Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • ಹಾಸಿಗೆಯಿಂದ ಎದ್ದ ತಕ್ಷಣ ಅಂಗೈಯನ್ನು ನೋಡುವುದೇಕೆ? ಇದರ ಹಿಂದೆ ಅಡಗಿದೆ ಶುಭ-ಫಲಗಳ ಸತ್ಯ
    ಅಂಗೈ ನೋಡುವ ಹಿಂದಿರುವ ಧಾರ್ಮಿಕ ನಂಬಿಕೆ
    ‘ಕರಾಗ್ರೇ ವಸತೇ ಲಕ್ಷ್ಮಿ, ಕರ್ಮಧೇ ಸರಸ್ವತಿ, ಕರ್ಮೂಲೇ ತು ಗೋವಿಂದಾಃ ಪ್ರಭಾತೇ ಕರದರ್ಶನಂ’ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಎಂದರೆ ನನ್ನ ಕೈಗಳ ಮುಂಭಾಗದಲ್ಲಿ ಸಂಪತ್ತಿನ ದೇವತೆ, ಮಧ್ಯದಲ್ಲಿ ಜ್ಞಾನವನ್ನು ನೀಡುವ ತಾಯಿ ಸರಸ್ವತಿ ನೆಲೆಸಿದ್ದಾಳೆ. ಮತ್ತು ಗೋವಿಂದ ಅಂದರೆ ಭಗವಾನ್ ವಿಷ್ಣುವು ಮೂಲದಲ್ಲಿ ನೆಲೆಸಿದ್ದಾನೆ. ತಾಯಿ ಸರಸ್ವತಿಯನ್ನು ಬುದ್ಧಿವಂತಿಕೆಯ ದೇವತೆ ಎಂದು ಪರಿಗಣಿಸಲಾಗುತ್ತದೆ ಮತ್ತು ಲಕ್ಷ್ಮಿ ದೇವತೆ ಸಂಪತ್ತಿನ ದೇವತೆ ಮತ್ತು ಭಗವಾನ್ ವಿಷ್ಣುವು ಜಗತ್ತನ್ನು ಕಾಪಾಡುವವನು, ಆದ್ದರಿಂದ ಬೆಳಿಗ್ಗೆ ಅಂಗೈ ನೋಡುವ ಮೂಲಕ ಈ ಮೂವರು ದೇವತೆಗಳ ದರ್ಶನ ಮಾಡಿ ಅವರ ಅನುಗ್ರಹವನ್ನು ಪಡೆಯಬಹುದು. ಇದರಿಂದ ಜೀವನದಲ್ಲಿ ಸುಖ, ಸಮೃದ್ಧಿ, ಕೌಶಲ್ಯ, ಕೀರ್ತಿ ಇತ್ಯಾದಿ ಯಾವುದಕ್ಕೂ ಕೊರತೆ ಇರುವುದಿಲ್ಲ.
    ತೀರ್ಥಯಾತ್ರೆಗಳ ಸ್ಥಳವನ್ನು ಎರಡೂ ಕೈಗಳ ಅಂಗೈಗಳಲ್ಲಿ ಪರಿಗಣಿಸಲಾಗುತ್ತದೆ. ನಮ್ಮ ಕೈಗಳ ನಾಲ್ಕು ಬೆರಳುಗಳ ಮುಂಭಾಗದಲ್ಲಿ ದೇವತೀರ್ಥಗಳಿವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ತೋರುಬೆರಳಿನ ಮೂಲ ಭಾಗದಲ್ಲಿ ‘ಪಿತೀರ್ಥ’, ಕಿರುಬೆರಳಿನ ಮೂಲ ಭಾಗದಲ್ಲಿ ‘ಪ್ರಜಾಪತಿತೀರ್ಥ’ ಮತ್ತು ಹೆಬ್ಬೆರಳಿನ ಮೂಲ ಭಾಗದಲ್ಲಿ ‘ಬ್ರಹ್ಮತೀರ್ಥ’ ಎಂದು ಪರಿಗಣಿಸಲಾಗುತ್ತದೆ. ಬಲಗೈಯ ಮಧ್ಯದಲ್ಲಿ ‘ಅಗ್ನಿತೀರ್ಥ’ ಮತ್ತು ಎಡಗೈಯ ಮಧ್ಯದಲ್ಲಿ ‘ಸೋಮತೀರ್ಥ’ ಮತ್ತು ಎಲ್ಲಾ ಬೆರಳುಗಳ ಕೀಲುಗಳಲ್ಲಿ ‘ಋಷಿತೀರ್ಥ’ ಇರುತ್ತದೆ. ಈ ರೀತಿಯಾಗಿ, ನಾವು ಬೆಳಿಗ್ಗೆ ಎದ್ದು ನಮ್ಮ ಅಂಗೈಯನ್ನು ನೋಡಿದಾಗ, ದೇವರೊಂದಿಗೆ ಈ ತೀರ್ಥಯಾತ್ರೆಗಳ ಪುಣ್ಯವೂ ಪ್ರಾಪ್ತಿಯಾಗುತ್ತದೆ.
    ಬೆಳಗ್ಗೆ ಎದ್ದ ತಕ್ಷಣ ಏನನ್ನು ನೋಡಬಾರದು?
    -ಬೆಳಗ್ಗೆ ಎದ್ದ ತಕ್ಷಣ ಗಂಡಸರು ಕೂದಲು ಹರಡಿಕೊಂಡ ಹೆಂಡತಿಯನ್ನು ನೋಡಬಾರದು.
    -ಹಣೆಯಲ್ಲಿ ಕುಂಕುಮ ಇರದ ಹೆಣ್ಣು ಮಕ್ಕಳ ಮುಖವನ್ನು ನೋಡಬಾರದು.
    -ಪ್ರಾಣಿಗಳು ಅದರಲ್ಲೂ ಕ್ರೂರ ಪ್ರಾಣಿಗಳ ಫೋಟೋವನ್ನು ನೋಡಲೇಬಾರದು.
    -ಚಪ್ಪಲಿ, ಪೊರಕೆಯನ್ನು ನೋಡಬಾರದು.
    ಬೆಳಗ್ಗೆ ಎದ್ದ ತಕ್ಷಣ ಏನನ್ನು ನೋಡಬೇಕು?
    -ಗೋವಿನಲ್ಲಿ ಸಕಲ ದೇವಾನುದೇವತೆಗಳು ನೆಲೆಸಿರುತ್ತಾರೆ ಅನ್ನೋ ನಂಬಿಕೆ ಇದೆ. ಹೀಗಾಗೇ ಮುಂಜಾನೆ ನಾವು ಎದ್ದ ಕೂಡಲೇ ಗೋವಿನ ಮುಖ ನೋಡಿದ್ರೆ ಬಹಳ ಉತ್ತಮ.
    -ಗೋವನ್ನು ನೋಡೋದ್ರಿಂದ ಸಕಲ ದೇವರ ದರ್ಶನ ಮಾಡಿದ ಪುಣ್ಯ ದೊರೆಯುತ್ತೆ ಎನ್ನಲಾಗುತ್ತೆ.
    -ಕಣ್ಣಿಗೆ ಕಾಣುವ ಪ್ರತ್ಯಕ್ಷ ದೈವ ಸೂರ್ಯ. ಸೂರ್ಯನ ದರ್ಶನದಿಂದ ದಿನವಿಡೀ ನವಚೈತನ್ಯವಿರುತ್ತೆ.
    -ದೇವರುಗಳ ಫೋಟೋ, ನರಿ, ಕುದುರೆ, ತೆಂಗಿನಮರ, ಬಾಳೆಗಿಡ, ತುಳಸಿಗಿಡ, ಫಲ ನೀಡುವ ಯಾವುದೇ ನೀರು, ಮರಗಳನ್ನು ನೋಡಬಹುದು.
    7 min
  • ಧನುರ್ಮಾಸದಲ್ಲಿ ವಿಷ್ಣುವಿನ ಆರಾಧನೆಯನ್ನು ಹೀಗೆ ಮಾಡಿದರೆ ಶ್ರೇಷ್ಠ..!*
    *ಧನುರ್ಮಾಸವೆಂದರೆ ಎಲ್ಲಾ ದೇವಾಲಯಗಳಲ್ಲೂ ಬ್ರಾಹ್ಮೀ ಮುಹೂರ್ತದಲ್ಲೇ ಪೂಜೆ ನಡೆಯುವುದು ಹಿಂದಿನಿಂದಲೂ ಪಾಲಿಸಿಕೊಂಡು ಬಂದ ಸಂಪ್ರದಾಯ, ಹಾಗಾದರೆ ಧನುರ್ಮಾಸದ ವಿಶೇಷತೆ ಏನು, ಮಹತ್ವವೇನು? ಈ ಲೇಖನದಲ್ಲಿದೆ ಮಾಹಿತಿ.
    ಹಿಂದೂ ಧರ್ಮದಲ್ಲಿರುವ ಪ್ರತಿಯೊಂದು ತಿಂಗಳುಗಳು ಕೂಡಾ ಅತ್ಯಂತ ಮಹತ್ವವನ್ನು ಪಡೆದಿದೆ. ಆಯಾಯ ತಿಂಗಳಿಗೆ ಅನುಸಾರವಾಗಿ ಆಚರಣೆಗಳು, ಸಂಪ್ರದಾಯಗಳು, ದೇವರ ಪೂಜಾ ವಿಧಾನಗಳ ಮೂಲಕ ಜೀವನವನ್ನು ಹೇಗೆ ನಡೆಸಬೇಕೆನ್ನುವುದರ ಸಾರವನ್ನು ತಿಳಿಸಿಕೊಡುತ್ತದೆ. ಮಾಸಗಳು ಬದಲಾದಂತೆ ವಾತಾವರಣವೂ ಬದಲಾಗುತ್ತದೆ ಇದಕ್ಕೆ ಅನುಗುಣವಾಗಿ ಮನುಷ್ಯನ ದೇಹವೂ ಒಗ್ಗಿಕೊಳ್ಳಬೇಕೆನ್ನುವ ವೈಜ್ಞಾನಿಕ ಹಿನ್ನೆಲೆಯೂ ಮಾಸಗಳಲ್ಲಿ ಬರುವ ಆಚರಣೆಗಳ ಹಿಂದಿದೆ.
    ದೇವಸ್ಥಾನದಲ್ಲಿ ಘಂಟೆ ಬಾರಿಸುವುದರ ಹಿಂದಿರುವ ಕುತೂಹಲಕಾರಿ ಸಂಗತಿಗಳೇನು ಗೊತ್ತಾ?
    ಸೌರ ಮಂಡಲದ ರಾಜನಾದ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸುತ್ತಾನೆ. ಈ ಸಂಚಾರಕ್ಕೆ ತೆಗೆದುಕೊಳ್ಳುವ ಅವಧಿ ಒಂದು ತಿಂಗಳು. ಡಿಸೆಂಬರ್‌ 16ರಂದು ಸೂರ್ಯನು ಧನುರಾಶಿಯನ್ನು ಪ್ರವೇಶಿಸಿದ್ದು ಮಕರ ರಾಶಿಯನ್ನು ಪ್ರವೇಶಿಸಲು ಒಂದು ತಿಂಗಳ ಕಾಲಾವಕಾಶವನ್ನು ಪಡೆಯುತ್ತಾನೆ. ಈ ಅವಧಿಯನ್ನೇ 'ಧನುರ್ಮಾಸ' ಎಂದು ಕರೆಯುತ್ತಾರೆ. ಈ ಮಾಸವು ಶುಭಕರವಲ್ಲವೆಂದು ಮದುವೆ, ಗೃಹ ಪ್ರವೇಶ ಮುಂತಾದ ಕಾರ್ಯಕ್ರಮಗಳನ್ನೂ ಮಾಡುವುದಿಲ್ಲ. ಬದಲಾಗಿ ಈ ಮಾಸ ಪೂರ್ತಿ ವಿಷ್ಣುವಿನ ಆರಾಧನೆಯಲ್ಲೇ ಕಳೆಯುತ್ತಾರೆ. ಉತ್ಥಾನ ದ್ವಾದಶಿಯಂದು ಯೋಗ ನಿದ್ರೆಯಿಂದ ಏಳುವ ಮಹಾವಿಷ್ಣುವಿಗೆ ಧನುರ್ಮಾಸವು ಅರುಣೋದಯದ ಕಾಲವೆಂದು ಹೇಳಲಾಗುತ್ತದೆ. ಹಾಗಾಗಿ ಧನುರ್ಮಾಸವು ಶ್ರೀಹರಿಯ ಪೂಜೆಗೆ ಶ್ರೇಷ್ಠವಾದ ಕಾಲವೆನಿಸಿಕೊಂಡಿದೆ. ಶೈವ ಆರಾಧಕರು ಧನುರ್ಮಾಸದಲ್ಲಿ ಶಿವನ ಆರಾಧನೆಯನ್ನೂ ಮಾಡುತ್ತಾರೆ
    ಧನುರ್ಮಾಸದ ಮಹತ್ವ
    ಬ್ರಾಹ್ಮೀ ಮುಹೂರ್ತದಲ್ಲಿ ಚುಮುಚುಮು ಚಳಿಯಲ್ಲೇ ಎದ್ದು ಸ್ನಾನಾದಿಗಳನ್ನು ಮುಗಿಸಿ, ನಕ್ಷತ್ರಗಳು ಇನ್ನೂ ಹೊಳೆಯುತ್ತಿರುವಾಗಲೇ ದೇಗುಲಗಳಲ್ಲಿ ಮುಂಜಾನೆಯ ಪೂಜೆಯು ಆರಂಭವಾಗಿ, ಸೂರ್ಯೋದಯಕ್ಕಿಂತ ಮುನ್ನವೇ ಮುಕ್ತಾಯವಾಗುವ ಮಾಸವಿದು ಇದನ್ನು ಧನು ಪೂಜೆ ಎಂದೂ ಕರೆಯುತ್ತಾರೆ. ಇದರ ಹಿಂದೆ ಕಾರಣವೂ ಇದೆ. ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯ ಕಾಲ, ಉತ್ತರಾಯಣವು ಹಗಲಿನ ಕಾಲ, ಆದರೆ ಈ ಧನುರ್ಮಾಸವು ರಾತ್ರಿ ಮತ್ತು ಹಗಲು ಎರಡೂ ಸೇರಿದ ಸಮಯವೆಂದೂ, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಯಾರು ಭಗವಂತನನ್ನು ಪೂಜಿಸಿ, ನೈವೇದ್ಯವನ್ನು ಅರ್ಪಿಸುತ್ತಾರೋ ಅವರ ಸಕಲ ಇಷ್ಟಾರ್ಥಗಳು ನೆರವೇರುತ್ತದೆ.
    ಧನುರ್ಮಾಸದಲ್ಲಿ ವಿಶೇಷವಾಗಿ ಮುಂಜಾನೆ ವಿಷ್ಣು ಸಹಸ್ರನಾಮ ಪಾರಾಯಣ, ಪುರುಷ ಸೂಕ್ತಂ, ಶ್ರೀ ವಿಷ್ಣು ಸೂಕ್ತಂ ಅಥವಾ ನಾರಾಯಣ ಉಪನಿಷತ್ತನ್ನು ಪಠಣ ಮಾಡಲಾಗುತ್ತದೆ. ಕೆಲವರು ಮಹಾವಿಷ್ಣುವಿನೊಂದಿಗೆ ಮಹಾಲಕ್ಷ್ಮೀಯನ್ನು ಪೂಜಿಸುತ್ತಾರೆ, ಹೀಗೆ ಪೂಜಿಸುವುದರಿಂದ ಸಂಪತ್ತು ಒಲಿಯುವುದೆಂದು ಹೇಳಲಾಗುತ್ತದೆ. ಹಿಂದೆ ದೇವ ರಾಜನಾದ ಇಂದ್ರನು ರಾಜ್ಯವನ್ನು ಕಳೆದುಕೊಂಡಾಗ ಶಚೀದೇವಿಯು ಹುಗ್ಗಿಯ ನೈವೇದ್ಯ ಮಾಡಿ ವಿಷ್ಣುವಿಗೆ ಸಮರ್ಪಿಸಿ, ಶ್ರೀಹರಿಯೊಂದಿಗೆ ಮಹಾಲಕ್ಷ್ಮಿಯನ್ನೂ ದ್ವಾದಶನಾಮಗಳಿಂದ ಸ್ತುತಿಸಿದಳಂತೆ, ಇದರ ಫಲವಾಗಿ ಇಂದ್ರನು ರಾಜ್ಯವನ್ನು ಮರಳಿ ಪಡೆದನು ಎನ್ನುವ ಪುರಾಣ ಕಥೆಯಿದೆ.
    ಯಾವ ಬೆರಳಿನಿಂದ ಹಣೆಗೆ ತಿಲಕವನ್ನಿಟ್ಟರೆ ಒಳ್ಳೆಯದು ಗೊತ್ತಾ?
    ಧನುರ್ಮಾಸದ ಆಚರಣೆ
    ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನಾದಿ ಕರ್ಮಗಳನ್ನು ಮುಗಿಸಬೇಕು.
    ಸೂರ್ಯೋದಯಕ್ಕಿಂತ ಮೊದಲೇ ದೇವರ ಪೂಜೆ ಮುಗಿಸಬೇಕು. ಆಕಾಶದಲ್ಲಿ ನಕ್ಷತ್ರ ಕಾಣಿಸುವ ಸಮಯದಲ್ಲಿ ಮಾಡಿದ ಪೂಜೆ ಶ್ರೇಷ್ಠ, ನಂತರ ಮಧ್ಯಮ, ಸೂರ್ಯೋದಯದ ನಂತರ ಅಧಮ, ನಿಷ್ಪಲವೆಂದು ಹೇಳಲಾಗುತ್ತದೆ.
    ಪ್ರತಿನಿತ್ಯ ದೇವರಿಗೆ ನೈವೇದ್ಯವಾಗಿ ಮುದ್ಗಾನ್ನ ಅಂದರೆ ಹುಗ್ಗಿಯನ್ನು ಅರ್ಪಿಸಬೇಕು.
    ಪಾರಾಯಣವನ್ನು ನೈವೇದ್ಯ ಅರ್ಪಣೆಯ ನಂತರವೂ ಮಾಡಬಹುದು.
    ಸಂಧ್ಯಾವಂದನೆ, ನಿತ್ಯಾಹ್ನಿಕವನ್ನು ಪೂಜಾನಂತರ ಮಾಡಿದರೂ ಯಾವುದೇ ದೋಷವಿರುವುದಿಲ್ಲ.
    ಧನುರ್ಮಾಸದ ಒಂದು ದಿನ ವಿಷ್ಣುವಿಗೆ ಪೂಜೆ ಮಾಡಿದರೆ ಸಾವಿರ ವರ್ಷ ಪೂಜೆ ಮಾಡಿದ ಫಲ ದೊರೆಯುವುದು.
    ಕಾತ್ಯಾಯಿನಿ ವ್ರತ
    ಭಾಗವತ ಪುರಾಣದಲ್ಲಿ ಧನುರ್ಮಾಸದ ಮುಂಜಾನೆ ಮಾಡುವ ವ್ರತದ ಫಲವು ಭಕ್ತರಿಗೆ ಸರ್ವವಿಧದ ಫಲಗಳನ್ನು ನೀಡುತ್ತದೆ ಎನ್ನುವ ಉಲ್ಲೇಖವಿದೆ. ನಂದಗೋಪನ ಮಗನಾದ ಶ್ರೀಕೃಷ್ಣನನ್ನು ಪತಿಯಾಗಿ ವರಿಸಲು ಗೋಪಿಯರೆಲ್ಲ ಸೇರಿ ಈ ವ್ರತವನ್ನು ಮಾಡುತ್ತಾರೆ. ಅಂತಹ ಪರಮಾತ್ಮನನ್ನೇ ದೊರಕಿಸಿಕೊಡುವ ಪುಣ್ಯ ಮಾಸವಾದ್ದರಿಂದ ಧನು ಮಾಸದಲ್ಲಿ ಶೈವ, ವೈಷ್ಣವ, ಶಾಕ್ತರೆಲ್ಲರೂ ದೇಗುಲಗಳಲ್ಲಿ ಧನುರ್ಮಾಸದ ಆಚರಣೆಯನ್ನು ಮಾಡುತ್ತಾರೆ
    ಹುಗ್ಗಿಯ ಪ್ರಾಮುಖ್ಯತೆ
    ಪಾಂಡವರು ರಾಜ್ಯವನ್ನು ಕಳೆದುಕೊಂಡು ವನವಾಸದಲ್ಲಿರಬೇಕಾದರೆ ಧರ್ಮರಾಯನು ನಾರದನನ್ನು ' ರಾಜ್ಯ, ಕೋಶಗಳನ್ನೆಲ್ಲಾ ಕಳೆದುಕೊಂಡಿದ್ದೇವೆ, ಸದ್ಯದಲ್ಲೇ ಕೌರವರೊಂದಿಗೆ ಯುದ್ಧವೂ ನಡೆಯಲಿದೆ. ಹಾಗಾಗಿ ಯುದ್ಧದಲ್ಲಿ ಜಯಶಾಲಿಯಾಗುವುದೋ? ಕಳೆದುಕೊಂಡ ರಾಜ್ಯ ಮರಳಿ ದೊರೆಯುವುದೋ' ಎಂದು ಪ್ರಶ್ನಿಸುತ್ತಾನೆ. ಆಗ ನಾರದರು ' ಬ್ರಾಹ್ಮೀ ಮುಹೂರ್ತದಲ್ಲಿ ಹರಿಯನ್ನು ಪೂಜಿಸಿ, ಯಾರು ಹುಗ್ಗಿಯನ್ನು ಸಮರ್ಪಿಸುತ್ತಾರೋ ಅವನು ಕ್ಷಣ ಮಾತ್ರದಲ್ಲಿ ಶತ್ರುಗಳನ್ನು ಜಯಿಸುತ್ತಾನೆ. ಹಿಂದೆ ಇಂದ್ರನೂ ರಾಜ್ಯವನ್ನು ಕಳೆದುಕೊಂಡಾಗ ಶಚೀದೇವಿಯು ಹುಗ್ಗಿಯನ್ನು ವಿಷ್ಣುವಿಗೆ ಸಮರ್ಪಿಸಿದುದೂ, ಶ್ರೀಹರಿಯ ಅನುಗ್ರಹದಿಂದ ರಾಜ್ಯವನ್ನು ಮರಳಿ ಪಡೆದುದಾಗಿಯೂ' ಯುಧಿಷ್ಟಿರನಿಗೆ ತಿಳಿಸುತ್ತಾರೆ.
