Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • ಜೈಹಿಂದ್ ವಂದೇ ಮಾತರಂ ಜೈಜವಾನ್ ಜೈ ಕಿಸಾನ್ ಭಾರತ್ ಮಾತಾಕೀ ಜೈ 🇮🇳🇮🇳🇮🇳🇮🇳🇮🇳🇮🇳
    🇮🇳 20 ಡಿಗ್ರಿಯಲ್ಲಿ
    ನಮಗೆ ಚಳಿ ಅನ್ನಿಸುತ್ತದೆ
    🇮🇳 16 ಡಿಗ್ರಿಯ
    ಚಳಿಯಲ್ಲಿ ನಮಗೆ ಬೆಚ್ಚಗಿನ ಉಡುಗೆ ಧರಿಸಬೇಕು ಅನ್ನಿಸುತ್ತದೆ
    🇮🇳 12 ಡಿಗ್ರಿಯ
    ಚಳಿಗೆ ತಲೆಗೆ ಟೋಪಿ ಇತ್ಯಾದಿಯನ್ನು ಹಾಕಿಕೊಳ್ಳಬೇಕು
    🇮🇳 8 ಡಿಗ್ರಿ
    ಚಳಿಯ ನಂತರ ನಾವುಗಳು ನಡುಗಿ ಹೋಗುತ್ತೇವೆ
    🇮🇳 4 ಡಿಗ್ರಿ
    ಚಳಿಗೆ ಅಡುಗೆ ಮನೆಯನ್ನು ಬಿಟ್ಟು ಹೊರಗೆ ಬರುವುದಿಲ್ಲ
    🇮🇳 1 ಡಿಗ್ರಿ
    ಚಳಿಗೆ ಮನೆಗಳಲ್ಲಿ ಬೆಂಕಿ ಕಾಯಿಸಿಕೊಂಡು ಕುಳಿತುಕೊಳ್ಳಬೇಕಾಗುತ್ತದೆ
    🇮🇳 0 ಡಿಗ್ರಿಯ ಮೇಲೆ ನೀರು ಸುರಿಯಲು ಶುರುವಾಗುತ್ತದೆ
    🇮🇳ಮೈನಸ್ --1 ಡಿಗ್ರಿಯ
    ಚಳಿಗೆ ನಮ್ಮ ಬಾಯಿಂದ ಬರುವ ಮಾತುಗಳು ತೊದಲಲೂ ಶುರುವಾಗುತ್ತದೆ
    🇮🇳 --5 ಡಿಗ್ರಿ
    ಚಳಿಯ ಮೇಲೆ .......
    🇮🇳 --10 ಡಿಗ್ರಿ
    ಚಳಿಯ ಮೇಲೆ ….....
    🇮🇳 -- 15 ಡಿಗ್ರಿ
    ಚಳಿಯ ಮೇಲೆ ಸ್ವಲ್ಪ ಯೋಚಿಸಿ …...........
    🇮🇳ಮೈನಸ್ -- 20 ಡಿಗ್ರಿಯ ಚಳಿಯ ಮೇಲೆ ಸಿಯಾಚಿನ್ ನಲ್ಲಿ ನಮ್ಮ ದೇಶದ ವೀರ ಸೈನಿಕರು ನಮ್ಮ ದೇಶದ ಗಡಿಯನ್ನು ಕಾಯುತ್ತಾರೆ ರಕ್ಷಣೆ ಮಾಡುತ್ತಾರೆ ...........
    🇮🇳 ಸಂಪೂರ್ಣ ತನ್ನ ಶಕ್ತಿಯ ಜೊತೆಗೆ
    7-12 ಕೆಜಿಯ ಬಂದೂಕು ಮತ್ತು
    ಹತ್ತಿರ ಹತ್ತಿರ 20 ಕೆಜಿಯ ಸರಕುಗಳನ್ನು ತನ್ನ ಹೆಗಲ ಮೇಲೆ ಹೊತ್ತಿಕೊಂಡು ಮೊಳಕಾಲಿನವರೆಗೂ ಇರುವ ಹಿಮದ ಗಡ್ಡೆಯಲ್ಲಿ ನಡೆಯುತ್ತಾರೆ
    🇮🇳 ಏಕೆಂದರೆ ನಾವೆಲ್ಲರೂ ನಮ್ಮ
    ಸ್ವಾತಂತ್ರ್ಯದ ಆನಂದವನ್ನು
    ಅನುಭವಿಸಲಿ ಅಂತ ………........
    …………….........…!!!!!!!!
    🇮🇳 ಏಕೆಂದರೆ ನಾವೆಲ್ಲರೂ ನಮ್ಮ ಕುಟುಂಬದ ಜೊತೆಗೆ ಕ್ರಿಕೆಟ್ ಪಂದ್ಯದ ಆನಂದವನ್ನು ನೋಡಲು
    …….......
    ........................... .!!!!!!!!!
    🇮🇳 ಏಕೆಂದರೆ ನಮ್ಮ ಮಕ್ಕಳು ಶಾಂತಿಯ ಜೊತೆಗೆ ಶಾಲೆಗೆ ಹೋಗಲಿ ಅಂತ …..
    🇮🇳 ದಯವಿಟ್ಟು ಅವಶ್ಯಕವಾಗಿ ಇಂತಹ ಒಂದು ಸಂದೇಶವನ್ನು ನಮ್ಮ ಭಾರತೀಯ ವೀರ ಸೈನಿಕರಿಗಾಗಿ ಶೇರ್ ಮಾಡಿ
    🇮🇳 ಈ ದಿನ ಚಲನಚಿತ್ರ ನಟರು ಕ್ರಿಕೆಟಿಗರಿಗೆ ಕೊಡುವಂತಹ ಒಂದು ಅಭಿಮಾನ ಪ್ರೀತಿ ನಮ್ಮ ದೇಶದ ಸೈನಿಕರಿಗೆ ಕೊಡಿ
    _______________________
    🇮🇳 ದಯವಿಟ್ಟು ಭಾರತೀಯರು ಆಗಿ … I _______________________
    🇮🇳 ನಮ್ಮ ದೇಶವನ್ನು ಪ್ರೀತಿಸಿ
    _______________________
    🇮🇳 ಈ ಒಂದು ಸಂದೇಶವನ್ನು ಆ ಒಂದು ಸೈನಿಕರ ಹೆಸರು ಏನೂ ಅಂತ ಸಹ ನಮಗೆ ಗೊತ್ತಿಲ್ಲ ಆದರೆ ಹಗಲು ರಾತ್ರಿ ನಮಗಾಗಿ ತನ್ನ ಪ್ರಾಣವನ್ನು ಒತ್ತೆ ಇಟ್ಟು ದೇಶವನ್ನು ರಕ್ಷಣೆ ಮಾಡುತ್ತಾರೆ
    4 min
  • ವಿದ್ಯಾಭ್ಯಾಸ’ ಮಕ್ಕಳಿಗೆ ಬೇಕಾದ ಹಾಗೆ ಇರಬೇಕು…
    ಮಕ್ಕಳು ಕಲಿಯಬೇಕಾದ ಅತ್ಯಂತ ದೊಡ್ಡ ವಿದ್ಯೆ ಸಿಗುವುದು ಅಜ್ಜ, ಅಜ್ಜಿ,ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ,ತಂಗಿ, ಅಣ್ಣ, ತಂದೆ, ತಾಯಿ ಎಂಬ ಸಮಾಜವೆಂಬ ಪ್ರಾಯೋಗಿಕ ಮನೆಯಿಂದ. ಮನೆಯೇ ಸಾಂಸ್ಕೃತಿಕ ಪಾಠ ಶಾಲೆ. ಮನೆಯಲ್ಲಿರುವ ಕುಟುಂಬದೊಂದಿಗೆ ಬೆರೆಯುವ ಅವಕಾಶ ಇದ್ದರೆ ಅದು ಉತ್ತಮ ಶಿಕ್ಷಣ.
    ಇಂದು ಅತ್ಯಂತ ಹೆಚ್ಚು ಸಿಲೆಬಸ್. ಅದನ್ನು ಮುಗಿಸಲು special class ತೆಗೆದುಕೊಳ್ಳುವ ಅಧ್ಯಾಪಕರು ಟ್ಯೂಷನ್  ಮುಂತಾದ ನಿರಂತರ ಯೋಜಿತ ಭಾಗವಹಿಸುವಿಕೆಯಿಂದ ವಿದ್ಯಾರ್ಥಿಗಳಿಗೆ ತಂದೆ ತಾಯಿಯೊಂದಿಗೆ  ಕುಟುಂಬದೊಂದಿಗೆ ಬೆರೆಯಲು ಕಷ್ಟವಾಗಿದೆ. ಇಂತಹಾ ವಿದ್ಯಾರ್ಥಿಗಳಿಗೆ ಮುಂದೊಂದು ದಿನ ತನ್ನ ಹೆತ್ತವರನ್ನು, ಕುಟುಂಬದವರನ್ನು ಕಾಣಲು ನ್ಯಾಯಾಲಯಕ್ಕೆ ಮೊರೆ ಹೋಗಬೇಕಾದ ದಿನ ಬರಬಹುದು.
    ಮುಂಬರುವ ಹೊಸಾ ಶಿಕ್ಷಣ ನೀತಿಯೊಳಗೆ ನೋಡಿದರೆ,
    ಜೀವನ ತುಂಬಾ ಚಿಕ್ಕದು, ೪ ನೇ ವಯಸ್ಸಿಗೇ ಆಂಗ್ಲ ಸಂಸ್ಕೃತಿಯ Ukg, Lkg ಗಳು ನಮಗೆ ಬೇಕೇ?…
    ಆ ಇಳಿಯ ವಯಸ್ಸಿನಿಂದ ಗೋಡೆಗಳ ಮಧ್ಯೆ ವಿದ್ಯಾಭ್ಯಾಸ ಎಂಬ ಹೆಸರಲ್ಲಿ ಸಿಗುವ ಕಾರಾಗೃಹ ಎಷ್ಟು ಸರಿ?…
    ಫೋಟೋ ಕೃಪೆ : Youtube
    ಒಂದು ಪಕ್ಷಿ ಕೂಡಾ, ತನ್ನ ಮರಿ –
    ಆಹಾರ ಯಾವುದು?
    ಹಾರುವ ರೀತಿ ಏನು – ಎಂದು ಅರಿವು ಪಡೆದುದ್ದು ಖಚಿತವಾದ ಕೂಡಲೇ , ತಾಯಿ ತನ್ನ ಮರಿಯನ್ನು ದೂರ ಓಡಾಡಲು ಅನುವದಿಸುವುದು. ಆ ಸಂದರ್ಭದಲ್ಲಿ ಮತ್ತೊಂದು ಹಕ್ಕಿಯನ್ನು ಕಿಂಚಿತ್ ಅರ್ಥಮಾಡುವ ತಾಕತ್ತು ಅದಕ್ಕಿರುತ್ತದೆ.
    ನಾಲ್ಕು ವಯಸ್ಸಿನ ಮಗು ಅಂಬೆಗಾಲಿನಿಂದ ಸ್ವಾತಂತ್ರ್ಯ ಪಡೆದು ಅದರ ಅಚ್ಚು ಮೊಣಗಾಲಿನಿಂದ ಹೋಗುವ ಮೊದಲೇ ಕಾರಾಗೃಹ ಎಂಬ ಶಾಲೆ ಅಲ್ಲಿ ಸಿಗುವ ಆಹಾರ, ಒಡನಾಟ… ಸರಿಯಾಗಿರಲೆಂದು ಆಶಿಸೋಣ.
    ಇನ್ನು ಸ್ನಾತಕೋತ್ತರ ಪದವಿ ಪಡೆಯುವಾಗ  ಅವನ/ಳ ವಯಸ್ಸು, ಕೆಲಸದ ಹುಡುಕಾಟ, ನಂತರ ಮದುವೆ , ಪ್ರಕೃತಿಯ ಕರ್ತವ್ಯ ಇದೆಲ್ಲಾ ಹರೆಯ ಕಾಯದ ಕ್ರೀಯೆಗಳಾಗುತ್ತದೆ.
    ನಮ್ಮ ಭಾರತೀಯ ಆಹಾರ ಪದ್ದತಿ ಬಹಳಾ ನೈಸರ್ಗಿಕವಾಗಿತ್ತು. ಆದರೆ ತೊಂಬತ್ತರ ದಶಕಗಳ ನಂತರ ಜಾಗತೀಕರಣದಿಂದ, ಪ್ರಪಂಚದಲ್ಲಿ ಯಾರಿಗೂ ಬೇಡದ , ವಂಶಾಭಿವೃದ್ದಿಗೆ ಪೂರಕವಲ್ಲದ ರಾಸಾಯನ ಮಿಶ್ರಿತ ಆಹಾರ , ಬಿಳಿ ದ್ರವ್ಯ( white drug- ಒಮ್ಮೆ ತಿಂದರೆ ಮತ್ತೊಮ್ಮೆ ತಿನ್ನುವ ವ್ಯಸನ/ adict) ಭರಿತ ಆಹಾರ, ಭಾರತೀಯನ ದೇಹವನ್ನು ಕ್ಷೀಣಿಸತೊಡಗಿತು. ಇಂದು ನಿಮಗೆ ಗೊತ್ತಿರುವ ಎಷ್ಟೋ ನವ- ದಂಪತಿಗಳು ಮಕ್ಕಳಿಲ್ಲ ಎಂದು ಚಡಪಡಿಸುವುದು ನೀವು ಕಾಣುತ್ತಿದ್ದೀರಿ. ಹಿಂದೆ ಇದು ಭಾರತದಲ್ಲಿ ಶೇಕಡಾ ೦.೧೭ ಇತ್ತು. ಇಂದು (೨೦೧೨) ೧೩.೪೫ % ತಲುಪಿದೆ.(೨೦೧೯ ಸರ್ವೇ ಸಿಕ್ಕಿಲ್ಲ)
    ಹರೆಯ ಜಾಸ್ತಿಯಾಗುವುದರ ಜೊತೆ ಜೊತೆಗೆ ಇಂತಹಾ ಆಹಾರ ಸೇವನೆಯಿಂದ ವಂಶಾಭಿವೃದ್ಧಿ ಕುಂಠಿತವಾಗುತ್ತದೆ ಎಂದು ಅಖಿಲ ಭಾರತ ವಿಜ್ಞಾನ ಪರಿಷತ್ತಿನ ವಿಜ್ಞಾನಿಯೊಬ್ಬರು ಹೇಳಿದ್ದರು. ಆದರೆ  ದೇಶದ ನಾಡಿ ಇರುವುದು
    ಆಹಾರ
    ವಿದ್ಯಾಭ್ಯಾಸ 
    ಆರೋಗ್ಯ
    ಫೋಟೋ ಕೃಪೆ : daily mail
    ವಿದ್ಯಾಭ್ಯಾಸ ಮಕ್ಕಳಿಗೆ ಬೇಕಾದ ಹಾಗೆ ಇರಬೇಕು. ಅವರು ತಮ್ಮ ಕೌಶಲದಿಂದ ಅರಿವನ್ನು ಮುಂದುವರಿಯುವಂತೆ, ಅಂದರೆ  ಹರೆಯಕ್ಕೆ ತಕ್ಕಂತೆ ಇರಬೇಕು.  ಕೆಲವು (೦.೦೦೦೧ % ) ಶಿಕ್ಷಕರು ಶಾಲೆಯಲ್ಲಿ ಕೆಟ್ಟದಾಗಿ ಪಾಠ ಮಾಡಿ ಟ್ಯೂಷನಿಗೆ ಕರೆ ನೀಡುವವರು ಇದ್ದಾರೆ. ಅಂತವರನ್ನು ಸರಿ ದಾರಿಗೆ ತರಬೇಕು.
    ಪ್ರಜೆಗಳಿಗೆ ಸಿಗುವ ಆಹಾರ ವಿಶಾಮೃತವಾಗದಂತೆ ಆದಷ್ಟು ಸರ್ಕಾರ ನೋಡಿಕೊಳ್ಳಬೇಕು. ಇಂದು ಯಾವುದೇ ವಿಷವನ್ನು’ತಿನ್ನಿ… ತಿನ್ನಿ…’ ಎಂದು ಜಾಹಿರಾತು ಕೊಡುವ, ಜಾಹಿರಾತು- ನಟ/ಟಿಯರು ತಾವು ದುಡ್ಡಿಗಾಗಿ ತನ್ನನ್ನು ಬೆಳೆಸಿದ, ಬೆಳೆಸುತ್ತಿರುವ ಜನರಿಗೆ ವಿಷಪಾನ ಮಾಡುತ್ತಿದ್ದೇವೆ ಎಂಬ ಅರಿವು ಮೂಡಬೇಕು.
    ಇಲ್ಲದ ರೋಗ ಇದೆ- ಎಂದು, ಬೇರೆ ರೋಗ ಬರಲೆಂದು ಔಷಧಿಕೊಟ್ಟು, ಸುಶ್ರೂಷಿಸುವ ವೈದ್ಯರನ್ನು/ ಆಸ್ಪತ್ರೆಯನ್ನು ಸರಿ ದಾರಿಗೆ ತರಬೇಕು.
    ಮುಂದಿನ ಪೀಳಿಗೆ ವಂಶಾಭಿವೃಧಿಗೆ ಮತ್ತೊಂದು ರಾಷ್ಟ್ರದ ಮುಂದೆ ಕೈ ಜೋಡಿಸುವ ದಿನ ಬಾರದಂತೆ ಇರುವ ಸ್ಥಿತಿಯ ಚಿಂತನೆ ಇರುವ ರಾಜಕಾರಣಿಯನ್ನು ಮತದಾರ ಚುನಾಯಿಸಬೇಕು.
    ತೆನಾಲಿ ರಾಮ, ಬೀರಬಲ್ ರಂತಹಾ ರಾಜನ ಆಜ್ಞೆಯನ್ನು ವಿಮರ್ಶೆ ಮಾಡುವವರು ಮುಂದೆ ಬರಬೇಕು.
    ಎಲ್ಲವನ್ನೂ ಹೊಗಳುವವರು
    ಒಂದು ದೇಶದ
    ಕುಂಠಿತದ ಬೇರು– ಎಂಬ
    ಚಾಣಕ್ಯ ವಾಕ್ಯದೊಂದಿಗೆ….
    ನಮನಗಳು.
    ನಿಮ್ಮವ ನಲ್ಲ
    ರೂಪು
    ಪ್ರೊ.ರೂಪೇಶ್
    15 min
  • 🌹ಒಂದು ಒಳ್ಳೆಯ ಮಾತು🌹
    🌹ಸಂಬಂದ ಗಟ್ಟಿಯಾಗಿ ಇಟ್ಟುಕೊಳ್ಳಬೇಕೆಂದರೆ ಕೆಲವೊಮ್ಮೆ "ಕುರುಡ" ಕೆಲವೊಮ್ಮೆ "ಕಿವುಡ" ಇನ್ನೂ ಕೆಲವೊಮ್ಮೆ "ಮೂಗರಾಗಿ " ಇರುವುದನ್ನು ಕಲಿಯಬೇಕಾಗುತ್ತದೆ.🌹 🙏🌹ಶುಭೋದಯ.🌹🙏
    6 min
  • ಪಾಕಿಸ್ತಾನದ ಸೇನೆಯಲ್ಲಿ ಸೇರಿ ಕೊಂಡಿದ್ದ ಆ ಭಾರತದ ಗೂಢಾಚಾರ ರವೀಂದ್ರ ಕೌಶಿಕ್
    ಪಾಕಿಸ್ತಾನದ ಸೇನೆಯಲ್ಲಿ ಸೇರಿ ಕೊಂಡಿದ್ದ ಆ ಭಾರತದ ಗೂಢಾಚಾರ ಸಿಕ್ಕಿ ಬಿದ್ದ ನಂತರ ಹಿಂಸಿಸಿದರೂ ಬಾಯಿ ಬಿಡಲೇ ಇಲ್ಲ..!! ಬರೋಬ್ಬರಿ ಹದಿನಾರು ವರ್ಷಗಳು….!!! ಆತನನ್ನು ಯಾವ ಪರಿ ಹಿಂಸಿಸಿದರೂ ತಾನ್ಯಾರೆಂದು ಕೊನೆವರೆಗೂ ಬಾಯಿ ಬಿಡಲೇ ಇಲ್ಲ. ದಾಂಡಿಗರಂತಿದ್ದ ದೈತ್ಯ ದೇಹಿಗಳು ಆತನ ಚರ್ಮ ಸುಲಿಯುವಂತೆ ಹೊಡೆಯುತ್ತಿದ್ದರು. ಉಗುರನ್ನು ಕಿತ್ತು ಅದಕ್ಕೆ ಉಪ್ಪು ಖಾರ ಹಾಕಿ ನೀನ್ಯಾರೆಂದು ತಿಳಿಸುವಂತೆ ಕ್ರೂರವಾಗಿ ಹಿಂಸಿಸಿದರು. ಚಿತ್ರಹಿಂಸೆ ನೀಡಿದರು.. ಅವನ ಗಂಟುಗಳನ್ನು, ಮೂಳೆಗಳನ್ನು ಕೋಲಿನಿಂದ ಬಾರಿಸಿ ಹುಡಿ ಮಾಡಿದರು.. ಬಾಯಾರಿದಾಗ ಒಂದು ತೊಟ್ಟು ನೀರನ್ನೂ ಕೊಡಲಿಲ್ಲ.. ಹಸಿದಾಗ ಅನ್ನವನ್ನೂ ಹಾಕಲಿಲ್ಲ. ಕತ್ತಲ ಕೋಣೆಯಲ್ಲಿ ಕುಳಿತು ಭಾವರಹಿತ ಶೂನ್ಯ ನೋಟ ಬೀರುತ್ತಿದ್ದ ಆತನಿಗೆ ಬದುಕೆಂಬುದು ಬರೀ ಭರವಸೆಯಾಗಿಯೇ ಉಳಿಯಿತು. ಭೀಭತ್ಸ ಶಿಕ್ಷೆಗೆ ಎದೆನೋವು ಕಾಣಿಸಿತು, ಕ್ಷಯ ರೋಗ ಅಂಟಿಬಿಟ್ಟಿತು. ಆದರೂ ಶಿಕ್ಷೆ ತಪ್ಪಲಿಲ್ಲ. ಕೊನೆಗೊಂದು ದಿನ ಕ್ಷಯ ಹಾಗೂ ಹೃದಯ ಬೇನೆ ಉಲ್ಪಣಿಸಿ ಜೀವವನ್ನೇ ತೊರೆದುಬಿಟ್ಟ… ಪಾಕಿಸ್ತಾನದಂತಹಾ ಕ್ರೂರ ರಾಷ್ಟ್ರವನ್ನು ಹೊಕ್ಕು, ಅಲ್ಲಿನ ಸ್ಫೋಟಕ ರಹಸ್ಯ ಮಾಹಿತಿಗಳನ್ನು ಕಲೆ ಹಾಕಿ ಭಾರತಕ್ಕೆ ಕಳುಹಿಸಿ ಸಿಕ್ಕಿಬಿದ್ದ ಆತ ದೇಹದ ಮೇಲೆ ಚಪ್ಪಡಿ ಕಲ್ಲು ಹಾಕಿದಂತೆ ಹಿಂಸಿಸಿದರೂ ಜೀವಹೋಗುವವರೆಗೂ ತಾನ್ಯಾರೆಂದು ಬಾಯಿಬಿಡದೆ ಪಾಕಿಗಳ ಪಾಲಿಗೆ ನಿಗೂಢವಾಗಿಯೇ ಉಳಿದುಬಿಟ್ಟ. ಹೌದು ಇದು ಪಾಕಿಸ್ತಾನ ಹೊಕ್ಕ ಗೂಢಚಾರಿಯ ಕಥೆ ಇದು. ಅವನನ್ನು ಬ್ಲ್ಯಾಕ್ ಟೈಗರ್ ಎಂದೇ ಕರೆಯಲಾಗುತ್ತದೆ. ಇಂತಹಾ ಎಂಟೆದೆ ಬಂಟ ಗೂಢಚಾರಿಯ ಅಸಲಿ ಹೆಸರು ರವೀಂದ್ರ ಕೌಶಿಕ್… ಈತನ ಕಥೆ ಕೇಳಿದರೆ ರಕ್ತವೆಲ್ಲಾ ಹೆಪ್ಪುಗಟ್ಟುತ್ತದಲ್ಲದೆ ಕಥೆ ಪೂರ್ತಿಯಾಗುವ ಹೊತ್ತಿಗೆ ಕಣ್ಣಂಚಿನಲ್ಲಿ ನೀರು ಧಾರಾಕಾರವಾಗಿ ಸುರಿಯುತ್ತದೆ. ಯಾಕೆಂದರೆ ರವೀಂದ್ರ ಕೌಶಿಕ್‍ನ ತಾಖತ್ತು ಅಂಥದ್ದು…! ನಿಜಹೇಳಬೇಕೆಂದರೆ ರವೀಂದ್ರ ಕೌಶಿಕ್ ಯಾರೆಂದು ಪಾಕಿಸ್ತಾನಕ್ಕೆ ಇದುವರೆಗೂ ಗೊತ್ತಿಲ್ಲ.. ಈತ ಯಾರೆಂದು ಪತ್ತೆಹಚ್ಚಲು ವ್ಯರ್ಥ ಪ್ರಯತ್ನ ಮಾಡಿ ಕೊನೆಗೂ ಸೋತುಬಿಟ್ಟಿತ್ತು ಪಾಕಿಸ್ತಾನ. ರಾಜಸ್ತಾನದ ಗಂಗಾನಗರದಲ್ಲಿ ಹುಟ್ಟಿದ ಕೌಶಿಕ್‍ಗೆ ರಂಗಭೂಮಿಯಲ್ಲಿ ನಟಿಸುವುದೆಂದರೆ ಎಲ್ಲಿಲ್ಲದ ಆಸಕ್ತಿ. ಒಂದು ವೇಳೆ ಸೈನಿಕನಾಗದೇ ಉಳಿದಿದ್ದರೆ ಇಂದು ದೊಡ್ಡ ಸ್ಟಾರ್ ನಟನಾಗುತ್ತಿದ್ದ. ಆದರೆ ಆ ಒಂದು ಘಟನೆ ಕೌಶಿಕ್‍ನ ಜೀವನದ ದಿಕ್ಕನ್ನೇ ಬದಲಿಸಿತು. ಭಾರತೀಯ ಗುಪ್ತಚರ ಇಲಾಖೆಯ ವತಿಯಿಂದ ರಾಷ್ಟ್ರೀಯ ನಾಟಕ ಮಂಡಳಿಯವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಸಾಧರಣ ಪ್ರತಿಭೆ ತೋರಿದ ಕೌಶಿಕ್‍ಗೆ ಗೂಢಚಾರನಾಗುವಂತೆ ಅದ್ಯಾವನೋ ಪುಣ್ಯಾತ್ಮ ಪ್ರೇರಣೆ ನೀಡಿದ. ಮುಂದೆ ತನ್ನ ವಯೋಮಾನದ 20 ಸಂವತ್ಸರದಲ್ಲೇ ಗೂಢಚಾರನಾಗಿ ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್(ರಾ) ಸಂಸ್ಥೆಗೆ ಸೇರಿಕೊಂಡ ರವೀಂದ್ರ ಕೌಶಿಕ್ ನೇರವಾಗಿ ಪಾಕಿಸ್ತಾನಕ್ಕೆ ಹೊಕ್ಕು ಅಲ್ಲಿದ್ದ ರಹಸ್ಯ ಮಾಹಿತಿಗಳನ್ನು ಕಲೆ ಹಾಕಿ ಭಾರತಕ್ಕೆ ಕಳುಹಿಸುತ್ತಲೇ ಇದ್ದ. ಈತ ಪಾಕಿಸ್ತಾನಕ್ಕೆ ಹೊಕ್ಕಾಗ ವಯಸ್ಸು ಬರೇ 30. ಪಾಕಿಸ್ತಾನವನ್ನು ನೋಡಿ ಒಂದೇ ನೋಟದಲ್ಲಿ ಎಲ್ಲವನ್ನೂ ಅರ್ಥ ಮಾಡಿಕೊಂಡ ಕೌಶಿಕ್ ಪಾಕಿಸ್ತಾನದಲ್ಲಿರಬೇಕಾದರೆ ಮುಸಲ್ಮಾನ ಸಂಸ್ಕøತಿ, ಕುರಾನ್ ಮುಂತಾದುವುಗಳನ್ನು ಲೀಲಾಜಾಲವಾಗಿ ಕರಗತ ಮಾಡಿಕೊಂಡಿದ್ದ. ಉರ್ದು ಭಾಷೆಯನ್ನು ಕಲಿತು ಕೊನೆಗೆ ಅಪ್ಪಟ ಪಾಕಿಸ್ತಾನಿಯಂತೆ ಬದಲಾದ. ಈತನನ್ನು ನೋಡಿದರೆ ಯಾರೂ ಕೂಡಾ ಪಾಕಿಸ್ತಾನಿಯಲ್ಲ ಎಂದು ಹೇಳುವಷ್ಟೂ ಅನುಮಾನ ಬರಲಿಲ್ಲ. 1975 ಬಳಿಕ ಈತ ಭಾರತೀಯ ಎಂಬ ಅಸ್ತಿತ್ವವನ್ನೇ ಅಳಿಸಿ ಹಾಕಿ, ಭಾರತೀಯನೆಂಬುವುದಕ್ಕೆ ಸುಳಿವೇ ಸಿಗದಂತೆ ಮಾಡಿಬಿಟ್ಟಿತು ಭಾರತದ ಗುಪ್ತಚರ ಸಂಸ್ಥೆ. ರವೀಂದ್ರ ಕೌಶಿಕ್ ಆಗಿದ್ದವ ಪಾಕಿಸ್ತಾನದಲ್ಲಿ ತನ್ನ ಹೆಸರನ್ನು `ನಬಿ ಅಹ್ಮದ್ ಶಕೀರ್’ ಎಂದು ತನ್ನ ಹೆಸರನ್ನು ಬದಲಿಸಿಕೊಂಡ. ಕರಾಚಿ ವಿಶ್ವವಿದ್ಯಾಲಯಕ್ಕೆ ಕಾನೂನು ವಿದ್ಯಾರ್ಥಿಯಾಗಿ ಸೇರಿಕೊಂಡು ಪಾಕಿಸ್ತಾನ ಕಾನೂನನ್ನೇ ಅರಗಿಸಿಕೊಂಡ. ಪಾಕಿಸ್ತಾನ ವಿಶ್ವವಿದ್ಯಾಲಯದಿಂದ ಪ್ರಮಾಣ ಪತ್ರ ಇದ್ದರಷ್ಟೇ ಪಾಕ್ ಸೈನ್ಯಕ್ಕೆ ಸೇರಲು ಸಾಧ್ಯ ಎಂಬ ಸತ್ಯವನ್ನು ಅರ್ಥ ಮಾಡಿಕೊಂಡ ಕೌಶಿಕ್ ಕೊನೆಗೆ ಅದನ್ನೂ ಸಾಧಿಸಿಬಿಟ್ಟ. ಸೇನಾ ಪರೀಕ್ಷೆಯನ್ನೂ ಯಶಸ್ವಿಯಾಗಿ ಮುಗಿಸಿ ಸೇನೆಗೆ ಸೇರಿದ ಈತ ಕೊನೆಗೊಂದು ದಿನ `ಮೇಜರ್’ ಆಗಿ ಪದೋನ್ನತಿಗೊಂಡ. ಆ ಬಳಿಕ ಕೌಶಿಕ್ ಸುಮ್ಮನಿರಲೇ ಇಲ್ಲ. 1973ರಿಂದ 1983ರವರೆಗೆ ನಿರಂತರವಾಗಿ ಪಾಕಿಸ್ತಾನದ ಸ್ಫೋಟಕ ಮಾಹಿತಿಗಳನ್ನು ಕಲೆ ಹಾಕಿ ಭಾರತಕ್ಕೆ ಕಳುಹಿಸುತ್ತಲೇ ಇದ್ದ. ಕೆಲವೊಂದು ಮಾಹಿತಿಗಳು ಎಷ್ಟೊಂದು ಸ್ಫೋಟಕವಾಗಿತ್ತೆಂದರೆ ಇಷ್ಟೊಂದು ಕ್ಲಿಷ್ಟಕರ ಮಾಹಿತಿಗಳನ್ನು ಅದು ಹೇಗೆ ಸಂಗ್ರಹಿಸಿದ್ದಾನೆ ಎಂದು ಸ್ವತಃ ಭಾರತದ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯೇ ತಲೆ ಚಚ್ಚಿಕೊಂಡಿದ್ದರು. ಈತನ ಧೈರ್ಯ ಸಾಹಸವನ್ನು ಕಂಡು ಇಂದಿರಾಗಾಂಧಿ ರವೀಂದ್ರ ಕೌಶಿಕ್‍ಗೆ `ಬ್ಲ್ಯಾಕ್ ಟೈಗರ್’ ಅಂದರೆ ಕಪ್ಪು ಹುಲಿ ಎಂದು ಬಿರುದು ನೀಡಿದ್ದಳು.. ಗುಪ್ತಚರ ಇಲಾಖೆಯಂತೂ ಈತನಿಂದ ಸಿಕ್ಕ ಅಮೂಲ್ಯ ಮಾಹಿತಿಯಿಂದ ಅನೇಕರ ಬಂಡವಾಳ ಬಯಲು ಮಾಡಿತು. ದೇಶದೊಳಗಿದ್ದ ಪಾಕಿಸ್ತಾನಿ ಬೆಂಬಲಿತ ರಾಜಕಾರಣಿಗಳ ಪಟ್ಟಿ, ಪ್ರತ್ಯೇಕತಾವಾದಿಗಳ ಬೆಂಬಲ, ಉಗ್ರ ಬೆಂಬಲ, ಕಾಶ್ಮೀರ ಸಮಸ್ಯೆ, ಭಯೋತ್ಪಾದನೆ ಇತ್ಯಾದಿ ರಹಸ್ಯ ಸಂಗತಿಗಳು ಇಲಾಖೆಗೆ ದೊರಕಿತ್ತು. ಇಷ್ಟಾಗುವ ಹೊತ್ತಿಗೆ ರವೀಂದ್ರನಿಗೆ `ಅಮಾನತ್’ ಎಂಬ ಹುಡುಗಿ ಜೊತೆ ಲವ್ವಾಗಿ ಮದುವೆಯನ್ನೂ ಆದ. ಇವರಿಬ್ಬರ ಪ್ರೀತಿಯ ಫಲವಾಗಿ ಮುದ್ದು ಗಂಡುಮಗುವೊಬ್ಬ ಜನಿಸಿದ.. 1983ರಲ್ಲಿ ಕೌಶಿಕ್‍ನ ಅದೃಷ್ಟ ಕೈಕೊಟ್ಟು ಬಿಟ್ಟಿತು. ಯಾಕೆ ಗೊತ್ತೇ? ಭಾರತ ಇನ್ಯಾತ್ ಮಸೀಹಾ ಎನ್ನುವ ಇನ್ನೊಬ್ಬ ಗೂಢಚರನನ್ನು ಪಾಕಿಸ್ತಾನಕ್ಕೆ ಕಳುಹಿಸಿಬಿಟ್ಟಿತು. ನಬೀ ಅಹ್ಮದ್ ಎಂಬಾತನಿಂದ ರಹಸ್ಯ ಮಾಹಿತಿ ಕಲೆ ಹಾಕುತ್ತಿದ್ದ ಸಂದರ್ಭ ನ್ಯಾತ್ ಮಸೀಹಾನ ಅನುಮಾನಾಸ್ಪದ ನಡುವಳಿಕೆಯಿಂದಾಗಿ ಪಾಕ್ ಸೈನಿಕರ ವಶವಾದ. ಇದರಿಂದಾಗಿ ರವೀಂದ್ರ ಕೌಶಿಕ್ ಕೂಡಾ ನಿರಾಯಾಸವಾಗಿ ಸಿಕ್ಕಿಬಿದ್ದ. ನೀನ್ಯಾರು? ನಿನ್ನ ಅಸ್ತಿತ್ವವೇನು? ನಿನ್ನ ಕೆಲಸವೇನು? ಎಂದೆಲ್ಲಾ ನಾನಾ ತರದ
    11 min
  • 🙏ನಮಸ್ಕಾರ ನಮ್ಮ ಸಂಸ್ಕೃತಿ 🙏
    *
    ಮಹಾಭಾರತದ ಯುದ್ಧ ನಡೆಯುತ್ತಿತ್ತು -
    ಒಂದು ದಿನ, ದುರ್ಯೋಧನನ ವಿಡಂಬನೆಯಿಂದ ನೋಯುತ್ತಿರುವ ಭೀಷ್ಮ ಪಿತಾಮಹ ಹೀಗೆ ಘೋಷಿಸುತ್ತಾನೆ .
    "ನಾನು ನಾಳೆ ಪಾಂಡವರನ್ನು ಕೊಲ್ಲುತ್ತೇನೆ"
    ಅವರ ಘೋಷಣೆ ಬಂದ ಕೂಡಲೇ ಪಾಂಡವರ ಶಿಬಿರದಲ್ಲಿ ಆತಂಕ ಹೆಚ್ಚಾಯಿತು -
    ಭೀಷ್ಮನ ಸಾಮರ್ಥ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿತ್ತು, ಆದ್ದರಿಂದ ಪ್ರತಿಯೊಬ್ಬರೂ ಕೆಟ್ಟದ್ದರ ಸಾಧ್ಯತೆಯ ಬಗ್ಗೆ ಚಿಂತೆ ಮಾಡಿದರು. ನಂತರ -
    ಶ್ರೀ ಕೃಷ್ಣ ದ್ರೌಪತಿಗೆ, ಈಗ ನನ್ನೊಂದಿಗೆ ಬಾ -
    ಶ್ರೀಕೃಷ್ಣನು ದ್ರೌಪದಿಯೊಂದಿಗೆ ನೇರವಾಗಿ ಭೀಷ್ಮ ಪಿತಾಮನ ಶಿಬಿರವನ್ನು ತಲಿಪಿದರು -
    ಶಿಬಿರದ ಹೊರಗೆ ನಿಂತು ದ್ರೌಪತಿಗೆ – “ಒಳಗೆ ಹೋಗಿ, ಅಜ್ಜನಿಗೆ ನಮಸ್ಕರಿಸು.” ಎಂದು ಹೇಳಿದರು
    ದ್ರೌಪದಿ ಒಳಗೆ ಹೋಗಿ ಪಿತಾಮಹ ಭೀಷ್ಮನಿಗೆ ನಮಸ್ಕರಿಸಿದಾಗ ಅವರು - " ಅಖಂಡ ಸೌಭಾಗ್ಯವತಿ ಭವ" ಎಂದು ಆಶೀರ್ವದಿಸಿದ ಅವರು ನಂತರ ದ್ರೌಪದಿಯನ್ನು ಕೇಳಿದರು !!
    " ಮಗಳೇ, ಇಂತಹ ರಾತ್ರಿಯಲ್ಲಿ ನೀನು ಏಕಾಂಗಿಯಾಗಿ ಇಲ್ಲಿಗೆ ಹೇಗೆ ಬಂದಿದ್ದೀ, ಶ್ರೀ ಕೃಷ್ಣ ಅವರು ನಿಮ್ಮನ್ನು ಇಲ್ಲಿಗೆ ಕರೆತಂದಿದ್ದಾರಾ "? ಆಗ ದ್ರೌಪದಿ ಹೀಗೆ ಹೇಳಿದಳು -
    "ಹೌದು ಮತ್ತು ಅವರು ಕೋಣೆಯ ಹೊರಗೆ ನಿಂತಿದ್ದಾರೆ" ನಂತರ ಭೀಷ್ಮನು ಸಹ ಕೋಣೆಯಿಂದ ಹೊರಬಂದನು ಮತ್ತು ಇಬ್ಬರೂ ಪರಸ್ಪರ ನಮಸ್ಕರಿಸಿದರು. "ನನ್ನ ಒಂದು ವಚನವನ್ನು ನನ್ನ ಇತರ ವಚನಗಳಿಂದ ಕತ್ತರಿಸಲು ಶ್ರೀ ಕೃಷ್ಣ ಮಾತ್ರ ಮಾಡಬಹುದು"
    ಶಿಬಿರದಿಂದ ಹಿಂದಿರುಗುವಾಗ, ಶ್ರೀ ಕೃಷ್ಣನು ದ್ರೌಪದಿಗೆ ಹೀಗೆ ಹೇಳಿದನು -
    "ಒಮ್ಮೆ ನೀನು ಹೋಗಿ ಅಜ್ಜನಿಗೆ ಗೌರವ ಸಲ್ಲಿಸಿದರೆ, ನಿಮ್ಮ ಗಂಡಂದಿರಿಗೆ ಜೀವನ ಸಿಕ್ಕಿದೆ.
    "ನೀನು ಭೀಷ್ಮ, ಧೃತರಾಷ್ಟ್ರ, ದ್ರೋಣಾಚಾರ್ಯ ಇತ್ಯಾದಿಗಳಿಗೆ ನಮಸ್ಕಾರ ಮಾಡುತ್ತಿದ್ದರೆ, ಮತ್ತು ದುರ್ಯೋಧನ - ದುಷಾಸನ, ಇತ್ಯಾದಿ ಪತ್ನಿಯರು ಸಹ ಪಾಂಡವರಿಗೆ ನಮಸ್ಕಾರ ಮಾಡುತ್ತಿದ್ದರೆ, ಬಹುಶಃ ಈ ಯುದ್ಧವು ಆಗುತ್ತಿರಲಿಲ್ಲ
    ಅಂದರೆ ,
    ಪ್ರಸ್ತುತ ನಮ್ಮ ಮನೆಗಳಲ್ಲಿ ಅನೇಕ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ -
    "ತಿಳಿಯದೆ ಆಗಾಗ್ಗೆ ಮನೆಯ ಹಿರಿಯರನ್ನು ಕಡೆಗಣಿಸಲಾಗುತ್ತದೆ"
    "ಮನೆಯ ಮಕ್ಕಳು ಮತ್ತು ಸೊಸೆಯಂದಿರು ಪ್ರತಿದಿನ ಮನೆಯ ಎಲ್ಲ ಹಿರಿಯರಿಗೆ ನಮಸ್ಕರಿಸಿ ಅವರ ಆಶೀರ್ವಾದವನ್ನು ತೆಗೆದುಕೊಂಡರೆ, ಯಾವುದೇ ಮನೆಯಲ್ಲಿ ಎಂದಿಗೂ ಕ್ಲೇಶಗಳು ಉಂಟಾಗುವುದಿಲ್ಲ"
    ಹಿರಿಯರು ನೀಡಿದ ಆಶೀರ್ವಾದಗಳು ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತವೆ; ಯಾವುದೇ "ಆಯುಧ" ಭೇದಿಸಲು ಸಾಧ್ಯವಿಲ್ಲ.
    "ವಿನಂತಿಸಿ, ಪ್ರತಿಯೊಬ್ಬರೂ ಈ ಸಂಸ್ಕೃತಿಯನ್ನು ಅಳವಡಿಸಿದರೆ, ನಿಯಮ ಬದ್ಧವಾಗಿ ಮಾಡಿದರೆ ಮನೆ ಸ್ವರ್ಗವಾಗುತ್ತದೆ."
    ಏಕೆಂದರೆ ,
    🙏ನಮಸ್ಕಾರ ಪ್ರೀತಿ.
    🙏ನಮಸ್ಕಾರ ಶಿಸ್ತು.
    🙏 ನಮಸ್ಕಾರ ಶೀತಲತೆ.
    🙏ನಮಸ್ಕಾರ ಗೌರವವನ್ನು ಕಲಿಸುತ್ತವೆ.
    🙏ನಮಸ್ಕಾರದಿಂದ ಸು ವಿಚಾರ ಬರುತ್ತದೆ.
    🙏 ನಮಸ್ಕಾರ ಬಾಗುವುದನ್ನು ಕಲಿಸುತ್ತದೆ.
    🙏ನಮಸ್ಕಾರ ಕೋಪವನ್ನು ಅಳಿಸುತ್ತದೆ.
    🙏 ನಮಸ್ಕಾರ ಅಹಂ ಅನ್ನು ಅಳಿಸುತ್ತದೆ.
    🙏ನಮಸ್ಕಾರ ನಮ್ಮ ಸಂಸ್ಕೃತಿ ,
    ಅಬ್ಬಬ್ಬಾ ಎಂಥಹ ಸಮೃದ್ಧವಾಗಿದೆ ನನ್ನ ಹೆಮ್ಮೆಯ ಸನಾತನ ಧರ್ಮ..!
    ನಿಮಗೆ ನಮಸ್ಕಾರ 🙏🙏
    🙏🏾
    4 min
  • ದೀಪಗಳ ಹಬ್ಬ ದೀಪಾವಳಿ ....2020.
    ಈ ದಿವ್ಯ ಬೆಳಕಿನ ಹಬ್ಬದಂದು .. ದಿವ್ಯ ಜ್ಞಾನ ಜ್ಯೋತಿಯು ಪ್ರತಿಯೊಬ್ಬರ
    ಮನೆ ಹಾಗೂ ಮನ ಗಳನು ಬೆಳಗಿಸಲಿ..
    ಎಲ್ಲರಿಗೂ ಹರುಷ ವ ತಂದು ಅಂಧಕಾರವನ್ನು ತೊಲಗಿಸಿ ನಮ್ಮೆಲ್ಲರನ್ನು ಕಾಯಲಿ .
    ನೆಲಸಿರುವ ಅಸೂಯೆ ಅಹಂಕಾರ ಮತ್ಸರ ದುರಭಿಮಾನ ವೆಂಬ ಮನ ಕಲ್ಮಶ ಗಳನು ತೊಳೆದು ಪ್ರೀತಿ ಪ್ರೇಮ ಸಹ ಬಾಳ್ವಿಕೆ ಯನು ಕರುಣಿಸಲಿ ..
    ಇಡೀ
    ಪ್ರಪಂಚ ವನು ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟಿರುವ ಕೋರೋಣ ಮಾರಿಯನ್ನು ಬಗ್ಗು ಬಡಿಯಲು ಆದಷ್ಟು ಬೇಗ ಪರಿಣಾಮಕಾರಿ ಯಾದ ವ್ಯಾಕ್ಸಿನ್ ಅನ್ನು ಕಂಡು ಹಿಡಿಯಲು ವಿಜ್ಞಾನಿ ವೈದ್ಯ ಮಿತ್ರ ರಿಗೇ ಜ್ಞಾನ ದೀಪ ದಾರಿ ತೋರಿಸಲಿ ....
    ಜಾತಿ ಮತ ಧರ್ಮ ಪಂಥ ಬೇಧ ಭಾವ ವನ್ನು ತೊರೆದು ಎಲ್ಲರೂ ಒಂದಾಗಿ ಆನಂದದಿ
    ಜೀವಿಸುತ್ತಾ ಒಬ್ಬರಿಗೆ ಒಬ್ಬರು ಸಹಕರಿಸುತ್ತ ಬಾಳಿ ಬದು ಕೊಣ ಎಂಬ ಜಗತ್ತಿನ ಸಂಸಾರದ ಮೂಲ ಮಂತ್ರವ ತೋರಿಸಿ ಕೊಡು ದೀಪಾವಳಿಯ ದಿವ್ಯ ದೀಪ ನಮಗೆಲ್ಲರಿಗು.
    ಬಡ ಜನರ ಬಾಳನ್ನು ಸಿರಿ ದೀಪವು ಹರಸಲಿ ,
    ರೋಗಿಗಳ ಬಾಳನ್ನು ಆರೋಗ್ಯ ದೀಪವು ಸರಿಪಡಿಸಿ ,
    ವಿದ್ಯಾರ್ಥಿಗಳ ಬಾಳನ್ನು ಜ್ಞಾನ ದೀಪವು ಉಜ್ವಲ ಗೊಳಿಸಲಿ ,
    ಎಲ್ಲರ ಬಾಳನ್ನು ದೈವ ಜ್ಞಾನ ದೀಪವು ಹರಸಲಿ ಎಂದು
    ಹಾರೈಸಿ ಶುಭ ಕೋರುತ್ತೇನೆ.....
    3 min
  • ಬಲಿಪಾಡ್ಯಮಿ ಹಬ್ಬದ ಶುಭಾಶಯಗಳು ... ಜೈ ಬಲಿ ಚಕ್ರವರ್ತಿ... ಜೈ ವಾಮನಮೂರ್ತಿ... ಜೈಹಿಂದ್
    ಅಂತೆಕಂತೆ ಪುರಾಣವೆಂದು ಮೂದಲಿಸಬೇಡಿ, ಆ ಪುರಾಣಗಳೇ ಹಿಂದೂಸ್ಥಾನಿಗಳ ನೈಜ ಇತಿಹಾಸ. ಪ್ರತಿವರ್ಷವೂ #ಬಲಿಪಾಡ್ಯಮಿ ದಿನ ಈ ನೈಜ ಇತಿಹಾಸವನ್ನು ತಿಳಿಸುತ್ತಲೇ ಇರುವೆ. ಓದಿದವರು ಇತರರಿಗೆ ಹಂಚಿ. ಓದದೇ ಇರುವವರು ಸಂಪೂರ್ಣ ಓದಿ.
    ಮಹಾವಿಷ್ಣು ವಾಮನನಾಗಿ ಬಲಿ ಚಕ್ರವರ್ತಿಯ ತಲೆಮೇಲೆ ಮೂರನೇ ಹೆಜ್ಜೆಯಿಟ್ಟು ಪಾತಾಳಕ್ಕೆ ತಳ್ಳಿದ ಜೊತೆಗೆ ಪಾತಾಳ ಅಂದರೆ ಅದು ಬೇರೆ ಯಾವೊದೊ ಒಂದು ಲೋಕ ! ಎಂದು ತಿಳಿದಿದ್ದರೆ ಅದು ಮಹಾ ತಪ್ಪು.
    ಭಾರತೀಯ ಮಹತ್ವದ ಇತಿಹಾಸ ವಿಷಯ ತಿಳಿದು ಹೆಮ್ಮೆಯಿಂದ ಎದೆತಟ್ಟಿ ಹೇಳಿ ನಾವು ಹಿಂದೂಸ್ಥಾನಿಗಳು ಎಂದು. ಸರಿಯನಿಸಿದರೆ ಮತ್ತಷ್ಟು ಜನಕ್ಕೆ ಮಾಹಿತಿ ಹಂಚಿ.
    ಪಾತಾಳ ಅಂದರೆ ಈಗಿನ ದಕ್ಷಿಣ ಅಮೆರಿಕದ ಪೆರು ದೇಶ(ಸುತಲ)!!!
    ನಾ ವಾಮನಮೂರ್ತಿ ಮತ್ತು ಬಲಿಚಕ್ರವರ್ತಿಯ ಹಿಂದಿನ ಪೂರ್ಣ ಕಥೆಯೇಳಲ್ಲ ಸಂಕ್ಷಿಪ್ತವಾಗಿ ಭಾರತೀಯರು ಹೆಮ್ಮೆ ಪಡುವಂತ ಇತಿಹಾಸ ಹೇಳುವೆ.
    #ಬಲಿ_ಚಕ್ರವರ್ತಿಯು ಏಶಿಯಾ, ಯುರೋಪ್ ಹಾಗೂ ಆಫ್ರಿಕಾ ಖಂಡಗಳು ಈತನ ಆಳ್ವಿಕೆಯಲ್ಲಿತ್ತು ಬಲಿ ಉತ್ತಮ ರಾಜನಾಗಿದ್ದರು ದೇವತೆಗಳು ವಿರೋಧಿಯಾಗಿ ಬೆಳೆಯತ್ತಿದ್ದ‌. ಮುಂದೆ ಇವನಿಂದ ಅಪಾಯ ತಪ್ಪಿದ್ದಲ್ಲ ಎಂದು ತಿಳಿದು ದೇವತೆಗಳ ಮೊರೆಗೆ ಮಹಾವಿಷ್ಣು ವಾಮನವತಾರಿಯಾಗಿ ಮಹಾನ್ ಶಕ್ತಿಶಾಲಿಯಾದ ಮತ್ತು ದಾನಿಯಾದ ರಾಕ್ಷಸ ದೊರೆ ಬಲಿಯಿಂದ ಮೂರು ಹೆಜ್ಜೆಗಳು ಭೂಭಾಗ ದಾನ ಪಡೆದು ಮೂರು ಹೆಜ್ಜೆಗಳಿಗೆ ಈಗಿನ ಏಶಿಯಾ, ಯುರೋಪ್,ಮತ್ತು ಆಫ್ರಿಕಾ ಖಂಡಗಳು ಅಳೆದ. (ಈಗಲೂ ಭಾರತದಲ್ಲಿ ಹೆಜ್ಜೆಗಳನ್ನು ಅಳತೆಯಾಗಿ ಬಳಸುವ ರೂಡಿಯಲ್ಲಿದೆ.) ಈಗೇ ಮೂರು ಹೆಜ್ಜೆಗಳಲ್ಲಿ ದಾನ ನೀಡಿದ ಭೂಭಾಗದಲ್ಲಿ ಬಲಿಚಕ್ರವರ್ತಿ ಗೆ ಇರಲು ಹಕ್ಕಿಲ್ಲದೆ ಇರುವುದರಿಂದ, ಬಲಿಯನ್ನು ದಟ್ಟವಾದ ಕಾಡುಗಳಿಂದ ಕೂಡಿದ ದಕ್ಷಿಣ ಅಮೆರಿಕಕ್ಕೆ ಕಳುಹಿಸಿದ !
    ಸಮುದ್ರ ಮಾರ್ಗವಾಗಿ ಬಲಿ ಚಕ್ರವರ್ತಿಯನ್ನು ಕಳಿಸುವಾಗ ಹಾಗೆ ಬರಿಗೈಯಲ್ಲಿ ಕಳಿಸಲಿಲ್ಲ ಅಷ್ಟ ಐಶ್ವರ್ಯಗಳೊಂದಿಗೆ ಮತ್ತೆ ಅಲ್ಲಿ ನೆಲೆಸಲು ಅನುಕೂಲವಾಗಲು ರಾಕ್ಷಸರ ಆರ್ಕಿಟೆಕ್ಚರ್ #ಮಯ ನೊಂದಿಗೆ ಅಸುರರು, ದೈತ್ಯರು,ದಾನವರು, ಕಳುಹಿಸಿ ನಾಗ ಜನಾಂಗ ಮತ್ತು ಸರ್ಪಕುಲದವರ ಅಳಿಯ #ಆಸ್ತಿಕ ಮಹರ್ಷಿಗಳ ಜನಾಂಗವನ್ನು ಈಗಿನ ರಾ ಏಜೆಂಟ್ ಗಳಂತೆ ಬಲಿಯ ಚಲನವಲನಗಳ ಮಾಹಿತಿ ಪಡೆಯಲು ನೇಮಿಸಿ ಮಹಾವಿಷ್ಣು ಕಳುಹಿಸಿದರು.
    ಅದು ಭಾರತದ ಪೂರ್ವದಿಂದ ದಕ್ಷಿಣ ಅಮೆರಿಕದ ಈಗಿನ ಪೆರು(ಸುತಲ)ಕ್ಕೆ ಸಮುದ್ರಮಾರ್ಗದಲ್ಲಿ ಕಳುಹಿಸಿದ. ಇದು ಬೇರೆ ದಾರಿಗಳಿಗಿಂತ ದಕ್ಷಿಣ ಅಮೆರಿಕಾಕ್ಕೆ ಹತ್ತಿರದ ದಾರಿ! ಒಮ್ಮೆ ನನ್ನ ಚಿತ್ರಗಳನ್ನು ನೋಡಿ ಅಥವಾ ಅಟ್ಲಾಸ್ ನೋಡಿ.
    ನಮಗೆ ಪಾತಾಳ ಅಂದಕ್ಷಣ ನೀರಿನ ಕೆಳಗೆ ಹೋಗಬೇಕು (ಅಂದರೆ ಸಮುದ್ರದಲ್ಲಿ ಪ್ರಯಾಣಿಸಬೇಕು) ಮತ್ತೊಂದು ಪಾತಾಳ ಎಲ್ಲಿದೆ ಅಂದಕ್ಷಣ ಭೂಮಿಯ ಕೆಳಗಿದೆಯೆಂದು ಕಾಲು ಒತ್ತಿ ತೋರಿಸುತ್ತೇವೆ ಅಂದರೆ ಭಾರತದಲ್ಲಿ ಒಂದು ರಂಧ್ರವನ್ನು ಕೊರೆದರೆ ಅದು ದಕ್ಷಿಣ ಅಮೆರಿಕಾಗೆ ತಲುಪುತ್ತದೆ. ಯಾರಾದರೂ ಟ್ರೈ ಮಾಡುವವರು ಮಾಡಿ ಹೇಳಿ. ಸುಳ್ಳಲ್ಲ ಸ್ವಾಮಿ.
    ಬಲಿ ಚಕ್ರವರ್ತಿಯ ದಾನಕ್ಕೆ ಮೆಚ್ಚಿ ಮಹಾವಿಷ್ಣುನಲ್ಲಿ ಕೊರಿಕೆಯ ಮೇರೆಗೆ ಬಲೇಂದ್ರನಿಗೆ ಭಾರತವರ್ಷಕ್ಕೆ ವರ್ಷಕೊಮ್ಮೆ ಬೇಟಿ ಕೊಡಲು ಅನುಮತಿಸಿದ. ಇಂದಿಗೂ ಕೇರಳದಲ್ಲಿ ವೈಭವದ ಓಣಂ ಹಬ್ಬವನ್ನು ಹತ್ತುದಿನಗಳ ಕಾಲ ಆಚರಿಸುತ್ತಾರೆ. ಈ ಸಮಯದಲ್ಲಿ ಬಲೀಂದ್ರ ನೌಕೆಯಲ್ಲಿ ಸಮುದ್ರ ಯಾನ ಮಾಇದ ನೆನಪಿಗಾಗಿ ಬೊಟ್ ಸ್ಪರ್ಧೆಗಳನ್ನು ಕಾಣಬಹುದು. ಹಾಗೂ ಹತ್ತುದಿನಗಳು ಬಲಿಯು ಪಾತಾಳದಿಂದ ಅಂದರೆ ದಕ್ಷಿಣ ಅಮೆರಿಕದಿಂದ ಭರತವರ್ಷಕ್ಕೆ ಬಂದು ಇರುವ ಸಂಕೇತವಾಗಿ ಕೇರಳದ ಕೊಚ್ಚಿ ಬಳಿಯಿರುವ ಕಾಕ್ಕನಾಡು ಪ್ರದೇಶದಲ್ಲಿ ಬಲಿಗಾಗಿ ನಿರ್ಮಿಸಿದ ಮಂದಿರದಲ್ಲಿ ಪೂಜೆ ಸಲ್ಲಿಸಿದ ನಂತರವೇ ಓಣಂ ಉತ್ಸವ ಪ್ರಾರಂಭವಾಗುತ್ತದೆ.
    #ಇಲ್ಲಿ_ಗಮನಿಸುವ_ಅಂಶವೇನೆಂದರೆ
    ೧.ಬಲಿಯ ಆಪ್ತ ಮಯ ಶ್ರೇಷ್ಠ ವಾಸ್ತುಶಿಲ್ಪಿ . #ಮಾಯನ್ಸ್ ನಾಗರಿಕತೆಯು ಇವನ ಹೆಸರಿಂದಲೇ ಬಂದಿದ್ದು. ಮಯ ಅತುಲ,ತಲಾತಲ ಎಂಬ ಪ್ರದೇಶಗಳನ್ನು ಕಟ್ಟಿದ. ಬಲಿಗಾಗಿ ಆಶ್ಮನಗರವನ್ನು ನಿರ್ಮಿಸಿದ. ಇದರ ಅವಶೇಷಗಳು ಹಲವನ್ನು ಈಗಲು ನೋಡಬಹುದು.
    ೨. ಸರ್ಪಕುಲದ ಅಳಿಯ ಆಸ್ತಿಕ ಮಹರ್ಷಿಯಿಂದ #ಆಜ್ಟೆಕ್ ಜನಾಂಗ ಪ್ರಾರಂಬವಾಯಿತು.
    ೩. ನಾಗ ಜನಾಂಗೀಯರ #ಇಂಕ ಸಾಮ್ರಾಜ್ಯ , ಇವರ ವಂಶವನ್ನು ಈಗಲೂ ಉತ್ತರ ಮತ್ತು ದಕ್ಷಿಣ ಅಮೆರಿಕದ ಹಲವು ಕಡೆ ಕಾಣುತ್ತಾರೆ.
    ೪. ದಕ್ಷಿಣ ಅಮೆರಿಕದ ಹಲವು ರಾಷ್ಟ್ರಗಳಲ್ಲಿ ಮೂಲ ಜನಾಂಗ ಭಾರತೀಯ ಚಹರೆ,ಬಣ್ಣವನ್ನೆ ಹೋಲುವುದನ್ನು ಕಾಣಬಹುದು
    ೫. ಮಾಯಾನ್, ಆಜ್ಟೆಕ್, ಇಂಕಾ ಸಾಂಪ್ರದಾಯಿಕ ಹಲವು ಹೋಲಿಕೆ ಕಾಣಬಹುದು ಭಾರತೀಯರಂತೆ ಪೃಕೃತಿಯನ್ನು ಪೂಜಿಸುವರು, ಪುರೋಹಿತಶಾಹಿ, ಪಂಚಾಂಗ ಮುಂತಾದ ಹಲವು ಆಚರಣೆ ನಮ್ಮನ್ನೆ ಹೋಲುತ್ತದೆ.
    ಪ್ರಪಂಚದಾದ್ಯಂತ ಭಾರತದಿಂದ ವಲಸೆ ಹೋಗಿ ಅನೇಕ ನಾಗರಿಕತೆಗಳ ಹುಟ್ಟು ಹಾಕಿದ ಇತಿಹಾಸವನ್ನು ನಾವು ಓದದಂತೆ ತಿರುಚಿ ಅರೆಬರೆ ಸಂಸ್ಕೃತ ಕಲಿತ ಮಾಕ್ಸಮಲ್ಲರ್ ನನ್ನು ಮಹಾನ್ ಪಂಡಿತನೆಂದು ತಿಳಿದು ಆಂಗ್ಲರಿಗೆ ಅನುಕೂಲವಾಗಿ ಇತಿಹಾಸ ಬರೆದಿದ್ದನ್ನೆ ಮಹಾನ್ ಇತಿಹಾಸ ಎಂದು ತಿಳಿದ ಮೂರ್ಖರು ನಾವು. ಇತ್ತಿಚೀಗೆ ಅನೇಕ ಸಂಶೋಧನೆಗಳಿಂದ ನೈಜ ಇತಿಹಾಸದ ಪುಸ್ತಕಗಳು ಬಂದಿದೆ .
    ಭೂಮಿಯ ೧೮೫೧-೨೧೫೯ ಮಿಲಿಯನ್ ವರ್ಷಗಳ ಹಿಂದೆ ನಡೆದ ಈ ಐತಿಹಾಸಿಕ ಘಟನೆಗಳನ್ನು ಕಾಲಕ್ರಮೇಣ ಪುರಾಣದ ರೂಪದಲ್ಲಿ ಸ್ವಲ್ಪ ಮಟ್ಟಿಗೆ ಅತಿಶಯವಾಗಿ ಕಥೆಗಳ ರೂಪದಲ್ಲಿ ಬದಲಾಗಿ ಕೇಳುತ್ತೇವೆ. ಆದರೆ ಅದರ ಬಗ್ಗೆ ವೈಜ್ಞಾನಿಕ ಮತ್ತು ಸಂಶೋಧನೆಗಳಿಂದ ಅನ್ವೇಷಿಸಿದಾಗ ಅನೇಕ ಪುರಾಣದ ಕಥೆಗಳು ಇತಿಹಾಸವಾಗಿ ಕಂಡುಬರುತ್ತದೆ ಅದನ್ನು ಅರ್ಥೈಸಿಕೊಳ್ಳವ ಮನೋಭಾವ ಇರಬೇಕು .
    ಮತ್ತೊಂದು ವಿಷಯ ಬಲಿ ಚಕ್ರವರ್ತಿ ಗೇ ಮಹಾವಿಷ್ಣು ಅನ್ಯಾಯ ಮಾಡಿದ ಎಂದು ಬೊಬ್ಬೆ ಹೊಡೆದುಕೊಳ್ಳವ ಜನರೇ ಬಲಿ ಚಕ್ರವರ್ತಿ ಬಲಶಾಲಿಯಾದಂತೆ ಬಲಿಯಲ್ಲೂ ಅನೇಕ ದುರ್ಗಣಗಳು ಹೆಚ್ಚಾಗಿ ಪಾಪ ಕಾರ್ಯಗಳಿಗೆ ಕೈ ಹಾಕಿದಾಗ ಬಲಿಯನ್ನು ಮಟ್ಟಹಾಕಲು ದೇವತೆಗಳ ಕೈಯಲ್ಲೂ ಸಾಧ್ಯವಾಗದಾಗ ಮಹಾವಿಷ್ಣು ವಾಮನ ಅವತಾರ ಎತ್ತಬೇಕಾಯಿತು.
    12 min

About Dr Balakrishna Maddodi

From the publisher's feed

Hi