದುರೆ ಅಲ್ಲ ಎನ್ನುವುದು ಹೇಗೆ ತಿಳಿಯಿತು?ಅಂತ ಕೇಳಿದ.
    ಆತ ಹೇಳಿದ.'ಪ್ರಭು ಇದು ಹುಲ್ಲನ್ನು ತಿನ್ನುವಾಗ ಆಕಳುಗಳಂತೆಯೇ ತಲೆಯನ್ನು ಕೆಳಗೆ ಹಾಕಿ ತಿನ್ನುತ್ತದೆ.ಆದರೆ ಜಾತಿಯ ಕುದುರೆಗಳು ಹುಲ್ಲನ್ನು ಬಾಯಿಯಲ್ಲಿ ತೆಗೆದುಕೊಂಡು ತಲೆ ಎತ್ತಿ ತಿನ್ನುತ್ತವೆ.'
    ರಾಜನಿಗೆ ಆತನಲ್ಲಿಯ ವಿಶೇಷತೆಯ ಬಗ್ಗೆ ಖುಷಿಯಾಗಿ ಆ ನೌಕರನ ಮನೆಗೆ ವಿಧವಿಧವಾದ ದವಸ ಧಾನ್ಯಗಳನ್ನೂ,ತುಪ್ಪವನ್ನೂ,ಬಹಳಷ್ಟು ಕುರಿ-ಕೋಳಿಗಳನ್ನು ಬಹುಮಾನ ರೂಪವಾಗಿ ನೀಡಿದ.
    ನಂತರ ಆತನನ್ನ ರಾಣಿಯ ಅಂತಃಪುರದ ಮೇಲ್ವಿಚಾರಕನನ್ನಾಗಿ ನೇಮಿಸಿದ.
    ಸ್ವಲ್ಪ ದಿನಗಳ ನಂತರ ರಾಜನು ಆತನಲ್ಲಿ ತನ್ನ ಪತ್ನಿಯ ಬಗ್ಗೆ ವಿಚಾರಿಸಲಾಗಿ ಆತನು
    'ಪ್ರಭು ರೀತಿ ರಿವಾಜುಗಳೇನೊ ರಾಣಿಯ ತರಹವೇ ಇದೆ.ಆದರೆ ಹುಟ್ಟಿನಿಂದ ರಾಜಮನೆತನದಾಕೆಯಲ್ಲ' ಅಂದ.
    ಇದನ್ನ ಕೇಳಿ ರಾಜನಿಗೆ ಕಾಲ್ಕೆಳಗಿನ ಭೂಮಿ ಕುಸಿದಂತಾಯ್ತು.
    ತತ್ಕ್ಷಣವೇ ತನ್ನ ಅತ್ತೆಯನ್ನು ಕರೆಯಿಸಿ ವಿಚಾರಿಸಲಾಗಿ ಅತ್ತೆಯು 'ನಿಮ್ಮ ತಂದೆಯವರು ನನ್ನ ಪತಿಯ ಬಳಿ ನಮಗೆ ಮಗಳು ಹುಟ್ಟಿದಾಗಲೇ ನಿಮಗೆ ಕೊಡಬೇಕೆಂದು ವಚನ ಪಡೆದಿದ್ದರು.ಆದರೆ ಹುಟ್ಟಿದ ನಾಲ್ಕು ತಿಂಗಳಲ್ಲೇ ಆ ಮಗು ತೀರಿ ಹೋದಾಗ,ನಿಮ್ಮ ರಾಜಮನೆತನದ ಸಂಬಂಧವನ್ನ ಮುಂದುವರೆಸಲು ಬೇರೆಯವರ ಅದೇ ವಯಸ್ಸಿನ ಹೆಣ್ಣು ಮಗುವನ್ನು ಸಾಕಿದೆವು'.ಎಂದು ಹೇಳಿದಳು.
