
Sign up to save your podcasts
Or


ಲೇಖಕರು : ಸ್ಟೋರಿವೀವರ್ರಿಗಾಗಿ ಪಂಕಜ್ ಚತುರ್ವೇದಿ
ನಿರೂಪಕರು : ಪ್ರಸಾದ್ ಕೆ.ವಿ
ಸಂಪಾದಕರು : ಪ್ರಸಾದ್ ಕೆ.ವಿ
ಸರಳ ವಿಚಾರಗಳಿಂದಲೇ ನಮಗೆ ಸಂತಸ ಲಭಿಸುತ್ತದೆ. ಈ ಕಥೆಯನ್ನು ಓದಿದರೆ ಅದು ಹೇಗೆಂದು ನಿಮಗೆ ಅರಿವಾಗುತ್ತದೆ.
ಮಕ್ಕಳಿಗೆ ಹೊದಪದಗಳ ಪರಿಚಯ ಹಾಗೂ ವಾಕ್ಯ ರಚನೆಯ ಕುರಿತು ತಿಳಿಸಿಕೊಡಬಹುದು. ಅನುಪಯುಕ್ತ ವಸ್ತುಗಳನ್ನು ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
ಲೇಖಕರು : ಸ್ಟೋರಿವೀವರ್ರಿಗಾಗಿ ಕವಿತ ಮಂದಣ್ಣ
ನಿರೂಪಕರು : ಕುಮಾರ್
ಸಂಪಾದಕರು : ಸೌಮ್ಯ ಕೆ.ಎನ್
ಲೀಲು ತನ್ನ ತರಗತಿಯ 36 ವಿದ್ಯಾರ್ಥಿಗಳ ಜೊತೆಗೆ ಸಂತೆಗೆ ಹೋದಳು. ಟಿಕೆಟ್ ಖರೀದಿಸಲು ಎಷ್ಟು ಮಕ್ಕಳಿದ್ದಾರೆ ಎಂದು ಸರ್ ಆಗಾಗ ಎಣಿಸಬೇಕಾಗುತ್ತಿತ್ತು. 1, 2, 3, ಎಂದು 36ರವರೆಗೆ ಎಣಿಸುವ ಬದಲು ಇನ್ನೂ ಸುಲಭವಾಗಿ ಎಣಿಸಲು ಆಗುವುದೇ? ಜೊತೆ, ಜೊತೆಯಾಗಿ ಎಣಿಸುವುದನ್ನು ಕಥೆ ಮೂಲಕ ತಿಳಿಸುತ್ತಾ ಮಗ್ಗಿಯನ್ನು ಕತೆಯಲ್ಲಿ ಪರಿಚಯಿಸಿದೆ.
ಕಥೆಯ ಮೂಲಕ ಮಕ್ಕಳಿಗೆ ಗಣಿತ ವಿಷಯಕ್ಕೆ ಸಂಬಂಧಿಸಿದ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರ ಅಂಶಗಳು, ದಿನನಿತ್ಯ ಅವುಗಳ ಬಳಕೆ ಮತ್ತು ಪ್ರಾಮುಖ್ಯತೆ ಕುರಿತು ತಿಳಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು.
ಲೇಖಕರು : ಸ್ಟೋರಿವೀವರ್ರಿಗಾಗಿ ಅಮರ್ ಗೋಸ್ವಾಮಿ
ನಿರೂಪಕರು : ಹಾಲೇಶ್
ಸಂಪಾದಕರು : ಸೋಮಶೇಖರ್
ಕಾಡಿನ ರಾಜನಾದ ಸಿಂಹ ನಾಡಿನ ರಾಜ ಅರಸನನ್ನು ಅನುಕರಣೆ ಮಾಡಲು ಹೊರಟ್ಟಿದ್ದಕ್ಕೆ ಏನಾಯ್ತು ಗೊತ್ತಾ? ಒಳ್ಳೆ ಕುಲುಕಾಟದ ದರ್ಬಾರ್! ಈ ತಮಾಷೆಯ ಕಥೆ ಕೇಳಿದರೆ ಸಮಾಚಾರವೇನೆಂದು ತಿಳಿಯುತ್ತದೆ.
ಈ ಕಥೆಯಲ್ಲಿ ಬರುವ ಹೊಸ ಪದಗಳನ್ನ ಮಕ್ಕಳಿಗೆ ಪರಿಚಯಿಸುವುದು. ಇನ್ನೊಬ್ಬರನ್ನ ಅನವಶ್ಯಕವಾಗಿ ಅನುಸರಿಸುದಕ್ಕಿಂತ ನಮ್ಮ ಸ್ವಂತ ವ್ಯಕ್ತಿತ್ವ ನಮಗಿರಬೇಕು ಎಂಬ ನೀತಿಯನ್ನ ಮಕ್ಕಳಿಗೆ ಅರ್ಥೈಸುವುದು. ಕಥೆಗೆ ಸಂಬಂದಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :
ಲೇಖಕರು : ಸ್ಟೋರಿವೀವರ್ರಿಗಾಗಿ ವಿನಾಯಕ ವರ್ಮ
ನಿರೂಪಕರು : ಪ್ರಶಾಂತ್
ಸಂಪಾದಕರು : ಬಾಲಾಜಿ
ಅಕ್ಕುವಿಗೆ ಈ ದಿನವೇಕೋ ಬೇಸರವಾಗಿದೆ, ಅವಳಿಗೆ ಕೋಪ ಬಂದಿದೆ. ಅಕ್ಕುವಿನ ಕೋಪ ಕಡಿಮೆಯಾಗಿದ್ದು ಹೇಗೆ? ನಿಮಗೂ ಕೋಪ ಬಂದಾಗ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ..
ಈ ಕಥೆಯ ಮೂಲಕ ಮಕ್ಕಳಿಗೆ ನವರಸಭಾವಗಳ ಕುರಿತು ತಿಳಿಸಿ ಆ ಭಾವಕ್ಕೆ ತಕ್ಕಂತೆ ಧ್ವನಿ ಏರಿಳಿತ ಹಾಗೂ ಮುಖಭಾವ ಬದಲಾವಣೆ ಮಾಡುವುದನ್ನು ಕಲಿಸಿವುದರ ಮೂಲಕ ಮಕ್ಕಳಿಗೆ ಅಭಿನಯದಲ್ಲಿ ಆಸಕ್ತಿ ಮೂಡುವಂತೆ ಮಾಡಬಹುದು. ಅಲ್ಲದೇ ಭಾವನೆಗಳನ್ನ ನಿರ್ವಹಣೆ ಮಾಡುವುದು ಹೇಗೆ ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :
ಲೇಖಕರು : ಸ್ಟೋರಿವೀವರ್ರಿಗಾಗಿ ಸೆಜಲ್ ಮೆಹ್ತಾ
ನಿರೂಪಕರು : ವಸಂತ್ ಕುಮಾರ್ ಡಿ
ಸಂಪಾದಕರು : ಪ್ರಸಾದ್ ಕೆ.ವಿ
ಹುಲಿರಾಯ ಕಾಡಿಗೆ ಬಂದಿದ್ದು ಅದು ಹೇಗೋ ಎಲ್ಲ ಪ್ರಾಣಿ-ಪಕ್ಷಿಗಳಿಗೂ ಗೊತ್ತಾಯಿತು! ಆಗ ಅವೆಲ್ಲವೂ ಹೇಗೆ ಮಾತ್ನಾಡಿದ್ವು ಅಂಥಾ ತಿಳ್ಕೋಬೇಕಾ ಹಾಗಿದ್ರೆ ಈ ಕಥೆ ಕೇಳಿ.
ಈ ಕಥೆಯ ಮೂಲಕ ಮಕ್ಕಳಿಗೆ ಕಾಡಿನ ವಿವಿಧ ರೀತಿಯ ಪ್ರಾಣಿಗಳ ಗುಣಲಕ್ಷಣಗಳನ್ನು ತಿಳಿಸಿಕೊಡಬಹುದು ಅಲ್ಲದೇ ಕಾಡಿನಲ್ಲಿ ಪ್ರಾಣಿಗಳಿಗೆ ಆಪತ್ತು ಎದುರಾದ ಸಂದರ್ಭದಲ್ಲಿ ಅವುಗಳ ನಡವಳಿಕೆಯಲ್ಲಿ ಆಗುವ ಬದಲಾವಣೆಗಳ ಹಾಗೂ ಇತರೆ ಪ್ರಾಣಿಗಳನ್ನು ಎಚ್ಚರಿಸುವ ರೀತಿಯನ್ನು ತಿಳಿಸಿಕೊಡಬಹುದು. ಕಥೆಗೆ ಸಂಬಂದಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು :
From the publisher's feed