ಸಿರಿದನಿ SIRIdani

ಸಿರಿದನಿ SIRIdani

By Shwetha InitiativeBusinessNon-Profit
Download on the App Store

ಸಿರಿದನಿ SIRIdani episodes

  • ರಿಶಿ ಸಾಧನೆ- ರಿಶಿ ಶಿವ ಪ್ರಸನ್ನ ಜೊತೆ ಸಮನ್ವಿಯ ಮಾತುಕತೆ

    ರಿಶಿ ಶಿವ ಪ್ರಸನ್ನ ಅತಿ ಚಿಕ್ಕ ವಯಸ್ಸಿನಲ್ಲೇ ಅಸಾಧಾರಣ ಬುದ್ಧಿಮತ್ತೆ, ಪ್ರತಿಭೆ ಪ್ರದರ್ಶಿಸಿದ ಬಾಲಕ. 

    ಬೆಂಗಳೂರಿನ ಪ್ರಸನ್ನ ಕುಮಾರ್‌ ಎಂ - ರೇಚೇಶ್ವರಿ ಎಸ್‌. ದಂಪತಿಯ ಪುತ್ರ. 

    2ನೇ ವಯಸ್ಸಿಗೆ ಓದು ಕಲಿತ, 5ನೇ ವಯಸ್ಸಿಗೆ ಹ್ಯಾರಿಪಾಟರ್‌ ಸರಣಿ ಮೇಲೆ ಪುಸ್ತಕ ಬರೆದ, ಮೊಬೈಲ್‌ ಅಪ್ಲಿಕೇಷನ್‌ ರೂಪಿಸಿದ, ಕಂಪ್ಯೂಟರ್‌ ಕೋಡಿಂಗ್‌ ಬಲ್ಲ... ಹೀಗೆ ರಿಶಿಯ ಪ್ರತಿಭೆಗೆ ಹಲವು ಮುಖಗಳು. ಅವು ಏನೇನು ಎಂಬುದನ್ನು ಮಾತನಾಡಿಸಿದ್ದಾಳೆ ಪುಟಾಣಿ ಸಮನ್ವಿ ಎಂ. ಆರ್‌. ಭಟ್‌. 

    ಹೆಚ್ಚಿನ ವಿವರ ಕೇಳಿ ಮಾತುಕತೆಯಲ್ಲಿ. 

    ಪ್ರತಿಕ್ರಿಯಿಸಿ: [email protected]

    Background music

    https://www.youtube.com/watch?v=5qWkQGptCcY

    13 min
  • ಸೇವ್‌ ತುರಹಳ್ಳಿ- ಇದು ಕಾಡಿನ ಕೂಗು

    ತುರಹಳ್ಳಿಯಲ್ಲಿ ವೃಕ್ಷ ಉದ್ಯಾನ ಮಾಡಲು ಸರ್ಕಾರ ಮುಂದಾಗಿತ್ತು. ಸ್ಥಳೀಯರು, ಪರಿಸರಾಸಕ್ತರು ಸೇರಿ ರೂಪಿಸಿದ ಹೋರಾಟವೊಂದು ಚಳವಳಿಯ ರೂಪ ತಾಳಿತು. ಪರಿಸರಪ್ರಿಯರ ಒತ್ತಡಕ್ಕೆ ಮಣಿದ ಸರ್ಕಾರ ಆ ಯೋಜನೆಯನ್ನು ತಡೆಹಿಡಿದಿದೆ. 

    ಈ ಹೋರಾಟ ರೂಪುಗೊಂಡು, ಯಶಸ್ಸಿನತ್ತ ಸಾಗಿ ಕೊನೆಗೂ ಕಾಡನ್ನು ಉಳಿಸಿದ ಪರಿಯನ್ನು ಆ ಚಳವಳಿಯ ಮುಂಚೂಣಿಯಲ್ಲಿದ್ದವರು ಹಂಚಿಕೊಂಡಿದ್ದಾರೆ.

