Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • 🌸 ಧನುರ್ಮಾಸ ಎಲ್ಲಕ್ಕಿಂತ ಶ್ರೇಷ್ಠ ಮಾಸ 🌸
    🌸 ಧನುರ್ಮಾಸ ಎಲ್ಲಕ್ಕಿಂತ ಶ್ರೇಷ್ಠ ಮಾಸ 🌸
    ಈ ಧನುರ್ಮಾಸದ ತಿಂಗಳಿನಲ್ಲಿ ಎಲ್ಲಾ ದೈವಗಳು ತಮ್ಮ ಆರಾಧ್ಯ ದೇವನಿಗೆ ಸ್ವತ: ತಾವೇ ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಮಾಡುವ ಶ್ರೇಷ್ಠವಾದ ಮಾಸ
    🌺ಸೂರ್ಯದೇವನು ಧನುರಾಶಿಯಿಂದ ಮಕರ ರಾಶಿಗೆ ಸ್ಥಳಾಂತರವಾಗುವ 30 ದಿನಗಳ ಅವಧಿಯನ್ನು ಧನುರ್ಮಾಸ ಎಂದು ಪರಿಗಣಿಸಲಾಗುತ್ತದೆ. ಇದನ್ನು ಕರ್ಮಮಾಸ ಎಂದೂ ಹೇಳುವುದುಂಟು. ಧನುರ್ಮಾಸ ದೇವತಾರಾಧನೆಗೆ ಮೀಸಲಾದ ತಿಂಗಳು. ವಿಶೇಷವಾಗಿ ಭಗವಾನ್‌ ವಿಷ್ಣುವನ್ನು ಈ ಸಂದರ್ಭದಲ್ಲಿ ಪ್ರಾರ್ಥಿಸಲಾಗುತ್ತದೆ. ಸೂರ್ಯನ ಚಲನೆಗೆ ಅನುಗುಣವಾಗಿ ಈ ಮಾಸ ಡಿಸೆಂಬರ್‌ 16ಕ್ಕೆ ಶುರುವಾಗಿ ಜನವರಿ 14ಕ್ಕೆ ಕೊನೆಯಾಗುತ್ತದೆ. ಹಿಂದು ಪಂಚಾಂಗದ 12 ಮಾಸಗಳಲ್ಲಿ ಮಾರ್ಗಶಿರ ಮಾಸ ದೇವತಾರಾಧನೆಗೆ ಅತ್ಯಂತ ಶ್ರೇಷ್ಠವಾದುದು ಎಂದು ಪರಿಗಣಿಸಲ್ಪಟ್ಟಿದೆ. ಚಾಂದ್ರಮಾನ ಮಾಸಗಳ ಪೈಕಿ ಮಾರ್ಗಶಿರ ಮಾಸ ಎಂದರೆ ಸೌರಮಾನ ಕಾಲಗಣನೆಯ ಪ್ರಕಾರ, ಧನುರ್ಮಾಸ ಎಂದು ಕರೆಯಲ್ಪಡುವ ಈ 9ನೇ ತಿಂಗಳು. ಆದ್ದರಿಂದಲೇ ಈ ತಿಂಗಳಲ್ಲಿ ಮಹಾವಿಷ್ಣುವಿನ ಆರಾಧನೆಗೆ ಹೆಚ್ಚಿನ ಪ್ರಾಶಸ್ತ್ಯ.
    🌺 ಡಿಸೆಂಬರ್- ಜನವರಿ ತಿಂಗಳುಗಳು ಹತ್ತಿರ ಬರುತ್ತಿದ್ದಂತೆ ಚಳಿಯ ಪ್ರಭಾವ ಹೆಚ್ಚಾಗುತ್ತದೆ. ಅದನ್ನು ತಡೆದುಕೊಳ್ಳಲು ಉಣ್ಣೆಯ ವಸ್ತ್ರ ಧರಿಸಲು, ಬೆಚ್ಚಗಿರಲು ಎಲ್ಲರೂ ಇಷ್ಟಪಡುವುದನ್ನು ಕಾಣುತ್ತೇವೆ. ಸಾಮಾನ್ಯವಾಗಿ ಇದೇ ಸಮಯದಲ್ಲಿ `ಧನುರ್ಮಾಸ’ದ ಆಚರಣೆ ಕಂಡು ಬರುತ್ತದೆ. ಪ್ರಾತಃಕಾಲದಲ್ಲಿ ಬೇಗನೇ ಎದ್ದು ದೇವರ ಪ್ರಾರ್ಥನೆ, ಪೂಜೆಗಳನ್ನು ಪೂರೈಸಿ ಭೋಜನವನ್ನು ಮುಗಿಸುವುದು ಕಾಣುತ್ತದೆ. ಇದರ ಹಿನ್ನೆಲೆಯೇನು? ಈ ವಿಷಯದಲ್ಲಿ ಸ್ವಲ್ಪ ಅರಿಯುವ ಪ್ರಯತ್ನ ನಡೆಸೋಣ.
    🌺ಬಹಳ ಜನರು ಮಾಸ, ದಿನ, ಗಳಿಗೆಯನ್ನು ಲೆಕ್ಕಿಸದೆ ತಮಗೆ ಬೇಕಾದ ಸಮಯದಲ್ಲಿ ಎಲ್ಲಾ ಕೆಲಸಗಳನ್ನೂ ಪ್ರಾರಂಭಿಸುತ್ತಾರೆ. ಇನ್ನು ಕೆಲವರು ಅರ್ಧ ಆ ಕಡೆ ಇರುತ್ತಾರೆ. ಇನ್ನರ್ಧ ಈ ಕಡೆ ಇರ್ತಾರೆ. ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಎಲ್ಲವನ್ನೂ ಅನುಸರಿಸುತ್ತಾರೆ. ಮತ್ತೆ ಕೆಲವರು ತಮ್ಮ ಮನೆಯ ಪುರೋಹಿತರು ಏನು ಹೇಳುತ್ತಾರೋ ಅದನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ. ಅವರು ರಾಹುಕಾಲ, ಯಮಗಂಡಕಾಲದಲ್ಲಿ ಕೆಲಸ ಪ್ರಾರಂಭಿಸುವುದಿಲ್ಲ. ವಾಸ್ತುಪ್ರಕಾರ ಸರಿಯಾದ ದಿಕ್ಕಿನಲ್ಲೇ ನಿಂತು/ಕುಳಿತು ಕೆಲಸ ಶುರು ಮಾಡುತ್ತಾರೆ. ಧನುರ್ ಮಾಸವನ್ನು ಶೂನ್ಯ ಮಾಸವೆಂದು ಅನೇಕರು ತಪ್ಪು ತಿಳಿದುಕೊಂಡಿದ್ದಾರೆ. ಧನುರ್ಮಾಸ ಎಲ್ಲಾ ಕೆಲಸಕ್ಕೂ ಬಹಳ ಶ್ರೇಷ್ಠವಾದ ಮಾಸ. ಧನುರ್ಮಾಸವನ್ನು ಮಾರ್ಗಶಿರ್ಷ ಮಾಸವೆಂದು ಸಹ ಕರೆಯುತ್ತಾರೆ. ಈ ತಿಂಗಳನ್ನು ಧನುರ್ ರಾಶಿ ಆವರಿಸಿಕೊಂಡಿರುವುದರಿಂದ ಇದಕ್ಕೆ ಧನುರ್ ಮಾಸವೆಂದು ಹೆಸರಿಸಲಾಗಿದೆ.
    🌻 ಶ್ರೀ ಕೃಷ್ಣನಿಗೆ ಪ್ರಿಯವಾದ ಮಾಸ
    🌺ಕೃಷ್ಣನ ಪರಮಭಕ್ತರಿಗೆ ಇದು ತುಂಬಾ ಪ್ರಿಯವಾದ ಮಾಸ, ಏಕೆಂದರೆ ಕೃಷ್ಣ ತಿರುಮಲದಲ್ಲಿ ನೆಲೆಸಿರುವ ಶ್ರೀನಿವಾಸ/ವೆಂಕಟೇಶನ ರೂಪದಲ್ಲಿ ಭೂಲೋಕದಲ್ಲಿ ನೆಲೆಸಿದಾಗ ಭೂದೇವಿ ಅಂಡಾಳ್ ಒಬ್ಬ ಸಾಮಾನ್ಯ ಹುಡುಗಿಯಾಗಿ, ಪ್ರತಿದಿನ ತನ್ನ ಪ್ರೀತಿಯ ವೆಂಕಟೇಶನಿಗಾಗಿ ಹೂಮಾಲೆ ಮಾಡಿ ಮೊದಲು ಆ ಮಾಲೆಯನ್ನು ತಾನೇ ಧರಿಸಿಕೊಂಡು ನೋಡಿ, ಅದು ಚೆನ್ನಾಗಿ ಕಾಣಿಸುತ್ತದೆ ಎಂದ ಮೇಲೆ ಅದನ್ನು ವೆಂಕಟೇಶನ ಕೊರಳಿಗೆ ಹಾಕುತ್ತಿದ್ದಳು. ಇದೇ ಮಾರ್ಗಶೀರ್ಷ ಮಾಸದಲ್ಲಿ ತನ್ನ ಪ್ರಿಯತಮನಾದ ವೆಂಕಟೇಶನಿಗಾಗಿ ತಮಿಳಿನಲ್ಲಿ ತಿರುಪ್ಪಾವೈ ಮೂವತ್ತು ಕವಿತೆಗಳು ಎಂಬ ಪ್ರೀತಿ ಗ್ರಂಥವನ್ನು ರಚಿಸಿದಳು. ಇವತ್ತಿಗೂ ಶ್ರೀವೈಷ್ಣವರು ನಾಲಾಯಿರಂ ತಿರುಪ್ಪಾವೈ ಕೃತಿಗಳೇ ವೆಂಕಟೇಶನಿಗೆ ಪ್ರಿಯವಾದದ್ದೆಂದು ಪಠಿಸುತ್ತಾರೆ.
    🌺ವೆಂಕಟೇಶನ ಯಾವುದೇ ದೇವಸ್ಥಾನಕ್ಕೆ ಹೋದರೂ, ತಿರುಮಲ ದೇವಸ್ಥಾನದಲ್ಲೂ ಅಂಡಾಳ್ ರಚಿಸಿರುವ ಪ್ರೀತಿಯ ಪ್ರಬಂಧವನ್ನು ಹೇಳಿಯೇ ದೇವರನ್ನು ಎಬ್ಬಿಸುವುದು. ಹಾಗೇ ಅಂಡಾಳ್ ವೆಂಕಟೇಶನಿಗಾಗಿ ರಚಿಸಿರುವ ಲಾಲಿ ಹಾಡು ಹಾಡಿಯೇ ಅವನನ್ನು ಮಲಗಿಸುವುದು. ಪರಮಾತ್ಮನನ್ನು ಪ್ರೀತಿಸಲು ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ. ಭೂದೇವಿ ಅಂಡಾಳ್ ರೂಪದಲ್ಲಿ ಪ್ರತಿದಿನ ದೇವಸ್ಥಾನದ ಮುಂದೆ ಕುಳಿತು ವೆಂಕಟೇಶನಿಗಾಗಿ ಪ್ರೀತಿಯಿಂದ ಹಾಡುಗಳನ್ನು ಹಾಡಿ ದೇವರನ್ನು ಖುಷಿ ಪಡಿಸುತ್ತಿದ್ದಳು. ಅವಳು ವೆಂಕಟೇಶನನ್ನು ಪ್ರೀತಿಸಿದ ಮಾಸ ಮಾರ್ಗಶೀರ್ಷ. ಅದೇ ಮಾಸದಲ್ಲಿ ವೆಂಕಟೇಶ/ಶ್ರೀನಿವಾಸ ಅಂಡಾಳ್ ಪ್ರೀತಿಗೆ ಮೆಚ್ಚಿ ಪ್ರತ್ಯಕ್ಷನಾಗಿ ಅವಳನ್ನು ಮದುವೆಯಾದ. ಹಾಗಾಗಿ ಇದು ದೇವರಿಗೆ ಪ್ರಿಯವಾದ ಮಾಸ.
    🌻 ದೇವತೆಗಳ ಬ್ರಾಹ್ಮಿ ಮುಹೂರ್ತ
    🌺ನಾವು ಪಂಚಾಂಗದ ಪ್ರಕಾರ ಒಂದು ವರ್ಷವನ್ನು ಎರಡು ಭಾಗಗಳನ್ನಾಗಿ ಮಾಡಿದ್ದೇವೆ. ಉತ್ತರಾಯಣ ಪುಣ್ಯಕಾಲ ಮತ್ತು ದಕ್ಷಿಣಾಯನ ಪುಣ್ಯಕಾಲ ನಮ್ಮ ಒಂದು ವರ್ಷ ದೇವತೆಗಳಿಗೆ ಒಂದು ದಿನ. ಮಾರ್ಗಶೀರ್ಷ ಮಾಸ ದಕ್ಷಿಣಾಯನ ಪುಣ್ಯಕಾಲದಲ್ಲಿ ಬರುತ್ತದೆ಼. ಉತ್ತರಾಯಣ ಪುಣ್ಯಕಾಲ ದೇವತೆಗಳಿಗೆ ಬೆಳಿಗ್ಗೆ ದಕ್ಷಿಣಾಯನ ಪುಣ್ಯಕಾಲ ರಾತ್ರಿ. ಈ ಮಾಸ ರಾತ್ರಿ ಮುಗಿಯುತ್ತಿರುವ ಸಮಯ, ನಾವು ಬ್ರಾಹ್ಮೀಮುಹೂರ್ತವೆಂದು ಯಾವ ಸಮಯವನ್ನು ಕರೆಯುತ್ತೇವೋ ಅಂತಹ ಶ್ರೇಷ್ಠ ಮುಹೂರ್ತ ದೇವತೆಗಳಿಗೆ ಈ ಇಡೀ ಮಾಸ. ಈ ತಿಂಗಳು ಪೂರ್ತಿ ಬ್ರಹ್ಮ ಮುಹೂರ್ತವೇ. ಈ ಮಾಸದಲ್ಲಿ ದೇಹವನ್ನು ದಂಡಿಸಿ, ಚಳಿಯಿದ್ದರೂ ನದಿಯಲ್ಲಿ ಸ್ನಾನ ಮಾಡಿ ಬರೀ ದೇವರ ಕಾರ್ಯಗಳನ್ನೇ ಮಾಡಿದರೆ ನಮ್ಮ ಇಷ್ಟಾರ್ಥಗಳು ಫಲಿಸುತ್ತವೆ. ಹಾಗಂತ ಈ ಸಮಯದಲ್ಲಿ ಬೇರೆ ಒಳ್ಳೆ ಕೆಲಸ ಮಾಡಬಾರದೂ ಅಂತಲ್ಲ. ಕೆಲವರು ಮದುವೆ, ನಾಮಕರಣ, ಬ್ರಹ್ಮೋಪದೇಶ ಅಷ್ಟೇ ಯಾಕೆ ಮನೆ ಸೈಟು ಖರೀದಿಸುವವರು ಸಹ ಈ ಮಾಸವನ್ನು ಶೂನ್ಯಮಾಸವೆಂದು ಪರಿಗಣಿಸಿ ಎಲ್ಲವನ್ನೂ ಮುಂದೂಡುತ್ತಾರೆ. ಖಂಡಿತ ಹಾಗೆ ಮಾಡಬೇಕಿಲ್ಲ.
    🌻 ಶೂನ್ಯ ಮಾಸ ಯಾವುದು
    🌺ಪುಷ್ಯ ನಕ್ಷತ್ರದಿಂದ ಪ್ರಾರಂಭವಾಗುವ ಮಾಸವನ್ನು ಶೂನ್ಯ ಮಾಸವೆನ್ನುತ್ತಾರೆ. ಏಕೆಂದರೆ ಅದು ಶನಿಗೆ ಸಂಬಂಧಪಟ್ಟ ಮಾಸ. ಆ ತಿಂಗಳಿನಲ್ಲಿ ಏನೇ ಕೆಲಸಕ್ಕೆ ಕೈ ಹಾಕಿದರೂ ಅದರ ಫಲಿತಾಂಶ ಶೂನ್ಯವಾಗಿರುತ್ತದೆ ಎಂಬ ನಂಬಿಕೆಯಿದೆ. ಶೂನ್ಯಮಾಸ ಸಾಮಾನ್ಯವಾಗಿ ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಯಾವುದಾದರೂ ಒಂದು ತಿಂಗಳು ಬಂದು ಹೋಗುತ್ತದೆ. ಅದನ್ನು ಆಷಾಢ ಮಾಸವೆಂದು ಸಹ ಕರೆಯುತ್ತಾರೆ.
    10 min
  • ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ
    ಅ. ತೆಂಗಿನಕಾಯಿಯಲ್ಲಿ ಒಳ್ಳೆಯ ಮತ್ತು ಕೆಟ್ಟ ಹೀಗೆ ಎರಡೂ ರೀತಿಯ ಲಹರಿಗಳು ಸೆಳೆಯಲ್ಪಡುತ್ತವೆ ಅಲ್ಲದೇ, ತೆಂಗಿನಕಾಯಿಯಲ್ಲಿ ರಜ-ತಮಾತ್ಮಕ ಲಹರಿಗಳು ಕಡಿಮೆ ಸಮಯದಲ್ಲಿ ಆಕರ್ಷಿಸುತ್ತವೆ. ತೆಂಗಿನಕಾಯಿಯು ಸಾತ್ತ್ವಿಕವಾಗಿರುವುದರಿಂದ ಬಹಳಷ್ಟು ರಜ-ತಮಾತ್ಮಕ ಲಹರಿಗಳು ಅದರ ಒಳಗೆ ವಿಘಟನೆಯಾಗುತ್ತವೆ.
    ಆ. ತೆಂಗಿನಕಾಯಿಯಲ್ಲಿ ದೃಷ್ಟಿ ತೆಗೆಯುವ ಕ್ಷಮತೆಯು ಇತರ ವಸ್ತುಗಳಿಗಿಂತ ಹೆಚ್ಚಿರುವುದರಿಂದ, ವ್ಯಕ್ತಿಯ ಸೂಕ್ಷ್ಮದೇಹದಲ್ಲಿರುವ ಕಪ್ಪು ಶಕ್ತಿಯ ಆವರಣವನ್ನು ಸೆಳೆದುಕೊಳ್ಳುವಲ್ಲಿ ಅದು ಶ್ರೇಷ್ಠವಾಗಿದೆ. ಯಾವುದೇ ರೀತಿಯ ದೊಡ್ಡ ದೃಷ್ಟಿಯೂ ಸಹ ತೆಂಗಿನಕಾಯಿಯಿಂದ ಕಡಿಮೆಯಾಗುತ್ತದೆ.
    ಇ. ತೆಂಗಿನಕಾಯಿಯು ಸರ್ವಸಮಾವೇಶಕವಾಗಿರುವುದರಿಂದ ಅದು ಎಲ್ಲ ವಿಧದ ದೃಷ್ಟಿಯನ್ನು ಅಥವಾ ಮಾಟವನ್ನು ತೆಗೆಯಲು ಉಪಯುಕ್ತವಾಗಿದೆ.
    ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಯುವ ಪದ್ಧತಿ
    ಅ. ಪ್ರಾರ್ಥನೆ
    ೧. ದೃಷ್ಟಿ ತಗಲಿರುವ ವ್ಯಕ್ತಿಯು ಮಾರುತಿಗೆ ನಮಸ್ಕರಿಸಿ ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು : ‘ಹೇ ಮಾರುತಿ, ನನ್ನಲ್ಲಿರುವ (ತಮ್ಮ ಹೆಸರನ್ನು ಹೇಳಬೇಕು) ಎಲ್ಲ ತ್ರಾಸದಾಯಕ ಸ್ಪಂದನಗಳನ್ನು ಈ ತೆಂಗಿನಕಾಯಿಯಲ್ಲಿ ಆಕರ್ಷಿಸಿ ನಾಶಗೊಳಿಸು.’
    ೨. ದೃಷ್ಟಿ ತೆಗೆಯುವ ವ್ಯಕ್ತಿಯು ಮಾರುತಿಗೆ ನಮಸ್ಕರಿಸಿ ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು : ‘ಹೇ ಮಾರುತಿ, ದೃಷ್ಟಿ ತಗಲಿದ ವ್ಯಕ್ತಿಯ (ವ್ಯಕ್ತಿಯ ಹೆಸರನ್ನು ಹೇಳಬೇಕು) ದೇಹದಲ್ಲಿನ ಹಾಗೂ ದೇಹದ ಹೊರಗಿನ ಎಲ್ಲ ತ್ರಾಸದಾಯಕ ಸ್ಪಂದನಗಳನ್ನು ನೀನು ಈ ತೆಂಗಿನಕಾಯಿಯಲ್ಲಿ ಸೆಳೆದುಕೊಂಡು ನಾಶಗೊಳಿಸು. ದೃಷ್ಟಿಯನ್ನು ತೆಗೆಯುವಾಗ ನಿನ್ನ ಕೃಪೆಯಿಂದ ನನ್ನ ಸುತ್ತಲೂ ಸಂರಕ್ಷಣಾಕವಚವು ನಿರ್ಮಾಣವಾಗಲಿ.’
    ಆ. ಕೃತಿ
    ೧. ಯಾವ ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಯಬೇಕಾಗಿದೆಯೋ, ಆ ತೆಂಗಿನಕಾಯಿಯ ಜುಟ್ಟನ್ನು ಬಿಟ್ಟು ಉಳಿದ ಸಿಪ್ಪೆಯನ್ನು ಸುಲಿಯಬೇಕು.
    ೨. ದೃಷ್ಟಿಯನ್ನು ತೆಗೆಯುವವನು ತೆಂಗಿನಕಾಯಿಯನ್ನು ತನ್ನ ಬೊಗಸೆಯಲ್ಲಿ ಹಿಡಿದುಕೊಂಡು ದೃಷ್ಟಿ ತಗಲಿದ ವ್ಯಕ್ತಿಯ ಎದುರು ನಿಲ್ಲಬೇಕು. ತೆಂಗಿನಕಾಯಿಯ ಜುಟ್ಟಿನ ತುದಿಯು ದೃಷ್ಟಿ ತಗಲಿದ ವ್ಯಕ್ತಿಯ ಕಡೆಗಿರಬೇಕು.
    ೩. ದೃಷ್ಟಿ ತೆಗೆಸಿಕೊಳ್ಳುವವನು ತೆಂಗಿನಕಾಯಿಯ ಜುಟ್ಟಿನ ಕಡೆಗೆ ನೋಡುತ್ತಿರಬೇಕು.
    ೪. ದೃಷ್ಟಿ ತಗಲಿದ ವ್ಯಕ್ತಿಯ ಕಾಲಿನಿಂದ ತಲೆಯವರೆಗೆ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತೆಂಗಿನಕಾಯಿಯನ್ನು ವರ್ತುಲಾಕಾರದಲ್ಲಿ ಮೂರು ಸಲ ತಿರುಗಿಸಬೇಕು. ನಂತರ ಆ ವ್ಯಕ್ತಿಯ ಸುತ್ತಲೂ ಮೂರು ಸಲ ಪ್ರದಕ್ಷಿಣೆ ಹಾಕಬೇಕು. ಪ್ರದಕ್ಷಿಣೆಯನ್ನು ಹಾಕುವಾಗ ತೆಂಗಿನಕಾಯಿಯ ಜುಟ್ಟು ಸತತವಾಗಿ ದೃಷ್ಟಿ ತಗಲಿದ ವ್ಯಕ್ತಿಯ ಕಡೆಗಿರಬೇಕು. (ಎಲ್ಲರನ್ನು ಒಟ್ಟಿಗೆ ಕೂರಿಸಿ ಸಾಮೂಹಿಕ ದೃಷ್ಟಿಯನ್ನೂ ತೆಗೆಯಬಹುದು.)
    8 min
  • The word "Hindu" originates from the Sanskrit word for river, sindhu.
    The Indus River running through northwest India into Pakistan received its name from the Sanskrit term sindhu. The Persians designated the land around the Indus River as Hindu, a mispronunciation of the Sanskrit sindhu. Sanskrit word for river, sindhu. The Indus River running through northwest India into Pakistan received its name from the Sanskrit term sindhu. The Persians designated the land around the Indus River as Hindu, a mispronunciation of the Sanskrit sindhu. In 1921 archaeologists uncovered evidence of an ancientù civilization along the Indus River, which today is dated to around 3300BC and thought to represent one jùuof the largest centers of human habitation in the ancient world. The Indus Valley Civilization extend quite far from the banks of the Indus River including parts of contemporary Pakistan, Afghanistan, Iran, and India. Scholars believe that the Indus Valley Civilization had begun to decline by 1800BC, possibly due to climate change. Because of its location between the Indian Subcontinent and the Iranian plateau, the area has seen many military invasions including Alexander the Great, the Persian empire, and the Kushan empire. In 712AD, the Muslims invaded the Indus Valley. To distinguish themselves, they called all non-Muslims Hindus; the name of the land became, by default, the name of the people and their religious.
    4 min
  • ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸಿ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
    ತುಳಸಿಯ ಗಿಡವು ವಾಯುಮಂಡಲದಲ್ಲಿನ ಸಾತ್ತ್ವಿಕತೆಯನ್ನು ಸೆಳೆದುಕೊಳ್ಳುತ್ತದೆ ಮತ್ತು ಅದನ್ನು ಜೀವದ ಕಡೆಗೆ ಪ್ರಕ್ಷೇಪಿಸುತ್ತದೆ. ತುಳಸಿಯಲ್ಲಿ ಬ್ರಹ್ಮಾಂಡದಲ್ಲಿನ ಕೃಷ್ಣತತ್ತ್ವವನ್ನು ಸೆಳೆದುಕೊಳ್ಳುವ ಕ್ಷಮತೆಯೂ ಅಧಿಕವಾಗಿರುತ್ತದೆ.
    tulsi250.jpg
    ೨. ಲಾಭಗಳು
    ಅ. ತುಳಸಿಯ ಎಲೆಯಿಂದ ನೈವೇದ್ಯವನ್ನು ಅರ್ಪಿಸುವುದರಿಂದ ಸಾತ್ತ್ವಿಕ ಅನ್ನದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮಲಹರಿಗಳನ್ನು ತುಳಸಿಯ ಎಲೆಯು ಗ್ರಹಿಸಿಕೊಳ್ಳುತ್ತದೆ. ಹೀಗೆ ಸೂಕ್ಷ್ಮಲಹರಿಗಳಿಂದ ತುಂಬಿಕೊಂಡಿರುವ ಎಲೆಯನ್ನು ದೇವರಿಗೆ ಅರ್ಪಿಸುವುದರಿಂದ ದೇವತೆಯ ತತ್ತ್ವವು ಆ ಲಹರಿಗಳನ್ನು ಕೂಡಲೇ ಸೆಳೆದುಕೊಳ್ಳುತ್ತದೆ. ಈ ರೀತಿ ನಾವು ಅರ್ಪಿಸಿದ ಅನ್ನವು ತುಳಸಿ ಎಲೆಯ ಮಾಧ್ಯಮದಿಂದ ದೇವತೆಗೆ ಬೇಗನೇ ತಲುಪಿ ದೇವತೆಯು ಸಂತುಷ್ಟಳಾಗುತ್ತಾಳೆ.
    ಆ. ತುಳಸಿಯ ಎಲೆಯನ್ನು ನೈವೇದ್ಯದ ಮೇಲಿಡುವುದರಿಂದ ಅನ್ನದ ಮೇಲೆ ಬಂದಿರುವ ರಜ-ತಮ ಕಣಗಳ ಆವರಣವು ಕಡಿಮೆಯಾಗುತ್ತದೆ. ತುಳಸಿ ಎಲೆಯಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕ ಲಹರಿಗಳಿಂದ ನೈವೇದ್ಯದ ಸುತ್ತಲಿನ ವಾಯುಮಂಡಲವು ಶುದ್ಧವಾಗಿ ನೈವೇದ್ಯದ ಮೇಲೆ ಕೆಟ್ಟ ಶಕ್ತಿಗಳ ಹಲ್ಲೆಯಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ.
