Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • ☆🌹 ಅನಂತ ವರಗಳನ್ನು ಕರುಣಿಸುವ ಅನಂತಪದ್ಮನಾಭ 🌹☆☆
    ☆☆🌹 ಅನಂತ ವರಗಳನ್ನು ಕರುಣಿಸುವ ಅನಂತಪದ್ಮನಾಭ 🌹☆☆
    ಇದೇ ಸೆಪ್ಟೆಂಬರ್ 19ರಂದು ಅನಂತಪದ್ಮನಾಭ ವ್ರತವನ್ನು ಆಚರಿಸಲಾಗುವುದು. ಭಾದ್ರಪದ ಶುಕ್ಲ ಚತುರ್ದಶಿಯಂದು ಅನಂತ ಚತುರ್ದಶೀ. ಈ ವ್ರತಕ್ಕೆ ಪೂರ್ವಾಹ್ನ ಮುಖ್ಯಕಾಲ. ಆದ್ದರಿಂದ ಸೂರ್ಯೋದಯದಿಂದ ಮಧ್ಯಾಹ್ನದವರೆಗೆ ‘ಚತುರ್ದಶೀ’ ತಿಥಿ ದಿನದಂದು ಈ ವ್ರತವನ್ನು ಆಚರಿಸಬೇಕು.
    ಮಹಾವಿಷ್ಣುವು ಪದ್ಮನಾಭನಾಗಿ ಅನಂತ (ಸಹಸ್ರ ಹೆಡೆಯ ನಾಗ)ನಲ್ಲಿ ಮಿಲನವಾದ ವ್ರತ ಇದು. ಅಂತ್ಯವಿಲ್ಲದ ಪರಮಾತ್ಮನಲ್ಲಿ ತಮ್ಮ ವೈಯಕ್ತಿಕ ಸುಖಪ್ರಾಪ್ತಿಗಾಗಿ ಪ್ರಾರ್ಥಿಸುತ್ತಾ ವ್ರತವನ್ನು ಆಚರಿಸುತ್ತಾರೆ. ಈ ವ್ರತವು ಒಂದು ವೈಯಕ್ತಿಕ ಪೂಜೆಯಾಗಿದೆಯೇ ಹೊರತು ಸಾಮಾಜಿಕ ಮತ್ತು ಧಾರ್ಮಿಕ ಸ್ವರೂಪವಿರುವ ಉತ್ಸವವಲ್ಲ. ವ್ಯಕ್ತಿಗತ ಶ್ರದ್ಧೆ ಮತ್ತು ನಿಷ್ಠೆಯಿಂದ ಆಚರಿಸುವ ವ್ರತ. ಇದನ್ನು 'ಮೋಕ್ಷ ವ್ರತ' ಎಂದೂ ಕರೆಯುವುದುಂಟು.
    ಹದಿನಾಲ್ಕು ಲೋಕಗಳನ್ನು ವ್ಯಾಪಿಸಿರುವವನು ಎಂದು ಪ್ರತಿನಿಧಿಸುವಂತೆ 14 ಎಳೆಗಳನ್ನು ಮಾಡಿ, ಕೇಸರಿ ಅಥವಾ ಕುಂಕುಮ ಲೇಪಿತ ದೋರಕವನ್ನು ಮಾಡಿ, ಕಲಶ ಸಹಿತ ಅನಂತನಿಗೆ ಅರ್ಪಿಸುತ್ತಾರೆ. ಪರಮಾತ್ಮನು ರಂಗಧಾಮ ರೂಪವಾಗಿ ಅವತರಿಸಿದ ದಿನವಿದು. ಶೇಷಶಾಯಿಯಾಗಿ, ನಾಭಿಕಮಲದಲ್ಲಿ ಬ್ರಹ್ಮನನ್ನು ಸೃಷ್ಟಿಸಿ ಜಗತ್ತಿನ ಕಲ್ಯಾಣಕ್ಕಾಗಿ ಅನಂತಪದ್ಮನಾಭನೆಂಬ ಹೆಸರಿನಿಂದ ತನ್ನ ಮಹಿಮೆ ತೋರಿಸುವ ದೇವ-ದೇವನನ್ನು ಈ ದಿನ ವಿಶೇಷ ರೀತಿಯಲ್ಲಿ ಪೂಜಿಸಬೇಕು. ಪೂಜೆಯ ನಂತರ ಅನಂತರ ದಾರಗಳೆಂಬ ರಕ್ಷಾಸೂತ್ರಗಳನ್ನು ಕೈಗೆ ಕಟ್ಟಿಕೊಳ್ಳಬೇಕು. ಪುರುಷರು ಬಲಗೈಯಲ್ಲಿ, ಸ್ತ್ರೀಯರು ಎಡಗೈಯಲ್ಲಿ ಪವಿತ್ರವಾದ ಕುಂಕುಮಲೇಪಿತ 14 ಗಂಟುಗಳ್ಳುಳ್ಳ ಹತ್ತಿಯ ಅಥವಾ ರೇಷ್ಮೆಯ ದಾರವನ್ನು ಕಟ್ಟಿಕೊಳ್ಳುವರು.
    ವ್ರತಾಚರಣೆಯ ದಿನ ಮುಂಜಾನೆ ಎದ್ದು ಮನೆಯನ್ನೆಲ್ಲಾ ಶುದ್ಧಿ ಮಾಡಿ, ರಂಗೋಲಿ ಇಟ್ಟು ದೇವರ ಬಲಭಾಗದಲ್ಲಿ ಪೂರ್ವ ಅಥವಾ ಉತ್ತರಕ್ಕೆ ಮುಖಮಾಡಿ ವ್ರತವನ್ನು ಆಚರಿಸಬೇಕು. ಮಂಟಪವನ್ನು ಕಟ್ಟಿ ಅಷ್ಟದಳ ಪದ್ಮವನ್ನು ಬರೆದು ಅಕ್ಕಿಯನ್ನು ಹರಡಿ ಪೂರ್ವಾಭಿಮುಖವಾಗಿ ಕಲಶವನ್ನು ಸ್ಥಾಪಿಸಬೇಕು. ಈ ವ್ರತವನ್ನು 14 ವರ್ಷಗಳ ಕಾಲ ನಡೆಸಿ, ನಂತರ ಉದ್ಯಾಪನೆ ಮಾಡಬೇಕು. ಅನಂತನ ವ್ರತದಿಂದ ಯಜಮಾನನಿಗೆ ಅನಂತ ಸೌಭಾಗ್ಯ, ಅನಂತ ಕೀರ್ತಿ, ಅನಂತ ಸಂಪತ್ತು, ಅನಂತ ಸೌಖ್ಯ, ಸತ್ಸಂತಾನ ಮುಂತಾದವು ಲಭಿಸುತ್ತದೆಂದು ಹೇಳುವರು. ಆರಂಭದಲ್ಲಿ ಯಮುನಾಪೂಜೆ ಈ ವ್ರತದ ಇನ್ನೊಂದು ವಿಶೇಷ. ನದಿ, ತಟಾಕ, ಬಾವಿ, ಕೆರೆ ಮುಂತಾದ ಪ್ರದೇಶದಿಂದ ಕಲಶದಲ್ಲಿ ನೀರು ತುಂಬಿ, ಅದನ್ನು ಪೂಜಿಸಿ, ಇದೇ ನೀರನ್ನು ಕಲಶಕ್ಕೆ ಹಾಕಿ ಪೂಜಿಸಿ ಧ್ಯಾನಿಸಬೇಕು.
    ಈ ವ್ರತವನ್ನು ವನವಾಸದಲ್ಲಿರುವ ಪಾಂಡವರಿಗೆ ಶ್ರೀಕೃಷ್ಣನು ಹೇಳಿ, ಧರ್ಮರಾಜನಿಂದ ಈ ವ್ರತವನ್ನು ಮಾಡಿಸಿದನೆಂದೂ, ಅದೇ ಮುಂದೆ ಅವನ ವಿಜಯಕ್ಕೆ ಕಾರಣವಾಯಿತೆಂದೂ ಹೇಳಲಾಗುತ್ತದೆ. ಅಗಸ್ತ್ಯ ಮಹರ್ಷಿಗಳಿಂದ ಆಚರಿಸಲ್ಪಟ್ಟ ಈ ವ್ರತವನ್ನು ಜನಕ, ಸಗರ, ದಿಲೀಪ, ಹರಿಶ್ಚಂದ್ರ ಭರತಾದಿಗಳೂ ಆಚರಿಸಿ ಅದರ ಪ್ರಭಾವದಿಂದ ರಾಜ್ಯವನ್ನು ಸುಖದಿಂದ ಪರಿಪಾಲಿಸಿ ಖ್ಯಾತರಾದರು.
    🌹 ಅನಂತನ ವ್ರತದ ಕಥೆ: 🌹
    ಅರಣ್ಯವಾಸ ಮಾಡುತ್ತಿರುವ ಧರ್ಮ, ಭೀಮ, ಅರ್ಜುನ, ನಕುಲ, ಸಹದೇವರು ಅತ್ಯಂತ ಕಷ್ಟಪಡುತ್ತಿರುವಾಗ, ಅಲ್ಲಿಗೆ ಬಂದ ಮಹಾನುಭಾವನಾದ ಶ್ರೀಕೃಷ್ಣನಿಗೆ ವಂದಿಸಿ ಯುಧಿಷ್ಠಿರನು, “ಎಲೈ ಕರುಣಾಮೂರ್ತಿಯೇ! ನನ್ನ ತಮ್ಮಂದಿರೊಡಗೂಡಿ ನಾನು ವನವಾಸದಿಂದ ಅತ್ಯಂತ ದುಃಖವನ್ನು ಅನುಭವಿಸುತ್ತಿದ್ದೇನೆ. ಈ ದುಃಖವೆಂಬ ಸಾಗರವನ್ನು ಹೇಗೆ ದಾಟವೆನೋ ಹೇಳಬೇಕು” ಎನ್ನಲು, ಶ್ರೀಕೃಷ್ಣನು “ಧರ್ಮರಾಯನೇ ಪುರುಷರಿಗೂ ಸ್ತ್ರೀಯರಿಗೂ ಸಕಲ ಕಾಮ್ಯಸಿದ್ಧಿ ಕೊಡುವ ಅನಂತವ್ರತವೆಂಬ ಒಂದು ವ್ರತವುಂಟು. ಈ ವ್ರತವನ್ನು ಭಾದ್ರಪದ ಮಾಸದಲ್ಲಿ ಶುಕ್ಲಪಕ್ಷದ ಚತುರ್ದಶಿಯಲ್ಲಿ ಮಾಡತಕ್ಕದ್ದು” ಎಂದು ಹೇಳಲು ಧರ್ಮರಾಯನು ಆ ವ್ರತದ ಕಥೆಯನ್ನು ಕೇಳಲು ಇಚ್ಛಿಸಲಾಗಿ, ಶ್ರೀ ಕೃಷ್ಣನು ಯುಧಿಷ್ಠಿರನಿಗೆ ವ್ರತದ ಕಥೆಯನ್ನು ಹೇಳುತ್ತಾನೆ.
    ಕೃತಯುಗದಲ್ಲಿ ಸುಮಂತನೆಂಬ ಒಬ್ಬ ಬ್ರಾಹ್ಮಣನಿದ್ದನು. ಆತನು ವಸಿಷ್ಠ ಗೋತ್ರೋತ್ಪನ್ನನು, ಅಧ್ಯಯನ ಶಾಸ್ತ್ರ ಸಂಪನ್ನನು ಆಗಿದ್ದನು. ಆತನು ಭೃಗುಋಷಿಗಳ ಮಗಳಾದ ದೀಕ್ಷೆ ಎಂಬ ಕನ್ನಿಕೆಯನ್ನು ವಿವಾಹವಾದನು. ದೀಕ್ಷಾದೇವಿಯ ಗರ್ಭದಲ್ಲಿ ಒಳ್ಳೆಯ ಗುಣವುಳ್ಳ ಒಬ್ಬ ಕನ್ನಿಕೆ ಜನಿಸಿದಳು. ಆಕೆಗೆ ಶೀಲೆ ಎಂದು ನಾಮಕರಣವಾಯಿತು. ದೀಕ್ಷಾದೇವಿಯು ತಾಪಜ್ವರದಿಂದ ಸ್ವರ್ಗಲೋಕಗೈದಳು. ಆಗ ಸುಮಂತನು ಅಗ್ನಿಹೋತ್ರಾದಿ ಕರ್ಮಗಳಿಗೆ ಲೋಪವಾಗಬಾರದೆಂಬ ಕಾರಣಕ್ಕಾಗಿ ಕರ್ಕಶಿ ಎಂಬ ಹೆಸರುಳ್ಳ ಕನ್ನಿಕೆಯನ್ನು ಲಗ್ನ ಮಾಡಿಕೊಂಡನು. ಕಠಿಣ ಚಿತ್ತಳಾದ ಕರ್ಕಶಿಯು ಕೋಪಿಷ್ಠಳಾಗಿ, ಕಲಹಕಾರಿಣಿಯಾಗಿಯೂ ಇದ್ದಳು. ಶೀಲೆಯು ವಿವಾಹಯೋಗ್ಯಳಾದೊಡನೆ, ಸುಮಂತನು ಕೌಂಡಿನ್ಯ ಮಹಾಮುನಿಗಳ ತಪೋಮಹಿಮೆಯನ್ನು ಕಂಡು ಕೌಂಡಿನ್ಯರಿಗೆ ಮಗಳನ್ನಿತ್ತು ವಿವಾಹ ಮಾಡಿದನು. ಆಗ ವಿವಾಹವನ್ನೆಲ್ಲಾ ಮಾಡಿ ಪಾರಿತೋಷಕಾರ್ಥವಾಗಿ ವಿವಾಹ ಕಾಲದಲ್ಲಿ ಅಳಿಯನಿಗೆ ಕೊಡತಕ್ಕ ವಸ್ತ್ರಾಭರಣಗಳನ್ನು ಕೊಂಚ ಕೊಡಬೇಕೆಂದು ಕಠಿಣಚಿತ್ತಳಾದ ತನ್ನ ಪತ್ನಿಯನ್ನು ಕೇಳಿದಾಗ, ಆಕೆಯು ಕೊಡಲು ಏನೂ ಇಲ್ಲ ಎಂದಳು. ಚಿಂತಿಸಿದ ಸುಮಂತನು, ಮದುವೆಗೆ ಮಾಡಿದ ನಂತರ ಮಿಕ್ಕ ಹಿಟ್ಟನ್ನು ಕೊಟ್ಟು ಅಳಿಯ ಮಗಳನ್ನು ಕಳುಹಿಸಿದನು. ಕೌಂಡಿನ್ಯರು ಸದಾಚಾರ ಸಂಪತ್ತುಳ್ಳ ಶೀಲೆಯೊಡನೆ ಬಂಡಿಯಲ್ಲಿ ಕುಳಿತು ತಮ್ಮ ಆಶ್ರಮಕ್ಕೆ ಹೊರಟರು.
    ಮಾರ್ಗಮಧ್ಯದಲ್ಲಿ ಒಂದು ನದೀ ತೀರದಲ್ಲಿ ಬಂಡಿಯನ್ನು ನಿಲ್ಲಿಸಿ, ಮಧ್ಯಾಹ್ನವಾದ್ದರಿಂದ ಮಾಧ್ಯಾಹ್ನಿಕವನ್ನು ಮಾಡುವುದಕ್ಕಾಗಿ ಕೌಂಡಿನ್ಯರು ನದಿಯ ಕಡೆಗೆ ಹೊರಟರು. ಆ ದಿವಸವು ಅನಂತಪದ್ಮನಾಭ ಚತುರ್ದಶಿಯಾದುದರಿಂದ ಕೆಂಪು ಸೀರೆಗಳನ್ನುಟ್ಟು ಕೊಂಡು ಅನೇಕ ಮಂದಿ ಸ್ತ್ರೀಯರು ಅತಿಭಕ್ತಿಯಿಂದ ಬೇರೆಬೇರೆಯಾಗಿ ಅನಂತಪದ್ಮನಾಭ ಸ್ವಾಮಿಯನ್ನು ಪೂಜೆ ಮಾಡುತ್ತಿರಲಾಗಿ, ಕೌಂಡಿನ್ಯರ ಸತಿಯಾದ ಶೀಲೆಯು ಅವರನ್ನು ಕಂಡಳು. ಅವರ ಸಮೀಪಕ್ಕೆ ಹೋಗಿ “ಮಾತೆಯರೆ, ನೀವು ಮಾಡುತ್ತಿರುವ ಪೂಜೆ ಎಂಥಾದ್ದು? ಯಾವ ದೇವರನ್ನು ಪೂಜಿಸುತ್ತಿದ್ದೀರಿ? ಇದರ ಹೆಸರೇನು? ನನಗೂ ಹೇಳಬೇಕೆಂದು” ಕೇಳಿದಳು.
    ಆ ಸ್ತ್ರೀಯರು, “ನಾವು ಅನಂತನನ್ನು ಪೂಜಿಸುತ್ತಿರುವೆವು.
    9 min
  • *ಆ ಕಾಲ ಬಹಳ ಚೆನ್ನಾಗಿತ್ತು* 🔵🟢🟣
    *ಆ ಕಾಲ ಬಹಳ ಚೆನ್ನಾಗಿತ್ತು*
    🔵🟢🟣
    *ಒಂದು* ಸಲ ರೇಡಿಯೋನಲ್ಲಿ ಕೇಳಿದರೆ ಸಾಕು ಸಿನಿಮಾ ಹಾಡು ಬಾಯಿಪಾಠ ಆಗ್ತಿತ್ತು
    ----------------------------
    *ಕುಳಿತಿರೋ* ಕಡೆ ಬಸ್ಸುಗಳಲ್ಲಿ ದಿನ ಪತ್ರಿಕೆ ತಂದು ಮಾರಾಟ ಮಾಡುತಿದ್ರು
    ----------------------------
    *ಎಲ್ಲರ* ಮನೆಯಲ್ಲೂ ಸೈಕಲ್ ಇತ್ತು
    -----------------------------
    *ಎಲ್ಲ* ಬಸ್ಸುಗಳಲ್ಲೂ ಸೀಟ್ ಸಿಗ್ತಾ ಇತ್ತು
    -----------------------------
    *ಮದುವೆ* ಮನೆಗಳಲ್ಲಿ ಕೆಳಗೆ ಕೂರಿಸಿ ಊಟ ಬಡುಸ್ತಿದ್ರು
    ----------------------------
    ಕಪಿಲ್ ದೇವ್ ಕ್ರಿಕೆಟ್ ೫ ದಿನಗಳ ಟೆಸ್ಟ್ ಫೆಂಟಾಸ್ಟಿಕ್
    -------------------------------
    ಪ್ರಜಾಮತ, ಸುಧಾಗಳಲ್ಲಿ ಒಳ್ಳೆಯ ಧಾರವಾಹಿ, ಕಥೆಗಳು ಬರುತ್ತಿತ್ತು.
    -------------------------------
    ಮನೆ ಮನೆಗಳಲ್ಲಿ ಟೇಪ್ ರೆಕಾರ್ಡರ್ ನಲ್ಲಿ ಸಂಗೀತ ಕೇಳ್ತಿದ್ರು
    -------------------------------
    ಮನೆ ಮುಂದುಗಡೆ ಹೆಂಗಸರು ಸಾರಿಸಿ ರಂಗೋಲಿ ಹಾಕ್ತಿದ್ರು
    -------------------------------
    *ಸಿನೆಮಾಗೆ* ಹೋಗೋಕ್ಕೆ ಎರಡು ಮೂರು ದಿನಗಳ ಪ್ಲಾನ್
    ಹಾಕ್ಬೇಕಿತ್ತು
    -------------------------------
    *ಯುಗಾದಿ,* ದೀಪಾವಳಿ ಹಬ್ಬ ಬರೋದಿಕ್ಕೆ ಒಂದು ತಿಂಗಳು ಮುಂಚಿತವಾಗಿ ಕಾಯುತಿದ್ವಿ
    ------------------------------
    ಆ ಕಾಲಕ್ಕೆ ಟಾನ್ಸಿಲ್ಸ್ ದೊಡ್ಡ ಆಪರೇಷನ್
    -----------------------------
    ರೇಡಿಯೋ ನಲ್ಲಿ ನಾಟಕಗಳು ಬಲು ಚೆನ್ನಾಗಿರುತ್ತಿತ್ತು
    -------------------------------
    *ಸುಮಾರು* ಎಲ್ಲರೂ ಸರ್ಕಾರಿ ಶಾಲೆಯಲ್ಲೇ ಓದಿದ್ವಿ
    ----------------------------
    *ರಸ್ತೆಯಲ್ಲಿ* ಯಾವಾಗಲೋ ಒಂದು ಕಾರು ಹೋಗ್ತಿತ್ತು
    -------------------------------
    ಕನ್ನಡ ಮೇಷ್ಟರಿಗೆ ಸರಿ ಸಾಟಿ ಯಾರು ಇರಲಿಲ್ಲ
    -------------------------------
    ಸುಲಭವಾಗಿ ವಧು ಸಿಕ್ಕುತಿದ್ಲು
    -------------------------------
    ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸನ್ನು ಗೆಲ್ಲುವುದು ಸಾಧ್ಯವಿರಲಿಲ್ಲ
    -------------------------------
    *ಮಾರ್ಕೆಟ್ ಗೆ* ಹೋಗಲು ಹತ್ತು ರೂಪಾಯಿ ಸಾಕಾಗುತ್ತಿತ್ತು
    -------------------------------
    ಅಪ್ಪ ಅಮ್ಮನ ಪಕ್ಕದಲ್ಲಿ ಆಗಾಗ ಮಲಗುತಿದ್ವಿ
    -------------------------------
    *ಉರಿ* ಬಿಸಿಲಿನಲ್ಲೂ ಚಪ್ಪಲಿ ಇಲ್ಲದೆ ನಡೆಯುತ್ತಿದ್ದೆವು
    -------------------------------
    ಹೇರ್ ಕಟ್ ಮಾಡಲು ಎರಡು ರೂಪಾಯಿ ಶೇವಿಂಗ್ ಗೆ ಐವತ್ತು ಪೈಸೆ
    -------------------------------
    ಮದುವೆ ವಯಸ್ಸಿನ ಹೆಣ್ಣು ಮಕ್ಕಳು ಲಂಗ ದಾವಣಿ ಹಾಕುತಿದ್ರು
    -------------------------------
    *ರಸ್ತೆಯಲ್ಲಿ* ಲಗೋರಿ ಆಟ ಸೈಕಲ್ ಟೈಯರ್ ಓಡಿಸುತಿದ್ವಿ
    -----------------------------
    ಎಸ್ ಎಲ್ ಬೈರಪ್ಪ , ತ್ರಿವೇಣಿ ಕಾದಂಬರಿಗಳು ಮನೆ ಮಾತಾಗಿತ್ತು
    ------------------------------
    ನವಿಲು ಗರಿ ಮರಿ ಹಾಕುವುದು ಎಂದು ಪುಸ್ತಕದ ನಡುವೆ ಇಟ್ಟು ದಿನ ಕಾಯುತ್ತಿದ್ದೆವು
    -------------------------------
    ಐದು ರೂಪಾಯಿ ಕಳೆದುಕೊಂಡೆ ಅಂತ ಅಪ್ಪನ ಹತ್ತಿರ ಒದೆ ತಿಂದೆ.
    -------------------------------
    ನಾಲ್ಕನೇ ತರಗತಿಯಿಂದ ಮಾತ್ರ ಇಂಗ್ಲಿಷ್ ಪಾಠ ಎಂಟನೇ ಕ್ಲಾಸ್ ವರೆಗೂ ಅರ್ಧ ನಿಕ್ಕರು
    -------------------------------
    *ಉಸಿರಾಡಲು* ಶುದ್ಧ ಗಾಳಿ ಇತ್ತು
    ಕುಡಿಯುವ ನೀರನ್ನು ಯಾರು ಖರೀದಿಸಲಿಲ್ಲ
    -------------------------------
    *ಲವ್* ಮಾಡೋದು ಥ್ರಿಲ್ ಆಗಿತ್ತು
    -------------------------------
    ಸಿನಿಮಾ ಹಾಡಿನ ಪುಸ್ತಕ ಪುಟ ಪಾತ್ ನಲ್ಲಿ ಮಾರುತಿದ್ರು
    -------------------------------
    ಒಟ್ಟಿನಲ್ಲಿ ಬಹಳ ಮರ್ಯಾದೆ ಇದ್ದಂತಹ ಕಾಲ
    ---------------------------
    *ಕಳೆದು ಹೋದದ್ದು* ದಿನಗಳು ಮಾತ್ರವಲ್ಲ... ನಮ್ಮ ಸುಖಗಳು ಕೂಡ
    ------------------------------
    *ಅದ್ಬುತವಾದ ನೆನಪುಗಳು*
    ಅಹುದು ಬದಲಾವಣೆಗಳನ್ನು ತಂದಿರುವೆವು
    ಈ ಕಾಲದ ಯುವಕರಿಗೆ ವಿಭಿನ್ನ ಸುಖಗಳು
    ಆದರೂ ಆ ಸುಖಗಳು ಸುಖವಾಗಿ ಉಳಿದಿಲ್ಲ
    *ನೆನಪಿಸಿಕೊಳ್ಳಲು ಇದು ಒಂದು ಸಾಕು*
    🙏🙏🙏
    6 min
  • ಬದುಕೆಂಬ ಯುದ್ದ ಭೂಮಿಯ ಸಂಘರ್ಷದಲ್ಲಿ ಹುಟ್ಟುವ ಅನುಭಾವ..........
    ದೈವತ್ವ ( ಒಳ್ಳೆಯತನ ) ಮತ್ತು ರಾಕ್ಷಸತ್ವದ ( ಕೆಟ್ಟತನ ) ಸಂಘರ್ಷದಲ್ಲಿ ಹುಟ್ಟುವ ಅಮೃತತ್ವ ( ಅರಿವು ) ಎಂಬ ಅನುಭಾವ....
    ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾ ಒಲಿದೆ...
    ಅಕ್ಕಮಹಾದೇವಿ,
    ಆಸೆಯೇ ದುಃಖಕ್ಕೆ ಮೂಲ....
    ಗೌತಮ ಬುದ್ಧ,
    ಕಾಯಕವೇ ಕೈಲಾಸ....
    ಬಸವಣ್ಣ,
    ಸತ್ಯಮೇವ ಜಯತೇ....
    ಮಹಾತ್ಮ ಗಾಂಧಿ,
    ನಿನಗೆ ಮರ್ಯಾದೆ ಇಲ್ಲದ ಜಾಗದಲ್ಲಿ ನಿನ್ನ ಚಪ್ಪಲಿಯನ್ನು ಸಹ ಬಿಡಬೇಡ....
    ಬಾಬಾ ಸಾಹೇಬ್ ಅಂಬೇಡ್ಕರ್,
    ಇಲ್ಲಿ ಯಾವುದನ್ನು ಸೃಷ್ಡಿಸಲು ಸಾಧ್ಯವಿಲ್ಲ, ಮತ್ತು ನಾಶ ಪಡಿಸಲು ಸಾಧ್ಯವಿಲ್ಲ, ಎಲ್ಲವೂ ರೂಪಾಂತರ....
    ವೇದವ್ಯಾಸರು,
    ಹೀಗೆ ಇನ್ನೂ ಅನೇಕ ದಾರ್ಶನಿಕರು ತಾವು ಕಂಡ ಅನುಭವದ ಸತ್ಯಗಳನ್ನು ಅನುಭಾವಿಸಿ ಹೇಳಿದ್ದಾರೆ.....
    ಇವು ಸಾರ್ವಕಾಲಿಕ ಹೇಳಿಕೆಗಳಾಗಲು ಅವರು ಅನುಭವಿಸಿದ ಬದುಕು ತುಂಬಾ ಕಾಠಿಣ್ಯದಿಂದ, ಗೊಂದಲದಿಂದ, ನೋವಿನಿಂದ, ನಿರಾಸೆಯಿಂದ, ಹತಾಶೆಯಿಂದ, ಪುಟಿದೇಳುವ ಜೀವನೋತ್ಸಾಹದಿಂದ, ಅಪಾರ ತಾಳ್ಮೆಯಿಂದ ಕೂಡಿರುತ್ತದೆ. ಎಷ್ಟೋ ಬಾರಿ ಸಾವಿನ ದವಡೆಯಿಂದ, ಅವಮಾನದ ಅಂಚಿನಿಂದ ನುಸುಳಿ ಬಂದಿರುತ್ತಾರೆ. ಉತ್ತರವಿಲ್ಲದ, ಪರಿಹರಿಸಲಾಗದ ಸಂಘರ್ಷಗಳು ಅವರನ್ನು ಕಾಡಿರುತ್ತವೆ.
    ಅವರಲ್ಲಿ ಮೂಡಿದ ದೈವತ್ವದ ಗುಣಲಕ್ಷಣಗಳಿಗೆ ಕಾರಣ ಅವರು ಹೋರಾಡಿರುವುದು ಸಮಾಜ ಮತ್ತು ತಮ್ಮೊಳಗಿ ರಾಕ್ಷಸತ್ವದ ವಿರುದ್ಧ. ಹಾಗಿದ್ದಾಗ ಮಾತ್ರವೇ ಈ ಚಿಂತನೆಗಳು ಮೂಡಲು ಸಾಧ್ಯ. ಸಹಜ ಪರಿಸ್ಥಿತಿಯಲ್ಲಿ ಅಥವಾ ಸಣ್ಣ ಪುಟ್ಟ ಕಷ್ಟಗಳಿಗೆ ಈ ರೀತಿಯ ಶಕ್ತಿ ಇರುವುದಿಲ್ಲ.
    ಉದಾಹರಣೆಗೆ ಅಕ್ಕಮಹಾದೇವಿಯವರ ಉದಾಹರಣೆಯನ್ನೇ ತೆಗೆದುಕೊಳ್ಳಿ,
    ಸಾವು ಇರದ, ಕೇಡು ಬಯಸದ, ರೂಪವಿರದ ಚೆಲುವ ನನ್ನ ಗಂಡನಾಗಬೇಕು ಎನ್ನುತ್ತಾರೆ.
    ಈ ವಾಕ್ಯಗಳನ್ನು ಗಮನಿಸಿದಾಗ ನನಗೆ " ಕ್ಷಣಿಕ ಬದುಕಿನ ಮನುಷ್ಯ ಜೀವವನ್ನು ಪ್ರೀತಿಸುವುದು ವ್ಯರ್ಥ, ಎಷ್ಟೇ ಆದರೂ ಅದು ಆಳಿಯುತ್ತದೆ, ಅದರಿಂದ ವಿರಹದ ವೇದನೆ ಏಕೆ " ಎಂಬ ಭಯದಿಂದ ಅಥವಾ ಅರಿವಿನಿಂದ ಮೂಡಿದ ಸ್ಥಿತ ಪ್ರಜ್ಞೆತೆ ಇರಬೇಕು,
    ಅಥವಾ,
    ಅಕ್ಕಮಹಾದೇವಿ ಪುರುಷ ಸಮಾಜದಿಂದ ಬಹಳ ನಿರೀಕ್ಷಿಸಿ ಅಪಾರ ಶೋಷಣೆಗೆ ಒಳಗಾಗಿ ತೀವ್ರ ನಿರಾಸೆಗೆ ಒಳಗಾಗಿರಬೇಕು. ಇವರ ಸಹವಾಸವೇ ಬೇಡ " ಎಂಬ ಅರ್ಥದಲ್ಲೂ ಹೇಳಿರಬಹುದು.
    ಅಥವಾ
    ಆ ರೀತಿಯ ಇನ್ನೇನಾದರು ಘಟನೆ ಆಕೆಯ ಜೀವನದಲ್ಲಿ ಅಥವಾ ಮನಸ್ಸಿನಲ್ಲಿ ಗಾಢ ಪರಿಣಾಮ ಬೀರಿರಬೇಕು.
    ಗೌತಮ ಬುದ್ಧ ಎಲ್ಲ ರೀತಿಯ ಆಸೆಗಳು ದುರಾಸೆಗಳಾಗಿ ಬದುಕನ್ನು ಸರ್ವನಾಶದ ದಿಕ್ಕಿಗೆ, ಅಪಾರ ನೋವಿಗೆ ದೂಡುವುದನ್ನು ಬಹುಶಃ ಅನುಭವಿಸಿಯೇ ಹೇಳಿರಬೇಕು. ಆತ ದೇಹ ಮನಸ್ಸುಗಳನ್ನು ಅಪಾರವಾಗಿ ದಂಡಿಸಿ, ಧ್ಯಾನಿಸಿ, ಚಿಂತಿಸಿ ಈ ತೀರ್ಮಾನಕ್ಕೆ ಬಂದಿರಬೇಕು.
    ಮಹಾವೀರರು ಪ್ರತಿಪಾದಿಸಿದ ಅಹಿಂಸೆಯ ಮಹತ್ವದ ಹೇಳಕೆಗೆ ಅವರು ಆ ಕಾಲದಲ್ಲೇ ಎಷ್ಟು ಹಿಂಸೆಯನ್ನು ನೋಡಿದ್ದಾರೋ ಏನೋ,
    ಗಾಂಧಿಯವರ ಸತ್ಯದೊಂದಿಗಿನ ಪ್ರಯೋಗದಲ್ಲಿ ಅದೆಷ್ಟು ಸುಳ್ಳುಗಾರರು ಅವರನ್ನು ವಂಚಿಸಿರುವ ನೋವು ಕಾಡಿದೆಯೋ,
    ಅಂಬೇಡ್ಕರ್ ಅವರ ಚಪ್ಪಲಿಯ ಹೇಳಿಕೆ,ಅವರು ಅನುಭವಿಸಿದ ಸಾಮಾಜಿಕ ಅವಮಾನದ ಅತ್ಯಂತ ಆಳ ನೋವಿನ ಪ್ರತಿಬಿಂಬವೇ ಆಗಿರಬೇಕು. ಇಲ್ಲದಿದ್ದರೆ ಆ ಮಾತುಗಳು ಅವರಿಂದ ದಾಖಲಾಗುತ್ತಿರಲಿಲ್ಲ.
    ಕಾಯಕದ ಮಹತ್ವ, ಸಮಾನತೆಯ ಆಶಯ ಸಾರಿದ ಬಸವಣ್ಣ ಎಷ್ಟು ಮತ್ತು ಏನೇನು ಸಂಕಟಗಳನ್ನು ಅನುಭವಿಸಿದರೋ, ಅದು ಅವರಲ್ಲಿ ಎಷ್ಟು ಆಳದ ಗಾಯವನ್ನು ಉಂಟುಮಾಡಿದೆಯೋ,
    ಹೀಗೆ,ಎಲ್ಲರೂ ತುಂಬಾ ಆಳವಾದ ಜೀವನಾನುಭವದಲ್ಲಿ ಬೆಂದಿರಬೇಕು ಮತ್ತು ನೊಂದಿರಬೇಕು.
    ಈ ಎಲ್ಲವೂ ಅವರ ಬದುಕಿನ ಘರ್ಷದಿಂದ ಉಂಟಾದ ಚಿಂತನೆಯಲ್ಲಿ ಮೂಡಿದ ಅಮೃತಗಳೇ. ಬರಹಗಾರರು ಬಹಳಷ್ಟು ವಿಭಿನ್ನತೆಯಿಂದ ಅತ್ಯುತ್ತಮ ವಾಕ್ಯಗಳನ್ನು ಬರೆಯಬಹುದು. ಆದರೆ ‌ಸಾರ್ವಕಾಲಿಕ ಸತ್ಯಗಳನ್ನು ಬರೆಯಲು ತುಂಬಾ ತುಂಬಾ ಆಳದ ಅನುಭವ ಬೇಕಾಗುತ್ತದೆ. ಅದನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.
    ಬದುಕೊಂದು ಯುದ್ದ ಭೂಮಿ,
    ಅದೊಂದು ಪ್ರಯೋಗ ಶಾಲೆ,
    ಕೆಲವರಿಗೆ ಸಹಜವಾಗಿ, ಮತ್ತೆ ಕೆಲವರಿಗೆ ಅಸಹಜವಾಗಿ ಜೀವನದ ಘಟನೆಗಳು ಸಂಭವಿಸುತ್ತಿರುತ್ತದೆ. ಅದಕ್ಕೆ ಪ್ರತಿಕ್ರಿಯಿಸುವ ರೀತಿಯೇ ನಮ್ಮೊಳಗಿನ ಸಾಮರ್ಥ್ಯವನ್ನು ಹೊರಹಾಕುತ್ತದೆ. ಆ ಹೊರ ಹಾಕುವಿಕೆಯೇ ಮಹಾತ್ಮರನ್ನು ಅಥವಾ ದೈವಿಕ ಶಕ್ತಿಯ ವ್ಯಕ್ತಿಗಳನ್ನು ಸೃಷ್ಟಿಸುತ್ತದೆ.
    ಆದ್ದರಿಂದ ನೀವು ಅನುಭವಿಸುವ ಕಷ್ಟಗಳು, ರಾಕ್ಷಸತ್ವದ ವಿರುದ್ಧ ಹೋರಾಟ ಕೆಲವೊಮ್ಮೆ ನಿಮ್ಮನ್ನು ದೈವತ್ವಕ್ಕೆ ಮುನ್ನಡೆಸಬಹುದು. ಆ ಹೋರಾಟ ಸಾಕಷ್ಟು ದೀರ್ಘಕಾಲ ಉಳಿಯಬಹುದು.
    6 min
  • ಜೀವನದಲ್ಲಿ ಕೆಲವೊಮ್ಮೆ….
    ಜೀವನದಲ್ಲಿ ಕೆಲವೊಮ್ಮೆ….
    ಕೆಲವರಿಗೆ ಒಳ್ಳೆಯದನ್ನು ಚಿಂತಿಸಿದರೆ ಒಳ್ಳೆಯದು ಲಭಿಸುವುದಿಲ್ಲ
    ಕೆಲವರಿಗೆ ನಿಯತ್ತಿಗೆ ಬದಲು ನಿಯತ್ತು ಮರಳಿಬರುವುದಿಲ್ಲ
    ಕೆಲವರಿಗೆ ಪ್ರಾರ್ಥನೆಯ ಬದಲು ಪ್ರಾರ್ಥನೆ ಸಿಗುವುದಿಲ್ಲ
    ಕೆಲವರಿಗೆ ಪ್ರೀತಿಯ ಬದಲು ಪ್ರೀತಿ ದೊರಕುವುದಿಲ್ಲ
    ಕೆಲವರಿಗೆ ಖುಷಿಯ ಬದಲಿಗೆ ಖುಷಿಯೇ ವೃಷ್ಟಿಯಾಗುವುದಿಲ್ಲ.
    ಅದು ಹೇಗೆಂದರೆ...
    ಈ ಭೂಮಿಯಲ್ಲಿ ಚೆನ್ನಾಗಿ ನಿಷ್ಟೆಯನ್ನು ಕಾಪಾಡಿ ಜೀವಿಸುತ್ತಿದ್ದೇನೆ. ಆದ್ದರಿಂದ ಭೂಮಿ ಇರುವ ತನಕ ಈ ಭೂಮಿಯು ನನ್ನ ಇಲ್ಲೇ ಜೀವಂತವಾಗಿರಿಸುತ್ತದೆ - ಎಂದು ಚಿಂತಿಸುವುದಕ್ಕೆ ಸಮ….. ಅಲ್ಲವೇ?
    ಜೀವನವೆಂಬ ಕಟ್ಟಡವು ನೋವು-ದುಃಖ-ಕಷ್ಟದ ಗೋಡೆಯಾದರೂ ಮನದಲ್ಲಿ ಸತ್ಯದ ಸಂಪತ್ತು ಇದ್ದರೆ ಸುಖ ನಿದ್ರೆಯೇ ಅತ್ಯಂತ ದೊಡ್ಡ ಶ್ರೀಮಂತಿಕೆ.
    ಜೀವನ ಪ್ರತೀ ಕ್ಷಣ ಒಂದು ಯುದ್ದದಂತೆ,
    ಸೋಲಿನಲ್ಲಿ ಕಲಿತರೆ,
    ಆ ಕಲಿಕೆಯಲ್ಲೇ ಗೆಲುವಿದೆಯೆಂದು ಮುಂದುವರಿಯಬೇಕು.
    ನಾವು ಎನಿಸಿದ್ದು ಜೀವನದಲ್ಲಿ ಕೆಲವೊಮ್ಮೆ ಸಿಗುವುದಿಲ್ಲ ಆವಾಗ ಇದ್ದುದರಲ್ಲಿ ಸುಖ ಪಡಬೇಕು.
    ಅಂದರೆ…... , ಹೂ ಅರಳದ ಗಿಡವಾಗಿದ್ದಲ್ಲಿ
    ಅದರ ಮುಳ್ಳಿನೊಂದಿಗೆ ಸೌಂದರ್ಯ ಕಂಡು, ಹೊಂದಾಣಿಕೆ ಮಾಡಬೇಕು. ನಕ್ಷತ್ರ-ಚಂದಿರನಿಲ್ಲದ ರಾತ್ರಿಯಲ್ಲಿ ಮನದೊಳಗಿನ ದೀಪ ಬೆಳಗಿಸಿ ಆತ್ಮದ ಕಣ್ತೆರೆದು ನೋಡಬೇಕು.
    ನಗಬೇಕಾದಾಗ ಕಣ್ಣೀರು ಬಂದರೆ,
    ಆ ಕಣ್ಣಿನಿಂದ ಅಳಲನ್ನು ತೋರಲು ಅಸಾಧ್ಯ.
    ಅಳಬೇಕಾದ ಕಣ್ಣಿಗೆ ಕಣ್ಣೀರೇ ಇಲ್ಲದಿದ್ದರೆ,
    ಆ ಕಣ್ಣಿನಿಂದ ನಗುವನ್ನು ತೋರಲು ಸಿದ್ದ ಸಾಧ್ಯ.
    ಆದ್ದರಿಂದ ಎದೆಗುಂದದೆ ದುಃಖ ಕಷ್ಟಗಳ ಜೀವನದ ಸಾಗರವನ್ನು ನಗುತ್ತಾ ದಾಟುವುದೇ ಸರಿ.
    ಕೆಲವು ಘಟನೆ ಅಥವಾ ಕೆಲವರು ನಮಗೆ ಜೀವನಪರ್ಯಂತ ನೋವು ಆಗಿರುತ್ತಾರೆ.
    ಅದಕ್ಕೆ ಪರ್ಯಾಯವಾಗಿ ಇನ್ನೊಂದು ಘಟನೆ/ ಸನ್ನಿವೇಶ ಅಥವಾ ವ್ಯಕ್ತಿ ನಮಗೆ ಔಷಧಿಯಾಗಿ ಸಿಗಬಹುದು / ಬರಬಹುದು.
    ಜೀವನದ ದಾರಿಯಲ್ಲಿ ಹಲವರು
    ಒಂದು ದಿನ ದೂರವಾಗಲು ಪರಿಚಿತರಾಗಿ ,
    ನಮಗೆ ಏಕಾಂತತೆಯಲ್ಲಿ ಅವರನ್ನು
    ನೆನೆದು ಕೊಳ್ಳಲು ನೆನಪಿನ ಭಂಡಾರ
    ಅಡವಿಟ್ಟು ಹೋಗುತ್ತಾರೆ.
    ಜೀವನದ ಪಥದಲ್ಲಿ ಕಳೆದು ಹೋದ
    ಕ್ಷಣ ಮರಳಿ ಪಡೆಯಲಾಗುವುದಿಲ್ಲ‌.
    ಜೀವನದಲ್ಲಿ ಮುನ್ನಡೆಯುವಾಗ
    ಸಿಗುವುದೇನಾದರೂ
    ಅದು ಸುಖವಾದರೂ-ದುಃಖವಾದರೂ
    ನನ್ನದೆಂದು ತಿಳಿದು ಅಪ್ಪಿಕೊಳ್ಳಬೇಕು,
    ಅದೇ ಬಿಸಿಲು ಅದೇ ನೆರಳು ಎಂದು ತಿಳಿದುಕೊಳ್ಳಬೇಕು.
    ಬಿಸಿಲಲ್ಲಿ ಪರಿಚಯವಾದವರು
    ಕೆಲವೊಮ್ಮೆ ನೆರಳಾಗುತ್ತಾರೆ.
    ಮಳೆಯಲ್ಲಿ ಪರಿಚಯವಾದರು
    ಕೆಲವೊಮ್ಮೆ ಮರುಭೂಮಿಯಲ್ಲಿ
    ಕಣ್ಮರೆಯಾಗುತ್ತಾರೆ.
    ಜೀವನ ಒಂದು ಏರಿಳಿತದ ಹಾಡು
    ಅದನ್ನು ಪ್ರತೀಯೊಬ್ಬನೂ ಅವನಿಗೆ ತಕ್ಕಂತೆ ಹಾಡಿ ಮುಗಿಸಬೇಕು. ಜೀವನ ಒಂದು ಶಪಥವೆಂದಾದರೆ, ಅದನ್ನು ನಿಭಾಯಿಸುವುದೇ ಜೀವನದ ಸೊಗಸಾದ ಕಲೆ.
    ನಾವೆಲ್ಲಾ ಈ ಭೂಮಿಯ ಮೇಲೆ
    ಬಾಡಿಗೆಗೆ ಜೀವನ ಮಾಡಲು ಬಂದವರು.
    ನಾವು ಹೋಗುವ ರಸ್ತೆಗೆ ಎಷ್ಟೋ ರಸ್ತೆಗಳು ಸೇರಬಹುದು,
    ಒಂದು ರಸ್ತೆ ಕೊನೆಯಾದರೆ,
    ಪಕ್ಕದ ಇನ್ನೊಂದು ರಸ್ತೆಯನ್ನು ಅಯ್ಕೆ ಮಾಡಬೇಕು.
    ಭೂಮಿಯು ತನ್ನ ಮೇಲ್ಮೈಯನ್ನು ಬೇರೆ ಬೇರೆ ಋತುಗಳಿಂದ ಬದಲಾಯಿಸುತ್ತಲೇ ಇರುತ್ತದೆ.
    ಪ್ರಕೃತಿಯ ಹವೆಯು- ಕೆಲವೊಮ್ಮೆ ಗುಡ್ಡ, ಕೆಲವೊಮ್ಮೆ ಪರ್ವತ, ಕೆಲವೊಮ್ಮೆ ಕಾಡು-ನಾಡು, ಕೆಲವೊಮ್ಮೆ ನದಿ-ಸಮುದ್ರದ ಒಡಲನ್ನು ಮುಟ್ಟಿ ಹೋಗುತ್ತದೆ.
    ಅಂದರೆ ಗಾಳಿ ತನ್ನ ದಾರಿಯನ್ನು ಯಾರಿಗೂ ಹೇಳದಂತೆ ಬದಲಾಯಿಸುವ ಹಾಗೇ ನಾವು ನಮ್ಮ ದಾರಿಯನ್ನು ಬದಲಾಯಿಸಬೇಕು.
    ಹಗಲು ರಾತ್ರಿಯನ್ನು ಸಹಪ್ರಯಾಣಿಕನಂತೆ ಜೊತೆಗಿರಿಸಬೇಕು.
    ಮುಂಜಾವು -ರಾತ್ರಿ ಆಗುತ್ತಲೇ ಇರುತ್ತದೆ, ಸಮಯವು ಅದರೊಂದಿಗೆ ತನ್ನ ಆಟವನ್ನು
    ಆಡುತ್ತಾ ಹೋಗುತ್ತದೆ, ನಾವು ಏನೇ ಹೇಳಿದರೂ ಅದು ನಮಗಾಗಿ ನಿಲ್ಲುವುದಿಲ್ಲ, ಮರಳುವುದೂ ಇಲ್ಲ.
    ಜೀವನದಲ್ಲಿ ಕಳೆದು ಹೋದ ಗರಿಷ್ಟ ದಿನಗಳಲ್ಲಿ,
    ಚಿಕ್ಕ ಪುಟ್ಟ ಪ್ರೀತಿಯ ಕ್ಷಣಗಳೇ ಅಮೂಲ್ಯವಾದ ಸುಮಧುರ ಎದೆಬಡಿತ.
    ಈ ಪ್ರಪಂಚ ಬಿಟ್ಟರೂ, ಬಿಡಲಾಗದ ನಂಟು ಅಂದರೆ- ಅವರೊಂದಿಗಿನ ಸುಮಧುರ ನೆನಪುಗಳ ಬಂಧನ.
    ಆತ್ಮದ ಹೊರಗಿನ ದೇಹವು,
    ಜೀವನದ ಆರಂಭದಿಂದ ಕೊನೆಯವರೆಗೆ
    ಬಾಲ್ಯ, ಹದಿಹರೆಯ,ಯೌವನ, ಮುಪ್ಪು..... ಎಂದು ದೇಹವನ್ನು ಬದಲಾಯಿಸುತ್ತಲೇ ಇರುತ್ತದೆ.
    ಯಾಕೆಂದರೆ
    ಬದಲಾವಣೆ ಜಗದ ನಿಯಮ....
    ಅದೇ ಜೀವನದ ಆಯಾಮ
    ಕೊನೆಗೆ ಸಿಗುವುದೊಂದೇ ವಿರಾಮ,
    ಅಲ್ಲಿಯವರೆಗೆ ನಾವಿರಿಸಬೇಕು
    ಸ್ನೇಹ ಭಾತೃತ್ವದ ಸಂಯಮ.
    ➖➖➖➖➖➖➖➖➖➖
    ➖➖➖➖➖➖➖➖➖➖
    6 min
  • ಅರಿವೇ ಗುರು 'ವಾಗಿ ನಮ್ಮೆಲ್ಲರನ್ನೂ ಮುನ್ನಡೆಸಲಿ
    ಹಿಟ್ಲರನ ಸೆರೆಯಿಂದ ಬಿಡುಗಡೆಯಾದ ಒಬ್ಬ ಶಿಕ್ಷಕರು ಇತರ ಶಿಕ್ಷಕ ಬಂಧುಗಳಿಗೆಂದು ಹೀಗೆ ಹೇಳಿದ್ದರು :
    “ನಾನು ನಾಜಿ಼ಗಳ ಬಂಧನದಿಂದ/ಯಾತನ ಶಿಬಿರದಿಂದ ಬದುಕುಳಿದೆ. ನನ್ನ ಕಣ್ಣಿಗೆ ಯಾವ ವ್ಯಕ್ತಿಯೂ ಕಾಣಬಾರದ ವಿವರಗಳು ಕಂಡವು. ಮಕ್ಕಳಿಗೆ ವಿಷ ಉಣಿಸಿದವರು ವಿದ್ಯಾವಂತ ಡಾಕ್ಟರುಗಳು. ಹಸುಗೂಸುಗಳನ್ನ ಕೊಲ್ಲುವ ಇಂಜೆಕ್ಷನ್ ಚುಚ್ಚಿದವರು ತರಬೇತಿ ಪಡೆದಿದ್ದ ನರ್ಸುಗಳು. ಮಹಿಳೆಯರು ಮತ್ತು ಮಕ್ಕಳನ್ನು ಗುಂಡಿಟ್ಟು ಕೊಂದವರು ಪದವೀಧರ ಸೈನಿಕರು. ಗ್ಯಾಸ್ ಚೇಂಬರ್ ನಿರ್ಮಿಸಿದವರು ವಿದ್ಯಾವಂತ ಇಂಜಿನಿಯರುಗಳು. ಹಾಗಾಗಿ, ನನಗೆ ನಮ್ಮ ಶಿಕ್ಷಣ ಪದ್ಧತಿಯ ಬಗ್ಗೆ ಅನುಮಾನ ಹುಟ್ಟಿದೆ. ಶಿಕ್ಷಕರಿಗೆ ನನ್ನ ಮನವಿಯಿಷ್ಟೇ:
    “ನಿಮ್ಮ ಬಳಿ ಕಲಿತವರು ಮಾನವೀಯತೆ ಮೊದಲು ಕಲಿಯಲಿ. ನಿಮ್ಮಿಂದ ಶಿಕ್ಷಣ ಪಡೆದವರು ರಕ್ಕಸರು, ಮನೋರೋಗಿಗಳು, ವಿದ್ಯಾವಂತ ವಿಕೃತರು, ವಿಘ್ನ ಸಂತೋಷಿಗಳು ಆಗದಿರಲಿ. ಓದು, ವ್ಯಾಕರಣ, ಚರಿತ್ರೆಯ ಕಂಠಪಾಠ, ಗಣಿತ ಸೂತ್ರಗಳಿಗಿಂತ ಮುಖ್ಯವಾಗಿ ನಿಮ್ಮ ಬಳಿ ಕಲಿತ ಪ್ರತಿಯೊಬ್ಬರನ್ನೂ ಇತರರ ಬಗ್ಗೆ ಕರುಣೆ ಉಳ್ಳಂತಹ ಮನುಷ್ಯರಾಗುವಂತೆ ರೂಪಿಸಿ."
    🌻🌻🌻🌻🌻🌻🌻🌻🌻
    'ಅರಿವೇ ಗುರು 'ವಾಗಿ ನಮ್ಮೆಲ್ಲರನ್ನೂ ಮುನ್ನಡೆಸಲಿ 🙏🙏🙏🙏🙏
    4 min
  • ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ*ಗುರು ಸಾಕ್ಷಾತ್ ಪರಬ್ರಹ್ಮ*ತಸ್ಮ್ಯೆ ಶ್ರೀ ಗುರುವೇ ನಮಃ*ಶ್ರೀ ಗುರುಭ್ಯೋ
    ಶಿಕ್ಷಕ,ಗುರು ಎಂದೊಡನೆ ಓರ್ವ ಸಂಪನ್ನ ,ಆದರ್ಶ,ಗಾಂಭೀರ್ಯದ ವ್ಯಕ್ತಿಯ ಮುಖ ಕಣ್ಣೆದುರು ಬರುತ್ತದೆ. ಏನೂ ತಿಳುವಳಿಕೆ ಇಲ್ಲದ ಒಂದು ಮಗುವನ್ನು ತಿದ್ದಿ ತೀಡಿ ಬುದ್ಧಿವಂತನನ್ನಾಗಿ ಮಾಡುವ ಮಹತ್ತರ ಹೊಣೆಗಾರಿಕೆ ಶಿಕ್ಷಕರ ಮೇಲಿದೆ.ಅಂಥ ಮಹಾಪುರುಷರಾದ,ಹಲವಾರು ವರ್ಷ ಅಧ್ಯಾಪಕರಾಗಿ ದೇಶವಿದೇಶಗಳಲ್ಲಿ ದುಡಿದ,ಭಾರತದ ಸರ್ವಶ್ರೇಷ್ಠ ರಲ್ಲಿ ಓರ್ವ ರಾದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಇವರ ಜನ್ಮದಿನವನ್ನು *ಶಿಕ್ಷಕರ ದಿನ* ಎಂದು ಆಚರಿಸುತ್ತೇವೆ.ಓರ್ವ ಸಾತ್ವಿಕ, ಗುಣವಂತ,ಬುದ್ಧಿ ವಂತ,ಹೊಂದಾಣಿಕೆ ಯ ಬದುಕು ನಡೆಸುವ,ಜೀವನಮೌಲ್ಯಗಳನ್ನು ಅರಿತವ ಮತ್ತು ಸಮನ್ವಯಗೊಳಿಸಿ ಜೀವಿಸುವ ಕಲೆಯನ್ನು ಕಲಿಸುವ,ಸಂಸ್ಕೃತಿ, ಸಂಪ್ರದಾಯ, ಗೌರವ, ನಿಷ್ಠೆ ಇರುವಂಥ ವ್ಯಕ್ತಿ ಯನ್ನು ಕಲಿಸಿ ಸಮಾಜಕ್ಕೆ ನೀಡುವ ಮಹತ್ತರ ಜವಾಬ್ದಾರಿ ಅಧ್ಯಾಪಕರ ಹೆಗಲಮೇಲಿದೆ.ಓರ್ವ ಶಿಕ್ಷಕ ಕರ್ತವ್ಯ ದಲ್ಲಿದ್ದರೂ ಶಿಕ್ಷಕನೇ,ನಿವೃತ್ತಿ ಯಾದರೂ ಶಿಕ್ಷಕನೇ,ಕಡೆಗೆ ಉಸಿರು ನಿಂತರೂ ಹೇಳುವುದು ಶಿಕ್ಷಕ ಅಂತಲೇ.ಈ ಭಾಗ್ಯ ಯಾರಿಗುಂಟು ಯಾರಿಗಿಲ್ಲ. ಅಷ್ಟೂ ಪುಣ್ಯದ ಕೆಲಸ.ವೃತ್ತಿ ಗೆಅಪಚಾರ ಮಾಡದೆ,ಹೆತ್ತವರು ಇಟ್ಟ ನಂಬಿಕೆ ಯನ್ನು ಸತ್ಯವಾಗಿಸುವುದು ಆದ್ಯ ಕರ್ತವ್ಯ. ಮಗುವಿನ ತಳಪಾಯ ಗಟ್ಟಿಯಾಗಿಸಲೇ ಬೇಕು.ಇದರಲ್ಲಿ ಶಿಕ್ಷಕರೊಂದಿಗೆ ಹೆತ್ತವರು,ಪರಿಸರ,ಇಲಾಖೆಯ ಅಧಿಕಾರಿ ವೃಂದದವರು ಕೈಜೋಡಿಸಿ ದಾಗ ಗುಣಮಟ್ಟದ ಶಿಕ್ಷಣ ಖಂಡಿತಾ ನೀಡಬಹುದು.
    ಮಗುವಿನ ಮಾನಸಿಕ ಮಟ್ಟ,ಕೌಟುಂಬಿಕ ಹಿನ್ನೆಲೆ ಯರಿತು ಬೋಧಿಸುವ ಶಿಕ್ಷಕ ನೂರಕ್ಕೆ ನೂರು ಯಶಸ್ವಿಯಾಗಬಲ್ಲ ದಾರ್ಶನಿಕರ ಮಾತು.ಇಂದಿನ ಈ ವಿಷಮ ಪರಿಸ್ಥಿತಿ ಯಲ್ಲಿ ಅಧ್ಯಾಪಕರ ಹೊಣೆಗಾರಿಕೆ ಮಹತ್ತರವಾದುದಾಗಿದೆ.ಒಟ್ಟಿನಲ್ಲಿ ಹೊಂದಾಣಿಕೆ ಬಹುಮುಖ್ಯ. ಎಲ್ಲರ ಆಶಯವರಿತು ಶಿಕ್ಷಣದ ಚಟುವಟಿಕೆಗಳನ್ನು ಹಮ್ಮಿಕೊಂಡು ನಡೆಯಬೇಕಾಗಿದೆ.ಇಂಥ ಶಿಕ್ಷಕ ವೃಂದಕ್ಕೆ ನಮನಗಳನ್ನು ಸಲ್ಲಿಸೋಣ.
    *
    7 min
  • ಅನೇಕ ದೈವೀ ಗುಣಗಳಿಂದ ಸಂಪನ್ನ ಮತ್ತು ಪ್ರಭು ಶ್ರೀರಾಮಚಂದ್ರನ ದಾಸನಾಗಿರುವ ಮಹಾಬಲಿ ಹನುಮಾನ
    
     Menu
    
    Home > ಧರ್ಮಶಾಸ್ತ್ರ > ದೇವತೆಗಳು > ಮಾರುತಿ > ಅನೇಕ ದೈವೀ ಗುಣಗಳಿಂದ ಸಂಪನ್ನ ಮತ್ತು ಪ್ರಭು ಶ್ರೀರಾಮಚಂದ್ರನ ದಾಸನಾಗಿರುವ ಮಹಾಬಲಿ ಹನುಮಾನ !
    ಅನೇಕ ದೈವೀ ಗುಣಗಳಿಂದ ಸಂಪನ್ನ ಮತ್ತು ಪ್ರಭು ಶ್ರೀರಾಮಚಂದ್ರನ ದಾಸನಾಗಿರುವ ಮಹಾಬಲಿ ಹನುಮಾನ !
    April 4, 2017
    Share this on :
    TwitterFacebookWhatsapp
    
    ೧. ಶೈವ ಮತ್ತು ವೈಷ್ಣವ ಇವೆರಡೂ ಪಂಥಗಳ ಐಕ್ಯದ ಸಂಕೇತವಾಗಿರುವ ಏಕೈಕ ದೇವತೆ
    ‘ಭಾರತದಲ್ಲಿನ ಮುಖ್ಯ ಸಂಪ್ರದಾಯಗಳಲ್ಲಿ ಶೈವ ಮತ್ತು ವೈಷ್ಣವ ಇವೆರಡು ಸಂಪ್ರದಾಯಗಳಿವೆ. ಇವೆರಡೂ ಸಂಪ್ರದಾಯಗಳು ಶ್ರೇಷ್ಠವಾಗಿವೆ. ವಿಷ್ಣು ಮತ್ತು ಶಿವ ಪರಸ್ಪರರ ಪರಮ ಭಕ್ತರಾಗಿದ್ದಾರೆ. ಶಿವನು ರಾಮನ ನಾಮಜಪ ಮಾಡುತ್ತಾನೆ ಮತ್ತು ರಾಮನು ಶಿವನ ಉಪಾಸನೆ ಮಾಡುತ್ತಾನೆ. ವಿಷ್ಣು ಎಲ್ಲಕ್ಕಿಂತ ಶ್ರೇಷ್ಠ ಶೈವನಾಗಿದ್ದಾನೆ ಮತ್ತು ಶಿವನು ಸರ್ವಶ್ರೇಷ್ಠ ವೈಷ್ಣವನಾಗಿದ್ದಾನೆ. ಆದ್ದರಿಂದ ಶಿವನ ಅಂಶವಿರುವ ಹನುಮಾನನು ಪ್ರಭು ಶ್ರೀರಾಮನ ಪರಮ ಭಕ್ತನಾಗಿದ್ದಾನೆ. ಶೈವ ಮತ್ತು ವೈಷ್ಣವ ಇವರಲ್ಲಿ ಮತಭೇದಗಳಿದ್ದರೂ ಹನುಮಾನನು ಎರಡೂ ಸಂಪ್ರದಾಯಗಳಿಗೆ ವಂದನೀಯನಾಗಿದ್ದಾನೆ. ಈ ರೀತಿಯಲ್ಲಿ ಹನುಮಾನನು ಶೈವ ಮತ್ತು ವೈಷ್ಣವ ಇವೆರಡೂ ಪಂಥದವರ ಐಕ್ಯದ ಸಂಕೇತವಿರುವ ಏಕೈಕ ದೇವತೆಯಾಗಿದ್ದಾನೆ
    8 min
  • ಕೆಲವು ಪುರಾತನ ಭಾರತೀಯ ಆರೋಗ್ಯ ಸಲಹೆಗಳು. ಸಂಸ್ಕೃತದಲ್ಲಿ ಉಲ್ಲೇಖಗಳು
    Namasthe 🙏
    ಕೆಲವು ಪುರಾತನ ಭಾರತೀಯ ಆರೋಗ್ಯ ಸಲಹೆಗಳು.
    ಸಂಸ್ಕೃತದಲ್ಲಿ ಉಲ್ಲೇಖಗಳು
    *1 ಅಜೀರಣೀ ಭೋಜನಂ ವಿಷಮ್*
    ಈ ಹಿಂದೆ ತೆಗೆದುಕೊಂಡ ಊಟವು ಜೀರ್ಣವಾಗದಿದ್ದರೆ ಮತ್ತೆ ಊಟ ಮಾಡುವುದು ವಿಷವನ್ನು ತೆಗೆದುಕೊಳ್ಳುವುದಕ್ಕೆ ಸಮಾನವಾಗಿರುತ್ತದೆ. ಹಸಿವು ಹಿಂದಿನ ಆಹಾರ ಜೀರ್ಣವಾಗುವ ಒಂದು ಸಂಕೇತ.
    *2 ಅರ್ಧೋಗಹರಿ ನಿದ್ರಾ*
    ಸರಿಯಾದ ನಿದ್ರೆ ಅರ್ಧದಷ್ಟು ರೋಗಗಳನ್ನು ಗುಣಪಡಿಸುತ್ತದೆ.
    *3. ಮುದ್ಗಧಾಲಿ ಗಾಧವ್ಯಾಲಿ*
    ಎಲ್ಲಾ ದ್ವಿದಳ ಧಾನ್ಯಗಳಲ್ಲಿ ಹೆಸರು ಬೇಳೆ ಉತ್ತಮವಾಗಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇತರ ದ್ವಿದಳ ಧಾನ್ಯಗಳು ಒಂದು ಅಥವಾ ಇನ್ನೊಂದು ಅಡ್ಡ ಪರಿಣಾಮಗಳನ್ನು ಹೊಂದಿವೆ.
    *4. ಬಗ್ನಾಸ್ತಿ ಸಂಧಾನಕರೋ ರಸೋನಹ*
    _ಬೆಳ್ಳುಳ್ಳಿ ಮುರಿದ ಮೂಳೆಗಳನ್ನು ಸಹ ಸೇರಿಸುತ್ತದೆ .._
    *5 ಅತಿ ಸರ್ವತ್ರ ವರ್ಜಯೇತ್*
    _ಅತಿಯಾಗಿ ಸೇವಿಸುವ ಯಾವುದಾದರೂ, ಅದು ರುಚಿಯಾಗಿದ್ದರೂ, ಆರೋಗ್ಯಕ್ಕೆ ಒಳ್ಳೆಯದಲ್ಲ. ಮಿತವಾಗಿರಲಿ ._
    *6. ನಾಸ್ತಿಮೂಲಂ ಅನೌಷಧಂ*
    ಯಾವುದೇ ಔಷಧೀಯ ಪ್ರಯೋಜನವಿಲ್ಲದ ಯಾವುದೇ ತರಕಾರಿ ಇಲ್ಲ.
    *7 ನಾ ವೈದ್ಯಃ ಪ್ರಭುರಾಯುಷ*
    ಯಾವ ವೈದ್ಯರೂ ನಮ್ಮ ದೀರ್ಘಾಯುಷ್ಯದ ಅಧಿಪತಿ ಅಲ್ಲ. ವೈದ್ಯರಿಗೂ ಮಿತಿಗಳಿವೆ.
    *8. ಚಿಂತಾ ವ್ಯಾಧಿ ಪ್ರಕಾಶಯ*
    ಚಿಂತೆ ಅನಾರೋಗ್ಯವನ್ನು ಉಲ್ಬಣಗೊಳಿಸುತ್ತದೆ.
    *9. ವ್ಯಾಯಮಾಶ್ಚ ಸನೈಹಿ ಸನೈಹಿ*
    ಪ್ರತಿ ದಿನ ವ್ಯಾಯಾಮ ಮಾಡಿ. ಆದ್ರೆ ಯಾವುದೇ ವ್ಯಾಯಾಮವನ್ನು ನಿಧಾನವಾಗಿ ಮಾಡಿ. ವೇಗದ ವ್ಯಾಯಾಮ ದೇಹ ಮತ್ತು ಮನಸ್ಸಿಗೆ ಒಳ್ಳೆಯದಲ್ಲ.
    *10. ಅಜಾವತ್ ಚರ್ವಣಂ ಕುರ್ಯಾತ್*
    ನಿಮ್ಮ ಆಹಾರವನ್ನು ಮೇಕೆಯಂತೆ ಅಗಿಯಿರಿ. ಆತುರದಿಂದ ಆಹಾರವನ್ನು ನುಂಗಬೇಡಿ.
    ಲಾಲಾರಸ ಜೀರ್ಣಕ್ರಿಯೆಯಲ್ಲಿ ಮೊದಲು ಸಹಾಯ ಮಾಡುತ್ತದೆ.
    *11. ಸ್ನಾನ ನಾಮ ಮನಃಪ್ರಸಾದನಕಾರಂ ದುಃಸ್ವಪ್ನ ವಿಧವಾಸನಮ್*
    ಸ್ನಾನವು ಖಿನ್ನತೆಯನ್ನು ತೆಗೆದುಹಾಕುತ್ತದೆ. ಇದು ಕೆಟ್ಟ ಕನಸುಗಳನ್ನು ದೂರ ಮಾಡುತ್ತದೆ.
    *12. ನ ಸ್ನಾನಮ್ ಆಚರೇತ್ ಭುಕ್ತ್ವಾ*
    ಆಹಾರದ ನಂತರ ಎಂದಿಗೂ ಸ್ನಾನ ಮಾಡಬೇಡಿ
    *13. ನಾಸ್ತಿ ಮೇಘಸಮಂ ತೋಯಮ್*
    ಮಳೆನೀರಿಗೆ ಶುದ್ಧತೆಯಲ್ಲಿ ಯಾವುದೂ ಸಮವಿಲ್ಲ
    *14 ಅಜೀರ್ನೆ ಭೇಷಜಂ ವಾರಿ*
    ಅಜೀರ್ಣವನ್ನು ಸರಳ ನೀರು ಕುಡಿಯುವ ಮೂಲಕ ಪರಿಹರಿಸಬಹುದು.
    *15. ಸರ್ವತ್ರ ನೂತನಂ ಷಷ್ಠಂ ಸೇವಕನ್ನೇ ಪುರಥನಮ್*
    ಎಲ್ಲವೂ ತಾಜಾ ಇರುವಂತೆ ಯಾವಾಗಲೂ ಬಯಸುತ್ತವೆ. ಹಳೆ ಅನ್ನ ಮತ್ತು ಹಳೆಯ ಸೇವಕರನ್ನು ಹೊಸದಾಗಿಸಬೇಕು. (ಸೇವಕನ ವಿಷಯದಲ್ಲಿ ಇಲ್ಲಿ ನಿಜವಾಗಿಯೂ ಅರ್ಥವೇನೆಂದರೆ: ಅವನ ಕರ್ತವ್ಯಗಳನ್ನು ಬದಲಾಯಿಸಿ ಮತ್ತು ಕೊನೆಗೊಳಿಸಬೇಡಿ.)
    *16. ನಿತ್ಯಂ ಸರ್ವಾ ರಸಾಭ್ಯಾಸಃ*
    _ಎಲ್ಲಾ ರುಚಿಯನ್ನು ಹೊಂದಿರುವ ಸಂಪೂರ್ಣ ಆಹಾರವನ್ನು ತೆಗೆದುಕೊಳ್ಳಿ: ಉಪ್ಪು, ಸಿಹಿ, ಕಹಿ, ಹುಳಿ, ಖಾರ ಮತ್ತು ಒಗರು) ._
    *17. ಜಾತಾರಂ ಪೂರಯೇಧಾರ್ಧಂ ಅಣ್ಣಾಹಿ*
    ನಿಮ್ಮ ಹೊಟ್ಟೆಯ ಅರ್ಧಭಾಗವನ್ನು ಘನ ಆಹಾರದಿಂದ ತುಂಬಿಸಿ, ಕಾಲು ಭಾಗದಷ್ಟು ನೀರನ್ನು ತುಂಬಿಸಿ ಮತ್ತು ಉಳಿದನ್ನು ಖಾಲಿ ಬಿಡಿ.
    *18 ಭುಕ್ತ್ವೋಪ ವಿಶಾಥಸ್ಥಾಂದ್ರಾ*
    ಆಹಾರ ತೆಗೆದುಕೊಂಡ ನಂತರ ಎಂದಿಗೂ ಸುಮ್ಮನೆ ಕುಳಿತುಕೊಳ್ಳಬೇಡಿ. ಕನಿಷ್ಠ ಅರ್ಧ ಗಂಟೆ ನಡೆಯಿರಿ.
    *19. ಕ್ಷುತ್ ಸಾಧೂತಂ ಜನಯತಿ*
    ಹಸಿವು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಹಸಿವಾದಾಗ ಮಾತ್ರ ತಿನ್ನಿರಿ.
    *20. ಚಿಂತಾ ಜರಾಣಾಂ ಮನುಷ್ಯನಮ್*
    ಚಿಂತೆ ವೃದ್ಧಾಪ್ಯವನ್ನು ಬೇಗ ತರುತ್ತದೆ.
    *21. ಸತಂ ವಿಹಾಯ ಭೋಕ್ತವ್ಯಮ್*
    ಆಹಾರಕ್ಕೆ ಸಮಯ ಬಂದಾಗ, ನೂರು ಉದ್ಯೋಗಗಳಿದ್ದರೂಸಹ ಬದಿಗಿಡಿ.
    *22. ಸರ್ವ ಧರ್ಮೇಷು ಮಧ್ಯಮಾಮ್*
    ಯಾವಾಗಲೂ ಮಧ್ಯ ಮಾರ್ಗವನ್ನು ಆರಿಸಿ. ಯಾವುದರಲ್ಲೂ ಅತಿರೇಕಕ್ಕೆ ಹೋಗುವುದನ್ನು ತಪ್ಪಿಸಿ.
    ಶುಭಾಶಯಗಳು 🙏
    8 min
  • ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ… ಶ್ರೀ ಗುರು ರಾಘವೇಂದ್ರ ಸ್ವಾಮಿಗಳು
    ಶ್ರೀ ಗುರು ರಾಘವೇಂದ್ರ ಸ್ವಾಮಿಗಳು (೧೫೯೫-೧೬೭೧), ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸಂನ್ಯಾಸಿಗಳಲ್ಲಿ ಪ್ರಮುಖರು. ಅವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು. ಎರಡನೆಯ ಅವತಾರವು ಶ್ರೀ ವ್ಯಾಸರಾಯರು. ಭಕ್ತರು ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನ ‘ರಾಯರು, ಗುರುರಾಯರು, ಗುರುರಾಜರು’ ಎಂದು ಭಕ್ತಿಯಿಂದ ಕರೆಯುತ್ತಾರೆ.
    ಇವರ ಮೂಲ ಬೃಂದಾವನವು (ಸಶರೀರ) ಈಗಿನ ಆಂಧ್ರಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಕರ್ನಾಟಕದ ರಾಯಚೂರಿನಿಂದ ಸುಮಾರು ೧ ಗಂಟೆ ಪ್ರಯಾಣ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೇಟಿ ಕೊಡುತ್ತಾರೆ. ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಿಗೆಯವರೆಗೂ ಭವ್ಯ ಆರಾಧನೆ ನಡೆಯುತ್ತದೆ.
    8 min

About Dr Balakrishna Maddodi

From the publisher's feed

Hi