
Sign up to save your podcasts
Or


ಪ್ರತಿಯೊಬ್ಬರೂ ತಾನು ತ್ರಿಗುಣಗಳಿಂದ ಪಡೆದ ಸ್ವಭಾವಕ್ಕೆ ಅನುಗುಣವಾಗಿ ನಡೆಯುತ್ತಾನೆ. ಆದ್ದರಿಂದ, ತಿಳುವಳಿಕೆ ಉಳ್ಳವನು ಕೂಡ ತನ್ನ ಸ್ವಭಾವಕ್ಕೆ ಅನುಗುಣವಾಗಿ ಕಾರ್ಯ ನಡೆಸುತ್ತಾನೆ. ನಿಗ್ರಹದಿಂದ ಫಲವೇನು ??
ಕೇಳಿ... ಕೇಳಿಸಿ...
ಅಜ್ಞಾನ ತಿಮಿರಚ್ಛೇದಂ ಬುದ್ಧಿ ಸಂಪತ್ ಪ್ರದಾಯಕಂ //
ವಿಜ್ಞಾನ ವಿಮಲಂ ಶಾಂತಂ ವಿಜಯಾಖ್ಯ ಗುರುಂಭಜೇ //
ಯಾರು ಅಸೂಯೆಯಿಂದ ಈ ಬೋಧನೆಗಳನ್ನು ಅಲಕ್ಷಿಸುವರೋ ಮತ್ತು ಅವನ್ನು ಅನುಸರಿಸುವುದಿಲ್ಲವೋ ಅವರು ಯಾವ ತಿಳುವಳಿಕೆಯೂ ಇಲ್ಲದವರು, ವಿಮೂಢರು ಎಂದು ಭಾವಿಸಬೇಕು... ಪರಿಪೂರ್ಣತೆಗಾಗಿ ಅವರು ಪಡುವ ಶ್ರಮವೆಲ್ಲ ನಾಶವಾಗುವುವು ಎಂದು ತಿಳಿಸುವ ಶ್ಲೋಕ...
ಕೇಳಿ... ಕೇಳಿಸಿ...
ನನ್ನ ಅಪ್ಪಣೆಗೆ ಅನುಸಾರವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿ. ಈ ಬೋಧನೆಯನ್ನು ಅಸೂಯೆಯಿಲ್ಲದೆ, ಶ್ರದ್ಧೆಯಿಂದ ಅನುಸರಿಸುವವರು ಕರ್ಮಫಲದ ಬಂಧನದಿಂದ ಮುಕ್ತರಾಗುತ್ತಾರೆ ಎಂದು ತಿಳಿಸುವ ಶ್ಲೋಕ...
ಕೇಳಿ.... ಕೇಳಿಸಿ....
ಅರ್ಜುನ, ನಿನ್ನ ಎಲ್ಲ ಕರ್ಮಗಳನ್ನು ನನಗೆ ಅರ್ಪಿಸಿ, ನನ್ನನ್ನು ಸಂಪೂರ್ಣವಾಗಿ ಅರಿತುಕೊಂಡು, ಫಲಾಪೇಕ್ಷೆಯಿಲ್ಲದೆ, ಒಡೆತನದ ಭಾವವಿಲ್ಲದೆ, ಜಡತ್ವದಲ್ಲಿ ಯುದ್ಧಮಾಡು ಎಂದು ಕೃಷ್ಣ ಅರ್ಜುನನಿಗೆ ತಿಳಿಸುತ್ತಿರುವ ಶ್ಲೋಕ...
ಕೇಳಿ... ಕೇಳಿಸಿ...
ಪ್ರಕೃತಿಯ ಗುಣಗಳಿಂದ ಮೂಢರಾದ ಅಜ್ಞಾನಿಗಳು ಸಂಪೂರ್ಣವಾಗಿ ಐಹಿಕ ಚಟುವಟಿಕೆಗಳಲ್ಲಿ ತನ್ಮಯರಾಗುತ್ತಾರೆ. ಕೆಲಸ ಮಾಡುವವರ ಅಜ್ಞಾನದಿಂದ ಈ ಕರ್ತವ್ಯಗಳು ಕೆಳಮಟ್ಟದವಾದರೂ ವಿವೇಕಿಗಳು ಅವರನ್ನು ವಿಚಲಗೊಳಿಸಲು ಪ್ರಯತ್ನಿಸಬಾರದು ಎಂದು ತಿಳಿಸುವ ಶ್ಲೋಕ...
ಕೇಳಿ.... ಕೇಳಿಸಿ....
ಹೇ ಮಹಾಬಾಹುವಾದ ಅರ್ಜುನ, ಪರಮ ಸತ್ಯವನ್ನು ತಿಳಿದವನು ಇಂದ್ರಿಯಗಳಲ್ಲಿ ಮತ್ತು ಇಂದ್ರಿಯ ತೃಪ್ತಿಯಲ್ಲಿ ತೊಡಗುವುದಿಲ್ಲ. ಅವನಿಗೆ ಭಕ್ತಿಸೇವೆ ಮತ್ತು ಫಲದಾಸೆ ಇರುವ ಕರ್ಮ ಇವುಗಳಲ್ಲಿನ ವ್ಯತ್ಯಾಸ ತಿಳಿದಿರುತ್ತದೆ ಎಂದು ಕೃಷ್ಣ ತಿಳಿಸುತ್ತಿರುವ ಶ್ಲೋಕ...
ಕೇಳಿ.... ಕೇಳಿಸಿ....
ಕಾರ್ಯಗಳನ್ನು ವಾಸ್ತವವಾಗಿ ಪ್ರಕೃತಿಯ ತ್ರಿಗುಣಗಳೇ ಮಾಡುತ್ತವೆ. ಆದರೆ, ಅಹಂಕಾರದಿಂದ ಮೂಢನಾದವನು ತಾನೇ ಕಾರ್ಯಗಳನ್ನು ಮಾಡುತ್ತೇನೆ ಎಂದು ಭಾವಿಸುತ್ತಾನೆ ಎಂದು ತಿಳಿಸುವ ಶ್ಲೋಕ..
ಕೇಳಿ... ಕೇಳಿಸಿ
ನಿಯತ ಕರ್ತವ್ಯಗಳ ಕರ್ಮಫಲಕ್ಕೆ ಅಂಟಿಕೊಂಡಿರುವವರ ಕೆಲಸವನ್ನು ನಿಲ್ಲಿಸಿಬಿಟ್ಟರೆ ಅವರ ಬುದ್ಧಿ ಕಲಕುತ್ತದೆ. ಆದುದರಿಂದ, ವಿದ್ವಾಂಸರು ಅವರ ಕೆಲಸವನ್ನು ನಿಲ್ಲಿಸಿಬಿಡಬಾರದು. ಭಕ್ತಿಭಾವದಿಂದ ಕೆಲಸಮಾಡಿ, ಎಲ್ಲಾ ಬಗೆಯ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದು ತಿಳಿಸುವ ಶ್ಲೋಕ..
ಕೇಳಿ... ಕೇಳಿಸಿ
ಅಜ್ಞಾನಿಗಳಾದವರು ಹೇಗೆ ಫಲಾಸಕ್ತರಾಗಿ ಕರ್ಮವನ್ನು ಮಾಡುತ್ತಾರೆಯೋ, ಹಾಗೆಯೇ ವಿದ್ವಾಂಸರು ಆಸಕ್ತಿ ಇಲ್ಲದೆ, ಜನಸಾಮಾನ್ಯರನ್ನು ಯೋಗ್ಯ ಮಾರ್ಗದಲ್ಲಿ ಕರೆದೊಯ್ಯಲು ಕರ್ಮವನ್ನು ಮಾಡಬೇಕು ಎಂದು ಕೃಷ್ಣ ತಿಳಿಸುತ್ತಿರುವ ಶ್ಲೋಕ...
ಕೇಳಿ... ಕೇಳಿಸಿ...
From the publisher's feed