Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • *ಮಧ್ಯಾಹ್ನದ ನಂತರ ತುಳಸಿಯನ್ನು ಏಕೆ ಮುಟ್ಟಬಾರದು ?*
    ಪ್ರಾತಃಕಾಲದ ಬ್ರಾಹ್ಮಿ ಮುಹೂರ್ತವು ಅತ್ಯಂತ ಸಾತ್ವಿಕವಾಗಿದ್ದು ಆಧ್ಯಾತ್ಮಿಕ ಸಾಧನೆಗೆ ಶ್ರೇಷ್ಠವಾದ ಸಮಯವಾಗಿದೆ. ಸೂರ್ಯೋದಯದ ಅನಂತರ ಹೊತ್ತೇರುತ್ತ ಹೋದಂತೆ ವಾತಾವರಣದಲ್ಲೂ ಮಾನವನಲ್ಲೂ ರಜತಮಗಳು ಹೆಚ್ಚುತ್ತ ಹೋಗುತ್ತದೆ. ಮಧ್ಯಾಹ್ನದ ನಂತರವೂ ರಾತ್ರಿಯ ಸಮಯದಲ್ಲೂ ಅವುಗಳ ಪ್ರಮಾಣವು ಬಹಳ ಹೆಚ್ಚಿರುತ್ತದೆ. ತುಳಸಿಯು ಅತ್ಯಂತ ಸಾತ್ವಿಕವಾಗಿರುವುದರಿಂದ ಮಧ್ಯಾಹ್ನದ ನಂತರ ಇಂತಹ ರಜತಮ ವಾತಾವರಣದಲ್ಲಿ ರಜತಮೋಗುಣಿಯಾದ ಮಾನವನು ಅದನ್ನು ಸ್ಪರ್ಶಿಸಿದಲ್ಲಿ ಅದು ಬಾಡಿ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದುದರಿಂದ ಮಧ್ಯಾಹ್ನದ ಬಳಿಕ ತುಳಸಿಯನ್ನು ಮುಟ್ಟಬಾರದು.
    3 min
  • ರಾಣಿ ಲಕ್ಷ್ಮೀಬಾಯಿ : ಮದ್ದುಗುಂಡುಗಳನ್ನು ತಯಾರಿಸುವ ಭಾರತದ ಪ್ರಥಮ ರಾಣಿ !
    ೧೨ ನೇ ಶತಮಾನದಲ್ಲಿ ಚೀನಾದಲ್ಲಿ ಮದ್ದುಗುಂಡುಗಳನ್ನು ತಯಾರಿಸಲಾಗುತ್ತಿತ್ತು. ಮುಂದಿನ ೨೦೦ ವರ್ಷಗಳಲ್ಲಿ ಈ ತಂತ್ರಜ್ಞಾನವು ಅರಬ ಹಾಗೂ ಯುರೋಪಿನ ದೇಶಗಳನ್ನು ತಲುಪಿತು; ಆದರೆ ಭಾರತೀಯ ಆಡಳಿತ ವ್ಯವಸ್ಥೆಯು ಈ ಬಗ್ಗೆ ಸಂಪೂರ್ಣ ಅಜ್ಞಾನದಲ್ಲಿತ್ತು. ಕ್ರಿ.ಶ ೧೫೨೬ರಂದು ಬಾಬರನು ಬಂದೂಕಿನ ಬಲದಲ್ಲಿ ಆಕ್ರಮಣ ಮಾಡಿ ವಿಜಯಿಯಾದನು. ಝಾನ್ಸಿ ರಾಣಿಯು ಯುದ್ಧದಲ್ಲಿ ಮದ್ದುಗುಂಡುಗಳಿಗೆ ಇರುವ ಮಹತ್ವನ್ನು ಅರಿತ ಭಾರತದ ಪ್ರಥಮ ರಾಣಿಯಾಗಿದ್ದಳು. ಭಾರತದಲ್ಲಿ ರಾಣಿಯು ಮದ್ದುಗುಂಡುಗಳನ್ನು ತಯಾರಿಸುವಲ್ಲಿ ಮೊದಲನೇಯವಳಾಗಿದ್ದರೂ ರಾಣಿಯ ಆಡಳಿತಾವಧಿಯು ಕಡಿಮೆ ಇದ್ದುದರಿಂದ ಮಹತ್ವದ ಪರಿಣಾಮವಾಗಲಿಲ್ಲ.
    6 min
  • ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ = *ಸಚ್ಚಾರಿತ್ರ್ಯ*
    ೧ ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ = *ಸಚ್ಚಾರಿತ್ರ್ಯ*
    ೨ ಎಲ್ಲ ದುರ್ದೈವಕ್ಕೆ ಕಾರಣ= *ಆಲಸ್ಯ*
    ೩ ನಮ್ಮ ದುರವಸ್ಥೆಗಳಿಗೆಲ್ಲ ಕಾರಣ = *ಭೀತಿ*
    ೪ ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು= *ಸಮಯ*
    ೬ ಸಾವಿರ ಯಜ್ಞಗಳಿಗಿಂತ ಶ್ರೇಷ್ಠ ಕರ್ಮ = *ಪರೋಪಕಾರ*.
    ೭ ಅತ್ಯಂತ ಶ್ರೇಷ್ಠ ಸ್ವಭಾವ = *ತಾಳ್ಮೆ* .
    ೮ ಅತ್ಯಂತ ಕೆಟ್ಟ ಗುಣ = *ಪರನಿಂದೆ*.
    ೯ ಬಹುತೇಕ ಎಲ್ಲ ರೋಗಗಳಿಗೆ ಮುಖ್ಯಕ್ತಾರಣ = *ಅಜೀರ್ಣ* .
    ೧೦ ಚಟಗಳಲ್ಲಿ ಅತೀ ಕೆಟ್ಟ ಚಟ = *ಚಾಡಿ ಹೇಳುವದು*.
    ೧೧ ಬಂಧುಗಳಲ್ಲಿ ಶ್ರೇಷ್ಠ ಬಂಧು = *ವಿಶ್ವಾಸ* .
    ೧೨ ವ್ಯಕ್ತಿಗಳ ಅಧಃಪತನಕ್ಕೆ ಮುಖ್ಯ ಕಾರಣ = *ಅಹಂಕಾರ* .
    ೧೩ ಆಪತ್ಕಾಲದಲ್ಲಿ ಶ್ರೇಷ್ಠ ಆಪಧ್ಬಾಂಧವ = *ದೈವಬಲ* .
    ೧೫ ಬಾಧೆಗಳಲ್ಲಿ ಹೆಚ್ಚು ಬಾಧೆ ಕೊಡುವುದು = *ಸಾಲಬಾಧೆ*.
    ೧೭ ಹುಚ್ಚುಗಳಲ್ಲಿ ಅತೀ ಕೆಟ್ಟ ಹುಚ್ಚು = *ಹೊಗಳಿಸಿಕೊಳ್ಳುವದು*.
    ೧೮ ಬದುಕಿನಲ್ಲಿಯೇ ಅತೀ ಹೀನಬದುಕು = *ಹಂಗಿನ ಬದುಕು*.
    ೨೦ ಎಲ್ಲರ ಬದುಕಿಗೆ ಆಧಾರವಾಗಿರುವ ಪ್ರಮುಖ ಅಂಶ = *ವಿಶ್ವಾಸ* .
    ೨೧ ಮನುಷ್ಯನಿಗೆ ಕಗ್ಗತ್ತಲಿಗಿಂತ ಅತೀ ಹೆಚ್ಚು ಕತ್ತಲಾಗಿರುವುದು = *ಅಜ್ಞಾನ*.
    ೨೩ ಜಗತ್ತಿನ ಎಲ್ಲ ಕೆಟ್ಟ ಕಾರ್ಯಗಳ ಬೆಳವಣಿಗೆಗೆ ಮುಖ್ಯ ಕಾರಣ = *ಸಜ್ಜನರ ನಿಷ್ಕ್ರಿಯತೆ* .
    ೨೫ ಜಗತ್ತಿನಲ್ಲಿ ಅತೀ ಒಳ್ಳೆಯ ಹಾಗೂ ಕೆಟ್ಟ ಅಂಗ = *ನಾಲಿಗೆ*.
    ೨೬ ವರಗಳಲ್ಲಿ ಅತೀ ದೊಡ್ಡ ವರ = *ಆರೋಗ್ಯ* .
    ೨೭ ದೊಡ್ಡ ಶ್ರೀಮಂತಿಕೆ = *ಸಂತೃಪ್ತಿ*.
    ೨೮ ಜಗತ್ತಿನಲ್ಲಿ ತುಂಬಾ ಕಷ್ಟಕರ ಹಾಗೂ ಸುಲಭವಾದ ಕ್ರಿಯೆ = *ಮೌನ*.
    4 min
  • ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ !
    ದೇವರಿಗೆ ನಮಸ್ಕಾರ ಮಾಡುವಾಗ ಮೊದಲು ಎದೆಯ ಮುಂದೆ ಎರಡೂ ಕೈಗಳ ಅಂಗೈಗಳನ್ನು ಒಂದರ ಮೇಲೊಂದಿಟ್ಟು ಕೈಗಳನ್ನು ಜೋಡಿಸಬೇಕು’.
    ೧. ಕೈಗಳನ್ನು ಜೋಡಿಸುವಾಗ ಬೆರಳುಗಳನ್ನು ಸಡಿಲವಾಗಿಡಬೇಕು.
    ೨. ಕೈಗಳ ಬೆರಳುಗಳ ನಡುವೆ ಅಂತರವನ್ನು ಬಿಡದೇ ಬೆರಳುಗಳನ್ನು ಜೋಡಿಸಬೇಕು.
    ೩. ಕೈಗಳ ಬೆರಳುಗಳನ್ನು ಹೆಬ್ಬೆರಳುಗಳಿಂದ ದೂರ ಇಡಬೇಕು.
    ೪. ಪ್ರಾಥಮಿಕ ಸ್ತರದಲ್ಲಿನ ಸಾಧಕರು ಮತ್ತು ಸರ್ವಸಾಮಾನ್ಯ ಜನರು ನಮಸ್ಕಾರ ಮಾಡುವಾಗ ಅಂಗೈಗಳನ್ನು ಒಂದಕ್ಕೊಂದು ತಾಗಿಸಿ ಹಿಡಿಯಬೇಕು. ಅಂಗೈಗಳ ನಡುವೆ ಟೊಳ್ಳನ್ನು ಬಿಡಬಾರದು. ಸಾಧನೆಯನ್ನು ಆರಂಭಿಸಿ ಐದಾರು ವರ್ಷಗಳಾಗಿರುವ ಮುಂದಿನ ಸ್ತರದಲ್ಲಿನ ಸಾಧಕರು ನಮಸ್ಕಾರ ಮಾಡುವಾಗ ಅಂಗೈಗಳ ನಡುವೆ ಟೊಳ್ಳನ್ನು ಬಿಡಬೇಕು.
    6 min
  • ಗೋವಿನ 32 ಅಂಗಗಳಲ್ಲಿ ವಾಸಿಸುವ ದೇವತೆಗಳು
    ಗೋವಿನ 32 ಅಂಗಗಳಲ್ಲಿ ವಾಸಿಸುವ ದೇವತೆಗಳು 💐👆👆👆💐
    🐂 ತಲೆಯ ಮಧ್ಯ ಭಾಗದಲ್ಲಿ ಈಶ್ವರನು ವಾಸವಾಗಿದ್ದಾನೆ.
