
Sign up to save your podcasts
Or


ಲೇಖಕರು : ಸ್ಟೋರಿವೀವರ್ರಿಗಾಗಿ ಸಂಜೀವ್ ಜೈಸ್ವಾಲ್
ನಿರೂಪಕರು : ಬಸವರಾಜು ಟಿ.ಡಿ
ಸಂಪಾದಕರು : ಮನಿಷ್
ಕಾಡಿಗೆ ರಾಜನೇ ಆದರೂ ಸಿಂಹಕ್ಕೆ ಹಲ್ಲು ಉಜ್ಜುವುದು ತಪ್ಪಲಿಲ್ಲ. ಕಥೆ ಓದುವ ಮೂಲಕ ಸಿಂಹಕ್ಕೆ ಹಲ್ಲು ಉಜ್ಜುವುದನ್ನ ಹೇಳಿ ಕೊಟ್ಟವರು ಯಾರು ಹಾಗು ಏಕೆ ಎಂಬುದನ್ನ ತಿಳಿದುಕೊಳ್ಳಿ..
ಈ ಕಥೆಯ ಮೂಲಕ ಮಕ್ಕಳಲ್ಲಿ ಉತ್ತಮ ದೈನಂದಿನ ಅಭ್ಯಾಸಗಳನ್ನು ಮೂಡಿಸಬಹುದಲ್ಲದೇ ಮಾಂಸಾಹಾರಿ ಪ್ರಾಣಿಗಳು ಹಾಗೂ ಶಾಖಾಹಾರಿ ಪ್ರಾಣಿಗಳ ಬಗ್ಗೆ ತಿಳಿಸಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :
ಲೇಖಕರು : ಸ್ಟೋರಿವೀವರ್ರಿಗಾಗಿ ಶ್ರುತಿ ರಾವ್
ನಿರೂಪಕರು : ಬಸವರಾಜಪ್ಪ ಎನ್
ಸಂಪಾದಕರು : ಬಸವರಾಜಪ್ಪ ಎನ್
ಈ ಕೆಲಸ ಮಾಡಿದ್ದು ಯಾರು? ಅವನಿ ಮತ್ತು ಅವಳ ತಾಯಿಗೆ ಗೊತ್ತಿಲ್ಲ. ಬಟಾಣಿ ಗಿಡದ ಕಥೆಯನ್ನು ಓದಿದಾಗ ಈ ಕೆಲಸ ಮಾಡಿದ್ದು ಯಾರೆಂದು ನಿಮಗೆ ತಿಳಿಯುತ್ತದೆ.
ಈ ಕಥೆಯ ಮೂಲಕ ಮಕ್ಕಳಿಗೆ ಕಾಳು ಗಿಡವಾಗುವ ಪ್ರಕ್ರಿಯೆ, ಗಿಡದ ಬೆಳವಣಿಗೆ ಹಾಗೂ ಅದರ ಬೆಳವಣಿಗೆಗೆ ಅವಶ್ಯಕವಿರುವ ಅಂಶಗಳನ್ನು ಮಕ್ಕಳಿಗೆ ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
ಲೇಖಕರು : ಸ್ಟೋರಿವೀವರ್ರಿಗಾಗಿ ವೆಂಕಟರಮಣ ಗೌಡ
ನಿರೂಪಕರು : ಶಿವ ಕುಮಾರ್
ಸಂಪಾದಕರು : ಸೌಮ್ಯ ಕೆ.ಆರ್
ಮೊಲ ಮತ್ತು ಆಮೆ ನಡುವೆ ಓಟದ ಪಂದ್ಯದ ಹಳೆಯ ಕಥೆ ನೆನಪಿದೆಯಾ? ಇದು ಅಂತಹುದೇ ಪಂದ್ಯದ ಹೊಸ ಕಥೆ. ಪೈಪೋಟಿಯಲ್ಲ, ಸಹಯೋಗದ ಸ್ಪರ್ಧೆ ಏನಾಯಿತೆಂದು ಮೊಲ ಮತ್ತು ಆಮೆ ಕತೆ ಓದಿ ತಿಳಿಯಿರಿ.
ಕಥೆಯ ಮೂಲಕ ಹೊಸ ಪದಗಳ ಪರಿಚಯ, ಸರಳ ವಾಕ್ಯಗಳ ರಚನೆ ಮತ್ತು ಪರಸ್ಪರ ಸಹಾಯ ಮಾಡಬೇಕೆಂಬ ನೀತಿಯನ್ನ ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
ಲೇಖಕರು : ಸ್ಟೋರಿವೀವರ್ರಿಗಾಗಿ ಚೆರ್ಲಿಲ್ ರಾವ್
ನಿರೂಪಕರು : ದಿನೇಶ್ ಎಲ್
ಸಂಪಾದಕರು : ದಿನೇಶ್ ಎಲ್
ಶಾಂತಿ ತುಂಬಾ ಚೂಟಿ. ಅವಳು ಸುಮ್ಮನೆ ಕುಳಿತದ್ದಾಗಲಿ, ಮಾತಾಡದೇ ಇದ್ದುದನ್ನಾಗಲೀ ಯಾರೂ ನೋಡಿರಲಿಲ್ಲ. ಆದರೆ ಒಂದು ದಿನ ಅವಳು ಇದ್ದಕ್ಕಿದ್ದಂತೆ ತನ್ನ ಸ್ನೇಹಿತರೊಂದಿಗೆ ಮಾತು ನಿಲ್ಲಿಸಿದ್ದಳು. ಶಾಂತಿಗೆ ಏನಾಗಿತ್ತು?
ಮಕ್ಕಳಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡುವ ಮೂಲಕ ಮಾತನಾಡುವ ಕೌಶಲ್ಯವನ್ನು ಮೂಡಿಸುವುದು, ಕಥೆಗೆ ಸಂಭಂದಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
ಲೇಖಕರು : ಸ್ಟೋರಿವೀವರ್ರಿಗಾಗಿ ಸೇಜಲ್ ಮೆಹ್ತ
ನಿರೂಪಕರು : ಪ್ರದೀಪ್
ಸಂಪಾದಕರು :
ಕಾಡು ಇಷ್ಟು ಶುಚಿಯಾಗಿರುವುದು ಹೇಗೆ? ಕಾಡಲ್ಲಿ ಕಸವೇ ಕಾಣುವುದಿಲ್ಲ ಏಕೆ?
ಈ ಕಥೆಯ ಮೂಲಕ ಮಕ್ಕಳಿಗೆ ವಿವಿಧ ಪ್ರಾಣಿಗಳ ಪರಿಚಯ, ಅವುಗಳ ಗುಣಲಕ್ಷಣ ಮತ್ತು ಆಹಾರ ಚಕ್ರದ ಕುರಿತು ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು.
ಲೇಖಕರು : ಸ್ಟೋರಿವೀವರ್ರಿಗಾಗಿ ಕುಜಾಲಿ ಮಣಿಕಾವೆಲ್
ನಿರೂಪಕರು : ಪ್ರಸಾದ್ ಕೆ.ವಿ
ಸಂಪಾದಕರು : ವೀರಭದ್ರಯ್ಯ ಎಂಬಿ
ಒಂದು ಜೀರುಂಡೆ ಇತ್ತು. ಅದಕ್ಕೆ ಎಣಿಸುವುದು ಎಂದರೆ ಬಹಳ ಇಷ್ಟ. ಅದಕ್ಕೆ ಸಮಸಂಖ್ಯೆ ಬೆಸಸಂಖ್ಯೆಗಳನ್ನು ಗುರುತಿಸುವುದು ಎಂದರೆ ಬಹಳ ಖುಷಿ. ಒಂದು ದಿನ ಜೀರುಂಡೆ ಬೆನ್ನ ಮೇಲೆ ಅಂಗಾತ ಉರುಳಿಕೊಂಡು ಬಿಟ್ಟಿತು. ಎಷ್ಟು ಜನ ಗೆಳೆಯರು ಜೀರುಂಡೆಗೆ ಸಹಾಯ ಮಾಡಲು ಬಂದರು? ಸಮಸಂಖ್ಯೆಯ ಗೆಳೆಯರಾ ಅಥವಾ ಬೆಸಸಂಖ್ಯೆಯ ಗೆಳೆಯರಾ?
ಮಕ್ಕಳಿಗೆ ಸರಿ ಸಂಖ್ಯೆಗಳು ಮತ್ತು ಬೆಸ ಸಂಖ್ಯೆಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿಕೊಡುವುದರ ಜೊತೆಗೆ ಸರಳ ಅಂಕಿಗಳ ಸಂಕಲನವನ್ನು ಹೇಳಿಕೊಡಬಹುದು. ಕಥೆಗೆ ಸಂಭಂದಿಸಿದಂತೆ ಕೆಲವು ತರಗತಿ ಚಟಿವಟಿಕೆಗಳು.
ಲೇಖಕರು : ಸ್ಟೋರಿವೀವರ್ರಿಗಾಗಿ ಕರಣ್ಜೀತ್ ಕೌರ್
ನಿರೂಪಕರು : ದಿನೇಶ್ ಮತ್ತು ರೇಷ್ಮ
ಸಂಪಾದಕರು : ದಿನೇಶ್ ಎಲ್
ಕಸದ ರಾಶಿಯ ಮೋಡ ಚೀಕುವಿನ ತಲೆಯ ಮೇಲೆ ತೇಲುತ್ತಿದೆ. ಇದು ಅವಳನ್ನು ಜಗತ್ತಿನ ಅತಿ ದುಃಖಿತ ಹುಡುಗಿಯನ್ನಾಗಿ ಮಾಡಿದೆ. ಆ ಕಸದ ರಾಶಿ ಚೀಕುವಿನ ತಲೆ ಮೇಲೆ ಏಕೆ ತೇಲುತ್ತಿದೆ ಅದರಿಂದ ಚೀಕು ಹೇಗೆ ಮುಕ್ತಗೊಂಡಳು ಎಂಬುದನ್ನ ತಿಳಿಯಿರಿ.
ಮಕ್ಕಳಿಗೆ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ತಮ್ಮ ಸುತ್ತಲೂ ಸದಾ ಸ್ವಚ್ಛತೆಯನ್ನು ಕಾಪಾಡಿಕೊಂಡು ಹೋಗುವಂತೆ ಪ್ರೇರೇಪಿಸಬಹುದು ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :
ಲೇಖಕರು : ಸ್ಟೋರಿವೀವರ್ರಿಗಾಗಿ ಕಿರಣ್ ಕಸ್ತೂರಿಯಾ
ನಿರೂಪಕರು : ಮಂಗಳ ಗೌರಿ
ಸಂಪಾದಕರು : ದಿನೇಶ್ ಎಲ್
ಮನುಗೆ ಅಪ್ಪ, ಅಮ್ಮ ಮಳೆಗಾಲದ ಹೊಸ ಮೇಲಂಗಿ ಕೊಡಿಸಿದ್ದಾರೆ. ಅದನ್ನು ಹಾಕಿಕೊಳಲು ಮನುಗೆ ಆತುರವೊ ಆತುರ. ಆದರೆ ಮಳೆ ಬರದೆ ಸತಾಯಿಸುತ್ತಿದೆ. ಅವನೀಗ ಮಳೆಗಾಗಿ ಕಾದು ಕುಳಿತಿದ್ದಾನೆ.
ಮಕ್ಕಳಿಗೆ ವಿವಿಧ ಕಾಲಮಾನಗಳು ಹಾಗೂ ಅದರ ಲಕ್ಷಣಗಳ ಕುರಿತು ತಿಳಿಸಬಹುದಲ್ಲದೇ ಕಾಲಮಾನಕ್ಕೆ ತಕ್ಕಂತೆ ಅನುಸರಿಸಬೇಕಾದ ಆರೋಗ್ಯ ಕ್ರಮಗಳ ಬಗ್ಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
ಲೇಖಕರು : ಸ್ಟೋರಿವೀವರ್ರಿಗಾಗಿ ವೆಂಕಟರಮಣ ಗೌಡ
ನಿರೂಪಕರು : ಬಸವರಾಜು ಟಿ.ಡಿ
ಸಂಪಾದಕರು : ಸಿದ್ದರಾಮೇಶ್ವರ
ಮುಳ್ಳುಹಿಂಡಿನಲ್ಲಿ ಬಿದ್ದ ಹಣ್ಣು ಎತ್ತಿಕೊಳ್ಳಲು ಏನೇನೋ ಸಾಹಸ ಮಾಡಿದ ಗುಬ್ಬಿಗೆ ಕೊನೆಯಲ್ಲಿ ಏನಾಯಿತು? “ಗುಬ್ಬಿ ಮತ್ತು ಹಣ್ಣು” ಪ್ರಕೃತಿ ನ್ಯಾಯದ ನಿಯಮ ಬಿಚ್ಚಿಡುವ ಕಥೆ.
ಈ ಕಥೆಯ ಮೂಲಕ ಮಕ್ಕಳಿಗೆ ವಾಕ್ಯಗಳನ್ನು ಸಂಯೋಜಿಸಿ ಕಥೆಯನ್ನು ರಚಿಸುವ ಕೌಶಲ್ಯವನ್ನು ತಿಳಿಸಿಕೊಡಬಹುದು. ಇಟ್ಟ ಗುರಿಯನ್ನು ಮೆಟ್ಟಿ ನಿಲ್ಲುವವರೆಗೂ ನಿಲ್ಲಬಾರದೆಂಬ ನೀತಿಯನ್ನ ಹಾಗೂ ನಮ್ಮ ಕಾರ್ಯಕ್ಕಾಗಿ ಇನ್ನೊಬ್ಬರನ್ನ ಬಲವಂತವಾಗಿ ಬಳಸಿಕೊಳ್ಳಬಾರದೆಂಬ ನೀತಿಯನ್ನ ಮಕ್ಕಳಿಗೆ ಮನದಟ್ಟು ಮಾಡಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :
ಲೇಖಕರು : ಸ್ಟೋರಿವೀವರ್ರಿಗಾಗಿ ಮಾಲಾ ಕುಮಾರ್, ಮನಿಶಾ ಚೌಧರಿ
ನಿರೂಪಕರು : ಪ್ರದೀಪ್
ಸಂಪಾದಕರು : ಬಾಲಾಜಿ
ಇಂಪಾದ ಕಜರಿ ಆಲಿಸುವುದರಿಂದ ಹಿಡಿದು, ಪುಟಾಣಿ ಜಲಪಾತಗಳನ್ನು ವೀಕ್ಷಿಸುವವರೆಗೆ ಹಾಗೂ ಮಣ್ಣಿನ ಸುವಾಸನೆಯಿಂದ ಹಿಡಿದು, ಅಮ್ಮನ ಪಕೋಡದ ಪರಿಮಳದವರೆಗೆ, ಮಳೆಗಾಲದ ಪ್ರತಿಯೊಂದು ಸಣ್ಣ ಪುಟ್ಟ ಸಂಗತಿಗಳನ್ನು ಕೂಡ ಮೀನು ಪ್ರೀತಿಸುತ್ತಾಳೆ.
ಈ ಕಥೆಯ ಮೂಲಕ ಮಕ್ಕಳಿಗೆ ಮಳೆಗಾಲದ ಗುಣಲಕ್ಷಣಗಳು, ಮಳೆನೀರು ಶೇಖರಣೆ ಕುರಿತು ತಿಳಿಸಿಕೊಡಬಹುದಲ್ಲದೇ ಮಕ್ಕಳಿಗೆ ಅನುಭವ ಹಂಚಿಕೊಳ್ಳಲು ತಿಳಿಸುವ ಮೂಲಕ ಮಾತನಾಡುವ ಕೌಶಲ್ಯವನ್ನು ಮೂಡಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
From the publisher's feed