ಸಿರಿದನಿ SIRIdani

ಸಿರಿದನಿ SIRIdani

By Shwetha InitiativeBusinessNon-Profit
Download on the App Store

ಸಿರಿದನಿ SIRIdani episodes

  • ಅಕ್ಷರ ಸಂತನ ಅಂತರಂಗ – ಪದ್ಮಶ್ರೀ ಹರೇಕಳ ಹಾಜಬ್ಬ

    ಮಂಗಳೂರು ತಾಲ್ಲೂಕು ಹರೇಕಳದ ನ್ಯೂಪಡ್ಪುವಿನಲ್ಲಿ ಸತತ ಹೋರಾಟದ ಮೂಲಕ ಶಾಲೆ ಸ್ಥಾಪನೆಗೆ ಕಾರಣರಾದ ಕಿತ್ತಳೆ ವ್ಯಾಪಾರಿ ಹರೇಕಳ ಹಾಜಬ್ಬ ಅವರು ದೇಶದ ಗಮನ ಸೆಳೆದಿದ್ದಾರೆ. 

    ಅನಕ್ಷರಸ್ಥನೊಬ್ಬ ಕಿತ್ತಳೆ ಹಣ್ಣು ಮಾರುತ್ತಾ ಅಕ್ಷರ ಬಿತ್ತುವ ಕನಸು ಕಂಡು ಅದರಲ್ಲಿ ಯಶಸ್ವಿಯಾದದ್ದು ಒಂದು ವಿಶೇಷವೇ ಸರಿ. ಅಕ್ಷರ ಸಂತ ಹಾಜಬ್ಬ ಅವರಿಗೆ ದೇಶದ ಪ್ರತಿಷ್ಠಿತ ಪ್ರಶಸ್ತಿ ಪದ್ಮಶ್ರೀ ಒಲಿದಿದೆ. ಮಂಗಳೂರಿನ ಮೀಡಿಯಾ ಅಲೂಮ್ನಿ ಅಸೋಸಿಯೇಷನ್‌ ಮಂಗಳ ಗಂಗೋತ್ರಿಯ ಮಾಮ್‌ ಇನ್‌ಸ್ಪೈರ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ಸಿಕ್ಕಿದ ಅವರನ್ನು ಸಿರಿದನಿ ಮಾತನಾಡಿಸಿತು. ಕನಿಷ್ಠ ಅವಧಿಯಲ್ಲಿ ಮಾತನಾಡಿಸಿದ ಮಾತುಕತೆಯ ಝಲಕ್‌ ನಿಮಗಾಗಿ

    ನಿರೂಪಣೆ, ನಿರ್ಮಾಣ: ದೀಪಾ ಪಾವಂಜೆ

    12 min
  • ಮುಳಿಯ – ಕರ್ನಾಟಕ ಲೇಖಕಿಯರ ಸಂಘ– ಮನೆ ಮನದಲ್ಲಿ ಕನ್ನಡ: ಮುನ್ನೋಟ

    ಮುಳಿಯ ಪ್ರತಿಷ್ಠಾನ, ಮುಳಿಯ ಜುವೆಲ್ಸ್‌ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಮನೆ ಮನದಲ್ಲಿ ಕನ್ನಡ. ಕನ್ನಡದ ಭಾವ– ಬದುಕು ಬಂಗಾರ ಎಂಬ ಚಿಂತನ ಮಂಥನ ಇತ್ತೀಚೆಗೆ ಬೆಂಗಳೂರಿನ ಮುಳಿಯ ಆಭರಣ ಮಳಿಗೆಯಲ್ಲಿ ನಡೆಯಿತು. 

    ಕಾರ್ಯಕ್ರಮದ ಡಿಸೆಂಬರ್‌ 1ರಂದು ಪ್ರಸಾರವಾಗಲಿದೆ.  

