ಕಥೆ ಖಜಾನೆ - ಕನ್ನಡ

ಕಥೆ ಖಜಾನೆ - ಕನ್ನಡ

By Kathe Khajane Team, IT for Change
Download on the App Store

ಕಥೆ ಖಜಾನೆ - ಕನ್ನಡ episodes

  • ಧನ್ಯವಾದ ಹೇಳಿದ ಕೊಕ್ಕರೆ

    Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
    Narrator: ಶಿವಕುಮಾರಯ್ಯ ಎಂ
    Editor: ಸಿದ್ದರಾಮೇಶ್ವರ ಎಂ

    ಒಂದು ಊರಿನಲ್ಲಿ ಬಡ ರೈತ ದಂಪತಿಗಳಿದ್ದರು. ಅವರಿಗೆ ಹರಿ ಎಂಬ ಮಗ ಇದ್ದನು.ಆತ ಸದ್ಗುಣ ಉಳ್ಳವನು ಹಾಗೂ ಕರುಣಾಳುವೂ ಆಗಿದ್ದನು. ಹುಲ್ಲಿನ ಮೇಲೆ ಕೊಕ್ಕರೆಯು ಬಿದ್ದಿರುವುದನ್ನು ಕಂಡನು.ಮೈಯೊಳಗೆ ಬಾಣವೊಂದು ಕಂಡಿತು. ತದನಂತರ ಆತ ಏನು ಮಾಡಿದನು? ಒಂದು ದಿನ ಸುಂದರವಾದ ಹುಡುಗಿಯು ಸಿಗುವಳು. ಆಮೇಲೆ ಏನಾಗಿರಬಹುದು? ಕೊಕ್ಕರೆಯು ಹರಿಗೆ ಸಹಾಯಮಾಡಿರಬಹುದೇ! ತಿಳಿಯಬೇಕೇ? ಕುತೂಹಲಕರವಾದ ಈ ಕಥೆಯನ್ನುಕೇಳಿರಿ.    

    ೧. ಸನ್ನಿವೇಶಕ್ಕೆ ತಕ್ಕಂತೆ ಚಿತ್ರವನ್ನು ಬಿಡಿಸುವುದು. 

    ೨. ಕಥೆಯನ್ನು ತಮ್ಮದೇ ವಾಕ್ಯದಲ್ಲಿ ಹೇಳುವುದು.


    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ಕರುಣೆ ಮತ್ತು ಕಾಳಜಿ,ಕುಟುಂಬ
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    5 min
  • ನನ್ನ ಕನಸು

    Writer: ಹನಿ ಮಂಜುನಾಥ್, ಸಂಹಿತಾ ಇ ಬಿ
    Narrator: ರಶ್ಮಿ, ಯಶವಂತ ಕಾಳೆ
    Editor: ಅಂಜನಾ ಕುಲಕರ್ಣಿ

    ಗೆಳೆಯರು ಇಲ್ಲದ ದಿನ, ರವಿ ಕಂಡ ಕನಸಿನಲ್ಲಿ ಏನು ಮಾಡಿದ ಎಂದು ತಿಳಿಯಬೇಕೆ! 

    ೧. ಪ್ರಾಣಿ ಮತ್ತು ಪಕ್ಷಿಗಳ ಹೆಸರನ್ನು ಪಟ್ಟಿ ಮಾಡುವುದು.  

    ೨. ಸುತ್ತಮುತ್ತಲಿನ ಪರಿಸರದ ಚಿತ್ರವನ್ನು ಬಿಡಿಸಿ, ಬಣ್ಣ ಹಚ್ಚಲು ತಿಳಿಸುವುದು.


    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ಪರಿಸರ ಮತ್ತು ವಾತಾವರಣ,ಭಾವನೆಗಳು
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    4 min
  • ನನ್ನ ಭಾವನೆಗಳ ಪ್ರಪಂಚ

    Writer: ವರ್ಷಾ ಶೇಷನ್
    Narrator: ಮಲ್ಲಿಕಾರ್ಜುನಪ್ಪ. ಹೆಚ್.ಒ.
    Editor: ಬಾಲಾಜಿ ಎಚ್ ಕೆ

    ನಿನ್ನ ನೋಡಲು ಅಜ್ಜಿ ಬಂದಾಗ ನಿನಗೆ ಏನು ಅನಿಸತ್ತೆ? ಲೈಬ್ರರಿಯ ಪುಸ್ತಕ ಹಾಳಾದಾಗ ನಿನಗೆ ಏನು ಅನಿಸತ್ತೆ? ಈ ಪುಸ್ತಕವನ್ನು ಓದು ಮತ್ತು ಇವತ್ತು ನಿನಗೆ ಏನು ಅನಿಸತ್ತೆ ಅಂತ ನೋಡು.

