Thale-Harate Kannada Podcast
Download on the App Store

Thale-Harate Kannada Podcast episodes

  • ಈ ಹ್ಯಾಕ್ಕಿನ್ಗ್ ಅಂದ್ರೆ ಏನು? Cybersecurity 101.

    ಇಂಟರ್ನೆಟ್ ಎಲ್ಲೆಡೆ ಇದೆ. ಇದರ ಉಪಯೋಗಗಳ ಜೊತೆ ಹಲವಾರು ಅನಾನುಕೂಲತೆ ಸಹ ನಮ್ಮ ಅನುಭವಕ್ಕೆ ಬಂದಿವೆ. ಯುವಕರು, ವೃದ್ಧಾಪ್ಯದವರು, ಮಕ್ಕಳು ಎಲ್ಲರೂ ಆನ್ಲೈನ್ ಹೋಗುತ್ತಿದ್ದಾರೆ. ಇವರೆಲ್ಲರಿಗೆ ಕಂಡುಬರುವ ವಿಷಯಗಳು, ಇವರ ಮೇಲೆ ಬೀರುವ ಪ್ರಭಾವಗಳು, ಮತ್ತು ವಿಪತ್ತುಗಳಿಂದ ಇವರನ್ನು ರಕ್ಷಿಸುವುದು ಸೈಬರ್ ಸೆಕ್ಯೂರಿಟಿ. ಪವನ್ ಶ್ರೀನಾಥ್ ಮತ್ತು ಸೂರ್ಯ ಪ್ರಕಾಶ್ ಬಿ ಎಸ್  ಅವರು ಸಂದೇಶ್ ಆನಂದ್  ಅವರ ಜೊತೆ ಈ ಅಗಾಧ ಗಾತ್ರದ ಇಂಟರ್ನೆಟ್ ಮತ್ತು ಸೈಬರ್ ಸೆಕ್ಯುರಿಟಿ ಬಗ್ಗೆ ಹರಟುತ್ತಾರೆ.

    Hackers. Bug bounty hunters. Wannacry. Ransomware. The internet can be a scary place, and as millions of Indians get online, thousands of nefarious plots are hatched against companies, governments and people all the time. What is Cybersecurity all about? Is it like a night watchman's job, but online? Information security consultant Sandesh Anand talks to hosts Surya Prakash BS and Pavan Srinath about the crazy scams and schemes that happen online.

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    See omnystudio.com/listener for privacy information.

    42 min
  • ನಮ್ಮ ರೇಡಿಯೋ, ನಮ್ಮ ಊರು. FM Radio & The City.

    ಎಫ್ ಎಂ ರೇಡಿಯೋಗೆ ಮತ್ತೆ ಬೆಂಗಳೂರು ನಗರಕ್ಕೆ ಒಂದು ಅನ್ಯೋನ್ಯ ಸಂಬಂಧವಿದೆ. ಟಿವಿ, ಇಂಟರ್ನೆಟ್ ಮಾಧ್ಯಮಗಳ ಮಧ್ಯೆ ಕಳೆದುಹೋಗುವಂತಹ ಸನ್ನಿವೇಶದಲ್ಲಿ, ಎಫ್ ಎಂ ನಿಂದ ರೇಡಿಯೋ ಒಂದು ಹೊಸ ಚೇತನವನ್ನು ಪಡೆದುಕೊಂಡಿತು. ಈ ಮಾಧ್ಯಮದ ಸಾಮರ್ಥ್ಯವನ್ನು ಜನರು ಸಂಪೂರ್ಣವಾಗಿ ಬಳಸಿಕೊಂಡಿದ್ದಾರೆಯೆ? ಇದರ ದೀರ್ಘ ಕಾಲಿಕ ಪ್ರಸ್ತುತತೆ ಏನು? ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಯವರು, ರೇಡಿಯೋ ಸಿಟಿ ಎಫ್. ಎಮ್., ವಸಂತಿ ಹರಿಪ್ರಕಾಶ್ ಜೊತೆ ರೇಡಿಯೋವಿನ ಇತಿಹಾಸ, ಪರಿಹಾಸ, ಮತ್ತು ಭವಿಷ್ಯದ ಬಗ್ಗೆ ಚರ್ಚಿಸುತ್ತಾರೆ.

