
Sign up to save your podcasts
Or


👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್
“ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ: ಬನ್ನಿ, ದಿನಕ್ಕೊಂದು ತಪ್ಪು ತಿಳುವಳಿಕೆಯನ್ನು, ತಾಯಿ ಭುವನೇಶ್ವರಿಯ ಕೃಪಾಕಟಾಕ್ಷದಿಂದ ಪರಿಹರಿಸಿಕೊಂಡು, ೧೦ನೆಯ ದಿನ, ಅಂದರೆ ನವಂಬರ ೧ರಂದು, ತಿಳಿಮನಸ್ಸಿನಿಂದ ರಾಜ್ಯೋತ್ಸವವನ್ನು ಆಚರಿಸೋಣ.೬. ಕನ್ನಡ ಕಲಿತರೆ ಇತರ ಭಾಷೆಗಳ ಕಲಿಕೆ ಕುಂಠಿತವಾಗುತ್ತದೆತಪ್ಪು. ಈ ಕಲ್ಪನೆ ತಪ್ಪು ಎಂದು ಅನೇಕ ವರದಿಗಳು ಸಾಬೀತು ಮಾಡಿವೆ. ಮೇಲಾಗಿ ಎರಡು ಭಾಷೆಗಳನ್ನು ಕಲಿತಾಗ ಬುದ್ದಿ ಚುರುಕಾಗುವುದು ಎಂದು ತಿಳಿಸುತ್ತವೆ. ಬೆಂಗಳೂರಿನಲ್ಲಿ, ಪ್ರಚಲಿತವಿರುವ ಎಲ್ಲ ಭಾಷೆಗಳನ್ನು ತಿಳಿದು ವ್ಯವಹರಿಸುವವರು ಕನ್ನಡಿಗರು ಮಾತ್ರ! ಬೆಂಗಳೂರು ಭಾರತದ ಸಿಲಿಕಾನ್ ನಗರವಾಗಿ ಎಲ್ಲ ಭಾಷಿಕರನ್ನು ಆಕರ್ಷಿಸುತ್ತಿರುವುದು ಸುಮ್ಮನೆ ಏನು? ಅತ್ಯಂತ ಸೃಜನ ಶೀಲ ಉದ್ಯಮ, ಸಾಹಿತ್ಯ, ಸಂಸ್ಕೃತಿಗಳ ಕೇಂದ್ರವಾಗಿ ಸಿಲಿಕಾನ್ ನಗರ ಎಂದು ಹೆಸರಾಗಿದ್ದು, ಇದಕ್ಕೆ ಕನ್ನಡಿಗರ ಬಹುಭಾಷಿಕತನವೆ ಕಾರಣ ಅಲ್ಲವೆ? ಕನ್ನಡದ ಕಠಿನತೆಯ ಮಿಥ್ಯೆ ೭ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೬, ಅಕ್ಟೋಬರ ೨೮, ೨೦೨೩
👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್
“ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ: ಬನ್ನಿ, ದಿನಕ್ಕೊಂದು ತಪ್ಪು ತಿಳುವಳಿಕೆಯನ್ನು, ತಾಯಿ ಭುವನೇಶ್ವರಿಯ ಕೃಪಾಕಟಾಕ್ಷದಿಂದ ಪರಿಹರಿಸಿಕೊಂಡು, ೧೦ನೆಯ ದಿನ, ಅಂದರೆ ನವಂಬರ ೧ರಂದು, ತಿಳಿಮನಸ್ಸಿನಿಂದ ರಾಜ್ಯೋತ್ಸವವನ್ನು ಆಚರಿಸೋಣ.Novರಾತ್ರಿ ಸರಣಿ, ದಿನ ೫, ಮಿಥ್ಯೆ ೫ : ಕನ್ನಡದ ಅದೈವಿಕತೆ೪. ಕನ್ನಡ ದೇವಭಾಷೆ (ಧಾರ್ಮಿಕ ಭಾಷೆ) ಅಲ್ಲತಪ್ಪು. ಹಲವಾರು ಜೈನ ಗ್ರಂಥಗಳು ಕನ್ನಡದಲ್ಲಿ ಇವೆ. ಲಿಂಗಾಯತ ಭಾಷೆ ಕನ್ನಡ. ಪುರಂದರಾದಿ ದಾಸಶ್ರೇಷ್ಠರೆಲ್ಲ ಕನ್ನಡದಲ್ಲೆ ಆರಾಧಿಸಿ ವಿಪುಲ ಸಂಗೀತ-ಸಾಹಿತ್ಯ ಸೃಷ್ಟಿಸಿದ್ದಾರೆ. “ದೇವರಿಗೆ ತಿಳಿಯುವುದು ಒಂದೇ ಭಾಷೆ, ಅದು ಕನ್ನಡ ಅಲ್ಲ” ಎನ್ನುವುದು ಹಾಸ್ಯಾಸ್ಪದ. ಸರ್ವಜ್ಞನಾದ ದೇವರಿಗೆ ಎಲ್ಲ ಭಾಷೆಗಳೂ ಗೊತ್ತು. ಸಂಸ್ಕೃತವೂ ದೇವಭಾಷೆ, ಕನ್ನಡವೂ ದೇವಭಾಷೆ; ತಮಿಳು, ತೆಲುಗು, ತುಳು, ಬಡಗ, ಕೊಡವ, ಕೊರಗ, ಕುಡಿಯ, ಗೊಂಡಿ, ಕೊಂಡ. ಮಂಡ, ಕುವಿ, ಕೋಯಾ, ಕೊಲಾಮಿ, ಕುರುಖ, ಒಳ್ಳಾರಿ, ತೋಡ, ದುರುವ, ಬ್ರಾಹ್ವಿಗಳೂ ದೇವಭಾಷೆಗಳು.ಭಕ್ತಿಯೆ ಪರಮ ಭಾಷೆ ಆಗಿರುವ ದೇವರಿಗೆ "ಸುಲಿದ ಬಾಳೆಯ ಹಣ್ಣಿನಂದದಿ ಸುಲಭವಾಗಿಹ ಕನ್ನಡ" ಅಂತರಂಗದ ಮಾತು.ಕನ್ನಡದ ದುಷ್ಪ್ರಭಾವದ ಮಿಥ್ಯೆ ೬ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೫, ಅಕ್ಟೋಬರ ೨೭, ೨೦೨೩
👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್ “ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ: ಬನ್ನಿ, ದಿನಕ್ಕೊಂದು ತಪ್ಪು ತಿಳುವಳಿಕೆಯನ್ನು, ತಾಯಿ ಭುವನೇಶ್ವರಿಯ ಕೃಪಾಕಟಾಕ್ಷದಿಂದ ಪರಿಹರಿಸಿಕೊಂಡು, ೧೦ನೆಯ ದಿನ, ಅಂದರೆ ನವಂಬರ ೧ರಂದು, ತಿಳಿಮನಸ್ಸಿನಿಂದ ರಾಜ್ಯೋತ್ಸವವನ್ನು ಆಚರಿಸೋಣ.Novರಾತ್ರಿ ಸರಣಿ, ದಿನ ೪, ಮಿಥ್ಯೆ ೪ : ಕನ್ನಡದ ಪ್ರಾಂತೀಯತೆ೪. ಕನ್ನಡ ಒಂದು ಪ್ರಾಂತೀಯ ಭಾಷೆ (Kannada is a regional, provincial, parochial, or a vernacular language)ತಪ್ಪು. ಕನ್ನಡಕ್ಕೆ ಯಾವ ಸೀಮೆಯೂ ಇಲ್ಲ. ಕನ್ನಡಿಗರು ಭಾರತದ ತುಂಬ ಇದ್ದಾರೆ. ವಿದೇಶಗಳಲ್ಲಿಯೂ ಗಣನೀಯ ಸಂಖ್ಯೆಯಲ್ಲಿ ಇದ್ದಾರೆ. ಇಲ್ಲಿಯೂ ಅಲ್ಲಿಯೂ ಕನ್ನಡ ಮಾತಾಡುತ್ತಾರೆ.ಪ್ರಶ್ನೆ "ಕನ್ನಡ ಮಾತ್ರ ಗೊತ್ತಿರುವ ಒಬ್ಬ ಭಾರತದ ಎಲ್ಲೆಡೆ ಬದುಕುಳಿಯಬಹುದೆ? ಜಗತ್ತಿನ ಎಲ್ಲೆಡೆ ಬದುಕುಳಿಯಬಹುದೆ?" ಎಂದಾದರೆ ಉತ್ತರ “ಇಲ್ಲ.” ಜಗತ್ತಿನ ಎಲ್ಲ ಭಾಷೆಗಳಿಗೂ ಇದೇ ಉತ್ತರ! ಕನ್ನಡ ಗೊತ್ತಿದ್ದರೆ ಕರ್ನಾಟಕದಲ್ಲಿ ಖಂಡಿತ ಬಾಳಬಹುದು ಮತ್ತು ಬೆಳೆಯಬಹುದು. ಆದ್ದರಿಂದ ಕನ್ನಡ ಮತ್ತು ಇತರ ಹಲವು ಭಾರತೀಯ ಭಾಷೆಗಳು ರಾಜ್ಯಗಳ ಭಾಷಗಳು. ಕನ್ನಡ ಕರ್ನಾಟಕ ರಾಜ್ಯದ ಭಾಷೆ. ಈ ಮೊದಲು ಹೇಳಿದಂತೆ, ಎಲ್ಲ ಭಾರತೀಯ ಭಾಷೆಗಳು ರಾಷ್ಟ್ರದ ಭಾಷೆಗಳು ಮತ್ತೂ ಭಾರತೀಯ ಸಂಸ್ಕೃತಿಯ ಆಕರ ಮತ್ತು ವಾಹಿನಿಗಳು. ಆದ್ದರಿಂದ ಕನ್ನಡವನ್ನು (ಭಾರತೀಯ ಭಾಷೆಯನ್ನು) regional, provincial, parochial, vernacular, ಪ್ರಾಂತೀಯ, ಎಂದೆಲ್ಲ ಸಂಬೋಧಿಸುವುದು ತಪ್ಪು. ನಿಜವಾಗಿಯೂ, ಇಂಥ ಮಾತುಗಳು ಹೀಗೆ ಅಸಡ್ಡೆಯಿಂದ ಮಾತಾಡುವವರ ಕಲೋನಿಯಲ್ ಗುಲಾಮೀಯ ಮಾನಸಿಕ ಮತ್ತು ಸಾಂಸ್ಕೃತಿಕ ದೌರ್ಬಲ್ಯಕ್ಕೆ ಕನ್ನಡಿ ಹಿಡಿಯುತ್ತವೆ.ಕನ್ನಡದ ಅದೈವಿಕತೆಯ ಮಿಥ್ಯೆ ೫ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೪, ಅಕ್ಟೋಬರ ೨೬, ೨೦೨೩
👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್
“ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳು೩. ಕನ್ನಡ ರಾಷ್ಟ್ರೀಯ ಭಾಷೆ ಅಲ್ಲತಪ್ಪು. ಭಾರತದ ರಾಷ್ಟ್ರ ಭಾಷೆ( National Language of India)ಅನ್ನುವುದೇ ಇಲ್ಲ. ರಾಷ್ಟ್ರ ಭಾಷೆ ಎಂದು ಯಾವ ಭಾಷೆಯನ್ನೂ ಗುರುತಿಸಿಲ್ಲ. ಸಂವಿಧಾನದ ಅನುಚ್ಛೇದ ೧೨೦ರಲ್ಲಿ ಕನ್ನಡ ಮತ್ತು ಹಿಂದಿ ಸಹಿತ ೨೨ ಭಾಷೆಗಳನ್ನು ಭಾರತದ ಅಧಿಕೃತ ಭಾಷೆಗಳು ಎಂದು ನಮೂದಿಸಲಾಗಿದೆ. ಇವು ಯಾವೂ ರಾಷ್ಟ್ರ ಭಾಷೆಗಳು(national language)ಗಳು ಅಲ್ಲ; ಎಲ್ಲವೂ ರಾಷ್ಟ್ರೀಯ ಭಾಷೆಗಳು, ಅಂದರೆ ರಾಷ್ಟ್ರಕ್ಕೆ ಸಂಬಂಧಿಸಿದ ಭಾಷೆಗಳು.ಸಂವಿಧಾನದಲ್ಲಿ ನಮೂದಿಸದ ಇನ್ನೂ ಸಾವಿರಾರು ಭಾರತೀಯ ಭಾಷೆಗಳು ಇವೆ. ಜನಮನದಲ್ಲಿ, ನಡೆನುಡಿಗಳಲ್ಲಿ ನೆಲೆಗೊಂಡಿರುವ ಈ ಭಾಷೆಗಳನ್ನು ಭಾರತದ ರಾಷ್ಟ್ರೀಯ ಭಾಷೆಗಳು ಅಲ್ಲ ಅನ್ನಬಹುದೇ?ಕನ್ನಡದ ಪ್ರಾಂತೀಯತೆಯ ಮಿಥ್ಯೆ ೪ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೩, ಅಕ್ಟೋಬರ ೨೫, ೨೦೨೩
👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್
“ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ, ದಿನ ೨, ಮಿಥ್ಯೆ ೨ : ಕನ್ನಡ ಲಿಪಿ೨. ಕನ್ನಡ ಲಿಪಿ ದೇವನಾಗರಿ ಲಿಪಿಯಿಂದ ಹುಟ್ಟಿದೆತಪ್ಪು. ಕನ್ನಡ ಮತ್ತು ದೇವನಾಗರಿ ಸಹಿತ ಬಹುತೇಕ ಎಲ್ಲ ಭಾರತೀಯ ಲಿಪಿಗಳಿಗೂ ಮೂಲ ಬ್ರಾಹ್ಮೀ ಲಿಪಿ. ಅಶೋಕನ ಶಿಲಾ ಶಾಸನಗಳು (ಕ್ರಿಪೂ ೨ನೆ ಶತಮಾನ) ಬ್ರಾಹ್ಮೀ ಲಿಪಿಯಲ್ಲಿ ಇವೆ.ಕದಂಬರ ಕಾಲದಲ್ಲಿ (ಕ್ರಿ.ಶ. ೩೪೫-೫೪೦)ಬ್ರಾಹ್ಮೀ ಲಿಪಿ ಮಾರ್ಪಾಟಾಗಿದ್ದು ಕನ್ನಡದ ಮೊದಲ ಲಿಪಿ ಎಂದು ಗುರುತಿಸಲಾಗಿದೆ. ಇಂದಿನ ಕನ್ನಡ ಲಿಪಿ ಕದಂಬ ಲಿಪಿಯಿಂದ ನೇರವಾಗಿ ವಿಕಾಸಗೊಂಡಿದೆ.ಗುಪ್ತರ ಕಾಲದಲ್ಲಿ (೪-೬ನೆ ಶತಮಾನ) ಬ್ರಾಹ್ಮೀಯಿಂದ ನಾಗರೀ, ಶಾರದಾ ಮತ್ತಿತರ ಲಿಪಿಗಳು ಹುಟ್ಚಿದವು. ನಂತರ, ನಾಗರಿಯಿಂದ ದೇವನಾಗರಿ, ಬಂಗಾಲಿ, ತಿಬೇಟಿ ಮಂತಾದ ಲಿಪಿಗಳು ಹುಟ್ಚಿದವು.ಅಂದರೆ ಕನ್ನಡ ಲಿಪಿ ದೇವನಾಗರಿಗಿಂತ ಮುಂಚೆಯೇ ಮತ್ತು ಸ್ವತಂತ್ರವಾಗಿ ಹುಟ್ಚಿದ್ದು.ಕನ್ನಡದ ಅರಾಷ್ಟ್ರೀಯತೆಯ ಮಿಥ್ಯೆ ೩ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೨, ಅಕ್ಟೋಬರ ೨೪, ೨೦೨೩
👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್
“ದ್ವೇಷ ಅಸೂಯಗಳಿಲ್ಲದೆ, ತಮ್ಮತನವನ್ನು ಬಿಡದೆ, ಎಲ್ಲರೊಂದಿಗೆ ಸಹಜೀವನ ನಡೆಸುತ್ತ, ಉತ್ಕೃಷ್ಟತೆಯೆ ಗುರಿಯಾಗಿ, ಭವಿಷ್ಯವನ್ನು ರೂಪಿಸಿಕೊಳ್ಳುತ್ತ ಬಾಳುವವರು ಕನ್ನಡಿಗರು.”ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುNovರಾತ್ರಿ ಸರಣಿ: ಬನ್ನಿ, ದಿನಕ್ಕೊಂದು ತಪ್ಪು ತಿಳುವಳಿಕೆಯನ್ನು, ತಾಯಿ ಭುವನೇಶ್ವರಿಯ ಕೃಪಾಕಟಾಕ್ಷದಿಂದ ಪರಿಹರಿಸಿಕೊಂಡು, ೧೦ನೆಯ ದಿನ, ಅಂದರೆ ನವಂಬರ ೧ರಂದು, ತಿಳಿಮನಸ್ಸಿನಿಂದ ರಾಜ್ಯೋತ್ಸವವನ್ನು ಆಚರಿಸೋಣ.Novರಾತ್ರಿ ಸರಣಿ, ದಿನ ೧, ಮಿಥ್ಯೆ೧ : ಕನ್ನಡದ ಹುಟ್ಟುಸಂಸ್ಕೃತದಿಂದ ಕನ್ನಡ ಹುಟ್ಟಿದೆ
ತಪ್ಪು. ಕನ್ನಡ ಸಂಸ್ಕೃತದಿಂದ ವಿಭಿನ್ನವಾದ ಮತ್ತು ಬೇರೆ ಮೂಲದ ಭಾಷೆ. ಕನ್ನಡ ದ್ರಾವಿಡ ಭಾಷಾ ಗುಂಪಿಗೆ ಸೇರಿದ ಒಂದು ಸ್ವತಂತ್ರ ಭಾಷೆ. ಜನರ ಬೆರೆಕೆ ಮತ್ತು ಪರಸ್ಪರ ವ್ಯವಹಾರಗಳಿಂದ ಭಾಷೆಗಳು ಒಂದರ ಮೇಲೊಂದು ಪ್ರಭಾವ ಬೀರುವುದು ಸಹಜ. ಸಂಸ್ಕೃತ ಮತ್ತು ಪ್ರಾಕೃತ ಎರಡೂ ಕನ್ನಡದ ಮೇಲೆ ಬಹಳ ಪ್ರಭಾವ ಬೀರಿವೆ. ಹಾಗೆಯೆ, ಕನ್ನಡ ಕೂಡ ಸಂಸ್ಕೃತದ ಮೇಲೆ ಪ್ರಭಾವ ಬೀರಿದೆ. ಕನ್ನಡ ಪದಗಳು "ತತ್ಸಮಗೊಂಡು" ಸಂಸ್ಕೃತದಲ್ಲಿ ಸೇರಿವೆ. ಇಂಥ ಅನೇಕ ಪದಗಳನ್ನು ರೆ. ಕಿಟೆಲ್ ತಮ್ಮ ಕೋಶದಲ್ಲಿ ಪಟ್ಟಿ ಮಾಡಿದ್ದಾರೆ.ಕನ್ನಡ ವ್ಯಾಕರಣದ ಮೇಲೆ ಸಂಸ್ಕೃತದ ಛಾಯೆ ಸಾಕಷ್ಟು ಬಿದ್ದಿದೆ. ಕನ್ನಡದ ನಾಲಗೆಗೆ ಒಗ್ಗದೆ ಇದ್ದರೂ, ಕನ್ನಡದಲ್ಲಿ ಸಂಸ್ಕೃತ ವರ್ಣಗಳು ಮತ್ತು ಸಂಸ್ಕೃತ ಮೂಲದ ಪದಗಳು ಹಾಸುಹೊಕ್ಕಾಗಿ ಸೇರಿಕೊಂಡಿವೆ; ಪೂರ್ತಿ ಕನ್ನಡದಲ್ಲಿ ಬೆರೆತುಕೊಳ್ಳದೆ, ಇಂದಿಗೂ ಸಂಸ್ಕೃತ ವ್ಯಾಕರಣ ನಿಯಮಗಳನ್ನೆ ಅನುಸರಿಸುತ್ತ ಪ್ರತ್ಯೇಕತೆಯನ್ನು, ಕಾಪಾಡಿಕೊಂಡಿವೆ. ಆದ್ದರಿಂದ, ಪುರಾತನವಾದ, ಜ್ಞಾನರಾಶಿಯನ್ನು ಹೊಂದಿರುವ, ಸಂಸ್ಕೃತವನ್ನು ಕನ್ನಡದ ಜನ್ಮದಾತೆ ಎನ್ನುವುದಕ್ಕಿಂತ ಕನ್ನಡದ ದೃಷ್ಟಿಯಿಂದ, ನೆರೆಮನೆಯ ಜಾಣ ಅಜ್ಜಿ ಎನ್ನುವುದು ಉಚಿತ.ಕನ್ನಡ ಲಿಪಿಯ ಮಿಥ್ಯೆ ೨ನ್ನು ನಾಳೆ ಅರಿತುಕೊಳ್ಳೋಣನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ, Novರಾತ್ರಿ ಸರಣಿ, ದಿನ ೧, ಅಕ್ಟೋಬರ ೨೩, ೨೦೨೩
👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
ಎಲ್ಲ ೧೦ ಮಿಥ್ಯೆಗಳು ಮತ್ತು ಬೋನಸ್ ಅಕ್ಟೋಬರ್ 23ರಿಂದ Novರಾತ್ರಿ ಪ್ರಾರಂಭ!ಏನಿದು Novರಾತ್ರಿ? ಒಂಬತ್ತು ದಿನ ಒಂದೊಂದು ಕನ್ನಡ ವಿಷಯದ ಮೇಲೆ ಬೆಳಕು ಚೆಲ್ಲಿ ತಿಳಿವು ಹೀರುತ್ತ, ಹತ್ತನೆಯ ದಿನ, ಅಂದರೆ ನವೆಂಬರ್ ೧ ರಂದು, ತಿಳಿಮನಸ್ಸಿನಿಂದ ರಾಜ್ಯೋತ್ಸವ ಆಚರಿಸುವುದು!ಹಚ್ಚೇವು ಕನ್ನಡದ ದೀಪಹಚ್ಚೇವು ಕನ್ನಡದ ದೀಪಬಹುದಿನಗಳಿಂದ ಮೈಮರೆವೆಯಿಂದಕೂಡಿರುವ ಕೊಳೆಯ ಕೊಚ್ಚೇವುಎಲ್ಲೆಲ್ಲಿ ಕನ್ನಡದ ಕಂಪು ಸೂಸಲುಅಲ್ಲಲ್ಲಿ ಕರಣ ಚಾಚೇವು - ಡಿ.ಎಸ್. ಕರ್ಕಿಕಾಯ್ದು ನೋಡಿ:ಕನ್ನಡದ ಬಗ್ಗೆ ಕನ್ನಡಿಗರಲ್ಲಿ ಹಬ್ಬಿಕೊಂಡಿರುವ ೧೦ ತಪ್ಪು ತಿಳುವಳಿಕೆಗಳುಹಮ್ಮುಗೆ: ದಿನ ೧, ಮಿಥ್ಯೆ ೧ : ಕನ್ನಡದ ಹುಟ್ಟು ದಿನ ೨, ಮಿಥ್ಯೆ ೨ : ಕನ್ನಡ ಲಿಪಿ ದಿನ ೩, ಮಿಥ್ಯೆ ೩ : ಕನ್ನಡದ ಅರಾಷ್ಟ್ರೀಯತೆ ದಿನ ೪, ಮಿಥ್ಯೆ ೪ : ಕನ್ನಡದ ಪ್ರಾಂತೀಯತೆ ದಿನ ೫, ಮಿಥ್ಯೆ ೫ : ಕನ್ನಡದ ಅದೈವಿಕತೆ ದಿನ ೬, ಮಿಥ್ಯೆ ೬ : ಕನ್ನಡದ ದುಷ್ಪ್ರಭಾವ ದಿನ ೭, ಮಿಥ್ಯೆ ೭ : ಕನ್ನಡದ ಕಠಿನತೆ ದಿನ ೮, ಮಿಥ್ಯೆ ೮ : ಕನ್ನಡದ ವೈಜ್ಞಾನಿಕ ದೌರ್ಬಲ್ಯ ದಿನ ೯, ಮಿಥ್ಯೆ ೯ : ಕನ್ನಡದ ಮರೆವು ದಿನ ೧೦, ಮಿಥ್ಯೆ ೧೦ : ಕನ್ನಡದಲ್ಲಿ ಆಡಳಿತ
ರಾಜ್ಯೋತ್ಸವದ ಬೋನಸ್! ಮಿಥ್ಯೆ ೧೧. ಕನ್ನಡಿಗರು ಅಭಿಮಾನಶೂನ್ಯರು!
👍 Like it? ...... Subscribe and Share!
👁️ Watch it 🕮 Read it 👂 Listen it
📧 Subscribe to our newsletter
ಹಳೆಯದೆಂದೆಲ್ಲವೂ ಒಳಿತೆನಲು ಹೊಲ್ಲ ಕಾಳಿದಾಸನ ಕಾವ್ಯದೃಷ್ಟಿಪುರಾಣ ಅಂದರೆ ಹಿಂದಿನದು, ಹಳೆಯದು. ಅದೆಲ್ಲ ಒಳ್ಳೆಯದು. ಹೊಸದೆಲ್ಲವೂ ಕೆಟ್ಟದ್ದು. ಹಿಂದಿನದನ್ನು ಪ್ರಶ್ನಾತೀತವಾಗಿ ಪಾಲಿಸಬಹುದು. ಆದರೆ ಹೊಸದನ್ನು ಒಪ್ಪಿಕೊಳ್ಳುವ ಮಾತೇ ಇಲ್ಲ. ಯಾವುದೇ ಹೊಸ ಮಾರ್ಗ, ಹೊಸ ವಿಚಾರವನ್ನು ಅನುಸರಿಸುವುದರಲ್ಲಿ ಮನುಷ್ಯನಿಗೆ ಅಳುಕು ಸಹಜವಾದದ್ದು. ಆದರೆ ಈ ಸಾಮಾನ್ಯ ನಿಲುವು ಎಷ್ಟು ಸರಿ? ಕಾಳಿದಾಸ ಹೇಳಿದ್ದೇನು? ಕವಿ ಕಾಣದ್ದನ್ನು ಕಂಡವರಾರು? ಗಾದೆ ಮಾತು ಹೇಳಿದ್ದೇನು? ಪುರಾಣಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವದ್ಯಮ್; ಸಂತಃ ಪರೀಕ್ಷ್ಯಾನ್ಯತರದ್ಭಜಂತೇ ಮೂಢಃ ಪರಪ್ರತ್ಯಯನೇಯಬುದ್ಧಿಃ.
- ಕಾಳಿದಾಸ (ಮಾಲವಿಕಾಗ್ನಿಮಿತ್ರ, ೧-೨)ಇದು ಕಾಳಿದಾಸನ ಮಾಲವಿಕಾಗ್ನಿಮಿತ್ರ ನಾಟಕದಲ್ಲಿ ಬರುವ ಸೂತ್ರಧಾರನ ಮಾತು.ಇದರ ಕನ್ನಡ ಭಾವಾನುವಾದ ಹೀಗಿದೆ: ಹಳೆಯದೆಂದೆಲ್ಲವೂ ಒಳಿತೆನಲು ಹೊಲ್ಲ; ಹೊಳವು ಹೊಸತೆಂದು ಹೀಗಳೆಯಲೂ ಸಲ್ಲ. ಬಲ್ಲವರು ಒಪ್ಪುವರು ಆರಯ್ದು ಎಲ್ಲ, ಹೆಡ್ಡರಿಗೆ ಹೆರನುಡಿಯೆ ನನ್ನಿ, ಸವಿಬೆಲ್ಲ!ಇಲ್ಲಿ ಪುರಾಣ ಅಂದರೆ ʼಪುರಾಣʼ,ಭಾಗವತ ಇತ್ಯಾದಿ, ಅಷ್ಟೇ ಅಲ್ಲ. ಕಾಳಿದಾಸ ಹೇಳಿದ್ದು ಕಾವ್ಯ ರಚನೆಯ ಹಿನ್ನೆಲೆಯಲ್ಲಿ. ಕಾಳಿದಾಸನಿಗಿಂತ ಮುಂಚಿನವರು, ಪೂರ್ವಸೂರಿಗಳಾದ ಭಾಸ, ಸೌಮಿಲ್ಲ ಮುಂತಾದವರು, ತಮ್ಮ ಪ್ರಸಿದ್ಧ ಕಾವ್ಯಗಳಿಂದ ಬೇರೆ ಕಾವ್ಯಗಳೆ ಇಲ್ಲ ಎನ್ನುವಂತೆ ಕಾವ್ಯದ ವ್ಯಾಖ್ಯಾನವನ್ನು ಜನಮನದಲ್ಲಿ ಸೃಷ್ಟಿಸಿದ್ದರು ಎನ್ನಬಹುದು. ಇಂತಹ ವಾತಾವರಣದಲ್ಲಿ, ಎಷ್ಟೇ ಪ್ರತಿಭಾನ್ವಿತನಾಗಿದ್ದರೂ ಹೊಸ ಕವಿಯಾದ ಕಾಳಿದಾಸನಿಗೆ ಅಳುಕು ಇದ್ದದ್ದೇ. ಆಗ, ಕಾವ್ಯ, ಹೊಸದಿರಲಿ ಹಳೆಯದಿರಲಿ, ಅದರ ಗುಣಾವಗುಣಗಳನ್ನು ಪರಿಶೀಲಿಸಿ ಅದರ ಶ್ರೇಷ್ಠತೆಯನ್ನು ನಿರ್ಣಯಿಸಬೇಕು ಎಂದು, ಹಿಂದಿನವರನ್ನು ಮನ್ನಿಸುತ್ತಲೂ, ಸಹೃದಯರಲ್ಲಿ ವಿನಯಪೂರ್ವಕವಾಗಿಯೂ, ತನಗೇ ತಿರುಗೇಟು ಕೊಡುವ ಸಂಭವ ಇದ್ದರೂ, ಈ ಮಾತಿನಲ್ಲಿ ಸಮಾಧಾನ ಹೇಳಿಕೊಂಡಿದ್ದಾನೆ. ಈಗ, ಜನರ ತಿಳುವಳಿಕೆ ಕಾಳಿದಾಸನ ಹೇಳಿಕೆಯ ಕಾವ್ಯವಿಶೇಷತೆಯನ್ನು ಮೀರಿ ವಿಸ್ತರಿಸಿದೆ. ಹಳೆಯದು ಎಂದರೆ ಆಗಲೆ ಪ್ರತಿಷ್ಠಿತವಾದದ್ದು, ಯಾವುದೇ ಪ್ರಶ್ನೆ/ಸಂಶಯ/ಸಂಕೋಚ ಇಲ್ಲದೆ ಕೂಡಲೆ ಒಪ್ಪಿಕೊಳ್ಳಬೇಕಾದದ್ದು ಎನ್ನುವ ಅರ್ಥ. ಅದು ಮೂರ್ತ ವಸ್ತುವಾಗಲಿ, ಅಮೂರ್ತ ವಿಷಯವಾಗಲಿ, ಯೋಜನೆ ಆಗಲಿ, ಯೋಚನೆ ಆಗಲಿ, ರಚನೆ ಆಗಲಿ, ಬರಿ ಕಲ್ಪನೆ ಆಗಲಿ, ಎಲ್ಲದಕ್ಗೂ ಅನ್ವಯಿಸುವಂತೆ ಅರ್ಥೈಸಲಾಗಿದೆ. ಇಂಥ ಅಭಿಪ್ರಾಯವನ್ನೆ "ಅಜ್ಜ ನೆಟ್ಟ ಆಲದ ಮರ ಅಂತ ಅದಕ್ಕೆ ನೇಣು ಹಾಕಿಕೊಳ್ಳಬಹುದೆ?" ಮತ್ತು ಅನುಲೋಮವಾಗಿ, " All that glitters is not gold" ಎನ್ನುವ ಗಾದೆ ಮಾತುಗಳಲ್ಲಿ ಕಾಣಬಹುದು. ಅದಕ್ಕೇ, ರವಿ ಕಾಣದ್ದನ್ನು ಕವಿ ಕಂಡ; ಕವಿ ಕಾಣದ್ದನ್ನು? ಓದುಗ ಕಂಡ! ಇದೇ ಕಾವ್ಯದ ಲಕ್ಷಣ ಅಲ್ಲವೆ?ನಿಮ್ಮವನೆ ಆದವಿಶ್ವೇಶ್ವರ ದೀಕ್ಷಿತಹಳೆಯದೆಂದೆಲ್ಲವೂ ಒಳಿತೆನಲು ಹೊಲ್ಲ, ಕಾಳಿದಾಸನ ಕಾವ್ಯದೃಷ್ಟಿಕನ್ನಡ ಕಲಿ, ಬಿತ್ತರಿಕೆ, October 09, 2023kannada bhashe,vishweshwar dixit,KAR TET/HSTR/GPSTR/SDA/FDA,ಕನ್ನಡ ಭಾಷೆ,ಕನ್ನಡ ಲಿಪಿ,ಕನ್ನಡ ಕಲಿಕೆ,Kalidasa,Poetry Old Vs New