    ರಾಜನು ಮತ್ತೆ ತನ್ನ ನೌಕರನಲ್ಲಿ'ನಿನಗೆ ಹೇಗೆ ಈ ವಿಷಯ ಗೊತ್ತಾಯಿತು?' ಅಂತ ಕೇಳಿದಾಗ ಆ ನೌಕರ ಹೇಳಿದ.'ಪ್ರಭು ನೌಕರರೊಡನೆ ರಾಜಮನೆತನದವರ ಗತ್ತು ವರ್ತನೆ ಹೇಗಿರಬೇಕೊ ರಾಣಿಯವರ ವರ್ತನೆ ಹಾಗಿರದೆ ಹಳ್ಳಿ ಗಮಾರರಂತೆ ಒರಟೊರಟಾಗಿತ್ತು.ಹಾಗಾಗಿ ಗೊತ್ತಾಯಿತು.'ಎಂದ.
    ರಾಜನು ಆತನಲ್ಲಿಯ ಕೂಲಂಕುಷವಾಗಿ ಪರೀಕ್ಷಿಸುವ ಗುಣವನ್ನು ಮೆಚ್ಚಿ ಮತ್ತೆ ಆತನ ಮನೆಗೆ ಸಾರೋಟಿನ ತುಂಬ ದವಸ ಧಾನ್ಯಗಳನ್ನೂ,ಹಾಗೂ ಬಹಳಷ್ಟು ಕುರಿ-ಕೋಳಿ,ಆಕಳುಗಳನ್ನು ಬಹಮಾನವಾಗಿ ಕೊಟ್ಟು ಕಳುಹಿಸಿದನಲ್ಲದೇ,ತನ್ನ ದರಬಾರಿನ ಮೇಲ್ವಿಚಾರಕನಾಗಿ ನೇಮಿಸಿದ.
    ಕೆಲ ದಿನಗಳ ನಂತರ ರಾಜನು ಆ ನೌಕರನನ್ನು ಏಕಾಂತದಲ್ಲಿ ಕರೆದು ನನ್ನ ಬಗ್ಗೆ ನಿನ್ನ ಅನಿಸಿಕೆ ಏನು?ಎಂದು ಕೇಳಿದ.
    ಅದಕ್ಕೆ ಆ ನೌಕರ 'ಪ್ರಭು ನನ್ನ ಜೀವಕ್ಕೆ ಯಾವುದೇ ಅಪಾಯವನ್ನು ಮಾಡುವುದಿಲ್ಲ ಅಂತ ತಾವು ಮಾತು ಕೊಟ್ಟರೆ ಮಾತ್ರ ಹೇಳುವೆ' ಅಂದ.
    ರಾಜನು ವಚನ ಕೊಟ್ಟ.
    ಆಗ ನೌಕರ ಹೇಳಿದ' ತಾವು ರಾಜನ ಮಗನೂ ಅಲ್ಲ,ನಿಮ್ಮ ನಡೆ ನುಡಿಗಳೂ ರಾಜನಂತಿಲ್ಲ' ಎಂದ.
    ರಾಜನಿಗೆ ಅಗಾಧ ಕೋಪ ಬಂತು
    8 min
  • *ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ*
    ಪಂಚೋಪಚಾರ ಪೂಜೆಯಲ್ಲಿ ‘ಕರ್ಪೂರದೀಪ ಹಚ್ಚುವ ಉಪಚಾರ’ ಇಲ್ಲದಿದ್ದರೂ, ಕರ್ಪೂರವು ಸಾತ್ತ್ವಿಕವಾಗಿರುವುದರಿಂದ ಕರ್ಪೂರದೀಪವನ್ನು ಹಚ್ಚುವುದರಿಂದ ಹೆಚ್ಚಿನ ಸಾತ್ತ್ವಿಕತೆ ಸಿಗಲು ಸಹಾಯವಾಗುತ್ತದೆ. ಇದಕ್ಕಾಗಿ ನೈವೇದ್ಯ ಅರ್ಪಿಸಿದ ನಂತರ ಕರ್ಪೂರದೀಪವನ್ನು ಹಚ್ಚಬಹುದು. ಕರ್ಪೂರದೀಪವನ್ನು ಹಚ್ಚುವುದರಿಂದ ಅಶ್ವಮೇಧ ಯಾಗದ ಪುಣ್ಯವು ಸಿಗುತ್ತದೆ.