     

    ೧. ಬೇರೆ ಬೇರೆ ವಿಧದ ಪುಸ್ತಕಗಳನ್ನು ಓದಲು ಪ್ರೇರೇಪಿಸುವುದು. 

    ೨. ಇಷ್ಟವಾದ ಪಕ್ಷಿಯ ಚಿತ್ರವನ್ನು ಬಿಡಿಸುವುದು.


    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಗುರುತು ಪಟ್ಟಿ: ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    5 min
  • ನಮ್ಮ ಸಂವಿಧಾನ, ನಮ್ಮ ಜನರು - ಪ್ರಸ್ತಾವನೆ

    Writer: by Pratham Books 
    Narrator: ಮಾಯಾದೇವಿ ತುರಂಗ
    Editor: ನಾಗಿನಾ

    ಭಾರತದ ಸಂವಿಧಾನದ ಪ್ರಸ್ತಾವನೆಯ ಭಾಗವನ್ನುನೋಡೋಣ. ಭಾರತ ಸಂವಿಧಾನದ ಆತ್ಮ, ಸಾರ, ಪ್ರಸ್ತಾವನೆ ಒಂದೇ ಪುಟದಲ್ಲಿ ಅಡಕವಾಗಿದೆ. ಇದರ ಬಗ್ಗೆ ಒಂದಿಷ್ಟು ವಿಚಾರವನ್ನು ತಿಳಿಯೋಣ ಬನ್ನಿ.

    ೧. ಸಂವಿಧಾನದ ಪ್ರಸ್ತಾವನೆಯನ್ನು ಚಾರ್ಟ್ ನಲ್ಲಿ ಬರೆದು ಓದಿಸುವುದು. 

    ೨. ತರಗತಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮ ನಡೆಸುವುದು.


    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಕಲೆ ಮತ್ತು ಸಂಸ್ಕ್ರುತಿ
    ಗುರುತು ಪಟ್ಟಿ: ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    4 min
  • ನರಿ ಮತ್ತು ಮಣ್ಣಿನ ಮುದ್ದೆ

    Writer: ಕುಯಿ ಬರಹಗಾರರ ಗುಂಪು
    Narrator: ಸಂಜಯಕುಮಾರ್.ಆರ್.ಬಿ
    Editor: ಪ್ರೇಮಾ ಪಿ ಸ್ವಾಮಿ

    ಒಂದು ನರಿ ಮತ್ತು ಮಣ್ಣಿನ ಮುದ್ದೆ ಒಳ್ಳೆಯ ಗೆಳೆಯರಾಗಿದ್ದರು. ಒಂದು ದಿನ ನರಿಗೆ ತುಂಬಾ ಬಾಯಾರಿಕೆಯಾಯಿತು. ಮಣ್ಣಿನ ಮುದ್ದೆ ನರಿಗೆ ನೀರು ತರಲು ಹೊಂಡಕ್ಕೆ ಹೋಯಿತು. ನೀರು ತರಲು ಹೊಂಡದೊಳಗೆ ಹೋದಾಗ ಮಣ್ಣಿನ ಮುದ್ದೆ ನೀರಿನಲ್ಲಿ ಕರಗಿ ಹೋಯಿತು. ನರಿಗೆ ತುಂಬಾ ದುಃಖವಾಯಿತು. ಮುಂದೆ ಏನಾಯಿತು ಎಂಬುದು ಕುಯಿ ಬುಡಕಟ್ಟಿನವರನ್ನು ಹಾಡಲು ಮತ್ತು ಕುಣಿಯುವಂತೆ ಮಾಡುತ್ತದೆ!

    ೧. ಕಥೆಯನ್ನು  ಅರ್ಥೈಸಿಕೊಂಡು ಸ್ಡಂತವಾಗಿ ಹೇಳುವುದು. 

    ೨. ನರಿಯ ಚಿತ್ರದ ಹಾಳೆಯನ್ನು ನೀಡಿ ಅದಕ್ಕೆ ಬಣ್ಣ ಹಚ್ಚುವುದು.


    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ಪ್ರಾಣಿ ಮತ್ತು ಪಕ್ಷಿಗಳು,ಭಾವನೆಗಳು
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    5 min
  • ನಾನು ಇರುವೆ ಹೀಗೆ (ಮೈಲಾಪುರದ ಮೈಲಾರಿ)

    Writer: ಬಿಂದು ಗುಪ್ತಾ
    Narrator: ಮಲ್ಲಿಕಾರ್ಜುನಪ್ಪ. ಹೆಚ್.ಒ.
    Editor: ಸೋಮಶೇಖರ ಎಸ್

    ಮೈಲಾಪುರದ ಮೈಲಾರಿ ಯಾರು? ಆತನಿಗೆ ತೆಳ್ಳಗೆ ಆಗಬೇಕೆಂಬ ಆಸೆ. ಅದಕ್ಕಾಗಿ ಆತ ಏನೇನು ಮಾಡುವನು ಎಂದು ತಿಳಿಯಬೇಕೆ

    ೧. ಮೈಲಾರಿ ಏನು ಮಾಡಿದ ಎಂದು ಬರೆಯುವುದು. 

    ೨. ಆರೋಗ್ಯಕರ ಎಂಬ ವಿಚಾರದಲ್ಲಿ ಹಣ್ಣು,ತರಕಾರಿ, ಧಾನ್ಯಗಳ ಪಟ್ಟಿ ತಯಾರಿಸುವುದು. 

    ೩. ವ್ಯಾಯಾಮಗಳನ್ನು ಅಭಿನಯಿಸುವುದು.


    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ಜೀವನ ಕೌಶಲ್ಯ
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    4 min
  • ನಾನು ಮತ್ತು ಹುಂಚಿಮರ

    Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
    Narrator: ಜಾವೀದ್ ಬಾಷಾ
    Editor: ಸಂತೋಷ ಕೆ

    ನಾನು ದಾರಿಯಲ್ಲಿ ನಡೆದು ಹೋಗುತ್ತಿದ್ದೆ. ನನ್ನ ಬೂಟುಗಳು ಇದ್ದಕ್ಕಿದ್ದಂತೆ ನಿಂತು ಹೋದವು. ಏಕೆ ನಿಂತುಹೋದವು? ದಾರಿ ತುಂಬಾ ಹುಂಚಿ ಹೂವು. ಆತ ಮುಂದೇನು ಮಾಡುವನು? ಏನನ್ನು ಕಾಣುವನು? ಬಾಯಲ್ಲಿ ನೀರೂರುವಂತ ತಿನಿಸು ಏನಿತ್ತು!  ಹುಂಚಿಮರದ ಜೊತೆಗಿನ ಸಂಬಂಧದ ಕಥೆ ಹೀಗಿದೆ.

    ೧. ಬಾಯಲ್ಲಿ ನೀರೂರಿಸುವ ತಿನಿಸುಗಳು ಯಾವುವು? ಎಂದು ಕೇಳಿ ಉತ್ತರವನ್ನು ಪಡೆದುಕೊಳ್ಳಿ. 

    ೨. ತಿಂಡಿ ತಿನಿಸುಗಳ ಬಗ್ಗೆ ಒಂದೆರಡು ವಾಕ್ಯಗಳಲ್ಲಿ ಬರೆಯಲು ಮತ್ತು ಅಭಿಪ್ರಾಯವನ್ನು ಹೇಳುವಂತೆ ಸೂಚಿಸುವುದು.


    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ಪರಿಸರ ಮತ್ತು ವಾತಾವರಣ,ಭಾವನೆಗಳು
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    7 min
  • ಪಂಚತಂತ್ರ (ಮಾತನಾಡುವ ಗುಹೆ)

    Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
    Narrator: ವೇಮಣ್ಣ ಟಿ
    Editor: ಸಿದ್ದರಾಮೇಶ್ವರ ಎಂ

    ಪಂಚತಂತ್ರದ ಕಥೆ. ಒಂದಾನೊಂದು ಕಾಲದಲ್ಲಿ ದೊಡ್ಡ ಕಾಡೊಂದರಲ್ಲಿ ಒಂದು ನರಿ ಇತ್ತು. ಅದು ನಿರ್ಜನವಾದ ಪ್ರದೇಶದಲ್ಲಿರುವ ಗುಹೆಯೊಂದರಲ್ಲಿ ವಾಸವಾಗಿತ್ತು. ನರಿಯು ಇಲ್ಲದೇ ಇರುವ ಸಮಯದಲ್ಲಿ ಸಿಂಹವೊಂದು ಗುಹೆಯ ಬಳಿ ಬಂದಿತು. ಮುಂದೇನು ಮಾಡಿರಬಹುದು! ನರಿಯು ಗುಹೆಯ ಹತ್ತಿರ ಬಂದಾಗ ಏನನ್ನು ಗಮನಿಸಿತು? ‘ಉಪಾಯ ಬಲ್ಲವನಿಗೆ ಅಪಾಯವಿಲ್ಲ’ಎಂಬ ಗಾದೆ ಮಾತಿನ ಕಥೆಯನ್ನು ನೀವು ಕೇಳಬಹುದು.    

    ೧.  ಪ್ರಾಣಿಗಳ ಹೆಸರುಗಳನ್ನು ಪಟ್ಟಿ ಮಾಡುವುದು. 

    ೨.  ನರಿ ಮತ್ತು ಸಿಂಹದ ಪಾತ್ರಗಳನ್ನು ಅಭಿನಯಿಸುವುದು.


    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ಬುದ್ಧಿವಂತಿಕೆ ಮತ್ತು ಚತುರತೆ
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    4 min
  • ಪುಚ್ಕುವಿಗೊಂದು ಬುಕ್ಕು

    Writer: ದೀಪಾಂಜನ ಪಾಲ್
    Narrator: ಮಲ್ಲಿಕಾರ್ಜುನಪ್ಪ. ಹೆಚ್.ಒ.
    Editor: ಪವಿತ್ರ ಎಸ್.ಆರ್

    ಪುಚ್ಕು ಹತ್ತಿರ ಓದಲು ಹೊಸ ಪುಸ್ತಕಗಳಿರಲಿಲ್ಲ. ಗ್ರಂಥಾಲಯದಲ್ಲಿ ಪುಸ್ತಕದ ಕಪಾಟು ಎತ್ತರದಲ್ಲಿದ್ದು, ಪುಟ್ಟ ಪುಚ್ಕುವಿನ ಕೈಗೆ ಎಟಕುತ್ತಿಲ್ಲ. ಅವಳ ಇಷ್ಟದ ಪುಸ್ತಕಗಳನ್ನು ಪುಚ್ಕು ತೆಗೆದುಕೊಂಡಿದ್ದು ಹೇಗೆ?

    ೧. ಮಕ್ಕಳು ಓದಿರುವ ಪುಸ್ತಕಗಳ ಹೆಸರನ್ನು ಕೇಳಿ, ಅವರಿಗೆ ತಿಳಿದಿರುವ ವಿಷಯವನ್ನು ಹಂಚಿಕೊಳ್ಳುವುದು. 

    ೨. ನೀವಾಗಿದ್ದರೆ ಎತ್ತರದಲ್ಲಿರುವ ಪುಸ್ತಕಗಳನ್ನು ಹೇಗೆ ತೆಗೆದುಕೊಳ್ಳುವಿರಿ ಎಂದು ಪ್ರಶ್ನಿಸಿ, ಉತ್ತರವನ್ನು ಪಡೆದುಕೊಳ್ಳುವುದು.


    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ದಿನಚರಿ ಮತ್ತು ದೈನಂದಿನ ಅಭ್ಯಾಸಗಳು,ಬುದ್ಧಿವಂತಿಕೆ ಮತ್ತು ಚತುರತೆ
    ಗುರುತು ಪಟ್ಟಿ: ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    7 min

About ಕಥೆ ಖಜಾನೆ - ಕನ್ನಡ

From the publisher's feed

2023-24ರ ಅವಧಿಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ), ಐಟಿ ಫಾರ್ ಚೇಂಜ್ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ನಡೆಸಿದ 'ಭಾಷಾ ಶಿಕ್ಷಣದಲ್ಲಿ ಡಿಜಿಟಲ್ ಕಥೆ-ಆಧಾರಿತ ಬೋಧನ ವಿಧಾನದ ಅಳವಡಿಕೆ' ಕರ್ಯಕ್ರಮದ ಅಡಿಯಲ್ಲಿ ನಡೆಸಿದ ಕಾರ್ಯಾಗಾರಗಳ ಭಾಗವಾಗಿ ಈ ಆಡಿಯೋ ಕಥೆಗಳನ್ನು ಕರ್ನಾಟಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ತಯಾರಿಸಿದ್ದಾರೆ. ಕಥೆ ಹೇಳುವಿಕೆಯ ಶಕ್ತಿಯ ಜೊತೆಗೆ ಡಿಜಿಟಲ್ ಮಾಧ್ಯಮವು ನೀಡುವ ಹೊಸ ಸಾಧ್ಯತೆಗಳ ಮೂಲಕ ಮಕ್ಕಳ ಭಾಷಾ ಕಲಿಕೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ.