ಸಿರಿದನಿ SIRIdani

ಸಿರಿದನಿ SIRIdani

By Shwetha InitiativeBusinessNon-Profit
Download on the App Store

ಸಿರಿದನಿ SIRIdani episodes

  • ಸಿರಿ ಕನ್ನಡ ಮುನ್ನೋಟ SIRI KANNADA PROMO

    ಸಿರಿದನಿಯ ನವೆಂಬರ್‌ ತಿಂಗಳ ವಿಶೇಷ ಸಂಚಿಕೆ ಸಿರಿ ಕನ್ನಡ ನಿಮಗಾಗಿ ಸಿದ್ಧವಾಗುತ್ತಿದೆ.  ಮುನ್ನೋಟ ನಿಮಗಾಗಿ. 

    ಬನ್ನಿ ಕನ್ನಡ ಮಾತನಾಡೋಣ.

    ಕನ್ನಡ ಮಾತು, ಗಮಕ, ಕವನ, ಗಾಯನ ಸಾಹಿತ್ಯ ಸಲ್ಲಾಪದ ಧ್ವನಿವೇದಿಕೆ.

    ಸಂಚಿಕೆಯ ಮುನ್ನೋಟದ ಧ್ವನಿಗಳು:

    ಸುನಿಲ್‌ ಪಲ್ಲಮಜಲು

    ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ


    ಪ್ರೀತಿಯಿಂದ

    ಸಿರಿದನಿ ತಂಡ


    BACKGROUND MUSIC USED WITH THANKS
    https://www.youtube.com/watch?v=4KWACNzHPew&list=RDmfk8DjJ4GdQ&index=3

    2 min
  • ಸಿರಿದನಿ ಹಬ್ಬ- ಸೂಜುಗದ ಸೂಜು ಮಲ್ಲಿಗೆ- ಮಾನಸಾ ಹೆಗ್ಡೆ ಮಂಗಳೂರು

    ಮಾನಸ ಹೆಗ್ಡೆ, ಮಂಗಳೂರು

    ಕರ್ನಾಟಕ ಸಂಗೀತದಲ್ಲಿ ಉದಯೋನ್ಮುಖ ಪ್ರತಿಭೆ. ಯತಿರಾಜ್‌ ಆಚಾರ್ಯ ಅವರ ಶಿಷ್ಯೆ. ಶಾಸ್ತ್ರೀಯ, ಸುಗಮ ಸಂಗೀತದ ಹಲವು ಪ್ರಕಾರಗಳಲ್ಲಿ ಹಾಡಬಲ್ಲರು. ಹಲವಾರು ಸ್ಪರ್ಧೆಗಳಲ್ಲಿ ಬಹುಮಾನ ವಿಜೇತರೂ ಹೌದು.. ಆಳ್ವಾಸ್‌ ಕಾಲೇಜಿನಲ್ಲಿ ಕರ್ನಾಟಕ ಸಂಗೀತ ಮತ್ತು ಇಂಗ್ಲಿಷ್‌ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿರುತ್ತಾರೆ. 


    ನಿರೂಪಣೆ: ಜ್ಯೋತಿ ಸಾಲಿಗ್ರಾಮ


    BACKGROUND MUSIC USED WITH THANKS: 

    https://www.youtube.com/watch?v=mfk8DjJ4GdQ

    https://www.youtube.com/watch?v=-SW-OwvPPAE

    https://www.youtube.com/watch?v=LSNrlR2cjak

    7 min
  • ಸಿರಿದನಿ ಹಬ್ಬ– ಇತಿಮಿತಿಗಳ ನಡುವೆ ಹಬ್ಬದ ಸಡಗರ– ಕೃಷ್ಣಮೋಹನ ತಲೆಂಗಳ

     ಕೃಷ್ಣಮೋಹನ ತಲೆಂಗಳ

    ಊರು ದಕ್ಷಿಣ ಕನ್ನಡದ ತಲೆಂಗಳ.  ಮಂಗಳೂರಿನಲ್ಲಿ ಪತ್ರಕರ್ತ. ಮಾತುಗಾರ, ಸಂಘಟಕ. ಅವರ ಮಾತಿನಲ್ಲಿ ಹಬ್ಬದ ವೈಭವ ಕೇಳಿ

    ನಿರೂಪಣೆ: ಶ್ವೇತಾ ಕಿರಣ್‌ಕುಮಾರ್‌ ಸಣ್ಣಕ್ಕಿ

    Background music used with thanks

    https://www.youtube.com/watch?v=mfk8DjJ4GdQ

    https://www.youtube.com/watch?v=-SW-OwvPPAE

    https://www.youtube.com/watch?v=LSNrlR2cjak



    12 min
  • ಸಿರಿದನಿ ಹಬ್ಬ– ದೇವಿಸ್ತುತಿ– ವಿದುಷಿ ಅರುಣಾ ರಾಜಗೋಪಾಲ್

    ವಿದುಷಿ ಅರುಣಾ ರಾಜಗೋಪಾಲ್

    ಕರ್ನಾಟಕ ಶಾಸ್ತ್ರೀಯ ಸಂಗೀತ ದಲ್ಲಿ ವಿದ್ವತ್ ಪದವಿ ಪಡೆದಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನವರಾದ ವಿದುಷಿ ಅರುಣ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಹಲವಾರು ವರ್ಷ ಸಂಗೀತ ಅಭ್ಯಾಸ ಮಾಡಿರುವ ಇವರು ಸಂಗೀತ ವಿದ್ವಾಂಸ ಡಿ.ವಿ. ನಾಗರಾಜನ್ ಅವರ ಹಿರಿಯ ಶಿಷ್ಯೆ. ರಾಜ್ಯದಾದ್ಯಂತ ಅನೇಕ ಕಛೇರಿಗಳನ್ನು ನೀಡಿರುವ ವಿದುಷಿ ಅರುಣ ಸದ್ಯ ಆಸಕ್ತ ಮಕ್ಕಳಿಗೆ ಸಂಗೀತ ಕಲಿಕೆಯಲ್ಲಿ ತೊಡಗಿದ್ದಾರೆ. ನವರಾತ್ರಿ ಯ ಈ ಶುಭ ಸಂದರ್ಭದಲ್ಲಿ ಇವರು ಹಾಡಿರುವ ದೇವಿ ಕೀರ್ತನೆ ಕೇಳಲು ಮಧುರಾತಿಮಧುರವಾಗಿದೆ.

    ನಿರೂಪಣೆ: ಜ್ಯೋತಿ ಸಾಲಿಗ್ರಾಮ

    11 min
  • ಸಿರಿದನಿ ಹಬ್ಬ– ಏಕೆ ಈ ಥರ ನನ್ನ ಮನಸಿಗೆ– ವರ್ಷಾ ಬಿ. ಆಚಾರ್ಯ

    ವರ್ಷಾ ಬಿ. ಆಚಾರ್ಯ

    ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪದವಿ. ಮೂಡಬಿದ್ರೆ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿನಿ.  ವಿದ್ವಾನ್‌ ಗಜಾನನ ಹೆಬ್ಬಾರ್‌ ಅವರ ಬಳಿ ಹಿಂದೂಸ್ತಾನಿ ಸಂಗೀತಾಭ್ಯಾಸ ಮಾಡುತ್ತಿದ್ದಾರೆ


    ನಿರೂಪಣೆ: ಜ್ಯೋತಿ ಸಾಲಿಗ್ರಾಮ

    9 min
  • ಹಬ್ಬ promo

    ಹಬ್ಬ

    ಸಂಗೀತ ಸರಣಿ ಪ್ರಸಾರ ಅಕ್ಟೋಬರ್‌ ೧೫ರಿಂದ

    ನಿಮ್ಮ ಮಾತು, ಪ್ರತಿಕ್ರಿಯೆಗೆ: [email protected]

    MUSIC USED WITH THANKS: https://www.youtube.com/watch?v=yqqPt4oxUCs

    2 min
  • ಸಿರಿದನಿ ಹಬ್ಬ – 2020 ಮುನ್ನೋಟ

    ಸಿರಿದನಿ ಪಾಡ್‌ಕಾಸ್ಟ್‌ನಲ್ಲಿ ಒಂದು ಹೊಸ ಪ್ರಯೋಗ ಹಬ್ಬ

    ಖ್ಯಾತ ಗಾಯಕರು, ಉದಯೋನ್ಮುಖರು ಮತ್ತು ಹವ್ಯಾಸಿ ಗಾಯಕರ ಹಾಡುಗಳ ಪ್ರಸಾರ. ಹಬ್ಬದ ಸಂದರ್ಭವನ್ನು ಕೊಂಚ ಖುಷಿಯಾಗಿಸುವ, ಇತಿಮಿತಿಗಳ ಅನಿವಾರ್ಯತೆಯನ್ನು ಒಪ್ಪಿಕೊಳ್ಳುತ್ತಲೇ ಹಾಡು, ಮಾತಿನ ಮೂಲಕ ಮನಸ್ಸಿನಲ್ಲಿ ಹಬ್ಬದ ಸಂಭ್ರಮ ಕಟ್ಟಿಕೊಡುವ ಪುಟ್ಟ ಪ್ರಯತ್ನವಿದು. 

    ಹತ್ತಾರು ಹಾಯಕರು ತಮ್ಮ ಸುಮಧುರ ಗಾಯನದ ಮೂಲಕ ನಿಮ್ಮ ಮನಸ್ಸಿಗೆ ಮುದ ನೀಡಲಿದ್ದಾರೆ. ಜೊತೆಗೆ ನವಿರು ಮಾತುಗಳು ನಿಮ್ಮ ಕಿವಿ ತುಂಬಲಿದೆ. ಹಾ, ಅಂದಹಾಗೆ ನಿಮಗೂ ಮಾತನಾಡಲು ಇದೊಂದು ಪುಟ್ಟ ಅವಕಾಶ. ಬನ್ನಿ ಸದಭಿರುಚಿಯ ಮುದದ ಮಾತುಗಳೊಂದಿಗೆ ಸಿರಿದನಿಯಲ್ಲಿ ಧ್ವನಿಗೂಡಿಸಿ.

    ನಿಮ್ಮ ಮಾತು, ಪ್ರತಿಕ್ರಿಯೆಗೆ: [email protected]

    MUSIC USED WITH THANKS: https://www.youtube.com/watch?v=yqqPt4oxUCs

    3 min
  • ರಸ್ತೆ ಸುರಕ್ಷತೆ ಜಾಗತಿಕ ಆಯಾಮ– ಭಾರತದ ದೃಷ್ಟಿಕೋನ

    ರಸ್ತೆ ಸುರಕ್ಷತೆ ಜಾಗತಿಕ ಆಯಾಮ– ಭಾರತದ ದೃಷ್ಟಿಕೋನ 

    ಡಾ.ಲೋಕೇಶ್‌ ಹೆಬ್ಬಾನಿ,  ವಿಶ್ವಬ್ಯಾಂಕ್‌ ಸಲಹೆಗಾರ (ರಸ್ತೆ ಸುರಕ್ಷತೆ ), ವಾಷಿಂಗ್ಟನ್‌ ಡಿಸಿ ಅವರ ಜತೆ ಮಾತುಕತೆ 

    ಮಾತುಕತೆ ನಡೆಸಿದವರು: ಶಿಲ್ಪಾರಾವ್‌, ಎಸ್‌ಎಪಿ ಆರಿಬಾ ಕನ್ಸಲ್ಟೆಂಟ್‌ ಇನ್‌ಫೋಸಿಸ್‌ ಬೆಂಗಳೂರು.

    42 min

About ಸಿರಿದನಿ SIRIdani

From the publisher's feed

SIRIdani, A passion broadcast channel, set up by equal minded team In Bangalore. Channel addresses education, culture, social issues and youth