Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • ಮೊದಲ ನವರಾತ್ರಿಯಲ್ಲಿ ಹೊಸ್ತ್ ನ ಸಂಭ್ರಮ ಆಚರಣೆ ಹಳೆಯದಾದರೂ ಇದಕ್ಕೆ ಹೇಳುವುದು ಹೊಸ್ತ್..!!
    ನವರಾತ್ರಿಯ ಮೊದಲನೇ ದಿನ ಅಥವಾ ಅನಂತ ಚತುರ್ದಶಿಯಂದು ಕೃಷಿಕ ಸಮುದಾಯದ ಜನ ಆಗತಾನೆ ಬೆಳೆಯುತ್ತಿರುವ ಪೈರನ್ನು (ಕದಿರು) ಕೊಯ್ದು, ಪೂಜಿಸಿ, ಶ್ರದ್ಧೆಯಿಂದ ಆಚರಿಸುವ ಹಬ್ಬ ಹೊಸ್ತು. ಮನೆಯ ಪರಿಸರ ಮುಂತಾದವುಗಳನ್ನು ಸ್ವಚ್ಛವಾಗಿಸಿಕೊಳ್ಳುವ, ನಿತ್ಯದ ಬದುಕಿಗೊಂದು ಹೊಸ ಆಯಾಮವನ್ನು ನೀಡಿ ವರ್ಷದ ಹೊಸ ಬೆಳೆಯನ್ನು ಸಂಭ್ರಮದಿಂದ ಒಳಕರೆದುಕೊಳ್ಳುವ ಪ್ರಕ್ರಿಯೆ.
    ಐದು ಹಿಡಿ ಕದಿರನ್ನು ಕೊಯ್ದಿಟ್ಟು ಹಾಲೆರೆದು ನಮಸ್ಕರಿಸಿ ಪೂಜಿಸಿದ ಬಳಿಕ ಪಕ್ಕದ ಐದು ಗದ್ದೆಗಳಿಂದ ಸ್ವಲ್ಪವೇ ಕದಿರನ್ನು ಕೊಯ್ದು ತಲೆಯ ಮೇಲೆ ಹೊತ್ತುಕೊಂಡು ಎಲ್ಲರೂ ಹಿಂತಿರುಗಿ ನೋಡದೆ ಜಾಗಟೆಯ ಸದ್ದಿನೊಂದಿಗೆ ಮನೆಯತ್ತ ಧಾವಿಸುವ ರೀತಿ; ಮನೆಯಂಗಳಕ್ಕೆ ಬರುತ್ತಿದ್ದಂತೆಯೇ ಮನೆಯೊಡತಿ ಕದಿರು ಹೊತ್ತು ತಂದವರ ಕಾಲು ತೊಳೆದು, ಆರತಿ ಬೆಳಗಿ ಬರಮಾಡಿಕೊಳ್ಳುವ ಸೊಬಗು; ಹೊತ್ತು ತಂದ ಕದಿರನ್ನು ಮೇಟಿ ಕಂಬದ ಬಳಿ ಇರಿಸಿ ಪೂಜಿಸಿ ಹಲಸಿನ ಎಲೆ, ಮಾವಿನ ಎಲೆ, ತುಂಬಿ ಹೂ ಹಾಗೂ ಕದಿರನ್ನು ಸೇರಿಸಿ ನಾರಿನಿಂದ ಬಿಗಿದು ಮೇಟಿಗೆ ಕಟ್ಟಿದ ಬಳಿಕ ತುಳಸಿ, ಬಾಗಿಲು, ನೇಗಿಲು, ಮರ, ಅನ್ನದ ಪಾತ್ರೆ ಮುಂತಾದ ವಸ್ತುಗಳಿಗೂ ಕದಿರನ್ನು ಕಟ್ಟುವ ಪರಿ ಇವೆಲ್ಲವೂ ಕೃಷಿಕನೊರ್ವನ ಪ್ರಕೃತಿ ಹಾಗೂ ತಾನು ಬಳಸುವ ಪರಿಕರಗಳೊಂದಿಗಿನ ನಂಟನ್ನು ಏಳೆ ಏಳೆಯಾಗಿ ತೆರೆದಿಡುತ್ತದೆ. ಹೊಸ್ತು ಊಟಮಾಡುವೆನೆಂದು ಹೇಳಿ ಊಟ ಮಾಡುವುದು ಈ ದಿನದ ವಿಶೇಷಗಳಲ್ಲೊಂದು. ಮುಳ್ಳುಸೌತೆ, ತೆಂಗಿನಕಾಯಿಗಳನ್ನು ತುರಿದು ಅದಕ್ಕೆ ಇಪ್ಪತ್ತೊಂದು ಹೊಸ ಭತ್ತದ ಕಾಳುಗಳನ್ನು ಸುಲಿದು ಹಾಕಿ, ಸಕ್ಕರೆ, ಬಾಳೆಹಣ್ಣು, ಮೊಸರಿನೊಂದಿಗೆ ಕಲಿಸಿದ ಖಾದ್ಯವನ್ನು ಅರಶಿಣದ ಎಲೆಯಲ್ಲಿಟ್ಟು ದೇವರಿಗೆ ಅರ್ಪಿಸಿದ ಬಳಿಕ ಮನೆಮಂದಿಯಲ್ಲಿ ಒಟ್ಟು ಕುಳಿತು ಕಿರಿಯರಿಂದ ಹಿರಿಯರವರೆಗೂ ಪ್ರತಿಯೊಬ್ಬರೂ ಪ್ರತಿಯೊಬ್ಬರನ್ನು ಕರೆದು ಹೊಸ್ತು ಊಟಮಾಡುತ್ತೇನೆಂದು ಹೇಳಿಯೇ ಊಟ ಮಾಡುತ್ತಾರೆ. ಬಳಿಕ ಎಲೆಯಡಿಕೆ ತಿಂದು ಬಾಯಿ ಕೆಂಪಾಗಿಸಿಕೊಳ್ಳುವುದು ವಾಡಿಕೆ.
    ಹೀಗೆ ನಿಸರ್ಗದಿಂದ ದೊರೆಯುವ ಆಹಾರ ವಸ್ತುಗಳನ್ನು ಪೂಜಿಸಿ ಸ್ವಾಗತಿಸಿಕೊಳ್ಳುವ ಈ ಹಬ್ಬಕ್ಕೆ ಸಾಂಪ್ರದಾಯಿಕ ನೆಲಗಟ್ಟಿದೆ. ಸಂಬಂಧಗಳನ್ನು ಬಲ ಪಡಿಸುವ ಸಾಮಾಜಿಕ ಕಳಕಳಿಯು ಬೆರೆತಿದೆ. ಖಂಡಿತವಾಗಿಯೂ ಹೊಸ್ತು ಬದುಕಿನಲ್ಲೊಂದು ಹೊಸತನವನ್ನು ತುಂಬಲಿದೆ ಎನ್ನುವುದು ದಿಟ. ಅಂದಾಂಗೆ ನಾನ್ ಹೊಸ್ತ್ ಉಣ್ತೆ ಅಕಾ..
    7 min
  • *ಶಿಕ್ಷಕರ ದಿನಾಚರಣೆ 2022: ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ 18 ಸ್ಪೂರ್ತಿದಾಯಕ ವಾಕ್ಯಗಳು.*
    Hಡಾ,ಸರ್ವಪಲ್ಲಿ ರಾಧಾಕೃಷ್ಣನ್ ಕುರಿತಾದ ಆಸಕ್ತಿದಾಯಕ ಸಂಗತಿಗಳು
    Teachers Day 2022 : ಡಾ,ಸರ್ವಪಲ್ಲಿ ರಾಧಾಕೃಷ್ಣನ್ ಕುರಿತಾದ ಆಸಕ್ತಿದಾಯಕ ಸಂಗತಿಗಳು
    By Kavya
    Updated: Friday, September 2, 2022, 12:52 [IST]
    Advertisement
    ಡಾ ಸರ್ವಪಲ್ಲಿ ರಾಧಾಕೃಷ್ಣನ್: 1954 ರಲ್ಲಿ ಭಾರತ ಸರ್ಕಾರವು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನವನ್ನು ನೀಡಿ ಗೌರವಿಸಿತು. 1963 ರಲ್ಲಿ ಆರ್ಡರ್ ಆಫ್ ಮೆರಿಟ್ ಮತ್ತು 1975 ರಲ್ಲಿ ಟೆಂಪಲ್ಟನ್ ಪ್ರಶಸ್ತಿಯನ್ನು ಪಡೆದರು. ಸ್ವಾತಂತ್ರ್ಯ ಪಡೆಯುವ ಮೊದಲು ಅವರನ್ನು ಸರ್ ಸರ್ವಪಲ್ಲಿ ರಾಧಾಕೃಷ್ಣನ್ ಎಂದು ಸಂಬೋಧಿಸಲಾಗುತ್ತಿತ್ತು ಮತ್ತು ಸ್ವಾತಂತ್ರ್ಯದ ನಂತರ ಅವರನ್ನು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಎಂದು ಕರೆಯಲಾಯಿತು.
