Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • ನವರಾತ್ರಿ 2021 5ನೇ ದಿನ: ಯಾರೀ ಸ್ಕಂದಮಾತಾ ದೇವಿ..? ಇಲ್ಲಿದೆ ಪೂಜೆ ವಿಧಾನ, ಮಂತ್ರ ಮತ್ತು ಮಹತ್ವ..!
    ನವರಾತ್ರಿಯ ಐದನೇ ದಿನದಂದು ದುರ್ಗಾ ದೇವಿಯ ಸ್ಕಂದಮಾತಾ ರೂಪವನ್ನು ಪೂಜಿಸಲಾಗುತ್ತದೆ. ಈ ಬಾರಿ ಅಕ್ಟೋಬರ್‌ 10 ರಂದು ಭಾನುವಾರ ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಮೂರ್ಖನಾದರೂ ಕೂಡ ಈಕೆಯ ಕೃಪೆಯಿಂದ ಬುದ್ಧಿವಂತನಾಗುತ್ತಾನೆ. ಸ್ಕಂದಮಾತಾ ಪರ್ವತಗಳಲ್ಲಿ ವಾಸಿಸುವ ಮೂಲಕ ಲೌಕಿಕ ಜೀವಿಗಳಲ್ಲಿ ಹೊಸ ಪ್ರಜ್ಞೆಯನ್ನು ಸೃಷ್ಟಿಸಿದಂತಹ ದೇವತೆ. ಸ್ಕಂದ ಕುಮಾರ ಕಾರ್ತಿಕೇಯನ ತಾಯಿಯಾಗಿರುವುದರಿಂದ ಆಕೆಯನ್ನು ಸ್ಕಂದಮಾತೆ ಎಂದೂ ಕರೆಯುತ್ತಾರೆ. ಅವಳನ್ನು ಪೂಜಿಸುವ ಮೂಲಕ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಭಕ್ತನಿಗೆ ಮೋಕ್ಷ ಸಿಗುತ್ತದೆ. ಅದೇ ಸಮಯದಲ್ಲಿ, ಅವರನ್ನು ಪೂಜಿಸುವುದರಿಂದ ಸಂತಾನ ಭಾಗ್ಯವೂ ದೊರೆಯುತ್ತದೆ ಎನ್ನುವ ನಂಬಿಕೆಯಿದೆ. ನವರಾತ್ರಿಯ ಐದನೇ ದಿನದ ಪೂಜೆಯ ವಿಧಾನ, ವ್ರತ ಕಥೆ, ಆರತಿ, ಮಂತ್ರ ಹೀಗಿದೆ
    7 min
  • ಕೂಷ್ಮಾಂಡ ದೇವಿಯ ಆರಾಧನೆಯಿಂದ ಸಂಪತ್ತು, ಆರೋಗ್ಯ; ನವರಾತ್ರಿಯ ನಾಲ್ಕನೇ ದಿನ ಈಕೆಯನ್ನು ಪೂಜಿಸಿ
    ಕೂಷ್ಮಾಂಡ ದೇವಿಯ ಕತೆ
    ಸೃಷ್ಟಿಯ ಅಸ್ತಿತ್ವವೇ ಇಲ್ಲದಿರುವಾಗ ಎಲ್ಲೆಡೆ ಅಂಧಕಾರವೇ ಪಸರಿಸಿತ್ತು. ಆಗ ಇದೇ ದೇವಿಯು ತನ್ನ 'ಈಶತ್‌' ಹಾಸ್ಯದಿಂದ ಬ್ರಹ್ಮಾಂಡವನ್ನು ಸೃಷ್ಟಿಸುತ್ತಾಳೆ. ಆದ್ದರಿಂದ ಇವಳೇ ಸೃಷ್ಟಿಯ ಆದಿ- ಸ್ವರೂಪ ಶಕ್ತಿಯಾಗಿದ್ದಾಳೆ. ಈಕೆಯು ಸೂರ್ಯನ ಸ್ಥಾನದಲ್ಲಿ ನಿಲ್ಲು ಕಾರಣದಿಂದಾಗಿ ಭೂಮಿಯ ಮೇಲಿರುವ ಅಂಧಕಾರವನ್ನೆಲ್ಲಾ ನಿವಾರಣೆ ಮಾಡುತ್ತಾಳೆ. ಕೂಷ್ಮಾಂಡ ದೇವಿಯು ಸೂರ್ಯನಿಗೆ ಅಧಿಪತಿಯಾಗಿರುವ ಕಾರಣ ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಜಾತಕದಲ್ಲಿ ಸೂರ್ಯನಿಂದಾಗುವ ಕೆಡುಕನ್ನು ನಿವಾರಿಸಬಹುದು. ಜೊತೆಗೆ ಎಲ್ಲಾ ರೀತಿಯ ಸಂಕಷ್ಟಗಳೂ ನಿವಾರಣೆಯಾಗುವವು.
    8 min
  • *ನವರಾತ್ರಿಯ (Navratri) ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ.*
    *ನವರಾತ್ರಿಯ (Navratri) ಮೂರನೇ ದಿನ ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತದೆ.* ಈಕೆ ಪಾರ್ವತಿ (Parvathy), ಶಿವನ ಪತ್ನಿ, ದುರ್ಗೆಯ ಹಲವು ಸ್ವರೂಪಗಳಲ್ಲಿ ಒಬ್ಬಳು ಹಾಗೂ ದುರ್ಗಾಮಾತೆಯ ವೈವಾಹಿಕ ಅವತಾರ. ದುರ್ಗಾ ಮಾತೆಯ ರೌದ್ರಸ್ವರೂಪಳಾಗಿರುವವಳು ಈಕೆ. ದುಷ್ಟಶಕ್ತಿಗಳಿಗೆ ಈಕೆ ಸಿಂಹಸ್ವಪ್ನ. ಆದರೆ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿ.
    ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನು ಮಸ್ತಕದಲ್ಲಿ ಧರಿಸಿದವಳು. ಚಂದ್ರಘಂಟೆಯ ಮೂರನೇ ಕಣ್ಣು ಸದಾ ತೆರೆದೇ ಇರುತ್ತದೆ. ಯಾವುದೇ ಸಮಯದಲ್ಲಿಯೂ ದುಷ್ಟ ಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ. ಚಂದ್ರಘಂಟೆಯನ್ನು ಚಂದ್ರಿಕಾ, ರಣಚಂಡಿ ಎಂದೂ ಕರೆಯುತ್ತಾರೆ. ಇವಳಿಗೆ ಹತ್ತು ಕೈಗಳಿದ್ದು, ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನು ಹಿಡಿದುಕೊಂಡು ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ.
    5 min
  • ಬ್ರಹ್ಮಚಾರಿಣಿ ದೇವಿ ಮಂತ್ರ ಬ್ರಹ್ಮಚಾರಿಣಿ ದೇವಿ ಪೂಜೆ
    ಹಿಂದೂಗಳ ಶುಭ ಹಬ್ಬವಾದ ಶಾರದಿಯಾ ನವರಾತ್ರಿಯು ಅಕ್ಟೋಬರ್ 7 ರಿಂದು ಅಂದರೆ ಇಂದಿನಿಂದ ಆರಂಭವಾಗಿದೆ. ಈ ಹಬ್ಬದ ಸಮಯದಲ್ಲಿ, ಪ್ರತಿ ದಿನ, ದುರ್ಗಾದೇವಿಯ 9 ಅವತಾರಗಳಲ್ಲಿ ಒಂದೊಂದು ರೂಪವನ್ನು ಪ್ರತಿದಿನ ಪೂಜಿಸಲಾಗುತ್ತದೆ. ನವರಾತ್ರಿಯ ಮೊದಲ ದಿನ ಶೈಲಪುತ್ರಿ ದೇವಿಯನ್ನು ಪೂಜಿಸಿದರೆ, ನವರಾತ್ರಿಯ ಎರಡನೇ ದಿನವಾದ ಅಕ್ಟೋಬರ್‌ 8 ರಂದು ಅಂದರೆ ನಾಳೆ ಬ್ರಹ್ಮಚಾರಿಣಿ ದೇವಿಗೆ ಅರ್ಪಿತವಾಗಿದ್ದು, ಆಕೆ ಶುದ್ಧತೆಯ ಪ್ರತೀಕವಾಗಿದ್ದಾಳೆ. ಬ್ರಹ್ಮಚಾರಿಣಿ ದೇವಿಯು ಬುದ್ಧಿವಂತಿಕೆಯಿಂದ ತುಂಬಿದ ಕನ್ಯೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಅವಳು ತನ್ನ ಕೈಯಲ್ಲಿ ಜಪಮಾಲೆ ಮತ್ತು ಕಮಂಡಲವನ್ನು ಹಿಡಿದಿದ್ದಾಳೆ. ಅವಳು ಭಕ್ತರನ್ನು ಶಾಶ್ವತ ಜ್ಞಾನ ಮತ್ತು ಆನಂದದಿಂದ ಆಶೀರ್ವದಿಸುತ್ತಾಳೆ. ಬ್ರಹ್ಮಚಾರಿಣಿ ಎಂಬ ಪದದ ಅರ್ಥ ಅವಿವಾಹಿತೆ. ಬ್ರಹ್ಮಚಾರಿಣಿಯ ಸೌಹಾರ್ದಯುತ ಮತ್ತು ಶಾಂತಿಯುತ ರೂಪವು ಮನಸ್ಸಿನಲ್ಲಿ ಪ್ರಶಾಂತತೆ ಮತ್ತು ಶಾಂತತೆಯನ್ನು ತರುತ್ತಾಳೆ ಮತ್ತು ಜನರಲ್ಲಿ ಹೆಚ್ಚಿನ ಮಟ್ಟದ ಆತ್ಮವಿಶ್ವಾಸವನ್ನು ತುಂಬುತ್ತಾಳೆ.
    8 min
  • ನವರಾತ್ರಿಯಲ್ಲಿ ಒಂಬತ್ತು ದಿನ ಕುಮಾರಿಪೂಜೆ ಮಾಡಬೇಕು -
    ೧೨ ವರ್ಷದ ಅವಿವಾಹಿತ ಕನ್ಯೆಗೆ ಕುಮಾರಿ ಎನ್ನುತ್ತಾರೆ. ಅವಳ ಸ್ಮೃತ್ಯುಕ್ತ ಲಕ್ಷಣಗಳು ಹೀಗಿವೆ –
    ಅಷ್ಟವರ್ಷಾ ಭವೇದ್ ಗೌರಿ ದಷವರ್ಷಾ ಚ ಕನ್ಯಕಾ|
    ಸಂಪ್ರಾಪ್ತೇ ದ್ವಾದಶೇ ವರ್ಷೇ ಕುಮಾರೀತ್ಯಭಿದೀ ಯತೇ||
    ಅರ್ಥ: ಹುಡುಗಿಗೆ ೮ನೇ ವರ್ಷದಲ್ಲಿ ‘ಗೌರಿ’, ೧೦ನೇ ವರ್ಷದಲ್ಲಿ ‘ಕನ್ಯಾ’ ಮತ್ತು ೧೨ನೇ ವರ್ಷವು ಪ್ರಾರಂಭವಾದಾಗ ‘ಕುಮಾರಿ’ ಎನ್ನುತ್ತಾರೆ.
    ಪ್ರಾಚೀನ ಕಾಲದಲ್ಲಿ ಕೆಲವು ಸ್ತ್ರೀಯರು ಆಜನ್ಮ ಅವಿವಾಹಿತರಾಗಿರುತ್ತಿದ್ದರು. ಅವರ ಪ್ರೌಢ ಅಥವಾ ವೃದ್ಧ ವಯಸ್ಸಿನಲ್ಲಿಯೂ ಅವರನ್ನು ಕುಮಾರಿ ಎಂದೇ ಕರೆಯುತ್ತಿದ್ದರು; ಇದು ಅಷ್ಟಾಧ್ಯಾಯಿಯಿಂದ ತಿಳಿಯುತ್ತದೆ, ಉದಾ. ವೃದ್ಧ ಕುಮಾರಿ, ಜರತ್ಕುಮಾರಿ. (ಅಷ್ಟಾಧ್ಯಾಯಿ, ೬.೨.೯೫)
    ಕುಮಾರಿಪೂಜೆ ಏಕೆ ಮಾಡುತ್ತಾರೆ ?
    ಮುತ್ತೈದೆಯರು ದೇವಿಯ ಪ್ರಕಟ ಶಕ್ತಿಯ ಪ್ರತೀಕವಾಗಿದ್ದು ಕುಮಾರಿಯರು ದೇವಿಯ ಅಪ್ರಕಟ ಶಕ್ತಿಯ ಪ್ರತೀಕವಾಗಿದ್ದಾರೆ. ಪ್ರಕಟ ಶಕ್ತಿಯಲ್ಲಿ ಶಕ್ತಿಯು ಸ್ವಲ್ಪ ಪ್ರಮಾಣದಲ್ಲಿ ಅಪವ್ಯಯವಾಗುವುದರಿಂದ ಮುತ್ತೈದೆಯರ ಬದಲು ಕುಮಾರಿಯರಲ್ಲಿ ಶಕ್ತಿಯು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.
    ಕುಮಾರಿಪೂಜೆ ಹೇಗೆ ಮಾಡಬೇಕು ?
    ನವರಾತ್ರಿಯಲ್ಲಿ ಒಂಬತ್ತು ದಿನ ಪ್ರತಿಯೊಂದು ದಿನ ಒಬ್ಬಳಿಗೆ ಅಥವಾ ಮೊದಲ ದಿನ ಒಬ್ಬಳಿಗೆ, ಎರಡನೇ ದಿನ ಇಬ್ಬರಿಗೆ, ಒಂಬತ್ತನೇ ದಿನ ಒಂಬತ್ತು ಕುಮಾರಿಯರಿಗೆ, ಹೀಗೆ ಏರಿಕೆ ಕ್ರಮದಲ್ಲಿ ಭೋಜನವನ್ನು ನೀಡಬೇಕೆಂಬ ವಿಧಾನವಿದೆ. ಎರಡರಿಂದ ಹತ್ತು ವರ್ಷಗಳ ವಯಸ್ಸಿನ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸುತ್ತಾರೆ. ಪ್ರತಿಯೊಂದು ವರ್ಣದವರೂ ತಮ್ಮ ತಮ್ಮ ವರ್ಣದ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸಬೇಕಾಗಿರುತ್ತದೆ. ‘ಅವಳು ನಿರ್ದೋಷ, ನಿರೋಗಿ ಮತ್ತು ಅವ್ಯಂಗಳಾಗಿರಬೇಕು’ ಎಂದೂ ಹೇಳಲಾಗಿದೆ. ದೇವೀಪೂಜೆಯಾದ ನಂತರ ಕುಮಾರಿಯ ಪೂಜೆಯನ್ನು ಮಾಡುತ್ತಾರೆ. ಮೊದಲು ಮುಂದಿನ ಮಂತ್ರದಿಂದ ಅವಳ ಆವಾಹನೆಯನ್ನು ಮಾಡುತ್ತಾರೆ.
    ಮಂತ್ರಾಕ್ಷರಮಯೀಂ ಲಕ್ಷ್ಮೀಂ ಮಾತೃಣಾಂ ರೂಪ ಧಾರಿಣೀಮ್|
    ನವದುರ್ಗಾತ್ಮಿಕಾಂ ಸಾಕ್ಷಾತ್ ಕನ್ಯಾಮಾವಾಹ ಯಾಮ್ಯಹಮ್||
    ಅರ್ಥ: ಮಂತ್ರಾಕ್ಷರಮಯ, ಲಕ್ಷ್ಮೀ ಸ್ವರೂಪ, ಮಾತೃಕೆಗಳ ರೂಪವನ್ನು ಧರಿಸುವ ಹಾಗೂ ಸಾಕ್ಷಾತ್ ನವ ದುರ್ಗಾತ್ಮಿಕೆಯಾಗಿರುವಂತಹ ಕನ್ಯೆಯನ್ನು ನಾನು ಆವಾಹನೆ ಮಾಡುತ್ತೇನೆ.
    ಮೊದಲು ಕುಮಾರಿಯ ಕಾಲುಗಳನ್ನು ತೊಳೆಯುತ್ತಾರೆ, ಅವಳನ್ನು ಸುಶೋಭಿತ ಚೌರಂಗದ ಮೇಲೆ (ಎತ್ತರವಾದ ಮರದ ಮಣೆಯ ಮೇಲೆ) ಕೂರಿಸುತ್ತಾರೆ, ಗಂಧ, ಪುಷ್ಪ, ಲಂಗ-ರವಿಕೆ ಕೊಡುತ್ತಾರೆ ಮತ್ತು ಅವಳ ಕೊರಳಿನಲ್ಲಿ ಹೂಮಾಲೆಯನ್ನು ಹಾಕುತ್ತಾರೆ. ಅವಳಿಗೆ ಪಂಚಾಮೃತ ಮತ್ತು ಮೃಷ್ಠಾನ್ನವನ್ನು ಸಮರ್ಪಿಸುತ್ತಾರೆ. ನಂತರ ಅವಳಿಗೆ ನಮಸ್ಕಾರ ಮಾಡುತ್ತಾರೆ.’ ಶಾಕ್ತ ತಂತ್ರದಲ್ಲಿ ಕುಮಾರಿಪೂಜೆಗೆ ವಿಶೇಷ ಮಹತ್ವವಿದೆ.
    4 min
  • ನವರಾತ್ರಿಯ ಮೊದಲ ದಿನ ಪೂಜೆಗೊಳ್ಳುವ ದುರ್ಗಾದೇವಿಯ ಅವತಾರ ಎಂದರೆ ಶೈಲಪುತ್ರಿ*.
    *ನವರಾತ್ರಿಯ ಮೊದಲ ದಿನ ಪೂಜೆಗೊಳ್ಳುವ ದುರ್ಗಾದೇವಿಯ ಅವತಾರ ಎಂದರೆ ಶೈಲಪುತ್ರಿ*. ಈಕೆಯ ಬಗ್ಗೆ ಇರುವ ಮನೋಹರವಾದ ಕತೆ ಹಾಗೂ ಈಕೆಯನ್ನು ಪೂಜಿಸುವ ಕ್ರಮವನ್ನು ಈಗ ತಿಳಿಯೋಣ.
    ಆಶ್ವಯುಜ ಮಾಸದ ಶುಕ್ಲ ಪಾಡ್ಯಮಿಯಿಂದ ದಶಮಿಯವರೆಗೂ ಒಂಭತ್ತು ದಿನಗಳ ಕಾಲ ಆಚರಿಸಲ್ಪಡುವ ಹಬ್ಬವೇ ನವರಾತ್ರಿ (Navratri). ನವರಾತ್ರಿಯ ಈ ದಿನಗಳಲ್ಲಿ ದುರ್ಗಾಮಾತೆಯನ್ನು ನವ ಅವತಾರಗಳಲ್ಲಿ ಪೂಜಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ (Tradition). ಒಂಬತ್ತು ದಿನಗಳಲ್ಲಿ ಮೊದಲ ದಿನ ಪೂಜಿಸುವ ಶಕ್ತಿ ದೇವಿಯ ಮೊದಲ ಅವತಾರವೇ ಶೈಲಪುತ್ರಿ. ಶ್ವೇತ (White) ವಸ್ತ್ರದಲ್ಲಿರುವ ಶೈಲಪುತ್ರಿಯು ಶಾಂತಿಯುತವಾದ ನಡವಳಿಕೆಯನ್ನು ಬೆಳೆಸಿಕೊಳ್ಳಲು ಪ್ರೇರಣೆಯಾಗಿದ್ದಾಳೆ. ಶೈಲ ಎಂದರೆ ಪರ್ವತ (Mountain). ಈಕೆ ಪರ್ವತರಾಜನ ಮಗಳು. ಪರ್ವತ ಎಂದರೆ ಪ್ರಕೃತಿ (Nature). ಪ್ರಕೃತಿಯೇ ತಾನಾಗುವ ಹೆಣ್ಣಿನ ಗುಣ, ಪ್ರಕೃತಿಯನ್ನು ಪ್ರೀತಿಸಿ, ಪೂಜಿಸುವ, ಶುದ್ಧವಾಗಿರಿಸಿಕೊಳ್ಳಿರೆಂದು ಸೂಚಿಸುವ ಗುಣವನ್ನು ಈಕೆಯಲ್ಲಿ ಕಾಣಬಹುದು.
    ಶೈಲ ಪುತ್ರಿಯ ಕತೆ
    ಪರ್ವತರಾಜ ಹಿಮವಂತನ ಪುತ್ರಿಯೇ ಶೈಲಪುತ್ರಿ. ಈ ದೇವಿಯ ಅವತಾರದ ಹಿಂದೆ ಒಂದು ಕಥೆ ಇದೆ. ಪ್ರಜಾಪತಿ ಬ್ರಹ್ಮನ ಮಗನಾದ ದಕ್ಷ ತನ್ನ 27 ಪುತ್ರಿಯರನ್ನು ಚಂದ್ರನಿಗೆ ಮದುವೆ ಮಾಡಿ ಕೊಟ್ಟಿದ್ದ. ಉಳಿದವರಲ್ಲಿ ಒಬ್ಬಳಾದ ದಾಕ್ಷಾಯಿಣಿ ಶಿವನನ್ನು ಪ್ರೀತಿಸಿ ವರಿಸಿದಳು. ದಕ್ಷ ಮಹಾರಾಜನಿಗೆ ಅಳಿಯ ಶಿವನನ್ನು ಕಂಡರೆ ಆಗುತ್ತಿರಲಿಲ್ಲ. ಸ್ಮಶಾನದಲ್ಲಿ ವಾಸ ಮಾಡುವ, ಕುತ್ತಿಗೆಯಲ್ಲಿ ನಾಗರ ಹಾವನ್ನು ಸುತ್ತಿಕೊಂಡಿರುವ ಶಿವನಿಗಿಂತ, ಚೆಲುವೆಯಾಗಿರುವ ತನ್ನ ಮಗಳಿಗೆ ಉತ್ತಮ ವರ ಸಿಗುತ್ತಿದ್ದ ಎಂದು ಹೇಳಿಕೊಳ್ಳುತ್ತಿದ್ದ.
    ಪ್ರಜಾಪತಿ ಬ್ರಹ್ಮನು ಆಯೋಜಿಸಿದ್ದ ಒಂದು ಯಜ್ಞವೇದಿಕೆಯಲ್ಲಿ ಶಿವನು ಅಧ್ಯಕ್ಷನಾಗಿದ್ದ. ಅಲ್ಲಿಗೆ ದಕ್ಷ ಆಗಮಿಸಿದ. ಆಗ ಬ್ರಹ್ಮ ಮತ್ತು ಶಿವ ಬಿಟ್ಟು ಉಳಿದವರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಇದರಿಂದ ದಕ್ಷ ಕೆರಳಿದ. ಶಿವ ಬೇಕೆಂದೇ ತನಗೆ ಗೌರವ ನೀಡದೆ ಅವಮಾನಿಸಿದ ಎಂದು ಕನಲಿ ಕೆಂಡವಾದ. ಇದಕ್ಕೆ ಪ್ರತೀಕಾರವೆಂಬಂತೆ ದಕ್ಷನು ಶಿವನಿಗೆ ಅವಮಾನ ಮಾಡಬೇಕೆಂದು ಇನ್ನೊಂದು ಯಜ್ಞವನ್ನು ಆಯೋಜಿಸಿದ. ಆದರೆ ಮಗಳು ದಾಕ್ಷಾಯಿಣಿ ಹಾಗೂ ಅಳಿಯ ಶಿವನಿಗೆ ಆಹ್ವಾನ ನೀಡದೇ ಉಳಿದ ಎಲ್ಲಾ ಮಕ್ಕಳಿಗೂ ಆಹ್ವಾನ ನೀಡಿದ್ದ.
    ತಂದೆಯು ಯಾಗವನ್ನು ಆಯೋಜಿಸಿರುವುದನ್ನು ತಿಳಿದ ದಾಕ್ಷಾಯಿಣಿ ಶಿವನೊಂದಿಗೆ 'ಈ ಕಾರ್ಯಕ್ರಮದಲ್ಲಿ ಭಾಗಿಯಾಗೋಣ' ಎಂದು ಒತ್ತಾಯಿಸಿದಳು. ಆದರೆ ಶಿವ, ಆಹ್ವಾನವಿಲ್ಲದೆ ಹೋಗುವುದ ಸರಿಯಲ್ಲ ಎನ್ನುತ್ತಾನೆ. ತಂದೆಯ ಮನೆಗೆ ಹೋಗು ನನಗೆ ಆಹ್ವಾನ ಬೇಕಾಗಿಲ್ಲ ಎಂದು ವಾದಿಸಿದ ದಾಕ್ಷಾಯಿಣಿ, ಶಿವನು ಜೊತೆಗಿಲ್ಲದೆ ದಕ್ಷಯಜ್ಞಕ್ಕೆ ಹೋಗುತ್ತಾಳೆ. ಆದರೆ ದಕ್ಷನು ಯಾಗಕ್ಕೆ ಬಂದ ಮಗಳನ್ನು ನೋಡಿಯೂ ನೋಡದಂತೆ ಮಾಡಿ, ಉಳಿದವರೂ ಆಕೆಯನ್ನು ನಿರ್ಲಕ್ಷಿಸುವಂತೆ ಮಾಡಿ ಅವಮಾನಿಸುತ್ತಾನೆ. ಶಿವನನ್ನೂ ಅವಮಾನಿಸುವ ಕ್ರಿಯೆಗಳನ್ನು ಯಜ್ಞದಲ್ಲಿ ಮಾಡುತ್ತಾನೆ. ಎಲ್ಲರ ಮುಂದೆ ಪತಿಗೆ ಆದ ಅವಮಾನವನ್ನು ಸಹಿಸದ ದಾಕ್ಷಾಯಿಣಿಯು ಮುಂದಿದ್ದ ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡುತ್ತಾಳೆ.
    ಹೀಗೆ ತನ್ನ ಶರೀರವನ್ನು ಭಸ್ಮವಾಗಿಸಿದ ದಾಕ್ಷಾಯಿಣಿ ಮುಂದಿನ ಜನ್ಮದಲ್ಲಿ ಹಿಮವಂತನ ಪುತ್ರಿಯಾಗಿ ಜನಿಸುತ್ತಾಳೆ. ಇವಳೇ ಶೈಲ ಪುತ್ರಿ. ಮತ್ತೆ ಶಿವನ ಮಡದಿ 'ಸತಿ'ಯಾಗಿ ಹೆಸರು ಪಡೆಯುತ್ತಾಳೆ. ಮದುವೆಯಾದ ಬಳಿಕ ಶಿವ ಪತ್ನಿಗೆ ವರ್ಷದಲ್ಲಿ 10 ದಿನ ಮಾತ್ರ ತವರು ಮನೆಗೆ ತೆರಳಲು ಅನುಮತಿ ನೀಡುತ್ತಾನೆ. ಅದರಂತೆ ಈಗಲೂ ದಸರಾ ಸಮಯದಲ್ಲಿ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಆಮಂತ್ರಿಸಿ ಗೌರವಿಸುವ ಸಂಪ್ರದಾಯವಿದೆ.
    ಶೈಲಪುತ್ರಿಯ ಸ್ವರೂಪಚಿಂತನೆ
    ಶೈಲಪುತ್ರಿಯನ್ನು ಆದಿಶಕ್ತಿಯೆಂದು ಗುರುತಿಸಲಾಗುತ್ತದೆ. ಆಕೆಯು ಗೂಳಿಯ ಮೇಲೆ ಸವಾರಿ ಮಾಡುತ್ತಿದ್ದ ಕಾರಣ ವೃಷರುಧ ಎಂದೂ ಕರೆಯಲಾಗುತ್ತದೆ. ಶೈಲಪುತ್ರಿಯು ಮನೋಕಾರಕನಾದ ಚಂದ್ರನನ್ನು ತನ್ನ ಮಸ್ತಿಷ್ಕದ ಮೇಲೆ ಧರಿಸಿದ್ದಾಳೆ. ತಮೋಗುಣದ ಸಂಕೇತವಾದ ತ್ರಿಶೂಲವನ್ನು ತನ್ನ ಬಲಗೈಯಲ್ಲಿ ಧಾರಣೆ ಮಾಡಿದ್ದಾಳೆ. ಶ್ವೇತ ವಸ್ತ್ರಧಾರಿಯಾಗಿರುವ ಶೈಲ ಪುತ್ರಿಯು ಮಲ್ಲಿಗೆ ಪ್ರಿಯಳು.
    ಶೈಲಪುತ್ರಿಯ ರೂಪವೂ ನಾವು ಪಾಲಿಸಬೇಕಾದ ಬದುಕಿನ ತತ್ವವನ್ನು ಸೂಚಿಸುತ್ತದೆ. ಶ್ವೇತ ವಸ್ತ್ರದಲ್ಲಿರುವ ಆಕೆ ಶಾಂತಿಯುತವಾದ ನಡವಳಿಕೆಯನ್ನು ಬೆಳೆಸಿಕೊಳ್ಳಲು ಪ್ರೇರಣೆಯಾಗಿದ್ದಾಳೆ. ಪರ್ವತರಾಜನ ಮಗಳಾಗಿ ಪರ್ವತ ಎಂದರೆ ಪ್ರಕೃತಿಯನ್ನು ಪ್ರೀತಿಸಿ, ಶುದ್ಧವಾಗಿರಿಸಿಕೊಳ್ಳಿರೆಂದು ಸೂಚಿಸುವಳು. ಗೂಳಿಯ ಮೇಲೆ ಕುಳಿತಿರುವ ಮೂಲಕ ಮೂಕಪ್ರಾಣಿಗಳು ದೇವ- ದೇವತೆಯರ ವಾಹನವಾಗಿದ್ದು ಅವನ್ನು ಹಿಂಸಿಸಬಾರದೆಂಬುದರ ಸಂಕೇತ. ಒಂದು ಕೈಯಲ್ಲಿರುವ ತ್ರಿಶೂಲ ತಾಪತ್ರಯಗಳ ನಿವಾರಣೆಯ ಸೂಚಕ ಮತ್ತು ನಮ್ಮ ಮನಸ್ಸು ದುಷ್ಟತನದತ್ತ ದೃಷ್ಟಿ ಹಾಯಿಸಬಾರದು, ಅದರಿಂದ ಶೂಲದಂತಹ ಅಸ್ತ್ರದಿಂದ ನಮ್ಮನ್ನು ನಾವೇ ಇರಿದುಕೊಂಡಂತೆ ಎಂಬುದನ್ನು ಸಾರುತ್ತದೆ. ಇನ್ನೊಂದು ಕೈಯಲ್ಲಿರುವ ಕಮಲವು ಕೋಮಲವಾದ ಎಸಳುಗಳುಳ್ಳ, ನೀರಿನಲ್ಲಿ ಅರಳುವ ಸುಂದರ ಹೂವು. ವಿನಯ ಮತ್ತು ತಾಳ್ಮೆಯ ಸಂಕೇತ (Symbol of Patience). ತಿಳಿಯಾದ ಮನಸ್ಸಿನಲ್ಲಿ ತಳಮಳವಿರುವುದಿಲ್ಲ. ದೇವೀ ರೂಪಗಳು ಹೆಣ್ಣಿನ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.
    ಉಪನಿಷತ್ತಿನ ಪ್ರಕಾರ ಶೈಲಪುತ್ರಿಯು ದೇವತೆಗಳ ಮನೋಭಾವನೆಯನ್ನು ನಿಯಂತ್ರಿಸುತ್ತಾಳೆ. ಇದರಿಂದ ಇಂದ್ರಾದಿ ದೇವತೆಗಳು ಆಕೆಯ ಮುಂದೆ ಶರಣಾಗುತ್ತಾರೆ. ದೇವಿ ಶೈಲಪುತ್ರಿ ಸಹನೆಯ ಪ್ರತೀಕಳಾಗಿದ್ದಾಳೆ. ಮೂಲಧಾರ ಚಕ್ರದಲ್ಲಿ ಯೋಗಿನಿಯಾಗಿ ನೆಲೆಗೊಂಡಿದ್ದಾಳೆ. ಮೂಲಾಧಾರ ಚಕ್ರವು ಬೆನ್ನು ಹುರಿಯ ಕೆಳಗಿದ್ದು ಸುಪ್ತ ಚೈತನ್ಯದ ಮೂಲ ಬಿಂದುವಾಗಿದ್ದು ಕುಂಡಲಿನಿ ಶಕ್ತಿಯ ಜಾಗೃತ ಸ್ಥಾನವಾಗಿದೆ.
    ಶೈಲಪುತ್ರಿಯ ಪೂಜೆ ಹೇಗೆ?
    ನವರಾತ್ರಿ ಪೂಜೆಯ ಸಂದರ್ಭದಲ್ಲಿ ಯೋಗಸಾಧಕರು ನವರಾತ್ರಿಯ ಮೊದಲ ದಿನ ಮೂಲಾಧಾರ ಚಕ್ರದ ಮೇಲೆ ಗಮನವಿಟ್ಟು ಧ್ಯಾನ ಮಾಡುತ್ತಾರೆ. ಅಧ್ಯಾತ್ಮ ಸಾಧನಾ ಕ್ರಮದಲ್ಲಿ ಅದುವೇ ಮೊದಲ ಹೆಜ್ಜೆ.
    10 min
  • *ಹಿಂದಿನ ಹಿರಿಯರ ಹಿತ ನುಡಿ ಕಡಿಗಣಿಸದೆ ಪಾಲಿಸುವುದು ಉತ್ತಮ* 🙏🏻🙏🏻
    *ಹಿರಿಯರು ಹೇಳಿಕೊಟ್ಟ ಊಟದ ಕಲೆಯ ನಿಯಮಗಳು **
    1) ಕಾರೆ ಸೊಪ್ಪನ್ನು ತಿಂದರೂ ಕಾಯಕದಿಂದಲೇ ಗಳಿಸಿರಬೇಕು. ....
    2) ಊಟಕ್ಕೆ ಕುಳಿತುಕೊಳ್ಳುವ ಮೊದಲು ಕುಳಿತುಕೊಳ್ಳುವ ಜಾಗ ಶುಚಿಯಾಗಿರಬೇಕು…..
    3) ಬಾಯಿ ಮುಕ್ಕಳಿಸಿ ಶುಚಿಯಾಗಿ ಕೈತೊಳೆದುಕೊಳ್ಳಬೇಕು....
    4) ಗುರುನಾಮ ಸ್ಮರಣೆ ಮಾಡಿ ನೆಲದ ಮೇಲೆಯೇ ಚಕ್ಕಂಬಕ್ಕಾಲು ಹಾಕಿ ಕುಳಿತುಕೊಳ್ಳಬೇಕು.....
    5) ಊಟಕ್ಕೆ ಕುಳಿತಾಗ ನೆತ್ತಿಯ ಮೇಲೆ ಪೇಟ - ಪಟಗಾ ಸುತ್ತಿರುವುದಾಗಲೀ…. ಟೋಪಿಯಾಗಲೀ ಇರಬಾರದು….
    6) ಕರವಸ್ತ್ರವಾಗಲೀ ಒಲ್ಲಿ ಟವಲ್ ಆಗಲೀ ನಿಮ್ಮ ಜೊತೆಗಿರಬೇಕು……
    6) ಊಟದೆಲೆ ಅಥವಾ ತಟ್ಟೆ ಈಗಾಗಲೇ ಶುಚಿಯಾಗಿಟ್ಟಿದ್ದರೂ ಮತ್ತೊಮ್ಮೆ ಕೊಂಚ ನೀರಿನಲ್ಲಿ ತೊಳೆಯಬೇಕು. …
    7) ಊಟಕ್ಕೆ ಕುಳಿತಾಗ ಪಾದರಕ್ಷೆಗಳನ್ನು ಧರಿಸಿರಬಾರದು…..
    8) ಊಟ ಮಾಡುವ ವೇಳೆಯಲ್ಲಿ ಕಸ ಗುಡಿಸಬಾರದು…… ಒಂದೇ ಸಮನೆ ದಿಟ್ಟಿಸಬಾರದು….
    9) ಯಾರೊಬ್ಬರೂ ಅತ್ತಿಂದಿತ್ತ ಅಡ್ಡಕಸುಬಿ ಓಡಾಡಬಾರದು…..
    10) ಕುಡಿಯುವ ನೀರು ತುಂಬಿದ ಚೆಂಬು -ಲೋಟ ಪಕ್ಕದಲ್ಲಿರಬೇಕು,….
    11) ಗಂಟಲು ಮೇಲೆತ್ತಿ ಲೋಟದಲ್ಲಿಯೇ ನೀರು ಕುಡಿಯಬೇಕು,…. ಕಚ್ಚಿ ಕುಡಿಯಬಾರದು……
    12) ನಾಯಿಮರಿ ಅಥವಾ ನಮ್ಮ ಜೀವಿಗಳಿಗಾಗಿ ಮೊದಲು ಒಂದು ತುತ್ತು ತೆಗೆದಿರಿಸಬೇಕು.....
    13) ಊಟದ ವೇಳೆಗೆ ಯಾರಾದರೂ ಬಳಿಗೆ ಬಂದರೆ ಮೊದಲು ಅವರಿಗೆ ಊಟ ನೀಡಲು ಆದ್ಯತೆ ಕೊಡಬೇಕು...
    14) ನೀರು ಅಥವಾ ಸಾರಿನಲ್ಲಿ ಒಮ್ಮೆ ಅಂಗೈ ತೇವ ಮಾಡಿಕೊಳ್ಳಬೇಕು…..
    15) ಅಂಗೈ ಮುಂಗೈ ಮೂತಿಗಳಿಗೆ ಅನ್ನ - ಮುದ್ದೆ ಅಥವಾ ತಿನ್ನುವ ಯಾವುದೂ ಮೆತ್ತಿಕೊಳ್ಳದಂತೆ ನಾಜೂಕಾಗಿರಬೇಕು…...
    16) ತೊಡೆಯ ಮೇಲಾಗಲೀ ನೆಲದ ಮೇಲಾಗಲೀ ದರ್ಬಾರಿನಂತೆ ಎಡಗೈ ಹೂರಿಕೊಂಡಿರಬಾರದು....
    17) ತಲೆ ಮೈಕೈ ಕೆರೆದುಕೊಳ್ಳಬಾರದು…. ಕಣ್ಣು ಉಜ್ಜಬಾರದು…. ಅತ್ತಲಿತ್ತ ಪದೇ ಪದೇ ತಲೆ ಎತ್ತಿ ನೋಡಬಾರದು
    18) ನಾವು ತಿನ್ನುವ ಶಬ್ಧ ಪಕ್ಕದಲ್ಲಿ ಕುಳಿತವರಿಗೆ ಕೇಳಿಸಬಾರದು.... ಲೊಸ ಲೊಸ ಲೊಸಗುಟ್ಟುತ್ತಾ ಅಥವಾ ಗಬಗಬ ಬುಕ್ಕಬಾರದು...
    19) ಉಣ್ಣುವ ತುತ್ತು ಎಣಿಸಬಾರದು.....ಮುದ್ದೆ - ರೊಟ್ಟಿ ಎಣಿಸಬಾರದು.... ಊಟಕ್ಕೆ ನೀಡುವಾಗಲೇ ಆಳು ನೋಡಿ ಅನ್ನ ಬಡಿಸಬೇಕು
    20) ಇಷ್ಟು ತಿಂದ - ಅಷ್ಟು ತಿಂದ ಎಂದು ಮಾತನಾಡಬಾರದು....
    21) ಗಂಭೀರವಾದ ಯಾವ ಸಂಗತಿಗಳನ್ನೂ ಪ್ರಸ್ತಾಪಿಸಬಾರದು.... (ಈಗಿನ ಸೇರ್ಪಡೆ: ಟೀವಿ ಮೊಬೈಲ್ ಇತ್ಯಾದಿ ನೋಡಬಾರದು)
    22) ನೆತ್ತಿಗೇರಿಸಿಕೊಳ್ಳುವಂತೆ ನಗುವುದಾಗಲೀ ಮಾತಾಡುವುದಾಗಲೀ ಮಾಡಬಾರದು…..
    23) ಊಟಕ್ಕೆ ನೀಡುವ ವ್ಯಕ್ತಿಯನ್ನು ಹೊರತುಪಡಿಸಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳಬೇಕು….
    24) ಕುಳಿತು ಸಾವಧಾನವಾಗಿ ತಿನ್ನಬೇಕೇ ಹೊರತು ನಿಂತುಕೊಂಡು, ಓಡಾಡುತ್ತಾ ಅಥವಾ ಪ್ರಯಾಣಿಸುತ್ತಾ ತಿನ್ನಬಾರದು….
    25) ಮಧ್ಯದಲ್ಲಿ ಅವಶ್ಯಕವಿದ್ದರೆ ಅರ್ಥಮಾಡಿಕೊಂಡು ಊಟಕ್ಕೆ ಬಡಿಸುವವರು ನೀಡಬೇಕೇ ಹೊರತು ಇಷ್ಟು ಸಾಕ - ಅಷ್ಟು ಸಾಕ ಎಂದು ಅಳತೆ ಪ್ರಮಾಣಗಳಲ್ಲಿ ತೋರಿಸಿ ಕೇಳಬಾರದು.
    26) ತಂಗಳಾದರೂ ಸರಿಯೇ ಬಿಸಿಯೆಂದು ಭಾವಿಸಿ ಕಣ್ಣಿಗೊತ್ತಿಕೊಂಡು ಆರೋಗಿಸಬೇಕು...... ಒಂದು ಅಗುಳನ್ನೂ ವ್ಯರ್ಥ ಮಾಡಬಾರದು
    27) ತಿನ್ನುವ ಪದಾರ್ಥವನ್ನು ಇಲಿ ಗೆಬರಾಡಿದಂತೆ ತರಿದು ತಿನ್ನಬಾರದು….. ಅಥವಾ ಕೈನಲ್ಲಿ ತೂಗಿಸಿಕೊಂಡು ತಿನ್ನಬಾರದು…..
    28) ಊಟದೆಲೆ ತಟ್ಟೆಯ ಪಕ್ಕದಲ್ಲಿ ಪದಾರ್ಥ ಚೆಲ್ಲಾಡಬಾರದು…..
    29) ಬಿಸಿ ಆರಿಸಿಕೊಂಡು ತಿನ್ನಬೇಕು….. ತುಟಿಗಳನ್ನು ಮುಚ್ಚಿಡಿದು ಬಾಯೊಳಗೇ ನಮುಲಿ ನುಂಗಬೇಕು….
    30) ಒಮ್ಮೆ ಬಾಯಿಗಿರಿಸಿಕೊಳ್ಳಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಬೆರಳುಗಳಿಂದ ತೆಗೆದುಕೊಳ್ಳಬೇಕೇ ಹೊರತು ಅಂಗೈ ಬಳಸಬಾರದು….
    31) ಬಾಡೂಟದೊಂದಿಗೆ ಪ್ರತ್ಯೇಕ ಸಸ್ಯಾಹಾರದ ಸಾರು ಸೇವಿಸಬಾರದು…..
    32) ಊಟ ಮುಗಿದ ಬಳಿಕ ಅಗತ್ಯವಿರುವಷ್ಟು ನೀರು ಕುಡಿಯಬೇಕು…..
    33) ಊಟದ ಬಳಿಕ ಅಭ್ಯಾಸವಿದ್ದಲ್ಲಿ ತಾಂಬೂಲ ಸವಿಯಬೇಕು…. ಕಳ್ಳೇಬೀಜ, ಚಿನಕ್ಹುರುಳಿ, ಹಣ್ಣು ಮುಂತಾದವು ಸೇವಿಸಬಹುದು…..
    34) ಊಟ ಕೊಟ್ಟವರ ಬಳಿ ಕೃತಜ್ಞತೆಯ ನಾಲ್ಕು ಮಾತಾಡಬೇಕು...
    35) ಊಟ ಮುಗಿದ ಕೂಡಲೇ.. ಊಟಕ್ಕೆ ಕುಳಿತ ಜಾಗದಲ್ಲಿ ಅರೆಗಳಿಗೆಯೂ ಕೂರಬಾರದು...
    36) ಕೈತೊಳೆದುಕೊಂಡು ಊಟ ಮಾಡಿದವರೇ ಊಟದ ತಟ್ಟೆಯನ್ನು ತೊಳೆದಿಡಬೇಕು....
    37) ಹೊತ್ತು ಮೀರಿಯಾಗಲೀ ಹೊತ್ತಿಗೆ ಮುಂಚಿತವಾಗಲೀ ಊಟ ಮಾಡಬಾರದು...
    38) ಉಪ್ಪು ಹುಳಿ ಖಾರ ಯಾವುದೇ ವ್ಯತ್ಯಾಸಗಳಿದ್ದರೂ ಅಸಮಾಧಾನ ವ್ಯಕ್ತಪಡಿಸುವುದಾಗಲೀ ಸಿಟ್ಟಿಗೇಳುವುದಾಗಲೀ ಮಾಡಬಾರದು....
    39) ಊಟ ಮಾಡುವಾಗ ಊಟವನ್ನಷ್ಟೇ ಮಾಡಬೇಕು ಹೊರತು ಇನ್ನೊಂದು ಮತ್ತೊಂದು ಕೆಲಸ ಮಾಡಬಾರದು....
    40) ಇನ್ನೊಂದು ಮಾಡಿಕೊಂಡೇ ಊಟ ಮಾಡಬಾರದು.... ಅಥವಾ ಊಟ ಮಾಡಿಕೊಂಡೇ ಇನ್ನೊಂದು ಮಾಡಬಾರದು.
    41) ಊಟ ಮಾಡಿ ಮೈ ಮುರಿಯಬಾರದು
    42) ಊಟದ ಬಳಿಕ ಗಾಳಿಗೆ ಮೈಯೊಡ್ಡಿ ನಾಲ್ಕೆಜ್ಜೆ ನಡೆದರೆ ಚೆಂದ
    43) ಎದೆ ಬಗ್ಗಿಸಿ ಊಟ ಮಾಡಬೇಕೇ ಹೊರತು ಎದೆ ಸೆಟೆದು (ಸೇದಿಕೊಂಡು) ಊಟ ಮಾಡಬಾರದು
    44) ಎಂಜಲ ಕೈನಲ್ಲಿ ತಟ್ಟೆ ಲೋಟ ಇತರೆ ಯಾವುದೇ ಪಾತ್ರೆ ಪಗಡಿ ಮುಟ್ಟಬಾರದು
    45) ಸಾರಿನ ಚೌಟು ಅನ್ನಕ್ಕೂ ಅನ್ನದ ಚಮಚವನ್ನು ಪಾಯಸಕ್ಕೂ ಮುಟ್ಟಿಸದೆ ಹೀಗೆ ಎಲ್ಲವೂ ಪ್ರತ್ಯೇಕವಾಗಿ ಇರಿಸಬೇಕು
    46) ಎಂಜಲು ಮಾಡಿದ ಪದಾರ್ಥಗಳನ್ನು ಇತರರಿಗೆ ನೀಡಬಾರದು
    47) ಊಟದ ಬಳಿಕವೂ ಬಾಯಿ ಮುಕ್ಕಳಿಸುವುದನ್ನು ಮರೆಯಬಾರದು
    48) ಊಟ ಮಾಡಿದ ತಕ್ಷಣವೇ ಮಲಗಬಾರದು ಅಥವಾ ಮಲಗಿಕೊಂಡು ಏನನ್ನೂ ತಿನ್ನಬಾರದು
    49) ಊಟದ ನಡುವೆ ಇನ್ನೂ ಹೆಚ್ಚಿನ ಅಗತ್ಯ ಅಹಾರ ಬೇಗ ಬರಲಿಲ್ಲವೆಂದು ಕೂಗುವುದಾಗಲೀ ಪಾತ್ರೆ ಶಬ್ದ ಮಾಡುವುದಾಗಲೀ ಮುಂತಾದ ಅಸಮಾಧಾನ ತೋರಬಾರದು.
    50) ನಿದ್ರೆಗಣ್ಣಿನಲ್ಲಿ ತೂಕಡಿಸುತ್ತಾ ಊಟ ಮಾಡಬಾರದು.........
    10 min
  • ಭಾದ್ರಪದ ಕೃಷ್ಣ ಪಕ್ಷ ಪ್ರತಿಪದಾದಿಂದ ಭಾದ್ರಪದ ಅಮಾವಾಸ್ಯೆ ...ಈ ಅವಧಿಯಲ್ಲಿ ಪಿತೃಪಕ್ಷವಿದ
    ಭಾದ್ರಪದ ಕೃಷ್ಣ ಪಕ್ಷ ಪ್ರತಿಪದಾದಿಂದ ಭಾದ್ರಪದ ಅಮಾವಾಸ್ಯೆ (2 ರಿಂದ 17 ಸಪ್ಟೆಂಬರ್ 2020) ಈ ಅವಧಿಯಲ್ಲಿ ಪಿತೃಪಕ್ಷವಿದೆ. ಎಲ್ಲ ಪಿತೃಗಳು ತೃಪ್ತರಾಗಬೇಕು ಹಾಗೂ ಸಾಧನೆಗಾಗಿ ಅವರ ಆಶೀರ್ವಾದ ಸಿಗಬೇಕೆಂದು, ಪಿತೃಪಕ್ಷದಲ್ಲಿ ಎಲ್ಲರೂ ಮಹಾಲಯ ಶ್ರಾದ್ಧವನ್ನು ಮಾಡಬೇಕು.
    ೧. ಪಿತೃಪಕ್ಷದಲ್ಲಿ ಮಹಾಲಯ ಶ್ರಾದ್ಧವಿಧಿ ಮಾಡುವುದರ ಮಹತ್ವ !
    ಪಿತೃಪಕ್ಷ ಸಮಯದಲ್ಲಿ ಅನ್ನ ಮತ್ತು ಉದಕ(ನೀರು)ದ ಅಪೇಕ್ಷೆಯಿಂದ ಕುಲದಲ್ಲಿನ ಎಲ್ಲ ಪಿತೃಗಳು ತಮ್ಮ ವಂಶದವರ ಸಮೀಪಕ್ಕೆ ಬರುತ್ತಾರೆ. ಪಿತೃಪಕ್ಷದಲ್ಲಿ ಪಿತೃಲೋಕವು ಪೃಥ್ವಿಲೋಕಕ್ಕೆ ಅತಿ ಸಮೀಪಕ್ಕೆ ಬರುವುದರಿಂದ ಪಿತೃಗಳಿಗೆ ನೀಡುವ ಅನ್ನ, ಉದಕ (ನೀರು) ಮತ್ತು ಪಿಂಡದಾನವು ಅವರಿಗೆ ಬೇಗನೆ ತಲುಪುತ್ತದೆ. ಆದ್ದರಿಂದ ಅವರು ಸಂತುಷ್ಟರಾಗಿ ಕುಟುಂಬದವರಿಗೆ ಆಶೀರ್ವಾದವನ್ನು ನೀಡುತ್ತಾರೆ. ಶ್ರಾದ್ಧವಿಧಿ ಮಾಡುವುದರಿಂದ ಪಿತೃದೋಷದಿಂದ ಸಾಧನೆಯಲ್ಲಿ ಬರುವ ಅಡಚಣೆಗಳು ದೂರವಾಗಿ ಸಾಧನೆಗೆ ಸಹಾಯವಾಗುತ್ತದೆ.
    ೨. ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಪಿತೃಪಕ್ಷದಲ್ಲಿ ಶಾಸ್ತ್ರಕ್ಕನುಸಾರ ಮಹಾಲಯ ಶ್ರಾದ್ಧವಿಧಿಯನ್ನು ಮಾಡಲು ಸಾಧ್ಯವಿಲ್ಲದಿದ್ದರೆ ಏನು ಮಾಡಬೇಕು ?
    ಸದ್ಯ ಕೊರೋನಾ ಮಹಾಮಾರಿಯಿಂದ ಕೆಲವೆಡೆ ಶಾಸ್ತ್ರೋಕ್ತ ಶ್ರಾದ್ಧವಿಧಿ ಮಾಡಲು ಮಿತಿ ಇದೆ. ಅಂತಹ ಸ್ಥಿತಿಯಲ್ಲಿ ‘ಶ್ರಾದ್ಧ ಮಾಡುವ ಬಗ್ಗೆ ಶಾಸ್ತ್ರವಿಧಾನ ಏನಿದೆ ? ಎಂಬುದನ್ನು ಮುಂದೆ ನೀಡಲಾಗಿದೆ
    ೨ ಅ. ಆಮಶ್ರಾದ್ಧವನ್ನು ಮಾಡುವುದು : ಆಪತ್ಕಾಲದಲ್ಲಿ, ಪತ್ನಿಯ ಅನುಪಸ್ಥಿತಿಯಲ್ಲಿ, ತೀರ್ಥಕ್ಷೇತ್ರದಲ್ಲಿ ಮತ್ತು ಸಂಕ್ರಾಂತಿಯ ದಿನ ಆಮಶ್ರಾದ್ಧ ಮಾಡಬಹುದು, ಎಂದು ಕಾತ್ಯಾಯನ ವಚನವಿದೆ. ಕಾರಣಾಂತರದಿಂದ ವಿಧಿಯನ್ನು ಮಾಡಲು ಸಾಧ್ಯವಿಲ್ಲದಿದ್ದರೆ, ಸಂಕಲ್ಪಪೂರ್ವಕ ಆಮಶ್ರಾದ್ಧ ಮಾಡಬೇಕು. ತಮ್ಮ ಕ್ಷಮತೆಗನುಸಾರ ಧಾನ್ಯ, ಅಕ್ಕಿ, ಎಣ್ಣೆ, ತುಪ್ಪ, ಸಕ್ಕರೆ, ಬಟಾಟೆ, ತೆಂಗಿನಕಾಯಿ, ೧ ಅಡಿಕೆ, ೨ ವೀಳ್ಯದೆಲೆ, ೧ ನಾಣ್ಯ ಇತ್ಯಾದಿ ಸಾಹಿತ್ಯಗಳನ್ನು ಹರಿವಾಣದಲ್ಲಿಡಬೇಕು. ಆಮಾನ್ನಸ್ಥಿತ ಶ್ರೀ ಮಹಾವಿಷ್ಣವೇ ನಮಃ | ಈ ನಾಮಮಂತ್ರವನ್ನು ಹೇಳುತ್ತಾ ಅದರ ಮೇಲೆ ಗಂಧ, ಅಕ್ಷತೆ, ಹೂವು ಮತ್ತು ತುಳಸಿ ಎಲೆಯನ್ನು ಅರ್ಪಿಸಬೇಕು. ಆ ಸಾಹಿತ್ಯವನ್ನು ಪುರೋಹಿತರಿಗೆ ದಾನವಾಗಿ ಕೊಡಬೇಕು. ಪುರೋಹಿತರು ಸಿಗದಿದ್ದರೆ, ವೇದಪಾಠಶಾಲೆ, ಗೋಶಾಲೆ ಅಥವಾ ದೇವಸ್ಥಾನಕ್ಕೆ ದಾನ ಮಾಡಬೇಕು.
    ೨ ಆ. ಹಿರಣ್ಯಶ್ರಾದ್ಧ ಮಾಡುವುದು : ‘ಆಮಶ್ರಾದ್ಧ ಮಾಡಲು ಸಾಧ್ಯವಾಗದಿದ್ದರೆ, ಸಂಕಲ್ಪಪೂರ್ವಕ ಹಿರಣ್ಯಶ್ರಾದ್ಧ ಮಾಡಬೇಕು, ಅಂದರೆ ನಮ್ಮ ಕ್ಷಮತೆಗನುಸಾರ ವ್ಯಾವಹಾರಿಕ ದ್ರವ್ಯವನ್ನು (ಹಣವನ್ನು) ಒಂದು ಹರಿವಾಣದಲ್ಲಿಡಬೇಕು. ಹಿರಣ್ಯಸ್ಥಿತ ಶ್ರೀ ಮಹಾವಿಷ್ಣವೇ ನಮಃ | ಅಥವಾ ದ್ರವ್ಯಸ್ಥಿತ ಶ್ರೀ ಮಹಾವಿಷ್ಣವೇ ನಮಃ | ಎಂದು ಹೇಳಿ ಅದಕ್ಕೆ ಗಂಧ, ಅಕ್ಷತೆ, ಹೂವು ಮತ್ತು ತುಳಸಿಎಲೆಗಳನ್ನು ಒಟ್ಟಿಗೆ ಅರ್ಪಿಸಬೇಕು. ಅನಂತರ ಆ ಹಣವನ್ನು ಪುರೋಹಿತರಿಗೆ ಅರ್ಪಿಸಬೇಕು. ಪುರೋಹಿತರು ಸಿಗದಿದ್ದರೆ, ವೇದಪಾಠಶಾಲೆ, ಗೋಶಾಲೆ ಅಥವಾ ದೇವಸ್ಥಾನಗಳಿಗೆ ದಾನ ಮಾಡಬೇಕು.
    ೨ ಇ. ಗೋಗ್ರಾಸವನ್ನು ನೀಡುವುದು : ಯಾರಿಗೆ ಆಮಶ್ರಾದ್ಧ ಮಾಡಲು ಸಾಧ್ಯವಿಲ್ಲವೋ, ಅವರು ಗೋಗ್ರಾಸವನ್ನು ನೀಡಬೇಕು. ಗೋಗ್ರಾಸವನ್ನು ಸಹ ಕೊಡಲು ಸಾಧ್ಯವಿಲ್ಲದವರು ಸಮೀಪದ ಗೋಶಾಲೆಯನ್ನು ಸಂಪರ್ಕಿಸಿ ಗೋಗ್ರಾಸಕ್ಕಾಗಿ ಸ್ವಲ್ಪ ಹಣವನ್ನು ಅರ್ಪಣೆ ಮಾಡಬೇಕು.
    ಈ ಮೇಲಿನವುಗಳಲ್ಲಿ ಆಮಶ್ರಾದ್ಧ, ಹಿರಣ್ಯಶ್ರಾದ್ಧ ಅಥವಾ ಗೋಗ್ರಾಸವನ್ನು ಸಮರ್ಪಿಸಿದ ನಂತರ ಎಳ್ಳುತರ್ಪಣೆ ಮಾಡಬೇಕು. ಪಂಚಪಾತ್ರೆಯಲ್ಲಿ ನೀರು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಕಪ್ಪು ಎಳ್ಳು ಹಾಕಬೇಕು. ಈ ರೀತಿ ‘ತಿಲೋದಕ’ವನ್ನು ಸಿದ್ಧಪಡಿಸಬೇಕು. ಅನಂತರ ಪಿತೃಗಳ ಹೆಸರನ್ನು ಸ್ಮರಿಸಿಕೊಂಡು ಬಲಗೈಯ ಹೆಬ್ಬೆರಳು ಮತ್ತು ತರ್ಜನಿಯಿಂದ ತಿಲೋದಕವನ್ನು ಅರ್ಪಿಸಬೇಕು. ವ್ಯಕ್ತಿಯ ಹೆಸರು ನೆನಪಿಲ್ಲದಿದ್ದರೆ, ಆ ವ್ಯಕ್ತಿಯನ್ನು ಸ್ಮರಿಸಿ ತಿಲೋದಕವನ್ನು ನೀಡಬೇಕು. ಸಾಮಾನ್ಯವಾಗಿ ಇವೆಲ್ಲ ವಿಧಿಗಳನ್ನು ಮಾಡುವಾಗ ಪುರೋಹಿತರು ಮಂತ್ರಪಠಣ ಮಾಡುತ್ತಾರೆ ಹಾಗೂ ನಾವು ಕೃತಿ ಮಾಡುತ್ತೇವೆ. ಪುರೋಹಿತರು ಸಿಗದಿದ್ದರೆ, ಈ ಲೇಖನದಲ್ಲಿ ಹೇಳಿದಂತೆ ಭಾವವನ್ನಿಟ್ಟು ವಿಧಿ ಮಾಡಬೇಕು. ಯಾವುದೇ ವಿಧಿಯನ್ನು ಮಾಡಲು ಸಾಧ್ಯವಿಲ್ಲದವರು ಕೇವಲ ಎಳ್ಳು ತರ್ಪಣೆಯನ್ನಾದರೂ ಮಾಡಬೇಕು.
    ೨ ಉ. ಯಾರಿಗೆ ಇಲ್ಲಿ ಉಲ್ಲೇಖಿಸಿದಂತಹ ಯಾವುದೇ ಕೃತಿಯನ್ನು ಮಾಡಲು ಸಾಧ್ಯವಿಲ್ಲದಿದ್ದಲ್ಲಿ, ಅವರು ಧರ್ಮಕಾರ್ಯಕ್ಕಾಗಿ ಸಮರ್ಪಿಸಿಕೊಂಡಿರುವ ಯಾವುದಾದರೊಂದು ಆಧ್ಯಾತ್ಮಿಕ ಸಂಸ್ಥೆಗೆ ಅರ್ಪಣೆ ಮಾಡಬೇಕು.
    7 min
  • *ಜೀವನದಲ್ಲಿ ದುಃಖಕ್ಕೆ ಯಾರು ಕಾರಣ?.....*
    *ಜೀವನದಲ್ಲಿ ದುಃಖಕ್ಕೆ ಯಾರು ಕಾರಣ?.....*
    ದೇವರೇ? ಅಲ್ಲ
    ಗ್ರಹ -ನಕ್ಷತ್ರಗಳೇ? ಅಲ್ಲ
    ಭಾಗ್ಯವೇ? ಅಲ್ಲ
    ಸಂಬಂಧಿಗಳೇ? ಅಲ್ಲ
    ನೆರೆಹೊರೆಯವರೇ? ಅಲ್ಲ
    ಸರಕಾರವೇ? ಅಲ್ಲ
    ನಮ್ಮ ದುಃಖಗಳಿಗೆ ನಾವೇ
    ಸ್ವಯಂ ಜವಾಬ್ದಾರರು
    ತಲೆನೋವು, ಬಿ ಪಿ ಮುಂತಾದವುಗಳಿಗೆ
    ಕಾರಣ -ಅನಗತ್ಯ ವಿಚಾರಗಳು
    ಹೊಟ್ಟೆನೋವು, ಮತ್ತಿತರ ತೊಂದರೆಗಳಿಗೆ ಕಾರಣ -ತಿನ್ನಬಾರದ್ದನ್ನು ತಿನ್ನುವುದು
    ಸಾಲ ಹೆಚ್ಚಲು ಕಾರಣ, -ಅವಶ್ಯಕತೆ ಮೀರಿ ಖರ್ಚು ಮಾಡುವುದು
    ಕೋರ್ಟ್ ಸುತ್ತುವಿಕೆ ಕಾರಣ
    -ಪ್ರತಿಷ್ಠೆ, ಅಹಂಕಾರಗಳು
    ದುರ್ಬಲ /ದಪ್ಪ /ರೋಗಮಯ
    ಶರೀರಕ್ಕೆ ಕಾರಣ -ತಪ್ಪು ಜೀವನ ಶೈಲಿ
    ಅನಗತ್ಯ ವಿವಾದಗಳಿಗೆ ಕಾರಣ -ಹೆಚ್ಚು ಮತ್ತು ವ್ಯರ್ಥ ಮಾತನಾಡುವಿಕೆ
    ಮೇಲಿನ ಕಾರಣಗಳಲ್ಲದೇ ಇನ್ನೂ ನೂರಾರು ಕಾರಣಗಳಿರಬಹುದು. ನಾವು ದೋಷವನ್ನು ಇನ್ನೊಬ್ಬರ ಮೇಲೆ ಹೊರಿಸುತ್ತೇವೆ. ಕಷ್ಟಗಳ ಕಾರಣವನ್ನು ಸೂಕ್ಷ್ಮ ವಾಗಿ ಪರಿಶೀಲಿಸಿದರೆ ಅವುಗಳ ಹಿಂದೆ
    ನಮ್ಮ ಮೂರ್ಖತೆಯೇ ಅಡಗಿರುತ್ತದೆ.
    ದೂರು -ದುಮ್ಮಾನಗಳನ್ನು ಉಸಿರು ಇರುವ ತನಕ ಮಾಡಬಹುದಷ್ಟೆ
    ಕೊನೆಯಲ್ಲಿ ಉಳಿಯುವುದು
    ಪಶ್ಚಾತಾಪ ಮಾತ್ರ
    ಧರ್ಮಮಯ ಬದುಕು
    ಜೀವನಕೆ ಬೆಳಕು
    ಪ್ರಾಮಾಣಿಕವಾಗಿರಿ
    ಸಂತೋಷವಾಗಿರಿ
    ನಗುನಗುತ್ತಾ ಇರಿ
    👆-ಗುರು ಉಪದೇಶ ಅಂಶ🙏🏻🙏🏻🙏🏻
    5 min
  • *ಮಕ್ಕಳೇ ಸರ್ವಸ್ವವಲ್ಲ, ನಮ್ಮ ಜೀವನದ ಅತೀ ಮುಖ್ಯ ಭಾಗವಷ್ಟೆ..
    *ಮಕ್ಕಳೇ ಸರ್ವಸ್ವವಲ್ಲ, ನಮ್ಮ ಜೀವನದ ಅತೀ ಮುಖ್ಯ ಭಾಗವಷ್ಟೆ.. ಸಮಯ ಮಾಡಿ ಕೊಂಡು ಮಿಸ್ ಮಾಡದೇ ಓದಿ*
    *........................................................................*
    ಪಕ್ಷಿಗಳ ಜೀವನ ಶೈಲಿಯನ್ನು ನೋಡಿದ್ದೇವೆ. ಬಹುತೇಕ ಪಕ್ಷಿಗಳು ಸಾಮಾನ್ಯವಾಗಿ ಮರದ ಪೊಟರೆಯಲ್ಲಿ, ಮರದ ಕೊಂಬೆಗಳಲ್ಲಿ ಅಥವಾ ಕಟ್ಟಡದ ಚಾವಣಿಗಳಲ್ಲಿ ವಾಸಿಸುತ್ತವೆ. ಆದರೆ *ತಮ್ಮ ಸಂತಾನೋತ್ಪತ್ತಿಯ ಸಮಯದಲ್ಲಿ ಮಾತ್ರ ವಿಧ ವಿಧ ಬಗೆಯ ಗೂಡನ್ನು ಕಟ್ಟುತ್ತವೆ. ಆ ಗೂಡಿನಲ್ಲೇ ಮೊಟ್ಟೆಯನ್ನು ಇಟ್ಟು ಮರಿಮಾಡುತ್ತವೆ. ಅವುಗಳಿಗೆ ಗುಟುಕು ನೀಡಿ ಬೆಳೆಸುತ್ತವೆ. ಮರಿಗಳ ರೆಕ್ಕೆ ಬಲಿತು ಹಾರಲು ಕಲಿತ ನಂತರ ಅವುಗಳನ್ನು ತಮ್ಮ ಪಾಡಿಗೆ ಸ್ವಂತ ಶಕ್ತಿಯಿಂದ ಬದುಕಲಿ ಎಂದು ಬಿಟ್ಟು ತೆರಳುತ್ತವೆ.* ಪಕ್ಷಿಗೂ ಮಾತೃ ವಾತ್ಸಲ್ಯವಿತ್ತು, ಜವಾಬ್ದಾರಿಯಿತ್ತು. ಅದಕ್ಕಾಗಿಯೇ ತಾನು ಹೇಗಿದ್ದರೂ ಸರಿ ಮರಿಗಳು ಬೆಚ್ಚಗಿರಬೇಕೆಂದು ಕಷ್ಟಪಟ್ಟು ಗೂಡನ್ನು ಕಟ್ಟಿತ್ತು.ಮರಿಗಳಿಗೆ ತಮ್ಮಿಚ್ಚೆಯಂತೆ ಬದುಕುವ ಸ್ವಾತಂತ್ರ್ಯವನ್ನು ನೀಡಿ ಮುಕ್ತಗೊಳಿಸಿತು....
    ಆದರೆ ಮನುಷ್ಯರಾದ ನಾವು ಮಕ್ಕಳ ವಿಷಯದಲ್ಲಿ ನಡೆದುಕೊಳ್ಳುತ್ತಿರುವುದು ಹೇಗೆ.ನಡೆಯಲು ಕಲಿತಿರುವ ಮಕ್ಕಳನ್ನೂ ಕೈಹಿಡಿದುಕೊಂಡೆ ಸಾಗುತ್ತಿದ್ದೇವೆ. ಕುಂತಲ್ಲಿ ನಿಂತಲ್ಲಿ ಮಕ್ಕಳ ಬಗ್ಗೆಯೇ ಚಿಂತಿಸಿ ನಾವು ಮನೋರೋಗಿಗಳಾಗುವುದರ ಜೊತೆಗೆ ಅವರನ್ನೂ ಒತ್ತಡದ ಬೆಂಕಿಯಲ್ಲಿ ಬೇಯಿಸುತ್ತಿದ್ದೇವೆ. ನಾವು ದುಡಿಯುವ ಪ್ರತಿ ಕಾಸಿನ ಮೇಲೂ ಮಕ್ಕಳ ಹೆಸರನ್ನೇ ಕೆತ್ತುತ್ತಿದ್ದೇವೆ. ಅದ್ಯಾವ ಪರಿ ಎಂದರೆ ನಾವು ರುಚಿಸುವುದನ್ನು ತಿನ್ನದೆ, ಶೋಕಿ ಬಟ್ಟೆ ತೊಡದೆ, ಯಾವ ಸುಖವನ್ನು ಅನುಭವಿಸದೆ ಸರ್ವವನ್ನು ಮಕ್ಕಳಿಗೆಂದೇ ಮೀಸಲಿಡುತ್ತಿದ್ದೇವೆ. ಸಮಾಜದಲ್ಲಿ ಕೆಟ್ಟ ಹೆಸರು ಸಂಪಾದಿಸಿಯೋ ಅಥವಾ ಸ್ವಂತ ಪರಿಶ್ರಮದ ಮೂಲಕವೋ ದುಡಿದ ಹಣ, ಆಸ್ತಿ, ಅಂತಸ್ತುಗಳನ್ನು ಅವರಿಗೆಂದೇ ಕೂಡಿಡುತ್ತಿದ್ದೇವೆ. ಒಂದು ಲೆಕ್ಕದಲ್ಲಿ ಪ್ರಾಣಿಗಳೇ ನಮಗಿಂತ ಮೇಲು. *ಯಾವ ಹುಲಿಯೂ ತನ್ನ ಮರಿಗಳಿಗಳಿಗಾಗಿ ಜಿಂಕೆಯ ಫಾರ್ಮ್ ಮಾಡಿಟ್ಟು ಹೋಗುವುದಿಲ್ಲ, ಕೇವಲ ಬೇಟೆಯಾಡಿ ಬದುಕುವುದ್ದನ್ನಷ್ಟೇ ಕಲಿಸಿರುತ್ತದೆ. ಯಾವ ಪಕ್ಷಿಯೂ ತನ್ನ ಮರಿಗಳಿಗೆ ಕಾಳುಗಳ ಭಂಡಾರವನ್ನು ನಿರ್ಮಿಸಿ ಹೋಗುವುದಿಲ್ಲ, ಹುಡುಕಿ ಹೆಕ್ಕಿ ತಿನ್ನುವುದನ್ನು ಮಾತ್ರ ಕಲಿಸಿರುತ್ತದೆ.*
    ಇನ್ನು ಮಕ್ಕಳಿಗಾಗಿ ಅದೆಷ್ಟು ಸಂಬಂಧಗಳನ್ನು ಮುರಿದುಕೊಂಡಿದ್ದೇವೆಂದರೆ ಲೆಕ್ಕವಿಲ್ಲ. ಮಕ್ಕಳನ್ನು ಓದಿಸುವ ಕುಂಟುನೆಪ ಇಟ್ಟುಕೊಂಡು ಹಳ್ಳಿಯನ್ನು, ಹುಟ್ಟಿಬೆಳೆದ ಮನೆಯನ್ನು,ಸಂಬಂಧಿಕರನ್ನು, ನಮಗಾಗಿ ಜೀವ ತೆಯ್ದ ಹೆತ್ತವರನ್ನು ಬಿಟ್ಟು ಬಂದವರು ಮತ್ತೆ ಮಕ್ಕಳ ಮದುವೆಯಾದರೂ ಅತ್ತ ತಿರುಗಿ ನೋಡಿದ್ದಿಲ್ಲ.....
    ನಮ್ಮ ಮಕ್ಕಳನ್ನು ಅದೆಷ್ಟು ಹಚ್ಚಿಕೊಂಡಿದ್ದೇವೆಂದರೆ ಅವರ ಚಿಕ್ಕಚಿಕ್ಕ ವಿಷಯಗಳಿಗಾಗಿ ಸ್ನೇಹಿತರು, ಒಡಹುಟ್ಟಿದವರು, ನೆರೆಹೊರೆಯವರ ಜೊತೆ ಜಗಳವಾಡಿದ್ದೇವೆ. ಮುನಿಸಿಕೊಂಡಿದ್ದೇವೆ. ಮತ್ತೆ ಸೇರಲಾರದಷ್ಟು ದೂರ ಹೋಗಿದ್ದೇವೆ. ಅದರ ಬದಲು *ಮಕ್ಕಳಿಗೆ ಬುದ್ಧಿ ಹೇಳಿ ತಿದ್ದಿ ನಡೆಸಿ ಎಲ್ಲರ ಜೊತೆ ವಿಶಾಲ ಮನೋಭಾವ ತೋರಿದ್ದರೆ ಸಂಬಂಧಗಳು ಇನ್ನೂ ಗಟ್ಟಿಯಾಗುತ್ತಿದ್ದವು.*
    *ಮಕ್ಕಳು ಸಾಗಬೇಕಾದ ದಾರಿತಪ್ಪಿದಾಗ ತಿದ್ದಬೇಕಾದ್ದು ನಮ್ಮ ಕೆಲಸ. ಆದರೆ ಅವರಿಗಾಗಿ ದಾರಿಯನ್ನೇ ನಿರ್ಮಿಸಲು ಹೊರಡುವುದು ಮೂರ್ಖತನ. ಅವರ ಭವಿಷ್ಯಕ್ಕಾಗಿ, ಸುಖಕ್ಕಾಗಿ ಒಂದಷ್ಟು ಗಳಿಸುವುದನ್ನು, ಉಳಿಸುವುದನ್ನು ಯಾರೂ ಬೇಡವೆನ್ನುವುದಿಲ್ಲ. ಆದರೆ ಇಡೀ ಬದುಕನ್ನೇ ಮಕ್ಕಳಿಗಾಗಿ ಮುಡಿಪಿಡುವಿದು ಆಕ್ಷೇಪಾರ್ಹ.(ಮೂರ್ಖತನ)*
    ಮಕ್ಕಳಿಗಾಗಿ ಹೆತ್ತವರನ್ನೇ ದೂರ ಮಾಡಿರುವ, ಅವರನ್ನು ನೋಯಿಸಿರುವ ಎಷ್ಟೋ ಜನ ಕಣ್ಮುಂದಿದ್ದಾರೆ. ಹಾಗಾದರೆ ನಾವೇನು ಉದ್ಭವ ಮೂರ್ತಿಗಳೇ.ಆಧುನಿಕ ಪ್ರಪಂಚದಲ್ಲಿ ಎಲ್ಲವೂ ಸುಲಭವಾಗಿದೆ. ಇನ್ನು ನಮಗೂ ಮಕ್ಕಳಿಗೂ ಇರುವ ಸಂಬಂಧವೂ ಅಷ್ಟೇ. ಎಲ್ಲರನ್ನೂ ನೋಯಿಸಿ, ನಾವೂ ನೊಂದು ಸಾಕಿದ ಮಕ್ಕಳಿಂದ ಸಕರಾತ್ಮಕ ಫಲಿತಾಂಶವೇ ಸಿಗುತ್ತದೆ ಎನ್ನುವುದು ಸುಳ್ಳು. *ನಾವು ಹೆತ್ತವರನ್ನು ಬಿಟ್ಟು ಮಕ್ಕಳಿಗಾಗಿ ಬದುಕಿದಂತೆ ಅವರೂ ಮುಂದೊಂದು ದಿನ ಪುನರಾವರ್ತಿಸುತ್ತಾರೆ. ಆಗ ಹಿಂದಿನ ತಪ್ಪುಗಳಿಗೆ ಪರಿತಪಿಸಿ ಪ್ರಯೋಜನವಿಲ್ಲ.*
    ಆಮೇಲೆ ಹಾದಿಬೀದಿಯಲ್ಲಿ ನಾವು ಅವರಿಗಾಗಿ ಮಾಡಿದ ತ್ಯಾಗಬಲಿದಾನಗಳನ್ನು ಹೇಳಿಕೊಂಡು ಹುಚ್ಚರಂತೆ ಅಲೆಯಬೇಕಾದೀತು. ನಗೆಪಾಟಲಿಗೀಡಾಗಬೇಕಾದೀತು.ಆದ್ದರಿಂದ *ಮಕ್ಕಳಿಗಾಗಿ ಆಸ್ತಿ ಮಾಡದಿದ್ದರೂ ಸುಸಂಸ್ಕೃತರನ್ನಾಗಿಸೋಣ. ದುಡಿದು ತಿನ್ನುವ, ಸ್ವತಂತ್ರವಾಗಿ ಬದುಕುವ ಶಕ್ತಿಯನ್ನು ತುಂಬಿಸೋಣ. ಎಲ್ಲರೂಳಗೊಂದಾಗು ಮಂಕುತಿಮ್ಮ* ಎಂಬ ತತ್ವವನ್ನು ಕಲಿಸೋಣ. ನಾವೂ ಸಾಧ್ಯವಾದಷ್ಟು ನಮ್ಮ ದುಡಿಮೆಗನುಸಾರ ಸುಖವನ್ನೇ ಪಡೋಣ. ಮಕ್ಕಳಿಗಾಗಿ ಮಾಡಿ ಸತ್ತರೆ ಅವರ ಸುಖ ನೋಡಲು ನಾವಿರುವುದಿಲ್ಲ ಅಲ್ಲವೇ. ಬೇಂದ್ರೆಯವರು ಹೇಳುವಂತೆ
    *" ನಾನಂತೂ ಸಾವಿಗೆ ಹೆದರೊಲ್ಲ. ನಾನಿದ್ದಾಗ ಅದು ಬರೊಲ್ಲ. ಅದು ಬಂದಾಗ ನಾನಿರೊಲ್ಲ. "*
    ಮಕ್ಕಳೇ ಸರ್ವಸ್ವವಲ್ಲ,ನಮ್ಮ ಜೀವನದ ಅತೀ ಮುಖ್ಯ ಭಾಗ ಅಷ್ಟೇ.....
    🙏🙏🙏🙏
    7 min

About Dr Balakrishna Maddodi

From the publisher's feed

Hi