    ಇ. ಭಾವಪೂರ್ಣವಾಗಿ ನೈವೇದ್ಯದ ಮೇಲೆ ತುಳಸಿ ಎಲೆಯನ್ನಿಡುವುದರಿಂದ ಅದು ಅದರ ಗುಣಧರ್ಮಕ್ಕನುಸಾರ ದೇವತೆಯಿಂದ ಬರುವ ಚೈತನ್ಯವನ್ನು ಗ್ರಹಿಸಿಕೊಂಡು ನೈವೇದ್ಯದಲ್ಲಿ ಹರಡುತ್ತದೆ. ಇಂತಹ uqpಸುವುದರಿಂದ ಜೀವಕ್ಕೆ ಚೈತನ್ಯದ ಲಹರಿಗಳು ಸಿಗಲು ಸಹಾಯವಾಗುತ್ತದೆ.
    – ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೮.೫.೨೦೦೫, ಸಾಯಂ. ೬.೧೪ ಮತ್ತು ೧೨.೮.೨೦೦೪, ಮಧ್ಯಾಹ್ನ ೪.೨೯)
    4 min
  • ತುಳಸಿ ಪೂಜೆಯ ವಿಶೇಷ
    ತುಳಸಿ ವಿವಾಹ ಸಮಾರಂಭವು ಯಾವುದೇ ಸಾಂಪ್ರದಾಯಿಕ ಹಿಂದೂ ವಿವಾಹದಂತೆ ಇರುತ್ತದೆ. ವಿವಿಧ ದೇವಾಲಯಗಳಲ್ಲಿ ಆಚರಣೆಗಳು ಕಂಡುಬರುತ್ತವೆ, ಆದರೂ ಒಬ್ಬರು ತಮ್ಮ ಮನೆಯಲ್ಲಿ ಈ ಮದುವೆಯನ್ನು ಸುಲಭವಾಗಿ ಮಾಡಬಹುದು. ತುಳಸಿ ವಿವಾಹವನ್ನು ಮಾಡುವವರು ಈ ದಿನ ಮುಂಜಾನೆಯಿಂದ ಸಂಜೆಯವರೆಗೆ ಉಪವಾಸವನ್ನು ಮಾಡಬೇಕು.
    ​ತುಳಸಿ ಅಲಂಕಾರ
    ಇದರೊಂದಿಗೆ ತುಳಸಿ ಗಿಡದ ಸುತ್ತ ಕಬ್ಬಿನ ಗಿಡವನ್ನು ಇಟ್ಟು ಮಂಟಪವನ್ನು ಮಾಡುತ್ತಾರೆ. ಜೊತೆಗೆ ಬಣ್ಣಬಣ್ಣದ ರಂಗೋಲಿಯಿಂದ ತುಳಸಿಯನ್ನು ಅಲಂಕರಿಸಲಾಗುತ್ತದೆ. ತುಳಸಿ ಸಸ್ಯವು ಭಾರತೀಯ ವಧುವಿನಂತೆಯೇ ಬೆರಗುಗೊಳಿಸುವ ಸೀರೆಗಳು, ಕಿವಿಯೋಲೆಗಳು ಮತ್ತು ಇತರ ಆಭರಣಗಳಿಂದ ಸುಂದರವಾಗಿ ಅಲಂಕರಿಸಲ್ಪಡುತ್ತದೆ. ತುಳಸಿ ಗಿಡಕ್ಕೆ ಸಿಂಧೂರದ ಪುಡಿ ಮತ್ತು ಅರಿಶಿನವನ್ನು ಸಹ ಅನ್ವಯಿಸಲಾಗುತ್ತದೆ. ಕಾಗದದ ಮೇಲೆ ಚಿತ್ರಿಸಿದ ಮುಖವನ್ನು ತುಳಸಿ ಸಸ್ಯಕ್ಕೆ ಅನ್ವಯಿಸಲಾಗುತ್ತದೆ, ಅದಕ್ಕೆ ಮೂಗುತಿ ಮತ್ತು ಹಣೆಗೆ ಸಿಂಧೂರವನ್ನೂ ಹಚ್ಚಲಾಗುತ್ತದೆ.
    ತುಳಸಿಯ ವಿವಾಹಕ್ಕಾಗಿ ವರನನ್ನು ಕಂಚಿನ ವಿಗ್ರಹವಾಗಿ ಅಥವಾ ವಿಷ್ಣುವಿನ ಚಿತ್ರವನ್ನು ಚಿತ್ರಿಸಲಾಗುತ್ತದೆ. ಕೆಲವೊಮ್ಮೆ ಭಗವಾನ್ ವಿಷ್ಣುವನ್ನು ಸಂಕೇತಿಸುವ 'ಸಾಲಿಗ್ರಾಮ ಕಲ್ಲ'ನ್ನು ಕೂಡ ಪೂಜೆಗೆ ಬಳಸಲ್ಪಡುತ್ತದೆ. ನಂತರ ಶ್ರೀಕೃಷ್ಣ ಅಥವಾ ವಿಷ್ಣುವಿನ ಚಿತ್ರವನ್ನು ಧೋತಿಯಲ್ಲಿ ಮುಚ್ಚಲಾಗುತ್ತದೆ. ಈ ಭವ್ಯವಾದ ಸಂದರ್ಭದಲ್ಲಿ ವಿಶೇಷ ಸಸ್ಯಾಹಾರಿ ಭೋಜನವನ್ನು ತಯಾರಿಸಲಾಗುತ್ತದೆ. ಹೆಚ್ಚಿನ ಮನೆಗಳಲ್ಲಿ ಅಕ್ಕಿ ಮತ್ತು ಉದ್ದಿನಬೇಳೆ, ಕೆಂಪು ಕುಂಬಳಕಾಯಿ ಕರಿ ಮತ್ತು ರುಚಿಕರವಾದ ಸಿಹಿ ಗೆಣಸು ಖೀರ್ ತಯಾರಿಸಲಾಗುತ್ತದೆ. ಮದುವೆಯ ವಿಧಿವಿಧಾನಗಳು ಮುಗಿದ ನಂತರ, ಸಿದ್ಧಪಡಿಸಿದ ಆಹಾರವನ್ನು 'ಭೋಗ' ನೈವೇದ್ಯಕ್ಕಾಗಿ ಮೀಸಲಿಡಲಾಗುತ್ತದೆ. ಇದರೊಂದಿಗೆ ಪೂಜೆಯ ನಂತರ ತುಳಸಿಗೆ ಆರತಿ ಮಾಡಲಾಗುತ್ತದೆ. ಆರತಿ ಮುಗಿದ ನಂತರ, ಬೇಯಿಸಿದ ಆಹಾರವನ್ನು ಹಣ್ಣುಗಳೊಂದಿಗೆ 'ಭೋಗ' ಎಂದು ನೀಡಲಾಗುತ್ತದೆ. ನಂತರ ಕುಟುಂಬ ಸದಸ್ಯರು ಮತ್ತು ಇತರ ಅತಿಥಿಗಳೊಂದಿಗೆ ಪ್ರಸಾದವನ್ನು ಸೇವಿಸಲಾಗುತ್ತದೆ.
    8 min
  • ಬಲಿಂದ್ರ ಪೂಜೆ* ದೀಪಾವಳಿಯಂದು ಬಲೀಂದ್ರ ಪೂಜೆಯನ್ನು ಯಾಕೆ ಮಾಡುತ್ತಾರೆ? ರೈತರು ಹೇಗೆ ಬಲಿಯನ್ನು ಸ್ವಾಗತಿಸುತ್ತಾರೆ?
    ಮೂರನೆಯ ದಿನ ಆಚರಿಸುವ ಹಬ್ಬವಾದ ಬಲಿ ಪಾಡ್ಯಮಿಯಂದು ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ಮಾಡುತ್ತಾರೆ, ಹಾಗಾಗಿ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯುತ್ತಾರೆ
    ಅಂಧಕಾರವನ್ನು ಕಳೆಯುವ ಕಾರ್ತಿಕ ಮಾಸ ಆರಂಭವಾಗುವುದೇ ಪಾಡ್ಯದಂದು ಬೆಳಗುವ ದೀಪದ ಬೆಳಕಿನಿಂದ. ಕರ್ನಾಟಕದಲ್ಲಿ ದೀಪಾವಳಿಯನ್ನು ಸಾಮಾನ್ಯವಾಗಿ ಮೂರು ದಿನ ಆಚರಿಸುತ್ತಾರೆ, ನರಕಚತುರ್ದಶಿ, ಅಮಾವಾಸ್ಯೆ ಹಾಗೂ ಮೂರನೇ ದಿನವೇ ಬಲಿಪಾಡ್ಯಮಿ, ಈ ಬಲಿಪಾಡ್ಯಮಿಯಿಂದ ಆರಂಭಗೊಳ್ಳುವ ಕಾರ್ತಿಕ ಮಾಸ ಲಕ್ಷದೀಪೋತ್ಸವ ಕೊನೆಗೊಳ್ಳುವವರೆಗೂ ಬೆಳಗುವಂತಹ ಮಾಸವಾಗಿದೆ.
    7 min
  • ಅಡಿಕೆ ಗಾತ್ರದಲ್ಲಿ ಪುಟ್ಟದಾಗಿದ್ದರೂ ಆರೋಗ್ಯ ಸುಧಾರಣೆಗೆ ವಿಶೇಷವಾಗಿ ಸಹಾಯ ಮಡುವುದು.
