
Sign up to save your podcasts
Or


ಲಾಕ್‌ಡೌನ್ ವೇಳೆ ಅಡುಗೆ ಮಾಡುವ ಉತ್ಸಾಹ ತೋರಿ ಪೇಚಿಗೆ ಸಿಲುಕಿದ ಪ್ರಸಂಗವನ್ನು ಹೇಳಿದ್ದಾರೆ ಮಧುರಾ ಲಕ್ಷ್ಮೀಶ ಭಟ್.
ಮಧುರಾ ಅವರು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ವಿದ್ಯಾರ್ಥಿನಿ. ಕಥೆ, ಹರಟೆ, ಬರಹ, ಮಾತು ಅವರಿಗಿಷ್ಟ.
ಪ್ರತಿಕ್ರಿಯಿಸಿ: [email protected]
BACKGROUND MUSIC USED WITH THANKS: https://ytmp3.cc/youtube-to-mp3/
ಸ್ವಲ್ಪ ಮಾತನಾಡಿ ಪ್ಲೀಸ್– ಶಾಂತಾ ಪ್ರಕಾಶ್ ಅವರು ಬರೆದು ಓದಿದ ಸಣ್ಣ ಕಥೆ.
ಮನುಷ್ಯ ಸಂಬಂಧಗಳಲ್ಲಿ ಸಣ್ಣ ಸಂಶಯದ ಸುಳಿಯೊಂದು ಮೂಡಿದಾಗ ಅದು ಮಾಡುವ ಅನಾಹುತವೇನು ಎಂಬುದನ್ನು ಕಥೆಗಾರ್ತಿ ಕಟ್ಟಿಕೊಟ್ಟಿದ್ದಾರೆ. , ಮನಬಿಚ್ಚಿ ಮಾತನಾಡಲು ಬಿಗುಮಾನ ಬೇಡ ಎಂಬ ಸಂದೇಶವೂ ಇಲ್ಲಿದೆ.
ಶಾಂತಾ ಪ್ರಕಾಶ್ ಅವರು ಮೂಲತಃ ಉಡುಪಿ ಜಿಲ್ಲೆ ಸಾಲಿಗ್ರಾಮದವರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಶಿಕ್ಷಕಿ. ಕನ್ನಡ ಅವರ ಇಷ್ಟದ ವಿಷಯ.
ಸಂಚಿಕೆ ನಿರೂಪಣೆ: ಜ್ಯೋತಿ ಸಾಲಿಗ್ರಾಮ
ವಂದನಾ ರೈ ಕಾರ್ಕಳ
ಸದ್ಯ ಸಾಮಾಜಿಕ ಜಾಲತಾಣಗಳ ಮೂಲಕ ಮಕ್ಕಳಿಗೆ ಕಲೆ, ಸಂಸ್ಕೃತಿ ಪರಿಚಯಿಸುತ್ತಿರುವ ಅಪರೂಪದ ಶಿಕ್ಷಕಿ. ಹಾಡು, ನೃತ್ಯಗಳ ಮೂಲಕವೇನೋ ಅವರು ಖ್ಯಾತರು. ಆದರೆ, ಅವರ ಅಂತರಂಗವೇನು ಎಂದು ಅರಿಯುವ ಪ್ರಯತ್ನ ಇಲ್ಲಿನದು.
ಸಿರಿದನಿಯಲ್ಲಿ ವಂದನಾ ಅವರು ತಮ್ಮ ಬಾಲ್ಯ, ಬದುಕು, ವೃತ್ತಿಯನ್ನು ತೆರೆದಿಟ್ಟಿದ್ದಾರೆ. ವಂದನಾ ರೈ ಅವರನ್ನು #Vandana rai Karkala ಹೆಸರಿನ ಫೇಸ್‌ಬುಕ್ ಖಾತೆ ಮತ್ತು ಯುಟ್ಯೂಬ್ ಚಾನೆಲ್ ಮೂಲಕ ಅನುಸರಿಸಬಹುದು.
ಮಾತುಕತೆ ನಡೆಸಿದವರು: ಸ್ಮಿತಾ ಶೆಣೈ ಮಂಗಳೂರು
ಪ್ರತಿಕ್ರಿಯಿಸಿ: [email protected]
VANDANA RAI KARKALA
ಕೋವಿಡ್–19 ಸಂಕಟದ ಕಾಲಘಟ್ಟದಲ್ಲಿ ಆತಂಕದಲ್ಲಿರುವ ಮನಸ್ಸುಗಳಿಗೆ ಪುಟ್ಟ ಸಾಂತ್ವನ ಹೇಳುವ ಪ್ರಯತ್ನವನ್ನು ಚಿತ್ರದುರ್ಗದ ತ್ರಿವಿಧ ದಾಸೋಹಿ ಶ್ರೀ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಮಾಡಿದ್ದಾರೆ.
