Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • ಕೋಪವನ್ನು ಚಾಣಾಕ್ಷದಿಂದ ನಿಯಂತ್ರಿಸುವುದು
    ಕೋಪವನ್ನು ನಿರ್ವಹಿಸುವುದು ಕಷ್ಟಕರವಾದರೂ ಅಸಾಧ್ಯವೇನಲ್ಲ. ಉಕ್ಕಿದ ಕೋಪವನ್ನು ತಣಿಸಲೇಬೇಕು, ಕೋಪವನ್ನು ಯಾವುದರ ಮೇಲಾದರೂ ತೀರಿಸಿ ಶಮನಗೊಳಿಸಲೇ ಬೇಕು. ಅದುಮಿಟ್ಟ ಕೋಪ ಒಳಗೊಳಗೇ ಒತ್ತಡ ನಿರ್ಮಿಸುತ್ತಾ ಕಡೆಗೊಂದು ದಿನ ಜ್ವಾಲಾಮುಖಿಯಾಗಿ ಸ್ಫೋಟಿಸುತ್ತದೆ. ಈ ಜ್ವಾಲಾಮುಖಿ ಹಲವು ಸಂಸಾರಗಳನ್ನೇ ಬಲಿ ತೆಗೆದುಕೊಳ್ಳಬಹುದು. ಆದುದರಿಂದ ಕ್ರೋಧಗೊಂಡ ಮನಸ್ಸನ್ನು ಶಾಂತಗೊಳಿಸಿ ಸಮಾಧಾನದಿಂದ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಅತಿ ಅಗತ್ಯ. ಬನ್ನಿ ಕೋಪವನ್ನು ನಿಯಂತ್ರಿಸುವ ಮಾರ್ಗ ಹೇಗೆಂಬುದನ್ನು ನೋಡೋಣ.....
    10 min
  • ರಕ್ಷಾ ಬಂಧನ ಭಾರತದಲ್ಲಿ ಆಚರಿಸಲ್ಪಡುವ ಹಬ್ಬ
    ಅಣ್ಣ ತಂಗಿಯ ಜೀವನದ ಒಂದು ಉತ್ತಮ ಪ್ರೀತಿಯ ಸಂಕೇತ ಒಬ್ಬರನ್ನು ಪರಸ್ಪರ ರಕ್ಷಣೆ ಮಾಡುವ ಮನಸ್ತಾಪವನ್ನು ಹೊಂದಿರುತ್ತಾರೆ. ರಕ್ಷಾ ಬಂಧನ ಪ್ರಾಚೀನ ಕಾಲದಿಂದ ಬಹಳ ಪ್ರಾಮುಖ್ಯತೆ ಹೊಂದಿದೆ. ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ. ಭಾರತದಲ್ಲಿ ಶ್ರಾವಣ ಮಾಸದ ಹುಣ್ಣಿಮೆಯನ್ನು ಯಜುರ್ ಉಪಕರ್ಮ ಎಂದು ಹಿಂದಿನಿಂದ ಆಚರಿಸುತ್ತಿದ್ದಾರೆ. ಈ ದಿನಕ್ಕೆ ಮತ್ತೊಂದು ವಿಶೇಷವಿದೆ. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ 'ರಕ್ಷಾಬಂಧನ' ಅಥವಾ 'ರಾಖಿ' ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತದಾದ್ಯಂತ ಎಲ್ಲರೂ ಆಚರಿಸುತ್ತಾರೆ. ಆದರೆ ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ನಮ್ಮ ಮನದಲ್ಲಿ ಮೂಡಿಸುತ್ತದೆ.
    ರಕ್ಷಾ ಬಂಧನ ಆಚರಣೆಗೆ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವಿದೆ. ಪ್ರತಿಯೊಬ್ಬ ಸಹೋದರಿಯು ಸಮಾಜದ ದುಷ್ಟಶಕ್ತಿಗಳಿಂದ ರಕ್ಷಿಸೆಂದು ತನ್ನ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟುತ್ತಾಳೆ. ಪ್ರತಿಯೊಬ್ಬ ಸಹೋದರನೂ ಈ ಸಮಯದಲ್ಲಿ ಸಹೋದರಿಯೆಡೆಗೆ ತನ್ನ ಭ್ರಾತತ್ವ ಪ್ರೇಮವನ್ನು ಉಜ್ವಲಗೊಳಿಸಬೇಕೆಂಬುದು ರಕ್ಷಾಬಂಧನ ಹಬ್ಬದ ನೀತಿಯಾಗಿದೆ.
    4 min
  • ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು*.
    🌺🌺🌺🌺🌺🌺🌺
    *ಮರದ ಬಾಗಿಣದಲ್ಲಿ ಹಾಕುವ ಪದಾರ್ಥಗಳು ಮತ್ತು ದೇವತೆಗಳು*.
    🌺🌺🌺🌺🌺🌺🌺
    ೧. *ಅರಿಸಿನ: _ಗೌರಿದೇವೀ._
    ೨. *ಕುಂಕುಮ:*_ಮಹಾಲಕ್ಷ್ಮೀ_
    ೩. *ಸಿಂಧೂರ:* _ಸರಸ್ವತೀ_
    ೪. *ಕನ್ನಡಿ:* _ರೂಪಲಕ್ಷ್ಮೀ._
    ೫. *ಬಾಚಣಿಗೆ:*_ಶೃಂಗಾರಲಕ್ಷ್ಮೀ._
    ೬. *ಕಾಡಿಗೆ:*_ಲಜ್ಜಾಲಕ್ಷ್ಮೀ._
    ೭. *ಅಕ್ಕಿ:*_ಶ್ರೀ ಲಕ್ಷ್ಮೀ._
    ೮. *ತೊಗರಿಬೇಳೆ :*_ವರಲಕ್ಷ್ಮೀ_
    ೯. *ಉದ್ದಿನಬೇಳೆ:*_ಸಿದ್ದಲಕ್ಷ್ಮೀ_
    ೧೦ *ತೆಂಗಿನಕಾಯಿ:*_ಸಂತಾನಲಕ್ಷ್ಮೀ_
    ೧೧. *ವೀಳ್ಯದ ಎಲೆ:*_ಧನಲಕ್ಷ್ಮೀ_
    ೧೨. *ಅಡಿಕೆ಼:*_ಇಷ್ಟಲಕ್ಷ್ಮೀ_
    ೧೩. *ಫಲ (ಹಣ್ಣು):* _ಜ್ಞಾನಲಕ್ಷ್ಮೀ_
    ೧೪. *ಬೆಲ್ಲ:*_ರಸಲಕ್ಷ್ಮೀ_
    ೧೫. *ವಸ್ತ್ರ:*_ವಸ್ತ್ರಲಕ್ಷ್ಮೀ_
    ೧೬. *ಹೆಸರುಬೇಳೆ:* _ವಿದ್ಯಾಲಕ್ಷ್ಮೀ_
    🎙️ *ಮುತೈದೆ ದೇವತೆಯರು *೧೬ ಜನರು*
    ಇವರನ್ನು ಷೋಡಶಲಕ್ಷ್ಮೀಯರು ಎಂದು ಕರೆಯುತ್ತಾರೆ..
    *ಗೌರಿ, ಪದ್ಮ, ಶುಚಿ, ಮೇಧಾ, ಸಾವಿತ್ರಿ, ವಿಜಯಾ, ಜಯಾ, ದೇವಸೇನಾ, ಸಾಹಾ, ಮಾತರಲೋಕಾ, ಮಾತಾರಾ, ಶಾಂತೀ, ಪೃಥ್ವಿ, ಧೃತೀ, ತುಷ್ಟೀ, ಸ್ವಧಾದೇವಿ..*
    _ಸೀರೆ ಸೆರಗಿನಲ್ಲಿ_ಮಹಾಲಕ್ಷ್ಮೀಯು ಸೌಭಾಗ್ಯ ರೂಪದಲ್ಲಿರುವುದರಿಂದ ಸೆರಗು ಹಿಡಿದು ಮರದ ಬಾಗಿಣ ಕೊಡುತ್ತಾರೆ..
    ಮರದ ಬಾಗಿಣಕ್ಕೆ ಸಂಸ್ಕೃತದಲ್ಲಿ *ವೇಣುಪಾತ್ರ* ಎಂದು ಹೇಳುತ್ತಾರೆ..
    ಮರದಬಾಗಿಣದಲ್ಲಿ ನಾರಾಯಣನ ಅಂಶ ಇರುತ್ತದೆ..
    ಮರವೆಂಬ ನಾರಾಯಣ ಮತ್ತು ಒಳಗಿರುವ ಲಕ್ಷ್ಮಿಯರು ತರಹ ಜೊತೆಯಲ್ಲಿ,
    ದಂಪತಿಗಳು ಲಕ್ಷ್ಮೀ-ನಾರಾಯಣರ ತರಹ ಇರಲಿ ಅನ್ನೋ ಕಾರಣಕ್ಕೆ ಮತ್ತು ಸುಮಂಗಲಿ ತನ ಯಾವಾಗಲೂ ಇರಲಿ ಅನ್ನೋ ಕಾರಣಕ್ಕೆ *೧೬* ಸುಮಂಗಲೀ ದೇವತೆಗಳ ಸಾಕ್ಷಿಯಾಗಿ, ಬಾಗಿಣ ಕೊಡುತ್ತಾರೆ..
    ಈ *೧೬* ದೇವತೆಗಳು ನಿತ್ಯಸುಮಂಗಲಿಯರು..
    ಈ *೧೬* ದೇವತೆಗಳು ಸಂಸಾರದಲ್ಲಿ ಯಾವುದೇ ತರಹದ ಕಷ್ಟ,ನೋವು,ದುಃಖ ಬಂದರೂ ನಮ್ಮನ್ನು ರಕ್ಷಿಸಲಿ ಎಂದು ನೆನೆದು ಬಾಗಿಣ ಕೊಡಬೇಕು..
    ಈ ೧೬ ದೇವತೆಗಳನ್ನು ಸ್ಮರಿಸುತ್ತಾ ಸ್ವರ್ಣಗೌರೀ ಹಬ್ಬದಲ್ಲಿ ಮಾಡುವ ಹೋರಾಪೂಜೆ, ಎಂದರೆ ದಾರಕ್ಕೆ ಮಾಡುವ ಪೂಜೆ..
    ೧೬ ಅರಿಸಿನ ದಾರ,
    ೧೬ ಗಂಟುಗಳು,
    ೧೬ ಬಾಗಿನ,
    ೧೬ ಎಳೆ ಗೆಜ್ಜೆವಸ್ತ್ರ, ಪೂಜಿಸಬೇಕೆಂದು ಗ್ರಂಥಗಳಲ್ಲಿ ಹೇಳಿದ್ದಾರೆ..
    🎙️ ದಾನಗಳು ಮತ್ತು ಫಲಗಳು
    ನಾವು ಮಾಡುವ ಪೂಜೆ, ವ್ರತಗಳಲ್ಲಿ ಬಾಗಿನ ಕೊಡುವ ಪದ್ಧತಿ ಇದೆ. ದೇವಿಗೆ ಮಾಡುವ ಪೂಜೆಗಳಲ್ಲಿ ಇದು ಸಾಮಾನ್ಯ. ಬಾಗಿನವನ್ನು ಮರದ ಜೊತೆಯಲ್ಲಿ ಇಟ್ಟು ಕೊಡುತ್ತಾರೆ.
    🎙️ ಬಾಗಿನದ ಸಾಮಾನುಗಳ ಪಟ್ಟಿ ಇಲ್ಲಿದೆ:
    1 ಜೊತೆ ಮೊರ - ಮೊರಕ್ಕೆ ಅರಿಶಿನ , ಕುಂಕುಮ ಹಚ್ಚಿ
    ಧಾನ್ಯಗಳು - ಅಕ್ಕಿ, ಕಡಲೆಬೇಳೆ, ತೊಗರಿಬೇಳೆ, ಹೆಸರುಬೇಳೆ, ಉದ್ದಿನಬೇಳೆ, ರವೆ
    ಬೆಲ್ಲದ ಅಚ್ಚು,ಉಪ್ಪು,ತೆಂಗಿನಕಾಯಿ,ಹಣ್ಣು
    ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ಬಾಚಣಿಗೆ
    ವೀಳ್ಯದ ಎಲೆ , ಅಡಿಕೆ, ದಕ್ಷಿಣೆ, ಅರಿಶಿನ , ಕುಂಕುಮ, ರವಿಕೆ ಬಟ್ಟೆ
    *೧. ಅರಿಸಿನ ದಾನ :*
    ಅರಿಸಿನ ದಾನ ಮಾಡಿದಷ್ಟು ರೋಗ ನಿವಾರಣೆ ಆಗುತ್ತದೆ..
    ಸುಮಂಗಲಿಯರಿಗೆ ಸೌಭಾಗ್ಯತನ ವೃದ್ಧಿಸುತ್ತದೆ..
    ಸುಮಂಗಲಿಯರಿಗೆ ಸುಮಂಗಲಿತನ ಯಾವಾಗಲೂ ಇರಲಿ ಎಂಬ ಉದ್ದೇಶಕ್ಕೆ ಮೊದಲು ಅರಿಸಿನ ಕೊಡುತ್ತಾರೆ..
    *೨. ಕುಂಕುಮ ದಾನ :*
    ಕುಂಕುಮವನ್ನು ಯಾರು ಧರಿಸುತ್ತಾರೋ ಅವರು ಬಹಳ ತೇಜಸ್ಸು ಮತ್ತ ನಂಬಿಕೆ ಜಾಸ್ತಿ ಆಗುತ್ತೆ..
    ಕುಂಕುಮ ಧಾರಣೆಯಿಂದ ದೈವಶಕ್ತಿ ಜಾಸ್ತಿಯಾಗುತ್ತದೆ..
    ದೃಷ್ಟಿದೋಷ ನಿವಾರಣೆ ಆಗುತ್ತದೆ..
    ಕೋಪ, ಹಠ,ಕಮ್ಮಿ ಆಗುತ್ತದೆ..
    *೩. ಸಿಂಧೂರ ದಾನ:*
    ಸತಿ ಪತಿ ಕಲಹ ನಿವಾರಣೆ.., ರೋಗಭಾಧೆ,ಋಣಭಾದೆ, ನಿವಾರಣೆ..
    ಮನೆಯಲ್ಲಿ ಸಂದೇಹ, ಒಳಜಗಳ, ಮಾಂತ್ರಿಕ ದೋಷಗಳು ನಿವಾರಣೆಯಾಗುತ್ತದೆ ..
    *೪. ಕನ್ನಡೀ(ರೂಪಲಕ್ಷ್ಮೀ) :*
    ಕನ್ನಡಿಯನ್ನು ದಾನ ಮಾಡಿದರೆ ಸಮಸ್ತ ವಾಸ್ತು ದೋಷ, ದೃಷ್ಟಿದೋಷ ನಿವಾರಣೆಯಾಗುತ್ತದೆ..
    *೫. ಬಾಚಣಿಗೆ :*
    ಬಾಚಣಿಗೆ ದಾನ ಮಾಡಿದರೆ, ತಲೆಗೆ ಸಂಭಂದಿಸಿದ ಖಾಯಿಲೆಗಳು , ಯೋಚನೆಗಳು ಕಡಿಮೆಯಾಗುತ್ತವೆ, ಮತ್ತು ರೂಪವತಿಯಾಗುತ್ತಾರೆ..
    *೬. ಕಾಡಿಗೆ :*
    ದೃಷ್ಟಿ ಆಗೋದು, ಕಣ್ಣಿನ ಕೆಳಗೆ ಕಪ್ಪಾಗೋದು ಕಮ್ಮಿಯಾಗುತ್ತದೆ..
    ಪೂರ್ಣ ಸ್ತ್ರೀ ತತ್ವ ಹೆಚ್ಚಾಗುತ್ತದೆ.‌.
    *೭. ಅಕ್ಕಿ :*
    ಯಾರು ಅಕ್ಕಿಯನ್ನು ದಾನ ಮಾಡುತ್ತಾರೋ ಅವರಿಗೆ ಮನಸ್ಸಿಗೆ ಸಂಭಂದಪಟ್ಟಂತಹ ಸರ್ವ ರೋಗಗಳು, ಯೋಚನೆಗಳು ನಿವಾರಣೆಯಾಗುತ್ತವೆ.‌
    ಆರೋಗ್ಯಭಾಗ್ಯವಾಗುತ್ತದೆ..
    ಮನೆಯಲ್ಲಿ ಕಲಹಗಳು ನಿವಾರಣೆಯಾಗುತ್ತದೆ..
    *೮. ತೊಗರಿಬೇಳೆ :*
    ತೊಗರೀಬೇಳೆ ದಾನದಿಂದ ಕುಜದೋಷ ನಿವಾರಣೆಯಾಗುತ್ತದೆ.‌.
    ವಂಶಪಾರಂಪರ್ಯವಾಗಿ ಬಂದಿರುವ ಕುಜದೋಷಗಳು , ಸರ್ಪದೋಷಗಳು ನಿವಾರಣೆಯಾಗುತ್ತದೆ..
    ರಜಸ್ವಲಾ ದೋಷಗಳು ನಿವಾರಣೆಯಾಗುತ್ತದೆ..
    ರಕ್ತದೊತ್ತಡ (B.P) (normal) ನಾರಮಲ್ ಆಗಿ ಆರೋಗ್ಯವಂತರಾಗುತ್ತಾರೆ..
    ಮನೆಯಲ್ಲಿ ಇರುವ ವಿವಾಹ ದೋಷಗಳು ನಿವಾರಣೆಯಾಗುತ್ತವೆ..
    *೯. ಉದ್ದಿನ ಬೇಳೆ :*
    ಪಿತೃಶಾಪ ನಿವಾರಣೆಯಾಗುತ್ತದೆ..
    ನೀವು ಶ್ರಾಧ್ಧಗಳಲ್ಲಿ ಮಾಡಿರುವ ತಪ್ಪುಗಳ ಫಲ ಕಡಿಮೆಯಾಗುತ್ತದೆ..
    ಅಪಮೃತ್ಯುಗಳು ನಿವಾರಣೆಯಾಗುತ್ತದೆ..
    ಅಗೋಚರ ರೋಗಗಳು ನಿವಾರಣೆಯಾಗುತ್ತದೆ..
    ಪತಿಯಲ್ಲಿರುವ ಸರ್ವ ದೋಷಗಳು ನಿವಾರಣೆಯಾಗುತ್ತವೆ..
    *೧೦. ತೆಂಗಿನಕಾಯಿ :*
    ಇಷ್ಟಾರ್ಥಸಿದ್ಧಿಯಾಗುತ್ತದೆ.. ,
    ತೆಂಗಿನಕಾಯಿ ಗೆ "ಇಷ್ಟಾರ್ಥ ಪ್ರದಾಯಿನಿ" ಅಂತನೂ ಹೆಸರಿದೆ..
    ಮಕ್ಕಳು ಸನ್ಮಾರ್ಗದಲ್ಲಿ ನಡೆಯುತ್ತಾರೆ..
    ಕಾರ್ಯಗಳು ಪೂರ್ಣಫಲ ಕೊಡಬೆರಕಾದರೆ " ತೆಂಗಿನಕಾಯಿ " ಮಾಡಲೇಬೇಕು..
    ಸರ್ವಕಾರ್ಯ ವಿಜಯವಾಗುತ್ತದೆ..
    ಆರೋಗ್ಯಭಾಗ್ಯ, ನೆಮ್ಮದಿ, ಸಂತೋಷ ದೊರೆಯುತ್ತದೆ..
    ಸರ್ವ ಸಂತಾನ ಸಮಸ್ಯೆಗಳು ನಿವಾರಣೆಯಾಗುತ್ತದೆ..
    ಉದರ ಸಂಭಂದಿ ರೋಗಗಳು ನಿವಾರಣೆಯಾಗುತ್ತದೆ..
    *೧೧. ವೀಳ್ಯದೆಲೆ :*
    ವೀಳ್ಯದೆಲೆಗೆ ದೇವತೆ "ಧನಲಕ್ಷ್ಮೀ".!
    ತಾಂಬೂಲ ದಾನವನ್ನು ಮಾಡುವದರಿಂದ ಧನಲಕ್ಷ್ಮೀ ಅನುಗ್ರಹವಾಗಿ, ಧನಪ್ರಾಪ್ತಿಯಾಗುತ್ತದೆ..
    ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾರೆ..
    ಹಣದ ಸಮಸ್ಯೆ ನಿವಾರಣೆಯಾಗುತ್ತದೆ.‌
    *೧೨. ಅಡಿಕೆ :*
    ಅಡಿಕೆಗೆ ಸಂಸ್ಕೃತದಲ್ಲಿ " ಪೂಗೀಫಲ" ಎಂದು ಹೆಸರು..
    ಅಡಿಕೆಗೆ ಅಭಿಮಾನ ದೇವತೆ "ಇಷ್ಟಲಕ್ಷ್ಮೀ"
    12 min
  • *ಶ್ರೀ ವರಮಹಾಲಕ್ಷ್ಮಿ ವ್ರತದ ಧಾರ್ಮಿಕ ಹಿನ್ನೆಲೆ*
    *ಶ್ರೀ ವರಮಹಾಲಕ್ಷ್ಮಿ ವ್ರತದ ಧಾರ್ಮಿಕ ಹಿನ್ನೆಲೆ*
    ನಮ್ಮ ಅನೇಕ ವ್ರತಗಳು ಚಾತುರ್ಮಾಸದ ನಾಲ್ಕು ತಿಂಗಳಿನಲ್ಲಿ ಬರುತ್ತವೆ. ಅದರಲ್ಲಿಯೂ ಶ್ರಾvaಣ ಮಾಸವು ಮಹತ್ತ್ವದ್ದಾಗಿದೆ. ಶ್ರಾವಣದಲ್ಲಿ ಬರುವಂತಹ ಶ್ರೀ ವರಮಹಾಲಕ್ಷ್ಮಿ ವ್ರತವು ಸುಮಂಗಲೆಯರಿಗೆ ಒಂದು ಮಹತ್ತ್ವದ ವ್ರತವಾಗಿದೆ. ಅಸುರರಿಂದ ರಕ್ಷಣೆಯಾಗಲು, ಸಕಲ ಸಂಪತ್ತು ಪ್ರಾಪ್ತವಾಗಲು ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಶಕ್ತಿಯ ಉಪಾಸನೆಯನ್ನು ಮಾಡುವುದು ಆವಶ್ಯಕವಾಗಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದರಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತವೂ ಒಂದು.
    6 min
  • ಶ್ರಾವಣ ಮಾಸದ ಪುಣ್ಯ ಪ್ರಾಪ್ತಿಯಾಗಲಿ ಸುಬ್ರಹ್ಮಣ್ಯ ಭಟ್ಟರು
    ಶ್ರಾವಣ(Shravana Masa) ಹಬ್ಬಗಳ ಮಾಸ. ಶ್ರಾವಣ ಶುರುವಾಯಿತೆಂದರೆ ಪ್ರತಿ ದಿನ ಆಧ್ಯಾತ್ಮಿಕ ಚಟುವಟಿಕೆಗಳು ಇದ್ದೇ ಇರುತ್ತವೆ. ಅದರಲ್ಲೂ ಶಿವನಿಗೆ ಅರ್ಪಿತವಾದ ಈ ಮಾಸದಲ್ಲಿ ಶಿವನ ಆರಾಧನೆಗೆ ಹೆಚ್ಚಿನ ಮಹತ್ವವಿದೆ. ಇನ್ನು ವಿವಿಧ ಸ್ಥಳಗಳಿಗೆ ಹೋದರೆ ಶ್ರಾವಣ ಆಚರಣೆ ಭಿನ್ನ ಭಿನ್ನವಾಗಿರುತ್ತೆ. ಸದ್ಯ ಇಂದು ಶ್ರಾವಣದ ಮೊದಲ ಶನಿವಾರ. ಆಗಸ್ಟ್ 13ರ ಮೊದಲ ಶ್ರಾವಣ ಶನಿವಾರದಂದು(Shravana Shanivara) ವೆಂಕಟೇಶ್ವರ, ಲಕ್ಷ್ಮಿ, ಶನಿ, ಹನುಮಾನ್ನನ್ನು ಪೂಜಿಸುವ ಪದ್ಧತಿ ಇದೆ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಶ್ರಾವಣ ಆಚರಣೆ. ಶ್ರಾವಣ ಮಾಸದ ಪುಣ್ಯ ಪ್ರಾಪ್ತಿಯಾಗಲಿ* ಬೈಂದೂರಿನ ಸುಬ್ರಹ್ಮಣ್ಯಭಟ್ಟರು ಹೇಳಿರುವುದು.
    11 min
  • A teacher one who makes to learn
    A teacher is a person who helps students to acquire knowledge, competence or virtue. The Sanskrit words ācārya and guru both have the meaning of ‘teacher’. The etymology of ācārya is not certain. It is generally supposed to derive from ācāra, right conduct, or fromācarati, to approach, to go to as for instruction, or from ācinoti, to accumulate knowledge, wealth or merit.2 Guru derives from an Indo-european word for ‘heavy’, its semantic development being from heavy to important, awesome, thus, an elder, a teacher.3 However, it is not with etymologies that we are here concerned, but with the finished product. In Sanskrit commentaries and versified texts the two words are freely interchanged, as though they were exact synonyms.4 However, the two words had separate origins, and to attribute equal semantic value to these apparently synonymous words may efface the subtle nuance attached to each.5 In the pages which follow, we shall examine briefly the passages where these words occur, bring to the light the aspects in which the two words distinguish themselves from each other, and ascertain several distinctive connotations of both words. It is with gratitude and respect toward my guru, who is at the same time a great ācārya in Indological Studies, that I here take up the Hindu concepts of teacher, and dedicate this small contribution to the guru-pūjā-kaumudī.
    3 min
  • ನಾಗರಪಂಚಮಿಯಂದು ತರಕಾರಿ ಹೆಚ್ಚುವುದು, ಭೂಮಿಯನ್ನು ಅಗೆಯುವಂತಹ ಕೃತಿಗಳನ್ನು ಏಕೆ ನಿಷೇಧಿಸಲಾಗಿದೆ ?
    ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಈ ದಿನ ಭೂಮಿಯನ್ನು ಅಗೆಯುವುದು ಕೂಡ ನಿಷೇಧಿಸಲಾಗಿದೆ. ಆದರೆ ವರ್ಷವಿಡೀ ಈ ಕೃತಿಗಳನ್ನು ಮಾಡುವುದರ ಮೇಲೆ ಯಾವುದೇ ನಿರ್ಬಂಧವಿಲ್ಲ. ಹಾಗಾದರೆ ನಾಗರಪಂಚಮಿಯಂದು ಈ ಕೃತಿಗಳನ್ನು ನಿಷೇಧಿಸಿರುವ ಕರಣ ಮತ್ತು ಅವುಗಳನ್ನು ಮಾಡುವುದರಿಂದಾಗುವ ಹಾನಿಯ ಬಗ್ಗೆ ತಿಳಿದುಕೊಳ್ಳೋಣ.
    
    ೧. ನಾಗದೇವತೆಯ ವೈಶಿಷ್ಟ್ಯಗಳು ಮತ್ತು ಕಾರ್ಯ
    ಅ. ನಾಗದೇವತೆಯು ಇಚ್ಛೆಯ ಪ್ರತೀಕ. ಇಚ್ಛೆಯ ಪ್ರವರ್ತಕ (ಅಂದರೆ ಇಚ್ಛೆಗೆ ವೇಗ ನೀಡುವ) ಮತ್ತು ಸಕಾಮ ಇಚ್ಛೆಯನ್ನು ಪೂರ್ಣಗೊಳಿಸುವ ದೇವತೆಯೂ ಹೌದು.
    ಆ. ನಾಗದೇವರು ಇಚ್ಛೆಗೆ ಸಂಬಂಧಿಸಿದ ಕನಿಷ್ಠ ದೇವತೆಯಾಗಿದ್ದರೆ.
    ೨. ಅಧ್ಯಾತ್ಮದಲ್ಲಿ ನಾಗರಪಂಚಮಿಗೆ ಇರುವ ಮಹತ್ವ
    ಅ. ನಾಗರಪಂಚಮಿಯಂದು ಸಂಬಂಧಸಿದ ತತ್ತ್ವದ ದೇವತೆಗಳಿಂದ ನಿರ್ಮಾಣವಾಗುವ ಇಚ್ಛಾ ಲಹರಿಗಳು ಭೂಮಿಯ ಮೇಲೆ ಅವತರಿಸುವುದರಿಂದ ವಾಯುಮಂಡಲದಲ್ಲಿ ನಾಗದೇವತೆಯ ತತ್ತ್ವದ ಪ್ರಮಾಣವು ಹೆಚ್ಚಿರುತ್ತದೆ.
    ಆ. ಈ ದಿನದಂದು ಭೂಮಿಯಲ್ಲಿರುವ ಇಚ್ಛಾಜನ್ಯ ದೇವತಾಸ್ವರೂಪ ಲಹರಿಗಳು ಘನವಾಗುವ ಪ್ರಮಾಣವೂ ಹೆಚ್ಚಿರುತ್ತದೆ.
    7 min
  • ಬೆಳಗ್ಗೆ ಎದ್ದ ಕೂಡಲೇ ಕರದರ್ಶನ ಮಾಡುವುದರಿಂದಾಗುವ ಸೂಕ್ಷ್ಮ ಲಾಭಗಳು
    ಎರಡೂ ಕೈಗಳಿಂದ ಬೊಗಸೆಯನ್ನು ಮಾಡುವುದರಿಂದ ಬ್ರಹ್ಮಮುದ್ರೆಯು ನಿರ್ಮಾಣವಾಗಿ, ದೇಹದಲ್ಲಿನ ಸುಷುಮ್ನಾನಾಡಿಯು ಕಾರ್ಯನಿರತವಾಗುತ್ತದೆ ಮತ್ತು ಅದರಿಂದ ರಾತ್ರಿಯ ಸಮಯ ಮಾಡಿದ ನಿದ್ರೆಯಿಂದ ದೇಹದಲ್ಲಿ ನಿರ್ಮಾಣವಾದ ತಮೋಗುಣವನ್ನು ಹೊರಹಾಕಲು ಸಹಾಯವಾಗುತ್ತದೆ: ಕೈಗಳಿಂದ ಬೊಗಸೆಯನ್ನು ಮಾಡಿ ಅದರಲ್ಲಿ ಮನಸ್ಸನ್ನು ಏಕಾಗ್ರಗೊಳಿಸಿ ‘ಕರಾಗ್ರೇ ವಸತೇ ಲಕ್ಷ್ಮೀಃ…’ ಈ ಶ್ಲೋಕವನ್ನು ಹೇಳುವುದರಿಂದ ಬ್ರಹ್ಮಾಂಡದಲ್ಲಿನ ದೇವತೆಗಳ ಲಹರಿಗಳು ಬೊಗಸೆಯತ್ತ ಆಕರ್ಷಿತವಾಗುತ್ತವೆ. ಆಕರ್ಷಿತಗೊಂಡ ದೇವತ್ವರೂಪಿ ಲಹರಿಗಳು ಬೊಗಸೆಯಲ್ಲಿಯೇ ಘನೀಕೃತವಾಗುತ್ತವೆ ಮತ್ತು ಬೊಗಸೆಯ ರೂಪದಲ್ಲಿ ತಯಾರಾದ ಟೊಳ್ಳಿನಲ್ಲಿ ಆಕಾಶದ ವ್ಯಾಪಕತ್ವವನ್ನು ಪಡೆದುಕೊಂಡು ಅಲ್ಲಿಯೇ ಸುತ್ತಾಡುತ್ತಿರುತ್ತವೆ. ಎರಡೂ ಕೈಗಳಿಂದ ಬೊಗಸೆಯನ್ನು ಮಾಡುವುದರಿಂದ ಬ್ರಹ್ಮಮುದ್ರೆಯು ತಯಾರಾಗಿ ದೇಹದಲ್ಲಿನ ಸುಷುಮ್ನಾನಾಡಿಯು ಕಾರ್ಯನಿರತವಾಗುತ್ತದೆ. ಸುಷುಮ್ನಾನಾಡಿಯು ಜೀವದ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿದೆ. ರಾತ್ರಿಯ ಸಮಯ ಮಾಡಿದ ತಮೋಗುಣೀ ನಿದ್ರೆಯಿಂದ ದೇಹದಲ್ಲಿ ತಮೋಗುಣವು ನಿರ್ಮಾಣವಾಗಿದ್ದರೆ ಸುಷುಮ್ನಾನಾಡಿಯ ಜಾಗೃತಿಯಿಂದ ಅದನ್ನು ಹೊರಹಾಕಲು ಸಹಾಯವಾಗುತ್ತದೆ.
    5 min
  • *ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ: ಮನುಷ್ಯನಿಗೆ ಸುಖ-ದುಃಖಗಳ ಅನುಭವ*
    ಗುರುಗಳು*
    ಯಾರು ಶಿಷ್ಯನ ಅಜ್ಞಾನವನ್ನು ದೂರ ಮಾಡಿ, ಅವನ ಆಧ್ಯಾತ್ಮಿಕ ಉನ್ನತಿ ಆಗಬೇಕೆಂದು ಅವನಿಗೆ ಸಾಧನೆ ಹೇಳಿ ಅದನ್ನು ಮಾಡಿಸಿಕೊಳ್ಳುತ್ತಾರೆ ಮತ್ತು ಅನುಭೂತಿ ನೀಡುತ್ತಾರೆ, ಅವರಿಗೆ ಗುರು ಎಂದು ಕರೆಯುತ್ತಾರೆ. ಶಿಷ್ಯನ ಪರಮಮಂಗಲ, ಅಂದರೆ ಮೋಕ್ಷಪ್ರಾಪ್ತಿ, ಎಂಬುದು ಅವನಿಗೆ ಕೇವಲ ಗುರುಕೃಪೆಯಿಂದಲೇ ಆಗುವುದು.
    6 min
  • ಪರೋಪಕಾರದಿಂದ ಪುಣ್ಯ ಪ್ರಾಪ್ತಿ
    ಜೀವನದಲ್ಲಿ ಎಲ್ಲರೂ ಸಹಜವಾಗಿ ಆಹಾರ, ನಿದ್ರೆ ಮಾಡುತ್ತಾ ಆಯುಷ್ಯವನ್ನು ಕಳೆದುಕೊಂಡು ಹೋಗುತ್ತಿರುತ್ತೇವೆ. ಹೀಗೆ ದಿನಗಳು ಕಳೆದು ಮುಪ್ಪು ಬಂದು ಸಾವನ್ನು ಅಪ್ಪುತ್ತೇವೆ. ಈ ಮಧ್ಯೆ ನಾವು ಧರ್ಮಾಚರಣೆಯನ್ನು ಮಾಡಿದರೆ ಪುಣ್ಯ ಲಭಿಸುತ್ತದೆ. ಇಂದಿನ ಕಲಿಯುಗದಲ್ಲಿ ದಾನ, ಪರೋಪಕಾರ ಮಾಡಿದರೆ ಧರ್ಮಾಚರಣೆ ಮಾಡಿದಂತೆ ಎಂದ ಶ್ರೀಗಳು ಗ್ರಂಥಗಳಲ್ಲೂ ಪರೋಪಕಾರದ ಬಗ್ಗೆ ಉಲ್ಲೇಖವಿದೆ. ಪರರಿಗೆ ಉಪಕಾರ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ನಮಗೆ ಹಿತವಾದಂತೆ ಇನ್ನೊಬ್ಬರಿಗೂ ಹಿತವಾಗುವಂತೆ ಮಾಡುವುದೇ ಪರೋಪಕಾರ. ಧರ್ಮಾಚರಣೆಯೂ ಕಾಲ ಕಾಲಕ್ಕೆ ಅಂದರೆ ಕ್ರತಯುಗದಲ್ಲಿ ತಪಸ್ಸು, ತ್ರೇತಾಯುಗದಲ್ಲಿ ಯಜ್ಞ, ದ್ವಾಪರಯುಗದಲ್ಲಿ ಪೂಜೆ ಹಾಗೆಯೇ ಕಲಿಯುಗದಲ್ಲಿ ದಾನ, ಪರೋಪಕಾರಕ್ಕೆ ಶ್ರೇಷ್ಠವಾದ ಮಹತ್ವವಿದೆ.
    8 min

About Dr Balakrishna Maddodi

From the publisher's feed

Hi