
Sign up to save your podcasts
Or


ಲೇಖಕರು : ಸ್ಟೋರಿವೀವರ್ರಿಗಾಗಿ ಸೌರ ವ್ರೈಟರ್ಸ್ ಗ್ರೂಪ್
ನಿರೂಪಕರು : ಸುಂದರ್ ರಾಜ್
ಸಂಪಾದಕರು : ಸೌಮ್ಯ ಕೆ.ಎನ್
ಒಂದು ಬುದ್ಧಿವಂತ ಮೊಲ ತನ್ನ ಸ್ನೇಹಿತ ಆಮೆಗೆ ಸಹಾಯ ಮಾಡುತ್ತದೆ. ಅವೆರಡೂ ನರಿಯನ್ನು ಹೇಗೆ ಮೋಸಗೊಳಿಸಿದವು ಎಂಬುದನ್ನು ತಿಳಿಯಿರಿ.
ಆಹಾರಕ್ಕಾಗಿ ಒಂದು ಪ್ರಾಣಿ ಮತ್ತೊಂದು ಪ್ರಾಣಿಯನ್ನ ಅವಲಂಬಿಸಿರುವ ಆಹಾರ ಸರಪಳಿಯ ಕುರಿತು ಮಕ್ಕಳಿಗೆ ಈ ಕಥೆಯ ಮೂಲಕ ತಿಳಿಸಿಕೊಡಬಹುದು. ಅಲ್ಲದೇ, ಕಾಡಿನಲ್ಲಿ ಕಾಡುಪ್ರಾಣಿಗಳ ಜೀವನ ಶೈಲಿ ಹೇಗಿರುತ್ತದೆ ಎಂಬುದನ್ನ ಮನವರಿಕೆ ಮಾಡಿ ಕೊಡಬಹುದು. ಬುದ್ದಿವಂತಿಕೆ ಮತ್ತು ಸಂವಹನ ಕೌಶಲ್ಯವು ಸಂಕಷ್ಟದ ಸಂಧರ್ಭದಲ್ಲಿ ಹೇಗೆ ಬಳಕೆಗೆ ಬರುತ್ತದೆ ಎಂಬುದರ ಕುರಿತು ಚರ್ಚಿಸಬಹುದು. ಕಷ್ಟಕಾಲದಲ್ಲಿ ಸ್ನೇಹಿತರು ಪರಸ್ಪರ ನೆರವಾಗಬೇಕೆಂಬ ನೀತಿ ಮಕ್ಕಳಿಗೆ ಮನದಟ್ಟಾಗುವಂತೆ ಮಾಡುಬಹುದು. ಕಥೆಗೆ ಸಂಬಂಧಿಸಿದಂತೆ ಮಾಡಬಹುದಾದ ಕೆಲವು ತರಗತಿಯ ಚಟುವಟಿಕೆಗಳು :
ಲೇಖಕರು : ಸ್ಟೋರಿವೀವರ್ರಿಗಾಗಿ ಸಂಜೀವ್ ಜೈಸ್ವಾಲ್
ನಿರೂಪಕರು : ಮಧು ಹೆಚ್.ಸಿ
ಸಂಪಾದಕರು : ನೂರ್ ಫಾತೀಮಾ
ಗೆಳೆಯರ ಜೊತೆ ಓಟದಲ್ಲಿ ಎಲ್ಲರಿಗಿಂತ ಮುಂದೆ ಓಡುತ್ತಿದ್ದ ಜಿಂಕೆಗೆ ಇದ್ದಕ್ಕಿದ್ದಂತೆ ಏನಾಯ್ತು ನೋಡಿ?
