Secret of Kannada ಕನ್ನಡದ ಗುಟ್ಟು Kannadada Guttu

Secret of Kannada ಕನ್ನಡದ ಗುಟ್ಟು Kannadada Guttu

By Vishweshwar DixitEducation
Download on the App Store

Secret of Kannada ಕನ್ನಡದ ಗುಟ್ಟು Kannadada Guttu episodes

  • ಬೆಳಕು ತೋರಿದ ಬದುಕು : ಹೆಲನ್ ಕೆಲರ್ : Helen Keller

    Like it? ...... Subscribe and Share! https://www.youtube.com/mykannadakali/?sub_confirmation=1
    Watch at https://www.youtube.com/channel/UCCON6n4lEgj6NsPqCLZdDSw
    Read at http://kannadakali.com/publications/podcasts
    Listen at https://anchor.fm/kannadakali
    Subscribe to our newsletter: https://kannadakali.com/kankalimitraru/?p=subscribe


    ಬೆಳಕು ತೋರಿದ ಬದುಕು: ಹೆಲನ್ ಕೆಲರ್

    ಎಸ್. ಜಿ. ಸೀತಾರಾಮ್

    [’ಹೆಲನ್ ಕೆಲರ್’ ಎಂದೊಡನೆ ಕಣ್ಣರಳುವುದು, ಕಿವಿ ನಿಮಿರುವುದು, ಮಾತು ನಿಲ್ಲುವುದು. ಮಗುವಾಗಿದ್ದಾಗಲೇ ನೋಡುವ, ಕೇಳುವ ಮತ್ತು ಮಾತನಾಡುವ ಮೂರು ಮೂಲ ಚೇತನಗಳನ್ನೇ ತಾನು ಕಳೆದುಕೊಂಡರೂ, ಬೆಳವಣಿಗೆಯ ತೊಡಕುಗಳಿಂದ ಹತಾಶರಾಗಿರುವವರಿಗೆ ಆಶಾದೀಪವಾಗಿಯೂ, ನೊಂದಜೀವಿಗಳಿಗೆ “Helen Healer” ಎಂದಾಗಿಯೂ, ಜಗವೇ ಬೆಕ್ಕಸಬೆರಗಾಗುವಂತೆ, ೮೮ ವರ್ಷಗಳ ಪರ್ಯಂತ ಚಕಚಕಿಸಿದ “ಹೆಲನ್ ಕೆಲರ್‍” ಜನಿಸಿದ್ದು, ಜೂನ್ ೨೭, ೧೮೮೦; ಕಾಲವಾಗಿದ್ದು, ಜೂನ್ ೧, ೧೯೬೮. ಅವಳ ವೈವಿಧ್ಯಮಯ, ಸಾಹಸಪೂರ್ಣ, ವಾತ್ಸಲ್ಯಪೂರಿತ, ಜ್ಞಾನಕೌತೂಹಲಭರಿತ ಜೀವನ ಮತ್ತು ಸಾಧನೆಗಳನ್ನೂ, ಅವಳು ಮಾಡಿದ ಲೋಕಾಧಿಕ ಉಪಕಾರವನ್ನೂ ಸ್ಮರಿಸಲು ನೆರವಾಗುವಂತೆ, ಸಂಕ್ಷಿಪ್ತ ವೃತ್ತಾಂತವೊಂದು ಇಲ್ಲಿದೆ]___________________________

    Reference: https://www.youtube.com/@IamHelenKeller
    [Video1] Helen Keller in her office (1919-54), https://www.youtube.com/watch?v=Pqb9B8EIY-c‌
    [Video2] Helen Keller photo album (India visit-1955), https://www.youtube.com/watch?v=FeWBg63TMDo
    [Video3] Helen Keller visits India, https://youtu.be/5xNulmM9c-k
    [Video4] Helen Keller speaks out, https://www.youtube.com/watch?v=8ch_H8pt9M8
    ಕನ್ನಡ ಕಲಿ ಬಿತ್ತರಿಕೆ, ಜುಲೈ ೨೨, ೨೦೨೩
    ಬೆಳಕು ತೋರಿದ ಬದುಕು : ಹೆಲನ್ ಕೆಲರ್
    ಬರೆಹ: ಎಸ್. ಜಿ. ಸೀತಾರಾಮ್
    ಓದು : ರಾಜೇಶ್ವರಿ ಎಚ್.‌ ರಾವ್
    ಚಿತ್ರಗಳು: ಅಂತರ್ಜಾಲ ಕೃಪೆ
    Beḷaku Tōrida Baduku, Helen‌ Kelar
    Author: Es. Ji. Sītārām, Maisūru
    Reader: Rājēśvari ec‌. rāv‌, Arvain‌

    16 min
  • ತೋಳಬಂದಿ ಮತ್ತು ಸೌಂದರ್ಯಸಾಧನೆ Tōḷabandi Mattu Saundarya

    Like it? ...... Subscribe and Share!
    Watch at https://www.youtube.com/channel/UCCON6n4lEgj6NsPqCLZdDSw
    Read at http://kannadakali.com/publications/podcasts
    Listen at https://anchor.fm/kannadakali
    Subscribe to our newsletter: https://kannadakali.com/kankalimitraru/?p=subscribe ಚೆನ್ನುಡಿ ತೋಳಬಂದಿ ಮತ್ತು ಸೌಂದರ್ಯಸಾಧನೆಮನುಷ್ಯ‌, ಹೆಂಗಸಾಗಲಿ ಗಂಡಸಾಗಲಿ, ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಏನೇನೋ ಮಾಡುತ್ತಾನೆ. ಹಾಲು, ಜೇನು, ತೈಲ, ತುಪ್ಪ ಗಳೊಂದಿಗೆ, ಸುಗಂಧ ದ್ರವ್ಯಗಳನ್ನು ಬೆರೆಸಿ, ಉಜ್ಜಿ ಉಜ್ಜಿ ಅಭ್ಯಂಜನ ಸ್ನಾನ ಮಾಡುತ್ತಾನೆ. ನಯವಾದ ರೇಷ್ಮೆಯ ಬಟ್ಟೆಯನ್ನು, ನಾಗಚರ್ಮದ ಪಾದರಕ್ಷೆಗಳನ್ನು ತೊಡುತ್ತಾನೆ. ಹೊಳೆಯುವ ಚಿನ್ನದ ಆಭರಣಗಳನ್ನು, ಕೋರೈಸುವ ವಜ್ರದ ಓಲೆ ಉಂಗುರಗಳನ್ನು, ನಡುವಲ್ಲಿ ವಂಕಿ, ಡಾಬುಗಳನ್ನು, ಕಾಲಲ್ಲಿ ಗೆಜ್ಜೆ, ಪಿಲ್ಲೆ, ಪೈಜಣ, ರುಳಿ, ಸರಪಳಿಗಳನ್ನು, ಮೂಗುತಿಯನ್ನು, ಕೈಗಳಲ್ಲಿ, ತೋಡೆ, ಕಡಗ, ಬಳೆಗಳನ್ನು ಹಾಕಿಕೊಳ್ಳುತ್ತಾನೆ. ಇವುಗಳಲ್ಲಿ ಯಾವುದು ನಿಜವಾದ ಸೌಂದರ್ಯವರ್ಧಕ? ಯಾವುದು ಶಾಶ್ವತ?ಇದಕ್ಕೆ ೭ನೆ ಶತಮಾನದ, ವಿದ್ವಾಂಸನಾದ ಭರ್ತೃಹರಿಯನ್ನು ಕೇಳೋಣ. ಈತ "ಸುಭಾಷಿತ ತ್ರಿಶತೀ" ಎನ್ನುವ ಗ್ರಂಥವನ್ನು ಬರೆದಿದ್ದಾನೆ. ಇದರಲ್ಲಿ ನೀತಿಶತಕ, ಶೃಂಗಾರಶತಕ, ವೈರಾಗ್ಯಶತಕ ಎನ್ನುವ ಮೂರು ಶತಕಗಳು - ಅಂದರೆ ನೂರು ಬಿಡಿ ಪದ್ಯಗಳ ಕಂತೆಗಳು ಇವೆ. ಈಗ ನೀತಿಶತಕದಲ್ಲಿನ ಪದ್ಯ ಒಂದನ್ನು ನೋಡೋಣ:ಕೇಯೂರಾ ನ ವಿಭೂಷಯಂತಿ ಭರ್ತೃಹರಿ, ನೀತಿಶತಕ, ಪದ್ಯ ೧೭.ಕೇಯೂರಾ ನ ವಿಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ವಲಾಃ ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾ ಧಾರ್ಯತೇ ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಂ ತೋಳಬಂದಿ ಒಡವೆಯಲ್ಲಚಂದ್ರ ಹೊಳಪಿನ ಹಾರ ತೋಳಬಂದಿಗಳೊಡವೆಯಲ್ಲ; ಮೈ ತೊಳೆದು ಪರಿಮಳಿಸಿ ತಲೆಯಲ್ಲಿ ಹೂ ಮುಡಿದರಲ್ಲ! ಕಂನಡೆಯು ತುಂಬಿರುವ ಕಂನುಡಿಯೆ ಚೆನ್ನೊಡವೆ ನರಗೆ; ನುಡಿಯೊಡವೆಯೇ ಒಡವೆ, ಅಳಿಯುವವು ಮಿಗಿದೊಡವೆ ಎಲ್ಲ.ಮೈ ಕೈ, ತೋಳು, ನಡು, ತಲೆ, ಕಾಲುಗಳಲ್ಲಿ ಏನೇ ಹಾಕಿಕೊಂಡರೂ ಅವು ಎಲ್ಲ ಕ್ರಮೇಣ ಮಸುಕಾಗಿ, ಕ್ಷೀಣಿಸುತ್ತ, ಅಳಿದು ಹೋಗುತ್ತವೆ. ಆದರೆ, ಒಳ್ಳೆಯ ನಡೆ ನಡತೆಯ ಜೊತೆ ಓಳ್ಳೆಯ ಮಾತುಗಳು ಅವು ನಿಜವಾದ, ಯಾವಾಗಲೂ ಕೆಡದೆ ಇರುವ, ಯವಾಗಲೂ ಶೋಭೆಯನ್ನು ಕೊಡುವ ಅಲಂಕಾರಗಳು, ಒಡವೆಗಳು.ಪ್ರಶ್ನೆ / ಚಾಲೆಂಜ್‌ : ಪ್ರಯತ್ನಿಸಿ೧. ಈ ಬಿತ್ತರಿಕೆಯಲ್ಲಿ ಹೇಳಿದವುಗಳಲ್ಲದೆ^ ಇತರ ಒಂದು ನೂರು (೧೦೦) ಸಾಂಪ್ರದಾಯಿಕ ಮತ್ತು ಆಧುನಿಕ ಉಡುಗೆ/ತೊಡುಗೆ/ಒಡವೆ/ಆಭರಣಗಳನ್ನು ಪಟ್ಟಿ ಮಾಡಬಲ್ಲಿರಾ? ೨. ಮನುಷ್ಯ ಸ್ನಾನಕ್ಕೆ ಬಳಸುವ ಒಂದು ನೂರು (೧೦೦) ಸಾಧನ/ದ್ರವ್ಯಗಳನ್ನು ಪಟ್ಟಿ ಮಾಡಬಲ್ಲಿರಾ? _________^ ರೇಷ್ಮೆಯ ಬಟ್ಟೆ, ನಾಗಚರ್ಮದ ಪಾದರಕ್ಷೆ, (ಚಿನ್ನದ / ವಜ್ರದ) ಓಲೆ ಉಂಗುರಗಳು, ವಂಕಿ, ಡಾಬು, ಗೆಜ್ಜೆ, ಪಿಲ್ಲೆ, ಪೈಜಣ, ರುಳಿ, ಸರಪಳಿ,, ಮೂಗುತಿ, ತೋಡೆ, ಕಡಗ, ಬಳೆಕನ್ನಡ ಕಲಿ, ಬಿತ್ತರಿಕೆ, ತೋಳಬಂದಿ ಮತ್ತು ಸೌಂದರ್ಯಸಾಧನೆKannada Kali Bittarike, July 08, 2023

    5 min
  • ಮುಗ್ಧ ಮನಸ್ಸುಗಳ ಸಾಕ್ಷಾತ್ಕಾರವೇ ಸಾಕೇತ ಸಿದ್ಧಾಂತ Mugdha Manas'sugaḷa Sākṣātkāravē Sākēta Sid'dhānta

    Like it? ...... Subscribe and Share!
    Watch at https://www.youtube.com/channel/UCCON6n4lEgj6NsPqCLZdDSw
    Read at http://kannadakali.com/publications/podcasts
    Listen at https://anchor.fm/kannadakali
    Subscribe to our newsletter: https://kannadakali.com/kankalimitraru/?p=subscribe

    ಮುಗ್ಧ ಮನಸ್ಸುಗಳ ಸಾಕ್ಷಾತ್ಕಾರವೇ
    ಸಾಕೇತ ಸಿದ್ಧಾಂತ ಒಂದು ಸಂದೇಶ
    ಬರೆಹ ಮತ್ತು ಓದು: ರೂಪ ಮಂಜುನಾಥ

    ಮೊನ್ನೆ ತಾನೆ ಕನ್ನಡ ಕಲಿಯ ಬಿತ್ತರಿಕೆ ಬಿಕಾಸ ೧೧-೨೦೨೩-೦೧ರಲ್ಲಿ ನಿಮಗೆ ಪರಿಚಯಿಸಿದ ಸಾಕೇತ ಸಿದ್ದಾಂತಕ್ಕೆ ಸ್ಪಂದಿಸಿ ಒಂದು ಸಂದೇಶವನ್ನು, ಲಲಿತ ಪ್ರಬಂಧವನ್ನು ಅನ್ನಿ, ಕಳಿಸಿದ್ದಾರೆ ರೂಪ ಮಂಜುನಾಥ. ಕರ್ನಾಟಕ ಸಾಂಸ್ಕೃತಿಕ ಸಂಘದ ಸುವರ್ಣ ಮಹೋತ್ಸವ‌ ಕಾರ್ಯಕ್ರಮದ ಕವಿಗೋಷ್ಠಿಯಲ್ಲಿ, ಕವನ ಓದಿದ ಮಕ್ಕಳ ಬಗ್ಗೆ, ಅವರನ್ನು ಬೆಳೆಸಿದ ತಾಯಿ ತಂದೆಯರ ಬಗ್ಗೆ, ಅರಳು ಮಲ್ಲಿಗೆ ಮತ್ತು ಗೋಕುಲ ಮಕ್ಕಳು ಎನ್ನುವ ಪುಟ್ಟ ಕನ್ನಡ ಸಾಂಸ್ಕೃತಿಕ ಸಮುದಾಯಗಳ ಬಗ್ಗೆ, ಹಾಗೂ ಸಾಕೇತ ಸಿದ್ಧಾಂತರ ಕವನಗಳನ್ನು ಪ್ರಕಟಿಸಿದ ಕನ್ನಡ ಕೂಟದ ಸ್ಮರಣ ಸಂಚಿಕೆಯ ಬಗ್ಗೆ, ತಮ್ಮ ಅನಿಸಿಕೆಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ.

    ರೂಪ ಮಂಜುನಾಥ
    ಕಲೆ ಹಾಗೂ ಸಾಹಿತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವ, ಹಾಸನ ಜಿಲ್ಲೆಯ ಹೊಳೆ ನರಸೀಪುರದ ರೂಪ ಮಂಜುನಾಥ ಅವರು, ಬಹುಮುಖ ಪ್ರತಿಭೆ ಎಂಬ ಗೌರವಕ್ಕೆ ಪಾತ್ರರಾದ ಲೇಖಕಿ, ಕವಯಿತ್ರಿ, ಚಿತ್ರಕಲಾವಿದೆ, ಮತ್ತು ಗಮಕ ಸಂಗೀತಗಳನ್ನು ಕಲಿತವರು. ಯೋಗ, ಧ್ಯಾನ, ಚಾರಣ, ಪ್ರವಾಸ, ಆರೋಗ್ಯಪಾಕಶಾಸ್ತ್ರಗಳಲ್ಲಿ ಇವರಿಗೆ ಅಪಾರ ಆಸಕ್ತಿ. ಈಗಾಗಲೆ ವಚನಾರ್ಪಣೆ, ಭಾವ-ಚಿತ್ತಾರ, ಮತ್ತು ಸ್ವಲ್ಪ ನಗೀ ಪ್ಲೀಸ್ ಎನ್ನುವ ಇವರ ಮೂರು ಪುಸ್ತಕಗಳು ಪ್ರಕಟವಾಗಿವೆ. ಇನ್ನೆರಡು ಪುಸ್ತಕಗಳು‌ ಬಿಡುಗಡೆಯ ಹಂತದಲ್ಲಿವೆ.

    Kannada Kali Bittarike June 24, 2023

    10 min
  • ಕನ್ನಡಕ್ಕೊಂದು ಸಾಕೇತ ಸಿದ್ಧಾಂತ Saketa Theory for Kannada

    A Saketa Theory for Kannada

    Like it? ...... Subscribe and Share!

    Watch at https://www.youtube.com/channel/UCCON6n4lEgj6NsPqCLZdDSw

    Read at http://kannadakali.com/publications/podcasts

    Listen at https://anchor.fm/kannadakali


    ಕನ್ನಡ ಕೇವಲ ಒಂದು ವ್ಯಾವಹಾರಿಕ ಮಾಧ್ಯಮವೋ?‌ ಆಥವ ಅದಕ್ಕಿಂತ ಮಿಗಿಲಾದ ಮೌಲ್ಯ ಏನಾದರೂ ಅದರಲ್ಲಿ ಇದೆಯೋ?ನಡೆ-ನುಡಿಗಳ ಸಾಪೇಕ್ಷ ವಾದವನ್ನು ಪುಷ್ಟೀಕರಿಸಿ ಕನ್ನಡ ಸಂಸ್ಕೃತಿಯ ನೆಲೆಯಲ್ಲಿ ಕನ್ನಡ ಕಲಿಯುವುದು ಮತ್ತು ಕನ್ನಡ ನುಡಿಯಲ್ಲಿ ಕನ್ನಡ ಸಂಸ್ಕೃತಿಯನ್ನು ಗಳಿಸುವುದು ಇವು ಅತ್ಯಂತ ಪರಿಣಾಮಕಾರಿ ವಿಧಾನಗಳು. ಎರಡು ಪ್ರಾತ್ಯಕ್ಷಿಕೆಗಳು.00:00 ಕನ್ನಡದ ಗುಟ್ಟು 00:36 ಕನ್ನಡಕ್ಕೊಂದು ಸಾಕೇತ ಸಿದ್ಧಾಂತ00:55 ನಡೆ ನುಡಿಗಳ ಸಂಕೀರ್ಣ01:12 ಸಾಕೇತ ಸಿದ್ಧಾಂತ03:10 ಹಿನ್ನೆಲೆ03:53 ಸಂದರ್ಭ - ಕವಿಗೋಷ್ಠಿ04:27 ಕವಿಗಳು05:27 ಪ್ರಾತ್ಯಕ್ಷಿಕೆ08:46 ಕನ್ನಡ ಕಲಿ ಕವಿತಾ ಚಾಲೆಂಜ್09:‌03 Credits

    10 min
  • Kattada- Na Griham ಕಟ್ಟಡವು - ನ ಗೃಹಂ

    Kannada version of   na griham grihamityahuh

    Like it? ......  Subscribe and Share!

    Watch at https://www.youtube.com/channel/UCCON6n4lEgj6NsPqCLZdDSw

    Read   at http://kannadakali.com/publications/podcasts

    Listen at https://anchor.fm/kannadakali

    ಚೆನ್ನುಡಿ ಕಟ್ಟಡವು ಮನೆಯನ್ನಲಹುದೆ?

        ಕೇಳು, ಮನೆ ಅವಳು ಮನೆಯವಳು.  

    ಮನೆಯವಳು ಮನೆಯೊಳಿರದಿರಲು

        ಕಾಡು ಅದು; ಕಾಡುವುದು ಮನವ. 

                 ಸಂಸ್ಕೃತ ಮೂಲ

    ಮಹಾಭಾರತ,     ಶಾಂತಿಪರ್ವ ೧೨-೧೪೪.೬   

    ನ ಗೃಹಂ ಗೃಹಮಿತ್ಯಾಹುಃ     

       ಗೃಹಿಣೀ ಗೃಹಮುಚ್ಯತೇ ; 

    ಗೃಹಂ ತು ಗೃಹಿಣೀಹೀನಂ 

        ಅರಣ್ಯ ಸದೃಶಂ ಭವೇತ್.

    2 min
  • ನಮ್ಮ ನಡುವಿದ್ದ ನಾಡೋಜ - Dr. Srinivas Havanur

    Like it? ...  Subscribe and Share!  

    Watch it ... https://www.youtube.com/mykannadakali

    Read  it ...  http://kannadakali.com/publications/podcasts

    Listen it ... https://anchor.fm/kannadakali 

    ನಮ್ಮ ನಡುವಿದ್ದ ನಾಡೋಜ 

    ಲೇಖನ: *** ಸಂಜಯ ಹಾವನೂರ 

    ಓದು:        ವಿಶ್ವೇಶ್ವರ ದೀಕ್ಷಿತ  

    [ ಇಂದು, ಡಿಸೆಂಬರ ೨೮. ಕನ್ನಡದ ಹೊಸ ಬೆಳಕು ಮೂಡಿದ ದಿನ.  ಶ್ರೀನಿವಾಸ ಎಂಬ ಒಬ್ಬ ಹಳ್ಳಿಯ ಬಡ ಹುಡುಗ ಹುಟ್ಟಿದ ದಿನ. ಎಲ್ಲ ಕಷ್ಟಗಳನ್ನೂ ಮೀರಿ, ತನ್ನ ಕಲಿಯುವ ಉತ್ಕಟತೆ, ಪುಸ್ತಕ ಪ್ರೇಮ, ಮತ್ತು ಹೊಸತನದ ಹಂಬಲಿಕೆಗಳಿಂದ ಒಬ್ಬ ಉತ್ಕೃಷ್ಟ ಸಂಶೋಧಕನಾಗಿ, ಸಂಶೊಧನೆಗೇ ಒಂದು ಹೊಸ ಅಯಾಮವನ್ನು ಜೋಡಿಸಿ, ನಾಡೋಜನಾಗಿ ಬೆಳೆದು ನಿಂತ ಕತೆ ಇದು.  ಕನ್ನಡ ಕಲಿಗಳಿಗಷ್ಟೆ ಅಲ್ಲ, ಎಲ್ಲರಿಗೂ ಸ್ಫೂರ್ತಿ ನೀಡುವ,  ಡಾ. ಶ್ರಿನಿವಾಸ ಹಾವನೂರರನ್ನು ಇದಕ್ಕಿಂತ ಹತ್ತಿರವಾಗಿ ಕಂಡು ಹೇಳಿದ ಕತೆ ನಿಮಗೆ ಬೇರೆ ಎಲ್ಲಿಯೂ ಸಿಗದು. – ಸಂ. ]  

    0:0.0 ಪೀಠಿಕೆ 

    1:09 ಬಾಲ್ಯ, ಮತ್ತು ವಿದ್ಯಾರ್ಥಿ ಜೀವನ 

    2:41.5 ದಿಗ್ಗಜರ ಸಂಗಡ 

    3:56.5 ಸೃಜನಶೀಲ ಲೇಖಕನಾಗಿ 

    5:17.5 ಜನ್ಮಜಾತ ಸಂಶೋಧಕ 

    7:01 ಸಂಶೋಧನೆಗೆ ಮೂರನೆಯ ಆಯಾಮ 

    9:58 ಕನ್ನಡಕ್ಕೆ ಹೊಸತನ ತಂದರು 

    1:31 ಕನ್ನಡವೆ ಜೀವನ 12:55 ನಮ್ಮನ್ನು ಅಗಲಿಸಿ ಅಗಲಿದ ನಾಡೋಜ  

    13:44.5 ಸಂಪರ್ಕ

    15 min
  • ಶಂಖಣ್ಣನ ಹಣೆಬರಹ - Śaṅkhaṇṇana haṇebaraha

    Like it? ...  Subscribe and Share!

    Watch it ... at https://www.youtube.com/mykannadakali

    Read  it ...  http://kannadakali.com/publications/podcasts

    Listen it ... https://anchor.fm/kannadakali

    ಶಂಖಣ್ಣನ ಹಣೆಬರಹ  ಯಾವ ಮನೆತನದಲ್ಲಿ ಹುಟ್ಟಿದರೇನು? ಏನು ಕಲಿತರೇನು? ಏನು ಮಾಡಿದರೇನು? ಮುಂದೆ ಏನಾಗುವುದು? ಎಲ್ಲವೂ ಹಣೆಬರಹ ಎಂದುಕೊಳ್ಳುವುದು ಸಾಮಾನ್ಯ. ವಿಶೇಷವಾಗಿ, ನಿರೀಕ್ಷಿಸಿದ್ದು ಆಗದಿದ್ದಾಗ, ಅಥವ,  ಕೆಲವರಿಗೆ ಸಿರಿ, ಸಂಪತ್ತು, ಸೌಲಭ್ಯ, ಖ್ಯಾತಿ, ಹೀಗೆಲ್ಲ, ಪಾತ್ರರಿದ್ದರೂ ಸಿಗದಿದ್ದಾಗ, ಅಪಾತ್ರರಿದ್ದರೂ ಅನಾಯಾಸವಾಗಿ ಸಿಕ್ಕಾಗ ಅಂದುಕೊಳ್ಳುವುದು ಹಣೆಬರಹ, ದೈವ, ಭಾಗ್ಯ, ಲಕ್ಕು,  ಅಂತ! 

    ಇದು ನಿಜವೋ, ಕೆವಲ ಸಮಾಧಾನಕ್ಕೋಸ್ಕರ ಹೇಳಿಕೊಳ್ಳುವ ಮಾತೋ? ಅಂತೂ ಒಂದಾನೊಂದು ಸಂದರ್ಭದಲ್ಲಿ ನಿಮಗೂ ಹೀಗೆ ಅನಿಸಿರಬಹುದು. ಎಲ್ಲವನ್ನೂ ಆದಂತೆ ಒಪ್ಪಿಕೊಂಡು ಕೂಡುವ ಜಾಯಮಾನ ಚಾಣಕ್ಯನದು ಅಲ್ಲ ಅದರೂ ಅವನು ಹೇಳಿದ್ದು ಹೀಗೆ:  

    ದೇವ ದಾನವರು ಕೂಡಿ ಸಮುದ್ರಮಂಥನ ಮಾಡಿದಾಗ, ಅಮೃತಕ್ಕಿಂತ ಮೊದಲು ನವರತ್ನಗಳು, ಕಲ್ಪವೃಕ್ಷ, ಕಾಮಧೇನು. ಹೊರಬಂದವು; ವಾರುಣಿ ಅಪ್ಸರೆಯರು ಬಂದರು; ಲಕ್ಷ್ಮಿಯೂ ಉದಿಸಿದಳು; ಶಂಖ ಕೂಡ ಹುಟ್ಟಿದ್ದು ಸಮುದ್ರದಲ್ಲೆ.  ಅಂದರೆ ಅಕ್ಕ ಲಕ್ಷ್ಮಿಗೂ ಅಣ್ಣ ಶಂಖನಿಗೂ ಸಮುದ್ರರಾಜನೇ ಅಪ್ಪ!  

    ಚಾಣಕ್ಯ ನೀತಿಯ, ೧೭ನೆ ಅಧ್ಯಾಯದ ಚೆನ್ನುಡಿ ೫: Chanakya Niti (Chap. 17 – Shloka 5 )  

    ಪಿತಾ ರತ್ನಾಕರೋ ಯಸ್ಯ,

        ಲಕ್ಷ್ಮೀರ್ಯಸ್ಯ ಸಹೋದರೀ,  

    ಶಂಖೋ ಭಿಕ್ಷಾಟನಂ ಕುರ್ಯಾತ್‌ -

         ಫಲಂ ಭಾಗ್ಯಾನುಸಾರತಃ!  

    ರತ್ನಗಳ ಆಕರವೆ ಆದ ಸಮುದ್ರರಾಜನೆ ಅಪ್ಪ;  ಸಿರಿಯೆ ತಾನಾದ ಲಕ್ಷ್ಮಿಯೆ ತನ್ನ ಅಕ್ಕ. ಆದರೂ, ಈ ಶಂಖಣ್ಣ, "ಭವತಿ, ಬಿಕ್ಷಾಂದೇಹಿ!" ಅಂತ ಮನೆ ಮನೆ ತಿರುಗುತ್ತಾನಲ್ಲ! ಅವನ ಹಣೆಬರಹ!  ಕಡಲರಸನೇ ತನ್ನ ಅಪ್ಪ ,    ಸಿರಿಯಕ್ಕ ತನ್ನ ಒಡಹುಟ್ಟು ; ಆದರೂ ತಿರಿವ ಶಂಖಣ್ಣ !    ಅವರವರ ಹಣೆಬರಹ ಎಲ್ಲ!   

    ಆದರೆ ಇದೇ ಚೆನ್ನುಡಿಯ ಇನ್ನೊಂದು ಪಾಠಾಂತರ ಹೀಗಿದೆ:  

    ಪಿತಾ ರತ್ನಾಕರೋ ಯಸ್ಯ,

         ಲಕ್ಷ್ಮೀರ್ಯಸ್ಯ ಸಹೋದರೀ,  

    ಶಂಖೋ ಭಿಕ್ಷಾಟನಂ ಕುರ್ಯಾತ್‌ - 

       ನ ದತ್ತಮುಪತಿಷ್ಠತೇ!  

    ಕಡಲರಸನೇ ತನ್ನ ಅಪ್ಪ ,

        ಸಿರಿಯಕ್ಕ ತನ್ನ ಒಡಹುಟ್ಟು ; 

    ಆದರೂ ತಿರಿವ ಶಂಖಣ್ಣ !

        ಕೊಡದೆಯೇ ಪಡೆಯುವುದು ಎಂತು?   

    ಇದರಲ್ಲಿ ಕೊನೆಯ ಒಂದು ಸಾಲು ಮಾತ್ರ ಬೇರೆ ಆಗಿದೆ. ಬಹಳ ಅರ್ಥಗರ್ಭಿತವಾಗಿದೆ.  ಮೊದಲನೆ ಚೆನ್ನುಡಿಯಲ್ಲಿ‌, ಎಲ್ಲವೂ ಹಣೆಬರಹ ಎಂದು ಕೈಚಾಚಿ ಕುಳಿತದ್ದಾದರೆ, ಎರಡನೆಯದರಲ್ಲಿ, "ಕೊಡದೆಯೆ ಪಡೆಯುವುದು ಹೇಗೆ?" ಎಂದು ಕೇಳುತ್ತಾನೆ ಚಾಣಕ್ಯ.  ಇಲ್ಲಿ "ಕೊಡದೆಯೇ " ಅಂದರೆ,  ಬರಿ ದಾನ ಕೊಡದೆ ಅಂತ ಅಲ್ಲ, ಪಾಪ-ಪುಣ್ಯ ಅಂತ ಪರಲೋಕದ ಚಿಂತೆಯೂ ಅಲ್ಲ. ಇಲ್ಲಿ, ಇಹಲೋಕದಲ್ಲಿ, ನಿಮ್ಮನ್ನು ನೀವು ಅರ್ಪಿಸಿಕೊಳ್ಳದೆ, ಪೂರ್ತಿ ತೊಡಗಿಸಿಕೊಳ್ಳದೆ, invest ಮಾಡದೆ, ಶಕ್ತಿಯನ್ನು ವ್ಯಯಿಸದೆ ಜೀವನದಲ್ಲಿ ಏನೂ ದೊರೆಯುವುದಿಲ್ಲ, ಏನನ್ನೂ ಸಾಧಿಸಲು ಆಗುವುದಿಲ್ಲ. ಬಿತ್ತದೇ ಬೆಳೆ ಬರುವುದು ಉಂಟೆ? No action, No reaction!   

    ಅದಕ್ಕೆ, ಹಣೆಬರಹ ಹಣೆಯಲ್ಲೆ ಇರಲಿ. ಬದುಕು ಕೈಯಲ್ಲಿದೆ.  ಕೈ ಕೆಸರಾದರೆ ಬಾಯ್‌ ಮೊಸರು! ಇಲ್ಲವಾದರೆ, ಇಂದೋ ನಾಳೆಯೋ, ಶಂಖಣ್ಣನ ಜೊತೆಗೆ ತಿರುಪೆ ಎತ್ತುತ್ತ ತಿರುಗುವುದೆ ಗತಿ.  

    ನಿಮ್ಮವನೆ ಆದ

     ವಿಶ್ವೇಶ್ವರ ದೀಕ್ಷಿತ  

    ಕನ್ನಡ ಕಲಿ, ಬಿತ್ತರಿಕೆ,  ಶಂಖಣ್ಣನ ಹಣೆಬರಹ 

    ಸಂಗೀತ : ಶ್ರೀಮತಿ ವಾಣಿ ಯದುನಂದನ 

    December 5,2022  

    0:00  ಪೀಠಿಕೆ 

    1:38 ಚೆನ್ನುಡಿ ೧ - ಅವರವರ ಹಣೆಬರಹ ಎಲ್ಲ 

    3:07  ಚೆನ್ನುಡಿ ೨ - ಕೊಡದೆಯೇ ಪಡೆಯುವುದು ಎಂತು? 

    5:12  Credits

    6 min
  • ಚಾತಕ - ಕವಿಸಮಯ Chataka KaviSamaya

    A Kannada Lesson - ಕನ್ನಡ ಪದ್ಯ ಪಾಠ

    Like it? ...  Subscribe and Share!

    Watch it ... at https://www.youtube.com/mykannadakali

    Read  it ...  http://kannadakali.com/publications/podcasts

    Listen it ... https://anchor.fm/kannadakali

    ಚಾತಕ, Clamator jacobinus, Jacobin cuckoo , pied cuckoo or pied crested cuckoo ಎಂದು ಸಾಮಾನ್ಯವಾಗಿ ಗುರುತಿಸಲ್ಪಟ್ಟ, ಒಂದು ಕೋಗಿಲ ಜಾತಿಯ ಪಕ್ಷಿ. ಇದಕ್ಕೆ ಶಾರಂಗ,  ಮಾತಂಗ,  ಸ್ತೋಕಕ ಎಂದು ಕೂಡ ಹೆಸರುಗಳು ಇವೆ.      ಸ್ತೋಕ  ಅಂದರೆ ಕಣ , ಹನಿ.  ಮಳೆಯ ಹನಿಗಳನ್ನು ಮಾತ್ರ, ನೇರವಾಗಿ,  ಕುಡಿದು ಬದುಕುವ ಪಕ್ಷಿ ಸ್ತೋಕಕ, ಚಾತಕ . ಅದರಲ್ಲೂ, ಸ್ವಾತಿ ನಕ್ಷತ್ರದ ಮಳೆಗಾಗಿ ಹಾತೊರೆಯುತ್ತ, ಒಂಟಿ ಕಾಲಿನ ಮೇಲೆ, ಬಾಯ್ತೆರೆದು, ವರ್ಷವಿಡೀ ನಿಂತುಕೊಳ್ಳುವ ಪಕ್ಷಿ.  ಇದೊಂದು ಕವಿಸಮಯ.  ಕವಿ ಕಾಳಿದಾಸ ತನ್ನ ಮೇಘದೂತದಲ್ಲಿ ಯಕ್ಷ-ಯಕ್ಷಿಯರ ಪ್ರೇಮದ ಹಂಬಲಿಕೆಯ ರೂಪಕವಾಗಿ ಇದನ್ನು ಬಳಸಿದ್ದಾನೆ. ಇದು ಇತರ ಕಾವ್ಯಗಳಲ್ಲಿ  ಮುಂದುವೆರೆದು ಜನಜನಿತವಾಗಿದೆ. ಈ ಕವಿಸಮಯದ ಆಧಾರದ ಮೇಲೆ ರಚಿತವಾದ ಮೂರು ಚೆನ್ನುಡಿಗಳು ಹೀಗಿವೆ:  

    ಮೊದಲನೆಯ ಚೆನ್ನುಡಿ:    ಗೆಳತಿ ಚಾತಕಿ - ರೇ ರೇ ಚಾತಕ  

    ಎಲೆ ಎಲೇ ಗೆಳತಿ ಚಾತಕಿಯೆ, ಚಣವೊಮ್ಮೆ,

            ಕಿವಿಗೊಟ್ಟು ನೀ ನನ್ನ ಮಾತೊಂದ ಕೇಳು:

     ಗಗನದಲಿ ಹಾರುವವು ಮೋಡಗಳು ಬಹಳ,

            ಕರಿ ನೀಲಿ ಬಿಳಿ ಬೂದಿ ಹಿರಿ ಕಿರಿದು ತೆರನ;

      ಮಳೆಗರೆದು ಇಳೆಯನ್ನು ತೋಯಿಸಲು ಕೆಲವು,

         ನಗೆ ಮಿಂಚು ಸೂಸಿ ಬರಿ ಗುಡುಗುವವು  ಹಲವು :

      ಕಂಡಕಂಡವರಿಗೆರಗುತ್ತ, ನೀ ಗೆಳತಿ,

    ಮೊರೆ ಇಡುತ ಬೇಡದಿರು, ನಾ ಬಡವಿ, ಎಂದು 

    ಸಂಸ್ಕೃತ ಮೂಲ:  ಭರ್ತೃಹರಿ, ನೀತಿಶತಕ-೪೯   

    ರೇ ರೇ ಚಾತಕ, ಸಾವಧಾನಮನಸಾ, ಮಿತ್ರ ಕ್ಷಣಂ ಶ್ರೂಯತಾಂ. 

     ಅಂಭೋದಾ ಬಹವೋ ಹಿ ಸಂತಿ ಗಗನೇ ಸರ್ವೇಽಪಿ ನೈತಾದೃಶಾಃ ;

    ಕೇಚಿದ್ ವೃಷ್ಟಿಭಿರಾರ್ದ್ರಯಂತಿ ವಸುಧಾಂ ಗರ್ಜಂತಿ ಕೇಚಿದ್ ವೃಥಾ ;

    ಯಂ ಯಂ ಪಶ್ಯಸಿ ತಸ್ಯ ತಸ್ಯ ಪುರತೋ  ಮಾ ಬ್ರೂಹಿ ದೀನಂ ವಚಃ.

             -----------------


    ಎರಡನೆಯ ಚೆನ್ನುಡಿ:      ಹಕ್ಕಿ ಚಾತಕಕೆ - ಏಕ ಏವ ಖಗ

    ಹಕ್ಕಿ ಚಾತಕಕೆ ಬಲು ಹೆಮ್ಮೆ,

       ಮಳೆಯ ನೀರೇ ಬೇಕು ಸೊಗಕೆ;

    ಬೇಡುವುದು ಘನರಾಜನನ್ನೆ:

       ಕೀಳ್ಜನಕೆ ಬಾಯ್ತೆರೆಯಲೇಕೆ?

    ಸಂಸ್ಕೃತ ಮೂಲ:    ಶ್ರೀಧರದಾಸನ ಸದುಕ್ತಿ ಕರ್ಣಾಮೃತ

    ಏಕ ಏವ ಖಗೋ ಮಾನೀ

         ಸುಖಂ ಜೀವತಿ ಚಾತಕಃ; 

    ಅರ್ಥಿತ್ವಂ  ಯಾತಿ ಶಕ್ತಸ್ಯ

         ನ ನೀಚಮುಪಸರ್ಪತಿ. 

          ------------------


    ಮೂರನೆಯ ಚೆನ್ನುಡಿ:      ಮೂರು ಯಾ ನಾಲ್ಕು - ಚಾತಕಸ್ತ್ರಿಚತುರಾನ್

    ಮೂರು ಯಾ ನಾಲ್ಕು ಹನಿ ನೀರು ನೀಡೆಂದು

        ಚಾತಕವು ಬಾಯ್ದೆರೆದು ಬೇಡಲಾ ಮುಗಿಲು

    ಮಳೆಗರೆದು ತುಂಬಿಸಿತು ಇಡಿಯ ಇಳೆಯನ್ನು

        ದೊಡ್ಡವರ ಔದಾರ್ಯಕಿದೆಯೆ ಇತಿಮಿತಿಯು!

    ಸಂಸ್ಕೃತ ಮೂಲ:  ಪೂರ್ವಜಾತಕಾಷ್ಟಕಂ 

    ಚಾತಕಸ್ತ್ರಿಚತುರಾನ್ ಪಯಃ ಕಣಾನ್

         ಯಾಚತೇ ಜಲಧರಂ ಪಿಪಾಸಯಾ; 

    ಸೋಽಪಿ  ಪೂರಯತಿ ವಿಶ್ವಮಂಭಸಾ :

        ಹಂತ ಹಂತ ಮಹತಾಮುದಾರತಾ! 

         ---------------


    0:00 ಪರಿಚಯ 

    1:18 ಗೆಳತಿ ಚಾತಕಿ - ರೇ ರೇ ಚಾತಕ 

    3:25 ಹಕ್ಕಿ ಚಾತಕಕೆ - ಏಕ ಏವ ಖಗ 

    4:21 ಮೂರು ಯಾ ನಾಲ್ಕು - ಚಾತಕಸ್ತ್ರಿಚತುರಾನ್

    6 min
  • ಕ್ಲಿಕ್ ಕ್ಲಿಕ್ ಗಣಕಪ್ಪ klik klik Ganakappa

    A Kannada Lesson - ಕನ್ನಡ ಪದ್ಯ ಪಾಠ  

    Like it? ...  Subscribe and Share! 

    Watch it ... at https://www.youtube.com/mykannadakali

    Read  it ...  http://kannadakali.com/publications/podcasts

    Listen it ... https://anchor.fm/kannadakali

    ಈ ಪದ್ಯವನ್ನು ನಿಮ್ಮ ವಿದ್ಯಾರ್ಥಿಗಳಿಗೆ ಮತ್ತು ಮಕ್ಕಳಿಗೆ ಕಲಿಸುವುದಾದರೆ, ಅಭ್ಯಾಸ, exercise,ಗಳ ಸಹಿತ ಇದರ ಪೂರ್ಣ ಪಠ್ಯ kannadakali.com ನಲ್ಲಿ ಸಿಗುತ್ತದೆ.

    5 min

About Secret of Kannada ಕನ್ನಡದ ಗುಟ್ಟು Kannadada Guttu

From the publisher's feed

Explore varied topics to unlock the secrets of Kannada Language