Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • ಪ್ರೀತಿ ವಿಶ್ವಾಸದಿಂದ ಎಲ್ಲರೊಂದಿಗೂ ಬೆರೆತು ಬಾಳಿನ ಸವಿಯುವ ಮನಸ್ಸು ಮಾಡಿದರೆ ಜೀವನ ಸುಂದರವಾಗಿರುವುದು.....
    ಹೆತ್ತವರು ತೀರಿಕೊಂಡ ಬಳಿಕ ಅನೇಕ ಕುಟುಂಬಗಳಲ್ಲಿ ಎಲ್ಲರೂ ಪರಕೀಯರಂತೆ ಆಗಿಬಿಡುವುದು ವಿಪರ್ಯಾಸ !!!
    ಹೆತ್ತ ತಂದೆತಾಯಿ ಇರುವವರೆಗೆ ಮಾತ್ರ ಊರು ಒಡಹುಟ್ಟಿದವರು ಬಂಧು ಮಿತ್ರರು ಎಂಬ ಕೊಂಡಿ ಬೆಸೆದುಕೊಂಡಿರುತ್ತದೆ, ಅವರೇ ಕಾಲವಾದ ನಂತರ ಎಲ್ಲರೂ ಒಂದಲ್ಲ ಒಂದು ಕಾರಣದಿಂದ ದೂರಾಗುತ್ತಲೇ ಹೋಗುತ್ತಾರೆ. ಇದು ಎಲ್ಲಾ ರೀತಿಯ ಕುಟುಂಬಗಳಿಗೂ ಅನ್ವಯಿಸುವುದಂತೂ ನಿಜ. ನಾವು ಎಷ್ಟೇ ಕಷ್ಟಪಟ್ಟು ಹಿಡಿದಿಟ್ಟುಕೊಂಡ ಬಾಂಧವ್ಯದ ಕೊಂಡಿಗಳು ಕಾಲಕ್ರಮೇಣ ಸಡಿಲವಾಗಿ ಎಲ್ಲೋ ಒಂದು ಕಡೆ ಜಾರುವ ಸಂದರ್ಭಗಳು ಬರಬಹುದು. ಅಂತಹ ಕ್ಷಣವನ್ನು ಧೈರ್ಯದಿಂದ ಎದುರಿಸಲು ಈಗಿನಿಂದಲೇ ತಯಾರಿ ನಡೆಸಿದರೆ ಉತ್ತಮ. ಏಕೆಂದರೆ ಕೆಲವರು ತುಂಬಾ ಸೂಕ್ಷ್ಮ ಮನಸ್ಥಿತಿಯನ್ನು ಹೊಂದಿರುತ್ತಾರೆ, ಅಂತಹವರಿಗೆ ಇಂತಹ ಪರಿಸ್ಥಿತಿಯನ್ನು ತಕ್ಷಣವೇ ಸುಧಾರಿಸಿಕೊಳ್ಳಲು ಕಷ್ಟವಾಗಬಹುದು. ಆದರೂ ಇದಂತೂ ಕಟುಸತ್ಯ, ಸಂಬಂಧಗಳೇನಿದ್ದರೂ ತಂದೆತಾಯಿ ಒಡಹುಟ್ಟಿದವರೊಂದಿಗೆ ಬೆಸೆದುಕೊಂಡಿರುತ್ತದೆ. ಕಾಲಕ್ರಮೇಣ ಕುಟುಂಬ ಬೆಳೆದಂತೆ ಪ್ರತಿಯೊಬ್ಬರೂ ಅವರವರ ಸಂಸಾರಕ್ಕೆ ಪ್ರಾಮುಖ್ಯತೆ ಕೊಟ್ಟು ಹೆಂಡತಿ ಮಕ್ಕಳೆನ್ನುವ ಮಮಕಾರಕ್ಕೆ ಸಿಲುಕಿ ಅಸಹಾಯಕರಾಗಿ ಹಿಂದಿನಷ್ಟು ಕುಟುಂಬದೊಂದಿಗೆ ಬೆರೆಯಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಹಾಗೋ ಹೀಗೋ ತಂದೆತಾಯಿ ಬದುಕಿರುವವರೆಗೆ ಅವರ ಮನಸ್ಸಂತೋಷಕ್ಕಾಗಿ ಯಾದರೂ ಅಗಾಗ್ಗೆ ಉಳಿದ ಅಣ್ಣತಮ್ಮಂದಿರೊಂದಿಗೆ ಹಾಗೂ ಅಕ್ಕತಂಗಿಯರೊಂದಿಗೆ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಒಮ್ಮೆ ಹಳೆಯ ಕೊಂಡಿ ಎನಿಸಿಕೊಂಡ ಹೆತ್ತವರು ತೀರಿಕೊಂಡ ಬಳಿಕ ಅನೇಕ ಕುಟುಂಬಗಳಲ್ಲಿ ಎಲ್ಲರೂ ಪರಕೀಯರಂತೆ ಆಗಿಬಿಡುವುದು ವಿಪರ್ಯಾಸ.
    ಇತ್ತೀಚಿನ ದಿನಗಳಲ್ಲಿ ಇಂತಹ ಹಲವಾರು ನಿದರ್ಶನಗಳು ನೋಡಲು ಸಿಗುತ್ತದೆ. ಇಂತಹ ಒಂದು ಬೆಳವಣಿಗೆಗೆ ಮುಖ್ಯ ಕಾರಣ ನಮ್ಮ ಒಳಗಿರುವ ಸ್ವಾರ್ಥ ಹಾಗೂ ಅಹಂ ಕಾರಣವಷ್ಟೇ ಅಲ್ಲದೆ ಬೇರೇನೂ ಅಲ್ಲ. ಒಂದೇ ಕುಟುಂಬದವರಾದರೂ ಕೂಡ ಪ್ರತ್ಯೇಕ ಸಂಸಾರಹೂಡಿದ ಮೇಲೆ ತಮ್ಮ ಪ್ರತಿಷ್ಠೆ ಮೆರೆಯಲು ಇತರರನ್ನು ತುಚ್ಚವಾಗಿ ಕಾಣುವುದು ಹಾಗೂ ಎಲ್ಲಾ ವಿಷಯದಲ್ಲೂ ತಮಗೇ ಪ್ರಾಮುಖ್ಯತೆ ಸಿಗಬೇಕೆಂದು ಬಯಸುವುದು ಸರ್ವೇಸಾಮಾನ್ಯ ವಾಗಿಬಿಟ್ಟಿದೆ. ಇಂತಹ ಒಂದು ಮನಸ್ಥಿತಿ ಅನೇಕ ಕುಟುಂಬಗಳನ್ನು ಒಡೆದು ಪರದೇಶಿ ಬದುಕುಬಾಳುವಂತೆ ಮಾಡುವುದು ಮಾತ್ರ ನಿಶ್ಚಿತ. ತಮ್ಮ ಮಕ್ಕಳನ್ನು ಕುಟುಂಬದ ಇತರ ಮಕ್ಕಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅವುಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಹಸ್ತಕ್ಷೇಪ ಮಾಡಿ ದ್ವೇಷದ ಕಿಡಿ ಬಿತ್ತುವುದು, ಮುಂದೆ ಅವರಿಗೂ ಕುಟುಂಬದ ಸದಸ್ಯರ ಬಗ್ಗೆ ಅಸಮಾಧಾನವಾಗುವಂತೆ ಪ್ರಚೋದಿಸುವುದು ಸಾಮಾನ್ಯ ವಾಗಿಬಿಟ್ಟಿದೆ. ತಮಗೆ ಸಂಬಂಧವಿಲ್ಲದ ಅನೇಕ ವಿಷಯಗಳಲ್ಲಿ ಅನಾವಶ್ಯಕ ಮೂಗುತೂರಿಸಿ ಇಲ್ಲಸಲ್ಲದ ಪಿತೂರಿ ನಡೆಸುವವರ ಹಾಗೂ ಇನ್ನೊಬ್ಬರ ಭಾವನೆಗಳಿಗೆ ವಿಕೃತವಾಗಿ ಸ್ಪಂದಿಸಿ ಅಪಹಾಸ್ಯಮಾಡುವ ಪ್ರವೃತ್ತಿಯವರು ಹೆಚ್ಚಾಗಿ ಕಾಣಸಿಗುತ್ತಿದ್ದಾರೆ. ಇಂತಹ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಾವು ನಮ್ಮವರೊಂದಿಗೇ ಅಪರಿಚಿತರಾಗುತ್ತಿರುವ ಸಂಶಯ ಮನಸ್ಸಿನಲ್ಲಿ ಮೂಡುವುದು ನಿಜವಲ್ಲವೇ ಸ್ನೇಹಿತರೆ.
    ಹೆತ್ತವರು ಬದುಕಿರುವವರೆಗೂ ಕುಟುಂಬದಲ್ಲಿ ಒಂದು ಭದ್ರತೆ ಇರುತ್ತದೆ, ಯಾವುದೇ ವಿಚಾರವಾದರೂ ಸಮಯೋಚಿತವಾಗಿ ಯೋಚಿಸಿ ಬುದ್ದಿಹೇಳುವ ಜವಾಬ್ದಾರಿ ಹೊಂದಿರುತ್ತಾರೆ. ಪ್ರತಿಯೊಬ್ಬ ಮಕ್ಕಳನ್ನು ಆಗಾಗ ನೋಡಬೇಕೆಂಬ ಹಂಬಲದಿಂದ ಎಷ್ಟೇ ದೂರವಿದ್ದರೂ ತಮ್ಮಲ್ಲಿಗೆ ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಹಬ್ಬಹರಿದಿನಗಳೆಂದರೆ ಎಲ್ಲರೂ ಜೊತೆಯಾಗಿಯೇ ಆಚರಿಸಿಕೊಳ್ಳಬೇಕೆನ್ನುವ ಅಪೇಕ್ಷೆಯಂತೆ ಸಾಧ್ಯವಾದಷ್ಟು ಕುಟುಂಬದ ಐಕ್ಯತೆಯನ್ನು ಹಿಡಿದಿಟ್ಟುಕೊಂಡಿರುತ್ತಾರೆ. ಇದನ್ನು ಎಲ್ಲರೂ ತಮ್ಮ ಕಾಲಾನಂತವೂ ನಡೆಸಿಕೊಂಡು ಹೋಗಬೇಕೆನ್ನುವ ಅಪೇಕ್ಷೆಯನ್ನು ಹೊಂದಿರುತ್ತಾರೆ. ಅದರೆ ಇಂದಿನ ಜೀವನ ಶೈಲಿ ಈ ತಲೆಮಾರಿನ ತೋರಿಕೆಯ ಪ್ರೀತಿ ವಿಶ್ವಾಸ ಇಂತಹ ಒಂದು ಬಾಂಧವ್ಯದ ಕೊಂಡಿಬೆಸೆಯುವಲ್ಲಿ ವಿಫಲವಾಗಿದೆ ಎನ್ನಬಹುದು. ಬಹಳಷ್ಟು ಕುಟುಂಬಗಳು ಹಂಚಿಹರಡಿ ಪ್ರತ್ಯೇಕ ಸಂಸಾರಗಳಾಗಿ ಅಷ್ಟಕ್ಕೇ ಸೀಮಿತಗೊಂಡಿವೆ ಅವರ ಆಚರಣೆ ಹಾಗೂ ಬಾಂಧವ್ಯ...ತವರಿನ ಸಂಪರ್ಕಕಳೆದುಕೊಂಡು ಮನಸ್ಸಿನಲ್ಲೇ ದುಃಖಿಸುತ್ತಿರುವ ಎಷ್ಟೋ ಜನರನ್ನು ನಾವು ನೋಡುತ್ತಿದ್ದೇವೆ... ಇವತ್ತಿಗೂ ಜನಮಾನಸದಲ್ಲಿ ಉಳಿದಿರುವುದು ಮಾತ್ರ ತಂದೆತಾಯಿಗಳು ಬದುಕಿರುವವರೆಗೆ ಅನುಭವಿಸಿದ ಸಂಭ್ರಮದ ದಿನಗಳು ಹಾಗೂ ಆದರಾಥಿತ್ಯದ ಪ್ರೀತಿ ವಿಶ್ವಾಸದಿಂದ ಒಡಹುಟ್ಟಿದವರೊಂದಿಗೆ ನಕ್ಕುನಲಿದ ಕ್ಷಣಗಳು. ಎಲ್ಲಾ ಸದಸ್ಯರನ್ನೂ ಸಮಾನವಾಗಿ ಕಾಣುವ ಮನಸ್ಸು ಇರಬೇಕು ..‌ಪ್ರೀತಿ ವಿಶ್ವಾಸದಿಂದ ಎಲ್ಲರೊಂದಿಗೂ ಬೆರೆತು ಬಾಳಿನ ಸವಿಯುವ ಮನಸ್ಸು ಮಾಡಿದರೆ ಜೀವನ ಸುಂದರವಾಗಿರುವುದು.....,
    ಕೃಷ್ಣಾರ್ಪಣಮಸ್ತು
    (ಸತ್ಸಂಗ ಸಂಗ್ರಹ)
    6 min
  • ಬೈಂದೂರು: ಶಿವಲಿಂಗ ಸ್ಪರ್ಶಪೂಜೆಯ ವಿಶಿಷ್ಟ ಕ್ಷೇತ್ರ ವಣಕೊಡ್ಲು
    ಕುಂದಾಪ್ರ ಡಾಟ್ ಕಾಂ ಲೇಖನ
    ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಿವದೇವಾಲಯಗಳಲ್ಲಿ ಶಿವಲಿಂಗ ಸ್ಪರ್ಶಪೂಜೆಯ ಏಕೈಕ ಶಿವದೇಗುಲ ಎಂಬ ಪ್ರಸಿದ್ಧಿಗೆ ಪಾತ್ರವಾದ ಬೈಂದೂರಿನ ಗಂಗಾನಾಡು ಗ್ರಾಮದ ವಣಕೊಡ್ಲುವಿನ ಪುರಾತನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಜರುತ್ತಲಿದೆ.
    ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಮಾರ್ಚ್ 7ರಂದು ಬೆಳಿಗ್ಗೆ 8 ಗಂಟೆಯಿಂದಲೇ ಭಕ್ತಾದಿಗಳಿಗೆ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಮತ್ತು ಸ್ಪರ್ಶಪೂಜೆ ಆರಂಭಗೊಂಡಿದ್ದು ರಾತ್ರಿ 10 ಗಂಟೆಗೆ ದೇವರ ಸುತ್ತು ಉತ್ಸವ, ಕಟ್ಟೆಪೂಜೆ ಹಾಗೂ ಪ್ರಸಾದ ವಿತರಣೆ, ಮಾರ್ಚ್ 8ರಂದು ಶುದ್ಧಕಳಶ, ಕಲಾವೃದ್ಧಿಹೋಮ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಯಕ್ಷಗಾನ ಬಯಲಾಟ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಕುಂದಾಪ್ರ ಡಾಟ್ ಕಾಂ ಲೇಖನ
    ಹಲವು ಗಣ್ಯ ಮಹನೀಯರು ಮಹಾಶಿವರಾತ್ರಿ ಮಹೋತ್ಸವದಲ್ಲಿ ಭಾಗವಹಿಸಿದ್ದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಅಣ್ಣಪ್ಪ ಶೆಟ್ಟಿ ಯಡ್ತರೆ, ಡಾ. ಮಿಥುನ್ ಶೆಟ್ಟಿ, ಡಾ. ತಿಲಕ್ ಶೆಟ್ಟಿ ಮೊದಲಾದವರು ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟರು. ಬೈಂದೂರು ಪೋಲಿಸರು ಶಿಸ್ತು ವ್ಯವಸ್ಥೆಯನ್ನು ಕೈಗೊಂಡಿದ್ದರು. ಸ್ಥಳೀಯ ಉತ್ಸಾಹೀ ಯುವಕರು ಸ್ವಯಂಸೇವಕರಾಗಿ ಉತ್ಸವದ ಯಶಸ್ಸಿಗೆ ಸಹಕರಿಸಿದರು.
    ವಿಶಿಷ್ಟ ಕ್ಷೇತ್ರ:ಕ್ರಿ. ಶ. 958ನೇ ಇಸವಿಯಲ್ಲಿ ರಾಜಾಶ್ರಯವನ್ನು ಪಡೆದಿದ್ದ ದೇಗುಲವೆನ್ನಲಾದ ವಣಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಶಿವಲಿಂಗ ಸ್ಪರ್ಶ ಪೂಜೆಯ ವಿಶಿಷ್ಟ ಕ್ಷೇತ್ರವೆನಿಸಿದೆ. ಮಹಾಶಿವರಾತ್ರಿ ದಿನವನ್ನು ಹೊರತುಪಡಿಸಿ ಬೇರೆ ದಿನಗಳಲ್ಲಿ ಅರ್ಚಕರಿಂದ ದೇಗುಲದಲ್ಲಿ ಪೂಜೆ ನಡೆಯುತ್ತದೆ. ಮಹಾಶಿವರಾತ್ರಿಯಂದು ಈ ದೇಗುಲಕ್ಕೆ ಹರಿದು ಬರುವ ಭಕ್ತ ಜನಸಾಗರವು ದೇಗುಲದ ಗರ್ಭಗುಡಿಯನ್ನು ಪ್ರವೇಶಿಸಿ ಶಿವಲಿಂಗವನ್ನು ಮುಟ್ಟಿ ಪೂಜಿಸಿ ಪುಲಕಿತರಾಗುವ ಪುಣ್ಯಾವಕಾಶವನ್ನು ಪಡೆಯುತ್ತಾರೆ. ಆದ್ದರಿಂದ ಈ ಕ್ಷೇತ್ರ ಎರಡನೆಯ ಗೋಕರ್ಣ ಎಂದೂ ಕರೆಯಲ್ಪಟ್ಟಿದೆ. ಕುಂದಾಪ್ರ ಡಾಟ್ ಕಾಂ ಲೇಖನ. ದೇವಸ್ಥಾನದ ಮುಂಭಾಗದಲ್ಲಿರುವ ವಿಶಾಲವಾದ ಪುಷ್ಕರಿಣಿಯ ಪವಿತ್ರ ಜಲವು ಗಂಗಾ ನದಿಯಿಂದ ಹರಿದು ಬರುವ ಒರತೆ ಎಂಬ ಪ್ರತೀತಿಯಿದೆ. ಗಂಗೆಯ ನಾಳ ಹರಿದು ಬರುವುದರಿಂದ ಈ ಪ್ರದೇಶವು ಗಂಗಾನಾಡು ಎಂದು ಕರೆಯಲ್ಪಟ್ಟಿದೆ ಎನ್ನಲಾಗುತ್ತದೆ. ಕುಂದಾಪ್ರ ಡಾಟ್ ಕಾಂ ಲೇಖನ
    ಶಿವಸಾನ್ನಿಧ್ಯ: ಪುರಾತನವಾದ ಈ ದೇವಸ್ಥಾನದಲ್ಲಿ ಪಾರ್ವತಿ, ಗಣಪತಿ ಸಹಿತ ಶಿವ ಸಾನ್ನಿಧ್ಯವಿದೆ. ದೇಗುಲದ ಹೊರಭಾಗದಲ್ಲಿ ನಾಗದೇವರ ಸಾನ್ನಿಧ್ಯವಿದೆ. ಪುಷ್ಕರಿಣಿ, ಬಲಿಕಲ್ಲು, ಧ್ವಜಪೀಠ ಮೊದಲಾದುವುಗಳಿವೆ. ಶಿವರಾತ್ರಿ ಉತ್ಸವವು ಇಲ್ಲಿನ ಅತ್ಯಂತ ಸಂಭ್ರಮದ ಆಚರಣೆಯಾಗಿ ಖ್ಯಾತವಾಗಿದೆ. ನವರಾತ್ರಿ ಉತ್ಸವ, ದೀಪದ ಅಮಾವಾಸ್ಯೆಯನ್ನು ಇಲ್ಲಿ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ.  *ಕುಂದಾಪ್ರ ಡಾಟ್ ಕಾಂ ಲೇಖನ*
    ಅಭಿವೃದ್ಧಿಯ ಹಾದಿಯಲ್ಲಿ: ರಾಜಾಶ್ರಯ ತಪ್ಪಿದ ಬಳಿಕ ಸ್ವಲ್ಪಮಟ್ಟಿಗೆ ಕಳಾಹೀನವಾದ ವಣಕೊಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ಸ್ಥಳೀಯ ಯಡ್ತರೆ ಮನೆತನದವರು ಹಂತ ಹಂತವಾಗಿ ಅಭಿವೃದ್ಧಿಯ ಹಾದಿಯಲ್ಲಿ ಸಾಗಿಸಿದ್ದಾರೆ. ಈ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಯಡ್ತರೆ ಅಣ್ಣಪ್ಪ ಶೆಟ್ಟಿ ಮತ್ತು ಅವರ ಪುತ್ರರು ದೇವಸ್ಥಾನದ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಶ್ರೀದೇವರ ಅಷ್ಟಬಂಧ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮೊದಲಾದ ಕಾರ್ಯಗಳು ನಡೆದಿದೆ. 
    https://kundapraa-com.cdn.ampproject.org/v/s/kundapraa.com/ganganadu-vanakodlu-mahalingeshwara-temple-byndoor/?
    8 min
  • ರುದ್ರಾಕ್ಷಿ
    ರುದ್ರಾಕ್ಷಿಯನ್ನು ಪರಶಿವನ ಕಣ್ಣೀರು ಎಂದು ಹೇಳಲಾಗುತ್ತದೆ. ರುದ್ರಾಕ್ಷಿಯಲ್ಲಿ ಒಂದು ಏಕ ಮುಖಿ ರುದ್ರಾಕ್ಷಿಯಿಂದ ಹಿಡಿದು 14 ಮುಖಿ ರುದ್ರಾಕ್ಷಿಯವರೆಗೆ ಧರಿಸಬಹುದು. ಆದರೆ ಧರಿಸಲು ಕೆಲವೊಂದು ನಿಯಮಗಳಿವೆ. ರುದ್ರಾಕ್ಷಿಯನ್ನು ಧರಿಸುವುದು ಹೇಗೆ..? ಯಾವ ಸಮಸ್ಯೆಗೆ ಯಾವ ರುದ್ರಾಕ್ಷಿ ಧರಿಸಬೇಕು..? ರುದ್ರಾಕ್ಷಿ ಧರಿಸುವುದರ ಪ್ರಯೋಜನವೇನು..?
    7 min
  • *ಹಿಂದೂ ಧರ್ಮ ಮತ್ತು ಹಿಂದೂಗಳು ಒಂದು ದಿನ ಈ ಜಗತ್ತನ್ನು ಆಳುತ್ತಾರೆ*
    _*ನೀವು ಪಾಶ್ಚಾತ್ಯ ಮೇಧಾವಿಗಳ ಈ ಸಾಲುಗಳನ್ನು ಓದಿದ್ದೀರಾ❓*_
    *1. ಲಿಯೋ ಟಾಲ್‌ಸ್ಟಾಯ್ (1828-1910)*
    "ಹಿಂದೂ ಧರ್ಮ ಮತ್ತು ಹಿಂದೂಗಳು ಒಂದು ದಿನ ಈ ಜಗತ್ತನ್ನು ಆಳುತ್ತಾರೆ ಏಕೆಂದರೆ ಅದು ಜ್ಞಾನ ಮತ್ತು ಬುದ್ಧಿವಂತಿಕೆಯ ಮಿಶ್ರಣವಾಗಿದೆ."
    *2. ಹರ್ಬರ್ಟ್ ವೆಲ್ಸ್ (1846-1946)*
    "ಹಿಂದೂ ಧರ್ಮವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವವರೆಗೆ ಎಷ್ಟು ತಲೆಮಾರುಗಳು ದೌರ್ಜನ್ಯಗಳು ಮತ್ತು ಕೊಲೆಗಳನ್ನು ಎದುರಿಸಬೇಕಾಗುತ್ತದೆ
    ಆದರೆ ಜಗತ್ತು ಮುಂದೊಂದು ದಿನ ಹಿಂದುತ್ವದಿಂದ ಪ್ರೇರಿತವಾಗುತ್ತದೆ. ಆ ದಿನದಂದು ಮಾತ್ರ ಜಗತ್ತು ಮನುಷ್ಯರಿಗೆ ನೆಲೆಸಲು ಮತ್ತು ವಾಸಿಸಲು ಸ್ಥಳವಾಗುತ್ತದೆ.
    *3. ಆಲ್ಬರ್ಟ್ ಐನ್ಸ್ಟೈನ್ (1879-1955)*
    "ಅವನು (?) ಯಹೂದಿಗಳು ಮಾಡಲಾಗದದನ್ನು ಮಾಡುತ್ತಾನೆ. ಅವನು ಅದನ್ನು ಜ್ಞಾನ ಮತ್ತು ಶಕ್ತಿಯಿಂದ ಮಾಡಿದನು."
    "ಆದರೆ ಹಿಂದೂ ಧರ್ಮಕ್ಕೆ ಮಾತ್ರ ಶಾಂತಿಯನ್ನು ಮುನ್ನಡೆಸುವ ಶಕ್ತಿ ಇದೆ".
    *4. ಹೂಸ್ಟನ್ ಸ್ಮಿತ್ (1919)*
    “ಹಿಂದುತ್ವವು ನಮ್ಮ ಮೇಲೆ ನಮಗಿರುವ ನಂಬಿಕೆಗಿಂತ ಹೆಚ್ಚು ನಂಬಿಕೆಯಿಲ್ಲ.
    ನಾವು ನಮ್ಮ ಆಲೋಚನೆಗಳನ್ನು ಮತ್ತು ಹೃದಯಗಳನ್ನು ಹಿಂದುತ್ವದ ಕಡೆಗೆ ತಿರುಗಿಸಲು ಸಾಧ್ಯವಾದರೆ, ಅದು ನಮಗೆ ಪ್ರಯೋಜನವನ್ನು ನೀಡುತ್ತದೆ.
    *5. ಮೈಕೆಲ್ ನಾಸ್ಟ್ರಾಡಾಮಸ್ (1503-1566)*
    "ಹಿಂದೂ ಧರ್ಮವು ಯುರೋಪಿನ ಆಡಳಿತ ಧರ್ಮವಾಗಲಿದೆ. ಯುರೋಪಿನ ಪ್ರಸಿದ್ಧ ಮಹಾನಗರವು ಹಿಂದೂ ರಾಜಧಾನಿಯಾಗಿದೆ".
    *6. ಬರ್ಟ್ರಾಂಡ್ ರಸ್ಸೆಲ್ (1872-1970)*
    "ನಾನು ಹಿಂದೂ ಧರ್ಮದ ಬಗ್ಗೆ ಓದಿದ್ದೇನೆ. ಇದು ಪ್ರಪಂಚದಾದ್ಯಂತ ಮನುಕುಲದ ಧರ್ಮ ಎಂದು ನಾನು ಭಾವಿಸುತ್ತೇನೆ. ಹಿಂದೂ ಧರ್ಮ ಯುರೋಪಿನಾದ್ಯಂತ ಹರಡಿತು. ಹಿಂದೂ ಧರ್ಮವನ್ನು ಅಧ್ಯಯನ ಮಾಡುವ ಅನೇಕ ವಿದ್ವಾಂಸರು ಯುರೋಪಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಮುಂದೊಂದು ದಿನ ಹಿಂದೂಗಳು ಮಾತ್ರ ಜಗತ್ತನ್ನು ಮುನ್ನಡೆಸುವ ಪರಿಸ್ಥಿತಿ ಬೆಳೆಯುತ್ತದೆ".
    *7. ಕೋಸ್ಟಾ ಲೋಬನ್ (1841-1931)*
    "ಹಿಂದೂಗಳು ಶಾಂತಿ ಮತ್ತು ಸಾಮರಸ್ಯದ ಬಗ್ಗೆ ಮಾತ್ರ ಮಾತನಾಡುತ್ತಾರೆ. ನಾನು ಕ್ರೈಸ್ತರನ್ನು ಹೊಗಳಲು, ಬದಲಾಯಿಸಲು ಮತ್ತು ನಂಬಲು ಆಹ್ವಾನಿಸುತ್ತೇನೆ".
    *8. ಬರ್ನಾರ್ಡ್ ಶಾ (1856-1950)*
    ಮುಂದೊಂದು ದಿನ ಈ ಜಗತ್ತು ಹಿಂದೂ ಧರ್ಮವನ್ನು ಒಪ್ಪಿಕೊಳ್ಳುತ್ತದೆ.
    ಹಿಂದೂ ಧರ್ಮದ ನಿಜವಾದ ಹೆಸರನ್ನು ಒಪ್ಪಿಕೊಳ್ಳಲು ನಿರಾಕರಿಸುವುದು ಅದರ ತತ್ವಗಳನ್ನು ಒಪ್ಪಿಕೊಳ್ಳುವಂತೆ ಮಾಡುತ್ತದೆ.
    ಪಾಶ್ಚಿಮಾತ್ಯ ರಾಷ್ಟ್ರಗಳು ಒಂದು ದಿನ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದು ಖಚಿತ. ಕಲಿತವರ ಧರ್ಮವು ಹಿಂದೂ ಧರ್ಮಕ್ಕೆ ಸಮಾನವಾಗಿದೆ.
    *9. ಜೋಹಾನ್ ಕೀತ್ (1749-1832)*
    ಇವತ್ತಲ್ಲದಿದ್ದರೆ ಮುಂದೊಂದು ದಿನ ಹಿಂದೂ ಧರ್ಮವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಏಕೆಂದರೆ ಅದೇ ನಿಜವಾದ ಧರ್ಮ".
    *ದಯವಿಟ್ಟು ನಿಮ್ಮ ಎಲ್ಲಾ ಸಂಪರ್ಕಗಳಿಗೆ ಹಂಚಿಕೊಳ್ಳಿ*
    5 min
  • *ಪದ್ಮಶ್ರೀ ಪುರಸ್ಕೃತರ ಇಬ್ರಾಹಿಂ ಎನ್‌.ಸುತಾರ*
    ಬಾಗಲಕೋಟೆ: ಪದ್ಮಶ್ರೀ ಪುರಸ್ಕೃತರ ಇಬ್ರಾಹಿಂ ಎನ್‌.ಸುತಾರ ಅವರು ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಪ್ರಾಥಮಿಕ ಮೂಲಗಳ ಪ್ರಕಾರ ಅವರಿಗೆ ಇಂದು ಮುಂಜಾನೆ ಹೃದಯಘಾತವಾಗಿತ್ತು ಎನ್ನಲಾಗಿದೆ.
    ಇಬ್ರಾಹಿಂ ಎನ್. ಸುತಾರ್ (ಇಬ್ರಾಹಿಂ ನಬೀ ಸಾಹೇಬ್ ಸುತಾರ್) (ಹುಟ್ಟು-10 ಮೇ 1940) ವೈದಿಕ, ವಚನ ಮತ್ತು ಸೂಫಿ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ಉಂಟು ಮಾಡುತ್ತಿರುವ ತತ್ವಪದಕಾರರು ಮತ್ತು ಪ್ರವಚನಕಾರರು
    ಇವರಿಗೆ 2018ರ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಲಾಗಿದೆ.
    ಬಾಗಲಕೋಟ ಜಿಲ್ಲೆಯ, ಮುಧೋಳ ತಾಲ್ಲೂಕಿನ ಮಹಾಲಿಂಗಪುರದ ಶ್ರೀ ಇಬ್ರಾಹೀಮ ಎನ್. ಸುತಾರ ಅವರು ದಿನಾಂಕ 10-05-1940 ರಲ್ಲಿ ಮಹಾಲಿಂಗಪುರದ ಬಡಕುಟುಂಬದಲ್ಲಿ ಜನಿಸಿದರು. 1970 ರಲ್ಲಿ 'ಭಾವೈಕ್ಯ ಜನಪದ ಸಂಗೀತ ಮೇಳ' ವನ್ನು ಸ್ಥಾಪಿಸಿದರು. ಕಳೆದ 44 ವರ್ಷಗಳಿಂದ ನಾಡಿನಾದ್ಯಂತ ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜಸೇವೆಯ ಮುಖಾಂತರ ಸರ್ವಮಹಾತ್ಮರ ಸಾಹಿತ್ಯವನ್ನು ಬಳಸಿ ಭಾವೈಕ್ಯತೆ ಸಂದೇಶವನ್ನು ಬೀರುತ್ತ ಬಂದಿರುತ್ತಾರೆ. ಪ್ರತಿವರ್ಷ ನೂರಾರು ಕಾರ್ಯ ಕ್ರಮಗಳನ್ನು ನೀಡುತ್ತ, ಹಿಂದು-ಮುಸ್ಲಿಂ ರಲ್ಲಿ ಭಾವೈಕ್ಯತೆ ಬೆಸೆಯುವ ಪವಿತ್ರ ಕಾಯಕದಲ್ಲಿ ತೊಡಗಿಸಿಕೊಂಢಿದ್ದರು.
    ತಂದೆ-ತಾಯಿ: ತಂದೆ ನಬೀಸಾಹೇಬ, ತಾಯಿ ಆಮೀನಾಬಿ
    ಜನನ: ೧೦-೦೫-೧೯೪೦ ಬಡಕುಟುಂಬದಲ್ಲಿ
    ಜನಿಸಿದ ಸ್ಥಳ: ಮಹಾಲಿಂಗಪುರ
    ಮನೆತನದ ಮೂಲ ಹೆಸರು : ಬಿಸ್ತಿ
    ಶಿಕ್ಷಣ : ಉರ್ದು ೩ನೇ ತರಗತಿ
    ತಂದೆಯವರ ಕಾಯಕ : ಬಡಿಗತನ
    ಬದಲಾದ ಅಡ್ಡ ಹೆಸರು : ಸುತಾರ (ಬಡಿಗೇರ)
    ರಂಜಾನ್ ಜಾಗರಣಿ ಸಂಘ : ಬಾಲ್ಯ ಸ್ನೇಹಿತರೊಂದಿಗೆ(೧೯೬೦ರಲ್ಲಿ)
    ಗುರು ದೀಕ್ಷೆ: ಸೂಫಿ ಸಂತರಾದ ಹಜರತ್ ಶೇಖುಲ್ ಮಷಾಯಿಕ ಅಬ್ಭಾಸ್‌ಅಲಿ ಜುನ್ನೇದಿ ಸಾ|| ಕುಡಚಿ ಇವರೊಂದಿಗೆ
    ಧರ್ಮ ಪತ್ನಿ : ಮರೇoಬಿ
    ಮಕ್ಕಳು : ಕೌಸರಬಾನು, ರಿಜವಾನಾ, ಹುಮಾಯೂನ.
    ಮೂಲ ಕಾಯಕ : ನೇಕಾರಿಕೆ
    ಪ್ರಭಾವ ಬೀರಿದ ಪದ್ಯ : ಮಾತು ಮಾತಿಗೆ ಶಂಕರಾ (ಶ್ರೀ ಶಂಕರಾನಂದ ಯೋಗಿ ವಿರಚಿತ ಕೈವಲ್ಯ ನವನೀತ ಗ್ರಂಥ)
    ಜಿಜ್ಞಾಸೆ :
    ಎಲ್ಲ ಧರ್ಮ ಗಳ ತತ್ವ ಅರಿಯಬೇಕೆಂಬುವುದು
    ಎಲ್ಲ ಸಿದ್ಧಾಂತಗಳ ಗುರಿ ಮತ್ತು ಸಾರ ತಿಳಿಯಬೇಕೆಂಬುವುದು
    ಜೀವನದ ಮಹತ್ವದ ತಿರುವು : ಪ್ರವಚನ ಮತ್ತು ಭಜನೆಯ ಆಯ್ಕೆ
    ಭಜನೆ ಕಲಿಸಿದವರು :
    ಶ್ರೀ ಬಸಪ್ಪಣ್ಣ ಹಣಗಿಕಟ್ಟಿ, ಹುಲ್ಯಾಳ
    ಶ್ರೀ ಗುರುಪಾದಪ್ಪ ಕಕಮರಿ, ಮಹಾಲಿಂಗಪುರ
    ಶ್ರೀ ಭವರುದ್ದೀನ್ ಪೆಂಡಾರಿ, ಮಹಾಲಿಂಗಪುರ
    ಶ್ರೀ ಮಲ್ಲಪ್ಪ ಕಲಾದಗಿ, ಮಹಾಲಿಂಗಪುರ
    ಪ್ರಥಮದಲ್ಲಿ ಭಜನೆ ಪ್ರಾರಂಭಿಸಿದ ಸ್ಥಳ : ಶ್ರೀ ಗುರು ಸಾಧು ನಿರಂಜನಾವಧೂತರ ಗುಡಿ, ಮಹಾಲಿಂಗಪುರ
    ಭಜನೆಗೆ ತುಂಬಾ ಪ್ರೋತ್ಸಾಹ ನೀಡಿದವರು :
    ಶ್ರೀ ಚನ್ನಪ್ಪಣ್ಣ ಕಿರಗಟಗಿ
    ಶ್ರೀ ಪಾತ್ರೋಟ ಬಂಧುಗಳು
    ೧೯೭೦ರಲ್ಲಿ : 'ಶ್ರೀ ಗುರು ಸಾಧು ನಿರಂಜನಾವಧೂತರು ಭಾವೈಕ್ಯ ಜನಪದ ಸಂಗೀತ ಮೇಳ' ಸ್ಥಾಪನೆ
    ಸಂವಾದರೂಪ ಭಜನೆಯ ವಿನೂತನ ಕಲಾ ಪ್ರಕಾರದ ಹುಟ್ಟಿಗೆ ಕಾರಣರಾದವರು : ಶ್ರೀ ಮಲ್ಲಪ್ಪಣ್ಣ ಶಿರೋಳ
    ವಿನೂತನ ಕಲಾ ಪ್ರಕಾರ : ಪ್ರಶ್ನೋತ್ತರಗಳ ಜೊತೆ ಪದ್ಯಗಳನ್ನು ಹಾಡುವ ಸಂವಾದ ರೂಪ ಭಜನೆ
    ನೀಡುವ ಕಾರ್ಯಕ್ರಮಗಳು ಹೆಸರು :
    ಭಾವೈಕ್ಯ ಭಕ್ತಿ ರಸಮಂಜರಿ
    ಗೀತ ಸಂವಾದ ತರಂಗಿಣಿ
    ಆಧ್ಯಾತ್ಮ ಸಂವಾದ ತರಂಗಿಣಿ
    ಕಾರ್ಯಕ್ರಮದ ವಿಶೇಷತೆ : ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜ ಸೇವೆಯ ಮುಖಾಂತರ ಸರ್ವ ಮಹಾತ್ಮರ ಸಾಹಿತ್ಯವನ್ನು ಬಳಸಿ ಭಾವೈಕ್ಯತೆಯ ಸಂದೇಶ ಸಾರುವುದು
    ಮಾತುಗಾರಿಕೆಗೆ ಸ್ಪೂರ್ತಿ : ಶ್ರೀ ಗುರುಪಾದಪ್ಪ ಕಕಮರಿ
    ಭಜನಾ ಸಂಘದ ವತಿಯಿಂದ ಜನಪರ ಕಾರ್ಯಕ್ರಮಗಳು :
    ಯೋಗಾಸನ ಶಿಬಿರಗಳು
    ಸಾಕ್ಷರತಾ ಶಿಬಿರಗಳು
    ಕುಡಿಯುವ ನೀರಿನ್ ಟ್ಯಾಂಕ್
    ಬೋರವೆಲ್ ವ್ಯವಸ್ಥೆ
    ಶಾಲಾ ಕೊಠಡಿಗಳ ನಿರ್ಮಾಣ
    ಶ್ರೀ ಗುರು ಸಾಧು ನಿರಂಜನಾವಧೂತ ಬ್ರಹ್ಮ ವಿದ್ಯಾಶ್ರಮ
    ೧೯೮೪ರಲ್ಲಿ : 'ಶ್ರೀ ಗುರು ಸಾಧು ನಿರಂಜನಾವಧೂತರು ಕಮೀಟಿ ಹಾಗೂ ಭಜನಾ ಮಂಡಳಿ' ಟ್ರಸ್ಟ್ ಸ್ಥಾಪನೆ
    ವೇದಾಂತದಲ್ಲಿ ಪ್ರವೃತ್ತಿಗೆ ಕಾರಣರಾದವರು : ಶ್ರೀ ಶಿವಾನಂದ ಸ್ವಾಮಿಗಳು, ರಕ್ಷಿ ಶಿರಗಾಂವ
    ಶಾಸ್ತ್ರಭ್ಯಾಸ : ಪ್ರಕರಣ ಪ್ರವೀಣ ಶ್ರೀ ಬಸವಾನಂದರ ಬಳಗ ಮಹಾಲಿಂಗಪುರದಲ್ಲಿ
    ಶಾಸ್ತ್ರಭ್ಯಾಸ ಮಾಡಿಸಿದ ಪೂಜ್ಯರು :
    ಶ್ರೋ. ಬ್ರ. ಶ್ರೀ ರಾಮಚಂದ್ರ ಶೇಡಜಿ ಶಾಸ್ತ್ರಿಗಳು, ಸಿದ್ಧಾಪೂರ
    ಶ್ರೋ. ಬ್ರ. ಶ್ರೀ ಸಿದ್ಧಯ್ಯಪ್ಪ ಮಹಾರಾಜರು, ಸೋಲಾಪುರ
    ಶ್ರೋ. ಬ್ರ. ಶ್ರೀ ಶಂಭುಲಿಂಗ ಶಾಸ್ತ್ರಿಗಳು, ದರೂರ
    ಶ್ರೋ. ಬ್ರ. ಶ್ರೀ ಶಾಂತಾನಂದ ಸ್ವಾಮಿಗಳು, ಮೇರಾಪುರಹಟ್ಟಿ
    ಶ್ರೋ. ಬ್ರ. ಶ್ರೀ ಸಹಜಾನಂದ ಸ್ವಾಮಿಗಳು, ಮಹಾಲಿಂಗಪುರ
    ಆಧ್ಯಾತ್ಮಿಕ ವಿಶ್ವವಿದ್ಯಾಲಯ : ಶ್ರೀ ಮಲ್ಲೇಶಪ್ಪ ಕಟಗಿಯವರ ಮನೆ
    ಆಧ್ಯಾತ್ಮ ಚಿಂತನೆಗೆ ಆಶ್ರಯ ನೀಡಿದವರು :
    ಶ್ರೀ ಮಲಕಾಜಪ್ಪ ಕಟಗಿ ಮತ್ತು ಶ್ರೀಮತಿ ಭಾಗೀರಥಿ ಮ . ಕಟಗಿ ಶರಣ ದಂಪತಿಗಳು
    ಶ್ರೀ ಮಹಾಲಿಂಗಪ್ಪಣ್ಣ ಎಂ. ಢಪಳಾಪೂರ
    ಪ್ರವಚನ ಕ್ಷೇತ್ರಕ್ಕೆ ನೂಕಿದವರು : ಶ್ರೀ ಶಂಭುಲಿಂಗ ಶಾಸ್ತ್ರಿಗಳು, ದರೂರ
    ಹೊಸ ಪರಿಕಲ್ಪನೆ : ಶ್ರಾವಣಕ್ಕೊಂದು ಸಮಾಜಸೇವೆ
    ಶ್ರಾವಣಕ್ಕೊಂದು ಸಮಾಜಸೇವೆಗೆ ಪ್ರೇರಣೆ : ವೇದಾಂತ ಕೇಸರಿ ಪೂಜ್ಯಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ವಿಜಯಪುರ
    ಶ್ರಾವಣಕ್ಕೊಂದು ಸಮಾಜಸೇವೆಗಳು :
    ೧೯೮೮ರಲ್ಲಿ ಶೇಗುಣಸಿ- ತೇರದಾಳ ಮಧ್ಯೆ ೯ ಕಿ.ಮೀ. ಶ್ರಮದಾನದಿಂದ ರಸ್ತೆ ನಿರ್ಮಾಣ
    ೨೦೦೨ರಲ್ಲಿ ಢವಲೇಶ್ವರಲ್ಲಿ 'ಶ್ರೀ ವಿವೇಕಾನಂದ ಪ್ರಾಥಮಿಕ ಶಾಲೆ' ಯ ನಿರ್ಮಾಣ
    ೨೦೦೯ರಲ್ಲಿ ಬೀಳಗಿ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ 'ಕಲ್ಯಾಣ ಮಂಟಪ' ನಿರ್ಮಾಣ
    ೨೦೧೧ರಲ್ಲಿ ಅರಳಿಮಟ್ಟಿಯಲ್ಲಿ 'ಶ್ರೀ ಬಸವೇಶ್ವರ ಯಾತ್ರಿ ನಿವಾಸ'
    ಪುತ್ರನ ವಿವಾಹ ವಿಶೇಷತೆ: ಕಲ್ಯಾಣ ಮಹೋತ್ಸವದ ನಿಮಿತ್ಯ 'ಶರಣರ - ಸಂತರ - ಸೂಫಿಗಳ ಭಾವೈಕ್ಯ ಸಂಗಮ ಕಾರ್ಯಕ್ರಮ
    ಭಾವೈಕ್ಯ ಜನಪದ ಸಂಗೀತ ಮೇಳದ ಪ್ರಸ್ತುತ ಕಲಾವಿದರು:
    ಶ್ರೀ ಶ್ರೀಮಂತಪ್ಪ ಕಣಬೂರ
    ಶ್ರೀ ರಾಜೇಸಾಬ ಹಳಿಂಗಳಿ
    ಶ್ರೀ ಈಶ್ವರಪ್ಪ ಮುಂಡಗನೂರ
    ಶ್ರೀ ಮೆಹಬೂಬ ಸನದಿ
    ಶ್ರೀ ಮಹಾದೇವಪ್ಪ ಕರಡಿ
    ಶ್ರೀ ಶ್ರೀಶೈಲ ಜಕ್ಕಪ್ಪ್ನವರ
    ಶ್ರೀ ಮಹಾದೇವಪ್ಪ ಕೌಜಲಗಿ
    ಹೊರರಾಜ್ಯಗಳಲ್ಲಿ ಕಾರ
    7 min
  • 🙏ಶ್ರೀ ಗಣೇಶ ಜಯಂತಿ🙏
    ಮಾಘ ಶುಕ್ಲ ಪಕ್ಷ ಚತುರ್ಥಿಯಂದು ಗಣೇಶ ಲಹರಿಗಳು ಪ್ರಪ್ರಥಮವಾಗಿ ಪೃಥ್ವಿಯನ್ನು ತಲುಪಿದವು (ಅಂದರೆ ಗಣೇಶ ಜನಿಸಿದ ದಿನ). ಆ ಸಮಯದಿಂದ ಶ್ರೀ ಗಣೇಶ ಮತ್ತು ಚತುರ್ಥಿಯು ಅವಿಭಾಜ್ಯವಾಗಿವೆ. 'ಮಾಘ ಶುಕ್ಲ ಚತುರ್ಥಿಯನ್ನು' ಶ್ರೀ ಗಣೇಶ ಜಯಂತಿ' ಎಂದು ಆಚರಿಸಲಾಗುತ್ತದೆ. ಇತರ ದಿನಗಳ ತುಲನೆಯಲ್ಲಿ ಈ ದಿನದಂದು ಶ್ರೀ ಗಣೇಶ ತತ್ತ್ವವು ೧೦೦೦ ಪಟ್ಟು ಹೆಚ್ಚು ಕಾರ್ಯರತವಾಗಿರುತ್ತದೆ. ಅನೇಶ್ ಮಹಾನ್ ಗಣೇಶ ಭಕ್ತರು ಕೂಡ ಇದೆ ದಿನದಂದು ಪೃಥ್ವಿಯ ಮೇಲೆ ಜನಿಸಿದ ದಿನವೂ ಹೌದು.
    ಗಣೇಶ ಜಯಂತಿಯಂದು ಮಾಡಬೇಕಾದ ಉಪಾಸನೆ
    ಈ ದಿನದಂದು ೩ ರಿಂದ ೯ ಮಾಲೆ ಶ್ರೀ ಗಣಪತಿಯ ನಾಮವನ್ನು ಭಾವಪೂರ್ಣವಾಗಿ ಜಪಿಸಲು ಪ್ರಯತ್ನಿಸಬೇಕು. ಅದೇ ರೀತಿ ಗಣಪತಿಯ ಪ್ರತಿಮೆ ಅಥವಾ ಮೂರ್ತಿಯ ಪೂಜೆ ಮಾಡಿದಲ್ಲಿ, ಗಣಪತಿಯ ಶಕ್ತಿ ಮತ್ತು ಚೈತನ್ಯದ ಅಧಿಕ ಪಡೆಯಬಹುದು. ಶ್ರೀ ಗಣಪತಿ ಅಥರ್ವಶೀರ್ಷ ಪಠಿಸಿದರೆ ಕೂಡ ಈ ಲಾಭವನ್ನು ಪಡೆಯಬಹುದು.
    ಶುಭಕಾರ್ಯಗಳಲ್ಲಿ ಗಣೇಶನನ್ನು ಏಕೆ ಪ್ರಥಮ ಪೂಜೆಯನ್ನು ಸಲ್ಲಿಸುತ್ತಾರೆ?
    ಗಣಪತಿಯು ದಿಕ್ಕುಗಳ ಅಧಿಪತಿ. ಗಣೇಶ ಪೂಜೆಯಿಂದ, ನಾವು ಆಹ್ವಾನಿಸುವ ದೇವತೆಯು ಪೂಜೆಯ ಸ್ಥಳಕ್ಕೆ ಆಗಮಿಸಲು ಆಯಾ ದಿಕ್ಕು ಮುಕ್ತವಾಗುತ್ತದೆ. ಅಲ್ಲದೆ, ಮನುಷ್ಯರು ಮಾತನಾಡುವ (ನಾದ) ಭಾಷೆಯನ್ನು ದೇವತೆಗಳ (ಪ್ರಕಾಶ) ಭಾಷೆಗೆ ರೂಪಾಂತರಿಸಿ, ಗಣಪತಿಯು ನಮ್ಮ ಪ್ರಾರ್ಥನೆಯನ್ನು ಅವರಿಗೆ ತಲುಪಿಸುತ್ತಾನೆ. ಗಣಪತಿಯನ್ನು ವಿಘ್ನಹರ್ತಾ ಎಂದು ಕೂಡ ಕರೆಯುತ್ತಾರೆ.
    ಗಣಪತಿಯ ವಾಹನ
    ವೃ – ವಹ ಈ ಶಬ್ದದಿಂದ ವಾಹನ ಎಂಬ ಶದದ ಉತ್ಪತ್ತಿ ಆಯಿತು. ದೇವತೆಗಳ ವಾಹನಗಳು ಸಮಯ ಮತ್ತು ಕಾರ್ಯಕ್ಕನುಸಾರ ಬದಲಾಗುತ್ತವೆ. 'ಮೂಷಿಕ' ಗಣಪತಿಯ ನಿತ್ಯ ವಾಹನ. ಆದರೆ ಗಣಪತಿಗೆ ಇತರ ವಾಹನಗಳು ಕೂಡ ಇವೆ. ಉದಾಹರಣೆಗೆ, ಹೇರಂಬ ಗಣಪತಿಯ ವಾಹನ ಸಿಂಹವಾದರೆ (ಯುದ್ಧಕಾಲದಲ್ಲಿ ಕೂಡ ಇದೇ ವಾಹನವಾಗಿದೆ), ಮಯೂರೇಶ್ವರ ಗಣಪತಿಯ ವಾಹನ ಒಂದು ನವಿಲು.
    ವಿದ್ಯಾರ್ಥಿ ಮಿತ್ರರೇ, ಗಣಪತಿಯ ಶಕ್ತಿ ದೊರೆಯಲು ಪ್ರತಿದಿನ ಇವುಗಳನ್ನು ಮಾಡಿ !
    ೧. ಅಥರ್ವಶೀರ್ಷ ಪಠಿಸಿ : ಮಿತ್ರರೇ, ನಿಮ್ಮ ಮಾತಿನಲ್ಲಿ ಚೈತನ್ಯವಿದ್ದರೆ, ನೀವು ಮಾತನಾಡುವಾಗ ಇತರರಿಗೆ ಮುದವೆನಿಸುತ್ತದೆ. ಅಥರ್ವಶೀರ್ಷ ಪಠಿಸುವುದರಿಂದ ನಿಮ್ಮ ಉಚ್ಚಾರ ಸ್ಪಷ್ಟವಾಗುತ್ತದೆ. ಆದುದರಿಂದ ಅಥರ್ವಶೀರ್ಷ ಪಠಿಸಿ.
    ೨. ಅಧಿಕಾಧಿಕ ಪ್ರಾರ್ಥನೆಗಳನ್ನು ಮಾಡಿ : ನಾವು ಉಪಯೋಗಿಸುವ ಭಾಷೆಯನ್ನು ನಾದಭಾಷೆ ಎಂದು ಕರೆಯುತ್ತಾರೆ. ಇತರ ದೇವತೆಗಳ ತುಲನೆಯಲ್ಲಿ ಶ್ರೀ ಗಣೇಶನಿಗೆ ನಮ್ಮ ಭಾಷೆಯು ಅರ್ಥವಾಗುತ್ತದೆ, ಆದುದರಿಂದ ಅವನ ಕೃಪೆಯನ್ನು ಸಂಪಾದಿಸಲು ಶ್ರೀ ಗಣೇಶನ ಪ್ರಾರ್ಥನೆಯನ್ನು ಆದಷ್ಟು ಹೆಚ್ಚು ಮಾಡೋಣ.
    ೩. ಮಾನಸಪೂಜೆ : ಮನಸ್ಸಿನಲ್ಲಿಯೇ ಮಾಡುವ ಪೂಜೆಯನ್ನು ಮಾನಸ ಪೂಜೆ ಎನ್ನುತ್ತಾರೆ. ಈ ರೀತಿ ಮಾಡುವ ಪೂಜೆಗೆ ಯಾವುದೇ ಕಟ್ಟುಪಾಡುಗಳು ಇರುವುದಿಲ್ಲ. ಮಾನಸ ಪೂಜೆಯಿಂದ ಮನಸ್ಸಿನ ಉತ್ಸಾಹ ವೃದ್ಧಿಸುತ್ತದೆ. ಈ ಪೂಜೆಯಲ್ಲಿ ನಮಗೆ ಇಷ್ಟವಿರುವ ವಸ್ತು, ವಿಷಯಗಳನ್ನು ಅರ್ಪಿಸಬಹುದು. ಮನಸ್ಸಿನಲ್ಲಿ ಸತತವಾಗಿ ಶ್ರೀ ಗಣಪತಿಯ ಅನುಸಂಧಾನದಲ್ಲಿದ್ದು ಆನಂದವನ್ನು ಅನುಭವಿಸಬಹುದು.
    4 min
  • *ಮಲಪ್ಪುರಂ ಜಿಲ್ಲಾಧಿಕಾರಿ ಶ್ರೀಮತಿ. ರಾಣಿ ಸೋಯಾಮೊಯ್ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ* ...
    #Female
    ಜಿಲ್ಲಾಧಿಕಾರಿ ಯಾಕೆ ಮೇಕಪ್ ಹಾಕಿಲ್ಲ...?
    ಮಲಪ್ಪುರಂ ಜಿಲ್ಲಾಧಿಕಾರಿ ಶ್ರೀಮತಿ. ರಾಣಿ ಸೋಯಾಮೊಯ್ ಕಾಲೇಜು ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ...
    ..........................................
    ಕೇರಳ ರಾಜ್ಯದ ಜಿಲ್ಲಾಧಿಕಾರಿ ಕೈಗಡಿಯಾರವನ್ನು ಹೊರತುಪಡಿಸಿ ಬೇರೆ ಯಾವುದೇ ಆಭರಣವನ್ನು ಧರಿಸಿರಲಿಲ್ಲ.
    ಬಹುತೇಕ ಮಕ್ಕಳಿಗೆ ಅಚ್ಚರಿಯ ವಿಷಯವೆಂದರೆ ಅವರು ಮುಖಕ್ಕೆ ಪೌಡರ್ ಕೂಡ ಬಳಸಿರಲಿಲ್ಲ.
    ಮಕ್ಕಳು ಜಿಲ್ಲಾಧಿಕಾರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು.
    ಪ್ರ: ನಿಮ್ಮ ಹೆಸರೇನು?
    ನನ್ನ ಹೆಸರು ರಾಣಿ. ಸೋಯಾಮೊಯ್ ನನ್ನ ಕುಟುಂಬದ ಹೆಸರು. ನಾನು ಜಾರ್ಖಂಡ್ ಮೂಲದವಳು.
    ಒಬ್ಬ ತೆಳ್ಳಗಿನ ಹುಡುಗಿ ಪ್ರೇಕ್ಷಕರಿಂದ ಎದ್ದು ನಿಂತಳು.
    "ಮೇಡಂ, ನಿಮ್ಮ ಮುಖಕ್ಕೆ ಮೇಕಪ್ ಏಕೆ ಬಳಸಬಾರದು?"
    ಡಿಸ್ಟ್ರಿಕ್ಟ್ ಕಲೆಕ್ಟರ್ ಮುಖ ಇದ್ದಕ್ಕಿದ್ದಂತೆ ವಿವರ್ಣವಾಯಿತು. ತೆಳುವಾದ ಹಣೆಯ ಮೇಲೆ ಬೆವರು ಹರಿಯಿತು. ಮುಖದಲ್ಲಿನ ನಗು ಮರೆಯಾಯಿತು. ಸಭಿಕರು ಇದ್ದಕ್ಕಿದ್ದಂತೆ ಮೌನವಾದರು.
    ಟೇಬಲ್ ಮೇಲಿದ್ದ ನೀರಿನ ಬಾಟಲಿಯನ್ನು ತೆರೆದು ಸ್ವಲ್ಪ ಕುಡಿದು, ಮಗುವಿಗೆ ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು . ನಂತರ ನಿಧಾನವಾಗಿ ಮಾತನಾಡತೊಡಗಿದರು.
    ನಾನು ಹುಟ್ಟಿದ್ದು ಜಾರ್ಖಂಡ್‌ ರಾಜ್ಯದ ಬುಡಕಟ್ಟು ಪ್ರದೇಶದಲ್ಲಿ. ನಾನು ಹುಟ್ಟಿದ್ದು ಕೊಡೆರ್ಮಾ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ "ಮೈಕಾ" ಗಣಿಗಳಿಂದ ತುಂಬಿದ ಸಣ್ಣ ಗುಡಿಸಲಿನಲ್ಲಿ.
    ನನ್ನ ತಂದೆ ಮತ್ತು ತಾಯಿ ಗಣಿಗಾರರಾಗಿದ್ದರು. ನನಗೆ ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ ಇದ್ದರು. ಮಳೆ ಬಂದರೆ ಸೋರುವ ಪುಟ್ಟ ಗುಡಿಸಲಿನಲ್ಲಿ ವಾಸ.
    ಬೇರೆ ಕೆಲಸ ಸಿಗದ ಕಾರಣ ನನ್ನ ತಂದೆ-ತಾಯಿ ಗಣಿಗಳಲ್ಲಿ ಅತ್ಯಲ್ಪ ಸಂಬಳಕ್ಕೆ ದುಡಿಯುತ್ತಿದ್ದರು. ಇದು ತುಂಬಾ ಗೊಂದಲಮಯ ಕೆಲಸವಾಗಿತ್ತು.
    ನಾನು ನಾಲ್ಕು ವರ್ಷದವಳಾಗಿದ್ದಾಗ, ನನ್ನ ತಂದೆ, ತಾಯಿ ಮತ್ತು ಇಬ್ಬರು ಸಹೋದರರು ವಿವಿಧ ಕಾಯಿಲೆಗಳಿಂದ ಹಾಸಿಗೆ ಹಿಡಿದರು.
    ಗಣಿಗಳಲ್ಲಿನ ಮಾರಣಾಂತಿಕ ಮೈಕಾ ಧೂಳನ್ನು ಆಘ್ರಾಣಿಸುವ ಮೂಲಕ ಈ ರೋಗವು ಉಂಟಾಗುತ್ತದೆ ಎಂದು ಅವರು ಆ ಸಮಯದಲ್ಲಿ ತಿಳಿದಿರಲಿಲ್ಲ.
    ನಾನು ಐದು ವರ್ಷದವಳಾಗಿದ್ದಾಗ, ನನ್ನ ಸಹೋದರರು ಅನಾರೋಗ್ಯದಿಂದ ನಿಧನರಾದರು.
    ಒಂದು ಸಣ್ಣ ನಿಟ್ಟುಸಿರಿನೊಂದಿಗೆ ಕಲೆಕ್ಟರ್ ಮಾತು ನಿಲ್ಲಿಸಿ ಕಣ್ಣೀರಿನಿಂದ ತುಂಬಿದ ಕಣ್ಣುಗಳನ್ನು ಮುಚ್ಚಿದರು.
    ಹೆಚ್ಚಿನ ದಿನಗಳಲ್ಲಿ ನಮ್ಮ ಆಹಾರ ನೀರು ಮತ್ತು ಒಂದು ಅಥವಾ ಎರಡು ಬ್ರೆಡ್ ಅನ್ನು ಒಳಗೊಂಡಿತ್ತು. ನನ್ನ ಸಹೋದರರಿಬ್ಬರೂ ತೀವ್ರ ಅನಾರೋಗ್ಯ ಮತ್ತು ಹಸಿವಿನಿಂದ ಇಹಲೋಕ ತ್ಯಜಿಸಿದರು. ನನ್ನ ಹಳ್ಳಿಯಲ್ಲಿ ವೈದ್ಯರ ಬಳಿಗೆ ಅಥವಾ ಶಾಲೆಗೆ ಹೋಗುವವರು ಇರಲಿಲ್ಲ. ಶಾಲೆ, ಆಸ್ಪತ್ರೆ, ವಿದ್ಯುತ್ ಅಥವಾ ಶೌಚಾಲಯ ಇಲ್ಲದ ಗ್ರಾಮವನ್ನು ನೀವು ಊಹಿಸಬಲ್ಲಿರಾ?
    ಒಂದು ದಿನ ನಾನು ಹಸಿದಿದ್ದಾಗ, ನನ್ನ ತಂದೆ ನನ್ನನ್ನು, ಎಲ್ಲಾ ಚರ್ಮ ಮತ್ತು ಮೂಳೆಗಳನ್ನು ಹಿಡಿದು ಎಳೆದ ಕಬ್ಬಿಣದ ಹಾಳೆಗಳಿಂದ ಮುಚ್ಚಿದ ದೊಡ್ಡ ಗಣಿ ಬಳಿಗೆ ಎಳೆದೊಯ್ದರು.
    ಕಾಲಾಂತರದಲ್ಲಿ ಕುಖ್ಯಾತಿ ಗಳಿಸಿದ್ದ ಮೈಕಾ ಗಣಿ ಅದು.
    ಇದು ಪುರಾತನ ಗಣಿಯಾಗಿದ್ದು, ಭೂಗತ ಲೋಕವನ್ನು ಅಗೆದು ಹಾಕಲಾಯಿತು. ನನ್ನ ಕೆಲಸವು ಕೆಳಭಾಗದಲ್ಲಿರುವ ಸಣ್ಣ ಗುಹೆಗಳ ಮೂಲಕ ತೆವಳುತ್ತಾ ಮೈಕಾ ಅದಿರುಗಳನ್ನು ಸಂಗ್ರಹಿಸುವುದು. ಹತ್ತು ವರ್ಷದೊಳಗಿನ ಮಕ್ಕಳಿಗೆ ಮಾತ್ರ ಇದು ಸಾಧ್ಯವಿತ್ತು.
    ನನ್ನ ಜೀವನದಲ್ಲಿ ಮೊದಲ ಬಾರಿಗೆ, ನಾನು ಹೊಟ್ಟೆ ತುಂಬಾ ಬ್ರೆಡ್ ತಿಂದೆ. ಆದರೆ ಆ ದಿನ ನಾನು ವಾಂತಿ ಮಾಡಿಕೊಂಡೆ.
    ನಾನು ಒಂದನೇ ತರಗತಿಯಲ್ಲಿದ್ದಾಗ, ನಾನು ವಿಷಪೂರಿತ ಧೂಳನ್ನು ಉಸಿರಾಡುವ ಕತ್ತಲೆಯ ಕೋಣೆಗಳ ಮೂಲಕ ಮೈಕಾವನ್ನು ನುಂಗುತ್ತಿದ್ದೆ.
    ಸಾಂದರ್ಭಿಕ ಭೂಕುಸಿತದಲ್ಲಿ ದುರದೃಷ್ಟಕರ ಮಕ್ಕಳು ಸಾಯುವುದು ಸಾಮಾನ್ಯ ಸಂಗತಿಯಾಗಿರಲಿಲ್ಲ. ಮತ್ತು ಕೆಲವರು ಮಾರಣಾಂತಿಕ ಕಾಯಿಲೆಗೆ ತುತ್ತಾಗುತಿದ್ದರು.
    ದಿನಕ್ಕೆ ಎಂಟು ಗಂಟೆ ಕೆಲಸ ಮಾಡಿದರೆ ಕನಿಷ್ಠ ಒಂದು ರೊಟ್ಟಿಯಾದರೂ ಸಿಗುತ್ತದೆ. ಹಸಿವು ಮತ್ತು ಹಸಿವಿನಿಂದ ನಾನು ಪ್ರತಿದಿನ ತೆಳ್ಳಗೆ ಮತ್ತು ನಿರ್ಜಲೀಕರಣಗೊಂಡಿದ್ದೆ.
    ಒಂದು ವರ್ಷದ ನಂತರ ನನ್ನ ತಂಗಿಯೂ ಗಣಿ ಕೆಲಸಕ್ಕೆ ಹೋಗತೊಡಗಿದಳು. ಸ್ವಲ್ಪ ಚೇತರಿಸಿಕೊಂಡ ತಕ್ಷಣ ನಾನು ಅಪ್ಪ, ಅಮ್ಮ, ತಂಗಿ ಸೇರಿ ದುಡಿದು ಕೊಂಚ ಬದುಕುವ ಹಂತಕ್ಕೆ ಬಂದೆವು.
    ಆದರೆ ವಿಧಿ ಇನ್ನೊಂದು ರೂಪದಲ್ಲಿ ನಮ್ಮನ್ನು ಕಾಡಲಾರಂಭಿಸಿತ್ತು. ಒಂದು ದಿನ ನಾನು ವಿಪರೀತ ಜ್ವರದಿಂದ ಕೆಲಸಕ್ಕೆ ಹೋಗದೆ ಇದ್ದಾಗ ಇದ್ದಕ್ಕಿದ್ದಂತೆ ಮಳೆ ಬಂತು. ಗಣಿ ತಳದಲ್ಲಿ ಕಾರ್ಮಿಕರ ಮುಂದೆ ಗಣಿ ಕುಸಿದು ನೂರಾರು ಜನರು ಸತ್ತರು. ಅವರಲ್ಲಿ ನನ್ನ ತಂದೆ, ತಾಯಿ ಮತ್ತು ಸಹೋದರಿ ಕೂಡಾ.
    ಸಭಿಕರೆಲ್ಲರೂ ಉಸಿರಾಡುವುದನ್ನೂ ಮರೆತರು. ಹಲವರ ಕಣ್ಣಲ್ಲಿ ನೀರು ತುಂಬಿತ್ತು.
    ನನಗೆ ಕೇವಲ ಆರು ವರ್ಷ ಎಂದು ನಾನು ನೆನಪಿಸಿಕೊಳ್ಳಬೇಕು.
    ಕೊನೆಗೆ ನಾನು ಸರ್ಕಾರಿ ಮಂದಿರಕ್ಕೆ ಬಂದೆ. ಅಲ್ಲಿ ನಾನು ಶಿಕ್ಷಣ ಪಡೆದೆ. ನನ್ನ ಹಳ್ಳಿಯಿಂದ ವರ್ಣಮಾಲೆ ಕಲಿತ ಮೊದಲಿಗಳು ನಾನು. ಅಂತಿಮವಾಗಿ ಇಲ್ಲಿ ನಿಮ್ಮ ಮುಂದೆ ಜಿಲ್ಲಾಧಿಕಾರಿ ಆಗದ್ದೇನೆ.
    ನಾನು ಮೇಕಪ್ ಮಾಡದಿರುವುದಕ್ಕೂ ಇದಕ್ಕೂ ಏನು ಸಂಬಂಧ ಎಂದು ನೀವು ಆಶ್ಚರ್ಯ ಪಡಬಹುದು.
    ಆ ದಿನಗಳಲ್ಲಿ ಕತ್ತಲೆಯಲ್ಲಿ ತೆವಳುತ್ತಾ ನಾನು ಸಂಗ್ರಹಿಸಿದ ಸಂಪೂರ್ಣ ಮೈಕಾವನ್ನು ಮೇಕಪ್ ಉತ್ಪನ್ನಗಳಲ್ಲಿ ಬಳಸಲಾಗುತ್ತಿದೆ ಎಂದು ನನಗೆ ಆಗ ಅರಿವಾಯಿತು.
    ಮೈಕಾ ಫ್ಲೋರೋಸೆಂಟ್ ಸಿಲಿಕೇಟ್ ಖನಿಜದ ಮೊದಲ ವಿಧವಾಗಿದೆ.
    ಅನೇಕ ದೊಡ್ಡ ಕಾಸ್ಮೆಟಿಕ್ ಕಂಪನಿಗಳು ನೀಡುವ ಖನಿಜ ಮೇಕಪ್ ಗಳಲ್ಲಿ, ಬಹು-ಬಣ್ಣದ ಮೈಕಾ ಅತ್ಯಂತ ವರ್ಣರಂಜಿತವಾಗಿದೆ, ಅದು ನಿಮ್ಮ ತ್ವಚೆಯನ್ನು 20,000 ಚಿಕ್ಕ ಮಕ್ಕಳ ಪ್ರಾಣವನ್ನು ಪಣಕ್ಕಿಡುವಂತೆ ಮಾಡುತ್ತದೆ.
    ಗುಲಾಬಿಯ ಮೃದುತ್ವವು ನಿಮ್ಮ ಕೆನ್ನೆಗಳ ಮೇಲೆ ಅವರ ಸುಟ್ಟ ಕನಸುಗಳು, ಅವರ ಛಿದ್ರಗೊಂಡ ಜೀವನ ಮತ್ತು ಕಲ್ಲುಗಳ ನಡುವೆ ಪುಡಿಮಾಡಿದ ಮಾಂಸ ಮತ್ತು ರಕ್ತದೊಂದಿಗೆ ಹರಡುತ್ತದೆ.
    ಲಕ್ಷಾಂತರ ಡಾಲರ್ ಮೌಲ್ಯದ ಮೈಕಾವನ್ನು ಇನ್ನೂ ಮಗುವಿನ ಕೈ
    8 min
  • ಭಾರತ ಮಾತೆಯ ಶ್ರೇಷ್ಟವಾದ ವರಪುತ್ರನಿಗೆ ನಮ್ಮ ಕೋಟಿ ನಮನಗಳು. ಕ್ರಾಂತಿಯ ಕಿಡಿ *ನೇತಾಜಿ ಸುಭಾಸ್ ಚಂದ್ರ ಬೋಸ್*
    ಅವರ ಜನ್ಮ ಜಯಂತಿಯ 126ನೆಯ ವರ್ಧಂತಿಗೆ ಇಡೀ ದೇಶವು ಸಜ್ಜುಗೊಂಡಿದೆ. ಕಳೆದ ವರ್ಷದಿಂದ ನೇತಾಜಿ ಅವರ ಜನ್ಮ ದಿನವನ್ನು ( ಜನವರಿ 23) ಪ್ರತೀ ವರ್ಷವೂ ಪರಾಕ್ರಮ ದಿನವಾಗಿ ಆಚರಿಸಲು ಕೇಂದ್ರ ಸರ್ಕಾರವು ನಿರ್ಧಾರ ಮಾಡಿತ್ತು. ಇದು ನಿಜವಾಗಿಯೂ ಅತ್ಯಂತ ಸೂಕ್ತವಾದ ನಿರ್ಧಾರವಾಗಿತ್ತು.
    ನೇತಾಜಿ ಸುಭಾಸರನ್ನು ಇಂದಿನ ತಲೆಮಾರಿನ ಜನರು ನಿರಂತರವಾಗಿ ನೆನಪಿಸಿಕೊಳ್ಳಬೇಕು.
    2004ರಲ್ಲಿ ಶಾಮ್ ಬೆನೆಗಲ್ ನಿರ್ದೇಶನ ಮಾಡಿದ ಶ್ರೇಷ್ಠ ಸಿನೆಮಾ 'ನೇತಾಜಿ ಸುಭಾಸ್ ಚಂದ್ರ ಬೋಸ್ - ದ ಫಾರ್ಗೊಟನ್ ಹೀರೋ' ನೋಡಿ ನಾನು ಧಾರೆಯಾಗಿ ಕಣ್ಣೀರು ಸುರಿಸಿದ್ದೆ. ಅವರು ಬದುಕಿದ ರೀತಿಯೇ ಹಾಗಿತ್ತು! ಸಾವನ್ನು ಎದುರಿಸುವ ಧೈರ್ಯವು ಅವರಿಗೆ ರಕ್ತಗತವಾಗಿ ಬಂದಿತ್ತು.
    ಕಟಕ ನಗರದ ಅತ್ಯಂತ ಶ್ರೀಮಂತ ವಕೀಲನ ಮಗನಾಗಿ ಜನಿಸಿದ (1897 ಜನವರಿ 23) ಸುಭಾಷರು ತನ್ನ ಹೆತ್ತವರ ಆಸೆಯಂತೆ ಲಂಡನ್ನಿಗೆ ಹೋಗಿ ಕೇಂಬ್ರಿಜ್ ವಿವಿಯಲ್ಲಿ ನಾಲ್ಕನೇ ರಾಂಕ್ ಪಡೆದು ಐಸಿಎಸ್ ಪರೀಕ್ಷೆಯನ್ನು ಪಾಸ್ ಆಗಿದ್ದರು! ಅವರ ಪದವಿಗೆ ಅನುಗುಣವಾಗಿ ಬ್ರಿಟಿಷ್ ಸರಕಾರವು ಅವರಿಗೆ ಅತ್ಯಂತ ದೊಡ್ಡ ಹುದ್ದೆಯ ಆಫರ್ ನೀಡಿತ್ತು.
    ಆದರೆ ಆಗಲೇ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹರಡಿತ್ತು. ಭಾರತ ಅವರನ್ನು ಕೈ ಬೀಸಿ ಕರೆದಾಗ ಅವರು ಐಸಿಎಸ್ ಪದವಿಯನ್ನು ತ್ಯಜಿಸಿ ಭಾರತಕ್ಕೆ ಬಂದರು.
    ಬಾಲ್ಯದಲ್ಲಿ ಅವರ ಮೇಲೆ ವಿವೇಕಾನಂದರ ದಟ್ಟ ಪ್ರಭಾವ ಆಗಿತ್ತು. ರಾಷ್ಟ್ರಪ್ರೇಮದ ಬೆಂಕಿಯು ಮೊದಲೇ ಅವರ ಒಳಗಿತ್ತು. ಭಾರತಕ್ಕೆ ಬಂದಾಗ ಅವರ ಮೇಲೆ ಆರಂಭದಲ್ಲಿ ಮಹಾತ್ಮ ಗಾಂಧೀಜಿಯವರ ಪ್ರಭಾವವು ಆಗಿತ್ತು. ಆದರೆ ಮುಂದೆ ಕಲ್ಕತ್ತಾದಲ್ಲಿ ಸ್ವರಾಜ್ ಎಂಬ ಪತ್ರಿಕೆಗೆ ಅವರು ಅಗ್ರ ಲೇಖನಗಳನ್ನು ಬರೆಯಲು ತೊಡಗಿದಾಗ ಮಹಾನ್ ಕ್ರಾಂತಿಕಾರಿ ಚಿತ್ತರಂಜನ ದಾಸ್ ಅವರ ಪರಿಚಯವು ಆಯಿತು. ಅದು ಅವರ ಜೀವನದ ಮೇಜರ್ ಟರ್ನಿಂಗ್ ಪಾಯಿಂಟ್ ಆಯಿತು.
    ಅಲ್ಲಿಂದ ಅವರು ಮಹಾ ಕ್ರಾಂತಿಕಾರಿ ಆದರು. ಮಹಾತ್ಮ ಗಾಂಧಿಯವರ ಪ್ರಭಾವ ಕಡಿಮೆ ಆಯಿತು. ಅವರ ಬೆಂಕಿ ಉಗುಳುವ ಭಾಷಣಗಳು ಇನ್ನಷ್ಟು ಪ್ರಖರ ಆದವು.
    'ನನಗೆ ಗಾಂಧೀಜಿ ಮೇಲೆ ಗೌರವ ಇದೆ. ಆದರೆ ತಕಲಿಯನ್ನು ನೂಲುವುದರಿಂದ, ಉಪವಾಸ ಕೂರುವುದರಿಂದ ಭಾರತಕ್ಕೆ ಸ್ವಾತಂತ್ರ್ಯವು ಖಂಡಿತವಾಗಿ ದೊರೆಯಲು ಸಾಧ್ಯವೇ ಇಲ್ಲ. ಸ್ವಾತಂತ್ರ್ಯವು ಭಿಕ್ಷೆ ಅಲ್ಲ! ಅದಕ್ಕೆ ಅಪ್ರತಿಮ ತ್ಯಾಗ ಮತ್ತು ಹೋರಾಟದ ಅಗತ್ಯ ಇದೆ ' ಎಂದು ಅವರು ಹೇಳಿದ್ದರು.
    ಕಲ್ಕತ್ತಾದಲ್ಲಿ ಸರಣಿ ಕ್ರಾಂತಿಕಾರೀ ಚಟುವಟಿಕೆ, ರಾಲಿಗಳು, ಅಸಹಕಾರ ಚಳುವಳಿಗಳು ನಿರಂತರ ನಡೆದಾಗ ಬ್ರಿಟಿಷ್ ಸರಕಾರ ಅವರನ್ನು ಬಂಧಿಸಿ ಸೆರೆಮನೆಗೆ ತಳ್ಳಿತು. ಆಗಲೂ ಗಾಂಧೀಜಿಯವರು ಸುಭಾಸ್ ಬೋಸ್ ಅವರನ್ನು ಕರೆದು ಪ್ರೀತಿಯಿಂದ ಮಾತಾಡಿಸಿದರು.
    ಆಗ ಕೂಡಾ ಬೋಸರು ಹೇಳಿದ್ದು - ಮಹಾತ್ಮ, ನಿಮ್ಮ ದಾರಿ ನಿಮಗೆ. ನನ್ನ ದಾರಿ ನನಗೆ. ನನಗೆ ನಿಮ್ಮ ಬಗ್ಗೆ ಗೌರವವಿದೆ. ನಮ್ಮಿಬ್ಬರ ಗುರಿಯೂ ಒಂದೇ. ಆದರೆ ದಾರಿ ಬೇರೆ ಬೇರೆ!
    ಗಾಂಧೀಜಿಯವರದು ಸಿದ್ಧಾಂತ ವಾದ ಆದರೆ ನೇತಾಜಿಯವರದು ಕ್ರಿಯಾ ವಾದ. ಇಬ್ಬರ ದೇಶಭಕ್ತಿಯೂ ಪ್ರಶ್ನಾತೀತವೇ ಆಗಿತ್ತು.
    ಮುಂದೆ ಸುಭಾಸರು ಕೋಲ್ಕತ್ತಾ ನಗರದ ಮೇಯರ್ ಆಗಿ ಆಯ್ಕೆ ಆದರು. 1923ರಲ್ಲೀ ಅಖಿಲ ಭಾರತ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೂಡ ಆಯ್ಕೆಆದರು. ಆಗೆಲ್ಲವೂ ಸುಭಾಷರನ್ನು ಬ್ರಿಟಿಷ್ ಸರಕಾರವು ಬಂಧಿಸಿ ಹಲವು ಬಾರಿ ಸೆರೆಮನೆಗೆ ಹಾಕಿತು. ಒಮ್ಮೆಯಂತು ಕ್ಷಯ ರೋಗ ಉಲ್ಬಣಿಸಿ ಬದುಕಿದ್ದೆ ಒಂದು ಪವಾಡ!
    1930ರಲ್ಲೀ ಯುರೋಪ್ ಖಂಡದ ಪ್ರವಾಸ ಮಾಡಿ ಅಲ್ಲಿನ ಭಾರತೀಯರನ್ನು ಸಂಘಟನೆ ಮಾಡಿ ಬಂದರು. ಅದೇ ಸಂದರ್ಭದಲ್ಲಿ ವರ್ಚಸ್ವೀ ನಾಯಕ ಮುಸೊಲಿನಿಯ ಭೇಟಿ ಮಾಡಿದರು. ಸುಭಾಸರ ವರ್ಚಸ್ವಿ ವ್ಯಕ್ತಿತ್ವ ಮತ್ತು ನೇರಾ ನೇರವಾದ ಮಾತುಗಳು ಅವರಿಗೆ ಯುರೋಪನಲ್ಲಿ ಭಾರೀ ಹೆಸರು, ಕೀರ್ತಿ ಮತ್ತು ಜನಪ್ರಿಯತೆಯನ್ನು ತಂದು ಕೊಟ್ಟವು.
    1938ರಲ್ಲೀ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಅವರು ಆಯ್ಕೆ ಆದರು. ಆಗ ಅವರಿಗೆ ಕೇವಲ 41 ವರ್ಷ ಪ್ರಾಯ ಆಗಿತ್ತು! ಆಗ ಅವರು ತುರುಸಿನ ಚುನಾವಣೆಯಲ್ಲಿ ಸೋಲಿಸಿದ್ದು ಗಾಂಧೀಜಿಯವರ ಕಟ್ಟಾ ಅನುಯಾಯಿ ಆದ ಪಟ್ಟಾಭಿ ಸೀತಾರಾಮಯ್ಯ ಅವರನ್ನು!
    ಅಂದು ಬೋಸರು ಮಾಡಿದ ಚಾರಿತ್ರಿಕ ಭಾಷಣ ಹೀಗಿತ್ತು.
    ನನ್ನ ಭಾರತಕ್ಕೆ ಸ್ವಾತಂತ್ರ್ಯವು ಕ್ರಾಂತಿ ಮತ್ತು ಸಂಘರ್ಷದ ಮೂಲಕವೇ ಬರುತ್ತದೆ. ಅದನ್ನು ಯಾವ ಪ್ರಬಲ ಶಕ್ತಿಯೂ ತಡೆಯಲು ಸಾಧ್ಯವೇ ಇಲ್ಲ. ಆದರೆ ನಮ್ಮಲ್ಲಿ ಈಗಲೇ ತುಷ್ಟೀಕರಣ ನೀತಿಯು ನುಸುಳಲು ಆರಂಭ ಆಗಿದೆ. ಮುಂದೆ ಭಾರತವು ಸ್ವಾತಂತ್ರ್ಯ ಪಡೆಯುವಾಗ ವಿಭಜನೆ ಆಗುವ ಸಾಧ್ಯತೆ ಇದೆ! ಎಂದಿದ್ದರು.
    ಮುಂದೆ ಅವರ ಮಾತು ಎಷ್ಟೊಂದು ನಿಜ ಆಯ್ತು ನೋಡಿ! ರಾಷ್ಟ್ರೀಯ ಅಧ್ಯಕ್ಷರಾದರೂ ಅವರಿಗೆ ಆಂತರಿಕ ಕಿರುಕುಳ ತಪ್ಪಲಿಲ್ಲ. ಅದರಿಂದ ತುಂಬಾ ನೊಂದುಕೊಂಡ ಬೋಸರು ತಮ್ಮ ಕಾಂಗ್ರೆಸ್ ಪಕ್ಷದ ಅಧ್ಯಕ್ಷನ ಹುದ್ದೆಗೆ ರಾಜೀನಾಮೆ ನೀಡಿ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಎಂಬ ಪಕ್ಷ ಕಟ್ಟಿದರು. ಬಂಗಾಳದ ಮೂಲೆ ಮೂಲೆಯಲ್ಲಿ ಬಿಸಿ ರಕ್ತದ ಯುವಕ ಯುವತಿಯರನ್ನು ದೊಡ್ಡ ಮಟ್ಟದಲ್ಲಿ ಸಂಘಟನೆ ಮಾಡಿ ಹೋರಾಟಕ್ಕೆ ಸಜ್ಜು ಗೊಳಿಸಿದರು.
    ಬ್ರಿಟಿಷ್ ಸರಕಾರವು ಈ ಬಾರಿ ಅವರನ್ನು ಗೃಹ ಬಂಧನ ಮಾಡಿತು. ಆದರೆ ಸಿಂಹವನ್ನು ಗುಹೆಯಲ್ಲಿ ಬಂಧಿಸಿ ಇಡಲು ಸಾಧ್ಯವೇ ಇರಲಿಲ್ಲ! 1941ರಲ್ಲೀ ಅವರು ತನ್ನ ವೇಷವನ್ನು ಮರೆಸಿಕೊಂಡು ಮನೆಯಿಂದ ಹೊರಬಂದರು. ರಶಿಯಾ ಮೂಲಕ ಜರ್ಮನಿಗೆ ಬಂದು ತಲುಪಿದರು. ಹಿಟ್ಲರನನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಹಿಟ್ಲರ್ ಸುಭಾಸರ ವ್ಯಕ್ತಿತ್ವಕ್ಕೆ ಮಾರು ಹೋದರು. ಬ್ರಿಟಿಷ್ ವಿರೋಧಿಗಳನ್ನು ಒಗ್ಗೂಡಿಸುವ ಅವರ ಪ್ರಯತ್ನಕ್ಕೆ ಭಾರೀ ಬೆಂಬಲ ದೊರೆಯಿತು. ಜರ್ಮನಿಯ ಬರ್ಲಿನನಲ್ಲಿ 4,500 ದೇಶಭಕ್ತ ಸೈನಿಕರ ಬಹಳ ದೊಡ್ಡದಾದ ಪಡೆಯನ್ನು ಕಟ್ಟಲು ಅವರಿಗೆ ಸಾಧ್ಯವಾಯಿತು. ಮುಂದೆ ಸುಭಾಸರು ಸಿಂಗಾಪುರ್, ಬರ್ಮಾ, ಜಪಾನ್ ದೇಶಗಳನ್ನು ತಿರುಗಿದರು. ಅಲ್ಲೆಲ್ಲ ಅವರು ಮಾಡಿದ ಐತಿಹಾಸಿಕ ಭಾಷಣದ ಕೊನೆಯ ವಾಕ್ಯ JI
    11 min
  • *50 ರ ಸಮಯದಲ್ಲಿ ಅನಾರೋಗ್ಯ* ಯಾರು ನಿಮ್ಮೊಂದಿಗೆ ಬರುತ್ತಾರೆ
    ಬೆಲೆ ಇಲ್ಲದ, ಭರವಸೆ ಇಲ್ಲದ ನಿಸ್ಸಹಾಯಕ ಭಾವನೆ.
    ಚಕ್ಕಪುಟ್ಟ ವಿಷಯಗಳಿಗೂ ಅಪರಾಧಿ ಭಾವನೆ.
    ಸಾವು ಮತ್ತು ಆತ್ಮಹತ್ಯೆಯ ಬಗ್ಗೆ ಅಸಹಜ ಯೋಚನೆ.
    ಬಹುತೇಕ ಎಲ್ಲ ವಿಷಯಗಳ್ಲೂ ನಿರಾಸಕ್ತಿ ಮತ್ತು ಅಸಂತೋಷ.
    ಸಾಮರ್ಥ್ಯ,ನಿಪುಣತೆ, ಶ್ರೀಮಂತಿಕೆ ಮತ್ತು ರೂಪ-ಇವುಗಳ ಕುರಿತು ಅತಿ ವಿಶ್ವಾಸ ಮತ್ತು ಉಡಾಫೆ.
    ಅತೀವ ಸಾಮರ್ಥ್ಯ ಮತ್ತು ಕಡಿಮೆ ನಿದ್ರೆಯ ಅಗತ್ಯ.
    ಶೀಘ್ರ ಕಿರಿಕಿರಿ ಮತ್ತು ಕೋಪಗೊಳ್ಳುವುದು.
    ಯಾವುದೇ ಪ್ರಚೋದನೆ ಇಲ್ಲದೆ ತೀವ್ರ ಭಾವೋದ್ವೇಗ.
    ಅತಿ ವಿಶ್ವಾಸ ಮತ್ತು ಇತರರಿಗೆ ಹಾನಿ ಮಾಡುವುದು
    ಬಹುತೇಕ ಸಮಯ ಅತಿ ಜಾಗ್ರತೆ ಮತ್ತು ಎಚ್ಚರಿಕೆ.
    ದೈನಂದಿನ ಘಟನೆಗಳ ಬಗ್ಗೆ ಭಯ, ಚಿಂತೆ ಮತ್ತು ಯೋಚನೆ
    ಭಯದಿಂದ ಸಾಮಾನ್ಯ ಚಟುವಟಿಕೆಗಳನ್ನೂ ಮಾಡದಿರುವುದು ( ಬಸ್ಸು ಹಿಡಿಯುವುದು, ಕಿರಾಣಿ ಖರೀದಿ, ಇತ್ಯಾದಿ).
    ಜನರೊಡನೆ ಆರಾಮಾಗಿ ಇರದೆ ಇರುವುದು.
    ಕಡ್ಡಾಯವಾದ ಆಚರಣೆಗಳು ಅಥವಾ ಪುನರಾವರ್ತಿತ ವರ್ತನೆಗಳು.
    ಹಳೆಯ ಘಟನೆಗಳ ಅಸಂಬದ್ಧ ನೆನಪುಗಳು ಅಥವಾ ದುಃಸ್ವಪ್ನಗಳು..
    5 min
  • ಆ ಹಿಡಿತದಲ್ಲಿ ಸ್ನೇಹ, ನಂಬಿಕೆ, ಆಶ್ರಯ, ಧೈರ್ಯ, ಆತ್ಮವಿಶ್ವಾಸ ಎಲ್ಲವೂ ಅಡಗಿತ್ತು....
    *🌻 ದಿನಕ್ಕೊಂದು ಕಥೆ🌻 1000 ರುಪಾಯಿ ಕೊಡುವಿರಾ ಟೀಚರ್?*
    ಕ್ಲಾಸಿನಲ್ಲಿ ಅತಿ ಹೆಚ್ಚು ರಜೆ ಮಾಡುವ ಹುಡುಗ...
    ಈ ಹುಡುಗ ನನ್ನತ್ರ ಯಾಕೆ ದುಡ್ಡು ಕೇಳುತ್ತಿದ್ದಾನೆ..? ಆ ಟೀಚರ್ ಮನಸಲ್ಲಿ ಕೇಳಿಕೊಂಡರು.
    ಕೊಡಬೇಡಿ ಟೀಚರ್... ಮತ್ತೆ ಅವನು ಕ್ಲಾಸಿಗೂ ಬರಲ್ಲಾ... ನಿಮ್ಮ ಹಣವನ್ನೂ ಕೊಡಲ್ಲ...
    ಆ ಹುಡುಗ ಶಾಂತಾ ಟೀಚರತ್ರ ದುಡ್ಡು ಕೇಳುತ್ತಿರುವುದನ್ನು ಕೇಳಿಸಿಕೊಂಡ ಆಶಾ ಟೀಚರ್ ಹೇಳಿದರು.
    ಖಂಡಿತವಾಗಿಯೂ ವಾಪಾಸ್ ಕೊಡುವೆ ಟೀಚರ್. ಬೇರೆ ಯಾರೂ ಸಹಾಯ ಮಾಡಲಿಲ್ಲ ಟೀಚರ್. ಆ ಹುಡುಗ ಪುನಃ ಬೇಡಿದ.
    ಯಾಕೆ ಅಂತ ಕೂಡಾಕೇಳದೆ ಶಾಂತಾ ಟೀಚರ್ ಬ್ಯಾಗ್ ನಿಂದ ಸಾವಿರ ರುಪಾಯಿಗಳನ್ನು ತೆಗೆದು ಕೊಟ್ಟರು.
    ಖಂಡಿತವಾಗಿಯೂ ಈ ಹಣ ವಾಪಸ್ ಕೊಡುತ್ತೇನೆ ಟೀಚರ್ ಅಂತ ಹೇಳಿ ಆ ಹುಡುಗ ಓಡಿ ಮರೆಯಾದ.
    ಕೆಲವು ದಿನಗಳು ಕಳೆದವು. ಆ ಹುಡುಗ ಕ್ಲಾಸಿಗೆ ಬರಲೇ ಇಲ್ಲ.
    ಶಾಂತ ಟೀಚರ್ ಯೋಚಿಸಿದರು.
    ಆ ಹುಡುಗ ನನಗೆ ಮೋಸ ಮಾಡಿದನೇ? ಯಾಕೆ ಅಂತಾದರೂ ಕೇಳಿ ದುಡ್ಡು ಕೊಡಬಹುದಿತ್ತು..
    ಹೋಗಲಿ ಪರವಾಗಿಲ್ಲ... ಆಕೆ ಸ್ವತಃ ಹೇಳಿಕೊಂಡರು.
    ಒಂದು ದಿನ ಶಾಂತಾ ಟೀಚರ್ ಮಾರ್ಕೆಟ್ ನಲ್ಲಿ ಆ ಹುಡುಗನನ್ನು ನೋಡಿದರು. ಹೊರೆ ಹೋರುವ ಕೆಲಸ ಮಾಡುತ್ತಿದ್ದ. ಟೀಚರನ್ನು ನೋಡಿದ ಕೂಡಲೆ ಮುಗುಳ್ನಗುತ್ತಾ ಟೀಚರ್ ನ ಹತ್ತಿರ ಬಂದ.
    ಟೀಚರ್ ಯಾಕೆ ಇಲ್ಲಿ ಬಂದಿದ್ದು? ನನ್ನನ್ನು ಹುಡುಕುತ್ತಾ ಹೊರಟಿದ್ದೀರಾ ಹೇಗೆ? ನಾಳೆ ಒಂದು ದಿನ ಕೂಡಾ ಕೆಲಸ ಮಾಡಿದರೆ ನಿಮ್ಮ ಹಣವನ್ನು ಕೊಡುವೆ. ತಡವಾಗಿದ್ದಕ್ಕೆ ಕ್ಷಮಿಸಿ.
    ಏನು ಹೇಳಬೇಕೆಂದು ತೋಚದೆ ಟೀಚರ್ ಹಾಗೇ ನಿಂತುಬಿಟ್ಟರು.
    ಆ ಹುಡುಗನ ಹೆಸರು ರಾಜು.
    ಸ್ವಲ್ಪ ಹೊತ್ತಿನ ಮೌನದ ಬಳಿಕ ಟೀಚರ್ ಕೇಳಿದರು - ಯಾಕೆ ರಾಜು ಶಾಲೆಗೆ ಬರುತ್ತಾ ಇಲ್ಲ?
    ರಾಜು - ಇನ್ನು ಬರಲ್ಲಾ ಟೀಚರ್. ಮನೆಯಲ್ಲಿ ಅಕ್ಕ ಒಬ್ಬಳೇ ಇರೋದು. ಅವತ್ತು ಅಮ್ಮನಿಗೆ ಸೌಖ್ಯವಿಲ್ಲದ ಕಾರಣ ಟೀಚರ್ ನಿಂದ ಹಣ ಪಡೆದದ್ದು. ಆದರೆ... ಅಮ್ಮ ನಮ್ಮನ್ನು ಅಗಲಿದರು. ಆಕೆ ಬದುಕಬಹುದೆಂಬ ಚಿಕ್ಕ ಆಸೆಯಿತ್ತು.. ಹಲವರತ್ರ ಅಮ್ಮನಿಗೆ ಔಷಧ ತರಲು ದುಡ್ಡನ್ನು ಸಾಲ ಕೇಳಿದೆ.. ಎಲ್ಲೂ ಸಿಗದಾದಾಗ ಬೇರೆ ದಾರಿ ಕಾಣದೆ ಟೀಚರ್ ಬಳಿ ಬಂದು ಹಣ ಪಡೆದು ಅಮ್ಮನನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ನಮ್ಮನ್ನು ಬಿಟ್ಟು ಹೊರಟೋದರು...
    ಹೇಳುವಾಗ ರಾಜುವಿನ ಕಂಠ ಗದ್ಗರಿಸಿತು... ರಾಜು ಮುಂದುವರಿಸುತ್ತಾ ಹೇಳಿದ. ಒಂದು ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ ಟೀಚರ್. ಅಕ್ಕನನ್ನು ಚೆನ್ನಾಗಿ ನೋಡಿಕೊಳ್ಳಬೇಕು.... ಅಲ್ಲಿ ಸಿಗುವ ಸಂಬಳದ ಜೊತೆಗೆ ಹೀಗೆ ಹೊರೆಹೋರುವ ಕೆಲಸದಲ್ಲೂ ಒಂದಿಷ್ಟು ದುಡ್ಡು ಖರ್ಚಿಗೆ ಅಂತ ಸಿಗುತ್ತಿದೆ... ಹೇಗಾದರೂ ಬದುಕಬೇಕಲ್ಲ ಟೀಚರ್...
    ಟೀಚರ್ - ರಾಜು ನೀನು ಕಲಿಯಬೇಕು.
    ಆತ ಆಶ್ಚರ್ಯ ದಿಂದ ಇನ್ನು ಅದೆಲ್ಲ ಆಗಲ್ಲ ಟೀಚರ್...
    ಟೀಚರ್ - ಯಾಕೆ ಆಗಲ್ಲ ರಾಜು ? ಆಗಬೇಕು. ನೀನು ನಾಳೆ ಸಂಜೆ ಮನೆಗೆ ಬರಬೇಕು. ನೀನು ಮಿಸ್ ಮಾಡಿಕೊಂಡ ಪಾಠಗಳನ್ನು ನಾನು ಹೇಳಿಕೊಡುತ್ತೇನೆ... ನಿನಗೆ ಕಲಿಯಲು ಒಳ್ಳೆಯ ಬುದ್ದಿ ಇದೆ. ಸ್ವಲ್ಪ ನಿನ್ನ ಮನಸಿನ ಒತ್ತಡವನ್ನೆಲ್ಲಾ ಕಡಿಮೆ ಮಾಡಿ ಕಲಿಯಬೇಕು. ಒಳ್ಳೆಯ ಮಾರ್ಕ್ ಗಳಿಸಿ ಪಾಸಾಗಬೇಕು.
    ಅಷ್ಟು ಹೇಳಿ ರಾಜುವಿನ ರಿಪ್ಲೈ ಗೆ ಕಾಯದೆ ಟೀಚರ್ ನಡೆದು ಸಾಗಿದರು..
    ಮರುದಿನ ಸಂಜೆ ರಾಜು ತನಗೆ ಸಿಕ್ಕಿದ ಸಂಬಳದೊಂದಿಗೆ ಟೀಚರ್ ನ ಮನೆ ತಲುಪಿದ‌.
    ರಾಜು ಟೀಚರಿಗೆ ಸಾವಿರ ರುಪಾಯಿಗಳನ್ನು ಮೊದಲು ಕೊಡಲು ಲೆಕ್ಕ ಮಾಡುತ್ತಿರುವಾಗ ಟೀಚರ್ ತಡೆದು ಇದು ಈಗ ನಿನ್ನತ್ರ ಇರಲಿ. ನಾನು ಮತ್ತೆ ನಿನ್ನಿಂದ ಕೇಳಿ ಪಡೆಯುವೆ ಅಂದರು.
    ರಾಜು - ಟೀಚರ್ ನನಗೋಸ್ಕರ ಯಾಕೆ ಕಷ್ಟಪಡುತ್ತಿದ್ದೀರಾ...? ನಾನು ನನ್ನ ಕೆಲಸದಲ್ಲಿ ಹೊಂದಿಕೊಂಳ್ಳುತ್ತಿದ್ದೇನೆ..
    ಟೀಚರ್ - ನನಗೆ ಕಷ್ಟವಾ..?? ಹಾಗಂತ ಯಾರು ಹೇಳಿದ್ದು?? ಜ್ಞಾನವನ್ನು ಹಂಚಿಕೊಡುವುದು ಒಬ್ಬ ಗುರುವಿನ ಕರ್ತವ್ಯವಾಗಿದೆ... ನೋಡು ರಾಜು ನೀನು ಹಾಗೇನೂ ಚಿಂತಿಸಬಾರದು. ಕಲಿತು ಒಳ್ಳೆಯ ನೆಲೆಯನ್ನು ಕಂಡುಕೊಳ್ಳಬೇಕು...
    ರಾಜು - ಆಸೆಯಿದೆ ಟೀಚರ್... ಆದರೆ , ನನ್ನ ಅವಸ್ಥೆ.... ಅದಕಾರಣವೇ ಕಲಿಕೆ ಬೇಡ ಅಂತ ನಿರ್ಧರಿಸಿರೋದು... ಈಗ ತಾವು ಹೇಳುವಾಗ ಏನೋ ಒಂದು ಭರವಸೆ ಮೂಡುತ್ತಿದೆ.. ಯಾರಾದರೂ ನನಗೆ ಸಹಾಯ ಮಾಡಿಯಾರು ಅಂತ ಅನಿಸುತ್ತಿದೆ...
    ಟೀಚರ್ - ನಿನ್ನಿಂದ ಖಂಡಿತವಾಗಿಯೂ ಸಾಧ್ಯ. ನಿನ್ನ ಮೇಲೆ ನನಗೆ ನಂಬಿಕೆಯಿದೆ. ಕಲಿತು ಒಳ್ಳೆಯ ಮಾರ್ಕ್ ನೊಂದಿಗೆ ಪಾಸಾಗಿ, ಜೀವನದಲ್ಲಿ ಒಳ್ಳೆಯ ನೆಲೆಯನ್ನು ಕಂಡುಕೊಳ್ಳಬೇಕು. ಅದುವೇ ನೀನು ನನಗೆ ಕೊಡುವ ಗುರುದಕ್ಷಿಣೆ....
    ಹಾಗೇ ರಾಜು ಕಲಿಯಲಾರಂಬಿಸಿದ.. ಬಹಳ ಬೇಗನೇ ಒಂದು ಛಲದೊಂದಿಗೆ ಪಾಠಗಳನ್ನು ಅರ್ಥಮಾಡಿಕೊಂಡು, ಪರೀಕ್ಷೆಯಲ್ಲಿ ಉಳಿದ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಕ್ಲಾಸಿನಲ್ಲಿ ಮೊದಲ ಸ್ಥಾನವನ್ನು ಗಿಟ್ಟಿಸಿಕೊಂಡ... ಶಾಂತಾ ಟೀಚರ್ ನ ಪ್ರೀತಿಯ ಶಿಷ್ಯನಾಗಿ ಬದಲಾದ.. ರಾಜುವಿಗೆ ಶಾಂತಾ ಟೀಚರ್ ಕೇವಲ ಟೀಚರ್ ಆಗಿರಲಿಲ್ಲ... ಅಮ್ಮನೂ ಆಗಿದ್ದರು.
    ಹೀಗಿರುವಾಗ ಟೀಚರ್ ನ ಪತಿ ವಿದೇಶದಲ್ಲಿದ್ದು ಪತಿಯ ಒತ್ತಾಯದ ಮೇರೆಗೆ ಶಾಂತಾಟೀಚರ್ ಮತ್ತು ಮಕ್ಕಳು ವಿದೇಶಕ್ಕೆ ಹೋಗಲು ನಿರ್ಧರಿಸಿದರು.
    ವಿಷಯ ತಿಳಿದ ರಾಜು ಟೀಚರ್ ನ ಮನೆಗೆ ಓಡೋಡಿ ಬಂದ.
    ರಾಜು - ಟೀಚರ್... ತಾವು ಕೂಡಾ ನನ್ನನ್ನು ಒಂಟಿಯಾಗಿಸಿ ಹೊರಟಿದ್ದೀರಾ...? ರಾಜುವಿನ ಕಣ್ಣುಗಳು ತುಂಬಿತು...
    ಟೀಚರ್ - ಹೋಗಲೇಬೇಕಾದ ಅನಿವಾರ್ಯತೆ ಇದೆ ರಾಜೂ. ನೀನು ಯಾವತ್ತೂ ಒಂಟಿಯಾಗಲಾರ... ನನ್ನ ಪ್ರಾರ್ಥನೆ ಎಂದೆಂದಿಗೂ ನಿನ್ನ ಜೊತೆ ಇರುತ್ತದೆ. ಚೆನ್ನಾಗಿ ಕಲಿಯಬೇಕು ಆಯಿತಾ... ಶಾಂತಾ ಟೀಚರಿನ ದುಃಖದ ಕಟ್ಟೆ ಒಡೆಯಿತು. ಬೇರೇನೂ ರಾಜುವಿನತ್ರ ಹೇಳಲು ಟೀಚರಿಗೆ ಇರಲಿಲ್ಲ.
    ರಾಜುವಿನ ಮನೆಯ ಖರ್ಚು ಮತ್ತು ವಿದ್ಯಾಭ್ಯಾಸದ ಖರ್ಚುಗಳಿಗಾಗಿ ಟೀಚರ್ ತನ್ನ ಗೆಳತಿಯೊಬ್ಬಳ ಹತ್ತಿರ ಒಂದಿಷ್ಟು ದುಡ್ಡನ್ನು ಕೊಟ್ಟು ಹೋಗಿದ್ದರು..
    ಕಾಲಚಕ್ರವು ಉರುಳಿತು. ಶಾಂತಾ ಟೀಚರ್ ನ ಪತಿಯ ವಿಯೋಗವು ಟೀಚರ್ ನ ಬದುಕಿನಲ್ಲಿ ದೊಡ್ಡ ಬಿರುಗಾಳಿಯನ್ನೇ ಸೃಷ್ಟಿಮಾಡಿತು...
    ಕಷ್ಟಗಳು ಏನೆಂದು ಅರಿಯದೆ ಬದುಕಿದ ತನ್ನ ಮಕ್ಕಳಿಗೆ ಟೀಚರ್ ....
    10 min

About Dr Balakrishna Maddodi

From the publisher's feed

Hi