ಕಥೆ ಖಜಾನೆ - ಕನ್ನಡ

ಕಥೆ ಖಜಾನೆ - ಕನ್ನಡ

By Kathe Khajane Team, IT for Change
Download on the App Store

ಕಥೆ ಖಜಾನೆ - ಕನ್ನಡ episodes

  • ಸಿಹಿ ತಿಂಡಿಗಳ ಜಾತ್ರೆ

    Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
    Narrator: ಶಿವಕುಮಾರಯ್ಯ ಎಂ
    Editor: ಬಾಲಾಜಿ ಎಚ್ ಕೆ

    ಊರಿಗೆ ಊರೇ ಹೊಸತನದಿಂದ ಕಂಗೊಳಿಸುತ್ತಿದೆ. ಜಾತ್ರೆಗೆ ಬೇರೆ ಬೇರೆ ಸಿಹಿ ತಿಂಡಿಗಳು ಬಂದವು. ಸಿಹಿ ತಿಂಡಿಗಳ ಸಭೆಯು ನಡೆಯಿತು. ಸಿಹಿತಿಂಡಿಗಳ ಜಾತ್ರೆ ಹೇಗಿತ್ತು ತಿಳಿಯೋಣ ಬನ್ನಿ.    

    ೧. ಮಕ್ಕಳು ವಿವಿಧ ಸಿಹಿತಿಂಡಿಗಳ ಪಾತ್ರ ವಹಿಸಿ, ಪ್ರತಿಯೊಂದು ತಿಂಡಿ ತನ್ನ ವೈಶಿಷ್ಟ್ಯತೆ ಹೇಳಲಿ.( ಉದಾ: ಮೈಸೂರ್ ಪಾಕ್- "ನಾನು ಮೈಸೂರಿನಿಂದ ಬಂದ ಮೈಸೂರು ಪಾಕ್".  

    ೨. ಮಕ್ಕಳಿಗೆ ತಮ್ಮ ಮನೆ ಅಥವಾ ಊರಿನಲ್ಲಿ ಪ್ರಸಿದ್ಧವಾದ ಸಿಹಿತಿಂಡಿಗಳ ಪಟ್ಟಿ ಬರೆಯಲು ಹೇಳಿ.


    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ಕಲೆ ಮತ್ತು ಸಂಸ್ಕ್ರುತಿ,ಕುಟುಂಬ
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    7 min
  • ಸೀನಸೆಟ್ಟರು ನಮ್ಮ ಟೀಚರ್

    Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
    Narrator: ನೀಲರಾಜ್ ಎನ್
    Editor: ಶಿವರಾಜ ವಿ ಎ

    ಮಳೆಗಾಲ ತೀವ್ರಗೊಳ್ಳುತ್ತಿದ್ದ ದಿನ ಮಾಂಡವಿ ಹೊಸ ಟೀಚರ್ ನ್ನು ಮಕ್ಕಳಿಗೆ ಪರಿಚಯಿಸಿದರು. ತುಂಗ ಅವರನ್ನ ಸರಿಯಾಗಿ ನೋಡಿದಳು. ಮೊದಲನೆಯದಾಗಿ ವೇಷಭೂಷಣವೆಲ್ಲವೂ ಹಳೆಯದಾಗಿತ್ತು. ಮಕ್ಕಳಿಗೆಲ್ಲಾ ಇವರೆಂಥಾ ಟೀಚರ್ ಎಂಬಂತಿತ್ತು. ತುಂಗಾಗೆ ಆ ಟೀಚರ್ ನ್ನು ಎಲ್ಲೋ ನೋಡಿದಂತಿತ್ತು. ಆಕೆಗೆ ನೆನಪಾಯಿತೇ?  ಹಾಗಿದ್ದರೆ ಆ ಟೀಚರ್ ಯಾರಿರಬಹುದು! ಮತ್ತು ಶಾಲಾ ಶಿಕ್ಷಣದ ಮಹತ್ವವೇನು? ಶೀನ ಶೆಟ್ಟರು ಮಕ್ಕಳಿಗೆ ಯಾವ ವಿಚಾರದ ಬಗ್ಗೆ ಪಾಠ ಹೇಳಿಕೊಟ್ಟರು? ಕಥೆಯನ್ನು ಕೇಳಿರಿ.    

    ೧. ಶಾಲೆಯ ಬಗ್ಗೆ ಪ್ರಬಂಧ ಬರೆಯುವುದು. 

    ೨.  ಶಿಕ್ಷಣದ ಮಹತ್ವದ ಕುರಿತು ಚರ್ಚೆ ನಡೆಸಿ. (ಉದಾ:ಶಾಲೆ ಯಾಕೆ ಮುಖ್ಯ? ಎಂಬ ವಿಷಯದಲ್ಲಿ ಮಕ್ಕಳಿಂದ ಚಿಕ್ಕ ಚಿಕ್ಕ ಅಭಿಪ್ರಾಯಗಳನ್ನು ಕೇಳಿ ತಿಳಿಯಿರಿ) 


    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಜೀವನ ಕೌಶಲ್ಯ,ವಿಜ್ಞಾನ
    ಗುರುತು ಪಟ್ಟಿ: ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    6 min
  • ಸುಂದರ ಕಾಡು

    Writer: ಶಿವರಾಜ್ ಸಿ
    Narrator: ರಾಘವೇಂದ್ರ ಕುಲಕರ್ಣಿ, ಲಕ್ಷ್ಮಿ, ಲಲಿತಾ
    Editor: ಬಸವರಾಜ ಪಾವಲೆ

    ಒಂದು ದಟ್ಟವಾದ ಕಾಡು ಇತ್ತು. ಆ ಕಾಡಿನಲ್ಲಿ, ಪ್ರಾಣಿಪಕ್ಷಿಗಳು, ಗಿಡಮರಗಳು ಇದ್ದವು. ಅಲ್ಲಿ ಘೋರವಾದ ಸಿಂಹವು ಕಾಡಿನ ರಾಜನಾಗಿತ್ತು. ಹಸಿವನ್ನು ನೀಗಿಸಲು ಬೇರೆ ಪ್ರಾಣಿಗಳನ್ನು ಬೇಟೆಯಾಡಿ ಕೊಂದು ತಿನ್ನುತ್ತಿತ್ತು. ಇದನ್ನು ತಪ್ಪಿಸಲು ನರಿಯು ಏನು ಉಪಾಯ ಮಾಡಿರಬಹುದು ಎಂದು ಈ ಕಥೆಯ ಮೂಲಕ ತಿಳಿಯೋಣ ಬನ್ನಿ.

    ನೀತಿ ಕತೆಗಳು

    ೧. ಪ್ರಾಣಿ ಮತ್ತು ಪಕ್ಷಿಗಳ ಶಬ್ದವನ್ನು ಕೇಳಿಸಿ  ಗುರುತಿಸಲು ಹೇಳುವುದು. 

    ೨. ಕಾಡಿನ ಪ್ರಾಣಿಗಳ ಚಿತ್ರವನ್ನು ಬಿಡಿಸುವುದು.


    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ಪರಿಸರ ಮತ್ತು ವಾತಾವರಣ
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    3 min
  • ಸುಳ್ಳು ಹೇಳಬಾರದು

    Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
    Narrator: ಭಾರತಿ ಟಿ
    Editor: ಹೇಮಂತ್ ಕುಮಾರ್ ಬಿ ಜೆ

    ಮಹಾತ್ಮಾಗಾಂಧೀಜಿಯವರ ಜೀವನದಲ್ಲಿ ನಡೆದಿರುವ ಒಂದು ಘಟನೆ. ಮಹಾತ್ಮಾಗಾಂಧೀಜಿಯವರು ಮಗುವಾಗಿದ್ದ ಸಮಯದಲ್ಲಿ ಅವರನ್ನು ಮೋನು ಪಾಪು ಎಂದು ಕರೆಯುತ್ತಿದ್ದರು. ಅವರ ಅಮ್ಮನ ಹೆಸರು ಪುತಲೀಬಾಯಿ. ಪ್ರತೀ ವರ್ಷವೂ ಮಳೆಗಾಲದ ನಂತರ ಬರುವ ಚಾತುರ್ಮಾಸದಲ್ಲಿ ಅವಳು ಉಪವಾಸ ವ್ರತವನ್ನು ಮಾಡುತ್ತಿದ್ದಳು. ಬೆಳಗಿನ ಸೂರ್ಯೋದಯದ ಸಮಯದಲ್ಲಿ ಸೂರ್ಯನನ್ನು ನೋಡದೆ ಊಟ ಮಾಡುತ್ತಿರಲಿಲ್ಲ. ಅಂಥಹ ವ್ರತದ ಸಮಯದಲ್ಲಿ ಅಮ್ಮ ಬೇಗ ಊಟ ಮಾಡಬೇಕೆಂದು ಮೋನು ಪಾಪು ಆಸೆ ಪಡುತ್ತಿದ್ದನು. ಅದಕ್ಕಾಗಿ ಆತ ಏನು ಮಾಡುವನು? ತನ್ನ ತಾಯಿಗೆ ಯಾವ ಸುಳ್ಳು ಹೇಳಿರಬಹುದು! ಸುಳ್ಳು ಹೇಳಬಾರದು ಎಂಬ ಮಾತನ್ನು ಈ ಕಥೆಯ ಮೂಲಕ ಚೆನ್ನಾಗಿ ಅರ್ಥೈಸಿಕೊಳ್ಳಬಹುದು.    

    ೧. ಹೊಸ ಪದಗಳನ್ನು ಪರಿಚಯಿಸಿ, ಅದರ ಅರ್ಥವನ್ನು ತಿಳಿಯಿರಿ. 

    ೨. ಕಥೆಯ ಆಧಾರದ ಮೇಲೆ ಸರಳ ಪ್ರಶ್ನೆಗಳನ್ನು ಕೇಳಿರಿ.


    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಇತಿಹಾಸ,ಜೀವನ ಕೌಶಲ್ಯ
    ಗುರುತು ಪಟ್ಟಿ: ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    9 min
  • ಹಣತೆ

    Writer: ಚಂದ್ರಕಲಾ ವೀರಭದ್ರಪ್ಪ
    Narrator: ಚಂದ್ರಕಲಾ ವೀರಭದ್ರಪ್ಪ, ರಾಘವೇಂದ್ರ ಕುಲಕರ್ಣಿ, ಪರ್ವಿನ್ ಸುಲ್ತಾನ, ಮಾಯಾದೇವಿ ತುರಂಗ
    Editor: ಅಕ್ಷಯ್ ಖೇಡಗಿಕರ್

    ಪ್ರಕೃತಿಯು ಸಭೆಯನ್ನು ಕರೆಯಿತು. ಬೆಳಕಿನ ಪ್ರತಿನಿಧಿ ಬಿರುದನ್ನು ನೀಡಲು ನಿರ್ಧರಿಸಿ, ಸಭೆಯಲ್ಲಿ ಭಾಗವಹಿಸಲು ಸೂಚಿಸಿತು. ಈ ಸಭೆಯಲ್ಲಿ ಯಾರೆಲ್ಲಾ ಭಾಗವಹಿಸಿದ್ದರು? ಮತ್ತು ಬೆಳಕಿನ ಪ್ರತಿನಿಧಿ ಬಿರುದನ್ನು ಪಡೆದವರಾರು? ಎಂದು ತಿಳಿಯಲು ಈ ಕಥೆಯನ್ನು ಕೇಳಿ.

    ೧. ಸೂರ್ಯ, ಚಂದ್ರ,ನಕ್ಷತ್ರಗಳ ಚಿತ್ರವನ್ನು ಬಿಡಿಸಲು ಹೇಳುವುದು.  

    ೨. ಮಕ್ಕಳು ಕೈಗಳಿಂದ ವಿವಿಧ ಆಕೃತಿಗಳನ್ನು ಮಾಡಲಿ; ಬೆಳಕಿನ ಮುಂದೆ ವಸ್ತು ಇಟ್ಟಾಗ ನೆರಳು ಹೇಗೆ ಬದಲಾಗುತ್ತದೆ ಎಂಬುವುದನ್ನು ನೋಡಲಿ.


    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ದಿನಚರಿ ಮತ್ತು ದೈನಂದಿನ ಅಭ್ಯಾಸಗಳು
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    3 min
  • ಹಸ್ತ ರೇಖೆ ಬದಲಿಸಿದ ಬಾಲಕ

    Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
    Narrator: ಶಾಂತಕುಮಾರ ಎಚ್ ಎನ್
    Editor: ಬಾಲಾಜಿ ಎಚ್ ಕೆ

    ಹಿಂದಿನ ಕಾಲದಲ್ಲಿ ಕಾಡಿನ ಗುರುಕುಲದಲ್ಲಿ ವಿದ್ಯಾಭ್ಯಾಸ ನಡೆಯುತ್ತಿತ್ತು. ತಕ್ಷಶಿಲೆಯು ಪ್ರಾಚೀನ ಭಾರತದ ಅತೀ ದೊಡ್ಡ ಗುರುಕುಲವಾಗಿತ್ತು. ಒಬ್ಬ ದಕ್ಷಿ ಎನ್ನುವ ತಾಯಿ ತನ್ನ ಮಗನನ್ನ ಗುರುಕುಲಕ್ಕೆ ಸೇರಿಸುವಳು. ಆದರೆ ಆತನಿಗೆ ಹಸ್ತ ರೇಖೆ ಇಲ್ಲದಿರುವುದನ್ನು ಗಮನಿಸಿ ಗುರುಗಳು ವಿದ್ಯೆ ಕಲಿಸಲು ಹಿಂಜರಿಯುವರು. ವಿದ್ಯಾಭ್ಯಾಸ ಮಾಡಬೇಕೆಂಬ ಆಸಕ್ತಿ ಆ ಬಾಲಕನಲ್ಲಿತ್ತು. ಅದಕ್ಕಾಗಿ ಆತ ಏನು ಮಾಡಿದ? ಗುರುಗಳ ಮನಸ್ಸನ್ನು ಗೆದ್ದ ಆ ಬಾಲಕ ಯಾರಿರಬಹುದು! ಈ ಕಥೆಯನ್ನು ಆಲಿಸಿರಿ.    

    ೧. ಬಾಲಕನು ಹಸ್ತರೇಖೆಯನ್ನು ಬರೆಯುವ ದೃಶ್ಯವನ್ನು ಅಭಿನಯಿಸಿ. 


    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ಇತಿಹಾಸ,ಬುದ್ಧಿವಂತಿಕೆ ಮತ್ತು ಚತುರತೆ
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪,ತರಗತಿ ೫
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    6 min
  • ಹ್ಯಾಗೋಸನ ಆಸ್ತಿ (ಕರಿಯಜ್ಜನ ಆಸ್ತಿ)

    Writer: ಆಂಗೆಸಮ್ ಅಬಾದಿ
    Narrator: ಅಂಬರೀಶ್. ಎ
    Editor: ಬ್ರಿಜೇಶ್ ಕುಮಾರ್ ಜಿ ವಿ

    ತನ್ನ ಮಕ್ಕಳ ಪ್ರತಿಭೆಯನ್ನು ಸರಿಯಾಗಿ ಗುರುತಿಸಿದ್ದ ತಂದೆಯೊಬ್ಬ ಅವರವರ ಯಶಸ್ಸಿಗೆ ಅನುಕೂಲವಾಗುವಂತೆ ತನ್ನ ಆಸ್ತಿಯನ್ನು ಹಂಚಿಕೊಟ್ಟ ಕಥೆ.    

    ೧. ತಂದೆಯ ಬಗ್ಗೆ ಒಂದು ಪ್ರಬಂಧ ಬರೆಯಿರಿ. 

    ೨. ತಂದೆ ಮತ್ತು ಮಕ್ಕಳ ಬಾಂಧವ್ಯವನ್ನು ಹಂಚಿಕೊಳ್ಳಿ. 


    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ಜೀವನ ಕೌಶಲ್ಯ
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    5 min
  • ಅಕ್ಕ ತಮ್ಮನ ಅಂಕೆಗಳು

    ಲೇಖಕರು : ಸ್ಟೋರಿವೀವರ್ರಿಗಾಗಿ ರಾಧ ಮಾಂಧವ 
    ನಿರೂಪಕರು : ಮಧು ಹೆಚ್.ಸಿ & ರೇಷ್ಮ ಜಿ.ಎನ್
    ಸಂಪಾದಕರು : ಸಿದ್ದರಾಮೇಶ್ವರ

    ಅಕ್ಕ,ತನ್ನ ತಮ್ಮ ರಾಮುವಿಗೆ ವಿಭಿನ್ನವಾಗಿ ಅಂಕಿಗಳನ್ನು ಕಲಿಸುತ್ತಾಳೆ. ಎಷ್ಟು ಚೆನ್ನಾಗಿ ಕಲಿಸಿತ್ತಾಳೆಂದು ಈ ಕಥೆಯಲ್ಲಿ ನೋಡಿ.

    ಕಥೆಯ ಮೂಲಕ ಮಕ್ಕಳಿಗೆ ನಮ್ಮ ಸುತ್ತ ಮುತ್ತಲು ಕಾಣಸಿಗುವ ಪರಿಸರದೊಂದಿಗೆ ಕಲಿಕಾ ವಿಷಯಗಳನ್ನು ಕಲಿತುಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡಬಹುದಲ್ಲದೇ ಸಾಮಾನ್ಯ ಅಂಕಿಗಳು, ಏಕವಚನ ಮತ್ತು ಬಹುವಚನಗಳ ಜೊತೆಗೆ ಹೊಸ ಪದಗಳನ್ನು ಮಕ್ಕಳಿಗೆ ಪರಿಚಯಿಸಬಹುದು. ಕಥೆಗೆ ಸಂಬಂದಿಸಿದಂತೆ ಮಾಡಬಹುದಾದ ಕೆಲವು ತರಗತಿಯ ಚಟುವಟಿಕೆಗಳು :

    1. ಮಕ್ಕಳಿಗೆ ತಮ್ಮ ಪೋಷಕರೊಂದಿಗೆ ಕಲಿತ ವಿಷಯಗಳನ್ನು ಹಂಚಿಕೊಳ್ಳುವಂತೆ ತಿಳಿಸುವುದು
    2. ಮಾತನಾಡುವಾಗ ಏಕವಚನ ಬಹುವಚನ ಬಳಕೆ ಮಾಡುವುದರ ಕುರಿತು ಚರ್ಚಿಸುವುದು
    3. ಮಕ್ಕಳು ಪರಿಸರದಲ್ಲಿ ಕಂಡಿರುವ ಪ್ರಾಣಿಗಳು ಕುರಿತು ತಿಳಿಸಿಕೊಡುವುದು
    4. ಪ್ರಾಣಿ ಪಕ್ಷಿಗಳು ತಮ್ಮ ಮರಿಗಳಿಗೆ ಹೇಗೆ ತರಬೇತಿ ನೀಡುವ ಕುರಿತು ಮಕ್ಕಳು ಅನುಭವ ಹಂಚಿಕೊಳ್ಳುವಂತೆ ತಿಳಿಸುವುದು
    5. ಪ್ರಾಣಿ ಪಕ್ಷಿಗಳು ತಮ್ಮ ಮರಿಗಳಿಗೆ ತರಬೇತಿ ನೀಡುತ್ತಿರುವ ದೃಶ್ಯಗಳನ್ನು ಮಕ್ಕಳಿಗೆ ಪ್ರದರ್ಶಿಸುವುದು
       

    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಗಣಿತ,ಕುಟುಂಬ,ಪರಿಸರ ಮತ್ತು ವಾತಾವರಣ
    ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    4 min
  • ಅಮ್ಮ ಬರೋದು ಯಾವಾಗ

    ಲೇಖಕರು : ಸ್ಟೋರಿವೀವರ್ರಿಗಾಗಿ ಪ್ರತಿಭಾ ಸ್ವಾಮಿನಾಥನ್
    ನಿರೂಪಕರು : ಪ್ರಶಾಂತ್ ನಾಯ್ಕ್
    ಸಂಪಾದಕರು : ಸೌಮ್ಯ ಎಸ್.ಹೆಚ್

    ರೋಜಾಳ ಅಮ್ಮ ಬೆಳಗ್ಗೆಯೇ ಕೆಲಸಕ್ಕೆ ಹೋಗುತ್ತಾರೆ. ರಾತ್ರಿ ಮಲಗುವ ಮೊದಲೇ ಬರುತ್ತೇನೆ ಎಂದು ಮಾತು ಕೊಡುತ್ತಾರೆ. ಅಮ್ಮ ಇಲ್ಲದೇ ಇಡೀ ದಿನವನ್ನು ರೋಜಾ ಹೇಗೆ ಕಳೆಯುತ್ತಾಳೆ? ಈ ಕಥೆಯ ಮೂಲಕ ನೋಡೋಣ.

    ಈ ಕಥೆಯ ಮೂಲಕ ಮಕ್ಕಳಿಗೆ ಸಮಯ ಮತ್ತು ಗಡಿಯಾರದ ಬಗ್ಗೆ ಮಾಹಿತಿಯನ್ನು ನೀಡಬಹುದು. ವಿವಿಧ ಭಾವನೆಗಳ ಕುರಿತಾಗಿ ಮಕ್ಕಳಿಗೆ ಪರಿಚಯಿಸಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.

    1. ಪೋಷಕರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋದಾಗ, ಅವರಿಗೆ ಇಷ್ಟವಾಗುವ ಮತ್ತು ದುಃಖವನ್ನುಂಟು ಮಾಡುವ ಅಂಶಗಳ ಕುರಿತು ಚರ್ಚಿಸುವುದು?
    2. ಮಕ್ಕಳು ಮನೆಗೆಲಸದಲ್ಲಿ ತಮ್ಮ ಪೋಷಕರಿಗೆ ಹೇಗೆ ನೆರವಾಗುತ್ತಾರೆ ಎಂಬುದನ್ನ ಚರ್ಚಿಸುವುದು?
    3. ದಿನನಿತ್ಯ ಮಕ್ಕಳು ಹ್ಸಾಲಯನ್ನು ಹೊರತು ಪಡಿಸಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಚಟುವಟಿಕೆಗಳ ಕುರಿತು ಚರ್ಚಿಸುವುದು
    4. ಮನೆಯಲ್ಲಿ ಒಬ್ಬರೇ ಇದ್ದಾಗ ನಿಮ್ಮಲ್ಲಿ ಉಂಟಾಗುವ ಭಾವನೆಗಳು ಯಾವುವು? ಹಾಗೂ ನೀವು ಆಗ ಏನು ಮಾಡುತ್ತೀರಿ ಎಂಬುದನ್ನು ಗುಂಪಿನಲ್ಲಿ ಚರ್ಚಿಸುವುದು
    5. ಮಕ್ಕಳು ಆಡಲು ಇಚ್ಛಿಸುವ ಆಟಗಳಾವುವು, ಎಲ್ಲಿ ಮತ್ತು ಯಾರೊಂದಿಗೆ ಆಡಲು ಇಚ್ಛಿಸುತ್ತಾರೆ ಎಂದು ಹಂಚಿಕೊಳ್ಳಲು ಅವಕಾಶ ಮಾಡಿಕೊಡುವುದು.
       

    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಕುಟುಂಬ,ದಿನಚರಿ ಮತ್ತು ದೈನಂದಿನ ಅಭ್ಯಾಸಗಳು,ಆರೊಗ್ಯ ಮತ್ತು ಸ್ವಚ್ಚತೆ
    ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    5 min

About ಕಥೆ ಖಜಾನೆ - ಕನ್ನಡ

From the publisher's feed

2023-24ರ ಅವಧಿಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ), ಐಟಿ ಫಾರ್ ಚೇಂಜ್ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ನಡೆಸಿದ 'ಭಾಷಾ ಶಿಕ್ಷಣದಲ್ಲಿ ಡಿಜಿಟಲ್ ಕಥೆ-ಆಧಾರಿತ ಬೋಧನ ವಿಧಾನದ ಅಳವಡಿಕೆ' ಕರ್ಯಕ್ರಮದ ಅಡಿಯಲ್ಲಿ ನಡೆಸಿದ ಕಾರ್ಯಾಗಾರಗಳ ಭಾಗವಾಗಿ ಈ ಆಡಿಯೋ ಕಥೆಗಳನ್ನು ಕರ್ನಾಟಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ತಯಾರಿಸಿದ್ದಾರೆ. ಕಥೆ ಹೇಳುವಿಕೆಯ ಶಕ್ತಿಯ ಜೊತೆಗೆ ಡಿಜಿಟಲ್ ಮಾಧ್ಯಮವು ನೀಡುವ ಹೊಸ ಸಾಧ್ಯತೆಗಳ ಮೂಲಕ ಮಕ್ಕಳ ಭಾಷಾ ಕಲಿಕೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ.