
Sign up to save your podcasts
Or


Writer: ಅಪರ್ಣಾ ಕಪೂರ್
Narrator: ಮಲ್ಲಿಕಾರ್ಜುನಪ್ಪ. ಹೆಚ್.ಒ.
Editor: ಮಹಮದ್ ಖಯೇದ್ ಕೆ
ಘುಮ್-ಘುಮ್ ಘರಿಯಾಲಿ ಮೊದಲ ಬಾರಿಗೆ ಈಜಲು ಹೋದಾಗ, ತನ್ನ ಕುಟುಂಬವು ತನ್ನನ್ನು ಬಿಟ್ಟು ಈಜಿ ಹೋಗಿರುವುದರ ಅರಿವಾಯಿತು. ಅವರನ್ನು ಆಕೆ ಹುಡುಕುತ್ತಾಳೆಯೇ? ನೀವೂ ಘುಮ್-ಘುಮ್ ಜೊತೆಗೆ ಗಂಗಾ ನದಿಯಲ್ಲಿ ಈಜಿ ದಾರಿಯುದ್ದಕ್ಕೂ ಅದ್ಭುತವಾದ ಜೀವಿಗಳನ್ನು ಭೇಟಿ ಮಾಡಿ.
೧. ನೀರಿನಲ್ಲಿ ವಾಸಿಸುವ ಜೀವಿಗಳನ್ನು ಹೆಸರಿಸುವುದು.
Writer: ಸುಜಾತಾ ಎಸ್ ಎ
Narrator: ಸುಜಾತಾ ಎಸ್ ಎ
Editor: ಮಾಯಾದೇವಿ ತುರಂಗ
ಅಮ್ಮ ಚಿಂಕಿ ಮಿಂಕಿಯರನ್ನು ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಲು ತಯಾರಿ ಮಾಡುತ್ತಿದ್ದರು.ಶಾಲೆಯಲ್ಲಿ ಮಿಸ್ ಹೇಳುವ ಪಾಠಗಳನ್ನು ಕೇಳುತ್ತಾ, ಮನೆಗೆ ಮರಳಿದ ನಂತರ ಶಾಲೆಯಲ್ಲಿ ನೀಡುವ ಮನೆಕೆಲಸವನ್ನು ಮಾಡುತ್ತಿದ್ದರು. ಯಾಂತ್ರಿಕ ಪ್ರಪಂಚವನ್ನೇ ನೋಡುತ್ತಿದ್ದ ಚಿಂಕಿ ಮಿಂಕಿಯರು ಅಪ್ಪ ಅಮ್ಮನ ಜೊತೆ ಹಳ್ಳಿಗೆ ಹೋಗುವರು. ಹಳ್ಳಿಯ ತೋಟಕ್ಕೆ ಹೋದ ಚಿಂಕಿ ಮಿಂಕಿಯರು ತೋಟದಲ್ಲಿ ಏನು ಮಾಡುವರು? ಅಲ್ಲಿನ ಪರಿಸರದ ಜೊತೆ ಹೇಗೆ ಸಮಯ ಕಳೆಯುವರು? ಎಂಬುವುದನ್ನು ಈ ಕಥೆಯ ಮೂಲಕ ತಿಳಿಯಿರಿ.
೧. ವಿಧ ವಿಧದ ಧಾನ್ಯಗಳನ್ನು ಗುರುತಿಸುವ ಚಟುವಟಿಕೆಯನ್ನು ಮಾಡುವುದು. (ಚಿತ್ರ ತೋರಿಸುವ ಮೂಲಕ, ಮನೆಯಿಂದ ಧಾನ್ಯಗಳನ್ನು ತಂದು ತೋರಿಸುವುದು)
೨. ಹಳ್ಳಿಯ ಸೊಗಡಿನ ಬಗ್ಗೆ ವಿಡಿಯೋ ತೋರಿಸುವುದು ಮತ್ತು ಅನುಭವಗಳನ್ನು ಹಂಚಿಕೊಳ್ಳುವುದು.
Writer: ಪ್ರದೀಪ್ ಕೆ
Narrator: ಕೌಸರ್ ಬಾನು ಆರ್
Editor: ಶಿವರಾಜ ವಿ ಎ
ಹಳ್ಳಿಯಲ್ಲಿ ಸಣ್ಣ ಮಕ್ಕಳು ಕಣೆಯಾಗುತ್ತಿರುತ್ತಾರೆ, ಚಿಂಟು ಹೇಗೆ ಆ ಕಳ್ಳರನ್ನ ಪತ್ತೆ ಮಾಡುತ್ತಾನೆ ಅಂತ ತಿಳಿಯಲು ಈ ಕಥೆ ಓದಿ.
೧. ಕಣ್ಣ ಮುಚ್ಚಾಲೆ ಆಟ ಆಡಿಸುವುದು.
೨. ಎರಡು ಒಂದೇ ರೀತಿಯ ಚಿತ್ರವನ್ನು ನೀಡಿ ವ್ಯತ್ಯಾಸವನ್ನು ಗುರುತಿಸುವುದು.
Writer: ಮಾತಂಗಿ ಸುಬ್ರಮಣಿಯನ್
Narrator: ಲಲಿತಾ, ಕನ್ಯಾಕುಮಾರಿ ಪಾಟೀಲ್, ಯಶವಂತ ಕಾಳೆ, ಲಕ್ಷ್ಮಿ
Editor: ವಿಜಯ ಕುಮಾರ್
ಕಾವ್ಯಳ ಕುಟುಂಬ ಇತ್ತೀಚೆಗಷ್ಟೆ ಹಳ್ಳಿಯಿಂದ ಬೆಂಗಳೂರಿಗೆ ಬಂದು ನೆಲೆಸಿದೆ. ತರಗತಿಗೆ ಅವಳು ಹೊಸಬಳು. ಅವಳು ಚಿಟ್ಟೆಗಳ ವನಕ್ಕೆ ಭೇಟಿ ಇತ್ತಾಗ ತನಗೂ ಚಿಟ್ಟೆಗಳಿಗೂ ಇರುವ ವಿಶೇಷ ನಂಟನ್ನು ಮನಗಾಣುತ್ತಾಳೆ. ಅವಳಿಗೆ ಹೊಸ ಗೆಳೆತನವೂ ದೊರೆಯುತ್ತದೆ.
೧.ಮಕ್ಕಳಿಗೆ ಕ್ರಿಮಿಕೀಟಗಳ ಪಟ್ಟಿಯನ್ನು ಮಾಡುವಂತೆ ತಿಳಿಸುವುದು.
೨. ವನಕ್ಕೆ ತೆರಳಿದಾಗ ಆಗುವ ಅನುಭವಗಳನ್ನು ಹಂಚಿಕೊಳ್ಳುವುದು, ಮತ್ತು ಚಿಟ್ಟೆಗಳ ಬಗ್ಗೆ ಚರ್ಚಿಸುವುದು.
೩.ಚಿಟ್ಟೆಗಳಿಗಿರುವ ಬಣ್ಣಗಳನ್ನು ಹೆಸರಿಸುವುದು. ೪ ಹಳ್ಳಿ ಮತ್ತು ಪೇಟೆಗೆ ಇರುವ ವ್ಯತ್ಯಾಸವನ್ನು ಚರ್ಚಿಸುವುದು.
Writer: ರಾಘವೇಂದ್ರ ಕುಲಕರ್ಣಿ
Narrator: ರಾಘವೇಂದ್ರ ಕುಲಕರ್ಣಿ
Editor: ಬಸವರಾಜ ಪಾವಲೆ
ಹಿಂದೆ ಒಬ್ಬ ಚಕ್ರವರ್ತಿ ಶಿವಾಜಿ ಮಹಾರಾಜ ರಾಜ್ಯವನ್ನು ಆಳುತ್ತಿದ್ದ. ಶತ್ರು ಪಕ್ಷದವರೊಂದಿಗೆ ಸೋಲು ಉಂಟಾಗುತ್ತದೆ. ಆತ ನಿಸ್ಸಹಾಯಕನಾಗುತ್ತಾ, ಮುಂದೆ ಆತ ಏನು ಮಾಡಿರಬಹುದು? ಯಾರಿಂದ ಪ್ರೇರೇಪಿತನಾಗಿರಬಹುದು ಎಂಬುವುದನ್ನು ಈ ಕಥೆಯ ಮೂಲಕ ತಿಳಿಯಬಹುದು.
೧. ಶಿವಾಜಿ ಚಿತ್ರವನ್ನು ಬಿಡಿಸುವುದು ಮತ್ತು ಚಾರ್ಟ್ ನಲ್ಲಿ ಅಂಟಿಸಿ ಅವರ ವಿಚಾರಗಳನ್ನು ಬರೆಯುವುದು.
೨. ಸೋಲು ಮತ್ತು ಗೆಲುವಿನ ಪ್ರೇರಣಾತ್ಮಕ ಅಂಶಗಳನ್ನು ಪಟ್ಟಿ ಮಾಡುವುದು.
Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಕಲ್ಲೇಶ್ವರಪ್ಪ
Editor: ಕುಮಾರ್ ವೈ
ಒಂದು ದಿನ ಹಿರಿಯ ವ್ಯಕ್ತಿಗಳು ಕೆಲಸ ಮುಗಿಸಿ ಮನೆಗೆ ಬಂದರು. ಪುಸ್ತಕದ ಹಲವು ಪುಟಗಳು ಹರಿದು ಬಿದ್ದಿರುವುದನ್ನು ಕಾಣುವರು. ಇದೆಲ್ಲ ಮಕ್ಕಳ ಕೆಲಸ ಎಂದು ತಿಳಿಯುವರು. ಮಕ್ಕಳಿಗೆ ಪುಸ್ತಕದ ಪ್ರಾಮುಖ್ಯತೆಯನ್ನು ತಿಳಿಸಲು ಏನು ಉಪಾಯ ಮಾಡಿರಬಹುದು! ಆ ಮಕ್ಕಳಿಗೆ ಅರಿವು ಮೂಡಿಸಿದ ಮಹಾನ್ ವ್ಯಕ್ತಿ ಯಾರಿರಬಹುದು! ಕುತೂಹಲಕಾರಿ ಕಥೆಯನ್ನು ಕೇಳಿರಿ.
೧. ತಮಗೆ ಇಷ್ಟವಾದ ಪುಸ್ತಕಗಳನ್ನು ಹೆಸರಿಸುವುದು, ಮತ್ತು ಅದರ ಬಗ್ಗೆ ಹೇಳುವುದು ಮತ್ತು ಬರೆಯುವುದು.
೨. ಪುಸ್ತಕದ ಉಪಯೋಗಗಳನ್ನು ಪಟ್ಟಿ ಮಾಡುವುದು.
Writer: ರಾಘವೇಂದ್ರ ಕುಲಕರ್ಣಿ
Narrator: ರಾಘವೇಂದ್ರ ಕುಲಕರ್ಣಿ, ಕನ್ಯಾಕುಮಾರಿ ಪಾಟೀಲ್
Editor: ಭಾಗ್ಯಶ್ರೀ
ಕಾಡಿನಲ್ಲಿ ಒಂದು ಮರವಿತ್ತು. ಅಲ್ಲಿನ ಕೋಗಿಲೆಯ ಹಾಡು ಅತಿ ಮಧುರ. ಆದರೆ ಬೇರೆ ಪಕ್ಷಿಗಳಿಗೆ ತೊಂದರೆಯಾಗುತ್ತಿತ್ತು. ಆ ಪಕ್ಷಿಗಳು ಏನು ಮಾಡಿದವು ಮತ್ತು ಕೋಗಿಲೆಯು ಎರಡನೆಯ ಕೋಗಿಲೆಗೆ ಏನು ಹೇಳಿರಬಹುದು ಎಂದು ತಿಳಿಯಲು, ಈ ಕಥೆಯನ್ನು ಕೇಳಿ.
೧. ಪಕ್ಷಿಗಳ ಶಬ್ಧವನ್ನು ಕೇಳಿಸಿ , ಗುರುತಿಸುವುದು.
೨. ಕಥೆಯನ್ನು ಕೇಳಿ, ಚಿತ್ರವನ್ನು ಬಿಡಿಸುವುದು.
Writer: ಜಿ.ಎಂ. ಜ್ಯೋತಿ
Narrator: ಜಿ.ಎಂ. ಜ್ಯೋತಿ
Editor: ಮಾಯಾದೇವಿ ತುರಂಗ
ಹಳ್ಳಿಯ ಹೊರಭಾಗದಲ್ಲಿ, ದಾರಿಯ ಪಕ್ಕದಲ್ಲಿರುವ ಮರದ ಕೆಳಗೆ ಕುಳಿತಿರುವ ಋಷಿಮುನಿ ಏಕಾಂತದಲ್ಲಿ ಧ್ಯಾನಸ್ಥನಾಗಿದ್ದ. ಆ ದೇಶದ ಸಾಮ್ರಾಟನಿಗೆ ಗೌರವ ಸಲ್ಲಿಸದ ಋಷಿಮುನಿಯ ಮೇಲೆ ಸಾಮ್ರಾಟನಿಗೆ ಮುಜುಗರ ಮತ್ತು ಕೋಪ. ಋಷಿಮುನಿ ಮತ್ತು ಸಾಮ್ರಾಟನ ನಡುವೆ ನಡೆದ ದೊಡ್ಡ ಶ್ರೀಮಂತ ಯಾರು ಎಂಬ ಸಂಭಾಷಣೆನ್ನು ಈ ಕಥೆಯ ಮೂಲಕ ಕೇಳಿ.
೧. ಶಬ್ದ ಪದಗಳ ಆಟ ಆಡಿಸುವುದು ( ಕಥೆಯಲ್ಲಿ ಬರುವ ಹೊಸ ಪದಗಳನ್ನು ಗುರುತಿಸಿ, ಅದರ ಅರ್ಥವನ್ನು ಹುಡುಕುವುದು)
Writer: ಬುಲ್ ಬುಲ್ ಶರ್ಮಾ
Narrator: ಸಂಗರಡ್ಡಿ
Editor: ಮಹಾಂತೇಶ್ ಎಸ್ ಕುಂಬಾರ್
ಹೊಸ ಶೂ ಕೊಳ್ಳಲು ಮೀರಾ ಪೇಟೆಗೆ ಹೊರಟಿದ್ದಾಳೆ. ದಾರಿಯಲ್ಲಿ ಮೀರಾ, ಆಕೆಯ ತಮ್ಮ ಹಾಗೂ ಅಮ್ಮ ಹಕ್ಕಿಯೊಂದನ್ನು ರಕ್ಷಿಸುತ್ತಾರೆ. ಹಿಮಾಲಯದ ತಪ್ಪಲಿನ ಬೆಟ್ಟಗುಡ್ಡಗಳ ನಡುವಿನ ಬದುಕಿನ ಚಿತ್ರಣ ಕಟ್ಟಿಕೊಡುವ ಸುಂದರ ಕಥೆಯನ್ನು ಓದಿ...
೧. ಕಾಗದದಿಂದ ಹಕ್ಕಿ ತಯಾರಿಸುವುದು.
೨. ದೊಡ್ಡ ಬೆಟ್ಟ, ಪುಟ್ಟ ಹಕ್ಕಿ, ಮರಗಳು, ಗೂಡು ಇತ್ಯಾದಿ ಚಿತ್ರಗಳನ್ನು ಬಿಡಿಸುವುದು.
Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಶಾಂತಕುಮಾರ ಎಚ್ ಎನ್
Editor: ನಟೇಶಕುಮಾರ್ ಆರ್ ಜಿ
ಒಂದು ಊರಿನಲ್ಲಿ ಇಲಿಗಳ ಸಂಸಾರ ವಾಸವಾಗಿತ್ತು. ಅವರಿಗೆ ಒಬ್ಬಳು ವಯಸ್ಸಾದ ಮಗಳಿದ್ದಳು. ಆಕೆಗೆ ಮದುವೆ ಮಾಡಿಸಬೇಕೆಂದು ತಂದೆ ತಾಯಿಗಳು ಯೋಚನೆ ಮಾಡುತ್ತಿದ್ದರು. ಇಲಿ ತಾಯಿಗೆ ಇಡೀ ಜಗತ್ತಿನಲ್ಲಿ ಯಾರು ದೊಡ್ಡವರಿದ್ದಾರೋ ಅವರಿಗೆ ಮದುವೆ ಮಾಡಿಕೊಡಬೇಕೆಂಬ ಆಸೆಯಾಯಿತು. ಯಾರನ್ನೆಲ್ಲಾ ಮದುವೆಯಾಗುವಂತೆ ಕೇಳುವರು? ಮತ್ತು ಆಕೆಯನ್ನು ಮದುವೆಯಾಗುವ ವರನನ್ನು ತಿಳಿಯಲು ಈ ಕಥೆಯನ್ನು ಆಲಿಸಿರಿ.
೧.ಸೂರ್ಯ, ಮೋಡ, ಗಾಳಿ ಇವುಗಳ ಬಗ್ಗೆ ೪-೫ ವಾಕ್ಯಗಳಲ್ಲಿ ಬರೆಯುವುದು.
೨. ಇಲಿಯ/ ಸನ್ನಿವೇಶದ ಚಿತ್ರ ಬಿಡಿಸಿ ಶೀರ್ಷಿಕೆ ನೀಡುವುದು.
From the publisher's feed