    Teachers Day : Interesting Facts About Dr Sarvepalli Radhakrishnan In Kannada
    "ನಮಗೆ ತಿಳಿದಿದೆ ಎಂದು ನಾವು ಭಾವಿಸಿದಾಗ, ನಾವು ಕಲಿಯುವುದನ್ನು ನಿಲ್ಲಿಸುತ್ತೇವೆ" ಎಂಬ ಪ್ರಸಿದ್ಧ ಮಾತನ್ನು ನಾವು ಹಲವಾರು ಬಾರಿ ಕೇಳಿದ್ದೇವೆ. ಈ ರೀತಿಯ ಪದಗಳು ಯಾವಾಗಲೂ ಜೀವನದ ಪ್ರತಿಯೊಂದು ಹಂತದಲ್ಲೂ ಉನ್ನತ ಕಲಿಕೆಯನ್ನು ಮಾಡಲು ನಮ್ಮನ್ನು ಪ್ರೇರೇಪಿಸುತ್ತವೆ, ಏಕೆಂದರೆ ಕಲಿಕೆಯು ಜೀವಿತಾವಧಿಯ ಪ್ರಕ್ರಿಯೆಯಾಗಿದೆ. ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರಂತಹ ಸರ್ವಶ್ರೇಷ್ಠ ಶಿಕ್ಷಕರಿದ್ದರೆ ನಮ್ಮೊಳಗಿನ ವಿದ್ಯಾರ್ಥಿ ಎಂದಿಗೂ ಸೋಲುವುದಿಲ್ಲ.
    8 min
  • *ಗಣೇಶ ಚತುರ್ಥಿಯ ಹಬ್ಬದ ಆಧ್ಯಾತ್ಹ್ಮಿಕ ರಹಸ್ಯವೇನು*
    ಇಂದು ಭಾರತ ದೇಶದಲ್ಲಿ ಗಣೇಶ ಚತುರ್ಥಿಯ ಹಬ್ಬ್ಬವನ್ನು ಬಹಳ ವಿಜೃಂಭಣೆಯಿಂದ ಮತ್ತು ಹರ್ಷೋಲ್ಲಾಸದಿಂದ ಆಚರಣೆ  ಮಾಡುತ್ತಾರೆ ಪ್ರತಿಯೊಂದು ಊರಿನಲ್ಲೂ ಪ್ರತಿಯೊಂದು ಮನೆಗಳಲ್ಲಿ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ .ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಕೂಡ ಆಚರಣೆ  ಮಾಡುತ್ತಾರೆ. ಆದರೆ ಈ ಎನ್ನುವ ವಿಷಯವನ್ನು ತಿಳಿಯುವ ಅವಶ್ಯಕತೆ ಇದೆ .
    ಗಣೇಶನಿಗೆ ಬುದ್ದಿಯ ದೇವತೆ ಎಂದು ಹೇಳಲಾಗುತ್ತದೆ ಅರ್ಥತ್ ಯಾರ ಹತ್ತಿರ ಆಧ್ಯಾತ್ಹ್ಮಿಕ ಶಕ್ತಿಯಿದೆ. ಅದಕ್ಕೊಸ್ಕರನೇ ಕಥೆಗಳಲ್ಲಿ ಹೇಳಲಾಗಿದೆ  ಮಹರ್ಷಿ ವೇದ ವ್ಯಾಸರು ಯಾವಾಗ ಮಹಾಭಾರತ ಗ್ರಂಥವನ್ನು ಬರೆಯಬೇಕಾಯಿತು   ಆಗ ಗಣೇಶನ ಆಹ್ವಾನ ಮಾಡಿದರು ಎಂದು .ಮಹಾಭಾರತ  ಗ್ರಂಥದ ಒಂದು ಶ್ಲೋಕದಲ್ಲಿ  ಬರೆಯಲಾಗಿದೆ ಹೇ ಗಣನಾಯಕನೇ ನೀವು ನನ್ನ್ನ ಲೇಖಕರಾಗಿ ಈ ಗ್ರಂಥವನ್ನು ನಾನು  ನನ್ನ ಮನಸ್ಸಿನ ಅತ್ಯುನ್ನತ ಸ್ಥಿತಿ ,ಸಮಾಧಿ ಸ್ಥಿತಿಯಲ್ಲಿ ಪ್ರಾಪ್ತವಾಗಿರುವಂಥಹ ಮಾತುಗಳನ್ನು ಪ್ರಕಟ ಮಾಡುತ್ತೇನೆ .ಅದು ನನ್ನ ಮನಸ್ಸಿನ ಕಲ್ಪನೆಯಾಗಿದೆ .ಯಾವಾಗ ಅವರು ಗಣೇಶನ ಆಹ್ವಾನ ಮಾಡುತ್ತಾರೆ ಅವರಿಗೆ ತಿಳಿದಿದೆ ಇವರಂತಹ ಉತ್ತಮ ಲೇಖಕರು ಮತ್ತೊಬ್ಬರಿಲ್ಲ .ಏಕೆಂದರೆ ತನ್ನ ಮನಸ್ಸಿನ ಪ್ರತಿಯೊಂದು ಭಾವಾರ್ಥವನ್ನು ಅರಿತು ಈ ಗ್ರಂಥವನ್ನು ಬರೆಯಬೇಕಾಗಿದೆ .ನಿರ್ವಿಗ್ನ ಸ್ಥಿತಿಯಲ್ಲಿದ್ದು ಈ ಕಾರ್ಯವನ್ನು ಮಾಡಬೇಕಾಗಿದೆ .ವ್ಯಾಸರು ಸ್ಪಷ್ಟ್ವವಾಗಿ ಹೇಳುತ್ತಾರೆ ಈ ಮಹಾಭಾರತ ಗ್ರಂಥವು ನನ್ನ ಮನಸ್ಸಿನ ಕಲ್ಪನೆಯಾ ಮುಖಾಂತರ ತಿಳಿಸಲು ಪ್ರಯತ್ನಿಸುತ್ತೇನೆ ಎಂದು.ಅರ್ಥತ್ ಯಾವುದೇ ಒಂದು ಮಗುವಿಗೆ ಶಿಕ್ಷಣವನ್ನು ಕೊಡಬೇಕಾದರೆ ಜೀವನದಲ್ಲಿ ಸುಳ್ಳು ಹೇಳಬಾರದು ಸತ್ಯವನ್ನೇ ಹೇಳಬೇಕು ಇದರ ಜ್ಞಾನ ಇದೆ ಆಗಿದೆ ಒಂದು ವೇಳೆ  ಇದನ್ನುಸಹಜವಾಗಿ ಉಪದೇಶ ಮಾಡಿದಲ್ಲಿ ಇದು ಮಗುವಿಗೆ ಅರ್ಥ ಆಗದೆ ಇರಬಹುದು ಆದರೆ ಒಂದು ವೇಳೆ ಮನಸ್ಸಿನ ಕಲ್ಪನೆಯಿಂದ ಕಥೆಯ ರೀತಿಯಲ್ಲಿ ತಿಳಿಸಿ ಅದರಲ್ಲಿ ಒಂದು ಸತ್ಯತೆಯ ಪಾತ್ರ ,ಒಂದು ಸುಳ್ಳಿನ ಪಾತ್ರ ಇದ್ದಾಗ ಇದರ ಮೂಲಕ ಮೌಲ್ಯವನ್ನು ತಿಳಿಸಿದಾಗ ಅರ್ಥತ್  ಅದು ಸಹಜವಾಗಿ ಅರ್ಥವಾಗಲು ಸಾಧ್ಯವಿದೆ ಅರ್ಥಾತ್ ಸತ್ಯತೆಯ ವಿಷಯದಲ್ಲಿ ಎಷ್ಟೇ ದೊಡ್ಡ ವಿಗ್ನಗಳು ಬಂದರು ಕೂಡ ಅಂತಿಮದಲ್ಲಿ ಸತ್ಯತೆಯ ವಿಜಯವಾಗಿ ಸುಳ್ಳಿನ ಸೋಲಾಗುತ್ತದೆ ,ಸುಳ್ಳು ನೋಡುವುದಕ್ಕೆ ಸರಳವಾಗಿ ಕಂಡರೂ ಸುಳ್ಳಿನ ವಿಜಯವಾಗಲು ಎಂದಿಗೂ ಸಾಧ್ಯವಿಲ್ಲ. ಸತ್ಯತೆಯ ಆ ಸಂಧರ್ಭದಲ್ಲಿ ಆನೇಕ ವಿಗ್ನಗಳು ಕೂಡಿರುವತೆ ಕಂಡರೂ ಅಂತಿಮದಲ್ಲಿ ಸತ್ಯತೆಯ ವಿಜಯ ನಿಶ್ಚಿತವಾಗಿದೆ .ಇದಕ್ಕೆ ಹೇಳಲಾಗುತ್ತದೆ ಸ್ಸಥ್ಯತೆಯ ದೋಣಿ ಅಲುಗಾಡಬಹುದು ಆದರೆ ಮುಳುಗಲು ಸಾಧ್ಯವಿಲ್ಲ ಎಂದು.
    ಗಣೇಶನಿಗೆ ಕೇವಲಪೂಜೆ ಮಾಡುವುದರಿಂದ ವಿಗ್ನಗಳು ವಿನಾಶವಾಗಲು ಸಾಧ್ಯವಿಲ್ಲ ವಿಗ್ನಗಳಿಗೆ ನಮ್ಮಲ್ಲಿ ಅಡಗಿರುವ ಮನೋವಿಕಾರಗಳೇ ಕಾರಣ ಇದಕ್ಕಾಗಿ ನಾವು ಗಣೇಶನ ಜೀವನದ ಅನೇಕ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುವುದರ ಅವಶ್ಯಕತೆ ಇದೆ .
    ಗಣೇಶನಿಗೆ ಮೊದಲ ಪೂಜೆ ಇದರ ಅರ್ಥ ಯಾವುದೇ ಕೆಲಸವನ್ನು ನಾವು ಶ್ರೇಷ್ಠ ವಿಚಾರಗಳಿಂದ್ ಮತ್ತು ಸಾಕಾರರಾತ್ಮಕ ಚಿಂತನೆಯಿಂದ ,ಆದಿ ಮದ್ಯ ಅಂತ್ಯ ಮೂರು ಕಾಲದ ಜ್ಞಾನದ ಅರಿವಿನಿಂದ ಮಾಡಿದಲ್ಲಿ ಯಾವುದೇ ಕೆಲಸದಲ್ಲಿ ಸಫಲತೆಯನ್ನು ಪಡೆಯಲು ಸಾಧ್ಯವಿದೆ .ಇದಕ್ಕೆ ಭಗವದ್ಗೀತೆಯಲ್ಲಿ "ಏನು ಆಯಿತು ಒಳ್ಳೆಯದೇ ಆಯಿತು,ಏನು ಆಗತ್ತದೆ ಒಳ್ಳೆಯದೇ ,ಯಾವುದಾಗುವುದಿದೆ ಒಳ್ಳೆಯದೇ" , ಗಣೇಶನ ಬಗ್ಗೆ ಶಾಸ್ತ್ರಗಲ್ಲಿ ನಾವು ಅನೇಕ ಕಥೆಗಳನ್ನು ಕೇಳುತ್ತಾ ಬಂದಿದ್ದೇವೆ ಆದರೇ ಗಣೇಶ ಚತುರ್ಥಿಯ ಇಂದು  ನಿಜವಾದ ಆಧ್ಯಾತ್ಹ್ಮಿಕ ರಹಸ್ಯವನ್ನು ತಿಳಿಯುವುದರ ಅವಶ್ಯಕತೆಯಿದೆ .ಗಣೇಶನಿಗೆ ಆನೆಯ ತಲೆ,ಕಿವಿ,ಸೊಂಡಿಲು,ದಂಥ ಇತ್ಯಾದಿ ತೋರಿಸಿದ್ದಾರೆ ಇದರ ಹಿಂದಿನ ರಹಸ್ಯವನ್ನು ತಿಳಿತಲ್ಲಿ ನಾವು ಕೂಡ ನಮ್ಮ ಜೀವನದಲ್ಲಿ  ಗಣೇಶನ ರೀತಿಯಲ್ಲಿ ನಿರ್ವಿಘ್ನವಾಗಿ ಸಫಲತೆಯನ್ನು ಪಡೆಯಲು ಸಾಧ್ಯವಿದೆ.ನಾವು ಸಾಮಾನ್ಯವಾಗಿ ನೋಡುವುದಾದರೆ ಒಂದು ಮಗುವಿನ ಜನ್ಮ ಕೈ,ಕಾಲುಗಳಿಲ್ಲದೆ ,ಕಣ್ಣಿಲ್ಲದೆ ಅಥವಾ ಎರಡು ತಲೆ ಇತ್ಯಾದಿ ರೀತಿಯಲ್ಲಿ ಆದಲ್ಲಿ ಇದನ್ನು ಅಬ್ನಾರ್ಮಲ್ ಅಂತ ಹೇಳಲಾಗುತ್ತದೆ ಅಂದ ಮೇಲೆ ಗಣೇಶನಿಗೆ ಈ ರೀತಿ ತೋರಿಸಿರುವುದರ ರಹಸ್ಯವೇನು ಇದನ್ನು ತಿಳಿಯೋಣ
    ಗಣೇಶನ ಜನ್ಮ; ಹೇಳಲಾಗುತ್ತದೆ ಪಾರ್ವತಿಯು ತನ್ನ ತಪಸ್ಸಿನ ಬಲದಿಂದ ತನ್ನ ಶರೀರದ ಮೈಲಿಗೆಯಿಂದ ಗಣೇಶನಿಗೆ ಜನ್ಮವನ್ನು ನೀಡಿದಳು ಎಂದು ಮತ್ತು ತಾನು ಸ್ನಾನಗ್ರಹಕ್ಕೆ ಹೋಗುವಾಗ ದ್ವಾರದಲ್ಲಿ ನಿಲ್ಲಿಸಿ ಹೋಗುತ್ತಾಳೆ ಎಂದು ಇದರ ಅರ್ಥ ಇದೆ ಆಗಿದೆ ಕಲಿಯುಗದ ಅಂತಿಮದಲ್ಲಿ ಪ್ರತಿಯೊಬ್ಬ ಮನುಷ್ಯಾತ್ಮನು ಅನೇಕ ಮನೋವಿಕಾರಗಳಿಂದ ಕೂಡಿರುವರು ಮತ್ತು ತನ್ನನ್ನು ತಾನು ಶರೀರ ಎನ್ನುವ ಅಭಿಮಾನದಲ್ಲಿ ಬಂದು  ಅದರಿಂದ ತನ್ನ ದುಃಖ ಅಶಾಂತಿಗೆ ಸ್ವಯಂ ಕಾರಣ ಕರ್ತನಾಗಿರುವನು ಮತ್ತು ಇಲ್ಲಿ ಶರೀರ ಎಂದರೆ ಮಣ್ಣು ಅರ್ಥತ್ ಪಂಚಬೂತ ತತ್ವಗಳಿಂದ ಮಾಡಿರುವಂತಹದ್ದ್ದುಮತ್ತು ಕೊನೆಯಲ್ಲಿ ಆದರಲ್ಲೇ ವಿಲೀನವಾಗುವಂಥಹದ್ದು . ಈಗ ಪರಮಾತ್ಮ ಬಂದು ಅಭಿಮಾನದ ತಲೆಯನ್ನು ತುಂಡರಿಸಿ ಸತ್ಯವಾದ ಜ್ಞಾನವನ್ನು ನೀಡಿ ಅರ್ಥತ್ ಆನೆಯ ತಲೆ  ಅರ್ಥಾತ್ ಇಲ್ಲಿ ಆನೆಯನ್ನು ಸಾಯಿಸುವುದಲ್ಲ ಬದಲಿಗೆ ತಿಳುವಳಿಕೆಯ ,ಸತ್ಯತೆಯ ಜ್ಞಾನವನ್ನು ನೀಡುವುದಾಗಿದೆ ,ಆನೆಗೆ ಬುದ್ದಿ ಜೀವಿ ಎಂದು ಹೇಳಲಾಗುತ್ತದೆ.
    ಕಣ್ಣು ; ಹೇಳಲಾಗುತ್ತದೆ ಗಣೇಶನ ಕಣ್ಣು ಬಹಳ ಸಣ್ಣದಿರುತ್ತದೆ ಮತ್ತು ಬಹಳ ತೀಕ್ಷ್ಣವಾಗಿರುತ್ಹ್ಹದೆ ಎಂದು ಅರ್ಥತ್ ಬಹಳ ದೂರದ ತನಕ ನೋಡುವ ಶಕ್ತಿಯಿದೆ ಪರಮಾತ್ಮ ನಮಗೆ ಇದೆ ವರದಾನವನ್ನು ಕೊಡುತ್ತಾರೆ ನಾವು ಕೂಡ ಗಣೇಶನ ರೀತಿಯಲ್ಲಿ ಬಹಳ ದೂರಾದ್ರಿಷ್ಟಿಯಿಂದ ಕೆಲಸ ಮಾಡಿದಾಗ ಸಫಲತೆಯನ್ನು ಪಡೆಯಬಹುದು
    ಕಿವಿ ;  ಕಿವಿ ನೋಡಲು ನಮಗೆ ಸೂಪ್ ನ ರೀತಿಯಲ್ಲಿ ಕಾಣುತ್ತದೆ ಅರ್ಥ ಇದೆ ಆಗಿದೆ ಸೂಪ್ ನಿಂದ ನಾವು ಭೆಳೆ ಕಾಳೂ ಗಳಿಂದ ಕಸ ಕಡ್ಡಿಗಳನ್ನು ಬೇರ್ಪಡಿಸುವ ಕೆಲಸ ಮಾಡುತ್ತೇವೆ ಅದೇ ರೀತಿಯಲ್ಲಿ ನಾವು ಕೂಡ ನಮ್ಮ ಜೀವನದಲ್ಲಿ ನಮಗೆ ಅನೇಕರಿಂಧಾ  ಅನೇಕ ,ವಿಚಾರಗಳು,ಮಾತುಗಳು ಕೇಳಲು ಬರಬಹುದು ಆದರೆ ನಾವು ಇದರಿಂದ ನಮ್ಮ ಜೀವನಕ್ಕೆ ಬೇಕಾಗಿರುವ ವಿಚಾರಗಳನ
    14 min
  • ವರ ಮಹಾಲಕ್ಷ್ಮೀ ಹಬ್ಬದ ವ್ರತ ಕಥೆ ಓದಿ ಸಂಪೂರ್ಣ ಮಾಡಿ ಶ್ರೀ ಮಹಾಲಕ್ಷ್ಮಿ ಅನುಗ್ರಹಕ್ಕೆ ಪಾತ್ರರಾಗಿ
    ಪೂರ್ವಕಾಲದಲ್ಲಿ ಸತ್ಯಲೋಕವಾಸಿಗಳಾದ ಋಷಿಶ್ರೇಷ್ಠರೆಲ್ಲರೂ ಸೇರಿ ಪುರಾಣಿಕ ಶಿಖಾಮಣಿಯಾದ ಸೂತಮಹರ್ಷಿಯನ್ನು ಕುರಿತು
    ಪುರಾಣ ಪುರುಷೋತ್ತಮರಾದ ತಾವು ತ್ರಿಕಾಲ ಜ್ಞಾನಿ. ನೀವು ನಮ್ಮಲ್ಲಿ ಅನುಗ್ರಹ ಮಾಡುವುದಾದರೆ, ಲೋಕದಲ್ಲಿ ಸರ್ವ ಸೌಭಾಗ್ಯಗಳನ್ನೂ ಕೊಡುವ ಉತ್ತಮವಾದ ವ್ರತವನ್ನು ಹೇಳಿ ಎಂದು ಕೇಳಿಕೊಂಡರು.
    ಋಷಿ ಶ್ರೇಷ್ಠರ ಮಾತನ್ನು ಮೆಚ್ಚಿದ ಸೂತಮಹಾಮುನಿಗಳು ಕಥೆಯೊಂದನ್ನು ಹೇಳಿದರು...
    ಋಷಿ ಶ್ರೇಷ್ಠರೇ ಲೋಕದಲ್ಲಿ ಭಕ್ತಿಯಿಂದ ಪೂಜಿಸುವವರಿಗೆ ಸಕಲ ಇಷ್ಟಾರ್ಥಗಳನ್ನು ಕೊಡುವ ಅತ್ಯುತ್ತಮವಾದ ವ್ರತವೊಂದಿದೆ. ನಿಮಗಾಗಿ ಆ ವ್ರತದ ಕಥೆ ಹೇಳುವೆ ಕೇಳಿ ಎಂದರು.
    ಕೈಲಾಸಪರ್ವತವು ದೇವನದಿಗಳಿಂದ ಪೂರ್ಣವಾಗಿ ಫಲಭರಿತವಾದ ನಾನಾಬಗೆಯ ವೃಕ್ಷಸಮೂಹದಿಂದ ಕೂಡಿ ಕಾಮಧೇನು ಕಲ್ಪವೃಕ್ಷ ಸೇರಿದಂತೆ ಸಕಲ ಸುಖಗಳಿಗೂ ಆವಾಸಸ್ಥಾನವಾಗಿರುವುದು.
    ಆದ ಕಾರಣ ಯಕ್ಷರಾಕ್ಷಸ ಗರುಡ ಗಂಧರ್ವ ದೇವಮಾನುಷಾದಿಗಳು ತಮ್ಮ ಪೂರ್ವ ಪುಣ್ಯಾನುಸಾರ ಸೇರಿ ಅಲ್ಲಿಗೆ ಒಡೆಯನಾದ ಪಾರ್ವತೀಶ್ವರನಿಗೆ ಸೇವೆ ಸಲ್ಲಿಸುತ್ತಿರುವರು.
    ಒಂದಾನೊಂದು ಕಾಲದಲ್ಲಿ ಪರಮೇಶ್ವರನು ಪಾರ್ವತಿಯಾಡನೆ ಸಂತೋಷದಿಂದ ಕುಳಿತಿರುವಾಗ ಜಗನ್ಮಾತೆಯಾದ ಪಾರ್ವತಿಯು ಪರಮೇಶ್ವರನನ್ನು ಕುರಿತು, ಮಹಾದೇವಾ ಪ್ರಪಂಚದಲ್ಲಿ ಸಕಲ ಸುಖಗಳನ್ನು ಕೊಟ್ಟು ಭಕ್ತರ ಕಷ್ಟವನ್ನು ಪರಿಹರಿಸಿ ಸೌಭಾಗ್ಯ ಸಂತೋಷಗಳನ್ನು ಉಂಟುಮಾಡುವ ವ್ರತ ಯಾವುದು? ಅದನ್ನು ನನಗೆ ಹೇಳು ಎಂದು ಕೇಳಿಕೊಂಡಳು.
    ಆಗ ಪರಮೇಶ್ವರನು ಪಾರ್ವತಿಯೇ ಕೇಳು, ಸರ್ವ ಸಂಪತ್ಪ್ರದವಾದ ಪುತ್ರಪೌತ್ರದಾಯಕವಾದ ಸನ್ಮಂಗಳ ಸಂತಾನಕರವಾದ ವರಲಕ್ಷ್ಮೀವ್ರತ ಎಂಬುದುಂಟು. ಈ ವ್ರತವನ್ನು ಭಕ್ತಿ ಸಂಪನ್ನರಾದ ಹೆಂಗಸರಾಗಲಿ, ಗಂಡಸರಾಗಲಿ, ಮಕ್ಕಳಾಗಲಿ ಮಾಡಬಹುದು. ಈ ವ್ರತವನ್ನು ಶ್ರಾವಣಮಾಸದ ಶುಕ್ಲಪಕ್ಷದಲ್ಲಿ ಹುಣ್ಣಿಮೆಗೆ ಹತ್ತಿರವಾದ ಶುಕ್ರವಾರದ ದಿನ ಮಾಡಬೇಕು" ಎಂದು ಹೇಳಿದನು.
    ಸಂತೋಷಗೊಂಡ ಪಾರ್ವತಿ, ಸ್ವಾಮಿ ವರಲಕ್ಷ್ಮೀ ವ್ರತದ ನಿಯಮವೇನು? ಅದನ್ನು ಹೇಗೆ ಮಾಡಬೇಕು? ಆ ವ್ರತಕ್ಕೆ ಅಧಿದೇವತೆ ಯಾರು?" ಎಂದು ಕೇಳಿದಳು.
    ಆಗ ಪರಮೇಶ್ವರನು, 'ಆ ವ್ರತಕ್ಕೆ ಅಧಿದೇವತೆ ಮಹಾಲಕ್ಷ್ಮಿ.
    ಇದನ್ನು ಶ್ರಾವಣಮಾಸದಲ್ಲಿ ಪೌರ್ಣಿಮೆ ಸಮೀಪಸ್ಥವಾದ ಭೃಗುವಾರದಲ್ಲಿ ಮಾಡಬೇಕು.
    ಆ ರೀತಿ ವ್ರತ ಮಾಡಿದ ಭಕ್ತರ ಕೋರಿಕೆಗಳೆಲ್ಲ ಕೈಗೂಡಿ ಕಷ್ಟ ಕಾಯಕಗಳು ನಾಶವಾಗುವುದು. ಈ ವಿಷಯದಲ್ಲಿ ಪ್ರಸಿದ್ಧವಾದ ಒಂದು ಕಥೆಯುಂಟು. ಅದನ್ನು ಹೇಳುತ್ತೇನೆ ಕೇಳು ಎಂದು ಪಾರ್ವತಿಗೆ ಕಥೆಯನ್ನು ಹೇಳಲು ಮುಂದಾದನು ಪರಮೇಶ್ವರನು.
    ವಿದರ್ಭದೇಶಕ್ಕೆ ರಾಜಧಾನಿಯಾದ ಕುಂಡಿನನಗರದಲ್ಲಿ ಚಾರುಮತಿ ಎಂಬ ಸ್ತೀ ಇದ್ದಳು.
    ಈ ಚಾರುಮತಿ ದರಿದ್ರಳಾದರೂ ಸದಾಚಾರ ಸಂಪನ್ನಳು, ಪತಿ ಶುಶ್ರೂಷೆಯೆ ಮುಖ್ಯವೆಂದು ತಿಳಿದು ಸದಾ ಸಂತೋಷ ಚಿತ್ತಳಾಗಿ ಪತಿಯ ಮನಸ್ಸನ್ನು ನೋಯಿಸದೆ ಸದ್ವರ್ತನೆ ಉಳ್ಳವಳಾಗಿದ್ದಳು.
    ಇವಳ ಸದಾಚಾರ ಸಂಪನ್ನತೆಗೆ ಮೆಚ್ಚಿದ ಮಹಾಲಕ್ಷ್ಮಿಯು, ಒಂದು ದಿನ ಚಾರುಮತಿಯು ಮಲಗಿ ನಿದ್ರಿಸುತ್ತಿರುವಾಗ ಸ್ವಪ್ನದಲ್ಲಿ ಪ್ರತ್ಯಕ್ಷಳಾಗಿ ಬಂದು ಹೇಳಿದಳು- ' ಪತಿವ್ರತೆಯಾದ ಚಾರುಮತಿ, ನಿನ್ನ ಗುಣಶೀಲಗಳಿಗೆ ಮೆಚ್ಚಿ ನಿನ್ನ ಪೂರ್ವ ಪುಣ್ಯಾನುಸಾರವಾಗಿ ನಿನ್ನಲ್ಲಿ ಅನುಗ್ರಹ ಮಾಡಲು ಬಂದಿರುವ ಮಹಾಲಕ್ಷ್ಮಿ ನಾನು.
    ಈಗ ನಾನು ಹೇಳುವ ವಿಷಯವನ್ನು ಗಮನವಿಟ್ಟು ಕೇಳಿ ಆಚರಿಸು. ಅದರಿಂದ ನಿನಗೆ ನಿನ್ನ ದಾರಿದ್ರ್ಯವು ನಾಶವಾಗಿ, ಅಷ್ಟೈಶ್ವರ್ಯವು ಪ್ರಾಪ್ತಿಯಾಗುತ್ತದೆ.
    ಯಾರು ನನ್ನನ್ನು ಶ್ರಾವಣ ಮಾಸದಲ್ಲಿ ಬರುವ ಎರಡನೆಯ ಶುಕ್ರವಾರದ ದಿನ ಪ್ರದೋಷ ಸಮಯಕ್ಕೆ ಸರಿಯಾಗಿ ವಿಧಿವತ್ತಾಗಿ ನನ್ನ ಪೂಜೆಯನ್ನು ಮಾಡಿದರೆ ನಾನು ಅವರಿಗೆ ಸಕಲ ಭೋಗಭಾಗ್ಯಗಳನ್ನು ಕೊಡುವೆನು.
    ಯಾರಿಗೆ ಪುಣ್ಯ ಸಂಪರ್ಕವಿರುವುದೊ, ಅಂಥವರಿಗೆ ಈ ವ್ರತದಲ್ಲಿ ಭಕ್ತಿ ಹುಟ್ಟುತ್ತದೆ.
    ಭೂಲೋಕದಲ್ಲಿ ಯಾರು ನನ್ನನ್ನು ಭಕ್ತಿಯಿಂದ ಪೂಜಿಸುತ್ತಾರೋ ಅವರೇ ಧನ್ಯರು ! ಅವರೇ ಶೂರರು ! ಅವರೇ ಪುಣ್ಯಶಾಲಿಗಳು, ಅವರೇ ಮಹಾತ್ಮರು, ಸಾಹಸಿಗಳು. ಅವರೇ ಪಂಡಿತರು, ಅಂಥವರೇ ಸ್ತೋತ್ರಾರ್ಹರು, ಬಹಳವಾಗಿ ಹೇಳುವುದೇನು? ಅವರೇ ಸರ್ವೋತ್ತಮರು. ಯಾರು ನನ್ನ ಕಟಾಕ್ಷಕ್ಕೆ ಬಾಹಿರರಾಗಿರುವರೊ! ಅವರ ಬಾಳು ಅಜಗಳಸ್ತನದಂತೆ ವ್ಯರ್ಥವೇ ಸರಿ. ಆದ ಕಾರಣ ನೀನು ಈ ವ್ರತವನ್ನು ಮಾಡಿ ಧನ್ಯಳಾಗು" ಎಂದು ನಿದ್ರೆಯಲ್ಲಿ ಉಪದೇಶಿಸಿದ ಮಹಾಲಕ್ಷ್ಮಿಯು ಕಣ್ಮರೆಯಾದಳು.
    ಆಗ ಚಾರುಮತಿಯು ನಿದ್ರೆಯಿಂದೆದ್ದು ನಡೆದ ಸಂಗತಿಯನ್ನೆಲ್ಲ ತನ್ನವರಿಗೆ ಹೇಳಿದಳು.
    ಕೆಲವು ದಿವಸಗಳನ್ನು ಕಳೆಯಲು ಶ್ರಾವಣಮಾಸದ ಎರಡನೆಯ ಶುಕ್ರವಾರ ಬಂದಿತು. ಆ ದಿನ ಬಹು ಜನ ಭಕ್ತರು ವರಮಹಾಲಕ್ಷ್ಮಿಯನ್ನು ಪೂಜಿಸಿ ಸಂತೋಷದಿಂದ ಕೋರಿಕೆಗಳನ್ನು ಕೈಗೂಡಿಸಿಕೊಂಡು ಸುಖದಿಂದ ಬಾಳುತ್ತಿದ್ದರು.
    ಆದರೆ, ದರಿದ್ರಳಾದ ಚಾರುಮತಿಯು ನಿಯಮದಿಂದ ಈ ವ್ರತವನ್ನು ಮಾಡಿ ವರಲಕ್ಷ್ಮಿಯ ಕಟಾಕ್ಷದಿಂದ ಅಷ್ಟೈಶ್ವರ್ಯವನ್ನೂ ಪಡೆದಳು.
    ಸುಖವನ್ನು ಅನುಭವಿಸುತ್ತ ಬಡವರಿಗೆ ಅನ್ನದಾನ ಮಾಡಿ, ಬಂಧುವರ್ಗದವರನ್ನು ಪ್ರೀತಿಯಿಂದ ಕಾಪಾಡುತ್ತ ಭೂಲೋಕದಲ್ಲಿ ಅನಂತವಾದ ಅಪಾರಸೌಖ್ಯ ಅನುಭವಿಸಿ, ಪರಲೋಕದಲ್ಲಿ ಶ್ರೇಷ್ಠವಾದ ಪತಿಸಾಯುಜ್ಯವನ್ನು ಪಡೆದಳು.
    ಆದ ಕಾರಣ ಈ ಲೋಕದಲ್ಲಿ ಯಾರು ಭಕ್ತಿಭಾವದಿಂದ ಈ ವ್ರತವನ್ನು ಆಚರಿಸುವರೋ ಅಂಥವರು ಅಖಂಡವಾದ ಐಶ್ವರ್ಯ ಪಡೆದು, ವರಲಕ್ಷ್ಮಿಯ ಪ್ರಸಾದದಿಂದ ಭೋಗಭಾಗ್ಯಗಳನ್ನು ಅನುಭವಿಸುವರು ಎಂದು ಹೇಳಿ ಪರಮೇಶ್ವರನು ಕಥೆ ಮುಗಿಸಿದನು.
    ಕಥೆ ಕೇಳಿದ ಪಾರ್ವತಿಯು, ಮಹಾದೇವ ನನ್ನಲ್ಲಿ ನಿನಗೆ ದಯೆಯುಂಟಾದರೆ ಈ ವಿಧಾನವನ್ನು ವಿವರವಾಗಿ ಹೇಳಬೇಕು" ಎಂದು ಕೇಳಿಕೊಂಡಳು.
    ಆಗ ಪರಮೇಶ್ವರನು ಪೂಜಾ ವಿಧಾನಗಳನ್ನು ಹೀಗೆ ವಿವರಿಸಿದನು-
    ಕೇವಲ ಪುಣ್ಯಪ್ರದವಾದ ಶ್ರಾವಣಮಾಸದ ಎರಡನೆಯ ಶುಕ್ರವಾರದ ದಿನ ಭಕ್ತಿಯುಳ್ಳ ಸ್ತ್ರೀಯರಾಗಲಿ, ಪುರುಷರಾಗಲಿ ಅಭ್ಯಂಜನವನ್ನು ಮಾಡಿಕೊಂಡು ಮಂಗಳ ಸ್ನಾನದ ನಂತರ ಶುಭವಸ್ತ್ರಗಳನ್ನು ಧರಿಸಬೇಕು.
    ಮನೆಯಲ್ಲಿ ರಂಗೋಲಿಯಿಂದ ಅಲಂಕೃತವಾದ ಶುದ್ಧ ಪ್ರದೇಶದಲ್ಲಿ ಮನೋಹರವಾದ ಮಂಟಪವನ್ನು ನಿರ್ಮಿಸಬೇಕು.
    ಅದರ ಮಧ್ಯದಲ್ಲಿ ಪಂಚವರ್ಣದಿಂದ ಕೂಡಿದ ಅಷ್ಟದಳ ಪದ್ಮವನ್ನು ರಚಿಸಿ, ಅದರ ಮೇಲೆ ಮಾವಿನ ಚಿಗುರುಗಳಿಂದ ಕೂಡಿದ ಕಲ
    10 min
  • *🌿ಆಹಾರದಲ್ಲಿ ನುಗ್ಗೆ ಸೊಪ್ಪಿನ ಬಳಕೆಯಿಂದಾಗುವ ಪ್ರಯೋಜನಗಳು:🌿*
    ಇಂಗ್ಲಿಷ್ ನಲ್ಲಿ ನುಗ್ಗೆ ಗಿಡ ಹಾಗೂ ನುಗ್ಗೆ ಕಾಯಿಯನ್ನು ಕ್ರಮವಾಗಿ moringa, drumstick ಎಂದು ಕರೆಯುತ್ತಾರೆ. ಶತಶತಮಾನಗಳಿಂದಲೂ ನುಗ್ಗೆ ಕಾಯಿ, ನುಗ್ಗೆ ಹೂವುಗಳು ಹಾಗೂ ನುಗ್ಗೆ ಸೊಪ್ಪನ್ನು ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಖಾದ್ಯಗಳಲ್ಲಿ ಬಳಸಲಾಗುತ್ತಿದೆ. ನುಗ್ಗೆ ಕಾಯಿ ಹಲವರಿಗೆ ಅಪ್ರಿಯವಾದ ತರಕಾರಿಯಾದರೂ, ಇದರ ಬಳಕೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನುಗ್ಗೆ ಸೊಪ್ಪಿನ ಸೇವನೆಯಿಂದ ಅನೇಕ ಗಂಭೀರ ಕಾಯಿಲೆಗಳಿಂದ ದೂರ ಉಳಿಯಬಹುದು. ನುಗ್ಗೆ ಸೊಪ್ಪಿನಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಇದು ಸುಮಾರು 300 ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ. ಪುರುಷರಲ್ಲಿ ಬಂಜೆತನ, ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ, ಫಲವತ್ತತೆ ಪ್ರಾಸ್ಟೇಟ್ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ನುಗ್ಗೆ ಕಾಯಿ, ನುಗ್ಗೆ ಸೊಪ್ಪನ್ನು ಬಳಸುವುದರಿಂದ ತೂಕ ನಷ್ಟ, ಮಧುಮೇಹ, ಅಧಿಕ ರಕ್ತದೊತ್ತಡ, ಶಿಲೀಂದ್ರದ ಸೋಂಕುಗಳು, ಕೀಲು ನೋವು, ಹೃದಯದ ಸಮಸ್ಯೆ ಹಾಗೂ ಕ್ಯಾನ್ಸರ್ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
    ನುಗ್ಗೆ ಸೊಪ್ಪಿನಲ್ಲಿ ಅನೇಕ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳು ಕಂಡು ಬರುತ್ತವೆ. ನುಗ್ಗೆ ಎಲೆಗಳು ಕಿತ್ತಳೆಗಿಂತ 7 ಪಟ್ಟು ಹೆಚ್ಚು ವಿಟಮಿನ್ ಸಿ ಮತ್ತು ಬಾಳೆಹಣ್ಣುಗಳಿಗಿಂತ 15 ಪಟ್ಟು ಹೆಚ್ಚು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತವೆ. ಇದು ಕ್ಯಾಲ್ಸಿಯಂ, ಪ್ರೋಟೀನ್, ಕಬ್ಬಿಣ ಮತ್ತು ಅಮೈನೋ ಆಮ್ಲಗಳನ್ನು ಸಹ ಹೊಂದಿದೆ ಎಂದು ಹಲವು ಸಂಶೋಧನೆಗಳಿಂದ ತಿಳಿದುಬಂದಿದೆ.
    *ಮೂಳೆಗಳನ್ನು ಬಲಪಡಿಸಲು:-*
    ನುಗ್ಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ನುಗ್ಗೆ ಕಾಯಿಯಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ, ಇವು ಮೂಳೆ ಮತ್ತು ಹಲ್ಲುಗಳನ್ನು ಗಟ್ಟಿಗೊಳಿಸುವುದರ ಜೊತೆಗೆ ತೂಕ ನಿಯಂತ್ರಣಕ್ಕೂ ಸಹಕಾರಿ. ಅದರಲ್ಲೂ ವಯಸ್ಸಾದವರಲ್ಲಿ ಕಂಡು ಬರುವ ಅಸ್ಥಿ ರಂಧ್ರತೆ ಹಾಗೂ ಸಂಧಿವಾತ, ಗಂಟು ನೋವಿನಂತಹ ಸಮಸ್ಯೆಯನ್ನು ನುಗ್ಗೇಕಾಯಿ ಸೇವನೆ ದೂರ ಮಾಡುತ್ತದೆ.
    *ಮಧುಮೇಹ ನಿಯಂತ್ರಣ:-* ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲಿ ಟೈಪ್-2 ಡಯಾಬಿಟಿಸ್ ಹೆಚ್ಚು ಸಾಮಾನ್ಯವಾಗಿದೆ. ನುಗ್ಗೆ ಎಲೆಗಳು ಇನ್ಸುಲಿನ್ ತರಹದ ಪ್ರೋಟೀನ್‌ಗಳನ್ನು ಒಳಗೊಂಡಿರುತ್ತವೆ. ಅದು ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ.
    *ಕ್ಯಾನ್ಸರ್ ನಿಯಂತ್ರಣ:-*
    ನುಗ್ಗೆ ಸೊಪ್ಪಿನ ಎಲೆಗಳ ಸಾರಗಳು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಧಾನಗೊಳಿಸುವಲ್ಲಿ ಸಹಕಾರಿ ಆಗಿದ್ದು, ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹಲವು ಸಂಶೋಧನೆಗಳು ಕಂಡು ಹಿಡಿದಿವೆ.
    *ಹೃದಯದ ಆರೋಗ್ಯಕ್ಕೆ ಉತ್ತಮ:-*
    ನುಗ್ಗೆ ಎಲೆಗಳು ಹೃದಯವನ್ನು ರಕ್ಷಿಸುತ್ತವೆ ಮತ್ತು ಹೃದಯದ ರಕ್ತನಾಳದ ವ್ಯವಸ್ಥೆಯನ್ನು ಬೆಂಬಲಿಸುತ್ತವೆ ಎಂದು ಹೇಳಲಾಗುತ್ತದೆ.
    *ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣ:-*
    ನುಗ್ಗೆ ಸೊಪ್ಪು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಎನ್ನಲಾಗುತ್ತದೆ.
    *ಕೀಲು ನೋವು ಶಮನ:-* ನುಗ್ಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಕೆ ಮತ್ತು ಪ್ರೋಟೀನ್‌ ಸಮೃದ್ಧವಾಗಿವೆ. ಇದು ಆರೋಗ್ಯಕರ ಮೂಳೆಗೆ ಕೊಡುಗೆ ನೀಡುವುದು ಮಾತ್ರವಲ್ಲ, ಕೀಲು ನೋವಿಗೂ ಪರಿಹಾರ ನೀಡುತ್ತದೆ ಎಂದು ಹೇಳಲಾಗುತ್ತದೆ. ನುಗ್ಗೆಯು ಉರಿಯೂತದ ಗುಣಲಕ್ಷಣಗಳನ್ನು ಶಮನಗೊಳಿಸುತ್ತದೆ. ಇದು ಸಂಧಿವಾತ ಮತ್ತು ಬೆನ್ನು ನೋವನ್ನು ಗುಣಪಡಿಸುತ್ತದೆ.
    *ಕೂದಲ ಆರೋಗ್ಯಕ್ಕೆ ಅತ್ಯುತ್ತಮ:* ನುಗ್ಗೆ ಕಾಯಿಯಲ್ಲಿರುವ ಸಂಪೂರ್ಣ ಅಮೈನೋ ಆಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳು ನಿಮ್ಮ ಕೂದಲನ್ನು ಪೋಷಿಸಲು ಕಾರಣವಾಗಿವೆ. ನುಗ್ಗೆಯಲ್ಲಿರುವ ವಿಟಮಿನ್ ಎ ದೇಹದ ಅಂಗಾಂಶಗಳು ಮತ್ತು ಕೋಶಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನುಗ್ಗೆ ಸೊಪ್ಪಿನಲ್ಲಿರುವ ವಿಟಮಿನ್ ಬಿ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದು ನಿಮ್ಮ ನೆತ್ತಿಗೆ ಆಮ್ಲಜನಕ ಮತ್ತು ಪೋಷಕಾಂಶಗಳ ವಾಹಕಗಳಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಆರೋಗ್ಯಕರ ಮತ್ತು ದೃಢವಾದ ಕೋಶದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
    *ಪುರುಷರಿಗೆ ನುಗ್ಗೆಯ ಬಳಕೆಯ ಪ್ರಯೋಜನಗಳು:-*
    ನುಗ್ಗೆ ಕಾಯಿ ಅಥವಾ ನುಗ್ಗೆ ಸೊಪ್ಪನ್ನು ಪುರುಷರಿಗೆ ಅದ್ಭುತವಾದ ಮೂಲಿಕೆ ಎಂದು ಪರಿಗಣಿಸಲಾಗುತ್ತದೆ. ಪುರುಷರು ಹೆಚ್ಚು ನುಗ್ಗೆ ಕಾಯಿ, ಸೊಪ್ಪು ತಿನ್ನಲು ಸಲಹೆ ನೀಡಲಾಗುತ್ತದೆ. ನುಗ್ಗೆ ಕಾಯಿ ಕೇವಲದ ಲೈಂಗಿಕ ಶಕ್ತಿಯನ್ನು ಹೆಚ್ಚು ಮಾಡುವುದು ಮಾತ್ರವಲ್ಲ, ಇನ್ನೂ ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆಫ್ರಿಕನ್ ಪುರುಷರು ಸಹ ತಮ್ಮ ಆಹಾರದಲ್ಲಿ ನುಗ್ಗೆ ಸಸ್ಯವನ್ನು ಸಂಪೂರ್ಣವಾಗಿ ನಿರ್ಣಾಯಕವೆಂದು ಪರಿಗಣಿಸುತ್ತಾರೆ. ಈ ಸಸ್ಯದ ಕಾಂಡಗಳು, ಬೇರುಗಳು ಮತ್ತು ಎಲೆಗಳು ಸೇರಿದಂತೆ ಪ್ರತಿಯೊಂದು ಭಾಗವು ಪುರುಷರಿಗೆ ಪ್ರಯೋಜನಕಾರಿಯಾಗಿವೆ.
    ● *ಪ್ರಾಸ್ಟೇಟ್ ಆರೋಗ್ಯವನ್ನು ಉತ್ತೇಜಿಸುತ್ತದೆ:* ನುಗ್ಗೆ ಸೊಪ್ಪು ಕ್ಯಾನ್ಸರ್ ಅನ್ನು ಗುಣಪಡಿಸಬಹುದು ಎಂದು ಸಂಶೋಧಕರು ಸೂಚಿಸುತ್ತಾರೆ. ನುಗ್ಗೆ ಎಲೆಗಳು ಸಲ್ಫರ್ ಸಂಯುಕ್ತಗಳನ್ನು ಒಳಗೊಂಡಿರುತ್ತವೆ. ಇದು ಪುರುಷರಲ್ಲಿ ಸಾಮಾನ್ಯವಾದ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಸಹಾಯಕವಾಗಬಹುದು. ನುಗ್ಗೆ ಮರದ ತೊಗಟೆ ಮತ್ತು ಬೀಜಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿರಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸಿವೆ.
    ● *ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಔಷಧಿ:* ನುಗ್ಗೆ ಕಾಯಿ ಬೀಜಗಳು ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇದು ಶಿಶ್ನಕ್ಕೆ ರಕ್ತದ ಹರಿವನ್ನು ಹೆಚ್ಚಿಸುವ ಮತ್ತು ನಿಮಿರುವಿಕೆಗೆ ಸಹಾಯ ಮಾಡುವ ವಿವಿಧ ಜೀವಸತ್ವಗಳು ಮತ್ತು ಖನಿಜಗಳ
    7 min
  • ಜೀವನವೆಂಬ ಪ್ರಯಾಣದಲ್ಲಿ...ಕೆಲವೊಮ್ಮೆ ಸತ್ಯ ಕಹಿ ಅನಿಸುತ್ತದೆ.
    ಮನಃಸಾಕ್ಷಿ ಇಲ್ಲದವರು ತಮ್ಮ ತಪ್ಪು ಒಪ್ಪುವುದಿಲ್ಲ
    . ಅವರಿಗೆ ತಮ್ಮದು ತಪ್ಪು ಅಂತಾ ಅನಿಸೋದು ಇಲ್ಲ. ಮನಃಸಾಕ್ಷಿ ಅಂತಾ ಇದ್ದವರಿಗೆ ಎಲ್ಲೋ ಮನಸ್ಸಿನ ಒಂದು ಮೂಲೆಯಲ್ಲಿ ಅದು ಮುಳ್ಳಿನಂತೆ ಚುಚ್ಚುತ್ತದೆ... life is short make it sweet
    5 min
  • *ಶಿಕ್ಷಣವು ಹೇಗಿರಬೇಕು ?*
    Menu
    ಬಾಲಸಂಸ್ಕಾರ > ಶಿಕ್ಷಕರು > ಶಿಕ್ಷಣ ಹೇಗಿರಬೇಕು? > ಶಿಕ್ಷಣವು ಹೇಗಿರಬೇಕು ?
    ಶಿಕ್ಷಣವು ಹೇಗಿರಬೇಕು ?
    ಕ್ಷಾತ್ರ ಹಾಗೂ ಬ್ರಾಹ್ಮ ತೇಜವನ್ನು ನಿರ್ಮಿಸುವ ಶಿಕ್ಷಣವೇ ನಿಜವಾದ ಶಿಕ್ಷಣ
    ತರುಣರಿಗೆ ಕಡ್ಡಾಯವಾಗಿ ಸೈನ್ಯದ ತರಬೇತಿಯೊಂದಿಗೆ ಸಂತರ, ದೇಶಭಕ್ತರ ಹಾಗೂ ಕ್ರಾಂತಿಕಾರರ ಜೀವನ ಚರಿತ್ರೆಗಳನ್ನು ಅಧ್ಯಯನಕ್ಕಾಗಿ ನೀಡಿದಲ್ಲಿ ಅವರಿಗೆ ದೇಶಕ್ಕಾಗಿ ಜೀವಿಸಲು ಹಾಗೂ ಪ್ರಾಣಾರ್ಪಣೆ ಮಾಡಲು ಸ್ಪೂರ್ತಿ ದೊರೆಯುತ್ತದೆ.ಶಿಕ್ಷಣವು ಹೇಗಿರಬೇಕು ಎಂಬುದರ ವಿಚಾರ ಹಾಗೂ ಪೂರಕ ಕೃತಿ ಅವಶ್ಯಕವಾಗಿದೆ. ಭಾರತದಲ್ಲಿ ಆಗಿಹೋದ ಕ್ರಾಂತಿಕಾರರು, ಸಂತರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಾಗೂ ಹುತಾತ್ಮರಾದ ದೇಶಭಕ್ತರು, ಶಾಸ್ತ್ರಜ್ಞರು, ಸಮಾಜೋದ್ಧಾರಕರು, ಸಮಾಜದ ಉತ್ಥಾನಕ್ಕಾಗಿ ಸಂಘಟನೆಯನ್ನು ನಿರ್ಮಿಸಲು ತಮ್ಮ ಜೀವನವನ್ನು ಸವೆಸಿದವರು, ಇವರೆಲ್ಲರ ಜೀವನ ಚರಿತ್ರೆಯು ಯುವಪೀಳಿಗೆಯ ಹಾಗೂ ಮಕ್ಕಳ ಪಠ್ಯಕ್ರಮದ ಭಾಗವಾಗಲೇಬೇಕು. ಮಕ್ಕಳಿಗೆ ಕಡ್ಡಾಯವಾಗಿ ೨ ವರ್ಷಗಳ ಸೈನ್ಯದ ತರಬೇತಿ ಇರಬೇಕು. ಸಂತರು ರಚಿಸಿದ ಗ್ರಂಥಗಳನ್ನು ಮಕ್ಕಳ ಅಧ್ಯಯನದಲ್ಲಿ ಸೇರಿಸಬೇಕು. ತರುಣರಿಗೆ ಭಗತಸಿಂಗ, ರಾಜಗುರು, ಸುಖದೇವ, ವಾಸುದೇವ ಬಲವಂತ ಫಡಕೆ ಹಾಗೂ ಸ್ವಾ. ಸಾವರಕರರ ಎಲ್ಲ ಕಥೆಗಳು ತಿಳಿದಿರಬೇಕು
    8 min
  • Paper Bag alternative for single use plastic *PROMOTE PAPER BAG*
    ವಿಶ್ವ ಕಾಗದ ಚೀಲ ದಿನ.* ಸಮುದ್ರ ಎಂಬುದು ಕಲ್ಪನೆಗೂ ಮೀರಿದ ಅದ್ಭುತ ಪರಿಸರ ವ್ಯವಸ್ಥೆ. ನಮ್ಮ ಭೂಮಿಯ ಶ್ವಾಸಕೋಶ ಎಂದು ಸಮುದ್ರವನ್ನು ಪರಿಗಣಿಸಲಾಗುತ್ತದೆ. ಆದರೆ ಮಾನವನ ನಿರಂತರ ಮಧ್ಯಸ್ಥಿಕೆಯಿಂದಾಗಿ ಅದು ಈಗ ಸಂತ್ರಸ್ಥಗೊಂಡಿದೆ.  ಇಂದು ವಿಶ್ವ ಸಾಗರ ದಿನ. ನಮ್ಮ ದೈನಂದಿನ ಬದುಕಿನಲ್ಲಿ ಸಮುದ್ರ ವಹಿಸುವಂತಹ ಪಾತ್ರದ ಬಗ್ಗೆ ಸ್ಮರಿಸಿಕೊಳ್ಳಬೇಕಾದಂತಹ ದಿನ. ಸಾಗರಗಳು ಭೂಮಿಯ ಮೇಲ್ಮೈಯ ಮುಕ್ಕಾಲು ಭಾಗವನ್ನು ಒಳಗೊಂಡಿದೆ, ಭೂಮಿಯ ನೀರಿನ ಶೇ.97% ರಷ್ಟು ಭಾಗವನ್ನು ಇದು ಹೊಂದಿದೆ ಮತ್ತು ಭೂಮಿಯ ಮೇಲೆ ವಾಸಿಸುವ ಶೇ.99 ರಷ್ಟು ಜಾಗವನ್ನು ಪ್ರತಿನಿಧಿಸುತ್ತವೆ. ಫೈಟೊಪ್ಲಾಂಕ್ಟನ್, ಹವಳದ ಬಂಡೆಗಳು ಮತ್ತು ಇತರ ಲಕ್ಷಾಂತರ ಸಮುದ್ರ ಸಸ್ಯಗಳು ಒಟ್ಟಾರೆ ಆಮ್ಲಜನಕದ 50% ರಷ್ಟನ್ನು ಒದಗಿಸುತ್ತದೆ. ಸಾಗರಗಳು ಮನುಷ್ಯರು ಉತ್ಪಾದಿಸುವ ಸುಮಾರು ಶೇ.30ರಷ್ಟು  ಕಾರ್ಬನ್ ಡೈಆಕ್ಸೈಡ್ ಹೀರಿಕೊಳ್ಳುತ್ತವೆ, ಜಾಗತಿಕ ತಾಪಮಾನ ಏರಿಕೆಯ ಪ್ರಭಾವವನ್ನು ಕುಗ್ಗಿಸುತ್ತದೆ. 2.6 ಶತಕೋಟಿ ಜನರು ತಮ್ಮ ಪ್ರಾಥಮಿಕ ಪ್ರೋಟೀನ್­ಗಾಗಿ ಸಮುದ್ರಗಳನ್ನು ಮೂಲವಾಗಿ ಅವಲಂಬಿಸಿರುತ್ತಾರೆ. ಸಾಗರ ಮೀನುಗಾರಿಕೆ ನೇರವಾಗಿ ಅಥವಾ ಪರೋಕ್ಷವಾಗಿ 200 ಮಿಲಿಯನ್ ಜನರಿಗೆ ಉದ್ಯೋಗವನ್ನು ಒದಗಿಸುತ್ತಿದೆ.
    7 min
  • ಮಕ್ಕಳಿಗೆ ಈ ಓಂಕಾರದ ಮಂತ್ರದ ಜಪದ ಅಭ್ಯಾಸ ಮಾಡಿಸಿದರೆ ಓದಿನಲ್ಲಿ ಏಕಾಗ್ರತೆ ಮೂಡುವುದರ ಜೊತೆಯಲ್ಲಿ ನೆನಪಿನ ಶಕ್ತಿಯೂ
    *"ಓಂ"* ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ ಹಿಂದೂ ಧರ್ಮದ ಅನುಸಾರ *ಓಂ* ಗೆ ತನ್ನದೇ ಆದ ಮಹತ್ವ ಇದೆ.
    *ಓಂ* ಉಚ್ಛಾರ ಮಾಡದೇ ಯಾವುದೇ ಪೂಜೆಗಳು ಸಂಪೂರ್ಣವಾಗುವುದೇ ಇಲ್ಲ. ಮಂತ್ರಗಳಲ್ಲಿ *ಓಂ* ಉಚ್ಛಾರ ಮಾಡದೇ ಮಂತ್ರ ಹೇಗೆ ಪೂರ್ಣಗೊಳ್ಳುವುದು..? ಆದರೆ *'ಓಂ'*ಗೆ ಕೇವಲ ಧಾರ್ಮಿಕ ಮಹತ್ವ ಅಲ್ಲದೇ ಶಾರೀರಿಕ ಮಹತ್ವ ಕೂಡಾ ಇದೆ ಎಂಬುದು ನಿಮಗೆ ತಿಳಿದಿದೆಯೇ.? ಇಂದು ನಾವು ನಿಮಗೆ *'ಓಂ'* ನಿಂದ ಉಂಟಾಗುವ ರಹಸ್ಯಮಯ ಶಾರೀರಿಕ ಉಪಯೋಗಗಳನ್ನು ಹೇಳುತ್ತೇವೆ. ಇವುಗಳನ್ನು ನಿಮ್ಮದಾಗಿಸಿಕೊಂಡರೆ ಸರ್ವ ರೋಗಗಳು ನಿಯಂತ್ರಣ ಹೊಂದುತ್ತದೆ.
    *'ಓಂ'* ಮತ್ತು *ಥೈರಾಯ್ಡ್‌*:
    'ಓಂ' ನ ಉಚ್ಛಾರಣೆ ಮಾಡುವುದರಿಂದ ಗಂಟಲಿನಲ್ಲಿ ಕಂಪನ ಉಂಟಾಗುತ್ತದೆ. ಇದರಿಂದ ಥೈರಾಯ್ಡ್‌ ಗ್ರಂಥಿಗಳ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ.
    *ಓಂ* ಮತ್ತು *ಭಯ* :
    ನಿಮಗೆ ಭಯವಾಗುತ್ತಿದ್ದರೆ ಕಣ್ಣನ್ನು ಮುಚ್ಚಿಕೊಂಡು ಐದು ಬಾರಿ ದೀರ್ಘ ಶ್ವಾಸ ತೆಗೆದುಕೊಂಡು 'ಓಂ' ಎಂದು ಉಚ್ಛರಿಸಿ.
    *ಓಂ* ಮತ್ತು *ಒತ್ತಡ* :
    ಇದು ಶರೀರದ ವಿಷ ಅಂಶಗಳನ್ನು ದೂರ ಮಾಡುತ್ತದೆ. ಇದನ್ನು ಉಚ್ಛಾರ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ.
    *ಓಂ* ಮತ್ತು *ರಕ್ತ ಸಂಚಾರ* :
    ಹೃದಯವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. 'ಓಂ' ಎಂದು ಹೇಳುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ.
    *ಓಂ* ಮತ್ತು *ಪಚನ ಕ್ರಿಯೆ* :
    ಇದನ್ನು ಉಚ್ಛಾರ ಮಾಡುವುದರಿಂದ ಪಚನ ಕ್ರಿಯೆ ಸರಿಯಾಗುತ್ತದೆ.
    *'ಓಂ'* ಮತ್ತು *ಸ್ಫೂರ್ತಿ* :
    ಇದರಿಂದ ಶರೀರದಲ್ಲಿ ಯುವಾವಸ್ಥೆಯ ಸ್ಫೂರ್ತಿ ಹರಿದಾಡುತ್ತದೆ.
    *ಓಂ* ಮತ್ತು *ಸುಸ್ತು* :
    ಆಯಾಸವನ್ನು ದೂರ ಮಾಡಲು ಸುಲಭ ಉಪಾಯ 'ಓಂ' ಉಚ್ಛಾರ ಮಾಡುವುದು.
    *ಓಂ* ಮತ್ತು *ನಿದ್ರೆ* :
    ಸರಿಯಾಗಿ ನಿದ್ರೆ ಬರದೇ ಇದ್ದ ಸಂದರ್ಭದಲ್ಲಿ ಓಂ ಎಂದು ಪಠಣ ಮಾಡಿ. ಇದರಿಂದ ಮನಸ್ಸು ಶಾಂತವಾಗಿ ನಿದ್ರೆ ಚೆನ್ನಾಗಿ ಬರುತ್ತದೆ.
    *ಓಂ* ಮತ್ತು *ಶ್ವಾಸಕೋಶ* :
    'ಓಂ' ಉಚ್ಛಾರಣೆ ಶ್ವಾಸಕೋಶದ ತೊಂದರೆ ಕಡಿಮೆಯಾಗುತ್ತದೆ.
    *ಓಂ* ಮತ್ತು *ಬೆನ್ನೆಲುಬು* :
    'ಓಂ' ಉಚ್ಛಾರ ಮಾಡುವುದರಿಂದ ಉಂಟಾಗುವ ಕಂಪನದಿಂದ ಬೆನ್ನೆಲುಬು ಗಟ್ಟಿಯಾಗುತ್ತದೆ ಹಾಗೂ ಮುಂದೆ ಇದರಿಂದ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ..
    "ಓಂ" ಕಾರ ಎಂಬ ಮಂತ್ರದ ಹಿಂದಿರುವ " ವಿಜ್ಞಾನ " ಭಾರತೀಯ ವೇದ ಪರಂಪರೆಗೆ ಬಹುದೊಡ್ಡ ಇತಿಹಾಸ ಇದೆ.ಆಧ್ಯಾತ್ಮಿಕ ಸಾಧನೆಯ ಮಾರ್ಗದಲ್ಲಿ ವೇದ ಮಂತ್ರಗಳು ಮನುಷ್ಯನನ್ನು ಆರೋಗ್ಯಕರವಾದ ಮಾರ್ಗದಲ್ಲಿ ಮುನ್ನಡೆಸಲು ಸಹಕಾರಿಯಾಗಿದೆ ಈ ಮಾರ್ಗದಲ್ಲಿ ಪ್ರಥಮವಾಗಿ ನಿಲ್ಲುವುದೇ "ಓಂ" ಕಾರದ ಮಂತ್ರ ಈ "ಓಂ" ಕಾರವನ್ನು ಮಹಿಳೆಯರು - ಪುರುಷರು ಯಾರೇ ಆಗಲಿ "ಸ್ವರ ಕ್ರಮ" ವನ್ನು ಅನುಸರಿಸಿ ಉಚ್ಚರಿಸಿದರೆ ದೇಹ ಮತ್ತು ಆತ್ಮದ ಸಾಕ್ಷಾತ್ಕಾರವನ್ನು ಅನುಭವಿಸಬಹುದು
    "ಓಂ" ಎನ್ನುವ ಮಂತ್ರ "ಅ ಉ ಮ " ಎಂಬ ಮೂರು ಶಬ್ದಗಳನ್ನು ಒಳಗೊಂಡಿದೆ.ಪ್ರತಿನಿತ್ಯ ಬೆಳಗ್ಗೆ 4 ಗಂಟೆಗೆ ಸೂರ್ಯೋದಯದ ಸಮಯದಲ್ಲಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಏಕಾಂತದಲ್ಲಿ ಕುಳಿತು ಓಂಕಾರ ಮಂತ್ರವನ್ನು ಜಪಿಸಿದರೆ ನಿಮ್ಮ ಇಡೀ ದೇಹ ( ಮೆದುಳಿನಿಂದ ಪಾದದವರೆಗೂ ) ಕಂಪಿಸುತ್ತದೆ .ಪರಿಣಾಮ ದೇಹದ ಜೊತೆಯಲ್ಲಿ ಆತ್ಮ ವೂ ಜಾಗೃತವಾಗುವುದರಿಂದ ದೇಹದ ನರ ನಾಡಿಗಳು ಚೈತನ್ಯಪೂರ್ವಕವಾಗಿ ಕೆಲಸ ಮಾಡುತ್ತದೆ
    ಓಂಕಾರವನ್ನು ಕಣ್ಣುಗಳನ್ನು ಮುಚ್ಚಿಕೊಂಡು ಹೀಗೆ ಜಪಿಸಬೇಕು.... ಆರಂಭದ ಓ..ಎನ್ನುವ ಶಬ್ದವನ್ನು ಜೋರಾಗಿ ಕನಿಷ್ಟ ಪಕ್ಷ 10 ಸೆಕೆಂಡುಗಳು ಹೇಳುತ್ತಾ ತುಟಿಗಳನ್ನು ತೆರೆದು ಉಚ್ಚರಿಸಿ ಅಂ ಎನ್ನುವ ಶಬ್ಧ ಬಂದಾಗ ತುಟಿಗಳನ್ನು ಮುಚ್ಚಿಕೊಂಡು" ಮ್" ಎಂದು ಹತ್ತು ಸೆಕೆಂಡುಗಳು ಉಚ್ಚರಿಸಿ ಹೀಗೆ ತುಟಿಗಳನ್ನು ಮುಚ್ಚಿಕೊಂಡು "ಮ್" ಶಬ್ದವನ್ನು ನೀವು ಉಚ್ಚರಿಸುವಾಗ ನಿಮ್ಮ ಮೆದುಳಿನ ನರಗಳು ಅಲುಗಾಡುವ ಅದ್ಭುತವಾದ ಅನುಭವ ನಿಮಗಾಗುತ್ತದೆ ಹೀಗೆ ಈ ಕ್ರಮವನ್ನು ಅನುಸರಿಸಿ ಪ್ರತಿನಿತ್ಯ "ಓಂ" ಕಾರ ಮಂತ್ರವನ್ನು 100 ಸಲ ಜಪಿಸುತ್ತಾ ಬಂದರೆ ಮಾನಸಿಕ ಖಾಯಿಲೆಗಳು ದೈಹಿಕ ಖಾಯಿಲೆಗಳಾದ ಸುಸ್ತು..ತಲೆನೋವು ..ಹೃದಯ ಸಂಬಂಧಿ ಖಾಯಿಲೆಗಳು ರಕ್ತದೊತ್ತಡ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.
    *ಮಕ್ಕಳಿಗೆ ಈ ಓಂಕಾರದ ಮಂತ್ರದ ಜಪದ ಅಭ್ಯಾಸ ಮಾಡಿಸಿದರೆ ಓದಿನಲ್ಲಿ ಏಕಾಗ್ರತೆ ಮೂಡುವುದರ ಜೊತೆಯಲ್ಲಿ ನೆನಪಿನ ಶಕ್ತಿಯೂ ಹೆಚ್ಚುತ್ತದೆ!*
    🙏 🙏
    ಸಂಗ್ರಹ . ಕರುನಾಡು ಸತ್ಸಂಗ ಪರಿವಾರ
    7 min

About Dr Balakrishna Maddodi

From the publisher's feed

Hi