
Sign up to save your podcasts
Or


Writer: ಪದ್ಮಪರ್ಣ ಘೋಷ್
Narrator: ಮಲ್ಲಿಕಾರ್ಜುನಪ್ಪ. ಹೆಚ್.ಒ.
Editor: ಬಾಲಾಜಿ ಎಚ್ ಕೆ
ಭಾರತದ ಅರಣ್ಯವೊಂದರಲ್ಲಿ ಮೇಲಿನ ಪ್ರಪಂಚ ಮತ್ತು ಕೆಳಗಿನ ಪ್ರಪಂಚದವರು ಪರಸ್ಪರರನ್ನು ಸಂಶಯಿಸುತ್ತಿದ್ದರು. ಆದರೆ ಗೋಪಿ ಎಂಬ ಇಲಿ ಮತ್ತು ಫಾತಿಮಾ ಭೇಟಿ ನಂತರ ಎಲ್ಲವೂ ಬದಲಾಯಿತು. ಇದೊಂದು ಮೇಲ್ಚಾವಣಿ ಅರಣ್ಯದಲ್ಲಿರುವ ಜೀವವೈವಿಧ್ಯತೆ ಮತ್ತು ಅವುಗಳಲ್ಲಿನ ಗೆಳೆತನದ ಕುರಿತ ಕಥೆ.
೧. ಆಹಾರ ಸರಪಳಿ ಆಟವನ್ನು ಆಡಿಸುವುದು.
೨. ಜೀವಿಗಳು ಮತ್ತು ಅದರ ವಾಸಸ್ಥಳಗಳನ್ನು ಜೋಡಿಸುವುದು.
೩. ಪರಿಸರ ಸಂರಕ್ಷಣೆಯ ಕುರಿತಾದ ಚರ್ಚೆ ನಡೆಸುವುದು.
Writer: ನ್ಗುಯೆನ್ ಫಾಮ್ ಟು ಟ್ರಿನ್ಹ್
Narrator: ರಂಗಪ್ಪ ಕೆ.ವಿ
Editor: ಪ್ರದೀಪ್ ವಿ
ಮೊಲ ಹೊಸ ಶಾಲೆಗೆ ಸೇರಿದೆ. ಹೊಸ ಸ್ನೇಹಿತರನ್ನ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಎಲ್ಲದರಲ್ಲೂ ಮೊದಲ ಸ್ಥಾನ ಪಡೆದರೆ ಎಲ್ಲರೂ ತನ್ನನ್ನು ಇಷ್ಟ ಪಡುತ್ತಾರೆ ಎಂದು ಅದು ಭಾವಿಸುತ್ತದೆ. ಮೊಲ ಅಂದುಕೊಂಡಂತೆ ಆಗತ್ತದೆಯೇ?
೧. ವೃತ್ತಾಕಾರದಲ್ಲಿ ಓಡುವ ಚಲನೆಯ ಆಟವನ್ನು ಆಡಿಸುವುದು.
೨.ಮೊಲದ ಚಿತ್ರ ಬಿಡಿಸಿ, ಬಣ್ಣ ಹಚ್ಚುವುದು.
Writer: ನೇತ್ರಾವತಿ ರಾಂಪುರ
Narrator: ನೇತ್ರಾವತಿ ರಾಂಪುರ
Editor: ಶ್ರೀಮಂತ್
ಶೇಂಗಾ ಬೀಜವು ಮೊಳಕೆಯೊಡೆಯಲು ಚಡಪಡಿಸುತ್ತಿತ್ತು. ಉತ್ತಮ ಆಹಾರ ಹೇಗೆ ತಯಾರಿಸಲಿ ಎಂದು ಹೇಳುತ್ತಿತ್ತು. ಉಳಿದಂತೆ ಯಾರೆಲ್ಲಾ ಪರಿಸರದಲ್ಲಿ ಹೇಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಮತ್ತು ಯಾಕೆ ಎಂಬುವುದನ್ನು ಈ ಕಥೆಯು ತಿಳಿಸುತ್ತದೆ.
೧. ಹೆಸರುಕಾಳನ್ನು ಉಪಯೋಗಿಸಿ, ಮೊಳಕೆ ಬರುವ ರೀತಿ ಮತ್ತು ಆರೋಗ್ಯದ ಬಗ್ಗೆ ಗಮನಹರಿಸುವಂತೆ ಪ್ರಾಯೊಗಿಕವಾಗಿ ಈ ಚಟುವಟಿಕೆಯನ್ನು ಮಾಡುವುದು.
Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಅಜಯ್ ಕುಮಾರ್ ಕೆ ಜಿ
Editor: ಸೋಮಶೇಖರ ಎಸ್
ಒಂದು ವಿಶೇಷ ಪತ್ರವನ್ನುತಿಳಿಯಲು ಮಕ್ಕಳೆಲ್ಲ ಕಂಪ್ಯೂಟರ್ ಕೊಠಡಿಗೆ ತೆರಳುವರು. ರಾಜು ತನ್ನ ಗೆಳೆಯ ಸಲೀಮನಿಗೆ ಪತ್ರದ ಮೂಲಕ ಯಾನದ ಪರಿಚಯವನ್ನು ಮಾಡಿಕೊಟ್ಟಿದ್ದಾನೆ. ಯಾನ ಹೇಗಿದೆ ಎನ್ನುವುದನ್ನು ನಾವು ಕಥೆಯ ಮೂಲಕ ತಿಳಿಯೋಣ ಬನ್ನಿ.
೧. ಕಂಪ್ಯೂಟರ್ ನಲ್ಲಿ ಸಂದೇಶವನ್ನು ಕಳುಹಿಸಲು ಮಾರ್ಗದರ್ಶನ ನೀಡುವುದು.
೨. ಕಂಪ್ಯೂಟರ್ ನ ಮೂಲ ಅಭ್ಯಾಸಗಳನ್ನು ಮಾಡಿಸುವುದು.
Writer: ಜಯಸುಧಾ ಭಾಸ್ಕರನ್
Narrator: ನೇತ್ರಾವತಿ ರಾಂಪುರ
Editor: ನೇತ್ರಾವತಿ ರಾಂಪುರ
ಕುಂಡದಲ್ಲಿ ಗಿಡವೊಂದನ್ನು ಬೆಳೆಸುವ ತನ್ನ ಮೊದಲ ಪ್ರಯತ್ನದಲ್ಲಿ ವಿಫಲಳಾದ ರಿಯಾ ತನ್ನ ತಾಯಿಯ ಸಹಾಯದಿಂದ ಗಿಡ ಬೆಳೆಸುವುದು ಹೇಗೆ ಎಂಬುದನ್ನು ತಿಳಿದುಕೊಂಡಳು.
೧. ಯಾವುದಾದರೂ ಒಂದು ಗಿಡವನ್ನುನೆಟ್ಟು ಬೆಳೆಸುವುದು.ಮತ್ತು ಅದರ ಪ್ರತಿಫಲವನ್ನು ಗಮನಿಸುವುದು.
೨. ಬೀಜಗಳನ್ನು ಸಂಗ್ರಹಿಸಿ ಅದರ ಸಸ್ಯಗಳ ಜೊತೆ ಹೊಂದಿಸುವುದು. ಮತ್ತು ಗುರುತಿಸುವುದು.
Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ವೇಮಣ್ಣ ಟಿ
Editor: ದಿನೇಶ ಎಲ್
ಗಿಡ,ಮರ,ಬಳ್ಳಿಗಳಿಂದ ಕಂಗೊಳಿಸುತ್ತಿರುವ ಕಾಡಿನ ಮಧ್ಯೆ ಒಂದು ಪುಟ್ಟ ಕುಟೀರವಿತ್ತು. ಅಲ್ಲಿ ತಾಂಡವ ಋಷಿ ತನ್ನ ಪತ್ನಿಯೊಂದಿಗೆ ವಾಸಿಸುತ್ತಿದ್ದನು. ಅವರಿಗೆ ಒಬ್ಬನೇ ಒಬ್ಬ ಮಗನಿದ್ದನು. ಅವನೇ ಶ್ರವಣಕುಮಾರ. ಅವರಿಗೆ ತೀರ್ಥಯಾತ್ರೆ ಮಾಡಬೇಕೆಂಬ ಆಸೆಯಿತ್ತು. ಆದರೆ ಅವರಿಗೆ ಕಣ್ಣು ಕಾಣಿಸುತ್ತಿರಲಿಲ್ಲ. ಶ್ರವಣಕುಮಾರ ತನ್ನ ತಂದೆ ತಾಯಿಗೆ ನೀಡುತ್ತಿದ್ದ ಗೌರವ ಅಪಾರ. ತೀರ್ಥಯಾತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಏನಾಗಿರಬಹುದು...! ಆತ ಯಾರ ಬಾಣಕ್ಕೆ ಬಲಿಯಾದನು? ಮುಂದೆ...
೧. ಶ್ರವಣ ಕುಮಾರನಿಂದ ಕಲಿಯುವ ಪಾಠಗಳನ್ನು ೫-೬ ವಾಕ್ಯಗಳಲ್ಲಿ ಬರೆಯಲು ಹೇಳಿ.
೨. ಕಥೆಯ ಜೋಡಣೆಯನ್ನು ಬರೆಯಿರಿ ಮತ್ತು ಹೇಳಿ.
Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಮಂಜುನಾಥ್ ಪಿ
Editor: ಸಿದ್ದರಾಮೇಶ್ವರ ಎಂ
ಎಲ್ಲರಿಗೂ ಹಬ್ಬ ಎಂದರೆ ಬಲು ನೆಚ್ಚು. ಸಂಕ್ರಾಂತಿ ಹಬ್ಬದ ದಿನ ಎಲ್ಲರೂ ದನ ಕರುಗಳನ್ನು ಸಿಂಗಾರಗೊಳಿಸುವುದು,ಅಂಗಳವನ್ನು ರಂಗೋಲಿಯಿಂದ ಅಲಂಕಾರಗೊಳಿಸುವುದು, ತಳಿರು ತೋರಣ ಕಟ್ಟುವುದರಲ್ಲಿ ನಿರತರಾಗಿದ್ದರು. ಆದರೆ ನಮಿತ ಮಾತ್ರ ಯಾವ ಕೆಲಸದಲ್ಲಿಯೂ ತೊಡಗಿರಲಿಲ್ಲ. ಆಗ ಅಜ್ಜಿ ಸಂಕ್ರಾಂತಿ ಹಬ್ಬದ ಸುಖ ದುಃಖ ಎಂಬ ಕಥೆಯನ್ನು ಕೇಳೋಣ ಬನ್ನಿ.
೧. ನಾವು ಆಚರಿಸುವ ಹಬ್ಬಗಳ ಬಗ್ಗೆ ಪಟ್ಟಿ ಮಾಡಿ ಮತ್ತು ಅವುಗಳ ವಿಶೇಷತೆಗಳನ್ನು ಬರೆಯಿರಿ.
೨. ಸಂಕ್ರಾಂತಿ ಹಬ್ಬದ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಿ ಮತ್ತು ಆಚರಿಸುವ ರೀತಿಯನ್ನು ಹಂಚಿಕೊಳ್ಳಿ.
೩. ರಂಗೋಲಿ ಚಿತ್ರವನ್ನು ಬಿಡಿಸುವುದು, ತಳಿರು ತೋರಣದ ಚಿತ್ರವನ್ನು ರಚಿಸುವುದು.
Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಕೌಸರ್ ಬಾನು ಆರ್
Editor: ವೀರೇಶ್ ಎಂ.ಬಿ
ಗುರುಗಳು ತರಗತಿಗೆ ಬರುವುದನ್ನುಮಕ್ಕಳು ಕಾಣುವರು. ಕೂಡಲೇ ಮಕ್ಕಳು ಎದ್ದು ನಿಂತು ಕುಳಿತರು. ಮತ್ತೆ ಎದ್ದು ನಿಂತು ಗುರುಗಳಿಗೆ ವಂದಿಸಿದರು. ತರಗತಿಯಲ್ಲಿ ಗುರುಗಳಿಗೆ ಯಾರ ಮೇಲೆ ಮೆಚ್ಚುಗೆಯಾಯಿತು? ಆತ ಯಾರಿರಬಹುದು! ಸತ್ಯವನ್ನು ಹೇಳುವ ಗುಣವನ್ನು ಸದಾಕಾಲ ಉಳಿಸಿಕೊಳ್ಳಬೇಕೆಂಬ ಸಂದೇಶವನ್ನುಈ ಕಥೆಯು ಹೇಳುತ್ತದೆ.
೧. ಸತ್ಯ ಮತ್ತು ಸುಳ್ಳು ಇದರ ಬಗ್ಗೆ ಚರ್ಚಿಸಿ, ಮತ್ತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಪ್ರೇರೇಪಿಸಿ.
೨.ಹೊಸ ಪದಗಳನ್ನು ಗುರುತಿಸಿ ಬರೆಯಿರಿ.
೩. ಆ ಪದಗಳಿಗೆ ಸಮಾನಾರ್ಥಕ ಮತ್ತು ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ನಳಿನಾಕ್ಷಿ ಜಿಎಂ
Editor: ಬ್ರಿಜೇಶ್ ಕುಮಾರ್ ಜಿ ವಿ
ಒಂದು ದಟ್ಟವಾದ ಕಾಡಿನಲ್ಲಿ ಒಂದು ದೊಡ್ಡದಾದ ಮರವಿತ್ತು. ಅಲ್ಲೊಬ್ಬ ಅಜ್ಜಿ ಒಣ ಕಟ್ಟಿಗೆ ಆರಿಸುತ್ತಾ ಮರದ ಕೆಳಗೆ ಬಂದಳು. ಆಗ ಊಟದ ಸಮಯ. ಅಜ್ಜಿಯು ಮರದ ಕೆಳಗೆ ಕುಳಿತು ಊಟದ ಬುತ್ತಿಯನ್ನು ತೆಗೆದಳು. ಅಳಿಲು, ಕಾಗೆ, ಗುಬ್ಬಚ್ಚಿ ಎಂದಿನಂತೆ ಅಜ್ಜಿಯ ಬಳಿಗೆ ಬಂದರು. ಪ್ರಾಣಿಪಕ್ಷಿಗಳ ಮತ್ತು ಅಜ್ಜಿಯ ನಡುವಿನ ಸಹಬಾಳ್ವೆ ಹೇಗಿತ್ತು ಎಂದು ತಿಳಿಯಲು, ಈ ಕಥೆಯನ್ನು ಕೇಳಿರಿ.
೧.ಪ್ರಾಣಿ ಪಕ್ಷಿಗಳ ಹೆಸರನ್ನು ಪಟ್ಟಿಮಾಡುವುದು, ಗುರುತಿಸುವುದು ಮತ್ತು ಅವುಗಳ ಶಬ್ದಗಳನ್ನು ಆಲಿಸಿ ಕಂಡುಹಿಡಿಯುವುದು.
೨. ಮಕ್ಕಳಿಗೆ ಇಷ್ಟವಾದ ಪ್ರಾಣಿ ಅಥವಾ ಪಕ್ಷಿಯ ಚಿತ್ರವನ್ನು ಬಿಡಿಸಿ, ಬಣ್ಣ ಹಚ್ಚುವುದು.
೩. ಮಕ್ಕಳಲ್ಲಿ ಸ್ನೇಹದ ಬಗ್ಗೆ , ತಾವು ಮಾಡಿದ ಸಹಾಯದ ಬಗ್ಗೆ ಹಂಚಿಕೊಳ್ಳಲು ಹೇಳುವುದು.
೪. ಕಾಡಿನ ದೃಶ್ಯದ ಚಿತ್ರವನ್ನು ಬಿಡಿಸುವುದು.
Writer: ಪರ್ವಿನ್ ಸುಲ್ತಾನಾ
Narrator: ಪರ್ವಿನ್ ಸುಲ್ತಾನಾ
Editor: ಪರ್ವಿನ್ ಸುಲ್ತಾನಾ
ನಮ್ಮ ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ. ಕವನ ಶೀರ್ಷಿಕೆ:ಸಾವಿತ್ರಿ ಎಂಬ ಸಿಡಿಲ ಮೊಗ್ಗು. ಕೇಳಿ ಅರಿತುಕೊಳ್ಳಿ.
೧. ಸಾವಿತ್ರಿಬಾಯಿ ಫುಲೆ ಅವರ ಚಿತ್ರವನ್ನು ಚಾರ್ಟ್ ನಲ್ಲಿ ಅಂಟಿಸಿ, ಅವರ ಬಗ್ಗೆ ವಿಚಾರ ಸಂಗ್ರಹಣೆ ಮಾಡಿ ಬರೆಯುವುದು.
From the publisher's feed