    ಕೇಳಿ ಸಿರಿದನಿಯಲ್ಲಿ 

    1 min
  • ಜನಕಥಾ ಕೀರ್ತನೆ – ಶಿವಕುಮಾರ ದರ್ಶನ – ಡಾ.ಲಕ್ಷ್ಮಣದಾಸ

    ಶಿವಕುಮಾರ ದರ್ಶನ ಜನಕಥಾ ಕೀರ್ತನೆ ಪ್ರಸ್ತುತಪಡಿಸಿದ್ದಾರೆ ಡಾ.ಲಕ್ಷ್ಮಣದಾಸ ರಂಗಭೂಮಿ, ಹರಿಕಥಾ ಕಲಾವಿದ

    ಡಾ.ಲಕ್ಷ್ಮಣದಾಸ ಅವರ ವಿಶೇಷತೆ ಏನೆಂದರೆ ಎಲ್ಲರೂ ಪುರಾಣದ ಕಥೆಗಳ ಹರಿಕಥೆ ಹೇಳುತ್ತಾರೆ. ಆದರೆ, ಇವರು ಅದೇ ಕಥೆಗಳನ್ನು ವರ್ತಮಾನಕ್ಕೆ ಅನ್ವಯಿಸಿ ಜನಕಥಾ ಕೀರ್ತನೆ ಎಂಬ ಪರಿಕಲ್ಪನೆಯನ್ನು ಅಳವಡಿಸಿ ಎಲ್ಲ ಕಡೆ ಪ್ರದರ್ಶನ ನೀಡುತ್ತಿದ್ದಾರೆ. ವೃತ್ತಿರಂಗಭೂಮಿ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿದವರು. ನೂರಾರು ನಾಟಕಗಳಲ್ಲಿ ಭಾಗವಹಿಸಿ ಅಲ್ಲಿನ ಒಳಹೊರಗುಗಳನ್ನು ಬಲ್ಲವರು. ವಿಶೇಷವಾಗಿ ರಂಗಸಂಗೀತದಲ್ಲಿ ಇವರಿಗೆ ಪರಿಣತಿಯಿದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.

    ನಿರೂಪಣೆ: ದೀಪಾ ಪಾವಂಜೆ

    ಪ್ರತಿಕ್ರಿಯಿಸಿ: [email protected] 

    32 min
  • ಸರಿಕನ್ನಡ ಸಲ್ಲಾಪ– ವಾಣಿ ರಾಜ್‌, ರಾಜ್‌ ಗೋಪಾಲ್‌

    ಕನ್ನಡ ಆಡುನುಡಿಯಲ್ಲಾಗುವ ಸಣ್ಣ ಸಣ್ಣ ಅರ್ಥ ವ್ಯತ್ಯಾಸಗಳು ಮತ್ತು ಅದರಿಂದ ನಡೆದ ಸ್ವಾರಸ್ಯಕರ ಸಂದರ್ಭಗಳನ್ನು ತೆರೆದಿಟ್ಟಿದ್ದಾರೆ ವಾಣಿರಾಜ್‌– ರಾಜ್‌ ಗೋಪಾಲ್‌ ದಂಪತಿ.

    ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸರಿಗನ್ನಡದ ಝಲಕ್‌ ಕೇಳಿ.


    ಸಂಚಿಕೆ ನಿರೂಪಣೆ: ದೀಪಾ ಪಾವಂಜೆ

    ಪ್ರತಿಕ್ರಿಯಿಸಿ: [email protected]

    15 min
  • ಸಿರಿಗಿಂಡೆ– ತಾರೇಂದ್ರ ಪಿ. ಶೆಟ್ಟಿಗಾರ್‌ ರಚನೆಯ ತುಳು ಭಕ್ತಿಗೀತೆ

    ಕುವೈಟ್'ನ ಲೇಖಕ ತಾರೇಂದ್ರ ಪಿ. ಶೆಟ್ಟಿಗಾರ್ ಅವರ ಸಾಹಿತ್ಯ ಹಾಗೂ ನಿರ್ಮಾಣದ ತುಳು ಭಕ್ತಿಗೀತೆ ‘ಸಿರಿಗಿಂಡೆ’ ಇತ್ತೀಚೆಗೆ ಬಿಡುಗಡೆಯಾಗಿದೆ. 

    ಗಿರಿಧರ್ ದಿವಾನ್ ಸಂಗೀತ,  ನಕುಲ್ ಅಭ್ಯಂಕರ್ ಸಂಗೀತ ಸಂಯೋಜನೆ, ಖ್ಯಾತ ಗಾಯಕರಾದ ಅಜಯ್ ವಾರಿಯರ್, ನಕುಲ್ ಅಭ್ಯಂಕರ್, ಸಿದ್ದಾರ್ಥ ಬೆಳ್ಮಣ್, ಐರಾ ಉಡುಪಿ ಹಾಗೂ ನಿನಾದ ನಾಯಕ್ ಐರಾ ಉಡುಪಿ ಧ್ವನಿ ನೀಡಿದ್ದಾರೆ.

    ತಾರೇಂದ್ರ ಪಿ. ಶೆಟ್ಟಿಗಾರ್‌ ಅವರ ಯುಟ್ಯೂಬ್‌ ಚಾನೆಲ್‌ಗೆ ಸಬ್‌ಸ್ಕ್ರೈಬ್‌ ಆಗಿ. ಕನ್ನಡದ ಮನಸ್ಸೊಂದನ್ನು ಪ್ರೋತ್ಸಾಹಿಸಿ

    ವೀಕ್ಷಿಸಲು ಈ ಲಿಂಕ್‌ ಒತ್ತಿ https://www.youtube.com/results?search_query=tharendra+p+shettigar

    ಸಿರಿಗಿಂಡೆ ಕೇಳಲು: https://youtu.be/sMbQrKbsTQ4


    ಸಂಚಿಕೆ ನಿರೂಪಣೆ: ದೀಪಾ ಪಾವಂಜೆ

    ಪ್ರತಿಕ್ರಿಯಿಸಿ: [email protected]

    8 min
  • ಮಂಗಳ ಮೂರುತಿ– ಸಿರಿದನಿಯಲ್ಲೊಂದು ಭಕ್ತಿ ಲಹರಿ– ತಾರೇಂದ್ರ ಪಿ. ಶೆಟ್ಟಿಗಾರ್‌

    ಮಂಗಳ ಮೂರುತಿ

    ಕುವೈಟ್'ನ ಲೇಖಕ ತಾರೇಂದ್ರ ಪಿ. ಶೆಟ್ಟಿಗಾರ್ ಅವರ ಸಾಹಿತ್ಯ ಹಾಗೂ ನಿರ್ಮಾಣದ ಕನ್ನಡ ಭಕ್ತಿಗೀತೆಗಳ ಧ್ವನಿಸಾಂದ್ರಿಕೆ ಇತ್ತೀಚೆಗೆ ಬಿಡುಗಡೆಗೊಂಡಿದೆ. ಅದರ ಭಕ್ತಿಲಹರಿ ಸಿರಿದನಿಯಲ್ಲಿ ಕೇಳಿ. ಜೊತೆಗೆ ಗೀತೆರಚನೆಕಾರ ತಾರೇಂದ್ರ ಪಿ. ಶೆಟ್ಟಿಗಾರ್‌ ಅವರು ವಿದೇಶದಲ್ಲಿದ್ದು ತಮ್ಮ ನೆನಪಿನ ಭಾವಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ. ಅವರದೇ ಮಾತುಗಳಲ್ಲಿ ಕೇಳಿ.

    ಈ ಮಂಗಳ ಮೂರುತಿ ಧ್ವನಿ ಸಾಂದ್ರಿಕೆಯನ್ನು ಉಡುಪಿಯ ಪರ್ಯಾಯ ಅದಮಾರು ಮಠದ  ಪರಮ ಪೂಜ್ಯ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿ ಆಶೀರ್ವದಿಸಿದರು. ಸಾಹಿತ್ಯದ ಮೂಲಕ ಧಾರ್ಮಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಪ್ರಜೆಯಾಗಿ ಬಾಳುವುದು ಉನ್ನತ ಸಂಕೇತವೆಂದು ಶೆಟ್ಟಿಗಾರ್‌ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 

    ಇದೇ ವೇಳೆ ಧ್ವನಿಸಾಂದ್ರಿಕೆ ಬಿಡುಗಡೆ ಕುವೈತ್, ಸಿಂಗಾಪುರ, ಉಡುಪಿ, ಚೆನೈ, ಬೆಂಗಳೂರಿನಲ್ಲಿ ಏಕಕಾಲದಲ್ಲಿ ನಡೆಯಿತು. ಮಂಗಳ ಮೂರುತಿ ಧ್ವನಿಸಾಂದ್ರಿಕೆಯಲ್ಲಿ ಆದಿಪೂಜಿತ, ಶಾಂಭವಿ ಸ್ತುತಿ, ಶುಭಾಂಕರ ಧ್ಯಾನ, ರಾಮ ನಾಮ, ಪಾರ್ಥ ಸಾರಥಿ ಹಾಗೂ ಪವನ ಸಂಜಾತ ಎಂಬ ಆರು ಭಕ್ತಿಗೀತೆಗಳಿವೆ.