    5 min
  • ಶ್ರೀಧರ ಸ್ವಾಮಿಗಳ ಆರಾಧನೆ ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
    *ಶ್ರೀಧರ ಸ್ವಾಮಿಗಳು*
    ಶ್ರೀಧರ ಸ್ವಾಮಿಗಳ ಆರಾಧನೆ ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
    ಶ್ರೀಧರ ಸ್ವಾಮಿಗಳು ವರದಹಳ್ಳಿಯಲ್ಲಿ ಗುಡ್ಡದ ಮೇಲೆ ನಿಂತು, ಕೇವಲ ತಮ್ಮ ತಪಶ್ಶಕ್ತಿಯಿಂದ ನೀರನ್ನು ಉದ್ಭವಿಸಿ, ಉದ್ಭವ ಗಂಗೆಯ ನೆಲೆಗೆ ಕಾರಣೀಕೃತರಾದರು. ಈ ನೀರು, ಅತ್ಯುತ್ತಮ ಔಷಧೀಯ ಗುಣಗಳಿಂದ ಕೂಡಿದ್ದು, ರೋಗ ನಿವಾರಣ ಶಕ್ತಿಯಾಗಿಯೂ ಭಕ್ತರಲ್ಲಿ ಚಿರಪರಿಚಿತ. ತಮ್ಮ ಅವತಾರ ಕಾಲದಲ್ಲಿ ನಿರಂತರ ಪವಾಡ ಮತ್ತು ಕೃಪಾದೃಷ್ಟಿಯಿಂದ ಭಕ್ತರ ಕಷ್ಟಗಳನ್ನು ದೂರ ಮಾಡಿ ಅವರ ಬದುಕಿನಲ್ಲಿ ಸಂತೃಪ್ತಿ ತಂದರು.
    4 min
  • *ಪಂಚಭೂತಗಳೇ ಪ್ರತ್ಯಕ್ಷ ಜೀವದೇವತೆಗಳು.*
    *ಪಂಚಭೂತಗಳೇ ಪ್ರತ್ಯಕ್ಷ ಜೀವದೇವತೆಗಳು.*
    ಶ್ರುತಿಯಲ್ಲಿ ಅರ್ಥಾತ್ ವೇದಗಳಲ್ಲಿ ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶಗಳ ವರ್ಣನೆ ಬಹು ವಿಸ್ತಾರವಾಗಿ ಸೊಗಸಾಗಿ ಮಾಡಲ್ಪಟ್ಟಿದೆ. ಈ ಪಂಚಭೂತಗಳೇ ಪ್ರಧಾನ ದೇವತೆಗಳು. ಇವುಗಳಿಂದಲೇ.. ಶರೀರ. ಪಂಚಭೂತಗಳಿಂದಲೇ ಕೃಮಿ ಕೀಟ ಪಶು ಪಕ್ಷಿ ಕೊನೆಯದಾಗಿ *ಮನುಷ್ಯ* ಸಹಿತ ಎಲ್ಲಾ ಜೀವರಾಶಿಗಳಿಗೆ ನೇರವಾಗಿ ಅವಿನಾಭಾವ ಸಂಬಂಧವೂ ನಿಶ್ಚಯವಾಗಿದೆ. ಈ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಮತ್ತು ಅಲ್ಲಗಳಿಸುವಂತಿಲ್ಲ. ಎಂಬುದಾಗಿ, ವೇದಗಳು ಅತ್ಯಂತ ಮನೋಹರವಾಗಿಯೂ ಗಂಭೀರವಾಗಿಯೂ.. ಪ್ರತಿಪಾದಿಸಿವೆ. ಇವೆಲ್ಲದರ ಋಣ ತೀರಿಸಲೆಂದೇ ಅನೇಕ ವೇದೋಕ್ತ ವಿಧಿ ವಿಧಾನಗಳನ್ನೂ ಯಜ್ಞ ಯಾಗ ಮತ್ತು ಕರ್ಮಾನುಷ್ಠಾನದ ಮೂಲಕ ಪಂಚಭೂತಗಳಿಗೆ ನಿತ್ಯ ನಾವು ಮಾಡುವ ಸ್ನಾನ, ಸೇವಿಸುವ ಅನ್ನ-ಪಾನಾದಿಗಳ ಸಮಯದಲ್ಲಿಯೂ ಗೌರವದಿಂದ ಸಮರ್ಪಿಸುವ ಮತ್ತು ಪೂಜ್ಯ ಭಾವನೆಯಿಂದ ಕೂಡಿದ ವೈದಿಕ ವಿಧಿಗಳಿಂದಲೂ ಪ್ರಾಮುಖ್ಯವಾಗಿ ಅಲ್ಲಲ್ಲಿ ಅನೇಕ ಬಾರಿ ಹೇಳಲ್ಪಟ್ಟಿವೆ.
    ಕರ್ಮಾನುಸಾರ ಪ್ರಾಪ್ತವಾದ ಸಂಪತ್ತಿನಿಂದ ಭೂಮಿಯನ್ನು ಹಣ ಕೊಟ್ಟು ಖರೀದಿ ಮಾಡುವೆವು.
    ಜಲವನ್ನು ಹಣಕೊಟ್ಟು ಖರೀದಿ ಮಾಡಿಯೂ ಆಗಿದ್ದಾಯಿತು.
    ಇದೀಗ ನಮಗೆ ಪ್ರಾಣವಾಯುವಿನ (ಆಕ್ಸಿಜನ್) ಸರದಿಯಾಗಿದೆ.
    ಪ್ರಕೃತಿಯನ್ನು ಅತೀ ಆಸೆಯಿಂದ ನಾವು ಕೇವಲ ಸ್ವಾರ್ಥ ಸಾಧನೆಗಾಗಿ ಭಯಂಕರವಾಗಿ ಅಗೆದು, ಬಡಿದು, ಒಂದುಕಡೆ ಗುಡ್ಡೆನಾಶ, ಗುಡ್ಡೆ ಇದ್ದಲ್ಲಿ ಇನ್ನಿತರ ವಾಣಿಜ್ಯ ಬೆಳೆ.. (ವಿಷವನ್ನುಣಿಸುವ ರಬ್ಬರ್ ಕೃಷಿ ಇತ್ಯಾದಿ) ಮತ್ತು ಕೆಲವುಕಡೆ ನದೀ ಕೊಳ ಬಾವಿಗಳನ್ನೂ.. ಇನ್ನು ಕೆಲವೆಡೆ ಸಾಂಪ್ರದಾಯಿಕ ಕೃಷಿ ಭೂಮಿಯನ್ನು ಕೇವಲ ದುಡ್ಡಿನ ಆಸೆಗೆ ಬಿದ್ದು, ಸೈಟ್ ಮನೆ ಕಟ್ಟಡಯ ಕೈಗಾರಿಕೆ ಕಾರ್ಖಾನೆ ಇತ್ಯಾದಿಗಳಿಂದಲೂ.. ಒಂದು ರೀತಿಯಲ್ಲಿ ವಿವೇಚನಾರಹಿತರಾಗಿ ಮನಸೋಇಚ್ಛೆಯಿಂದ ಸರ್ವವಿಧದಿಂದಲೂ ಪ್ರಕೃತಿಯನ್ನು ನಾಶಪಡಿಸಿ, ಈವಾಗ
    ನಮ್ಮ ದೇಶ ಪ್ರಾಣವಾಯುವನ್ನು ಹಣಕೊಟ್ಟು ಖರೀದಿಸಬೇಕಾದ ದುಸ್ಥಿತಿ ಬಂದಿದೆ ಅಂದರೆ, ಅದರ ದುಷ್ಪರಿಣಾಮ ದುಷ್ಪರಿಸ್ಥಿತಿ ಎಷ್ಟು ಗಂಭೀರವಾಗಿದೆ? ಎಂದು ಅರ್ಥಮಾಡಿಕೊಳ್ಳುವಷ್ಟೂ ದಡ್ಡರಾಗಿದ್ದೇವೆಯೇ?
    ಮಾತನಾಡಿದರೆ ಪ್ರತಿಯೊಂದಕ್ಕೂ ಅದರದರ ಸ್ಥಾನ ಮಾನ ರಕ್ಷಣೆಗಾಗಿ ಕಾನೂನಿನ (ಅ) ಸೌಲಭ್ಯಗಳನ್ನು ಅಲ್ಲಗಳಿಸುವಂತಂತೂ.. ಇಲ್ಲವೇ ಇಲ್ಲ. ಎಲ್ಲವೂ ಸುಸಜ್ಜಿತ. ಆದರೆ? ಪ್ರತಿಯೊಂದು ಇಲಾಖೆ ವಿಭಾಗದಲ್ಲಿ ಬಹುತೇಕ ಎಲ್ಲ ಕಡೆ ಭ್ರಷ್ಟಾಚಾರದ ಕಸದ ಕೂಪವಾಗಿ, ಕಾನೂನು ಇವೆ. ಆದರೆ ಪಾಲನೆ ಮತ್ತು ಚಾಲ್ತಿಯಲ್ಲಿಲ್ಲ. ಆದರೆ ಹೆಗ್ಗಣಗಳಿಗೆ ಗ್ರಾಮ ಪಂಚಾಯಿತಿಯಿಂದ ಹಿಡಿದು ದೊಡ್ಡ ದೊಡ್ಡ ನಗರಗಳ ನಗರ ಪಾಲಿಕೆಯ ಪರ್ಯಂತ ಲಂಚ ಪಡೆದು ಎಲ್ಲವೂ ಸಕ್ರಮೀಕರಣವಾಗುವುದು!
    ಏನೆಲ್ಲಾ ಕಸರತ್ತು?
    ಕೆಲವರು ಪರಿಸರ ರಕ್ಷಕರೆಂದರೂ... ಅವರ ವಾದ, ಅವರ ಸಿದ್ಧಾಂತಗಳನ್ನು ಮುಖ್ಯವಾಗಿ *ಪುರೋಭಿವೃದ್ಧಿ* (Infrastructure) ಎಂದು ಹೇಳುತ್ತಾ.. ಜಾಣಕಿವುಡುತನದಿಂದ ರಾಜಕೀಯ ಪಕ್ಷಗಳಾದಿಯಾಗಿ ನಾವ್ಯಾರೂ ಕೂಡಾ ಪರಿಸರದ ಬಗ್ಗೆ ಉತ್ತಮವಾಗಿ ಸಾಕಷ್ಟು ಮಟ್ಟಿಗೆ ಕೆಲಸ ಮಾಡುತ್ತಿಲ್ಲ ಮಾಡುವುದಿಲ್ಲ.. ಒಂದುವೇಳೆ ಮಾಡುವವರು ಇದ್ದಲ್ಲಿಯೂ ಅಲ್ಲಿನ ಸಣ್ಣ ಪುಟ್ಟ ಬೇರೆ ಇನ್ನಿತರ ಸಮಸ್ಯೆಗಳನ್ನು ಎತ್ತಿಕಟ್ಟುವಂಥಹ ದುಷ್ಟ ರಾಜಕೀಯ ಶಕ್ತಿಗಳೂ ಈ ದೇಶದಲ್ಲಿ ಏನೂ ಕಡಿಮೆ ಇಲ್ಲ! 😥 ಅವುಗಳನ್ನು ಎದುರಿಸುತ್ತ ಈ ಪ್ರಕೃತಿ ಪುರುಷರು ಸುಸ್ತಾಗಿ ಆ ಮೇಲೆ ಸೋಲುಂಡಿದ್ದೂ ಅನೇಕ ಜ್ವಲಂತ ಉದಾಹರಣೆಗಳು ಅವೆಷ್ಟೋ ಈ ದೇಶದಲ್ಲಿ ನಡೆದಿವೆ. ನಡೆಯುತ್ತಲೇ ಇವೆ.
    ಕೊಪಿಷ್ಠರಾದಾಗ ಪ್ರಜೆಗಳಾದ ನಾವು ದೇಶ - ವಿದೇಶ - ರಾಜ್ಯ ಆಡಳಿತದವರನ್ನು ದೂರುವುದರಲ್ಲಿ ನಾವುಗಳು ವೃಥಾ ಚರ್ಚೆ ಮಾಡಿ ಕಾಲಹರಣ ಮಾಡಿ ತಾನೇ ಏನು ಪ್ರಯೋಜನ?
    ಒಂದು ಕ್ಷಣ ಆಲೋಚನೆ ಮಾಡಿದಾಗ ಅರ್ಥವಾಗುತ್ತದೆ ತಾನೇ? ನಾವುಗಳು ಎಡವಿದ್ದೆಲ್ಲಿ? ಹೇಗೆಂದು...?
    ಹೀಗೆ ನಾವುಗಳು ಪರಿಸರ ನಾಶ ಮಾಡುತ್ತಿರುವ ದುಷ್ಪರಿಣಾಮದಿಂದ ಮುಂದೊಂದು ದಿನ ನಮ್ಮೆಲ್ಲರ ಅಂತ್ಯ ಕೊರೋನಾಗಿಂತಲೂ ಅತಿಭಯಂಕರ ಪೆಡಂಭೂತದಿಂದ ನಿಶ್ಚಿತ.
    ಕೃತಕ ಉಸಿರಾಟಕ್ಕೆ ಪ್ರಾಣವಾಯು (oxygen) ಎಷ್ಟು ದಿನ? ಸರಬರಾಜು ಮಾಡುವ ಪರಿಯೋ? 😥
    *ಭುವಿಯ ಮೇಲಿರುವ ನಾವೆಲ್ಲರೂ ಭೂ ಭಾರಕ್ಕೆ ಕಾರಣೀಭೂತರಾದರೆ? ಮುಂದೊಂದು ದಿನ, ಈಗ ಅನುಭವಿಸುತ್ತಿರುವ ಭೂ+ ಜಲ+ (ಪ್ರಾಣ) ವಾಯು ಮಾಲಿನ್ಯದಿಂ ಹುಟ್ಟಿದ ಘೋರ ಪರಿಣಾಮ ಮುಂದೆ ಯಾವ ರೀತಿಯದ್ದೋ?? ಎಂದು ಸಾವಿರ ಪ್ರಶ್ನೆ ಚಿಹ್ನೆ ಹಾಕಿದರೂ ಕಡಿಮೆಯೇ ಸರಿ.
    ಮಾಡಿದ ಪಾಪಗಳಿಗೆ ಯಾವತ್ತೂ ಪ್ರಾಯಶ್ಚಿತ್ತ ಮಾಡಲೇ ಬೇಕಲ್ಲವೇ?
    ಇನ್ನಾದರೂ ಕೆಲವು ವರ್ಷಗಳಿಗೆ ನೈಸರ್ಗಿಕವಾಗಿ ಮತ್ತು ಪ್ರಾಕೃತಿಕವಾಗಿ ಪ್ರಕೃತಿಯನ್ನು ಅದರ ಪಾಡಿಗೆ ಬಿಡೋಣವಾಗಲಿ.
    ಸ್ವಲ್ಪ ಮಟ್ಟಿನ ಹೆಚ್ಚಿನ ಪ್ರಯತ್ನದಿಂದ *ಸುಜಲಾಂ ಸುಫಲಾಂ ಮಾತರಂ! ವಂದೇ ಪ್ರಕೃತಿ ಮಾತರಂ* ಎಂಬ ನಿಟ್ಟಿನಲ್ಲಿ ಎಲ್ಲರೂ ನಡೆಯುವಂತೆ, ಪಕೃತಿ ಪುರುಷ ನಿಯಾಮಕ ಪರಮಾತ್ಮನನ್ನು ಶರಣಾಗಿ ವ್ಯವಹರಿಸುವಂತೇ ಅವನೇ ನಮ್ಮಗಳನ್ನು ಸಲಹುವಂತೇ ಪ್ರಾರ್ಥಿಸುತ್ತಾ.. ಈ ನನ್ನ ಬರಹಕ್ಕೆ ಸದ್ಯಕ್ಕೆ ಪೂರ್ಣಬಿಂದುವನ್ನು ನೀಡುವೆನು.🙏
    =================
    ಲೇಖನ. ಶರತ್ಚಂದ್ರ ಭಟ್. ನವೀಮುಂಬಯಿ.
    ================
    7 min
  • ನಿಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿರಿಸಿಕೊಳ್ಳಿ
    ಯುನೈಟೆಡ್ ಸ್ಟೇಟ್ಸ್ ಆಫ಼್ ಅಮೇರಿಕದಲ್ಲಿ ಒಂದು ಖೈದಿಗೆ ಮರಣದಂಡನೆ ವಿಧಿಸಿದಾಗ, ಕೆಲವು ವಿಜ್ಞಾನಿಗಳು ಈ ಖೈದಿಯ ಮೇಲೆ ಕೆಲವು ಪ್ರಯೋಗಗಳನ್ನು ಮಾಡಬೇಕೆಂದು ಸೂಚಿಸಿದ್ದರಿಂದ ಖೈದಿಯನ್ನು ನೇಣು ಹಾಕುವ ಬದಲು ವಿಷಕಾರಿ ನಾಗರ (ಹಾವಿನ) ದಾಳಿಯಿಂದ ಕೊಲ್ಲಲಾಗುವುದು ಎಂದು ತಿಳಿಸಲಾಯಿತು.
    ಒಂದು ದೊಡ್ಡ ವಿಷಪೂರಿತ ಹಾವನ್ನು ಕೈದಿಯ ಮುಂದೆ ತರಲಾಯಿತು ನಂತರ ಖೈದಿಯ ಕಣ್ಣುಗಳನ್ನು ಮುಚ್ಚಿ ಅವನನ್ನು ಕುರ್ಚಿಗೆ ಕಟ್ಟಲಾಯಿತು. ಅವನಿಗೆ ಹಾವಿನಿಂದ ಕಚ್ಚಿಸಲಿಲ್ಲ, ಆದರೆ ಎರಡು ಪಿನ್ ಗಳಿಂದ ಚುಚ್ಚಲಾಯಿತು. ಆ ಖೈದಿ ಎರಡೇ ಸೆಕೆಂಡುಗಳಲ್ಲಿ ಸತ್ತುಹೋದ.
    ಮರಣೋತ್ತರ ಪರೀಕ್ಷೆಯಲ್ಲಿ ಖೈದಿಯ ದೇಹದಲ್ಲಿ ಹಾವಿನ ವಿಷವನ್ನು ಹೋಲುವ ವಿಷವಿದೆ ಎಂದು ತಿಳಿದುಬಂತು.