👍 Like it? ...... Subscribe and Share! https://www.youtube.com/mykannadakali/?sub_confirmation=1
👁️ Watch at https//www.youtube.com/channel/UCCON6n4lEgj6NsPqCLZdDSw
🕮 Read at http://kannadakali.com/publications/podcasts
👂 Listen at https://anchor.fm/kannadakali
📧 Subscribe to our newsletter: https://kannadakali.com/kankalimitraru/?p=subscribeಕನ್ನಡ ಮತ್ತು AI, ಒಂದು ಪ್ರಯೋಗ : Kannada and AI, AN Experimentಕಳೆದ ಹತ್ತು ವರ್ಷಗಳಲ್ಲಿ ಗಣಕಗಳು ಅಗಾಧವಾದ ಸಾಮರ್ಥ್ಯವನ್ನು ಕಂಡಿವೆ. ಯಂತ್ರಾಂಶ (hardware)ಮತ್ತು ತಂತ್ರಾಂಶ (software)ಎರಡೂ ವರ್ಷ ವರ್ಷವೂ ಹೆಚ್ಚುತ್ತಿರುವ ಗತಿಯಲ್ಲಿ ಅಭಿವೃದ್ಧಿ ಹೊಂದಿವೆ. ಚಂದ್ರನ ಮೇಲೆ ಇಳಿದ ಮೊದಲ ಅಪೋಲೋ ನಿಯೋಜನೆಯಲ್ಲಿಯ ಗಣಕಗಳಿಗಿಂತ ಇಂದಿನ ಮೊಬೈಲ ದೂರವಾಣಿಗಳು ಕೂಡ ಸಾವಿರಾರು ಪಟ್ಟು ಶಕ್ತಿಯುತವಾಗಿವೆ ಅಂದರೆ ಇಂದಿನ ಸುಪರ-ಗಣಕಗಳ ಸಾಮರ್ಥ್ಯವನ್ನು ನೀವೇ ಊಹಿಸಿಕೊಳ್ಳಿ. ಚದುರಂಗದಾಟ, ಸಹಜ ನುಡಿ ತಿಳಿವಿಕೆ (natural language understanding), ಮಾತು ಗ್ರಹಿಕೆ ಇತ್ಯಾದಿ ಯಾವನ್ನು ನಾವು ಮಾನವನ ಬುದ್ದಿಮತ್ತೆಗೆ ಮೀಸಲು ಎಂದುಕೊಂಡಿದ್ದೆವೋ ಅವುಗಳಲ್ಲೆಲ್ಲ ಮೀರಿದ ಪ್ರಗತಿಯನ್ನು ಗಣಕಗಳು ಸಾಧಿಸಿವೆ. ಜೊತೆಗೆ ಅಂತರ್ಜಾಲದ ಬೆಳವಣಿಗೆ ಮತ್ತು ವ್ಯಾಪಕತೆಯಿಂದ ವಿಶ್ವಕೋಶಗಟ್ಟಲೆ ಜ್ಞಾನ ಪ್ರತಿಯೊಬ್ಬರ ಅಂಗೈಯಲ್ಲೂ ದೊರೆತಿದೆ. ಹೀಗೆ, ಕಳೆದ ೫೦ ವರ್ಷಗಳಿಂದ ನಡೆದ ಸಂಶೋಧನೆಯ ಫಲವಾಗಿ ಇಂದು ಕೃತಕಮತಿ (ಕೃ.ಮತಿ) ಮುಂಚೂಣಿಗೆ ಬಂದಿದೆ. ಉದಾಹರಣೆಗಾಗಿ, OpenAI ಕಂಪನಿಯ ChatGPT ಎನ್ನುವ ತಂತ್ರಾಂಶವು ಸಂಶೋಧಕರಲ್ಲೂ, ಶಾಲಾ ವಿದ್ಯಾರ್ಥಿಗಳಲ್ಲೂ, ಸಾಮಾನ್ಯರಲ್ಲೂ ಚಲಾವಣೆಗೆ ಬಂದಿದೆ. ChatGPT ತಂತ್ರಾಂಶ ಓಪನ್ ಏ.ಆಯ್.(OpenAI)ಅನ್ನುವ ಕಂಪನಿಯಿಂದ ಅಭಿವೃದ್ಧಿಪಡಿಸಲಾದ ಒಂದು ಕೃತಕ-ಮತಿ (AI)ಭಾಷಾ ಮಾದರಿ. ಇದು ಅಂತರ್ಜಾಲದಿಂದ ಬೃಹತ್ ಪ್ರಮಾಣದ ಪಠ್ಯದ ಮೇಲೆ ತರಬೇತಿ ಪಡೆದಿದೆ. ನಿರ್ದಿಷ್ಟ ಪ್ರಾಂಪ್ಟ್ ಒಂದನ್ನು ಕೊಟ್ಟಾಗ, ಮಾನವ ತರಹದ ನೈಸರ್ಗಿಕ ಭಾಷೆಯ ಪಠ್ಯವನ್ನು ರಚಿಸಬಹುದು. ಪ್ರಶ್ನೆಗಳಿಗೆ ಉತ್ತರಿಸಬಹುದು, ವಿವಿಧ ವಿಷಯಗಳ ಕುರಿತು ಸಂವಾದಿಸಬಹುದು. ಮತ್ತು ಸೃಜನಶೀಲ ಬರವಣಿಗೆಯ ತುಣುಕುಗಳನ್ನು ರಚಿಸಬಹುದು. ಹೆಚ್ಚಿನ ಮಾಹಿತಿಗೆ: https://chat-gpt.org/ಇಂಥ ಕೃಮತಿ(AIಯನ್ನು ಕನ್ನಡಕ್ಕೆ ಹೇಗೆ ಉಪಯೋಗಿಸಿಕೊಳ್ಳಬಹುದು? ಬರೆಹ ಕ್ಷೇತ್ರ ಒಂದನ್ನೆ ತೆಗೆದುಕೊಳ್ಳೋಣ. ಉತ್ತಮ ಲೇಖನ/ಕವಿತೆಗಳನ್ನು ಕೃಮತಿ(AI)ಬರೆಯಬಲ್ಲುದೆ? ಬರೆದದ್ದು ಸ್ವತಂತ್ರ ಮತ್ತು ಸೃಜನಶೀಲ ಬರವಣಿಗೆ ಅನ್ನಬಹುದೆ? ಅಂಥದ್ದನ್ನು ಕೃಮತಿ ಬರೆದದ್ದು ಎಂದು ಸಾಮಾನ್ಯ ಓದುಗ ಗುರುತಿಸಬಲ್ಲನೆ? ಗುರುತಿಸಿದರೂ, ಸ್ವಾಗತಿಸುವನೋ, ತಿರಸ್ಕರಿಸುವನೋ?ಈ ಪ್ರಶ್ನೆಗಳನ್ನು ಉತ್ತರಿಸುವ ಪ್ರಯತ್ನದಲ್ಲಿ, ಒಂದು ಪುಟ್ಟ ಸರಳ ಪ್ರಯೋಗ ಯಾಕೆ ಮಾಡಬಾರದು? ಸಂದರ್ಭ: ದಕ್ಷಿಣ ಕ್ಯಲಿಫೋರ್ನಿಯ ಕರ್ನಾಟಕ ಸಾಂಸ್ಕೃತಿಕ ಸಂಘದ (ಕೆಸಿಎ https://socalkca.com) ೫೦ನೇ ಹುಟ್ಟು ಹಬ್ಬ, ಸುವರ್ಣ ಮಹೋತ್ಸವ. ಅದರ ಸ್ಮರಣ ಸಂಚಿಕೆಗೆ ಒಂದು ಅಭಿನಂದನಾತ್ಮಕ ಸಂದೇಶ ಅಥವ ಲೇಖನ ಬೇಕಾಗಿತ್ತು. ಅದಕ್ಕಾಗಿ ಕೆಳಗಿನ ಪ್ರಾಂಪ್ಟ್‌ಗಳನ್ನು ChatGPTಗೆ ಒಂದೊಂದಾಗಿ ಕೊಟ್ಟೆ. ಏನಿದು ಪ್ರಾಂಪ್ಟು? ಅದೊಂದು ನಿರ್ದೇಶ ವಾಕ್ಯ, ಅಥವ ಪ್ರಶ್ನೆ ಆಗಬಹುದು. ಅದರೊಂದಿಗೆ ಕೆಲವು ಸೂಚ್ಯ ಮಾಹಿತಿ ತುಣುಕುಗಳನ್ನು ಸೇರಿಸಿದಷ್ಟೂ ಉತ್ತಮ ಉತ್ತರ ಬರಬಹುದು. ನಾ ಕೊಟ್ಟ ಪ್ರಾಂಪ್ಟಗಳು ಇಂಗ್ಲಿಷಲ್ಲೆ ಇದ್ದವು; ಕನ್ನಡದಲ್ಲಿ ಕೇಳಬಹುದಾಗಿತ್ತೇನೋ. ಇರಲಿ. ಈ ಪ್ರಾಂಪ್ಟುಗಳು ಯಾವವು?1. write an essay in kannada about karnataka cultural association of southern california - ಇಲ್ಲಿ essay ಅಂತ ಕೇಳಿದರೂ ನಾ ಎಣಿಸಿದಂತೆ ಪುಟಗಟ್ಟಲೆ ಉತ್ತರ ಬರಲಿಲ್ಲ. ಬದಲಾಗಿ ಮೂಡಿದ್ದು ಒಂದು ಪ್ಯಾರಾ!2. write a poem on ದಕ್ಷಿಣ ಕ್ಯಾಲಿಫೋನಿಯದ ಕರ್ನಾಟಕ ಸಾಂಸ್ಕೃತಿಕ ಸಂಘ - ಇಲ್ಲಿ ಕವಿತೆ ಅಂದರೆ ಅದೇನೂ ಛಂದೋಬದ್ಧವಾಗಿರಲಿಲ್ಲ; ಲಯ ಪ್ರಾಸಗಳೂ ಇರಲಿಲ್ಲ; ಸುಮ್ಮ ಸುಮ್ಮನೆ ಅಲ್ಲಲ್ಲಿ ವಾಕ್ಯಗಳನ್ನು ಒಡೆದು ಸಾಲು ಸಾಲುಗಳಲ್ಲಿ ಪೋಣಿಸುವ ನಟನೆಯೂ ಇರಲಿಲ್ಲ; ಸಾಮಾನ್ಯ ಗದ್ಯವೂ ಅಲ್ಲ; ಒಂದು ರೀತಿಯ "ನವೋನವ ಕವಿತೆ" ಅನ್ನಬಹುದು! 3. write a jingle in kannada for Golden Jubiliy celebration of Karnataka Cultural association of southern californiaಉತ್ತರಗಳು ತುಸು ಅಸಹಜ ಎನಿಸಿದರೂ, ಅಚ್ಚರಿಗೊಳಿಸುವಂಥವು. ಇಲ್ಲಿ ಕಂಡ ಕೆಲವು ಅಂಶಗಳು ಹೀಗಿವೆ:೧. ಅದೆ ಪ್ರಾಂಪ್ಟನ್ನು ಮತ್ತೆ ಕೊಟ್ಟರೂ ಉತ್ತರ ಬೇರೆ;೨. ಅನೇಕ ಪುನರುಕ್ತಿಗಳು;೩. ಉದ್ದುದ್ದ ವಾಕ್ಯಗಳು;೪. ಮಾತು-ಬರಹಗಳಲ್ಲಿ ಸಾಮಾನ್ಯವಾಗಿ ಕಂಡುಬರದ ಅಥವ ಅರ್ಥಹೀನ ಎನಿಸುವ ಪದಗಳ ಬಳಕೆ;೫. ಕವನ ಬರೆಯಲು ಕೇಳಿದರೂ ಗದ್ಯ ಬರಬಹುದು;೬. ವ್ಯಾಕರಣ ದೋಷಗಳು; ಮತ್ತು೭. ಕೆಲವು ಅಸಂಬಂಧಿತ ವಿಷಯ/ವಾಕ್ಯಗಳು.ChatGPTಯ ಮರುನುಡಿಗಳಲ್ಲಿ ಇದ್ದ ಪುನರುಕ್ತಿ ಮತ್ತು ಅಪ್ರಸ್ತುತ ವಾಕ್ಯಗಳನ್ನು ಕೈಬಿಟ್ಟು, ಕೆಲವು ವ್ಯಾಕರಣ ದೋಷಗಳನ್ನು ತಿದ್ದಿ, ಮತ್ತು ʼಪದ್ಯʼವನ್ನು ಸಾಲು ಸಾಲಾಗಿ ಜೋಡಿಸಿ ಒಂದು ಗದ್ಯ-ಪದ್ಯ ಲೇಖನವನ್ನು ಸ್ಮರಣ ಸಂಚಿಕೆಗೆ ಸಿದ್ಧಗೊಳಿಸಿದೆ. ಈ ಲೇಖನ ಕೃಮತಿ (AI)ತಂತ್ರಾಂಶ (ChatGPT)ಬರೆದ ಮೊದಲ ಕನ್ನಡ ಗದ್ಯ-ಪದ್ಯ ಏನೋ! ಇದೊಂದು ಅದ್ಭುತ ಬೆಳವಣಿಗೆ ಎಂದು ಕೆಲವರು ಸ್ವಾಗತಿಸಿ ಕೊಂಡಾಡಿದರೆ, ಇನ್ನು ಕೆಲವರು ಕೃಮತಿ ಮಾನವ ಕುಲವನ್ನೆ ನಾಶಮಾಡಬಲ್ಲ ಅಪಾಯಕಾರಿ ಬೆಳವಣಿಗೆ, ಇದನ್ನು ಇಲ್ಲಿಗೇ ನಿಲ್ಲಿಸಬೇಕು ಎನ್ನುತ್ತಿದ್ದಾರೆ. ChatGPT ನಿಜವಾಗಿಯೂ ಸೃಜನಶೀಲವಾಗಿ ಬರೆಯಬಲ್ಲುದೆ ಅಥವ ಅಂತರ್ಜಾಲದಲ್ಲಿನ ತುಣುಕುಗಳನ್ನು ತುಸು ಪೋಣಿಸಿ, ತುಸು ಕುಸುರಿಸಿ, ತುಸು - ಮುಂದೆ ಓದಿನಿಮ್ಮವನೆ ಆದ, ವಿಶ್ವೇಶ್ವರ ದೀಕ್ಷಿತಕನ್ನಡ ಕಲಿ ಬಿತ್ತರಿಕೆ ಸಪ್ಟಂಬರ ೧, ೨೦೨೩
Like it? ...... Subscribe and Share! https://www.youtube.com/mykannadakali/?sub_confirmation=1
Watch at https//www.youtube.com/channel/UCCON6n4lEgj6NsPqCLZdDSw
Read at http://kannadakali.com/publications/podcasts
Listen at https://anchor.fm/kannadakali
Subscribe to our newsletter: https://kannadakali.com/kankalimitraru/?p=subscribe
ಸುಳ್ಳು, ಸತ್ಯ, ಕಾವ್ಯ, ಮತ್ತು ನೇಮಿಚಂದ್ರ ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿಲೇಖನ : ವಿಶ್ವೇಶ್ವರ ದೀಕ್ಷಿತಸಂಗೀತ: ಆಕಾಶ ದೀಕ್ಷಿತಕಟ್ಟು-ಮುಟ್ಟು-ಮೆಟ್ಟುಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ, ವಾಮನಕ್ರಮಂಮುಟ್ಟುಗೆ ಮುಟ್ಟದಿರ್ಕೆ ಮುಗಿಲಂ, ಹರನಂ ನರನೊತ್ತಿ ಗಂಟಲಂಮೆಟ್ಟುಗೆ ಮೆಟ್ಟದಿರ್ಕೆ, ಕವಿಗಳ್ ಕೃತಿಬಂಧದೊಳಲ್ತೆ ಕಟ್ಟಿದರ್,ಮುಟ್ಟಿದರೊತ್ತಿ ಮೆಟ್ಟಿದರದೇನಳವಗ್ಗಳಮೋ ಕವೀಂದ್ರರಾ! - ನೇಮಿಚಂದ್ರ, ಲೀಲಾವತಿ ಪ್ರಬಂಧಗಣ: ಅಕ್ಷರ, ಜಾತಿ: ಕೃತಿ-೨೦, ಮಟ್ಟು: ಉತ್ಪಲಮಾಲೆ ವೃತ್ತಸೂತ್ರ: ಭ ರ ನ ಭ ಭ ರ ಲ ಗಂಭ ರ ನ ಭ ಭ ರ ಲ ಗಂ - ಸೂತ್ರದ ಅಕ್ಷರ ಗಣ, ಕೃತಿ-೨೦ ಜಾತಿ:, ಉತ್ಪಲಮಾಲೆ ವೃತ್ತ ಎನ್ನುವ ಮಟ್ಟಿನಲ್ಲಿರುವ ಇದು ನೇಮಿಚಂದ್ರನ ಲೀಲಾವತಿ ಪ್ರಬಂಧದಲ್ಲಿ ಬರುವ ಒಂದು ಪದ್ಯ.ನೇಮಿಚಂದ್ರ ೧೨ನೆ ಶತಮಾನದ ಕೊನೆಯ ಅರ್ಧದಲ್ಲಿ ಜೀವಿಸಿದ್ದ ಒಬ್ಬ ಕವಿ. ಸವದತ್ತಿಯ ರಟ್ಟ ವಂಶದ ಲಕ್ಷ್ಮಣರಾಜನ ಆಶ್ರಯದಲ್ಲಿ, ಅಂದರೆ ೧೧೭೦ರ ಆಸುಪಾಸಿನಲ್ಲಿ, ಲೀಲಾವತಿ ಪ್ರಬಂಧ ಎನ್ನುವ ಹದಿನಾಲ್ಕು ಆಶ್ವಾಸಗಳುಳ್ಳ ಪ್ರೌಢ ಚಂಪೂ ಕಾವ್ಯವನ್ನು ರಚಿಸಿದ. ಶೃಂಗಾರ ರಸವೆ ಈ ಕಾವ್ಯದ ಕೇಂದ್ರ ಬಿಂದು. ನೇಮಿನಾಥ ಪುರಾಣ ಎನ್ನುವುದು ಈತನ ಇನ್ನೊಂದು ಚಂಪೂ ಕಾವ್ಯ. ಮೊದಲೆನೆಯದಾಗಿ, ಹೀಗೆ, ಪಂಪ ರನ್ನರ ನಂತರ, ಅಳಿದು ಹೋಗುತ್ತಿದ್ದ ಚಂಪೂ ಕಾವ್ಯ ಪರಂಪರೆಯನ್ನು ಮತ್ತೆ ಪ್ರಚಲಗೊಳಿಸಿದ ಕೀರ್ತಿ ನೇಮಿಚಂದ್ರನಿಗೆ ಸಲ್ಲುತ್ತದೆ.ಅಸಾಧ್ಯವೆಲ್ಲವೂ ಸುಳ್ಳೆ?ಕ᳒ಟ್ಟು᳴ಗೆ᳴| ಕ᳒ಟ್ಟ᳴ದಿ᳒|ರ್ಕೆ᳴ ಕ᳴ಡ᳴|ಲಂ᳒ ಕ᳴ಪಿ᳴|ಸಂ᳒ತ᳴ತಿ᳴|, ವಾ᳒ಮ᳴ನ᳒|ಕ್ರ᳴ಮಂ᳒|ಮು᳒ಟ್ಟು᳴ಗೆ᳴| ಮು᳒ಟ್ಟ᳴ದಿ᳒|ರ್ಕೆ᳴ ಮು᳴ಗಿ᳴|ಲಂ᳒, ಹ᳴ರ᳴|ನಂ᳒ ನ᳴ರ᳴|ನೊ᳒ತ್ತಿ᳴ ಗಂ᳒|ಟ᳴ಲಂ᳒|ಮೆ᳒ಟ್ಟು᳴ಗೆ᳴| ಮೆ᳒ಟ್ಟ᳴ದಿ᳒|ರ್ಕೆ᳴, ಕ᳴ವಿ᳴|ಗ᳒ಳ್ ಕೃ᳴ತಿ᳴|ಬಂ᳒ಧ᳴ದೊ᳴|ಳ᳒ಲ್ತೆ᳴ ಕ᳒|ಟ್ಟಿ᳴ದ᳒|ರ್,ಮು᳒ಟ್ಟಿ᳴ದ᳴|ರೊ᳒ತ್ತಿ᳴ ಮೆ᳒|ಟ್ಟಿ᳴ದ᳴ರ᳴|ದೇ᳒ನ᳴ಳ᳴|ವ᳒ಗ್ಗ᳴ಳ᳴|ಮೋ᳒ ಕ᳴ವೀಂ᳒|ದ್ರ᳴ರಾ᳒|!ಎರಡನೆಯದಾಗಿ, ಒಂದು ಮುಖ್ಯ ಪ್ರಶ್ನೆಯನ್ನು ಇಲ್ಲಿ ಕೇಳುತ್ತಿದ್ದಾನೆ ನೇಮಿಚಂದ್ರ. ಸತ್ಯ ಎಂದರೆ ಏನು? what is Truth? ಪ್ರತ್ಯಕ್ಷವಾಗಿ ನಿಷ್ಕರ್ಷಿಸಬಹುದಾದ ವಾಸ್ತವಿಕ ಸತ್ಯವೋ, ಅಂತರ್ಗೋಚರ ಅನುಭವವೇದ್ಯ ಸತ್ಯವೋ? ವಸ್ತುನಿಷ್ಠ ವೈಜ್ಞಾನಿಕ ಸತ್ಯವೋ, ಅನುಭವನಿಷ್ಠ ಸಂವೇದ್ಯ ಕಾವ್ಯಸತ್ಯವೋ? Experimental truth or experiential truth?ಕಟ್ಟುಗೆ ಕಟ್ಟದಿರ್ಕೆ : ಕಟ್ಟಲಿ ಕಟ್ಟದೆ ಇರಲಿ. ಏನು ಕಟ್ಟುವುದು? ಕಡಲಂ : ಸಮುದ್ರಕ್ಕೆ ಸೇತುವೆಯನ್ನು ಕಟ್ಟುವುದು. ಯಾರು ಕಟ್ಟಿದರು? ಕಪಿಸಂತತಿ : ಕೋತಿಗಳು! ಎಲ್ಲಿ?! : ರಾಮಾಯಣದಲ್ಲಿ.ಮುಟ್ಟುಗೆ ಮುಟ್ಟದಿರ್ಕೆ: ಮುಟ್ಟಲಿ ಮುಟ್ದೆ ಇರಲಿ. ಏನು ಮುಟ್ಟುವುದು? ಮುಗಿಲಂ : ಆಕಾಶವನ್ನು. ಯಾರು? ವಾಮನಕ್ರಮಂ : ಕುಳ್ಳ ವಾಮನ ಮುಗಿಲೆತ್ತರಕ್ಕೆ ಬೆಳೆದು ಬೆಳೆದು, ಮೊದಲನೆ ಹೆಜ್ಜೆಯಿಂದ ಭೂಮಿಯನ್ನು ಆಕ್ರಮಿಸಿ, ಎರಡನೆ ಹೆಜ್ಜೆಯಿಂದ ಆಕಾಶವನ್ನು ಆವರಿಸಿ, ಮೂರನೆಯ ಹೆಜ್ಜೆಯಿಂದ ಬಲಿಯನ್ನು ಪಾತಾಳಕ್ಕಿಳಿಸಿ ತ್ರಿವಿಕ್ರಮನಾದನಲ್ಲ! ಎಲ್ಲಿ? ದಶಾವತಾರದಲ್ಲಿ!ಮೆಟ್ಟುಗೆ ಮೆಟ್ಟದಿರ್ಕೆ: ತುಳಿಯಲಿ ತುಳಿಯದೆ ಇರಲಿ. ಏನು ತುಳಿಯುವುದು? ಹರನಂ: ಶಿವನನ್ನು. ಯಾರು? ಹೇಗೆ? ನರನೊತ್ತಿ ಗಂಟಲಂ : ಅರ್ಜುನನು ಶಿವನ ಗಂಟಲನ್ನು ಹಿಸುಕಿ. ಎಲ್ಲಿ? ಮಹಾಭಾರತದ ವನಪರ್ವದಲ್ಲಿ.ಇದೆಲ್ಲ ಸಾಧ್ಯವೋ? ಸತ್ಯ ಎನಿಸಿಕೊಳ್ಳಬೇಕಾಗಿದ್ದರೆ ಸಾಧ್ಯವಾಗಿರಬೇಕಿಲ್ಲ, (ಸಂಭವನೀಯವಾಗಿದ್ದರೆ) ಸಾಧ್ಯವಾಗಬಹುದಾಗಿದ್ದರೆ ಸಾಕು; ಅಂದರೆ ಊಹೆಗೆ ನಿಲುಕಿ ಮನಸ್ಸಿನ ಕಣ್ ಮುಂದೆ ಮಿಂಚಿ ಪುಳಕವಾದರೆ ಅದು ಕಾವ್ಯಸತ್ಯ. ಹಗ್ಗದಲ್ಲಿ ಹಾವನ್ನು ಮೊದಲ ಬಾರಿ ಕಂಡಾಗ ನಿಜ ಹಾವೇ ಎಂದು ಹೆದರಿಕೆ ಆಗುವದು ಸಹಜ. ಆದರೆ ಒಮ್ಮೆ ವಸ್ತುನಿಷ್ಠ ಸತ್ಯದ ಅರಿವಾದರೆ, ಮತ್ತೆ ಮತ್ತೆ ಹಗ್ಗದಲ್ಲಿ ಹಾವನ್ನು ಕಾಣುವುದು ಅಸಾಧ್ಯ ಮತ್ತು ಒಲ್ಲದ ಮಾತು. ಆದರೆ, ಕಾವ್ಯಸತ್ಯವನ್ನು ಮತ್ತೆ ಮತ್ತೆ ಅನುಭವಿಸಲು ಸಾಧ್ಯವೂ ಹೌದು ಮತ್ತು ಇಷ್ಟವೂ ಹೌದು. ಇದೇ ಕಾವ್ಯದ ಮಹತ್ವ. , ವಿರಹ-ಪ್ರೇಮಗಳ ರಸವನ್ನು ಹರಿಸಿ, ಸಂದೇಶ ಒಂದನ್ನು ಮುಟ್ಟಿಸುವಂತೆ, ಮುಗಿಲಲ್ಲಿ ಮನ ಬಂದಂತೆ ಹಾರಾಡುವ ಮೋಡ ಒಂದನ್ನು ಒಪ್ಪಿಸುವುದು ಸಾಧ್ಯವೆ? ಅಸಾಧ್ಯ! ಆದರೂ, ಕಾಳಿದಾಸನ ಮೇಘದೂತವನ್ನು ಮತ್ತೆ ಮತ್ತೆ ಓದಬೇಕೆನಿಸುವುದಿಲ್‌ಲವೆ? ಮತ್ತೆ ಮತ್ತೆ ಓದಿ ಆನಂದಿಸುವುದಿಲ್ಲವೆ? ಅಷ್ಟೇ ಏಕೆ, ಎಷ್ಟು ಭಾಷೆಗಳಲ್ಲಿ ಈ ಮೇಘದೂತ ಹುಟ್ಟಿಕೊಂಡಿಲ್ಲ? ಕಾಳಿದಾಸನ ನಂತರ, ಇಂತಹ ಎಷ್ಟು ಇತರ ಕಾವ್ಯಗಳು ಹುಟ್ಟಿಕೊಂಡಿಲ್ಲ? ಹೀಗೆ, ಸಂದೇಶ-ಕಾವ್ಯ ಎನ್ನುವ ಒಂದು ಕಾವ್ಯ-ಪ್ರಕಾರವನ್ನೆ ಈ ಮೇಘದೂತ ಹುಟ್ಟು ಹಾಕಿಲ್ಲವೆ?ಕವಿಗಳ್ ಕೃತಿಬಂಧದೊಳಲ್ತೆ ಕಟ್ಟಿದರ್,ಮುಟ್ಟಿದರೊತ್ತಿ ಮೆಟ್ಟಿದರದೇನ್ ಅಳವಗ್ಗಳಮೋ ಕವೀಂದ್ರರಾ!ಇಂಥ ಅಸಾಧ್ಯಗಳನ್ನಲ್ಲ ತಮ್ಮ ಕಾವ್ಯಗಳಲ್ಲಿ ಸಾಧ್ಯಗೊಳಿಸಿ ಕಟ್ಟಿದರು, ಮುಟ್ಟಿದರು, ಮತ್ತು ಮೆಟ್ಟಿದರು. ನಮ್ಮ ಕವೀಂದ್ರರ ಕಲ್ಪನಾ ಶಕ್ತಿಗೆ ಮೇರೆ ಇದೆಯೆ?ಈಗ ನೀವೇ ಹೇಳಿ ಯಾವುದು ಸತ್ಯ? ನೇಮಿಚಂದ್ರನಿಗೆ ಒಂದಿನಿತು ಸಂಶಯವೂ ಇಲ್ಲ!ನಿಮ್ಮವನೆ ಆದ, ವಿಶ್ವೇಶ್ವರ ದೀಕ್ಷಿತಕನ್ನಡ ಕಲಿ, ಕನ್ನಡದ ಗುಟ್ಟುಸುಳ್ಳು, ಸತ್ಯ, ಕಾವ್ಯ, ಮತ್ತು ನೇಮಿಚಂದ್ರಲೇಖನ: ವಿಶ್ವೇಶ್ವರ ದೀಕ್ಷಿತಸಂಗೀತ: ಆಕಾಶ ದೀಕ್ಷಿತಬಿತ್ತರಿಕೆ ೧೨ ಕಾಲ ೨೦೨೩, ಸಂಖ್ಯೆ ೦೨: ಬಿಕಾಸ ೧೨-೨೦೨೩-೦೨Episode 12, Year 2023 No. 02 : BIKASA 12-2023-02
From the publisher's feed