    What makes FM radio unique in its relationship with a city? How can radio as a medium stay relevant in the era of Youtube, Netflix and upstart podcasts? After a boom of innovation in the 2000s, why do almost all radio stations sound the same today? Hosts Pavan Srinath and Ganesh Chakravarthi  talk to journalist Vasanthi Hariprakash , whose Good Morning, Bangalore! show continues resonates with Bangaloreans from all backgrounds. Vasanthi talks about life as a radio anchor in a nascent and growing FM Radio industry, what hope radio gives her today, and what the future might be.

    ಫಾಲೋ ಮಾಡಿ. Follow the Thalé-Haraté Kannada Podcast @haratepod.

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    See omnystudio.com/listener for privacy information.

    1 hr 19 min
  • ಡಬ್ಬಿಂಗ್ ಬೇಕೇ ಬೇಕು. Dubbing is Our Right.

    ತಮಿಳು, ತೆಲುಗು, ಹಿಂದಿ, ಈ ಎಲ್ಲ ಭಾಷೆಗಳಲ್ಲೂ ವಿಶ್ವದ ಎಲ್ಲ ಚಲನಚಿತ್ರಗಳನ್ನು ನೋಡಬಹುದು. ಆದರೆ ಕನ್ನಡಲ್ಲಿ ಇದು ಸಾಧ್ಯವಿಲ್ಲ. ಹಾಲಿವುಡ್-ಬಾಲಿವುಡ್ ಚಲನಚಿತ್ರ ಬಿಡಿ, ನಮ್ಮ ಶಂಕರ್ ನಾಗ್ ಅವರ 'ಮಾಲ್ಗುಡಿ ಡೇ'ಸ್ ಸಹ ಕನ್ನಡಲ್ಲಿ ನೋಡಕ್ಕಾಗಲ್ಲ. ಇದಕ್ಕೆಲ್ಲ ಕರಣ ಸುಮಾರು ೫೦ ವರ್ಷಗಳಿಗಿಂತ ಹೆಚ್ಚು ಕಾಲ ಕರ್ನಾಟಕದಲ್ಲಿರುವ ಡಬ್ಬಿಂಗ್ ಬ್ಯಾನ್. ಇವೆಲ್ಲರ ಮಧ್ಯೆ #ಡಬ್ಬಿಂಗ್ ಬಾನ್ ಅಂತಹ ಒಂದು ಹೋರಾಟದ ಮೂಲಕ ಕೆಲವು ಚಲನಚಿತ್ರಗಳು ಕನ್ನಡಲ್ಲಿ ಡಬ್ ಆಗಿ ಬಿಡುಗಡೆ ಮಾಡಲಾಗಿದೆ. ಪವನ್ ಶ್ರೀನಾಥ್ ಮತ್ತು ಸೂರ್ಯ ಪ್ರಕಾಶ್ ಬಿ ಎಸ್ ವರು, ಮುನ್ನೋಟದ ವಸಂತ್ ಶೆಟ್ಟಿ ಹಾಗೂ ಹರಿವು ಕ್ರಿಯೇಷನ್ಸ್ ಿನ ಗೌತಮ್ ಹೆಗ್ಡೆ ಜೊತೆ, ಡಬ್ಬಿಂಗ್ ಮೂಲಕ ಕನ್ನಡದಕ್ಕೇ ಒಂದು ಪುನರ್ಜನ್ಮ ನೀಡುವ ಪ್ರಯತ್ನದ ಬಗ್ಗೆ ಮಾತನಾಡುತ್ತಾರೆ.

    Why can't Kannadigas watch the new Avengers movie in Kannada? Why isn't even Shankar Nag's Malgudi Days not available to watch in Kannada? Kannada and Kannadigas have suffered from an illegal, unconstitutional ban on dubbing into Kannada, that is over 50 years old. The dubbing ban has been steadily contested by a #DubbingBeku movement, where multiple films have finally been dubbed into Kannada, and a dubbed movie was released in over 100 theatres in the state in 2018. Hosts Pavan Srinath and Surya Prakash BS  speak to Vasant Shetty of Munnota and Gautham S Hegde of Harivu Creations, who have been at the forefront of this marathon to transform entertainment in Kannada, and eventually transform Kannada as a language.

    See omnystudio.com/listener for privacy information.

    47 min
  • Welcome. ಬನ್ನಿ ಹರಟೆ ಹೊಡಿಯೋಣ.

    ಹರಟೆ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ? ಬೆಚ್ಚಗ್ ಕೂತ್ಕೊಂಡು, ಕಾಫೀನೋ ಟೀನೋ ಹೀರ್ಕೊಂಡು, ಜೊತೆಗೆ ಕಡ್ಲೆಕಾಯಿ ಮೆಲ್ತಾ ಇದ್ರೆ ಇನ್ನೂ ಸರಿ. ಅದು-ಇದು, ಮಳೆ-ಬೆಳೆ, ಅವ್ರು-ಇವ್ರು ಹೀಗೆ ಲಂಗು ಲಗಾಮು ಇಲ್ದೆ ನಡಸೋ ಹರಟೆಗೆ ತಲೆ ಬೇರೆ ಸೇರ್ಕೊಂಡ್ರೆ ಹೇಗಿರುತ್ತೆ?

    ಬೆಂಗಳೂರು, ಕರ್ನಾಟಕ ಮತ್ತು ದೇಶದ ವರ್ತಮಾನ ವಿಷಯಗಳನ್ನು ಆಯಾ ಕ್ಷೇತ್ರದ ಎಕ್ಸ್ಪೆರ್ಟ್ಸ್ ಜೊತೆಗೆ ಪ್ರಬುದ್ಧ ಚರ್ಚೆಯ ಪ್ರಯತ್ನ. ಜೊತೆಗೆ ತಂತ್ರಜ್ಞಾನ, ಎಕನಾಮಿಕ್ಸ್, ವಿದೇಶನೀತಿ ಯಲ್ಲಿನ ಬೆಳವಣಿಗೆಗಳನ್ನು ಕನ್ನಡದಲ್ಲಿಯೇ ಮೊದಲ ಬಾರಿಗೆ ಹರಟುವ ಹಂಬಲ. ಪವನ್ ಶ್ರೀನಾಥ್ , ಸೂರ್ಯ ಪ್ರಕಾಶ್ ಬಿ. ಎಸ್.  ಮತ್ತೆ ಗಣೇಶ್ ಚಕ್ರವರ್ತಿ ಅವರು ಪ್ರತಿ ಬುಧವಾರ ಹರಟೆ ಹೊಡೀತಾರೆ, ಬನ್ನಿ ಕೇಳಿ.

    Welcome to the Thalé-Haraté Kannada Podcast, a weekly Kannada talkshow about everything from economics to foreign policy to technology and governance. With a little bit of English and a lot of irreverence thrown in. Hosts Pavan Srinath, Surya Prakash BS and Ganesh Chakravarthi will talk to guests every Wednesday on new episodes. Do check out the 3 special, inaugural episodes released on December 19, 2018. ಫಾಲೋ ಮಾಡಿ. Follow the Thalé-Haraté Kannada Podcast @haratepod

    Facebook: https://facebook.com/HaratePod/ Twitter: https://twitter.com/HaratePod/ Instagram: https://instagram.com/haratepod/

    ಈಮೇಲ್ ಕಳಿಸಿ, send us an email at [email protected].

    See omnystudio.com/listener for privacy information.

    3 min

About Thale-Harate Kannada Podcast

From the publisher's feed

ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ-ಹರಟೆ ಕನ್ನಡ ಪಾಡ್ಕಾಸ್ಟಿನಲ್ಲಿ, ಕನ್ನಡ ಮತ್ತು ಕಂಗ್ಲಿಷಿನಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಮಾತು - ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನಂತಹ…

More shows like Thale-Harate Kannada Podcast

Short Stories in Kannada by Sneha

Short Stories in Kannada

3 Listeners

ಮುದ್ದು ಮನಸುಗಳು( Kannada Podcast) by Muddu Manasugalu (ಮುದ್ದು ಮನಸುಗಳು)

ಮುದ್ದು ಮನಸುಗಳು( Kannada Podcast)

0 Listeners