ಶರಣರು ತಮ್ಮ ವಚನಗಳಲ್ಲಿ ಹೇಳಿದ ಸಾರ್ವಕಾಲಿಕ ಸತ್ಯಗಳನ್ನು ಪ್ರಸ್ತುತ ವಿದ್ಯಮಾನಗಳೊಂದಿಗೆ ತುಲನೆ ಮಾಡಿ ಮನಸ್ಸಿಗೊಂದಿಷ್ಟು ಸಮಾಧಾನ ಮಾಡುವ ಪ್ರಯತ್ನ ಮುರುಘಾ ಶ್ರೀ ಅವರದ್ದು. ಶ್ರೀಗಳ ಮಾತುಗಳು ಒಬ್ಬರು ಆಪ್ತ ಬಂಧು ಹೇಳಿದಂತೆ ಇದೆ. ಪೂರಕವಾಗಿ ತೋಟಪ್ಪ ಉತ್ತಂಗಿ ಮತ್ತು ಸಂಗಡಿಗರು ಹಾಡಿರುವ ಶರಣರ ವಚನಗಳು ಬದುಕಿನ ವಾಸ್ತವವನ್ನು ಸ್ವೀಕರಿಸಿ ಮುನ್ನಡೆಯುವಂತೆ ಸಾಂತ್ವನ ಹೇಳುತ್ತವೆ.
ನಿರೂಪಣೆ: ಸ್ಮಿತಾ ಶೆಣೈ ಮಂಗಳೂರು
ನಿಮ್ಮ ಪ್ರತಿಕ್ರಿಯೆಗಾಗಿ ಇಮೇಲ್: [email protected]
ಕೃತಕ ಬುದ್ಧಿಮತ್ತೆ (ಆರ್ಟಿಫೀಷಿಯಲ್ ಇಂಟಲಿಜೆನ್ಸ್) ಈಗ ವಿಶ್ವದಾದ್ಯಂತ ಅತಿ ಹೆಚ್ಚು ಚರ್ಚೆ ಮತ್ತು ಪ್ರಚಲಿತದಲ್ಲಿರುವ ಕ್ಷೇತ್ರ. ಭಾರತದಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಹೂಡಿಕೆ ಆಗುತ್ತಿದೆ. ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅಧ್ಯಯನ ವಿಷಯಗಳೂ ಬಂದಿವೆ. ಅದೊಂದು ಅವಕಾಶಗಳ ಆಗರ.
ಆದರೆ ಈ ಬಗ್ಗೆ ಕೆಲವು ಶಿಕ್ಷಕರು ಮೇಲ್ನೋಟದ ಸೀಮಿತ ಮಾಹಿತಿಯನ್ನು ಕೆಲವು ಜಾಲತಾಣಗಳ ಮೂಲಕ ನೀಡಿದ್ದಾರೆ. ಆದರೆ ಸಿರಿದನಿಯಲ್ಲಿ ನಮಗೆ ಆ ಕ್ಷೇತ್ರದಲ್ಲಿ ಹತ್ತಾರು ವರ್ಷ ಕೆಲಸ ಮಾಡಿ ಅನುಭವವುಳ್ಳ ವಿಜ್ಞಾನಿ, ನಟ ತೇಜಸ್ ಅವರು ಆ ಕ್ಷೇತ್ರದ ಆಳ ಅಗಲವನ್ನು ಕೇಳುಗರಿಗಾಗಿ ತೆರೆದಿಟ್ಟಿದ್ದಾರೆ. ಹಾಗಾಗಿ ಕನ್ನಡ ಭಾಷೆಯಲ್ಲಿ ಈ ಕ್ಷೇತ್ರದ ಪರಿಚಯ ಮಾಡುತ್ತಿರುವುದು ಮೊದಲ ಪ್ರಯತ್ನ.
ತೇಜಸ್ ಅವರು ವಿಶ್ವದ ಪ್ರತಿಷ್ಠಿತ ಕಂಪನಿಗಳಾದ ಗೂಗಲ್, ಮೈಕ್ರೋ ಸಾಫ್ಟ್ ಕಂಪನಿಗಳಲ್ಲಿ ಉನ್ನತ ಸಂಶೋಧನಾ ತಂಡಗಳಲ್ಲಿ ಕೆಲಸ ಮಾಡಿದವರು. ಚಲನಚಿತ್ರ ಅವರ ಆಸಕ್ತಿ ಮತ್ತು ಅಭಿರುಚಿ. ಕನ್ನಡದಲ್ಲಿ ಇತ್ತೀಚೆಗೆ ತೆರೆಕಂಡ ‘ರಿವೈಂಡ್’ ಚಿತ್ರದ ನಿರ್ಮಾಪಕ, ನಿರ್ದೇಶಕ ಮತ್ತು ನಾಯಕ ನಟ. ಹೀಗೆ ತೇಜಸ್ ಒಬ್ಬರು ಬಹುಮುಖ ಪ್ರತಿಭೆ.