    ' ಧನುರ್ಮಾಸದಲ್ಲಿ ಪ್ರತಿನಿತ್ಯ ಉ‍ಷಾಃಕಾಲದಲ್ಲಿ ಶ್ರೀಹರಿಗೆ ಹುಗ್ಗಿಯನ್ನು ಸಮರ್ಪಿಸಿ, ಪೂಜಿಸಿದರೆ ಯುದ್ಧದಲ್ಲಿ ಜಯಶೀಲರಾಗುವಿರೆಂದು ತಿಳಿಸಿದರು. ಇದರಂತೆ ಪಾಂಡವರು ಶ್ರೀಕೃಷ್ಣನಿಗೆ ಧನುರ್ಮಾಸದ ಪೂಜೆಯನ್ನು ಮಾಡಿ ಅನುಗ್ರಹವನ್ನು ಪಡೆದು ಮಹಾಭಾರತ ಯುದ್ಧವನ್ನು ಜಯಿಸಿದರೆಂದು ಹೇಳಲಾಗುತ್ತದೆ.ಮಹಾಭಾರತ ಯುದ್ಧದ ಸಂದರ್ಭದಲ್ಲಿ ಶ್ರೀಕೃಷ್ಣನಿಗೆ ದ್ರೌಪದಿಯು ಪ್ರತಿನಿತ್ಯ ಬೆಳಗ್ಗೆ ಬೇಗ ಹುಗ್ಗ
    9 min
  • for future generations, India needs 1000s of new corporations which create 1000s of high paying jobs
    Everytime a person of Indian origin become a Global CEO, we either embark on Self loathing or feel as is we now control the American corporate and the person will focus on Indian Interest!
    FACT is from Pepsi to Google to Microsoft to Twitter CEOs first KRA is their respective corporate Interest and the ugly truth, they are of Indian origin only.... NOT INDIAN
    None has Indian Citizenship. They surrendered it long back
    So grow up and feel proud of folks in India or who carries Indian Passport
    Indians love to take pride in CEOs of Indian Origin based in other countries.
    But the same tribe is most hated by folks in India?
    Ambani, Adani, Tata, Birla....
    They stayed in India and created Indian products, companies for Indian people, created huge shareholder wealth for the common man, revolutionized the digital space, renewable energy sector, O&G, food supply chain, clothing, telecommunication so cheap so that headless chickens can abuse them free of cost, defense backbone, Shipping, etc etc
    FACT IS, We Indians are just bunch of Emotional fools. Nothing else.
    Ambani-Adani have generated more Wealth & Jobs for the Nation than -
    20 Nadella's,
    200 Pichai's &
    1000 Parag's
    multiplied by 10 times, yet Ambani-Adani only get Hate in India from....
    We are a Nation that Worries about Brain Drain & Abuse the Wealth Creators in the Nation...
    It’s not US and China anymore,
    India is becoming the world's fastest-growing startup ecosystem with over 70 Unicorn ( A startup company with valuation of more than 1 billion dollars) Startups, 40 in 2021 !!! 🇮🇳🚀....but people have problem with Adani becoming the richest person in India!
    Tata Group has 7,50,000 employees.
    L&T employs 3,38,000 people.
    Infosys has 2,60,000 employees.
    Mahindra has 2,60,000 employees.
    Reliance Industries has 2,36,000 people.
    Wipro has 2,10,000 employees.
    HCL has 1,67,000 employees.
    HDFC Bank has 1,20,000 employees.
    ICICI Bank has 97,000 employees.
    TVS group has 60,000 employees.
    Just these ten corporates together employ nearly 25 lakh Indians and give them very respectable salaries. These 25 lakh Corporate jobs is more than half of the total Central Govt jobs (48.34 lakhs)! It is also 5 times the total government jobs in a big state like Karnataka!
    The govt.provides jobs to one crore plus people( 1%) and private and organized sector provide 6-8% and rest 92 % are employed in unorganized sector.
    Respect the Private sector. Adore millionaires and billionaires. Cheer for job creators. They are creating livelihood for millions of Indians!
    Do not listen to the failed socialist politicians who ruined the economic potential of 3 generations in India. If you want bright future for future generations, India needs 1000s of new corporations which create 1000s of high paying jobs!
    6 min
  • *ಎಂ. ಕೆ. ಇಂದಿರಾ ಹೇಳಿದ ಕಾಫಿಯ ಕಥೆ*......
    *ಎಂ. ಕೆ. ಇಂದಿರಾ ಹೇಳಿದ ಕಾಫಿಯ ಕಥೆ*......
    ಕೆಲದಿನ ಅದು ಮಡಿವಂತರಿಗೆ ನಿಷೇಧವಾಗಿತ್ತು. ಅದರಲ್ಲೂ ಮಡಿ ಹೆಂಗಸರು ಕುಡಿಯಲೇಬಾರದು. ಆದರೆ ಅಮಲು ಹತ್ತಿಯಾಗಿತ್ತು. ಕಡೆಗೆ ಅದರ ಚಟ ಪೂರಾ ಹತ್ತಿದವರೊಬ್ಬರು ಅದಕ್ಕೆ "ಕೈಲಾಸದ ಕಷಾಯ" ಎಂದು ಹೆಸರಿಟ್ಟು ವೇದ_ವ್ಯಾಸರಂತೆ ಅದಕ್ಕೊಂದು ಪೌರಾಣಿಕ ಕಥೆಯನ್ನು ಕಲ್ಪಿಸಿ ಹೇಳಿದರು. ಅದು ಕಲ್ಪನೆಯಾದರೂ ಸ್ವಾರಸ್ಯವೂ ಸಹಜವೂ ಆಗಿ ಕಾಣಿಸುತ್ತೆ.
    "ಭಗೀರಥನ ಪ್ರಾರ್ಥನೆಯ ಮೇರೆಗೆ ಗಗನಾಂತರದಿಂದ ಧುಮುಕಿದ ಗಂಗೆಯನ್ನು ಪರಶಿವ ತಡೆದು ಜಟೆಯಲ್ಲಿ ಬಿಗಿದು ಕೂರಿಸಿಕೊಂಡ. ಮುಂದೆ ಗಂಗೆ ಸಾವಧಾನವಾಗಿ ಹರಿದು ಭಾಗೀರಥಿ ಎನಿಸಿಕೊಂಡಳು.
    ಸಗರಪುತ್ರರೇನೋ ಮುಕ್ತಿ ಪಡೆದರು, ಆದರೆ ಕೈಲಾಸದಲ್ಲಿ ಗಂಗೆಯನ್ನು ತಲೆಯಲ್ಲಿ ಹೊತ್ತ ಪರಮೇಶ್ವರನಿಗೆ ಅಸಾಧ್ಯ ನೆಗಡಿ ಪ್ರಾರಂಭವಾಯ್ತು. ಏನು ಮಾಡಿದರೂ ನೆಗಡಿ ನಿಲ್ಲಲೊಲ್ಲದು. ಶಿವನ ಜಟೆಯಿಂದ ಧುಮುಕುತ್ತಿದ್ದುದಲ್ಲದೆ ಗಂಗೆ ಆತನ ಮೂಗಿನಿಂದಲೂ ದ್ವಿಧಾರೆಯಾಗಿ ಇಳಿಯತೊಡಗಿದಳು. ತಲೆನೋವು, ಮೈ ನೋವು, ಜ್ವರ ಎಲ್ಲಾ ಹೊಡೆದು ಬಾರಿಸಿತು ಹರನಿಗೆ. ಮೂಗು ಒರೆಸಿಕೊಳ್ಳಲು ಅವನಲ್ಲಿ ಒಂದು ತುಂಡು ಬಟ್ಟೆಯಿಲ್ಲ. ಕಡೆಗೆ ವಿಧಿಯಿಲ್ಲದೆ ಪಾರ್ವತಿಯ ಪೀತಾಂಬರದ ಸೆರಗನ್ನೇ ಮೂಗಿಗೆ ಒತ್ತಿ ಹಿಡಿದ.
    ಹರನ ಕಾಯಿಲೆಯ ವಿಷಯ ತಿಳಿದು ಅಗ್ನಿದೇವ ಓಡಿ ಬಂದು ಕೈಲಾಸದಲ್ಲಿ ಧಗೆ ಎಬ್ಬಿಸಿ ಎಲ್ಲರಿಗೂ ಬೆಚ್ಚಗೆ ಮಾಡಿದ. ಉಹೂಂ ! ಜಗ್ಗಲಿಲ್ಲ. ಮುಂದೇನೆಂದು ದೇವಾಧಿದೇವತೆಗಳಿಗೆ ಚಿಂತೆಯಾಗಿ ಕಡೆಗೆ ದೇವವೈದ್ಯನಾದ ಧನ್ವಂತರಿಯನ್ನು ಕರೆಸಿದರು.
    ಅವನು ಪರಶಿವನ ನಾಡಿ ಹಿಡಿದು ನೋಡಿದ. ಶಿವನ ಮೈಯ್ಯ ಜ್ವರದ ಜೊತೆಗೆ ಅಗ್ನಿಯ ಶಾಖವೂ ಸೇರಿ ಶಿವನ ಜ್ವರ ನೂರಾಹತ್ತು ಡಿಗ್ರಿಯಾಗಿತ್ತು. ಧನ್ವಂತರಿ ಇದುವರೆಗೆ ಯಾರಿಗೂ ಕೊಡದ ಒಂದು ಔಷಧಿಯನ್ನು ಈಗ ಜಗದೀಶನಿಗೆ ಕೊಡಲೇಬೇಕಾಯ್ತು.
    ಸಂಜೀವಿನಿ ಪರ್ವತದಿಂದ ಆ ಬೀಜವನ್ನು ತರಬೇಕು. ಅದಕ್ಕೆ ಯಾರು ಸಮರ್ಥರು ಎಂದು ಯೋಚಿಸಿ ಕಡೆಗೆ ಆ ಕೆಲಸಕ್ಕೆ ವಾಯುಪುತ್ರನೇ ಸರಿಯೆಂದು ಭುಲೋಕದ ಋಷ್ಯಮೂಕ ಪರ್ವತದ ಕೋಡುಗಲ್ಲಿನ ಮೇಲೆ ಕೂತಿದ್ದ ಮಾರುತಿಯನ್ನು ಕರೆತರಲಾಯ್ತು. ಪರಮೇಶ್ವರನ ಫಜೀತಿ ನೋಡಿ ಅವನಿಗೂ ಗಾಬರಿಯಾಗಿತ್ತು.
    ಧನ್ವಂತರಿಯ ಆಜ್ಞೆಯ ಮೇರೆಗೆ ಹನುಮಂತ ಹಾರಿದ ಸಂಜೀವಿನಿ ಪರ್ವತಕ್ಕೆ. ' ಕೆಂಪು ಸಣ್ಣ ಹಣ್ಣು, ತಿನ್ನಲು ಸಿಹಿ ಸಿಹಿ, ಒಳಗೆ ದಪ್ಪ ಬೀಜ ಇರುತ್ತೆ. ಅದನ್ನ ಜಾಗ್ರತೆ ತೆಗೆದುಕೊಂಡು ಬಾ' ಎಂದು ಹೇಳಿದ್ದ ಧನ್ವಂತರಿ. ಸರಿ, ಸಂಜೀವಿನಿ ಪರ್ವತವನ್ನು ಗರಪಾಡಿದ ಪ್ರಾಣೇಶ. ಅಲ್ಲಿ ಆ ಹಣ್ಣಿನ ಗಿಡಗಳ ವನವೇ ಇದೆ. ಮೊದಲು ತಾನು ತಿಂದು ರುಚಿ ನೋಡಿದ. ಬಹು ರುಚಿಯಾಗಿತ್ತು. ಹಸಿಬೀಜವನ್ನೇ ನುಂಗಿಬಿಟ್ಟ. ಹನುಮನ ಬಲ ನೂರ್ಮಡಿಯಾಯ್ತು.
    ಗಿಡಗಳನ್ನೇ ಕಿತ್ತು ಹೊರೆಕಟ್ಟಿ ಹೊತ್ತ ಹನುಮ. ಅವನು ಅಂತರಿಕ್ಷ ಮಾರ್ಗದಲ್ಲಿ ರಭಸದಿಂದ ಹಾರಿ ಬರುತ್ತಿದ್ದಾಗ ಪಕ್ವವಾದ ಕೆಲವು ಹಣ್ಣುಗಳು ಭರತಖಂಡದ ಮೇಲೆ ಅಲ್ಲಲ್ಲಿ ಉದುರಿದವು. ಕ್ರಮೇಣ ಅವು ಭೂಮಿಯಲ್ಲಿ ಸಮೃದ್ಧವಾಗಿಯೇ ಬೆಳೆದವು.
    ಅತ್ತ ಕೈಲಾಸದಲ್ಲಿ ಕೂಡಲೇ ಧನ್ವಂತರಿ ಒಣಗಿದ ಹಣ್ಣನ್ನು ಒಡೆದು, ಬೀಜ ತೆಗೆದು ಅಗ್ನಿಗೆ ಕೊಟ್ಟ. ಅಗ್ನಿ ಹದವಾಗಿ ಹುರಿದು ಕೊಟ್ಟ. ಅದನ್ನು ಅರೆದು ಪುಡಿಮಾಡಿ ಕಷಾಯಕ್ಕಿಟ್ಟಾಯಿತು. ಅದಕ್ಕೆ ಹಾಲು_ಸಕ್ಕರೆ ಬೇಕು. ಸರಿ, ಗಣಪ, ಸುಬ್ರಹ್ಮಣ್ಯರು ಓಡಿದರು. ದೇವಲೋಕದಿಂದ ಸಕ್ಕರೆ ಬಂತು. ವೈಕುಂಠದ ಕ್ಷೀರಸಾಗರದಿಂದ ಹಾಲು ಬಂತು. ಘಂ ಎನ್ನುವ ಕಷಾಯ ತಯಾರಾಯಿತು.
    ದೊಡ್ಡ ಕರಂಡದ ತುಂಬಾ ಕಷಾಯ ತುಂಬಿ ಪರಮೇಶ್ವರನಿಗೆ ಕೊಟ್ಟ ಧನ್ವಂತರಿ. ಬಿಸಿಬಿಸಿಯಾಗಿ ಬಲು ರುಚಿಯಾಗಿತ್ತು. ಉಮೆ ಶಂಕರನ ಮುಖವನ್ನೇ ನೋಡುತ್ತಿದ್ದಳು. ಆರು ಗಳಿಗೆಯಲ್ಲಿ ಹರನ ಮೂಗಿನ ಗಂಗಾಪ್ರವಾಹ ನಿಂತಿತು. ಮೈ ಹಗುರವಾಗಿ ಜ್ವರಬಿಟ್ಟು ಪರಮೇಶ್ವರ ಪ್ರಸನ್ನನಾದ.
    ಈ ಪವಾಡವನ್ನು ಕಂಡು ದೇವತೆಗಳು ವಿಸ್ಮಯಪಟ್ಟರು. ಉಳಿದ ಕಷಾಯವನ್ನು ಧನ್ವಂತರಿ ನೆರೆದವರೆಲ್ಲರಿಗೂ ಬಿಸಿಬಿಸಿಯಾಗಿ ಕೊಟ್ಟ. ಅಮೃತ ಕುಡಿದು ಕುಡಿದು ಸೀ ಬಡಿದು ಹೋದ ಬಾಯಿಗೆ ಈ ಕಷಾಯ ಅಮೃತಕ್ಕಿಂತ ರುಚಿಯಾಗಿ ಕಂಡಿತು. ಎಲ್ಲರಿಗೂ ಮೈ ಹುರುಪು ಬಂದಿತು. ನಂತರ ದೇವತೆಗಳು ಕೇಳಿದರು ಆ ಬೀಜದ ಹೆಸರೇನು..ಎಂದು?.
    ಧನ್ವಂತರಿ ಯೋಚಿಸಿದ. ಇವರಿಗೆ ತಿಳಿದರೆ ಸಂಜೀವಿನಿ ಪರ್ವತವೇ ಖಾಲಿಯಾದೀತು ಎಂದುಕೊಂಡು, ಯಾವಾಗಲೂ ಕೆಲವು ಮಹತ್ವದ ಔಷಧಿಗಳ ಹೆಸರು ಹೇಳಬಾರದು. ಹೇಳಿದರೆ ಅದರ ಶಕ್ತಿ ಕಡಿಮೆಯಾಗುತ್ತದೆ. ಅಲ್ಲದೆ ನೀವೆಲ್ಲ ಕೇಳಿದರೆ ಸಂಜೀವ ಇದನ್ನು ಕೊಟ್ಟಾನೆ..? ಬೀಜವನ್ನು ಕಪಿರಾಜ ತಂದುಕೊಟ್ಟಿದ್ದರಿಂದ ನೀವು *ಕಪಿಬೀಜ* ಎಂದು ಕರೆಯಿರಿ. ಇಷ್ಟು ಸಾಕು, ಇನ್ನು ಹೊರಡಿ ಎಂದಾಗ ಎಲ್ಲರೂ ಹೊರಟರು.
    ಮೊದಮೊದಲು ಕಲಿಯುಗದಲ್ಲಿ ಆ *ಕಪಿಬೀಜದ* ಹಣ್ಣುಗಳನ್ನು ಮಂಗಗಳೇ ತಿನ್ನುತ್ತಿದ್ದವು. ಮಾರುತಿಯ ಅಂಶದಿಂದ ಹುಟ್ಟಿದ ಅಂದರೆ ಮಂಗನಮೂತಿಯ ಕೆಂಪು ಆಂಗ್ಲ ಜನ ಮೊಟ್ಟಮೊದಲು ಈ ಕಪಿಬೀಜವನ್ನು ಕಂಡುಹಿಡಿದರು... *ಕಫಿ* ಎಂದರು...
    ಬರುಬರುತ್ತಾ
    ಅದು *ಕಾಫಿಯಾಯಿತು*....."☕😊
    7 min
  • ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಸ್ಸುಗಳ ಅಂತರಂಗದ ಚಳವಳಿ.....
    ಮತ್ತೆ ವೈರಸ್ ಭೀತಿಯಲ್ಲಿ,
    ಮತ್ತೆ ಲಾಕ್ ಡೌನ್ ಭಯದಲ್ಲಿ,
    ಮತ್ತೆ ಸಾವಿನ ಹೆದರಿಕೆಯಲ್ಲಿ,
    ಮತ್ತೆ ಬದುಕಿನ ಆತಂಕದಲ್ಲಿ,
    ಮತ್ತೆ ನಿರಾಸೆಯ ಸನಿಹದಲ್ಲಿ,......
    ಆದರೂ....
    ಭ್ರಷ್ಟಾಚಾರ ಕಡಿಮೆಯಾಗಿಲ್ಲ,
    ಜಾತಿಯ ಅಸಮಾನತೆ ಹೋಗಿಲ್ಲ,
    ಪರಿಸರ ನಾಶ ಆಗುತ್ತಲೇ ಇದೆ,
    ಆಹಾರ ಕಲಬೆರಕೆ ನಡೆಯುತ್ತಲೇ ಇದೆ,
    ಅಧಿಕಾರದ ದಾಹ ಇಳಿಯುತ್ತಲೇ ಇಲ್ಲ,.........
    ಒಂದು ಕಡೆ ಪ್ರಾಕೃತಿಕ ಸವಾಲುಗಳು,
    ಮತ್ತೊಂದು ಕಡೆ ಆಡಳಿತಾತ್ಮಕ ವೈಫಲ್ಯಗಳು,
    ಸಾಮಾಜಿಕ ಆರ್ಥಿಕ ಅಸಮಾನತೆಗಳು,
    ದೈಹಿಕ ಮಾನಸಿಕ ತಾಕಲಾಟಗಳು, ........
    ಎಲ್ಲವನ್ನೂ ಏಕಕಾಲದಲ್ಲಿ ಎದುರಿಸಬೇಕಾದ ಅಗ್ನಿಪರೀಕ್ಷೆ ಬಂದೊದಗಿದೆ.
    21 ನೆಯ ಶತಮಾನದಲ್ಲಿ ಮನುಷ್ಯ,
    ಆಧುನಿಕತೆಯ ಅಹಂನಲ್ಲಿ,
    ತಂತ್ರಜ್ಞಾನದ ನೆರಳಿನಲ್ಲಿ,
    ಹಣ ಅಧಿಕಾರದ ಮೋಹದಲ್ಲಿ,
    ಸಂಪರ್ಕ ಕ್ರಾಂತಿಯ ಜಾಲದಲ್ಲಿ.....
    ತಾನು ಅತ್ಯಂತ ಸುಖಿ ಮತ್ತು ಇಡೀ ಪ್ರಕೃತಿಯ ಮೇಲೆ ನಿಯಂತ್ರಣ ಹೊಂದಿ ಎಲ್ಲವನ್ನೂ ತನ್ನ ಅಡಿಯಾಳಾಗಿ ಮಾಡಿಕೊಂಡಿದ್ದೇನೆ ಎಂಬ ಭ್ರಮೆ ಮತ್ತು ದುರಹಂಕಾರದಲ್ಲಿ ಮುಳುಗಿದ್ದ. ಗಾಳಿ ನೀರು ಆಹಾರವಷ್ಟೇ ಅಲ್ಲದೇ ಸಮಯವನ್ನು ಹಣದಲ್ಲಿಯೇ ಲೆಕ್ಕ ಹಾಕುವ ಧಾರ್ಷ್ಟ್ಯ ಬೆಳೆಸಿಕೊಂಡ......
    ಹಾಲಿಗೆ ಯೂರಿಯಾ,
    ನೀರಿಗೆ ರಾಸಾಯನಿಕ,
    ಗಾಳಿಗೆ ಹೊಗೆ,
    ಆಹಾರದ ಕಲಬೆರಕೆ,
    ಶಿಕ್ಷಣ ಆರೋಗ್ಯ ಸಾಹಿತ್ಯ ಸಮಾಜ ಸೇವೆ ದೇವರ ಪೂಜೆಯನ್ನು ದಂಧೆಯಾಗಿ ಮಾಡಿಕೊಂಡ.......
    ಆದರೆ ಈಗ ನಿಧಾನವಾಗಿ ಆ ಭ್ರಮೆಯಿಂದ ಹೊರಬರತೊಡಗಿದ್ದಾನೆ.
    ತನ್ನ ಮಿತಿಯ ಅರಿವಾಗತೊಡಗಿದೆ.
    ಜೊತೆಗೆ ತಾನು ಅಸಹಾಯಕ ಮತ್ತು ಬಲಿಪಶು ಎಂದೂ ಅರ್ಥವಾಗುತ್ತಿದೆ.
    ವೈದ್ಯಕೀಯ ವಿಜ್ಞಾನ ಮುಂದುವರಿದಷ್ಟೂ ಅನಾರೋಗ್ಯಗಳು ಹೆಚ್ಚಾಗುತ್ತಾ,
    ಶಿಕ್ಷಣ ಕ್ಷೇತ್ರ ಆಧುನಿಕವಾದಷ್ಟೂ ಸಂಕುಚಿತ ಮನೋಭಾವ ಬೆಳೆಯುತ್ತಾ,
    ರಸ್ತೆ ವಾಹನಗಳು ಉತ್ತಮವಾದಷ್ಟೂ ಅಪಘಾತಗಳು ಜಾಸ್ತಿಯಾಗುತ್ತಾ,
    ಹಣದ ಹರಿವು ಬೆಳೆದಂತೆ ಮೋಸ ವಂಚನೆಗಳು ಹೆಚ್ಚಾಗುತ್ತಾ,
    ಮಾಧ್ಯಮಗಳು ಅಭಿವೃದ್ಧಿಯಾದಂತೆ ನಂಬಲನರ್ಹವಾದ ಸುಳ್ಳು ಸುದ್ದಿಗಳು ಹೆಚ್ಚಾಗುತ್ತಾ ಸಾಗುತ್ತಿದೆ.
    ಈಗ
    ಬದುಕಿನ ಮಾರ್ಗವನ್ನು,
    ಬದುಕಿನ ರೀತಿಯನ್ನು,
    ಬದುಕಿನ ಗುರಿಯನ್ನು,
    ಬದುಕಿನ ಸಾರ್ಥಕತೆಯನ್ನು,....
    ಮತ್ತೊಮ್ಮೆ ಪುನರ್ ವಿಮರ್ಶೆಗೆ ಒಳಪಡಿಸಬೇಕಾಗಿದೆ.
    ತಾಂತ್ರಿಕ ಪ್ರಗತಿಯೇ ಅಭಿವೃದ್ಧಿ ಎನ್ನಬೇಕೆ ?
    ನೆಮ್ಮದಿಯ ಗುಣಮಟ್ಟವನ್ನು ಅಭಿವೃದ್ಧಿ ಎನ್ನಬೇಕೆ ?
    ಆರೋಗ್ಯವಂತ ಆಯಸ್ಸಿನ ಅವಧಿಯನ್ನೇ ಅಭಿವೃದ್ಧಿ ಎನ್ನಬೇಕೆ ?
    ಹಣ ಅಧಿಕಾರ ಪ್ರಚಾರ ಜನಪ್ರಿಯತೆ ಪಡೆಯುವುದನ್ನೇ ಯಶಸ್ಸು ಎನ್ನಬೇಕೆ ?
    ಮಾನವೀಯ ಮೌಲ್ಯಗಳ ಗುಣಮಟ್ಟದ ಆಧಾರವೇ ಅಭಿವೃದ್ಧಿ ಎನ್ನಬೇಕೆ ?.......
    ವಿಧಿಯಾಟ -
    ದೈವಲೀಲೆ -
    ಹಣೆ ಬರಹ -
    ಸೃಷ್ಟಿಕರ್ತನ ಮಹಿಮೆ -
    ಕರ್ಮಫಲ -
    ಮುಂತಾದ ವಾದಗಳ ಅರ್ಥವನ್ನು ಮತ್ತೊಮ್ಮೆ ಆತ್ಮಸಾಕ್ಷಿಗೆ ಒಳಪಡಿಸಬೇಕಿದೆ......
    ಒಂದು ವೇಳೆ ಈ ವಿಷಯಗಳನ್ನು ವೈಚಾರಿಕ ಮನೋಭಾವದ ಆಧುನಿಕ ಹಿನ್ನಲೆಯಲ್ಲಿ, ನಮ್ಮ ಸಾಂಸ್ಕೃತಿಕ ವ್ಯಕ್ತಿತ್ವದೊಂದಿಗೆ ಸಮೀಕರಿಸಿ ಉತ್ತರ ಹುಡುಕಿಕೊಳ್ಳುವ ಪ್ರಯತ್ನ ಮಾಡಿದರೆ.....
    ಬಹುಶಃ ಸಾವು ಸೋಲು ನೋವು ಭಯ ಆತಂಕ ಒಂದಷ್ಟು ಕಡಿಮೆಯಾಗಿ,
    ವೈರಸ್ ದಾಳಿಗಳು,
    ಆರ್ಥಿಕ ಸಂಕಷ್ಟಗಳು,
    ಹತ್ತಿರದವರ ಸಾವುಗಳು,
    ಮಾನಸಿಕ ದೈಹಿಕ ನೋವುಗಳು,
    ಬ್ರೇಕಿಂಗ್ ನ್ಯೂಸ್ ಗಳ ಪರಿಣಾಮಗಳು....
    ಈ ಎಲ್ಲದರ ನಡುವೆಯೂ
    ಮನಸ್ಸಿನಲ್ಲಿ ಒಂದಷ್ಟು ಕಿರುನಗೆ ಮೂಡಬಹುದು.
    ಬದುಕು ನಮ್ಮ ನಿರೀಕ್ಷೆಯಂತೆ ಮಾತ್ರ ಇರುವುದಿಲ್ಲ.
    ಬದುಕಿನ ನಿರೀಕ್ಷೆಗೆ ನಾವು ಸಹ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬ ಸರಳ ಸತ್ಯ ಅರ್ಥಮಾಡಿಕೊಂಡರೆ............
    ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
    ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
    ಮನಸ್ಸುಗಳ ಅಂತರಂಗದ ಚಳವಳಿ.....
    6 min
  • *You earn Respect if you learn to Respect Others..
    ಶ್ರೀಹರಿ ಇಚ್ಛೆ 🙏
    ದಯವಿಟ್ಟು ಓದಿ 📝
    ಅದೊಂದು ಕೈಗಾರಿಕಾ ಪ್ರದೇಶ. ನೂರಾರು ಕಾರ್ಖಾನೆಗಳ ನಡುವೆ ಅದೊಂದು ಫ್ರೀಜರ್ ಘಟಕ.
    ಆಹಾರ ಪದಾರ್ಥಗಳನ್ನು ಸಂಗ್ರಹಿಸಿಡುವ ಶೀತಲೀಕರಣ ಯಂತ್ರಗಳು ಅದರ ಮುಖ್ಯ ಭಾಗ.
    ಅದೊಂದು ದಿನ ಸಂಜೆ ಎಲ್ಲರೂ ಮನೆಗೆ ಹೊರಡುವ ಸಮಯ ಆಗಿತ್ತು.
    ಒಬ್ಬೊಬ್ಬರಾಗಿ, ಗಡಿಯಾರ ನೋಡಿಕೊಂಡು,
    ಘಟಕದಿಂದ ಮರಳಿ ಮನೆಯ ಕಡೆ ಪ್ರಯಾಣ ಬೆಳೆಸಲು ಆರಂಭಿಸಿದ್ದರು.
    ಆದರೆ ಆ ಘಟಕದ ಎಲೆಕ್ಟ್ರಾನಿಕ್ಸ್ ವಿಭಾಗದ ಇಂಜಿನಿಯರ್ ಒಬ್ಬರು ಎಲ್ಲಾ ಯಂತ್ರಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂದು ನೋಡಿಕೊಂಡು ಬರುತ್ತಿರುವಾಗ,
    ಯಾವುದೋ ಫ್ರೀಜರಿನಲ್ಲಿ ಸಮಸ್ಯೆ ಇರುವುದು ಗೊತ್ತಾಯಿತು.
    ಒಂದು ಗೋಡೌನ್‌ನಷ್ಟು ಗಾತ್ರವಿದ್ದ,
    ಆ ಫ್ರೀಜರಿನಲ್ಲಿರುವ ಸಮಸ್ಯೆಯನ್ನು ಗುರುತಿಸಲು ಆತನಿಗೆ ಸಮಯ ಸಾಲದಾಯಿತು.
    ಅದರ ಒಳಗೆ ಸಮಸ್ಯೆಯನ್ನು ಬಗೆಹರಿಸಿ, ಹೊರಗೆ ಬರಲು ನೋಡಿದರೆ ಮನೆಗೆ ಹೋಗುವ ಆತುರದಲ್ಲಿ ,
    ಯಾರೋ ಒಬ್ಬ,
    ಎಲ್ಲರೂ ಹೊರಗೆ ಬಂದಿದ್ದಾರೆ ಎಂದು ನೋಡದೇ,
    ಹೊರಗಿನಿಂದ ಬಾಗಿಲು ಹಾಕಿ ಬಿಟ್ಟಿದ್ದನು.