    ಮಾತುಕತೆಯಲ್ಲಿ

    ಡಾ.ಎ. ಭಾನು, ಮುಖ್ಯ ತಾಂತ್ರಿಕ ಅಧಿಕಾರಿ

    ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹೆಸರಘಟ್ಟ ಬೆಂಗಳೂರು

    ಅಲೀಂ, ಅಧ್ಯಕ್ಷರು ಚೇಂಜ್‌ ಮೇಕರ್ಸ್‌ ಕನಕಪುರ ರಸ್ತೆ

    ವಿಜೇತಾ ಸಂಜಯ್‌, ಸೇವ್‌ ತುರಹಳ್ಳಿ ಸಂಘಟಕಿ, ಚಿಗುರು ಸಂಸ್ಥೆ

    ನಿರೂಪಣೆ: ದೀಪಾ ಪಾವಂಜೆ

    21 min
  • ಬದಲಾವಣೆ- ಮಧುರಾ ಲಕ್ಷ್ಮೀಶ ಭಟ್‌

    ಬದಲಾವಣೆ ಹೇಗಿರಬೇಕು ಎಂದು ತಮ್ಮದೇ ಲಹರಿಯಲ್ಲಿ ಹೇಳಿದ್ದಾರೆ ಮಧುರಾ ಲಕ್ಷ್ಮೀಶ ಭಟ್‌. ಮಧುರಾ ಅವರು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ. ಕಥೆ, ಲಹರಿಯ ಬರಹ ಅವರ ಆಸಕ್ತಿಯ ಕ್ಷೇತ್ರಗಳು.

    ಪ್ರತಿಕ್ರಿಯಿಸಿ: [email protected]

    Background music:

    https://youtube.com/c/djshahmoneybeatz

    https://facebook.com/beatbyshahed
    https://soundcloud.com/djshahmoneybeatz
    https://instagram.com/imshahed

    https://www.youtube.com/watch?v=GmNxHUq6gnw&list=RDMM&start_radio=1

    https://www.youtube.com/watch?v=HZ21X6whTkA

    https://www.youtube.com/watch?v=pL5Q3vE65Nc

    8 min
  • ತ್ಯಾಗಮಯಿ ಹೆಣ್ಣು- ವಾಣಿ ರಾಜ್‌

    ವಾಣಿ ರಾಜ್‌- ಕಥೆ ಬರಹ, ಯೋಗ ಇತ್ಯಾದಿ ವಾಣಿ ರಾಜ್‌ ಅವರ ಆಸಕ್ತಿಯ ಕ್ಷೇತ್ರಗಳು. ಹೆಣ್ಣಿನ ಇಡೀ ಬದುಕಿನ ತ್ಯಾಗದ ಹಲವು ಮುಖಗಳನ್ನು ತ್ಯಾಗಮಯಿ ಹೆಣ್ಣು ಕಥೆಯಲ್ಲಿ ತೆರೆದಿಟ್ಟಿದ್ದಾರೆ ವಾಣಿ ರಾಜ್.

    ಪ್ರತಿಕ್ರಿಯಿಸಿ: [email protected]

    Background music:

    https://youtube.com/c/djshahmoneybeatz

    https://facebook.com/beatbyshahed
    https://soundcloud.com/djshahmoneybeatz
    https://instagram.com/imshahed

    https://www.youtube.com/watch?v=GmNxHUq6gnw&list=RDMM&start_radio=1

    https://www.youtube.com/watch?v=HZ21X6whTkA

    https://www.youtube.com/watch?v=pL5Q3vE65Nc‌

    6 min
  • ಚಿಗುರಿದ ನಂಟು- ದೀಪಾ ಪಾವಂಜೆ

    ಚಿಗುರಿದ ನಂಟು- ದೀಪಾ ಪಾವಂಜೆ ಅವರ ಸಣ್ಣ ಕಥೆ. ದೀಪಾ ಅವರು ಮಂಗಳೂರು ವಾಮಂಜೂರಿನ ಸಂತ ಜೋಸೆಫ್‌ ತಾಂತ್ರಿಕ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ. ಆಕಾಶವಾಣಿಯಲ್ಲಿ ನಿರೂಪಕಿ. ನಾಟಕ, ಗಝಲ್‌, ಕವಿತೆ ಅವರ ಅಭಿರುಚಿ ಮತ್ತು ಆಸಕ್ತಿಯ ಕ್ಷೇತ್ರಗಳು. ಈ ಬಾರಿ ಅಣ್ಣ - ತಂಗಿಯ ಬಾಂಧವ್ಯದ ಗಾಢತೆ ಕಟ್ಟಿಕೊಡುವ ಪುಟ್ಟ ಕಥೆ ʼಚಿಗುರಿದ ನಂಟುʼ ಸಿರಿದನಿಯಲ್ಲಿ.

    ಪ್ರತಿಕ್ರಿಯಿಸಿ: [email protected]

    Background music: 

    https://youtube.com/c/djshahmoneybeatz

    https://facebook.com/beatbyshahed
    https://soundcloud.com/djshahmoneybeatz
    https://instagram.com/imshahed

    https://www.youtube.com/watch?v=GmNxHUq6gnw&list=RDMM&start_radio=1

    https://www.youtube.com/watch?v=HZ21X6whTkA

    https://www.youtube.com/watch?v=pL5Q3vE65Nc

    13 min
  • ಸಂಧ್ಯಕ್ಕನೊಂದಿಗೆ ಸಂಭಾಷಣೆ- ಸಂಧ್ಯಾ ಶೆಣೈ ಅವರೊಂದಿಗೆ ಮಾತುಕತೆ

    ಸಂಧ್ಯಾ ಶೆಣೈ ನಾಡಿನ ಜನಪ್ರಿಯ ಹಾಸ್ಯ ಭಾಷಣಕಾರರಲ್ಲಿ ಒಬ್ಬರು. ದೇಶ ವಿದೇಶಗಳಲ್ಲಿ ನಗೆ ಕಂಪನ್ನು ಬೀರಿದ್ದಾರೆ. ಅವರು ಈ ಬಾರಿ ಸಿರಿದನಿಯ ವಿಶೇಷ ಅತಿಥಿ. ಅವರನ್ನು ಮಾತನಾಡಿಸಿದವರು ವೀಣಾ ನಂಚಾರ್‌. ಜೊತೆಯಾದದ್ದು ಪುಟಾಣಿ ಸಮನ್ವಿ.

    ಮಾತುಕತೆಯಲ್ಲಿ ಸಂಧ್ಯಾ ಅವರು ತಮ್ಮ ಬದುಕು- ಭಾವ ತೆರೆದಿಟ್ಟಿದ್ದಾರೆ. ಹಾಸ್ಯದ ಝಲಕ್‌ ತೋರಿಸಿದ್ದಾರೆ. ಅವರ ಸಹೋದರ, ಸಹೋದರಿ, ಸುಹಾಸಂ ಪದಾಧಿಕಾರಿಗಳು, ಲೇಖಕರು ಸಂಧ್ಯಾ ಅವರ ಕುರಿತು ಮಾತನಾಡಿದ್ದಾರೆ. 

    ಕೇಳಿ ಪ್ರತಿಕ್ರಿಯಿಸಿ: [email protected]

    BACKGROUND MUSIC:

    https://youtube.com/c/djshahmoneybeatz
    https://facebook.com/beatbyshahed
    https://soundcloud.com/djshahmoneybeatz
    https://instagram.com/imshahed

    https://www.youtube.com/watch?v=GmNxHUq6gnw&list=RDMM&start_radio=1

    https://www.youtube.com/watch?v=HZ21X6whTkA

    https://www.youtube.com/watch?v=pL5Q3vE65Nc

    42 min
  • ಮಗಳು ದೊಡ್ಡವಳಾದಳು- ವಾಣಿ ರಾಜ್‌

    ಪುಟ್ಟ ಶಿಶುವಾಗಿದ್ದವಳು ದೊಡ್ಡವಳಾಗುವವರೆಗಿನ ಪರಿಯನ್ನು ಬಣ್ಣಿಸುತ್ತಾ, ಮಗಳು ಎಷ್ಟೇ ಬೆಳೆದರೂ ತಾಯಿಯ ಪಾಲಿಗೆ ಅವಳಿನ್ನೂ ಪುಟ್ಟ ಮಗುವೇ ಎಂದು ಭಾವುಕ ಸನ್ನಿವೇಶವನ್ನು ʼಮಗಳು ದೊಡ್ಡವಳಾದಳು ಕಥೆಯಲ್ಲಿ ಹೇಳಿದ್ದಾರೆ ವಾಣಿ ರಾಜ್‌.  ಚಿಂತನೆ, ಬರಹ, ಯೋಗ ಇತ್ಯಾದಿ ವಾಣಿ ರಾಜ್‌ ಅವರ ಆಸಕ್ತಿಯ ಕ್ಷೇತ್ರಗಳು. 

    ಪ್ರತಿಕ್ರಿಯಿಸಿ: [email protected]

    Background music used with thanks:

    https://www.youtube.com/watch?v=GmNxHUq6gnw&list=RDMM&start_radio=1

    https://www.youtube.com/watch?v=HZ21X6whTkA

    https://www.youtube.com/watch?v=pL5Q3vE65Nc

    6 min
  • ರಾಮ ಮತ್ತು ಮೂಗುತಿ ಸುಂದರಿ ‌- ಪಾಡ್ಕಥೆ: ಮಧುರಾ ಲಕ್ಷೀಶ ಭಟ್

    ಕಾಯುವಿಕೆಗಿಂತ ಬೇರೆ ತಪಸ್ಸು ಇಲ್ಲ ಎಂದು ರಾಮ ಮತ್ತು ಮೂಗುತಿ ಸುಂದರಿಯ ಕಥೆಯಲ್ಲಿ ಹೇಳಿದ್ದಾರೆ ಮಧುರಾ ಲಕ್ಷೀಶ ಭಟ್. ಮಧುರಾ ಉಜಿರೆ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿನಿ. ಕಥೆ, ಬರಹ, ಮಾತು ಅವರ ಅಭಿರುಚಿ. ಕೇಳಿ ರಾಮ ಮತ್ತು ಮೂಗುತಿ ಸುಂದರಿಯ ಕಥೆ.

    ಪ್ರತಿಕ್ರಿಯಿಸಿ: [email protected]

    Background music used with thanks:

    https://www.youtube.com/watch?v=GmNxHUq6gnw&list=RDMM&start_radio=1

    https://www.youtube.com/watch?v=HZ21X6whTkA

    https://www.youtube.com/watch?v=pL5Q3vE65Nc

    11 min
  • ಮಜ್ಜಿಗೆ ಗುತ್ತಿ - ಲೀಲಾ ದಾಮೋದರ

    ಹಳೆಯ ಕಾಲದ ಮಜ್ಜಿಗೆ ಕಡೆಯುವ ಕಡೆಗೋಲಿನೊಂದಿಗೆ ಮನೆ ಮಗಳು ಹೊಂದಿರುವ ಭಾವನಾತ್ಮಕ ಬಾಂಧವ್ಯವನ್ನು ಅಪ್ಪಟ ಮಜ್ಜಿಗೆಯೊಳಗಿಂದ ಬೆಣ್ಣೆ ತೆಗೆದಂತೆ ಕಟ್ಟಿಕೊಟ್ಟಿದ್ದಾರೆ ಲೀಲಾ ದಾಮೋದರ ಅವರು. 

    ಲೀಲಾ ದಾಮೋದರ ಅವರು ನಿವೃತ್ತ ಉಪನ್ಯಾಸಕಿ. ಸುಳ್ಯದಲ್ಲಿ ನೆಲೆಸಿದ್ದಾರೆ. ಕಥೆ, ಬರಹ, ವಿಚಾರ ಮಂಡನೆ ಅವರ ಆಸಕ್ತಿಯ ಕ್ಷೇತ್ರಗಳು.

    ಪ್ರತಿಕ್ರಿಯಿಸಿ: [email protected]

    Background music used with thanks:

    https://www.youtube.com/watch?v=GmNxHUq6gnw&list=RDMM&start_radio=1

    https://www.youtube.com/watch?v=HZ21X6whTkA

    https://www.youtube.com/watch?v=pL5Q3vE65Nc

    10 min
  • ಮಕ್ಕಳಿಗೆ ಸೋಲಲು ಕಲಿಸಿ - ಮಧುಸೂದನ ಸುಣ್ಣಂಬಳ

    ಮಕ್ಕಳಿಗೆ ಸೋಲಲು ಕಲಿಸಬೇಕು ಎನ್ನುತ್ತಾರೆ ಮನಃಶಾಸ್ತ್ರಜ್ಞ ಮಧುಸೂದನ ಸುಣ್ಣಂಬಳ. ಸೋಲು ಅನುಭವ ಆದರೆ ಮಕ್ಕಳು ಬದುಕಿನಲ್ಲಿ ಬರುವ ಸಮಸ್ಯೆಗಳನ್ನು ಎದುರಿಸುವ ಕೌಶಲ ಮತ್ತು ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾರೆ ಅನ್ನುವುದು ಅವರ ಅನುಭವ. ಹೀಗಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಸೋಲಲು ಕಲಿಸುವ ಪಠ್ಯ ಪರಿಕಲ್ಪನೆಯೂ ಇದೆ. ಅದು ಹೇಗಿದೆ ಎಂಬುದನ್ನು ಅವರ ಮಾತುಗಳಲ್ಲೇ ಕೇಳಿ. 

    ಮಧುಸೂದನ್‌ ಅವರು ಕರ್ನಾಟಕ, ಶ್ರೀಲಂಕಾದಲ್ಲಿ ಮನಃಶಾಸ್ತ್ರಜ್ಞರಾಗಿ, ಆಪ್ತ ಸಮಾಲೋಚಕರಾಗಿ ದಶಕಕ್ಕೂ ಹೆಚ್ಚು ಕಾಲದ ಅನುಭವ ಉಳ್ಳವರು. ಈಗ ಹೈದರಾಬಾದ್‌ನ ಇಂಡಸ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಮನಃಶಾಸ್ತ್ರಜ್ಞ ಹಾಗೂ ಆಡಳಿತಾಧಿಕಾರಿಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

    ಪ್ರತಿಕ್ರಿಯಿಸಿ: [email protected]

    Background music used with thanks:

    https://www.youtube.com/watch?v=GmNxHUq6gnw&list=RDMM&start_radio=1

    https://www.youtube.com/watch?v=HZ21X6whTkA

    https://www.youtube.com/watch?v=pL5Q3vE65Nc

    16 min

About ಸಿರಿದನಿ SIRIdani

From the publisher's feed

SIRIdani, A passion broadcast channel, set up by equal minded team In Bangalore. Channel addresses education, culture, social issues and youth