Sign up to save your podcasts
Or

ಶಿವ ತನ್ನ ವಿಶಿಷ್ಟ ಮಾರ್ಗಗಳಿಗಾಗಿ ಪ್ರಸಿದ್ಧ. ಇದೊಂದು ಅದೇ ಥರಹದ ರೋಚಕ ಕಥೆ. ಮಾರ್ಕಂಡೇಯ ಎಂಬ ಹುಡುಗ ಅಮರನಾದ ಕಥೆ! ಕಥೆಯ ಹಿಂದೆ ಹೇಗೆ ನಾವು ಕೂಡ ’ಕಾಲಭೈರವ’ ಎಂಬ ಪ್ರಜ್ಞೆಯ ಆಯಾಮವನ್ನು ಮುಟ್ಟುವುದರ ಮೂಲಕ, ಕಾಲದ ಹಿಡಿತಕ್ಕೆ ಸಿಗದ ಅಮರ ಜೀವಿಗಳಾಗಬಹುದು ಎಂಬ ಕುತೂಹಲಕಾರಿ ಸತ್ಯವೂ ಇದೆ. ಈ ಸ್ವಾರಸ್ಯಕರ ಕಥೆಯನ್ನು ಸದ್ಗುರುಗಳ ಮಾತುಗಳಲ್ಲೇ ಕೇಳಿ.
Learn more about your ad choices. Visit megaphone.fm/adchoices
ಸದ್ಗುರುಗಳು ಮೊದಲ ಯೋಗಿ, ಮೊದಲ ಗುರುವಾಗಿರುವ ಶಿವ ಹೇಗೆ ಒಬ್ಬ ಮಹಾನ್ ಜೆನ್ ಮಾಸ್ಟರ್ ಎನ್ನುವುದರ ಕುರಿತು ಮಾತನಾಡುತ್ತಾರೆ. ಶಿವ ಸೃಷ್ಟಿಯ ಕಾರ್ಯವೈಖರಿಯನ್ನು ವಿವರಿಸಿದ ಮತ್ತು ಮನುಷ್ಯ ಸಾಕ್ಷಾತ್ಕಾರವನ್ನು ಹೊಂದಲು ಇರುವ 112 ಮಾರ್ಗಗಳನ್ನು ಪರಿಶೋಧಿಸುತ್ತಾನೆ.
Learn more about your ad choices. Visit megaphone.fm/adchoices
‘ಸತ್ಯನಾರಾಯಣ ಪೂಜೆ’ ಇದನ್ನು ನಾವೆಲ್ಲರೂ ಕೇಳಿದ್ದೇವೆಯಲ್ಲವೇ? ಇದು ಎಷ್ಟು ಪರಿಣಾಮಕಾರಿ? ನಾವು ಮಾಡಬಲ್ಲ ಅತ್ಯುತ್ತಮ ಪೂಜೆ ಯಾವುದು?
Learn more about your ad choices. Visit megaphone.fm/adchoices
ಭಾರತದ ಕೆಲವು ಭವ್ಯವಾದ ರಚನೆಗಳ ವಾಸ್ತುಶಿಲ್ಪವನ್ನು ಪರಿಶೋಧಿಸುವ ಸದ್ಗುರುಗಳು, ಅಂತಹ ಮೇರುಕೃತಿಗಳನ್ನು ರಚಿಸಲು ಆ ಕಾಲದ ಜನರನ್ನು ಪ್ರೇರೇಪಿಸಿದ್ದು ಏನು ಎಂಬುದನ್ನು ವಿವರಿಸುತ್ತಾರೆ.
Learn more about your ad choices. Visit megaphone.fm/adchoices
ದೇವಾಲಯಗಳ ಪ್ರಾಣಪ್ರತಿಷ್ಠಾಪನೆಯ ಹಿಂದಿನ ಆಳವಾದ ವಿಜ್ಞಾನದ ಮೇಲೆ ಸದ್ಗುರುಗಳು ಬೆಳಕು ಚೆಲ್ಲುತ್ತಾರೆ. ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರ 11 ದಿನಗಳ ಅನುಷ್ಠಾನವನ್ನು ಶ್ಲಾಘಿಸುತ್ತಾರೆ. ರಾಮರಾಜ್ಯದ ನಿಜವಾದ ಅರ್ಥವನ್ನು ವಿವರಿಸುತ್ತಾ, ರಾಮರಾಜ್ಯವನ್ನು ಸ್ಥಾಪಿಸಲು ನಾವೆಲ್ಲರೂ ಏಕೆ ಶ್ರಮಿಸಬೇಕು ಎನ್ನುವುದನ್ನು ಕೂಡ ತಿಳಿಸಿಕೊಡುತ್ತಾರೆ.
Learn more about your ad choices. Visit megaphone.fm/adchoices
English video:
Learn more about your ad choices. Visit megaphone.fm/adchoices
ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನ ಜ್ಯೋತಿರ್ಲಿಂಗಗಳಲ್ಲಿ ಒಂದು. ಇದು ಅಸಾಧರಣ ಶಕ್ತಿಯುಳ್ಳ ಲಿಂಗವಾಗಿದ್ದು, ಅದ್ಭುತವಾಗಿ ಪ್ರಾಣಪ್ರತಿಷ್ಠಾಪನೆಗೊಂಡಿದೆ. ಇದು ಬರುವ ಭಕ್ತರನ್ನು ಮುಕ್ತಿಯೆಡೆಗೆ ಹೇಗೆ ನೂಕುತ್ತದೆ, ಒಬ್ಬರು ಇಚ್ಛಿಸಿದರೆ ಹೇಗೆ ಒಂದು ಅತ್ಯದ್ಭುತ ಸಾಧನವಾಗಬಹುದು ಎಂಬುದನ್ನು ಸದ್ಗುರು ವಿವರಿಸುತ್ತಾರೆ. ಅಲ್ಲದೇ ಇದಕ್ಕೆ ಇನ್ನೂ ಅನೇಕ ಮೈನವಿರೇಳಿಸುವ ಆಯಾಮಗಳಿವೆ!
Learn more about your ad choices. Visit megaphone.fm/adchoices
ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಒಂದು ಅತ್ಯಂತ ಪ್ರಮುಖ ಅಂಗ. ವಿಶೇಷ ದಿನಗಳಲ್ಲಿ, ಹಬ್ಬ ಹರಿದಿನಗಳಲ್ಲಿ ನಾವು ತಪ್ಪದೇ ದೇವಸ್ಥಾನಗಳಿಗೆ ಹೋಗುತ್ತೇವೆ. ಹುಟ್ಟುಹಬ್ಬದಂದೂ ಹೋಗುತ್ತೇವೆ, ಹೊಸ ಕಾರು/ಬೈಕು ಕೊಂಡರೂ ಹೋಗಿ ಪೂಜೆ ಮಾಡಿಸಿಕೊಂಡು ಬರುತ್ತೇವೆ. ಕೆಲವೊಮ್ಮೆ ಸುಮ್ಮನೆ ಹೋಗಿಬರುತ್ತೇವೆ. ಆದರೆ ದೇವಸ್ಥಾನಗಳನ್ನು ನಿರ್ಮಿಸಿದ ಮೂಲ ಉದ್ದೇಶ ಏನು? ಅವುಗಳನ್ನು ಯಾವ ಮಟ್ಟದ ಶ್ರದ್ಧೆಯಲ್ಲಿ ನಿರ್ಮಿಸಲಾಗುತ್ತಿತ್ತು? ದೇವಸ್ಥಾನಗಳ ಹಿಂದಿನ ವಿಜ್ಞಾನವೇನು? ನಾವು ಯಾವ ರೀತಿಯಲ್ಲಿ ಇಂಥಹ ವಿಶೇಷ ಸ್ಥಳಗಳನ್ನು ನಮ್ಮ ಆಂತರಿಕ ಬೆಳವಣಿಗೆಗೆ ಉಪಯೋಗಿಸಿಕೊಳ್ಳಬಹುದು?
Learn more about your ad choices. Visit megaphone.fm/adchoices
ಸದ್ಗುರುಗಳು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ, ಬಾಟಲಿಯೊಳಗೆ ದೆವ್ವಗಳನ್ನು ಹಿಡಿದಿಟ್ಟಿದ್ದೇನೆ ಎನ್ನುವ ತಾಂತ್ರಿಕನ ಬಗ್ಗೆ, ದೆವ್ವಗಳಿಗೆ ರಕ್ತವುಣಿಸುತ್ತಿದ್ದ ಒಬ್ಬಾತನ ಬಗ್ಗೆ ಹೇಳುತ್ತಾರೆ. ಜೊತೆಗೆ ಸಾವನ್ನು ಅರ್ಥಮಾಡಿಕೊಳ್ಳಲು ತಾವು ತೊಂಭತ್ತೆಂಟು ನಿದ್ದೆಯ ಮಾತ್ರೆಗಳನ್ನು ಸೇವಿಸಿದ ಘಟನೆಯ ಬಗ್ಗೆಯೂ ವಿವರಿಸುತ್ತಾರೆ. ಜೀವನವನ್ನು ವಿವೇಚನೆಯಿಂದ ಯೋಜಿಸಿಕೊಳ್ಳಲು ನಮಗೆ ನಮ್ಮ ನಶ್ವರತೆಯ ಅರಿವಿರುವುದು ತುಂಬಾ ಮುಖ್ಯ ಎನ್ನುತ್ತಾರೆ ಸದ್ಗುರುಗಳು.
Learn more about your ad choices. Visit megaphone.fm/adchoices
‘ನಾವು ಯೋಚಿಸುವ ರೀತಿಯಿಂದಲೇ ಕಾಯಿಲೆಗಳು ಉಂಟಾಗಬಹುದೇ ಮತ್ತು ಯೋಚನೆಗಳಿಂದಲೇ ಅವುಗಳನ್ನು ಸರಿಪಡಿಸಬಹುದೇ?’ ಎನ್ನುವ ಪ್ರಶ್ನೆಯೊಂದಕ್ಕೆ ಸದ್ಗುರುಗಳು ಉತ್ತರಿಸುತ್ತಾರೆ.
Learn more about your ad choices. Visit megaphone.fm/adchoices
From the publisher's feed

0 Listeners