Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • ಪ್ರಕೃತಿ~~ವಿಕೃತಿ~~ಸಂಸ್ಕೃತಿ*
    *ಪ್ರಕೃತಿ~~ವಿಕೃತಿ~~ಸಂಸ್ಕೃತಿ*
    ®️ ಕಣ್ಣು ಪ್ರಕೃತಿ
    ಕೆಂಗಣ್ಣು ವಿಕೃತಿ
    ಕರುಣೆಯ ಕಣ್ಣು ಸಂಸ್ಕೃತಿ
    ®️ ಕೆನ್ನೆ ಪ್ರಕೃತಿ ,
    ಕೆನ್ನೆಗೆ ಬಾರಿಸೋದು ವಿಕೃತಿ
    ಕೆನ್ನೆ ಸವರಿ ಪ್ರೀತಿಯಿಂದ
    ಮಾತನಡೋದು ಸಂಸ್ಕೃತಿ
    ®️ಮೂಗು ಪ್ರಕೃತಿ
    ಇನ್ನೊಬ್ಬರ ವಿಚಾರದಲ್ಲಿ ಮೂಗು
    ತೋರಿಸೋದು ವಿಕೃತಿ
    ಮೂಗಿಗೊಂದು ಮೂಗುತಿ ಸಂಸ್ಕೃತಿ
    ®️ ಕಾಲು ಪ್ರಕೃತಿ
    ಒದೆತ ವಿಕೃತಿ
    ಕುಣಿತ ಸಂಸ್ಕೃತಿ
    ®️ ಆಚಾರ ಪ್ರಕೃತಿ
    ಅನಾಚಾರ ವಿಕೃತಿ
    ಸದಚಾರ ಸಂಸ್ಕೃತಿ
    ®️ ಆಸೆ ಪ್ರಕೃತಿ
    ದುರಾಸೆ ವಿಕೃತಿ
    ಸದಾಶಯ ಸಂಸ್ಕೃತಿ
    ®️ ನಮಗಾಗಿ ದುಡಿಯೊದು ಪ್ರಕೃತಿ
    ಇತರರಿಂದ ದುಡಿಸಿಕೊಳ್ಳೋದು ವಿಕೃತಿ
    ಇತರರಿಗಾಗಿ ದುಡಿಯೋದು ಸಂಸ್ಕೃತಿ
    ®️ ದುಡಿದು ತಿನ್ನೋದು ಪ್ರಕೃತಿ
    ದುಡಿಸಿ ತಿನ್ನೋದು ವಿಕೃತಿ
    ತಾನು ದುಡಿದು ಇನ್ನೊಬ್ಬರಿಗೆ
    ತಿನಿಸೋದು ಸಂಸ್ಕೃತಿ
    ®️ ಹಸಿವಾದಾಗ ಊಟ ಮಾಡೋದು ಪ್ರಕೃತಿ
    ಹಸಿವಾಗದಿದ್ದರೂ ಊಟ ಮಾಡೋದು
    ವಿಕೃತಿ, ಹಸಿದವನಿಗೆ ಉಣಿಸೋದು
    ಸಂಸ್ಕೃತಿ
    ®️ ಭಯ ಪ್ರಕೃತಿ
    ಭಯೋತ್ಪಾದನೆ ವಿಕೃತಿ
    ದಯೋತ್ಪಾದನೆ ಸಂಸ್ಕೃತಿ
    ®️ ಹಾಸ್ಯ ಪ್ರಕೃತಿ
    ಅಪಹಾಸ್ಯ ವಿಕೃತಿ
    ತಿಳಿಹಾಸ್ಯ ಸಂಸ್ಕೃತಿ
    ®️ ಜ್ಯೋತಿ ಪ್ರಕೃತಿ
    ಜ್ವಾಲೆ ವಿಕೃತಿ
    ನಂದಾದೀಪ ಸಂಸ್ಕೃತಿ
    ®️ ನೀರು ಪ್ರಕೃತಿ
    ನೆರೆ ವಿಕೃತಿ
    ನೀರಿನ ನಾಲೆ ಸಂಸ್ಕೃತಿ
    ®️ ತಲೆಯೊಳಗಿನ ಬುದ್ದಿ ಪ್ರಕೃತಿ
    ಅದು ಕೆಟ್ಟದ್ದಾಗಿದ್ದರೆ ವಿಕೃತಿ
    ಅದು ನೆಟ್ಟಗಿದ್ದರೆ ಸಂಸ್ಕೃತಿ
    ®️ ಮುಖ ಪ್ರಕೃತಿ
    ಸಿಡುಕುಮುಖ ವಿಕೃತಿ
    ನಗುಮುಖ ಸಂಸ್ಕೃತಿ.
    6 min
  • ದೇವರ ಸ್ವರೂಪವನ್ನು, ಪಾದಗಳಿಂದ ಮುಖದವರೆಗಿನ ಸೌಂದರ್ಯದ ಪೂರ್ಣ ಆನಂದವನ್ನು ಪಡೆಯಿರಿ*.
    ದೇವಾಲಯದಲ್ಲಿ ದರ್ಶನ ಮಾಡಿದ ನಂತರ, ಹೊರಗಿನ ಆಸನದ ಮೇಲೆ ಸ್ವಲ್ಪ ಹೊತ್ತು ಏಕೆ ಕುಳಿತುಕೊಳ್ಳಬೇಕು?
    ಉತ್ತರ : ದೇವಾಲಯಗಳಿಗೆ ಹೋದಾಗ ದೇವರ ದರ್ಶನ ಮುಗಿಸಿ ನಮಸ್ಕಾರವನ್ನು ಮುಗಿಸಿದ ನಂತರ ಒಂದೆರಡು ನಿಮಿಷ ಹೊರಗೆ ಕುಳಿತು ಕೊಳ್ಳುವದು ಸಂಪ್ರದಾಯ. ಆದರೆ ಕುಳಿತಾಗ ನಾವು ದರ್ಶನ ಮಾಡಿದ ದೇವರನ್ನು ನೆನೆಸಿಕೊಂಡು ಈ ಕೆಳಗಿನ ಶ್ಲೋಕವನ್ನು ಹೇಳಿಕೊಂಡು ಪ್ರಾರ್ಥಿಸಿಕೊಳ್ಳಬೇಕು. ಇದನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಮಾಡಲಾಗಿದೆ. ವಾಸ್ತವವಾಗಿ ಇಂದಿನ ಜನರು ಈ ಶ್ಲೋಕವನ್ನು ಮರೆತಿದ್ದಾರೆ.
    ಶ್ಲೋಕ ಹೀಗಿದೆ :-
    ◆ ಅನಾಯಾಸೇನ ಮರಣಂ|
    ◆ವಿನಾ ದೈನೇನ ಜೀವನಂ•
    ◆ದೇಹಾಂತ ತವ ಸಾನಿಧ್ಯಮ್|
    ◆ದೇಹಿಮೇ ಪರಮೇಶ್ವರ |
    ಈ ಶ್ಲೋಕದ ಅರ್ಥ:
    ಅನಾಯಾಸೇನ ಮರಣಂ"ಅಂದರೆ ನಮ್ಮ ಅಂತ್ಯಕಾಲದಲ್ಲಿ ಯಾವುದೇ ತೊಂದರೆಯಿಲ್ಲದೆ ಸಾಯಬೇಕು ಮತ್ತು ಅನಾರೋಗ್ಯಕ್ಕೆ ಒಳಗಾದ ನಂತರ ಎಂದಿಗೂ ಹಾಸಿಗೆಯ ಮೇಲೆ ಬೀಳಬಾರದು, ದುಃಖದಿಂದ ಸಾಯಬಾರದು ಮತ್ತು ನಾವು ನಡೆದಾಡುವಾಗಲೇ ನಮ್ಮ ಜೀವನದ ಅಂತ್ಯ ಆಗಬೇಕು.
    "ವಿನಾ ದೈನೇನ ಜೀವನಂ" ಅಂದರೆ ಎಂದಿಗೂ ಯಾರೊಂದಿಗೂ ಪರಾವಲಂಬಿಯಾಗಿ ಜೀವನ ಇರಬಾರದು. ಒಬ್ಬ ವ್ಯಕ್ತಿಯು ಪಾರ್ಶ್ವವಾಯುವಿಗೆ ಒಳಗಾದಾಗ ಇತರರ ಮೇಲೆ ಅವಲಂಬಿತನಾಗುವಂತೆ, ಅಥವಾ ಅಸಹಾಯಕನಾಗಿರಬಾರದು. ದೇವರ ಕೃಪೆಯಿಂದ ಭಿಕ್ಷೆ ಬೇಡದೆ ಜೀವನ ನಡೆಸಬಹುದು.
    *ದೇಹಾಂತ ತವ ಸಾನಿಧ್ಯಮ್* ಅಂದರೆ ಸಾವು ಬಂದಾಗ ದೇವರು ಮುಂದೆ ಇರಬೇಕು. ಭೀಷ್ಮ ಪಿತಾಮರ ಮರಣದ ಸಮಯದಲ್ಲಿ, ದೇವರು (ಕೃಷ್ಣ ) ಅವರ ಮುಂದೆ ನಿಂತಿದ್ದರು. ಅವನನ್ನು ನೋಡಿ ಪ್ರಾಣ ಬಿಟ್ಟರು
    *ದೇಹಿಮೇ ಪರಮೇಶ್ವರ*
    ಅಂದರೆ ಓ ದೇವರೇ, ನಮಗೆ ಅಂತಹ ವರವನ್ನು ನೀಡು.
    ದೇವರನ್ನು ಪ್ರಾರ್ಥಿಸುವಾಗ ಮೇಲಿನ ಶ್ಲೋಕವನ್ನು ಪಠಿಸಿ. ಕಾರು, ಬಂಗಲೆ, ಹುಡುಗ, ಹುಡುಗಿ, ಗಂಡ, ಹೆಂಡತಿ, ಮನೆ, ಹಣ ಇತ್ಯಾದಿಗಳನ್ನು ಕೇಳಬೇಡಿ (ಸಂಸಾರಿಕ ವಿಷಯಗಳು), ಈ ಅರ್ಹತೆಯು ನಿಮ್ಮ ಅರ್ಹತೆಗೆ ಅನುಗುಣವಾಗಿ ಈ ದೇವರು ನಿಮಗೆ ನೀಡುತ್ತಾನೆ. ಅದಕ್ಕಾಗಿಯೇ ದರ್ಶನ ಮಾಡಿದ ನಂತರ ಪ್ರತಿಯೊಬ್ಬರು ಈ ಪ್ರಾರ್ಥನೆಯನ್ನು ಕುಳಿತು ಪ್ರಾರ್ಥಿಸಬೇಕು. ಇದು ಪ್ರಾರ್ಥನೆ, ವಿಜ್ಞಾಪನೆ ಅಲ್ಲ. ವಿಜ್ಞಾಪನೆಯು ಲೌಕಿಕ ವಿಷಯಗಳಿಗಾಗಿ. ಉದಾಹರಣೆಗೆ, ಮನೆ, ವ್ಯವಹಾರ, ಉದ್ಯೋಗ, ಮಗ, ಮಗಳು, ಲೌಕಿಕ ಸುಖಗಳು, ಸಂಪತ್ತು ಅಥವಾ ಇತರ ವಿಷಯಗಳಿಗಾಗಿ, ಬೇಡಿಕೆಯಿಡುವುದು.
    'ಪ್ರಾರ್ಥನೆ' ಎಂಬ ಪದದ ಅರ್ಥ 'ಪ್ರಾ' ಎಂದರೆ 'ವಿಶೇಷ', ವಿಶಿಷ್ಟ, ಉತ್ತಮ ಮತ್ತು 'ಆರ್ಥನಾ' ಎಂದರೆ ವಿನಂತಿ. ಪ್ರಾರ್ಥನೆ ಎಂದರೆ ವಿಶೇಷ ವಿನಂತಿ. *
    ದೇವಾಲಯದಲ್ಲಿ ದೇವರ ದರ್ಶನವನ್ನು ಯಾವಾಗಲೂ ತೆರೆದ ಕಣ್ಣುಗಳಿಂದ ಮಾಡಬೇಕು. ಕೆಲವರು ಕಣ್ಣು ಮುಚ್ಚಿಕೊಂಡು ಅಲ್ಲಿ ನಿಲ್ಲುತ್ತಾರೆ. ಏಕೆ ನಮ್ಮ ಕಣ್ಣುಗಳನ್ನು ಮುಚ್ಚಬೇಕು? ನಾವು ದೇವರ ದರ್ಶನಕ್ಕೆ ಬಂದಿದ್ದೇವೆ. *ದೇವರ ಸ್ವರೂಪವನ್ನು, ಪಾದಗಳಿಂದ ಮುಖದವರೆಗಿನ ಸೌಂದರ್ಯದ ಪೂರ್ಣ ಆನಂದವನ್ನು ಪಡೆಯಿರಿ*. ನಿಮ್ಮ ಕಣ್ಣುಗಳನ್ನು ದೇವರ ನ್ವರೂಪದಿಂದ ತುಂಬಿಸಿ.
    * ನೀವು ದರ್ಶನದ ನಂತರ ಹೊರಗೆ ಕುಳಿತಾಗ, ನಂತರ ನೀವು ಕಣ್ಣುಗಳನ್ನು ಮುಚ್ಚಿಕೊಂಡು ನೋಡಿದ ಸ್ವರೂಪವನ್ನು ಧ್ಯಾನಿಸಿ.
    7 min
  • *ಶ್ರೀ ಗಣೇಶನ ಪೂಜೆಯಲ್ಲಿ ಉಪಯೋಗಿಸುವ ವಿಶಿಷ್ಟ ವಸ್ತು – ದೂರ್ವೆ*
    ಶ್ರೀ ಗಣೇಶನ ಪೂಜೆಯಲ್ಲಿ ಉಪಯೋಗಿಸುವ ವಿಶಿಷ್ಟ ವಸ್ತು – ದೂರ್ವೆ*
    ದೂಃಅವಮ್ ಹೀಗೆ ದೂರ್ವೆ ಈ ಶಬ್ದವು ನಿರ್ಮಾಣವಾಗಿದೆ. ‘ದೂಃ’ ಅಂದರೆ ದೂರದಲ್ಲಿ ಇರುವುದು ಮತ್ತು ‘ಅವಮ್’ ಅಂದರೆ ಯಾವುದು ಹತ್ತಿರ ತರುತ್ತದೆಯೋ ಅದು. ದೂರದಲ್ಲಿರುವ ಶ್ರೀ ಗಣೇಶನ ಪವಿತ್ರಕಗಳನ್ನು ಯಾವುದು ಹತ್ತಿರ ತರುತ್ತದೆಯೋ, ಅದುವೇ ದೂರ್ವೆ ಆಗಿದೆ.
    5 min
  • ಸ್ವಾತಿ ಮಳೆಯನ್ನು ಹಾಲಿಗೆ ಒಂದು ಬಿಂದು
    🌹🌹ಸ್ವಾತಿ ಮಳೆ 🌹🌹
    ಇಂದಿನಿಂದ ಹದಿನೈದು
    ದಿನಗಳ ಕಾಲ ಸ್ವಾತಿ ನಕ್ಷತ್ರ.
    ಸ್ವಾತಿ ಮಳೆ’ ಬಹಳ ಮಹತ್ವದ್ದೆಂದೂ ಅದು ನೂರಾರು ರೋಗಗಳಿಗೆ ದಿವ್ಯೌಷಧವೆಂದೂ ಕೆಲವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಅವರು ಪ್ರತೀವರ್ಷ ಫೋನ್ ಮಾಡಿ ಒತ್ತಾಯಿಸುತ್ತಿದ್ದರಿಂದ ಕಳೆದ ವರ್ಷ ನಾವು ಮೊದಲ ಬಾರಿಗೆ ಸ್ವಾತಿ ಮಳೆಯನ್ನು ಸಂಗ್ರಹಿಸಿದೆವು. ಗಾಜಿನ, ಪಿಂಗಾಣಿಯ ಅಥವಾ ಕೊನೆಯ ಪಕ್ಷ ಅಗಲ ಬಾಯಿಯ ಶುದ್ಧ ಸ್ಟೀಲ್ ಪಾತ್ರೆಗಳನ್ನು ಹೊರಗೆ ಅಂಗಳದಲ್ಲಿಟ್ಟರಾಯಿತು. ಸಿಕ್ಕಿದ ನೀರನ್ನು ಒಳ್ಳೆಯ ಗಾಜಿನ ಬಾಟಲಿಗಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು.
    ಬಳಕೆ : *ಸ್ವಾತಿ ಮಳೆಯನ್ನು ಹಾಲಿಗೆ ಒಂದು ಬಿಂದು* ಹೆಪ್ಪು ಹಾಕಿದರೆ ಮರುದಿನ ಹಾಲು (ಮಜ್ಜಿಗೆ ಹಾಕಿದಂತೆ) ಮೊಸರಾಗುತ್ತದೆ ಎಂದು ಎಲ್ಲೋ ಕೇಳಿದ್ದೆವು. ಅದನ್ನು ಪರೀಕ್ಷಿಸಲು ಕಳೆದ ವರ್ಷ ಅಮ್ಮ ಒಂದು ಬಿಂದು ಸ್ವಾತಿ ಮಳೆಯ ಹನಿ ಹಾಕಿ ನೋಡಿದರು. ಒಳ್ಳೆಯ ಗಟ್ಟಿಯಾದ ಮೊಸರು ಆದದ್ದು ನಿಜ. ಬರಿಯ ನೀರಿನಿಂದ ಇದು ಸಾಧ್ಯವಿಲ್ಲ ಎನ್ನುವುದೂ ಅಷ್ಟೇ ನಿಜ. ಇದೊಂದೇ ವಿಷಯದ ಬಗ್ಗೆ ನನಗೆ ನಿಖರ ಮಾಹಿತಿ ಇದೆ. ಉಳಿದಂತೆ ಎಲ್ಲಾ ಚರ್ಮರೋಗಗಳಿಗೆ ಹಚ್ಚಿದರೆ, ದೇಹದ ಒಳಗಿನ ರೋಗಗಳಿಗೆ ಸಣ್ಣ ಪ್ರಮಾಣದಲ್ಲಿ ಔಷಧಿಯಂತೆ ಪ್ರತಿದಿನ ಸೇವಿಸಿದರೆ ರೋಗಗಳು ಗುಣವಾಗುತ್ತವೆ ಎಂದು ಬಲವಾದ ಹೇಳಿಕೆಗಳು ಇವೆ. ನಮಗೆ ತಿಳಿದಂತೆ malignant tumour ಇದ್ದವರಿಗೊಬ್ಬರಿಗೆ ಸ್ವಾತಿ ಮಳೆಯನ್ನು ಸೂಚಿಸಿದ್ದೆವು(ಸರ್ಜರಿಯ ಬಳಿಕ). ಅವರು ಪ್ರತಿದಿನ ತೆಗೆದುಕೊಳ್ಳುತ್ತಲೂ ಇದ್ದರು. ಅವರಿಗೆ ಈಗ ಟ್ಯೂಮರ್ ನ ಯಾವುದೇ ಲಕ್ಷಣ, ತೊಂದರೆಗಳೂ ಇಲ್ಲ - ಎನ್ನುವುದು ನಿಜವಾದರೂ ಸ್ವಾತಿ ಮಳೆಯಿಂದಲೇ ಅದು ಗುಣವಾಯಿತೆಂದು ಪ್ರಮಾಣಿಸಿ ಹೇಳಲಾರೆ.
    ಇಂತಹ ಸಂದರ್ಭಗಳಲ್ಲಿ ಕೆಲವು ಪ್ರಾಚೀನ ನ್ಯಾಯಗಳು ಸಹಾಯಕ್ಕೆ ಬರುತ್ತವೆ. “ಕೈಯಲ್ಲಿರುವ ಬೆಳ್ಳಿಯ ನಾಣ್ಯವು ನಮಗೆ ಇನ್ನೂ ಸಿಕ್ಕಿಲ್ಲದ ಚಿನ್ನದ ನಾಣ್ಯಕ್ಕಿಂತ ಉತ್ತಮ" ಎಂದು ಒಂದು ನ್ಯಾಯವಿದೆ. ಅಂದರೆ ಯಾರಾದರೂ ಸುಲಭವಾಗಿ ಸಂಗ್ರಹಿಸಿ ಬಳಸಬಹುದಾದ ಸ್ವಾತಿ ಮಳೆಯನ್ನು ಬಳಸುವುದು ಬೇರಾವುದೋ ದುಬಾರಿಯಾದ ಸರ್ವರುಜಾಪಹಾರಿ ಔಷಧವನ್ನು ಅಪೇಕ್ಷಿಸುವುದಕ್ಕಿಂತ ಉತ್ತಮ. ಆ ಕಾರಣಕ್ಕೆ ನಾವು ಸ್ವಾತಿ ಮಳೆಯನ್ನು ಬಳಸಬಹುದು. ಎಲ್ಲರೂ ಬಳಸಿದಂತೆ ಅದರ ಸದ್ಗುಣಗಳು ಬೆಳಕಿಗೆ ಬಂದೇ ಬರುತ್ತವೆ.
    ಒಂದು ಅಗುಳನ್ನು ಪರೀಕ್ಷಿಸಿದರೆ ಅನ್ನವು ಬೆಂದಿದೆಯೇ ಎಂದು ತಿಳಿಯಬಹುದು ಎಂಬುದು ಇನ್ನೊಂದು ನ್ಯಾಯ. ಸ್ವಾತಿ ಮಳೆಯು ಹಾಲನ್ನು ಮೊಸರಾಗಿಸಬಹುದಾದರೆ ಅದು ಸಾಮಾನ್ಯ ನೀರಲ್ಲ ಎಂದು ಅರ್ಥ ಮಾಡಿಕೊಳ್ಳಬಹುದು. ಹಾಗಿದ್ದರೆ ಅದು ಇತರೆ ರೋಗಗಳಿಗೂ ಔಷಧಿಯಾಗಬಾರದೇಕೆ? ಇದು ಸ್ವಾತಿ ಮಳೆನೀರನ್ನು ಉಪಯೋಗಿಸಿದವರ ಅಭಿಪ್ರಾಯ.🖌️
    5 min
  • ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ
    ಪರಶುರಾಮ ಸೃಷ್ಟಿಯಲ್ಲಿ ಶ್ರೀ ಆದಿಶಂಕರಾಚಾರ್ಯರಿಂದ ಸ್ಥಾಪಿತವಾದ ಕೊಲ್ಲೂರು ದಕ್ಷಿಣ ಕನ್ನಡದ ಉಡುಪಿ ಜಿಲ್ಲೆಯ ಏಳು ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ. ಕೊಲ್ಲೂರು ಪೌರಾಣಿಕ ಹಿನ್ನೆಲೆಯುಳ್ಳ ಕ್ಷೇತ್ರ ಸ್ಕಂದ ಪುರಾಣದಲ್ಲಿ ಶ್ರೀ ಕ್ಷೇತ್ರದ ಮಹಿಮೆಯನ್ನು ವಿವರಿಸಲಾಗಿದೆ. ಶ್ರೀ ಕ್ಷೇತ್ರದಲ್ಲಿ ಕೋಲ ಮಹರ್ಷಿಯು ತಪಸ್ಸುಗೈದುದರಿಂದ ಇದು ಕೋಲಾಪುರವೆನಿಸಿತು. ಇದು ಇಂದಿನ ಕೊಲ್ಲೂರು ಎಂದು ಹೆಸರಾಯಿತು. ಇದು ಒಂದು ಶಕ್ತಿಯ ಆರಾಧನೆಯ ಕ್ಷೇತ್ರ. ದೇವಿ ಮೂಕಾಂಬಿಕೆ ಇಲ್ಲಿಯ ಶಕ್ತಿ ದೇವತೆ. ಮೂಕಾಸುರ (ಕೌಂಹಾಸುರ) ಎಂಬ ರಾಕ್ಷಸರನ್ನು ವಧಿಸಿದವಳು.  ಕೌಂಹಾಸುರ ಎನ್ನುವ ರಾಕ್ಷಸನು ತನಗೆ ಯಾವುದೇ ಜೀವರಾಶಿಗಳಿಂದ ಮರಣ ಬರಬಾರದೆಂದು ವರವನ್ನು ಶಿವನಲ್ಲಿ ಕೇಳುವ ಸಂದರ್ಭದಲ್ಲಿ ವಾಗ್ದೇವಿಯು ಅವನು ಶಿವನಲ್ಲಿ ಏನು ಕೇಳಲಾಗದಂತೆ ಮೂಕಳಾಗಿಸಿದಳು. ಅದರಂತೆ ಅವನು ಮೂಕ (ಮೂಗ) ರಾಕ್ಷಸನಾದನು. ಇದರಿಂದ ಕುಪಿತನಾದ ಮೂಕಾಸುರನು ದೇವತೆಗಳ ಮೇಲೆ ಸೇಡು ತೀರಿಸಿಕೊಳ್ಳಲು ನಿಶ್ಚಯಿಸಿದನು. ದೇವತೆಗಳು ಇವನ ಕಿರುಕುಳ ತಡೆಯಲಾರದೆ ದೇವಿಯ ಮೊರೆಹೋದರು. ದೇವಿಯು ಸಕಲ ದೇವತೆಗಳ ಶಕ್ತಿಯನ್ನು ತನ್ನಲ್ಲಿ ಅಡಗಿಸಿಕೊಂಡು ಮೂಕಾಸುರನನ್ನು ವಧಿಸಿ ಲಿಂಗೈಕ್ಯವಾಗಿ ಮೂಕಾಂಬಿಕೆ ಎಂಬ ಹೆಸರನ್ನು ಗಳಿಸಿದಳು.
    10 min
  • ಅಗತ್ಯವಿರುವ ಸಮಯದಲ್ಲಿ ನಮ್ಮ ಕುಟುಂಬ ಮಾತ್ರ ನಮ್ಮ ಜೊತೆಗೆ ನಿಲ್ಲುತ್ತದೆ.
    ಕೊನೆಯವರೆಗೂ ಓದಿ ಕಂಡಿತಾ ನಿಮಗೆ ಆಘಾತವನ್ನುಂಟು ಮಾಡುತ್ತದೆ
    ಇದುವರೆಗೆ ಕೋವಿಡ್‌ಗೆ ದೇಣಿಗೆ.......
    ಟಾಟಾ: 1500 ಕೋಟಿ
    ಐಟಿಸಿ: 150 ಕೋಟಿ
    ಹಿಂದುಸ್ತಾನ್ ಯೂನಿಲಿವರ್: 100 ಕೋಟಿ
    ಅನಿಲ್ ಅಗರ್ವಾಲ್ (ವೇದಾಂತ): 100 ಕೋಟಿ
    ಹೀರೋ ಸೈಕಲ್: 100 ಕೋಟಿ
    ಬಜಾಜ್ ಗುಂಪು: 100 ಕೋಟಿ
    ಶಿರಡಿ ದೇವಸ್ಥಾನ: 51 ಕೋಟಿ
    ಬಿಸಿಸಿಐ: 51 ಕೋಟಿ
    ಸಿಆರ್‌ಪಿಎಫ್: 33 ಕೋಟಿ
    ಅಕ್ಷಯ್ ಕುಮಾರ್, ನಟ: 25 ಕೋಟಿ
    ಸನ್ ಫಾರ್ಮಾ: 25 ಕೋಟಿ
    OLA: 20 ಕೋಟಿ
    ಪೇಟಿಎಂ: 5 ಕೋಟಿ + ಹ್ಯಾಂಡ್ ವಾಶ್
    ಮುಖೇಶ್ ಅಂಬಾನಿ: 500 ಕೋಟಿ + ಆಸ್ಪತ್ರೆ
    ಅದಾನಿ ಗುಂಪು: 500 ಕೋಟಿ
    ಆನಂದ್ ಮಹೀಂದ್ರ: ಹೋಟೆಲ್‌ಗಳು + ವೆಂಟಿಲೇಟರ್‌ಗಳು
    ಚಿರಂಜೀವಿ, ನಟ: 4 ಕೋಟಿ + ಆಮ್ಲಜನಕ
    ಪ್ರಭಾಸ್, ನಟ: 4 ಕೋಟಿ
    ನಾಡೆಲ್ಲಾ, ಮೈಕ್ರೋಸಾಫ್ಟ್: 2 ಕೋಟಿ
    ಅನಿತಾ ಡೋಂಗ್ರೆ: 1.5 ಕೋಟಿ
    ಅಲ್ಲು ಅರ್ಜುನ್: 1.25 ಕೋಟಿ
    ರಾಮ್ ಚರಣ್: 1.40 ಕೋಟಿ
    ಸೋಮನಾಥ ದೇವಸ್ಥಾನ ಟ್ರಸ್ಟ್: 1 ಕೋಟಿ
    ಪವನ್ ಕಲ್ಯಾಣ್, ನಟ: 2 ಕೋಟಿ
    ಮಹೇಶ್ ಬಾಬು, ನಟ: 1 ಕೋಟಿ
    ಹೇಮಾ ಮಾಲಿನಿ, ನಟ: 1 ಕೋಟಿ
    ಬಾಲ ಕೃಷ್ಣ, ನಟ: 1 ಕೋಟಿ
    ಎನ್ಟಿಆರ್ ಜೂನಿಯರ್: 75 ಲಕ್ಷ
    ಸುರೇಶ್ ರೈನಾ, ಕ್ರಿಕೆಟಿಗ: 52 ಲಕ್ಷ
    ಸಚಿನ್ ತೆಂಡೂಲ್ಕರ್, ಕ್ರಿಕೆಟಿಗ: 52 ಲಕ್ಷ
    ಸನ್ನಿ ಡಿಯೋಲ್, ನಟ: 50 ಲಕ್ಷ
    ಕಪಿಲ್ ಶರ್ಮಾ, ನಟ: 50 ಲಕ್ಷ
    ರಜನಿಕಾಂತ್, ನಟ: 50 ಲಕ್ಷ
    ಸೌರವ್ ಗಂಗೂಲಿ, ಕ್ರಿಕೆಟಿಗ: 50 ಲಕ್ಷ
    ಬಹುತೇಕ ಎಲ್ಲಾ ಸರ್ಕಾರಿ ಉದ್ಯೋಗಿಗಳು: ಅವರ ಸಂಬಳದ 1-5 ದಿನಗಳು ಅಂದರೆ ಸುಮಾರು ₹ 30,000 ಕೋಟಿಗಳು.
    ಇಂತಹ ಕಠಿಣ ಪರಿಸ್ಥಿತಿಯಲ್ಲಿ ಯಾವುದೇ ಮುಸ್ಲಿಂ ಹೀರೋಗಳು ಕೊಡುಗೆ ನೀಡಿಲ್ಲ.....‌ಮತ್ತು
    ನಿಮ್ಮ ನೆಚ್ಚಿನ ಕಂಪನಿಗಳು ಅನ್ನಿಸಿಕೊಳ್ಳುವ ಭಾರತದಲ್ಲಿ ಕೋವಿಡ್ ವಿರುದ್ಧ ಹೋರಾಡಲು ಪ್ರಧಾನ ಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ನೀಡಿದ ಕೊಡುಗೆ....‌
    ಸಬ್‌ವೇ: 00
    ಪಿಜ್ಜಾ ಹಟ್: 00
    ಡೊಮಿನೋಸ್: 00
    ಮೆಕ್ಡೊನಾಲ್ಡ್: 00
    ಬರ್ಗರ್ ಕಿಂಗ್: 00
    ಬರಿಸ್ತಾ: 00
    ಬಾರ್ಬೆಕ್ಯೂ : 00
    ಕೆಎಫ್‌ಸಿ: 00
    ಫ್ಲಿಪ್‌ಕಾರ್ಟ್: 00
    ಅಮೆಜಾನ್: 00
    ಮಂತ್ರ: 00
    ರೆಡಿಫ್: 00
    ಸ್ನ್ಯಾಪ್ ಡೀಲ್: 00
    ಹುಂಡೈ: 00
    ಹೋಂಡಾ: 00
    KIA: 00
    ವೋಕ್ಸ್‌ವ್ಯಾಗನ್: 00
    ಮಾರುತಿ ಸುಜುಕಿ: 00 (ಆಶ್ಚರ್ಯಕರ)
    BMW: 00
    ಆಡಿ: 00
    ಮರ್ಸಿಡಿಸ್: 00
    ಸ್ವದೇಶಿ ಕಂಪನಿಗಳ ಬೆಲೆ ನಿಮಗೆ ಅರ್ಥವಾಗಿದೆ.. ಅಂದುಕೊಳ್ಳುವೆ...?
    ಅಗತ್ಯವಿರುವ ಸಮಯದಲ್ಲಿ ನಮ್ಮ ಕುಟುಂಬ ಮಾತ್ರ ನಮ್ಮ ಜೊತೆಗೆ ನಿಲ್ಲುತ್ತದೆ.
    ಆದರೆ ಇಷ್ಟು ದಿನ ನಾವು ಕೇವಲ ವಿದೇಶಿ ಕಂಪನಿಗಳನ್ನು ಸಂಪಾದಿಸುವಂತೆ ಮಾಡಿದೆವು. ಕನಿಷ್ಠ ಈ ಸಾಂಕ್ರಾಮಿಕದ ನಂತರ ಭಾರತೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸಿ ಇದರಿಂದ ನಮ್ಮ ಜಿಡಿಪಿ ಹೆಚ್ಚಾಗುತ್ತದೆ ಮತ್ತು ಭಾರತವು ಇತರ ದೇಶಗಳಿಗಿಂತ ವೇಗವಾಗಿ ಬೆಳೆಯುತ್ತದೆ
    ಜೈ ಹಿಂದ್ 🙏🏾🙏🏾🙏🏾
    8 min
  • ಕೋಜಾಗರಿ ಹುಣ್ಣಿಮೆ (ಶರದ ಪೂರ್ಣಿಮೆ)
    ಆಶ್ವಯುಜ ಹುಣ್ಣಿಮೆಯ ವಿವಿಧ ಹೆಸರುಗಳು
    ಆಶ್ವಯುಜ ಹುಣ್ಣಿಮೆಯನ್ನು ಕೋಜಾಗರಿ ಹುಣ್ಣಿಮೆ, ನವಾನ್ನ ಹುಣ್ಣಿಮೆ ಅಥವಾ ಶರದ್ ಹುಣ್ಣಿಮೆ ಎಂದೂ ಕರೆಯುತ್ತಾರೆ. ಹುಣ್ಣಿಮೆ ಪೂರ್ತಿಯಾಗುವ ದಿನದಂದು ನವಾನ್ನ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ.
    ಅ. ಆಶ್ವಯುಜ ಹುಣ್ಣಿಮೆಯಂದು ತಡ ರಾತ್ರಿ ಲಕ್ಷ್ಮೀ ದೇವಿಯು ‘ಕೋ ಜಾಗರ್ತಿ’ ಅಂದರೆ ‘ಯಾರು ಎಚ್ಚರವಾಗಿದ್ದರೆ’ ಎಂದೂ ವಿಚಾರಿಸಲು ಬರುತ್ತಾಳೆ; ಆದುದರಿಂದ ಈ ಹುಣ್ಣಿಮೆಯನ್ನು ಕೋಜಾಗರಿ ಹುಣ್ಣಿಮೆ ಎಂದೂ ಕರೆಯುತ್ತಾರೆ.
    ಆ. ಆಶ್ವಯುಜ ಹುಣ್ಣಿಮೆಯಂದು ರೈತರು ನಿಸರ್ಗದ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಹೊಸ ಧಾನ್ಯವನ್ನು ಪೂಜಿಸಿ ಅದರ ನೈವೇದ್ಯವನ್ನು ಮಾಡುತ್ತಾರೆ; ಆದುದರಿಂದ ಈ ಹುಣ್ಣಿಮೆಯನ್ನು ನವಾನ್ನ ಹುಣ್ಣಿಮೆ ಎಂದೂ ಕರೆಯುತ್ತಾರೆ.
    ಇ. ಆಶ್ವಯುಜ ಹುಣ್ಣಿಮೆಯು ಶರದ್ ಋತುವಿನಲ್ಲಿ ಬರುತ್ತದೆ, ಆದುದರಿಂದ ಇದಕ್ಕೆ ಶರದ್ ಹುಣ್ಣಿಮೆ ಎಂಬ ಹೆಸರೂ ಇದೆ.
    ಮಹತ್ವ
    ಅ. ಮೂಲ ಚಂದ್ರತತ್ತ್ವದ ಅಂದರೆ, ‘ಚಂದ್ರಮ’ನನ್ನು ಪ್ರತಿನಿಧಿಸುವ ಮತ್ತು ನಮಗೆ ಕಾಣಿಸುವ ಚಂದ್ರನು, ‘ಚಂದ್ರಮ’ನಂತೆಯೇ ಶೀತಲ ಹಾಗೂ ಆಹ್ಲಾದದಾಯಕವಾಗಿದ್ದಾನೆ. ಸಾಧಕರು ಚಂದ್ರನ ಶೀತಲತೆಯನ್ನು ಈಶ್ವರನ ಅವತಾರಗಳಿಂದ ಅನುಭವಿಸಬಲ್ಲರು. ಆದುದರಿಂದಲೇ ರಾಮಚಂದ್ರ, ಕೃಷ್ಣಚಂದ್ರ ಎನ್ನುವ ಹೆಸರುಗಳನ್ನು ರಾಮ-ಕೃಷ್ಣರಿಗೆ ಕೊಡಲಾಗಿದೆ. ಚಂದ್ರನ ಈ ಗುಣದಿಂದಲೇ ‘ನಕ್ಷತ್ರಾಣಾಮಹಂ ಶಶಿ’ ಅಂದರೆ ‘ನಕ್ಷತ್ರಗಳಲ್ಲಿ ನಾನು ಚಂದ್ರನಾಗಿದ್ದೇನೆ’ ಎಂದು ಭಗವಾನ ಶ್ರೀಕೃಷ್ಣನು ಶ್ರೀಮದ್‌ಭಗವದ್ಗೀತೆ ಯಲ್ಲಿ (೧೦:೨೧) ಹೇಳಿದ್ದಾನೆ.
    ಆ. ಮಧ್ಯರಾತ್ರಿಯಲ್ಲಿ ಶ್ರೀ ಲಕ್ಷ್ಮೀಯು ಚಂದ್ರಮಂಡಲದಿಂದ ಭೂಮಂಡಲಕ್ಕೆ ಬಂದು ‘ಕೋ ಜಾಗರ್ತಿ’ ಅಂದರೆ ‘ಯಾರು ಎಚ್ಚರವಾಗಿದ್ದಾರೆ?’, ಎಂದು ಕೇಳಿ ಎಚ್ಚರವಾಗಿರುವವರನ್ನು ಧನಧಾನ್ಯಗಳಿಂದ ಸಂತುಷ್ಟರನ್ನಾಗಿ ಮಾಡುತ್ತಾಳೆ.
    8 min
  • ಕಾತ್ಯಾಯನಿ
    ಕಾತ್ಯಾಯನಸ್ಯ ಅಪತ್ಯಂ ಸ್ತ್ರೀ ಕಾತ್ಯಾಯನಿ|’ (ಕಾತ್ಯಾಯನನ ಮಗಳು ಕಾತ್ಯಾಯನಿ) ‘ಅಯನ’ ಎಂದರೆ ‘ಹಲವಾರು ನಕ್ಷತ್ರ ಸಮೂಹಗಳಿಂದ ಯುಕ್ತವಾಗಿರುವ ಭಾಗ’. ಕಾತ್ಯಾಯನ ಋಷಿಗಳು ಇಂತಹ ಒಂದು ಅಯನದ ಪಾಲಕರಾಗಿದ್ದರು. ಒಮ್ಮೆ ಕಾತ್ಯಾಯನರ ಅಯನಗಳಲ್ಲಿನ ದೇವತೆಗಳ ಮೇಲೆ (ತೇಜಸ್ಸಿನ ಮೇಲೆ) ಅವರದ್ದೇ ಅಯನದಲ್ಲಿನ ಅಯೋಗ್ಯ ಸ್ಪಂದನಲಹರಿಗಳ ಒಂದು ಶಕ್ತಿಯುತ ಸಮೂಹವು ಆಕ್ರಮಣ ಮಾಡಿತು. ಘರ್ಷಣೆಯಿಂದ ಬಹುದೊಡ್ಡ ಉತ್ಪಾತವಾಗುವ ಸಮಯ ಬಂದಿತು. ಆಗ ಕಾತ್ಯಾಯನ ಋಷಿಗಳ ಆಶ್ರಮದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಶಕ್ತಿಲಹರಿಗಳ ಒಂದು ಅಂಶವು ಒಬ್ಬ ಚಿಕ್ಕ ಬಾಲಕಿಯ ಆಕಾರದಲ್ಲಿ ಪ್ರವೇಶಿಸಿತು. ಈ ಬಾಲಕಿಯನ್ನು ಕಾತ್ಯಾಯನ ಋಷಿಗಳು ತಮ್ಮ ಸಂತಾನವೆಂದು ಪರಿಗಣಿಸಿದರು; ಆದುದರಿಂದ ಅವಳು ‘ಕಾತ್ಯಾಯನಿ’ ಎಂಬ ಹೆಸರಿನಿಂದ ಪ್ರಸಿದ್ಧಿ ಹೊಂದಿದಳು. ಕಾತ್ಯಾಯನಿಯು ಶಕ್ತಿಯುತ ಅಯೋಗ್ಯ ಸ್ಪಂದನಲಹರಿಗಳನ್ನು ಯೋಗ್ಯ ಸ್ಪಂದನಲಹರಿಗಳನ್ನಾಗಿ ಪರಿವರ್ತಿಸಿ ದೇವತೆಗಳಿಗೆ (ತೇಜಸ್ಸಿಗೆ) ಸಹಾಯ ಮಾಡಿದಳು.
    4 min

About Dr Balakrishna Maddodi

From the publisher's feed

Hi