    ಒಳಗಿದ್ದ ಇಂಜಿನಿಯರ್ ಕಿರುಚುತ್ತಾ ಯಾರಾದರೂ ಸಹಾಯ ಮಾಡುತ್ತಾರಾ ಎಂದು ಕರೆದನು.
    ಆದರೆ ಅವನಿಗೆ ಪ್ರತಿಕ್ರಿಯಿಸುವವರು ಯಾರೂ ಇರಲಿಲ್ಲ.
    ಸಾಲದ್ದಕ್ಕೆ ಘಟಕದ ಒಳಭಾಗದ ದೀಪಗಳೆಲ್ಲ ಆರಿಸಲ್ಪಟ್ಟಿದ್ದವು.
    ಮೈನಸ್ ಉಷ್ಣಾಂಶವಿದ್ದ ಆ ಫ್ರೀಜರ್ ಘಟಕ ಆತನಿಗೆ ಮಂಜುಗಡ್ಡೆಯ ಸಮಾಧಿಯಂತೆ ಕಾಣಿಸಲಾರಂಭಿಸಿತು.
    ಅವನು ಧರಿಸಿದ್ದ ಬೆಚ್ಚನೆಯ ಉಡುಪು ಸಹ ಚಳಿಯನ್ನು ತಡೆಯಲು ಅಸಾಧ್ಯ ಎನ್ನುವಂಥ ಸ್ಥಿತಿ ತಲುಪಿತು.
    ಹೀಗೆಯೇ ಸಮಯ ಕಳೆಯುತ್ತಾ ಹೋಯಿತು. ಇವನ ಕೈ ಕಾಲು ಮರಗಟ್ಟಲು ಆರಂಭಿಸಿತು.
    ಅಷ್ಟರಲ್ಲಿ ಯಾರೋ ಬಾಗಿಲು ತೆರೆಯುತ್ತಿರುವುದು ಕಾಣಿಸಿತು.
    ಆ ಘಟಕದ ಸೆಕ್ಯೂರಿಟಿ ಗಾರ್ಡ್...
    ಟಾರ್ಚ್ ಹಿಡಿದುಕೊಂಡು ಯಾರನ್ನೋ ಹುಡುಕುತ್ತಾ ಬಂದಂತೆ ಕಂಡನು.
    ಅವನನ್ನು ಕರೆದಾಗ ಓಡಿ ಬಂದು, ಬಾಗಿಲು ತೆರೆದನು.
    ಓಡಿ ಹೋಗಿ
    ತಾನು ರಾತ್ರಿಗೆಂದು
    ಫಾಸ್ಕ್‌ನಲ್ಲಿ ತುಂಬಿ ತಂದಿದ್ದ
    ಬಿಸಿ ಬಿಸಿ ಚಹವನ್ನು
    ಸುರಿದು ಕೊಟ್ಟನು.
    ಬದುಕಿದೆಯಾ ಬಡಜೀವವೇ,
    ಎಂಬಂತಾಗಿದ್ದ ಇವನು ಆ ಚಹವನ್ನು ಕುಡಿದು ಚೇತರಿಸಿಕೊಂಡನು....
    ಹಾಗೂ ಕುತೂಹಲದಿಂದ ಆ ಗಾರ್ಡ್ ನ್ನು ಕೇಳಿದನು.
    "ನಾನು ಒಳಗೆ ಸಿಕ್ಕಿ ಹಾಕಿಕೊಂಡಿದ್ದೆ ಎಂದು ನಿನಗೆ ಹೇಗೆ ಗೊತ್ತಾಯಿತು?
    ಯಾರು ನಿನಗೆ ತಿಳಿಸಿದರು? "
    ಎಂದು ಕೇಳಿದನು.
    ಅದಕ್ಕೆ ಆ ಗಾರ್ಡ್ ಹೇಳಿದನು "
    ಯಾರೂ ಹೇಳಲಿಲ್ಲ ಸರ್, ಈ ಪ್ಲಾಂಟ್‌ನಲ್ಲಿ
    ಸುಮಾರು ೫೦ ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಾರೆ,
    ಆದರೆ ಬೆಳಗ್ಗೆಯಾದರೆ ಒಂದು ಹಾಯ್, ಸಂಜೆಯಾದರೆ ಬಾಯ್, ಎಂದು ಹೇಳಿ ಹೋಗುವುದು ಮಾತ್ರ ನೀವೊಬ್ಬರೇ!
    ನಾನು ನಿಮಗೆ ನಮಸ್ಕಾರ ಹೇಳುವ ಮೊದಲೇ ನೀವು
    ಮೇಲಧಿಕಾರಿ ಎಂಬ ಭಾವನೆಯನ್ನೂ ತೋರದೆ
    ನೀವಾಗಿಯೇ ನನ್ನ ಕಡೆ ನೋಡಿ ನಗುತ್ತಾ ಕೈಬೀಸಿ ಹಾಯ್ ಹೇಳುತ್ತೀರಿ
    ಹಾಗೂ
    ಸಂಜೆ ಮನೆಗೆ ಹೋಗುವಾಗಲೂ ಅದೇ
    ನಗುಮುಖದಿಂದ ಬಾಯ್
    ಹೇಳಿ ಹೋಗುತ್ತಿರುವಿರಿ.
    ನಾನು ಬೆಳಗ್ಗೆಯಿಂದ ಗೇಟಿನಲ್ಲೇ ಇದ್ದೆ,
    ಬೆಳಗ್ಗೆ ನೀವು ಒಳಗೆ ಬಂದವರು ಹೊರಗೆ ಬರಲಿಲ್ಲ,
    ಅದಕ್ಕೆ
    ಸಂಶಯ ಬಂದು ನಿಮ್ಮನ್ನೇ ಹುಡುಕಿಕೊಂಡು ಬಂದೆ ಎಂದನು.
    ಇದನ್ನು ಕೇಳಿದ ಆ ನೌಕರ ಆ ಗಾರ್ಡ್ ನ್ನು ಬಾಚಿ ತಬ್ಬಿಕೊಂಡ.
    ಹೇಳಲು ಅವನ ಬಳಿ ಪದಗಳೇ ಇರಲಿಲ್ಲ.
    ಕೇಳಲು ಆ ಗಾರ್ಡ್‌ಗೆ ಯಾವ ಪ್ರಶ್ನೆಗಳೇ ಇರಲಿಲ್ಲ.
    ಒಮ್ಮೆ ಆಲೋಚಿಸಿ. ಒಬ್ಬ ಮನುಷ್ಯನಿಗೆ ಆ ನೌಕರ ತೋರಿದ ಒಂದು ಸಣ್ಣ ಗೌರವ ಪೂರ್ವಕ ನಡವಳಿಕೆ ಆತನ ಜೀವವನ್ನು ಉಳಿಸಿತು.
    ಹಾಗಾಗಿ ಯಾರನ್ನಾದರು ಭೇಟಿಯಾದಾಗ ಅವರಿಗೆ ಒಂದು ನಮಸ್ಕಾರ ಹೇಳಿ.
    ಕನಿಷ್ಠ ಪಕ್ಷ ಅವರಿಗೆ ಗೌರವ ಪೂರ್ವಕವಾಗಿ ನಗುತ್ತಾ ಮಾತನಾಡಿಸಿ. ಈ ಸಮಯದಲ್ಲಿ ಒಂದು ಮುಗುಳ್ನಗೆ ನಿಮ್ಮ ಮುಖದಲ್ಲಿರಬೇಕೆಂಬುದನ್ನು ಮರೆಯಬೇಡಿ. ಇಂತಹ ಉತ್ತಮ ಶಿಷ್ಠಾಚಾರಗಳನ್ನು ನಿಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ತಿಳಿಸಿಕೊಡುವುದನ್ನು ಮತ್ತು ನೀವೂ ಪಾಲಿಸಲು ಮರೆಯಬೇಡಿ. ಇದರಿಂದ ನಮಗೆ ಒಳ್ಳೆಯದೇ ಆಗುತ್ತದೆಯೇ ಹೊರತು ನಷ್ಟ ಎಂದಿಗೂ ಆಗದು! ಯಾರು ಬಲ್ಲರು?, ನಮ್ಮ ಈ ಒಂದು ಸಣ್ಣ ನಡವಳಿಕೆಯು ನಮ್ಮ ಜೀವನದಲ್ಲಿ ಪವಾಡವನ್ನೇ ಮಾಡಬಹುದು! ಅಲ್ಲವೇ?
    8 min
  • *ಒಂದು ದಿನದಲ್ಲಿ ಹಾಳಾಗೊ ಹಾಲಲ್ಲಿ ಯಾವತ್ತೂ ಕೆಡದಿರೊ ತುಪ್ಪ ಅಡಗಿರುತ್ತೆ*
    *ಈ ಮೆಸ್ಸೇಜ್ ಎಷ್ಟು ಅದ್ಭುತವಾಗಿದೆ, ಒಮ್ಮೆ ಓದಿ.*
    👉🏾 ಹಾಲಿಗೆ ಕಷ್ಟ ಕೊಟ್ಟರೆ ಮೊಸರು ಬರುತ್ತೆ.
    👉🏾 ಮೊಸರನ್ನ ಸತಾಯಿಸಿದರೆ ಬೆಣ್ಣೆ ಬರುತ್ತೆ.
    👉🏾 ಬೆಣ್ಣೆಗೆ ಬೆಂಕಿಯಿಟ್ಟರೆ ತುಪ್ಪ ಬರುತ್ತೆ.
    👉🏾 ಹಾಲಿಗಿಂತ ಮೊಸರಿಗೆ ಬೆಲೆ ಜಾಸ್ತಿ, ಮೊಸರಿಗಿಂತ ಬೆಣ್ಣೆಗೆ ಬೆಲೆ ಜಾಸ್ತಿ, ಬೆಣ್ಣೆಗಿಂತ ತುಪ್ಪಕ್ಕೆ ಬೆಲೆ ಜಾಸ್ತಿ.
    👉🏾 ಆದರೆ ಈ ನಾಲ್ಕೂ ವಸ್ತುಗಳ ಬಣ್ಣ ಮಾತ್ರ ಬಿಳಿ.
    👉🏾 ಇದರ ಅರ್ಥ ಏನೆಂದರೆ, ಮಾತುಮಾತಿಗೆ ದುಃಖ, ಎಂತಹ ಕಷ್ಟದ ಪರಿಸ್ಥಿತಿ ಬಂದರೂ ಯಾವ ಮನುಷ್ಯನ ಬಣ್ಣ ಬದಲಾಗುವುದಿಲ್ಲವೊ, ಆ ವ್ಯಕ್ತಿಗೆ ಸಮಾಜದಲ್ಲಿ ಬೆಲೆ ಜಾಸ್ತಿ ಇರುತ್ತೆ.
    👉🏾 ಹಾಲು ಉಪಯೋಗಕ್ಕೆ ಬರುವ ವಸ್ತುವೇ, ಆದರೆ ಅದರ ಬಳಕೆ ಒಂದು ದಿನ ಮಾತ್ರ. ಆಮೇಲೆ ಅದು ಕೆಡುತ್ತೆ.
    👉🏾 ಹಾಲಲ್ಲಿ ಒಂದು ಚುಕ್ಕೆ ಮಜ್ಜಿಗೆ ಹಾಕಿದರೆ ಅದು ಮೊಸರಾಗುತ್ತೆ, ಆದರೆ ಎರಡೇ ದಿನ ಚೆನ್ನಾಗಿರುತ್ತೆ.
    👉🏾 ಮೊಸರನ್ನ ಸತಾಯಿಸಿದರೆ ಬೆಣ್ಣೆ ಬರುತ್ತೆ, ಆದರೆ ಅದು ಸಹ ಮೂರು ದಿನ ಚೆನ್ನಾಗಿರುತ್ತೆ.
    👉🏾 ಬೆಣ್ಣೆಯನ್ನ ಕಾಯಿಸಿದಾಗ ತುಪ್ಪ ಬರುತ್ತೆ, ಆ ತುಪ್ಪ ಯಾವತ್ತೂ ಕೆಡುವುದಿಲ್ಲ.
    👉🏾 ಒಂದು ದಿನದಲ್ಲಿ ಹಾಳಾಗೊ ಹಾಲಲ್ಲಿ ಯಾವತ್ತೂ ಕೆಡದಿರೊ ತುಪ್ಪ ಅಡಗಿರುತ್ತೆ.
    👉🏾 ಅದೇ ರೀತಿ ನಿಮ್ಮ ಮನಸ್ಸಿನಲ್ಲಿ ಕೂಡ ಲೆಕ್ಕವಿಲ್ಲದಷ್ಟು ಶಕ್ತಿ, ಸಾಮರ್ಥ್ಯ ಅಡಗಿರುತ್ತೆ. ಅದಕ್ಕೆ ಒಳ್ಳೆಯ ಆಲೋಚನೆಗಳನ್ನ ತುಂಬಿ ನಿಮಗೆ ನೀವೇ ಚಿಂತನೆ ಮಾಡಿ.
    👉🏾 ಯಾವುದೇ ಸಮಸ್ಯೆ, ಗುರಿ ಬಂದರೂ ಇದೇ ರೀತಿ ವಿಶ್ಲೇಷಣೆ ಮಾಡಿ..
    👉🏾 ಆಗ ನೀವು ಜೀವನದಲ್ಲಿ ಯಾವತ್ತೂ ಸೋಲುವುದಿಲ್ಲ. ಧೈರ್ಯವಾಗಿ, ಸಮರ್ಥವಾಗಿ ಮುನ್ನುಗ್ಗುತ್ತೀರಿ....ಗೆಲವುವನ್ನ ಪಡೆಯುತ್ತೀರಿ!!!!!🙏🙏🙏
    5 min
  • ಗುರು ಮತ್ತು ಈಶ್ವರ ಒಂದೇ ಆಗಿರುವುದರಿಂದ ಅವರಲ್ಲಿ ಅದ್ವೈತವಿರುತ್ತದೆ
    ಭಗವಂತನು ಓರ್ವ ಶಿಷ್ಯನಿಗೆ ಗುರುಗಳ ಮಹತ್ವವನ್ನು ಹೇಳುವುದು
    ಒಂದು ಸಲ ಗುರು ಮತ್ತು ಭಗವಂತ ಇಬ್ಬರೂ ಓರ್ವ ಶಿಷ್ಯನ ಮನೆಗೆ ಬರುತ್ತಾರೆ. ಆಗ ಗುರು ಮತ್ತು ಭಗವಂತ ಇವರೊಂದಿಗಾದ ಶಿಷ್ಯನ ಸಂಭಾಷಣೆಯನ್ನು ಮುಂದೆ ನೀಡಲಾಗಿದೆ.
    ಗುರು (ಶಿಷ್ಯನನ್ನು ಉದ್ದೇಶಿಸಿ) : ನೀನು ಮೊದಲು ಭಗವಂತನ ಚರಣಗಳಿಗೆ ನಮಸ್ಕರಿಸು, ಹೋಗು.
    ಭಗವಂತ : ನೀನು ಮೊದಲು ಗುರುಗಳಿಗೆ ನಮಸ್ಕಾರ ಮಾಡು. (ಶಿಷ್ಯನು ಗುರುಗಳ ಚರಣಗಳನ್ನು ನಮಸ್ಕರಿಸಲು ಹೋಗುತ್ತಾನೆ.)
    ಗುರು : ನಾನು ಭಗವಂತನನ್ನು ನಿನ್ನ ಮನೆಗೆ ಕರೆದುಕೊಂಡು ಬಂದಿದ್ದೇನೆ. ಆದುದರಿಂದ ಮೊದಲು ನೀನು ಭಗವಂತನಿಗೆ ನಮಸ್ಕಾರ ಮಾಡು. (ಶಿಷ್ಯನು ಪುನಃ ಭಗವಂತನ ಚರಣಗಳ ಬಳಿಗೆ ಬರುತ್ತಾನೆ.)
    ಭಗವಂತ : ನಿನ್ನ ಗುರುಗಳು ಭಗವಂತನನ್ನು ನಿನ್ನ ಜೀವನದಲ್ಲಿ ತಂದಿದ್ದಾರೆ. ಅವರು ನನ್ನ ನೆಚ್ಚಿನ ಭಕ್ತನಾಗುವ ಮಾರ್ಗವನ್ನು ನಿನಗೆ ಹೇಳಿದ್ದಾರೆ. ಆದುದರಿಂದ ಮೊದಲು ನೀನು ಗುರುಗಳ ಚರಣಗಳ ಹತ್ತಿರ ಹೋಗು. (ಶಿಷ್ಯನು ಗುರುಗಳ ಚರಣಗಳ ಬಳಿಗೆ ಹೋಗುತ್ತಾನೆ.)
    ಗುರು : ನಾನು ನಿನಗೆ ಕೇವಲ ಭಕ್ತಿಯ ಮಾರ್ಗವನ್ನು ಹೇಳಿದೆನು; ಆದರೆ ಭಗವಂತನು ನಿನ್ನನ್ನು ನಿರ್ಮಿಸಿದ್ದಾನೆ. ಅಲ್ಲವೇ ? ಆದುದರಿಂದ ನೀನು ಮೊದಲು ಭಗವಂತನ ಚರಣಗಳಲ್ಲಿ ನತಮಸ್ತಕನಾಗು. (ಮತ್ತೊಮ್ಮೆ ಆ ಶಿಷ್ಯನು ಭಗವಂತನ ಚರಣಗಳ ಬಳಿಗೆ ಹೋಗುತ್ತಾನೆ.)
    ಭಗವಂತ : (ಶಿಷ್ಯನನ್ನು ಉದ್ದೇಶಿಸಿ) ನಿಲ್ಲು. ಇದೆಲ್ಲವೂ ಸರಿಯಿದೆ; ಆದರೆ ಈಗ ನಾನು ನಿನಗೆ ಭಗವಂತನ ಮತ್ತು ಗುರುಗಳ ಪ್ರಮುಖ ತತ್ತ್ವಗಳ ಬಗ್ಗೆ ಹೇಳುವವನಿದ್ದೇನೆ.
    ಭಗವಂತನ ತತ್ತ್ವಕ್ಕನುಸಾರ ‘ನ್ಯಾಯವ್ಯವಸ್ಥೆ’ ಇದೆ. ಒಂದು ವೇಳೆ ನೀನು ಉತ್ತಮ ಕರ್ಮಗಳನ್ನು ಮಾಡಿದರೆ, ನಿನಗೆ ಅದರ ಉತ್ತಮ ಫಲ, ಉತ್ತಮ ಆಯುಷ್ಯ ಮತ್ತು ಮುಕ್ತಿ ಸಿಗುವುದು; ಆದರೆ ಒಂದು ವೇಳೆ ನೀನು ಕೆಟ್ಟ ಕರ್ಮಗಳನ್ನು ಮಾಡಿದರೆ, ನಿನಗೆ ಅದರ ಕೆಟ್ಟ ಫಲವೇ ಸಿಗುವುದು ಮತ್ತು ನಿನಗೆ ಶಿಕ್ಷೆಯಾಗುವುದು. ನೀನು ಈ ಮಾಯಾಜಾಲದಲ್ಲಿ ಸಿಲುಕುವಿ ಮತ್ತು ಅದರಲ್ಲಿ ಮುಳುಗಿ ಹೋಗುವೆ. ನಿನ್ನ ಆತ್ಮಕ್ಕೆ ಸಂಘರ್ಷವೇ ಮುಂದುವರಿಯುವುದು.
    6 min
  • *ಸಂಜೆಯ ಸಮಯದಲ್ಲಿ ತುಳಸಿ ವಿವಾಹ*
    ಶ್ರೀ ತುಳಸಿ ವಿವಾಹ
    ಈ ವಿಧಿಯನ್ನು ಕಾರ್ತಿಕ ಶುಕ್ಲ ದ್ವಾದಶಿಯಿಂದ (ಉತ್ತಾನ ದ್ವಾದಶಿ) ಹುಣ್ಣಿಮೆಯ ವರೆಗಿನ ಯಾವುದಾದರೊಂದು ದಿನ ಮಾಡುತ್ತಾರೆ.
    ಪೂಜೆ :
    ತುಳಸಿಯೊಂದಿಗೆ ಶ್ರೀವಿಷ್ಣುವಿನ (ಬಾಲಕೃಷ್ಣನ ಮೂರ್ತಿಯ) ವಿವಾಹವನ್ನು ಮಾಡುವುದೇ ತುಳಸಿ ವಿವಾಹದ ವಿಧಿಯಾಗಿದೆ. ವಿವಾಹದ ಹಿಂದಿನ ದಿನ ತುಳಸಿ ಬೃಂದಾವನವನ್ನು ಬಣ್ಣ ಹಚ್ಚಿ ಅಲಂಕರಿಸುತ್ತಾರೆ. ಬೃಂದಾವನದಲ್ಲಿ ಕಬ್ಬು, ಚೆಂಡು ಹೂವುಗಳನ್ನು ಹಾಕುತ್ತಾರೆ ಮತ್ತು ಅದರ ಬುಡದಲ್ಲಿ ಹುಣಸೇಕಾಯಿ ಮತ್ತು ನೆಲ್ಲಿಕಾಯಿಗಳನ್ನು ಇಡುತ್ತಾರೆ. ಈ ವಿವಾಹದ ವಿಧಿಯನ್ನು ಸಾಯಂಕಾಲ ಮಾಡುತ್ತಾರೆ.
