ಮಗ ಅಮೆರಿಕದಲ್ಲಿ ನೆಲಸಿದ್ದಾನೆ,
ಒಳ್ಳೆಯ ಕೆಲಸದಲ್ಲಿದ್ದಾನೆ, ಹೇರಳವಾಗಿ ಹಣ ಸಂಪಾದನೆ ಮಾಡುತ್ತಿದ್ದಾನೆ,
ಸುಂದರ ಪತ್ನಿ,
ಮುದ್ದಾದ ಮಕ್ಕಳು, ಐಷಾರಾಮಿ ಕಾರು,
ದೊಡ್ಡ ಬಂಗಲೆ ಎಲ್ಲವೂ ಇದೆ.
ಆತನ ತಂದೆ-ತಾಯಿ ಹಳ್ಳಿಯಲ್ಲಿ ತುಂಬಾ ಹಳೆಯದಾದ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಅವರು ವೃದ್ಧರಾಗಿದ್ದಾರೆ, ರೋಗಿಗಳು ಮತ್ತು ಅಸಹಾಯಕರು.
ಮಗನು ಅವರಿಗೆ ಸಹಾಯ ಮಾಡುವ ಬದಲು ತಂದೆಗೆ ಪತ್ರ ಬರೆಯುತ್ತಾನೆ.
ದಯವಿಟ್ಟು ಗಮನವಿಟ್ಟು ಓದಿ ಮತ್ತು ಯಾರು ಯಾರಿಗೆ ಹೇಗೆ ಬರೆಯಬೇಕೆಂದು ಚನ್ನಾಗಿ ಯೋಚಿಸಿ?
*ತಂದೆಯ ಹೆಸರಿಗೆ ಮಗನ ಪತ್ರ*
*ತೀರ್ಥರೂಪು ತಂದೆಯವರಿಗೆ ಸಾಷ್ಟಾಂಗ ನಮಸ್ಕಾರಗಳು*
*ನಿಮ್ಮ ಆಶೀರ್ವಾದದಿಂದ, ನಿಮ್ಮ ಭಾವನೆಗಳು ಮತ್ತು ನಿಮ್ಮ ಆಸೆಗಳಿಗೆ ಅನುಗುಣವಾಗಿ ನಾನು ಅಮೇರಿಕಾದಲ್ಲಿ ಉನ್ನತ ಹುದ್ದೆಯಲ್ಲಿದ್ದು ಸದಾ ಬ್ಯುಸಿಯಾಗಿದ್ದೇನೆ.*
*ಇಲ್ಲಿ ನನಗೆ ಹಣ, ಬಂಗಲೆ, ಕಾರು ಎಲ್ಲವೂ ಇದೆ,*
*ನನಗೆ ಇಲ್ಲದಿರುವುದೆಂದರೆ ಸಮಯ ಮಾತ್ರ.*
*ನಾನು ನಿಮ್ಮನ್ನು ಭೇಟಿ ಮಾಡಬೇಕು,*
*ನಾನು ನಿಮ್ಮ ಪಕ್ಕದಲ್ಲಿ ಕುಳಿತು ಮಾತನಾಡಬೇಕು ಎಂದು ಬಯಸುತ್ತೇನೆ* *ನಾನು ನಿಮ್ಮ ದುಃಖ ಮತ್ತು ನೋವನ್ನು ಹಂಚಿಕೊಳ್ಳಲು ಬಯಸುತ್ತೇನೆ,*
*ಆದರೆ ನನ್ನ ಮತ್ತು ನಿಮ್ಮ ಕ್ಷೇತ್ರದ ಅಂತರ,!!*
*ಇಲ್ಲಿ ಮಕ್ಕಳ ಅಧ್ಯಯನ ಕಡ್ಡಾಯವಾಗಿದೆ.*
*ಕಚೇರಿ ಕೆಲಸ ಮಾಡಲೇಬೇಕು*
*ನಾನು ಏನ್ ಮಾಡಲಿ? ನಿಮಗೆ ಹೇಗೆ ಹೇಳಲಿ?*
*ನೀವು ಅಂದು ಇಷ್ಟಪಟ್ಟಿದ್ದ ಸ್ವರ್ಗಭೂಮಿ ಇದು*
*ನಾನು ಬಯಸಿದರೂ ತಂದೆ-ತಾಯಿಗಳಾದ ನಿಮ್ಮ ಬಳಿಗೆ ಬರಲು ಸಾಧ್ಯವಾಗುತ್ತಿಲ್ಲ.*
*ಅಪ್ಪಾ*
*ನನಗೆ ಪ್ರತಿನಿತ್ಯ ನನ್ನ ಹಲವಾರು ಜವಾಬ್ದಾರಿಗಳು ಸದಾ ನೆನಪಿಗೆ ಬರುತ್ತಿವೆ-*
*ತಂದೆ-ತಾಯಿಗಳು ಮಕ್ಕಳನ್ನು ತುಂಬಾ ಕಷ್ಟಪಟ್ಟು ಬೆಳೆಸಿ ತಾವು ಗಳಿಸಿದ್ದ ಎಲ್ಲವನ್ನೂ ಮಾರಿ ತಮ್ಮ ಮಕ್ಕಳಿಗೆ ಕಲಿಸುತ್ತಾರೆ,*"
*ಮತ್ತು ಮಕ್ಕಳು ಎಲ್ಲರನ್ನು ಬಿಟ್ಟು ವಿದೇಶಕ್ಕೆ ಹಾರಿ ಹೋಗುತ್ತಾರೆ,*
*ಮಗನಾಗಿ ನಾನು ನನ್ನ ತಂದೆ-ತಾಯಿಯರನ್ನು ವೃದ್ಯಾಪ್ಯದಲ್ಲಿ ನೋಡಿಕೊಳ್ಳುತ್ತಿಲ್ಲ*
*ಅವರ ಕಣ್ಣೀರು ಒರೆಸುತ್ತಿಲ್ಲ* *ನನ್ನಂತಹಾ ಮಗ ಪ್ರಯೋಜನವಿಲ್ಲ."*
*ಎಂದು ಅಳುತ್ತಿದ್ದೇನೆ.*
*ಆದರೆ ಅಪ್ಪಾ , ಸ್ವಲ್ಪ ಯೋಚಿಸಿ ನೋಡೀ....*
*ನನಗೆ ಎಂಜಿನಿಯರಿಂಗ್ ಎಂದರೇನು ಎಂದು ಎಲ್ಲಿ ಗೊತ್ತಿತ್ತು?*
*ನನಗೆ ಹಣದ ಮೌಲ್ಯ ಏನು ಎಂದು ಎಲ್ಲಿ ಗೊತ್ತು?*
*ಅಮೆರಿಕ ಎಲ್ಲಿದೆ ಎಂದು ನನಗೆ ಎಲ್ಲಿ ಗೊತ್ತಿತ್ತು?*
*ನನ್ನ ಕಾಲೇಜು, ಹಣ ಮತ್ತು ಅಮೇರಿಕಾ ಕೇವಲ ಕಲ್ಪನೆಯಾಗಿತ್ತು,*
*ಅಂದು ನಿನ್ನ ಮಡಿಲಲ್ಲಿ ಮಲಗಿರುವುದೇ ಎಲ್ಲವೂ ಆಗಿತ್ತು ಅಲ್ಲವೇ?*
*ನೀವೇ ನನ್ನನ್ನು ಒಮ್ಮೆಯೂ ದೇವಸ್ಥಾನಕ್ಕೆ ಕಳುಹಿಸದೇ ಶಾಲೆಗೆ ಕಳುಹಿಸಿದರಲ್ಲಾ*
*ನನಗೆ ಹೆಚ್ಚಿನ ಅಂಕಗಳು ಬರಬೇಕೆಂದು ಆಸ್ತಿಯನ್ನು ಮಾರಿ ನನ್ನನ್ನು ದುಬಾರಿ ಕೋಚಿಂಗ್ ಶಾಲೆಗೂ ಸೇರಿಸಿದಿರಿ*
*ನಿಮ್ಮ ಮನಸ್ಸಿನಲ್ಲಿ ಹುದುಗಿದ್ದ ಎಲ್ಲ ಆಸೆಗಳನ್ನು ಪೂರೈಸಲು ನನ್ನ ಎಂಜಿನಿಯರಿಂಗ್ / ದುಬಾರಿ ಕೋಚಿಂಗ್ ಶಾಲೆ/ ಹಣದ ಮಹತ್ವ / ಉನ್ನತ ಸ್ಥಾನದ ಮೌಲ್ಯ ಎಲ್ಲದರ ಬಗ್ಗೆ ತಿಳಿಸಿಕೊಟ್ಟಿರಿ*
*ನಿಮ್ಮ ಮಡಿಲಲ್ಲಿ ಕೂರಿಸಿಕೊಂಡು ಕಲಿಸಿದಿರಿ.*
*ಅಮ್ಮನೂ ನನಗೆ ಮುದ್ದಿನಿಂದ ಹಾಲು ಕುಡಿಸುವಾಗ ನನ್ನ್ ರಾಜಾ*
*ನನ್ನ ಮಗ ದೊಡ್ಡ ವ್ಯಕ್ತಿಯಾಗುತ್ತಾನೆ ,*
*ದೊಡ್ಡ ಕಾರು ಬಂಗಲೆ ಬರುತ್ತದೆ*
*ನೀನು ಆಕಾಶದಲ್ಲಿ ಗಾಳಿಯಲ್ಲಿ ಹಾರಾಡುವೆ ಎಂದು ಹೇಳುತ್ತಿದ್ದಳು.*
*ನನ್ನ ಸರ್ವರೀತಿಯ ಪ್ರಗತಿಗಾಗಿ ದೇವರ ಮುಂದೆ ತುಪ್ಪದ ದೀಪಗಳನ್ನು ಬೆಳಗಿದರು*
*ನನ್ನ ಪೂಜ್ಯ ತಂದೆಯವರೇ*
*ನಾನು ನಿಮಗೆ ಇಷ್ಟೇ ಹೇಳಲು ಬಯಸುತ್ತೇನೆ*
*ನಿಮ್ಮ ಸೇವೆ ಮಾಡಲು ನನ್ನಿಂದ ಸಾಧ್ಯವಾಗುತ್ತಿಲ್ಲ*
*ನಿಮ್ಮ ಅನಾರೋಗ್ಯದ ಸಮಯದಲ್ಲಿ ಬಂದು ನಿಮ್ಮ ಆರೈಕೆ ಮಾಡಲು, ಔಷಧಿ ಕೊಡಲು ಆಗುತ್ತಿಲ್ಲ,*
*ನಾನು ಹೃತ್ಪೂರಕವಾಗಿ ಮನದಾಳದಿಂದ ಬಯಸಿದರೂ ನಿಮ್ಮ ಮಗನಾಗಿ ನನ್ನ ಕರ್ತವ್ಯ ಮತ್ತು ಧರ್ಮವನ್ನು ಪೂರೈಸಲು ನನಗೆ ಸಾಧ್ಯವಾಗುತ್ತಿಲ್ಲ,*
*ನಿಮಗೇ ತಿಳಿದಿರುವಂತೆ ನಾನು ಸಾವಿರಾರು ಕಿಲೋಮೀಟರ್ ದೂರದ ಅಮೆರಿಕೆಯ ಬಂಗಲೆಯಲ್ಲಿದ್ದೇನೆ ಮತ್ತು ನೀವು ಅದೇ ಹಳ್ಳಿಯ ಹಳೆಯ ಮನೆಯಲ್ಲಿದ್ದೀರೀ,*
*ಇದೆಲ್ಲವೂ ನನ್ನೊಬ್ಬನದೇ ತಪ್ಪೇ? ಹೇಳೀ...*
*ಇಂತೀ ನಿಮ್ಮ ಮಗ*
*******
ಈಗ ಪ್ರತಿಯೊಬ್ಬ ತಂದೆ-ತಾಯಿಯರೂ ಯೋಚಿಸಬೇಕು,
ಅವರು ತಮ್ಮ ಹೊಟ್ಟೆ-ಬಟ್ಟೆಯನ್ನು ಕಟ್ಟಿ, ದೈನಂದಿನ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು,
ತಾವು ಗಳಿಸಿದ ಆಸ್ತಿಗಳನ್ನು ಮಾರಾಟ ಮಾಡಿ ಇಂದಿನ ಮಕ್ಕಳ ಸುಂದರ ಭವಿಷ್ಯದ ಕನಸುಗಳನ್ನು ಕಾಣುವುದು ಇಂತಹಾ ಪರಿಸ್ಥಿತಿಗಾಗಿಯೇ?
* *ಯೋಚಿಸಿ* *
*ನಾವು ವಾಸ್ತವವಾಗಿ ಯಾವುದಾದರೂ ತಪ್ಪು ಮಾಡುತ್ತಿದ್ದೇವೆಯೇ .....?*