ಕಥೆ ಖಜಾನೆ - ಕನ್ನಡ

ಕಥೆ ಖಜಾನೆ - ಕನ್ನಡ

By Kathe Khajane Team, IT for Change
Download on the App Store

ಕಥೆ ಖಜಾನೆ - ಕನ್ನಡ episodes

  • ಒಂಟೆಯ ಬಯಸಿದ ಕೆಲಮ್

    Writer: ಅನು ಚೌಧರಿ-ಸೊರಾಬ್ಜಿ
    Narrator: ಮಲ್ಲಿಕಾರ್ಜುನಪ್ಪ. ಹೆಚ್.ಒ.
    Editor: ದಿನೇಶ ಎಲ್

    ಪಬುನ ಸೋದರ ಸೊಸೆ ಕೇಲಂ ತನ್ನ ಹುಟ್ಟುಹಬ್ಬಕ್ಕೆ ಒಂಟೆ ಬೇಕೆಂದು ಕೇಳಿದಳು. ಪಬು ಒಂಟೆಗಾಗಿ ರಾಜಸ್ತಾನದಿಂದ ಲಂಕಾದವರೆಗೆ ಪ್ರಯಾಣಿಸಿದ. ಅವನ ಈ ಪ್ರಯಾಣ ಅವನನ್ನು ಎಲ್ಲಿಗೆ ಕರೆದುಕೊಂಡು ಹೋಗಿತು ನೋಡಿ.

    ೧. ಕಥೆಗೆ ಸಂಬಂಧಿಸಿ ಸರಳ ಪ್ರಶ್ನೆಗಳನ್ನು ಕೇಳಿ. 

    ೨.ರಾಜಸ್ತಾನವನ್ನು ನಕ್ಷೆಯಲ್ಲಿ ಗುರುತಿಸಿ. 

    ೩. ಮಕ್ಕಳಿಗೆ ಒಂಟೆಯ ಬಗ್ಗೆ ಆಸಕ್ತಿದಾಯಕ ಮಾಹಿತಿ ನೀಡಿ (ಅದು ಯಾವ ಪರಿಸರದಲ್ಲಿ ಬದುಕುತ್ತದೆ?ಅದರ ವೈಶಿಷ್ಟ್ಯತೆಗಳು ಏನು?


    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ಪ್ರಾಣಿ ಮತ್ತು ಪಕ್ಷಿಗಳು
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    7 min
  • ಒಟ್ಟಿಗೆ ಬಾಳುವ ಆನಂದ

    Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
    Narrator: ಸರಸ್ವತಿ ಬಿ
    Editor: ಹೇಮಂತ್ ಕುಮಾರ್ ಬಿ ಜೆ

    ಒಂದು ಹಳ್ಳಿ, ಅಲ್ಲಿ ರೈತನೊಬ್ಬನ ಹೊಲ ಇತ್ತು. ಅಲ್ಲಿ ಒಂದು ಬೇವಿನ ಮರವಿತ್ತು. ಹೇಗೋ ಏನೋ ಅದರ ಕೆಳಗೆ ಒಂದು ಗುಂಡನೆಯ ಕಲ್ಲು ಬಂದು ನಿಂತುಕೊಂಡಿತು. ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ಗಾದೆ ಮಾತು ಹೇಗೆ ಅನ್ವಯವಾಗುತ್ತದೆ ಮತ್ತು ನಮ್ಮ ನಮ್ಮ ನಡುವೆ ಇರುವ ದ್ವೇಷ ಅಸೂಯೆಗಳನ್ನು ಮರೆತು ಎಲ್ಲರನ್ನೂ ಪ್ರೀತಿಸುತ್ತಾ ಬಾಳಿದರೆ ಬದುಕು ಸುಖಮಯವಾಗಿರುತ್ತದೆ. ಎಂಬ ಉತ್ತಮ ನೀತಿಕಥೆಯನ್ನು ನೀವು ಕೇಳಬಹುದು.

    ೧. ಕಥೆಯ ಹಂತವನ್ನು ಗುಂಪಿನಲ್ಲಿ ಬರಹದ ಮೂಲಕ ವ್ಯಕ್ತ ಪಡಿಸುವುದು.


    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಕುಟುಂಬ
    ಗುರುತು ಪಟ್ಟಿ: ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    5 min
  • ಕನಸುಗಾರ ಕಲಾಂ

    Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
    Narrator: ಸರಸ್ವತಿ ಬಿ
    Editor: ಬಸವರಾಜಪ್ಪ ಎನ್

    ಕನಸುಗಳೇ ಆಲೋಚನೆಗಳು,ಕೃತಿ ಆಲೋಚನೆಗಳ ಫಲ ಎಂದು ತೋರಿಸಿಕೊಟ್ಟ ಶ್ರೇಷ್ಠ ವಿಜ್ಞಾನಿ ಅಬ್ದುಲ್ ಕಲಾಂ ರವರ ಕಥೆಯನ್ನು ತಿಳಿದುಕೊಳ್ಳಿ.

    ೧. ಅಬ್ದುಲ್ ಕಲಾಂ ಅವರ ಚಿತ್ರವನ್ನು ರಚಿಸಿ, ಅವರ ಬಗ್ಗೆ ಬರೆಯುವುದು. 

    ೨. ತಮ್ಮ ಕನಸುಗಳನ್ನು ಸ್ನೇಹಿತರ ಜೊತೆ ಹಂಚಕೊಳ್ಳುವುದು ಅಥವಾ ಬರಹ ರೂಪದಲ್ಲಿ ವ್ಯಕ್ತ ಪಡಿಸುವುದು.


    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಕಲೆ ಮತ್ತು ಸಂಸ್ಕ್ರುತಿ
    ಗುರುತು ಪಟ್ಟಿ: ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    5 min
  • ಕರುಣೆಯ ಹಾದಿ

    Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
    Narrator: ಕಲ್ಲೇಶ್ವರಪ್ಪ
    Editor: ಬ್ರಿಜೇಶ್ ಕುಮಾರ್ ಜಿ ವಿ

    ಆ ಹುಡುಗ ಜನಿಸಿದ್ದು, ಬಂಗಾಳದ ಕಟಕ್ ನಲ್ಲಿ. ಆತ ಜಾನಕೀನಾಥ ಬೋಸ್ ಮತ್ತು ಪ್ರಭಾವತಿ ದೇವಿಯವರ ಒಂಭತ್ತನೇ ಪುತ್ರ. ಒಂದು ದಿನ ತಾಯಿ ಮಗನ ಕೊಠಡಿಗೆ ಬಂದಾಗ ಆಶ್ಚರ್ಯ ಕಾದಿತ್ತು. ಕಪಾಟಿನಿಂದ ಇರುವೆಗಳು ಸಾಲು ಸಾಲಾಗಿ ಹರಿದು ಬರುತ್ತಿದ್ದವು. ಕಪಾಟನ್ನು ತೆರೆದು ನೋಡಿದಾಗ ಪುಸ್ತಕಗಳ ನಡುವೆ ರೊಟ್ಟಿಗಳಿದ್ದವು. ಮುಂದೇನಾಯಿತು? ಈ ಕಥೆಯ ಮೂಲಕ ತಿಳಿಯಿರಿ.    

    ೧. ಪುಸ್ತಕದ ಮಹತ್ವವನ್ನು ತಿಳಿಯುವುದು. 

    ೨. ಗ್ರಂಥಾಲಯದ ಪರಿಚಯ ಮಾಡಿಸುವುದು.


    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ಕರುಣೆ ಮತ್ತು ಕಾಳಜಿ
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    4 min
  • ಕಾಡಿಗೆ ಸ್ವಾಗತ

    Writer: ಭಾವನಾ ಮೆನನ್
    Narrator: ಹನುಮಂತಪ್ಪ ಸಿ
    Editor: ಕುಮಾರ್ ವೈ

    ತುಳಸಾ ತನ್ನ ಗೆಳತಿಯರೊಂದಿಗೆ ಕಾಡಿಗೆ ಹೊರಟಿದ್ದಾಳೆ. ಅರಣ್ಯಾಧಿಕಾರಿಗಳ ಜೊತೆ ಈ ಮಕ್ಕಳು ಕಾಡಿನ ವಿಶಿಷ್ಟ ಮತ್ತು ವಿಭಿನ್ನವಾದ ಅನುಭವ ಪಡೆದಿದ್ದು ಹೇಗೆ?

    ೧. ಕಾಡಿನ ಬಗ್ಗೆ ಚರ್ಚಿಸುವುದು. 

    ೨. ಕಾಡಿನ ಚಿತ್ರವನ್ನು ಬಿಡಿಸಲು ಹೇಳುವುದು. 

    ೩. ಎಲೆಗಳನ್ನುಸಂಗ್ರಹಿಸಿ ಅವುಗಳನ್ನು ಬೇರೆ ಬೇರೆ ಆಕೃತಿಯಲ್ಲಿ ಜೋಡಿಸುವುದು.


    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಪರಿಸರ ಮತ್ತು ವಾತಾವರಣ
    ಗುರುತು ಪಟ್ಟಿ: ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    10 min
  • ಕಾಡಿನ ಜೀವ ಕಾಡು ಪ್ರಾಣಿಗಳಲ್ಲಿದೆ

    Writer: ಸುಜಿತ್ ಕಾಮತ್
    Narrator: ರಾಧಾ
    Editor: ಡಾ. ಇಂದುಮತಿ ವಿ ಎಂ

    ಪ್ರಾಣಿಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹಕ್ಕು. ಪ್ರಾಣಿಗಳು ಇರುವವರೆಗೆ, ಕಾಡಿರುತ್ತದೆ. ಕಾಡು ಇರುವವರೆಗೆ, ಪ್ರಾಣಿಗಳು ಇರುತ್ತವೆ.    

    ೧. ಕಾಡು ಪ್ರಾಣಿಗಳು ಮತ್ತು ಸಾಕುಪ್ರಾಣಿಗಳನ್ನು ಹೆಸರಿಸುವುದು. 

    ೨. ಕಾಡುಪ್ರಾಣಿಗಳು ಮತ್ತು ಸಾಕುಪ್ರಾಣಿಗಳ ನಡುವೆ ವ್ಯತ್ಯಾಸವನ್ನು ಗುರುತಿಸುವುದು.  

    ೩. ಪ್ರಾಣಿಗಳ ಚಿತ್ರಸಂಗ್ರಹಣೆ ಮಾಡುವುದು.


    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ಪರಿಸರ ಮತ್ತು ವಾತಾವರಣ,ಪ್ರಾಣಿ ಮತ್ತು ಪಕ್ಷಿಗಳು
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    4 min
  • ಗಾಂಧಿ ಜೀವನದ ನಿಜಘಟನೆಗಳು

    Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
    Narrator: ನಳಿನಾಕ್ಷಿ ಜಿಎಂ
    Editor: ನಟೇಶಕುಮಾರ್ ಆರ್ ಜಿ

    ಗಾಂಧೀಜಿ ಅವರ ನೈಜ ಜೀವನದ ಘಟನೆ: ಬಾಪೂಜಿ ಏಕೆ ಅಂಗಿ ತೊಡುವುದಿಲ್ಲ? ಬಾಲಕ ಮತ್ತು ಬಾಪೂಜಿಯ ನಡುವೆ ನಡೆದ ವಿಚಾರ ವಿನಿಮಯ. ಬಾಲಕನ ಸಂದೇಹಕ್ಕೆ ಉತ್ತರವನ್ನು ನೀಡುವ ಕಥೆ ಇದು.    

    ೧. ಬಾಪೂಜಿಯವರಂತೆ ವೇಷ ಧರಿಸಿ,  ಅಭಿನಯಿಸುವುದು. 

    ೨.ಗಾಂಧೀಜಿಯವರ ಘೋಷವಾಕ್ಯವನ್ನು ಫ್ಲಾಶ್ ಕಾರ್ಡ್ ನಲ್ಲಿ ಬರೆಯುವುದು.


    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಇತಿಹಾಸ,ಜೀವನ ಕೌಶಲ್ಯ
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    3 min
  • ಗಾಳಿಯಾ ಬಲಾಬಲ

    Writer: ಅಂಜಲಿ ವೈದ್ಯ
    Narrator: ರಂಗಪ್ಪ ಕೆ.ವಿ
    Editor: ನಟೇಶಕುಮಾರ್ ಆರ್ ಜಿ

    ರೆಕ್ಕೆಗಳು, ಗಾಳಿಪಟಗಳು ಮತ್ತು ಹವಾಯಂತ್ರಗಳಲ್ಲಿ ಸಮಾನವಾಗಿರುವುದು ಏನು? ಇವುಗಳಲ್ಲಿ ಪ್ರತಿಯೊಂದೂ ಗಾಳಿಯ ನೆರವಿನಿಂದ ಚಲಿಸುತ್ತವೆ!

    ೧.ಗಾಳಿಪಟ ತಯಾರಿಸಿ ಆಕಾಶದೆತ್ತರ ಹಾರಲು ಬಿಡುವುದು. 

    ೨. ಬಲೂನಿಗೆ ಗಾಳಿ ಊದಿ  ಅದು ಹೇಗೆ ಚಲಿಸುತ್ತದೆ ಎಂದು ಗಮನಿಸುವುದು. 

    ೩. ಕಥೆಯನ್ನು ತಮ್ಮದೇ ಶೈಲಿಯಲ್ಲಿ ಹೇಳುವುದು.


    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ಪರಿಸರ ಮತ್ತು ವಾತಾವರಣ,ವಿಜ್ಞಾನ
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    2 min
  • ಗೆಳೆತನ

    Writer: ಸ್ವಂತ ಕಥೆ
    Narrator: ಶಹನಾಜ್ ಬೇಗಂ, ರೋಹಿಣಿ
    Editor: ಪ್ರೇಮಾ ಪಿ ಸ್ವಾಮಿ

    ಕುದುರೆ ಮತ್ತು ಒಂಟೆ ಒಳ್ಳೆಯ ಸ್ನೇಹಿತರು. ಇಬ್ಬರ ನಡುವೆ ಯಾರು ಹೆಚ್ಚು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಆನೆಯ ಬಳಿ ಹೋಗುವರು. ಆನೆಯ ಉಪಾಯ ಹೇಗಿತ್ತು? ಮತ್ತು ಸ್ನೇಹಿರ ಪ್ರಶ್ನೆಗೆ ಹೇಗೆ ಪರಿಹಾರ ಸಿಕ್ಕಿತು? ಈ ಕಥೆಯನ್ನು ಓದಿ ತಿಳಿಯಿರಿ.

    ೧. ತನ್ನ ಸ್ನೇಹಿತರ ಹೆಸರನ್ನು ಕಾಗದದಲ್ಲಿ ಬರೆಯುವುದು. 

    ೨. ಸ್ನೇಹಿತರ ಬಗ್ಗೆ ಮಾತನಾಡುವುದು. 

    ೩. ಸ್ನೇಹಕ್ಕೆ ಇರಬೇಕಾದ ಗುಣಲಕ್ಷಣಗಳನ್ನು ಪಟ್ಟಿ ಮಾಡುವುದು.


    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಕುಟುಂಬ,ಪ್ರಾಣಿ ಮತ್ತು ಪಕ್ಷಿಗಳು
    ಗುರುತು ಪಟ್ಟಿ: ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    4 min

About ಕಥೆ ಖಜಾನೆ - ಕನ್ನಡ

From the publisher's feed

2023-24ರ ಅವಧಿಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ), ಐಟಿ ಫಾರ್ ಚೇಂಜ್ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ನಡೆಸಿದ 'ಭಾಷಾ ಶಿಕ್ಷಣದಲ್ಲಿ ಡಿಜಿಟಲ್ ಕಥೆ-ಆಧಾರಿತ ಬೋಧನ ವಿಧಾನದ ಅಳವಡಿಕೆ' ಕರ್ಯಕ್ರಮದ ಅಡಿಯಲ್ಲಿ ನಡೆಸಿದ ಕಾರ್ಯಾಗಾರಗಳ ಭಾಗವಾಗಿ ಈ ಆಡಿಯೋ ಕಥೆಗಳನ್ನು ಕರ್ನಾಟಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ತಯಾರಿಸಿದ್ದಾರೆ. ಕಥೆ ಹೇಳುವಿಕೆಯ ಶಕ್ತಿಯ ಜೊತೆಗೆ ಡಿಜಿಟಲ್ ಮಾಧ್ಯಮವು ನೀಡುವ ಹೊಸ ಸಾಧ್ಯತೆಗಳ ಮೂಲಕ ಮಕ್ಕಳ ಭಾಷಾ ಕಲಿಕೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ.