ಕಥೆ ಖಜಾನೆ - ಕನ್ನಡ

ಕಥೆ ಖಜಾನೆ - ಕನ್ನಡ

By Kathe Khajane Team, IT for Change
Download on the App Store

ಕಥೆ ಖಜಾನೆ - ಕನ್ನಡ episodes

  • ಚುಲುಬುಲವಿನ ಬಾಲ

    ಲೇಖಕರು : ಸ್ಟೋರಿವೀವರ್ರಿಗಾಗಿ ಸಾವಿತ್ರಿ ಸಿಂಗ್ 
    ನಿರೂಪಕರು : ನಟೇಶ್ ಕುಮಾರ್ ಆರ್.ಜಿ
    ಸಂಪಾದಕರು : ನಟೇಶ್ ಕುಮಾರ್ ಆರ್.ಜಿ

    ತುಂಟ ಅಳಿಲಿಗೆ ತನ್ನ ಬಾಲ ಇಷ್ಟವಾಗುವುದಿಲ್ಲ. ಹಾಗಾದರೆ, ಇತರರ ಬಾಲ ಅಂಟಿಸಿಕೊಂಡರೆ ಸಮಸ್ಯೆ ಬಗೆಹರಿಯುವುದೆ? ಈ ತುಂಟ ಚುಲುಬುಲುವಿನ ಮುದ್ದಾದ ಕಥೆಯನ್ನು ಓದಿರಿ.

    ಕಥೆಯ ಮೂಲಕ ಮಕ್ಕಳಿಗೆ ಹೊಸ ಪದಗಳು ಮತ್ತು ಸರಳ ವಾಕ್ಯ ರಚನೆ ಮಾಡುವುದನ್ನು ತಿಳಿಸಿಕೊಡಬಹುದಲ್ಲದೇ ಅತಿ ಆಸೆ ಗತಿ ಕೇಡು ಎಂಬ ನೀತಿಯ ಕುರಿತಾಗಿ ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.

    1. ಕಥೆಯನ್ನು ತಮ್ಮದೇ ಮಾತುಗಳಲ್ಲಿ ಹೇಳುವಂತೆ ಮಕ್ಕಳಿಗೆ ತಿಳಿಸುವುದು 
    2. ಕಥೆಯಲ್ಲಿನ ಕಠಿಣ ಪದಗಳಿಗೆ ಅರ್ಥವನ್ನು ಚರ್ಚಿಸುವುದು.
    3. ಹಗುರ ದೇಹ ಹೊಂದಿರುವ ಪ್ರಾಣಿಗಳು ಮತ್ತು ಅದರ ಪ್ರಾಮುಖ್ಯತೆ ಕುರಿತು ಗುಂಪಿನಲ್ಲಿ ಚರ್ಚಿಸುವುದು.
    4. ತಂಡದೊಂದಿಗೆ ಚರ್ಚಿಸಿ ಕಥೆಯನ್ನು ಇನ್ನಷ್ಟು ಸ್ವಾರಸ್ಯಕರವಾಗಿ ರಚಿಸುವುದು.
    5. ಕಥೆಯಿಂದ ತಿಳಿದುಕೊಂಡ ಅಂಶವೇನೆಂದು ಪ್ರಶ್ನಿಸುವುದು ಹಾಗೂ 'ಅತಿ ಅಸೆ ಗತಿ ಕೇಡು' ಗಾದೆಗೆ ಪ್ರಬಂಧ ಬರೆಯಲು ತಿಳಿಸುವುದು.

    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ದುರಾಸೆ,ಪರಿಸರ ಮತ್ತು ವಾತಾವರಣ,ಶಬ್ದಕೋಶ
    ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    8 min
  • ಚೂಟಿ ಸೋನ

    ಲೇಖಕರು : ಸ್ಟೋರಿವೀವರ್ರಿಗಾಗಿ ವಿನಿತ ಕೃಷ್ಣ
    ನಿರೂಪಕರು : ಪರಶುರಾಮ್
    ಸಂಪಾದಕರು : ಪ್ರಸಾದ್ ಕೆ.ವಿ

    ಸೋನಾಳಿಗೆ ಅವಳ ಅಮ್ಮನ ಕೆಲಸ ಸ್ವಾರಸ್ಯಕರವಾಗಿ ತೋರುತ್ತದೆ! ಅಮ್ಮನಿಗೆ ಹೇಗೆ ಸಹಾಯ ಮಾಡುತ್ತಾಳೆ ಎಂದು ಕೇಳಿ ತಿಳಿಯಿರಿ.

    ಮಕ್ಕಳಿಗೆ ಸೂಕ್ಷ್ಮವಾಗಿ ಗಮನಿಸುವುದರ ಪ್ರಾಮುಖ್ಯತೆಯನ್ನ ತಿಳಿಸಿ ಸೂಕ್ಷ್ಮವಾಗಿ ಗಮನಿಸುವ ಕೌಶಲ್ಯ ಮಕ್ಕಳಲ್ಲಿ ಮೂಡುವಂತೆ ಪ್ರೇರೇಪಿಸುವುದು. ತಾಯಿ ಮತ್ತು ಮಕ್ಕಳ ಭಾಂಧವ್ಯದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :

    1. ಮಕ್ಕಳು ತಮ್ಮ ಪೋಷಕರನ್ನು ನೋಡಿ ಕಲಿತಿರುವ ಇತರ ಕೆಲಸಗಳ ಬಗ್ಗೆ ಚರ್ಚಿಸಬಹುದು
    2. ಮಕ್ಕಳು ತಮ್ಮ ಬಾಲ್ಯದಲ್ಲಿ ಮನೆ ವಸ್ತುಗಳನ್ನು ಆಟಿಕೆಗಳಾಗಿ ಬಳಸುತ್ತಿದ್ದ ವಸ್ತುಗಳಾವುವು ಮತ್ತು ಅದರಲ್ಲಿ ಏನು ಆಟವಾಡುತ್ತಿದ್ದರು ಎಂದು ಗುಂಪುಗಳಲ್ಲಿ ಚರ್ಚೆ ಮಾಡಬಹುದು
    3. ತರಕಾರಿಗಳಿಂದ ಅಚ್ಚು ಮಾಡಿ ಇತರ ವಿವಿಧ ಚಿತ್ರ/ ವಿನ್ಯಾಸಗಳನ್ನು ಮಕ್ಕಳ ಕೈಯಲ್ಲಿ ರಚಿಸಬಹುದು. ನಂತರ,ತಾವು ಬಿಡಿಸಿದ ಚಿತ್ರ/ವಿನ್ಯಾಸದ ಬಗ್ಗೆ ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಹೇಳಬಹುದು
    4. ಸೋನಾ ಅವಳ ಅಮ್ಮನಂತೆ ಅಚ್ಚಿನಿಂದ ಬಟ್ಟೆಯ ಮೇಲೆ ಚಿತ್ರ ಮೂಡಿಸುತ್ತಿದ್ದಾಗ ಸೋನಾಳಲ್ಲಿ ಯಾವ ಹೊಸ ಕೌಶಲ್ಯಗಳು ಅಭಿವೃದ್ಧಿಗೊಂಡವು?
       

    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ಕುಟುಂಬ,ಕಲೆ ಮತ್ತು ಸಂಸ್ಕ್ರುತಿ
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪,ತರಗತಿ ೫
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    4 min
  • ತಂದೆಯ ಪಾಠ

    ಲೇಖಕರು : ಸ್ಟೋರಿವೀವರ್ರಿಗಾಗಿ ಅಬ್ರಹಾಂ ಬೆರೆಕೆಟ್, ಹರ್ಡಿಡೊ ತೆಮೆಸ್ಜೆನ್, ಯೋಹನ್ಸ್ ಫೈರ್ವ್ಯೂ.
    ನಿರೂಪಕರು : ಕುಮಾರ್
    ಸಂಪಾದಕರು : ಪ್ರದೀಪ್

    ಮಗ ತಪ್ಪು ದಾರಿ ಹಿಡಿದಿರುವುದನ್ನು ತಿಳಿದ ಅಪ್ಪ ಏನು ಉಪಾಯ ಮಾಡಿದರು ಗೊತ್ತೇ?

    ಕಥೆಯ ಮೂಲಕ ಮಕ್ಕಳಿಗೆ ಕಳ್ಳತನ ಮಾಡುವುದು ತಪ್ಪು ಎಂಬುದನ್ನು ತಿಳಿಸುವುದಲ್ಲದೇ ಪುಸ್ತಕಗಳ ಮಹತ್ವವನ್ನು ತಿಳಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.

    1. ಕಥೆಯನ್ನು ತಮ್ಮದೇ ಮಾತುಗಳಲ್ಲಿ ಹೇಳುವಂತೆ ಮಕ್ಕಳಿಗೆ ತಿಳಿಸುವುದು.
    2. ನೀವು ಮಾಡಿದ ಯಾವುದಾದರೂ ತಪ್ಪಿಗೆ ನಿಮ್ಮ ಮನೆಯವರು ನಿಮಗೆ ಹೇಗೆ ಪ್ರತಿಕ್ರಿಯಿಸಿದ್ದಾರೆ ತಿಳಿಸಿ.
    3. ಅಬುಲಾನ ತಂದೆ ತನ್ನ ಮಗನಿಗೆ ತಿಳುವಳಿಕೆ ನೀಡಿದ ಬಗ್ಗೆ ನಿಮ್ಮ ಅಭಿಪ್ರಾಯವೇನು ?
    4. ಕಥೆಯಿಂದ ಮಕ್ಕಳು ಅರಿತುಕೊಂಡ ವಿಷಯಗಳನ್ನು ಚರ್ಚಿಸುವುದು.
    5. ನಿಮ್ಮ ಪೋಷಕರಿಂದ ನೀವು ಅರಿತುಕೊಂಡ ನೀತಿ ಪಾಠಗಳನ್ನು ತಿಳಿಸಿ.
       

    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಕುಟುಂಬ,ದಿನಚರಿ ಮತ್ತು ದೈನಂದಿನ ಅಭ್ಯಾಸಗಳು,ಬುದ್ಧಿವಂತಿಕೆ ಮತ್ತು ಚತುರತೆ
    ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    5 min
  • ತಾರಾಳ ನೇರಳೆ ವಿಮಾನ

    ಲೇಖಕರು : ಸ್ಟೋರಿವೀವರ್ರಿಗಾಗಿ ಸಂಗೀತ ವೆಲೆಗಾರ್
    ನಿರೂಪಕರು : ಮಧು ಹೆಚ್.ಸಿ
    ಸಂಪಾದಕರು : ಸೌಮ್ಯ ಎಸ್

    ನಗುವ ಎಲೆಗಳು, ಉರುಳಾಡುವ ಅಳಿಲುಗಳ ಕೀ... ಕೀ... ನಡುವೆ ಮರ ಹತ್ತಿ, ನೇರಳೆ ವಿಮಾನ ಏರಿದ ತಾರಾ ಮಾಡಿದ್ದೇನು?

    ಕಥೆಯ ಮೂಲಕ ಮಕ್ಕಳಿಗೆ ಹೊಸ ಪದಗಳು, ವಾಕ್ಯರಚನೆಯ ಜೊತೆಗೆ ಮಾತನಾಡುವ ಕೌಶಲ್ಯವನ್ನು ಮೂಡಿಸಬಹುದು. ಕಥೆಗೆ ಸಂಬಂದಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು:

    1. ಮಕ್ಕಳು ಕಥೆಯನ್ನು ಕೇಳಿದ ನಂತರ ಅವರದ್ದೇ ಆದ ಸ್ವಂತ ಮಾತುಗಳಲ್ಲಿ ಕಥೆಯನ್ನು ಹೇಳುವಂತೆ ತಿಳಿಸುವುದು.
    2. ಒಂದು ಜಾದು ಸನ್ನಿವೇಶವನ್ನು ಕಲ್ಪಿಸಿಕೊಂಡು ಮಕ್ಕಳಿಗೆ ಕಥೆ ರಚಿಸುವಂತೆ ತಿಳಿಸುವುದು.
    3. ತಾರಾಳ ಹಾಗೆ ಮಕ್ಕಳು ಕೂಡ ಕಂಡಿರುವ ಕಲ್ಪನೆಗಳ ಕುರಿತಾಗಿ ಗುಂಪಿನಲ್ಲಿ ಚರ್ಚಿಸುವಂತೆ ಮಕ್ಕಳಿಗೆ ತಿಳಿಸುವುದು.

    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಜಾದು,ಭಾವನೆಗಳು,ಸಾಹಸ
    ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    4 min
  • ತೂಕಡಿಸುವ ಭೀಮ

    ಲೇಖಕರು : ಸ್ಟೋರಿವೀವರ್ರಿಗಾಗಿ ಕಿರಣ್ ಕಸ್ತೂರಿಯ
    ನಿರೂಪಕರು : ಬಸವರಾಜ್ ಟಿ.ಡಿ
    ಸಂಪಾದಕರು : ನಾಗವೇಣಿ

    ಪ್ರತಿ ಬೆಳಿಗ್ಗೆ, ನಮ್ಮಲ್ಲಿ ಹಲವಾರು ಮಂದಿ ಅನುಭವಿಸುವ ಕಷ್ಟವನ್ನು ಭೀಮ ಕೂಡ ಅನುಭವಿಸುತ್ತಾನೆ. ಸಮಯಕ್ಕೆ ಸರಿಯಾಗಿ ಅವನಿಂದ ಏಳಲು, ಸಾಧ್ಯವಾಗುತ್ತಿರಲಿಲ್ಲ. ಅವನ ಒಬ್ಬ ಚಿಕ್ಕ ಸ್ನೇಹಿತ ಅವನಿಗೆ ಸಹಾಯ ಮಾಡುತ್ತಾನೆ. ಅದು ಹೇಗೆ ಎಂದು ಕೇಳಿ ತಿಳಿದುಕೊಳ್ಳಿ .

    ಈ ಕಥೆಯ ಮೂಲಕ ಮಕ್ಕಳಿಗೆ ಹೊಸಪದಗಳ ಪರಿಚಯ ಮಾಡಿಕೊಡಬಹುದಲ್ಲದೇ ದೈನಂದಿನ ಉತ್ತಮ ಅಭ್ಯಾಸಗಳನ್ನು ತಿಳಿಸಿಕೊಡಬಹುದು ಹಾಗೂ ಕಥೆಯಲ್ಲಿ ಭೀಮನಿಗೆ ಆತನ ಸ್ನೇಹಿತರು ಸಹಾಯ ಮಾಡಿದಂತೆ ಮಕ್ಕಳಲ್ಲೂ ಕೂಡ ಸಹಾಯ ಮನೋಭಾವವನ್ನು ಮೂಡಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :

    1. ಮಕ್ಕಳಲ್ಲಿ ಉತ್ತಮ ಅಭ್ಯಾಸಗಳನ್ನ ಮೂಡಿಸುವಲ್ಲಿ ಮನೆಯವರ ಪ್ರಯತ್ನಗಳ ಕುರಿತು ಚರ್ಚಿಸಬಹುದು.
    2. ಕಥೆಯಲ್ಲಿ ಬಂದಂತಹ ಪ್ರಾಣಿಗಳು ಭೀಮನನ್ನು ಎಬ್ಬಿಸಲು ಹೇಗೆಲ್ಲಾ ಪ್ರಯತ್ನಿಸಿದವು ಎಂಬುದನ್ನ ನಿಮ್ಮ ಕಲ್ಪನೆಯಲ್ಲಿ ಹೇಳಿ.
    3. ನೊಣದ ಸಹಾಯವಿಲ್ಲದೆ ಭೀಮನು ಸ್ವತಃ ತಾನೇ ಎಚ್ಚರಗೊಳ್ಳುವಂತೆ ಕಥೆಯ ಅಂತ್ಯವನ್ನು ರಚಿಸಲು ತಿಳಿಸುವುದು.
    4. ಎಷ್ಟೇ ಪ್ರಯತ್ನಿಸಿದರೂ ಎಚ್ಚರಗೊಳ್ಳದ ಭೀಮನ ಕುರಿತು ಪ್ರಾಣಿಗಳ ಅಭಿಪ್ರಾಯವೇನಿರಬಹುದು? ನಿಮ್ಮ ಮಾತುಗಳಲ್ಲಿ ತಿಳಿಸಿ.
    5. ನೀವು ಕೂಡ ಭೀಮನ ಸ್ಥಿತಿಯಲ್ಲಿದ್ದು ಸಮಯಕ್ಕೆ ಏಳುವುದು ಸಾಧ್ಯವಾಗದಿದ್ದರೆ ನೀವು ಏನು ಮಾಡುತ್ತೀರಿ?
    6. ನೀವು ಭೀಮನ ಸ್ನೇಹಿತರೆಂದು ಭಾವಿಸಿ ಭೀಮನು ನಿದ್ರೆಯಿಂದ ಏಳಲು ಏನೆಲ್ಲಾ ಸಲಹೆಗಳನ್ನು ನೀಡುವಿರೀ?
    7. ಮಕ್ಕಳೇ ನೀವು ಮುಂಜಾನೆ ಬೇಗ ಏಳುವುದಕ್ಕೆ ಏನೆಲ್ಲಾ ಪ್ರಯತ್ನಗಳನ್ನು ಮಾಡುತ್ತೀರಿ ?
       

    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ದಿನಚರಿ ಮತ್ತು ದೈನಂದಿನ ಅಭ್ಯಾಸಗಳು,ಸಹಾಯ - ಸಹಕಾರ,ಹಾಸ್ಯ
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪,ತರಗತಿ ೫
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    6 min
  • ದುರಾಸೆಯ ಇಲಿ

    ಲೇಖಕರು : ಸ್ಟೋರಿವೀವರ್ರಿಗಾಗಿ ಹರ್ಮೀಂಧರ್ ಓಹ್ರೀ
    ನಿರೂಪಕರು : ಕೆ.ಜಿ ಬಸವರಾಜ್
    ಸಂಪಾದಕರು : ಬಾಲಾಜಿ

    ಇಲಿ ದೊಡ್ಡ ತಿಂಡಿಯನ್ನು ಬಿಲದೊಳಗೆ ತೆಗೆದುಕೊಂಡು ಹೋಗಲು ನೋಡುತ್ತದೆ. ದುರಾಸೆಯಿಂದ ಲಾಭವಿಲ್ಲ ಎಂದು ಕಲಿಯುತ್ತದೆ.

    ಮಕ್ಕಳಿಗೆ ಅತಿ ಆಸೆಯೇ ದುಖಃಕ್ಕೆ ಮೂಲ ಎಂಬುದನ್ನ ತಿಳಿಸಿಕೊಡಬಹುದಲ್ಲದೇ ಆರೋಗ್ಯ ಮತ್ತು ಸ್ವಛ್ಛತೆಯ ಬಗ್ಗೆ ಮಕ್ಕಳಿಗೆ ಅರಿವುಮೂಡಿಸುವುದು. ಕಥೆಗೆ ಸಂಬಂದಿಸಿದಂತೆ ಮಾಡಬಹುದಾದ ಕೆಲವು ತರಗತಿಯ ಚಟುವಟಿಕೆಗಳು :

    1. ಮನೆಯಲ್ಲಿನ ತಿಂಡಿ ತಿನಿಸುಗಳನ್ನು ಹುಡುಕಿ ತಿನ್ನಲು ಬರುವ ಪ್ರಾಣಿಗಳಾವುವು ಎಂಬುದನ್ನ ಚರ್ಚಿಸುವುದು.
    2. ಮನೆಯಲ್ಲಿನ ತಿಂಡಿ ಇಲಿ ಅಥವಾ ಯಾವುದಾದರೂ ಪ್ರಾಣಿಯ ಪಾಲಾಗಿರುವ ಕುರಿತು ಅನುಭವವನ್ನು ಹಂಚಿಕೊಳ್ಳಲು ತಿಳಿಸುವ ಮೂಲಕ ಮಕ್ಕಳಲ್ಲಿ ಮಾತನಾಡುವ ಕೌಶಲ್ಯ ಮೂಡಿಸುವುದು.
    3. ಮನೆಯಲ್ಲಿನ ಆಹಾರವನ್ನು ತಿನ್ನಲು ಬರುವ ಪ್ರಾಣಿಗಳಿಂದ (ಇಲಿ,ಜೆರಳೆ, ಬೆಕ್ಕು) ಆಹಾರವನ್ನು ಹೇಗೆ ಕಾಪಾಡುವುದು ಎಂಬುದನ್ನು ಗುಂಪು ಚರ್ಚೆ ಮಾಡಲು ತಿಳಿಸುವುದು.
    4. ಮನೆಯಲ್ಲಿ ಬೇರೆ ಪ್ರಾಣಿಗಳು ಎಂಜಲು ಮಾಡಿಬಿಟ್ಟ ಆಹಾರವನ್ನು ಸೇವಿಸುವುದರಿಂದ ಆಗುವ ಅನಾಹುತಗಳಕುರಿತು ಚರ್ಚಿಸುವುದು.
    5. ಕಥೆಯನ್ನು ಮಕ್ಕಳು ತಮ್ಮದೇ ಮಾತುಗಳಲ್ಲಿ ಹೇಳುವಂತೆ ತಿಳಿಸುವುದು.
    6. ಕಥೆಯಲ್ಲಿ ಇಲಿಯ ಜಾಗದಲ್ಲಿ ನೀವು ಇದ್ದಿದ್ದರೇ ಏನು ಮಾಡುತ್ತಿದ್ದಿರಿ ? ಎಂದು ಕೇಳುವುದು.
    7. ಇಲಿಗೆ ಉಂಟಾಗಿರುವ ಸಮಸ್ಯೆಯಿಂದ ಹೊರಬರಲು ನೀವು ಏನು ಉಪಾಯಗಳನ್ನು ನೀಡುವಿರಿ.
    8. ನಿಮ್ಮ ಮನೆಯ ಇಲಿಗೆ ನೀವು ಮಾಡುವ ಮನವಿಗಳೇನು?
    9. ಇಲಿ ಮತ್ತೊಮ್ಮೆ ಇಂತಹ ಸಮಸ್ಯೆಗೆ ಸಿಲುಕದಂತೆ ನೀವು ನೀಡುವ ಸಲಹೆಗಳೇನು?
       

    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ಆರೊಗ್ಯ ಮತ್ತು ಸ್ವಚ್ಚತೆ,ದುರಾಸೆ,ಪ್ರಾಣಿ ಮತ್ತು ಪಕ್ಷಿಗಳು
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪,ತರಗತಿ ೫
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    4 min
  • ದೋಣಿ ವಿಹಾರ

    ಲೇಖಕರು : ಸ್ಟೋರಿವೀವರ್ರಿಗಾಗಿ ಜಯಶ್ರೀ ದೇಶಪಾಂಡೆ
    ನಿರೂಪಕರು : ದಿನೇಶ್ & ರೇಷ್ಮ
    ಸಂಪಾದಕರು : ದಿನೇಶ್

    ಹಳ್ಳಿಯಲ್ಲಿರುವ ಅಜ್ಜನ ಮನೆಗೆ ಹೋಗುವುದೆಂದರೆ ನಗರದಲ್ಲಿ ಬೆಳೆದ ಬಾಲಕ ರಾಜುವಿಗೆ ಬಹಳ ಖುಷಿ. ಈ ಬಾರಿಯ ಆತನ ರಜಾದ ಮಜಾ ವಿವರ ತಿಳಿಯಲು ದೋಣಿ ವಿಹಾರ ಓದಿ

    ಈ ಕಥೆಯ ಮೂಲಕ ಮಕ್ಕಳಿಗೆ ಹೊಸ ಪದಗಳ ಪರಿಚಯ ಹಾಗೂ ಸರಳ ವಾಕ್ಯ ರಚನೆಯ ಬಗ್ಗೆ ತಿಳಿಸಿಕೊಡಬಹುದಲ್ಲದೇ ಈಜಿನ ಪ್ರಾಮುಖ್ಯತೆ ಹಾಗೂ ನೀರಿರುವ ಬಳಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು. 

    1. ಮಕ್ಕಳಿಗೆ ತಮ್ಮ ಬೇಸಿಗೆ ರಜೆಯ ಅನುಭವವನ್ನು ಹಂಚಿಕೊಳ್ಳುವಂತೆ ತಿಳಿಸುವುದು. 
    2. ನದಿ, ದೋಣಿ ಹಾಗೂ ನೀರಿನಲ್ಲಿ ಈಜುವ ಕುರಿತಾಗಿ ಮಕ್ಕಳಿಗಿರುವ ಅನುಭವಗಳನ್ನು ತಿಳಿದುಕೊಳ್ಳುವುದು. 
    3. ಕೆರೆ, ನದಿ, ಸರೋವರಗಳ ಬಳಿ ಅನುಸರಿಸಬೇಕಾದ ಸುರಕ್ಷಿತ ಕ್ರಮಗಳ ಬಗ್ಗೆ ಪ್ರಭಂಧ ಬರೆಯಲು ಅವಕಾಶ ಮಾಡಿಕೊಡುವುದು.
    4.  ದೋಣಿ ಪ್ರಯಾಣದ ಅನುಭವಗಳನ್ನು ಹಂಚಿಕೊಳ್ಳಲು ತಿಳಿಸುವುದು.
    5.  ಮಕ್ಕಳು ತಮ್ಮ ಪೋಷಕರು ಅಥವಾ ತಾತ-ಅಜ್ಜಿಯಿಂದ ಕಲಿತ ಆಟಗಳು ಅಥವಾ ವಿದ್ಯೆಯನ್ನು ಗುಂಪಿನೊಂದಿಗೆ ಚರ್ಚಿಸಲು ತಿಳಿಸುವುದು.
    6.  ದೋಣಿ ಮತ್ತು ಹಡಗಿನ ವ್ಯತ್ಯಾಸಗಳು ಹಾಗೂ ಅವುಗಳ ಕಾರ್ಯ, ಉಪಯೋಗ ಮತ್ತು ಮಹತ್ವದ ಕುರಿತಾಗಿ ಮಕ್ಕಳೊಂದಿಗೆ ಚರ್ಚಿಸುವುದು.
       

    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಕುಟುಂಬ,ಪರಿಸರ ಮತ್ತು ವಾತಾವರಣ,ಸಾಹಸ
    ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    8 min
  • ನಡೆದಾಡುವ ಪರ್ವತ

    ಲೇಖಕರು : ಸ್ಟೋರಿವೀವರ್ರಿಗಾಗಿ ಮನೋಹರ್ ಚಾಮೋಲಿ
    ನಿರೂಪಕರು : ಹಾಲೇಶ್ ಕೆ.ಜಿ
    ಸಂಪಾದಕರು : ಚಂದ್ರಶೇಖರ್

    ಒಂದು ದಿನ, ಒಂಟೆಯೊಂದು ಮರಳಿನ ಬಿರುಗಾಳಿಯಲ್ಲಿ ಹೂತು ಹೋಗುತ್ತದೆ. ಅದರ ಡುಬ್ಬ ಮಾತ್ರ ಹೊರಗೆ ಕಾಣುತ್ತಿರುತ್ತದೆ. ಎರಡು ಆಮೆಗಳು ಒಂಟೆಯ ಡುಬ್ಬವನ್ನು ಪರ್ವತ ಎಂದು ಭಾವಿಸಿ ಮೇಲೆ ಏರುತ್ತವೆ. ಆದರೆ ‘ಪರ್ವತ’ ನಡೆಯಲು ಆರಂಭಿಸಿದಾಗ ಆಮೆಗಳು ‘ನಡೆದಾಡುವ ಪರ್ವತ’ ಎನ್ನುತ್ತವೆ! ಹೀಗೆ ಎಲ್ಲರೂ ತನ್ನ ಡುಬ್ಬವನ್ನು ಪರ್ವತ ಎನ್ನುವುದು ಕೇಳಿ ಕೇಳಿ ಒಂಟೆ ನಿಜವಾದ ಪರ್ವತವನ್ನು ಹುಡುಕಲು ಹೊರಡುತ್ತದೆ. ಒಂಟೆ ಪರ್ವತವನ್ನು ನೋಡಿ ಏನು ಹೇಳಬಹುದು?

    ಮಕ್ಕಳಿಗೆ ಕಥೆಯ ಮೂಲಕ ಒಂಟೆಯ ಗುಣಲಕ್ಷಣಗಳು ಹಾಗೂ ಪರಿಸರದಲ್ಲಿ ಕಾಣಸಿಗುವ ನದಿ ಬೆಟ್ಟ ಗುಡ್ಡಗಳ ಜೊತೆಗೆ ಹೊಸ ಪದಗಳನ್ನ ಪರಿಚಯಿಸಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.

    1. ಮರಳುಗಾಡು ಮತ್ತು ಅದರ ಗುಣಲಕ್ಷಣ ಹಾಗೂ ಅಲ್ಲಿ ಕಂಡುಬರುವ ಪ್ರಾಣಿಗಳ ಕುರಿತು ಚರ್ಚಿಸುವುದು.
    2. ಮರಳುಗಾಡಿನಲ್ಲಿ ಕಾಣಸಿಗುವ ಒಂಟೆಗಳು ಹಾಗೂ ಅವುಗಳು ನೀರನ್ನು ಶೇಖರಿಸುವ ಡುಬ್ಬಗಳ ಅವಶ್ಯಕತೆ ಕುರಿತು ಮಾತನಾಡುವುದು.
    3. ಬಯಲು ಸೀಮೆ ಪರ್ವತ, ಹಿಮಾಲಯ ಪರ್ವತ, ನೀರಿನಲ್ಲಿ ಕಾಣಸಿಗುವ ಪರ್ವತಗಳು ಹಾಗೂ ಅವುಗಳ ಗುಣಲಕ್ಷಣಗಳ ಕುರಿತು ಗುಂಪಿನಲ್ಲಿ ಚರ್ಚಿಸುವುದು.
    4. ಪರ್ವತದಂತಹ ಡುಬ್ಬಗಳನ್ನು ಹೊತ್ತ ಒಂಟೆಯ ಚಿತ್ರವನ್ನು ಬಿಡಿಸುವಂತೆ ಮಕ್ಕಳಿಗೆ ಸೂಚಿಸುವುದು.
       

    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಪರಿಸರ ಮತ್ತು ವಾತಾವರಣ,ಪ್ರಾಣಿ ಮತ್ತು ಪಕ್ಷಿಗಳು,ಹಾಸ್ಯ
    ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    5 min
  • ನನ್ನಯ ಕುದುರೆ

    ಲೇಖಕರು : ಸ್ಟೋರಿವೀವರ್ರಿಗಾಗಿ ಡಾ ಸಿದ್ದಯ್ಯ ಪುರಾಣಿಕ್
    ನಿರೂಪಕರು : ಕೃಷ್ಣಮೂರ್ತಿ
    ಸಂಪಾದಕರು : ಮನಿಷ್

    ಇದು ಬರಿ ಕೋಲು ಅಂತ ಹೇಳಿದ್ದು ಯಾರು? ಇದು ಕುದುರೆಯೇ. ಬೇಕೆಂದ ಕಡೆ ಅದು ಪ್ರಯಾಣಿ ಸಬಲ್ಲುದು. ಕಲ್ಪನೆಯಂತೆ ಅದು ಎಷ್ಟೊಂದು ಜಾಗಗಳಿಗೆ ಕರೆದುಕೊಂಡೂ ಹೋಗಬಹುದು. ಡಾ.ಸಿದ್ಧಯ್ಯ ಪುರಾಣಿಕ ಅವರ ನನ್ನ ಕುದುರೆ ಕವನ ಮಕ್ಕಳ ಜನಪ್ರಿಯ ಸಾಹಿತ್ಯ ಗುಚ್ಛದ ಭಾಗವಾಗಿದೆ.

    ಈ ಕಥೆಯ ಮೂಲಕ ಮಕ್ಕಳಿಗೆ ಪ್ರಾಸಪದ ಎಂದರೇನು ಎಂಬ ವ್ಯಾಕರಣಾಂಶ ಪರಿಚಯಿಸಿ ಪಠ್ಯದಲ್ಲಿ ಬರುವಂತಹ ಪ್ರಾಸಪದಗಳನ್ನು ಗುರುತಿಸುವ ಸಾಮರ್ಥ್ಯ ವೃದ್ಧಿಸಬಹುದು. ಕಥೆಗೆ ಸಂಬಂದಿಸಿದಂತೆ ಮಾಡಬಹುದಾದ ಕೆಲವು ತರಗತಿಯ ಚಟುವಟಿಕೆಗಳು :

    1. ಮಕ್ಕಳು ಈ ಮೊದಲು ಕೇಳಿರುವ ಪ್ರಾಸ ಕವಿತೆಗಳು ಯಾವುವು ಹಾಗೂ ಅವುಗಳಲ್ಲಿ ಮಕ್ಕಳಿಗೆ ಇಷ್ಟವಾದ ಕವಿತೆ ಯಾವುದೆಂದು ಚರ್ಚಿಸುವುದು.
    2. ಮಕ್ಕಳೊಂದಿಗೆ ಗುಂಪು ಗಾಯನ ಮಾಡಬಹುದು.
    3. ಪಠ್ಯದಲ್ಲಿ ಬರುವ ಪ್ರಾಸಪದಗಳನ್ನು ಗುರುತಿಸುವಂತೆ ತಿಳಿಸುವುದು.
    4. ಮಕ್ಕಳು ಯಾವುದಾದರೂ ವಸ್ತುವನ್ನು ಕುರಿತಂತೆ ಕಾಲ್ಪನಿಕ ಕವಿತೆ/ ಕಥೆ ರಚಿಸಿ ಹೇಳಲು ತಿಳಿಸಬಹುದು
    5. ಮಕ್ಕಳಿಗೆ ತಮ್ಮ ಕುಟುಂಬದ ಮೂಲಕ ಗಮನಕ್ಕೆ ಬಂದಿರುವ ಯಾವುದಾದರೂ ಶೈಲಿಯ ಹಾಡುಗಳ ಅನುಭವವನ್ನು ಹಂಚಿಕೊಳ್ಳಲು ತಿಳಿಸುವುದು.

    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಕಲೆ ಮತ್ತು ಸಂಸ್ಕ್ರುತಿ,ಕವನ ಮತ್ತು ಪದ್ಯ
    ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    4 min
  • ನಮ್ಮ ಅದ್ಭುತ ಜಗತ್ತು

    ಲೇಖಕರು : ಸ್ಟೋರಿವೀವರ್ರಿಗಾಗಿ ಹರ್ಮಿಂಧರ್ ಒಹ್ರಿ
    ನಿರೂಪಕರು : ವಸಂತ್ ಕುಮಾರ್
    ಸಂಪಾದಕರು : ಚಂದ್ರಶೇಖರ್

    ಕಥೆಯ ಮೂಲಕ ಮಕ್ಕಳಿಗೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬುದನ್ನ ತಿಳಿಸಿಕೊಡಬಹುದಲ್ಲದೇ ವಿವಿಧ ಪ್ರಾಣಿಗಳು ಮತ್ತು ಅದರ ಗುಣಲಕ್ಷಣ, ಮನುಷ್ಯನ ದೈಹಿಕ ವೈವಿಧ್ಯತೆ ಕುರಿತು ಮಕ್ಕಳಿಗೆ ತಿಳಿಸಿಕೊಡಬಹುದು.

    ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.

    1. ಮಕ್ಕಳನ್ನು ಮೂರು ತಂಡಗಳಾಗಿ ವಿಭಾಗಿಸಿ ಮೂರು ತಂಡಕ್ಕೆ ಒಂದರಂತೆ ಪ್ರಾಣಿಗಳು, ಪಕ್ಷಿಗಳು ಮತ್ತು ಜಲಚರಗಳು ಹಾಗೂ ಅವುಗಳ ಗುಣಲಕ್ಷಣಗಳ ಕುರಿತು ಚರ್ಚಿಸುವಂತೆ ತಿಳಿಸುವುದು.
    2. ಮಕ್ಕಳು ಗಮನಿಸಿರುವಂತೆ ಮಾನವನ ದೈಹಿಕ ವೈವಿಧ್ಯತೆಗಳ ಬಗ್ಗೆ ಚರ್ಚಿಸುವುದು.
    3. ಭೂ ವಾಸಿ, ಜಲವಾಸಿ ಮತ್ತು ಉಭಯವಾಸಿಗಳ ಕುರಿತು ಗುಂಪಿನಲ್ಲಿ ಚರ್ಚಿಸುವಂತೆ ತಿಳಿಸುವುದು.
    4. ಮಕ್ಕಳನ್ನು ಎರಡು ತಂಡಗಳಾಗಿ ವಿಭಾಗಿಸಿ "ಪರಿಸರ ರಕ್ಷಣೆಗೆ ಮನುಷ್ಯನ ಹೊಣೆ" ಈ ಮಾತಿನ ಪರ ಮತ್ತು ವಿರೋಧ ಚರ್ಚೆ ಮಾಡುವಂತೆ ತಿಳಿಸುವುದು.

    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಪರಿಸರ ಮತ್ತು ವಾತಾವರಣ,ಪ್ರಾಣಿ ಮತ್ತು ಪಕ್ಷಿಗಳು,ವಿಜ್ಞಾನ
    ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    10 min

About ಕಥೆ ಖಜಾನೆ - ಕನ್ನಡ

From the publisher's feed

2023-24ರ ಅವಧಿಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ), ಐಟಿ ಫಾರ್ ಚೇಂಜ್ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ನಡೆಸಿದ 'ಭಾಷಾ ಶಿಕ್ಷಣದಲ್ಲಿ ಡಿಜಿಟಲ್ ಕಥೆ-ಆಧಾರಿತ ಬೋಧನ ವಿಧಾನದ ಅಳವಡಿಕೆ' ಕರ್ಯಕ್ರಮದ ಅಡಿಯಲ್ಲಿ ನಡೆಸಿದ ಕಾರ್ಯಾಗಾರಗಳ ಭಾಗವಾಗಿ ಈ ಆಡಿಯೋ ಕಥೆಗಳನ್ನು ಕರ್ನಾಟಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ತಯಾರಿಸಿದ್ದಾರೆ. ಕಥೆ ಹೇಳುವಿಕೆಯ ಶಕ್ತಿಯ ಜೊತೆಗೆ ಡಿಜಿಟಲ್ ಮಾಧ್ಯಮವು ನೀಡುವ ಹೊಸ ಸಾಧ್ಯತೆಗಳ ಮೂಲಕ ಮಕ್ಕಳ ಭಾಷಾ ಕಲಿಕೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ.