
Sign up to save your podcasts
Or


ಕಲಿತ ಕೋವಿದ : ವಿದ್ವಾನೇವ
👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletterವಿದ್ವಾನೇವ ವಿಜಾನಾತಿ ವಿದ್ವಜ್ಜನ ಪರಿಶ್ರಮಂ :ನ ಹಿ ವಂಧ್ಯಾ ವಿಜಾನಾತಿ ಗುರ್ವೀಂ ಪ್ರಸವವೇದನಾಂ. - ಅಪ್ಪಯ್ಯ ದೀಕ್ಷಿತ, ಕುವಲಯಾನಂದ -೫೧ (ಪ್ರತಿವಸ್ತು ಉಪಮಾ ಅಲಂಕಾರಕ್ಕೆ ಉದಾಹರಣೆ)ಅಪ್ಪಯ್ಯ ದೀಕ್ಷಿತ 16 ನೇ ಶತಮಾನದಲ್ಲಿ ಬದುಕಿದ ವಿದ್ವಾಂಸ. ಅವರು ರಚಿಸಿದ ಅನೇಕ ವಿದ್ವತ್ಪೂರ್ಣ ಕೃತಿಗಳಲ್ಲಿ, ಇಂದು, ಕೇವಲ 60 ಮಾತ್ರ ಉಳಿದುಕೊಂಡಿವೆ. ಅವುಗಳಲ್ಲಿ ಅಲಂಕಾರ ಶಾಸ್ತ್ರ ಗ್ರಂಥವಾದ ಕುವಲಯಾನಂದ ಎನ್ನುವುದೂ ಒಂದು. ಅದರಲ್ಲಿ, ಈ ಶ್ಲೋಕವನ್ನು ಪ್ರತಿವಸ್ತು ಉಪಮೆ ಅಲಂಕಾರದ ಉದಾಹರಣೆಯಾಗಿ ನೀಡಲಾಗಿದೆ. ಅದನ್ನು ಕನ್ನಡಕ್ಕೆ ಅನುವಾದಿಸು ಪ್ರಯತ್ನ ಇಲ್ಲಿದೆ:ಕಲಿತ ಕೋವಿದನಿಗೇ ಗೊತ್ತು ಕಲಿಕೆ ಹಿಂದಣ ದುಡಿಮೆ ಹೊತ್ತು :ಬಸಿರು ಹೆರಿಗೆಯ ತಾಯ ನೋವ ಅರಿಯಬಲ್ಲದೆ ಬಂಜೆ ಜೀವ?ಕಲಿಕೆ ವಿಷಯ ಯಾವುದೇ ಆಗಿರಲಿ; ಭಾಷೆ, ವಿಜ್ಞಾನ, ಗಣಿತ, ಇತಿಹಾಸ, ಸಂಗೀತ, ನೃತ್ಯ, ಕುಶಲ ಕೈಗಾರಿಕೆ, ಅಥವ ಕಲೆ -ಚತುಷ್ಷಷ್ಟಿ ಕಲೆಗಳಲ್ಲಿ, ಯಾವುದೇ ಇರಲಿ, ಅದರಲ್ಲಿ ಪಾಂಡಿತ್ಯ, ಪರಿಣತಿ ಗಳಿಸಬೇಕಾದರೆ ಪರಿಶ್ರಮ ಬೇಕು. ಒಮ್ಮನದ ದುಡಿಮೆ ಬೇಕು. ಇಲ್ಲಿ instant gratification ಇಲ್ಲ. ಅನಾತುರದಿಂದ ವಿವಿಧ ಮೂಲಗಳಿಂದ ಅರಗಿಸಿಕೊಳ್ಳಬೇಕು. ಒಂದು ಪುಸ್ತಕ ಓದಿದರೆ, ಒಂದು, ವಿಡಿಯೊ ನೋಡಿದರೆ, ಒಂದು ವಾಟ್ಸಾಪ್ ಸಂದೇಶ ಓದಿದರೆ, ಗೂಗಲಿಸಿ ಕಡತಗಳನ್ನು ಕಲೆ ಹಾಕಿದರೆ ಪಾಂಡಿತ್ಯ ಬಾರದು. ಕಲಿಕೆಯ ಪರಾಕಾಷ್ಠತೆಯನ್ನು ಮುಟ್ಟಿ ತಜ್ಞ ಎನ್ನಿಸಿಕೊಳಬೇಕಾದರೆ ಸರಿಯಾದ ಮಾರ್ಗದರ್ಶನ, ಸತತ ಅಭ್ಯಾಸ, ತದೇವ ಧ್ಯಾನ, ಮೇಲಾಗಿ ತ್ಯಾಗ ಸಮರ್ಪಣೆಗಳು ಬೇಕು ಅಂದರೆ ಇತರ ಮನರಂಜನೆ ಸುಖ-ಲೋಲುಪತೆಗಳನ್ನು ಬದಿಗಿಟ್ಟು, ತನ್ನನ್ನೆ ಮುಡುಪಿಡಬೇಕು. ಮನರಂಜನೆಯೆ ಗುರಿಯಾಗಿರುವ, ಪ್ರದರ್ಶನವೆ ಕೊನೆಯಾಗಿರುವ, ಇಂದಿನ ಓಟದ ಜಗತ್ತಿನಲ್ಲಿ ಇದಕ್ಕೆಲ್ಲ ಯಾರಿಗೂ ವ್ಯವಧಾನವಿಲ್ಲ. ಅಂತೆ, ನಿಜವಾಗಿ ಕಲಿತವನ ಕಲಿಕೆಯ ಹಿಂದಿರುವ ದುಡಿಮೆ, ತ್ಯಾಗ, ಸಮಯ, ಸಂಯಮ, ಕಲಿಕೆಯ ಹಾದಿಯಲ್ಲಿನ ನೋವುಗಳ ಅಳವು ಮತ್ತು ಬೆಲೆ ಅವನಿಗೇ ಗೊತ್ತು, ಕಲಿತ ಮತ್ತೊಬ್ಬ ತಿಳಿದು ಮೆಚ್ಚಬಲ್ಲ. ಇತರರು ಅವನ ಕಲಿಕೆಯ ಫಲವನ್ನು ಮೆಚ್ಚಬಲ್ಲರಾದರೂ, ಹೆರಿಗೆಯ ನೋವನ್ನು ತಿಳಿಯದ ಬಂಜೆ ಬೇರೆಯವಳ ಮಗುವನ್ನು ಕಂಡಾಗ, "how cute!" ಅನ್ನುವಂತೆ, ಅವರದು ಕೇವಲ "ಹೌದಾ, ಚೆನ್ನಾಗಿದೆ" ಎನ್ನುವ ಅಚ್ಚರಿಯ ಉದ್ಗಾರಕ್ಕೆ ಸೀಮಿತ.ನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತ.ಕಲಿತ ಕೋವಿದ - ವಿದ್ವಾನೇವ ಕನ್ನಡ ಕಲಿ, ಬಿತ್ತರಿಕೆ, January 10, 2024
ಗುರಿ ತಪ್ಪುತ್ತಿರುವ ಗುರು - Teachers missing their Goal
👁️ Watch it 🕮 Read it 👂 Listen it
📧 Subscribe to our newsletter
[ಎಲ್ಲ ಶಿಕ಼ಕರೂ ಹೀಗಲ್ಲ ಅಂತ ಸಮಸ್ಯೆಯನ್ನೆ ತೊಡೆದು ಹಾಕುವುದು ಸರಿ ಅಲ್ಲ. ಶೈಕ್ಷಣಿಕ ಕೊರತೆ, ಅವಕಾಶ ವಂಚನೆ, ಅನ್ಯಾಯ, ಅಥವ ಅನಾಹುತ ಒಂದೇ ಮಗುವಿಗೆ ಆದರೂ ಅದು ಸಮಾಜದ ಸೋಲು. ವಿವೇಕ ಬೆಟ್ಕುಳಿ ಅವರು ಇಲ್ಲಿ ಹೇಳಿರುವದಕ್ಕಿಂತ ಗುರುತರ ಹಗರಣಗಳು ಅಮೆರಿಕೆಯಲ್ಲೂ ಆಗಿವೆ. ಅಂಥವುಗಳು ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬುದಾರಿ - ಅಂದರೆ ತಂದೆತಾಯಿಗಳು ಮಕ್ಕಳ ಶಿಕ್ಷಣದಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಮತ್ತು ಶಾಲೆಯ ಅಧಿಕಾರಿಗಳು ದಾರಿ ತಪ್ಪಿದ ಶಿಕ್ಷಕರ ನಡತೆಯನ್ನು ಕೂಡಲೆ ಸರಿಪಡಿಸುವುದು ಇಲ್ಲವೆ ವಜಾಗೊಳಿಸುವುದು. ಇಂದಿನ ಭರಾಟೆಯ ಜೀವನದಲ್ಲಿ ತಮ್ಮನ್ನೆ ಕಳೆದುಕೊಂಡಿರುವ ತಂದೆತಾಯಿಗಳಿಗೆ, ಶಿಕ್ಷಣ ಕೇವಲ ದುಡ್ಡಿನ ವ್ಯವಹಾರವಾಗಿರುವ ಶಾಲೆಗಳಿಗೆ ಅಥವ ಶಿಕ್ಷಕರಿಗೆ ಇದು ಸಾಧ್ಯವೆ? – ಸಂ.]
ಕಂನುಡಿ - ಕನ್ನಡಕ್ಕೆ ಒಂದು ನಿದರ್ಶಕ ಪದ ಸಂಪಾದಕ(OPOK! ಮತ್ತು OHOK! ನಿಯಮ ಮತ್ತು ನೆಲೆ-ತಿಳಿವುಗಳ ಆಧಾರದ ಮೇಲೆ)Released by Shri T.S. Nagabharana on Dec 15, 2022Under Nimmallige Kannada Koota program by Karnataka Cultural Association of Southern California👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
ಕಂನುಡಿ, OPOK! ಮತ್ತು OHOK! ನಿಯಮಗಳನ್ನು ಆಧರಿಸಿ ಮತ್ತು ನೆಲೆ-ತಿಳಿವನ್ನು ಒಳಗೊಂಡು ರಚಿತವಾದ ಒಂದು ನಿದರ್ಶಕ ಪಠ್ಯ ಸಂಪಾದಕ.
ಕನ್ನಡಕ್ಕೆ OHOK!, ಅಂದರೆ Ottu Haku Ottu Koḍu! (ಒತ್ತು ಹಾಕು ಒತ್ತು ಕೊಡು), ಎನ್ನುವ ಒಂದು ಊಡುವಳಿಯನ್ನು ಎತ್ತಿ ತೋರಿಸುತ್ತಿದೆ. ಒತ್ತಡ ಗ್ರಹಿಸಬಲ್ಲ ಸೂಕ್ಷ್ಮ ಇನ್‌ಪುಟ್ ಸಾಧನಗಳಿಗೆ ಇದು ವಿಶೇಷವಾಗಿ ಸೂಕ್ತವಾಗಿದೆಯಾದರೂ, ಪ್ರಸ್ತುತ ಆನ್‌ಲೈನ್ ಅನುಷ್ಠಾನವು ಸಾಮಾನ್ಯ ಯಾಂತ್ರಿಕ ಕೀಬೋರ್ಡ್ ಅನ್ನು ಬಳಸುತ್ತದೆ.
OHOK! ಮೂರು ಸಂಭಾವ್ಯ ಬಗೆಗಳನ್ನು ಹೊಂದಿದೆ -
ಕಂಡಂತೆ ಬಗೆ ಉಲಿಮಿಕ ಕ್ರಮವನ್ನು ಅನುಸರಿಸುವುದಿಲ್ಲ ಎಂದು ಗಮನಿಸಬಹುದು. ಆದಾಗ್ಯೂ, ಉಲಿಮೆಗಳನ್ನು ಒಳದಿನಿಸುವ ಬದಲು ಟೈಪಿಸಿದಂತೆ ಕಾಣುವ ಒಲವು ಹೊಂದಿರುವವರಿಗೆ ಈ ಬಗೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು.
ವೇಗ, ನಿಖರತೆ, ಮತ್ತು ಬಳಸುಗ ಸ್ನೇಹಪರತೆಯನ್ನು ಸಮರ್ಥವಾಗಿ ಹೆಚ್ಚಿಸಲು ನೆಲೆ-ತಿಳಿವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ಸಹ ಕಂನುಡಿ ತೋರಿಸಿ ಕೊಡುತ್ತದೆ, ಉದಾಹರಣೆಗೆ, ಊಹಿತ ಸ್ವರ ಆಯ್ಕೆ, ಸ್ವಯಂಚಾಲಿತ ಶೂನ್ಯೀಕರಣ ಮತ್ತು ಆರ್ಕೀಕರಣ. ಕನ್ನಡದಂತಹ ಉಲಿ-ಉಲಿಗಟ್ಟಿನ ಭಾಷೆಗಳಿಗೆ ಅಗತ್ಯವಾದ ನಾಲ್ಕು ರೀತಿಯ ಅಳಿಸುಗಳನ್ನು ಸಹ ಅಳವಡಿಸಲಾಗಿದೆ. ಕಂನುಡಿ ತಂತ್ರಾಂಶ ಇಲ್ಲಿ ಲಭ್ಯ: https://kannadakali.com/kannudi/kannudi.html
👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
[ಪ್ರಿಯ ಕನ್ನಡ ಕಲಿಗಳೆ,ಬೆಳಿಗ್ಗೆ ಎದ್ದ ಕೂಡಲೆ ಮಿಂಚೆಯಲ್ಲಿ ಕಂಡ ಈ ಪತ್ರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಮೈಸೂರು ನಿವಾಸಿಗಳಾದ ಶ್ರೀ ಎಸ್.ಜಿ. ಸೀತಾರಾಮ್ ಕಳುಹಿಸಿದ ಈ ಸಮಯೋಚಿತ ಸಂದೇಶ ಕಣ್ ತೆರೆಸುವಂತಿದೆ. ಸಾವಿತ್ರಿಬಾಯಿ ಫುಲೆ ಅವರಂಥ ಮಹಾನ್ ಶಕ್ತಿಗಳನ್ನು ಸ್ಮರಿಸಿಕೊಳ್ಳುವುದು ಇಂದು ಅಗತ್ಯವಾಗಿದೆ. ದುಷ್ಟರನ್ನು ಶಿಕ್ಷಿಸುವ ದುರ್ಗೆಗಿಂತ ಸಮಾಜ ಮತ್ತು ಸಂಪ್ರದಾಯಗಳ ಕತ್ತಲೆಯಲ್ಲಿ ಬಳಲುತ್ತ ಕೊಳೆಯುತ್ತಿದ್ದವರನ್ನು ಬೆಳಕಿನೆಡೆಗೆ ಒಯ್ಯುವ ಇಂಥ ಭರ್ಗೆಯರು ಬೇಕು. ಕನ್ನಡ ಕಲಿಯ ಎಲ್ಲ ಶಿಕ್ಷಕರಿಗೂ ಈ ದಿನ ಹೆಮ್ಮೆಯ ದಿನ, ಸ್ಫೂರ್ತಿಯ ದಿನ ಎನಿಸುವುದು ಖಂಡಿತ.]--------ಶಿಕ್ಷಕರ ದಿನ ಎಂದರೆ ನಿಜವಾಗಿ, ನ್ಯಾಯವಾಗಿ, ಈ ದಿನವೇ!- ಎಸ್. ಜಿ. ಸೀತಾರಾಮ್, ಮೈಸೂರುಆತ್ಮೀಯರೇ: ಈವೊತ್ತು (ಜನವರಿ ಮೂರು) “ಸಾವಿತ್ರಿಬಾಯಿ ಫುಲೇ” ಅವರ ಜನ್ಮಸ್ಮರಣದಿನ. “ಕೆಲವು ವರ್ಗಗಳು ವಿದ್ಯಾರ್ಜನೆ ಮಾಡುವುದೇ ಮಹಾಪಾಪ” ಎಂಬ ನಂಬಿಕೆಯು ಗಾಢವಾಗಿದ್ದ, ಒಂದೂವರೆ ಶತಮಾನಕ್ಕೂ ಪೂರ್ವದ ಪತನೋನ್ಮುಖ ಕಾಲಮಾನದಲ್ಲಿ, ಕ್ರೂರ ಸಂಪ್ರದಾಯವಾದಿಗಳ ಹಲ್ಲೆ, ಹೀಯಾಳಿಕೆ, ಹೊಡೆತ ಮತ್ತು ಹಲಬಗೆಯ ಕಾಟ-ಕಿರುಕುಳ, ಸವಾಲು-ಸಮಸ್ಯೆಗಳಿಗೆ ಗುಂಡಿಗೆಯೊಡ್ಡಿ, ವಿದ್ಯಾವಂಚಿತರಾಗಿ, ಹೀನಾಯವಾದ ಹೊಡೆಬಾಳನ್ನು ಸಾಗಿಸುತ್ತಿದ್ದ ಶೋಷಿತ ಜನವರ್ಗಗಳಲ್ಲಿ, ಅದರಲ್ಲೂ ಹುಡುಗಿಯರಲ್ಲಿ, “ಬಂಧನದಿಂದ ಮುಕ್ತಿಗೆ ಎರಡಕ್ಕರವೇ ಸಾಕು!” ಎಂಬ ಚೊಕ್ಕ ತಿಳಿವಳಿಕೆಯನ್ನು ಬಿತ್ತಿ, ಹುರಿದುಂಬಿ, ಮೂಲೆಮೂಲೆಗಳಲ್ಲಿ ಮಟ್ಟಮೊದಲ ಪಾಠಶಾಲೆಗಳನ್ನು ತೆರೆದು, ಜ್ಞಾನಜ್ಯೋತಿಯನ್ನು ದೀನದಲಿತರ ಮನೆಮನೆಗಳಲ್ಲೂ ಬೆಳಗಿಸಿ, ಕಲಿಕೆಯ ಬುಡಮಟ್ಟದಲ್ಲಿ ಮೊದಲ ಸಂಚಲನವನ್ನೆಬ್ಬಿಸಿದ “ಸಾವಿತ್ರಿಬಾಯಿ” ಅಲ್ಲವೇ ನಮ್ಮ “ಮೊದಲ ಗುರುವು”? ದಮನಿತ-ಪೀಡಿತ-ತಿರಸ್ಕೃತ-ಧ್ವನಿವಂಚಿತ ಸಮುದಾಯಗಳನ್ನು ಹೀಗೆ ’ಸಾವಿನಿಂದ ಉಳಿಸಿದ’ ಅವರು “ಸಾವಿತ್ರಿ”ಯಷ್ಟೇ ಅಲ್ಲ, ಸತ್ಪಾತ್ರರಿಗೆ ಉದಾತ್ತ ವಿದ್ಯಾದಾನ ಮಾಡಿದ “ಸರಸ್ವತಿ” ಕೂಡ. ಸೋಲುಂಡಿದ್ದವರಿಗೆ “ಸೊಲ್ಲು” ನೀಡಿದ “ಸೊಲ್ವೆಣ್.” ಹೀಗಾಗಿ, ನಮ್ಮ ಶಿಕ್ಷಣವಲಯದ ಮೊದಲ ಮರ್ಯಾದೆ, ಪ್ರಥಮ ನಮಸ್ಕಾರ-ಪುರಸ್ಕಾರ ಈ “ಸರಸ್ವತಿಬಾಯಿ”ಯವರಿಗಲ್ಲದೇ ಬೇರಾರಿಗೆ ಸಲ್ಲಬೇಕು? ಇದಲ್ಲದೆ, ಸಮಾಜಸುಧಾರಕರಾಗಿ, ಜಾತೀಯತೆ, ಬಾಲ್ಯವಿವಾಹ, ಶಿಶುಹತ್ಯೆ ಮುಂತಾದ ಘೋರ ಸಾಮಾಜಿಕ ಪಿಡುಗಳ ವಿರುದ್ಧವೂ, ಹೆಣ್ಮಕ್ಕಳ ಹುಟ್ಟುಹಕ್ಕುಗಳ ಪರವೂ, ಮುಂಬರುವವರಿಗೆ ಮಾದರಿಯಾಗುವಂತೆ ಕೆಚ್ಚಿನಿಂದ ಕಾದಾಡಿ, ಕಡೆಗೆ ಜನಸೇವೆಯಲ್ಲೇ (ಪ್ಲೇಗ್-ಪೀಡಿತನೋರ್ವನನ್ನು ಉಳಿಸಲು ಹೋಗಿ) ಮಡಿದ ಸಾವಿತ್ರಿಬಾಯಿಯವರು ಅಪ್ಪಟ “ಹುತಾತ್ಮ”ರು! “ ಮಹಾತ್ಮ ”ಜೋತಿಬಾ ಅವರ ಸಾರ್ಥಕ ಸಂಗಾತಿಯಾದವರು!" “ಮಾಲಿ” ಎಂಬ "ತೋಟಗಾರ-ಹೂವಾಡಿಗ" ಪರಂಪರೆಯವರಾಗಿದ್ದು, “ಫುಲೇ” ಅರ್ಥಾತ್ “ಹೂವು” ("ಪ್ರಫುಲ್ಲ ಪುಷ್ಪ") ಎಂಬ ಹೆಸರಾಂತಿದ್ದ ಈ ದಂಪತಿಯು, ಮಕ್ಕಳ ಓದಿಗಾಗಿ “ಬಾಲ-ಉದ್ಯಾನ” (“kindergarten”) ಬೆಳೆಸಿದುದು ಸೋಜಿಗವೇ ಸರಿ. ಹಿಸುಕಿ-ಹೊಸಕಿ ಹೋಗುತ್ತಿದ್ದ ಹೂಮೊಗ್ಗುಗಳು ಹೊರಳಿ ಹೊಸತಾಗಿ ಹಿಗ್ಗಿ, ಹಸನಾದ ಹೂಗಂಪನ್ನು ಹೊರಹೊಮ್ಮುವಂತಾಗಿಸಿದ, ಹಾಗೂ ವಿದ್ಯೆಯ ಗಂಧವೇ ತಾಕದಿದ್ದವರಲ್ಲಿ ಅದರ ಪರಿಮಳವನ್ನು ಅರಳಿಸಿದ, ಫುಲೇ! ದಂಪತಿಗಿದೋ, ಹೂಗೊಂಚಲೊಂದಿಗೆ, "ಭಲೇ! ಭಲೇ!" ಜೈಕಾರ.ಸಾವಿತ್ರಿಬಾಯಿಯವರ ಸ್ಮರಣೆಯಲ್ಲಿ ಈ ದಿನವು ಮಹಾರಾಷ್ಟ್ರದಲ್ಲಿ “ಬಾಲಿಕಾ ದಿನ” ಆಗಿದೆ, ನಿಜ. ಆದರೆ, ಸಾವಿತ್ರಿಬಾಯಿ ಅವರ ದಿವ್ಯ ಸ್ಮರಣೆಯಲ್ಲಿ ಅವರ ಈ ಜನ್ಮದಿನಾಂಕವನ್ನೇ “ಶಿಕ್ಷಕರ ದಿನ-ಅಕ್ಷರದ ದಿನ” ಎಂದು ನ್ಯಾಯಸಮ್ಮತವಾಗಿ, ಆದರಪೂರ್ವಕವಾಗಿ ದೇಶಾದ್ಯಂತ ಮಾನ್ಯಮಾಡಬೇಕು. ಇಡೀ ಭಾರತವು, “ಆ ಮಾತಾಯಿ ನಮ್ಮ ನಡುವೆ ಎದ್ದು ಬಂದು, ಬಿದ್ದು ಬೇನೆಯಲ್ಲಿದ್ದ ಲೆಕ್ಕವಿಲ್ಲದಷ್ಟು ಮಂದಿ ಎದ್ದುಬರುವಂತೆ ಮಾಡಿದಳಲ್ಲ!" ಎಂಬ ಅಭಿಮಾನದಿಂದ, ಧನ್ಯತೆಯಿಂದ ಅವರನ್ನು ಈವೊತ್ತು ನೆನಪಿಸಿಕೊಳ್ಳಬೇಕು.ಹಾಗಾದರೆ, “ಸೆಪ್ಟೆಂಬರ್ ೫” ಯಾವ ದಿನಾಚರಣೆಯಾಗಬೇಕು? ಅದು “ಪ್ರಾಧ್ಯಾಪಕರ ದಿನ-ಪಂಡಿತರ ದಿನ” ಎಂದಾಗಿ, ಉನ್ನತ ಅಧ್ಯಯನ, ಅಧ್ಯಾಪನ, ಸಂಶೋಧನ, ಪ್ರವಚನ ಇತ್ಯಾದಿ ಕಾರ್ಯಗಳಲ್ಲಿ ನಿರತರಾಗಿರುವವರಿಂದ ಆಚರಿಸಲ್ಪಡಬಹುದು. “ಶಿಕ್ಷಣ” ಎಂಬುದನ್ನು ತಳಹದಿಯಾಗಿ ಒದಗಿಸುವ “ಮೇಷ್ಟ್ರು-ಮೇಡಮ್ಮು”ಗಳ ಹೆಸರಿನಲ್ಲಿ ಈ ದಿನವು “Schoolteachers’ Day” ಎಂದಾಗಿ, ಆ ದಿನವು “Lecturers’ Day, Professors’ Day or Scholars’ Day” ಎಂದಾಗಬಹುದಲ್ಲವೇ? ಅಕ್ಕರದ ಕಲಿಕೆಯಲಿ ಅಕ್ಕರೆಯೆಂದಿಗೂ ತುಂಬಿರಲಿ!ಶಿಕ್ಷಣ ಎಂದಾಕ್ಷಣ “ಶಿಕ್ಷೆ”ಯು ಪ್ರತ್ಯಕ್ಷವಾಗದಿರಲಿ!ನಿಮ್ಮ ಎಸ್.ಜಿ. ಸೀತಾರಾಮ್ಕನ್ನಡಕಲಿ, ಬಿತ್ತರಿಕೆ, ಜನವರಿ ೦೩, ೨೦೨೪ಶಿಕ್ಷಕರ ದಿನ ಎಂದರೆ ನಿಜವಾಗಿ, ನ್ಯಾಯವಾಗಿ, ಈ ದಿನವೇ!ಲೇಖಕರು: ಎಸ್. ಜಿ. ಸೀತಾರಾಮ್, ಮೈಸೂರು
👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
ಎಲ್ಲರಿಗೂ ಕೃಷ್ಣಮಾಸ ಶುಭ-ಶೋಭೆಗಳನ್ನು ತರಲಿಶ್ರೀ ಕೃಷ್ಣ ಪರಮಾತ್ಮ ನರನಿಗೆ ಗೀತೋಪದೇಶ ಮಾಡಿದ ತಿಂಗಳು. ಅಂದರೆ, ಗೀತಾ ಜಯಂತಿಯ ತಿಂಗಳು. ಗೀತೆಯನ್ನು ಪಠಿಸುತ್ತ, ಮನನಿಸುತ್ತ, ಅರ್ಜುನನ ನಿಮಿತ್ತ ಮನುಜರಿಗೆ ದೊರಕಿದ ಕೃಷ್ಣ ಎನ್ನುವ ಜ್ಞಾನಾಮೃತವನ್ನು ಸವಿಯುತ್ತ ಕೃಷ್ಣಮಾಸವಿಡಿ ನಲಿಯೋಣ***** ಕೃಷ್ಣಮಾಸದ ಪಾರ್ಥನ ಪ್ರಾರ್ಥನೆ *****ಗೀತೆಯ ೧೧ನೆ ಅಧ್ಯಾಯದಲ್ಲಿ, ವಿಶ್ವರೂಪ ದರ್ಶನದ ನಂತರ, ಬರುವ ಕೆಲವು ಶ್ಲೋಕಗಳು. ಅರ್ಜುನನಿಗೆ ತನ್ನ ಕರ್ತವ್ಯ ಏನು, ಅಂದರೆ, ತಾನು ಮಾಡಬೇಕಾದುದು ಏನು ಮತು ತನ್ನ ಪಾತ್ರ ಏನು; ಮುಖ್ಯವಾಗಿ, ಕೃಷ್ಣನ ನೈಜ ಸ್ವರೂಪ ಯಾವುದು, ಕೃಷ್ಣ ಅಂದರೆ ಯಾರು ಎನ್ನುವ ಅರಿವು ಮೂಡಿದಾಗ, ಜ್ಞಾನೋದಯ ಆದಾಗ, ಅರ್ಜುನ ಭಗವಂತನಿಗೆ ಹೇಳಿದ ಮಾತುಗಳು ಇವು. ಯಾರೇ ಆಗಲಿ, ತಮ್ಮ ತಪ್ಪಿನ ಅರಿವಾದಾಗ, ಸಂಶಯಗಳು ಅಳಿದು ಮಾರ್ಗದರ್ಶನ ದೊರೆತಾಗ, ಮನಸ್ಸಿನಲ್ಲಿ ಏಳುವ ವಿನಮ್ರತೆಯ ಮತ್ತು ಧನ್ಯತೆಯ ಭಾವಗಳನ್ನು ಮನೋಜ್ಞವಾಗಿ ಬಿಂಬಿಸುವ, ಕಣ್ಣಲ್ಲಿ ನೀರು ತರಿಸುವಂಥ ಮಾತುಗಳು ಇವು.ಸಂಜಯ ಉವಾಚ ಏತಚ್ಛ್ರುತ್ವಾ ವಚನಂ ಕೇಶವಸ್ಯ ಕೃತಾಂಜಲಿರ್ವೇಪಮಾನಃ ಕಿರೀಟೀ ನಮಸ್ಕೃತ್ವಾ ಭೂಯ ಏವಾಹ ಕೃಷ್ಣಂ ಸಗದ್ಗದಂ ಭೀತಭೀತಃ ಪ್ರಣಮ್ಯ ೧೧.೩೫ ಸಂಜಯನು ಹೇಳಿದನು: ಕೇಳಿ ಅರಿಸೂದನನ ಆ ಮಾತುಗಳನು, ಕೈಮುಗಿದು, ಅದಿರುತ್ತ ಗಾಂಡೀವಿ ಆಗ ನಮಿಸಿ ಮಾಧವನಿಗೆ, ಅಳುಕಿನಲ್ಲಿ ಮತ್ತೆ ಹೇಳಿದನು ಮಣಿಯುತ್ತ ನಡುಗು ದನಿಯಲ್ಲಿ:ಅರ್ಜುನ ಉವಾಚ ತ್ವಮಾದಿದೇವಃ ಪುರುಷಃ ಪುರಾಣಃ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಂ ವೇತ್ತಾಸಿ ವೇದ್ಯಂ ಚ ಪರಂ ಚ ಧಾಮ ತ್ವಯಾ ತತಂ ವಿಶ್ವಮನಂತರೂಪ ೧೧.೩೮ ಅರ್ಜುನನು ಪ್ರಾರ್ಥಿಸಿದನು: ದೇವ ಮೊದಲಿಗನು ನೀ, ಹಳೆಯಾಳು ನೀನು; ಜಗಕೆ ನೆರ, ಮೂಲ, ಕಡು ಆಸರೆಯು ನೀನು; ಪರಮ ನೆಲೆ, ಅರಿಯುವುದು ಅರಿಯುವವ ನೀನು, ವಿಶ್ವವನು ಹೊದಳಿರುವ ರೂಪ ಅಗಣಿತನು. ವಾಯುರ್ಯಮೋಽಗ್ನಿರ್ವರುಣಃ ಶಶಾಂಕಃ ಪ್ರಜಾಪತಿಸ್ತ್ವಂ ಪ್ರಪಿತಾಮಹಶ್ಚನಮೋ ನಮಸ್ತೇಽಸ್ತು ಸಹಸ್ರಕೃತ್ವಃ ಪುನಶ್ಚ ಭೂಯೋಽಪಿ ನಮೋ ನಮಸ್ತೇ ೧೧.೩೯ ಬೆಂಕಿ, ಯಮ, ಜಲ, ಗಾಳಿ, ಚಂದಿರನು ನೀನು; ಜಗಕೆ ಮುತ್ತಾತ ನೀ, ಹೊಂಬಸಿರ ನೀನು; ಸಾವಿರ ಸರತಿ ಮಣಿವೆ, ಕೈ ಮುಗಿವೆ ನಾನು, ಬಾಗುವೆನು ನಿನಗೆ, ಎರಗುವೆನು ತಿರುತಿರುಗಿ.ನಮಃ ಪುರಸ್ತಾದಥ ಪೃಷ್ಠತಸ್ತೇ ನಮೋಽಸ್ತು ತೇ ಸರ್ವತ ಏವ ಸರ್ವ ಅನಂತವೀರ್ಯಾಮಿತವಿಕ್ರಮಸ್ತ್ವಂ ಸರ್ವಂ ಸಮಾಪ್ನೋಷಿ ತತೋಽಸಿ ಸರ್ವಃ ೧೧.೪೦ ನಮಿಸುವೆನು ನಾ ಮುಂದೆ, ನಮಿಸುವೆನು ಹಿಂದೆ, ನಮಿಸುವೆನು ಎಲ್ಲೆಡೆಗೆ, ಓ ಎಲ್ಲ, ನಿನಗೆ. ಕೊನೆ ಇರದ ಕೆಚ್ಚು ನೀ, ಬಲು ಬಲ್ಮೆ ಅದಟು, ಹಬ್ಬಿರುವಿ ಎಲ್ಲವನು; ಇಂತೆಲ್ಲ ನೀನೆ.ಸಖೇತಿ ಮತ್ವಾ ಪ್ರಸಭಂ ಯದುಕ್ತಂ ಹೇ ಕೃಷ್ಣ ಹೇ ಯಾದವ ಹೇ ಸಖೇತಿ ಅಜಾನತಾ ಮಹಿಮಾನಂ ತವೇದಂ ಮಯಾ ಪ್ರಮಾದಾತ್ಪ್ರಣಯೇನ ವಾಽಪಿ ೧೧.೪೧ ಮಿತಿಯಿರದೆ, ಮುಂಗಣಿಸಿ, ಬರಿ ಗೆಳೆಯನೆಂದು, ತಿಳಿಯದೆಯೆ, ಒಲವಿನಲಿ, ಗಮನಿಸದೆ ನಾನು "ಹೇ ಗೆಳೆಯ, ಹೇ ಕೃಷ್ಣ, ಯಾದವನೆ" ಎಂದು ಏನನೆಂದೆನೊ ನಿನ್ನ ಹಿರಿಮೆಯನರಿಯದೆ!ಯಚ್ಚಾವಹಾಸಾರ್ಥಮಸತ್ಕೃತೋಽಸಿ ವಿಹಾರಶಯ್ಯಾಸನಭೋಜನೇಷು ಏಕೋಽಥವಾಪ್ಯಚ್ಯುತ ತತ್ಸಮಕ್ಷಂ ತತ್ಕ್ಷಾಮಯೇ ತ್ವಾಮಹಮಪ್ರಮೇಯಂ ೧೧.೪೨ ಕುಳಿತಿರಲು, ಮಲಗಿರಲು, ಉಣುತಿರಲು ನಾವು, ಆಟದಲಿ, ಮಾನಿಸದೆ ಉಪಹಾಸಕೆಂದು ಒಬ್ಬನೆಯೆ ಯಾ ಗೆಳೆಯರೊಡಗೂಡಿ ನಾನು ಏನೆ ಅಂದುದನು ನೀ ಕ್ಷಮಿಸು, ಅಳವಿಲನೆ.ತಸ್ಮಾತ್ಪ್ರಣಮ್ಯ ಪ್ರಣಿಧಾಯ ಕಾಯಂ ಪ್ರಸಾದಯೇ ತ್ವಾಮಹಮೀಶಮೀಡ್ಯಂ ಪಿತೇವ ಪುತ್ರಸ್ಯ ಸಖೇವ ಸಖ್ಯುಃ ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಂ ೧೧.೪೪ ಅಂತೆ, ನಿನ್ನೆದುರು ನಾ ಮೈಯೊಡ್ಡಿ ಉದ್ದ ನಮಿಸುವೆನು, ಹಾತೊರೆವೆ ನಿನ್ನ ಕ್ಷಮೆ ದಯೆಗಳಿಗೆ, ಒಲವಿನೊಡೆಯನೆ; ಗೆಳೆಯ ಗೆಳೆಯನನು, ತಂದೆ ಮಗನನು, ಇನಿಯ ಇನಿಯಳನು ಕ್ಷಮಿಸುವಂತೆನ್ನನ್ನು ನೀ ಕ್ಷಮಿಸು, ಎರೆಯನೆ, ಕರುಣಿಸಿಕನ್ನಡ ಕಲಿ ಬಿತ್ತರಿಕೆಕೃಷ್ಣಮಾಸದ ಪಾರ್ಥನ ಪ್ರಾರ್ಥನೆಸಂಸ್ಕೃತ ಮೂಲ : ವೇದವ್ಯಾಸಕನ್ನಡಕ್ಕೆ: ವಿಶ್ವೇಶ್ವರ ದೀಕ್ಷಿತಡಿಸೆಂಬರ್ ೨೨, ೨೦೨೩
👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್
“ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುಮಿಥ್ಯೆ ೧೧. (ಬೋನಸ್!) ಕನ್ನಡಿಗರು ಅಭಿಮಾನಶೂನ್ಯರುತಪ್ಪು. ಕನ್ನಡಿಗರು ಅನೇಕ ಸಾಮ್ರಾಜ್ಯಗಳನ್ನು ಸ್ಥಾಪಿಸಿದರು. ಬನವಾಸಿಯ ಕದಂಬರು ಕೋಲಾರದ ಗಂಗರು, ಬಾದಾಮಿ ಮತ್ತು ಕಲ್ಯಾಣದ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಮತ್ತು ಮೈಸೂರು ರಾಜ್ಯ ಇವೆಲ್ಲ ಗೊತ್ತಿರುವ ವಿಷಯಗಳು. ಇವರು ಇಂದಿನ ಕರ್ನಾಟಕದ ಒಳಗೆ ಮತ್ತು ಹೊರಗೆ ಹಬ್ಬಿ ಕನ್ನಡದಲ್ಲಿ ಆಳಿದರು. ಇಂದು, ಕನ್ನಡಿಗರು ಭಾರತದ ತುಂಬ ಹರಡಿಕೊಂಡಿದ್ದಾರೆ. ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರಾರೂ ಕನ್ನಡವನ್ನು ಮರೆತಿಲ್ಲ.ನೇಪಾಳದ ಪಶುಪತಿ ದೇವಸ್ಥಾನದ ಅರ್ಚಕರು ಪರಂಪರಾಗತವಾಗಿ ಕನ್ನಡಿಗರು. ಕನ್ನಡ ಬಲ್ಲವರು. ದಿಲ್ಲಿ ಮುಂಬಯಿಗಳಲ್ಲಿ ಕನ್ನಡಿಗರು ತುಂಬಿಕೊಂಡಿದ್ದಾರೆ. ಬೆಳಿಗ್ಗೆ ಹೊರಗೆ ಹಣಿಕೆ ಹಾಕಿದರೆ ಮೂಲೆ ಮೂಲೆಗಳ ಹೊಟೇಲುಗಳಲ್ಲಿ ಕನ್ನಡದ್ದೆ ಸುಪ್ರಭಾತ! ಎಲ್ಲ ಊರುಗಳಲ್ಲೂ ಕ್ರಿಯಾಶೀಲ ಕನ್ನಡ ಸಂಘಗಳು ಇವೆ. ಕನ್ನಡ ವರ್ತಮಾನ ಪತ್ರಗಳು ಪ್ರಕಟವಾಗುತ್ತವೆ. ಕಾಯ್ಕಿಣಿ ಮತ್ತು ಜಿ.ವಿ. ಕುಲಕರ್ಣಿ "ಜೀವಿ" ಅಂಥ ಸತ್ವಯುತ ಸಾಹಿತಿಗಳು ಇದ್ದಾರೆ. ಮೇಲಾಗಿ, ದೂರದ ಹಳ್ಳಿಗಳಲ್ಲಿ ಇರುವ ಕನ್ನಡಿಗರು ಮನೆಯಲ್ಲಿ ಕನ್ನಡವನ್ನೆ ಮಾತಾಡುತ್ತಾರೆ; ಇದು ನಾನು ಗಮನಿಸಿದ ಸಂಗತಿ.ಅಮೆರಿಕೆಯಲ್ಲಿ, ಅದೂ ನಮ್ಮ ಕರ್ನಾಟಕ ಸಾಂಸ್ಕೃತಿಕ ಸಂಘದಲ್ಲಿ(KCA) ಹುಟ್ಟಿದ ಕನ್ನಡ ಕಲಿಯ ಕಿಡಿ ಇಂದು ಜಗತ್ತಿನ ಎಲ್ಲೆಡೆ ಹಬ್ಬಿಕೊಂಡು, ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ.ಬೇರೆ ಭಾಷೆಗಳನ್ನು ಪಳಗಿಸಿಕೊಳ್ಳುವ ಮತ್ತು ಬೇರೆ ಭಾಷಿಕರನ್ನು ತನ್ನವರನ್ನಾಗಿ ಮಾಡಿಕೊಳ್ಳುವ ಶಕ್ತಿ ಕನ್ನಡಕ್ಕೆ ಇದೆ. ಇದಕ್ಕೆ, ಜ್ಞಾನಪೀಠ ಪ್ರಶಸ್ತಿ ವಿಜೇತ ಬೇಂದ್ರೆ ಮಾಸ್ತಿ ಅಂಥ ಸಾಹಿತಿಗಳನ್ನು, ಬೇರೆ ಭಾಷೆಗಳಿಂದ ಕನ್ನಡಕ್ಕೆ ಒಗ್ಗಿಕೊಂಡ ಪದಗಳನ್ನು, ಅಲ್ಲದೆ, ಧಾರವಾಡ ಪೇಢೆಯನ್ನೂ ಉದಾಹರಿಸಬಹುದು.ಒಟ್ಟಿನಲ್ಲಿ, ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.ಕನ್ನಡದ ಮೇಲಿನ ಪ್ರೀತಿ ಮತ್ತು ಅಭಿಮಾನ ಇರದೆ ಇವೆಲ್ಲ ಆಗಲು ಸಾಧ್ಯವಿಲ್ಲ. ಕನ್ನಡಿಗರು ಅಭಿಮಾನಿಗಳು, ದುರಭಿಮಾನಿಗಳಲ್ಲ, ಅಭಿಮಾನಶೂನ್ಯರಂತೂ ಖಂಡಿತ ಅಲ್ಲ.ಇನ್ನೇಕೆ ಸಂಕೋಚ? ಕನ್ನಡ ಕಲಿಯೋಣ; ಕನ್ನಡದಲ್ಲಿ ಮಾತಾಡೋಣ; ನಿತ್ಯ ಕನ್ನಡಿಗರಾಗೋಣ!ರಾಜ್ಯೋತ್ಸವದ ಶುಭಾಶಯಗಳು!ನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೧೦, ನವಂಬರ ೧, ೨೦೨೩
👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್
Novರಾತ್ರಿ ಸರಣಿ, ದಿನ ೧೦, ಮಿಥ್ಯೆ ೧೦ : ಕನ್ನಡದಲ್ಲಿ ಆಡಳಿತ೧೦. ಕನ್ನಡ ಆಡಳಿತ ಭಾಷೆ ಆದದ್ದು ಕರ್ನಾಟಕ ಹುಟ್ಟಿದ ಮೇಲೆತಪ್ಪು. ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ, ವಿಜಯನಗರ ಸಾಮ್ರಾಜ್ಯಗಳು ಮತ್ತು ಇತ್ತೀಚಿನ ಮೈಸೂರು ರಾಜ್ಯ ಎಲ್ಲವುಗಳಲ್ಲೂ ಕನ್ನಡ ಆಡಳಿತ ಭಾಷೆ ಆಗಿತ್ತು. ಬ್ರಿಟಿಷರು ಕೂಡ, ಕನ್ನಡ ಕಲಿತು, ಕನ್ನಡಿಗರೊಡನೆ ಕನ್ನಡದಲ್ಲಿ ವ್ಯವಹರಿಸುವ ನೀತಿಯನ್ನು ಇಟ್ಟುಕೊಂಡಿದ್ದರು. ಒಂದು ಸಾಮ್ರಾಜ್ಯದ ಮಂತ್ರಾಲೋಚನೆ, ರಕ್ಷಣೆ, ಹಣಕಾಸು, ಕಾನೂನು ಮತ್ತು ನ್ಯಾಯ, ಸಂಸ್ಕೃತಿ, ಮತ್ತು ಜನರ ನಿತ್ಯ ವ್ಯವಹಾರ ಎಲ್ಲವುಗಳನ್ನು ನಿಭಾಯಿಸಲು ಕನ್ನಡ ಆಗ ಸಮರ್ಥವಾಗಿತ್ತು, ಈಗಲೂ ಸಮರ್ಥವಾಗಿದೆ.ಇಲ್ಲಿಯ ವರೆಗೆ ತಾಳ್ಮೆಯಿಂದ ಓದಿಕೊಂಡು ಬಂದ ನಿಮಗೆ ಕಾಯ್ದಿದೆ: ರಾಜ್ಯೋತ್ಸವದ ಬೋನಸ್ಸು! ಮಿಥ್ಯೆ ೧೧ ಕನ್ನಡ ಅಭಿಮಾನ. ಇದನ್ನೂ ನೋಡಿ/ಓದಿ.ನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೧೦, ರಾಜ್ಯೋತ್ಸವ, ನವಂಬರ ೦೧, ೨೦೨೩
👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್
“ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ, ದಿನ ೯, ಮಿಥ್ಯೆ ೯ : ಕನ್ನಡದ ಮರೆವು೯. ಕನ್ನಡ ಮಾತಾಡದಿದ್ದರೆ ಮರೆತು ಹೋಗುತ್ತದೆತಪ್ಪು. ಬಹಳ ಕಾಲ ಕನ್ನಡ ಮಾತಾಡದೆ ಇದ್ದಾಗ, ಓದದೆ ಇದ್ದಾಗ, ಅಥವ ಬೇರೆ ದೇಶಕ್ಕೆ ವಲಸೆ ಹೋದಾಗ ಕನ್ನಡ ಮರೆತಂತೆ ಅನಿಸಿದರೂ ಬೇರುಗಳು ಗಟ್ಚಿಯಾಗಿ ಉಳಿದಿರುತ್ತವೆ. ಸರಿ ಸಂದರ್ಭದಲ್ಲಿ ಕನ್ನಡ ಮತ್ತೆ ಚಿಗುರುವುದು ಖಚಿತ. ನನ್ನದೆ ಉದಾಹರಣೆ ಕೊಡುವುದಾದರೆ, ಅಮೆರಿಕಕ್ಕೆ ಬಂದ ಮೇಲೆ ಕೆಲ ವರ್ಷ ಕನ್ನಡ ಮಾತಾಡಲೆ ಇಲ್ಲ. ಅಂಥ ಸಂದರ್ಭಗಳೆ ಬರಲಿಲ್ಲ. ಮುಂದೆ, ೨೦ ವರ್ಷಗಳ ನಂತರ ಭಗವದ್ಗೀತೆಯನ್ನು ಕನ್ನಡಕ್ಕೆ ಅನುದನಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾಯ್ತು. ಕನ್ನಡ ಮರೆತಿದೆ, ಕನ್ನಡ ನನಗೆ ಬಾರದು, ಕನ್ನಡ ಕಠಿನ ಎನ್ನುವ ಅನೇಕ ಶಂಕೆಗಳನ್ನು ತಲೆಯಲ್ಲಿ ತುಂಬಿಕೊಂಡು, ಮೊದಲ ಅಧ್ಯಾಯದಲ್ಲೆ, ಆ ಅರ್ಜುನನ ಹಾಗೆಯೆ ಕೈ ಚೆಲ್ಲಿ ಕುಳಿತುಕೊಂಡೆ. ಮುಂದೆ ನಡೆದದ್ದು ಕರ್ನಾಟಕ! ನುಡಿದದ್ದು ಭಗವತ್ ಕಂನುಡಿ!music -Separatorಕನ್ನಡದಲ್ಲಿ ಆಡಳಿತದ ಮಿಥ್ಯೆ ೧೦ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೯, ಅಕ್ಟೋಬರ ೩೧, ೨೦೨೩
👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್
“ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ, ದಿನ ೮, ಮಿಥ್ಯೆ ೮ : ಕನ್ನಡದ ವೈಜ್ಞಾನಿಕ ದೌರ್ಬಲ್ಯ೮. ಮುಂದುವರೆದ ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣ ಕನ್ನಡದಲ್ಲಿ ಅಸಾಧ್ಯತಪ್ಪು. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಮತ್ತು ಅದರ ಅನೇಕ ಘಟಕಗಳು, ಪ್ರಾಧಿಕಾರಗಳು ಸಾಕಷ್ಟು ಕೆಲಸ ಮಾಡಿವೆ, ಮಾಡುತ್ತಿವೆ. ಕನ್ನಡದಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಪುಸ್ತಕಗಳ ಪ್ರಕಟಣೆ ವಿವಿಧ ಕ್ಷೇತ್ರಗಳ ಪಾರಿಭಾಷಿಕ ಪದಗಳ ಪಟ್ಟಿ ವಿಜ್ಞಾನ ಪ್ರದರ್ಶನ, ಮತ್ತು ಕಾರ್ಯಾಗಾರಗಳನ್ನು ನಡೆಸುತ್ತಿವೆ. ಕರ್ನಾಟಕ ವಿಜ್ಞಾನ ಪರಿಷತ್ತು ನಿರಂತರ ದುಡಿಯುತ್ತಿದೆ. ಸದ್ಯ, ಕನ್ನಡದಲ್ಲಿ ಮುಂದುವರೆದ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿಲ್ಲ, ನಿಜ; ಆದರೆ ಹಾಗೆ ಕಲಿಯುವುದೇ ಅಸಾಧ್ಯ ಎನ್ನುವುದು ತಪ್ಪು. ಕನ್ನಡದಲ್ಲಿ ಕಲಿತ ವಿಜ್ಞಾನದ ವಿದ್ಯಾರ್ಥಿಗಳು ಸಮರ್ಥ ವಿಜ್ಷಾನಿಗಳು, ಇಂಜಿನಿಯರುಗಳು, ವೈದ್ಯರು, ಮತ್ತು ಸಂಶೋಧಕರು ಆಗಿದ್ದಾರೆ.ಕನ್ನಡದ ಮರೆವಿನ ಮಿಥ್ಯೆ ೯ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೮, ಅಕ್ಟೋಬರ ೩೦, ೨೦೨೩
👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್
“ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ, ದಿನ ೭, ಮಿಥ್ಯೆ ೭ : ಕನ್ನಡದ ಕಠಿನತೆ೭. ಕನ್ನಡ ಕಲಿಯುವುದು ಸುಲಭವಲ್ಲತಪ್ಪು. ಇದು ಕನ್ನಡವನ್ನು ಇಂಗ್ಲೀಷಿಗೆ ಮೇಲ್ನೋಟದಲ್ಲಿ ಹೋಲಿಸಿ ಸಾಮಾನ್ಯವಾಗಿ ಹೇಳುವ ಹಗುರ ಮಾತು. "ಕನ್ನಡದಲ್ಲಿ ೪೯ ಅಕ್ಷರಗಳು ಮತ್ತು ಅವುಗಳ ಒತ್ತಕ್ಷರಗಳು ಇವೆ; ಇಂಗ್ಲಿಷಲ್ಲಿ ಕೇವಲ ೨೬" ಎಂಬುದು ಅವರ ವಾದ, ಕೇವಲ ಸಂಖ್ಯೆಗಳ ಗುದ್ದಾಟ. ಕೆದಕಿ ನೋಡಿದರೆ, ಇಂಗ್ಲೀಷ್ ನಲ್ಲಿ ದೊಡ್ಡ ಮತ್ತು ಸಣ್ಣ ಅಕ್ಷರಗಳು ಸೇರಿ ೫೨ ಅಕ್ಷರಗಳು ಮೇಲಾಗಿ ೪೪ ಉಲಿಮೆಗಳು (phonemes) ಕೂಡ ಇವೆ. ಉಚ್ಚಾರಕ್ಕೂ ಬರೆಯುವುದಕ್ಕೂ ಏಕರೂಪಿ ಸಂಬಂಧವಿಲ್ಲ. ಕನ್ನಡ ವರ್ಣಮಾಲೆ ತಾರ್ಕಿಕವಾಗಿದ್ದು ಮತ್ತು ಉಲಿಮಿಕ (phonetic) ಆಗಿದೆ. ಸಂಧಿ, ಸಮಾಸ, ಮತ್ತು ಹೊಸ ಪದಗಳನ್ನು ಹುಟ್ಟಿಸಿಕೊಳ್ಳಲು ತದ್ಭವ ನಿಯಮಗಳಿವೆ. ಮೇಲಾಗಿ ಕನ್ನಡ ಅರ್ಥ ದೃಷ್ಟಿಯಿಂದ (semantically) ಶ್ರೀಮಂತವಾಗಿದೆ.ಕನ್ನಡದ ವೈಜ್ಞಾನಿಕ ದೌರ್ಬಲ್ಯದ ಮಿಥ್ಯೆ ೮ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೭, ಅಕ್ಟೋಬರ ೨೯, ೨೦೨೩
From the publisher's feed