    🐂 ಹಣೆಯ ತುದಿಯಲ್ಲಿ ಪಾರ್ವತಿಯ ವಾಸ.
    🐂 ಮೂಗಿನಲ್ಲಿ ಸುಬ್ರಹ್ಮಣ್ಯ ವಾಸ.
    🐂 ಮೂಗಿನ ಹೊರಳೆಗಳಲ್ಲಿ ಕಂಬಲ ಮತ್ತು ಅಶ್ವತ್ಥರ ವಾಸ.
    🐂 ಕೋಡಿನ(ಕೊಂಬು) ಮೂಲಭಾಗದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ವಾಸ.
    🐂 ಕೋಡುಗಳ ತುದಿಯಲ್ಲಿ ಎಲ್ಲಾ ತೀರ್ಥಹಳ್ಳಿ ವಾಸ.
    🐂 ಕಿವಿಗಳಲ್ಲಿ ಅಶ್ವಿನೀ ಕುಮಾರರ ವಾಸ.
    🐂 ಕಣ್ಣುಗಳಲ್ಲಿ ಸೂರ್ಯ ಚಂದ್ರರ ವಾಸ.
    🐂 ಹಲ್ಲುಗಳಲ್ಲಿ ಪ್ರಾಣಾಪಾನಾದಿ ಎಲ್ಲಾ ಬಾಯಿಗಳ ವಾಸ.
    🐂 ನಾಲಗೆಯಲ್ಲಿ ವರುಣನ ವಾಸ.
    🐂 ಗಂಡ ಸ್ಥಳದಲ್ಲಿ ಮಾಸ ಮತ್ತು ಪಕ್ಷ ದೇವತೆಗಳ ವಾಸ.
    🐂 ತುಟಿಗಳಲ್ಲಿ ಸಂಧ್ಯಾದೇವತೆ ವಾಸ.
    🐂 ಕುತ್ತಿಗೆಯಲ್ಲಿ ಇಂದ್ರನ ವಾಸ.
    🐂 ಹೃದಯದಲ್ಲಿ ಸಾಧ್ಯ ದೇವಗಣಗಳ ವಾಸ.
    🐂 ತೊಡೆಯಲ್ಲಿ ಧರ್ಮ ದೇವತೆಯ ವಾಸ.
    🐂 ಕಾಲಿನ ಗೊರಸುಗಳ ಮಧ್ಯದಲ್ಲಿ ಗಂಧರ್ವ ದೇವತೆ ವಾಸ.
    🐂 ಗೊರಸುಗಳ ತುದಿಯಲ್ಲಿ ಸರ್ಪ ದೇವತೆ ವಾಸ.
    🐂 ಗೊರಸುಗಳ ಪಕ್ಕದಲ್ಲಿ ಅಪ್ಸರೆಯರ ವಾಸ.
    🐂 ಬೆನ್ನಿನಲ್ಲಿ ರುದ್ರರ ವಾಸ.
    🐂 ಎಲ್ಲ ಸಂಧಿಗಳಲ್ಲಿ ಅಷ್ಟವಸುಗಳ ವಾಸ.
    🐂 ಬಾಲದಲ್ಲಿ ಸೋಮದೇವತೆಯ ವಾಸ.
    🐂 ಹೊಟ್ಟೆಯಲ್ಲಿ ದ್ವಾದಶ ಆದಿತ್ಯರ ವಾಸ.
    🐂 ರೋಮಗಳಲ್ಲಿ ಸೂರ್ಯನ ಕಿರಣಗಳ ವಾಸ.
    🐂 ಗೋಮೂತ್ರದಲ್ಲಿ ಗಂಗೆಯ ವಾಸ.
    🐂 ಗೋಮಯದಲ್ಲಿ ಯಮುನೆಯ ವಾಸ.
    🐂 ಹಾಲಿನಲ್ಲಿ ಸರಸ್ವತಿಯ ವಾಸ.
    🐂 ಮೊಸರಿನಲ್ಲಿ ನರ್ಮದೆಯ ವಾಸ.
    🐂 ತುಪ್ಪದಲ್ಲಿ ಅಗ್ನಿಯ ವಾಸ.
    🐂 ಗೋವುಗಳ ಕೂದಲುಗಳಲ್ಲಿ ೩೩ಕೋಟಿ ದೇವತೆಗಳ ವಾಸ.
    🐂 ಸ್ತನಗಳಲ್ಲಿ ನಾಲ್ಕು ಸಾಗರಗಳ ವಾಸ.
    🐂 ಉದರದಲ್ಲಿ ಪೃಥ್ವೀ ದೇವತೆಗಳ ವಾಸ.
    🐂 ಸಗಣಿ ಇಡುವ ಜಾಗದಲ್ಲಿ ಮಹಾಲಕ್ಷ್ಮೀ ವಾಸ.
    🐂ಹೀಗೆ ಇಡೀ ಬ್ರಹ್ಮಾಂಡವನ್ನೇ ದೇಹದಲ್ಲಿ ಹೊಂದಿರುವ ಗೋವು.
    5 min
  • *ಭಜನೆ ಒಂದು ಜಾನಪದ ಕಲೆ*.
    *ಭಜನೆ ಕರ್ನಾಟಕದಾದ್ಯಂತ ಕಂಡು ಬರುವ ಒಂದು ಜಾನಪದ ಕಲೆ*. ಒಂದೊಂದು ಭಾಗದಲ್ಲಿ ಹಾಡುವ ಭಜನೆಗಳ ಹಿನ್ನಲೆ ಹಾಗೂ ಪ್ರಕಾರಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಒಟ್ಟಾಗಿ ಭಜನೆ ಮೇಳಗಳು ಒಂದಲ್ಲಾ ಒಂದು ರೀತಿಯಲ್ಲಿ ನಾಡಿನ ಉದ್ದಗಲಕ್ಕೂ ವ್ಯಾಪಿಸಿವೆ.