    ಅಡಿಕೆ
    ಗಾತ್ರದಲ್ಲಿ ಪುಟ್ಟದಾಗಿದ್ದರೂ ಆರೋಗ್ಯ ಸುಧಾರಣೆಗೆ ವಿಶೇಷವಾಗಿ ಸಹಾಯ ಮಡುವುದು. ಅಡಿಕೆಯನ್ನು ಬಳಸಿ ಸಾಕಷ್ಟು ಅನಾರೋಗ್ಯಗಳನ್ನು ಗುಣಪಡಿಸಬಹುದು. ಇತ್ತೀಚೆಗೆ ಇದರಿಂದ ಗಂಭೀರ ಆರೋಗ್ಯ ಸಮಸ್ಯೆಯನ್ನು ಗುಣಪಡಿಸಬಹುದು ಎನ್ನುವುದನ್ನು ಸಂಶೋಧಿಸಲಾಗಿದೆ. ಅಡಿಕೆಯಿಂದ ಚಹಾ ತಯಾರಿಸಿ ಕುಡಿಯಬಹುದು. ಅದು ಸಹ ಆರೋಗ್ಯಕ್ಕೆ ಉತ್ತಮ ಔಷಧಿ.
    ಸಾಮಾನ್ಯವಾಗಿ ಊಟ ಆದ ಬಳಿಕ ವೀಳ್ಯದೆಲೆ -ಅಡಿಕೆ ತಿನ್ನುತ್ತಾರೆ. ಆದರೆ ಬಹುತೇಕರು ಇದೊಂದು ಸಂಪ್ರದಾಯ ಎಂದು ನಂಬಿಕೊಂಡು ಇದನ್ನು ಸೇವಿಸುತ್ತಾ ಬಂದಿದ್ದಾರೆ. ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ ಊಟ ಆದ ಬಳಿಕ ಎಲೆ, ಅಡಿಕೆ, ಸುಣ್ಣ ತುಂಬಿದ ಹರಿವಾಣವು ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ. ಮಧ್ಯಾಹ್ನ ಊಟ ಆದ ಬಳಿಕ ಎಲ್ಲರೂ ಕುಳಿತುಕೊಂಡು ಅಡಿಕೆ ಮತ್ತು ಎಲೆಗೆ ಕೊಂಚ ಸುಣ್ಣ ಬೆರೆಸಿ ಸೇವಿಸುತ್ತಾರೆ. ಅಂದಹಾಗೆಯೇ ಇದು ಒಗ್ಗಟ್ಟಿನ ಸಂಕೇತವೂ ಆಗಿದೆ.
    ಅಡಿಕೆಯನ್ನು ತಾಂಬೂಲದಲ್ಲಿ ವೀಳ್ಯದೆಲೆಯೊಂದಿಗೆ ತಿನ್ನಲು ಉಪಯೋಗಿಸುತ್ತಾರೆ. ಆಡಕೆ ಬೆಳೆಯುವ ಪ್ರದೇಶಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಆವಶ್ಯಕವಾದ ವಸ್ತುವಾಗಿದೆ. ಭಾರತದಲ್ಲಿ ಮೊಟ್ಟ ಮೊದಲು ಶಿವಮೊಗ್ಗದ ಸೊರಬ ತಾಲ್ಲೂಕಿನ ಕ್ಯಾಸನೂರು ಗ್ರಾಮದಲ್ಲಿ ಅಡಿಕೆಯನ್ನ ಕಾಳು ಮೆಣಸು ಬೆಳೆಯಲು ಬೆಳೆಸಲಾಯಿತು. ಇಲ್ಲಿ ಅಡಿಕೆ ಬಹಳ ಪ್ರಸಿದ್ಧವಾದ ಉತ್ತಮ ತಳಿ ಹಾಗೂ ಅಧಿಕ ಇಳುವರಿ ಬರುವ ಮರಗಳು ಇಲ್ಲಿವೆ.ಮಲೆನಾಡು ಅಡಿಕೆ ಗೆ ಸಾಟಿ ಮಲೆನಾಡಿನ ಅಡಿಕೆಯೇ.ಇದು ನಮ್ಮ ಕ್ಷೇತ್ರ ಇದು ನಮ್ಮ ಹೆಮ್ಮೆ.
    1)ಮಧುಮೇಹ ಇರುವವರಲ್ಲಿ ಆಗಾಗ ಬಾಯಿ ಒಣಗುವುದು, ಬಾಯಲ್ಲಿ ಅತಿಯಾದ ದುರ್ಗಂಧ ಮತ್ತು ಕೆಟ್ಟ ಉಸಿರು ಉಂಟಾಗುವುದು. ಇಂತಹ ಸಮಸ್ಯೆಗಳಿಗೆ ಅಡಿಕೆ ಉತ್ತಮ ಪರಿಹಾರ ನೀಡುವುದು. ಅಡಿಕೆಯನ್ನು ಬಾಯಲ್ಲಿ ಇಟ್ಟುಕೊಳ್ಳುವುದು ಅಥವಾ ಅಗೆಯುತ್ತಿರುವುದರಿಂದ ಅಧಿಕ ಲಾಲಾರಸ ಉತ್ಪತ್ತಿ ಆಗುವುದು. ಜೊತೆಗೆ ಬಾಯಿಂದ ಬರುವ ವಾಸನೆಯನ್ನು ತಡೆಯುವುದು. ಅಡಿಕೆಯಿಂದ ಬಾಯಿಗೆ ಸಂಬಂಧಿಸಿದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಸಹ ತಡೆಯಬಹುದು.
    2)ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದಾಗ ರಕ್ತ ಹೀನತೆ ಉಂಟಾಗುವುದು. ಅಪೌಷ್ಟಿಕ ಹಾಗೂ ಅಸಮತೋಲನದಿಂದ ಕೂಡಿರುವ ಆಹಾರ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುವುದು. ಅಡಿಕೆಯನ್ನು ಸೇವಿಸುವುದರಿಂದ ರಕ್ತ ಹೀನತೆ ಹಾಗೂ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚುವುದನ್ನು ಸುಲಭವಾಗಿ ತಡೆಯಬಹುದು.
    3)ಅಡಿಕೆಯನ್ನು ಬಾಯಲ್ಲಿ ಇಟ್ಟುಕೊಂಡು ರಸವನ್ನು ನುಂಗುತ್ತಿರಬೇಕು. ಇದರಿಂದ ಅಜೀರ್ಣ ಸಮಸ್ಯೆಯು ಸುಧಾರಣೆ ಕಾಣುವುದು. ಸುಧಾರಿತ ಜೀರ್ಣ ಕ್ರಿಯೆಯು ಮಲಬದ್ಧತೆ ಉಂಟಾಗುವುದನ್ನು ತಡೆಯುವುದು
    4)ಪುಡಿ ಅಥವಾ ಸುಟ್ಟ ಭಸ್ಮ ದಲ್ಲಿ ಹಲ್ಲುಗಳನ್ನು ಮಸಾಜ್ ಮಾಡುವುದರಿಂದ ಹಲ್ಲಿನ ರೋಗಗಳು ವಾಸಿಯಾಗುತ್ತವೆ ಮತ್ತು ನೋವು ಕೂಡ ವಾಸಿಯಾಗುತ್ತದೆ.
    5)ಹಸಿರು ಅಡಿಕೆ ಬೇಯಿಸಿ, ನಂತರ ಅಡಿಕೆಯನ್ನು ಕತ್ತರಿಸಿ ತಿನ್ನಿರಿ. ಇದರಿಂದ ಅತಿಸಾರದ ಸಮಸ್ಯೆ ದೂರವಾಗುತ್ತದೆ.
    6)ಕಷಾಯವನ್ನು ಕುಡಿಯುವುದರಿಂದ ಅಥವಾ ಅಡಿಕೆ ಪುಡಿಗೆ ಬೆಣ್ಣೆಯನ್ನು ಸೇರಿಸಿ ತಿನ್ನುವುದರಿಂದ ಹೊಟ್ಟೆಯಲ್ಲಿ ಯಾವುದೇ ಹುಳುಗಳು ಸೃಷ್ಟಿಯಾಗುವುದಿಲ್ಲ.
    7)ಅಡಿಕೆ ಪುಡಿಯನ್ನು ಅರಿಶಿನ ಬೆಲ್ಲ ಸೇರಿಸಿ ತಿನ್ನುವುದರಿಂದ ವಾಂತಿ ನಿಲ್ಲುತ್ತದೆ.
    8)ಅಡಿಕೆ ಬೇಯಿಸಿದ ನೀರು (ಚೊಗರು) ಹತ್ತಿಯಲ್ಲಿ ನೆನೆಸಿ ಲೇಪಿಸುವುದರಿಂದ ಸರ್ಪಸುತ್ತು ಗುಣವಾಗುತ್ತದೆ.
    9)ಅಡಿಕೆ ಸುಟ್ಟು ಭಸ್ಮ ವನ್ನು ಎಳ್ಳೆಣ್ಣೆ ಅಥವಾ ತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಸಿ ಹಚ್ಚಿದರೆ ಕಜ್ಜಿ ತುರಿ ಗುಣವಾಗುತ್ತದೆ.
    10) ಕೆಲವರಿಗೆ ಅಡಿಕೆ ತಿಂದರೆ ಮದ ಬರುತ್ತದೆ. ಇದಕ್ಕೆ ಬೆಲ್ಲ ತಿಂದು ನೀರು ಕುಡಿಯುವುದರಿಂದ ಗುಣವಾಗುತ್ತದೆ.
    11) ಅಡಿಕೆ ಹಿಂಗಾರದಿಂದ ಮಾಡಿದ ಲೇಹ್ಯ ಆರೋಗ್ಯಕ್ಕೆ ಒಳ್ಳೆಯದು.
    11)ಪ್ರತಿದಿನ ಅಡಿಕೆ ಒಂದನ್ನೆ ಅಂದರೆ ವಿಳ್ಯದೆಲೆ ಇಲ್ಲದೆ ತಿನ್ನುವುದರಿಂದ ತುಟಿ ಬಿಳಿಚುತ್ತದೆ ಮತ್ತು ಕಾಮಾಲೆ ಗೆ ಕಾರಣ ವಾಗುತ್ತದೆ.
    12) ಸ್ನಾನದ ಸೋಪಿನಲ್ಲಿ ಅಡಿಕೆ ಪುಡಿಯನ್ನೂ ಉಪಯೋಗಿಸಿರುತರೆ
    6 min
  • ಈ ಕೌಟುಂಬಿಕ ವ್ಯವಸ್ಥೆ ಕುಸಿದು ಹೋಗಲು ಕೆಲವು ಪ್ರಧಾನ ಕಾರಣಗಳು* ಈ ಕೌಟುಂಬಿಕ ವ್ಯವಸ್ಥೆ ಕುಸಿದು ಹೋಗಲು ಕೆಲವು ಪ್ರಧಾನ
    ಈ ಕೌಟುಂಬಿಕ ವ್ಯವಸ್ಥೆ ಕುಸಿದು ಹೋಗಲು ಕೆಲವು ಪ್ರಧಾನ ಕಾರಣಗಳು* . *೧* .ಅತಿಯಾದ ಬುದ್ಧಿವಂತಿಕೆ.
    *೨* .ಚಿಕ್ಕದಾದ ತಪ್ಪುಗಳನ್ನು ಕೂಡ ಭರಿಸುವ ಶಕ್ತಿ ಸಹನೆ ಇಲ್ಲದಿರುವುದು .
    *೩* .ಎಲ್ಲರೂ ಸಮಾನರು ಎನ್ನುವ ವಿಚಿತ್ರ ಭಾವನೆ ಬೆಳೆಯುತ್ತಿರುವುದು(ಡೆಮಾಕ್ರಸಿ).
    *೪* .ಮನೆಯ ಸದಸ್ಯರು, ಮಕ್ಕಳು ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಮಾತನಾಡದೆ ಇರುವುದು.
    *೫* .ಯಾವಾಗಲೂ ಮನೋರಂಜನೆ ಕಾರ್ಯಕ್ರಮಗಳಲ್ಲಿ ಮುಳುಗಿರುವುದು. ಎಲ್ಲೋ ಇರುವ ಸಿನಿಮಾ ನಟರು ಈ ದಿನ ಬೆಳಿಗ್ಗೆ ಏನು ಮಾಡಿದ್ದಾರೆ ಎಂದು ಹೇಳುವ ಜನರು, ಮನೆಯವರು ಹೇಗಿದ್ದಾರೆ ಯಾವಾಗ ಏನು ಮಾಡುತ್ತಾರೆ ಎಂದು ತಿಳಿದುಕೊಳ್ಳದೆ ಇರುವ ದುಸ್ಥಿತಿ ಬಂದುಬಿಟ್ಟಿದೆ.
    *೬* .ಚಿಕ್ಕ ವಿಷಯಕ್ಕೆ ಮುನಿಸಿಕೊಂಡು ಹತ್ತಿರದವರನ್ನು ದೂರ ಮಾಡಿಕೊಳ್ಳುತ್ತಿದ್ದಾರೆ .
    *೭* .ಬೇರೆಯವರ ಕೆಟ್ಟ ಮಾತುಗಳಿಂದ ಇಡೀ ಕುಟುಂಬವೇ ಒಡೆದುಹೋಗುವುದಕ್ಕೆ ಕಾರಣವಾಗುತ್ತಿರುವುದು.
    *೮* .ಆರ್ಥಿಕ ಸಮಸ್ಯೆಗಳಿಂದಾಗಿ ಮನೆಯ ಹಿರಿಯ ಸದಸ್ಯರು ದೃಢವಾಗಿ, ಬಲವಾಗಿ ಮತ್ತು ಸರಿಯಾಗಿ ಕುಟುಂಬ ನಿರ್ವಹಣೆ ಮಾಡದೆ ಇರುವುದು ಕೂಡ ಕಾರಣವಾಗಿದೆ.
    *೯* .ಮನೆಯಲ್ಲಿ ಗಂಡ -ಹೆಂಡತಿ (ತಂದೆ-ತಾಯಿ) ಸಣ್ಣಪುಟ್ಟ ವಿಷಯಗಳಿಗೆ ಜಗಳ ಮಾಡಿಕೊಳ್ಳುತ್ತಿರುವುದರಿಂದ ಮನೆಯ ಸದಸ್ಯರಿಗೆ ಆತಂಕ ಉಂಟುಮಾಡಿದೆ.
    ಎಲ್ಲ ಕುಟುಂಬಗಳಲ್ಲಿ ಜಗಳ ಹೊಡೆದಾಟ,ಬಡಿದಾಟಗಳನ್ನು ನೋಡಿ ಕುಟುಂಬವೆಂದರೆ ಜಿಗುಪ್ಸೆ ಎನ್ನುತ್ತಿರುವುದು.
    ಅನ್ಯೋನ್ಯವಾಗಿ, ಸಹಬಾಳ್ವೆಯಿಂದ, ಪ್ರೀತಿ ಪ್ರೇಮಗಳಿಂದ, ಇರುವ ಕುಟುಂಬಗಳು ಕಂಡುಬರದೇ ಇರುವುದು, ಈ ಕೌಟುಂಬಿಕ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದಾಗಿದೆ.
    ಇದರಿಂದಾಗಿ, ಯುವಜನ ಮದುವೆ ಮಾಡಿಕೊಳ್ಳುವುದೇ ಇರುವುದು. ಮೂವತ್ತೊಂದು ದಾಟಿದರೂ ಮದುವೆಯ ಬಗ್ಗೆ ಮನೆಯಲ್ಲಿ ಪ್ರಸ್ತಾಪ ಮಾಡುವುದೇ ಇಲ್ಲ. ಕಳೆದ 30-40 ವರ್ಷಗಳಿಂದ ಸಂಸಾರವನ್ನು ನಿರ್ವಹಣೆ ಮಾಡಿದ ಕೆಲ ಹಿರಿಯರು ಕುಟುಂಬದ ಜಂಜಾಟಗಳಿಂದ ಬೇಸತ್ತು,ಈ ಕುಟುಂಬ ವ್ಯವಸ್ಥೆಯೇ ಸಾಕಪ್ಪಾ ಸಾಕು, ಎಂದು ನೇರವಾಗಿ ಮಕ್ಕಳಿಗೆ ಹೇಳುತ್ತಿದ್ದಾರೆ.
    *೧೦* .ಆರ್ಥಿಕತೆಯ ಅವಸರ ಮತ್ತು ವ್ಯತ್ಯಾಸಗಳನ್ನು ಪರಸ್ಪರ ಹೋಲಿಸಿಕೊಳ್ಳುವುದರಿಂದ ಕುಟುಂಬ ವ್ಯವಸ್ಥೆ ನಿಲ್ಲದಾಗಿದೆ.
    *೧೧* .ಮನುಷ್ಯರಿಗೆ ಬೆಲೆಯೇ ಇಲ್ಲದಾಗಿದೆ.ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಕಂಡರೆ ಬೇಜಾರು ಮಾಡಿಕೊಳ್ಳುತ್ತಿದ್ದಾನೆ .
    *೧೨* .ಮಧ್ಯಸ್ಥಿಕೆ ವಹಿಸುವಂತಹ ಹಿರಿಯರು ಇಲ್ಲದಾಗಿದ್ದಾರೆ. ಇದರಿಂದಾಗಿ ಅವರಿಗೆ ಬೇಕಾದಂತೆ ಬದುಕುತ್ತಿದ್ದಾರೆ.
    *೧೩* .ಕುಟುಂಬ ನಿರ್ವಹಣೆಯೂ 1 ಕಲೆಯಾಗಿದೆ. ಆ ಕಲೆಯು ಎಲ್ಲರಿಗೂ ಇಲ್ಲದಿರುವುದರಿಂದ ಕೂಡ ಈ ವ್ಯವಸ್ಥೆ ತಲೆಕೆಳಗಾಗಲು ಕಾರಣವಾಗಿದೆ.
    *೧೪* .ಮಾನವನ ಪ್ರವರ್ತನೆಯು ಕನಿಷ್ಠ ಅವಗಾಹನೆ ಇಲ್ಲದ ದುಸ್ಥಿತಿಗೆ ತಲುಪಿದೆ.ಮಾನವನು ಒರಟಾಗಿ ಪ್ರವರ್ತಿಸುತ್ತಿದ್ದಾನೆ. ನಾನು, ನನ್ನ ಹೆಂಡತಿ/ಗಂಡ ಎನ್ನುವ ಸಿದ್ಧಾಂತ ಹೋಗಿ,*"ನಾನೇ ನಾನು" "ನಾನು ನಾನೇ"* ಎನ್ನುವ ಪಾಲಿಸಿ ಬಂದಿದೆ.
    ಮಕ್ಕಳಿಗೆ ಮದುವೆ ಆಗುತ್ತಿದ್ದಂತೆ ಬೇರೆ ಹಾಕುವುದು ಆಚಾರವಾಗಿ ಬಿಟ್ಟಿದೆ. ಮನೆಯಲ್ಲಿ ಇಟ್ಟುಕೊಳ್ಳಲು ಭಯಪಡುತ್ತಿದ್ದಾರೆ. ಆಮೇಲೆ ನಿಷ್ಟೂರವಾಗುವುದಕ್ಕಿಂತ ಈವಾಗಲೇ ನಿಷ್ಟೂರವಾಗುವುದು ಮೇಲೂ ಎನ್ನುತ್ತಿದ್ದಾರೆ.
    ಕೌಟುಂಬಿಕ ಮೌಲ್ಯಗಳು ಕಟ್ಟುಪಾಡುಗಳು ಇನ್ನು ಮುಂದೆ ಇರುವುದಿಲ್ಲ. ಇಷ್ಟ ಬಂದಂತೆ ಬದುಕುವ ದಿನಗಳು ಬಂದಾಗಿದೆ. ಅಣ್ಣ- ತಮ್ಮ, ಅಣ್ಣ- ತಂಗಿ,ಅಕ್ಕ-ತಮ್ಮ, ಗಂಡ-ಹೆಂಡತಿ ಮಧ್ಯೆ ಬಲವಾದ ಸಂಬಂಧಗಳು ಇಲ್ಲದಾಗಿದೆ.
    ಕಥೆಯೇ ಮುಗಿದು ಹೋಗುತ್ತಿದೆ .
    ಪ್ರಸ್ತುತ ನಡೆಯುತ್ತಿರುವುದು ನಾಟಕ. ಈ ನಾಟಕ ಕೂಡ ಇನ್ನೂ ಕೆಲವು ದಿನಗಳ ನಂತರ ಪೂರ್ತಿಯಾಗಿ ಇರಲಾರದು.
    *೧೫* .ಡಿಜಿಟಲ್ ಪ್ಲಾಟ್ ಫಾರಂ ಮೇಲೆ ಇರುವಂತಹ ಸಂಬಂಧ, ಬಾಂಧವ್ಯಗಳೇ ನಿಜವಾದವು ಎಂದು ತಪ್ಪು ಕಲ್ಪನೆಯಲ್ಲಿ ಬದುಕುತ್ತಿರುವ ಜನ. ಯಾರಾದರೂ ತೀರಿಕೊಂಡರೆ 1ಆಕರ್ಷಣೀಯ ಮೆಸೇಜ್ ಇಲ್ಲ RIP ಎಂದು ಹಾಕಿ ಅಲ್ಲಿಗೆ ಬಿಟ್ಟುಬಿಡುತ್ತಾರೆ. ಶವ ಸಾಗಿಸಲು ಕೂಡ 4ಜನ ಬರದ ಪರಿಸ್ಥಿತಿ ಇರುತ್ತದೆ.
    ಈ ದಿನಗಳಿಗೆ ಎಲ್ಲರೂ, ಎಲ್ಲವೂ ಕಾರಣವಾಗಿದೆ.
    *ಮಾನವರಿಗೆ ಮಾನವೀಯತೆಯ ಪಾಠ ಹೇಳಿಕೊಡುವಂತಹ ದುಸ್ಥಿತಿ ಬಂದೊದಗಿದೆ.* ಸಮಾಜದಲ್ಲಿ ನಂಬಿಕೆ, ನೈತಿಕತೆ ಎನ್ನುವ ಹಸಿರನ್ನು ಮಾನವ ಹೃದಯದಲ್ಲಿ ಬಿತ್ತಬೇಕಾಗಿದೆ. ಛಿದ್ರ ಛಿದ್ರವಾಗುತ್ತಿರುವ ಕೌಟುಂಬಿಕ ಮೌಲ್ಯಗಳನ್ನು, ಕಟ್ಟುಪಾಡುಗಳನ್ನು ಒಟ್ಟುಗೂಡಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ.
    *ಇಲ್ಲವಾದಲ್ಲಿ, ನಮ್ಮ ಮಕ್ಕಳ ಭವಿಷ್ಯವನ್ನು ನಾವೇ ಹಾಳು ಮಾಡಿದಂತೆ* ,ಭವ್ಯ ಭಾರತದ ಸಂಸ್ಕೃತಿಯನ್ನು ಅಳಿಸಿ ಹಾಕಿದಂತೆ.
    ದಯಮಾಡಿ ಆಲೋಚಿಸಿ. ಪ್ರತಿಯೊಬ್ಬರಿಗೂ ಶೇರ್ ಮಾಡಿ ……
    8 min
  • ವಾಲ್ಮೀಕಿ ಮಹರ್ಷಿಗಳ ರಾಮಾಯಣ
    ಒಬ್ಬ ವ್ಯಕ್ತಿ ನಮಗೆ ಮಹಾನ್ ಎಂದೆನಿಸಿದಾಗ ನಾವು ಕೇವಲ ಅವರ ಹಿಂಬಾಲಕರಾಗಿರುತ್ತೇವೆ. ಆ ಮಹಾನ್ ವ್ಯಕ್ತಿಯ ಕಾರ್ಯವನ್ನು ಅಭ್ಯಸಿಸಿ ಅಲ್ಲಿನ ಮೌಲ್ಯಗಳನ್ನು ಅರಿತುಕೊಂಡಾಗ ಪುನೀತರಾಗುತ್ತೇವೆ. ವಾಲ್ಮೀಕಿ ಮರ್ಹರ್ಷಿಗಳು ರಚಿಸಿದ ರಾಮಾಯಣವು ಆದಿಕಾವ್ಯವೆನಿಸಿದೆ. ಹಲವಾರು ರಾಮಾಯಣಗಳು ಕಾಲಾನುಕ್ರಮದಲ್ಲಿ ರಚಿತವಾಗಿದ್ದರೂ ಇವೆಲ್ಲವೂ ವಾಲ್ಮೀಕಿ ರಾಮಾಯಣವನ್ನೇ ಅನುಸರಿಸಿ ಬಂದಂತಹವು. ಯಾವುದೇ ಕವಿ ರಾಮಾಯಣವನ್ನು ಬರೆಯುವಾಗಲೂ ವಾಲ್ಮೀಕಿಯನ್ನು ಅನುಸರಿಸದೇ ಇಲ್ಲ.
    ವಾಲ್ಮೀಕಿ ಮಹರ್ಷಿಗಳಾಗುವುದಕ್ಕೆ ಮುಂಚಿನ ಬದುಕಿನ ಬಗ್ಗೆ ಒಂದು ಐತಿಹ್ಯವಿದೆ. ಅವರ ಮೊದಲ ಹೆಸರು ರತ್ನಾಕರ ಎಂದಿತ್ತು. ಈ ರತ್ನಾಕರ ಒಳ್ಳೆಯ ಮನೆತನದಲ್ಲಿ ಜನಿಸಿದ್ದನಾದರೂ ದರೋಡೆಕೋರರ ಸಂಗದಲ್ಲಿ ಇದ್ದುದರಿಂದ ದರೋಡೆ, ಕೊಲೆಗಳನ್ನು ಮಾಡತೊಡಗಿದ್ದನು. ಇದೇ ಆತನ ಜೀವನ ನಿರ್ವಹಣೆಯ ಕಸುಬೂ ಆಗಿಹೋಗಿತ್ತು. ಒಂದು ದಿನ ರತ್ನಾಕರನ ಎದುರಿಗೆ ನಡೆದು ಬಂದವರು ದೇವಋಷಿ ನಾರದರು. ರತ್ನಾಕರ ನಾರದರಿಗೆ ಹೇಳಿದನು – “ನಿನ್ನಲ್ಲಿ ಇದ್ದುದೆಲ್ಲವನ್ನು ನನಗೆ ಕೊಟ್ಟುಬಿಡು. ಇಲ್ಲದಿದ್ದರೆ ಪ್ರಾಣವನ್ನು ಕಳೆದುಕೊಳ್ಳುತ್ತೀಯ!”
    ನಾರದರು ನುಡಿದರು – “ನನ್ನ ಬಳಿ ಈ ವೀಣೆ ಮತ್ತು ತೊಟ್ಟ ವಸ್ತ್ರಗಳ ಹೊರತಾಗಿ ಇನ್ನೇನೂ ಇಲ್ಲ. ನಿನಗೆ ಬೇಕಿದ್ದರೆ ತೆಗೆದುಕೊಳ್ಳಬಹುದು. ಆದರೆ ನೀನು ಇಂತಹ ಕ್ರೂರಕರ್ಮವನ್ನು ಮಾಡಿ ಭಯಂಕರವಾದ ಪಾಪವನ್ನು ಏಕೆ ಮಾಡುತ್ತಿರುವೆ?”. ದೇವರ್ಷಿಗಳ ಕೋಮಲವಾದ ಮಾತಿನಲ್ಲಿ ಅದೆಂತಹದ್ದೋ ಮೋಡಿಯಿತ್ತು. ರತ್ನಾಕರನಾದರೋ ಇಂತಹ ಸುಮನೋಹರ ಧ್ವನಿಯನ್ನು ಎಂದೂ ಕೇಳಿದ್ದೇ ಇಲ್ಲ! ಆತನ ಕಠೋರ ಹೃದಯ ಕರಗಿತು. ಅವನು “ಸ್ವಾಮಿ! ಪಾಪ ಎಂದರೇನು? ನನಗೆ ಜೀವನಕ್ಕೆ ಇದೇ ಸಾಧನೆಯಾಗಿದೆ. ಇದರಿಂದಲೇ ನಾನು ನನ್ನ ಪರಿವಾರವನ್ನು ಸಾಕುತ್ತಿರುವುದು”.
    ನಾರದರು ಹೇಳಿದರು – “ನೀನು ಮೊದಲಿಗೆ ಮನೆಗೆ ಹೋಗಿ ‘ನಿನ್ನ ಪರಿವಾರದವರು ಕೇವಲ ನಿನ್ನ ದುಡಿಮೆಯ ಪಾಲು ಬಯಸುತ್ತಾರೆಯೋ, ಅಥವಾ ನಿನ್ನ ಪಾಪದಲ್ಲಿಯೂ ಸಹಭಾಗಿಗಳಾಗಿರುವರೋ’ ಎಂದು ಕೇಳಿ ಬಾ, ನೀನು ಮರಳಿ ಬರುವವರೆಗೆ ನಾನು ಇಲ್ಲೇ ಇರುವೆನು. ಎಲ್ಲಿಗೂ ಹೋಗುವುದಿಲ್ಲ. ನಿನಗೆ ನಂಬಿಕೆ ಇಲ್ಲದಿದ್ದರೆ ನನ್ನನ್ನು ಒಂದು ಮರಕ್ಕೆ ಕಟ್ಟಿಹಾಕು”.
    ರತ್ನಾಕರನು ನಾರದರನ್ನು ಕಟ್ಟಿಹಾಕಿ ತನ್ನ ಮನೆಗೆ ಹೋದನು. ಅವನು ತನ್ನ ಕುಟುಂಬದವರನ್ನೆಲ್ಲಾ ಕೇಳಿದನು – “ನೀವೆಲ್ಲರೂ ನನ್ನ ಪಾಪದಲ್ಲಿ ಭಾಗಿಗಳಾಗುವಿರೋ, ಅಥವಾ ಕೇವಲ ನನ್ನ ಸಂಪತ್ತಿಗೆ ಪಾಲುದಾರರೋ?” ಅವರೆಲ್ಲರೂ ಹೇಳಿದ್ದು ಹೆಚ್ಚೂ ಕಡಿಮೆ ಒಂದೇ ರೀತಿಯಲ್ಲಿತ್ತು – “ಒಡಲ ಹೊರುವುದು ಗೊತ್ತು, ಪಾಪ ನಿಮ್ಮಯ ಸೊತ್ತು”. ‘ನೀನು ಯಾವ ರೀತಿಯಿಂದ ಧನವನ್ನು ತರುವೆಯೋ ಅದು ನಿನಗೆ ಗೊತ್ತು. ನಾವು ನಿನ್ನ ಪಾಪದಲ್ಲಿ ಹೇಗೆ ತಾನೇ ಪಾಲುದಾರರಾದೇವು’!
    10 min
  • ೧೨ ವರ್ಷದ ಅವಿವಾಹಿತ ಕನ್ಯೆಗೆ ಕುಮಾರಿ ಎನ್ನುತ್ತಾರೆ.
    ಎನ್ನುತ್ತಾರೆ. ಅವಳ ಸ್ಮೃತ್ಯುಕ್ತ ಲಕ್ಷಣಗಳು ಹೀಗಿವೆ –
    ಅಷ್ಟವರ್ಷಾ ಭವೇದ್ ಗೌರಿ ದಷವರ್ಷಾ ಚ ಕನ್ಯಕಾ|
    ಸಂಪ್ರಾಪ್ತೇ ದ್ವಾದಶೇ ವರ್ಷೇ ಕುಮಾರೀತ್ಯಭಿದೀ ಯತೇ||
    ಅರ್ಥ: ಹುಡುಗಿಗೆ ೮ನೇ ವರ್ಷದಲ್ಲಿ ‘ಗೌರಿ’, ೧೦ನೇ ವರ್ಷದಲ್ಲಿ ‘ಕನ್ಯಾ’ ಮತ್ತು ೧೨ನೇ ವರ್ಷವು ಪ್ರಾರಂಭವಾದಾಗ ‘ಕುಮಾರಿ’ ಎನ್ನುತ್ತಾರೆ.
    ಪ್ರಾಚೀನ ಕಾಲದಲ್ಲಿ ಕೆಲವು ಸ್ತ್ರೀಯರು ಆಜನ್ಮ ಅವಿವಾಹಿತರಾಗಿರುತ್ತಿದ್ದರು. ಅವರ ಪ್ರೌಢ ಅಥವಾ ವೃದ್ಧ ವಯಸ್ಸಿನಲ್ಲಿಯೂ ಅವರನ್ನು ಕುಮಾರಿ ಎಂದೇ ಕರೆಯುತ್ತಿದ್ದರು; ಇದು ಅಷ್ಟಾಧ್ಯಾಯಿಯಿಂದ ತಿಳಿಯುತ್ತದೆ, ಉದಾ. ವೃದ್ಧ ಕುಮಾರಿ, ಜರತ್ಕುಮಾರಿ. (ಅಷ್ಟಾಧ್ಯಾಯಿ, ೬.೨.೯೫)
    ಕುಮಾರಿಪೂಜೆ ಏಕೆ ಮಾಡುತ್ತಾರೆ ?
    ಮುತ್ತೈದೆಯರು ದೇವಿಯ ಪ್ರಕಟ ಶಕ್ತಿಯ ಪ್ರತೀಕವಾಗಿದ್ದು ಕುಮಾರಿಯರು ದೇವಿಯ ಅಪ್ರಕಟ ಶಕ್ತಿಯ ಪ್ರತೀಕವಾಗಿದ್ದಾರೆ. ಪ್ರಕಟ ಶಕ್ತಿಯಲ್ಲಿ ಶಕ್ತಿಯು ಸ್ವಲ್ಪ ಪ್ರಮಾಣದಲ್ಲಿ ಅಪವ್ಯಯವಾಗುವುದರಿಂದ ಮುತ್ತೈದೆಯರ ಬದಲು ಕುಮಾರಿಯರಲ್ಲಿ ಶಕ್ತಿಯು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.
    ಕುಮಾರಿಪೂಜೆ ಹೇಗೆ ಮಾಡಬೇಕು ?
    ನವರಾತ್ರಿಯಲ್ಲಿ ಒಂಬತ್ತು ದಿನ ಪ್ರತಿಯೊಂದು ದಿನ ಒಬ್ಬಳಿಗೆ ಅಥವಾ ಮೊದಲ ದಿನ ಒಬ್ಬಳಿಗೆ, ಎರಡನೇ ದಿನ ಇಬ್ಬರಿಗೆ, ಒಂಬತ್ತನೇ ದಿನ ಒಂಬತ್ತು ಕುಮಾರಿಯರಿಗೆ, ಹೀಗೆ ಏರಿಕೆ ಕ್ರಮದಲ್ಲಿ ಭೋಜನವನ್ನು ನೀಡಬೇಕೆಂಬ ವಿಧಾನವಿದೆ. ಎರಡರಿಂದ ಹತ್ತು ವರ್ಷಗಳ ವಯಸ್ಸಿನ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸುತ್ತಾರೆ. ಪ್ರತಿಯೊಂದು ವರ್ಣದವರೂ ತಮ್ಮ ತಮ್ಮ ವರ್ಣದ ಕುಮಾರಿಯರನ್ನು ಭೋಜನಕ್ಕೆ ಆಮಂತ್ರಿಸಬೇಕಾಗಿರುತ್ತದೆ. ‘ಅವಳು ನಿರ್ದೋಷ, ನಿರೋಗಿ ಮತ್ತು ಅವ್ಯಂಗಳಾಗಿರಬೇಕು’ ಎಂದೂ ಹೇಳಲಾಗಿದೆ. ದೇವೀಪೂಜೆಯಾದ ನಂತರ ಕುಮಾರಿಯ ಪೂಜೆಯನ್ನು ಮಾಡುತ್ತಾರೆ. ಮೊದಲು ಮುಂದಿನ ಮಂತ್ರದಿಂದ ಅವಳ ಆವಾಹನೆಯನ್ನು ಮಾಡುತ್ತಾರೆ.
    ಮಂತ್ರಾಕ್ಷರಮಯೀಂ ಲಕ್ಷ್ಮೀಂ ಮಾತೃಣಾಂ ರೂಪ ಧಾರಿಣೀಮ್|
    ನವದುರ್ಗಾತ್ಮಿಕಾಂ ಸಾಕ್ಷಾತ್ ಕನ್ಯಾಮಾವಾಹ ಯಾಮ್ಯಹಮ್||
    ಅರ್ಥ: ಮಂತ್ರಾಕ್ಷರಮಯ, ಲಕ್ಷ್ಮೀ ಸ್ವರೂಪ, ಮಾತೃಕೆಗಳ ರೂಪವನ್ನು ಧರಿಸುವ ಹಾಗೂ ಸಾಕ್ಷಾತ್ ನವ ದುರ್ಗಾತ್ಮಿಕೆಯಾಗಿರುವಂತಹ ಕನ್ಯೆಯನ್ನು ನಾನು ಆವಾಹನೆ ಮಾಡುತ್ತೇನೆ.
    ಮೊದಲು ಕುಮಾರಿಯ ಕಾಲುಗಳನ್ನು ತೊಳೆಯುತ್ತಾರೆ, ಅವಳನ್ನು ಸುಶೋಭಿತ ಚೌರಂಗದ ಮೇಲೆ (ಎತ್ತರವಾದ ಮರದ ಮಣೆಯ ಮೇಲೆ) ಕೂರಿಸುತ್ತಾರೆ, ಗಂಧ, ಪುಷ್ಪ, ಲಂಗ-ರವಿಕೆ ಕೊಡುತ್ತಾರೆ ಮತ್ತು ಅವಳ ಕೊರಳಿನಲ್ಲಿ ಹೂಮಾಲೆಯನ್ನು ಹಾಕುತ್ತಾರೆ. ಅವಳಿಗೆ ಪಂಚಾಮೃತ ಮತ್ತು ಮೃಷ್ಠಾನ್ನವನ್ನು ಸಮರ್ಪಿಸುತ್ತಾರೆ. ನಂತರ ಅವಳಿಗೆ ನಮಸ್ಕಾರ ಮಾಡುತ್ತಾರೆ.’ ಶಾಕ್ತ ತಂತ್ರದಲ್ಲಿ ಕುಮಾರಿಪೂಜೆಗೆ ವಿಶೇಷ ಮಹತ್ವವಿದೆ.
    9 min

About Dr Balakrishna Maddodi

From the publisher's feed

Hi