ಈ ಕಥೆಯ ಮೂಲಕ ಮಕ್ಕಳಿಗೆ ಹೊಸ ಪದಗಳ ಪರಿಚಯ, ಸರಳ ವಾಕ್ಯ ರಚನೆ ಹಾಗೂ ವಿವಿಧ ರೀತಿಯ ಪ್ರಾಣಿಗಳ ಪರಿಚಯವನ್ನು ಮಾಡಿಕೊಡಬಹುದು. ಕಥೆಗೆ ಸಂಬಂದಿಸಿದಂತೆ ಮಾಡಬಹುದಾದ ಕೆಲವು ತರಗತಿಯ ಚಟುವಟಿಕೆಗಳು :
ಲೇಖಕರು : ಸ್ಟೋರಿವೀವರ್ರಿಗಾಗಿ ಬಿಜಲ್ ವಚ್ಚರಜಾನಿ
ನಿರೂಪಕರು : ಬಸವರಾಜಪ್ಪ
ಸಂಪಾದಕರು : ಬಸವರಾಜಪ್ಪ
ತಿನ್ನುವುದನ್ನು ಇಷ್ಟಪಡುವ ನೀಮಾಳನ್ನು ಭೇಟಿ ಮಾಡಿ. ಜಾರುವ ಲಿಚಿ, ಮೆತ್ತಗಿನ ನೇರಳೆ ಹಣ್ಣು, ಹುಳಿಯಾದ ಹುಣಸೆ, ಹೊಳೆಯುವ ಪಾಲಕ್ – ಅವಳಿಗೆ ಎಲ್ಲವೂ ಇಷ್ಟ!! ತಿನ್ನುತ್ತ, ಅಗಿಯುತ್ತ ವರ್ಷವಿಡಿ ಕಳೆಯುವ ನೀಮಾ ಜೊತೆ ನೀವೂ ಸೇರಿಕೊಳ್ಳಿ..
ಈ ಕಥೆಯ ಮೂಲಕ ಮಕ್ಕಳಿಗೆ ಋತುಗಳು ಹಾಗೂ ಅದರ ಗುಣಲಕ್ಷಣಗಳನ್ನು ತಿಳಿಸಿಕೊಡಬಹುದಲ್ಲದೇ ನಿರ್ದಿಷ್ಟ ಋತುಗಳಲ್ಲಿ ದೊರೆಯಬಹುದಾದ ವಿವಿಧ ತರಕಾರಿ ಮತ್ತು ಹಣ್ಣುಗಳು ಹಾಗೂ ಆರೋಗ್ಯ ವೃದ್ದಿಸುವಲ್ಲಿ ಅವುಗಳ ಮಹತ್ವದ ಕುರಿತು ತಿಳಿಸಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
ಲೇಖಕರು : ಸ್ಟೋರಿವೀವರ್ರಿಗಾಗಿ ರುಕ್ಮಿಣಿ ಬ್ಯಾನರ್ಜಿ
ನಿರೂಪಕರು : ಪ್ರಶಾಂತ್
ಸಂಪಾದಕರು : ಸೋಮಶೇಖರ್
ಮಕ್ಕಳು ತಮ್ಮ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ. ಪುಸ್ತಕ ಕೊಳ್ಳಲು ಹೋಗುವುದು ಅಂತಹ ಅನುಭವಗಳು ಹೇಗೆ ಮಜಾ ಕೊಡುತ್ತವೆಂದು ತಿಳಿಸುತ್ತದೆ.
ಪುಸ್ತಕಗಳ ಪ್ರಾಮುಖ್ಯತೆಯನ್ನು ಚರ್ಚಿಸುವುದರ ಮೂಲಕ ಮಕ್ಕಳಿಗೆ ಪುಸ್ತಕ ಓದುವಂತೆ ಪ್ರೇರೇಪಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
ಲೇಖಕರು : ಸ್ಟೋರಿವೀವರ್ರಿಗಾಗಿ ಮ್ಯಾಥ್ಯೂ ಕಲೀಲ್
ನಿರೂಪಕರು : ನಟೇಶ್ ಕುಮಾರ್ ಆರ್.ಜಿ
ಸಂಪಾದಕರು : ನಟೇಶ್ ಕುಮಾರ್ ಆರ್.ಜಿ
ಅಮೀರ್‌ನಿಗೆ ಫಾರೂಕಜ್ಜನ ತೋಟ ಎಂದರೆ ತುಂಬಾ ಇಷ್ಟ. ಆದರೆ, ಯಾವುದೋ ಕೀಟಗಳು ತೋಟದ ಗಿಡಗಳನ್ನೆಲ್ಲ ತಿನ್ನುತ್ತಿವೆ. ಕೀಟಗಳಿಂದ ಗಿಡಗಳನ್ನು ರಕ್ಷಿಸಲು ಅಮೀರ್ ಏನು ಮಾಡಬಹುದು?
ಪರಿಸರದ ಪ್ರಾಮುಖ್ಯತೆಯನ್ನ ಅರಿತು ಪರಿಸರದೊಂದಿಗೆ ಉತ್ತಮ ಭಾಂಧವ್ಯವನ್ನು ಹೊಂದುವ ಮೂಲಕ ಅದನ್ನ ಉಳಿಸಿ-ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡುವ ಸುಸ್ಥಿರ ಅಭಿವೃದ್ಧಿಯ ಕುರಿತಾಗಿ ಮಕ್ಕಳಿಗೆ ತಿಳಿಸಬಹುದು. ಮಕ್ಕಳಿಗೆ ಪರಿಸರದ ಕುರಿತು ಆಸಕ್ತಿ ಮೂಡಿಸಿ ಕೈದೋಟ ಬೆಳೆಸಲು ಪ್ರೇರೇಪಿಸುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರೇಮವನ್ನು ಹುಟ್ಟಿಸಬಹುದು. ಕಥೆಗೆ ಸಂಬಂದಿಸಿದಂತೆ ಮಾಡಬಹುದಾದ ಕೆಲವು ತರಗತಿಯ ಚಟುವಟಿಕೆಗಳು :
ಲೇಖಕರು : ಸ್ಟೋರಿವೀವರ್ರಿಗಾಗಿ ಸೋರಿತ್ ಗುಪ್ತೋ
ನಿರೂಪಕರು : ಪ್ರದೀಪ್
ಸಂಪಾದಕರು : ಚಂದ್ರಶೇಖರ್
ಬಂಟಿ ಎಂಬ ಹುಡುಗಿಗೆ ಸೋಪು ಹಚ್ಚಿ ಸ್ನಾನ ಮಾಡುವುದು ಎಂದರೆ ಚೂರು ಇಷ್ಟವಿಲ್ಲ. ಬಂಟಿ ಒಂದು ರಾತ್ರಿ ಕನಸನ್ನು ನೋಡುತ್ತಾಳೆ. ಕನಸಿನಲ್ಲಿ ಅವಳು ಏನನ್ನು ನೋಡುತ್ತಾಳೆಂದು ತಿಳಿಯೋಣಾ ಬನ್ನೀ?
ಮಕ್ಕಳಿಗೆ ದೈನಂದಿನ ಜೀವನದಲ್ಲಿ ಸ್ವಚ್ಛತೆಯ ಪ್ರಾಮುಖ್ಯತೆ ಮತ್ತು ಆರೋಗ್ಯದ ಬಗ್ಗೆ ಅರಿವುಂಟಾಗುವಂತೆ ಮಾಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :
ಲೇಖಕರು : ಸ್ಟೋರಿವೀವರ್ರಿಗಾಗಿ ಶಾಮಿಮ್ ಪದಮ್ಸೀ
ನಿರೂಪಕರು : ರೇಷ್ಮಾ
ಸಂಪಾದಕರು : ನೂರ್ ಫಾತಿಮಾ
ಹೊಲಗಳಲ್ಲಿ ತೆನೆ ಕಾಳುಗಳನ್ನು ತಿನ್ನಲು ಬರುವ ಪಕ್ಷಿಗಳು ಬೆದರಿ ಓಡಿ ಹೋಗುವಂತೆ ಮಾಡಲು ಬೆದರುಬೊಂಬೆಗಳನ್ನು ಕಟ್ಟಿರುತ್ತಾರೆ. ಆದರೆ ಪುಟ್ಟ ಗೌರಿ ಯೋಚಿಸುವುದೇ ಬೇರೆ! ಅದೇನೆಂದು ಓದಿ ತಿಳಿಯಿರಿ.
ಈ ಕಥೆಯ ಮೂಲಕ ಮಕ್ಕಳೊಂದಿಗೆ ಕನಸುಗಳ ಕುರಿತಾಗಿ ಚರ್ಚಿಸಬಹುದು. ಮನೆಯಲ್ಲಿ ಹಿರಿಯರಿಗೆ ಮಕ್ಕಳು ಮಾಡುವ ಸಹಾಯಗಳ ಕುರಿತು ಚರ್ಚಿಸಬಹುದು. ಮಕ್ಕಳೊಂದಿಗೆ ಸಂತೋಷ, ದುಖಃ, ಭಯ ಮುಂತಾದ ಭಾವನೆಗಳ ಬಗ್ಗೆ ಚರ್ಚಿಸಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು:
ಲೇಖಕರು : ಸ್ಟೋರಿವೀವರ್ರಿಗಾಗಿ ಸೌಮ್ಯ ರಾಜೇಂದ್ರನ್
ನಿರೂಪಕರು : ಶ್ರೀನಿವಾಸ್ ಕುಮಅರ್
ಸಂಪಾದಕರು : ವೀರಭದ್ರಯ್ಯ ಎಂಬಿ
ಮನೆಯಲೊಂದು ಇಲಿ ಸೇರಿಕೊಂಡಿದೆ. ಇಲಿಯಿಂದ ಏನೆಲ್ಲಾ ಅವಾಂತರವಾಯಿತು ಗೊತ್ತಾ. ಪುಟಾಣಿಗಳಿಗೆ ಮುದ ನೀಡುವ ಕತೆ ಇದು.
ಮನೆಯಲ್ಲಿ ಇಲಿಗಳಿರುವುದರಿಂದ ಆಗುವುದರ ಅನಾಹುತ ಹಾಗೂ ಅವುಗಳು ಮನೆಗೆ ಬಾರದಂತೆ ತಡೆಯುವ ಕ್ರಮಗಳ ಕುರಿತು ಮಕ್ಕಳಿಗೆ ತಿಳಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
ಲೇಖಕರು : ಸ್ಟೋರಿವೀವರ್ರಿಗಾಗಿ ವೀಣ ಶೇಷಾದ್ರಿ
ನಿರೂಪಕರು : ಕೆ.ಜಿ ಬಸವರಾಜ್
ಸಂಪಾದಕರು : ಸಿದ್ದರಾಮೇಶ್ವರ
ಒಂದು ದಿನ ಬೆಳಗ್ಗೆ ಕಟ್ಟಿಗೆ ಕಡಿವ ಗುರಾ ಸ್ವಲ್ಪ ಸೌದೆಯನ್ನು ತರಲು ಕಾಡಿಗೆ ಹೊರಟ. ಒಂದು ಮರವನ್ನು ಏರಿ ಒಂದು ದೊಡ್ಡ ರೆಂಬೆಯ ಕೊನೆಯಲ್ಲಿ ಕುಳಿತುಕೊಂಡ. ನಂತರ ತಾನು ಕುಳಿತಿದ್ದ ರೆಂಬೆಯನ್ನು ಕಡಿಯಲು ಶುರು ಮಾಡಿದ. ಆ ಹಾದಿಯಲ್ಲಿ ಹೋಗುತ್ತಿದ್ದ ಗ್ರಾಮದ ಪೂಜಾರಿ, ಮರ ಗುರಾನನ್ನು ನೋಡಿ ನಿಂತು ಮಾತಾಡಿದ. ಹೀಗೆ ಮಾಡಿದರೆ ರೆಂಬೆ ಮುರಿದು, ನೀನು ಕೆಳಗೆ ಬಿದ್ದು ಸಾಯುವೆ ಎಂದು ಪೂಜಾರಿ ಎಚ್ಚರಿಸಿದ. ಮುಂದೇನಾಯಿತು ಎಂದು ತಿಳಿಯಲು ಇಥಿಯೋಪಿಯಾದ ಈ ಜಾನಪದ ಕಥೆ ಓದಿ.
ಕಥೆಯ ಮೂಲಕ ಮಕ್ಕಳಿಗೆ ಮರಗಳ ಅವಶ್ಯಕತೆ ಹಾಗೂ ಅವುಗಳ ನಾಶದಿಂದ ಆಗುವ ಪರಿಣಾಮಗಳ ಕರಿತು ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
ಲೇಖಕರು : ಸ್ಟೋರಿವೀವರ್ರಿಗಾಗಿ ಅರುಂಧತಿ ವೆಂಕಟೇಶ್
ನಿರೂಪಕರು : ನಟೇಶ್ ಕುಮಾರ್ ಆರ್.ಜಿ
ಸಂಪಾದಕರು : ನಾಗವೇಣಿ
ಅಜ್ಜ ಹಾಗೇ ಸುಮ್ಮನೆ ಸಂಜೆ ಅಡ್ಡಾಡಲು ಸಿದ್ಧವಾಗುತ್ತಿದ್ದರು. ಆದರೆ, ಕೈ ಚೀಲದಲ್ಲಿ ಏನೆಲ್ಲಾ ಎಂದು ನೆನಪೇ ಇರುತ್ತಿರಲಿಲ್ಲ. ಸದ್ಯ, ಅವರಿಗೆ ಸಹಾಯ ಮಾಡಲು ಸುಜ್ಜು ಇದ್ದಾನಲ್ಲ. ಈ ಪುಸ್ತಕ ವಿರುದ್ಧಾರ್ಥ ಕಲ್ಪನೆಗಳ ಬಗ್ಗೆ ತಿಳಿಸುತ್ತದೆ.
ಕಥೆಯ ಮೂಲಕ ಮಕ್ಕಳಿಗೆ ಹೊಸಪದಗಳ ಪರಿಚಯ ಹಾಗೂ ವಾಕ್ಯ ರಚನೆಯ ಬಗ್ಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
From the publisher's feed