Dr Balakrishna Maddodi

Dr Balakrishna Maddodi

By Balakrishna MaddodiArtsBooks
Download on the App Store

Dr Balakrishna Maddodi episodes

  • 🚩*🍁 ಸಚ್ಚಿಂತನೆ🍁* 🌸 *ನಿಜವಾದ ಪುಷ್ಪಾರ್ಚನೆ!*🌸
    🚩*🍁 ಸಚ್ಚಿಂತನೆ🍁*
    🌸 *ನಿಜವಾದ ಪುಷ್ಪಾರ್ಚನೆ!*🌸
    🌼ಭಗವಂತನನ್ನು ದೇವಾಲಯಗಳಲ್ಲಿ ಮತ್ತು ಮನೆಗಳಲ್ಲೂ ಸಹ ಸಾಮಾನ್ಯವಾಗಿ ಹೂವಿನಿಂದ ಪೂಜಿಸುತ್ತೇವೆ. ಎಷ್ಟು ತುಟ್ಟಿಯಾದ (ಹೆಚ್ಚು ಬೆಲೆಯುಳ್ಳ) ಹೂವಿನಿಂದ ಪೂಜಿಸುತ್ತೇವೆಯೋ ಅಷ್ಟು ಪುಣ್ಯ ಬರುತ್ತದೆ ಎಂದು ನಮ್ಮಲ್ಲನೇಕರು ಭಾವಿಸುತ್ತೇವೆ.
    🌸ಎಷ್ಟು ದುಡ್ಡು ಖರ್ಚುಮಾಡಿ ಪೂಜೆ ಮಾಡಿದೆವು ಎಂದು ಹಲವರು ಸಂಭ್ರಮದಿಂದ ಹೇಳಿಕೊಳ್ಳುವುದನ್ನೂ ಸಹ ಸಾಮಾನ್ಯವಾಗಿ ನೋಡುತ್ತಿರುತ್ತೇವೆ.
    🌼ಗಿಡಗಳಲ್ಲಿ ಬಿಡುವ ಹೂವು ಸಾಲದೆಂದು ಕೆಲವು ಧನವಂತರು ಬಂಗಾರದ ಹೂವುಗಳನ್ನು ಮಾಡಿಸುತ್ತಾರೆ.
    🌸ಶಿವನಿಗೆ ಬಂಗಾರದ ಬಿಲ್ವಪತ್ರೆಗಳನ್ನೂ, ವಿಷ್ಣುವಿಗೆ ಬಂಗಾರದ ತುಳಸೀ ದಳಗಳನ್ನೂ, ಅಮ್ಮನವರಿಗೆ ಬಂಗಾರದ ಹೂವುಗಳಿಂದ ಅರ್ಚಿಸಿ ಅದು ತಮ್ಮ ಉನ್ನತವಾದ ಭಕ್ತಿಗೆ ನಿದರ್ಶನವೆಂದು ಭಾವಿಸುತ್ತಾರೆ.
    🌼ಭೋಗಗಳಿಗೆ ನಿಲಯವಾಗಿರುವ ಪಾಶ್ಚಾತ್ಯ ದೇಶಗಳಲ್ಲಿ ನಿವಾಸವಿರುವ ಭಾರತೀಯರಲ್ಲಿ ಈ ಲಕ್ಷಣಗಳು ಸ್ವಲ್ಪ ಹೆಚ್ಚಾಗಿಯೇ ಕಂಡುಬರುತ್ತವೆ.
    🌸ಆದರೆ ಭಗವಂತನು, ಹೂವುಗಳ ಬೆಲೆಯನ್ನಾಧರಿಸಿ ವರ್ತಕನಂತೆ ಪುಣ್ಯವನ್ನು ಕರುಣಿಸುವುದಿಲ್ಲ.
    🌼ಪುಷ್ಪಾರ್ಚನೆಯ ಸಮಯದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಮುಖ್ಯವಾದುದು ಭಕ್ತಿಯಾಗಿದೆ.
    🌸ಇದೇ ವಿಷಯವನ್ನು ಗೀತೆಯಲ್ಲಿ ಪತ್ರಂ, ಪುಷ್ಪಂ, ಫಲಂ, ತೋಯಂ (ಎಲೆ, ಹೂವು, ಹಣ್ಣು, ನೀರು) ಇವುಗಳಲ್ಲಿ ಯಾವುದನ್ನಾದರೂ ನನಗೆ ಭಕ್ತಿಯಿಂದ ಅರ್ಪಿಸಿದರೆ ಸಾಕು ಎಂದು ಸ್ವಯಂ ಕೃಷ್ಣನೇ ಅಪ್ಪಣೆ ಕೊಡಿಸಿದ್ದಾನೆ.
    🌼ದೇವರಿಗೆ ಸಮರ್ಪಿಸಬೇಕಾಗಿರುವುದು ಮನಸ್ಸು ಎನ್ನುವ ಪುಷ್ಪ ಎಂದು ಆದಿ ಶಂಕರರು ತಮ್ಮ ಶಿವಾನಂದಲಹರಿಯಲ್ಲಿ ವಿವರಿಸಿದ್ದಾರೆ.
    🌸ಹಾಗಾದರೆ ಭಗವಂತನಿಗೆ ಇಷ್ಟವಾದ ಪುಷ್ಪವಾವುದು? ತಾವರೆ, ನೈದಿಲೆ, ಸೇವಂತಿಗೆ, ಮಲ್ಲಿಗೆ, ಸಂಪಿಗೆ, ಕಣಗಿಲೆ, ಇವೆಲ್ಲಾ ಹೂವುಗಳನ್ನೂ ಸಹ ದೇವರ ಪೂಜೆಗೆ ಬಳಸಬಹುದು ನಿಜ, ಆದರೆ ನಿಜವಾಗಿ ಅರ್ಪಿಸ ಬೇಕಾಗಿರುವುದು ಅವನಿಗೆ ಇಷ್ಟವಾದ ಎಂಟು ಪುಷ್ಪಗಳನ್ನು.
    *ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ ನಿಗ್ರಹಾಃ*
    *ಸರ್ವಭೂತ ದಯಾಪುಷ್ಪಂ ಕ್ಷಮಾಪುಷ್ಪಂ ವಿಶೇಷತಃ l*
    *ಶಾಂತಿಪುಷ್ಪಂ ತಪಃsಪುಷ್ಪಂ ಧ್ಯಾನಪುಷ್ಪಂ ತಥೈವ ಚ*
    *ಸತ್ಯಮಷ್ಟವಿಧಂ ಪುಷ್ಪಂ ವಿಷ್ಣೋಃ ಪ್ರೀತಿಕರಂ ಭವೇತ್ ll*
    🌼ಭಗವಂತನಿಗೆ ಪ್ರಿಯವಾದ ಪುಷ್ಪಗಳಲ್ಲಿ ಮೊದಲನೆಯದೆ ಅಹಿಂಸೆ.
    🌸ಯಾವುದೇ ಜೀವಿಯನ್ನಾಗಲಿ ಯಾವುದೇ ವಿಧವಾಗಿ ಕಷ್ಟಕ್ಕೆ ಗುರಿ ಮಾಡಬಾರದು.
    🌼ಒಬ್ಬರ ಮನಸ್ಸನ್ನು ಮಾತುಗಳ ಮೂಲಕವೂ ನೋಯಿಸಬಾರದು.
    🌸ಮನಸ್ಸಿನಲ್ಲಿಯೂ ಸಹ ಯಾರಿಗೂ ಕೇಡೆಣಿಸಬಾರದು.
    🌼ಎರಡನೆಯ ಪುಷ್ಟವೆ ಇಂದ್ರಿಯನಿಗ್ರಹ.
    🌸ಮನಸ್ಸಿನಲ್ಲಿ ಬಯಕೆ ಹುಟ್ಟುವುದೇ ತಡ ನ್ಯಾಯಾನ್ಯಾಯಗಳನ್ನು, ಧರ್ಮಾಧರ್ಮಾಗಳನ್ನು ನೋಡದೆ.
    🌼ಇತರರಿಗೆ ಅದರಿಂದ ಯಾವ ವಿಧವಾದ ಕೆಡುಕಾಗಬಹುದೆನ್ನುವ ವಿವೇಚನೆಯಿಲ್ಲದೆ ತಮ್ಮ ಆಸೆಗಳನ್ನು ಪೂರೈಸಿಕೊಳ್ಳುವುದು;
    🌸ಇಂದ್ರಿಯಗಳ ಮೇಲೆ ಯಾವುದೇ ವಿಧವಾದ ಹಿಡಿತವಿಲ್ಲವೆನ್ನ
    ುವುದರ ಲಕ್ಷಣಗಳು.
    🌼ಇಂದ್ರಿಯ ನಿಗ್ರಹವು ದೇವರಿಗೆ ಇಷ್ಟವಾದ ಮತ್ತೊಂದು ಪುಷ್ಪ.
    🌸ಸರ್ವಭೂತ ದಯೆ ಮೂರನೆಯ ಪುಷ್ಪ.
    🌼ಸಹ ಮಾನವರ ಮೇಲೆ ಅಷ್ಟೇ ಅಲ್ಲ ಸಕಲ ಜೀವರಾಶಿಗಳಲ್ಲಿ - ಪ್ರಾಣಿ, ಪಕ್ಷಿ, ಕ್ರಿಮಿ ಕೀಟಾದಿಗಳು, ಸಸ್ಯಗಳ ಮೇಲೆಯೂ ದಯೆ ತೋರಬೇಕೆನ್ನುವುದು ಸನಾತನ ಭಾರತೀಯ ತತ್ತ್ವ.
    🌸ನಾಲ್ಕನೇ ಪುಷ್ಪವೇ ಕ್ಷಮಾಗುಣ. ನಮಗೆ ಅಪಕಾರ ಮಾಡಿದವರಿಗೂ ಸಹ ಉಪಕಾರ ಮಾಡಬೇಕು ಅವರ ಮೇಲೆ ಪ್ರತೀಕಾರ ಸಲ್ಲದು ಎನ್ನುವುದೇ ಕ್ಷಮಾಗುಣ.
    🌼ಶಾಂತಿ ಐದನೆಯ ಪುಷ್ಪ. ಮನಸ್ಸು ಉದ್ವೇಗಕ್ಕೆ ಒಳಗಾಗಬಾರದು.
    🌸ಸುಖ ಬಂದಾಗ ಹಿಗ್ಗುವುದು, ದುಃಖ ಬಂದಾಗ ಕುಗ್ಗುವುದು, ಹೊಗಳಿದರೆ ಉಬ್ಬಿ ಹೋಗುವುದು, ತೆಗಳಿದರೆ ಕುಗ್ಗಿ ಹೋಗುವುದು ಒಳ್ಳೆಯದಲ್ಲ, ಮನಸ್ಸನ್ನು ಪ್ರಶಾಂತವಾಗಿರಿಸಿಕೊಳ್ಳಬೇಕು.
    🌼ಆರನೆಯ ಪುಷ್ಪವೆ ತಪಸ್ಸು. ತಪಸ್ಸೆಂದರೆ ಸುತ್ತಲೂ ಹುತ್ತ ಬೆಳೆಯುವವರೆಗೆ ಒಂಟಿಕಾಲಿನ ಮೇಲೆ ನಿಲ್ಲುವುದೆಂದಲ್ಲ. ಆ ಮಾತಿಗೆ ಅರ್ಥ ಕೆಟ್ಟ ವಿಷಯಗಳನ್ನು ದೂರವಿರಿಸಿ ಒಳ್ಳೆಯ ಕಾರ್ಯಗಳನ್ನು ಸಾಧಿಸುವ ಚಲವನ್ನು ಹೊಂದಿರುವುದು.
    🌸ಏಳನೆಯ ಪುಷ್ಪವೆ ಧ್ಯಾನ. ಶಂಖದಿಂದ ಬಿದ್ದರೇನೆ ತೀರ್ಥ ಎನ್ನುವಂತೆ ಆಧುನಿಕ ವೈದ್ಯರೂ ಸಹ ಧ್ಯಾನವು ಮಾನಸಿಕ ಹಾಗು ಶಾರೀರಿಕ ಆರೋಗ್ಯಕ್ಕೆ ಒಳ್ಳೆಯದೆಂದು ಹೇಳುತ್ತಿದ್ದಾರೆ.
    🌼ಕಡೆಯದಾಗಿ ಹೇಳಿದ್ದರೂ ಸಹ ಮೊದಲನೆಯ ಸ್ಥಾನದಲ್ಲಿರಬೇಕಾಗಿರುವುದು ಎಂಟನೆಯ ಪುಷ್ಪವಾದ ಸತ್ಯ.
    🌸ಯಾವಾಗಲೂ ಸುಳ್ಳನ್ನು ಆಡದೇ ಇರುವುದು, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು, ಮೋಸ ಮಾಡದೇ ಇರುವುದು, ಮೊದಲಾದವು ಸತ್ಯಪರಿಪಾಲನೆಯ ಕೆಳಗೆ ಬರುತ್ತವೆ.
    🌼ಭಗವಂತನನ್ನು ಸಾಮಾನ್ಯವಾದ ಹೂವುಗಳಿಂದಾಗಲಿ, ಬಂಗಾರದ ಹೂವುಗಳಿಂದಾಗಲಿ ಪೂಜಿಸಬಹುದು ಆದರೆ ಪೂಜಾ ಸಮಯದಲ್ಲಿ ತಪ್ಪದೇ ಅರ್ಪಿಸಬೇಕಾದದ್ದು ಮೇಲೆ ಹೇಳಿದ ಎಂಟು ಪುಷ್ಟಗಳನ್ನೆ. *ಭಗವಂತನಿಗೆ ಪ್ರಿಯವಾದ ಎಂಟು ಪುಷ್ಪಗಳು - ಅಹಿಂಸೆ, ಇಂದ್ರಿಯನಿಗ್ರಹ, ಭೂತದಯೆ, ಕ್ಷಮೆ, ಶಾಂತಿ, ತಪಸ್ಸು, ಧ್ಯಾನ ಮತ್ತು ಅತ್ಯಂತ ಪ್ರಮುಖವಾಗಿರುವುದು ಸತ್ಯ ಎನ್ನುವುದನ್ನು ಮರೆಯಬಾರದು*.
    *ಶ್ರೀಕೃಷ್ಣಾರ್ಪಣಮಸ್ತು*🚩ಜೈ ಸನಾತನ ಜಯತು ಜಯತು ಹಿಂದೂ ರಾಷ್ಟ್ರ 🚩🚩
    7 min
  • Be your own BOSS...Keep away from good enemies -😎 ಹಿತ ಶತ್ರುಗಳು
    *ಹಿತ ಶತ್ರುಗಳು ಅಂದರೇನು?*
    ಶತ್ರು ಎಂದರೆ ಒಬ್ಬ ವ್ಯಕ್ತಿ ನಮ್ಮ ಯಶಸ್ಸನ್ನು ನೋಡಿ ಸಹಿಸದೆ ಇರುವವನು. ಸದಾ ನಮ್ಮ ಮೇಲೆ ದ್ವೇಷ ಕಾರುವವನು. ಆತ ಎಚ್ಚರಿಕೆ ಕರೆಗಂಟೆಯಂತಿದ್ದು ನಾವೂ ಸದಾ ಜಾಗೃತ ರಾಗಿರುವಂತೆ ಮಾಡುವವನು. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಗುಣಮಟ್ಟ ಅವನ ಶತ್ರುವಿನ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ.
    ಹಿತೈಷಿ ಎಂದರೆ ಸದಾ ಇನ್ನೊಬ್ಬರ ಒಳಿತನ್ನು, ಯಶಸ್ಸನ್ನು ಬಯಸುವವನು.
    "ಹಿತ ಶತ್ರು" ಎಂದರೆ ನಮ್ಮೊಳಗಿದ್ದು ನಮ್ಮವನಲ್ಲದವರು. ಜೊತೆಯಲ್ಲಿಯೇ ಇದ್ದು ಮುಂದೆ ಬೆಣ್ಣೆಯಂತಹ ಮಾತುಗಳನ್ನಾಡಿ ಹಿಂದೆ ಬೆನ್ನಿಗೆ ಚೂರಿ ಹಾಕುವವರು. ನಮಗೆ ಗೊತ್ತಿಲ್ಲದೇ ನಮ್ಮ ಯಶಸ್ಸಿನ ಪ್ರಗತಿಯನ್ನಾಗಲಿ, ಒಳ್ಳೆಯದನ್ನಾಗಲಿ ಸಹಿಸದೆ ಕೆಟ್ಟದ್ದನ್ನು ಮಾಡುವವರು.
    ನಾವು ಹಿಂದಿನ ಪುರಾಣದಿಂದಲೂ ಹಿತ ಶತ್ರುಗಳನ್ನು ನೋಡಬಹುದು. ಉದಾಹರಣೆಗೆ ರಾಮಾಯಣದಲ್ಲಿ ಶ್ರೀ. ರಾಮಚಂದ್ರ ವನವಾಸ ಅನುಭವಿಸಿದ್ದು ಕೈಕೆಯಿಂದ, ಮಹಾಭಾರತದಲ್ಲಿ ಶಕುನಿಯ ಕುತಂತ್ರ ಅಣ್ಣ – ತಮ್ಮಂದಿರಾದ ಕೌರವರು -ಪಾಂಡವರಲ್ಲಿ ವಿರೋದವಾಗಿ ಯುದ್ದಕ್ಕೆ ನಾಂದಿಯಾಯಿತು.
    ಇತಿಹಾಸದಲ್ಲಿ ಬ್ರಿಟಿಷರು ಭಾರತೀಯ ರಾಜರುಗಳಲ್ಲಿ ಪರಸ್ಪರ ವೈಮನಸ್ಯ ಉಂಟು ಮಾಡಿ ಭಾರತ ದೇಶವನ್ನು ಸುಮಾರು ೪೦೦ ವರ್ಷಗಳು ವಸಾಹತು ಶಾಯಿ ರಾಜ್ಯಭಾರ ನಡೆಸಿದ್ದನು ಕಾಣಬಹುದು. ಸಹಚರರಿಂದಲೇ ಮಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸಹ ಕಾಣಬಹುದು.
    ಇಂದಿನ ವೈಜ್ಞಾನಿಕ ಮತ್ತು ಮಾದ್ಯಮ ಯುಗದಲ್ಲಿ ನಾವು ಬಳಸುವ ಕಂಪ್ಯೂಟರ್, ಮೊಬೈಲ್, ದೂರದರ್ಶನ ದಿಂದ ಎಷ್ಟು ಸದುಪಯೋಗವಿದೆಯೋ ಅಷ್ಟೇ ದುರುಪಯೋಗ ವಾಗಿ ಸಮಸ್ಯೆ ಉಂಟುಮಾಡುತ್ತಿದೆ.
    ಈಗಿನ ಯುವ ಜನಾಂಗದ ಮೇಲೆ ದುಷ್ಪರಿಣಾಮ ಬೀರಿ ವಿವೇಚನಾ ಶಕ್ತಿಯನ್ನು ಕುಂದುವಂತೆ ಮಾಡಿವೆ. ನಮ್ಮಲ್ಲಿ ದುರ್ಬಳಕೆ ಶಕ್ತಿಯನ್ನು ಜಾಸ್ತಿ ಮಾಡಿವೆ.
    ಇನ್ನು ಆಧುನಿಕತೆ, ಹಣ ನಮ್ಮ ಜೀವನದಲ್ಲಿ ತುಂಬಾ ಅವಶ್ಯಕ. ಆದರೆ ಇದನ್ನು ಹೆಚ್ಚು ಗಳಿಕೆಯಾಗುತ್ತ ಹೋದಲ್ಲಿ ಮನುಷ್ಯನಲ್ಲಿ ಗೊತ್ತಿಲ್ಲದಂತೆಯೇ ದುರಂಕಾರ ಮತ್ತು ಅಹಂಕಾರವನ್ನು ಸೃಷ್ಟಿಸುತ್ತದೆ. ಒಂದು ಸಂಸಾರದಲ್ಲಿ ಬೇಕಾದ ಸಾಮರಸ್ಯ ಕಳೆಯುತ್ತಿದೆ. ಇದರಿಂದ ನಮ್ಮ ಸಂಸ್ಕೃತಿ ಮತ್ತು ಪರಂಪರೆ ನಶಿಸುತ್ತಿದೆ.
    ಮನುಷ್ಯನ ಮನಸ್ಸು ಮತ್ತು ನಾಲಿಗೆ ಉಪಯೋಗಕಾರಿಯೇ ಸರಿ, ಆದರೆ ದುರ್ಬಳಕೆ ಮಾಡಿದ್ದಲ್ಲಿ ಇವೆರಡಕ್ಕಿಂತ ದೊಡ್ಡ ಹಿತ ಶತ್ರು ಬೇರೊಂದಿಲ್ಲ. ಮನಸ್ಸು ಒಬ್ಬನ ಆಲೋಚನೆಗೆ ದಿಕ್ಸೂಚಿಯಾಗಿರುತ್ತದೆ. ನಾಲಿಗೆಯಿಂದ ಹೊರಬರುವ ಮಾತುಗಳು ಕತ್ತಿಯ ವರಸೆಗಿಂತ ಹರಿತವಾಗಿರುತ್ತದೆ. ಇವರೆಡರಿಂದ ಆಗುವ ದುರ್ಬಳಕೆಯಿಂದ ಬೇರೆಯವರಿಗಿಂತ ತನಗೆ ಹಾನಿ ಜಾಸ್ತಿ. ಇದಕ್ಕೊಂದು ಉದಾಹರಣೆ : "ನಿಂತು ಹೋದ ಗೆಳತಿಯ ನಿಶ್ಚಿತಾರ್ಥ"…
    ಮೊದಲೇ ಹುಡುಗ ಹುಡುಗಿ ಮತ್ತು ೨ ಮನೆಯವರು ಪರಸ್ಪರ ಒಪ್ಪಿ ಮದುವೆ ಮಾತು ಕತೆ ಮುಗಿಸಿನಿಶ್ಚಿತಾರ್ಥದ ದಿನ ಗೊತ್ತು ಮಾಡಿದ್ದರು. ನಿಶ್ಚಿತಾರ್ಥದ ದಿನ ಎಲ್ಲವು ಸಿದ್ದವಾಗುತ್ತಿತ್ತು ಇದ್ದಕ್ಕಿದ್ದಂತೆಯೇ ಹುಡಗನ ಕಡೆಯವ ಹಿರಿಯೊಬ್ಬರು ಬಂದು ನಮಗೆ ಈ ಸಂಬಂಧ ಬೇಡ, ನಮಗಿಷ್ಟವಿಲ್ಲ ಎಂದರು. ಕಾರಣವೇನೆಂದು ವಿಚಾರಿಸಿದಾಗ ಅವರಿಗೆ ಯಾರೋ ಒಬ್ಬರು ದೂರವಾಣಿ ಕರೆ ಮಾಡಿ ಹುಡುಗಿಯ ಗುಣ – ನಡತೆ ಸರಿಯಿಲ್ಲ, ಸಂಸ್ಕಾರವಂತಳಲ್ಲ ಎಂದು ಹೇಳಿದ್ದರಂತೆ. ಇಲ್ಲಸಲ್ಲದ್ದನ್ನು ಹೇಳಿದ ಅವರ ಮಾತುಗಳನ್ನು ನಂಬಿ ನಿಶ್ಚಿತಾರ್ಥವನ್ನು ನಿಲ್ಲಿಸಿದರು. ಆ ದೂರವಾಣಿ ಸಂಖ್ಯೆಯನ್ನು ಪರಿಶೀಲಿಸಿ ಸಂಶೋದಿಸಿದಾಗ ಆ ರೀತಿ ಕರೆ ಮಾಡಿದ್ದು, ಒಂದೇ ಮನೆಯಲ್ಲಿ ಒಟ್ಟಿಗೆ ಜೊತೆಯಲ್ಲಿಯೇ ಇದ್ದ ಗೆಳತಿಯ ಸ್ವಂತ ಚಿಕ್ಕಪ್ಪ -ಚಿಕ್ಕಮ್ಮನೆ ಆಗಿದ್ದರು, ಕಾರಣವಿಷ್ಟೇ ತನ್ನ ಸ್ವಂತ ಅಣ್ಣನ ಸಿರಿವಂತಿಕೆ ಮತ್ತು ಬೆಳೆಸುತ್ತಿದ್ದ ದೊಡ್ಡ ಸಂಬಂಧವನ್ನು ಸಹಿಸಿಕೊಳ್ಳದವರಾಗಿದ್ದರು.. ಜೊತೆಯಲ್ಲಿಯೇ ಇದ್ದು ಮೋಸ ಮಾಡಿದರು. ನಂಬಿದ್ದವರಿಂದಲೇ ಕುತ್ತಿಗೆ ಕುಯ್ಯುವ ಕೆಲಸ ಮಾಡಿದ್ರು. ಕೊನೆಗೆ ಇಬ್ಬರು ನಂಬಿಕೆ ವಂಚಿತರಾಗಿ ಮಾಡಿದ್ದುಣ್ಣೋ ಮಾರಾಯ ಎಂಬಂತೆ ಮನೆ- ಮನಸ್ಸುಗಳಿಂದ ದೂರಾದರು.
    ಇನ್ನು ಭಾಷೆ ಗಣನೆಗೆ ತೆಗೆದು ಕೊಂಡರೆ "ನಮ್ಮ ಮಾತೃಭಾಷೆ ಕನ್ನಡ ಕ್ಕೆ ಆಂಗ್ಲಭಾಷೆ ಯೇ ಹಿತಶತ್ರು "
    ಆಂಗ್ಲಭಾಷೆ ಇದೊಂದು ಅಂತರ ರಾಷ್ಟ್ರೀಯ, ಮಾಹಿತಿ ತಂತಜ್ಞಾನ ಅನಿವಾರ್ಯ, ಕಾರ್ಪೊರೇಟ್ ಉದ್ಯಮಗಳ ಹಾಗೂ ಬಹು ಪ್ರಚಲಿತ ಭಾಷೆ. ಆದರೆ ಇದು ನಮ್ಮ ಮಾತೃ ಭಾಷೆಯ ಮೇಲಿನ ಸಾಹಿತ್ಯ, ಸಂಸ್ಕೃತಿಯ ಕಾಳಜಿ ಮತ್ತು ಅಸ್ತಿತ್ವವನ್ನು ನಶಿಸುವಂತೆ ಮಾಡಿದೆ. ಕನ್ನಡ ಮಾದ್ಯಮಗಳ ಶಾಲೆಗಳನ್ನು ಮುಚ್ಚಿಸುವಂತೆ ಮಾಡುತ್ತಿದೆ. ಇಂದಿನ ಸಮಾಜದಲ್ಲಿ ಮಾತೃಭಾಷೆಗೆ ಸಿಗಬೇಕಾದ ಸ್ಥಾನ – ಮಾನ ಸಿಗುತ್ತಿಲ್ಲ. ಕೇವಲ ವಾಣಿಜ್ಯ ಉದ್ಯೋಗಕ್ಕಷ್ಟೇ ಸೀಮಿತವಾಗಿ ಬಂದ ಭಾಷೆ ಗೊತ್ತಿಲ್ಲದಂತೆ ಮಾತೃಭಾಷೆ ಕನ್ನಡವನ್ನು ನಾಶಗೊಳಿಸುವಲ್ಲಿ ಮುಂದಾಗುತ್ತಿದೆ.
    ಇನ್ನು ವೃತ್ತಿರಂಗದಲ್ಲಿ ನಮ್ಮ ಸಹೋದ್ಯೋಗಿಗಳೇ ನಮ್ಮ ಹಿತಶತ್ರುವಾಗಿರುತ್ತಾರೆ. ನಮ್ಮ ಉನ್ನತಿಯನ್ನು, ಒಡನಾಟವನ್ನು, ಕಾರ್ಯ ಯಶಸ್ಸನ್ನು ಮನದಲ್ಲಿ ಸಹಿಸದೆ ಪಕ್ಕದಲ್ಲೇ ನಗುತ್ತ ಚೆನ್ನಾಗಿದ್ದು, ನಮ್ಮ ಮೇಲಿನ ಅಸೂಹೆ ಯಿಂದ ನಮ್ಮ ಕೆಲಸವನ್ನು ಕೆಡಿಸುತ್ತಾರೆ, ನಮ್ಮ ವೃತ್ತಿ ಬದುಕಿಗೆ ತೊಡಕು ಉಂಟು ಮಾಡುತ್ತಾರೆ. ಒಟ್ಟಿನಲ್ಲಿ ಏಣಿ ಹಾಕಿ ಅಟ್ಟ ಹತ್ತಿಸಿ ಕಾಲು ಎಳೆಯೋವಂತವರಾಗಿರುತ್ತಾರೆ. ಹಾಗಂತ ಇಂತವರನ್ನು ನಿಂದನೆ ಮಾಡಬಾರದು ಇವರು ಮಾಡಿದ ಇಂತ ಕೆಡಕಿನಿಂದ ಮುಂದೆ ನಾವು ಜಾಗೃತರಾಗಿ ಎಚ್ಚರಿಕೆ ವಹಿಸುತ್ತೇವೆ.
    ಇತ್ತೀಚಿಗೆ ಅನೇಕ ಕಡೆ ಶತ್ರುಗಳಿಗಿಂತ ಹಿತಶತ್ರುಗಳ ಹಾವಳಿಯೇ ಜಾಸ್ತಿ ಯಾಗುತ್ತಿದೆ (ಸಂಸಾರದಲ್ಲಿ, ಗೆಳೆತನದಲ್ಲಿ, ಭಾಷೆಗಳಲ್ಲಿ, ಇಂದಿನ ವೈಜ್ಞಾನಿಕ & ಮಾಧ್ಯಮ ಯುಗದಲ್ಲಿ, ಆಧುನಿಕತೆಯಲ್ಲಿ, ರಾಜಕೀಯದಲ್ಲಿ, ಸಿನೆಮಾರಂಗದಲ್ಲಿ, ವೃತ್ತಿರಂಗದಲ್ಲಿ ಇನ್ನು ಮುಂತಾದವುಗಳು). ಶತ್ರುಗಳನ್ನು ಗುರುತಿಸಬಹುದು ಆದರೆ ನಮ್ಮ ಜೊತೆಯಲ್ಲಿ, ಪಕ್ಕದಲ್ಲಿ, ಬೆನ್ನ ಹಿಂದೆಯಲ್ಲಿ ಇರುವ ಹಿತಶತ್ರುಗಳನ್ನು ಗುರುತಿಸೋದು ಕಷ್ಟ.
    ನಾವು ಒಬ್ಬರಿಗೆ ಸಹಾಯ ಮಾ
    8 min
  • *ಅಗ್ನಿಹೋತ್ರ ರಹಸ್ಯ* *Agnihotra a secret*
    ನಮ್ಮ ಸನಾತನ ಸಂಸ್ಕೃತಿಯ ಅಡಿಪಾಯವಿರುವುದು ಯಜ್ಞ, ಯಾಗಗಳಲ್ಲಿ. ಯಜ್ಞ ಯಾಗಗಳೆಂದರೆ ಕೇವಲ ಒಂದು ಹೋಮವನ್ನು ಆಚರಿಸುವುದು, ಮನಸ್ಸಿನ ಕಾಂಕ್ಷೆಗಳನ್ನು ದೇವರಮುಂದಿಟ್ಟು ಅದನ್ನು ಫಲಿಸಿಕೊಳ್ಳುವುದು ಎಂಬಷ್ಟು ಸುಲಭವಾಗಿ ವ್ಯಾಖ್ಯಾನಿಸುವ ಸಂಗತೆಯಲ್ಲ. ಅದರಲ್ಲಿ ಅಡಕವಾದದ್ದು ಮುಖ್ಯವಾಗಿ ತ್ಯಾಗ ಮನೋಭಾವ. ನನ್ನದಲ್ಲ, ಇದು ಸಂಪೂರ್ಣವಾಗಿ ನಿನಗೆ ಅರ್ಪಿತ ಎಂಬ ಭಾವನೆಯಿಂದ ನಡೆದ ಅನೇಕಾನೇಕ ಹೋಮಗಳ ಫಲವೇ ನಮ್ಮೆಲ್ಲರ ಅಸ್ತಿತ್ವ, ಈ ಪುಣ್ಯ ಭೂಮಿಯಲ್ಲಿ ಜನನ ಎಂಬ ಮಾತು ಆಗಿಂದ್ದಾಗ್ಗೆ ಕೇಳಿಬರುತ್ತದೆ. ದಿನಗಟ್ಟಲೆ ನಡೆಯುವ ಹೋಮಗಳನ್ನು ಹೆಸರಿಸಬಹುದಾದರೂ ಹೋಮಗಳೆಲ್ಲವೂ ಹಿಂದೂಗಳ ಒಂದು ವರ್ಗಕ್ಕಷ್ಟೇ ಸೇಮಿತ ಎಂದು ಅವನ್ನು ಅನುಸರಿಸಲು ಕಟ್ಟುಪಾಡುಗಳಿವೆಯೆಂದು ಕೆಲವರು ಅನಾಸಕ್ತಿ ತೋರಬಹುದು. ಆದರೆ ನಮ್ಮಲ್ಲೊಂದು ಹೋಮವಿದೆ. ಈ ಹೋಮ ಮಾಡಲು ಸಮಯವೂ ತಗಲುಗುದಿಲ್ಲ. ಯಾರಾದರೂ ಮಾಡಬಹುದು. ಹಾಗೂ ಅಂತಹ ಹೋಮದಿಂದ ಕ್ರಮೇಣ ಉತ್ತಮ ಪರಿಣಾಮಗಳನ್ನು ಕಂಡುಕೊಳ್ಳಬಹುದು ಎಂದು ಸಾಕಷ್ಟು ಚರ್ಚೆ, ಪರೀಕ್ಷೆಗಳ ನಂತರ ವಿಜ್ಞಾನಿಗಳೂ ಒಪ್ಪಿಕೊಳ್ಳುತ್ತಿದ್ದಾರೆ. ೬೪ ವಿದ್ಯೆಗಳಲ್ಲಿ ಒಂದದ ಈ ಹೋಮದ ಹೆಸರೇ ಅಗಿಹೋತ್ರ.
    ನಮ್ಮ ವೈದಿಕ ಪರಂಪರೆಯಲ್ಲಿ ಋಷಿಮುನಿಗಳು ಅನುಸರಿಸುತ್ತಿದ್ದ, ಪ್ರತಿಯೊಬ್ಬರೂ ನಡೆಸಬಹುದಾದುದು ಅದರಿಂದಾಗುವ ಸತ್ಪರಿಣಾಮಗಳು ಹೆಚ್ಚು ಎಂದು ಹೇಳಲ್ಪಡುತ್ತಿದ್ದುದು ಈ ಅಗ್ನಿಹೋತ್ರದ ಬಗ್ಗೆಯೇ. ಮುಂಚೆಲ್ಲ ಹಲವಾರು ಜನರು ನಡೆಸುತ್ತಿದ್ದ ಅಗ್ನಿಹೋತ್ರಕ್ಕೆ ಕ್ರಮೇಣ ಜನರ ಭಾಗಗೊಳ್ಳುವಿಕೆ ಇಳಿಮುಖವಾಗಿತ್ತು. ಅಗ್ನಿಹೋತ್ರವು ಚರ್ಚೆಗೆ ಗ್ರಾಸವಾದದ್ದು ಭೋಪಾಲ್ ಅನಿಲ ದುರಂತದ ನಂತರ. ಡಿಸೆಂಬರ್ ೧೯೮೪ರಲ್ಲಿ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್‍ನಿಂದ ಹೊರಬಂದ ಮಿಥೈಲ್ ಐಸೊಸಯನೈಡ್ ಸುಖನಿದ್ರೆಯಲ್ಲಿದ್ದ ಭೋಪಾಲದ ಜನರನ್ನು ಸಹಸ್ರ ಸಂಖ್ಯೆಯಲ್ಲಿ ಕೊಂದಿತು. ಮಡಿದವರು, ಅಂಗಾಗಗಳು ಊನವಾದವರು, ನಾನಾ ರೋಗಗಳಿಗೆ ತುತ್ತಾದವರು ಅಸಂಖ್ಯ. ಆದ್ದರಿಂದಲೇ ಈ ಅನಿಲ ದುರಂತವನ್ನು ಮನುಕುಲದ ಮೇಲೆ ನಡೆದ ಅತಿದೊಡ್ಡ ದುರಂತಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಆದರೆ ವಿಚಿತ್ರವೆಂದರೆ ಈ ದುರ್ಘಟನೆ ನಡೆದಾಗ್ಯೂ, ಕಾರ್ಖಾನೆಯ ಒಂದು ಮೈಲಿ ದೂರದಲ್ಲಿದ್ದ ಎರಡು ಮನೆಗಳನ್ನು ಕಿಂಚಿತ್ತೂ ಹಾಳುಗೆಡವಲು ಆಗಲೇ ಇಲ್ಲ. ಅದಕ್ಕೆ ಕಾರಣವು ದಿನನಿತ್ಯ ಆ ಮನೆಗಳಲ್ಲಿ ನಡೆಯುತ್ತಿದ್ದ ಅಗ್ನಿಹೋತ್ರ ಹೋಮ ಎಂಬ ಮಾತು ಪ್ರಚಲಿತವಾಗತೊಡಗಿತು. ಆ ಮನೆಯಲ್ಲಿ ವಾಸಿಸುವವರು ವಿಜ್ಞಾನಿಗಳಿಗೆ ಸವಾಲೆಸೆದಿದ್ದರು.
    ೧೯೮೬ರಲ್ಲಿ ಅಂದಿನ ಯುಎಸ್‍ಎಸ್‍ಆರ್ ನ ಚರ್ನೋಬಿಲ್ (Chernobyl) ಎಂಬಲ್ಲಿ ಪರಮಾಣು ವಿಸ್ಫೋಟದ ನಂತರದ ವಿಕಿರಣದಿಂದ ಯೂರೋಪ್ ಖಂಡದ ದೇಶಗಳಲ್ಲಿಯೂ ದುಷ್ಪರಿಣಾಮಗಳು ಕಂಡುಬಂತು. ಇತ್ತೀಚೆಗಿನ ವಿಶ್ವ ಆರೋಗ್ಯ ಸಂಸ್ಥೆಯ ವರದಿಯನುಸಾರ ಈ ವಿಕಿರಣದಿಂದ ಸುಮಾರು ೬೦,೦೦೦ ಜನರು ಕ್ಯಾನ್ಸರ್ ಖಾಯಿಲೆಯಿಂದ ಬಳಲಿ ಸತ್ತಿದ್ದಾರೆ. ಚರ್ನೋಬಿಲ್ ನ ೩೦ಕಿಮಿ ಸುತ್ತಲಿನ ಜಾಗವನ್ನು ಈಗ ವಾಸಿಸಲು ಯೋಗ್ಯವಲ್ಲವೆಂದು ಅಲ್ಲಿಂದ ಜನರನ್ನು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.ಚರ್ನೋಬಿಲ್ ದುರಂತದ ನಂತರ ಆಸ್ಟ್ರಿಯಾ ಸರ್ಕಾರವು ಅಲ್ಲಿನ ರೈತರುಗಳಿಗೆ ತಮ್ಮ ಹಸುಗಳ ಹಾಲನ್ನು ವಿಕಿರಣಶೀಲಕ್ಕಾಗಿ ಪರೀಕ್ಷಿಸಬೇಕೆಂದು ಆದೇಶಿಸಿತ್ತು. ಎಲ್ಲರೂ ಪರೀಕ್ಷೆಗೆ ಒಳಪಡಿಸಿದಾಗ ಕೇವಲ ಕರಿನ್ ಹರ್ಷಲ್ ಎಂಬ ರೈತರ ಆವರಣದಲ್ಲಿ ಬೆಳೆದ ಹುಲ್ಲು, ಆ ಹುಲ್ಲನ್ನು ಸೇವಿಸಿದ್ದ ಹಸುಗಳ ಹಾಲಲ್ಲಿ ವಿಕಿರಣಶೀಲದ ಅಂಶಗಳು ತೋರಿಬರಲಿಲ್ಲ. ಉಳೆದಲ್ಲ ಹಾಲಿನ ಮಾದರಿಗಳು(ಗೋವುಗಳು ವಿಕಿರಣ ಭರಿತ ಲಭ್ಯ ಹುಲ್ಲನ್ನು ಸೇವಿಸಿದ್ದರಿಂದ) ವಿಕಿರಣಶೀಲವಾಗಿತ್ತು.
    ಭೋಪಾಲದ ಅನಿಲ ದುರಂತದಿಂದ ಯಾವುದೇ ದುಷ್ಪರಿಣಾಮ ಕಾಣದ ಆ ಎರಡು ಮನೆಗಳು ಹಾಗೂ ಆಸ್ಟ್ರಿಯಾದ ಕರಿನ್ ಹರ್ಷಲ್‍ರ ಹಸುಸಾಕಣೆ ಪ್ರದೇಶಗಳಲ್ಲಿ ಸಾಮ್ಯವಿದ್ದುದು ಅಗ್ನಿಹೋತ್ರದ ಪದ್ಧತಿ ನಡೆಸುತ್ತಿದ್ದುದು. ಹಾಗಾದರೆ ಈ ಅಗ್ನಿಹೋತ್ರವೆಂದರೇನು? ಅಗ್ನಿಯ ಮೂಲಕ ವಾತಾವರಣವನ್ನು ಶುದ್ಧೀಕರಿಸುವ ಪ್ರಕ್ರಿಯೆಯೇ ಅಗ್ನಿಹೋತ್ರದ ಮೂಲ ತತ್ತ್ವವಾಗಿರುತ್ತದೆ. ಸೂರ್ಯ ಉದಯವಾಗುವ ಸಮಯಕ್ಕೆ, ಸೂರ್ಯ ಮುಳುಗುವ ಸಮಯಕ್ಕೆ ನಮ್ಮ ದೇಹದಲ್ಲಿ, ಪ್ರಾಣಿ,ವೃಕ್ಷಗಳಲ್ಲಿ ಹೊಸ ಕೋಶಗಳು ಹೆಚ್ಚಿನ ಪ್ರಮಾಣದಲ್ಲಿ ಹುಟ್ಟುತ್ತವೆ ಎಂದು ಜೀವವಿಜ್ಞಾನಿಗಳು ನಿರೂಪಿಸಿದ್ದಾರೆ. ಅದೇ ಸಮಯದಲ್ಲಿ ಸೂರ್ಯನ ಕಿರಣಗಳಿಗೆ ಅತಿ ಹೆಚ್ಚು ಶಕ್ತಿಯಿರುತ್ತದೆಂಬುದು ನಾವೆಲ್ಲರೂ ತಿಳಿದುಕೊಂಡಿರುವ ಸತ್ಯ. ಬ್ರಾಹ್ಮಿ (ಸೂರ್ಯೋದಯ),ಗೋಧೂಳಿ (ಸೂರ್ಯಾಸ್ತ) ಸಮಯಗಳಲ್ಲಿ ಕೆಲ ಮಂತ್ರಗಳನ್ನು ಪಠಿಸಿ, ಅಗ್ನಿಗೆ ಆಹುತಿ ನೀಡಬೇಕು, ಅದರಿಂದ ಧನಾತ್ಮಕ ತರಂಗಗಳು ಸೃಷ್ಟಿಗೊಂಡು, ಮನುಷ್ಯನ ಮನಸ್ಸುಗಳು ಧನಾತ್ಮಕ ಚಿಂತನೆ ನಡೆಸುತ್ತವೆ ಎಂಬುದು ಸಾವಿರಾರು ವರ್ಷಗಳ ಹಿಂದಿನ ನಮ್ಮ ಪೂರ್ವಜರು ಅರಿತುಕೊಂಡು, ಅವರಿಗೆ ಸತ್ಯದ ಸಾಕ್ಷಾತ್ಕಾರವೂ ಆಗಿತ್ತು. "Heal the atmosphere and the atmosphere will heal you" (ವಾತಾವರಣವನ್ನು ಶುದ್ಧಗೊಳಿಸಿದರೆ, ವಾತಾವರಣವು ನಿಮ್ಮನ್ನು ಗುಣಪಡಿಸುತ್ತದೆ) ಎಂಬ ಮೂಲ ತತ್ತ್ವವನ್ನು ವೇದಗಳಲ್ಲಿ ಹೇಳಲಾಗಿದೆ ಎಂಬುದನ್ನು ಭಾರತದ ವಸಂತ ಪರಾಂಜಪೆಯವರು ದೇಶವಿದೇಶಗಳಲ್ಲಿ ತಮಗೆ ಲಭಿಸಿದ್ದ ಜ್ಞಾನವನ್ನು ಹರಡಲು ಮೂಂದಾದರು. ಅವರ ಅನುಯಾಯಿಗಳು ವಿಶ್ವದೆಲ್ಲೆಡೆ ಈಗ ಅಗ್ನಿಹೋತ್ರವನ್ನು ನಿತ್ಯ ಯಜ್ಞವಾಗಿ ನಿರ್ವಹಿಸುತ್ತಿದ್ದಾರೆ. ಹಸುವಿನ ಸಗಣಿಯಿಂದ ಮಾಡಿದ ಬೆರಣಿ, ತುಪ್ಪ, ಅಕ್ಕಿಯನ್ನು ಸೂರ್ಯೋದಯ, ಸೂರ್ಯಾಸ್ತವಾಗುವ ಸಮಯಕ್ಕೆ ಸರಿಯಾಗಿ ತಾಮ್ರ/ಚಿನ್ನದ ಕುಂಡದಲ್ಲಿ ತಯಾರಿಸಿದ ಅಗ್ನಿಗೆ ಆಹುತಿ ನೀಡಬೇಕು. ಜೊತೆಗೆ ಈ ಆಹುತಿಗೆ ಸರಿಯಾಗಿ ಕೆಲ ಮಂತ್ರ ಪಠನವನ್ನೂ ಮಾಡಬೇಕು. ಅಗ್ನಿಹೋತ್ರವನ್ನು ಮಾಡಿದಾಗ, ಅದರಿಂದ ಬರುವ ಹೊಗೆ, ವಿಕಿರಣ ಹೊರಚೆಲ್ಲುವ ವಸ್ತುವನ್ನು ಆಕರ್ಷಿಸಿ ಅದರ ಮೂಲ ಪ್ರವೃತ್ತಿಯಾದ ವಿಕಿರಣಶೀಲತೆಯನ್ನು ತಟಸ್ಥಗೊಳಿಸುತ್ತದೆ ಎಂಬುದು ಅಗ್ನಿಹೋತ್ರಕ್ಕೆ ಇರುವ ಸೈದ್ಧಾಂತಿಕ ಹಾಗೂ ವೈಜ್ಞಾನಿಕ ಹಿನ್ನೆಲೆ. (ಚರ್ನೊಬಿಲ್‍ನಲ್ಲಿ ವಿಕಿರಣ ಉಂಟಾದಾಗ ವಿಚಿತ್ರವೆಂದರೆ ಕೆಲ ಕೀಟಗಳು ಸಾಯದ
    12 min
  • ಭರತನಾಟ್ಯ ವೈವಿಧ್ಯ ... BHARATHANATYAM
    ಭರತನಾಟ್ಯ ದೇಶದ ಸುಂದರ ನೃತ್ಯ ಪ್ರಕಾರಗಳಲ್ಲಿ ಒಂದು. 19ನೇ ಶತಮಾನದವರೆಗೆ ದೇವಸ್ಥಾನಗಳಲ್ಲಿ ದೇವರ ಪ್ರೀತ್ಯರ್ಥವಾಗಿ, ರಾಜರ ಆಸ್ಥಾನಗಳಲ್ಲಿ ಮನರಂಜನೆಯ ಪ್ರಕಾರವಾಗಿ ಪ್ರದರ್ಶಿತಗೊಳ್ಳುತ್ತಿದ್ದ ಭರತನಾಟ್ಯ 20ನೇ ಶತಮಾನದಲ್ಲಿ ಪರಿಪೂರ್ಣ ಪ್ರದರ್ಶಕ ಕಲೆಯಾಗಿ ರೂಪಗೊಂಡಿತು.
    ಸಂಗೀತ, ನೃತ್ಯ ಮತ್ತು ಚಿತ್ರಕಲೆಗಳ ಆರಾಧಕರಾಗಿದ್ದ ಮೈಸೂರು ಒಡೆಯರು ಭರತನಾಟ್ಯಕ್ಕೆ ರಾಜಾಶ್ರಯ ನೀಡಿದರು. 20ನೇ ಶತಮಾನದ ಮಧ್ಯಭಾಗದ ಹೊತ್ತಿಗೆ ಮೈಸೂರಿನಲ್ಲಿ ವಿಭಿನ್ನ ಶೈಲಿಯ ಗುರುಗಳ ವಿಭಿನ್ನ ಪರಂಪರೆಯ ಭರತನಾಟ್ಯ ಪ್ರಕಾರಗಳು ಬೆಳೆದವು. ನಾಟ್ಯ ಸರಸ್ವತಿ ಜಟ್ಟಿ ತಾಯಮ್ಮ, ಮುಗೂರು ಅಮೃತಪ್ಪ, ಮೂಗೂರು ಜೇಜಮ್ಮ, ಕೋಲಾರ ಸುಬ್ಬಣ್ಣ, ಯಜಮಾನ ಕಿಟ್ಟಣ್ಣ ಮತ್ತು ಪುಟ್ಟಪ್ಪ, ನಂಜನಗೂಡು ದಾಸಪ್ಪ ಮತ್ತು ರಾಜಮ್ಮ ಮತ್ತಿತರ ನೃತ್ಯ ದಿಗ್ಗಜರು ತಮ್ಮದೇ ಪರಂಪರೆಯ ಶಿಷ್ಯರನ್ನು ಸೃಷ್ಟಿಸಿದ್ದರು.
    ಪ್ರಸ್ತುತ ಕರ್ನಾಟಕದಲ್ಲಿ ಮೈಸೂರು, ಮೂಗೂರು (ಟಿ. ನರಸೀಪುರ ತಾಲ್ಲೂಕು), ನಂಜನಗೂಡು ಮತ್ತು ಕೋಲಾರ ಪರಂಪರೆಯ ನೃತ್ಯ ಪ್ರಕಾರಗಳಿವೆ.
    ಮೈಸೂರು ಪರಂಪರೆಯ ಕಲಾವಿದರು ಜಟ್ಟಿ ತಾಯಮ್ಮನವರ ಶೈಲಿ ಅನುಸರಿಸುತ್ತಾರೆ. ಈ ಪರಂಪರೆಯಲ್ಲಿ ಅಭಿನಯಕ್ಕೆ ಒತ್ತು. ಪೂರ್ವರಂಗ ವಿಧಿಗೆ ಹೆಚ್ಚಿನ ಮಹತ್ವ. ಗೀತಗೋವಿಂದ, ನೀತಿ ಶತಕ, ಮುಕುಂದ ಮಾಲಾ ಮತ್ತು ಕೆಲ ಅಪರೂಪದ ಕನ್ನಡ ಕೃತಿಗಳನ್ನು ಬಳಸಿ ಪೂರ್ವರಂಗ ವಿಧಿ ಅಭಿನಯಿಸಲಾಗುತ್ತದೆ. ಜಟ್ಟಿ ತಾಯಮ್ಮನವರ ಶಿಷ್ಯೆಯಾದ ಪದ್ಮಭೂಷಣ ಡಾ.ಕೆ. ವೆಂಕಟಲಕ್ಷ್ಮಮ್ಮ ಈ ಶೈಲಿಯನ್ನು ಮುಂದುವರಿಸಿಕೊಂಡು ನೂರಾರು ಶಿಷ್ಯರನ್ನು ಸೃಷ್ಟಿಸಿದ್ದಾರೆ.
    ಮೂಗೂರು ಪರಂಪರೆಯ ಕಲಾವಿದರು ನೃತ್ತ, ಅಡವು ಮತ್ತು ಜತಿಯ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಜತಿಸ್ವರ, ವರ್ಣ, ತಿಲ್ಲಾನ, ಪದ, ಜಾವಳಿಗಳಿಗೂ ಮಹತ್ವ. ನೂಪುರ ನೃತ್ಯ ಶಾಲೆಯ ಗುರು ಲಲಿತಾ ಶ್ರೀನಿವಾಸನ್, ಮೂಗೂರು ಜೇಜಮ್ಮನವರ ಶಿಷ್ಯ ಮಾಧವ ರಾವ್ ಮತ್ತಿತರರು ಈ ಪರಂಪರೆಯನ್ನು ಪ್ರತಿನಿಧಿಸುತ್ತಾರೆ.
    ಕೋಲಾರ ಕಿಟ್ಟಣ್ಣ ಪರಂಪರೆಯಲ್ಲಿ ಅರಮನೆಯ ವಿಧಿ, ದೇವಾಲಯ ವಿಧಿಗಳಿಗೆ ಆದ್ಯತೆ. ಇದಲ್ಲದೇ ಸಾಮಾನ್ಯ ನೃತ್ಯಗಳಲ್ಲಿ ಭರತ ಚೂರ್ಣಿಕಾ, ಪ್ರಬಂಧ, ಅಷ್ಟ ದಿಕ್ಪಾಲಕ ಆರಾಧನೆ, ಸ್ವರ ಜತಿ, ಸ್ವರ ಪ್ರಬಂಧ, ನವ ಸಂಧಿ ನೃತ್ಯ, ಸಪ್ತ ತಾಳೇಶ್ವರಿ ವರ್ಣ, ಉಗಾಭೋಗ ಇತ್ಯಾದಿಗಳಿಗೆ ಮಹತ್ವ. ಈ ಪರಂಪರೆಯ ನೃತ್ಯ ಸಿರಿವಂತಿಕೆ ಮತ್ತೆಲ್ಲೂ ಕಾಣದು. ಭರತಕಲಾಮಣಿ ಸಿ. ರಾಧಾಕೃಷ್ಣ ಈ ಪರಂಪರೆಯ ಕೊಂಡಿ.
    ನಂಜನಗೂಡು ದಾಸಪ್ಪನವರಿಂದ ಆರಂಭವಾಗಿ ನಂಜನಗೂಡು ರಾಜಮ್ಮನವರಿಂದ ಶಾಶ್ವತಗೊಂಡಿರುವ ನಂಜನಗೂಡು ಪರಂಪರೆಯಲ್ಲಿ ಅಪೂರ್ವ ಭಾವ ಮತ್ತು ನೃತ್ಯಕ್ಕೆ ಮಹತ್ವ. ಮೈಸೂರು ಆಸ್ಥಾನದಲ್ಲಿ ನಟುವಾಂಗ ಕಲಾವಿದರಾಗಿದ್ದ ನಾಟ್ಯಾಚಾರ್ಯ ದಾಸಪ್ಪ ನೃತ್ಯಕಲೆಯ ಪರಂಪರೆ ಆರಂಭಿಸಿದರು. ನೃತ್ತ ಮತ್ತು ಅಭಿನಯವನ್ನು ಸಮ್ಮಿಶ್ರಗೊಳಿಸಿದರು. ಅವರ ಶಿಷ್ಯೆ ರಾಜಮ್ಮ ಶ್ರದ್ಧೆಯಿಂದ ಈ ಪರಂಪರೆ ಮುಂದುವರಿಸಿದರು. ರಾಜಮ್ಮನ ಶಿಷ್ಯ ದಿವಂಗತ ಸುಬ್ರಹ್ಮಣ್ಯ ಕೌಶಿಕ ಅವರು ಈ ಪರಂಪರೆಗೆ ಮತ್ತಷ್ಟು ರಂಗು ತುಂಬಿದರು. ನೃತ್ಯದಲ್ಲಿ ರಾಗ, ತಾನ, ಪಲ್ಲವಿಯನ್ನು ಪ್ರಸ್ತುತಪಡಿಸುವ ಕೌಶಲ್ಯವನ್ನು ಪುನರುತ್ಥಾನಗೊಳಿಸಿದರು. ಕೈಷಿಕಿ ನಾಟ್ಯವಾಹಿನಿಯ ಡಾ. ಮಾಲಾ ಶಶಿಕಾಂತ್ ಈ ಪರಂಪರೆಯನ್ನು ಪ್ರತಿನಿಧಿಸುತ್ತಾರೆ...🙏🏻🚩
    5 min
  • ★ ಗೋವಿನ ಒಂದು ಚಮಚ ತುಪ್ಪವನ್ನು ಬೆಂಕಿಗೆ ಸುರಿದಾಗ ಸುಮಾರು ಒಂದು ಟನ್ನುಗಳಷ್ಟು ಆಮ್ಲಜನಕ ಬಿಡುಗಡೆಯಾಗುತ್ತೆ !!. ★
    ಗೋವಿಗೆ ವಿಷವನ್ನು ಸತತ 90 ದಿನಗಳವರೆವಿಗೂ ನೀಡುತ್ತಾ ಬಂದರೂ ಅದರ ಹಾಲಿನಲ್ಲಿ ವಿಷದ ಪ್ರಮಾಣ ಕಿಂಚಿತ್ತೂ ಇರುವುದಿಲ್ಲ...
    ದೇಶ ಕಂಡ ಅತೀ ದೊಡ್ಡ ದುರಂತ "ಭೋಪಾಲ್ ಅನಿಲ ದುರಂತ" ನೀವು ಕೇಳಿರಬಹುದು. ಆ ದುರಂತ ಆದಾಗ ಸುಮಾರು 10 ಕಿ.ಮೀ ವರೆಗೆ ವಾಸವಿದ್ದ ಎಲ್ಲ ಜನರು ಸಾವೀಗಿಡಾದರು. ಆದರೆ ಕೇವಲ 1 ಕಿ.ಮೀ ದೂರವಿದ್ದ 4 ಬ್ರಾಹ್ಮಣ ಕುಟುಂಬಕ್ಕೆ ಏನೂ ಆಗಿರಲಿಲ್ಲ. ಇದರಿಂದ ಆಶ್ಚರ್ಯ ಚಕಿತರಾದರು ಸಂಶೋಧಕರು ಅವರ ಮನೆಯನ್ನು ಅಧ್ಯಯನ ನಡೆಸಿದಾಗ ಅವರ ಮನೆಯಲ್ಲಿ ದಿನ ನಿತ್ಯ 2 ಹೊತ್ತು "ಅಗ್ನಿ ಹೋತ್ರ" ಹೋಮ ಮಾಡುತ್ತಿದ್ದಾರೆಂದು ತಿಳಿಯಿತು. ಇದನ್ನು ತಿಳಿದ ಸಂಶೋಧಕರು ಬೇರೆ ಕಡೆ ರೋಗಿಗಳ ಮೇಲೆ ಪ್ರಯೋಗ ಮಾಡಿದಾಗ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದು ಕಂಡು ಬಂತು.
    H I V ಪೀಡಿತ ಮಕ್ಕಳಿಗಾಗಿ ಮೈಸೂರಲ್ಲಿ ಒಂದು ಶಾಲೆ ಇದೆ. ಇದರ ಸ್ಥಾಪಕರಾದ ರಾಮದಾಸ್ (ಮಾಜಿ ಶಾಸಕರು) ತಮ್ಮ ವಿದ್ಯಾರ್ಥಿಗಳ ಮೇಲೆ ಇದರ ಪ್ರಯೋಗ ಮಾಡಿದರು . ಆಗ ಇಲ್ಲಿನ ಮಕ್ಕಳಲ್ಲೂ ಸಹ ರೋಗ ನಿರೋಧಕ ಶಕ್ತಿ ಹೆಚ್ಚಾಗಿತ್ತು.
    "ಅಗ್ನಿ ಹೋತ್ರ" ದ ವಿಧಾನ ಅಂದರೆ ಸಣ್ಣದಾದ ತಾಮ್ರದ ಹೋಮಕುಂಡಕ್ಕೆ ದನದ ಒಣ ಸಗಣಿ, ದನದ ತುಪ್ಪ ಹಾಕಿ ಅಗ್ನಿ ಸ್ಪರ್ಶ ಮಾಡಬೇಕು. ಇದನ್ನು ಬೆಳಿಗ್ಗೆ ಸೂರ್ಯೋದಯದ ಮೊದಲು, ಸಂಜೆ ಸೂರ್ಯಾಸ್ತದ ನಂತರ ಮಾಡಬೇಕು.
    ಈ ಪೂಜೆ, ಹೋಮ, ಹವನ ಅಂದರೆ ಕೆಲವರಿಗೆ ಅಲರ್ಜಿ. ಆದರೆ ಇಲ್ಲಿ ವೈಜ್ಞಾನಿಕವಾಗಿ ಹೇಳುವುದಾದರೆ ತಾಮ್ರ ಬಿಸಿಯಾದಾಗ ಮತ್ತು ಸಗಣಿ, ತುಪ್ಪ ಸುಟ್ಟಾಗ ಬಿಡುಗಡೆಯಾಗುವ ಅನಿಲ ನಮ್ಮ ದೇಹ ಪ್ರವೇಶಿಸಿದಾಗ ನಮ್ಮ ದೇಹದ ನರಗಳೆಲ್ಲ ಶುದ್ಧವಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ...
    ಅಮಿತ್ ವೈದ್ಯ, ಇವರು ಅಮೇರಿಕಾದಲ್ಲಿ ನೆಲೆ ನಿಂತ ಭಾರತದ ಉದ್ಯಮಿ. ಇವರ ತಂದೆ ತಾಯಿ ಇಬ್ಬರು ಕ್ಯಾನ್ಸರ್ ನಿಂದ ತೀರಿ ಹೋಗುತ್ತಾರೆ. ಕೆಲವು ಸಮಯದಲ್ಲಿ ಅಮಿತ್ ರಿಗೂ ಕ್ಯಾನ್ಸರ್ ಬರುತ್ತದೆ. ವೈದ್ಯರು 6 ತಿಂಗಳ ಕಾಲ ಮಾತ್ರ ಕಾಲಾವಕಾಶ ನೀಡುತ್ತಾರೆ. ತನ್ನ ಕೊನೆಯ ದಿನಗಳನ್ನು ಭಾರತದಲ್ಲಿ ಕಳೆಯಬೇಕೆಂದು ಗುಜರಾತ್ ಗೆ ಬಂದ ಅಮಿತ್, ಒಬ್ಬರ ಪರಿಚಯದ ಮೇಲೆ ಕರ್ನಾಟಕಕ್ಕೆ ಬರುತ್ತಾರೆ. ಇಲ್ಲಿ ಒಂದು ಸಣ್ಣ ಚಿಕಿತ್ಸೆಗೆ ಒಳಪಡುತ್ತಾರೆ. ಕೆಲವೇ ತಿಂಗಳಲ್ಲಿ ಅವರ ಕ್ಯಾನ್ಸರ್ ಮಾಯವಾಗಿಬಿಟ್ಟಿದೆ. ಇಂದು ಬೇರೆಯವರಂತೆ ಆರೋಗ್ಯವಾಗಿ ಬದುಕುತ್ತಿದ್ದಾರೆ. ಅವರ ಮಾಡಿದ ಚಿಕಿತ್ಸೆ ಅಂದರೆ "ಪಂಚಗವ್ಯ ಚಿಕಿತ್ಸೆ".
    ಇದೇ ಚಿಕಿತ್ಸೆ ಅನೇಕ ರೋಗಿಗಳ ಮೇಲೆ ಪ್ರಯೋಗ ಮಾಡಿದಾಗ ಅವರಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಿದೆ. "ಪಂಚಗವ್ಯ" ಅಂದರೆ ಗೋಮೂತ್ರ, ಗೋಸಗಣಿ, ಗೋಹಾಲು, ಗೋತುಪ್ಪ, ಗೋಮೊಸರು ಇವೆಲ್ಲದರ ಮಿಶ್ರಣದಿಂದ ತಯಾರಾಗೋ ಔಷಧಿ.
    ಈ ಚಿಕಿತ್ಸೆಯಿಂದ ಗುಣಮುಖರಾದ ಅಮಿತ್ ವೈದ್ಯ ಅವರು ಒಂದು ಇಂಗ್ಲಿಷ್ ಪುಸ್ತಕ ಬರೆದಿದ್ದಾರೆ. ಅ
    ಪುಸ್ತಕದ ಕನ್ನಡ ಹೆಸರು "ಒಂದು ದನ ನನ್ನ ಜೀವ ಹೇಗೆ ಕಾಪಾಡಿತು" ಎಂದು.
    ದನವನ್ನು ದೇವರೆಂದು ಪೂಜಿಸೋ ಭಾರತೀಯರಾದ ನಮ್ಮಲ್ಲಿ ಎಷ್ಟೋ ಜನಕ್ಕೆ ಇದರ ಮಾಹಿತಿ ಇಲ್ಲ.
    ಎಷ್ಟೋ ಕಾಯಿಲೆಗಳಿಗೆ ಮೀನಿನಿಂದ ಔಷಧ ತಯಾರಿಸುತ್ತಾರೆ. ಮೀನು ತಿನ್ನದವರು ಔಷಧ ಮುಖಾಂತರ ಆದರು ತಿನ್ನಲೆ ಬೇಕು.
    ಹಾಗೆಯೆ ವಿದೇಶಗಳಲ್ಲಿ ದನದ ಮೂತ್ರ, ಸಗಣಿ, ಮಾಂಸದಿಂದ ಔಷಧಿ ತಯಾರಿಸಿ ಭಾರತಕ್ಕೆ ಕಳಿಸುತ್ತಾರೆ.ಅದನ್ನು ನಾವು ತಿನ್ನುತ್ತೇವೆ.
    ನಮ್ಮ ಮನೆಯಲ್ಲಿರುವ ದನದ ಬಗ್ಗೆ ನಮಗೆ ತಾತ್ಸಾರ. ಇವುಗಳನ್ನು ನಾವು ಸರಿಯಾಗಿ ಉಪಯೋಗಿಸಿಕೊಂಡಿದ್ದರೆ ನಾವು ವಿದೇಶಿ ಕಂಪನಿಯವರ ದನದ ಮಾಂಸದ ಔಷಧಿ ತಿನ್ನುವ ಅವಶ್ಯಕತೆ ಇರುತ್ತಿರಲಿಲ್ಲ.
    ದನ ಎಂದು ಚಿನ್ನದ ಮೊಟ್ಟೆ ಇಡುವ ಕೋಳಿ ಇದ್ದ ಹಾಗೆ. ಚಿನ್ನದ ಮೊಟ್ಟೆ ಹಾಗೆ ದನಗಳು ನಮಗೆ ಚಿನ್ನದ ಜೀವನ ನಡೆಸಲು ಬೇಕಾಗುವ ಎಲ್ಲ ಅವಶ್ಯಕತೆಗಳನ್ನು ಕೊಡುತ್ತದೆ. ಆದರೆ ನಾವು ಅತೀ ಆಸೆಯಿಂದ ಕೋಳಿಯ ಹೊಟ್ಟೆ ಸೀಳಿದ ಹಾಗೆ ಧನವನ್ನು ಕಡಿದು ತಿನ್ನುತ್ತೇವೆ. ಇದು ಬೇಕಾ?
    ಮನುಷ್ಯನ ದುರಾಸೆಗೆ ಕೊನೆ ಎಲ್ಲಿ.? ನಮ್ಮ ಮನೆಯಲ್ಲಿಯಲ್ಲಿ ಮೆಡಿಕಲ್ ಸೆಂಟರ್ ಇಟ್ಟುಕೊಂಡು ಕಾಯಿಲೆ ಬಂದಾಗ ಇಡೀ ಪ್ರಪಂಚ ಸುತ್ತುತ್ತೇವೆ.
    ಕ್ಯಾನ್ಸರ್ ನಿಂದ ಹಿಡಿದು ತಲೆನೋವಿನ ತನಕ 5000 ಕಾಯಿಲೆಗಳಿಗೆ ದನದಲ್ಲಿ ಔಷಧಿ ಇದೆ ಅಂದರೆ ನಂಬಲೇಬೇಕು! !!!!!
    ಎಬೋಲಾದಂತಹ ಹೊಸ ಖಾಯಿಲೆ ಇರಲಿ, ಇನ್ನು ಹೊಸದಾಗಿ ಹುಟ್ಟಿ ಯಾವುದೇ ಖಾಯಿಲೆ ಬರಲಿ ಅದಕ್ಕೆ ಗೋವಿನಿಂದ ಔಷಧಿ ಇದೆ.
    ದನದ ಮೂತ್ರದ ಬಗ್ಗೆ ಬಹಳ ಬೇಗ ಎಚ್ಚೆತ್ತ ಅಮೇರಿಕಾ, ಭಾರತದಲ್ಲಿರುವ ಗೋಮೂತ್ರದ ಬಗ್ಗೆ "ಪೇಟೆಂಟ್" ಗೆ ಹೋರಾಟ ನಡೆಸುತ್ತಾರೆಂದರೆ, ನಮಗೆ ಇನ್ನು ಯಾವಾಗ ಬುದ್ಧಿ ಬರುತ್ತದೆ?
    ಪ್ರಪಂಚದ ಮುಂದುವರಿದ ಕೆಲವು ದೇಶಗಳ ಯುನಿವರ್ಸಿಟಿಗಳಲ್ಲಿ ಇದರ ಬಗ್ಗೆ ಒಂದು ವಿಷಯ ಇದೆ ಅಂದರೆ ನೀವು ನಂಬಲೇಬೇಕು.
    ಸ್ವಾತಂತ್ರ್ಯ ಬಂದು 70 ವರ್ಷ ತುಂಬುತ್ತ ಬಂತು. ಇಷ್ಟು ವರ್ಷ ಮಲಗಿದ್ದು ಸಾಕು, ಇನ್ನಾದರು ಎಚ್ಚೆತ್ತು ಕೊಳ್ಳೊಣ.
    ನಮಗಲ್ಲದಿದ್ದರು ನಮ್ಮ ಪೀಳಿಗೆಗಾದರೂ ಒಳ್ಳೆಯದಾಗಲಿ. ಮುಂದಿನ ಜನಾಂಗವಾದರೂ ಆರೋಗ್ಯವಂತ ಸಮಾಜವಾಗಲೀ.....
    10 min
  • ದೇಶಭಕ್ತ, ಸ್ವಾಭಿಮಾನಿ ಸಾವರ್ಕರ್ ಜನ್ಮದಿನದ ಶುಭಾಶಯಗಳು
    *ದೇಶಭಕ್ತ, ಸ್ವಾಭಿಮಾನಿ ಸಾವರ್ಕರ್ ಜನ್ಮದಿನದ ಶುಭಾಶಯಗಳು*
    ಸಾವರ್ಕರ್ ಎಂದರೆ ಕಿಚ್ಚು, ಸಾವರ್ಕರ್ ಎಂದರೆ ಆತ್ಮಾಭಿಮಾನ, ಸಾವರ್ಕರ್ ಎಂದರೆ ದೇಶಭಕ್ತಿ, ಸಾವರ್ಕರ್ ಎಂದರೆ ಸಮರ್ಪಣೆ. ಆದರ್ಶ, ನಿಷ್ಠೆ, ಸಾಹಸ, ಪರಾಕ್ರಮ, ಸಂಯಮ, ಸಹನಶೀಲತೆ, ಆತ್ಮವಿಶ್ವಾಸ, ಛಲ, ಜಾಣ್ಮೆ, ವಿವೇಕ, ನೇತೃತ್ವ, ಆತ್ಮಾರ್ಪಣೆ ಅವೆಲ್ಲದರ ಸಂಗಮವೇ ವಿನಾಯಕ ದಾಮೋದರ ಸಾವರ್ಕರ್.
    ಈ ಸಾವರ್ಕರ್ ಅಂದರೆ ಯಾರು?
    [Ramaraja kshatriya 2.0]
    ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ದಿಟ್ಟ ಸವಾಲಾಗಿ ನಿಂತು ಬೆಳಗಿದ, ರಾಷ್ಟ್ರಕ್ಕಾಗಿ ತಮ್ಮ ಬದುಕನ್ನು, ತಮ್ಮ ಇಡೀ ಕುಟುಂಬವನ್ನು ಸಮರ್ಪಿಸಿದ, ತಮ್ಮ ಹೆಸರು ಕೇಳಿದರೇ ಬ್ರಿಟಿಷರ ಎದೆ ನಡುಗುವಂತೆ ಮಾಡಿದ, ಮತ್ತು ಆ ಕಾರಣಕ್ಕಾಗಿಯೇ ವಿಶ್ವದ ಇತಿಹಾಸದಲ್ಲೇ ಮೊದಲ ಬಾರಿ 50 ವರ್ಷಗಳ ಘೋರ ಕರಿನೀರಿನ ಶಿಕ್ಷೆಗೆ ಒಳಗಾದ ಈ ದೇಶದ ಒಬ್ಬ ಮಹಾನ್ ಕ್ರಾಂತಿಕಾರಿಯನ್ನು, ಅಪ್ರತಿಮ ದೇಶಭಕ್ತನನ್ನು ಸ್ವಾತಂತ್ರ್ಯ ಬಂದ ಕೇವಲ 50 ವರ್ಷಗಳಲ್ಲಿ ಮರೆತುಬಿಟ್ಟೆವೆಂದರೆ ಅದಕ್ಕಿಂತ, ನೋವಿನ ಸಂಗತಿ ಬೇರೇನಿದ್ದೀತು? ತಮ್ಮ ಕೋಟ್‌ಗೆ ಕೆಂಪು ಗುಲಾಬಿ ಹೂವು ಸಿಕ್ಕಿಸಿಕೊಂಡು ಅದು ಒಂದು ಚೂರೂ ಬಾಡದಂತೆ ಬಹಳ ಎಚ್ಚರಿಕೆಯಿಂದ 'ಸ್ವಾತಂತ್ರ್ಯ ಹೋರಾಟ' ಮಾಡಿದ ಈ ದೇಶದ ಮಹಾನ್ ನಾಯಕ ಪಂಡಿತ್ ಜವಹರಲಾಲ್ ನೆಹರು ಅಲಿಯಾಸ್ ಚಾಚಾ ನೆಹರು, ಮತ್ತವರ ಕುಟುಂಬದ ಬಗ್ಗೆ ಹೇಳಿದ ಶೇಕಡಾ 10 ರಷ್ಟನ್ನಾದರೂ ಸಾವರ್ಕರ್ ಕುರಿತು ಹೇಳಿದ್ದರೆ ದೇಶದ ಬಗ್ಗೆ ನಾವಿಷ್ಟು ನಿರಭಿಮಾನಿಗಳೂ, ನಿರ್ವೀಯರೂ, ವಿದೇಶಿ ಚಿಂತನೆಗಳ ಆರಾಧಕರೂ ಆಗಿರುತ್ತಿರಲಿಲ್ಲವೇನೋ.
    24/12/1910 ರಿಂದ 23/12/1960, ವಿದೇಶಕ್ಕೆ ತೆರಳಿ ಕ್ರಾಂತಿ ಕಾರ್ಯ ಸಂಘಟಿಸಿದ, ದೇಶಭಕ್ತಿ ಪ್ರದರ್ಶಿಸಿದ ಮಹಾಪರಾಧಕ್ಕಾಗಿ ವಿನಾಯಕ ದಾಮೋದರ ಸಾವರ್ಕರ್ ಅವರಿಗೆ 50 ವರ್ಷಗಳ ಕರಿನೀರಿನ ಶಿಕ್ಷೆ. ಅವತ್ತಿನ ಮಟ್ಟಿಗೆ ಕರಿನೀರಿನ ಶಿಕ್ಷೆ ಎಂದರೆ ಅದು ಸಾವಿನ ಮನೆ ಅಂತಲೇ ಅರ್ಥ. ಹೊರಗಿನ ಯಾರ ಸಂಪರ್ಕವೂ ಇಲ್ಲದ, ದೇಶದಿಂದ ಬಹುದೂರದ ಅಂಡಮಾನಿನ ಆ ಕ್ರೂರ ಜೈಲಿನಿಂದ ಮರಳಿ ಬರುವ ನಂಬಿಕೆಯೇ ಇರಲಿಲ್ಲ. ಅದೂ 50 ವರ್ಷಗಳು !. ಎದೆ ಬಿರಿಯುವ ಶಿಕ್ಷೆ ಕೇಳಿದಾಗಲೂ ಅವರು ವಿಚಲಿತರಾಗಲಿಲ್ಲ. ಈ ಸಮುದ್ರ ಈಜಿದ ಸಾಹಸಿಯನ್ನು ಅಣಕಿಸಲೆಂದೇ ಅಲ್ಲಿನ ಜೈಲರ್ 'ಹೆದರಬೇಡಿ ಬ್ಯಾರಿಸ್ಟರ್ ಸಾಹೇಬರೇ, 1960 ರಲ್ಲಿ ನಮ್ಮ ಪರಮ ಕೃಪಾಳು ಸರ್ಕಾರ ಖಂಡಿತಾ ನಿಮ್ಮನ್ನು ಬಿಡುಗಡೆ ಮಾಡುತ್ತದೆ' ಎಂದಾಗ ಸಾವರ್ಕರ್ ಜೋರಾಗಿ ನಕ್ಕು '50 ವರ್ಷಗಳ ಕಾಲ ನಿಮ್ಮ ಸರ್ಕಾರ ಇದ್ದರೆ ತಾನೇ ?' ಎಂದು ಮರುಪ್ರಶ್ನಿಸಿ ಗತ್ತಿನಿಂದಲೇ ನಡೆದಿದ್ದರು.
    ದೇಶಭಕ್ತಿಯ ಅಪರಾಧಕ್ಕಾಗಿ ಭಾರತೀಯ ಮಹಾವಿದ್ಯಾಲಯವೊಂದರ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊಟ್ಟಮೊದಲ ವಿದ್ಯಾರ್ಥಿ ಸಾವರ್ಕರ್. ಭಾರತದಲ್ಲಿ ವಿದೇಶಿ ಬಟ್ಟೆಗಳಿಗೆ ಬೆಂಕಿಯಿಟ್ಟು ಹೋಳಿ ಆಚರಿಸಿದ ಮೊಟ್ಟಮೊದಲ ಸ್ವದೇಶಾಭಿಮಾನಿ ಸಾವರ್ಕರ್. ದಾಸ್ಯರಕ್ಕಸನ ಎದೆ ಮೆಟ್ಟಲು ಮುಂದಾಗಿದ್ದಕ್ಕೆ ತಾನು ಗಳಿಸಿದ್ದ ಬಿ.ಎ. ಪದವಿಯನ್ನೇ ಕಳೆದುಕೊಂಡ ಮೊಟ್ಟಮೊದಲ ಭಾರತೀಯ ಪದವೀಧರ, ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ ಬ್ರಿಟಿಷರಿಂದ 'ಬ್ಯಾರಿಸ್ಟರ್ ಪದವಿ'ಯನ್ನೇ ನಿರಾಕರಿಸಲ್ಪಟ್ಟ ಮೊಟ್ಟ ಮೊದಲ ಬ್ಯಾರಿಸ್ಟರ್, ಪ್ರಕಟಣೆಗೆ ಮೊದಲೇ ಎರಡು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ಗ್ರಂಥ ರಚಿಸಿದ ಜಗತ್ತಿನ ಮೊಟ್ಟಮೊದಲ ಲೇಖಕ ಸಾವರ್ಕರ್. 'ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ' ಎಂದು ಘೋಷಿಸಿದ ಮೊಟ್ಟಮೊದಲ ರಾಜಕೀಯ ಮುಂದಾಳು, ಜಗತ್ತಿನ ರಾಜಕೀಯ ಇತಿಹಾಸದಲ್ಲೇ ಹೇಗ್ ಅಂತರರಾಷ್ಟ್ರೀಯ ನ್ಯಾಯಾಲಯದೆದುರು ತನ್ನ ಬಗ್ಗೆ ಮೊಕದ್ದಮೆ ನಡೆಯುವಂತೆ ಮಾಡಿದ ಮೊದಲ ರಾಜಕೀಯ ಖೈದಿ ಸಾವರ್ಕರ್.
    ವಿಶ್ವದ ಚರಿತ್ರೆಯಲ್ಲಿ 50 ವರ್ಷಗಳ ಕರಿನೀರಿನ ಶಿಕ್ಷೆಗೆ ಗುರಿಯಾದ ಮೊಟ್ಟ ಮೊದಲ ಸ್ವಾತಂತ್ರ್ಯ ಸೇನಾನಿ ಸಾವರ್ಕರ್. ಅಹಿಂಸೆಯ ಹೆಸರಲ್ಲಿ ಬ್ರಿಟಿಷರ ಕಾಲಿಗೆ ಬಿದ್ದು ಬಿದ್ದು ಆತ್ಮಾಭಿಮಾನವನ್ನೇ ಕಳೆದುಕೊಂಡಿದ್ದವರ ಮಧ್ಯೆ ಇಂಗ್ಲೆಂಡಿಗೇ ತೆರಳಿ ಬ್ರಿಟಿಷರ ಎದೆನಡುಗುವಂತೆ ಕ್ರಾಂತಿಕಾರ್ಯ ಸಂಘಟಿಸಿ ನೂರಾರು ತರುಣ ದೇಶಭಕ್ತರ ಪಡೆ ರಚಿಸಿದ ಮೊದಲ ಕ್ರಾಂತಿಕಾರಿ ಸಾವರ್ಕರ್. ಸತತ 11 ಬಾರಿ ಕಠಿಣ ಸೆರೆವಾಸಕ್ಕೆ ಗುರಿಯಾದ ಅದ್ವಿತೀಯ ಸೇನಾನಿ ಸಾವರ್ಕರ್. ದುರಂತವೆಂದರೆ ಸ್ವಾತಂತ್ರ್ಯಬಂದಮೇಲೂ ಭಾರತ ಸರ್ಕಾರದಿಂದಲೇ ಬಂಧನಕ್ಕೆ ಒಳಗಾದ, ಇಲ್ಲಿನ ವ್ಯವಸ್ಥೆಗೆ ನೊಂದು 21 ದಿನಗಳ ಉಪವಾಸದ ಮೂಲಕ ಪ್ರಾಯೋಪವೇಶ ಮಾಡಿ ಆತ್ಮಾರ್ಪಣೆಗೈದ ಮೊದಲ ಚೇತನ ಸಾವರ್ಕರ್.
    ಬಾಲ್ಯದಲ್ಲಿಯೇ ತಂದೆ-ತಾಯಿಯರನ್ನು ಕಳೆದುಕೊಂಡ ಸಾವರ್ಕರ್ ಓರಗೆಯ ಮಕ್ಕಳೆಲ್ಲ ಆಟದಲ್ಲಿ ಮೈಮರೆತು ಕಾಲ ನೂಕುತ್ತಿದ್ದಾಗ ತಾವು ಮಾತ್ರಫಡ್ಕೆ, ಚಾಫೇಕರ್, ಶಿವಾಜಿಯಂತಹ ಧೀರರ ಕಥೆಗಳನ್ನು ಕೇಳಿ ರೋಮಾಂಚಿತಗೊಂಡು ತಾಯಿಯ ದಾಸ್ಯ ಮುಕ್ತಿಗಾಗಿ ಯೋಚನೆಗೆ ತೊಡಗಿದ್ದರು. ಹನ್ನೆರಡು- ಹದಿಮೂರನೆಯ ವಯಸ್ಸಿನಲ್ಲೇ ದೇಶ-ದಾಸ್ಯ-ಬಲಿದಾನದ ಹೆಸರನ್ನೇ ಕೇಳಿರದಿದ್ದಜನರನ್ನು ಒಟ್ಟುಗೂಡಿಸಿ 'ಮಿತ್ರ ಮೇಳ' ಕಟ್ಟಿದ ಸಾವರ್ಕರ್ ಮುಂದೆ ಅದನ್ನೇ 'ಅಭಿನವ ಭಾರತ' ಎಂಬ ಕ್ರಾಂತಿಕಾರಿಗಳ ಪಾಠಶಾಲೆಯನ್ನಾಗಿಸಿದರು. ಮುಂದೆ ಬ್ರಿಟಿಷರ ನೆಲದಲ್ಲಿಯೇ ಅವರನ್ನು ಬಗ್ಗು ಬಡಿಯಬೇಕೆಂಬ ಸಂಕಲ್ಪದಿಂದ ಇಂಗ್ಲೆಂಡಿಗೆ ತೆರಳಿ ಅಲ್ಲಿ ಇಂಗ್ಲೀ?ರಿಗೆ ಮಾನಸಿಕವಾಗಿ ತಮ್ಮನ್ನು ಮಾರಿಕೊಳ್ಳುತ್ತಿದ್ದಭಾರತೀಯನ್ನು ಬಡಿದೆಬ್ಬಿಸಿ ಕ್ರಾಂತಿಕಾರ್ಯಕ್ಕೆ ಮುನ್ನುಡಿ ಬರೆದರು. ಅವರ ಕಾರ್ಯದಿಂದ ಪ್ರೇರೇಪಣೆಗೊಂಡ 'ಮದನಲಾಲ್ ಧೀಂಗ್ರ' ದಾಸ್ಯ ರಕ್ಕಸನಎದೆ ಮೆಟ್ಟಿ ವಿದೇಶಿ ನೆಲದ ಮೊದಲ ಬಲಿದಾನಿಯಾಗಿ ಇತಿಹಾಸ ಸೃಷ್ಟಿಸಿದ.
    ಸಾವರ್ಕರ್ ಸದನ್, ದಾದರ್, ಮುಂಬಯಿ
    1857 ರ ಸಂಗ್ರಾಮವನ್ನು 'ಸಿಪಾಯಿದಂಗೆ' ಎಂದೇ ಕರೆದಿದ್ದ ಬ್ರಿಟಿಷರಿಗೆ ಸವಾಲಾಗಿ ನಿಂತು ಅದು 'ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ' ಎಂದು ನಿರೂಪಿಸುವ ಪುಸ್ತಕ ಬರೆದ ಸಾವರ್ಕರ್ ಆ ಮೂಲಕ ಭಗತ್ ಸಿಂಗ್, ಆಜಾದ್, ನೇತಾಜಿಯಂತಹ ಈ ದೇಶದ ಮಹಾನ್ ನಾಯಕರುಗಳಿಗೆ ಪ್ರೇರಣೆ ನೀಡಿದರು.
    ಸಾವರ್ಕರ್ ಸದನ್, ದಾದರ್, ಮುಂಬಯಿ
    1857 ರ ಸಂಗ್ರಾಮವನ್ನು 'ಸಿಪಾಯಿದಂಗೆ' ಎಂದೇ ಕರೆದಿದ್ದ ಬ್ರಿಟಿಷರ
    11 min
  • ಶ್ರೀಚಕ್ರ ಯಂತ್ರಗಳಲ್ಲೇ ಅತ್ಯಂತ ಶ್ರೇಷ್ಠ ಅಂದರೆ ಶ್ರೀಚಕ್ರ ,.
    ಶ್ರೀಚಕ್ರ
    ಯಂತ್ರಗಳಲ್ಲೇ ಅತ್ಯಂತ ಶ್ರೇಷ್ಠ ಅಂದರೆ ಶ್ರೀಚಕ್ರ ,. ಅದಕ್ಕೆ ಶ್ರೀ ಶಂಕರಾಚಾರ್ಯರು ಆನಂದ ಲಹರಿಯಲ್ಲಿ ಈ ರೀತಿಯಾಗಿ ದೇವಿಯನ್ನು ವರ್ಣಿಸಿದ್ದಾರೆ..
    चतुर्थिः श्री कण्ठेः, शिवयुवतिभिः पंच भिरपि। प्रभिन्नाभिः शम्भोर्नवभिरपि मूल प्रकृतिभिः!त्रयश्चत्वारिशद्बसुदल कलाब्जत्रिविलय। त्रिरेखाभिः साधेः तव मव कोणः परिणताः !!
    ಮೊಟ್ಟ ಮೊದಲು ಶಂಕರಾಚಾರ್ಯರು ಶ್ರೀ ಚಕ್ರ ವನ್ನು ಸ್ಥಾಪನೆ ಮಾಡಿದ್ದು ಮಧುರೈ ಮೀನಾಕ್ಷೀ ದೇವಸ್ಥಾನದಲ್ಲಿ.
    ಕಾಳಿ ಸ್ವರೂಪದಲ್ಲಿದ್ದ ದೇವಿಯನ್ನು ತಮ್ಮ ಸ್ತೋತ್ರ ಗಳಿಂದ ಸಂಪನ್ನಗೊಳಿಸಿದರು , ಆ ಕಾಳಿ ಸ್ವರೂಪದಲ್ಲಿದ್ದ ಮಧುರೆ ಮೀನಾಕ್ಷೀ ದೇವಿಯನ್ನು ಬಾಲಕ ಸಾಕ್ಷಾತ್ ಪರಮೇಶ್ವರನ ಸ್ವರೂಪ ಶಂಕರಾಚಾರ್ಯರು ಪಗಡೆ ಆಟದ ನೆಪದಲ್ಲಿ ಮಂತ್ರಶಕ್ತಿಯಿಂದ ಗೆರೆಗಳನ್ನು ಎಳೆದು ದೇವಿಯನ್ನು ಅದರಲ್ಲಿ ಬಂಧಸಿದ್ದರು.
    ಕಾಳಿ ಸ್ವರೂಪದಲ್ಲಿದ್ದ ಮಧುರೈ ಮೀನಾಕ್ಷಿಗೆ ತಾನು ಗೆರೆಗಳ ಮಧ್ಯೆ ಬಂಧನವಾಗಿದ್ದು ಅರಿವಿಗೆ ಬಂದಾಗ ಈತ ಸಾಧಾರಣ ಬಾಲಕನಲ್ಲ ಅಂತ ತಿಳಿದು, ತನ್ನನ್ನ ಬಂಧನದಿಂದ ಮುಕ್ತಗೊಳಿಸು ಅಂತ ಕೇಳಿಕೊಳ್ಳುತ್ತಾಳೆ.
    ಆಗ ಶಂಕರಾಚಾರ್ಯರು ನೀನು ಕಾಳಿ ಸ್ವರೂಪ ಬಿಟ್ಟು ಮಾತೃ ಸ್ವರೂಪಕ್ಕೆ ಬಂದರೆ ಮಾತ್ರ ಬಂಧನದಿಂದ ಮುಕ್ತಿಗಳಿಸುವೆ ಅಂತ ಸವಾಲು ಹಾಕಿದಾಗ ಆ ಮುಗ್ದ ಬಾಲಕನ ಮಂತ್ರ ಶಕ್ತಿಗೆ ತಲೆ ಬಾಗಿ ಮಾತೃ ಸ್ವರೂಪವನ್ನು ಪಡೆಯುತ್ತಾಳೆ... ಇವತ್ತಿಗೂ ನೋಡಿ ಮಧುರೆ ಮೀನಾಕ್ಷೀ ಮಧುರವಾಗಿ ನಗುವ ಮುಖದಲ್ಲಿ ಮಾತೃಸ್ವರೂಪದಲ್ಲೇ ಇದ್ದಾಳೆ.... ಈ ರೀತಿಯಾಗಿ ಎಲ್ಲಿ ಎಲ್ಲಿ ಶಕ್ತಿ ಕ್ಷೇತ್ರಗಳಿವೆಯೋ ಅಲ್ಲಲ್ಲಿ ಶಂಕರಾಚಾರ್ಯರು ಶ್ರೀ ಚಕ್ರವನ್ನು ಸ್ಥಾಪನೆ ಮಾಡಿದ್ದಾರೆ.
    ಶ್ರೀ ಚಕ್ರ ಅಂದರೆ ಅದೊಂದು ಮಂಡಲ ಮಂಡಲದ ಮದ್ಯೆ ಶ್ರೀ . ಶ್ರೀ ಅಂದರೆ ಸಾಕ್ಷಾತ್ ಪರಮೇಶ್ವರಿಯ ವಾಸ. ಅಂದರೆ ನವ ತ್ರಿಕೋಣ ಒಂಬತ್ತು ತ್ರಿಕೋಣದ ಮದ್ಯೆ ಬಿಂದು . ನವಶಕ್ತಿ ಸ್ವರೂಪಳಾದ ದೇವಿ ಅದರ ಮದ್ಧ್ಯದಲ್ಲಿ ವಾಸ ಅದಕ್ಕೆ ದೇವಿಯನ್ನು ಶ್ರೀ ಚಕ್ರಾಂತರ ವಾಸಿನಿ ಅಂತ ವರ್ಣಿಸುತ್ತಾರೆ.‌
    ಈ ಯಂತ್ರದ. ಮೇಲ್ಮುಖ ಅಗ್ನಿ ತತ್ವವನ್ನು ಹೊಂದಿದ್ದರೆ , ಅದರ ಸೂತ್ತಲೂ ಇರುವ ವೃತ್ತ ವಾಯುತತ್ವವನ್ನು ಹೊಂದಿದೆ..ಮದ್ಯದ ಬಿಂದು ಜಲತತ್ವ , ಮತ್ತು ಅದರ ತಳ ಭೂತತ್ವವನ್ನು ಹೊಂದಿದೆ.
    ಸ್ಪಟಿಕದ ಶ್ರೀಚಕ್ರ ಯಂತ್ರ ಶ್ರೇಷ್ಠ , ನಂತರ ಬೆಳ್ಳಿ , ತಾಮ್ರ.
    ಶುಕ್ರವಾರ , ರವಿವಾರ ಮತ್ತು ಹುಣ್ಣಿಮೆ ದಿನ ಶ್ರೀ ಚಕ್ರ ಪೂಜೆ ಅತ್ಯಂತ ಫಲದಾಯಕ
    ಯಾರ ಮನೆಯಲ್ಲಿ ನಿತ್ಯ ಶ್ರೀ ಚಕ್ರ ಪೂಜೆ ನಡೆಯುತ್ತದೆಯೋ ಅಲ್ಲಿ ಸಾಕ್ಷಾತ್ ಪರಮೇಶ್ವರಿಯೇ ವಾಸವಿರುತ್ತಾಳೆ. ಅವರಿಗೆ ದಾರಿದ್ರ್ಯ ಬರುವದಿಲ್ಲ. ಅಲ್ಲಿ ಶಾಂತಿ ನೆಲೆಸಿರುತ್ತದೆ.
    ಯಾಕೆಂದರೆ ದೇವಿಯನ್ನ ಶಾಂತಿ ಸ್ವರೂದಲ್ಲಿ ತಂದದ್ದೇ ಶ್ರೀ ಚಕ್ರದಲ್ಲಿ.
    ಯಾರ ಮನೆಯಲ್ಲಿ ಶ್ರೀ ಚಕ್ರ ಪೂಜೆ ನಡೆಯುತ್ತದೆಯೋ ಅಲ್ಲಿ ಸಂಪತ್ತಿಗೆ ಕೊರತೆ ಇರುವದಿಲ್ಲ .
    ಪ್ರತಿ ಶುಕ್ರವಾರ ಲಲಿತಾ ಅಷ್ಟೋತ್ತರ ಸಹಿತ ಕುಂಕುಮಾರ್ಚನೆ ಮಾಡಿದರೆ ಇಷ್ಟಾರ್ಥವೆಲ್ಲ ಸಿದ್ಧಿಸುತ್ತದೆ.
    ಶ್ರೀ ಚಕ್ರದ ಆರಾಧನೆ ನಡೆಯುವಲ್ಲಿ ಯಾವದೇ ತರಹದ ಮಾಟ ಮಂತ್ರ ದುಷ್ಟ ಶಕ್ತಿಗಳ ಕಾಟ ನಡೆಯುವದಿಲ್ಲ .
    ಆರೋಗ್ಯ ದೃಷ್ಟಿಯಿಂದಲೂ ಶ್ರೀಚಕ್ರ ಪೂಜೆ ಬಹಳ ಒಳ್ಳೆಯದು.
    ಶ್ರೀ ಚಕ್ರವನ್ನು ಖರಿದಿಸುವಾಗ ನೋಡಿ ಮೂಲೆಗಳು ಸ್ಪಷ್ಟತೆಯಿಂದ ಕೂಡಿರಬೇಕು. ಗೆರೆಗಳು ಅಂಕಡೊಂಕಾಗಿರಬಾದು.
    ಶ್ರೀಚಕ್ರದ ಸುತ್ತಲೂ ಎಂಟು ದಳದ ಕಮಲ ಇರಬೇಕು ನಂತರ ಹೊರಗಡೆ ಹದಿನಾರು ದಳದ ಕಮಲವಿರಬೇಕು..‌
    ಹೊಸದಾಗಿ ತಂದ ಶ್ರೀ ಚಕ್ರವನ್ನು ಯಾವುದಾದರೂ ದೇವಿ ದೇವಸ್ಥಾನದಲ್ಲಿ ಅಭಿಷೇಕ ಪೂಜೆ ಮಾಡಿಸಿ ನಂತರ ಮನೆಯಲ್ಲಿ ಇಟ್ಟು ಪೂಜಿಸಬೇಕು..
    ಕೃಷ್ಣಾರ್ಪಣಮಸ್ತು ಉಬ್
    (ಸತ್ಸಂಗ ಸಂಗ್ರಹ)🙏🙏🚩🚩🚩
    5 min
  • ಸತ್ತ್ವ, ರಜ ಮತ್ತು ತಮ ಎಂದರೇನು ?*
    ಇಂದಿನ ವಿಜ್ಞಾನದ ಪ್ರಕಾರ, ಬ್ರಹ್ಮಾಂಡದ ನಿರ್ಮಿತಿಯು ಎಲೆಕ್ಟ್ರಾನ್, ನ್ಯೂಟ್ರಾನ್, ಪ್ರೋಟಾನ್, ಮೆಸೋನ್, ಗ್ಲೂಆನ್, ಕ್ವಾರ್ಕ್ಸ್‌ನಂತಹ ಅತಿ ಸಣ್ಣ ಸ್ಥೂಲ ಕಣಗಳಿಂದ ಆಗಿದೆ.
    ಆದರೆ ಅಧ್ಯಾತ್ಮಶಾಸ್ತ್ರದಿಂದ ಬ್ರಹ್ಮಾಂಡದ ನಿರ್ಮಿತಿಯು ಅತಿ ಸೂಕ್ಷ್ಮ ಕಣಗಳಿಂದ ಆಗಿದೆ ಎಂದು ತಿಳಿದುಬರುತ್ತದೆ. ಈ ಅತಿ ಸೂಕ್ಷ್ಮ ಕಣಗಳು ಎಂದರೆ ‘ತ್ರಿಗುಣಗಳು’. ‘ತ್ರಿಗುಣ’ ಶಬ್ದದ ವ್ಯುತ್ಪತ್ತಿಯು ಸಂಸ್ಕೃತ ಶಬ್ದ ‘ತ್ರಿ’ (ಎಂದರೆ ಮೂರು) ಮತ್ತು ‘ಗುಣ’ (ಎಂದರೆ ‘ಸೂಕ್ಷ್ಮ ಕಣಗಳು’) ಇವುಗಳಿಂದ ಆಗಿದೆ. ‘ಸತ್ತ್ವ’, ‘ರಜ’ ಮತ್ತು ‘ತಮ’ ಇವುಗಳು ತ್ರಿಗುಣಗಳು.
    ‘ಸತ್ತ್ವ’ ಗುಣವು ರಜ ಮತ್ತು ತಮ ಗುಣಗಳ ತುಲನೆಯಲ್ಲಿ ಅತಿ ಸೂಕ್ಷ್ಮವಾಗಿದೆ. ದೇವತ್ವಕ್ಕೆ ಅತಿ ಹತ್ತಿರವಾದ ಗುಣವೂ ಹೌದು. ಸತ್ತ್ವ ಗುಣವು ಹೆಚ್ಚಿನ ಪ್ರಮಾಣದಲ್ಲಿರುವವರಲ್ಲಿ ಮುಂದಿನ ಲಕ್ಷಣಗಳು ಕಂಡುಬರುತ್ತವೆ – ತಾಳ್ಮೆ, ಸಾತತ್ಯ, ಕ್ಷಮಿಸುವ ವೃತ್ತಿ, ಜಿಜ್ಞಾಸೆ ಇತ್ಯಾದಿ.
    ‘ತಮೋ’ ಗುಣವು ಉಳಿದೆರಡು ಗುಣಗಳು ತುಲನೆಯಲ್ಲಿ ಕನಿಷ್ಠ ಮಟ್ಟದ್ದಾಗಿದೆ. ತಮೋ ಗುಣಿ ಮನುಷ್ಯನಲ್ಲಿ ಆಲಸ್ಯ, ಅತಿಯಾಸೆ, ಭೌತಿಕ ವಿಷಯಗಳ ಆಸಕ್ತಿ ಇತ್ಯಾದಿಗಳು ಕಂಡುಬರುತ್ತವೆ.
    ‘ರಜೋ’ ಗುಣವು ಸತ್ತ್ವ ಮತ್ತು ತಮೋ ಗುಣಗಳಿಗೆ ಕ್ರಿಯಾ ಶಕ್ತಿಯನ್ನು ಪ್ರದಾನಿಸುತ್ತದೆ. ಅಂದರೆ ಸತ್ತ್ವ ಗುಣ ಪ್ರಧಾನವಾಗಿರುವವರಲ್ಲಿ ಸಾತ್ತ್ವಿಕ ಕೃತಿಗಳನ್ನು ಮತ್ತು ತಮೋ ಗುಣ ಪ್ರಧಾನವಾಗಿರುವವರಲ್ಲಿ ತಾಮಸಿಕ ಕೃತ್ಯಗಳನ್ನು ಮಾಡುವ ಶಕ್ತಿಯು ಸೂಕ್ಷ್ಮ ‘ರಜೋ’ ಗುಣದಿಂದ ದೊರೆಯುತ್ತದೆ.
    ಸತ್ತ್ವ, ರಜ ಮತ್ತು ತಮೋ ಗುಣಗಳು ಅತಿ ಸೂಕ್ಷ್ಮವಾಗಿವೆ. ಆದುದರಿಂದ ವಿಜ್ಞಾನವನ್ನು ಕಲಿಸುವ, ಕಲಿಯುವ ಶಾಲೆ ಮತ್ತು ಮಹಾವಿದ್ಯಾಲಯಗಳಲ್ಲಿ ಇವುಗಳನ್ನು ಅಧ್ಯಯನ ಮಾಡುವ ವಿಧಾನಗಳು ಇಲ್ಲದೆ, ವಿಜ್ಞಾನಿಗಳಿಗೆ ಈ ಸೂಕ್ಷ್ಮ ಕಣಗಳ ಬಗ್ಗೆ ಮಾಹಿತಿಯೂ ಇರುವುದಿಲ್ಲ. ಶಾಲೆಯ ಪಠ್ಯಕ್ರಮದಲ್ಲಿ ಬಾರದ ಈ ವಿಷಯಗಳು ನಮ್ಮಲ್ಲಿ ಕೆಲವರಿಗೆ ವಿಚಿತ್ರವೆನಿಸಬಹುದು. ಆದರೆ ಈ ಸೂಕ್ಷ್ಮ ಕಣಗಳು, ನಮ್ಮನ್ನು ಮತ್ತು ನಾವು ಜೀವಿಸುತ್ತಿರುವ ಸೃಷ್ಟಿಯನ್ನು ಆಧರಿಸುತ್ತಿವೆ ಎಂಬುವುದು ಸತ್ಯ. ನಮ್ಮಲ್ಲಿ ಯಾವ ಸೂಕ್ಷ್ಮ ಗುಣದ ಪ್ರಮಾಣ ಅಧಿಕವಿದೆ ಎಂಬುವುದು
    ನಾವು ಪ್ರಸಂಗಗಳನ್ನು ಎದುರಿಸುವ ಬಗೆ
    ನಾವು ತೆಗೆದುಕೊಳ್ಳುವ ನಿರ್ಧಾರಗಳು
    ನಮ್ಮ ಆಯ್ಕೆಗಳು
    ನಮ್ಮ ಜೀವನ ಶೈಲಿ
    ಮುಂತಾದವುಗಳನ್ನು ನಿರ್ಧರಿಸುತ್ತದೆ.
    ಈ ಕಣಗಳು ಸ್ಥೂಲ ರೂಪದಲ್ಲಿ ಇರದಿರುವುದರಿಂದ, ಅವುಗಳಿಗೆ ಸ್ಥೂಲ ಗುಣ ಲಕ್ಷಣಗಳನ್ನು ನೀಡುವುದು ಕಷ್ಟ...🙏🏻🚩
    3 min

About Dr Balakrishna Maddodi

From the publisher's feed

Hi