Sign up to save your podcasts
Or

ಸದ್ಗುರುಗಳ ಈ ಕಣ್ಣು ತೆರೆಸುವ ಪಾಡ್‌ಕಾಸ್ಟ್‌ಗಳೊಂದಿಗೆ ಪ್ರಜ್ಞಾವಂತ ಪೋಷಣೆಯ ಕಲೆಯನ್ನು ಕಲಿಯಿರಿ. ಇವು ಮಕ್ಕಳ ಏಳಿಗೆಗಾಗಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು, ಕ್ರಿಯಾಶೀಲ ಸಲಹೆ ಮತ್ತು ಹೃದಯಸ್ಪರ್ಶಿ ವಿವೇಕವನ್ನು ಒಳಗೊಂಡಿವೆ.
ಹದಿಹರೆಯದ ಮಕ್ಕಳು ತಮ್ಮ ಮಾತನ್ನೇ ಕೇಳುವುದಿಲ್ಲ, ವಾದ ಮಾಡುತ್ತಾರೆ, ಜಗಳವಾಡುತ್ತಾರೆ, ಎಂದು ಪೋಷಕರು ಹೇಳುವುದನ್ನು ಕೇಳಿರುತ್ತೀರಿ. ಅಥವಾ ನೀವೇ ಹದಿಹರೆಯದ ಮಕ್ಕಳ ಪೋಷಕರಾಗಿದ್ದರೆ, ಇದು ನಿಮ್ಮ ಅನುಭವಕ್ಕೂ ಬಂದಿರುತ್ತದೆ? ಅವರು ಏಕೆ ಹಾಗೆ ಮಾಡುತ್ತಾರೆ? ಈ ಘರ್ಷಣೆಯ ಹಿಂದಿನ ಕಾರಣ ಏನು? ವಿಡಿಯೊ ನೋಡಿ.
ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ.
See omnystudio.com/listener for privacy information.
Learn more about your ad choices. Visit megaphone.fm/adchoices
ಮಗುವಿಗೆ ಬೇಕಾಗಿರುವುದು ಒಬ್ಬ ಸ್ನೇಹಿತ, ಬಾಸ್ ಅಲ್ಲ ಎಂಬ ವಿಷಯವನ್ನು ಇಲ್ಲಿ ಸದ್ಗುರುಗಳು ವಿವರಿಸುತ್ತಾರೆ. ನಿಮ್ಮ ಉಪದೇಶಗಳನ್ನು ಅವರ ಮೇಲೆ ಬಲವಂತವಾಗಿ ಹೇರಿದರೆ, ಅವರು ಸ್ವಾತಂತ್ರ್ಯದ ಭಾವನೆಯನ್ನು ಕಳೆದುಕೊಳ್ಳುತ್ತಾರೆ, ಮತ್ತು ಇದರಿಂದ ಅವರು ಮುಂದೆ ನಿಮ್ಮ ಮೇಲೆ ತಿರುಗಿ ಬೀಳಬಹುದಾದ ಸಂಭವನೀಯತೆ ಉಂಟಾಗುತ್ತದೆ. ನೀವು ಹಾಗೆ ಮಾಡದಿದ್ದರೆ ಮಕ್ಕಳೇ ನಿಮ್ಮ ಬಳಿ ಪ್ರಶ್ನೆಗಳೊಂದಿಗೆ ಅಥವಾ ಸಹಾಯ ಕೇಳುತ್ತಾ ಬರುತ್ತಾರೆ. ಆಗ ನಿಮಗೆ ಗೊತ್ತಿದ್ದಷ್ಟು, ನಿಮ್ಮಿಂದಾದಷ್ಟು ಉತ್ತರಗಳನ್ನು, ಸಹಾಯವನ್ನು ನೀಡಿ, "ನನಗಿಷ್ಟೇ ಗೊತ್ತು" ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು ಎಂದೆನ್ನುತ್ತಾರೆ. ಹೆತ್ತವರು ಮಕ್ಕಳ ಮುಂದೆ ೧೦೦% ಪ್ರಾಮಾಣಿಕರಾಗಿರುವುದು ಬಹಳ ಮುಖ್ಯ. ಹಾಗೆಯೇ ಅವರನ್ನು ಕೆಟ್ಟ ಪ್ರಭಾವಗಳಿಂದ ರಕ್ಷಿಸಬೇಕು ಅಷ್ಟೆ, ಉಳಿದಂತೆ ಅವರನ್ನು ಸ್ವತಂತ್ರರಾಗಿ ಬಿಡಬೇಕೆಂದು ಹೇಳುತ್ತಾರೆ. ಅದೇ ಸಮಯದಲ್ಲಿ ಅವರು ನಿಮ್ಮ ಪ್ರಭಾವದಿಂದಲೂ ಸ್ವತಂತ್ರರಾಗಿರಬೇಕು ಎಂದು ಸೂಚಿಸುತ್ತಾರೆ. ಅವರೊಂದು ಸ್ವತಂತ್ರ ಜೀವ, ನಿಮ್ಮ ಆಸ್ತಿಯಲ್ಲ!
Learn more about your ad choices. Visit megaphone.fm/adchoices
ಸದ್ಗುರುಗಳ ಈ ಕಣ್ಣು ತೆರೆಸುವ ಪಾಡ್‌ಕಾಸ್ಟ್‌ಗಳೊಂದಿಗೆ ಪ್ರಜ್ಞಾವಂತ ಪೋಷಣೆಯ ಕಲೆಯನ್ನು ಕಲಿಯಿರಿ. ಇವು ಮಕ್ಕಳ ಏಳಿಗೆಗಾಗಿ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸಲು, ಕ್ರಿಯಾಶೀಲ ಸಲಹೆ ಮತ್ತು ಹೃದಯಸ್ಪರ್ಶಿ ವಿವೇಕವನ್ನು ಒಳಗೊಂಡಿವೆ.
ಮಕ್ಕಳನ್ನು ಬೆಳೆಸುವುದು ಸುಲಭದ ವಿಚಾರವೇನಲ್ಲ. ಮಕ್ಕಳು ದಾರಿತಪ್ಪದಂತೆ, ಅವರ ಬುದ್ಧಿ ಮತ್ತು ಸಾಮರ್ಥ್ಯಗಳು ಸಂಪೂರ್ಣವಾಗಿ ವಿಕಾಸವಾಗುವಂತೆ ಪೂರಕ ವಾತಾವರಣವನ್ನು ನಿರ್ಮಿಸಿ ಬೆಳೆಸುವುದು ಒಂದು ಸವಾಲಿನ ಕೆಲಸವೇ. ತಂದೆ-ತಾಯಿಯರು ತಮ್ಮ ಮಕ್ಕಳಿಗಾಗಿ ಎಂಥಹ ವಾತಾವರಣವನ್ನು ನಿರ್ಮಿಸಬೇಕು? ಹೇಗೆ ನಡೆದುಕೊಳ್ಳಬೇಕು? ಈ ವಿಡಿಯೋ ನೋಡಿ.
ಯೋಗಿ, ಅಧ್ಯಾತ್ಮಿಕ ಚಿಂತಕ, ದಾರ್ಶನಿಕ - ಇಂತಹ ವಿಶೇಷಣಗಳಿಂದ ಗುರುತಿಸಲ್ಪಡುವ ಸದ್ಗುರುಗಳು, ಇತರರಿಗಿಂತ ಭಿನ್ನವಾಗಿ ನಿಲುವಂತಹ ಆಧ್ಯಾತ್ಮಿಕ ಗುರು. ಗಹನತೆ ಮತ್ತು ವಾಸ್ತವಿಕತೆಯನ್ನು ಒಳಗೂಡಿರುವ ಅವರ ಜೀವನ ಮತ್ತು ಕಾರ್ಯಗಳು, ಯೋಗವು ಸಮಕಾಲೀನ ವಿಜ್ಞಾನವಾಗಿದ್ದು, ನಮ್ಮ ಕಾಲಕ್ಕೆ ಅತ್ಯಗತ್ಯವಾದುದು ಎಂಬುದರ ಜ್ಞಾಪನೆಯಾಗಿದೆ.
See omnystudio.com/listener for privacy information.
Learn more about your ad choices. Visit megaphone.fm/adchoices
ಐಐಟಿ ದೆಹಲಿಯಲ್ಲಿ ನಡೆದ ಸಂವಾದವೊಂದರಲ್ಲಿ ಸದ್ಗುರುಗಳು ಇಂಜಿನಿಯರ್ ಮಾಡಿಕೊಳ್ಳುವುದು ಎಂದರೆ ಸಂಗತಿಗಳನ್ನು ನಮಗೆ ಬೇಕಾದ ಹಾಗೆ ರೂಪಿಸಿಕೊಳ್ಳುವುದು ಎಂದು ವ್ಯಾಖ್ಯಾನಿಸುತ್ತಾರೆ. ಹಾಗೆಯೇ ಜೀವನ ನಾವು ಅಂದುಕೊಂಡಂತೆ ಆಗಬೇಕೆಂದರೆ ನಮ್ಮ ದೇಹ ಮತ್ತು ಮನಸ್ಸು ನಮ್ಮ ಪರವಾಗಿ ಕೆಲಸ ಮಾಡಬೇಕೇ ಹೊರತು ನಮಗೆ ಅಡ್ಡ ಬರಬಾರದು ಮತ್ತು ಇಂದಿನ ಯುವಜನತೆಯು ತಮ್ಮನ್ನು ಒಂದು ಸಮಸ್ಯೆಯಾಗಿಸಿಕೊಳ್ಳದೇ, ತಮ್ಮನ್ನು ಪರಿಹಾರದ ಒಂದು ಭಾಗವಾಗಿಸಿಕೊಳ್ಳಬೇಕು ಎನ್ನುತ್ತಾರೆ. #youth #life #motivation
Learn more about your ad choices. Visit megaphone.fm/adchoices
ಟೀನೇಜ್ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಆತಂಕದ ಖಾಯಿಲೆಗಳ ಬಗ್ಗೆ ಮಾತನಾಡುತ್ತಾ ಸದ್ಗುರುಗಳು, ಅದರಿಂದ ಹೊರಬರಲು ಯೋಗದಲ್ಲಿ ಹೇಳಿರುವ ಸರಳ ವಿಧಾನವನ್ನು ತಿಳಿಸಿಕೊಡುತ್ತಾರೆ.
Learn more about your ad choices. Visit megaphone.fm/adchoices
ದೀಪಾವಳಿಯ ಗಹನವಾದ ಮಹತ್ವವನ್ನು, ಅದರ ಹಿಂದಿರುವ ಕಥೆ ಮತ್ತು ಬೆಳಕಿನ ಈ ಹಬ್ಬವು ಏನನ್ನು ಸಂಕೇತಿಸುತ್ತದೆ ಎಂದು ಸದ್ಗುರುಗಳಿಂದ ತಿಳಿಯಿರಿ.
Learn more about your ad choices. Visit megaphone.fm/adchoices
ಏಕೆ ಅಧ್ಯಾತ್ಮಿಕ ತುಡಿತವು ಎಲ್ಲರಿಗೂ ಬರದೆ ಕೆಲವರಿಗೆ ಮಾತ್ರ ಬರುತ್ತದೆ? ಎನ್ನುವ ಪ್ರಶ್ನೆಗೆ ಸದ್ಗುರುಗಳು, "ತುಡಿತ ಎಲ್ಲರಲ್ಲೂ ಇರುತ್ತದೆ, ಆದರೆ ಕೆಲವರು ಇನ್ನೂ ನಿದ್ದೆ ಮಾಡುತ್ತಿರುವಂತೆ ನಟಿಸುತ್ತಿದ್ದಾರೆ" ಎಂದು ವಿಶ್ಲೇಷಿಸುತ್ತಾರೆ.
Learn more about your ad choices. Visit megaphone.fm/adchoices
ಸಾವಿನ ನಂತರ ಏನಾಗುತ್ತದೆ? "ಇನ್ನಿಲ್ಲ"ವಾಗುತ್ತೇವೆಯೇ? ಅಥವಾ ಏನಾದರೂ ಮುಂದುವರಿಯುತ್ತದೆಯೇ? ಆತ್ಮ ಎಂದರೇನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಸದ್ಗುರುಗಳು ಉತ್ತರಿಸುತ್ತಾರೆ. ಆದರೆ ಕೊನೆಯಲ್ಲಿ, ನಿಮಗೆ ಸ್ವತಃ ಅನುಭವವಾಗದ ಹೊರತು ಇವನ್ನೆಲ್ಲ ನಂಬಿ ಏನೂ ಪ್ರಯೋಜನವಿಲ್ಲ ಎಂದೂ ಎಚ್ಚರಿಸುತ್ತಾರೆ.
Learn more about your ad choices. Visit megaphone.fm/adchoices
ಒಬ್ಬ ಮನುಷ್ಯ ಸತ್ತ ನಂತರ ಅಂತಿಮ ಸಂಸ್ಕಾರ ಯಾತಕ್ಕಾಗಿ ಮಾಡಬೇಕು ಎನ್ನುವುದನ್ನೂ, ಅದು ಆ ಜೀವದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನೂ, ಸರಳವಾಗಿ ಅರ್ಥವಾಗುವ ರೀತಿ ಸದ್ಗುರುಗಳು ವಿವರಿಸಿದ್ದಾರೆ.
Learn more about your ad choices. Visit megaphone.fm/adchoices
ಕುಂಕುಮ - ಇದು ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ವಸ್ತು. ಇದರ ಮಹತ್ವ ಏನು? ಇದನ್ನು ಹಚ್ಚಿಕೊಳ್ಳುವುದು ಒಳ್ಳೆಯದೇ? ವಿಡಿಯೋ ನೋಡಿ.
Learn more about your ad choices. Visit megaphone.fm/adchoices
From the publisher's feed

0 Listeners