ಇದು ತೇಜಸ್ ಅವರ ಸಂದರ್ಶನ ಅಲ್ಲ. ಕೃತಕ ಬುದ್ಧಿಮತ್ತೆ ಕ್ಚೇತ್ರದ ಕುರಿತು ಸೀಮಿತ ಅವಧಿಯಲ್ಲಿ ಸಮಗ್ರ ಮಾಹಿತಿ ನೀಡುವ ಪ್ರಯತ್ನ. ಇನ್ನಷ್ಟು ವಿವರಣೆಗೆ ತಾವು ಆಸಕ್ತಿ ವ್ಯಕ್ತಪಡಿಸಿದಲ್ಲಿ ತೇಜಸ್ ಅವರು ಸಿರಿದನಿಯೊಂದಿಗೆ ಸದಾ ಸಿದ್ಧರಿದ್ದಾರೆ. ಕೇಳಿ. ನಿಮ್ಮದೊಂದು ಪ್ರತಿಕ್ರಿಯೆ ಇರಲಿ
ನಿಮ್ಮ ಪ್ರತಿಕ್ರಿಯೆಗಾಗಿ ಇಮೇಲ್: [email protected]
- –ಸಿರಿದನಿ ತಂಡ
BAckground music used with thanks: https://www.youtube.com/watch?v=x3O9OXjK7pA
ಚಿಣ್ಣರ ನಂದನಕ್ಕೊಬ್ಬರು ವಂದನಾ ರೈ
ಕೃಷಿಗಾಗಿಯೇ ಬಂದಿರುವ ಈ ಟಿವಿಯಲ್ಲಿ ಏನೇನಿದೆ?
ರೈತರಿಗೆ ಏಕೆ ಬೇಕು?
ಮಾತನಾಡಿದ್ದಾರೆ ಶ್ರಮಜೀವಿ ಟಿವಿಯ ಪ್ರಧಾನ ಸಂಪಾದಕ ಡಾ.ವೆಂಕಟ್ರಮಣ ಹೆಗಡೆ
ಪ್ರತಿಕ್ರಿಯಿಸಿ: [email protected]
Background music used with Thanks:
https://www.youtube.com/watch?v=JL_m8oh31Dc
ಶ್ರಮಜೀವಿ ಟಿವಿ: ಕೃಷಿಗಾಗಿಯೇ ರೂಪುಗೊಂಡಿರುವ ಜಗತ್ತಿನ ಮೊದಲ ಒಟಿಟಿ (ಓವರ್ ದಿ ಟಾಪ್) ಟಿವಿ ವಾಹಿನಿ.
ಕೃಷಿಗಾಗಿಯೇ ಬಂದಿರುವ ಈ ಟಿವಿಯಲ್ಲಿ ಏನೇನಿದೆ?
ರೈತರಿಗೆ ಏಕೆ ಬೇಕು?
ಮಾತನಾಡಿದ್ದಾರೆ ಶ್ರಮಜೀವಿ ಟಿವಿಯ ಪ್ರಧಾನ ಸಂಪಾದಕ ಡಾ.ವೆಂಕಟ್ರಮಣ ಹೆಗಡೆ
ಪ್ರತಿಕ್ರಿಯಿಸಿ: [email protected]
Background music used with Thanks:
https://www.youtube.com/watch?v=JL_m8oh31Dc
ವಾಣಿಶ್ರೀ ಕೊಂಚಾಡಿ. ಮಂಗಳೂರಿನವರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರೆ..ಕಥೆ ,ಕವನ, ಲೇಖನ ಬರೆಯುವ ಹವ್ಯಾಸ... ಪುಸ್ತಕ ಪ್ರೇಮಿ.
ಎರಡು ಜೀವಗಳು ಬೇರಾಗದ ದೃಢ ಭಾವಗಳನ್ನು ತಮ್ಮ ‘ಅದ್ವೈತ’ ಕಥೆಯಲ್ಲಿ ತೆರೆದಿಟ್ಟಿದ್ದಾರೆ.
ಪ್ರತಿಕ್ರಿಯಿಸಿ: [email protected]
https://www.youtube.com/watch?v=2h-QfKf_09g
https://www.youtube.com/watch?v=Ty3Svwc-JB8
https://www.youtube.com/watch?v=Y1RC8qtFZb4
From the publisher's feed