    ಚಿತ್ರ:Lord hanuman singing bhajans AS.jpg
    ರಾಮನ ಪರಿಪೂರ್ಣ ಭಕ್ತನಾದ ಹನುಮಂತ, ಭಜನೆಯ ಗಾಯಕನಾಗಿ ಕಲ್ಪಿಸಿಕೊಂಡಂತೆ
    Bhajan in Coimbatore, ತಮಿಳುನಾಡು during Navratri Golu
    ಹಿನ್ನೆಲೆ ಸಂಪಾದಿಸಿ
    ಮಧ್ಯಕಾಲೀನ ಭಕ್ತಿಯುಗ ಈ ಭಜನೆ ಸಂಪ್ರದಾಯಕ್ಕೆ ಹತ್ತಿರವಾದದ್ದು. ಶೈವ ಮತ್ತು ವೈಷ್ಣವ ಪಂಥಗಳೆರಡೂ ವ್ಯಾಪಕವಾಗಿ ಭಜನೆಯ ಪರಂಪರೆಯುನ್ನು ಹುಟ್ಟು ಹಾಕಿದವು. ವೈದಿಕ ಪರಂಪರೆಯ ನಿಗೂಢತೆಯನ್ನು ಸೀಮಿತತೆಯನ್ನು ಮೊಟ್ಟ ಮೊದಲ ಬಾರಿಗೆ ಸಾಮಾಜಿಕವಾಗಿ ಸಾರ್ವತ್ರಿಕಗೊಳಿಸಲಾಯಿತು. ಈ ಪರಂಪರೆಯ ದಾಸರು ಭಜನೆಗಳಿಗೆ ತಾತ್ವಿಕ ರೂಪವೊಂದನ್ನು ಕೊಡುವುದಕ್ಕೆ ಸಮರ್ಥರಾದರು. ನವ ವಿಧ ಭಕ್ತಿಗಳ ಮೂಲಕ ಅವರು ಭಜನೆಗೊಂದು ವ್ಯಾಖ್ಯಾನವನ್ನು ನೀಡಿದರು. ಹೀಗೆ ವ್ಯಾಖ್ಯಾ ಕೊಡುವುದರ ಮೂಲಕವೇ ಅವರ ಭಜನೆಗೊಂದು ನಿರ್ಧಷ್ಟತೆ ದೊರೆಯಿತು.
    ಭಜನೆ ಸಂಪ್ರದಾಯದ ಸಂಪಾದಿಸಿ
    ಭಜನೆ ಸಂಪ್ರದಾಯದ ವೈಶಿಷ್ಟ್ಯವೆಂದರೆ ವ್ಯಾಖ್ಯಾನವನ್ನು ಕಾಲಾಂತರದಲ್ಲಿ ಮುರಿದುದು, ಅಷ್ಟು ಮಾತ್ರವಲ್ಲ ಶೈವ ಮತ್ತು ವೈಷ್ಣವ ಎನ್ನುವ ವಿಂಗಡಣೆಯ ಗೆರೆಯನ್ನು ದಾಟಿ ಭಾವೈಕ್ಯದ ಕಡೆಗೆ ಸಾಗಿದರು. ಜನಪದರ ಭಜನೆಗಳೆಂದರೆ ಜಾತಿ, ಮತಗಳನ್ನು ಮೀರಿದ ದೇಶಿಯ ಆರಾಧನಾ ಗೀತೆಗಳ ಸಂಪ್ರದಾಯ, ಅದರಲ್ಲಿ ಇಲ್ಲಿಯ ಗ್ರಾಮ ದೇವತೆಗಳ ಸ್ತುತಿಯೇ ಮುಖ್ಯವಾದದು, ಛಂದಸ್ಸು ಕೂಡ ಶುದ್ಧವಾಗಿ ದೇಶೀಯ ದಾಸರು ಬಳಸಿದ ಭಾಷೆ. ಛಂದಸ್ಸುಗಳ ಶಿಷ್ಠ ರೂಪವನ್ನು ಇಲ್ಲಿ ಗುರುತಿಸುವಂತಿಲ್ಲ, ಬಹುತೇಕವಾಗಿ ಅವು ಆಯಾ ಪ್ರಾದೇಶಿಕ ಭಾಷೆಯ ರೂಪವನ್ನು ಪಡೆಯುತ್ತವೆ. ಹಿಂದೂ ಮುಸಲ್ಮಾನ ಎನ್ನುವ ಭೇದವಿಲ್ಲದೆ ಭಜನೆಗಾರರ ಮೇಳಗಳು ಕಂಡು ಬರುತ್ತವೆ. ಹಿಂದೂಗಳು ಮುಸಲ್ಮಾನ ಧರ್ಮದ ವಿಚಾರಗಳನ್ನು ಮುಸಲ್ಮಾನರು ಹಿಂದೂ ಧರ್ಮದ ವಿಚಾರಗಳನ್ನು ಭಜನೆಯಲ್ಲಿ ಒಳಗೊಳಿಸುವುದು ಇಲ್ಲಿಯ ವಿಶೇಷ.
    ಭಜನೆಯ ವಿಂಗಡಣೆ ಸಂಪಾದಿಸಿ
    ಭಜನೆಯನ್ನು ವ್ಯಕ್ತಿಗತ ಮತ್ತು ಸಾಮೂಹಿಕ ಎಂದು ಎರಡು ಹಂತಗಳಲ್ಲಿ ವಿಭಾಗಿಸಬಹುದು.
    ವ್ಯಕ್ತಿಗತ ಭಜನೆ ಸಂಪಾದಿಸಿ
    ವ್ಯಕ್ತಿಗತ ಭಜನೆಯ ಸ್ಪಷ್ಟ ರೂಪಗಳನ್ನು ಏಕತಾರಿ ಪದಗಳನ್ನು ಕಾಣುತ್ತೇವೆ. ಏಕತಾರಿ ನುಡಿಸುತ್ತಾ ತಾನೊಬ್ಬನೆ ಭಜನೆ ಹಾಡುವುದು ಅಲ್ಲಿಯ ಕ್ರಮ,
    ಸಾಮೂಹಿಕ ಭಜನೆ ಸಂಪಾದಿಸಿ
    ಸಾಮೂಹಿಕ ಭಜನೆ ಮೇಳ ರೂಪದ್ದು. ಇಲ್ಲಿಯ ಸಂಖ್ಯೆಯನ್ನು ನಿರ್ಧಿಷ್ಟವಾಗಿ ಹೇಳದೆ ಒಂದಕ್ಕಿಂತ ಹೆಚ್ಚು ಎನ್ನುವುದೇ ಸೂಕ್ತ. ತಾಳ, ತಪ್ಪಡಿ, ಏಕತಾರಿ, ಚಾಜು, ಶ್ರುತಿ ಮೊದಲಾದ ವಾದ್ಯ ವಿಶೇಷಗಳು ಇಲ್ಲಿರುತ್ತವೆ. ಸಾಮೂಹಿಕ ಭಜನೆಯಲ್ಲಿ ಹಿಮ್ಮೇಳವಿರುತ್ತದೆ. ಮುಖ್ಯಗಾಯಕ ಭಜನೆಯನ್ನು ಹಾಡುತ್ತಾ ಹೋದಂತೆ ಉಳಿದವರು ಅದೇ ಧಾಟಿಯಲ್ಲಿ ಅದನ್ನು ಪುನರಾವರ್ತಿಸುತ್ತಾರೆ, ಕೆಲವೊಮ್ಮೆ ಪಲ್ಲವಿಯ ಭಾಗವನ್ನು ಪುನರಾವರ್ತಿಸಿದರೆ, ಇನ್ನು ಕೆಲವೊಮ್ಮೆ ಜತೆಯಲ್ಲೆ ಇಡಿ ಹಾಡನ್ನು ಪುನರಾವರ್ತಿಸುವುದು ಕಂಡು ಬರುತ್ತದೆ,
    ಭಜನೆಯ ಲಕ್ಷಣ ಸಂಪಾದಿಸಿ
    ನಿಧಾನಗತಿಯಲ್ಲಿ ಆರಂಭವಾಗಿ ಆ ಮೇಲೆ ತ್ವರಿತಗತಿಯಲ್ಲಿ ಮುಕ್ತಾಯವಾಗುವುದು ಭಜನೆಗಳ ಸಾಮಾನ್ಯ ಲಕ್ಷಣ. ಪ್ರತಿಯೊಂದು ಭಜನೆ ಆರಂಭವಾಗುವಾಗ ಮತ್ತು ಮುಗಿಯುವಾಗ ಮುಖ್ಯಗಾಯಕನು "ಹರ ಹರ ಮಹಾದೇವ" ಎನ್ನುತ್ತಾರೆ, ಆಗ ಎಲ್ಲರೂ ಅದನ್ನು ಪುನರಾವರ್ತಿಸುತ್ತಾರೆ, ಹಾಗೆಯೇ "ಶ್ರೀ ಮದ್ರಮಾರಣ ಗೋವಿಂದ" ಎಂದಾಗ "ಗೋವಿಂದ ಗೋವಿಂದ" ಎಂದು ಗುಂಪಿನಲ್ಲಿ ಗೋವಿಂದವಾಗುವುದು ಇದೆ. ಭಜನೆಯ ಕೊನೆಯ ಹಂತವೆಂದರೆ "ಮಂಗಳ ಪದ". ಆಗ ಹೇಳಿದ ಜಯಕಾರಗಳು ಬಹಳ ಹೊತ್ತಿನವರೆಗೆ ನಡೆಯುತ್ತವೆ, ಸ್ಥಳೀಯ ದೇವರುಗಳಿಗೂ ಆಗ ಜಯಕಾರಗಳಿರುತ್ತವೆ.
    ಭಜನೆಯ ಕಾಲ ಸಂಪಾದಿಸಿ
    ನಿತ್ಯದ ಭಜನೆಗಳು, ವಾರದ ಭಜನೆಗಳು, ವರ್ಷದ ಭಜನೆಗಳೆಂದು ಸ್ಥೂಲವಾಗಿ ಭಜನೆಯ ಕಾಲಗಳನ್ನು ವಿಭಾಗಿಸಬಹುದು, ಇದಲ್ಲದೇ ಸೋಮವಾರ, ಶನಿವಾರ ಮುಂತಾದ ಆಯಾ ದೇವರಿಗೆ ಸಲ್ಲುವ ವಾರಗಳಲ್ಲಿಯೂ ಭಜನೆ ನಡೆಯುವುದಿದೆ. ದೇವರ ಗುಡಿ, ಮನೆಗಳಲ್ಲಿ ಹಾಗೂ ಕೆಲವೊಮ್ಮೆ ಬೀದಿ ಬೀದಿಗಳಲ್ಲಿ ನಿರ್ಧಿಷ್ಟ ವಾರಗಳಂದು ಭಜನೆ ನಡೆಯುತ್ತವೆ. ಇಂತಹ ಸಂದರ್ಭದಲ್ಲಿ ದೇವರ ಭಾವಚಿತ್ರವನ್ನು ಅಲಂಕರಿಸಿ ಮನೆ ಮನೆಗೆ ಹೋಗುತ್ತಾರೆ, ಮನೆಯವರಿಂದ ಹಣ್ಣುಕಾಯಿ ದಕ್ಷಿಣೆ ಪೂಜೆಗಳಾದ ಮೇಲೆ ಗುಡಿಯಲ್ಲಿಯೂ ಭಜನೆ ಇರುತ್ತದೆ, ಇದಕ್ಕೆ 'ಊರಾಡುವುದು' ಎಂದೇ ಹೆಸರು. ಸಾಮಾನ್ಯವಾಗಿ ಭಜನೆ ಮೇಳದವರಿಗೆ ಆಹಾರ ನಿರ್ಬಂಧಗಳಿಲ್ಲ, ಆದರೂ ಕೆಲವೊಮ್ಮೆ ಭಜನೆಕಾರರು ಫಲಾಹಾರವಷ್ಟೆ ಮಾಡುವುದಿದೆ, ತಿಂಗಳು ಭಜನೆಯು ಸಾಮಾನ್ಯವಾಗಿ ಶ್ರಾವಣ ಮತ್ತು ಕಾರ್ತಿಕಮಾಸದಲ್ಲಿ ನಡೆಯುತ್ತದೆ, ಇಂತಹ ಸಂದರ್ಭಗಳಲ್ಲಿ ಹಗಲು-ರಾತ್ರಿ ನಿರಂತರ ಭಜನೆ ನಡೆಯುತ್ತದೆ, ಕೊನೆಯ ದಿನ ವಿಶೇಷ ಪೂಜೆ ಇರುತ್ತದೆ, ಇಂತಹ ಭಜನೆಗಳಲ್ಲಿ ಭಕ್ತಾದಿಗಳು ಕುಣಿಯುವುದೂ ಇದೆ, ಇದನ್ನು ಭಜನೆ ಕುಣಿತ ಎಂದೂ ಕರೆಯಬಹುದು,
    ಭಜನೆಯ ಕುಣಿತ ಸಂಪಾದಿಸಿ
    ಭಜನೆಯ ಕುಣಿತ ಸರಳವಾದದ್ದು, ಕುಣಿಯುವವರು ಕೈತಾಳಗಳನ್ನು ಹಿಡಿದುಕೊಂಡು ವೃತ್ತಾಕಾರವಾಗಿ ಸುತ್ತುತ್ತಾರೆ, ಮಧ್ಯ ಮಧ್ಯ ಭಜನೆಯ ತಾಳ ಲಯಕ್ಕನುಗುಣವಾಗಿ ಒಮ್ಮೆ ಎಡಗಾಲು ಮತ್ತೆ ಬಲಗಾಲನ್ನು ಎತ್ತುತ್ತಾ ಏಕಕಾಲದಲ್ಲಿ ತಾಳವನ್ನು ನುಡಿಸುತ್ತಾರೆ, ಇದು ಒಂದು ವಿಧ, ಇನ್ನೊಂದು ವಿಧದಲ್ಲಿ ಮೇಳದವರೆಲ್ಲರೂ ಮುಂದಕ್ಕೆ ಹಾರಿ ತಾಳ ಹಾಕಿ ಮತ್ತೆ ಹಿಂದಕ್ಕೆ ಹಾರಿ ಇನ್ನೊಮ್ಮೆ ತಾಳ ಹಾಕುತ್ತಾರೆ, ಹೀಗೆ ಹಿಂದಕ್ಕೆ ಹಾರುವಾಗ, ತಿರುಗಿ ಅಂದರೆ ಬೆನ್ನ ಹಿಂದಕ್ಕೆ ತಾಳ ಹಾಕುವುದು ವಾಡಿಕೆ, ಹೀಗೆ ಕೆಲವೊಂದು ಅಂಶಿಕ ಬದಲಾವಣೆಗಳಿದ್ದರೂ ಹೆಚ್ಚಾಗಿ ಈ ಕುಣಿತಗಳಲ್ಲಿ ಏಕತನತೆ ಇರುತ್ತದೆ, ಇಂತಹ ಭಜನೆಗಳಿಗೆ ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರಿರುತ್ತಾರೆ, ಹಾಗೆಯೇ ಬೆಳಗಿನವರೆಗೆ ಪ್ರತ್ಯಕ್ಷವಾಗಿ ಪಾಲ್ಗೊಳ್ಳುತ್ತಾರೆ. ಸಾಮಾನ್ಯವಾಗಿ ಭಜನೆಗಳಲ್ಲಿ ಸ್ತ್ರೀ ಪುರುಷರೆಂಬ ಭೇಧವಿಲ್ಲ, ಪರಸ್ಪರ ಕಲೆತು ಭಜನೆ ಮಾಡಲಾಗುತ್ತದೆ,
    9 min
  • ಜೀವನದಲ್ಲಿ ತಂದೆ ತಾಯಿಯನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಆದರೆ, ಒಂದು ಮಿತ್ರನನ್ನು[ಜೀವನ ಸಂಗಾತಿ]ನಾವು ಆಯ್ಕೆ ಮಾಡಬಹದ
    ನಾವು ಆಯ್ಕೆ ಮಾಡಬಹುದು. ಕಾಡುಪ್ರಾಣಿ ಹಾಗೂ ಮನುಷ್ಯನಲ್ಲಿ ವ್ಯತ್ಯಾಸ ಇದೆ.
    ಕಾಡುಪ್ರಾಣಿಯನ್ನು ಕಂಡ ಕೂಡಲೇ ನಮಗೆ ಅದರ ಸ್ವಭಾವ ಗೊತ್ತಾಗುತ್ತದೆ. ಮನುಷ್ಯನನ್ನು ಕಂಡ ಕೂಡಲೇ ಅವನ ಮುಖಛರ್ಯೆಯಿಂದ ಸ್ವಭಾವ ಗೊತ್ತಾಗುವುದಿಲ್ಲ. ನಾವು ಒಂದು ಜಿಂಕೆಯನ್ನು , ಮೊಲವನ್ನು ಲಾಲನೆ ಮಾಡಬಹುದು, ಆದರೆ ಅಕಸ್ಮಾತ್ ಒಂದು ಹುಲಿ, ಸಿಂಹ,ಚಿರತೆಯನ್ನು ಕಂಡ ಕೂಡಲೇ ಆಕರ್ಷಕವಾದರೂ ಅದನ್ನು ಲಾಲನೆ - ಮುದ್ದಾಡಲು ಹೋಗುವುದಿಲ್ಲ.... ಹಿಂಜರಿಯುತ್ತೇವೆ. ಕಾರಣ ಅವುಗಳು ಆಕೃಮಣಕಾರಿ, ಮಾಂಸಾಹಾರಿ, ನಮ್ಮನ್ನು ಕಚ್ಚಿ ತಿನ್ನಬಹುದು ಅಲ್ಲವೇ?
    ನಾವು ಕೆಲಸಮಾಡುವ ಸಂಸ್ಥೆ/ ಕಾರ್ಖಾನೆ/ ..... ಅಲ್ಲಿರುವ ಅಧ್ಯಕ್ಷ, ಕಾರ್ಯದರ್ಶಿ, ವ್ಯವಸ್ಥಾಪಕ, ನಿರ್ದೇಶಕ, ವಿಭಾಗ ಮುಖ್ಯಸ್ಥ.... ಮುಂತಾದವರು ತುಂಬಾ ಧನಾತ್ಮಕವಾಗಿ ನಮ್ಮ ಕೆಲಸದಲ್ಲಿ ನಮಗೆ ಪ್ರೋತ್ಸಾಹ ಕೊಡುತ್ತಿದ್ದಲ್ಲಿ , ಸಂಕಷ್ಟದಲ್ಲಿ ಹೆಗಲುಕೊಡುತ್ತಿದ್ದಲ್ಲಿ , ಸಂಸ್ಥೆಯ ಏಳಿಗೆಗೆ ನಮ್ಮ ಮಾರ್ಗದರ್ಶನವನ್ನು ಕನಿಷ್ಟ ಆಲಿಸುತ್ತಿದ್ದಲ್ಲಿ, ಆ ಸಂಸ್ಥೆ ತುಂಬಾ ವಿಶಾಲವಾಗಿ ವಿಶಿಷ್ಟವಾಗಿ(ಗೆಳೆತನ) ಬೆಳೆಯುತ್ತದೆ.
    ಆದರೆ ನಮ್ಮ ಕೆಲಸಗಳಿಗೆ ಪ್ರೋತ್ಸಾಹ ಕೊಡುವುದು ಬಿಡಿ , ನಮ್ಮನ್ನು ಪೂರ್ಣ ಅಲ್ಲಗೆಳೆಯುವಿಕೆ, ನಮ್ಮ ಪರಿಶ್ರಮಗಳನ್ನು ಕ್ಷುಲಕವಾಗಿಸುವಿಕೆ, ಆಪ್ತರಿಗೆ ಯಾವ ಸಮಯದಲ್ಲೂ ರಜೆ ಮಂಜೂರು, ನಮಗೆ ಅದಾವುದೂ ಅನ್ವಯಿಸದೆ ಇರುವುದು. ಏನೂ ಕೆಲಸಮಾಡದ ನೀಯತ್ತಿಲ್ಲದವನನ್ನು ನಮ್ಮ ಕಣ್ಣ ಮುಂದೆ ಪ್ರೋತ್ಸಾಹ, ಪುರಸ್ಕಾರ, ಕಳ್ಳನೇ ಯಜಮಾನ ಸುಳ್ಳನೇ ಮುಖಂಡ ... ಮುಂತಾದ ಋಣಾತ್ಮಕ ಚಟುವಟಿಕೆಗಳ ಸಂಕೀರ್ಣ/ವಾತಾವರಣದೊಳಗಿನ ಸಂಸ್ಥೆ ನಮ್ಮನ್ನು ಕಳೆ ಕುಂದಿಸುತ್ತದೆ. ಅಲ್ಲಿರಲು ಮನಸ್ಸು ಇಷ್ಟಪಡದಿರುತ್ತದೆ.ಅಲ್ಲೇ ಇದ್ದರೆ ನಮ್ಮತನ ಕಳೆದುಕೊಳ್ಳುತ್ತೇವೆ.
    ಈ ಸಂಸ್ಥೆಯಂತೆಯೇ, ನಮ್ಮ ಪ್ರತಿಭೆ, ಶೃಮ,ನೀಯತ್ತಿಗೆ ಸಂಪೂರ್ಣ ಧನಾತ್ಮಕ ಪ್ರೋತ್ಸಾಹ ಕೊಡುವ ಒಬ್ಬನ/ಳನ್ನು ಮಿತ್ರನನ್ನಾಗಿ ಮಾಡಬೇಕು. ಜೀವನದಲ್ಲಿ ನಾವು ಮುಂದಕ್ಕೆ ಹೋಗುವಾಗ, ವೇಗಪಕರ್ಷದಿಂದ ಹಿಂದಕ್ಕೆ ಎಳೆಯುವ ಮಿತ್ರನಾಗಿದ್ದರೆ, ನಮ್ಮ ಜೀವನವೇ ಹಾಳಾಗುತ್ತದೆ.
    ಮಹಾಭಾರತ ಕಥೆಯಲ್ಲಿ ಕರ್ಣ ಹಾಗೂ ಅರ್ಜುನನ ಮಧ್ಯೆ ಕುರುಕ್ಷೇತ್ರ ಯುದ್ದ. ಕರ್ಣನು ಅರ್ಜುನನಿಗಿಂತ ಪ್ರಯೋಗಾತ್ಮಕವಾಗಿ ಆಯೋಧನ ಕಲೆಯಲ್ಲಿ ಜಗಪ್ರಥಮ. ಕರ್ಣನು ಸೂರ್ಯನ ಮಗ ಹಾಗೂ ಅರ್ಜುನ ಇಂದ್ರನ ಮಗ. ಅಂದರೆ ಆಂತರಿಕವಾಗಿ ಸೂರ್ಯ ಹಾಗೂ ಇಂದ್ರನ ಮಧ್ಯೆ ಯುದ್ದ ನಡೆಯುತ್ತಿತ್ತು ಎನ್ನಬಹುದು.
    ನಿಮಗೆಲ್ಲಾ ಗೊತ್ತು ಕೊನೆಗೆ ಜಯಿಸಿದ್ದು ಅರ್ಜುನ!!!.
    ಕಾರಣ... ಅರ್ಜುನನ ಸಹಸಖ ಅಥವಾ ಸಾರಥಿ ಪ್ರೇರಣಾದರ್ಶಕ (ಧನಪ್ರಚೋದಕ -Motivator)) ಶ್ರೀಕೃಷ್ಣ. ಪ್ರತೀ ಹೆಜ್ಜೆಯಲ್ಲೂ ಅರ್ಜುನನಿಗೆ ಧನಾತ್ಮಕ ಮಾರ್ಗದರ್ಶಕನಾಗಿದ್ದ. ಆದರೆ......
    ಕರ್ಣನ ಸಾರಥಿ ಶಲ್ಯ, ಶಲ್ಯ ಅಂದರೆ ಸಂಶಯೋತ್ತಮ,ಗೊಂದಲಕಾರಕ, ಯುದ್ದಕ್ಕೆ ಹೊರಡುವಾಗ " .. ಈ ಯುದ್ದ ಗೆಲ್ಲುತ್ತೇವೋ ಗೊತ್ತಿಲ್ಲ ಆಯ್ತಾ!!!" ಎಂದು ನುಡಿಯುವುದು .
    ನಂತರ ಪ್ರತೀ ಸಮಯ.....
    " ಈ ಬಾಣ ಹೂಡಬಾರದಾಗಿತ್ತು...ಆ ಬಾಣ ಹೂಡು "
    ಹೂಡಿದ ಬಾಣ ಬಿಟ್ಟ ನಂತರ "..ಛೇ ನಾನು ತಪ್ಪಿ ಹೇಳಿದೆ ಆ ಬಾಣ ಬೇಡವಾಗಿತ್ತು"
    " ವೇಗ ಕಮ್ಮಿಯಾಯಿತು.... ಘಾಂಢೀವ ಸಡಿಲವಾಗಿದೆ/ ಬಿಗಿಯಾಗಿದೆ"
    ಈ ರೀತಿ ಜಯದ ಕಡೆಯ ದಿಕ್ಕನ್ನು ಏರು-ಪೇರು ಮಾಡುವವನಾಗಿದ್ದ.
    ತಮಿಳಿನ ತಿರು ಕುರಲ್ ನಲ್ಲಿ ಒಂದು ವಾಕ್ಯವಿದೆ..
    ಸತ್ಸಂಗೈಕ್ಕಾಳ್ ತುಣಯ್ಕುನ್ನದಿಲ್ಲೈ
    ದುಸ್ಸಂಗತೈಕ್ಕಾಳ್ ಒರು ಅಳಲೂಂ
    {{ಸತ್ಸಂಗ(ಒಳ್ಳೆ ಮಿತ್ರತ್ವ)ದಂತಹಾ ಆಸರೆ ಇನ್ನೊಂದಿಲ್ಲ, ದುಷ್ಟ ಸಂಘದಂತಹಾ ಒಂದು ದುಃಖ ಬೇರೊಂದಿಲ್ಲ}}
    ಅದರಂತೆಯೇ....
    ಈ ಲೋಕದ ಮಾನವ ತುಂಬಾ ಕೆಟ್ಟದನ್ನು ತನ್ನದಾಗಿಸಿದವನು. ಇಲ್ಲಿ ಮಧ್ಯಪಾನಿಗಳು,ಕೆಲ ಅಹಂಕಾರಿಗಳು, ಕೆಟ್ಟದಾಗಿ ವರ್ತಿಸುವವರು, ನೀಚರು..... ನನ್ನಂತಹಾ ಸ್ವಾರ್ಥಿಗಳು, ಇದ್ದಾರೆ, ಇಂತಹರಿಂದ......
    ▪️ಒಳ್ಳೆಯ ಚುರುಕು/ಕ್ರೀಯಶೀಲ/ಚೈತನ್ಯ( dynamic)
    ▪️ಧನಾತ್ಮಕ ಮನೋಭಾವನೆಯ( positive attitude),
    ▪️ಪ್ರೇರಕ(Motivator)
    -- ಮಿತ್ರರನ್ನು ಆಯ್ಕೆ ಮಾಡುವುದು ಒಬ್ಬನ/ಳ ಸಾಮರ್ಥ್ಯಾತ್ಮಕ ಕ್ಷಮತೆ.
    ಆ ಆಯ್ಕೆಯೇ ನಮ್ಮ ಜೀವನ ವಿಜಯದ ಅಡಿಪಾಯದ ಆಧಾರಸ್ತಂಭಗಳಲ್ಲೊಂದು. ಎನ್ನುತ್ತಾ...
    ನಿಮ್ಮವ ನಲ್ಲ
    *ರೂಪು*
    6 min

About Dr Balakrishna Maddodi

From the publisher's feed

Hi