Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • "ಪ್ರತಿಸಂಧಿ" ಗೆ ನಮ್ಮ ಪ್ರೀತಿಪೂರ್ವಕ ಆಮಂತ್ರಣ.
    ಎದೆಯಾಳದಲಿ ಬಚ್ಚಿಟ್ಟ
    ಅಚ್ಚಳಿಯದ ಸಾವಿರ ನೆನಪು
    ಹೊರಬರಲಾದೇ ಒಳಗೊಳಗೇ ಚಡಪಡಿಕೆಯೋ!
    ಸಾವಿರಕಾಲಕು ಮರೆಯಲಾಗದೇ
    ಮೆಲುಕು ಹಾಕಲಾಗದೇ
    ಕಳೆದೆವಿಷ್ಟು ವರುಷ.
    ಒಂದಿಷ್ಟು ಕೂಡಿದೆವು,
    ಒಂದಷ್ಟು ಕಳೆದೆವು
    ಜೀವನದ ಕೂಡಿಕಳೆವ ಲೆಕ್ಕದಲಿ
    ನಾವೇ ಕಳೆದುಹೋದೆವು.
    ಓಡುತ್ತಲೇ ಇರುವ ಕಾಲ ಚಕ್ರವನ್ನು
    ಹಿಂದೆ ತಿರುಗಿಸಲಾಗದು ನಿಜ...
    ಆದರೆ ಓಡುತ್ತಿರುವ ಜೀವನಕೆ ತುರ್ತಾಗಿ ನೀಡಬೇಕೀಗ ರಜಾ...
    ಆಂದು ಬಚ್ಚಿಟ್ಟ ನೆನಪುಗಳ ಬುತ್ತಿಯನು
    ತೆರೆದು ಹಂಚಬಹುದಿಲ್ಲಿ
    ಕಲಿತ ಪಾಠ,ಕಲಿಸಿದ ಗುರುಗಳ
    ನೆನೆಸಿಕೊಳಬಹುದಿಲ್ಲಿ.
    ಪಡೆದ ಸ್ನೇಹ, ಕಳೆದ‌ ಪ್ರೀತಿ
    ಹುಡುಕಬಹುದಿಲ್ಲಿ.
    ನಮ್ಮ ಕ್ಯಾಂಪಸ್, ನಮ್ಮ ಅಡ್ಡಾದಲಿ
    ಮತ್ತೆ ಅಡ್ಡಾಡಬಹುದು
    ಜೊತೆಗಿದ್ದು ನಕ್ಕು‌ನಲಿದ ಆ ದಿನಗಳ‌ಮತ್ತೆ ಮೆಲುಕುಹಾಕಬಹುದು
    ಪ್ರತಿಯೊಬ್ಬರಿಗು ಇದೆ ಇಲ್ಲಿ ಅವಕಾಶ
    ಕಳೆದುಕೊಳ್ಳಬೇಡಿ ಈ ಸುವರ್ಣಾವಕಾಶ
    ಬನ್ನಿ ಸೇರೋಣ ...
    ಒಂದಿಷ್ಟು ಹರಟೋಣ...
    ನಕ್ಕು ನಲಿಯೋಣ...
    ನೆನಪುಗಳ ಬುತ್ತಿಯನು
    ತೆರೆಯೋಣ.
    ಇದೋ "ಪ್ರತಿ ಸಂಧಿ"ಗೆ ನಮ್ಮ
    ಪ್ರೀತಿಪೂರ್ವಕ ಆಮಂತ್ರಣ.
    *Prof. ಪದ್ಮಲತಾ ಮೋಹನ್ Bengaluru
    3 min
  • ಕ್ಷಮಿಸಿ ಬಿಡಿ please....
    ತಪ್ಪು ಮಾಡುವುದು ಸಹಜ, ಆದರೆ ತಿದ್ದಿ ನಡೆಯುವವನು ಮನುಜ” ಎಂದು ಕೇಳಿದ್ದೇವೆ. ಎಷ್ಟೊಂದು ಸಲ ತಪ್ಪು ಮಾಡಿದಾಗ, ಅದು ಆಗಲೇ ಅರಿವಿಗೆ ಬಾರದಿರಬಹುದು/ಬರಬಹುದು. ನಾವು ಮಾಡಿದ್ದು ತಪ್ಪೆಂದು  ನಮಗೆ ಅನಿಸಿದಾಗ, ಸಹಜವಾಗಿ “ನನ್ನದು ತಪ್ಪಾಯ್ತು, ನನ್ನ ಕ್ಷಮಿಸಿ ಬಿಡಿ” ( I am sorry) ಎಂದು ಕೇಳಿಕೊಳ್ಳುತೇವೆ.
    4 min
  • ರಥಸಪ್ತಮಿ* ಮಾಘ ಮಾಸ ಶುಕ್ಲಪಕ್ಷದ ಸಪ್ತಮಿಯ ದಿನ.
    ಮಾಘ ಮಾಸ ಶುಕ್ಲಪಕ್ಷದ ಸಪ್ತಮಿಯ ದಿನ. ಇಂದಿಗೆ ಚಳಿಗಾಲವು ಮುಗಿದು ಬೇಸಗೆಯ ಕಾಲವು ಪ್ರಾರಂಭವಾಗುವುದು. ಸೂರ್ಯನು ತನ್ನ ಏಳು ಕುದುರೆಗಳ ರಥವನ್ನೇರುವನು. ಅವನ ರಥದ ಸಾರಥಿ ಅರುಣ. ಇಂದು ವೇದ ಮಂತ್ರಗಳ ಭಾಗವಾದ ಕೃಷ್ಣ ಯಜುರ್ವೇದ ತೈತ್ತಿರೀಯಾರಣ್ಯಕದಲ್ಲಿ ಪ್ರಸ್ತಾಪಿಸಿರುವ ಅರುಣಪ್ರಶ್ನ ರೀತ್ಯಾ ಸೂರ್ಯ ನಮಸ್ಕಾರಗಳನ್ನು ಮಾಡುವುದು ಪದ್ಧತಿ.
    7 min
  • ಗುರುಗಳ ಶ್ರೇಷ್ಠತೆಯನ್ನು ಅರಿತು ಗುರುವಾಜ್ಞೆಪಾಲನೆ ಮಾಡಿರಿ !
    ಗುರುಗಳೆಂದರೆ ಈಶ್ವರನ ರೂಪ !
    ಅ. ಈಶ್ವರನ ಕೃಪೆಯು ಗುರುಗಳ ಸ್ವರೂಪವನ್ನು ಧರಿಸುತ್ತದೆ.
    ಆ. ಗುರುಗಳ ದರ್ಶನ ಪಡೆಯುವುದೆಂದರೆ, ಈಶ್ವರನ ದರ್ಶನ ಪಡೆದಂತೆ ಆಗಿದೆ.
    ಇ. ಯಾರು ಸದ್ಗುರುಗಳ ದರ್ಶನ ಪಡೆಯಲಿಲ್ಲ, ಆ ಮನುಷ್ಯನು ‘ಕುರುಡನೇ’ ಇರುವನು.
    ೨. ಗುರುಗಳು ನೀಡಿದ ಜ್ಞಾನದ ಮಹತ್ವ
    ಅ. ಯಾವಾಗ ಮನುಷ್ಯನಿಗೆ ಸಂಸಾರದ ಬಗ್ಗೆ ಜಿಗುಪ್ಸೆ ನಿರ್ಮಾಣವಾಗುತ್ತದೆಯೋ, ಆಗ ಅವನಿಗೆ ವೈರಾಗ್ಯ ಬರುತ್ತದೆ ಮತ್ತು ಗುರುಗಳು ನೀಡಿದ ಉಪದೇಶಗಳ ಚಿಂತನೆ ಮಾಡಲು ಅವನು ಸಮರ್ಥನಾಗುತ್ತಾನೆ. ಆಗ ಧ್ಯಾನದಲ್ಲಿ ಆಯಾ ಸಮಯದಲ್ಲಿ ಅಧ್ಯಯನ ಮಾಡುವುದರಿಂದ ಅವನ ಮನಸ್ಸಿನಲ್ಲಿರುವ ಅನಿಷ್ಟ ವೃತ್ತಿ ದೂರವಾಗುತ್ತವೆ.
    ಆ. ‘ಮಾಯೆಯಿಂದಾಗಿ ಒಬ್ಬ ಈಶ್ವರನು ಅನೇಕ ರೂಪಗಳಲ್ಲಿ ಕಾಣಿಸುತ್ತದೆ’, ಎಂಬ ಜ್ಞಾನವು ಯಾರಿಗೆ ಗುರುಕೃಪೆಯಿಂದ ಆಗುತ್ತದೆಯೋ, ಅವನು ಸತ್ಯವನ್ನು ಅರಿತುಕೊಳ್ಳುತ್ತಾನೆ ಮತ್ತು ವೇದಗಳನ್ನು ತಿಳಿದುಕೊಳ್ಳುತ್ತಾನೆ.
    ೩. ಗುರುಗಳು ಏನು ಮಾಡುತ್ತಾರೆ ?
    ಅ. ಸದ್ಗುರುಗಳು ಶಿಷ್ಯನ ಮೇಲೆ ಆಶೀರ್ವಾದದ ಸುರಿಮಳೆ ಸುರಿಸುತ್ತಾರೆ.
    ಆ. ಶಿಷ್ಯನು ಕಾರ್ಯದ ಸಂಖ್ಯೆಯನ್ನು ಎಣಿಸುತ್ತಾನೆ; ಆದರೆ ಗುರುಗಳು ಆ ಹಿಂದಿನ ನಿಶ್ಚಿತ ಕಾರಣ ಮತ್ತು ಉದ್ದೇಶ ಇವುಗಳ ತುಲನೆ ಮಾಡುತ್ತಾರೆ.
    ಇ. ಗುರುಗಳು ಜೀವನನೌಕೆಯ ನಾವಿಕರಾಗಿದ್ದಾರೆ ಮತ್ತು ಈಶ್ವರನು 
ಆ ನೌಕೆಯನ್ನು ಸಾಗಿಸುವನಿಗೆ ಅನುಕೂಲವಾಗಿ ಬೀಸುವ ಗಾಳಿ !
    ೪. ಗುರುಗಳ ಬಗ್ಗೆ ಭಕ್ತಿಭಾವ ಹೇಗೆ ನಿರ್ಮಾಣ ಮಾಡುವಿರಿ ?
    ಅ. ಮೊದಲು ತಮ್ಮ ಉತ್ತಮೊತ್ತಮ ವಸ್ತುಗಳನ್ನು ಗುರುಗಳಿಗೆ ಸಮರ್ಪಿಸಿ. ಆದುದರಿಂದ ಆಸಕ್ತಿ ಸಹಜವಾಗಿ ಕಳಚಿಹೋಗುತ್ತದೆ.
    ಆ. ಯಾವಾಗ ನಮಗೆ ಸಂಸಾರದಲ್ಲಿನ ಅಪೇಕ್ಷೆಗಳು ಇರುವುದಿಲ್ಲವೋ, ಆಗ ಗುರುಗಳ ಬಗ್ಗೆ ಭಕ್ತಿಭಾವ ನಿರ್ಮಾಣವಾಗುವುದು.
    ಇ. ಆತ್ಮಸಾಕ್ಷಾತ್ಕಾರದ ದೇವಸ್ಥಾನದಲ್ಲಿ ಗುರುಗಳ ಸತ್ಸಂಗವು ಮೊದಲ ಸ್ತಂಭವಾಗಿದೆ.
    ಈ. ಧರ್ಮವು ಕೇವಲ ಒಂದೇ, ಅದೆಂದರೆ ‘ಗುರುಗಳ ಬಗ್ಗೆ ಭಕ್ತಿ ಮತ್ತು ಪ್ರೇಮ’ ಇವುಗಳ ಧರ್ಮ.
    ಉ. ಗುರುಗಳ ಆಸರೆ ಪಡೆಯಿರಿ ಮತ್ತು ಸತ್ಯದ ಅನುಕರಣೆ ಮಾಡಿರಿ.
    ಊ. ಶ್ರದ್ಧೆ, ಭಕ್ತಿ ಮತ್ತು ತತ್ಪರತೆ ಇವುಗಳ ಹೂವಿನಿಂದ ಗುರುಗಳ ಪೂಜೆ ಮಾಡಿರಿ.
    ೫. ಗುರುಗಳಲ್ಲಿ ಶ್ರದ್ಧೆ ಹೇಗಿರಬೇಕು ?  
    ಅ. ಗುರುಗಳ ಕಾರ್ಯದ ಕಡೆಗೆ ಸಂಶಯದಿಂದ ನೋಡುವುದು, ಇದೊಂದು ಮಹಾಪಾಪವಾಗಿದೆ.
    ಆ. ಜೀವನದಲ್ಲಿನ ಪ್ರತಿಯೊಂದು ಕಹಿ ಅನುಭವ ಗುರುಗಳ ಬಗ್ಗೆ ನಮ್ಮ ಶ್ರದ್ಧೆಯ ಪರೀಕ್ಷೆ ಇದೆ.
    ಇ. ತಮ್ಮ ಗುರುಗಳ ಕೃಪೆಯ ಮೇಲೆ ಶ್ರದ್ಧೆ ಇಟ್ಟು ತಮ್ಮ ಕರ್ತವ್ಯಗಳನ್ನು ಪಾಲಿಸಿರಿ.
    ೬. ಶಿಷ್ಯನು ಗುರುಗಳ ಸಾನಿಧ್ಯದಲ್ಲಿ ಏನು ಮಾಡಬಾರದು ? 
    ಅ. ತಮ್ಮ ಗುರುಗಳ ಉಪಸ್ಥಿತಿಯಲ್ಲಿ ಹೆಚ್ಚು ಮಾತನಾಡಬೇಡಿ.
    ಆ. ಶಿಷ್ಯನು ತಮ್ಮ ಗುರುಗಳ ‘ದೋಷಗಳನ್ನು’ ನೋಡಬಾರದು.
    ೭. ಗುರುಗಳ ಆಜ್ಞೆಯ ಪಾಲನೆ 
    ಅ. ಗುರುಗಳ ಆಜ್ಞೆಯ ಪಾಲನೆ ಮಾಡುವುದು, ಅದು ಆ ಕೃತಿಯನ್ನು ಮಾಡುವುದಕ್ಕಿಂತಲೂ ದೊಡ್ಡದಾಗಿದೆ.
    ಆ. ಗುರುಗಳ ಆಜ್ಞೆ ಪಾಲಿಸುವುದು ತ್ಯಾಗಕ್ಕಿಂತಲೂ ದೊಡ್ಡದು.
    ಇ. ಗುರುಗಳ ಆಜ್ಞೆಯ ಉಲ್ಲಂಘನೆ, ಅಂದರೆ ತಾನೇ ತನ್ನ ಸಮಾಧಿ ತೋಡಿದಂತೆ !
    ಈ. ಗುರುಗಳ ಮೇಲೆ ಪ್ರೀತಿ ಮಾಡಿ ಅವರ ಆಜ್ಞಾಪಾಲನೆ ಮಾಡುವುದು, ಅಂದರೆ ಗುರುಗಳ ಸೇವೆ ಮಾಡುವುದು.
    ೮. ಗುರುಗಳ ಸೇವೆ
    ಅ. ಗುರುಗಳ ಸೇವೆ ಮಾಡುವುದೇ ಜೀವನದ ಧ್ಯೇಯವನ್ನಾಗಿರಿಸಿ.
    ಆ. ತಮ್ಮ ದಿವ್ಯ ಗುರುಗಳ ಸೇವೆ ಮಾಡುವ ಯಾವುದೇ ಅವಕಾಶ ಕಳೆದುಕೊಳ್ಳಬೇಡಿ.
    ಇ. ಯಾವಾಗ ತಾವು ತಮ್ಮ ದಿವ್ಯ ಗುರುಗಳ ಸೇವೆ ಮಾಡುವಿರಿ, ಆಗ ಏಕನಿಷ್ಠೆ ಮತ್ತು ಪ್ರಾಮಾಣಿಕತೆ ಇರಲಿ.
    ೯. ಗುರುಗಳಿಗೆ ಅಪೇಕ್ಷಿತವಿರುವಂತೆ ನಡೆದುಕೊಂಡರೆ
 ಅವರ ಬಳಿ ಏನೂ ಕೇಳಬೇಕಾಗುವುದಿಲ್ಲ !
    ಎಲ್ಲವೂ ಗುರುಕೃಪೆಯಿಂದಲೇ ಆಗುತ್ತದೆ, ಗುರುಕೃಪೆಯ ಹೊರತು ಏನೂ ಆಗುವುದಿಲ್ಲ. ಗುರುಗಳ ಆಜ್ಞೆಯಂತೆ ನಡೆದುಕೊಂಡರೆ, ನಿಶ್ಚಿತವಾಗಿಯೂ ಗುರುಕೃಪೆಯಾಗುವುದು. ತಮ್ಮ ಗುರುಗಳಿಗೆ ಅಪೇಕ್ಷಿತವಿರುವಂತೆ ತಾವು ಆಚರಣೆಯನ್ನು ಮಾಡಿದರೆ, ರಾಷ್ಟ್ರರಕ್ಷಣೆ, ಧರ್ಮಸಂಸ್ಥಾಪನೆ ಮತ್ತು ಈಶ್ವರೀ ರಾಜ್ಯದ ಸ್ಥಾಪನೆ ಈ ಕುರಿತು ನಮಗೆ ಏನೂ ಬೇಡುವ ಅವಶ್ಯಕತೆಯೇ ಇರುವುದಿಲ್ಲ.
    9 min
  • Stotra (Sanskrit:स्तोत्र)(sometimes stotram,स्तोत्रम्) ಸ್ತೋತ್ರ
    ಸ್ತೋತ್ರ (ಸಂಸ್ಕೃತ: स्तोत्र) (ಕೆಲವೊಮ್ಮೆ ಸ್ತೋತ್ರಮ್, स्तोत्रम्) ಎಂಬುದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ "ಓಡ್, ಶ್ಲಾಘನೆ ಅಥವಾ ಸ್ತುತಿಗೀತೆ". ... ಇದು ದೇವತೆಗೆ ಹೊಗಳಿಕೆ ಮತ್ತು ವೈಯಕ್ತಿಕ ಭಕ್ತಿಯನ್ನು ವ್ಯಕ್ತಪಡಿಸುವ ಸರಳ ಕವಿತೆಯಾಗಿರಬಹುದು ಅಥವಾ ಹುದುಗಿರುವ ಆಧ್ಯಾತ್ಮಿಕ ಮತ್ತು ತಾತ್ವಿಕ ಸಿದ್ಧಾಂತಗಳನ್ನು ಹೊಂದಿರುವ ಕವಿತೆಗಳಾಗಿರಬಹುದು.
    8 min
  • *ಆರತಿಯನ್ನು ಪ್ರಾರಂಭಿಸುವುದರ ಮೊದಲು ಶಂಖವನ್ನು ಏಕೆ ಊದಬೇಕು?*
    ಪೂಜೆಯ ಪ್ರಾರಂಭದಲ್ಲಿ ಮತ್ತು ಆರತಿಯನ್ನು ಮಾಡುವ ಮೊದಲು ಶಂಖವನ್ನು ಊದುವುದರಿಂದ ಮುಂದಿನ ಲಾಭಗಳಾಗುತ್ತವೆ.
    ಅ. ಶಂಖನಾದದಿಂದಾಗಿ ವಾತಾವರಣದಲ್ಲಿನ ರಜ-ತಮ ಕಣಗಳ ವಿಘಟನೆಯಾಗುತ್ತದೆ.
    ಆ. ಬ್ರಹ್ಮಾಂಡದಲ್ಲಿ ಕಾರ್ಯನಿರತವಿರುವ ಶ್ರೀವಿಷ್ಣುವಿನ ಸಗುಣ ಶಕ್ತಿಯು ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತದೆ ಮತ್ತು ಅದರ ಲಾಭವು ಶಂಖನಾದ ಮಾಡುವವರಿಗೆ ಮತ್ತು ಕೇಳುವವರಿಗೆ ಆಗುತ್ತದೆ.
    – ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮದಿಂದ, ೧೬.೧.೨೦೦೫)
    ಇ. ವಾತಾವರಣದಲ್ಲಿನ ಕೆಟ್ಟ ಶಕ್ತಿಗಳ ಸಂಚಾರವು ಕಡಿಮೆಯಾಗಿ, ಪೂಜಾವಿಧಿಯಲ್ಲಿ ದೇವತೆಗಳನ್ನು ಆವಾಹನೆ ಮಾಡಿದಾಗ ಆಕರ್ಷಿತವಾಗುವ ದೇವತೆಗಳ ಸಾತ್ತ್ವಿಕ ಲಹರಿಗಳ ಪ್ರವಾಹಕ್ಕಾಗುವ ತ್ರಾಸದಾಯಕ ಸ್ಪಂದನಗಳ ಅಡಚಣೆಯು ಕಡಿಮೆಯಾಗುತ್ತದೆ.
    ಈ. ಪೂಜೆಯಲ್ಲಿನ ಉಪಕರಣಗಳ ಸುತ್ತಲೂ ಈಶ್ವರೀ ಚೈತನ್ಯದ ಸಂರಕ್ಷಣಾ ಕವಚವು ನಿರ್ಮಾಣವಾಗುತ್ತದೆ.
    ಉ. ದೇವರ ಪೂಜೆಯ ವಿಧಿಯನ್ನು ಆರತಿಯಿಂದ ಮುಗಿಸುತ್ತಾರೆ. ಈ ಸಮಯದಲ್ಲಿಯೂ ಬ್ರಹ್ಮಾಂಡದಲ್ಲಿ ಕಾರ್ಯನಿರತವಾಗಿರುವ ದೇವತೆಗಳ ತತ್ತ್ವಗಳ ಲಹರಿಗಳು ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಪೂಜಾಸ್ಥಳದತ್ತ ಆಕರ್ಷಿತವಾಗುತ್ತಿರುವುದರಿಂದ ಈ ಲಹರಿಗಳ ಪ್ರವಾಹಕ್ಕೆ ಅಡಚಣೆಯನ್ನು ಉಂಟುಮಾಡುವ ರಜ-ತಮಾತ್ಮಕ ಲಹರಿಗಳ ವಿಘಟನೆಯಾಗಲು ಆರತಿಯ ಪ್ರಾರಂಭ ದಲ್ಲಿ ಶಂಖವನ್ನು ಊದುತ್ತಾರೆ. ಇದರಿಂದಾಗಿ ವಾತಾವರಣವು ಶುದ್ಧವಾಗುವುದರಿಂದ, ಪೂಜಾವಿಧಿಯಿಂದ ಹರಡುವ ಚೈತನ್ಯವು ಪೂಜೆಯ ನಂತರವೂ ವಾತಾವರಣದಲ್ಲಿ ತುಂಬಾ ಸಮಯ ಉಳಿಯಲು ಸಹಾಯವಾಗುತ್ತದೆ. ಆದುದರಿಂದ ಪೂಜೆಯಲ್ಲಿ ದೇವತೆಗಳನ್ನು ಆಹ್ವಾನಿಸುವ ಮೊದಲು ಮತ್ತು ಆರತಿಯನ್ನು ಪ್ರಾರಂಭಿಸುವ ಮೊದಲು ಶಂಖನಾದವನ್ನು ಮಾಡಬೇಕು ಹಾಗೂ ಈ ಸಮಯದಲ್ಲಿ ಪೂಜಾವಿಧಿಯತ್ತ ಅತ್ಯಧಿಕ ಪ್ರಮಾಣದಲ್ಲಿ ಆಕರ್ಷಿತವಾಗುವ ದೇವತೆಗಳ ಸಾತ್ತ್ವಿಕ ಲಹರಿಗಳಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬೇಕು. – ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೭.೧.೨೦೦೫ ಮಧ್ಯಾಹ್ನ ೩.೧೫)
    ತಲೆಯನ್ನು ಮೇಲಕ್ಕೆ ಎತ್ತಿ ಸ್ವಲ್ಪ ಹಿಂಬದಿಗೆ ಬಾಗಿಸಿ ಶಂಖವನ್ನು ಏಕೆ ಊದಬೇಕು?
    ತಲೆಯನ್ನು ಸ್ವಲ್ಪ ಹಿಂಬದಿಗೆ ಬಗ್ಗಿಸಿ ಶಂಖನಾದವನ್ನು ಮಾಡುವುದರಿಂದ ದೇವತೆಯ ತಾರಕ-ಮಾರಕ ತತ್ತ್ವವು ಜಾಗೃತವಾಗುವುದು. ತಲೆಯನ್ನು ಮೇಲಕ್ಕೆ ಎತ್ತಿ ಸ್ವಲ್ಪ ಹಿಂಬದಿಗೆ ಬಾಗಿಸುವುದರಿಂದ ಶಂಖವನ್ನು ಊದುವ ಜೀವದ ಸುಷುಮ್ನಾನಾಡಿಯು ಕಾರ್ಯನಿರತವಾಗುತ್ತದೆ. ಇದರಿಂದ ಬಾಯಿಯಿಂದ ಹೊರಬರುವ ತೇಜ ಮತ್ತು ವಾಯುತತ್ತ್ವಕ್ಕೆ ಸಂಬಂಧಿಸಿದ ಲಹರಿಗಳಲ್ಲಿನ ರಜ-ಸತ್ತ್ವ ಕಣಗಳ ಯೋಗ್ಯ ಸಮತೋಲನವನ್ನು ಕಾಪಾಡಲು ಸಹಾಯವಾಗುತ್ತದೆ. ಇದರಿಂದ ಆವಶ್ಯಕತೆಗನುಸಾರವಾಗಿ ಆಯಾ ಪರಿಸ್ಥಿತಿಗೆ ಯೋಗ್ಯ ವಾದಂತಹ ದೇವತೆಯ ತಾರಕ-ಮಾರಕ ತತ್ತ್ವವು ಜಾಗೃತವಾಗುತ್ತದೆ.
    
    ಶಂಖನಾದದಿಂದ ವಾತಾವರಣದಲ್ಲಿನ ರಜ-ತಮ ಕಣಗಳ ವಿಘಟನೆಯಾಗುತ್ತದೆ: ಶಂಖನಾದದಿಂದ ಹೊರಬೀಳುವ ನಾದಶಕ್ತಿಯಿಂದಾಗಿ ಊರ್ಧ್ವ ದಿಕ್ಕಿನಿಂದ ಬರುವ ಬ್ರಹ್ಮಾಂಡದಲ್ಲಿನ ಸೂಕ್ಷ್ಮತರ ಲಹರಿಗಳು ಜಾಗೃತವಾಗಿ ಕಡಿಮೆ ಸಮಯದಲ್ಲಿ ರಜ-ತಮ ಕಣಗಳ ವಿಘಟನೆಯಾಗುತ್ತದೆ.
    ಶಂಖನಾದದಿಂದ ಕೆಟ್ಟ ಶಕ್ತಿಗಳು ಪ್ರಕಟವಾಗುತ್ತವೆ: ಶಂಖನಾದದಿಂದ ಹೊರಬೀಳುವ ನಾದಶಕ್ತಿಯುಕ್ತ ಲಹರಿಗಳ ವೇಗದಿಂದ ರಜೋಕಣಗಳ ಘರ್ಷಣೆಯಾಗಿ ಸೂಕ್ಷ್ಮಜ್ವಾಲೆಗಳು ನಿರ್ಮಾಣವಾಗುತ್ತವೆ. ಇದರಿಂದ ಕೆಟ್ಟ ಶಕ್ತಿಗಳ ವಾಯುರೂಪೀ ದೇಹದ ಸುತ್ತಲೂ ಇರುವ ಕೋಶವು ಉರಿಯುತ್ತದೆ. ಇದರಿಂದಾಗಿ ಕೆಟ್ಟ ಶಕ್ತಿಗಳಿಗೆ ಶಂಖಧ್ವನಿಯನ್ನು ಸಹಿಸಲು ಸಾಧ್ಯವಾಗದೇ ಪ್ರಕಟವಾಗುತ್ತವೆ. ಭುವರ್ಲೋಕ ಮತ್ತು ಪಾತಾಳದಲ್ಲಿನ ಕೆಲವು ಮಾಂತ್ರಿಕರು (ಮಾಂತ್ರಿಕರು ಎಂದರೆ ಎಲ್ಲಕ್ಕಿಂತ ಬಲಾಢ್ಯ ಅಸುರೀ ಶಕ್ತಿಗಳು) ಶಂಖನಾದದಿಂದ ತೊಂದರೆಯಾದರೂ ಏನೂ ಆಗಿಲ್ಲದಂತೆ ನಟಿಸುತ್ತಾರೆ.
    6 min
  • ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸಿ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
    ತುಳಸಿಯ ಗಿಡವು ವಾಯುಮಂಡಲದಲ್ಲಿನ ಸಾತ್ತ್ವಿಕತೆಯನ್ನು ಸೆಳೆದುಕೊಳ್ಳುತ್ತದೆ ಮತ್ತು ಅದನ್ನು ಜೀವದ ಕಡೆಗೆ ಪ್ರಕ್ಷೇಪಿಸುತ್ತದೆ. ತುಳಸಿಯಲ್ಲಿ ಬ್ರಹ್ಮಾಂಡದಲ್ಲಿನ ಕೃಷ್ಣತತ್ತ್ವವನ್ನು ಸೆಳೆದುಕೊಳ್ಳುವ ಕ್ಷಮತೆಯೂ ಅಧಿಕವಾಗಿರುತ್ತದೆ.
    
    ೨. ಲಾಭಗಳು
    ಅ. ತುಳಸಿಯ ಎಲೆಯಿಂದ ನೈವೇದ್ಯವನ್ನು ಅರ್ಪಿಸುವುದರಿಂದ ಸಾತ್ತ್ವಿಕ ಅನ್ನದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮಲಹರಿಗಳನ್ನು ತುಳಸಿಯ ಎಲೆಯು ಗ್ರಹಿಸಿಕೊಳ್ಳುತ್ತದೆ. ಹೀಗೆ ಸೂಕ್ಷ್ಮಲಹರಿಗಳಿಂದ ತುಂಬಿಕೊಂಡಿರುವ ಎಲೆಯನ್ನು ದೇವರಿಗೆ ಅರ್ಪಿಸುವುದರಿಂದ ದೇವತೆಯ ತತ್ತ್ವವು ಆ ಲಹರಿಗಳನ್ನು ಕೂಡಲೇ ಸೆಳೆದುಕೊಳ್ಳುತ್ತದೆ. ಈ ರೀತಿ ನಾವು ಅರ್ಪಿಸಿದ ಅನ್ನವು ತುಳಸಿ ಎಲೆಯ ಮಾಧ್ಯಮದಿಂದ ದೇವತೆಗೆ ಬೇಗನೇ ತಲುಪಿ ದೇವತೆಯು ಸಂತುಷ್ಟಳಾಗುತ್ತಾಳೆ.
    ಆ. ತುಳಸಿಯ ಎಲೆಯನ್ನು ನೈವೇದ್ಯದ ಮೇಲಿಡುವುದರಿಂದ ಅನ್ನದ ಮೇಲೆ ಬಂದಿರುವ ರಜ-ತಮ ಕಣಗಳ ಆವರಣವು ಕಡಿಮೆಯಾಗುತ್ತದೆ. ತುಳಸಿ ಎಲೆಯಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕ ಲಹರಿಗಳಿಂದ ನೈವೇದ್ಯದ ಸುತ್ತಲಿನ ವಾಯುಮಂಡಲವು ಶುದ್ಧವಾಗಿ ನೈವೇದ್ಯದ ಮೇಲೆ ಕೆಟ್ಟ ಶಕ್ತಿಗಳ ಹಲ್ಲೆಯಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ.
    ಇ. ಭಾವಪೂರ್ಣವಾಗಿ ನೈವೇದ್ಯದ ಮೇಲೆ ತುಳಸಿ ಎಲೆಯನ್ನಿಡುವುದರಿಂದ ಅದು ಅದರ ಗುಣಧರ್ಮಕ್ಕನುಸಾರ ದೇವತೆಯಿಂದ ಬರುವ ಚೈತನ್ಯವನ್ನು ಗ್ರಹಿಸಿಕೊಂಡು ನೈವೇದ್ಯದಲ್ಲಿ ಹರಡುತ್ತದೆ. ಇಂತಹ ನೈವೇದ್ಯವನ್ನು ಸೇವಿಸುವುದರಿಂದ ಜೀವಕ್ಕೆ ಚೈತನ್ಯದ ಲಹರಿಗಳು ಸಿಗಲು ಸಹಾಯವಾಗುತ್ತದೆ.
    – ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೮.೫.೨೦೦೫, ಸಾಯಂ. ೬.೧೪ ಮತ್ತು ೧೨.೮.೨೦೦೪, ಮಧ್ಯಾಹ್ನ ೪.೨೯)
    4 min
  • Remembering Major Somnath Sharma: *Param Vir Chakra Heros:*
    Major Somnath Sharma, PVC, of the Indian Army, was the first recipient of the Param Vir Chakra, India's highest military decoration. Sharma was commissioned into the 8th Battalion, 19th Hyderabad Regiment, in 1942. He served in Burma during the Arakan Campaign of World War II, for which he was mentioned in despatches.
    3 min
  • ಮಹಿಷ, ಅಜ ಮುಂತಾದ ಪ್ರಾಣಿಗಳ ಕ್ಷೀರಗಳ ಗುಣಗಳು.//79
    ಅಷ್ಟಾಂಗ ಹೃದಯ ಸೂತ್ರಸ್ಥಾನ, ಅಧ್ಯಾಯ-5/23-27
    🐃 ಮಹಿಷ(ಎಮ್ಮೆ) ಕ್ಷೀರ:
    • ನಿದ್ದೆ ಬಾರದವರಿಗೆ ಶ್ರೇಷ್ಠ,
    • ಆದರೆ, ಜೀರ್ಣಶಕ್ತಿ ಇರದವರಿಗೆ ಸೂಕ್ತವಲ್ಲ.
    🐐 ಅಜ(ಆಡು)ಕ್ಷೀರ:
    ಅಲ್ಪಜಲಪಾನ ಮಾಡುವ ಮತ್ತು ಎಲ್ಲಾ ಕಹಿರಸದ ಗಿಡಗಳನ್ನೇ ತಿನ್ನುವ ಆಡು, ಅತ್ಯಂತ ಔಷಧೀಗುಣಯುಕ್ತ ಹಾಲನ್ನು ಕೊಡುತ್ತದೆ.
    •ಟಿ.ಬಿ
    •ತೀವ್ರ ಅಜೀರ್ಣ
    •ರಕ್ತಪಿತ್ತ, ಅಸ್ತಮಾ
    •ಅತಿಸಾರಗಳಲ್ಲಿ
    • ದುರ್ಬಲರಿಗೂ ಶ್ರೇಷ್ಠ.
    🐪 ಉಷ್ಟ್ರ(ಒಂಟೆ)ಕ್ಷೀರ:
    •ಉದರಕ್ರಿಮಿ
    •ಮೂಲವ್ಯಾಧಿ
    •ಅಜೀರ್ಣ ಜನ್ಯ ಹೊಟ್ಟೆಯುಬ್ಬರದಲ್ಲಿ ಯೋಗ್ಯ.
    🦙 ಆವಿ(ಕುರಿ) ಕ್ಷೀರ:
    •ಅಹಿತಕಾರಿ,
    •ಹೃದಯರೋಗ ಉತ್ಪನ್ನ ಮಾಡುವುದು.
    🐘 ಗಜ(ಆನೆ)ಕ್ಷೀರ:
    • ಜೀರ್ಣಶಕ್ತಿ ಅತ್ಯಂತ ಬಲವಾಗಿದ್ದವರಿಗೆ ಇದು ಸ್ಥಿರತ್ವವನ್ನು ತರುತ್ತದೆ.
    🦓🐴 ಏಕ ಖುರ(ಕುರೆ, ಕತ್ತೆ, ಒಂಟಿ..ಮುಂತಾದವು) ಪ್ರಾಣಿಗಳ ಕ್ಷೀರ:
    •ಆಮ್ಲ-ಲವಣರಸ ಉಳ್ಳದ್ದು ,
    •ಉರುಸ್ಥಂಭ ಎಂಬ ಅತ್ಯಂತ ಕಷ್ಟಕರವಾದ ರೋಗವನ್ನು ಚಿಕಿತ್ಸಿಸಲು ಈ ಒಂದು ಗೊರಸಿನ ಪ್ರಾಣಿಗಳ ಕ್ಷೀರ ಒಳ್ಳೆಯದೆಂದು ಹೇಳಿದ್ದಾರೆ, ನಾವು ಈ ತನಕ ಈ ರೋಗವನ್ನು ನೋಡಿರುವುದಿಲ್ಲ.
    • ಆದರೆ ಸೋಮಾರಿತನವನ್ನುಂಟು ಮಾಡುತ್ತದೆ ಎಂದೂ ತಿಳಿಸಿದ್ದಾರೆ.
    🤱 ಸ್ತನ್ಯ(ಸ್ತ್ರೀ ಎದೆಹಾಲು):
    • ನೇತ್ರರೋಗಗಳಾದ ಕೆಂಪಾಗುವುದು(conjunctivitis), ಉರಿ(burning eyes), ಅಶ್ರುಸ್ರಾವ, ನೋವು, ಕೀವುಗುಳ್ಳೆಗಳು ಬಂದಾಗ, ನಿತ್ಯವೂ ಮೂರುಬಾರಿ ಸ್ತನ್ಯ(ಎದೆಹಾಲು)ವನ್ನು ನೇತ್ರಗಳಿಗೆ ಹಾಕಿಕೊಂಡರೆ ಅತ್ಯಂತ ಶೀಘ್ರ ಪರಿಣಾಮ ಎಂದಿದ್ದಾರೆ ಆಚಾರ್ಯರು. ಈ ಅಚ್ಚರಿ ಫಲಿತಾಂಶಗಳನ್ನು ನಾವು ಚಿಕ್ಕವರಿದ್ದಾಗ ಕಂಡಿದ್ದೇವೆ.
    ✡ಧನ್ಯವಾದಗಳು✡
    5 min
  • KUNDAPUR.COM
    Online new portal covering all news in and around udupi district and reaching all community through out the world.... Long live kundapur.com
    8 min

About Dr Balakrishna Maddodi

From the publisher's feed

Hi