    ವೈಶಿಷ್ಟ್ಯ :
    ತುಳಸಿ ವಿವಾಹದ ಬಳಿಕ ಚಾತುರ್ಮಾಸದಲ್ಲಿ ಕೈಗೊಂಡ ಎಲ್ಲ ವ್ರತಗಳನ್ನು ಸಮಾಪ್ತಗೊಳಿಸುತ್ತಾರೆ. ಚಾತುರ್ಮಾಸದಲ್ಲಿ ಯಾವ ಪದಾರ್ಥಗಳನ್ನು ವರ್ಜ್ಯ ಮಾಡಿರುತ್ತಾರೆಯೋ, ಆ ಪದಾರ್ಥಗಳನ್ನು ಬ್ರಾಹ್ಮಣರಿಗೆ ದಾನ ಮಾಡಿ ನಂತರ ತಾವೂ ಸೇವಿಸುತ್ತಾರೆ.
    ದೀಪಾವಳಿ ಹಬ್ಬದ ನಂತರ ಬರುವ ಇನ್ನೊಂದು ಹಬ್ಬ ತುಳಸಿ ಹಬ್ಬ ಅಥವಾ ತುಳಸಿ ಮದುವೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಈ ಪವಿತ್ರದಿನವನ್ನು ತುಳಸಿ ಮದುವೆಯನ್ನಾಗಿ ಆಚರಿಸುವರು. ಅಂದಿನ ದಿನ ರೇವತಿ ನಕ್ಷತ್ರದ ಯೋಗವಿದ್ದರೆ ಇನ್ನೂ ಶ್ರೇಷ್ಠ.
    ಉತ್ಥಾನವೆಂದರೆ ಏಳು ಎಂಬರ್ಥ. ಶ್ರೀಮನ್ನಾರಾಯಣನು ತನ್ನ ನಿದ್ರಾವಸ್ಥೆಯಿಂದ ಹೊರ ಬಂದು ತನ್ನ ಭಕ್ತಾದಿಗಳಿಗೆ ದರ್ಶನ ಕೊಡುವನೆಂಬ ಪ್ರತೀತಿ ಇದೆ. ಆ ಭಗವಂತನು ಹಾಲ್ಗಡಲಿನಲ್ಲಿ ಮಲಗಿದ್ದು, ಅವನನ್ನು ಸುಪ್ರಭಾತ ಸೇವೆಯ ಮೂಲಕ ಎಬ್ಬಿಸುವುದರಿಂದ ಈ ವ್ರತವನ್ನು ಕ್ಷೀರಾಬ್ಧಿ ವ್ರತವೆಂದೂ ಕರೆಯುವರು.
    ಕಾರ್ತಿಕ ಶುಕ್ಲ ಪಕ್ಷ ಏಕಾದಶಿಯಂದು ಪ್ರಾತಃಕಾಲದಲ್ಲಿ ಕುಂಭದಾನವನ್ನು ಮಾಡಿ ಉಪವಾಸ ವ್ರತವನ್ನಾಚರಿಸಬೇಕು. ಅಂದು ಸೋಮವಾರವಾಗಿದ್ದು, ಉತ್ತರಾಷಾಢ ನಕ್ಷತ್ರವಾಗಿದ್ದರೆ ತುಂಬಾ ಶ್ರೇಷ್ಠ. ಅಂದಿನ ರಾತ್ರಿಯಂದೇ ವಿಷ್ಣುವನ್ನು ಎಬ್ಬಿಸಬೇಕು. ಹಾಗೆ ಎಬ್ಬಿಸುವಾಗ ಈ ಕೆಳಕಂಡ ವೇದೋಕ್ತ ಮಂತ್ರವನ್ನು ಹೇಳಬೇಕು.
    ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್‌।
    ಸಮೂಢಮಸ್ಯ ಪಾಗೇಂಸುರೇ।।
    ಮಳೆಗಾಲದ ನಾಲ್ಕು ತಿಂಗಳುಗಳಲ್ಲಿ ಮಳೆಯು ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸನ್ಯಾಸಿಗಳು ದೇಶ ಸಂಚಾರವನ್ನು ಮಾಡದೇ ಒಂದೆಡೆಯಲ್ಲಿ, ಚಾತುರ್ಮಾಸ್ಯ ವ್ರತವನ್ನು ಆಚರಿಸುವರು. ಆ ಸಂದರ್ಭದಲ್ಲಿ ಶ್ರೀಮನ್ನಾರಾಯಣನು ನಿದ್ರಾವಸ್ಥೆಯಲ್ಲಿರುತ್ತಾನೆಂದೂ, ಚಾತುರ್ಮಾಸ್ಯ ಮುಗಿಯುವ ವೇಳೆಯಲ್ಲಿ ಅವನನ್ನು ಎಬ್ಬಿಸಲು ಸುಪ್ರಭಾತವನ್ನು ಹಾಡುವರು. ಅದು ಸಂಕ್ಷಿಪ್ತವಾಗಿ ಹೀಗಿದೆ.
    ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜ।
    ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಲಂಕುರು।।
    ಚಾತುರ್ಮಾಸ್ಯದ ಕೊನೆಯ ಹಂತದ ಏಕಾದಶಿಯ ರಾತ್ರಿ ಒಂದು ಕುಂಭದಲ್ಲಿ ಉದ್ದಿನಕಾಳಿನ ಪ್ರಮಾಣದ ಚಿನ್ನದ ಮೀನಿನ ಮೂರ್ತಿಗೆ ಪಂಚಾಮೃತ ಅಭಿಷೇಕ ಮಾಡಿ, ಪೂಜಿಸಿ, ಅಂದು ಜಾಗರಣೆಯನ್ನು ಮಾಡಿ, ದ್ವಾದಶಿಯ ಬೆಳಗ್ಗೆ ಮತ್ತೆ ಪೂಜಿಸಿ ಬ್ರಾಹ್ಮಣರಿಗೆ ದಕ್ಷಿಣೆ ಸಮೇತವಾಗಿ ದಾನ ಮಾಡಬೇಕು.
    ಅಂದು ಧಾತ್ರೀ ದೇವಿಯ ಸ್ವರೂಪವಾದ ನೆಲ್ಲಿಯ ಮರವನ್ನು ಪೂಜಿಸಿ, ಧಾತ್ರೀ, ಶಾಂತಿ, ಮೇಧಾ, ಪ್ರಕೃತಿ, ವಿಷ್ಣುಪತ್ನೀ, ಮಹಾಲಕ್ಷ್ಮೀ, ರಮ್ಯಾ, ಕಮಲಾ, ಇಂದಿರಾ, ಲೋಕಮಾತಾ, ಕಲ್ಯಾಣೀ, ಕಮನೀಯಾ, ಸಾವಿತ್ರೀ, ಜಗದ್ಧಾತ್ರೀ, ಗಾಯತ್ರೀ, ಸುಧೃತೀ, ಅವ್ಯಕ್ತಾ, ವಿಶ್ವರೂಪಾ, ಸುರೂಪಾ ಮತು ಅಬ್ಧಿಭವಾ ಎಂಬ ಹೆಸರುಗಳಿಂದ ಅರ್ಚಿಸಬೇಕು. ಕೆಲವು ಮನೆಗಳಲ್ಲಿ ತುಲಸೀ ಮತ್ತು ಶ್ರೀಮನ್ನಾರಾಯಣನಿಗೆ ವಿವಾಹವನ್ನು ಮಾಡುವ ಪದ್ಧತಿಯೂ ಇದೆ.
    ಭಗವಂತನಿಗೆ ಪುರುಷಸೂಕ್ತದಿಂದಲೂ ಮತ್ತು ತುಳಸಿ ದೇವಿಗೆ ಶ್ರೀಸೂಕ್ತದಿಂದಲೂ ಅರ್ಚನೆ ಮಾಡಬೇಕು. ತುಳಸಿಯ ಎದುರಿಗೆ ಶ್ರೀ ಕೃಷ್ಣನ ಪ್ರತಿಮೆಯನ್ನಿರಿಸಿ ಮಧ್ಯದಲ್ಲಿ ಅಂತರಪಟವನ್ನು ಹಿಡಿದು ಮದುವೆ ಮಾಡಿಸುತ್ತಾರೆ. ನೆಲ್ಲಿಯಲ್ಲಿ ವಾತ ಪಿತ್ತಗಳನ್ನು ಶಮನ ಮಾಡುವ ಶಕ್ತಿಯಿದೆ. ರಕ್ತದೋಷವನ್ನೂ ನಿವಾರಿಸುವ ಶಕ್ತಿಯಿದೆ. ಅದರ ಹಾರವನ್ನು ತುಲಸೀ ಮತ್ತು ನಾರಾಯಣನಿಗೆ ಹಾಕುವುದು ಪದ್ಧತಿ. ಪ್ರಾತಃಕಾಲದಲ್ಲಿ ಪೂಜೆಯನ್ನು ಮಾಡಿದರೆ, ಸಂಜೆಯ ಸಮಯದಲ್ಲಿ ತುಳಸಿ ವಿವಾಹವನ್ನು ಮಾಡುವರು.
    ಶುಭದಿನ
    ಉಮೇಶ್ ಜೋಯಿಸ್
    7 min
  • ಕಾಲು ಸೋಲಬಹುದು.. ಆಗ ಕುಳಿತುಕೊಂಡು........
    .........ಸದಾ ನೆಲದಮೇಲೆ ಇರುವವರಿಗೆ ಬೀಳುವ ಭಯ ಇರುವುದಿಲ್ಲ.. ಕಾಲು ಸೋಲಬಹುದು.. ಆಗ ಕುಳಿತುಕೊಂಡು ವಿಶ್ರಮಿಸಲು ನೆಲ ಇದ್ದೆ ಇರುತ್ತದೆ .ಹಿಂದೆ ಮುಂದೆ ನೋಡದೆ ಯಾವೊದೋ ಏಣಿ ಯ ಮುಖಾಂತರ ಎತ್ತರಕ್ಕೆ ಹೋದವರಿಗೆ ಸದಾ ಅಭದ್ರತೆ ಕಾಡುತ್ತದೆ.. ಅದೇ ಕೊನೆಗೆ ಮಾನಸಿಕವಾಗಿ ಹಿಂಸೆ ಕೊಡುತ್ತೆ.... ಎಲ್ಲಿ ಕೆಳಗೆ ಬೀಳುತ್ತೇನೋ ಅಥವಾ ಯಾರಾದರೂ ಬೀಳಿಸಿಯಾರು ಅನ್ನೋದು ಭಯ ಸದಾ ಕಾಡುತ್ತಿರುತ್ತದೆ.. .....
    4 min

About Dr Balakrishna Maddodi

From the publisher's feed

Hi