    ಸಂಗೀತ ನಿರ್ದೇಶನ: ಗಿರಿಧರ್ ದಿವಾನ್

    ಸಂಗೀತ ಸಂಯೋಜನೆ: ನಕುಲ್ ಅಭ್ಯಂಕರ್

    ಗಾಯನ: ಅಜಯ್ ವಾರಿಯರ್, ನಕುಲ್ ಅಭ್ಯಂಕರ್, ಸಿದ್ದಾರ್ಥ ಬೆಳ್ಮಣ್, ಐರಾ ಉಡುಪಿ ಹಾಗೂ ನಿನಾದ ನಾಯಕ್

    ಹೆಚ್ಚಿನ ಗೀತೆಗಳನ್ನು ಕೇಳಲು Tharendra P Shettigar ಯುಟ್ಯೂಬ್‌  ಚಾನೆಲ್‌ಗೆ ಸಬ್‌ಸ್ಕ್ರೈಬ್‌ ಆಗಿ ವಿದೇಶದಲ್ಲಿ ಕನ್ನಡ ನೆಲ ಸಂಸ್ಕೃತಿಗೆ ತುಡಿಯುವ ಮನಸ್ಸನ್ನು ಬೆಂಬಲಿಸಿ. ನಿಮ್ಮ ಗೆಳೆಯರಿಗೂ ಹಂಚಿ.

    ಯುಟ್ಯೂಬ್‌ ಲಿಂಕ್‌: https://www.youtube.com/channel/UCC3ufHOEdl8TFL-QAFSChHw

    ಪ್ರತಿಕ್ರಿಯಿಸಿ: [email protected]




    23 min
  • ತಾರಸಿಯಲ್ಲೊಂದು ತಾವರೆ ಸ್ನೇಹ– ಸ್ನೇಹಾ ಆರ್‌. ಭಟ್‌

    ಮನೆಯ ತಾರಸಿಯಲ್ಲಿ ಸುಮಾರು 90ಕ್ಕೂ ಅಧಿಕ ಬಗೆಯ ವೈವಿಧ್ಯಮಯ ತಾವರೆ ಹೂಗಳನ್ನು ಬೆಳೆದು ಕರ್ನಾಟಕದ ಗಮನ ಸೆಳೆದಿದ್ದಾರೆ ಮಂಗಳೂರಿನ ಉಪನ್ಯಾಸಕಿ ಸ್ನೇಹಾ ರವೀಶ್‌ ಭಟ್‌. ಅವರು ತರಕಾರಿ ಕೈತೋಟದ ಜೊತೆಗೆ ತಾವರೆ ತೋಟವನ್ನು ರೂಪಿಸಿದ ಯಶೋಗಾಥೆ ಈ ಸಂಚಿಕೆಯಲ್ಲಿದೆ. ಕೇಳಿ.

    ಪ್ರತಿಕ್ರಿಯಿಸಿ: [email protected]



    BACKGROUND MUSIC USED WITH THANKS

    ಮುದುಡಿದ ತಾವರೆ ಅರಳಿತು

    https://www.youtube.com/watch?v=vK_Vt0LTemk

     ತಾವರೆ ಓ ತಾವರೆ..

    https://www.youtube.com/watch?v=TLaJ9O2_8xY


    ಓ ತಾವರೆ

    https://www.youtube.com/watch?v=0uaAq_pw394

    22 min
  • ಕನ್ನಡತಿಯ ಕತೆ ಡಬ್ಬಿ– ರಂಜನಿ ರಾಘವನ್‌

    ರಂಜನಿ ರಾಘವನ್‌ ಕನ್ನಡದ ಖ್ಯಾತ ಕಿರುತೆರೆ, ಚಲನಚಿತ್ರ ನಟಿ ಹಾಗೂ ಕಥೆಗಾರ್ತಿ. ನಟನೆಯಾಚೆಗಿನ ಕನಸುಗಳನ್ನು ಸಿರಿದನಿಯಲ್ಲಿ ತೆರೆದಿಟ್ಟಿದ್ದಾರೆ. 

    ಕೇಳಿ ಪ್ರತಿಕ್ರಿಯಿಸಿ: [email protected]

    ಸಿರಿದನಿ ಕೇಳಲು www.shwethainitiative.comಗೆ ಭೇಟಿ ನೀಡಿ


    23 min

About ಸಿರಿದನಿ SIRIdani

From the publisher's feed

SIRIdani, A passion broadcast channel, set up by equal minded team In Bangalore. Channel addresses education, culture, social issues and youth