ಕಥೆ ಖಜಾನೆ - ಕನ್ನಡ

ಕಥೆ ಖಜಾನೆ - ಕನ್ನಡ

By Kathe Khajane Team, IT for Change
Download on the App Store

ಕಥೆ ಖಜಾನೆ - ಕನ್ನಡ episodes

  • ಮಳೆರಾಯ

    ಲೇಖಕರು : ಸ್ಟೋರಿವೀವರ್ರಿಗಾಗಿ ಸಂಜೀವ್ ಜೈಸ್ವಾಲ್
    ನಿರೂಪಕರು : ಬಸವರಾಜು ಟಿ.ಡಿ
    ಸಂಪಾದಕರು : ನಫೀಸಾ ಬಾನು

    ಮೋಡವನ್ನ ಪ್ರಾರ್ಥಿಸಿದ ಕೂಡಲೇ ಅದು ಮಳೆ ಸುರಿಸುವುದರೊಂದಿಗೆ ಹರುಷ ಹರಿಸಿದ್ದು ಹೇಗೆ ಎಂಬುದನ್ನ ತಿಳಿಯಿರಿ.

    ಈ ಕಥೆಯ ಮೂಲಕ ಮಕ್ಕಳಿಗೆ ಋತುಗಳು ಹಾಗು ಆ ಋತುಗಳ ಗುಣಲಕ್ಷಣಗಳನ್ನು ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :

    1. ಮಕ್ಕಳೊಂದಿಗೆ ಕಾಲಗಳ ಕುರಿತು ಚರ್ಚಿಸಿ ಅವರಿಗೆ ಇಷ್ಟವಾದ ಕಾಲ ಯಾವುದು ಮತ್ತು ಯಾಕೆ ಎಂಬುದನ್ನ ತಿಳಿಸಲು ಹೇಳಬಹುದು.
    2. ಮಳೆಯಿಂದ ಆಗಬಹುದಾದ ಉಪಯೋಗಗಳ ಕುರಿತು ಚರ್ಚಿಸಬಹುದು.
    3. ಮಳೆ ಹೇಗೆ ಉಂಟಾಗುತ್ತದೆ ಎಂಬುದನ್ನ ಮಕ್ಕಳಿಗೆ ತಿಳಿಸಬಹುದು.
    4. ಮಳೆ ಬರುವ ಮುನ್ನ ಮತ್ತು ಮಳೆ ಬಂದ ನಂತರ ಪರಿಸರದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಮಕ್ಕಳು ಗಮನಿಸಿರುವ ಅಂಶಗಳನ್ನು ಚರ್ಚಿಸುವುದು ? 
    5. ಮಕ್ಕಳು ಗಮನಿಸಿರುವ ಋತಗಳು ಹಾಗೂ ಆ ಋತುಗಳ ಗುಣಲಕ್ಷಣಗಳ ಕುರಿತು ಚರ್ಚಿಸುವುದು. 
    6. ಋತುಮಾನಗಳಿಗೆ ತಕ್ಕಂತೆ ಅನುಸರಿಸಬೇಕಾದ ಆರೋಗ್ಯ ಕ್ರಮಗಳನ್ನು ಗುಂಪಿನಲ್ಲಿ ಚರ್ಚಿಸುವಂತೆ ತಿಳಿಸುವುದು.
       

    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಕಥೆಗಾಗಿ ಚಿತ್ರ,ಭಾವನೆಗಳು,ವಿಜ್ಞಾನ
    ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    7 min
  • ಮೀನಿನ ಮಳೆ

    ಲೇಖಕರು : ಸ್ಟೋರಿವೀವರ್ರಿಗಾಗಿ ರಾಮೇಂದ್ರ ಕುಮಾರ್
    ನಿರೂಪಕರು : ಮಧು ಹೆಚ್.ಸಿ
    ಸಂಪಾದಕರು : ಪ್ರದೀಪ್

    ಪಿಟಾರಾ ಝೂನಲ್ಲಿ ಅನೇಕ ಪ್ರಾಣಿಗಳಿವೆ. ಕಂದುಬಣ್ಣದ ಬಲಶಾಲಿ ಕರಡಿ ಬಲ್ಲೂನ ನಾಲ್ಕನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಝೂನಲ್ಲಿ ಒಂದು ಸಣ್ಣ ಪಾರ್ಟಿ ಏರ್ಪಡಿಸಲಾಗಿದೆ. ಮುಂದೆನಾಯ್ತು?

    ಈ ಕಥೆಯಲ್ಲಿ ಬರುವ ಪದಗಳನ್ನು ಮಕ್ಕಳಿಗೆ ಪರಿಚಯಿಸುವುದು ಹಾಗೂ ಮಕ್ಕಳಿಗೆ ವಾಕ್ಯ ರಚನೆ ಮಾಡುವ ಕೌಶಲ್ಯಮೂಡಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.

    1. ಪ್ರಾಣಿ ಸಂಗ್ರಹಾಲಯದಲ್ಲಿ ಕಾಣಸಿಗುವ ಪ್ರಾಣಿಗಳನ್ನು ಪಟ್ಟಿ ಮಾಡುವುದು.
    2. ಪ್ರಾಣಿ ಸಂಗ್ರಹಾಲಯದ ಕುರಿತಾಗಿ ಮಕ್ಕಳ ಅನುಭವಗಳನ್ನು ತೆರಗತಿಯಲ್ಲಿ ಚರ್ಚಿಸುವುದು.
    3. ಆವಂತಿಯ ಜಾಗದಲ್ಲಿ ನೀವು ಇದ್ದಿದ್ದರೆ ಏನು ಮಾಡುತ್ತಿರಿ ಕಲ್ಪಿಸಿಕೊಂಡು ಹೇಳುವಂತೆ ತಿಳಿಸುವುದು.
    4. ಗುಂಪಿನಲ್ಲಿ ಚರ್ಚಿಸಿ ಕಥೆಯನ್ನು ಇನ್ನಷ್ಟು ಆಸಕ್ತಿಕರವಾಗಿ ಸೃಷ್ಟಿಸುವಂತೆ ತಿಳಿಸುವುದು.
       

    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಸ್ನೇಹ,ಜಾದು,ಹಾಸ್ಯ
    ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    5 min
  • ಮೀನು ಕೇಳಿದ ವಾರ್ತೆ

    ಲೇಖಕರು : ಸ್ಟೋರಿವೀವರ್ರಿಗಾಗಿ ವೆಂಕಟರಮಣ ಗೌಡ
    ನಿರೂಪಕರು : ರೇಷ್ಮ
    ಸಂಪಾದಕರು : ನಟೇಶ್ ಕುಮಾರ್ ಆರ್.ಜಿ

    ಇದು ಅಂತಿಂಥ ಮೀನಲ್ಲ ಮನೆಯಲ್ಲಿ ರೇಡಿಯೋ ಇರುವ ಘನತೆವೆತ್ತ ಮೀನು. ವಾರ್ತಾ ಪ್ರಸಾರ ಕೇಳಿ ತನ್ನ ಕುಟುಂಬ ಮಾತ್ರವಲ್ಲದೇ, ಸಮಸ್ತ ಜಲಚರಗಳನ್ನೂ ರಕ್ಷಿಸಿದ ಅಪೂರ್ವ ಕಥೆಯೇ ಈ ‘ಮೀನು ಕೇಳಿದ ವಾರ್ತೆ.’

    ಈ ಕಥೆಯ ಮೂಲಕ ಮಕ್ಕಳಿಗೆ ಸುದ್ದಿ ಮಾಧ್ಯಮದ ಪ್ರಾಮುಖ್ಯತೆಯ ತಿಳುವಳಿಕೆ ನೀಡಿ ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುವಂತೆ ಪ್ರೇರೇಪಿಸುವುದು. ಕಥೆಗೆ ಸಂಬಂದಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :

    1. ಮಕ್ಕಳಿಗೆ ದಿನಪತ್ರಿಕೆ ನೀಡಿ ಅದರಲ್ಲಿ ಬರುವ ವಿವಿಧ ಭಾಗಗಳನ್ನು ಪಟ್ಟಿ ಮಾಡಲು ತಿಳಿಸಿವುದು.
    2. ಮಕ್ಕಳೊಡನೆ ದಿನಪತ್ರಿಕೆ ಹಾಗೂ ವಾರ್ತೆಯ ಮೂಲಕ ಪ್ರಸಾರವಾಗುವ ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚಿಸಬಹುದು.
    3. ಜಲವಾಸಿ ಹಾಗೂ ಉಭಯವಾಸಿ ಪ್ರಾಣಿಗಳ ಕುರಿತಾಗಿ ಚರ್ಚಿಸಬಹದು.
    4. "ನಿಮ್ಮ ಮನೆಯ ಸದಸ್ಯರೊಬ್ಬರು ವಾರ್ತೆ ಕೇಳುವ ಸಮಯದಲ್ಲಿ ನಿಮ್ಮ ನೆಚ್ಚಿನ ಕಾರ್ಯಕ್ರಮ ಪ್ರಸಾರವಾಗುತ್ತಿದ್ದರೆ ನೀವು ಏನು ಮಾಡುತ್ತಿದ್ದಿರಿ" ಎಂದು ಕೇಳುವ ಮೂಲಕ ಅವರ ಅನುಭವವನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡುವುದು.
    5. ಈ ಕಥೆಯನ್ನು ಕೇಳಿದ ನಂತರ ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ಅಂಶಗಳಾವುವು ಎಂದು ಚರ್ಚಿಸುವುದು.
       

    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಕುಟುಂಬ,ಪ್ರಾಣಿ ಮತ್ತು ಪಕ್ಷಿಗಳು,ಬುದ್ಧಿವಂತಿಕೆ ಮತ್ತು ಚತುರತೆ
    ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    4 min
  • ಮೊಸಳೆ ಮತ್ತು ಪಾತರಗಿತ್ತಿ

    ಲೇಖಕರು : ಸ್ಟೋರಿವೀವರ್ರಿಗಾಗಿ ಹರ್ಮೀಂಧರ್ ಓಹ್ರಿ
    ನಿರೂಪಕರು : ಸುಂದರ್ ರಾಜ್
    ಸಂಪಾದಕರು : ಬಾಲಾಜಿ

    ಮೊಸಳೆ ಹಾಗೂ ಪಾತಾರಗಿತ್ತಿ ಈ ಇಬ್ಬರು ಸ್ನೇಹಿತರು ಬುದ್ದಿವಂತಿಕೆಯಿಂದ ಬೇಟೆಗಾರರನ್ನ ಓಡಿಸಿದ ಕಥೆ. ಸ್ನೇಹಿತರಿಗೆ ಸಂಕಷ್ಟ ಬಂದಾಗ ಒಬ್ಬರು ಇನ್ನೊಬ್ಬರ ಸಹಾಯಕ್ಕೆ ಹೇಗೆ ನಿಂತರೆಂಬುದನ್ನ ಈ ಕಥೆಯ ಮೂಲಕ ತಿಳಿಯೋಣ.

    ಈ ಕಥೆಯ ಮೂಲಕ ಮಕ್ಕಳಿಗೆ ಹೊಸಪದಗಳ ಪರಿಚಯ ಮಾಡಿಕೊಡಬಹುದಲ್ಲದೇ ಆಗಿನ ಕಾಲದ ಬೇಟೆ ಪದ್ದತಿ, ವಿಧಾನಗಳು, ಕಾರಣಗಳನ್ನು ತಿಳಿಸಿ ಪ್ರಸ್ತುತ ಬೇಟೆ ನಿಷೇದ ಕಾಯಿದೆ ಹಾಗೂ ಕಾರಣಗಳ ಕುರಿತು ತಿಳಿಸಿಕೊಡಬಹುದು. ಭೂ ವಾಸಿ, ಜಲವಾಸಿ ಹಾಗೂ ಉಭಯವಾಸಿ ಪ್ರಾಣಿಗಳ ಕುರಿತು ತಿಳಿಸಿಕೊಡಬಹುದು. ಸಂಕಷ್ಟದಲ್ಲಿ ಸ್ನೇಹಿತರು ಪರಸ್ಪರ ನೆರವಾಗಬೇಕು ಎಂಬ ನೀತಿಯನ್ನ ಮಕ್ಕಳಿಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :

    1. ಕಾಡಿನಲ್ಲಿ ಕಂಡುಬರುವ ಪ್ರಾಣಿಪಕ್ಷಿಗಳನ್ನು ಪಟ್ಟಿ ಮಾಡುವಂತೆ ತಿಳಿಸುವುದು.
    2. ಆಗಿನ ಕಾಲದಲ್ಲಿ ಬೇಟೆ ಆಡುವುದರ ಹಿಂದಿನ ಕಾರಣಗಳನ್ನು ಗುಂಪಿನಲ್ಲಿ ಚರ್ಚಿಸಿ, ಪಟ್ಟಿಮಾಡಿ ವಿವರಿಸುವಂತೆ ಹೇಳುವುದು.
    3. ಸರ್ಕಾರ ಬೇಟೆ ಪದ್ದತಿ ನಿಷೇಧ ಮಾಡಿರುವುದು ಸರಿಯೇ ಅಥವಾ ತಪ್ಪೇ ಎಂಬುದನ್ನ ಚಿಂತಿಸಿ ಚರ್ಚಿಸಲು ಹೇಳುವುದು.
    4. ಮೊಸಳೆಯ ಕುರಿತಾಗಿ ಮಕ್ಕಳಿಗೆ ತಿಳಿದಿರುವ ಗುಣಲಕ್ಷಣಗಳನ್ನು ಹೇಳಿಸುವುದು.
    5. ಭೂ ವಾಸಿ, ಜಲವಾಸಿ ಹಾಗೂ ಉಭಯವಾಸಿ ಪ್ರಾಣಿಗಳು ಹಾಗೂ ಅವುಗಳ ಗುಣಲಕ್ಷಣಗಳನ್ನು ಪಟ್ಟಿ ಮಾಡುವಂತೆ ತಿಳಿಸುವುದು.
    6. ಈ ಕಥೆಯಲ್ಲಿ ಮೊಸಳೆ ಮತ್ತು ಪಾತರಗಿತ್ತಿ ಪರಸ್ಪರ ಸಹಾಯ ಮಾಡದಿದ್ದರೆ ಏನಾಗುತ್ತಿತ್ತೆಂದು ಮಕ್ಕಳ ಅಭಿಪ್ರಾಯಗಳನ್ನು ಕೇಳುವುದು.
    7. ಪರಸ್ವ ರ ಸಹಕಾರ ಮಾಡಿರುವ ಕುರಿತಾಗಿ ಮಕ್ಕಳ ಅನುಭವಗಳನ್ನು ಕೇಳುವುದು.
       

    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಪ್ರಾಣಿ ಮತ್ತು ಪಕ್ಷಿಗಳು,ಸಹಾಯ - ಸಹಕಾರ,ಸ್ನೇಹ
    ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    6 min
  • ಯಾರದು

    ಲೇಖಕರು : ಸ್ಟೋರಿವೀವರ್ರಿಗಾಗಿ ಕಾಂಚನ್ ಬ್ಯಾನರ್ಜಿ
    ನಿರೂಪಕರು : ಸಿ ಎಂ ಸುಂದರ್ ರಾಜ
    ಸಂಪಾದಕರು : ನಾಗವೇಣಿ

    ಸೊರ್….ಸೊರ್….ಈ ಶಬ್ದ ಮಾಡುತ್ತಿರುವವರು ಯಾರು ಅಂದುಕೊಂಡಿರಿ? ಈ ಕಥೆಯಲ್ಲಿ ಪ್ರಿಯಾ ಇದನ್ನು ಪತ್ತೆ ಹಚ್ಚುತ್ತಾಳೆ.

    ಈ ಕಥೆಯಿಂದ ಮಕ್ಕಳಿಗೆ ಪ್ರಾಣಿಗಳು ಉಂಟು ಮಾಡುವ ಶಬ್ದವನ್ನು, ಹೊಸ ಪದಗಳನ್ನು ಹಾಗೂ ಸರಳ ವಾಕ್ಯಗಳ ರಚನೆಯನ್ನು ತಿಳಿಸಬಹುದು. ಕಥೆಗೆ ಸಂಬಂದಿಸಿದಂತೆ ಮಾಡಬಹುದಾದ ಕೆಲವು ತರಗತಿಯ ಚಟುವಟಿಕೆಗಳು :

    1. ಮಕ್ಕಳಿಗೆ ಕೆಲವು ಪ್ರಾಣಿಗಳ ಶಬ್ದವನ್ನು ಕೇಳಿಸಿ ಆ ಶಬ್ದ ಯಾವ ಪ್ರಾಣಿಯದು ಎಂದು ಪಟ್ಟಿಮಾಡಲು ತಿಳಿಸುವುದು
    2. ಸಾಕು ಪ್ರಾಣಿಗಳು ಮತ್ತು ಕಾಡು ಪ್ರಾಣಿಗಳ ಬಗ್ಗೆ ಚರ್ಚಿಸಬಹುದು.
    3. ಪ್ರಸ್ತುತ ಕಥೆಯನ್ನು ಅವರದ್ದೇ ಆದ ಸ್ವಂತ ಮಾತುಗಳಲ್ಲಿ ಹೇಳುವಂತೆ ತಿಳಿಸುವುದು.
    4. ಆನೆಯ ಗುಣಲಕ್ಷಣಗಳನ್ನು ಪಟ್ಟಿಮಾಡುವುದು.
    5. ಕಾಡಿನಲ್ಲಿ ಪ್ರಾಣಿಗಳ ಜೀವನ ಶೈಲಿ ಬಗ್ಗೆ ಮಾತನಾಡುವುದು.

    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ಶಬ್ದಕೋಶ,ಪರಿಸರ ಮತ್ತು ವಾತಾವರಣ,ಪ್ರಾಣಿ ಮತ್ತು ಪಕ್ಷಿಗಳು
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪,ತರಗತಿ ೫
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    3 min
  • ರಾಜನ ಕಿರೀಟ

    ಲೇಖಕರು : ಸ್ಟೋರಿವೀವರ್ರಿಗಾಗಿ ರಿಚಾ ಭಾಸ್ಕರ್
    ನಿರೂಪಕರು : ಬಸವರಾಜಪ್ಪ ಎನ್
    ಸಂಪಾದಕರು : ನಾಗವೇಣಿ

    ರಾಜ 'ಅನವ್ರತ' ಎತ್ತರದ ದೇಗುಲವನ್ನು ಕತ್ತೆತ್ತಿ ನೋಡುವಾಗ ಆತನ ಕಿರೀಟ ಕೆಳಗೆ ಬಿತ್ತು. ರಾಜ ತನ್ನ ಕಿರೀಟ ಬೀಳದಂತೆ ಗೋಪುರ ನೋಡಲು ಏನು ಮಾಡಿದ ಎಂಬುದನ್ನು ತಿಳಿಯಲು ಮಯಾನ್ಮಾರ್‌ ಈ ಕಥೆ ಓದಿ.

    ಕಥೆಯ ಮೂಲಕ ಮಕ್ಕಳಿಗೆ ವಿಜ್ಞಾನಕ್ಕೆ ಸಂಬಂಧಿಸಿದ ಪ್ರತಿಬಿಂಬದ ಕುರಿತಾಗಿ ಮಕ್ಕಳಿಗೆ ತಿಳಿಸಿಕೊಡಬಹುದು ಅಲ್ಲದೇ ಇತಿಹಾಸದಲ್ಲಿ ರಾಜರುಗಳು ನಿರ್ಮಿಸಿದ ದೇವಾಲಯಗಳ ಕುರಿತು ಚರ್ಚಿಸುತ್ತಾ ಹೊಸ ಪದಗಳ ಪರಿಚಯವನ್ನು ಮಕ್ಕಳಿಗೆ ಮಾಡಿಕೊಡಬಹುದು. ಕಥೆಗೆ ಸಂಬಂಧಿಸಿದ ಕೆಲವು ತರಗತಿ ಚಟುವಟಿಕೆಗಳು.

    1. ಕಥೆಯನ್ನು ಮಕ್ಕಳು ತಮ್ಮ ಸ್ವಂತ ಮಾತುಗಳಲ್ಲಿ ಹೇಳುವಂತೆ ತಿಳಿಸುವುದು
    2. ಕಥೆಯಲ್ಲಿನ ಹೊಸ ಪದಗಳಿಗೆ ಅರ್ಥ ತಿಳಿಸುವುದು.
    3. ಮಕ್ಕಳಿಗೆ ತಿಳಿದಿರುವ ರಾಜರುಗಳು ಹಾಗೂ ರಾಜ ಮನೆತನಗಳನ್ನು ಪಟ್ಟಿ ಮಾಡುವುದು.
    4. ರಾಜರು ನಿರ್ಮಿಸಿರುವ ಕಟ್ಟಡಗಳು ಹಾಗೂ ದೇವಾಲಯಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವುದು.
    5. ರಾಜನ ಸ್ಥಾನದಲ್ಲಿ ನೀವಿದ್ದಿದ್ದರೆ ಏನು ಮಾಡುತ್ತಿದ್ದಿರಿ ಎಂಬುದನ್ನು ಮಕ್ಕಳು ಕಲ್ಪಿಸಿಕೊಂಡು ಹೇಳುವಂತೆ ತಿಳಿಸುವುದು. 
    6. ರಾಜನಿಗೆ ಎದುರಾದ ಸಮಸ್ಯೆಗೆ ನೀವು ಏನೆಲ್ಲಾ ಸಲಹೆ ನೀಡುವಿರಿ ಎಂದು ಮಕ್ಕಳಿಗೆ ಪ್ರಶ್ನಿಸುವುದು.
       

    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಬುದ್ಧಿವಂತಿಕೆ ಮತ್ತು ಚತುರತೆ,ವಿಜ್ಞಾನ,ಇತಿಹಾಸ
    ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    5 min
  • ರೊಟ್ಟಿ ಸುರುಳಿ

    ಲೇಖಕರು : ಸ್ಟೋರಿವೀವರ್ರಿಗಾಗಿ ಅಮರ್ ಗೋಸ್ವಾಮಿ
    ನಿರೂಪಕರು : ಕೆ.ಜಿ ಬಸವರಾಜ್
    ಸಂಪಾದಕರು : ವೀರಭದ್ರಯ್ಯ ಎಂ.ಬಿ

    ಭೋಂಕು ನಾಯಿಯ ರೊಟ್ಟಿ ಕಿತ್ತುಕೊಂಡವರು ಯಾರು? ಆ ರೊಟ್ಟಿ ಕೊನೆಗೂ ಭೋಂಕು ಬಾಯಿ ಸೇರಿತಾ? ತಿಳಿಯಿರಿ.

    ಪರಿಸರದಲ್ಲಿ ಕಂಡುಬರುವ ಪ್ರಾಣಿ-ಪಕ್ಷಿಗಳು ಉಂಟುಮಾಡುವ ಶಬ್ದಗಳು ಹಾಗೂ ಅವುಗಳು ತಮ್ಮ ಆಹಾರಕ್ಕಾಗಿ ಪಡುವ ಸಂಕಷ್ಟಗಳ ಕುರಿತು ತಿಳಿಸಿಕೊಡಬಹುದು. ಅಲ್ಲದೇ ಈ ಕಥೆಯಿಂದ ಸರಳ ವಾಕ್ಯ ರಚನೆ ಮಾಡುವುದನ್ನು ಮಕ್ಕಳಿಗೆ ತಿಳಿಸಿಕೊಡಬಹುದು. ಕಥೆಗೆ ಸಂಬಂದಿಸಿದಂತೆ ಮಾಡಬಹುದಾದ ಕೆಲವು ತರಗತಿಯ ಚಟುವಟಿಕೆಗಳು :

    1. ಮಕ್ಕಳಿಗೆ ನೂತನ ಪದಗಳನ್ನು ಹೇಳಿಕೊಡುವುದು.
    2. ಪರಿಸರದಲ್ಲಿ ಕಾಣಸಿಗುವ ಪ್ರಾಣಿ ಪಕ್ಷಿಗಳು ಹಾಗೂ ಅವುಗಳು ಉಂಟುಮಾಡುವ ಶಬ್ದಗಳ ಕುರಿತು ಚರ್ಚಿಸಬಹುದು.
    3. ಪ್ರಾಣಿ-ಪಕ್ಷಿಗಳಿಗೆ ಆಹಾರ ನೀಡುವ ಕುರಿತು ಮಕ್ಕಳಿಗೆ ಆಗಿರುವ ಅನುಭವವನ್ನು ಸಂಗ್ರಹಿಸುವುದು.
    4. ಮಕ್ಕಳ ಆಹಾರವನ್ನು ಇತರರು ಕಸಿದುಕೊಂಡಾಗ ಅವರಲ್ಲುಂಟಾಗುವ ಭಾವನೆಗಳ ಕುರಿತು ಚರ್ಚಿಸುವುದು.
    5. "ನಿಮ್ಮ ಸಾಕುಪ್ರಾಣಿಗೆ ನೀವು ನೀಡಿದ ಆಹಾರವನ್ನು ಬೇರೊಂದು ಪ್ರಾಣಿ ಕಿತ್ತಕೊಂಡು ಹೋಯಿತೆಂದರೆ ಆಗ ನೀವೇನು ಮಾಡುತ್ತಿದ್ದಿರಿ?" ಎಂದು ಮಕ್ಕಳನ್ನು ಕೇಳುವುದು.

       

    ಇವರಿಗೆ ಸೂಕ್ತ: ಪ್ರಾಥಮಿಕ ಹಂತ
    ಕಥಾವಸ್ತು: ಪ್ರಾಣಿ ಮತ್ತು ಪಕ್ಷಿಗಳು,ಶಬ್ದಕೋಶ,ಸ್ವಾರ್ಥ
    ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪,ತರಗತಿ ೫
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    3 min
  • ಶಾಲೆಗೆ ಬಂದ ತರಕಾರಿಗಳು

    ಲೇಖಕರು : ಸ್ಟೋರಿವೀವರ್ರಿಗಾಗಿ ವೆಂಕಟರಮಣ ಗೌಡ
    ನಿರೂಪಕರು : ಗಂಗ ನಾಯಕ್
    ಸಂಪಾದಕರು : ಬಸವರಾಜಪ್ಪ ಎನ್

    ಶಾಲೆಗೆ ಹೊರಟ ಪುಟಾಣಿಗೆ ದಾರಿಯಲ್ಲಿ ಜೊತೆಯಾದ ಅಪೂರ್ವ ಜೀವಿಗಳು ಯಾರು? ತಿಂದು ಹೊಟ್ಟೆ ಸೇರಬೇಕಾದ ಸೊಪ್ಪು ತರಕಾರಿಗಳು ಶಾಲೆಗೇ ಬಂದು ಪಾಠ ಮಾಡಿದರೆ? ಅದುವೇ ಶಾಲೆಗೆ ಬಂದ ತರಕಾರಿಗಳು.

    ತರಕಾರಿ ಮತ್ತು ಸೊಪ್ಪುಗಳ ಪ್ರಾಮುಖ್ಯತೆ ಕುರಿತು ಮಕ್ಕಳಿಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು.

    1. ಮಕ್ಕಳಿಗೆ ತಿಳಿದಿರುವ ತರಕಾರಿ ಹಾಗೂ ಸೊಪ್ಪುಗಳನ್ನು ಪಟ್ಟಿ ಮಾಡುವುದು.
    2. ತರಕಾರಿ ಹಾಗೂ ಸೊಪ್ಪುಗಳ ಪ್ರಾಮುಖ್ಯತೆ ಕುರಿತು ಗುಂಪಿನಲ್ಲಿ ಚರ್ಚಿಸಿ ಹಂಚಿಕೊಳ್ಳಲು ತಿಳಿಸುವುದು.
    3. ತರಕಾರಿಗಳ ಹೆಸರುಗಳನ್ನು ಇತರೆ ಭಾಷೆಗಳಲ್ಲಿ ಏನೆಂದು ಕರೆಯುತ್ತಾರೆಂದು ಚರ್ಚಿಸುವುದು.
       

    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಆರೊಗ್ಯ ಮತ್ತು ಸ್ವಚ್ಚತೆ,ಶಬ್ದಕೋಶ,ದಿನಚರಿ ಮತ್ತು ದೈನಂದಿನ ಅಭ್ಯಾಸಗಳು
    ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    4 min
  • ಶಾಲೆಗೆ ಬಂದ ತರಕಾರಿಗಳು

    ಲೇಖಕರು : ಸ್ಟೋರಿವೀವರ್ರಿಗಾಗಿ ವೆಂಕಟರಮಣ ಗೌಡ
    ನಿರೂಪಕರು : ಗಂಗ ನಾಯಕ್
    ಸಂಪಾದಕರು : ಬಸವರಾಜಪ್ಪ ಎನ್

    ಶಾಲೆಗೆ ಹೊರಟ ಪುಟಾಣಿಗೆ ದಾರಿಯಲ್ಲಿ ಜೊತೆಯಾದ ಅಪೂರ್ವ ಜೀವಿಗಳು ಯಾರು? ತಿಂದು ಹೊಟ್ಟೆ ಸೇರಬೇಕಾದ ಸೊಪ್ಪು ತರಕಾರಿಗಳು ಶಾಲೆಗೇ ಬಂದು ಪಾಠ ಮಾಡಿದರೆ? ಅದುವೇ ಶಾಲೆಗೆ ಬಂದ ತರಕಾರಿಗಳು.

    ತರಕಾರಿ ಮತ್ತು ಸೊಪ್ಪುಗಳ ಪ್ರಾಮುಖ್ಯತೆ ಕುರಿತು ಮಕ್ಕಳಿಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು. 

    1. ಮಕ್ಕಳಿಗೆ ತಿಳಿದಿರುವ ತರಕಾರಿ ಹಾಗೂ ಸೊಪ್ಪುಗಳನ್ನು ಪಟ್ಟಿ ಮಾಡುವುದು.
    2. ತರಕಾರಿ ಹಾಗೂ ಸೊಪ್ಪುಗಳ ಪ್ರಾಮುಖ್ಯತೆ ಕುರಿತು ಗುಂಪಿನಲ್ಲಿ ಚರ್ಚಿಸಿ ಹಂಚಿಕೊಳ್ಳಲು ತಿಳಿಸುವುದು.
    3. ತರಕಾರಿಗಳ ಹೆಸರುಗಳನ್ನು ಇತರೆ ಭಾಷೆಗಳಲ್ಲಿ ಏನೆಂದು ಕರೆಯುತ್ತಾರೆಂದು ಚರ್ಚಿಸುವುದು.
       

    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಆರೊಗ್ಯ ಮತ್ತು ಸ್ವಚ್ಚತೆ,ದಿನಚರಿ ಮತ್ತು ದೈನಂದಿನ ಅಭ್ಯಾಸಗಳು,ಶಬ್ದಕೋಶ
    ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    4 min
  • ಶ್ಯೂ... ನನ್ನ ಹೆಸರಲ್ಲ

    ಲೇಖಕರು : ಸ್ಟೋರಿವೀವರ್ರಿಗಾಗಿ ಕವಿತ ಪೊನ್ನಿಯಮೂರ್ತಿ
    ನಿರೂಪಕರು : ರೇಷ್ಮ
    ಸಂಪಾದಕರು : ಮನೀಶ್

    ಕಂದುಬಣ್ಣದ ನಾಯಿಮರಿ ಕಣ್ಣಿಗೆ ಬಿದ್ದರೆ ಸಾಕು ಎಲ್ಲ ಹೇಳುವ ಮಾತು “ಶ್ಯೂ!” ಪುಟ್ಟ ಹುಡುಗನೊಬ್ಬ ಅದಕ್ಕೆ ತನ್ನ ಊಟದಲ್ಲಿ ಪಾಲು ಕೊಡುತ್ತಿದ್ದ. ಒಂದು ದಿನ ಅದು ಅವನ ಮನೆವರೆಗೆ ಹಿಂಬಾಲಿಸಿಕೊಂಡು ಹೋಯಿತು. “ಶ್ಯೂ!” ಎನ್ನುವುದು ತನ್ನ ಹೆಸರಲ್ಲ ಎನ್ನುವುದು ನಾಯಿಮರಿಗೆ ಆಗ ಗೊತ್ತಾಯಿತು!

    ಪ್ರಸ್ತುತ ಕಥೆಯ ಮೂಲಕ ಮಕ್ಕಳಿಗೆ ಸಾಕು ಪ್ರಾಣಿಗಳು ಯಾವುವು, ಮನುಷ್ಯನೊಂದಿಗೆ ಅವುಗಳ ವರ್ತನೆ ಹೇಗಿರುತ್ತದೆ ಹಾಗೂ ಪ್ರಾಣಿಗಳು ಆಹಾರಕ್ಕಾಗಿ ಪಡುವ ಅವಸ್ಥೆಗಳ ಕುರಿತು ಚರ್ಚಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು : 

    1. ಪ್ರತಿನಿತ್ಯ ನಿಮಗೆ ಕಾಣಸಿಗುವ ಪ್ರಾಣಿಗಳು ಯಾವುವು ತಿಳಿಸಿ.
    2. ಅದರಲ್ಲಿ ಸಾಕು ಪ್ರಾಣಿಗಳಾವುವು ಹಾಗೂ ಅವು ತಮ್ಮ ಆಹಾರಕ್ಕಾಗಿ ಯಾರನ್ನು ಅವಲಂಬಿಸಿರುತ್ತವೆ?
    3. ಒಂದು ವೇಳೆ ಮಾನವ ತಾನು ಸಾಕಿದ ಪ್ರಾಣಿಯನ್ನು ಇದ್ದಕ್ಕಿದಂತೆ ಬೀದಿಗೆ ಬಿಟ್ಟರೆ ಅದರ ಜೀವನ ಶೈಲಿ ಹೇಗಿರುತ್ತದೆ?
    4. ನೀವು ಕಂಡಿರುವ ಹಾಗೆ ಸಾಕು ನಾಯಿಯ ಗುಣಲಕ್ಷಣಗಳೇನು?
    5. ನೀವು ಕಂಡಿರುವ ಹಾಗೆ ಜನರು ಬೀದಿಯಲ್ಲಿರುವ ನಾಯಿಯನ್ನು ಹೇಗೆ ನಡೆಸಿಕೊಳ್ಳುತ್ತಾರೆ.
    6. ಪ್ರಾಣಿಯನ್ನು ಸಾಕಿ ಅದು ಮಾನವನನ್ನು ಅವಲಂಬಿಸಿದ ನಂತರ ಬೀದಿಗೆ ಬಿಟ್ಟುಬಿಡುವ ಕುರಿತು ನಿಮ್ಮ ಅಭಿಪ್ರಾಯವೇನು?
    7. ಮಾನವ ಸ್ನೇಹಿ ಪ್ರಾಣಿಗಳಿಗೆ ಯಾವುವು ಹಾಗೂ ಮಾನವ ಅವುಗಳಿಗೆ ಹೇಗೆ ನೆರವಾಗಲು ನಿಮ್ಮ ಸಲಹೆಗಳೇನು?
       

    ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
    ಕಥಾವಸ್ತು: ಕರುಣೆ ಮತ್ತು ಕಾಳಜಿ,ಪ್ರಾಣಿ ಮತ್ತು ಪಕ್ಷಿಗಳು,ಪ್ರೀತಿ
    ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
    ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
    4 min

About ಕಥೆ ಖಜಾನೆ - ಕನ್ನಡ

From the publisher's feed

2023-24ರ ಅವಧಿಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ), ಐಟಿ ಫಾರ್ ಚೇಂಜ್ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ನಡೆಸಿದ 'ಭಾಷಾ ಶಿಕ್ಷಣದಲ್ಲಿ ಡಿಜಿಟಲ್ ಕಥೆ-ಆಧಾರಿತ ಬೋಧನ ವಿಧಾನದ ಅಳವಡಿಕೆ' ಕರ್ಯಕ್ರಮದ ಅಡಿಯಲ್ಲಿ ನಡೆಸಿದ ಕಾರ್ಯಾಗಾರಗಳ ಭಾಗವಾಗಿ ಈ ಆಡಿಯೋ ಕಥೆಗಳನ್ನು ಕರ್ನಾಟಕದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ತಯಾರಿಸಿದ್ದಾರೆ. ಕಥೆ ಹೇಳುವಿಕೆಯ ಶಕ್ತಿಯ ಜೊತೆಗೆ ಡಿಜಿಟಲ್ ಮಾಧ್ಯಮವು ನೀಡುವ ಹೊಸ ಸಾಧ್ಯತೆಗಳ ಮೂಲಕ ಮಕ್ಕಳ ಭಾಷಾ ಕಲಿಕೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ.