
Sign up to save your podcasts
Or


Writer: ಜೇನ್ ಡಿ ಸುಜಾ
Narrator: ಕೌಸರ್ ಬಾನು ಆರ್
Editor: ಬಸವರಾಜಪ್ಪ ಎನ್
ಪ್ರಗತಿ ಪತ್ರ ಅಥವಾ ಅಂಕಪಟ್ಟಿ ಎಂದರೆ ಬರೀ ಓದು, ಬರಹಕ್ಕೆ ಮಾತ್ರ ಸೀಮಿತವಲ್ಲ ಎಂದಾದರೆ ನೀವೂ ಎಷ್ಟೊಂದು ಅಂಕ ಗಳಿಸಬಲ್ಲಿರಿ ಅಲ್ಲವೆ?
೧. ಅಂಕ ಮಾತ್ರವಲ್ಲ ಗುಣಗಳೂ ಮುಖ್ಯ ಎಂಬ ವಿಷಯದ ಮೇಲೆ ಚರ್ಚೆ ಆಧಾರದ ಮೇಲೆ ಸರಳ ಪ್ರಶ್ನೆಗಳನ್ನು ಕೇಳಿ.
Writer: ಅದಿತಿ ದೇ
Narrator: ಹನುಮಂತಪ್ಪ ಸಿ
Editor: ಪ್ರದೀಪ್ ವಿ
ತರಲೆ ಇರುವೆ ಪೀಪ್ರೆ ಅಂಚೆ ಡಬ್ಬದಲ್ಲಿ ಸಿಕ್ಕಿ ಹಾಕಿಕೊಂಡಿದೆ. ಅಲ್ಲಿಂದ ತಪ್ಪಿಸಿಕೊಳ್ಳುವ ಸಾಹಸದಲ್ಲಿ ಪೀಪ್ರೆಗೆ ಪತ್ರಗಳು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ತಲುಪುವ ಜಾಡು ತಿಳಿದಿದ್ದು ಹೇಗೆ?
೧. ಅಂಚೆ ಪತ್ರವನ್ನು ಬರೆಯಲು ಪ್ರೇರೇಪಿಸುವವುದು.
೨.ಸಂದೇಶ ಸರಪಳಿ ಆಟ : ಒಬ್ಬ ವಿದ್ಯಾರ್ಥಿಯಿಂದ ಮತ್ತೊಬ್ಬನಿಗೆ ಸಂದೇಶ ಹಂಚುವ ಮೂಲಕ ಸರಿಯಾಗಿ ತಲುಪುತ್ತದೆಯೇ ಎಂದು ನೋಡುವುದು.
Writer: ಅನಿತಾ ಸೆಲ್ವನಾಥನ್
Narrator: ರಶ್ಮಿ, ಶೋಭಾ ಪೂಜಾರಿ
Editor: ಶ್ರೀಮಂತ್
ಮಾಲಿನಿ ಮತ್ತು ಆಕೆಯ ಪೋಷಕರು ನಾಲ್ಕು ದಿನಗಳ ಪೊಂಗಲ್ ಹಬ್ಬವನ್ನು ಆಚರಿಸಿದರು. ಮಾಲಿನಿ ಕಬ್ಬು ತಿಂದಳಾ? ಪೊಂಗಲ್ ದಿನದಂದು ಆಕೆಯ ತಾಯಿ ಸುಜಾ ಏನು ಅಡುಗೆ ಮಾಡಿದರು? ಹಸುವನ್ನು ಅಲಂಕರಿಸಲಾಗಿದೆಯೇ? ಅವರು ದೃಶ್ಯವೀಕ್ಷಣೆಗೆ ಹೋಗಿದ್ದಾರೆಯೇ? ತಿಳಿಯಲು ಓದಿ.
೧. ನಾವು ಆಚರಿಸುವ ಹಬ್ಬಗಳ ಪಟ್ಟಿ ಮಾಡುವುದು.
೨. ಇಷ್ಟವಾದ ತಿಂಡಿ ತಿನಿಸುಗಳ ಬಗ್ಗೆ ಹೇಳುವುದು.
Writer: ಪರ್ವಿನ್ ಸುಲ್ತಾನ
Narrator: ಪರ್ವಿನ್ ಸುಲ್ತಾನ
Editor: ಮಹಾಂತೇಶ್ ಎಸ್ ಕುಂಬಾರ್
ವಿದ್ಯಾರಣ್ಯಪುರದಲ್ಲಿ ಒಬ್ಬರು ಜಗದ್ಗುರು ಇದ್ದರು. ಅವರು ಹೇಳುವ ಭವಿಷ್ಯ ನಿಜವಾಗುತ್ತದೆ ಎಂಬ ನಂಬಿಕೆ ಊರಿನ ಜನರಲ್ಲಿತ್ತು. ಹಾಗಾಗಿ ಸುತ್ತಮುತ್ತಲಿನ ಮತ್ತು ದೂರದ ಊರಿನ ಜನರು ಅವರಲ್ಲಿಗೆ ಬಂದು ಭವಿಷ್ಯ ಕೇಳುತ್ತಿದ್ದರು. ಒಮ್ಮ ಗೆಳೆಯರಾದ ಮಹೇಶ ಮತ್ತು ಸುರೇಶ ಜಗದ್ಗುರು ಬಳಿ ಬರುವರು. ಜಗದ್ಗುರು ಏನೆಂದು ಆಶೀರ್ವದಿಸಿದರು? ಇಬ್ಬರ ನಡುವಿನ ಪರೀಕ್ಷೆಯಲ್ಲಿ ಯಾರಿಗೆ ಉತ್ತಮ ಫಲಿತಾಂಶ ಬಂದಿರಬಹುದು? ಯೋಚಿಸಿ ಹಾಗೂ ಕಥೆಯನ್ನು ಓದಿರಿ.
೧. ಪದಗಳನ್ನು ಗುರುತಿಸಿ, ವಾಕ್ಯಗಳನ್ನು ರಚಿಸಲು ಹೇಳುವುದು.
೨. ವೇಳಾಪಟ್ಟಿಯನ್ನು ತಯಾರಿಸಲು ಹೇಳುವುದು.
Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಜಿಎಂ ಜ್ಯೋತಿ
Editor: ದಿನೇಶ ಎಲ್
ಶಾಲೆಯ ಘಂಟೆ ಬಾರಿಸಿತು, ಮಕ್ಕಳೆಲ್ಲ ಮನೆಗೆ ಹೊರಟರು. ದಾರಿ ಬದಿಯ ಮಾವಿನ ತೋಪಿನಲ್ಲಿ ಬೆಳೆದು ಪಕ್ವವಾದ ಮಾವಿನ ಹಣ್ಣನ್ನು ಕಂಡರು.ತೋಪಿನೊಳಗೆ ಪ್ರವೇಶಿಸಿದರು. ತೋಟದ ಮಾಲೀಕ ಏನು ಮಾಡಿದ? ಮಕ್ಕಳಲ್ಲಿ ಪ್ರಾಮಾಣಿಕತೆ ಮೆರೆದ ಬಾಲಕ ಯಾರು? ಸತ್ಯವನ್ನು ಹೇಳುವ, ಪ್ರಾಮಾಣಿಕತೆಯನ್ನುಅರ್ಥೈಸುವ ಕಥೆ ಇದು.
೧. ಹಣ್ಣುಗಳ ಹೆಸರುಗಳನ್ನು ಪಟ್ಟಿ ಮಾಡುವುದು.
೨. ಮಾವಿನ ಹಣ್ಣಿನ ಚಿತ್ರ ಬಿಡಿಸಿ ಬಣ್ಣ ಹಚ್ಚುವುದು.
೩. ಹೂವಿನ ಮಾಲೆ ತಯಾರಿಸುವುದು.
Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಅಜಯ್ ಕುಮಾರ್ ಕೆ ಜಿ
Editor: ಕುಮಾರ್ ವೈ
ಒಂದಾನೊಂದು ಕಾಲದಲ್ಲಿ ಒಂದು ಊರು. ಆ ಊರಿನ ಹೆಸರು ಬಂಡೆಯೂರು. ಅಲ್ಲೊಬ್ಬ ಬಡವ ಇರುತ್ತಾನೆ. ಕಲ್ಲು ಒಡೆಯುವುದು ಮತ್ತು ಅದನ್ನು ಮಾರುವುದು ಆತನ ಕೆಲಸ. ದೇವರು ಆತನ ಪ್ರಯತ್ನವನ್ನು ಕಾಣುತ್ತಾನೆ. ದೇವರು ಆತನಿಗೆ ಇರುವ ಇಚ್ಛೆಯನ್ನು ಈಡೇರಿಸುವನೇ?
೧. ಹೊಸ ಪದಗಳ ಅರ್ಥ ಹುಡುಕಿ ಬರೆಯಲು ಹೇಳಿ.
೨. ಪದಗಳಿಗೆ ಸ್ವಂತ ವಾಕ್ಯ ರಚಿಸಲು ತಿಳಿಸಿ.
Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಅಜಯ್ ಕುಮಾರ್ ಕೆ ಜಿ
Editor: ಕುಮಾರ್ ವೈ
Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಅಜಯ್ ಕುಮಾರ್ ಕೆ ಜಿ
Editor: ಪ್ರಶಾಂತ್ ಎಸ್
ಏಕಚಕ್ರ ಅಗ್ರಹಾರದಲ್ಲಿ ನಡೆದ ಕಥೆಯಿದು. ಪಾಂಡವರಿಗೆ ಪಕ್ಕದ ಮನೆಯಲ್ಲಿ ಅಳುವ ಶಬ್ದ ಕೇಳಿಸುತ್ತದೆ. ಪಾಂಡವರ ತಾಯಿ ಸಮಸ್ಯೆ ಏನೆಂದು ತಿಳಿಯಲು ಪಕ್ಕದ ಮನೆಗೆ ಹೋಗುತ್ತಾರೆ. ಬಕಾಸುರ ಎಂಬ ದೈತ್ಯ ರಾಕ್ಷಸನ ಅಟ್ಟಹಾಸಕ್ಕೆ ಇಡೀ ಊರಿಗೆ ಊರೇ ಭಯಭೀತಿಗೊಂಡಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಂಡ ಆಸಕ್ತಿದಾಯಕ ಕಥೆಯನ್ನು ಕೇಳಿ ಆನಂದಿಸಿ.
೧. ಹೊಸ ಪದಗಳ ಅರ್ಥವನ್ನು ತಿಳಿಯುವುದು.
೨. ರಾಕ್ಷಸನ ಮುಖವಾಡ ತಯಾರಿಸುವುದು.
Writer: ತ್ರಿಪುರಾರಿ ಶರ್ಮಾ
Narrator: ರಾಘವೇಂದ್ರ ಕುಲಕರ್ಣಿ
Editor: ಶೋಭಾ ಎಸ್
ಭಾಭೋ ಎಮ್ಮೆಗೆ ಚೆಂದದ ಕೋಡುಗಳಿದ್ದವು. ಒಂದು ದಿನ ಮಳೆ ಬಂದಾಗ ಅದರ ಕೋಡುಗಳು ತೊಯ್ದವು. ಆಮೇಲೆ ಗಾಳಿ ಬೀಸಿದಾಗ, ಕೋಡಿನ ಮೇಲೆ ಧೂಳು, ಮಣ್ಣು ಕೂತಿತು. ಮರುದಿನ, ಹಾರಿ ಹೋಗುತ್ತಿದ್ದ ಹಕ್ಕಿಯ ಕೊಕ್ಕಿನಿಂದ ಕಾಳೊಂದು ಜಾರಿ ಭಾಭೋನ ಕೋಡಿನ ಮೇಲೆ ಬಿದ್ದಿತು. ಆ ಕಾಳು ಮೊಳೆಕೆಯೊಡೆದು ಸಸಿಯಾಗಿ ಗಿಡವಾಯಿತು. ಕೋಡಿನ ಮೇಲೆ ಬೆಳೆದ ಮರವನ್ನು ಏನು ಮಾಡಬಹುದು ಭಾಬೋ?
೧. ಹೊಸ ಶಬ್ಸಗಳನ್ನು ರಚಿಸುವುದು..
೨. ಬೀಜವನ್ನು ಬಿತ್ತಿ ಗಿಡ ಬೆಳೆಸುವುದು.
Writer: ನೇತ್ರಾವತಿ ರಾಂಪುರ
Narrator: ನೇತ್ರಾವತಿ ರಾಂಪುರ
Editor: ಅಕ್ಷಯ್ ಖೇಡಗಿಕರ್
ಒಂದಾನೊಂದು ಕಾಲದಲ್ಲಿ ಹಾವು ಮತ್ತು ಮುಂಗುಸಿ ಉತ್ತಮ ಸ್ನೇಹಿತರಾಗಿದ್ದವು. ಉದ್ದವಾದ ಬಾಲದ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಯಾರು ವಿಜೇತರಾದರು? ಮತ್ತು ಅವರ ಸ್ನೇಹ ಮುಂದುವರೆಯಿತೇ?
೧.ಸ್ನೇಹಿತರ ಬಗ್ಗೆ ಒಂದು ಪುಟದಲ್ಲಿ ಬರೆಯಲು ಹೇಳುವುದು.
೨. ಕಥೆಯನ್ನು ಸ್ವತಃ ವಿವರಿಸಲು ಹೇಳುವುದು.
From the publisher's feed