Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • ದ್ವೇಷ ಮತ್ಸರ ಅಸೂಯೆ ಎಲ್ಲವನ್ನೂ ಬಿಟ್ಟು, ಎಲ್ಲರನ್ನೂ ಪ್ರೀತಿಸೋಣ, ಎಲ್ಲರಲ್ಲೂ ಒಂದಾಗಿ ಬದುಕೋಣ...
    "ನನಗನ್ನಿಸಿದ್ದು"
    ಸಾವು - ಕೇವಲ ಎರಡಕ್ಷರದ ಪದ. ಆದರೆ ಪದಗಳಲ್ಲಿ ವಿವರಿಸಲಾಗದಷ್ಟು ನೋವು ಕೊಡುವ ಕಟುಕ, ಬರಬೇಡ - ದಮ್ಮಯ್ಯವೆಂದು ಗೋಗರೆದರೂ ಬಿಡದೆ ಕಾಡುವ ನಿರ್ದಯಿ. ನಮ್ಮ ಹುಟ್ಟಿನೊಡನೆ ಹುಟ್ಟುವ ಸಾವು "ನಮ್ಮ ಬದುಕಿನುದ್ದಕ್ಕೂ ಕಾಡುವ ಹೆಡೆಯೆತ್ತಿ ನಿಂತ ಬೆನ್ನ ಹಿಂದಿನ ಹಾವಿನಂತೆ". ಬಡವ - ಶ್ರೀಮಂತ , ಮೇಲು - ಕೀಳು ಎಂಬ ಯಾವುದೇ ಬೇಧ - ಭಾವ ತೋರದೆ ಎಲ್ಲರ ಮನೆಬಾಗಿಲು ತಟ್ಟುವ ಕರೆಯದೆ ಬರುವ ಅತಿಥಿ.
    ನನಗನ್ನಿಸಿದ್ದು ಕೆಲವೊಮ್ಮೆ ನಮ್ಮ ಸಾವಿಗೆ ನಾವೇ ಆಹ್ವಾನಿಸುತ್ತೆವೆಂದು : ಬೀಡಿ ಸಿಗರೇಟು ಮದ್ಯಪಾನಗಳ ಪಟ್ಟಣಗಳ ಮೇಲೆಯೇ ಇದು ಆರೋಗ್ಯಕ್ಕೆ ಹಾನಿಕಾರಕವೆಂಬ ಮುದ್ರಣ ನೋಡಿಯೂ ಅದರ ಚಟಕ್ಕೆ ಬಿದ್ದವರು, ಅತಿಯಾದ ವೇಗದಲ್ಲಿ ವಾಹನ ಚಲಾಯಿಸುವವರು, ಅನಾರೋಗ್ಯಕರ ಜೀವನ ಶೈಲಿ ಅಳವಡಿಸಿಕೊಂಡವರು ಹೀಗೆ ಅನೇಕ ಕಾರಣಗಳಿಂದ ನಮ್ಮ ಸಾವಿಗೆ ನಾವೇ ಸ್ವತಃ ಆಮಂತ್ರಿಸುತ್ತಿದ್ದೇವೆ.
    ಇನ್ನಾದರೂ ಎಚ್ಚರಗೊಳ್ಳಬೇಕಿದೆ, ಬದಲಾಗಲು ನಮಗೆ ಇನ್ನೂ ಸಮಯವಿದೆ, ತಂದೆ - ತಾಯಿ ಹೆಂಡತಿ ಗಂಡ ಮಕ್ಕಳು ಒಡಹುಟ್ಟಿದವರು ಹೀಗೆ ನಮ್ಮನ್ನೇ ನಂಬಿರುವ ನಮ್ಮ ಕುಟುಂಬದವರ ಮುಖವನ್ನೊಮ್ಮೆ ನೆನೆಸಿಕೊಳ್ಳಬೇಕಿದೆ. ನಾವು ಸತ್ತ ದಿನ ನಮ್ಮ ಶವದ ಮುಂದೆ ನಾಲ್ಕು ಹನಿ ಕಣ್ಣೀರು ಸುರಿಸುವ ಜನ, ಶವ ಸಂಸ್ಕಾರ ಆದ ಕೂಡಲೇ ಸೂತಕದ ಮನೆಗೆ ಹೋಗಿ ಬಂದದ್ದು ಎಂದು ಮಿಂದು ಎಲ್ಲವನ್ನೂ ಮರೆತು ಅವರ ಪಾಡಿಗೆ ಅವರಿರುತ್ತಾರೆ, ಆದರೆ ವಾಸ್ತವದಲ್ಲಿ ನಮ್ಮನ್ನೇ ನಂಬಿರುವ, ನಾವೇ ಪ್ರಪಂಚ ಎಂದು ತಿಳಿದಿದ್ದ, ನಾವಿರದ ನಾಳೆಗಳನ್ನು ಊಹಿಸದ ನಮ್ಮ ಕುಟುಂಬದ ಎಣಿಕೆಗಳೆಲ್ಲ ತಲೆಕೆಳಗಾಗಿ ಸೂತಕದ ಛಾಯೆಯಿಂದ ಎಂದೂ ಅವರು ಹೊರ ಬರಲಾರದೆ ನರಲಾಡುತ್ತಾರೆ.
    ಇನ್ನು ಈಗಂತೂ ಎಲ್ಲರದೂ ಧಾವಂತದ ಬದುಕು . ನಮ್ಮ ಕುಟುಂಬದವರಿಗಾಗಿ, ಸ್ನೇಹಿತರಿಗಾಗಿ, ಸಂಬಂಧಿಕರಿಗಾಗಿ ದಿನದ ಕೆಲವೇ ಕೆಲವು ಕ್ಷಣಗಳನ್ನೂ ನೀಡಲು ನಮ್ಮ ಬಳಿ ಸಮಯವಿಲ್ಲ, ಸಿಗುವ ಅಲ್ಪ ಸ್ವಲ್ಪ ಸಮಯವನ್ನು ಬೇರೆಯವರ ತಪ್ಪುಗಳನ್ನು ಮೆಲಕು ಹಾಕಲು, ಹಿಯಾಳಿಸಲು, ದ್ವೇಷಿಸುವುದರಲ್ಲೇ ಕಳೆಯುತ್ತಿದ್ದೇವೆ. ಆದರೆ ಇಂದು ನಾವು ಯೋಚಿಸಬೇಕಿರುವುದೆಂದರೆ ಈ ಕ್ಷಣ ಇದ್ದವರು ಮರುಕ್ಷಣ ಇರುವರೆಂಬ ಯಾವುದೇ ಭರವಸೆಯಿಲ್ಲ, ಅವರನ್ನು ಕಳೆದುಕೊಂಡ ಮೇಲೆ ಅವರಿಗೆ ಸಮಯ ನೀಡಲಿಲ್ಲ, ಅವರನ್ನು ಕಾಳಜಿ ಮಾಡಬೇಕಿತ್ತು, ಅವರ ಮನಸ್ಸಿಗೆ ನೋವು ಮಾಡಿದೆ, ಅವರ ಬಗ್ಗೆ ತಪ್ಪಾಗಿ ಮಾತಾಡಿದೆ ಹೀಗೆ ಸಾವಿರ-ಸಾವಿರ ಆಲೋಚನೆಗಳು, ಪಾಪಪ್ರಜ್ಞೆಯು ನಮ್ಮನ್ನು ಕಾಡಿದರೂ , ನಾವು ಕ್ಷಮೆ ಕೇಳ ಬಯಸಿದರೂ ಮರಳಿ ಬಾರದೂರಿಗೆ ಅವರು ಪ್ರಯಾಣಿಸಿರುತ್ತಾರೆ.
    ಸಾವು ಬಂದು ಬಾಗಿಲು ಬಡಿಯುವ ಮುನ್ನ ನಮ್ಮನ್ನು ನಾವು ಕಾಳಜಿ ಮಾಡಿಕೊಳ್ಳೋಣ, ನಮ್ಮವರಿಗಾಗಿ ಸಮಯ ಮೀಸಲಿಡೋಣ, ಇರುವಷ್ಟು ದಿನ ದ್ವೇಷ ಮತ್ಸರ ಅಸೂಯೆ ಎಲ್ಲವನ್ನೂ ಬಿಟ್ಟು, ಎಲ್ಲರನ್ನೂ ಪ್ರೀತಿಸೋಣ, ಎಲ್ಲರಲ್ಲೂ ಒಂದಾಗಿ ಬದುಕೋಣ, ಎಲ್ಲರನ್ನು ಬದುಕಲು ಬಿಡೋಣ.
    ಅನಿತ ಸುಭಾಷ್ ಬಳ್ಕೂರು
    4 min
  • *ದೇವರನ್ನು ಅರಿಯಲು ಪ್ರಯತ್ನಿಸಿ.....ದೇವರನ್ನು ಕಾಣಲು ಪ್ರಯತ್ನಿಸಿ....*
    #ದೈವಿಕ_ರಹಸ್ಯ....
    ಹಲ್ಲಿಯ ಮೊಟ್ಟೆಗಳನ್ನು ಹೆಚ್ಚಿನವರು ನೋಡಿರಬಹುದಲ್ವೇ ?
    ಹಲ್ಲಿಯು ಮೊಟ್ಟೆ ಇಟ್ಟ ದಿನ ಆ ಮೊಟ್ಟೆಯನ್ನು ಒಡೆದರೆ ಸ್ವಲ್ಪ ನೀರಿನಂತಹ ದ್ರಾವಕ ಮಾತ್ರ ಇರುವುದು ನಮಗೆ ಕಾಣಬಹುದು... ಭರ್ತಿ ಹನ್ನೊಂದು ದಿನದಲ್ಲಿ ಆ ದ್ರಾವಕವು ಹಲ್ಲಿಯಾಗಿ ಬದಲಾಗುತ್ತದೆ...!
    ಎಷ್ಟೊಂದು ಬಯೋಕೆಮಿಕಲ್ ಬದಲಾವಣೆ ಆ ಮೊಟ್ಟೆಯೊಳಗೆ ನಡೆಯುವುದು...!!
    ಒಂದು ಕೋಳಿ ಮೊಟ್ಟೆ ಇಟ್ಟ ನಂತರ ಇಪ್ಪತ್ತೊಂದನೆಯ ದಿನ ಕೊಕ್ಕು, ರೆಕ್ಕೆ, ಪುಕ್ಕ, ಮಾಂಸ, ಉಗುರುಗಳು ಎಲ್ಲವೂ ಇರುವ ಕೋಳಿ ಮರಿಯು ಹೊರಗೆ ಬರುತ್ತದೆ...
    ಸ್ವಲ್ಪ ಯೋಚಿಸಿ ನೋಡಿ ಸ್ನೇಹಿತರೆ - ಒಂದು ಒಡೆದು ಮರಿ ಹೊರಬರಲು ತಯಾರಾದ ಕೋಳಿ ಮೊಟ್ಟೆ ಮತ್ತು ಒಂದು ಬಾತುಕೋಳಿಯ ಮೊಟ್ಟೆಯನ್ನು ಒಂದು ಕೆರೆಯ ದಡದಲ್ಲಿ ನೀರಿನ ಹತ್ತಿರ ಇಡಿ. ನಂತರ ದೂರದಿಂದ ಗಮನಿಸುತ್ತಾ ಇರಿ.
    ಎರಡೂ ಮೊಟ್ಟೆಗಳಿಂದ ಮರಿಗಳು ಹೊರಗೆ ಬರುವುದನ್ನು ಕಾಣುವಿರಿ...
    ಕೋಳಿ ಮರಿಯು ನೀರನ್ನು ನೋಡಿದ ತಕ್ಷಣ ಭಯದಿಂದ ಹಿಂದೆ ಸರಿಯುತ್ತದೆ...
    ಆದರೆ ಬಾತುಕೋಳಿಯ ಮರಿಯು ನೀರಿನಲ್ಲಿ ಇಳಿದು ಈಜಾಡುತ್ತಾ ಆಟವಾಡುವುದನ್ನು ಕಾಣುತ್ತೀರಿ....
    ಎರಡೂ ಮರಿಗಳು ಮೊಟ್ಟೆಯ ಒಳಗಿಂದಲೇ ಬಂದಿರೋದು ತಾನೇ?
    ಬಾತುಕೋಳಿಯ ಮರಿಗೆ ಈಜಾಡಲು ಕಲಿಸಿದ್ದು ಯಾರು? ಕೋಳಿ ಮರಿಗೆ ಭಯ ಹುಟ್ಟಿಸಿದವರು ಯಾರು?
    ಆ ಮರಿಗಳ ಮೆದುಳಿನಲ್ಲಿ ಬರೆದಿಟ್ಟಿದೆ... ಆ ಜ್ಞಾನವನ್ನೇ ದೈವಿಕ ರಹಸ್ಯ ಅಂತ ಹೇಳಲ್ಪಡುವುದು...
    ಅದರ ಒಂದು ಭಾಗವು ಆತ್ಮಚೈತನ್ಯವಾಗಿ ನಮ್ಮೆಲ್ಲರಲ್ಲಿಯೂ ಇದೆ...!! ಅದರಿಂದಲೇ ನಮ್ಮ ಹೃದಯ ಪ್ರವರ್ತಿಸುವುದು....
    ಕೆನಡಾದಲ್ಲಿ ಆರ್ಕಟಿಕ್ ಸಮುದ್ರದ ಹತ್ತಿರ ಒಂದು ಸ್ಥಳವಿದೆ. ಅಲ್ಲಿ ಸಾಲ್ಮಣ್ ಎಂಬ ಜಾತಿಯ ಮೀನುಗಳು ಬಂದು ಮೊಟ್ಟೆಯಿಡುತ್ತವೆ....
    ಆ ಮೊಟ್ಟೆಗಳು ಒಡೆದು ಹೊರಬಂದ ಮರಿ ಸಾಲ್ಮಣ್ ಮೀನುಗಳು ಕ್ರೀಕ್ ಆರ್ಕಟಿಕ್ ಸಮುದ್ರದಿಂದ ಕೆಳಗಡೆ ಬಂದು ಫೆಸಿಫಿಕ್ ಸಮುದ್ರದಿಂದ ಹಾದು , ಸೌತ್ ಅಮೇರಿಕಾದ ಕೆಳಭಾಗದಿಂದ ಸೌತ್ ಆಫ್ರಿಕಾವನ್ನು ದಾಟಿ , ಅಟ್ಲಾಂಟಿಕ್ ಸಮುದ್ರದ ವರೆಗೆ ಬಂದು ಪುನಃ ಸೌತ್ ಆಫ್ರಿಕಾ ,ಸೌತ್ ಅಮೇರಿಕಾವನ್ನು ದಾಟಿ , ಫೆಸಿಫಿಕ್ ಸಮುದ್ರದಿಂದ ಹಾದು ಪುನಃ ಆರ್ಕಟಿಕ್ ಸಮುದ್ರದಲ್ಲಿ ಬಂದು ಸೇರುತ್ತವೆ.... !!
    ಈ ದೀರ್ಘಕಾಲ ಪ್ರಯಾಣಕ್ಕೆ ತಗಲುವ ಸಮಯ ಮೂರು ವರ್ಷಗಳು.....!!
    ಅಷ್ಟರಲ್ಲಿ ಆ ಚಿಕ್ಕ ಸಾಲ್ಮಣ್ ಮೀನಿನ ಮರಿಗಳು ದೊಡ್ಡ ಮೀನುಗಳಾಗಿ ಬೆಳೆದಿರುತ್ತದೆ ಮತ್ತು ಅಲ್ಲಿ ಅದು ಮೊಟ್ಟೆ ಇಡುತ್ತವೆ...
    ಹೀಗೆ ಮೊಟ್ಟೆಗಳನ್ನಿಟ್ಟ ಮೀನುಗಳು ತಲೆಯನ್ನು ನೆಲಕ್ಕೆ ಹೊಡೆದು ಸತ್ತು ಹೋಗುತ್ತವೆ....!!
    ಸುಮಾರು 32 ಲಕ್ಷ ಟಣ್ ಸಾಲ್ಮಣ್ ಮೀನುಗಳು ಒಂದು ಸೀಸನ್ ನಲ್ಲಿ ಸಾಯುತ್ತವೆ....!!
    ಆ ಸಮಯದಲ್ಲಿ ಈ ಸಾಲ್ಮಣ್ ಮೀನುಗಳನ್ನು ತಿನ್ನಲು ಅಲ್ಲಿ ಕರಡಿಗಳು ಬಂದು ಸೇರುತ್ತವೆ....
    ಈ ಸಾಲ್ಮಣ್ ಮೀನುಗಳಿಗೆ ಇಷ್ಟು ದೂರ ಹೋಗಿ ಪುನಃ ಅಲ್ಲಿಗೇ ಮರಳಿ ಬಂದು ಮೊಟ್ಟೆಗಳನ್ನಿಟ್ಟು ತಲೆ ಹೊಡೆದು ಸಾಯಲು ಹೇಳಿದವರು ಯಾರು?
    ನಂಬಿದ್ರೆ ನಂಬಿ ಸ್ನೇಹಿತರೆ... ಸಕಲ ಜೀವಜಾಲಗಳ ಚಲನವಲನಗಳನ್ನು ನಿಯಂತ್ರಿಸುವ ಶಕ್ತಿಯೊಂದು ಇದೆ....
    ಕಣ್ಣಗಳಿಗೆ ನೋಡುವ ಶಕ್ತಿ...
    ಕಿವಿಗಳಿಗೆ ಕೇಳುವ ಶಕ್ತಿ....
    ನಾಲಿಗೆಗೆ ರುಚಿ ನೋಡುವ ಮತ್ತು ಮಾತನಾಡುವ ಶಕ್ತಿ.... ಹೀಗೇ.... ಹೀಗೇ ಎಲ್ಲದಕ್ಕೂ ಒಂದು ಶಕ್ತಿ....
    ಆ ಚೈತನ್ಯವೇ ದೈವಿಕ ಶಕ್ತಿ.....
    ಆ ದೇವರ ಸನ್ನಿಧಿಯಲ್ಲಿ
    ವರ್ಗವಿಲ್ಲ....
    ವರ್ಣವಿಲ್ಲ....
    ಜಾತಿಮತಭೇಧವಿಲ್ಲದ....
    ಶ್ರೀಮಂತ ಬಡವ ಎಂಬ ವ್ಯತ್ಯಾಸವಿಲ್ಲ....
    ಎಲ್ಲರೂ ಸಮಾನರು....!!
    ಓ ಮನುಜನೇ..
    ದೇವರು ನಮಗೆ ನಿರ್ಧರಿಸಿದ ಕಾಲದವರೆಗೂ ಸಾಮರಸ್ಯದಿಂದ ಮತ್ತು ಪ್ರೀತಿ ವಿಶ್ವಾಸದಿಂದ ಬದುಕಿ ಬಾಳಿರಿ....
    *ದೇವರನ್ನು ಅರಿಯಲು ಪ್ರಯತ್ನಿಸಿ.....ದೇವರನ್ನು ಕಾಣಲು ಪ್ರಯತ್ನಿಸಿ....*
    *ಕೃಷ್ಣಂ ವಂದೇ ಜಗಧ್ಗುರುಂ*🚩🙏🇮🇳
    6 min
  • *ಮನಸ್ಸಿನ ಏಕಾಗ್ರತೆಗಾಗಿ ಹೀಗೆ ಮಾಡಿ!*
    ಯಾವುದೇ ಹೊರಗಿನ ವಸ್ತು ಅಥವಾ ಶರೀರದ ಅಂಗ ಅಥವಾ ಕ್ರಿಯೆಯಲ್ಲಿ ಮನಸ್ಸನ್ನು ಏಕಾಗ್ರಗೊಳಿಸುವುದು ಎಂದರೆ ಧ್ಯಾನ. ಇದರಲ್ಲಿ, ಶರೀರದಲ್ಲಿ ನಡೆಯುವ ಬೇರೆ ಬೇರೆ ಸಂವೇದನೆಗಳಿಗೆ ಮತ್ತು ಮನಸ್ಸಿನಲ್ಲಿ ಉಕ್ಕುವ ಅನೇಕಾನೇಕ ವಿಚಾರಗಳ ಕಡೆಗೆ ಸಾಕ್ಷೀಭಾವದಿಂದ (ಅಂದರೆ ತಟಸ್ಥ ಭಾವದಿಂದ) ಪರಿಶೀಲಿಸಬೇಕು. ಧ್ಯಾನ ಧರಿಸುವಲ್ಲಿ ಪ್ರಗತಿ ಹೊಂದಿರುವವರು ತನ್ನನ್ನು ಕೂಡ ಮರೆತು ವಿಚಾರಶೂನ್ಯ ಅವಸ್ಥೆಗೆ ಹೋಗಿ ಆತ್ಮಾನಂದವನ್ನು ಅನುಭವಿಸುತ್ತಾರೆ. ಬುದ್ಧಿ ಮತ್ತು ಮನಸ್ಸಿನ ಏಕಾಗ್ರತೆಯನ್ನು ಸಾಧಿಸಲು ಗಾಯತ್ರೀ ಮಂತ್ರ, ತ್ರಿಬಂಧ ಪ್ರಾಣಾಯಾಮ ಮತ್ತು ಧ್ಯಾನ ಧಾರಣೆ ಇವುಗಳು ಉಪಯುಕ್ತ ಮಾರ್ಗಗಳು.
    ೨. ನಾಮಜಪ ಮತ್ತು ಪ್ರಾರ್ಥನೆ
    ಎಲ್ಲರಿಗೂ ಎಲ್ಲ ಸಮಯ ಧ್ಯಾನ ಧಾರಣೆ ಸಾಧ್ಯವಾಗುತ್ತದೆ ಅಥವಾ ಸಮಯವಿರುತ್ತದೆ ಎಂದಿರುವುದಿಲ್ಲ. ಆದುದರಿಂದ ಏಕಾಗ್ರತೆಯನ್ನು ಸಾಧಿಸಲು ನಾಮಜಪ ಮತ್ತು ಪ್ರಾರ್ಥನೆಯನ್ನು ಮಾಡುವುದು ಒಳ್ಳೆಯ ಉಪಾಯವಾಗುತ್ತದೆ.
    ೨ ಅ. ಯಾವ ದೇವರ ನಾಮವನ್ನು ಜಪಿಸಬೇಕು?
    ನಿಮ್ಮ ಕುಲದೇವರ ನಾಮವನ್ನು ಜಪಿಸಬೇಕು. ಪ್ರತಿದಿನ ಕನಿಷ್ಠಪಕ್ಷ ೩೦ ನಿಮಿಷವಾದರೂ ಕುಲದೇವರ ನಾಮವನ್ನು ಜಪಿಸಬೇಕು. ಅಂತಯೇ ಪಿತೃಗಳ (ಗತಿಸಿದ ಪೂರ್ವಜರ) ತೊಂದರೆಯಿಂದ ರಕ್ಷಣೆಯನ್ನು ಪಡೆಯಲು 'ಶ್ರೀ ಗುರುದೇವ ದತ್ತ |' ನಾಮಜಪವನ್ನು ಕನಿಷ್ಠಪಕ್ಷ ೧ ಗಂಟೆಯಾದರೂ ಜಪಿಸಬೇಕು.
    ೨ ಆ. ಪ್ರಾರ್ಥನೆಯನ್ನು ಹೇಗೆ ಮಾಡಬೇಕು?
    ೧. 'ಹೇ ಕುಲದೆವತೆಯೇ, ನಿನ್ನ ಕೃಪಾದೃಷ್ಟಿಯು ಸದಾ ನನ್ನ ಮೇಲಿರಲಿ.'
    ೨. 'ಹೇ ಬುದ್ಧಿದಾತಾ ಶ್ರೀ ಗಣಪತಿಯೇ, ನನ್ನಿಂದ ಒಳ್ಳೆಯ ರೀತಿಯಲ್ಲಿ ಅಧ್ಯಯನವಾಗಲು ನನಗೆ ಶಕ್ತಿ ಮತ್ತು ಸದ್ಬುದ್ಧಿಯನ್ನು ನೀಡು.'
    4 min
  • ಶುಕ್ರವಾರ ಇಂಥ ಕೆಲಸ ಮಾಡಲೇಬೇಡಿ, ಮಾಡಿದ್ರೆ ಧನ ಹಾನಿ..!
    ಶುಕ್ರವಾರ ಲಕ್ಷ್ಮೀದೇವಿಯ ವಾರ. ಭಾಗ್ಯದ ಲಕ್ಷ್ಮಿ ಇರುವ ವಾರ, ಹೀಗೆ ಲಕ್ಷ್ಮೀ ಕೃಪಾಕಟಾಕ್ಷ ನಮ್ಮ ಮೇಲಿರಲು ಅನೇಕ ಆರಾಧನೆ, ದೇವರ ಅನುಷ್ಠಾನಗಳು, ಪೂಜೆ ಪುನಸ್ಕಾರಗಳನ್ನು ಪಾಲಿಸುತ್ತಾ ಬರುತ್ತಿರುತ್ತೇವೆ. ಆದರೆ, ಶುಕ್ರವಾರದಂದು ಕೆಲವು ಆಚರಣೆಯನ್ನು ನಾವು ಮಾಡಲೇಬಾರದು. ಹೀಗೆ ಮಾಡಿದರೆ ಲಕ್ಷ್ಮೀ ದೇವಿಯ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. ಹಾಗಾದರೆ, ಶುಕ್ರವಾರದಂದು ಮಾಡಬಾರದ ಕೆಲಸಗಳು ಏನು ಎಂಬ ಬಗ್ಗೆ ನೋಡೋಣ ಬನ್ನಿ…
    
    Get Notification AlertsAllow
    ಹಿಂದೂ ಧರ್ಮದಲ್ಲಿ ತಿಂಗಳಲ್ಲಿ ಹಲವು ವಿಶೇಷ ದಿನಗಳು ಇದ್ದೇ ಇರುತ್ತವೆ. ಶ್ರೀ ಲಕ್ಷ್ಮೀ ದೇವಿಯನ್ನು ಪ್ರಸನ್ನಗೊಳಿಸಲು ಶುಕ್ರವಾರವು ಅತ್ಯಂತ ಪ್ರಶಸ್ತವಾದ ದಿನವಾಗಿದೆ ಎಂದು ಹೇಳಲಾಗುತ್ತದೆ. ಶುಕ್ರವಾರ ಸಂಧ್ಯಾ ಕಾಲದಲ್ಲಿ ಲಕ್ಷ್ಮೀ ದೇವಿಯನ್ನು ಆರಾಧಿಸಿದಲ್ಲಿ ಮನೆಯಲ್ಲಿ ಸುಖ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಶುಕ್ರವಾರ ಮಾಡುವ ಕೆಲಸಗಳ ಬಗ್ಗೆ ಜಾಗ್ರತೆ ವಹಿಸಬೇಕಾಗುತ್ತದೆ. ಇಲ್ಲವಾದಲ್ಲಿ ಲಕ್ಷ್ಮೀ ದೇವಿಯ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. 
    ಲಕ್ಷ್ಮೀದೇವಿಯ ಕೃಪೆ ಯಾರಿಗೆ ಬೇಡ ಹೇಳಿ…? ಎಲ್ಲರಿಗೂ ಬೇಕು. ಧನ-ಧಾನ್ಯಗಳ ಅಧಿದೇವತೆ ಲಕ್ಷ್ಮೀಯೇ ಆಗಿರುವುದರಿಂದ ಸಮಸ್ತ ಜಗತ್ತಿಗೆ ಯಶಸ್ಸು, ವೈಭವ ಮತ್ತು ಕೀರ್ತಿಯನ್ನು ಪಾಲಿಸುವ ದೇವತೆಯಾಗಿದ್ದಾಳೆ. ಲಕ್ಷ್ಮೀ ಕೃಪೆಯುಳ್ಳವರಿಗೆ ಯಾವುದೇ ಆತಂಕವಿರುವುದಿಲ್ಲ.  ಅಂಥ ಮನೆಯಲ್ಲಿ ಧನ-ಧಾನ್ಯ ಮತ್ತು ಸಮೃದ್ಧಿಯು ಅಪಾರವಾಗಿರುತ್ತದೆ.
    ಹೌದು. ಶನಿವಾರ, ಮಂಗಳವಾರ ಹೀಗೆ ವಾರದ ಕೆಲವು ದಿನ ಕೆಲವಷ್ಟು ಕಾರ್ಯಗಳ ಮಾಡುವುದು ನಿಷಿದ್ಧವೆಂದು ಶಾಸ್ತ್ರ ಹೇಳುತ್ತದೆ. ವಾರದ ಆ ಕೆಲ ದಿನಗಳಲ್ಲಿ ಶುಕ್ರವಾರವೂ ಒಂದು. ಶುಕ್ರವಾರ ಕೆಲವು ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ದಾರಿದ್ರ್ಯ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಯಾವ್ಯಾವ ಕೆಲಸಗಳನ್ನು ಮಾಡಬಾರದು ಎಂಬುದನ್ನು ತಿಳಿಯೋಣ.
    ಸಾಲ ಕೊಡುವುದು ಮತ್ತು ಪಡೆಯುವುದು
    ಶುಕ್ರವಾರ ಸಾಲವನ್ನು ಕೊಡಬಾರದು ಮತ್ತು ತೆಗೆದುಕೊಳ್ಳಲೂಬಾರದು ಎಂದು ಶಾಸ್ತ್ರ ಹೇಳುತ್ತದೆ. ಶುಕ್ರವಾರವು ಲಕ್ಷ್ಮೀ ದೇವಿಯ ದಿನವಾಗಿದ್ದು,  ಆ ದಿನ ಹಣವನ್ನು ಕೊಟ್ಟು- ತೆಗೆದುಕೊಳ್ಳುವುದು ಉತ್ತಮವಲ್ಲ. ಶುಕ್ರವಾರ ಹಣಕಾಸಿನ ವ್ಯವಹಾರ ಅಂದರೆ ಆ ಸಾಲವನ್ನು ಕೊಡುವುದು ಅಥವಾ ಸಾಲವನ್ನು ತೆಗೆದುಕೊಳ್ಳುವುದು ಮಾಡಿದರೆ ಲಕ್ಷ್ಮೀದೇವಿಯ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ. ಹಾಗಾಗಿ ಆ ದಿನ ಇಂಥ ಕೆಲಸಗಳನ್ನು ಮಾಡದಿರುವುದು ಉತ್ತಮ.
    7 min
  • ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ.
    ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪದವಿ ಆಸೆ ಪೂರೈಸುವ ಆಶಯದಿಂದ ರೂಪು ತಳೆದ ಸಂಸ್ಥೆ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ. ಅಶಯವನ್ನು ಹಸನಾಗಿ ಹಬ್ಬಿಸಿಕೊಂಡು ಬಂದು ಯಶಸ್ವಿಗೊಳಿಸುತ್ತಿರುವ ಕಾರಣಕ್ಕೆ ಪ್ರಸ್ತುತ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಪದವಿ ಕಾಲೇಜುಗಳಲ್ಲಿ ವಿಶೇಷ ಸಾಲಿನಲ್ಲಿ ಗುರುತಿಸಿಕೊಂಡಿದೆ.‌ 'ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾಗಬೇಕು' ಎಂಬುದು ಕಾಲೇಜಿನ ಅಧ್ಯಕ್ಷರು ಮತ್ತು ಬೈಂದೂರು ಶಾಸಕರಾದ ಶ್ರೀ.ಬಿ.ಎಂ. ಸುಕುಮಾರ ಶೆಟ್ಟಿಯವರ ಧ್ಯೇಯ. ಅಧ್ಯಕ್ಷರ ಧ್ಯೇಯ ವಾಕ್ಯವನ್ನು ಸಾರ್ಥಕಗೊಳಿಸುವ ಪಯಣದೊಂದಿಗೆ ಸಂಸ್ಥೆಯು 2021-22ರ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಆರಂಭಗೊಳಿಸಿದೆ.‌
    130 ವಿದ್ಯಾರ್ಥಿಗಳೊಂದಿಗೆ ಹನ್ನೊಂದು ವರ್ಷಗಳ ಹಿಂದೆ ಆರಂಭಗೊಂಡ ಸಂಸ್ಥೆಯಲ್ಲಿ ಪ್ರಸ್ತುತ 1200 ಕಲಿಕಾರ್ಥಿಗಳಿದ್ದಾರೆ ಎಂಬುದು ಸಂಸ್ಥೆಯ ಸಾಧನೆಯ ಹಾದಿಯ ಹೆಗ್ಗುರುತು.‌ ಹೀಗೆ ಆರಂಭಗೊಂಡ ಕಿರು ಅವಧಿಯಲ್ಲಿ ಶೈಕ್ಷಣಿಕವಾಗಿ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಕ್ರೀಡಾರಂಗದಲ್ಲಿ ಹಾಗೂ ಇನ್ನಿತರ ವಿಸ್ತರಣಾ ಚಟುವಟಿಕೆಗಳಲ್ಲಿ ಕಾಲೇಜು ಗಣನೀಯ ಸಾಧನೆಗೈದಿದೆ.
    ಸಂಸ್ಥೆಯ ಸಾಧನೆಗಳು :
    ⏩ಕಾಲೇಜಿನ ವಾರ್ಷಿಕ ಸಂಚಿಕೆ 'ಶಿಖರ' ಮಂಗಳೂರು ವಿ.ವಿ ಮಟ್ಟದಲ್ಲಿ ಸತತ ನಾಲ್ಕು ವರ್ಷ ಪ್ರಥಮ ಸ್ಥಾನ.
    ⏩ಮಂಗಳೂರು ವಿ.ವಿ ಕ್ರೀಡಾ ರ‌್ಯಾಂಕಿಂಗ್‌ನಲ್ಲಿ ಉಡುಪಿ ವಲಯ ಕಾಲೇಜುಗಳಲ್ಲಿ ಪ್ರಥಮ, ಸಮಗ್ರ 9ನೇ ರ‌್ಯಾಂಕ್‌.
    ⏩ಗ್ರಾಮೀಣ ಭಾಗದಿಂದ ಬಂದ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೂ ಪ್ರವೇಶಾವಕಾಶ ಮತ್ತೆ ಅವರುಗಳಿಗೇ ಬಿ.ಬಿ.ಎ ನಲ್ಲಿ ಮೂರನೇ ರ‌್ಯಾಂಕ್, ಬಿ.ಕಾಂ.ನಲ್ಲಿ 8ನೇ ರ‌್ಯಾಂಕ್, ಬಿ‌.ಕಾಂ ಅಕೌಂಟೆನ್ಸಿಯಲ್ಲಿ ಚಿನ್ನದ ಪದಕಗಳು.
    ⏩ಸಾಂಸ್ಕೃತಿಕ - ಮಂಗಳೂರು ವಿ.ವಿ ಅಂತರ್ ಕಾಲೇಜು ಮಟ್ಟದಲ್ಲಿ ನಿರಂತರವಾಗಿ ಉತ್ಕೃಷ್ಟ ಸಾಧನೆ.
    ⏩ಕ್ಯಾಂಪಸ್ ಆಯ್ಕೆ - ವಿದ್ಯಾರ್ಥಿಗಳು ವಿವಿಧ ಪ್ರತಿಷ್ಠಿತ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.
    ⏩ಸತತ ಹತ್ತು ವರ್ಷಗಳಿಂದ ಕಾಲೇಜಿನ ಆಶ್ರಯದಲ್ಲಿ ಮಂಗಳೂರು ವಿ.ವಿ ಅಂತರ್ ಕಾಲೇಜು ಕ್ರೀಡಾ ಸ್ಪರ್ಧೆಗಳ ಆಯೋಜನೆ.
    ⏩ಕಾಲೇಜಿನಲ್ಲಿ ವಿದ್ಯಾರ್ಥಿಗಳ ಬರವಣಿಗೆಯ ಆಸಕ್ತಿಗೆ ಪ್ರೋತ್ಸಾಹ ನೀಡುವ ವಾಲ್ ಮ್ಯಾಗಜಿನ್ (ಭಿತ್ತಿ ಪತ್ರಿಕೆ) 'ಧ್ವನಿ' ,ವಾರ್ಷಿಕ ಸಂಚಿಕೆ 'ಶಿಖರ' ಹಾಗೂ ವಿಭಾಗದ ಪತ್ರಿಕೆಗಳಿವೆ .ಕ್ಯಾಂಪಸ್ ವೈಸ್ - ದ್ವೈವಾರ್ಷಿಕ ನ್ಯೂಸ್ ಬುಲೆಟಿನ್‌.
    ⏩ಉದಯ ಗಾಂವ್ಕರ್ ಅವರು ರಚಿಸಿ, ವಾಸುದೇವ ಗಂಗೇರ ನಿರ್ದೇಶಿಸಿದ್ದ "ಮಹಾತ್ಮ"ರಂಗ ಪ್ರಸ್ತುತಿ ಏಳು ಪ್ರಯೋಗಗಳನ್ನು ಕಾಣುವುದರ ಜೊತೆಗೆ ವಿ.ವಿ ಮಟ್ಟದ ಸ್ಪರ್ಧೆಗಳಲ್ಲಿ ಶ್ರೇಷ್ಠ ರಂಗ ತಜ್ಞರ ಗಮನ ಸೆಳೆದಿದೆ
    ಸಂಸ್ಥೆಯ ಕೋರ್ಸುಗಳು :
    ಬಿ.ಕಾಂನಲ್ಲಿ ಮೂರು ವಿಭಾಗಗಳು, ಬಿ.ಕಾಂನೊಂದಿಗೆ CA/CS/CMA.
    ಬಿ.ಬಿ.ಎ, ಮತ್ತು ಬಿ.ಸಿ.ಎ ಹಾಗು ಬಿ.ಎಸ್ಸಿಯಲ್ಲಿ ಒಂದು ವಿಭಾಗವಿದೆ.
    ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ (lBPS) ತರಬೇತಿ.
    ಸರ್ಟಿಫಿಕೇಟ್ ಕೋರ್ಸ್‌ಗಳಾಗಿ
    ಗ್ರಾಹಕ ಶಿಕ್ಷಣ, ಕಮ್ಯುನಿಕೇಟಿವ್ ಇಂಗ್ಲಿಷ್, ಪಬ್ಲಿಕ್ ಅಡ್ಮಿನಿಸ್ಟ್ರೇಶನ್, ಇವೆಂಟ್ ಮ್ಯಾನೇಜ್‌ಮೆಂಟ್, ಕೃಷಿ ಮಾರುಕಟ್ಟೆ, Tally & GST, Soft Skills Developments.
    ಯೋಗ ಮತ್ತು ಆಧ್ಯಾತ್ಮ, ಯಕ್ಷಗಾನ, ಕಸೂತಿ ಮತ್ತು ಕರಕುಶಲ, Computer fundamentals, Electrical appliances & Repairs.
    ಸಂಸ್ಥೆಯ ವಿಶೇಷತೆ :
    ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ.
    ➡️ಆಳ್ವಾಸ್ ನಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಕಾಮರ್ಸ್ ಡೀನ್ ಆಗಿ ಸೇವೆ ಸಲ್ಲಿಸಿದ; ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಆಸಕ್ತರು ಹಾಗೂ ಸುದೀರ್ಘ ಇಪ್ಪತೈದು ವರ್ಷಗಳ ಶಿಕ್ಷಣ ಕ್ಷೇತ್ರದ ಅನುಭವವಿರುವ ಕೊತ್ತಾಡಿ ಉಮೇಶ ಶೆಟ್ಟಿಯವರು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ‌.‌
    ➡️ಪ್ರತಿಭಾವಂತ ಪ್ರಾಧ್ಯಾಪಕರ ತಂಡವೇ ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿದೆ. ಯುನಿವರ್ಸಿಟಿ ರ‌್ಯಾಂಕ್ ಪಡೆದವರು , ಸಾಂಸ್ಕೃತಿಕ ಆಸಕ್ತರು, ರಂಗಭೂಮಿ ಆಸಕ್ತರು, ನಿರ್ದೇಶನದಲ್ಲಿ ನೈಪುಣ್ಯರು, ವಾಗ್ಮಿಗಳು, ಉತ್ತಮ ನಿರೂಪಕರು, ಸಂಗೀತಗಾರರು ಹೀಗೆ ಬಹುಮುಖ ಪ್ರತಿಭೆಯುಳ್ಳ ಪ್ರಾಧ್ಯಾಪಕರ ಸಮೂಹವಿದೆ.
    ➡️ಯಕ್ಷಗಾನ ಮತ್ತು ತಾಳಮದ್ದಳೆ ಪ್ರದರ್ಶನ ನೀಡುವ ಪ್ರಾಧ್ಯಾಪಕರ ಮತ್ತು ವಿದ್ಯಾರ್ಥಿಗಳ ಸಮರ್ಥ ತಂಡ .
    ➡️ಎನ್. ಸಿ. ಸಿ, ಎನ್‌.ಎಸ್‌.ಎಸ್ ಘಟಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಲಲಿತಾ ಕಲಾ ಸಂಘ, ಮಹಿಳಾ ವೇದಿಕೆ, ಅರ್ಥಶಾಸ್ತ್ರ ಸಂಘ, ರೋವರ್ಸ್ ಮತ್ತು ರೇಂಜರ್ಸ್ ಘಟಕ, ರೆಡ್‌ಕ್ರಾಸ್ ಘಟಕ, ಇನ್ನೋವೆಶನ್ ಕ್ಲಬ್,ಯಕ್ಷಗಾನ ಸಂಘ, YRC, Rangers Rovers ಮತ್ತು ಐಕ್ಯೂಎಸಿ ಘಟಕ,
    ➡️ವಿದ್ಯಾರ್ಥಿಗಳ ವಿವಿಧ ಅಭಿರುಚಿಗೆ ತಕ್ಕಂತೆ 25 ವಿವಿಧ ವೇದಿಕೆಗಳು, ಉತ್ತಮ ಗ್ರಂಥಾಲಯ, ಪ್ರಯೋಗಾಲಯಗಳು ಮತ್ತು 1500 ವಿದ್ಯಾರ್ಥಿಗಳು ಕುಳಿತು ಕಾರ್ಯಕ್ರಮ ನೋಡಬಲ್ಲ ವಿಶಾಲವಾದ ಕೇರಳ ಮಾದರಿಯ ಸಭಾಂಗಣ.
    ➡️ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ.
    ➡️ಪೋಷಕ - ಶಿಕ್ಷಕರ ನಿರಂತರ ಸಂಪರ್ಕ, ಚರ್ಚೆ ಮತ್ತು ಪೋಷಕರ ಸಲಹೆಗಳಿಗೆ ಸ್ಪಂದನೆ‌.
    ➡️ಹೆಮ್ಮೆಯ ಪ್ರಾಕ್ತನ ವಿದ್ಯಾರ್ಥಿ ಸಂಘ.
    ➡️ಅನ್ನಪೂರ್ಣ ಕ್ಯಾಂಟೀನ್ & ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಮಧ್ಯಾಹ್ನ ಭೋಜನ.
    ಸಂಸ್ಥೆಯ ಹೆಮ್ಮೆ :
    ➡️ಕುಶ ಪೂಜಾರಿ ಮತ್ತು ದಿವ್ಯಾ ಶೆಟ್ಟಿ ರಾಷ್ಟ್ರಮಟ್ಟದ ಯೋಗಪಟುಗಳು.
    ➡️ಸಂದೀಪ್ ದೇವಾಡಿಗ ರಾಷ್ಟ್ರ ಮಟ್ಟದ ಸಾಪ್ಟ್‌ಬಾಲ್ ಆಟಗಾರ.
    ➡️ಸುಕನ್ಯಾ ಶೆಟ್ಟಿ ರಾಷ್ಟ್ರಮಟ್ಟದ ಚೆಸ್ ಆಟಗಾರ್ತಿ.
    ➡️ಜಾಕ್ಸನ್ ಡಿ'ಸೋಜಾ ರಾಷ್ಟ್ರಮಟ್ಟದ ಪವರ್ ಲಿಪ್ಟರ್.
    ➡️ಸನತ್ ಅಡಿಗ ಮತ್ತು ಕಾರ್ತಿಕ ಶೆಟ್ಟಿ R.D ಕ್ಯಾಂಪ್‌‌ನಲ್ಲಿ ವಿ.ವಿ ಪ್ರತಿನಿಧಿಗಳಾಗಿ ಭಾಗವಹಿಸುವಿಕೆ.
    ಪ್ರವೇಶ ಪ್ರಕ್ರಿಯೆ :
    ಕಾಲೇಜು ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ.‌ ಪಾಲಕರು, ವಿದ್ಯಾರ್ಥಿಗಳು ಸಂಪರ್ಕಿಸಿ ದಾಖಲಾತಿ ಮಾಡಿಕೊಳ್ಳಬಹುದು.
    ವಿಶಾಲಾಕ್ಷಿ ಬಿ.ಹೆಗ್ಡೆ ಕ್ಯಾಂಪಸ್, ಸಂಗಮ್ ಕುಂದಾಪುರ. 576201
    ನೇರ ದಾಖಲಾತಿಗೆ.
    9 min
  • *ಲೈಫ್ ಈಸ್ ಬ್ಯುಟಿಫುಲ್ BUT ನಾವು ಹೇಗೆ ಸ್ವೀಕಾರ ಮಾಡ್ತೀವಿ ಅನ್ನೋದರ ಮೇಲೆ ಅವಲಂಬಿಸಿದೆ...*.
    *ಆಹಾರ ಧಾನ್ಯಗಳು&ಪಾಠ*
    *ಅಡುಗೆಗೆ ಉಪ್ಪು ಹೆಚ್ಚಾದರೆ ಒಂದು ಆಲೂಗಡ್ಡೆ ಮುಳುಗಿಸಬೇಕಂತೆ..ಅದು ಉಪ್ಪನ್ನು ಹೀರ್ಕೊಳುತ್ತೆ.*
    ನಮಗೂ ಹೀಗೊಬ್ಬ ಆಪತ್ಭಾಂಧವ ಇದ್ದಿದ್ರೆ ಚೆನ್ನಾಗಿರೋದಲ್ವಾ ...ಸಾಲದ ಹೊರೆಯೇರಿದಾಗ ತೀರ್ಸೋಕೆ.
    *ಈರುಳ್ಳಿ ಕತ್ತರಿಸಿ ನೀರಲ್ಹಾಕಿ ಹೆಚ್ಚಿದರೆ ಕಣ್ಣೀರು ಬರಲ್ಲ.*
    ದುಃಖದಿಂದ ಕಣ್ಣೀರು ಬಂದಾಗ ,ನೀರು ಕುಡಿದು ಜೋರಾಗಿ ನಕ್ಕರೆ ಕಣ್ಣೀರು ಕಾಣೋಲ್ಲ
    *ಎಷ್ಟೊತ್ತಾದರೂ ಕುಕ್ಕರ್ ಕೂಗ್ತಾ ಇಲ್ಲ ಅಂದ್ರೆ ಒಳಗೆ ತಳ ಹಿಡೀತಿದೆ ಅಂತ ಅರ್ಥ*
    ಏನ್ ಕೇಳಿದ್ರೂ ಹೆಂಡ್ತಿ ಮೌನವಾಗಿದಾಳೆ ಅಂದ್ರೆ ಒಳಗೆ ಉರೀತಿದೆ ಅಂತ ಅರ್ಥ.
    *ಬೇಳೆ ಬೇಯೋಕೆ ಚಿಟಿಕೆ ಅರಿಶಿನ,ಮಿಳ್ಳೆ ಎಣ್ಣೆ ಸಹಕಾರಿ.*
    ಬದುಕು ಅಂದಗಾಣಿಸೋಕೆ ಹಿಡಿಯಷ್ಟು ಪ್ರೀತಿ ,ಮುಷ್ಟಿಯಷ್ಟು ಕಾಳಜಿ ಸಹಕಾರಿ.
    *ಹಿಟ್ಟು ಚೆನ್ನಾಗಿ ನಾದಿದರೆ ಜೋಳದ ರೊಟ್ಟಿ ಹರಿಯೋಲ್ಲ ಹೇಗೆ ತಟ್ಟಿದರೂ*
    ಸಂಬಂಧಗಳೂ ಹಾಗೇನೆ , ನಾದಿ ಹದವಾಗಿದ್ದರೆ ತಟ್ಟಿದರೂ ,ಲಟ್ಟಿಸಿದರೂ, ಬಿಸಿಮೇಲೆ ಬೇಯಿಸಿದರೂ ಹರಿಯೋಲ್ಲ .
    *ಅಲಸಂದೆ ,ಹುರುಳಿ, ಹೆಸರಿನಂತಹ ಕಾಳುಗಳನ್ನು ನೀರಿಗೆ ಹಾಕಿದಾಗ ಜೊಳ್ಳು ತೇಲುತ್ತದೆ*
    ಗೆಳೆಯರೂ ಹಾಗೇ ಅಲ್ವಾ, ನಾವು ತಾಪತ್ರಯದ ನೀರಿಗೆ ಬಿದ್ದಾಗ ಜೊಳ್ಯಾರು ,ಗಟ್ಟಿ ಯಾರು ಅಂತ ಗೊತ್ತಾಗತ್ತೆ.
    *ಕಾಫಿ ಬಟ್ಟಲು ಖಾಲಿಯಾಗಿ ಕೊನೇಲಿ ಉಳಿಯೋ ಕಾಫಿ ಬಸಿಯೋಕೆ ತುಂಬ ರುಚಿ*
    ಗಳಿಸಿದ್ದ ಗೆಳೆತನ,ಪ್ರೀತಿ, ಆಸ್ತಿ ನೂ ಹಾಗೇ ಕಳ್ದೋಗುತ್ತೆ ಅನ್ನೋವಾಗ ನಂಟಿನ ಅಂಟು ಜಾಸ್ತಿಯಾಗುತ್ತೆ.
    *ಅಗ್ಗಿಷ್ಟಿಕೇಲಿ ಅಡುಗೆ ಮಾಡೋವಾಗ ಪಾತ್ರೆ ತಳಕ್ಕೆ ಬೂದೀನೋ ಅಕ್ಕಿಹಿಟ್ಟೋ ಹಚ್ತೀವಿ ಪಾತ್ರೆ ಮಸಿ ಹಿಡೀದಿರ್ಲಿ ಅಂತ*
    ಅನವಶ್ಯಕ ನಿಂದನೆಗಳಿಗೂ ಹಾಗೇ, ನಿರ್ಲಕ್ಷ್ಯ ದ ಕೋಟಿಂಗ್ ಮಾಡಿಬಿಡಬೇಕು ..ನೋವು ಅಂಟೋಲ್ಲ, ಅಂಟಿದರೂ ಕೊಡವಿದರೆ ಉದುರಿಹೋಗುತ್ತೆ..
    *ಸಾರು ಹುಳೀ ಕುದ್ಯೋವಾಗ ಚೂರು ಬೆಲ್ಲ ಹಾಕ್ತೀವಿ ಘಾಟು ಹೋಗೋಕೆ*
    ದಾಂಪತ್ಯದಲ್ಲೂ ತುಸು ಸೈರಣೆ ಬೆರೆಸಿ ,ಕಲಹದ ಘಾಟು ತಡ್ಯೋಕೆ.
    *ಹಾಲು ಒಡೆದರೆ ಸಂಸ್ಕರಿಸಿ ಖೋವಾನೋ ಪನೀರನ್ನೋ ಮಾಡಬಹುದು..*
    ಸಂಬಂಧ ಒಡೆದರೆ ಹೀಗ್ಮಾಡೋಕಾಗೋಲ್ಲ...ಜೋಪಾನ
    *ಕಾದ ಎಣ್ಣೆಗೆ ಸಣ್ಣ ಹನಿ ನೀರು ಸಿಡಿದ್ರೂ ಚಟಪಟ ಚಟಪಟ ಅಂತ ಬೈಯುತ್ತೆ...*
    ನೊಂದ ಮನಸ್ಸೂ ಹಾಗೇನೆ ಸಣ್ಣ ಸಣ್ಣ ಮಾತಿಗೆಲ್ಲ
    ಸಿಡಿದೇಳತ್ತೆ.
    *ಮಾಡಿಟ್ಟ ಅಡುಗೇಲಿ ಪದೇ ಪದೇ ಕೈಯಾಡಿಸ್ತಾ ಇದ್ರೆ ,ಬೇಗ ಹಳಸೋಗತ್ತೆ...*
    ಹಳೇ ವಿಚಾರಗಳನ್ನು ಪದೇ ಪದೇ ಕೆದಕ್ತಾ ಇದ್ರೂ ಅಷ್ಟೇ, ಸಂಬಂಧ ಹಳಸುತ್ತೆ.
    *ಫ್ರಿಡ್ಜಲ್ಲಿಟ್ಟ ಹಲಸಿನ ತೊಳೆ, ಅಲ್ಲಿರೋ ಎಲ್ಲ ವಸ್ತುವಿನೊಳಗೂ ತನ್ನ ಸುವಾಸನೆ ಸೇರಿಸಿಬಿಡುತ್ತೆ.*
    ಸಹೃದಯರೂ ಹಾಗೇ ಅಲ್ವಾ, ತಾವಿರೋ ತಾವಿನಲ್ಲೆಲ್ಲ ಸಜ್ಜನಿಕೆ ಹರಡ್ತಾರೆ..
    *ಸಿಹಿ ತಿಂಡಿ ಮಧುಮೇಹ ಹೆಚ್ಚು ಮಾಡುತ್ತೆ*
    *ಕಹಿ ಹಾಗಲ,ಮೆಂತ್ಯ, ಅಮೃತ ಬಳ್ಳಿ ಈ ರೋಗಕ್ಕೆ ಔಷಧಿಯಂತೆ*
    ಕೆಲವರ ಮಾತುಗಳೂ ಹಾಗೇನೇ,ಸಿಹಿಯಲ್ಲಿ ಕುಟಿಲ ,ಕಹಿಯಲ್ಲಿ ಕಾಳಜಿ.
    *ಮೊಸರನ್ನ ಉಪ್ಪಿನ ಕಾಯಿ , ಊಟ ಮುಗಿಸಿ ತಟ್ಟೆ ಬಳಿದು ಕೈ ಬೆರಳುಗಳನ್ನು ಸಂಕೋಚವಿಲ್ಲದೇ ನೆಕ್ಕಬೇಕು..*
    ಬದುಕನ್ನೂ ಹಾಗೇ ,ಸಣ್ಣ ಸಣ್ಣ ಖುಷಿ ಅನುಭವಿಸುತ್ತಾ ಬದುಕಬೇಕು.
    6 min
  • ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ.
    ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪದವಿ ಆಸೆ ಪೂರೈಸುವ ಆಶಯದಿಂದ ರೂಪು ತಳೆದ ಸಂಸ್ಥೆ ಡಾ। ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ. ಅಶಯವನ್ನು ಹಸನಾಗಿ ಹಬ್ಬಿಸಿಕೊಂಡು ಬಂದು ಯಶಸ್ವಿಗೊಳಿಸುತ್ತಿರುವ ಕಾರಣಕ್ಕೆ ಪ್ರಸ್ತುತ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಪದವಿ ಕಾಲೇಜುಗಳಲ್ಲಿ ವಿಶೇಷ ಸಾಲಿನಲ್ಲಿ ಗುರುತಿಸಿಕೊಂಡಿದೆ.‌ 'ಸಮಾಜದ ಕಟ್ಟಕಡೆಯ ಮಗು ವಿದ್ಯಾವಂತನಾಗಬೇಕು' ಎಂಬುದು ಕಾಲೇಜಿನ ಅಧ್ಯಕ್ಷರು ಮತ್ತು ಬೈಂದೂರು ಶಾಸಕರಾದ ಶ್ರೀ.ಬಿ.ಎಂ. ಸುಕುಮಾರ ಶೆಟ್ಟಿಯವರ ಧ್ಯೇಯ. ಅಧ್ಯಕ್ಷರ ಧ್ಯೇಯ ವಾಕ್ಯವನ್ನು ಸಾರ್ಥಕಗೊಳಿಸುವ ಪಯಣದೊಂದಿಗೆ ಸಂಸ್ಥೆಯು 2021-22ರ ಸಾಲಿನ ಪ್ರವೇಶ ಪ್ರಕ್ರಿಯೆಯನ್ನು ಆರಂಭಗೊಳಿಸಿದೆ.‌
    130 ವಿದ್ಯಾರ್ಥಿಗಳೊಂದಿಗೆ ಹನ್ನೊಂದು ವರ್ಷಗಳ ಹಿಂದೆ ಆರಂಭಗೊಂಡ ಸಂಸ್ಥೆಯಲ್ಲಿ ಪ್ರಸ್ತುತ 1200 ಕಲಿಕಾರ್ಥಿಗಳಿದ್ದಾರೆ ಎಂಬುದು ಸಂಸ್ಥೆಯ ಸಾಧನೆಯ ಹಾದಿಯ ಹೆಗ್ಗುರುತು.‌ ಹೀಗೆ ಆರಂಭಗೊಂಡ ಕಿರು ಅವಧಿಯಲ್ಲಿ ಶೈಕ್ಷಣಿಕವಾಗಿ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಕ್ರೀಡಾರಂಗದಲ್ಲಿ ಹಾಗೂ ಇನ್ನಿತರ ವಿಸ್ತರಣಾ ಚಟುವಟಿಕೆಗಳಲ್ಲಿ ಕಾಲೇಜು ಗಣನೀಯ ಸಾಧನೆಗೈದಿದೆ.
    ಸಂಸ್ಥೆಯ ಸಾಧನೆಗಳು :
    ⏩ಕಾಲೇಜಿನ ವಾರ್ಷಿಕ ಸಂಚಿಕೆ 'ಶಿಖರ' ಮಂಗಳೂರು ವಿ.ವಿ ಮಟ್ಟದಲ್ಲಿ ಸತತ ನಾಲ್ಕು ವರ್ಷ ಪ್ರಥಮ ಸ್ಥಾನ.
    ⏩ಮಂಗಳೂರು ವಿ.ವಿ ಕ್ರೀಡಾ ರ‌್ಯಾಂಕಿಂಗ್‌ನಲ್ಲಿ ಉಡುಪಿ ವಲಯ ಕಾಲೇಜುಗಳಲ್ಲಿ ಪ್ರಥಮ, ಸಮಗ್ರ 9ನೇ ರ‌್ಯಾಂಕ್‌.
    ⏩ಗ್ರಾಮೀಣ ಭಾಗದಿಂದ ಬಂದ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೂ ಪ್ರವೇಶಾವಕಾಶ ಮತ್ತೆ ಅವರುಗಳಿಗೇ ಬಿ.ಬಿ.ಎ ನಲ್ಲಿ ಮೂರನೇ ರ‌್ಯಾಂಕ್, ಬಿ.ಕಾಂ.ನಲ್ಲಿ 8ನೇ ರ‌್ಯಾಂಕ್, ಬಿ‌.ಕಾಂ ಅಕೌಂಟೆನ್ಸಿಯಲ್ಲಿ ಚಿನ್ನದ ಪದಕಗಳು.
    ⏩ಸಾಂಸ್ಕೃತಿಕ - ಮಂಗಳೂರು ವಿ.ವಿ ಅಂತರ್ ಕಾಲೇಜು ಮಟ್ಟದಲ್ಲಿ ನಿರಂತರವಾಗಿ ಉತ್ಕೃಷ್ಟ ಸಾಧನೆ.
    ⏩ಕ್ಯಾಂಪಸ್ ಆಯ್ಕೆ - ವಿದ್ಯಾರ್ಥಿಗಳು ವಿವಿಧ ಪ್ರತಿಷ್ಠಿತ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.
    ⏩ಸತತ ಹತ್ತು ವರ್ಷಗಳಿಂದ ಕಾಲೇಜಿನ ಆಶ್ರಯದಲ್ಲಿ ಮಂಗಳೂರು ವಿ.ವಿ ಅಂತರ್ ಕಾಲೇಜು ಕ್ರೀಡಾ ಸ್ಪರ್ಧೆಗಳ ಆಯೋಜನೆ.
    ⏩ಕಾಲೇಜಿನಲ್ಲಿ ವಿದ್ಯಾರ್ಥಿಗಳ ಬರವಣಿಗೆಯ ಆಸಕ್ತಿಗೆ ಪ್ರೋತ್ಸಾಹ ನೀಡುವ ವಾಲ್ ಮ್ಯಾಗಜಿನ್ (ಭಿತ್ತಿ ಪತ್ರಿಕೆ) 'ಧ್ವನಿ' ,ವಾರ್ಷಿಕ ಸಂಚಿಕೆ 'ಶಿಖರ' ಹಾಗೂ ವಿಭಾಗದ ಪತ್ರಿಕೆಗಳಿವೆ .ಕ್ಯಾಂಪಸ್ ವೈಸ್ - ದ್ವೈವಾರ್ಷಿಕ ನ್ಯೂಸ್ ಬುಲೆಟಿನ್‌.
    ⏩ಉದಯ ಗಾಂವ್ಕರ್ ಅವರು ರಚಿಸಿ, ವಾಸುದೇವ ಗಂಗೇರ ನಿರ್ದೇಶಿಸಿದ್ದ "ಮಹಾತ್ಮ"ರಂಗ ಪ್ರಸ್ತುತಿ ಏಳು ಪ್ರಯೋಗಗಳನ್ನು ಕಾಣುವುದರ ಜೊತೆಗೆ ವಿ.ವಿ ಮಟ್ಟದ ಸ್ಪರ್ಧೆಗಳಲ್ಲಿ ಶ್ರೇಷ್ಠ ರಂಗ ತಜ್ಞರ ಗಮನ ಸೆಳೆದಿದೆ
    ಸಂಸ್ಥೆಯ ಕೋರ್ಸುಗಳು :
    ಬಿ.ಕಾಂನಲ್ಲಿ ಮೂರು ವಿಭಾಗಗಳು, ಬಿ.ಕಾಂನೊಂದಿಗೆ CA/CS/CMA.
    ಬಿ.ಬಿ.ಎ, ಮತ್ತು ಬಿ.ಸಿ.ಎ ಹಾಗು ಬಿ.ಎಸ್ಸಿಯಲ್ಲಿ ಒಂದು ವಿಭಾಗವಿದೆ.
    ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ (lBPS) ತರಬೇತಿ.
    ಸರ್ಟಿಫಿಕೇಟ್ ಕೋರ್ಸ್‌ಗಳಾಗಿ
    ಗ್ರಾಹಕ ಶಿಕ್ಷಣ, ಕಮ್ಯುನಿಕೇಟಿವ್ ಇಂಗ್ಲಿಷ್, ಪಬ್ಲಿಕ್ ಅಡ್ಮಿನಿಸ್ಟ್ರೇಶನ್, ಇವೆಂಟ್ ಮ್ಯಾನೇಜ್‌ಮೆಂಟ್, ಕೃಷಿ ಮಾರುಕಟ್ಟೆ, Tally & GST, Soft Skills Developments.
    ಯೋಗ ಮತ್ತು ಆಧ್ಯಾತ್ಮ, ಯಕ್ಷಗಾನ, ಕಸೂತಿ ಮತ್ತು ಕರಕುಶಲ, Computer fundamentals, Electrical appliances & Repairs.
    ಸಂಸ್ಥೆಯ ವಿಶೇಷತೆ :
    ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ.
    ➡️ಆಳ್ವಾಸ್ ನಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಕಾಮರ್ಸ್ ಡೀನ್ ಆಗಿ ಸೇವೆ ಸಲ್ಲಿಸಿದ; ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಆಸಕ್ತರು ಹಾಗೂ ಸುದೀರ್ಘ ಇಪ್ಪತೈದು ವರ್ಷಗಳ ಶಿಕ್ಷಣ ಕ್ಷೇತ್ರದ ಅನುಭವವಿರುವ ಕೊತ್ತಾಡಿ ಉಮೇಶ ಶೆಟ್ಟಿಯವರು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ‌.‌
    ➡️ಪ್ರತಿಭಾವಂತ ಪ್ರಾಧ್ಯಾಪಕರ ತಂಡವೇ ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿದೆ. ಯುನಿವರ್ಸಿಟಿ ರ‌್ಯಾಂಕ್ ಪಡೆದವರು , ಸಾಂಸ್ಕೃತಿಕ ಆಸಕ್ತರು, ರಂಗಭೂಮಿ ಆಸಕ್ತರು, ನಿರ್ದೇಶನದಲ್ಲಿ ನೈಪುಣ್ಯರು, ವಾಗ್ಮಿಗಳು, ಉತ್ತಮ ನಿರೂಪಕರು, ಸಂಗೀತಗಾರರು ಹೀಗೆ ಬಹುಮುಖ ಪ್ರತಿಭೆಯುಳ್ಳ ಪ್ರಾಧ್ಯಾಪಕರ ಸಮೂಹವಿದೆ.
    ➡️ಯಕ್ಷಗಾನ ಮತ್ತು ತಾಳಮದ್ದಳೆ ಪ್ರದರ್ಶನ ನೀಡುವ ಪ್ರಾಧ್ಯಾಪಕರ ಮತ್ತು ವಿದ್ಯಾರ್ಥಿಗಳ ಸಮರ್ಥ ತಂಡ .
    ➡️ಎನ್. ಸಿ. ಸಿ, ಎನ್‌.ಎಸ್‌.ಎಸ್ ಘಟಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಲಲಿತಾ ಕಲಾ ಸಂಘ, ಮಹಿಳಾ ವೇದಿಕೆ, ಅರ್ಥಶಾಸ್ತ್ರ ಸಂಘ, ರೋವರ್ಸ್ ಮತ್ತು ರೇಂಜರ್ಸ್ ಘಟಕ, ರೆಡ್‌ಕ್ರಾಸ್ ಘಟಕ, ಇನ್ನೋವೆಶನ್ ಕ್ಲಬ್,ಯಕ್ಷಗಾನ ಸಂಘ, YRC, Rangers Rovers ಮತ್ತು ಐಕ್ಯೂಎಸಿ ಘಟಕ,
    ➡️ವಿದ್ಯಾರ್ಥಿಗಳ ವಿವಿಧ ಅಭಿರುಚಿಗೆ ತಕ್ಕಂತೆ 25 ವಿವಿಧ ವೇದಿಕೆಗಳು, ಉತ್ತಮ ಗ್ರಂಥಾಲಯ, ಪ್ರಯೋಗಾಲಯಗಳು ಮತ್ತು 1500 ವಿದ್ಯಾರ್ಥಿಗಳು ಕುಳಿತು ಕಾರ್ಯಕ್ರಮ ನೋಡಬಲ್ಲ ವಿಶಾಲವಾದ ಕೇರಳ ಮಾದರಿಯ ಸಭಾಂಗಣ.
    ➡️ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ.
    ➡️ಪೋಷಕ - ಶಿಕ್ಷಕರ ನಿರಂತರ ಸಂಪರ್ಕ, ಚರ್ಚೆ ಮತ್ತು ಪೋಷಕರ ಸಲಹೆಗಳಿಗೆ ಸ್ಪಂದನೆ‌.
    ➡️ಹೆಮ್ಮೆಯ ಪ್ರಾಕ್ತನ ವಿದ್ಯಾರ್ಥಿ ಸಂಘ.
    ➡️ಅನ್ನಪೂರ್ಣ ಕ್ಯಾಂಟೀನ್ & ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಮಧ್ಯಾಹ್ನ ಭೋಜನ.
    ಸಂಸ್ಥೆಯ ಹೆಮ್ಮೆ :
    ➡️ಕುಶ ಪೂಜಾರಿ ಮತ್ತು ದಿವ್ಯಾ ಶೆಟ್ಟಿ ರಾಷ್ಟ್ರಮಟ್ಟದ ಯೋಗಪಟುಗಳು.
    ➡️ಸಂದೀಪ್ ದೇವಾಡಿಗ ರಾಷ್ಟ್ರ ಮಟ್ಟದ ಸಾಪ್ಟ್‌ಬಾಲ್ ಆಟಗಾರ.
    ➡️ಸುಕನ್ಯಾ ಶೆಟ್ಟಿ ರಾಷ್ಟ್ರಮಟ್ಟದ ಚೆಸ್ ಆಟಗಾರ್ತಿ.
    ➡️ಜಾಕ್ಸನ್ ಡಿ'ಸೋಜಾ ರಾಷ್ಟ್ರಮಟ್ಟದ ಪವರ್ ಲಿಪ್ಟರ್.
    ➡️ಸನತ್ ಅಡಿಗ ಮತ್ತು ಕಾರ್ತಿಕ ಶೆಟ್ಟಿ R.D ಕ್ಯಾಂಪ್‌‌ನಲ್ಲಿ ವಿ.ವಿ ಪ್ರತಿನಿಧಿಗಳಾಗಿ ಭಾಗವಹಿಸುವಿಕೆ.
    ಪ್ರವೇಶ ಪ್ರಕ್ರಿಯೆ :
    ಕಾಲೇಜು ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ.‌ ಪಾಲಕರು, ವಿದ್ಯಾರ್ಥಿಗಳು ಸಂಪರ್ಕಿಸಿ ದಾಖಲಾತಿ ಮಾಡಿಕೊಳ್ಳಬಹುದು.
    ವಿಶಾಲಾಕ್ಷಿ ಬಿ.ಹೆಗ್ಡೆ ಕ್ಯಾಂಪಸ್, ಸಂಗಮ್ ಕುಂದಾಪುರ. 576201
    ನೇರ ದಾಖಲಾತಿಗೆ .
    https://b
    5 min
  • ನೀವು ಮಲಗುವ ವಿಧಾನ ಸರಿಯಿದೆಯೇ, ತಿಳಿದುಕೊಳ್ಳಿ
    ದಿನವಿಡೀ ಕಾರ್ಯನಿರತವಾಗಿರುವ ಶರೀರಕ್ಕೆ ವಿಶ್ರಾಂತಿ ಸಿಗಲೆಂದು ನಾವು ಮಲಗುತ್ತೇವೆ. ಆದುದರಿಂದ ‘ಯಾವ ರೀತಿಯಲ್ಲಿ ಅಥವಾ ಭಂಗಿಯಲ್ಲಿ ಮಲಗುವುದರಿಂದ ಶರೀರಕ್ಕೆ ಹೆಚ್ಚಿನ ವಿಶ್ರಾಂತಿ ಸಿಗುತ್ತದೆಯೋ, ಆ ಭಂಗಿಯು ಒಳ್ಳೆಯದು’ ಎಂಬುವುದು ಒಂದು ಸಾಮಾನ್ಯ ನಿಯಮ. ಪ್ರತಿಯೊಬ್ಬರ ಪ್ರಕೃತಿ ಮತ್ತು ಆ ಸಮಯದ ಸ್ಥಿತಿಗನುಗುಣವಾಗಿ ವಿಶ್ರಾಂತಿ ಸಿಗುವ ಭಂಗಿಯು ಬೇರೆ ಬೇರೆ ಆಗಿರಬಹುದು. ನಾವು ಯಾವ ಭಂಗಿಯಲ್ಲಿ ಮಲಗಬೇಕು ಎಂಬುವುದು ನಮಗೆ ನಿದ್ದೆ ಬರುವ ತನಕ ಮಾತ್ರ ನಾವು ನಿರ್ಧರಿಸಬಹುದು, ಏಕೆಂದರೆ ನಿದ್ದೆ ಬಂದ ನಂತರ ನಮ್ಮ ಶರೀರದ ಸ್ಥಿತಿಯು ನಮ್ಮ ನಿಯಂತ್ರಣದಲ್ಲಿರುವುದಿಲ್ಲ.
    7 min
  • *ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಿ... ಆಗ ಬದುಕು ಸುಂದರವಾಗುವುದು...*
    ಟೀಚರೊಬ್ಬರು ಬೋರ್ಡಿನ ಮೇಲೆ ಐದರ ಮಗ್ಗಿಯನ್ನು ಬರೆಯುತ್ತಿದ್ದರು...
    5X1 = 3
    5X2 = 10
    5X3 = 15
    5X4 = 20
    5X5 = 25
    5X6 = 30
    5X7 = 35
    5X8 = 40
    5X9 = 45
    5X10 = 50
    ಬರೆದ ನಂತರ ವಿದ್ಯಾರ್ಥಿಗಳ ಕಡೆ ತಿರುಗಿ ನೋಡುವಾಗ ಎಲ್ಲಾ ವಿದ್ಯಾರ್ಥಿಗಳೂ ನಗುತ್ತಿದ್ದರು.
    ಟೀಚರ್ ವಿದ್ಯಾರ್ಥಿಗಳನ್ನು - ನೀವು ನಗೋದಕ್ಕೆ ಇರುವ ಕಾರಣವಾದರೂ ಏನು? ಎಂದು ವಿಚಾರಿಸಿದಾಗ ವಿದ್ಯಾರ್ಥಿಗಳು ಹೇಳುತ್ತಾರೆ - ಮಗ್ಗಿಯ ಮೊದಲನೆ ಸಾಲು ತಪ್ಪಾಗಿದೆ ಮೂರರ ಬದಲಿಗೆ ಐದು ಆಗಬೇಕಿತ್ತು....
    ಟೀಚರ್ ಮುಗುಳ್ನಗುತ್ತಾ - " ನಾನು ನಿಮಗೊಂದು ಮುಖ್ಯವಾದ ವಿಷಯವನ್ನು ಕಲಿಸುವುದಕ್ಕಾಗಿ ಹಾಗೆ ಬರೆದೆ.... ಅದು ನಿಮ್ಮ ನಿಜ ಜೀವನದಲ್ಲಿ ನೀವು ಅರಿತುಕೊಳ್ಳಬೇಕಾದ ವಿಷಯವೇ ಆಗಿದೆ....
    ನಾನು ಸರಿಯಾದ 9 ಸಾಲುಗಳನ್ನು ಬರೆದೆ... ಆದರೆ, ಯಾರೂ ಆ ಸಾಲುಗಳು ಸರಿಯಾಗಿ ಬರೆದುದ್ದಕ್ಕಾಗಿ ನನ್ನನ್ನು ಅಬಿನಂದಿಸಿಲ್ಲ... ಆದರೆ, ಒಂದು ಸಾಲನ್ನು ತಪ್ಪಾಗಿ ಬರೆದಾಗ ಎಲ್ಲರೂ ನನ್ನನ್ನು ಬೆರಳು ತೋರಿಸಿ ಬೊಟ್ಟು ಮಾಡಿದರು... ಒಂದು ಕಪ್ಪು ಚುಕ್ಕೆಯಂತೆ... ಆ ತಪ್ಪಿಗೆ ಹೆಚ್ಚು ಬೆಲೆ ಕೊಟ್ಟರು...
    ನೀವು ಮಾಡುವ ಎಲ್ಲಾ ಒಳ್ಳೆಯ ಕೆಲಸಗಳಿಗೂ ಜಗತ್ತು ಬೆಲೆ ಕೊಡವುದಿಲ್ಲ. ಆದರೆ ಒಂದು ತಪ್ಪಾದ ಪ್ರವರ್ತಿಗೆ ವಿಮರ್ಶೆಗಳು ಇದ್ದೇ ಇರುತ್ತದೆ...
    ಆದ್ದರಿಂದ ಯಾರಾದರೂ ನಿಮ್ಮನ್ನು ವಿಮರ್ಶಿಸಿದರೆ, ಯಾವತ್ತೂ ಬೇಸರಪಟ್ಟುಕೊಳ್ಳಬೇಡಿ. ಎಲ್ಲಾ ವಿಮರ್ಶನೆಗಳನ್ನೂ ಒಳ್ಳೆಯ ರೀತಿಯಲ್ಲಿ ಎತ್ತಿ ಹಿಡಿಯಿರಿ... ಮತ್ತು ಆ *ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಿ... ಆಗ ಬದುಕು ಸುಂದರವಾಗುವುದು...*
    5 min

About Dr Balakrishna Maddodi

From the publisher's feed

Hi