    ಈಗ ಈ ವಿಷ ಆ ಮೃತ ಖೈದಿಯ ದೇಹದಲ್ಲಿ ಎಲ್ಲಿಂದ ಬಂತು!!? ಅಥವಾ ಖೈದಿಯ ಸಾವಿಗೆ ಕಾರಣವೇನು!? ಎಂಬುದೇ ಪ್ರೆಶ್ನೆ..!!
    ಇದಕ್ಕೆ ಸಿಕ್ಕ ಉತ್ತರವೇನೆಂದರೆ.. *_"ಮಾನಸಿಕ ಆಘಾತದಿಂದಾಗಿ ಆ ವಿಷವನ್ನು ಅವನ ದೇಹದಿಂದಲೇ ಉತ್ಪಾದಿಸಲಾಯಿತು!!!"_*
    ಆದ್ದರಿಂದ ನೀವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವು ಧನಾತ್ಮಕ ಅಥವಾ ರುಣಾತ್ಮಕ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ದೇಹವು ಹಾರ್ಮೋನುಗಳನ್ನು ಉತ್ಪಾದಿಸುತ್ತದೆ.
    90% ಕಾಯಿಲೆಗಳಿಗೆ ಮೂಲ ಕಾರಣ ನಕಾರಾತ್ಮಕ ಆಲೋಚನೆಗಳಿಂದ ಉತ್ಪತ್ತಿಯಾಗುವ ಶಕ್ತಿ.
    ಇಂದು ಮನುಷ್ಯನು ತನ್ನ ತಪ್ಪು ಆಲೋಚನೆಗಳಿಂದ ತನ್ನನ್ನು ತಾನು ಸುತ್ತಿಕೊಳ್ಳುತ್ತಿದ್ದಾನೆ ಮತ್ತು ತನ್ನನ್ನು ತಾನು ನಾಶಪಡಿಸಿಕೊಳ್ಳುತ್ತಿದ್ದಾನೆ.
    5 ವರ್ಷದಿಂದ 80 ವರ್ಷ ವಯಸ್ಸಿನ ರೋಗಿಗಳು ಕರೋನಾದಿಂದ ಮುಕ್ತರಾಗಿದ್ದಾರೆ.
    ಅಂಕಿಅಂಶಗಳ ಮೇಲೆ ಹೋಗಬೇಡಿ ಏಕೆಂದರೆ ಅರ್ಧಕ್ಕಿಂತ ಹೆಚ್ಚು ಜನರು ಆರೋಗ್ಯವಾಗಿದ್ದಾರೆ, ಮತ್ತು ಸಾವುಗಳು ಕೇವಲ ಕರೋನಾ ಕಾಯಿಲೆಯಿಂದಲ್ಲ, ಅವರಿಗೆ ಇತರ ಕಾಯಿಲೆಗಳಿವೆ, ಆದ್ದರಿಂದ ಅವರು ನಿಭಾಯಿಸಲು ಸಾಧ್ಯವಿಲ್ಲ.
    ಕರೋನಾದಿಂದ ಮನೆಯಲ್ಲಿ ಯಾರೂ ಇನ್ನೂ ಸಾವನ್ನಪ್ಪಿಲ್ಲ ಎಂಬುದನ್ನು ನೆನಪಿಡಿ. ಮುಖ್ಯವಾಗಿ ಎಲ್ಲಾ ರೋಗಿಗಳು ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆ. ಏಕೆಂದರೆ ಆಸ್ಪತ್ರೆಯಲ್ಲಿನ ವಾತಾವರಣ ಮತ್ತು ಅವರ ಮನಸ್ಸಿನಲ್ಲಿರುವ ಭಯ ಇದಕ್ಕೆ ಕಾರಣ.
    ದಯವಿಟ್ಟು ನಿಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿರಿಸಿಕೊಳ್ಳಿ. 🙏🏻
    4 min

About Dr Balakrishna Maddodi

From the publisher's feed

Hi